Thursday, 30 November 2017

01-12- 2014 ರಲ್ಲಿ ನಾವು ನಡೆಸಿದ ನಿರೋಧ್ ಹಗರಣದ ಸಮೀಕ್ಷೆ ಹಾಗೂ ಇಲಾಖೆ ಕೊಟ್ಟ ಮಾಹಿತಿ,.!

2014 ರಲ್ಲಿ ನಾವು ನಡೆಸಿದ ಸಮೀಕ್ಷೆ ಹಾಗೂ ಇಲಾಖೆ ಕೊಟ್ಟ ಮಾಹಿತಿ,


ಕೇಳಿದ್ರೆ ಬೆಚ್ಚಿ ಬೀಳ್ತೀರಾ.. ನಂಬಿ ಬಿಟ್ರೆ ಬಿಡಿ, ಇದಂತೂ  ಸತ್ಯ.!

ಜಿಲ್ಲೆಯ ವಿವಿದೆಡೆ ವಾರಕ್ಕೆ ನಿರೋಧ್ ಎಷ್ಟೆಷ್ಟು ಬೇಡಿಕೆ ಇದೆ.  ಅದು ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬ  2014  ಅಂಶ ಕೇಳಿದರೆ ಆಶ್ಚರ್ಯದ ಜೊತೆಗೆ ಅನುಮಾನವು ಮೂಡುತ್ತದೆ ಎಂದರೆ ತಪ್ಪಾಗಲಾರದು. ಅದಕ್ಕಾಗಿ ಚಾಮರಾಜನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಬಳಕೆಯಾಗುತ್ತಿವುದರ 2014 ಅಂಕಿ ಅಂಶ ಇಂತಿದೆ.
ಚಾಮರಾಜನಗರ:  ಸರ್ಕಾರಿ ಆಸ್ಪತ್ರೆಯಲ್ಲಿ 198, ನಾಯಕರ ಬೀದಿಯಲ್ಲಿ 61, ಉಪ್ಪಾರಬೀದಿಯಲ್ಲಿ 63, ರೈಲ್ವೇ ಬಡಾವಣೆಯಲ್ಲಿ 141, ಸಂತೇಮರಳ್ಳಿ ವೃತ್ತದಲ್ಲಿ 77, ಪೌರ ಕಾರ್ಮಿಕರ  ಕಾಲೋನಿ 54, ಪಾರ್ಕ್ ಮತ್ತು ಲಾಡ್ಜ್‍ಗಳಲ್ಲಿ 163, ಬಣಜಿಗರ ಬೀದಿಯಲ್ಲಿ 109, ಮುಸಲ್ಮಾನರ ಬೀದಿಯಲ್ಲಿ 66, ವರದರಾಜಪುರಂನಲ್ಲಿ 28, ಸೋಮವಾರಪೇಟೆಯಲ್ಲಿ 100, ಗಾಳೀಪುರ 129, ಮಾದಿಗರ ಬೀದಿಯಲ್ಲಿ 95, ಕರಿನಂಜನಪುರದಲ್ಲಿ 99, ರಾಮಸಮುದ್ರದಲ್ಲಿ 128, ಹೌಸಿಂಗ್ ಬೋರ್ಡ್‍ನಲ್ಲಿ 87, ಜಿಲ್ಲಾಧಿಕಾರಿ ಕಚೇರಿಯಲ್ಲಿ 56, ಬಸವೇಶ್ವರ ಚಿತ್ರಮಂದಿರದಲ್ಲಿ 28, ಬ್ರಮರಾಂಬ ಬೀದಿಯಲ್ಲಿ 47, ರಾಘವೇಂದ್ರ ಚಿತ್ರಮಂದಿರಲ್ಲಿ 53, ಚನ್ನಿಪುರದ ಮೋಳೆಯಲ್ಲಿ 65, ಜಾಲಹಳ್ಳಿಹುಂಡಿ 41, ಕುರುಬರ ಬೀದಿ 56, ಹೊಸ ಬಸ್ ನಿಲ್ದಾಣದಲ್ಲಿ 191 ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
ಕೊಳ್ಳೇಗಾಲ: ಬಸ್ ನಿಲ್ದಾಣ,ವಿಜಯಲಕ್ಷ್ಮಿ ಲಾಡ್ಜ್ 750, ಹಳೆ ಬಸ್ ನಿಲ್ದಾಣದಲ್ಲಿ 127, ಆಸ್ಪತ್ರೆ 202, ದೇವಾಂಗ ಪೇಟೆ 103, ನಂಜಯ್ಯನಕಟ್ಟೆ 198, ಕಾವೇರಿ ರಸ್ತೆ 196, ನಾಯಕ ಬೀದಿ 108, ಮಾರುಕಟ್ಟೆ 231, ಕೊಂಗಲಕೇರಿ 112 ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
ಯಳಂದೂರು: ಬಸ್ ನಿಲ್ದಾಣದಲ್ಲಿ 271, ಸರ್ಕಾರಿ ಆಸ್ಪತ್ರೆ 209, ಸಂತೆಮಾಳ 171, ಅಂಬಳೆ ಪಾಲ 342, ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
ಗುಂಡ್ಲುಪೇಟೆ: ಅರಳಿಕಟ್ಟೆಬೀದಿ 40, ಹಳೆ ಬಸ್ ನಿಲ್ದಾಣ 210, ಕೋಡಿಹಳ್ಳಿ ವೃತ್ತ 53, ಕಲ್ಯಾಣಿ ಕೊಳ 66, ಅಂಬೇಡ್ಕರ್ ಬೀದಿ 60, ಹೊಸೂರು ಕಾಲೋನಿ 181, ಶಿವಮಲ್ಲಪ್ಪ ಕ್ವಾರ್ಟರ್ಸ್ 59, ಮಾದಹಳ್ಳಿ ವ್ರತ್ತ 25, ಚೆಕ್‍ಪೋಸ್ಟ್ 64, ಮೈಸೂರು ರಸ್ತೆ 83, ಸರ್ಕಾರಿ ಆಸ್ಪತ್ರೆ 96, ನಾಗರತ್ನಮ್ಮ ಬಡಾವಣೆ 41, ಸರ್ಕಾರಿ ಬಸ್ ನಿಲ್ದಾಣ 68, ಕ್ಯಾಲಿಕಟ್ ರಸ್ತೆ 65 ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
2014 ರಲ್ಲಿ ನಿರೋಧ್‍ಗಳನ್ನು ಸಮಪರ್ಕವಾಗಿ ಪೂರೈಕೆ ಮಾಡಲಾಗುತ್ತಿದೆ. ಎಲ್ಲ ಕಡೆ ಸರಬರಾಜಾಗುತ್ತದೆ ಎಂದಿರುವ ಸಂಬಂದಿಸಿದ ಇಲಾಖೆಗಳು ಎಲ್ಲೆಲ್ಲಿ ನಿರೋಧ್ ಬಾಕ್ಸ್ ಹಾಕಿದ್ದಾರೆ ಎಂಬುದನ್ನು ಅವರೇ ತೋರಿಸಲೇ ಇಲ್ಲ.
************************************************************************
   

ಡಿ. 4ರಂದು ವಿಶ್ವ ಏಡ್ಸ್ ದಿನಾಚರಣೆ

ಚಾಮರಾಜನಗರ, ಡಿ. 01 :- ನೆಹರು ಯುವ ಕೇಂದ್ರ, ಸಿದ್ದಾರ್ಥ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಬಸವಪುರದ ಗೌತಮಬುದ್ಧ ಸಾಂಸ್ಕøತಿಕ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಸಹಯೋಗದೊಂದಿಗೆ ಡಿಸೆಂಬರ್ 4ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಸಿದ್ದಾರ್ಥ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಎಂ. ಮಹದೇವು ಕಾರ್ಯಕ್ರಮ ಉದ್ಘಾಟಿಸುವರು. ಸಿದ್ದಾರ್ಥ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಸಿ. ರಂಗಸ್ವಾಮಿ ಅಧ್ಯಕ್ಷತೆ ವಹಿಸುವರು.

ಡಿ. 6ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್  ಪರಿನಿರ್ವಾಣ ದಿನ ಕಾರ್ಯಕ್ರಮ

ಚಾಮರಾಜನಗರ, ಡಿ. 01- ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನ ಕಾರ್ಯಕ್ರಮವನ್ನು ಡಿಸೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಜಿಲ್ಲೆಯ ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಡಿ. 2ರಂದು ವಿದ್ಯುತ್ ವ್ಯತ್ಯಯ

ಚಾಮರಾಜನಗರ ಡಿ. 01 - ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮವು ಡಿಸೆಂಬರ್ 2ರಂದು ರಾಮಸಮುದ್ರ ವ್ಯಾಪ್ತಿಗೆ ಬರುವ ಹೌಸಿಂಗ್ ಬೋರ್ಡ್ ಕಾಲೋನಿ, ಕೋರ್ಟ್ ರಸ್ತೆ ಹಾಗೂ ಕರಿನಂಜನಪುರ ಭಾಗಗಳಲ್ಲಿ ರಸ್ತೆ ಅಗಲೀಕರಣ ಮಾಡಲು ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ನಿರ್ವಹಿಸಲಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆÉ.

ವಾರ್ಷಿಕ ಪ್ರಶಸ್ತಿಗಾಗಿ ಪತ್ರಕರ್ತರಿಂದ ಲೇಖನ-ವರದಿ ಆಹ್ವಾನ

ಚಾಮರಾಜನಗರ, ಡಿ. 01 :- ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಹಾಗೂ ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತೀ ವರ್ಷ ತಲಾ 10 ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ದತ್ತಿ ಸ್ಥಾಪಿಸಿದ್ದು 2017ರ ಸಾಲಿಗಾಗಿ ಲೇಖನಗಳನ್ನು ಆಹ್ವಾನಿಸಿವೆ.
 2017ರ ಜನವರಿಯಿಂದ ಅಕ್ಟೋಬರ್ 17ರವರೆಗೆ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗೆ ಅಭಿಮಾನಿ ಪ್ರಶಸ್ತಿ 2017 ಹಾಗೂ ಮಾನವೀಯ ಸಮಸ್ಯೆ ಪ್ರತಿಬಿಂಬಿಸುವ ಲೇಖನ ವರದಿಗೆ ಮೈಸೂರು ದಿಗಂತ ಪ್ರಶಸ್ತಿ 2017 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
ಕನ್ನಡ ದೈನಿಕ, ವಾರಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ ಲೇಖನಗಳು ಮಾತ್ರ ಪ್ರಶಸ್ತಿಗೆ ಅರ್ಹವಾಗಿರುತ್ತವೆ. ಲೇಖನ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರ ಪಡೆದು ಕಳುಹಿಸಬೇಕು.
ಲೇಖನ ವರದಿಗಳನ್ನು ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಭಿಮಾನಿ ಪ್ರಶಸ್ತಿ 2017 ಹಾಗೂ ಮೈಸೂರು ದಿಗಂತ ಪ್ರಶಸ್ತಿ 2017, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು - 560001 ಇವರಿಗೆ ಡಿಸೆಂಬರ್ 26ರೊಳಗೆ ಕಳುಹಿಸುವಂತೆ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ದರಾಜು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೊಳ್ಳೇಗಾಲ : ಸ್ವಚ್ಚನಗರ ಪ್ರಶಸ್ತಿಗೆ ಸಹಕರಿಸಲು ಮನವಿ

ಚಾಮರಾಜನಗರ, ಡಿ. 01:- ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಕಳೆದ 3 ವರ್ಷಗಳಿಂದ ದೇಶದ ನಗರ, ಪಟ್ಟಣಗಳಿಗೆ (ಸ್ವಚ್ಚ ಸರ್ವೇಕ್ಷಣ) ಸ್ವಚ್ಚ ನಗರ ಪ್ರಶಸ್ತಿ ನೀಡುತ್ತಿದೆ.
ಮೊದಲೆರಡು ವರ್ಷಗಳಲ್ಲಿ ಮೈಸೂರು ಸ್ವಚ್ಚನಗರ ಪ್ರಶಸ್ತಿ ಪಡೆದಿತ್ತು. ಈ ಬಾರಿಯ ಸಮೀಕ್ಷೆಯನ್ನು ಜನವರಿ 2018ರಿಂದ ಕೈಗೊಳ್ಳಲಾಗುತ್ತಿದ್ದು, ಸಮೀಕ್ಷೆಯಲ್ಲಿ ದೇಶದ ಎಲ್ಲಾ ನಗರ, ಪಟ್ಟಣಗಳನ್ನು ಸ್ವಚ್ಚ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೊಳ್ಳೇಗಾಲ ನಗರಸಭೆಯು ನಗರವನ್ನು ಉತ್ತಮವಾಗಿರಿಸುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು, ವಿಷಯ ಪರಿಣಿತರ ಪಾತ್ರ, ಭಾಗವಹಿಸುವಿಕೆ ಮುಖ್ಯವಾಗಿದೆ.
ನಾಗರಿಕರು ಪ್ರತಿದಿನ ಮನೆಯಲ್ಲಿ, ಹೋಟೆಲ್, ಬೇಕರಿ, ಇತರೆ ಅಂಗಡಿಯವರು ಉತ್ಪತ್ತಿಯಾಗುವ ಯಾವುದೇ ಕಸವನ್ನು ಹಸಿಕಸ-ಒಣಕಸವನ್ನಾಗಿ ಬೇರ್ಪಡಿಸಿ ಪ್ರತ್ಯೇಕವಾಗಿ ನಗರಸಭೆ ವಾಹನಗಳಿಗೆ ನೀಡುವುದು. ತ್ಯಾಜ್ಯವನ್ನು ಚರಂಡಿ, ಖಾಲಿ ನಿವೇಶನ, ತೆರೆದ ಪ್ರದೇಶಗಳಲ್ಲಿ ಬಿಸಾಡಬಾರದು. ಸ್ವಚ್ಚತೆಗೆ ಸಂಬಂಧಿಸಿದ ದೂರುಗಳನ್ನು ಚಿತ್ರಗಳ ಸಹಿತ ಸಲ್ಲಿಸಲು ಮೊಬೈಲ್‍ನಲ್ಲಿ ಠಿಟಚಿಥಿ sಣoಡಿe ನಲ್ಲಿರುವ Seಚಿಛಿhhಚಿಣಚಿ ಂಠಿಠಿ ಗಳಾದ ಎಚಿಟಿಚಿhiಣhಚಿ, Sತಿಚಿಛಿhhಚಿ mohಚಿಟಟಚಿಗಳನ್ನು ಬಳಸಬೇಕು.
ಆರೋಗ್ಯ ಹಾಗೂ ನಗರದ ಸ್ಚಚ್ಚತೆಗೆ ಬಯಲಲ್ಲಿ ಮಲಮೂತ್ರ ವಿಸರ್ಜಿಸುವುದನ್ನು ತಡೆಗಟ್ಟುವ ಸಲುವಾಗಿ ನಗರಸಭೆ ವ್ಯಾಪ್ತಿಯ ಎಲ್ಲಾ ಪೆಟ್ರೋಲï ಬಂಕ್‍ಗಳಲ್ಲಿನ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ. ಸಾರ್ವಜನಿಕ ಸ್ಥಳ ಹಾಗೂ ವಿವಿಧ ವಾರ್ಡ್‍ಗಳಲ್ಲಿ ಇರುವ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯವನ್ನು ನಿರ್ಮಿಸಿದ್ದು ಸಾರ್ವಜನಿಕರ ಬಳಕೆಗೆ ಅನುವು ಮಾಡಲಾಗಿದೆ.
ನಗರವನ್ನು ಡಿಸೆಂಬರ್‍ನಲ್ಲಿ ಬಯಲುಮುಕ್ತ ಶೌಚಾಲಯ ನಗರವನ್ನಾಗಿ ಘೋಷಿಸಬೇಕಾಗಿರುವುದರಿಂದ ಸಾರ್ವಜನಿಕರು ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಉಪಯೋಗಿಸುವುದು ಕಡ್ಡಾಯವಾಗಿದೆ. ಇದುವರೆಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳದವರು ಕೂಡಲÀÉೀ ನಗರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಶೌಚಾಲಯವನ್ನು ಡಿಸೆಂಬರ್ 10ರೊಳಗೆ ನಿರ್ಮಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ.
ನಗರಸಭೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಸ್ವಚ್ಚತಾ ಸಮಿತಿಗಳನ್ನು ರಚಿಸಿಕೊಂಡು ಸ್ಚಚ್ಚತೆಗೆ ಆದ್ಯತೆ ನೀಡುವುದು. ಶಾಲಾ ಕಾಲೇಜುಗಳಲ್ಲಿ ಸ್ವಚ್ಚತಾ ರ್ಯಾಂಕಿಂಗ್‍ನಲ್ಲಿ ವಿವಿಧ ಸ್ಥರಗಳಲ್ಲಿ ಅಗ್ರಸ್ಥಾನ ಪಡೆಯುವ ಶಾಲಾ ಕಾಲೇಜುಗಳಿಗೆ ನಗರಸಭೆ ವತಿಯಿಂದ ಬಹುಮಾನ ನೀಡಲಾಗುವುದು.
ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆ ನೀಡಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪ್ರಕಟಣೆ ಕೋರಿದೆ.

ಶಿಲ್ಪಕಲಾ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಡಿ. 01-ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2015 ರಿಂದ 2017ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಡಿ ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ.
2014 ಜನವರಿಯಿಂದ 2016ರ ಡಿಸೆಂಬರ್ ಅವಧಿಯಲ್ಲಿ ಮುದ್ರಣಗೊಂಡ ಪುಸ್ತಕಗಳನ್ನು 2015, 2016 ಹಾಗೂ 2017ನೇ ಸಾಲಿನಲ್ಲಿ ನೀಡುವ ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು.
ಪುಸ್ತಕಗಳನ್ನು ಡಿಸೆಂಬರ್ 10ರೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1ನೇ ಮಹಡಿ, ಕನ್ನಡ ಭವನ, ಜೆಸಿ ರಸ್ತೆ, ಬೆಂಗಳೂರು - 560002 (ದೂ.ಸಂ. 080-22278725) ಇವರನ್ನು ಸಂಪರ್ಕಿಸುವಂತೆ ರಿಜಿಸ್ಟ್ರಾರ್ ಹೆಚ್.ವಿ. ಇಂದ್ರಮ್ಮ ಪ್ರಕಟಣೆಯಲ್ಲಿ ಕೋರಿದ್ದಾರೆ.
 

ತಾತ್ಕಾಲಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಡಿ. 01-ಜಿಲ್ಲೆಯ ಆಯುಷ್ ಇಲಾಖೆ ಆಡಳಿತ ವ್ಯಾಪ್ತಿಯಲ್ಲಿ ಬರುವ  ಕೇಂದ್ರ ಸರ್ಕಾರದಿಂದ ಉನ್ನತೀಕರಣಗೊಂಡ ಚಾಮರಾಜನಗರ ಜಿಲ್ಲಾ ಆಯುರ್ವೇದ ಆಸ್ಪತ್ರೆ ಹಾಗೂ ಗುಂಡ್ಲುಪೇಟೆ ತಾಲೂಕು ಮಟ್ಟದ ಆಯುರ್ವೇದ ಆಸ್ಪತ್ರೆಗೆ ತಾತ್ಕಾಲಿಕವಾಗಿ ಮಂಜೂರಾಗಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಆಯುರ್ವೇದ ತಜ್ಞ ವೈದ್ಯರ 4 ಹುದ್ದೆಗಳಿಗೆ ನಿಗದಿಪಡಿಸಿದ ಮೀಸಲಾತಿ ಪರಿಶಿಷ್ಟ ಜಾತಿ ಹಾಗೂ ಸಮತಳ ಮೀಸಲಾತಿ ಪರಿಶಿಷ್ಟ ಜಾತಿ, ಸಾಮಾನ್ಯ ಅಭ್ಯರ್ಥಿ, ಮೀಸಲಾತಿ ಹಾಗೂ ಸಮತಳ ಮೀಸಲಾತಿಗೆ ಸಾಮಾನ್ಯ ಅಭ್ಯರ್ಥಿಯನ್ನು ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಮೀಸಲಾತಿ 3ಬಿ ಹಾಗೂ 3ಬಿ, ಮಹಿಳಾ ಅಭ್ಯರ್ಥಿ ಮತ್ತು ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ ಹಾಗೂ ಸಮತಳ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿಯನ್ನು ಗುಂಡ್ಲುಪೇಟೆಯ ತಾಲೂಕು ಆಯುರ್ವೇದ ಆಸ್ಪತ್ರೆಗೆ ನೇಮಿಸಿಕೊಳ್ಳಲಿದೆ. ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಹರು.
ಔಷಧಿ ವಿತರಕರ 3 ಹುದ್ದೆಗಳನ್ನು ನಿಗದಿಪಡಿಸಿದ ಮೀಸಲಾತಿ ಹಾಗೂ ಸಮತಳ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ ಹಾಗೂ  ಮೀಸಲಾತಿ 3ಬಿ ಹಾಗೂ ಸಮತಳ ಮೀಸಲಾತಿಯಲ್ಲಿ 3ಬಿ, ಮಹಿಳಾ ಅಭ್ಯರ್ಥಿ ಹಾಗೂ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ ಮತ್ತು ಸಮತಳ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿಯನ್ನು ಗುಂಡ್ಲುಪೇಟೆಯ ತಾಲೂಕು ಆಯುರ್ವೇದ ಆಸ್ಪತ್ರೆಗೆ ನೇಮಿಸಿಕೊಳ್ಳಲಿದ್ದು 10ನೇ ತರಗತಿ ಉತ್ತೀರ್ಣ ಹಾಗೂ ಔಷಧಿ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದಿರಬೇಕು.
ಆಸಕ್ತ ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ತಮ್ಮ ಸ್ವವಿವರ, ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಹುದ್ದೆಗಳ ವರ್ಗೀಕರಣದ ನಕಲು ಪ್ರತಿಯೊಂದಿಗೆ ದೃಢೀಕರಿಸಿ ಡಿಸೆಂಬರ್ 21ರೊಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಡಿ. 4 ರಿಂದ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು, ಸದಸ್ಯರ ಜಿಲ್ಲಾ ಪ್ರವಾಸ

ಚಾಮರಾಜನಗರ, ಡಿ. 01 - ರಾಜ್ಯ ಆಹಾರ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಜಿಲ್ಲೆಗೆ ಡಿಸೆಂಬರ್ 4 ರಿಂದ 6ರವರೆಗೆ ಆಯೋಗವು ಜಿಲ್ಲಾ ಪ್ರವಾಸ ಕೈಗೊಂಡಿದೆ.
ಆಯೋಗದ ಅಧ್ಯಕ್ಷರಾದ ಡಾ. ಎನ್. ಕೃಷ್ಣಮೂರ್ತಿ, ಸದಸ್ಯ ಕಾರ್ಯದರ್ಶಿ ಅರುಂಧತಿ ಚಂದ್ರಶೇಖರ್, ಸದಸ್ಯರಾದ ವಿ.ಬಿ. ಪಾಟೀಲ್, ಹೆಚ್.ವಿ. ಶಿವಶಂಕರ್, ಡಿ.ಜಿ. ಹಸಬಿ, ಬಿ.ಎ. ಮಹಮ್ಮದ್ ಹಾಗೂ ಮಂಜುಳಾಬಾಯಿ ಅವರು ತಂಡದಲ್ಲಿದ್ದಾರೆ.
ಡಿಸೆಂಬರ್ 4ರಂದು ಬೆಳಿಗ್ಗೆ 9.30ಕ್ಕೆ ಕೊಳ್ಳೇಗಾಲಕ್ಕೆ ಆಗಮಿಸುವ ತಂಡವು ಅಂಗನವಾಡಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಮಧ್ಯಾಹ್ನದ ಉಪಾಹಾರ ಕೇಂದ್ರ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಡಿಸೆಂಬರ್ 5ರಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲೆಯ ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಉಪಾಹಾರ ಯೋಜನೆ ಅನುಷ್ಠಾನದ ಬಗ್ಗೆ ಶಾಲೆಗಳಿಗೆ ಭೇಟಿ ಹಾಗೂ ಆಹಾರಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.
ಡಿಸೆಂಬರ್ 6ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013ರ ಅನುಷ್ಠಾನ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆ ತಿಳಿಸಿದÉ.

ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಅರಿವು ಜಾಥಾ

ಚಾಮರಾಜನಗರ, ಡಿ. 01 - ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಎಆರ್‍ಟಿ ಕೇಂದ್ರ ಹಾಗೂ ಜಿಲ್ಲಾ ಸರ್ಕಾರಿ ನರ್ಸಿಂಗ್ ಶಾಲೆ ಇವರ ಸಹಯೋಗದಲ್ಲಿ ನಗರದಲ್ಲಿಂದು ಏಡ್ಸ್ ಜನಜಾಗೃತಿ ಜಾಥಾ ನಡೆಸಲಾಯಿತು.
      ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆರಂಭಗೊಂಡ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾದ ಎಂ.ರಾಮಚಂದ್ರ, ಅವರು ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ನಾಗಾರಿ ಭಾರಿಸುವುದರ ಮೂಲಕ ಜನಪದ ಕಲಾತಂಡದ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಏಡ್ಸ್ ಪೀಡಿತರನ್ನು ಕಿಳಿರಿಮೆಯಿಂದ ನೋಡದೆ ಮಾನವೀಯತೆಯಿಂದ ಕಾಣಬೇಕು. ಅಲ್ಲದೆ, ಏಡ್ಸ್ ಬಗ್ಗೆ ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
     ಜಾಥಾದಲ್ಲಿ ಭಾಗವಹಿಸಿದ್ದ ವಿವಿಧ ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯವರು ಏಡ್ಸ್ ಕಾಯಿಲೆಯ ಬಗ್ಗೆ ಭಿತ್ತಿ ಪತ್ರಗಳನ್ನು ಹಂಚಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
     ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ನಗರಸಭಾ ಅಧ್ಯಕ್ಷರಾದ ಶೋಭಪುಟ್ಟಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಕೆ ಪ್ರಸಾದ್, ಜಿಲ್ಲಾ ಎಡ್ಸ್ ನಿಯಂತ್ರಣಾಧಿಕಾರಿ ಡಾ. ಎನ್. ಮಹದೇವ್, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು, ಹಾಗೂ ಮನೋನಿಧಿ ನರ್ಸಿಂಗ್ ಶಾಲೆ, ಸ್ವಯಂ ಸೇವಾ ಸಂಸ್ಥೆಗಳು, ಇನ್ನಿತರರು ಜಾಥಾದಲ್ಲಿ ಭಾಗವಯಿಸಿದ್ದರು.

   

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಡಿ. 01 -ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಡಿಸೆಂಬರ್ 4ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಡಿ. 04ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವರು. 11.30 ಗಂಟೆಗೆ ಬಂಡೀಪುರದಲ್ಲಿ ಗಿರಿಜನರಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ 8 ಗ್ರಾಮಪಂಚಾಯಿತಿಗಳಿಗೆ ಚುನಾವಣೆ: ಬಂದೂಕುಗಳನ್ನು ಪೊಲೀಸ್ ಸುಪರ್ದಿಗೆ ನೀಡಲು ಜಿಲ್ಲಾಧಿಕಾರಿ ಆದೇಶ

ಚಾಮರಾಜನಗರ, ಡಿ. 01 - ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನಲೆಯಲ್ಲಿ ಚುನಾವಣೆ ನಡೆಸುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿದ ಬಂದೂಕುದಾರರು ತಮ್ಮ ಬಂದೂಕುಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆÉಯ ಸುಪರ್ದಿಗೆ ನೀಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕಿನ ಒಟ್ಟು 8 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, ಚಾಮರಾಜನಗರ ತಾಲೂಕಿನ ಬದನಗುಪ್ಪೆ, ಸಂತೇಮರಹಳ್ಳಿ, ಅಮಚವಾಡಿ ಹಾಗೂ ಹೊನ್ನಹಳ್ಳಿ, ಗುಂಡ್ಲುಪೇಟೆ ತಾಲೂಕಿನ ಬಲಚವಾಡಿ, ತೆರಕಣಾಂಬಿ, ಬೊಮ್ಮನಹಳ್ಳಿ ಮತ್ತು ಕೊಳ್ಳೇಗಾಲ ತಾಲೂಕಿನ ಗೋಪಿನಾಥಂ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಪರವಾನಗಿ ಹೊಂದಿರುವ ಬಂದೂಕುದಾರರು ತಮ್ಮ ಬಂದೂಕುಗಳನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಸುಪರ್ದಿಗೆ ಒಪ್ಪಿಸುವಂತೆ  ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ವಿಶ್ವ ವಿಕಲಚೇತನರ ದಿನ ಅಂಗವಾಗಿ ವಿಕಲಚೇತನ ಮಕ್ಕಳು ಮತ್ತು ಪೋಷಕರಿಗೆ ಕ್ರೀಡಾ ಸ್ಪರ್ಧೆ

ಚಾಮರಾಜನಗರ, ಡಿ. 01:- ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ಮಾಧ್ಯಮಿಕ ಶಿಕ್ಷಣ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನ ಮಕ್ಕಳು(5ರಿಂದ 10ನೇ ತರಗತಿ) ಮತ್ತು ವಿಕಲಚೇತನ ಮಕ್ಕಳ ಪೋಷಕರಿಗೆ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಡಿಸೆಂಬರ್ 3ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಾಮರಾಜನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







ಸಕಾಲದಲ್ಲಿ ಮಾಹಿತಿ ಒದಗಿಸಿ : ರಾಜ್ಯ ಮಾಹಿತಿ ಆಯುಕ್ತರಾದ ಕೆ.ಎಂ.ಚಂದ್ರೇಗೌಡ ಸೂಚನೆ ,ಕೆಎಸ್‍ಆರ್‍ಟಿಸಿ : 362 ಮಂದಿ ಪ್ರಯಾಣಿಕರಿಂದ 45,472 ರೂ. ದಂಡ ವಸೂಲಿ (30-11-2017)

ಸಕಾಲದಲ್ಲಿ ಮಾಹಿತಿ ಒದಗಿಸಿ : ರಾಜ್ಯ ಮಾಹಿತಿ ಆಯುಕ್ತರಾದ ಕೆ.ಎಂ.ಚಂದ್ರೇಗೌಡ ಸೂಚನೆ   

ಚಾಮರಾಜನಗರ, ನ. 30 - ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಜಾರಿಗೊಳಿಸಲಾಗಿರುವ ಮಾಹಿತಿ ಹಕ್ಕು ಕಾಯ್ದೆಯನ್ವಯ ಅಧಿಕಾರಿಗಳು ಮಾಹಿತಿ ಒದಗಿಸಲು ಬದ್ದರಾಗಿರಬೇಕು ಎಂದು ರಾಜ್ಯ ಮಾಹಿತಿ ಆಯುಕ್ತರಾದ ಕೆ.ಎಂ. ಚಂದ್ರೇಗೌಡ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿಂದು ಮಾಹಿತಿ ಹಕ್ಕು ಕುರಿತ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಆಡಳಿತ ಬಗೆಗಿನ ಮಾಹಿತಿ ಹೊಂದುವ ಸಲುವಾಗಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಸರ್ಕಾರದ ಇಲಾಖೆಗಳ ಕಾರ್ಯವೈಖರಿ, ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಇರಬೇಕಿದೆ. ಈ ನಿಟ್ಟಿನಲ್ಲಿ ಮಾಹಿತಿ ಪಡೆಯಲು ಕೋರಿ ಬರುವ ಅರ್ಜಿಗಳನ್ನು ಸ್ವೀಕರಿಸಿ ಸಮರ್ಪಕವಾಗಿ ಮಾಹಿತಿ ನೀಡುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂದರು.
ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಕೆಯಾಗುವ ಅರ್ಜಿಗಳನ್ನು 30 ದಿನಗಳೊಳಗೆ ವಿಲೇವಾರಿ ಮಾಡಬೇಕು. ವಿಳಂಬ ಮಾಡಿದರೆ ದಂಡನೆಗೆ ಅವಕಾಶವಾಗುತ್ತದೆ. ಲಭ್ಯವಿರುವ ಮಾಹಿತಿ ಸಕಾಲದಲ್ಲಿ ನೀಡಬೇಕು. ಪ್ರತಿ ಅರ್ಜಿಗೂ ತನ್ನದೇ ಆದ ಮೌಲ್ಯ ಇರುತ್ತದೆ. ಯಾವ ಅರ್ಜಿಯನ್ನು ಕಡೆಗಣಿಸುವಂತಿಲ್ಲ. ಸಲ್ಲಿಕೆಯಾಗುವ ಅರ್ಜಿಗೆ ಸ್ಪಷ್ಟವಾಗಿ ಮಾಹಿತಿ ಒದಗಿಸಬೇಕು ಎಂದರು.
ಪ್ರತಿ ಇಲಾಖೆಗಳು ಆಯಾ ಕಚೇರಿಯ ಮುಖ್ಯ ಸ್ಥಳದಲ್ಲಿ ಮಾಹಿತಿ ಅಧಿಕಾರಿ, ಪ್ರಾಧಿಕಾರ ವಿವರವನ್ನು ಪ್ರಕಟಿಸಬೇಕು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಕಚೇರಿಯ ಮುಖ್ಯ ಪ್ರದೇಶದಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವ ಹಾಗೆ ಮಾಹಿತಿ ಅಧಿಕಾರಿ ವಿವರಗಳನ್ನು ಪ್ರದರ್ಶಿಸಬೇಕು ಎಂದು ಆಯುಕ್ತರು ತಿಳಿಸಿದರು.
ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಸಂಪೂರ್ಣವಾಗಿ ಅರಿವು ಹೊಂದಬೇಕು. ಮಾಹಿತಿ ಹಕ್ಕು ಬಗ್ಗೆ ಹೆಚ್ಚು ತಿಳಿದುಕೊಂಡಷ್ಟು ಗೊಂದಲ ತಪ್ಪಲಿದೆ. ಜತೆಗೆ ಕಡತಗಳ ನಿರ್ವಹಣೆಯನ್ನು ನಿಯಾಮಾನುಸಾರ ಮಾಡಬೇಕು. ಇದರಿಂದ ಅರ್ಜಿ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಆಯುಕ್ತರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನಂ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಾಗಾರಕ್ಕೂ ಮೊದಲು ಮಾಹಿತಿ ಆಯುಕ್ತರು ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದರು. ಬಳಿಕ ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಇಲಾಖೆ ಕಚೇರಿಗಳ ಮುಖ್ಯ ದ್ವಾರದ ಬಳಿ ಮಹಿತಿ ಅಧಿಕಾರಿ, ಪ್ರಾಧಿಕಾರ ವಿವರಗಳನ್ನು ಪ್ರಕಟಿಸಲಾಗಿದೆಯೆ ಎಂಬ ಬಗ್ಗೆ ಪರಿಶೀಲಿಸಿದರು. ವಿವರ ಫಲಕ ಅಳವಡಿಸದೆ ಇರುವ ಅಧಿಕಾರಿಗಳಿಗೆ ತ್ವರಿತವಾಗಿ ಅಳವಡಿಸುವಂತೆ ನಿರ್ದೇಶನ ನೀಡಿದರು.

***********************************************

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರಬೆಟ್ಟ:-


 ದಿನಾಂಕ:30-11-2017ರಂದು ಬೆಳಿಗ್ಗೆ  7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಜೆ.ರೂಪಾ,ಕೆ.ಎ.ಎಸ್.(ಕಿರಿಯ ಶ್ರೇಣಿ) ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ  ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ  ಪರ್ಕಾವಣೆಯಲ್ಲಿ ಸಹಾಯಕ ಅಭಿಯಂತರರಾದ ಶ್ರೀ ಆರ್.ಎಸ್.ಮನುವಾಚಾರ್ಯ, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ,  ಕಛೇರಿಯ ಅಧೀಕ್ಷಕರಾದ  ಶ್ರೀಬಿ.ಮಾದರಾಜು, ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಛೇರಿಯ  ಪ್ರಥಮ ದರ್ಜೆ ಸಹಾಯಕರಾದ   ಶ್ರೀ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ  ಆರಕ್ಷಕ  ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್  & ಸಿಬ್ಬಂದಿ ವರ್ಗದವರು ಹಾಜರಿದ್ದರು.ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.1,26,56,321/- (ಔಟಿe ಛಿಡಿoಡಿe ಣತಿeಟಿಣಥಿ six ಟಚಿಞh ಜಿiಜಿಣಥಿ six ಣhousಚಿಟಿಜ ಣhಡಿee ಣತಿeಟಿಣಥಿ oಟಿe ಡಿuಠಿees oಟಿಟಥಿ)  ಬಂದಿರುತ್ತದೆ. ಇದಲ್ಲದೇ ಚಿನ್ನದ  ಪದಾರ್ಥಗಳು 0. 038 (ಖಿhiಡಿಣಥಿ eighಣ gಡಿಚಿms) ಮತ್ತು ಬೆಳ್ಳಿ  ಪದಾರ್ಥಗಳು 2.100 (ಖಿತಿo ಏಉ huಟಿಜಡಿeಜ ಉಡಿಚಿms) ದೊರೆತಿರುತ್ತದೆ. 

************************************************************

ಕೆಎಸ್‍ಆರ್‍ಟಿಸಿ : 362 ಮಂದಿ ಪ್ರಯಾಣಿಕರಿಂದ 45,472 ರೂ. ದಂಡ ವಸೂಲಿ

ಚಾಮರಾಜನಗರ, ನ. 30 :- ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಕ್ಟೋಬರ್ 2017ರಲ್ಲಿ 2480 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 253 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಟಿಕೆಟ್ ಪಡೆಯದೇ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 362 ಮಂದಿ ಪ್ರಯಾಣಿಕರಿಗೆ 45472 ರೂ. ದಂಡ ವಿಧಿಸಲಾಗಿದೆ ಎಂದು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಆಶೋಕ್ ಕುಮಾರ್ ಪÀ್ರಕಟಣೆಯಲ್ಲಿ ತಿಳಿಸಿದ್ದಾರÉ.

ಡಿ. 1ರಂದು ನಗರದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಜಾಥಾ 

ಚಾಮರಾಜನಗರ, ನ. 30 - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ಡಿಸೆÉಂಬರ್ 1ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಾಥಾ ಆರಂಭಗೊಳ್ಳಲಿದೆ.
ಜಿಲ್ಲಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡು ಏಡ್ಸ್ ದಿನಾಚರಣೆ ಹಾಗೂ 2017-18ನೇ ಸಾಲಿಗೆ ಜಿಲ್ಲೆಯಲ್ಲಿ ಹೆಚ್ ಐವಿ, ಏಡ್ಸ್ ಅಂಕಿಅಂಶಗಳ ಮಾಹಿತಿ ನೀಡುವರು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಡಿ. 5 ರಂದು ನಗರದಲ್ಲಿ ವಸ್ತು ಪ್ರದರ್ಶನ, ರಕ್ತದಾನ ಶಿಬಿರ

ಚಾಮರಾಜನಗರ, ನ. 30 - ಜಿಲ್ಲಾ ಆಸ್ಪತ್ರೆಯ ಎಆರ್‍ಟಿ ಕೇಂದ್ರದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿಸೆಂಬರ್ 5ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆÉ ಎಚ್‍ಐವಿ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಸ್ತು ಪ್ರದರ್ಶನ ಹಾಗೂ ರಕ್ತದಾನ ಶಿಬಿರ ಆಯೋಜಿಸಿದೆ.
ಅರಿವು ಜಾಗೃತಿ ಹಾಗೂ ವಸ್ತು ಪ್ರದರ್ಶನವು ಐಸಿಟಿಸಿ ಕೇಂದ್ರ, ಪಿಪಿಟಿಸಿಸಿ ಕೇಂದ್ರ, ಸುರಕ್ಷಾ ಕ್ಲಿನಿಕ್, ರಕ್ತ ಸಂಗ್ರಹಣ ಘಟಕ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾನೂನು ಸಲಹಾ ಕೇಂದ್ರ, ಸ್ವಯಂ ಸೇವಾ ಸಂಸ್ಥೆಗಳಾದ ಚೈತನ್ಯ ನೆಟ್‍ವರ್ಕ್, ಸ್ನೇಹ ಜ್ಯೋತಿ ಮಹಿಳಾ ಸಂಘ, ನಾಗರಿಕ ಸಹಾಯವಾಣಿ ಕೇಂದ್ರ ನಿರ್ವಹಣೆ ಉದ್ಭವ್ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಎಂದು ಎಆರ್‍ಟಿ ಕೇಂದ್ರದ ವೈದ್ಯಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ತರಬೇತಿಗೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

ಚಾಮರಾಜನಗರ ನ. 30 :- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಭಾರತೀಯ ಸೇನೆಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಪೂರ್ವಸಿದ್ಧತೆ ಕುರಿತು ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರವರ್ಗ-1, 2ಎ, 3ಎ ಹಾಗೂ 3ಬಿ.ಗೆ ಸೇರಿದ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 5 ಕಡೆಯ ದಿನ.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-65970004ನ್ನು ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


       
                                                                                                             

ಮಾದರಿ ಗ್ರಾಮ ಪಂಚಾಯಿತಿಯಾಗಿ ದೊಡ್ಡಮೋಳೆ ಅಭಿವೃದ್ಧಿ : ಧ್ರುವನಾರಾಯಣ


ಚಾಮರಾಜನಗರ, ನ. 30 :- ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿರುವ ತಾಲೂಕಿನ ದೊಡ್ಡಮೋಳೆಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸುವ ದಿಸೆಯಲ್ಲಿ ಸ್ಥಳೀಯರು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಲೋಕಸಭಾ ಸದಸ್ಯರಾದ ಆರ್ ಧ್ರುವನಾರಾಯಣ ತಿಳಿಸಿದರು.
ದೊಡ್ಡಮೋಳೆಯಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆ ಸಂಬಂಧ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಹಿಂದುಳಿದ ಪ್ರದೇಶವಾಗಿರುವ ದೊಡ್ಡಮೋಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೊಡ್ಡಮೋಳೆ, ದೊಳ್ಳೀಪುರ, ಬ್ಯಾಡಮೂಡ್ಲು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಕ್ರಿಯಾ ಯೋಜನೆ ಕಾರ್ಯರೂಪಕ್ಕೆ ಬರಲು ಗ್ರಾಮಸ್ಥರು ಸಹ ನಿಂತು ಕೈಜೋಡಿಸಬೇಕು. ಆಗಮಾತ್ರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಉದ್ದೇಶ ಸಫಲವಾಗುತ್ತದೆ ಎಂದು ಧ್ರುವನಾರಾಯಣ ತಿಳಿಸಿದರು.
ಸ್ಥಳೀಯವಾಗಿ ಪ್ರೌಢಶಾಲೆ ಅಗತ್ಯವಿದೆ ಎಂಬುದು ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಸತಿ, ಕುಡಿಯುವ ನೀರು, ಸಿಮೆಂಟ್ ಕಾಂಕ್ರೀಟ್ ರಸ್ತೆ, ಬೀದಿ ದೀಪ, ಶೌಚಾಲಯ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತದೆ ಎಂದರು.
ಶಿಕ್ಷಣಕ್ಕೆ ಪೂರಕವಾಗಿರುವ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಯಾವ ಮಕ್ಕಳೂ ಸಹ ಶಾಲೆಯಿಂದ ಹೊರಗುಳಿಯಬಾರದು. ಎಲ್ಲರಿಗೂ ಶಿಕ್ಷಣ ಕೊಡಿಸಬೇಕು. ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಸಮಾಜದಲ್ಲಿ ಮೇಲೆಬರಲು ಸಾಧ್ಯವಾಗಲಿದೆ. ಮಕ್ಕಳನ್ನು ದುಡಿಮೆಗೆ ಹಚ್ಚಬಾರದು, ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಅವಕಾಶ ನೀಡಬೇಕೇ ವಿನ: ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಧ್ರುವನಾರಾಯಣ ಸಲಹೆ ಮಾಡಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಈ ಭಾಗದ ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ವಸತಿ ನಿರ್ಮಾಣಕ್ಕೂ ಅಗತ್ಯವಿರುವ ನೆರವು ನೀಡಲಾಗುತ್ತದೆ. ಇನ್ನಿತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಾವೂ ಸಹ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ತಾವೂ ಸಹ ಹರದನಹಳ್ಳಿಯನ್ನು ಪ್ರತಿನಿಧಿಸುತ್ತಿದ್ದು ಈ ಭಾಗಕ್ಕೆ ಸೇರಿದ ದೊಡ್ಡಮೋಳೆ ಗ್ರಾಮಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಅಭಿವೃದ್ಧಿ ಕೆಲಸಗಳಿಂದ ಜನರಿಗೆ ಗ್ರಾಮಕ್ಕೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು ಮಾತನಾಡಿ ದೊಡ್ಡಮೋಳೆ ಗ್ರಾಮಪಂಚಾಯಿತಿಯು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿರುವುದಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ತಾವು ಅಭಿನಂದನೆ ಸಲ್ಲಿಸುತ್ತೇನೆ. ಯೋಜನೆಯಡಿ ಸಮಗ್ರವಾಗಿ ಗ್ರಾಮಗಳು ಅಭಿವೃದ್ಧಿಯಾಗಲಿವೆ. ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಜತೆಗೂಡಿ ಬೆಂಬಲವಾಗಿ ಇದ್ದು ಪ್ರಗತಿ ಕಾರ್ಯಗಳಿಗೆ ಉತ್ತೇಜಿಸಬೇಕÀು ಎಂದರು.
ಜಿಲ್ಲಾಧಿಕಾರಿ ಬಿ. ರಾಮು ಮಾತನಾಡಿ ಸಂಸದರ ಆದರ್ಶ ಗ್ರಾಮ ಅಭಿವೃದ್ಧಿಗೆ ಆಯ್ಕೆಯಾಗಿರುವ ದೊಡ್ಡಮೋಳೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ, ಆರೋಗ್ಯ ಅತಿಮುಖ್ಯವಾಗಿದೆ. ಶಾಲೆ, ರಸ್ತೆ, ಇನ್ನಿತರ ಸೌಲಭ್ಯಗಳು ಜನರಿಗೆ ಸ್ಥಳೀಯವಾಗಿ ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದಾರೆ. ಇದರಿಂದ ಗ್ರಾಮದ ಚಿತ್ರಣವೇ ಬದಲಾವಣೆಯಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯರಾದ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಾ, ಉಪಾಧ್ಯಕ್ಷರಾದ ಸುಧಾ, ಗ್ರಾಮದ ಮುಖಂಡರು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಗೂ ಮೊದಲು ಧ್ರುವನಾರಾಯಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ದೊಡ್ಡಮೋಳೆ, ಬ್ಯಾಡಮೂಡ್ಲು, ದೊಳ್ಳೀಪುರ ಗ್ರಾಮದ ಎಲ್ಲ ಬೀದಿಗಳಿಗೆ ಭೇಟಿ ನೀಡಿ ಅಲ್ಲಿರುವ ವಾಸ್ತವ ಚಿತ್ರಣವನ್ನು ಪರಿಶೀಲಿಸಿದರು.



ಡಿ. 1 ರಿಂದ ಜಿಲ್ಲೆಯಲ್ಲಿ ಜಾನಪದ ಕಲಾಪ್ರದರ್ಶನ (29-11-2017)

ಡಿ. 1 ರಿಂದ ಜಿಲ್ಲೆಯಲ್ಲಿ ಜಾನಪದ ಕಲಾಪ್ರದರ್ಶನ

ಚಾಮರಾಜನಗರ, ನ. 29 (vss):- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿಸೆಂಬರ್ 1 ರಿಂದ 10ರವರೆಗೆ ಜಿಲ್ಲೆಯ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಜನಪದ ಕಲಾತಂಡದವರಿಂದ ಕಲಾಪ್ರದರ್ಶನ ಏರ್ಪಡಿಸಲಾಗಿದೆ.
ಸಾರ್ವಜನಿಕರು ಕಲಾಪ್ರದರ್ಶನದ ಸದುಪಯೋಗ ಮಾಡಿಕೊಳ್ಳುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ.

