ಸಿ.ಸಿ.ಕ್ಯಾಮೆರಾಗಳಿದ್ದರೂ ಪ್ರೇಮಿಗಳ ಅಡ್ಡೆಯಾದ ಚಾಮರಾಜೇಶ್ವರ ದೇವಾಲಯ.!ಮುತ್ತು ಕೊಡ್ತಾರೆ, ಹುಟ್ಟು ಹಬ್ಬ ಮಾಡಿಕೊಳ್ತಾರೆ, ಬಿಟ್ರೆ ಮುಂದೆ ಏನೇನೋ ಮಾಡ್ತಾರೆ.!
ವರದಿ ಎಸ್.ವೀರಭದ್ರಸ್ವಾಮಿ.ರಾಮಸಮುದ್ರ
ಚಾಮರಾಜನಗರ: ಪ್ರೇಮಿಸಲು ಪ್ರೇಮಿಗಳಿಗೆ ಪಾರ್ಕ್, ಹೊಟೇಲ್‍ಗಳು ಕೇಂದ್ರವಾಗಿದದ್ದು ಒಂದೆಡೆಯಾದರೆ, ಈಗ ಸದಾ ಭಯ, ಶ್ರದ್ದಾ ಭಕ್ತಿ ಮೂಡಿಸುತ್ತಿದ್ದ ಕೇಂದ್ರಗಳಲ್ಲಿ ಒಂದಾದ ದೇವಾಲಯಗಳಿಗೆ ಪ್ರೇಮಿಗಳು ಈಗ ದೇವಾಲಯಗಳಿಗೆ ಲಗ್ಗೆ ಇಟ್ಟಿರುವುದರಿಂದ ಭಕ್ತಾಧಿಗಳಲ್ಲಿ ಕಿರಿಕಿರಿಯ ಜೊತೆ ಮುಜುಗರವನ್ನು ಉಂಟುಮಾಡಲಾರಂಭಿಸಿದೆ.
ಚಾಮರಾಜನಗರದ ಹೆಸರಾಂತ ದೇವಾಲಯಗಳಲ್ಲಿ ಒಂದಾದ ಚಾಮರಾಜೇಶ್ವರ ದೇವಾಲಯದಲ್ಲಿ ಬಣ್ಣ ಬಣ್ಣದ ಕಲರವಗಳು ಅಂದರೆ ಪ್ರೇಮಿಗಳು ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಪ್ರತಿನಿತ್ಯ ಅರ್ಚಕರು ಬರುತ್ತಾರೋ ಬಿಡುತ್ತಾರೋ ಆದರೆ ಪ್ರೇಮಿಗಳು ಮಾತ್ರ ತಪ್ಪಿಸಿಕೊಳ್ಳೋದೇ ಇಲ್ಲ. ಪ್ರತಿನಿತ್ಯ ಮಾಢೊ ಕೆಲಸವನ್ನು ನಿಲ್ಲಿಸೋದು ಇಲ್ಲ.ಸೋಮವಾರದಿಂದ ಶನಿವಾರದವರೆಗೆ ಕಾಲೇಜಿಗೆಂದು ಬಂದವರು ಮುಂಜಾನೆಯೇ 7 ರ ಸಮಯದಲ್ಲಿ ಪುಸ್ತಕ ಹಿದಿಡು ಬಂದವರು ಹೊಗೋದೇ 9 ಗಂಟೆಗೆ, ಅಷ್ಟೇ ಅಲ್ಲ ಭಾನುವಾರವೂ ಸಹ ರಜೆ ಇದ್ದರೂ ಬರುವುದು ಕೆಲವೊಮ್ಮೆ ಸಹಜವಾಗಿದೆ. ಇತ್ತ ಇದೇ ಸೂಕ್ತ ಸ್ಥಳ ಎಂದು ಹುಡುಗಿಯರನ್ನೇ ಹಿಂಬಾಲಿಸಿಕೊಂಡು ಬಂದು ಹುಡುಗರು ಕುಳಿತುಕೊಳ್ಳುತ್ತಾರೆ. ಇದರಿಂದ ಮತ್ತೇ ಕೆಲವರು ಇದರ ದುರುಪಯೋಗವನ್ನು ಮಾಡಿಕೊಳ್ಳುವುದರಿಂದ ಅವರವರ ನಡುವೆ ಗಲಾಟೆ ಘರ್ಷಣೆಗಳು ನಡೆದಿದೆ ಎನ್ನುತ್ತಾರೆ ಅಲ್ಲಿಗೆ ಬಂದ ಭಕ್ತಾದಿಯೋರ್ವರು.