ನ. 30ರಂದು ನಗರದಲ್ಲಿ ಮಾಹಿತಿ ಆಯುಕ್ತರಿಂದ ಪ್ರಕರಣಗಳ ವಿಚಾರಣೆ

ಚಾಮರಾಜನಗರ, ನ. 29 (vss):- ರಾಜ್ಯ ಮಾಹಿತಿ ಆಯುಕ್ತರಾದ ಕೆ.ಎಂ. ಚಂದ್ರೇಗೌಡ ಅವರು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಹಕ್ಕು ಪ್ರಕರಣಗಳ ವಿಚಾರಣೆಯನ್ನು ನವೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ನಡೆಸುವರು.
ಒಟ್ಟು 65 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಆಯುಕ್ತರು ವಿಚಾರಣೆ ನಡೆಸುವರೆಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಸೀವಿಂಗ್ ಮಿಷನ್ ಆಪರೇಟರ್ ತರಬೇತಿ : ಅಭ್ಯರ್ಥಿಗಳಿಗೆ ನೇರ ಸಂದರ್ಶನ
ಚಾಮರಾಜನಗರ, ನ. 29 (vss):- ಕೈಮಗ್ಗ ಮತ್ತು ಜವಳಿ ಇಲಾಖೆಯು ನೂತನ ಜವಳಿ ನೀತಿಯಡಿ 45 ದಿನಗಳ ಅವಧಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳ ಸೀವಿಂಗ್ ಮಿಷನ್ ಆಪರೇಟರ್ ತರಬೇತಿಯನ್ನು ನಿರುದ್ಯೋಗಿ ಯುವ ಅಭ್ಯರ್ಥಿಗಳಿಗೆ ನೀಡುವ ಸಲುವಾಗಿ ನೇರ ಸಂದರ್ಶನ ನಡೆಸÀಲಿದೆ.
ಅಭ್ಯರ್ಥಿಗಳು 18 ರಿಂದ 35ರ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ 18 ರಿಂದ 40ರ ವಯೋಮಿತಿಯೊಳಗಿರಬೇಕು. ಕನಿಷ್ಟ 5ನೇ ತರಗತಿ ವ್ಯಾಸಂಗ ಮಾಡಿರಬೇಕು.
ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ದೇವಾಂಗ ಬೀದಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಲ್ಲಿ (ದೂ.ಸಂ.08226-222454) ಡಿಸೆಂಬರ್ 5ರಂದು ಬೆಳಿಗ್ಗೆ 10 ರಿಂದ 11.30 ಗಂಟೆಯವರೆಗೆ, ಮರಿಯಾಲದ ಜೆಎಸ್‍ಎಸ್ ನೈಪುಣ್ಯತಾ ತರಬೇತಿ ಕೇಂದ್ರದಲ್ಲಿ (ದೂ.ಸಂ. 08226-230170)  ಮಧ್ಯಾಹ್ನ 12.30 ರಿಂದ 1.30 ಗಂಟೆಯವರೆಗೆ ಸಂದರ್ಶನ ನಡೆಸಲಾಗುವುದು.
ಗುಂಡ್ಲುಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣದ ಜೆ ಎಸ್ ಎಸ್ ಕಾಲೇಜು ಎದುರು ಇರುವ ಉದಯರವಿ ಸೇವಾ ಸಂಸ್ಥೆ (ಮೊ. 9632786586) ಯಲ್ಲಿ ಡಿಸೆಂಬರ್ 5ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ, ಹಳೇ ಆಸ್ಪತ್ರೆ ರಸ್ತೆಯ ಮುದ್ದು ಬಸಪ್ಪ ಬಿಲ್ಡಿಂಗ್‍ನಲ್ಲಿರುವ ಕಲ್ಪತರು ಗಾರ್ಮೆಂಟ್ಸ್‍ನಲ್ಲಿ ಮಧ್ಯಾಹ್ನ 4 ರಿಂದ 5 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.
ಯಳಂದೂರು ತಾಲೂಕಿಗೆ ಸಂಬಂಧಿಸಿದಂತೆ ಯಳಂದೂರು ಪಟ್ಟಣದ ಬಳೇಪೇಟೆ ಶಿವಪ್ಪ ಬಿಲ್ಡಿಂಗ್‍ನಲ್ಲಿರುವ ಕಲ್ಪತರು ಗಾರ್ಮೆಂಟï್ಸನಲ್ಲಿ ಡಿಸೆಂಬರ್ 6ರಂದು ಬೆಳಿಗ್ಗೆ 10 ರಿಂದ 11.30 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.
ಕೊಳ್ಳೇಗಾಲ ತಾಲೂಕಿಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣದ  ಬಸ್ತೀಪುರ ರಸ್ತೆಯ ರಾಜೀವ್ ನಗರದ ಕಾವ್ಯಶ್ರೀ ಗಾರ್ಮೆಂಟ್ಸ್‍ನಲ್ಲಿ ಡಿಸೆಂಬರ್ 6ರಂದು ಮಧ್ಯಾಹ್ನ 12 ರಿಂದ 1.30ರವರೆಗೆ ಸಂದರ್ಶನ ನಡೆಯಲಿದೆ.
ಹನೂರು ಭಾಗಕ್ಕೆ ಸಂಬಂಧಿಸಿದಂತೆ ಹನೂರು ಪಟ್ಟಣದ ಕ್ರಿಸ್ತರಾಜ ಕಾನ್ವೆಂಟ್ ಹತ್ತಿರದ ಮಿಲ್ ರಸ್ತೆಯಲ್ಲಿರುವ ಮಾತೃಶ್ರೀ ಗಾರ್ಮೆಂಟ್ಸ್‍ನಲ್ಲಿ (ಮೊ. 9986912896) ಡಿಸೆಂಬರ್ 6ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಗಳು ಶೇ. 80ರಷ್ಟು ಹಾಜರಾತಿ ಪಡೆದಲ್ಲಿ ಶಿಷ್ಯ ವೇತನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಆಯಾ ನಿಗದಿತ ದಿನಾಂಕದಂದು ಅರ್ಜಿ ಹಾಗೂ ವಿದ್ಯಾಭ್ಯಾಸ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ, ವಯಸ್ಸಿನ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ಬೇರೆ ತಾಲೂಕಿನಲ್ಲಿ ವ್ಯಾಸಂಗ ಮಾಡಿದ ಅಬ್ಯರ್ಥಿಗಳಿಗೆ) ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂಪೂರ್ಣ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ದೂ.ಸಂ. 08226-222883 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಯಳಂದೂರÀು : ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ ನ. 29 (vss):- ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ರಿಯಲ್ಲಿ 2017-18ನೇ ಸಾಲಿನಲ್ಲಿ ವಾಜಪೇಯಿ ವಸತಿ ಯೋಜನೆಯಡಿ ಮನೆ  ನಿರ್ಮಿಸಿಕೊಳ್ಳಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರದಿಂದ 1 ಲಕ್ಷದ 20 ಸಾವಿರ ರೂ. ಹಾಗೂ ಕೇಂದ್ರ ಸರ್ಕಾರದಿಂದ 1 ಲಕ್ಷದ 50 ಸಾವಿರ ರೂ ಸೇರಿ ಒಟ್ಟು 2 ಲಕ್ಷದ 70 ಸಾವಿರ ರೂ. ಮನೆ ನಿರ್ಮಾಣದ ವೆಚ್ಚ ಲಭ್ಯವಿದೆ. ಸಾಮಾನ್ಯ ವರ್ಗಗಳಿಗೆ ಹೆಚ್ಚುವರಿಯಾಗಿ 102 ಗುರಿಗಳನ್ನು ನೀಡಲಾಗಿದೆ.
ಅರ್ಹ ಫಲಾನುಭವಿಗಳು ಸ್ವಂತ ಹೆಸರಿನಲ್ಲಿರುವ ನಿವೇಶನ ಪತ್ರ, ಜಾತಿ ಪ್ರಮಾಣ ಪತ್ರ, 2 ಭಾವಚಿತ್ರ, 87600 ರೂ.ಗಿಂತ ಕಡಿಮೆ ಇರುವ ಆದಾಯ ಪತ್ರ, ಸರ್ಕಾರಿ ಯೋಜನೆಯಲ್ಲಿ ಮನೆ ಕಟ್ಟಲು ಸಹಾಯಧನ ಪಡೆದಿಲ್ಲವೆಂಬ ನೋಟರಿಯಿಂದ ದೃಢೀಕರಿಸಿದ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ವಾಸಸ್ಥಳ ದೃಢೀಕರಣ, ಮನೆ ಕಟ್ಟಲು ಲೈಸೆನ್ಸ್, ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಡಿಸೆಂಬರ್ 29ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಏ ಚಾ.ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ

ಚಾಮರಾಜನಗರ, ನ. 29 (vss):- ಚಾಮರಾಜನಗರ ನಗರಸಭೆಯ ಅಧ್ಯಕ್ಷರಾದ ಶೋಭಾ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 29 November 2017

watch morethan video..... channel/UC3kKZ08aqAF6vjOySJKzZgQ

channel/UC3kKZ08aqAF6vjOySJKzZgQ

ತೋಟಗಾರಿಕೆ ಬೆಳೆಗೆ ಫಸಲ್ ಬಿಮಾ ಯೋಜನೆ,ನವೆಂಬರ್30ರಂದು ನಗರದಲ್ಲಿ ಮಾಹಿತಿ ಆಯುಕ್ತರಿಂದ ಪ್ರಕರಣಗಳ ವಿಚಾರಣೆ (28-11-2017)

   

ನ. 29ರಂದು ನಗರದಲ್ಲಿ ಭಾವೈಕ್ಯತಾ ಮಕ್ಕಳ ಮೇಳ

 ಚಾಮರಾಜನಗರ, ನ.28 - ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಾವು ಭಾರತೀಯರು ಎಂಬ ಒಂದು ದಿನದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು ನವೆಂಬರ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಜಿಲ್ಲಾಧಿಕಾರಿ ಭವನದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ತಾಲೂಕು ದಂಡಾಧಿಕಾರಿಗಳಾದ ಪುರಂದರ ಅವರು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲಕ್ಷ್ಮೀಪತಿ ಅವರು 9.30 ಗಂಟೆಗೆ ಪ್ರಭಾತ್ ಪೇರಿ ನಡೆಸಿಕೊಡುವರು. ಬೆಳಿಗ್ಗೆ 11 ಗಂಟೆಗೆ ಭಾರತ ಸೇವಾದಳದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸುವರು. ಸೇವಾದಳದ ತಾಲ್ಲೂಕು ಅಧ್ಯಕ್ಷರಾದ ಸಿ. ಎಂ ನರಸಿಂಹಮೂರ್ತಿ ಅಧ್ಯಕ್ಷತೆವಹಿಸುವರು. ಹಿರಿಯ ಸಾಹಿತಿಗಳಾದ ಕೆ. ವೆಂಕಟರಾಜು ಮುಖ್ಯ ಭಾಷಣಕಾರರಾಗಿ ಆಗಮಿಸುವರು. ವನ್ಯಜೀವಿ ಸಲಹಾ ಮಂಡಳಿ ಸದಸ್ಯರಾದ ಮಲ್ಲೇಶಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಆರ್. ರಾಚಪ್ಪ, ರೋಟರಿ ಸಂಸ್ಥೆ ಅಧ್ಯಕ್ಷರಾದ ಸುಭಾಷ್ ಮುಖ್ಯ ಅತಿಥಿಗಳಾಗಿ ಪಾಲ್ಗಳ್ಳುವರು. ಮಧ್ಯಾಹ್ನ 3ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ದಿನಬಂಧು ಸಂಸ್ಧೆಯ ಗೌರವ ಕಾರ್ಯದರ್ಶಿಗಳಾದ ಪ್ರೊ. ಜಿ. ಎಸ್. ಜಯದೇವ್ ಸಮಾರೋಪ ಭಾಷಣ ಮಾಡುವರು. ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟನಾಗಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಹದೇವಪ್ಪರವರು ಪ್ರಮಾಣ ಪತ್ರ ವಿತರಿಸುವರು. ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯರಾದ ಆರ್. ನಾಗರಾಜು, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಮಹದೇವಪ್ಪರವರು ಪಾಲ್ಗೊಳ್ಳವರು. ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆ ಕುರಿತು ಪಳನಿಸ್ವಾಮಿ ಜಾಗೇರಿರವರು ಪ್ರಾತ್ಯಕ್ಷಿಕೆ ಮತ್ತು ವಿಶೇಷ ಉಪನ್ಯಾಸ ನೀಡುವರು. ಬಿಗ್‍ಬಾಸ್ ಖ್ಯಾತಿಯ ಸುಮಾ ರಾಜ್ ಕುಮಾರ್ ಅವರಿಂದ ಮಾತನಾಡುವ ಗೊಂಬೆ ಪ್ರದರ್ಶನ, ಖ್ಯಾತ ಜಾದೂ ಕಲಾವಿದರಾದ ಜಗ್ಗೂ ಜಾದೂಗಾರ್‍ರಿಂದ ಜಾದು ಪ್ರದರ್ಶನ, ಸಂಜೆ 4 ಗಂಟೆಗೆ ದೀನ ಬಂಧು ಮಕ್ಕಳಿಂದ ಹಕ್ಕಿ ಹಬ್ಬ ನಾಟಕ ಪ್ರದರ್ಶನ,. ಭಾರತ ಸೇವಾದಳದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
 

ನ. 30ರಂದು ಚಾ.ನಗರಸಭೆ ಸಾಮಾನ್ಯ ಸಭೆ

ಚಾಮರಾಜನಗರ, ನ. 28 ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಶೋಭಾ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       

ನ. 29ರಂದು ವಿದ್ಯುತ್ ವ್ಯತ್ಯಯ

ಚಾಮರಾಜನಗರ ನ. 28 ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮವು ನವೆಂಬರ್ 29ರಂದು ರಾಮಸಮುದ್ರ ವ್ಯಾಪ್ತಿಗೆ ಬರುವ ಹೌಸಿಂಗ್ ಬೋರ್ಡ್ ಕಾಲೋನಿ, ಕೋರ್ಟ್ ರಸ್ತೆ, ಕರಿನಂಜನಪುರ ಭಾಗಗಳಲ್ಲಿ ರಸ್ತೆ ಅಗಲೀಕರಣ ನಿಮಿತ್ತ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ನಿರ್ವಹಿಸಲಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹೌಸಿಂಗ್ ಬೋರ್ಡ್ ಕಾಲೋನಿ, ಕೋರ್ಟ್ ರಸ್ತೆ, ಕರಿನಂಜನಪುರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ  ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 5ರಂದು ವಿಕಲಚೇತನರಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆ : ನೋಂದಣಿಗೆ ಸೂಚನೆ

ಚಾಮರಾಜನಗರ ನ. 28 ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಡಿಸೆಂಬರ್ 5ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಸ್ಪರ್ಧೆ ಮತ್ತು ಸಾಂಸ್ಕøತಿಕ ಸ್ಪರ್ಧೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ 6 ವರ್ಷಕ್ಕಿಂತ ಮೇಲ್ಪಟ್ಟ ದೈಹಿಕ, ಶ್ರವಣ ದೋಷ ಹಾಗೂ ಬುದ್ಧಿಮಾಂದ್ಯ ವಿಕಲಚೇತನರು ಆಯಾ ತಾಲ್ಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ದೂರವಾಣಿ ಸಂಖ್ಯೆ ಸಂಪರ್ಕಿಸಿ ತಮ್ಮ ಹೆಸರÀುಗಳನ್ನು ಅಂಗವಿಕಲತೆ ಮತ್ತು ವಯಸ್ಸಿನೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ವಿಕಲಚೇತನರ ಗುರುತಿನ ಚೀಟಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08226-224688, ರಾಜೇಶ್, ಚಾಮರಾಜನಗರ – ಮೊಬೈಲ್ 9611436675, ಕವಿರತ್ನ, ಕೊಳ್ಳೆಗಾಲ - ಮೊಬೈಲ್ 9729598574, ಮಂಜುಳ, ಗುಂಡ್ಲುಪೇಟೆ – ಮೊಬೈಲ್ 8150978441, ಮಹದೇವಯ್ಯ, ಯಳಂದೂರು – ಮೊಬೈಲ್ 9740164149 ಇವರನ್ನು ಸಂಪರ್ಕಿಸುವಂತೆ ಕಚೇರಿ ಪ್ರಕಟಣೆ ತಿಳಿಸಿದೆ.

   

ಜವಾಹರ ನವೋದಯ ವಿದ್ಯಾಲಯ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ


ಚಾಮರಾಜನಗರ, ನ. 28 - ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯದಲ್ಲಿ 2018-19ನೇ ಸಾಲಿಗೆ 6ನೇ ತರಗತಿ ದಾಖಲಾತಿ ಸಂಬಂಧ 5ನೇ ತರಗತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 2ರವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಹಿಂದೆ ನವೆಂಬರ್ 25ರಂದು ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಅವಧಿ ವಿಸ್ತರಿಸಲಾಗಿದೆ ಎಂದು ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ : ಗ್ರಾಮೀಣ ಕ್ರೀಡೋತ್ಸವ

ಚಾಮರಾಜನಗರ ನ. 28 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೊಳ್ಳೇಗಾಲ ತಾಲೂಕಿನ 3 ಹೋಬಳಿಗಳಲ್ಲಿ ಗ್ರಾಮೀಣ ಕ್ರೀಡೋತ್ಸವವನ್ನು ಡಿಸೆಂಬರ್ 14 ರಿಂದ 18ರವರೆಗೆ ಹಮ್ಮಿಕೊಂಡಿದೆ.
ಕ್ರೀಡೆಗಳು ಆಯಾ ದಿನಾಂಕಗಳಂದು ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭಗೊಳ್ಳಲಿದೆ.
ಡಿಸೆಂಬರ್ 14ರಂದು ಹನೂರು ಹೋಬಳಿಯ ಮಂಗಲದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಹಿಳೆಯರಿಗೆ ಕಬಡ್ಡಿ, ಪುರುಷರಿಗೆ ಖೋಖೋ ಕ್ರೀಡೆ ನಡೆಯಲಿದೆ.
ಡಿಸೆಂಬರ್ 16ರಂದು ಲೊಕ್ಕನಹಳ್ಳಿ ಹೋಬಳಿಯ ಒಡೆಯರಪಾಳ್ಯದ ಶ್ರೀ ಮಹದೇಶ್ವರ ಪದವಿಪೂರ್ವ ಕಾಲೇಜು  ಮೈದಾನದಲ್ಲಿ ಮಹಿಳೆಯರಿಗೆ ಖೋಖೋ,  ಪುರುಷರಿಗೆ ವಾಲಿಬಾಲ್ ಪಂದ್ಯ ನಡೆಯಲಿದೆ.
ಡಿಸೆಂಬರ್ 18ರಂದು ರಾಮಾಪುರದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಹಿಳೆಯರಿಗೆ ಕಬಡ್ಡಿ, ಪುರುಷರಿಗೆ ವಾಲಿಬಾಲ್ ಪಂದ್ಯ ನಡೆಯಲಿದೆ.
ಆಸಕ್ತ ಶಾಲಾ ಕಾಲೇಜು, ಯುವಕ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಮಹಿಳಾ ಸಂಘಗಳು, ಪುರುಷ ಸ್ವಸಹಾಯ ಸಂಘಗಳು ಭಾಗವಹಿಸಬಹುದು.
ಸ್ಪರ್ಧಿಗಳು ಆಧಾರ್ ಕಾರ್ಡ್, ಡಿಎಲ್, ರೇಷನ್ ಕಾರ್ಡ್ ಅಥವಾ ಇತರೆ ದಾಖಲಾತಿಗಳನ್ನು ಕಡ್ಡಾಯವಾಗಿ ತರಬೇಕು. ಆಯಾ ಹೋಬಳಿ ಹೊರತುಪಡಿಸಿ ಬೇರಾವುದೇ ಹೋಬಳಿಯವರು ಭಾಗವಹಿಸುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಘಟಕರ (ದೂ.ಸಂಖ್ಯೆ. 08226-224932, ಮೊಬೈಲ್ 9482718278, 988021027)ನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಕಾರ ಸಂಘ ರದ್ದು : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಚಾಮರಾಜನಗರ ನ. 28 - ಚಾಮರಾಜನಗರ ತಾಲೂಕಿನ ನಾಗವಳ್ಳಿಯ ಸಿದ್ದಪ್ಪಾಜಿ ಮೇದರ ಕುಶಲ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘವು ತನ್ನ ಬೈಲಾ ರೀತ್ಯ ಉದ್ದೇಶಗಳನ್ನು ಈಡೇರಿಸದೆ ಕಾರ್ಯ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘವನ್ನು ರದ್ದುಗೊಳಿಸುವಂತೆ ಸಮಾಪನಾ ಅಧಿಕಾರಿಯನ್ನಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕರನ್ನು ನೇಮಿಸಲಾಗಿದೆ.
ಸಮಾಪನಾಧಿಕಾರಿಯವರು ಸಂಘದ ಸಮಾಪನಾ ಕಾರ್ಯವನ್ನು ಪೂರ್ಣಗೊಳಿಸಿ ಸಮಾಪನಾ ಕಾರ್ಯ ಪ್ರಗತಿ ಸಾಧಿಸಬೇಕಾದ ಹಿನ್ನೆಲೆಯಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಸಂಘದ ಯಾವುದೇ ಸದಸ್ಯರು ಇದುವರೆವಿಗೂ ಆಸಕ್ತಿ ತೋರಿಸದ ಕಾರಣ ಸಂಘದ ನೋಂದಣಿ ರದ್ದತಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸಂಘದ ನೋಂದಣಿ ರದ್ದುಗೊಳಿಸುವ ಸಂಬಂಧ ಸಂಘದ ಸದಸ್ಯರುಗಳಾಗಲಿ, ಸಾರ್ವಜನಿಕರಿಂದಾಗಲಿ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ 15 ದಿನಗಳೊಳಗೆ ಸಮಾಪನಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ. ಸಂಘವನ್ನು ಪುನಶ್ಚೇತನಗೊಳಿಸಲು ಆಸಕ್ತಿ ಇದ್ದಲ್ಲಿ ಲಿಖಿತ ಮನವಿಯನ್ನು ಸಲ್ಲಿಸುವುದು.
ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು, ಅಹವಾಲುಗಳು ಸ್ವೀಕೃತವಾಗದಿದ್ದಲ್ಲಿ ಸಂಘದ ನೋಂದಣಿ ಸಂಖ್ಯೆ ರದ್ದತಿಗೆ ಯಾರಿಂದಲೂ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಹಾಗೂ ಸಂಘದ ಪುನಶ್ಚೇತನಕ್ಕೆ ಯಾವ ಸದಸ್ಯರಿಂದಲೂ ಆಸಕ್ತಿ ಇಲ್ಲವೆಂದು ಪರಿಗಣಿಸಿ ಸಂಘದ ನೋಂದಣಿ ರದ್ದತಿಗೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಹನಿ ನೀರಾವರಿಗೆ ಕಡತ ಸಲ್ಲಿಸಲು ರೈತರಿಗೆ ಮನವಿ

ಚಾಮರಾಜನಗರ ನ. 28 - ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ (ಡ್ರಿಪ್) ಪ್ರಸಕ್ತ ಸಾಲಿಗೆ  ಚಾಮರಾಜನಗರ ಜಿಲ್ಲೆಯಾದ್ಯಂತ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತಬಾಂಧವರಿಗೆ ತೋಟಗಾರಿಕೆ ಇಲಾಖೆಯಿಂದ ಕಾರ್ಯಾದೇಶ ನೀಡಲಾಗಿದೆ.
ಕಾರ್ಯಾದೇಶ ಪಡೆದಿರುವ ರೈತರು ಸರ್ಕಾರದಿಂದ ಅನುಮೋದನೆಯಾಗಿರುವ ಕಂಪನಿ, ಅಧಿಕೃತ ಡೀಲರುಗಳಿಂದ ಐಎಸ್‍ಐ ಗುಣಮಟ್ಟದ ಪರಿಕರಗಳನ್ನು ಅಳವಡಿಸಿಕೊಂಡು ಕೂಡಲೇ ಸಹಾಯಧನಕ್ಕಾಗಿ ಅರ್ಜಿಯನ್ನು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಿದೆ.
ಇಲ್ಲವಾದಲ್ಲಿ ನೀಡಿರುವ ಕಾರ್ಯಾದೇಶ ತನ್ನಿಂತಾನೇ ರದ್ದಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಕೇಂದ್ರೀಯ ನೆರವಿನಡಿ ಪ.ವರ್ಗದ ಆದಿವಾಸಿಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 28 ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ವರ್ಗದ ಆದಿವಾಸಿಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳು ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳ ಸ್ಥಾಪನೆ ಮತ್ತು ಹಣ್ಣು ಮತ್ತು ತರಕಾರಿ ಸಾಗಾಣಿಕೆ ಮಾಡುವ ಸಣ್ಣ ವಾಹನಗಳ ಖರೀದಿಗೆ ಘಟಕ ವೆಚ್ಚದ ಶೇಕಡ 70 ರಷ್ಟು ಗರಿಷ್ಠ 1 ಲಕ್ಷದವರೆಗೆ ಸಹಾಯಧನ ಲಭಿಸಲಿದೆ.
ಕೃಷಿ ಅಭಿವೃದ್ಧಿಗಾಗಿ ಪವರ್ ಟಿಲ್ಲರ್, ಮಿನಿ ಟ್ರಾಕ್ಟರ್, ಹಾರ್ವೆಸ್ಟಿಂಗ್ ಮೆಷಿನ್, ಸಿಡ್ ಡಿಕೋರ್ಟಿಕೇಡರ್ಸ್ ಖರೀದಿ ಮತ್ತು ತೋಟಗಾರಿಕೆ ನರ್ಸರಿ ಸ್ಥಾಪನೆಗೆ ಫಟಕ ವೆಚ್ಚದ ಶೇಕಡ 70 ರಷ್ಟು ಗರಿಷ್ಠ 1 ಲಕ್ಷ ರೂ. ಸಹಾಯ ಧನ ನೀಡಲಾಗುತ್ತದೆ. ಕೋಳಿ ಸಾಕಾಣಿಕೆಗಾಗಿ ಸುಸಜ್ಜಿತ ಕೋಳೆ ಮಾರಾಟ ಮಳಿಗೆ ಸ್ಥಾಪನೆಗೆ ಘಟಕ ವೆಚ್ಚದ ಶೇ. 70ರಷ್ಟು ಗರಿಷ್ಟ 1 ಲಕ್ಷ ರೂ. ಸಹಾಯಧನ ಹಾಗೂ ಕೋಳಿ ಉತ್ಪಾದನ ಘಟಕಗಳ ಅಭಿವೃದ್ಧಿ ಕಾರ್ಯ (ಫೌಲ್ಟ್ರಿ ಫಾರಂ) ಹಾಗೂ ಫಟಕ ವೆಚ್ಚದ ಶೇಕಡ 70ರಷ್ಟು ಗರಿಷ್ಠ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. ಸುಸಜ್ಜಿತ ಮೀನು ಮಾರಾಟ ಮಳಿಗೆ ಸ್ಥಾಪನೆ ಹಾಗೂ ಮೀನು ಸಾಕಾಣಿಕೆಗಾಗಿ ಶೀತಲ ಪೆಟ್ಟಿಗೆ ಅಳವಡಿಸಿಕೊಂಡಿರುವ ದ್ವಿಚಕ್ರ ವಾಹನ ಖರೀದಿಗೆ ಫಟಕ ವೆಚ್ಚದ ಶೇಕಡ 70ರಷ್ಟು ಗರಿಷ್ಠ 1 ಲಕ್ಷ ರೂ. ಸಹಾಯ ಧನ ಲಭಿಸಲಿದೆ. ಶೀತಲ ಘಟಕ ಸ್ಥಾಪನೆ ಹಾಗೂ ಸಣ್ಣ ಹಿಡುವಳಿದಾರಿಗೆ ಹಣ್ಣು ಮತ್ತು ತರಕಾರಿ ಸಂರಕ್ಷಿಡಲು ಶೀತಲ ಪೆಟ್ಟಗೆ ಖರೀದಿಗಾಗಿ ಫಟಕ ವೆಚ್ಚದ ಶೇಕಡ 70ರಷ್ಟು ಗರಿಷ್ಟ 60 ಸಾವಿರ ರೂ.ವರೆಗೆ ಸಹಾಯ ಧನ ನೀಡಲಾಗುವುದು.
     ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದ ಮಲ್ಟಿ ಪರ್ಪಸ್ ಹಾಲ್‍ನಲ್ಲಿರುವ ನಿಗಮದ ಕಚೇರಿಯಲ್ಲಿ ಅಥವಾ ಆಯಾ ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಭೇಟಿ ಮಾಡಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 16ರೊಳಗೆ ಸಲ್ಲಿಸಬೆÉೀಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ದೂ.ಸಂಖ್ಯೆ 08226-223856) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತೋಟಗಾರಿಕೆ ಬೆಳೆಗೆ ಫಸಲ್ ಬಿಮಾ ಯೋಜನೆ

ಚಾಮರಾಜನಗರ ನ. 28 :- ತೋಟಗಾರಿಕೆ ಇಲಾಖೆಯು 2017-18ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಕೆಲ ಹೋಬಳಿಗಳಲ್ಲಿ ಈರುಳ್ಳಿ ಹಾಗೂ ಟೊಮೊಟೋ ಬೆಳೆಯನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಒಳಪಡಿಸಿದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿಯಲ್ಲಿ ನೀರಾವರಿ ಆಶ್ರಿತ ಟೊಮೊಟೋ ಹಾಗೂ ಹರವೆ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ ಬೆಳೆ ವಿಮೆಗೆ ಸೇರಿದೆ.
ಗುಂಡ್ಲುಪೇಟೆ ತಾಲೂಕಿನ ಕಸಬಾ, ತೆರಕಣಾಂಬಿ, ಬೇಗೂರು, ಹಂಗಳ ಹೋಬಳಿ ವ್ಯಾಪ್ತಿಯಲ್ಲಿ  ನೀರಾರಿ ಆಶ್ರಿತ ಈರುಳ್ಳಿ ಮತ್ತು ಟೊಮೊಟೋ ಬೆಳೆ ವಿಮೆಗೆ ಸೇರಿವೆ.
ನಿಗದಿತ ಅರ್ಜಿ ನಮೂನೆ ಬ್ಯಾಂಕಿನಿಂದ ಪಡೆದು ಆರ್‍ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಸ್ವಯಂ ಘೋಷಿತ ಬೆಳೆ ವಿವರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಟೊಮೊಟೋ ಬೆಳೆಗೆ ಪ್ರತಿ ಎಕರೆಗೆ 2328 ರೂ. ಹಾಗೂ ಈರುಳ್ಳಿಗೆ 1498 ರೂ. ವಿಮಾ ಕಂತು ನಿಗದಿಯಾಗಿದೆ. ವಿಮೆ ಪಾವತಿಗೆ ಹಿಂಗಾರು ಹಂಗಾಮಿಗೆ ನವೆಂಬರ್ 30 ಕಡೆಯ ದಿನವಾಗಿದೆ.
ಯೋಜನೆಯು 2017ರ ಅಕ್ಟೋಬರ್ 1ರಿಂದ 31ರವರೆಗೆ ನಾಟಿ ಮಾಡಿದ ರೈತರಿಗೆ ಮಾತ್ರ ಅನ್ವಯವಾಗಲಿದೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್30ರಂದು ನಗರದಲ್ಲಿ ಮಾಹಿತಿ ಆಯುಕ್ತರಿಂದ ಪ್ರಕರಣಗಳ ವಿಚಾರಣೆ


ಚಾಮರಾಜನಗರ ನ. 28 :- ರಾಜ್ಯ ಮಾಹಿತಿ ಆಯುಕ್ತರಾದ ಕೆ.ಎಂ.ಚಂದ್ರೇಗೌಡ ಅವರು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಹಕ್ಕು ಪ್ರಕರಣಗಳ ವಿಚಾರಣೆಯನ್ನು ನವೆಂಬರ್30ರಂದು ಬೆಳಿಗ್ಗೆ11ಗಂಟೆಗೆ ನಗರದ ಜಿಲ್ಲಾ ಆಡಳಿತ ಭವನದಲ್ಲಿರುವ ಕೆ.ಡಿ.ಪಿ.ಸಭಾಂಗಣದಲ್ಲಿ ನಡೆಸುವರು.
ಒಟ್ಟು 65 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಆಯುಕ್ತರು ವಿಚಾರಣೆ ನಡೆಸುವರೆಂದು ಜಿಲ್ಲಾ ಆಡಳಿತ ಪ್ರಕಟಣೆ ತಿಳಿಸಿದೆ.

ನ. 28ರಂದು ಪ.ಜಾ. ನಿರುದ್ಯೋಗಿಗಳಿಗೆ ನಗರದಲ್ಲಿ ವಾಹನ ಚಾಲನಾ ತರಬೇತಿಗೆ ಸಂದರ್ಶನ

ಚಾಮರಾಜನಗರ, ನ. 23 - ಸಮಾಜ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡುವ ಸಂಬಂಧ ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಂದರ್ಶನ ಏರ್ಪಡಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







                                                                                                                                                                                       

















Monday, 27 November 2017

ಕಾನೂನಿನಡಿ ಎಲ್ಲರು ಸಮಾನರು : ನ್ಯಾಯಾಧೀಶರಾದ ಆರ್.ಪಿ ನಂದೀಶ್,ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ. 3ರಷ್ಟು ಅನುದಾನ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ (28-11-2017)

     

ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ. 3ರಷ್ಟು ಅನುದಾನ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ 

ಚಾಮರಾಜನಗರ, ನ. 27 :- ವಿಕಲಚೇತನರಿಗಾಗಿ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟಿರುವ ಶೇ. 3 ರಷ್ಟು ಅನುದಾನದಲ್ಲಿ ಅಗತ್ಯ ಸೌಲಭ್ಯವನ್ನು ತಲುಪಿಸಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ವಿಕಲಚೇತನರ ಜಿಲ್ಲಾಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಕಲಚೇತನರ ಶ್ರೇಯೋಬಿವೃದ್ಧಿಗಾಗಿ ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ ಹಾಗೂ ವಿವಿಧ ಇಲಾಖೆಗಳಲ್ಲಿ ಶೇ. 3ರಷ್ಟು ಅನುದಾನವನ್ನು ಮೀಸಲಿಟ್ಟಿದೆ. ಈ ಅನುದಾನದಲ್ಲಿ ವಿಕಲಚೇತನರಿಗೆ ಅಗತ್ಯವಾಗಿರುವ ಸೌಲಭ್ಯ ಹಾಗೂ ಸವಲತ್ತುಗಳನ್ನು ತಲುಪಿಸಬೇಕು. ಅ ಮೂಲಕ ಅದು ಸಮರ್ಪಕವಾಗಿ ನಿರ್ವಹಣೆಯಾಗಬೇಕು ಎಂದರು.
ಸಾಮಾಜಿಕ ನ್ಯಾಯ ಹಾಗೂ ಸಮನಾವಕಾಶ ಒದಗಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಹಲವಾರು ಕಾರ್ಯಕ್ರನ್ನುಗಳನ್ನು ರೂಪಿಸಿ ಜಾರಿಗೊಳಿಸಿದೆ. ವಿವಿಧ ಇಲಾಖೆಗಳು, ಪಂಚಾಯತ್‍ಗಳು ಯಾವ ಕಾರ್ಯಕ್ರಮ ಅನುಷ್ಠಾನಗೊಳಿಸಿವೆ. ಎಷ್ಟು ಅನುದಾನವನ್ನು ವ್ಯಯಿಸಿವೆ. ಏನೇನು ಸಾಧನ ಸಲಕರಣೆಗಳನ್ನು ಮಂಜೂರು ಮಾಡಿರುವ ಕುರಿತು ಮುಂದಿನ ಸಭೆಗೆ ಮಾಹಿತಿಯನ್ನು ಪೂರ್ವಭಾವಿಯಾಗಿ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಗ್ರಾಮಪಂಚಾಯತ್ ಮಟ್ಟದಲ್ಲಿ ವಿಕಲಚೇತನರನ್ನು ಗುರುತಿಸಬೇಕು. ವಿಕಲಚೇತನರನ್ನು ಗುರುತಿಸಲು ಗ್ರಾಮಿಣ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕುಮಟ್ಟದಲ್ಲಿ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ನಿಯೋಜಿಸಬೇಕು. ಈ ಕಾರ್ಯಕರ್ತರು ವಿಕಲಚೇತನರೆ ಅಗಿರಬೇಕು. ಅಂತಹವನ್ನು ಗೌರವ ಸಂಭಾವನೆ ನೀಡಿ ಡಿಸೆಂಬರ್ 30ರೊಳಗೆ ನೇಮಕ ಮಾಡಿಕೊಳ್ಳುವಂತೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯ ಗ್ರಾಮಪಂಚಾಯತ್‍ಗಳ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಅನುಷ್ಠಾನವಾಗಿರುವ ಕಾರ್ಯಕ್ರಮಗಳ ಸವಿವರ ಮಾಹಿತಿಯನ್ನು ಹಾಗೂ ಎಲ್ಲ ಗ್ರಾಮಪಂಚಾಯತ್‍ಗಳ ಪಾಸ್‍ಪುಸ್ತಕದ ಪ್ರತಿ ಜಿಲ್ಲಾಧಿಕಾರಿ ಕಚೇರಿಗೆ ಡಿಸೆಂಬರ್-18ರೊಳಗೆ ಸಲ್ಲಿಕೆಯಾಗಬೇಕು. ಎಂದ ಜಿಲ್ಲಾಧಿಕಾರಿ ರಾಮು ಅವರು ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರು ಪ್ರವೇಶಿಸಲು ಅನುಕೂಲವಾಗುವಂತೆ ಅಗತ್ಯ ರ್ಯಾಂಪ್ ವ್ಯವಸ್ಥೆ ಕಲ್ಪಿಸಿರಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರಿಗಾಗಿ ಶೌಚಾಲಯವಿರಬೇಕು ಎಂದು ತಿಳಿಸಿದರು.
ಅನುದಾನವನ್ನು ದುರ್ಬಳಕೆ ಮಡಿಕೊಂಡಿರುವ ಕೆಲವು ಸ್ವಯಂಸೇವಾ ಸಂಸ್ಥೆಗಳ ಕುರಿತು ಪ್ರಸ್ತಾಪಿಸಿದ ವಿಕಲಚೇತನರ ಮುಖಂಡರಿಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಅಂತಹ ಪ್ರಕರಣಗಳು ದಾಖಲೆ ಸಮೇತ ದೊರೆತರೆ ಅಗತ್ಯ ಕ್ರಮ ಜರುಗಿಸುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೊಡ್ಡಪ್ಪ ಮೂಲಿಮನಿ, ಜಿಲ್ಲಾ ಸರ್ಜನ್ ರಘುರಾಮ್, ಜಿಲ್ಲಾ ಉದ್ಯೋಗಾಧಿಕಾರಿ ಉಮಾ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾ.ಪಂ., ಗ್ರಾ. ಪಂ. ಉಪಚುನಾವಣೆ : ಅಧಿಸೂಚನೆ ಪ್ರಕಟ

ಚಾಮರಾಜನಗರ ನ. 27 - ಜಿಲ್ಲೆಯ ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಜಿಲ್ಲಾಧಿಕಾರಿ ಬಿ. ರಾಮು ಅವರು ಇಂದು ಅಧಿಸೂಚನೆ ಹÉೂರಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ನವೆಂಬರ್ 30 ಅಂತಿಮ ದಿನ. ಡಿಸೆಂಬರ್ 1ರಂದು ನಾಮಪತ್ರಗಳ ಪರೀಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿಸೆಂಬರ್ 4 ಕಡೆಯ ದಿನ. ಮತದಾನ  (ಅವಶ್ಯವಿದ್ದರೆ) ಡಿಸೆಂಬರ್ 17ರಂದು ಬೆಳ್ಳಿಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ (ಅವಶ್ಯವಿದ್ದರೆ) ಡಿಸೆಂಬರ್ 19ರಂದು ನಡೆಯಲಿದೆ. ಮತಗಳ ಎಣಿಕೆ ಕಾರ್ಯ ಡಿಸೆಂಬರ್ 20ರಂದು ಬೆಳಿಗ್ಗೆ 8 ಗಂಟೆಗೆ ತಾಲ್ಲೂಕು ಕೇಂದ್ರದಲ್ಲಿ ಆರಂಭವಾಗಲಿದೆ. ಅದೇ ದಿನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚಾಮರಾಜನಗರ ತಾಲ್ಲೂಕು ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರದ (ಸಾಮಾನ್ಯ) ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ ಗ್ರಾಮ ಪಂಚಾಯಿತಿ ಬೇಡರಪುರ  (ಸಾಮಾನ್ಯ), ಸಂತೇಮರಹಳ್ಳಿ  (ಅನುಸೂಚಿತ ಜಾತಿ - ಮಹಿಳೆ), ಅಮಚವಾಡಿ (ಹಿಂದುಳಿದ ಅ ವರ್ಗ), ಹೊನ್ನಹಳ್ಳಿ ಗ್ರಾಮ ಪಂಚಾಯಿತಿಯ ವಡ್ಗಲ್‍ಪುರ (ಹಿಂದುಳಿದ ಅ ವÀರ್ಗ) ಕ್ಷೇತ್ರಗಳ ತಲಾ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಕೊಳ್ಳೆಗಾಲ ತಾಲ್ಲೂಕಿನ ಗೋಪಿನಾಥಂ (ಸಾಮಾನ್ಯ), ಗುಂಡ್ಲುಪೇಟೆ ತಾಲ್ಲೂಕಿನ  ಬಲಚವಾಡಿ ಗ್ರಾಮ ಪಂಚಾಯಿತಿಯ ಗುರುವಿನಪುರ (ಸಾಮಾನ್ಯ), ತೆರಕಣಾಂಬಿ (ಅನುಸೂಚಿತ ಪಂಗಡ), ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕುರುಬರಹುಂಡಿ (ಸಾಮಾನ್ಯ - ಮಹಿಳೆ) ಕ್ಷೇತ್ರಗಳ ತಲಾ ಒಂದೊಂದು ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದ್ದು  ಒಟ್ಟು 8 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 27 - ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಎಸಿಸಿಪಿಎಲ್ ಸಂಸ್ಥೆ ಮೂಲಕ ವಿವಿಧ ತರಬೇತಿಯನ್ನು ಅಲ್ಪಸಂಖ್ಯಾತ ಯುವಜನರಿಗೆ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. 18 ರಿಂದ 40ರ ವಯೋಮಿತಿಯೊಳಗಿರಬೇಕು. ಅರ್ಜಿಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಲ್ಟಿಪರ್ಪಸ್ ಹಾಲ್‍ನ 1ನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಿಂದ ಪಡೆದು ಭರ್ತಿ ಮಾಡಿ ನವೆಂಬರ್ 30ರೊಳಗೆ ಸಲ್ಲಿಸಬೇಕು.
ವಿವರಗಳಿಗೆ ಸದರಿ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
         
     

ಕಾನೂನಿನಡಿ ಎಲ್ಲರು ಸಮಾನರು : ನ್ಯಾಯಾಧೀಶರಾದ ಆರ್.ಪಿ ನಂದೀಶ್


ಚಾಮರಾಜನಗರ, ನ. 27 - ಸರ್ವರನ್ನು ಸರಿಸಮಾನವಾಗಿ ಕಾಣುವ ಸಮಾನತೆ ತತ್ವವನ್ನು ಪ್ರತಿಪಾದಿಸುವ  ಸಂವಿಧಾನ ನಮ್ಮದಾಗಿದ್ದು, ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೆÉ ಕಾನೂನಿನಡಿ ಎಲ್ಲರು ಸಮಾನರು ಎಂಬುದನ್ನು ದೇಶದ ಕಾನೂನು ವ್ಯವಸ್ಥೆಯು ಒಳಗೊಂಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಕಾರ್ಯದರ್ಶಿ ಆರ್.ಪಿ. ನಂದೀಶ್ ಅವರು ತಿಳಿಸಿದರು.
    ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಇಂದು  ನೆಹರು ಯುವಕೇಂದ್ರ, ಜಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿವಸ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಮಾತನಾಡಿದರು.
ದೇಶದಲ್ಲಿ ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಂವಿಧಾನದಲ್ಲಿರುವ ಕಾನೂನುಗಳ ಬಗ್ಗೆ ಹೆಚ್ಚು ಓದಿಕೊಳ್ಳಬೇಕು, ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕು. ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಯು ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕು,ನ್ಯಾಯಾಲಯಗಳಲ್ಲಿ  ಪ್ರಶ್ನಿಸುವ ಅವಕಾಶವನ್ನು ನಮ್ಮ ಸಂವಿಧಾನವು ನೀಡಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್  ಮಾತನಾಡಿ ಬಾಬ ಸಾಹೇಬರಿಗೆ ಬಾಲ್ಯದಲ್ಲಾದಂತಹ ಅಪಮಾನ ಹಾಗೂ ನೋವುಗಳಿಂದ ಮುಕ್ತಿಯನ್ನು ಪಡೆಯಬೇಕು ಎಂಬ ದೃಡನಿರ್ಧಾರ ಕೈಗೊಂಡರು. ಸಾಹುಮಹಾರಾಜರ ನೆರವಿನಿಂದ  ಹೊರ ದೇಶಗಳಲ್ಲಿ ವ್ಯಾಸಂಗ ಮಾಡಿ ಮಹಾನ್ ಪಾಂಡಿತ್ಯವನ್ನು ಪಡೆದು ವಿಶ್ವ ಶ್ರೇಷ್ಠ ಸಂವಿಧಾನವನ್ನು ರಚಿಸಿದರು.
ಅಂಬೇಡ್ಕರ್ ಅವರಂತೆಯೆ ಜ್ಞಾನವಂತರಾಗಿ ಉನ್ನತ ಸ್ಥಾನ ಗಳಿಸಿಕೊಂಡು ಸಾರ್ಥಕ ಜೀವನ ನಡೆಸುವ ಕಡೆ ಗಮನ ಹರಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಸಾಮರಸ್ಯ, ಸಹಬಾಳ್ವೆಯ ತತ್ವಗಳಿಗೆ ಬದ್ದರಾಗಿ  ಸಮಾನತೆಯಿಂದ ಜೀವನ ನಡೆಸಿದರೆ ಅಂಬೇಡ್ಕರ್ ಕಂಡ ಕನಸ್ಸು ನನಸಾಗುತ್ತದೆ ಎಂದು ಇಂದು ಶೇಖರ್  ಹೇಳಿದರು.
ಕಾಲೇಜು ಪ್ರಾಂಶುಪಾಲ(ಪ್ರಭಾರ )ಡಿ.ಸಿ.ಲಿಂಗರಾಜು, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಆರ್ ಅರುಣ್ ಕುಮಾರ್, ಬಾಲನ್ಯಾಯ ಮಂಡಳಿ ಸದಸ್ಯರಾದ ಟಿ.ಜೆ ಸುರೇಶ್, ನೆಹರು ಯುವ ಕೇಂದ್ರದ ಶಂಕರ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕರಾದ ರೂಪ.ಎನ್, ದಾಕ್ಷಾಯಿಣಿ, ಎನ್ ಪ್ರಭಾವತಿ, ಗೋವಿಂದರಾಜು, ರಾಜೇಶ್, ಪ್ರÀ್ರದೀಪ್, ಸೌಭಾಗ್ಯ, ಮಂಜಪ್ಪ ಉಮಾಮಹೇಶ್ವರಿ ಇನ್ನಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.




 
 


 



















ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಗತ್ಯ ಮೂಲಸೌಲಭ್ಯ: , ತಾ.ಪಂ.ಗ್ರಾ.ಪಂ. ಉಪಚುನಾವಣೆ : ವೇಳಾ ಪಟ್ಟಿ ಪ್ರಕಟ (26-11-2017)

      ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಗತ್ಯ ಮೂಲಸೌಲಭ್ಯ: 

ಡಾ. ಎಂ.ಸಿ. ಮೋಹನಕುಮಾರಿ ಚಾಮರಾಜನಗರ, ನ. 26 :- ಜಿಲ್ಲೆಯ ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸದ್ಯದಲ್ಲೆ ಆ ಗ್ರಾಮಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲಾಗುವುದು ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ(ಡಿ.ಎಂ.ಎಫ್) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರ್ದಿಷ್ಟ ಹಾಗೂ ನಿರ್ದಿಷ್ಟವಲ್ಲದ ಉಪಖನಿಜದ ಮೇಲೆ ರಾಜಧನದ ಶೇ. 30ರಷ್ಟು ಮೊತ್ತವನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ಗಣಿ ಗುತ್ತಿಗರದಾರರು ಪಾವತಿಸಬೇಕೆಂದು ವಿಶೇಷ ರಾಜ್ಯಪತ್ರಿಕೆಯಲ್ಲಿ ಸರ್ಕಾರ ಆದೇಶಿಸಿತ್ತು. ಅದರನ್ವಯ ಚಾಮರಾಜನಗರ ತಾಲೂಕಿನ 56, ಗುಂಡ್ಲುಪೇಟೆ ತಾಲೂಕಿನ 2 ಹಾಗೂ ಯಳಂದೂರು ತಾಲೂಕಿನ 6 ನಿರ್ದಿಷ್ಟ ಉಪಖನಿಜ ಗಣಿ ಗುತ್ತಿಗೆಗಳಿಂದ ಮತ್ತು ಚಾ.ನಗರ ತಾಲೂಕಿನ 9, ಗುಂಡ್ಲುಪೇಟೆ ತಾಲೂಕಿನ 14 ನಿರ್ದಿಷ್ಟವಲ್ಲದ ಉಪಖನಿಜ ಗಣಿ ಗುತ್ತಿಗೆಗಳಿಂದ 5 ಕೋಟಿ 93 ಲಕ್ಷ ರೂ. ಗಳನ್ನು ಸಂಗ್ರಹಿಸಲಾಗಿದೆ ಎಂದರು. ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತÀವನ್ನು ಅವಶ್ಯ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಅನುದಾನ ಹಂಚಿಕೆ ಮಾಡಲಾಗುವುದು. ನಿಧಿ ಮೊತ್ತದ ಶೇ. 80ರಷ್ಟು ಹಣವನ್ನು ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಅಗತ್ಯವಾ ಕುಡಿಯುವ ನೀರು, ಪರಿಸರ ನಿರ್ವಹಣೆ, ಶಿಕ್ಷಣ, ಆರೋಗ್ಯ, ವಿಕಲಚೇತನರ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಸ್ವಚ್ಚತೆ ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ತಲುಪಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿ ಚಾಮರಾಜನಗರ ತಾಲೂಕಿನ 11, ಗುಂಡ್ಲುಪೇಟೆ ತಾಲೂಕಿನ 6, ಯಳಂದೂರು ತಾಲೂಕಿನ 2 ಮತ್ತು ಕೊಳ್ಳೇಗಾಲ ತಾಲೂಕಿನ 3 ಗ್ರಾಮಗಳನ್ನು ಗಣಿ ಬಾಧಿತ ಪದೇಶÀಗಳೆಂದು ಗುರುತಿಸಲಾಗಿದ್ದು, ಈ ಗ್ರಾಮಗಳಿಗೆ ಶಾಲೆಗಳ ಕೊಠಡಿ ಹಾಗೂ ಕಾಂಪೌಂಡ್ ನಿರ್ಮಾಣ, ಶೌಚಾಲಯ, ಬಯೋಗಾರ್ಡನ್, ಆಟದ ಮೈದಾನ, ಸ್ಮಾರ್ಟ್ ಕ್ಲಾಸ್ ರೂಂ, ಕುಡಿಯುವ ನೀರಿನ ಘಟಕಗಳು, ಸೋಲರ್ ಸಿಸ್ಟಮ್, ಅಸ್ಪತ್ರೆಗಳಿಗೆ ಅಗತ್ಯ ಉಪಕರಣ ಮತ್ತು ಸಲಕರಣೆಗಳು ಮತ್ತು ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಜಿಲ್ಲಾ ಗಣಿ ಇಲಾಖೆ ಉಪನಿರ್ದೇಶಕರಾದ ಎ. ಕುಲಕರ್ಣಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 ಅರಣ್ಯ ಹಕ್ಕುಪತ್ರ ವಿತರಣೆಯಲ್ಲಿ ಇಲಾಖೆಗಳ ಸಮನ್ವಯತೆಗೆ ಉಸ್ತುವಾರಿ ಸಚಿವರ ಸೂಚನೆ