ಈ ಬಗ್ಗೆ ದೇವಾಲಯದಲ್ಲಿರುವ ವ್ಯಕ್ತಿಯೊರ್ವನನ್ನು ಕೇಳಲಾಗಿ ನಾವು ಓದಲಿಕ್ಕಾಗಿಯೇ ಪ್ರತಿನಿತ್ಯ ಇಲ್ಲಿಗೆ ಬರುತ್ತೇವೆ ಎನ್ನುವ ಇವರನ್ನು ಪ್ರಶ್ನಿಸಿಸಿದರೆ ನಮ್ಮ ಜೊತೆಯಲ್ಲಿರುವವರು ನಮ್ಮ ಸಂಬಂಧಿ ಎನ್ನುತ್ತಾರೆ. ನಾವು ಏನು ಮಾಡಬೇಕೆಂಬುದು ನಮಗೆ ತಿಳಿಯುತ್ತಿಲ್ಲ ಎನ್ನುತ್ತಾರೆ. ಪ್ರೇಮಿಗಳ ಈ ವರ್ತನೆ ಪೂಜೆಗೆಂದು ಬರುವವರಿಗೆ ಮಾನಸಿಕ ನೆಮ್ಮದಿಯ ಜೊತೆ, ಕಿರಿಕಿರಿಯನ್ನು ತಂದಿದೆ.
ಇದರ ಬಗ್ಗೆ ಕೇಳಿದರೆ ಇವೆಲ್ಲ ನಮಗೇಕೆ? ಎಂದು ಗೊತ್ತಿದ್ದು ಗೊತ್ತಿಲ್ಲದ್ದಂತೆಯೇ ಸುಮ್ಮನಿರುವ ನಮ್ಮ ದೇವಾಲಯದ ಆಡಳಿತ ಮಂಡಳಿಯಾಗಲೀ, ಮುಜರಾಯಿ ಇಲಾಖೆಯ ಅಧಿಕಾರಿಗಳಾಗಲೀ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿ ಸಿ.ಸಿ ಕ್ಯಾಮೆರಾಗಳಿದ್ದರೂ ಬರುತ್ತಿರುವ ಪ್ರೇಮಿಗಳ ಚಿತ್ರಗಳನ್ನು ಚಿತ್ರೀಕರಣವಾಗಿದ್ದ ದೃಶ್ಯಗಳನ್ನು ದೇವಾಲಯದ ಒಳಗೆ ಮುದ್ರಿಸಿ ಹಾಕಿದರೆ ಬಹುಶಃ ಕಡಿವಾಣವಾಗಬಹುದೇನೋ ಎನ್ನುತ್ತಾರೆ ಕೆಲವರು.
ಇತ್ತೀಚೆಗೆ ನಂಜನಗೂಡಿನ ದೇವಾಲಯವೊಂದರಲ್ಲಿ ವಿಡಿಯೋ ವೈರಲ್ ಆದಂತೆ ಚಾಮರಾಜನಗರದಲ್ಲೂ ಯುವಕರು, ದೇವಾಲಯದಲ್ಲಿ ಇಂಹತ ಘಟನೆ ಘಟಿಸಿದರೆ ಮುಲಾಜಿಲ್ಲದೆ ಹರಿಯಬಿಡುತ್ತೇವೆ ಎಂದು ಹರಿಯಬಿಡಲು ಕಾಯ್ದಿದ್ದಾರೆ ಯಾಮಾದರೆ ಅದಕ್ಕೆ ನಾವು ಜವಬ್ದಾರರಾಗುವುದಿಲ್ಲ. ನಮಗೆ ದೇವಾಲಯದ ಪಾವಿತ್ರ್ಯತೆ ಬೇಕು. ಇಂತಹ ಮಾನಗೆಟ್ಟವರಿಂದ ನಮಗೇನು ಎನ್ನುತ್ತಿದ್ದಾರೆ. ಪಾಪ ಪೋಷಕರು ಮಕ್ಕಳು ಮುಗ್ದರು ಕಾಲೇಜಿಗೆ ಹೋಗಿವರುತ್ತಿದ್ದಾರೆ ಎಂದು ನಂಬಿರುವ ಮುಗ್ದ ಜೀವಿಗಳಿಗೆ ಶಾಕ್ ಕೊಡುವ ಜೊತೆಗೆ ಮಕ್ಕಳಿಗೂ ಶಾಕ್ ಕೊಟ್ಟರೂ ಅನುಮಾನವಿಲ್ಲ ಎಂಧರೆ ತಪ್ಪಾಗಲಾರದು.
ದೇವಾಲಯದಲ್ಲಿ ಇಂತಹ ತರಲೆ ತಾಪತ್ರಯಗಳ ತರಹದ ಘಟನೆಗಳು ಮುಂದುವರೆದದ್ದೇ ಆದರೆ ಮುಂದೆ ಸಂಭವಿಸುವ ಘಟನೆಗಳಿಗೆ ಮುಜರಾಯಿ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಹೊಣೆಯಾಗಬೇಕಾಗುತ್ತದೆ.
ಚಿತ್ರ: ಇದೆ.
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
No comments:
Post a Comment