ಚಾಮರಾಜನಗರ, ನ. 26 - ಅರಣ್ಯವಾಸಿಗಳಿಗೆ ಅಗತ್ಯವಾದ ಹಕ್ಕುಪತ್ರ ವಿತರಿಸಲು ಸಂಬಂಧÀಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಸೂಚನೆ ನೀಡಿದರು. ನಗರದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅರಣ್ಯ ಹಕ್ಕು ಪತ್ರ ವಿತರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅರಣ್ಯವಾಸಿಗಳು ಹಾಗೂ ಬುಡಕಟ್ಟ ಜನಾಂಗ ಹಿಂದಿನಿಂದಲೂ ಅರಣ್ಯದಲ್ಲಿಯೆ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅರಣ್ಯದಲ್ಲಿ ವಾಸಿಸುವುದು ಅವರ ಹಕ್ಕು. ಅವರಿಗೆ ಹಕ್ಕುಪತ್ರ ವಿತರಿಸುವಲ್ಲಿ ವಿಳಂಬ ಮಾಡುವುದು ತರವಲ್ಲ. ಅರಣ್ಯವಾಸಿಗಳಿಗೆ ಸಮುದಾಯ ಹಾಗೂ ವ್ಯಯಕ್ತಿಕ ಹಕ್ಕುಪತ್ರಗಳನ್ನು ಯಾವುದೇ ಸಬೂಬು ಹೇಳದೆ ನಿಗಧಿತ ಅವಧಿಯೊಳಗೆ ವಿತರಣೆ ಮಾಡುವಂತೆ ಸಂಬಂಧಪಟ್ಟ ಅದಿಕಾರಿಗಳಿಗೆ ತಾಕೀತು ಮಾಡಿದರು. ಹಕ್ಕುಪತ್ರ ಪಡೆಯಲು ಜಿಲ್ಲೆಯಲ್ಲಿ ಒಟ್ಟು 2171 ವೈಯಕ್ತಿಯ ಅರ್ಜಿಗಳು ಸ್ವೀಕೃತವಾಗಿವೆ. ಅವುಗಳಲ್ಲಿ 1952 ಹಕ್ಕುಪತ್ರಗಳನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾನ್ಯ ಮಾಡಲಾಗಿದೆ. 3269.15 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಚಾಮರಾಜನಗರ ಹಾಗೂ ಯಳಂದೂರು ತಾಲೂಕುಗಳ ಒಟ್ಟು 25 ಬುಡಕಟ್ಟು ಜನರಿಗೆ ಸಮುದಾಯ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 57 ಅರ್ಜಿಗಳು ಬಾಕಿ ಇವೆ ಎಂದರು. ಕೆಲವು ವೈಯಕ್ತಿಕ ಹಾಗೂ ಸಮುದಾಯ ಅರಣ್ಯ ಹಕ್ಕುಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಅನುಮೋದನೆಯಾಗಿ ಅರಣ್ಯಾಧಿಕಾರಿಗಳ ಸಹಿಗಾಗಿ ಕಳುಹಿಸಿಕೊಡಲಾಗಿದೆ. ಅವು ಸೇರಿದಂತೆ ಉಪವಿಭಾಗಮಟ್ಟದಲ್ಲಿ ಬಾಕಿ ಇರುವ ಅರಣ್ಯ ಹಕ್ಕುಪತ್ರಗಳನ್ನು ಶೀಘÀ್ರದಲ್ಲಿ ವಿಲೇವಾರಿ ಮಾಡಿ ಹಕ್ಕುಪತ್ರ ವಿತರಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮಾತನಾಡಿ ಅರಣ್ಯ ಹಕ್ಕುಪತ್ರ ವಿತರಣೆಯನ್ನು ಕಂದಾಯ, ಅರಣ್ಯ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆಗಳು ಒಟ್ಟಿಗೆ ಸೇರಿ ಚರ್ಚಿಸಿ ಯಾವುದೇ ಲೋಪ ಬಾರದಂತೆ ವಿತರಿಸಬೇಕು. ಡಿಸೆಂಬರ್ 5 ರೊಳಗೆ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಡಿ. 20ರಂದು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಹಕ್ಕುಪತ್ರ ವಿತರಣಾ ಸಮಾರಂಭ ಹಮ್ಮಿಕೊಳ್ಳಲು ಸಲಹೆ ಮಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಬಿ. ರಾಮು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನಂ, ಮಲೆ ಮಹದೇಶ್ವರ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಮಾಲತಿಪ್ರಿಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಬುಡಕಟ್ಟು ಜನಾಂಗದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾ.ಪಂ.ಗ್ರಾ.ಪಂ. ಉಪಚುನಾವಣೆ : ವೇಳಾ ಪಟ್ಟಿ ಪ್ರಕಟ


ಚಾಮರಾಜನಗರ ನ.26 - ಜಿಲ್ಲೆಯ ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಸಿದೆ.
ಚಾಮರಾಜನಗರ ತಾಲ್ಲೂಕು ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರದ (ಸಾಮಾನ್ಯ) ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ ಗ್ರಮ ಪಂಚಾಯಿತಿ ಬೇಡರಪುರ ಕ್ಷೇತ್ರ(ಸಾಮಾನ್ಯ)ಸಂತೇಮರಹಳ್ಳಿ (ಅನುಸೂಚಿತ ಜಾತಿ ಮಹಿಳೆ) ಅಮಚವಾಡಿ (ಹಿಂದುಳಿದ ‘ಅ’ವರ್ಗ) ಹೊನ್ನಹಳ್ಳಿ ಗ್ರಾಮ ಪಂಚಾಯಿತಿಯ ವಡ್ಗಲ್‍ಪುರ (ಹಿಂದುಳಿದ ‘ಅ’ವರ್ಗ) ಕೊಳ್ಳೆಗಾಲ ತಾಲ್ಲೂಕಿನ ಗೋಪಿನಾಥಂ (ಸಾಮಾನ್ಯ) ಗುಂಡ್ಲುಪೇಟೆ ತಾಲ್ಲೂಕಿನ  ಬಲಚಾವಾಡಿ ಗ್ರಾಮ ಪಂಚಾಯಿತಿಯ ಗುರುವಿನಪುರ (ಸಾಮಾನ್ಯ) ತೆರಕಣಾಂಬಿ(ಅನುಸೂಚಿತ ಪಂಗಡ) ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕುರುಬರ ಹುಂಡಿ (ಸಾಮಾನ್ಯಮಹಿಳೆ)ಯ ತಲಾ ಒಂದು ಸ್ಥಾನಕ್ಕೆ ಸೇರಿದಂತೆ ಒಟ್ಟು 8 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಿಗದಿ ಮಾಡಲಾಗಿದೆ.
ನವೆಂಬರ್ 27ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ನವೆಂಬರ್ 30ಕಡೆಯದಿನ. ಡಿಸಂಬರ್1ರಂದು ನಾಮಪತ್ರಗಳ ಪರೀಶೀಲನ ಕಾರ್ಯನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ನವೆಂಬರ್4 ಕಡೆಯದಿನವಾಗಿದೆ. ಡಿಸೆಂಬರ್ 17ರಂದು ಬೆಳ್ಳಿಗೆ 7ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಸಲು (ಅವಶ್ಯವಿದ್ದರೆ) ದಿನಾಂಕ ನಿಗದಿಯಾಗಿದೆ. ಮರು ಮತದಾನವು (ಅವಶ್ಯವಿದ್ದರೆ) ಡಿಸೆಂಬರ್ 19ರಂದು ನಡೆಸಲಾಗುತ್ತದೆ. ಮತಗಳ ಎಣಿಕೆ ಕಾರ್ಯವು ಡಿಸೆಂಬರ್ 20ರಂದು ಬೆಳಿಗ್ಗೆ 8 ಗಂಟೆಗೆ ಆಯಾ ತಾಲ್ಲೂಕು ಕೇಂದ್ರದಲ್ಲಿ ಆರಂಭವಾಗಲಿದೆ. ಡಿಸೆಂಬರ್ 20ರಂದೇ ಚುನಾವಣಾ ಪ್ರಕ್ರಿಯ ಪೂರ್ಣಗೂಳ್ಳಲಿದೆ.
ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ಗ್ರಾಮ  ಪಂಚಾಯಿತಿ ಕಚೇರಿಯಲ್ಲಿ ನಾಮ ಪತ್ರಗಳನ್ನು ಸ್ವೀಕರಿಸಲಾಗುತ್ತದೆ.  ನಾಮ ಪತ್ರ ಸಲ್ಲಿಸಲು ಕೊನೆಯ ದಿನಾಂಕವು ಅಧಿಸೂಚನೆ ಪ್ರಕಟಣೆಯ ದಿನಾಂಕ ತರುವಾಯ ಬರುವ ಮೂರನೆಯ ದಿನವಾಗಿರುತ್ತದೆ.
ಚುನಾವಣೆ ನೀತಿ ಸಂಹಿತೆಯು ಚುನಾವಣೆ ನಡೆಯುವ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 27ರಿಂದ ಡಿಸೆÀಂಬರ್ 20ರವರೆಗೆ ಜಾರಿಯಲ್ಲಿರುತ್ತದೆ ಪ್ರಕಟಣೆ ತಿಳಿಸಿದೆ.


ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ (25-11-2017)



ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ
ಚಾಮರಾಜನಗರ, ನ. 25 - ಚಾಮರಾಜನಗರ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಚಿವರಾದ ಡಾ. ಎಂ.ಸಿ ಮೋಹನ ಕುಮಾರಿ ಉರುಫ್ ಗೀತಾಮಹದೇವಪ್ರಸಾದ್ ಅವರು ಆಯ್ಕೆಯಾಗಿದ್ದಾರೆ.

ನಗರದ ನೂತನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಚಾಮರಾಜನಗರ ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಮೊದಲು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.  ರಾಮಚಂದ್ರ ಅವರು ಡಾ, ಎಂ.ಸಿ ಮೋಹನ ಕುಮಾರಿ ಉರುಫ್ ಗೀತಾ, ಮಾನ್ಯ ಸಕ್ಕರೆ, ಸಣ್ಣ ಕೈಗಾರಿಕೆ ಇಲಾಖೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸುವ ಮೂಲಕ ಆಯ್ಕೆ ಮಾಡುವಂತೆ ಕೋರಿದರು.
ಯೋಜನಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಇವರು ನಿಯಮಾನುಸಾರ ಪತ್ರವನ್ನು ನೀಡಿದವರ ಹೆಸರನ್ನು ಮತ್ತು ಸ್ವೀಕರಿಸಿದ ದಿನಾಂಕ ಮತ್ತು ವೇಳೆಯನ್ನು ಮಾನ್ಯ ಸಮಿತಿ ಸದಸ್ಯರ ಗಮನಕ್ಕೆ ತಂದು ನಂತರ ನಾಮ ಪತ್ರವನ್ನು ಹಿಂಪಡೆಯಲು ಒಂದು ನಿಮಿಷಗಳ ಕಾಲಾವಕಾಶ ನೀಡಿದರು.
ತದನಂತರ ನಾಮ ಪತ್ರವನ್ನು ವಾಪಸ್ಸು ಪಡೆಯದ ಕಾರಣ ಅಂತಿಮವಾಗಿ ಡಾ|| ಎಂ.ಸಿ ಮೋಹನ ಕುಮಾರಿ ಉ|| ಗೀತಾ, ಮಾನ್ಯ ಸಕ್ಕರೆ, ಸಣ್ಣ ಕೈಗಾರಿಕೆ ಇಲಾಖೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿಕೊಂಡ ನಂತರ ಮಾತನಾಡಿದ ಮಾನ್ಯ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರು ಜಿಲ್ಲೆಯ ಅಭಿವೃಧ್ಧಿ ಬಗ್ಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಪ್ರಮುಖವಾಗಿದ್ದು, ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಮೂಲಕ ಕೈಗೊಳ್ಳಲು ಅನುಕೂಲಕರವಾಗಿದೆ ಎಂದು ತಿಳಿಸಿದರು.
ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡುತ್ತಾ ಸಭೆಯಲ್ಲಿ ಚರ್ಚಿಸಬಹುದಾದ ಎಲ್ಲಾ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ ಬೊಮ್ಮಯ್ಯ ಇವರು ವಹಿಸಿಕೊಂಡಿದ್ದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಎಂ ಮಾದೇಶು ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
     

ನೇರ ಫೋನ್-ಇನ್ ಕಾರ್ಯಕ್ರಮ: 40 ದೂರುಗಳು ದಾಖಲು

ಚಾಮರಾಜನಗರ, ನ. 25 - ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸಾರ್ವಜನಿಕ ಕುಂದುಕೊರತೆ ಆಲಿಸುವ ನೇರ ಫೋನ್-ಇನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮೂಲೆಮೂಲೆಗಳಿಂದ ದೂರವಾಣಿ ಕರೆ ಮಾಡಿದ ಸಾರ್ವಜನಿಕರಿಂದ ತಮ್ಮ ದೂರುಗಳು ದಾಖಲಾದವು.
ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎಚ್. ಹರೀಶ್‍ಕುಮಾರ್, ಹೆಚ್ಚುವರಿ ಪೊಲೀಸ್ ಅಧಿಕಾರಿ ಗೀತಾಪ್ರಸನ್ನ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಸಮ್ಮುಖದಲ್ಲಿ 40ಕ್ಕೂ ಹೆಚ್ಚು ದೂರುಗಳನ್ನು ಆಲಿಸಿದ ಅಧಿಕಾರಿಗಳು ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾದರು.
ಚಾಮರಾಜನಗರ ಪಟ್ಟಣದಲ್ಲಿ ಆಟೋಗಳು ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಒಂದೇ ಅಟೋದಲ್ಲಿ ಕರೆದೊಯ್ಯುತ್ತಿದ್ದು, ಇದರಿಂದ ಜನರಿಗೆ ಹಿಂಸೆಯಾಗುತ್ತಿದೆ. ಅಲ್ಲದೆ ಸೋಮವಾರಪೇಟೆ ಬಳಿ ರಾತ್ರಿ ವೇಳೆ ವಾಹನಗಳಧಿಕ ವೇಗದಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರುದಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಡಿ.ವೈ.ಎಸ್.ಪಿ. ಅವರು ಪರಿಹರಿಸುವ ಭsರವÀಸೆ ನೀಡಿದರು.
ತರಕಣಾಂಬಿಯಿಂದ ಕರೆ ಮಾಡಿದ ಮನೋಜ್ ಎಂ.ಎಸ್.ಐ.ಎಲ್ ಗಳಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿ ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ ಗಮನ ಸೆಳೆದರು. ಇದನ್ನು ಪರಿಹರಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.
ನಗರದ ದೇವಾಂಗ ಬೀದಿಯಿಂದ ಕರೆ ಮಾಡಿದ ರಮೇಶ್ ಅವರು ಕರೆ ಮಾಡಿ ಪಟ್ಟಣದೊಳಗಡೆ ಹೆಚ್ಚಿನ ಮಾಂಸದಂಗಡಿಗಳಿಗೆ ಪರವಾನಗಿ ನೀಡಬಾರದು ಎಂದು ಮನವಿ ಮಾಡಿದರು. ಇದನ್ನು ಪರಿಹರಿಸುವ ಭರವಸೆ ನೀಡಿದರು.
ಇಂದಿನ ನೇರ ಫೊನ್-ಇನ್ ಕಾರ್ಯಕ್ರಮದಲ್ಲಿ ದಾಖಲಾದ ದೂರುಗಳು ಕುಡಿಯುವ ನೀರು, ಅಬಕಾರಿ, ಸ್ವಚ್ಚತೆ, ಬಸ್ ವ್ಯವಸ್ಥೆ ಕುರಿತು ಹೆಚ್ಚಾಗಿ ಕಂಡುಬಂದವು.

ನವೆಂಬರ್ 27ರಂದು ಜಿಲ್ಲಾಮಟ್ಟದ ವಿಕಲಚೇತನರ ಕುಂದುಕೊರತೆ ಸಭೆ

ಚಾಮರಾಜನಗರ, ನ. 25 - ಜಿಲ್ಲಾಮಟ್ಟದ ವಿಕಲಚೇತನರ ಕುಂದುಕೊರತೆ ಸಭೆ ನವೆಂಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ಎಲ್ಲಾ ವಿಕಲಚೇತನರು ಅಂದಿನ ಸಭೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ

ನವೆಂಬರ್ 25ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿರುವ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆÀಯಲ್ಲಿ ಭಾಗವಹಿಸುವರು. 12 ಗಂಟೆಗೆ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವರು.
ನವೆಂಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಮದ್ದಯ್ಯನಹುಂಡಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಬಸವಭವನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮಡಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಿದ್ದಾರೆ. 3 ಗಂಟೆಗೆ ಮೂಖಹಳ್ಳಿ ಗ್ರಾಮದಲ್ಲಿ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   

ನಗರದ ರಸ್ತೆ ಕಾಮಗಾರಿ: ಉಸ್ತುವಾರಿ ಸಚಿವರಿಂದ ಸ್ಥಳ ಪರಿಶೀಲನೆÉ

ಚಾಮರಾಜನಗರ, ನ. 25 - ಚಾಮರಾಜನಗರ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಇಂದು ಸ್ಥಳ ಪರಿಶೀಲನೆ ಮಾಡಿದರು.
ನಂತರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ ಅಧಿಕಾರಿ ಮತ್ತು ರಸ್ತೆ ಕಾಮಗಾರಿ ನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು ಚಾಮರಾಜನಗರ ಜಿಲ್ಲಾಕೇಂದ್ರದ ಸಮಗ್ರ ಅಭಿವೃದ್ಧಿಗಾಗಿ ಅಗತ್ಯ ಮೂಲಸೌಕರ್ಯ ಒದಗಿಸುವ ದೃಷ್ಠಿಯಿಂದ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ನಗರದಲ್ಲಿ ನಿರ್ಮಾಣವಾಗುತ್ತಿರುವ ಡಿವಿಯೇಷನ್ ರಸ್ತೆ, ಜೋಡಿರಸ್ತೆ, ಕೋರ್ಟ್ ರಸ್ತೆ ಹಾಗೂ ಇತರೆ ರಸ್ತೆಗಳು ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ಕಾಮಗಾರಿಗಿಂತ ಮೊದಲು ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲದೆ, ನಿಗದಿತ ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳು ಮುಗಿಸುವಂತೆ ಸೂಚನೆ ನೀಡಿದರು.
ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಸಣ್ಣಪುಟ್ಟ ಲೋಪದೋಷಗಳಾಗದಂತೆ ನಿಗಾ ವಹಿಸಬೇಕು. ಕಾಮಗಾರಿಯಿಂದ ಜನರಿಗೆ ತೊಂದರೆಯಾಗದಂರೆ ಕ್ರಮವಹಿಸಬೇಕು ಎಂದು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಬಿ. ರಾಮು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನಂ, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ನವೆಂಬರ್ 25 ಮತ್ತು 26ರಂದು ವಿದ್ಯುತ್ ವ್ಯತ್ಯಯ

ಚಾಮರಾಜನಗರ, ನ. 24- ನಗರದ ನ್ಯಾಯಾಲಯ ರಸ್ತೆಯನ್ನು ಹಳೇಯ ಡಿ.ವೈಎಸ್.ಪಿ ಪೊಲೀಸ್ ಠಾಣೆಯಿಂದ ಸತ್ತಿ ರಸ್ತೆಯವರೆಗೆ ರಸ್ತೆ ಅಗಲೀಕರಣ ಮಾಡುವ ಸಲುವಾಗಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನಲೆಯಲ್ಲಿ ನ. 25ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಹೌಸಿಂಗ್ ಬೋರ್ಡ್ ಹಾಗೂ ಕೋರ್ಟ್ ರೋಡ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನವೆಂಬರ್ 26ರಂದು ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಗಾಳಿಪುರ, ಡಿವಿಯೇಷನ್ ರಸ್ತೆ, ಸತ್ತಿ ರಸ್ತೆ, ಗುಂಡ್ಲುಪೇಟೆ ರಸ್ತೆ, ಭ್ರಮರಾಂಭ ಬಡಾವಣೆ, ಸೋಮವಾರಪೇಟೆ, ಚಾಮರಾಜೇಶ್ವರ ದೇವಸ್ಥಾನ, ಮಲ್ಲಯ್ಯನಪುರ, ಮೂಡಲಪುರ ಹಾಗೂ ಶಂಕರಪುರ ಬಡಾವಣೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ.

ನ. 25 ರಂದು ನೇರ ಫೋನ್ ಇನ್ ಕಾರ್ಯಕ್ರಮ

     ಚಾಮರಾಜನಗರ, ನ. 24  ನಾಗರಿಕರ ಕುಂದು ಕೊರತೆಗಳನ್ನು ಅಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ 25 ರಂದು ಬೆಳಿಗ್ಗೆ 10ರಿಂದ 11ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
    ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 08226-224888ಕ್ಕೆ ಕರೆ ಮಾಡಿ ತಮ್ಮ ಕುಂದು ಕೊರತೆಯನ್ನು ತಿಳಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     
ನಗರದ ರಸ್ತೆ ಕಾಮಗಾರಿ: ಉಸ್ತುವಾರಿ ಸಚಿವರಿಂದ ಸ್ಥಳ ಪರಿಶೀಲನೆÉ
ಚಾಮರಾಜನಗರ, ನ. 25 - ಚಾಮರಾಜನಗರ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಇಂದು ಸ್ಥಳ ಪರಿಶೀಲನೆ ಮಾಡಿದರು.
ನಂತರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ ಅಧಿಕಾರಿ ಮತ್ತು ರಸ್ತೆ ಕಾಮಗಾರಿ ನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು ಚಾಮರಾಜನಗರ ಜಿಲ್ಲಾಕೇಂದ್ರದ ಸಮಗ್ರ ಅಭಿವೃದ್ಧಿಗಾಗಿ ಅಗತ್ಯ ಮೂಲಸೌಕರ್ಯ ಒದಗಿಸುವ ದೃಷ್ಠಿಯಿಂದ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ನಗರದಲ್ಲಿ ನಿರ್ಮಾಣವಾಗುತ್ತಿರುವ ಡಿವಿಯೇಷನ್ ರಸ್ತೆ, ಜೋಡಿರಸ್ತೆ, ಕೋರ್ಟ್ ರಸ್ತೆ ಹಾಗೂ ಇತರೆ ರಸ್ತೆಗಳು ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ಕಾಮಗಾರಿಗಿಂತ ಮೊದಲು ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲದೆ, ನಿಗದಿತ ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳು ಮುಗಿಸುವಂತೆ ಸೂಚನೆ ನೀಡಿದರು.
ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಸಣ್ಣಪುಟ್ಟ ಲೋಪದೋಷಗಳಾಗದಂತೆ ನಿಗಾ ವಹಿಸಬೇಕು. ಕಾಮಗಾರಿಯಿಂದ ಜನರಿಗೆ ತೊಂದರೆಯಾಗದಂರೆ ಕ್ರಮವಹಿಸಬೇಕು ಎಂದು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಬಿ. ರಾಮು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನಂ, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ
ಚಾಮರಾಜನಗರ, ನ. 25 :- ಚಾಮರಾಜನಗರ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಚಿವರಾದ ಡಾ. ಎಂ.ಸಿ ಮೋಹನ ಕುಮಾರಿ ಉರುಫ್ ಗೀತಾಮಹದೇವಪ್ರಸಾದ್ ಅವರು ಆಯ್ಕೆಯಾಗಿದ್ದಾರೆ.
ನಗರದ ನೂತನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಚಾಮರಾಜನಗರ ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಮೊದಲು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.  ರಾಮಚಂದ್ರ ಅವರು ಡಾ, ಎಂ.ಸಿ ಮೋಹನ ಕುಮಾರಿ ಉರುಫ್ ಗೀತಾ, ಮಾನ್ಯ ಸಕ್ಕರೆ, ಸಣ್ಣ ಕೈಗಾರಿಕೆ ಇಲಾಖೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸುವ ಮೂಲಕ ಆಯ್ಕೆ ಮಾಡುವಂತೆ ಕೋರಿದರು.
ಯೋಜನಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಇವರು ನಿಯಮಾನುಸಾರ ಪತ್ರವನ್ನು ನೀಡಿದವರ ಹೆಸರನ್ನು ಮತ್ತು ಸ್ವೀಕರಿಸಿದ ದಿನಾಂಕ ಮತ್ತು ವೇಳೆಯನ್ನು ಮಾನ್ಯ ಸಮಿತಿ ಸದಸ್ಯರ ಗಮನಕ್ಕೆ ತಂದು ನಂತರ ನಾಮ ಪತ್ರವನ್ನು ಹಿಂಪಡೆಯಲು ಒಂದು ನಿಮಿಷಗಳ ಕಾಲಾವಕಾಶ ನೀಡಿದರು.
ತದನಂತರ ನಾಮ ಪತ್ರವನ್ನು ವಾಪಸ್ಸು ಪಡೆಯದ ಕಾರಣ ಅಂತಿಮವಾಗಿ ಡಾ|| ಎಂ.ಸಿ ಮೋಹನ ಕುಮಾರಿ ಉ|| ಗೀತಾ, ಮಾನ್ಯ ಸಕ್ಕರೆ, ಸಣ್ಣ ಕೈಗಾರಿಕೆ ಇಲಾಖೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿಕೊಂಡ ನಂತರ ಮಾತನಾಡಿದ ಮಾನ್ಯ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರು ಜಿಲ್ಲೆಯ ಅಭಿವೃಧ್ಧಿ ಬಗ್ಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಪ್ರಮುಖವಾಗಿದ್ದು, ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಮೂಲಕ ಕೈಗೊಳ್ಳಲು ಅನುಕೂಲಕರವಾಗಿದೆ ಎಂದು ತಿಳಿಸಿದರು.
ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡುತ್ತಾ ಸಭೆಯಲ್ಲಿ ಚರ್ಚಿಸಬಹುದಾದ ಎಲ್ಲಾ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ ಬೊಮ್ಮಯ್ಯ ಇವರು ವಹಿಸಿಕೊಂಡಿದ್ದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಎಂ ಮಾದೇಶು ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.


























Friday, 24 November 2017

ಚಲನಚಿತ್ರಗಳಲ್ಲಿನ ಉತ್ತಮ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಬಿ. ರಾಮು (24-11-2017)

   

ಚಲನಚಿತ್ರಗಳಲ್ಲಿನ ಉತ್ತಮ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಬಿ. ರಾಮು 

ಚಾಮರಾಜನಗರ, ನ. 24 :- ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸುವ ಜನರು ಅವುಗಳಲ್ಲಿರುವ ಉತ್ತಮ ಸಂದೇಶಗಳನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಅಭಿಪ್ರಾಯಪಟ್ಟರು.
ನಗರತದ ಸಿಂಹ ಮೂವೀ ಪ್ಯಾರಡೈಸ್ ಚಿತ್ರಮಂದಿರದÀಲ್ಲಿಂದು ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಕನ್ನಡ ಚಲನಚಿತ್ರಗಳ ಪ್ರದರ್ಶನ ಕುರಿತು ಆಯೋಜಿಸಲಾಗಿದ್ದ ಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆ ಕಲೆಗಳ ತವರು. ಇಲ್ಲಿಯ ಜನ ಕಲೆಯ ಅರಾಧಕರು. ಕಲಾರಂಗಕ್ಕೆ ಜಿಲ್ಲೆ ತನ್ನದೆ ಆದ ಕೊಡುಗೆ ನೀಡಿದೆ. ರಂಗಭೂಮಿ ಹಾಗೂ ಚಲನಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ಸಹ ನೀಡಿದೆ. ಡಾ. ರಾಜ್‍ಕುಮಾರ್ ಅವರು ನಮ್ಮ ನಾಡಿನವರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.
ಚಲನಚಿತ್ರಗಳು ಕಲಾತ್ಮಕವಾಗಿ ಮೂಡಿ ಬರಬೇಕು. ಜನತೆಯನ್ನು ತಲುಪುವÀಂತಹ ಉತ್ತಮ ಸಂದೇಶಗಳನ್ನು ಚಿತ್ರಗಳು ಒಳಗೊಂಡಿರಬೇಕು. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ವಾರದ 7 ದಿನಗಳು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಜನರಿಗೆ ಮಾಡಿಕೊಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತ್ರಿ ಅವರು ಮಾತನಾಡಿ ಚಲನಚಿತ್ರವು ಅತ್ಯಂತ ವೇಗವಾಗಿ ಜನರನ್ನು ತಲುಪುವ ಮಾಧ್ಯಮವಾಗಿದೆ. ಆದರೂ ಇತ್ತೀಚೆಗೆ ಕಲಾತ್ಮಕ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಒಳ್ಳೆಯ ಚಲನಚಿತ್ರಗಳನ್ನು ನೋಡುವ ಮೂಲಕ ಜೀವನಾದಶರ್Àಗಳನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎಚ್. ಹರೀಶ್‍ಕುಮಾರ್ ಅವರು ಮಾತನಾಡಿ ಚಲನಚಿತ್ರಗಳು ಕೇವಲ ಮನರಂಜನೆಯಷ್ಟೆ ಅಲ್ಲ. ಅದರ ಉದ್ದೇಶ ಸಫಲವಾಗಬೇಕು. ಕಲಾತ್ಮಕ ಚಿತ್ರಗಳು ಪ್ರಶಸ್ತಿಗಾಗಿ ತಯಾರಾಗದೆ ಹೆಚ್ಚಿನ ಜನರನ್ನು ತಲುಪುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಂಗವಾಹಿನಿ ಸಂಸ್ಥೆಯ ಸಿ. ಎಂ. ನರಸಿಂಹಮೂರ್ತಿ ಕನ್ನಡಗೀತೆ ಹಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ಸಿಂಹ ಮೂವೀ ಪ್ಯಾರಡೈಸ್ ಚಿತ್ರಮಂದಿರದ ಮಾಲೀಕರಾದ ಎ. ಜಯಸಿಂಹ, ಇಲಾಖೆಯ ಸುರೇಶ್, ಜಯಶಂಕರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೊಬೈಲ್ ಆ್ಯಪ್‍ಬಳಕೆ ರೈತಸ್ನೇಹಿಯಾಗಿದೆ: ಜಿಲ್ಲಾಧಿಕಾರಿ ಬಿ. ರಾಮು

ಚಾಮರಾಜನಗರ, ನ. 24 - ರೈತರು ತಮ್ಮದೆ ಮೊಬೈಲ್‍ಅ್ಯಪ್ ಬಳಸಿ ತಾವು ಬೆಳೆದ ಬೆಳೆಯ ಮಾಹಿತಿಯನ್ನು ತಾವೇ ಸರ್ಕಾರಕ್ಕೆ ಸಲ್ಲಿಸುವ ಮೊಬೈಲ್‍ಅ್ಯಪ್ ತಂತ್ರಜ್ಞಾನ ವ್ಯವಸ್ಥೆ ರೈತಸ್ನೇಹಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ ರಾಮು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿ ನಡೆದ ಬೆಳೆ ಸಮೀಕ್ಷೆ ಕುರಿತು ರೈತರಿಗೆ ಮೊಬೈಲ್ ಆ್ಯಪ್ ಬಳಕೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ರೈತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅಲ್ಲದೆ ಅಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿಯೂ ಮುಂದಿದೆ. ಅಂತಹ ಹೊಸ ಯೋಜನೆಗಳಲ್ಲಿ ಈ ಮೊಬೈಲ್ ಆ್ಯಪ್ ಬಳಕೆ ಸಹ ಒಂದಾಗಿದೆ. ರೈತರು ತಮ್ಮ ಬೆಳೆಯ ವಿವರವನ್ನು ತಾವೇ ಮೊಬೈಲ್ ಆ್ಯಪ್ ಮೂಲಕ ಅಪ್‍ಲೋಡ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಈ ಮಾಹಿತಿ ಅನುಸರಿಸಿ ಸರ್ಕಾರ ಕೂಡಲೇ ಅಗತ್ಯ ನೆರವು ನೀಡಲು ಸಹಾಯಕವಾಗುತ್ತದೆ ಎಂದರು.
ಮೊಬೈಲ್ ಹಾಗೂ ಅಂತಜಾಲ ಸಂಪರ್ಕ ಹೊಂದಿರುವ ರೈತರು ತಮ್ಮಲ್ಲಿರುವ 4.5 ವರ್ಷನ್ ಮೊಬೈಲ್‍ನಿಂದ ಬೆಳೆ ಸಮೀಕ್ಷೆ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು, ಅಧಾರ್ ಸಂಖ್ಯೆ ನಮೂದಿಸಿ ನಂತರ ಜಮೀನಿನ ಸರ್ವೇ ನಂಬರ್, ಬೆಳೆ ಬೆಳೆಯುವ ಋತುಮಾನ, ನೀರಾವರಿ ಅಥವಾ ಮಳೆಯಾಶ್ರ್ರಿತ ಭೂಮಿ, ಬೆಳೆಯ ವಿವರಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಹಂತಹಂತವಾಗಿ ದಾಖಲಿಸಬೇಕು ಎಂದು ತಿಳಿಸಿದರು.
ಮಾಹಿತಿಯನ್ನು ಡೌನ್‍ಲೋಡ್ ಮಾಡುವ ಹಾಗೂ ಅಪ್‍ಲೋಡ್ ಮಾಡುವ ಸಮಯ ಹೊರತುಪಡಿಸಿ ಉಳಿದ ವೇಳೆ ಅಂತರ್ಜಾಲದ ಅಗತ್ಯವಿರುವುದಿಲ್ಲ. ಜಮೀನಿನ ನಕ್ಷೆಯು ಕೂಡ ಈ ಮೊಬೈಲ್‍ಆ್ಯಪ್‍ನಿಂದ ಲಭ್ಯವಾಗಲಿದೆ. ರೈತರು ತಮ್ಮ ಬೆಳೆಯ ಪ್ರಮಾಣವನ್ನು ಛಾಯಾಚಿತ್ರದೊಂದಿಗೆ ನಮೂದಿಸಬಹುದು. ರೈತರ ಹೆಸರು, ಅವರ ಜಮೀನಿನ ವಿಸ್ತೀರ್ಣವನ್ನು ನೇರವಾಗಿ ಭೂಮಿ ವ್ಯವಸ್ಥೆಯ ಸಂಪರ್ಕದೊಂದಿಗೆ ಪಡೆಯಬಹುದಾಗಿದೆ ಎಂದರು.
ಬೆಳೆ ವಿಮೆ ಯೋಜನೆಯಡಿ ರೈತರನ್ನು ನೊಂದಾಯಿಸಲು ಈ ಆ್ಯಪ್ ನೆರವಾಗಲಿದೆ. ಕನಿಷ್ಠ ಬೆಂಬಲ ಬೆಲೆಯ ಯೋಜನೆಯಲ್ಲಿ ಪಾಲ್ಗೊಳ್ಳುವ ರೈತರನ್ನು ಗುರುತಿಸಬಹುದು. ಅಲ್ಲದೆ ಸಹಾಯಧನವನ್ನು ನೇರವಾಗಿ ರೈತರ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಜಮಾ ಮಾಡಲು ಉತ್ತಮ ವ್ಯವಸ್ಥೆಯಾಗಲಿದೆ ಇದನ್ನು ಜಿಲ್ಲೆಯ ಹೆಚ್ಚಿನ ರೈತರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಕೃಷಿ ಉಪನಿರ್ದೇಶಕರಾದ ಯೋಗೇಶ್, ಜಿಲ್ಲಾ ಸಾಂಖ್ಯಿಕ ಇಲಾಖೆ ಉಪನಿರ್ದೇಶಕರಾದ ಕೃಷ್ಣಮೂರ್ತಿ ಹಾಗೂ ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಬೆಳೆ ಸಮೀಕ್ಷೆ ಕುರಿತ ಮೊಬೈಲ್‍ಆ್ಯಪ್ ಬಳಕೆ ಬಗ್ಗೆ ಪವರ್ ಪಾಯಿಂಟ್ ಮೂಲಕ ಕಾರ್ಯಾಗಾರದಲ್ಲಿ ಹಾಜರಿದ್ದ ರೈತರಿಗೆ ಮಾಹಿತಿ ನೀಡಲಾಯಿತು.
       

     







Thursday, 23 November 2017

ನ. 24ರಿಂದ ನಗರದಲ್ಲಿ ಚಿತ್ರೋತ್ಸವ : ನಾಗರಿಕರಿಗೆ ಉಚಿತವಾಗಿ ಕನ್ನಡ ಸಿನಿಮಾಗಳ ವೀಕ್ಷಣೆಗೆ ಅವಕಾಶ (22-11-2017)

ನ. 24ರಿಂದ ನಗರದಲ್ಲಿ ಚಿತ್ರೋತ್ಸವ : ನಾಗರಿಕರಿಗೆ ಉಚಿತವಾಗಿ ಕನ್ನಡ ಸಿನಿಮಾಗಳ ವೀಕ್ಷಣೆಗೆ ಅವಕಾಶ

ಚಾಮರಾಜನಗರ, ನ. 22 (vss):- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಕನ್ನಡ ಚಿತ್ರ ರಸಿಕರಿಗೆ ಕನ್ನಡ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ನವೆಂಬರ್ 24 ರಿಂದ 30ರವರೆಗೆ ನಗರದಲ್ಲಿ ಲಭಿಸಲಿದೆ.
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರದರ್ಶನದ ಚಿತ್ರೋತ್ಸವ ಸಪ್ತಾಹವು ನವೆಂಬರ್ 24 ರಿಂದ 30ರವರೆಗೆ ನಗರದ ಸಿಂಹ ಮೂವಿ ಪ್ಯಾರಡೈಸ್‍ನಲ್ಲಿ ಏರ್ಪಾಡಾಗಿದೆ.
ನವೆಂಬರ್ 24 ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ (ಬೆಳಗಿನ ಆಟ) ಚಲನಚಿತ್ರಗಳ ಪ್ರದರ್ಶನ ನಡೆಯಲಿದ್ದು ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಅವಕಾಶ ಇರಲಿದೆ.
ನವೆಂಬರ್ 24ರಂದು ಅಮರಾವತಿ, ನವೆಂಬರ್ 25ರಂದು ಕಿರಿಕ್ ಪಾರ್ಟಿ, ನವೆಂಬರ್ 26ರಂದು ರಾಮ ರಾಮ ರೇ, ನವೆಂಬರ್ 27ರಂದು ಮದಿಪು (ತುಳು ಭಾಷೆ), ನವೆಂಬರ್ 28ರಂದು ಯೂ ಟರ್ನ್, ನವೆಂಬರ್ 29ರಂದು ಅಲ್ಲಮ ಹಾಗೂ ನವೆಂಬರ್ 30ರಂದು ಮಾರಿಕೊಂಡವರು ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಮರಾವತಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಕಿರಿಕ್ ಪಾರ್ಟಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರಪ್ರಶಸ್ತಿ ಪಡೆದುಕೊಂಡಿದೆ. ರಾಮರಾಮರೇ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಮದಿಪು (ತುಳು ಭಾಷೆ) ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಹಾಗೂ ಅತ್ಯುತ್ತಮ ತುಳು ಭಾಷಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಯೂ ಟರ್ನ್ ಚಲನಚಿತ್ರವು 2016ನೇ ಸಾಲಿನ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಮ ಚಲನಚಿತ್ರವು 2016ನೇ ಸಾಲಿನ ಪನೊರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಮಾರಿಕೊಂಡವರು ಚಲನಚಿತ್ರವು 2015ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರದರ್ಶನದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಚಲನಚಿತ್ರೋತ್ಸವ ಸಪ್ತಾಹದಲ್ಲಿ ಪ್ರದರ್ಶಿತವಾಗಲಿರುವ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸುವ ಮೂಲಕ ಜಿಲ್ಲೆಯ ನಾಗರಿಕರು ಚಿತ್ರೋತ್ಸವ ಯಶಸ್ವಿಗೆ ಸಹಕರಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.
                                                                                     

ಸಹಕಾರ ಡಿಪ್ಲೊಮಾ ಕೋರ್ಸ್ ಪ್ರವೆಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 22 (vss):- ಜಿಲ್ಲೆಯ ಸಾಮಾನ್ಯ ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಸಹಕಾರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಅಹ್ವಾನಿಸಲಾಗಿದೆ.
    ಜನವರಿಯಲ್ಲಿ ಪ್ರಾರಂಭವಾಗುತ್ತಿರುವ 6 ತಿಂಗಳ ಅವಧಿಯ ಡಿಪ್ಲೊಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್ ತರಬೇತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
     ಈ ತರಬೇತಿಯು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್, ಅಫೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಹಾಲು ಓಕ್ಕೂಟ ಮತ್ತು ಇತರೆ ಎಲ್ಲಾ ರೀತಿಯ ಸಹಕಾರ ಸಂಘ ಹಾಗೂ ಬ್ಯಾಂಕ್‍ಗಳಲ್ಲಿನ ಉದ್ಯೋಗ ನೇಮಕಾತಿಗೆ ಕಡ್ಡಾಯವಾಗಿರುತ್ತದೆ. ಈ ಕೋರ್ಸ್‍ನ ಪಠ್ಯಕ್ರಮವು ಕೆ.ಎ.ಎಸ್. ಪರೀಕ್ಷೆಯ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಮತ್ತು ಸಹಕಾರ ಇಲಾಖೆಯ ಕೋ- ಆಪರೇಟಿವ್ ಇನ್ಸ್‍ಸ್ಪೆಕ್ಟರ್ ಹುದ್ದೆ ಹಾಗೂ ಇನ್ನಿತರ ಹುದ್ದೆ ನೇಮಕಾತಿ ಪರೀಕ್ಷೆಗಳಿಗೆ ಪೂರಕವಾಗಿರುತ್ತದೆ.
    ಕನಿಷ್ಟ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ ಆಗಿದ್ದು, ಪ್ರವೇಶ ಪಡೆದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ ರೂ. 500 ಹಾಗೂ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಮಾಸಿಕ ರೂ. 400 ಶಿಷ್ಯ ವೇತನ ನೀಡಲಾಗುವುದು
    ಸಹಕಾರ ಭವನ, ಚಾಮರಾಜ ಜೋಡಿ ರಸ್ತೆ, ಮೈಸೂರು. ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ನವೆಂಬರ್ 30 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು  ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ಮೈಸೂರು ದೂರವಾಣಿ ಸಂಖ್ಯೆ 0821-2520563 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.23ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಚಾಮರಾಜನಗರ, ನ. 22 :- ತಾಲ್ಲೂಕಿನ  ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2017-18 ನೇ ಸಾಲಿನ 3ನೇ ತ್ರೈಮಾಸಿಕ ನಿರ್ವಹಣ ಕಾರ್ಯವನ್ನು ನವೆಂಬರ್ 23 ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಹೊನ್ನೂರು, ಸಂತೇಮರಳ್ಳಿ, ನವಿಲೂರು, ಆಲ್ದೂರು, ಅಂಬಳೆ, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ದುಗ್ಗಟ್ಟಿ, ಮತ್ತು ಚಂಡೀಪುರ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಇದರಿಂದ ಸಾರ್ವಜನಿಕರು ಚಾಮುಂಡೇಶ್ವರಿ  ವಿದ್ಯುತ್ ಸರಬರಾಜು ನಿಗಮದ ಜೊತೆ ಸಹಕರಿಸಲು  ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕಪ್ಪು ಬಿಳುಪು ಬಣ್ಣದ ಕಾಗದದಲ್ಲಿ ಪಹಣಿ ವಿತರಣೆ: ಜಿಲ್ಲಾಧಿಕಾರಿ ಸ್ವಷ್ಟನೆ

   ಚಾಮರಾಜನಗರ, ನ. 22 (vss):- ಸಾರ್ವನಿಕರಿಗೆ ಪಹಣಿಯನ್ನು ಕಪ್ಪು ಬಿಳುಪು ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಸ್ವಷ್ಟಪಡಿಸಿದ್ದಾರೆ.
          ಕಂದಾಯ ಇಲಾಖೆಯಿಂದ ರೈತರಿಗೆ, ಸಾರ್ವಜನಿಕರಿಗೆ ಗಣಕೀಕೃತ ಪಹಣಿಗಳನ್ನು ವಿತರಿಸುವ ಸೌಲಭ್ಯವನ್ನು 2001ರಿಂದ ಜಾರಿಗೆ ತರಲಾಗಿದೆ. ಸರ್ಕಾರವು ಪ್ರಸ್ತುತ ಟೆಂಡರ್‍ದಾರರಿಂದ ನೀಲಿ ಬಣ್ಣದ ಪೂರ್ವಮುದ್ರಿತ ಪಹಣಿ ನಮೂನೆಯನ್ನು ಟೆಂಡರ್‍ದಾರರಿಂದ ಪಡೆದು ಸದರಿ ನಮುನೆಯಲ್ಲಿ ಭೂಮಿ ಡಾಟಾ ಬೇಸ್‍ನಿಂದ ಪಹಣಿಯ ಮಾಹಿತಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಪಹಣಿ ಪತ್ರ ಮುದ್ರಿಸಲು ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರ್ಕಾರವು ಸರಬರಾಜುದಾರ ಮೇಲೆ ಸಂಪೂರ್ಣವಾಗಿ ಅವಲಂಭಿತವಾಗಿತ್ತು. ಇದರಿಂದ ರೈತರಿಗೆ ಪಹಣಿಗಳ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಅಂದರೆ ಬ್ಯಾಂಕ್‍ಗಳಿಂದ ಅಥವಾ ಯಾವುದಾದರೂ ಸಂಸ್ಥೆಯಿಂದ ಸಾಲ ಪಡೆಯಲು, ಸರ್ಕಾರದಿಂದ ಪರಿಹಾರ ಪಡೆಯುವಾಗ ಬೆಳೆವಿಮೆಗಾಗಿ ಪೂರ್ವ ಮುದ್ರಿತ ಪಹಣಿ ನಮೂನೆಯ ಸರಬರಾಜಿನಲ್ಲಿ ಸ್ವಲ್ಪ ವಿಳಂಬವಾದರೂ ಸಹ ನಿಗದಿತ ಸಮಯದಲ್ಲಿ ರೈತರು ಅಥವಾ ಸಾರ್ವಜನಿಕರು ಪಹಣಿಯನ್ನು ಪಡೆಯಲು ಕಷ್ಟವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸದರಿ ತೊಂದರೆಯನ್ನು ಅರಿತ ಸರ್ಕಾರವು ಪೂರ್ವ ಮುದ್ರಿತ ಪಹಣೆ ನಮೂನೆಗಾಗಿ ಸರಬರಾಜುದಾರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ತಂತ್ರಾಂಶದಲ್ಲಿಯೇ ಕಪ್ಪು ಬಿಳುಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ ಪಹಣಿಯನ್ನು ಮುದ್ರಿಸಲು ಕ್ರಮ ಕೈಗೊಂಡಿದೆ. ಸದರಿ ಕಪ್ಪು ಬಿಳುಪು ಗಾತ್ರದ ಪಹಣಿಯಲ್ಲಿ ಈ ಹಿಂದೆ ನೀಡುತ್ತಿದ್ದ ಪಹಣಿಯಲ್ಲಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಾದ ವಿಶೇಷ ಪಹಣಿ ಗುರುತಿನ ಸಂಖ್ಯೆ, ಕ್ರಮ ಸಂಖ್ಯೆ, ಬಾರ್ ಕೋಡ್, ಡಿಜಿಟಲ್ ಸಹಿಗಳನ್ನು ಒಳಗೊಳಡಿರುತ್ತದೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರತ್ತದೆ. ಆದರಿಂದ ಕಪ್ಪು ಬಿಳುಪು ಬಣ್ಣದ ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ.
       ಆದುದರಿಂದ ಸಾರ್ವಜನಿಕರು ಈ ಬದಲಾಣೆಯನ್ನು ಗಮನದಲ್ಲಿರಿಸಿಕೊಂಡು ಯಾವುದೇ ಗೊಂದಲಕ್ಕೊಳಕಾಗಾಗದೇ ತಾಲ್ಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ, ಅಟಲ್‍ಜೀ ಜನ ಸ್ನೇಹಿ ಕೇಂದ್ರಗಳಲಿ,್ಲ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ಸರ್ಕಾರದ ಪಹಣಿ ವಿತರಿಸಲು ಅನುಮತಿ ನೀಡಿರುವ ಖಾಸಗಿ ಕೇಂದ್ರಗಳಲ್ಲಿ ವಿತರಿಸುವ ಪಹಣಿ ಪತ್ರಗಳನ್ನು ಪಡೆದು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳಬೇಕು.
      ಪಹಣಿಯನ್ನು ನಿಗದಿತ ಸಮಯಕ್ಕೆ ಪಡೆಯಲು ಅನುಕೂಲವಾಗುವಂತೆ ಸಾರ್ವನಿಕರ ಹಿತದೃಷ್ಠಿಯಿಂದ ಪಹಣೆಯಲ್ಲಿ ಈ ಬದಲಾವಣೆಯನ್ನು ತರಲಾಗಿದೆ. ಪಹಣಿಯ ನೈಜತೆಯನ್ನು ತಿತಿತಿ.ಟಚಿಟಿಜಡಿeಛಿoಡಿಜs.ಞಚಿಡಿಟಿಚಿಣಚಿಞಚಿ.gov.iಟಿ ವೆಬ್- ಸೈಟ್‍ನಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.25 ರಂದು ನೇರ ಫೋನ್ ಇನ್ ಕಾರ್ಯಕ್ರಮ

ಚಾಮರಾಜನಗರ, ನ. 22 (vss):- ಜಿಲ್ಲೆಯ ನಾಗರಿಕರ ಕುಂದು ಕೊರತೆಗಳನ್ನು ಅಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ 25 ರಂದು ಬೆಳಿಗ್ಗೆ 10ರಿಂದ 11ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
    ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 08226-224888ಕ್ಕೆ ಕರೆ ಮಾಡಿ ತಮ್ಮ ಕುಂದು ಕೊರತೆಯನ್ನು ತಿಳಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ: ವಸತಿ ಯೋಜನೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 22 (vss):- ಕೊಳ್ಳೇಗಾಲ ನಗರ ಸಭೆ ವ್ಯಾಪ್ತಿಯಲ್ಲಿ 2017-18ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೇಜನೆಯಡಿ ಮನೆ ನಿರ್ಮಿಸಿಕೊಳ್ಳಲು ಹಿಂದುಳಿದ ವರ್ಗಗಳ ಅರ್ಹ ಮಹಿಳಾ ಫಲಾನುಭವಿಗಳಿಗೆ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಆಸಕ್ತರು ನವೆಂಬರ್ 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಪೌರಾಯುಕ್ತರ ಕಚೇರಿಯ ಸಂಬಂಧಪಟ್ಟ ಶಾಖೆಯಲ್ಲಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ : ಹೆಸರು ನೊಂದಾಯಿಸಲು ಅವಕಾಶ

ಚಾಮರಾಜನಗರ, ನ. 22 (vss):- ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯನ್ನು ಪ್ರಸಕ್ತ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಹೋಬಳಿ, ಗ್ರಾಮಮಟ್ಟದಲ್ಲಿ  ಅನುಷ್ಠಾನಗೊಳಿಸಲಾಗುತ್ತಿದೆ.
 ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ಮುಸುಕಿನ ಜೋಳ, ರಾಗಿ, ಈರುಳ್ಳಿ, ಟೊಮೆಟೊ, ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಮುಸುಕಿನ ಜೋಳ, ರಾಗಿ, ಕಡಲೆ, ಹೆಸರು, ಹುರುಳಿ ಬೆಳೆ  ಬೇಸಿಗೆ ಹಂಗಾಮಿಗೆ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ರಾಗಿ, ಈರುಳ್ಳಿ, ಟೊಮೆಟೊ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ವಿಮೆಗೆ ಒಳಪಡಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕುಗಳಲ್ಲಿ ಮಳೆಯಾಶ್ರಿತ ಹುರುಳಿ ಬೆಳೆಯನ್ನು ವಿಮೆಗೆ ಅಧಿಸೂಚಿಸಿದೆ.
ಹಿಂಗಾರು ಹಂಗಾಮಿಗೆ ಮಳೆಯಾಶ್ರಿತ ಹುರುಳಿ, ಮುಸುಕಿನ ಜೋಳ ಮತ್ತು ನೀರಾವರಿ ಆಶ್ರಿತ ಮುಸುಕಿನ ಜೋಳ, ಈರುಳ್ಳಿ, ಟೊಮೆಟೊ ಬೆಳೆಗೆ ನೊಂದಾಯಿಸಲು ನವೆಂಬರ್ 30 ಕಡೆದಿನವಾಗಿದೆ. ಹಿಂಗಾರು ಹಂಗಾಮಿಗೆ ಮಳೆಯಾಶ್ರಿತ ಹೆಸರು, ಕಡಲೆ, ರಾಗಿಗೆ ಡಿಸೆಂಬರ್ 15 ಮತ್ತು ನೀರಾವರಿ ಆಶ್ರಿತ ಭತ್ತ, ರಾಗಿ ಬೆಳೆಗೆ ನೊಂದಾಯಿಸಲು ಡಿಸೆಂಬರ್ 30ರಂದು ಕಡೆಯ ದಿನ.
ಬೇಸಿಗೆ ಹಂಗಾಮಿನ ನೀರಾವರಿ ಆಶ್ರಿತ ಈರುಳ್ಳಿ, ಭತ್ತ, ರಾಗಿ ಮತ್ತು ಟೊಮೆಟೊ ಬೆಳೆಗಳಿಗೆ ನೊಂದಾಯಿಸಲು 2018ರ ಫೆಬ್ರವರಿ 28ರಂದು ಅಂತಿಮ ದಿನವಾಗಿದೆ.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀತಿಯಂತಹ ದಾಖಲೆಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಪ್ರಶಸ್ತಿ ಬಹುಮಾನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 22 (vss):- ಕೃಷಿ ಇಲಾಖೆಯು ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಲು ಶ್ರಮ ಮತ್ತು ಸಕ್ರಿಯ ಪಾಲುಗಾರಿಕೆಗೆ ಕಾರಣರಾದ ರೈತರನ್ನು ಗುರುತಿಸಲು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಬಹುಮಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಭಾಗವಹಿಸುವ ರೈತರು ನವೆಂಬರ್ 30ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ 100 ರೂ. ಹಾಗೂ ಪರಿಶಿಷ್ಟ ಜಾತಿ, ವರ್ಗದ ರೈತರಿಗೆ 25 ರೂ. ಸ್ವರ್ಧ ಶುಲ್ಕ ನಿಗದಿ ಮಾಡಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಿದ್ದು ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ಲಭಿಸಲಿದೆ.  ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ. ಹಾಗೂ ತೃತೀಯ ಬಹುಮಾನ 15 ಸಾವಿರ ರೂ. ಲಭಿಸಲಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿಪಡಿಸಿದ ಬೆಳೆಗಳಲ್ಲಿ ಮಾತ್ರ ಸ್ಪರ್ಧೆ ಏರ್ಪಡಿಸಿ ಅರ್ಜಿ ಸ್ವೀಕರಿಸಲಾಗುವುದು. ಸಮಿತಿ ನಿಗದಿಪಡಿಸುವ ಒಂದು ಬೆಳೆಯಲ್ಲಿ ಮಾತ್ರ ಸ್ಪರ್ಧೆ ನಡೆಸಲಾಗುತ್ತದೆ.
 ಬೆಳೆ ಸ್ಪರ್ಧೆಗೆ ನೊಂದಾಯಿಸಲು ರೈತರು ಅರ್ಜಿಯೊಂದಿಗೆ ಪಹಣಿ, ಶುಲ್ಕ ಪಾವತಿ ಚಲನ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರವನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಟಣೆಯಲ್ಲಿ ತಿಳಿಸಿದ್ದಾರೆ.

               ನವೆಂಬರ್ 24 ರಂದು ಬೆಳೆ ಸಮೀಕ್ಷೆ ಕಾರ್ಯಾಗಾರ

    ಚಾಮರಾಜನಗರ, ನ. 22 (vss):- ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ದತ್ತಾಂಶವನ್ನು ಸ್ವತಃ ರೈತರೆ ಅಳವಡಿಸುವ ಕುರಿತು ತರಬೇತಿ ಶಿಬಿರವನ್ನು ರೈತರಿಗಾಗಿ ಜಿಲ್ಲಾಧಿಕಾರಿ ಬಿ.ರಾಮು ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 24 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
    ಈ ತರಬೇತಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು ಭಾಗವಹಿಸಿ ಮೊಬೈಲ್ ಆ್ಯಪ್ ಬಗ್ಗೆ ಮಾಹಿತಿ ಪಡೆದು ಸಹಕರಿಸುವಂತೆ ಜಂಟಿ ಕೃಷಿ ನಿರ್ದೇಶಕರಾದÀ ಎಂ.ತಿರುಮಲೇಶ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಬೆಳೆ ವಿಮೆ ಬಗ್ಗೆ ವ್ಯಾಪಕ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಬಿ. ರಾಮು (23-11-2017)

     

ಬೆಳೆ ವಿಮೆ ಬಗ್ಗೆ ವ್ಯಾಪಕ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಬಿ. ರಾಮು

ಚಾಮರಾಜನಗರ, ನ. 23 -  ಪ್ರಸಕ್ತ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಬಗ್ಗೆ ರೈತರು ಬೆಳೆಗಾರರಿಗೆ ವ್ಯಾಪಕವಾಗಿ ಅರಿವು ಮೂಡಿಸಿ ನೋಂದಣಿ ಮಾಡಿಸಲು ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು 2017-18ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅನುಷ್ಟಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಸಭೆಯಲ್ಲಿ ಭಾಗವಹಿಸಿದ್ದ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಗ್ರಾಮೀಣಾಭಿವೃದ್ದಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ಬೆಳೆ ವಿಮೆ ಕುರಿತು ರೈತರಲ್ಲಿ ವೈಜ್ಞಾನಿಕವಾಗಿ ಹಾಗೂ ವ್ಯಾಪಕವಾಗಿ ಅರಿವು ಮೂಡಿಸಲು ಹೆಚ್ಚು ಕ್ರಿಯಾಶೀಲರಾಗಿ ಪ್ರಚಾರ ಕೈಗೊಳ್ಳಬೇಕು ಎಂದರು.
       ಈಗಾಗಲೇ ಹಿಂಗಾರು ಹಂಗಾಮಿಗೆ ಬಿತ್ತನೆ ಅವಧಿಯು ಮುಕ್ತಾಯವಾಗಿರುವುದರಿಂದ, ಹಾಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಿರುವ ರೈತರು ಹತ್ತಿರದ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಲು  ಪ್ರೋತ್ಸಾಹಿಸಬೇಕು. ಬಿತ್ತನೆ ಮಾಡದೆ ಇರುವ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ಬಿತ್ತನೆ ಸಮಯದೊಳಗೆ ಬಿತ್ತನೆ ಮಾಡಿರುವ ರೈತರು ಮಾತ್ರ ನೋಂದಾಯಿಸಿಕೊಳ್ಳಲು ಮನವರಿಕೆ   ಮಾಡಿಕೊಡಬೇಕು ಎಂದÀು ಜಿಲ್ಲಾಧಿಕಾರಿ ರಾಮು ಅವರು ತಿಳಿಸಿದರು.
       ಉಪ ಕೃಷಿ ನಿರ್ದೇಶಕ ಜಿ.ಹೆಚ್. ಯೋಗೇಶ್ ಮಾತನಾಡಿ ಸದರಿ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ನಾಲ್ಕು  ತಾಲ್ಲೂಕುಗಳ ಅಧಿಸೂಚಿತ 103 ಗ್ರಾಮ ಪಂಚಾಯಿತಿಗಳಲ್ಲಿ ಹುರುಳಿ ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದು. ಸದರಿ ಯೋಜನೆಯಡಿ ಅಧಿಸೂಚಿತ ಹೋಬಳಿಗಳಲ್ಲಿ ನೀರಾವರಿ (ಭತ್ತ, ರಾಗಿ, ಮುಸುಕಿನಜೋಳ) ಮತ್ತು ಮಳೆಯಾಶ್ರಿತ ಕಡಲೆ ರಾಗಿ, ಹೆಸರು ಮತ್ತು ಮುಸುಕಿನ ಜೋಳಗಳಿಗೆ ರೈತರು ಬೆಳೆ ವಿಮೆ ಪಾವತಿಸಬಹುದು. ಗುಂಡ್ಲುಪೇಟೆ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಟಮೊಟೋ ಮತ್ತು ಈರುಳ್ಳಿ, ಹರದನಹಳ್ಳಿ ಭಾಗದಲ್ಲಿ - ಟೊಮೊಟೋ, ಹರವೆ ಭಾಗದಲ್ಲಿ - ಈರುಳ್ಳಿ ಬೆಳೆಗಳಿಗೆ ವಿಮೆ ಪಾವತಿಸಬೇಕಿದೆ ಎಂದರು.
       ಮುಸುಕಿನ ಜೋಳ, ಈರುಳ್ಳಿ, ಟಮೊಟೋ, ಹುರುಳಿ ಬೆಳೆಗಳಿಗೆ ನವೆಂಬರ್ ಅಂತ್ಯದವರೆಗೆ ಕಡಲೆ, ರಾಗಿ, ಹೆಸರು ಬೆಳೆಗಳಿಗೆ 15 ನೇ ಡಿಸೆಂಬರ್ ಮತ್ತು ನೀರಾವರಿ ಭತ್ತ, ರಾಗಿ ಬೆಳೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ರೈತರು ವಿಮಾ ಕಂತು ಪಾವತಿಸಿ ಹತ್ತಿರದ ಬ್ಯಾಂಕ್‍ಗಳಲ್ಲಿ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
       2016 ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಿಕೊಂಡಿದ್ದ 18601 ಜನ ರೈತರಿಗೆ ರೂ. 1813 ಲಕ್ಷ ವಿಮಾ ಮೊತ್ತ ಮಂಜೂರಾಗಿರುತ್ತದೆ. ಈ ಪೈಕಿ ಬ್ಯಾಂಕ್ ಖಾತೆಗಳ ಸಂಖ್ಯೆ ತಪ್ಪಾಗಿದ್ದ ಕಾರಣ ತಡೆಹಿಡಿಯಲಾಗಿದ್ದ ರೂ 184.5 ಲಕ್ಷ ವಿಮಾ ಮೊತ್ತವನ್ನು ಜಿಲ್ಲೆಯ 39 ಬ್ಯಾಂಕ್ ಬ್ರ್ಯಾಂಚ್‍ಗಳ ವ್ಯವಸ್ಥಾಪಕರುಗಳ ಖಾತೆಗೆ ಜಮೆ ಮಾಡಲಾಗಿದ್ದು,  ರೈತರ ಖಾತೆಗಳಿಗೆ ವರ್ಗಾವಣೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
       ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನಂ, ತೋಟಗಾರಿಕೆ ಉಪ ನಿರ್ದೇಶಕ ಶಿವಪ್ರಸಾದ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ,  ತಹಶೀಲ್ದಾರ್‍ರು, ಸಹಾಯಕ ಕೃಷಿ ನಿರ್ದೇಶಕರು, ಕೃಷಿ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ತೋಟಗಾರಿಕೆ ಇಲಾಖೆಗಳ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಡಿ. 9ರಂದು ಜಿಲ್ಲೆಯಲ್ಲಿ ಲೋಕ್ ಅದಾಲತ್

ಚಾಮರಾಜನಗರ, ನ. 23 -ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಅನುಸಾರ ನ್ಯಾಯಾಲಯದಲ್ಲಿ ಡಿಸೆಂಬರ್ 9ರಂದು ರಾಷ್ಟ್ರ್ರೀಯ ಲೋಕ್ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲ ರೀತಿಯ ವ್ಯಾಜ್ಯ ಪೂರ್ವ ಪ್ರಕರಣಗಳು, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್, ಬ್ಯಾಂಕ್, ಮೋಟಾರು ವಾಹನ ಅಪಘಾತ, ಭೂ ಸ್ವಾಧೀನ, ಕೌಟುಂಬಿಕ, ನಗರಸಭೆ ಹಾಗೂ ವಿದ್ಯುತ್ ಪ್ರಕರಣಗಳು ಮತ್ತು ಇತರೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗುವುದು.
ಸಾರ್ವಜನಿಕರು ಅಂದು ಖುದ್ದಾಗಿ ಹಾಜರಾಗಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡು ಲೋಕ್ ಅದಾಲತ್ ಅನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 28ರಂದು ಪ.ಜಾ. ನಿರುದ್ಯೋಗಿಗಳಿಗೆ ನಗರದಲ್ಲಿ ವಾಹನ ಚಾಲನಾ ತರಬೇತಿಗೆ ಸಂದರ್ಶನ
ಚಾಮರಾಜನಗರ, ನ. 23 :- ಸಮಾಜ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡುವ ಸಂಬಂಧ ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಂದರ್ಶನ ಏರ್ಪಡಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 30ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ

ಚಾಮರಾಜನಗರ, ನ. 23 :- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯ ನವೆಂಬರ್ 30ರಂದು ಬೆಳಿಗ್ಗೆ ಅಲ್ಲಿನ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ನಡೆಯಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಹಣ ಎಣಿಕೆ ಕಾರ್ಯಕ್ಕೆ ಸಹಕರಿಸಲಿದ್ದಾರೆ ಎಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರಕಲಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 23 - ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಚಿತ್ರಕಲೆಯನ್ನು ಉತ್ತೇಜಿಸುವ ದೃಷ್ಠಿಯಿಂದ ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಅಂಗೀಕೃತಗೊಂಡ ಚಿತ್ರಕಲಾ ದೃಶ್ಯಕಲಾ ಶಿಕ್ಷಣದ ಕಾಲೇಜುಗಳು, ಸರ್ಕಾರದ ಮಾನ್ಯತೆ ಪಡೆದ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆಯುತ್ತಿರುವವರು, ಪದವಿ, ಸ್ನಾತಕೋತ್ತರ ಚಿತ್ರಕಲಾ ವ್ಯಾಸಂಗ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ 16 ರಿಂದ 25 ವರ್ಷದೊಳಗಿರಬೇಕು.
ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತ ಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆಸಿ ರಸ್ತೆ, ಬೆಂಗಳೂರು-560002 ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರ, ಕೃತಿಗಳ ಕ್ಯಾಬಿನೆಟ್ ಸೈಜಿನ 2 ಛಾಯಾಚಿತ್ರಗಳು, ಹಿಂದೆ ವಿದ್ಯಾರ್ಥಿ ವೇತನ ಪಡೆದಿಲ್ಲದಿರುವ ಕುರಿತು ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಲಗತ್ತಿಸಿ ಡಿಸೆಂಬರ್ 12ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್ ಸೈಟ್ ತಿತಿತಿ.ಟಚಿಟiಣಞಚಿಟಚಿಞಚಿಡಿಟಿಚಿಣಚಿಞಚಿ.oಡಿg, ಇ ಮೇಲ್ ಞಟಚಿ.ಞಚಿಡಿಟಿಚಿಣಚಿಞಚಿ@gmಚಿiಟ.ಛಿom ಹಾಗೂ ದೂರವಾಣಿ ಸಂಖ್ಯೆ 080-22480297 ಸಂಪರ್ಕಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ವಿ. ಇಂದ್ರಮ್ಮ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 23 - ಚಾಮರಾಜನಗರ ನಗರಸಭೆಯು ದೀನ್ ದಯಾಳ್ ಅಂತ್ಯೋದಯ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇನಲ್ಮ್À) ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಕಾರ್ಯಕ್ರಮದಡಿ ವಿವಿಧ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
8ನೇ ತರಗತಿಯವರಿಗೆ ಟೈಲರಿಂಗ್ ಹಾಗೂ 5ನೇ ತರಗತಿಯವರಿಗೆ ಹೊಲಿಗೆ ಯಂತ್ರ ಆಪರೇಟರ್ ತರಬೇತಿಯನ್ನು ಮರಿಯಾಲದ ಹ್ಯಾಂಡ್‍ಲೂಂ ಮತ್ತು ಟೆಕ್ಸ್‍ಟೈಲ್ ಇಲಾಖೆ, ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು.
10ನೇ ತರಗತಿ ವಿದ್ಯಾರ್ಹತೆಯವರಿಗೆ ಟ್ಯಾಕ್ಸಿ ಚಾಲನಾ ತರಬೇತಿಯನ್ನು ನಗರದ ಆರ್‍ಟಿಓ ನೊಂದಾಯಿತ ಲಘುವಾಹನ ತರಬೇತಿ ಸಂಸ್ಥೆಯಲ್ಲಿ ನೀಡಲಾಗುವುದು.
8ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಸಹಾಯಕ ಬ್ಯೂಟಿ ಥೆರಪಿಸ್ಟ್ ಹಾಗೂ ಸಹಾಯಕ ಬ್ಯೂಟಿ ಮತ್ತು ವೆಲ್ಲಿನೆಸ್ ತರಬೇತಿ ಹಾಗೂ ಐಟಿಐನವರಿಗÉ ಮೊಬೈಲ್ ಫೋನ್ ಹಾರ್ಡ್‍ವೇರ್ ದುರಸ್ತಿ ತರಬೇತಿಯನ್ನು ಮರಿಯಾಲದ ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆಯಲ್ಲಿ ನೀಡಲಿದೆ.
10ನೇ ತರಗತಿ ವಿದ್ಯಾರ್ಹತೆಗೆ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ಐಟಿಐನವರಿಗೆ ಜೂನಿಯರ್ ಸಾಫ್ಟ್‍ವೇರ್ ಆಪರೇಟರ್ ತರಬೇತಿಯನ್ನು ನಗರದ ಕಿಯೋನಿಕ್ಸ್ ಸಂಸ್ಥೆಯಲ್ಲಿ ತರಬೇತಿ ನೀಡಲಿದೆ.
5ನೇ ತರಗತಿ ವಿದ್ಯಾರ್ಹತೆಯವರಿಗೆ ಮಾಸನ್ ಜನರಲ್ ಹಾಗೂ 8ನೇ ತರಗತಿ ವಿದ್ಯಾರ್ಹತೆಯವರಿಗೆ ಪ್ಲಂಬರ್ (ಜನರಲ್) ತರಬೇತಿಯನ್ನು ಆರ್‍ಜಿಆರ್‍ಎಚ್‍ಸಿಎಲ್ ಕೌಶಲ್ಯ ಶಾಲೆಯಲ್ಲಿ ನೀಡಲಾಗುವುದು.
18 ವರ್ಷ ಪೂರೈಸಿದ ಅಭ್ಯರ್ಥಿಗಳು ಅರ್ಜಿಯನ್ನು ನಗರದ ನಗರಸಭೆಯಿಂದ ಪಡೆದು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಡಿಸೆಂಬರ್ 15ರೊಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ನಗರಸಭೆಯ ನಲ್ಮ್ ಶಾಖೆಯ ಮಲ್ಲೇಶ್ ಅವರನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ.ವರ್ಗ, ಪ.ಪಂಗಡದ ರೈತರಿಗೆ ಹನಿ ನೀರಾವರಿ ಯೋಜನೆಯಡಿ ಸಹಾಯಧನ : ಹೆಸರು ನೊಂದಾಯಿಸಲು ಮನವಿ

ಚಾಮರಾಜನಗರ, ನ. 23 :- ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನ ಸೂಕ್ಷ್ಮ ಹನಿ ನೀರಾವರಿ ಯೋಜನೆ (ಡ್ರಿಪ್ ಇರಿಗೇಷನ್) ಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳುವ ಪರಿಶಿಷ್ಟ ವರ್ಗ, ಪಂಗಡದ ರೈತರಿಗೆ ಪರಿಷ್ಕøತ ದರದಂತೆ ಶೇ.90ರ ಸಹಾಯಧನ ನೀಡಲಿದೆ.
ಕೊಳವೆಬÁವಿ, ನೀರಾವರಿ ಮೂಲ ಹೊಂದಿರುವ ಆಸಕ್ತ ರೈತರು ತಮ್ಮ ಹೆಸರನ್ನು ಇಲಾಖೆಯಲ್ಲಿ  ಅಗತ್ಯ ದಾಖಲಾತಿಗಳೊಂದಿಗೆ ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆಯಲು ಕೋರಿದೆ.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 24ರಂದು ಚಿತ್ರೋತ್ಸವ ಸಪ್ತಾಹಕ್ಕೆ ಚಾಲನೆ :  ಉಚಿತವಾಗಿ ಕನ್ನಡ ಸಿನಿಮಗಳ ವೀಕ್ಷಣೆಗೆ ಅವಕಾಶ

ಚಾಮರಾಜನಗರ, ನ. 23 - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಚಿತ್ರೋತ್ಸವ ಸಪ್ತಾಹದ ಉದ್ಘಾಟನೆ ಸಮಾರಂಭವು ನಗರದ ಸಿಂಹ ಮೂವಿ ಪ್ಯಾರಡೈಸ್‍ನಲ್ಲಿ ನವೆಂಬರ್ 24ರಂದು ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ. 
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರದರ್ಶನದ ಚಿತ್ರೋತ್ಸವ ಸಪ್ತಾಹವನ್ನು ಜಿಲ್ಲಾಧಿಕಾರಿ ಬಿ. ರಾಮು ಅವರು ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಸಿಂಹ ಮೂವಿ ಪ್ಯಾರಡೈಸ್ ಮಾಲೀಕರಾದ ಎ.ಜಯಸಿಂಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ನವೆಂಬರ್ 24 ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ (ಬೆಳಗಿನ ಆಟ) ಚಲನಚಿತ್ರಗಳ ಪ್ರದರ್ಶನ ನಡೆಯಲಿದ್ದು ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಅವಕಾಶ ಇರಲಿದೆ.
ನವೆಂಬರ್ 24ರಂದು ಅಮರಾವತಿ, ನವೆಂಬರ್ 25ರಂದು ಕಿರಿಕ್ ಪಾರ್ಟಿ, ನವೆಂಬರ್ 26ರಂದು ರಾಮ ರಾಮ ರೇ, ನವೆಂಬರ್ 27ರಂದು ಮದಿಪು (ತುಳು ಭಾಷೆ), ನವೆಂಬರ್ 28ರಂದು ಯೂ ಟರ್ನ್, ನವೆಂಬರ್ 29ರಂದು ಅಲ್ಲಮ ಹಾಗೂ ನವೆಂಬರ್ 30ರಂದು ಮಾರಿಕೊಂಡವರು ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಮರಾವತಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಕಿರಿಕ್ ಪಾರ್ಟಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರಪ್ರಶಸ್ತಿ ಪಡೆದುಕೊಂಡಿದೆ. ರಾಮರಾಮರೇ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಮದಿಪು (ತುಳು ಭಾಷೆ) ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಹಾಗೂ ಅತ್ಯುತ್ತಮ ತುಳು ಭಾಷಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಯೂ ಟರ್ನ್ ಚಲನಚಿತ್ರವು 2016ನೇ ಸಾಲಿನ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಮ ಚಲನಚಿತ್ರವು 2016ನೇ ಸಾಲಿನ ಪನೊರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಮಾರಿಕೊಂಡವರು ಚಲನಚಿತ್ರವು 2015ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರದರ್ಶನದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಚಲನಚಿತ್ರೋತ್ಸವ ಸಪ್ತಾಹದಲ್ಲಿ ಪ್ರದರ್ಶಿತವಾಗಲಿರುವ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸುವ ಮೂಲಕ ಜಿಲ್ಲೆಯ ನಾಗರಿಕರು ಚಿತ್ರೋತ್ಸವ ಯಶಸ್ವಿಗೆ ಸಹಕರಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.

ನ.24ರಂದು ನಗರದಲ್ಲಿ ಉದ್ಯೋಗ ಮೇಳ

ಚಾಮರಾಜನಗರ, ನ. 23:- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಖಾಸಗಿ ಕಂಪನಿಗಳಾದ ಫೋರ್ಟಿಸ್ ಆಸ್ಪತ್ರೆ, ಹಿಂದೂ ಗ್ಲೋಬಲ್ ಸಲ್ಯೂಷನ್ಸ್ ಪ್ರೈ. ಲಿ., ಯುರೇಕಾ ಫೋಬ್ರ್ಸ, ರಾಕ್ ಬಯೋಟೆಕ್, ತೇಜಸ್ವಿನಿ ಎಂಟರ್ ಪ್ರೈಸಸ್, ಎಲ್‍ಐಸಿ, ಎಕ್ಸೈಡ್ ಲೈಫ್ ಇನ್ಯೂರೆನ್ಸ್ ಮತ್ತು ಆರ್ ಪ್ರೋಸಸ್ ಔಟ್ ಸೊರ್ನಸಸಿಂಗ್ ಸರ್ವೀಸ್ ಸಹಯೋಗದೊಂದಿಗೆ ನವೆಂಬರ್ 24ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ)ದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ ಹಾಗೂ ಬಿಎಸ್ಸಿ ನರ್ಸಿಂಗ್ (ಎಎನ್‍ಎಂ, ಜಿಎನ್‍ಎಂ) ವಿದ್ಯಾಹರ್Àತೆಯುಳ್ಳ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಅಭ್ಯರ್ಥಿಗಳು ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿಯವರನ್ನು (ದೂರವಾಣಿ ಸಂಖ್ಯೆ 08226-224430) ಸಂಪರ್ಕಿಸÀುವಂತೆ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ

ಚಾಮರಾಜನಗರ, ನ. 23 - ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಸಿದ್ಧಪಡಿಸಿರುವುದನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿ ಪರಿಶೀಲನೆಗೆ ಲಭ್ಯವಿರುತ್ತದೆ.
ಮತದಾರರ ಪಟ್ಟಿ ತಯಾರಿಕೆಗೆ ದಿನಾಂಕ 1.1.2017 ಅರ್ಹತಾ ದಿನಾಂಕವಾಗಿದೆ. ಈ ಅರ್ಹತಾ ದಿನಾಂಕದಂತೆ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಯಾವುದಾದರೂ ಕ್ಲೇಮುಗಳಿದ್ದಲ್ಲಿ ನಮೂನೆ 19ರಲ್ಲಿ ಅಥವಾ ಹೆಸರು ಸೇರಿಸಲು ಆಕ್ಷೇಪಣೆಗಳಿದ್ದಲ್ಲಿ ಅಥವಾ ಯಾವುದೇ ನಮೂದುಗಳ ವಿವರದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅಂತಹವುಗಳನ್ನು ಇದೇ ಡಿಸೆಂಬರ್ 21ರೊಳಗೆ ಚುನಾವಣಾ ಆಯೋಗವು ನಿಗದಿಪಡಿಸಿದ ನಮೂನೆಯಲ್ಲಿ ಸಲ್ಲಿಸಬಹುದಾಗಿದೆ.
ಪ್ರತಿಯೊಂದು ಕ್ಲೇಮು ಮತ್ತು ಆಕ್ಷೇಪಣೆಗಳನ್ನು ಸಹಾಯಕ ಮತದಾರರ ನೊಂದಣಾಧಿಕಾರಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರ್ ಕಚೇರಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಡಿಸೆಂಬರ್ 21ರೊಳಗೆ ತಲುಪಿಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಮತದಾರರ ನೋಂದಣಾಧಿಕಾರಿಯಾಗಿರುವ ಜಯಂತಿ ಅವರು ತಿಳಿಸಿದ್ದಾರೆ.

                                                                                             
                                                                                                                                     

ನವೆಂಬರ್ 24 ರಂದು ಬೆಳೆ ಸಮೀಕ್ಷೆ ಕಾರ್ಯಾಗಾರ: ಸಮಯ ಬದಲು

ಚಾಮರಾಜನಗರ, ನ. 23 - ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ದತ್ತಾಂಶವನ್ನು ಸ್ವತಃ ರೈತರೆ ಅಳವಡಿಸುವ ಕುರಿತು ತರಬೇತಿ ಶಿಬಿರವು ರೈತರಿಗಾಗಿ ಜಿಲ್ಲಾಧಿಕಾರಿ ಬಿ.ರಾಮು ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 24 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿ ಆರಂಭವಾಗಲಿದೆ.
     ಈ ಹಿಂದೆ 10.30ಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಅನಿವಾರ್ಯ ಕಾರಣದಿಂದ 11.30 ಗಂಟೆಗೆ ತರಬೇತಿ ಶಿಬಿರ ಆರಂಭವಾಗಲಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು ಭಾಗವಹಿಸಿ ಮೊಬೈಲ್ ಆ್ಯಪ್ ಬಗ್ಗೆ ಮಾಹಿತಿ ಪಡೆದು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ನ. 24ರಿಂದ ನಗರದಲ್ಲಿ ಚಿತ್ರೋತ್ಸವ : ನಾಗರಿಕರಿಗೆ ಉಚಿತವಾಗಿ ಕನ್ನಡ ಸಿನಿಮಾಗಳ ವೀಕ್ಷಣೆಗೆ ಅವಕಾಶ


ಚಾಮರಾಜನಗರ, ನ. 22 - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಕನ್ನಡ ಚಿತ್ರ ರಸಿಕರಿಗೆ ಕನ್ನಡ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ನವೆಂಬರ್ 24 ರಿಂದ 30ರವರೆಗೆ ನಗರದಲ್ಲಿ ಲಭಿಸಲಿದೆ.
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರದರ್ಶನದ ಚಿತ್ರೋತ್ಸವ ಸಪ್ತಾಹವು ನವೆಂಬರ್ 24 ರಿಂದ 30ರವರೆಗೆ ನಗರದ ಸಿಂಹ ಮೂವಿ ಪ್ಯಾರಡೈಸ್‍ನಲ್ಲಿ ಏರ್ಪಾಡಾಗಿದೆ.
ನವೆಂಬರ್ 24 ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ (ಬೆಳಗಿನ ಆಟ) ಚಲನಚಿತ್ರಗಳ ಪ್ರದರ್ಶನ ನಡೆಯಲಿದ್ದು ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಅವಕಾಶ ಇರಲಿದೆ.
ನವೆಂಬರ್ 24ರಂದು ಅಮರಾವತಿ, ನವೆಂಬರ್ 25ರಂದು ಕಿರಿಕ್ ಪಾರ್ಟಿ, ನವೆಂಬರ್ 26ರಂದು ರಾಮ ರಾಮ ರೇ, ನವೆಂಬರ್ 27ರಂದು ಮದಿಪು (ತುಳು ಭಾಷೆ), ನವೆಂಬರ್ 28ರಂದು ಯೂ ಟರ್ನ್, ನವೆಂಬರ್ 29ರಂದು ಅಲ್ಲಮ ಹಾಗೂ ನವೆಂಬರ್ 30ರಂದು ಮಾರಿಕೊಂಡವರು ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಮರಾವತಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಕಿರಿಕ್ ಪಾರ್ಟಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರಪ್ರಶಸ್ತಿ ಪಡೆದುಕೊಂಡಿದೆ. ರಾಮರಾಮರೇ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಮದಿಪು (ತುಳು ಭಾಷೆ) ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಹಾಗೂ ಅತ್ಯುತ್ತಮ ತುಳು ಭಾಷಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಯೂ ಟರ್ನ್ ಚಲನಚಿತ್ರವು 2016ನೇ ಸಾಲಿನ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಮ ಚಲನಚಿತ್ರವು 2016ನೇ ಸಾಲಿನ ಪನೊರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಮಾರಿಕೊಂಡವರು ಚಲನಚಿತ್ರವು 2015ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರದರ್ಶನದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಚಲನಚಿತ್ರೋತ್ಸವ ಸಪ್ತಾಹದಲ್ಲಿ ಪ್ರದರ್ಶಿತವಾಗಲಿರುವ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸುವ ಮೂಲಕ ಜಿಲ್ಲೆಯ ನಾಗರಿಕರು ಚಿತ್ರೋತ್ಸವ ಯಶಸ್ವಿಗೆ ಸಹಕರಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.
                                                                                       
 

ಸಹಕಾರ ಡಿಪ್ಲೊಮಾ ಕೋರ್ಸ್ ಪ್ರವೆಶಕ್ಕೆ ಅರ್ಜಿ ಆಹ್ವಾನ


ಚಾಮರಾಜನಗರ, ನ. 22- ಜಿಲ್ಲೆಯ ಸಾಮಾನ್ಯ ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಸಹಕಾರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಅಹ್ವಾನಿಸಲಾಗಿದೆ. 
    ಜನವರಿಯಲ್ಲಿ ಪ್ರಾರಂಭವಾಗುತ್ತಿರುವ 6 ತಿಂಗಳ ಅವಧಿಯ ಡಿಪ್ಲೊಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್ ತರಬೇತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
     ಈ ತರಬೇತಿಯು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್, ಅಫೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಹಾಲು ಓಕ್ಕೂಟ ಮತ್ತು ಇತರೆ ಎಲ್ಲಾ ರೀತಿಯ ಸಹಕಾರ ಸಂಘ ಹಾಗೂ ಬ್ಯಾಂಕ್‍ಗಳಲ್ಲಿನ ಉದ್ಯೋಗ ನೇಮಕಾತಿಗೆ ಕಡ್ಡಾಯವಾಗಿರುತ್ತದೆ. ಈ ಕೋರ್ಸ್‍ನ ಪಠ್ಯಕ್ರಮವು ಕೆ.ಎ.ಎಸ್. ಪರೀಕ್ಷೆಯ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಮತ್ತು ಸಹಕಾರ ಇಲಾಖೆಯ ಕೋ- ಆಪರೇಟಿವ್ ಇನ್ಸ್‍ಸ್ಪೆಕ್ಟರ್ ಹುದ್ದೆ ಹಾಗೂ ಇನ್ನಿತರ ಹುದ್ದೆ ನೇಮಕಾತಿ ಪರೀಕ್ಷೆಗಳಿಗೆ ಪೂರಕವಾಗಿರುತ್ತದೆ.
    ಕನಿಷ್ಟ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ ಆಗಿದ್ದು, ಪ್ರವೇಶ ಪಡೆದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ ರೂ. 500 ಹಾಗೂ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಮಾಸಿಕ ರೂ. 400 ಶಿಷ್ಯ ವೇತನ ನೀಡಲಾಗುವುದು
    ಸಹಕಾರ ಭವನ, ಚಾಮರಾಜ ಜೋಡಿ ರಸ್ತೆ, ಮೈಸೂರು. ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ನವೆಂಬರ್ 30 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು  ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ಮೈಸೂರು ದೂರವಾಣಿ ಸಂಖ್ಯೆ 0821-2520563 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.23ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ


ಚಾಮರಾಜನಗರ, ನ. 22 - ತಾಲ್ಲೂಕಿನ  ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2017-18 ನೇ ಸಾಲಿನ 3ನೇ ತ್ರೈಮಾಸಿಕ ನಿರ್ವಹಣ ಕಾರ್ಯವನ್ನು ನವೆಂಬರ್ 23 ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಹೊನ್ನೂರು, ಸಂತೇಮರಳ್ಳಿ, ನವಿಲೂರು, ಆಲ್ದೂರು, ಅಂಬಳೆ, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ದುಗ್ಗಟ್ಟಿ, ಮತ್ತು ಚಂಡೀಪುರ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಇದರಿಂದ ಸಾರ್ವಜನಿಕರು ಚಾಮುಂಡೇಶ್ವರಿ  ವಿದ್ಯುತ್ ಸರಬರಾಜು ನಿಗಮದ ಜೊತೆ ಸಹಕರಿಸಲು  ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕಪ್ಪು ಬಿಳುಪು ಬಣ್ಣದ ಕಾಗದದಲ್ಲಿ ಪಹಣಿ ವಿತರಣೆ: ಜಿಲ್ಲಾಧಿಕಾರಿ ಸ್ವಷ್ಟನೆ

   ಚಾಮರಾಜನಗರ, ನ. 22 - ಸಾರ್ವನಿಕರಿಗೆ ಪಹಣಿಯನ್ನು ಕಪ್ಪು ಬಿಳುಪು ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಸ್ವಷ್ಟಪಡಿಸಿದ್ದಾರೆ.
          ಕಂದಾಯ ಇಲಾಖೆಯಿಂದ ರೈತರಿಗೆ, ಸಾರ್ವಜನಿಕರಿಗೆ ಗಣಕೀಕೃತ ಪಹಣಿಗಳನ್ನು ವಿತರಿಸುವ ಸೌಲಭ್ಯವನ್ನು 2001ರಿಂದ ಜಾರಿಗೆ ತರಲಾಗಿದೆ. ಸರ್ಕಾರವು ಪ್ರಸ್ತುತ ಟೆಂಡರ್‍ದಾರರಿಂದ ನೀಲಿ ಬಣ್ಣದ ಪೂರ್ವಮುದ್ರಿತ ಪಹಣಿ ನಮೂನೆಯನ್ನು ಟೆಂಡರ್‍ದಾರರಿಂದ ಪಡೆದು ಸದರಿ ನಮುನೆಯಲ್ಲಿ ಭೂಮಿ ಡಾಟಾ ಬೇಸ್‍ನಿಂದ ಪಹಣಿಯ ಮಾಹಿತಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಪಹಣಿ ಪತ್ರ ಮುದ್ರಿಸಲು ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರ್ಕಾರವು ಸರಬರಾಜುದಾರ ಮೇಲೆ ಸಂಪೂರ್ಣವಾಗಿ ಅವಲಂಭಿತವಾಗಿತ್ತು. ಇದರಿಂದ ರೈತರಿಗೆ ಪಹಣಿಗಳ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಅಂದರೆ ಬ್ಯಾಂಕ್‍ಗಳಿಂದ ಅಥವಾ ಯಾವುದಾದರೂ ಸಂಸ್ಥೆಯಿಂದ ಸಾಲ ಪಡೆಯಲು, ಸರ್ಕಾರದಿಂದ ಪರಿಹಾರ ಪಡೆಯುವಾಗ ಬೆಳೆವಿಮೆಗಾಗಿ ಪೂರ್ವ ಮುದ್ರಿತ ಪಹಣಿ ನಮೂನೆಯ ಸರಬರಾಜಿನಲ್ಲಿ ಸ್ವಲ್ಪ ವಿಳಂಬವಾದರೂ ಸಹ ನಿಗದಿತ ಸಮಯದಲ್ಲಿ ರೈತರು ಅಥವಾ ಸಾರ್ವಜನಿಕರು ಪಹಣಿಯನ್ನು ಪಡೆಯಲು ಕಷ್ಟವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸದರಿ ತೊಂದರೆಯನ್ನು ಅರಿತ ಸರ್ಕಾರವು ಪೂರ್ವ ಮುದ್ರಿತ ಪಹಣೆ ನಮೂನೆಗಾಗಿ ಸರಬರಾಜುದಾರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ತಂತ್ರಾಂಶದಲ್ಲಿಯೇ ಕಪ್ಪು ಬಿಳುಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ ಪಹಣಿಯನ್ನು ಮುದ್ರಿಸಲು ಕ್ರಮ ಕೈಗೊಂಡಿದೆ. ಸದರಿ ಕಪ್ಪು ಬಿಳುಪು ಗಾತ್ರದ ಪಹಣಿಯಲ್ಲಿ ಈ ಹಿಂದೆ ನೀಡುತ್ತಿದ್ದ ಪಹಣಿಯಲ್ಲಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಾದ ವಿಶೇಷ ಪಹಣಿ ಗುರುತಿನ ಸಂಖ್ಯೆ, ಕ್ರಮ ಸಂಖ್ಯೆ, ಬಾರ್ ಕೋಡ್, ಡಿಜಿಟಲ್ ಸಹಿಗಳನ್ನು ಒಳಗೊಳಡಿರುತ್ತದೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರತ್ತದೆ. ಆದರಿಂದ ಕಪ್ಪು ಬಿಳುಪು ಬಣ್ಣದ ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ.
       ಆದುದರಿಂದ ಸಾರ್ವಜನಿಕರು ಈ ಬದಲಾಣೆಯನ್ನು ಗಮನದಲ್ಲಿರಿಸಿಕೊಂಡು ಯಾವುದೇ ಗೊಂದಲಕ್ಕೊಳಕಾಗಾಗದೇ ತಾಲ್ಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ, ಅಟಲ್‍ಜೀ ಜನ ಸ್ನೇಹಿ ಕೇಂದ್ರಗಳಲಿ,್ಲ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ಸರ್ಕಾರದ ಪಹಣಿ ವಿತರಿಸಲು ಅನುಮತಿ ನೀಡಿರುವ ಖಾಸಗಿ ಕೇಂದ್ರಗಳಲ್ಲಿ ವಿತರಿಸುವ ಪಹಣಿ ಪತ್ರಗಳನ್ನು ಪಡೆದು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳಬೇಕು.
      ಪಹಣಿಯನ್ನು ನಿಗದಿತ ಸಮಯಕ್ಕೆ ಪಡೆಯಲು ಅನುಕೂಲವಾಗುವಂತೆ ಸಾರ್ವನಿಕರ ಹಿತದೃಷ್ಠಿಯಿಂದ ಪಹಣೆಯಲ್ಲಿ ಈ ಬದಲಾವಣೆಯನ್ನು ತರಲಾಗಿದೆ. ಪಹಣಿಯ ನೈಜತೆಯನ್ನು ತಿತಿತಿ.ಟಚಿಟಿಜಡಿeಛಿoಡಿಜs.ಞಚಿಡಿಟಿಚಿಣಚಿಞಚಿ.gov.iಟಿ ವೆಬ್- ಸೈಟ್‍ನಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.25 ರಂದು ನೇರ ಫೋನ್ ಇನ್ ಕಾರ್ಯಕ್ರಮ


ಚಾಮರಾಜನಗರ, ನ. 22 - ಜಿಲ್ಲೆಯ ನಾಗರಿಕರ ಕುಂದು ಕೊರತೆಗಳನ್ನು ಅಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ 25 ರಂದು ಬೆಳಿಗ್ಗೆ 10ರಿಂದ 11ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
    ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 08226-224888ಕ್ಕೆ ಕರೆ ಮಾಡಿ ತಮ್ಮ ಕುಂದು ಕೊರತೆಯನ್ನು ತಿಳಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ: ವಸತಿ ಯೋಜನೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ


ಚಾಮರಾಜನಗರ, ನ. 22- ಕೊಳ್ಳೇಗಾಲ ನಗರ ಸಭೆ ವ್ಯಾಪ್ತಿಯಲ್ಲಿ 2017-18ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೇಜನೆಯಡಿ ಮನೆ ನಿರ್ಮಿಸಿಕೊಳ್ಳಲು ಹಿಂದುಳಿದ ವರ್ಗಗಳ ಅರ್ಹ ಮಹಿಳಾ ಫಲಾನುಭವಿಗಳಿಗೆ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಆಸಕ್ತರು ನವೆಂಬರ್ 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಪೌರಾಯುಕ್ತರ ಕಚೇರಿಯ ಸಂಬಂಧಪಟ್ಟ ಶಾಖೆಯಲ್ಲಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ : ಹೆಸರು ನೊಂದಾಯಿಸಲು ಅವಕಾಶ


ಚಾಮರಾಜನಗರ, ನ. 2- ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯನ್ನು ಪ್ರಸಕ್ತ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಹೋಬಳಿ, ಗ್ರಾಮಮಟ್ಟದಲ್ಲಿ  ಅನುಷ್ಠಾನಗೊಳಿಸಲಾಗುತ್ತಿದೆ.
 ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ಮುಸುಕಿನ ಜೋಳ, ರಾಗಿ, ಈರುಳ್ಳಿ, ಟೊಮೆಟೊ, ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಮುಸುಕಿನ ಜೋಳ, ರಾಗಿ, ಕಡಲೆ, ಹೆಸರು, ಹುರುಳಿ ಬೆಳೆ  ಬೇಸಿಗೆ ಹಂಗಾಮಿಗೆ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ರಾಗಿ, ಈರುಳ್ಳಿ, ಟೊಮೆಟೊ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ವಿಮೆಗೆ ಒಳಪಡಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕುಗಳಲ್ಲಿ ಮಳೆಯಾಶ್ರಿತ ಹುರುಳಿ ಬೆಳೆಯನ್ನು ವಿಮೆಗೆ ಅಧಿಸೂಚಿಸಿದೆ.
ಹಿಂಗಾರು ಹಂಗಾಮಿಗೆ ಮಳೆಯಾಶ್ರಿತ ಹುರುಳಿ, ಮುಸುಕಿನ ಜೋಳ ಮತ್ತು ನೀರಾವರಿ ಆಶ್ರಿತ ಮುಸುಕಿನ ಜೋಳ, ಈರುಳ್ಳಿ, ಟೊಮೆಟೊ ಬೆಳೆಗೆ ನೊಂದಾಯಿಸಲು ನವೆಂಬರ್ 30 ಕಡೆದಿನವಾಗಿದೆ. ಹಿಂಗಾರು ಹಂಗಾಮಿಗೆ ಮಳೆಯಾಶ್ರಿತ ಹೆಸರು, ಕಡಲೆ, ರಾಗಿಗೆ ಡಿಸೆಂಬರ್ 15 ಮತ್ತು ನೀರಾವರಿ ಆಶ್ರಿತ ಭತ್ತ, ರಾಗಿ ಬೆಳೆಗೆ ನೊಂದಾಯಿಸಲು ಡಿಸೆಂಬರ್ 30ರಂದು ಕಡೆಯ ದಿನ.
ಬೇಸಿಗೆ ಹಂಗಾಮಿನ ನೀರಾವರಿ ಆಶ್ರಿತ ಈರುಳ್ಳಿ, ಭತ್ತ, ರಾಗಿ ಮತ್ತು ಟೊಮೆಟೊ ಬೆಳೆಗಳಿಗೆ ನೊಂದಾಯಿಸಲು 2018ರ ಫೆಬ್ರವರಿ 28ರಂದು ಅಂತಿಮ ದಿನವಾಗಿದೆ.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀತಿಯಂತಹ ದಾಖಲೆಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಪ್ರಶಸ್ತಿ ಬಹುಮಾನಕ್ಕೆ ಅರ್ಜಿ ಆಹ್ವಾನ


ಚಾಮರಾಜನಗರ, ನ. - ಕೃಷಿ ಇಲಾಖೆಯು ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಲು ಶ್ರಮ ಮತ್ತು ಸಕ್ರಿಯ ಪಾಲುಗಾರಿಕೆಗೆ ಕಾರಣರಾದ ರೈತರನ್ನು ಗುರುತಿಸಲು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಬಹುಮಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಭಾಗವಹಿಸುವ ರೈತರು ನವೆಂಬರ್ 30ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ 100 ರೂ. ಹಾಗೂ ಪರಿಶಿಷ್ಟ ಜಾತಿ, ವರ್ಗದ ರೈತರಿಗೆ 25 ರೂ. ಸ್ವರ್ಧ ಶುಲ್ಕ ನಿಗದಿ ಮಾಡಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಿದ್ದು ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ಲಭಿಸಲಿದೆ.  ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ. ಹಾಗೂ ತೃತೀಯ ಬಹುಮಾನ 15 ಸಾವಿರ ರೂ. ಲಭಿಸಲಿದೆ. 
ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿಪಡಿಸಿದ ಬೆಳೆಗಳಲ್ಲಿ ಮಾತ್ರ ಸ್ಪರ್ಧೆ ಏರ್ಪಡಿಸಿ ಅರ್ಜಿ ಸ್ವೀಕರಿಸಲಾಗುವುದು. ಸಮಿತಿ ನಿಗದಿಪಡಿಸುವ ಒಂದು ಬೆಳೆಯಲ್ಲಿ ಮಾತ್ರ ಸ್ಪರ್ಧೆ ನಡೆಸಲಾಗುತ್ತದೆ.
 ಬೆಳೆ ಸ್ಪರ್ಧೆಗೆ ನೊಂದಾಯಿಸಲು ರೈತರು ಅರ್ಜಿಯೊಂದಿಗೆ ಪಹಣಿ, ಶುಲ್ಕ ಪಾವತಿ ಚಲನ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರವನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಟಣೆಯಲ್ಲಿ ತಿಳಿಸಿದ್ದಾರೆ.

             




01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು