Sunday, 18 November 2018

ಒಂದೇ ನಂಬರ್ ಪ್ಲೇಟ್‍ವುಳ್ಳ ಎರಡು ಲಾರಿ,


       ದಿನಾಂಕ: 14-11-2018 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಚಾಮರಾಜನಗರ        ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಿಗೆ ಠಾಣಾ ಸರಹದ್ದು, ಬಿಸಲವಾಡಿ ಗ್ರಾಮದಲ್ಲಿ      ಕೆ.ಎ 19-1497 ರ ಒಂದೇ ನಂಬರ್ ಪ್ಲೇಟ್‍ವುಳ್ಳ ಎರಡು ಲಾರಿಗಳು ನಿಂತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ಶ್ರೀ ರವಿಕಿರಣ್. ಎಸ್.ಎಸ್. ಪಿ.ಎಸ್.ಐ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆರವರು ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರುಗಳ ಜೊತೆ ದಾಳಿ ಮಾಡಿ ಕೆ.ಎ.-19-1497 ರ ಒಂದೇ ನಂಬರ್ ಪ್ಲೇಟ್‍ವುಳ್ಳ 02 ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆ ಕಾರ್ಯ ಕೈಗೊಂಡು ಪ್ರಕರಣದ ಆರೋಪಿಗಳಾದ ರವಿಕುಮಾರ ಬಿನ್ ಲೇಟ್ ಗಂಗಾಧರಪ್ಪ, 36 ವರ್ಷ, ಲಾರಿ ಚಾಲಕ, ಲಿಂಗಾಯಿತ ಜನಾಂಗ, ಬಿಸಲವಾಡಿ ಗ್ರಾಮ, ಚಾಮರಾಜನಗರ ತಾಲ್ಲೋಕು, ಸಗೀರ್ ಅಹಮದ್ ಬಿನ್ ಲೇಟ್ ಅಬ್ದುಲ್ ರಜಾಕ್, 48 ವರ್ಷ, ಮುಸ್ಲಿಂ, ಲಾರಿಚಾಲಕ, ಮನೆ ನಂ. 2374, 22 ನೇ ಕ್ರಾಸ್, ಅಶೋಕ ರಸ್ತೆ, ಲಷ್ಕರ್ ಮೊಹಲ್ಲ, ಮೈಸೂರು. ಹಾಗೂ ಮಹಮದ್ ರಫೀಕ್ ಬಿನ್ ಲೇಟ್ ಅನ್ವರ್ ಪಾಷ, 31 ವರ್ಷ, ಮುಸ್ಲಿಂ, ವೆಲ್ಡಿಂಗ್ ಷಾಪ್‍ನಲ್ಲಿ ಕೆಲಸ, ಮನೆ ನಂ. 114, 14 ನೇ ಕ್ರಾಸ್, ಹೈದರಾಲಿ ಬ್ಲಾಕ್, ಗೌಸಿಯಾ ನಗರ, ಮೈಸೂರುರವರುಗಳನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳನ್ನು ಹಾಗೂ ಒಂದೇ ನಂಬರ್ ಪ್ಲೇಟ್‍ವುಳ್ಳ 02 ಲಾರಿಗಳನ್ನು ವಶಪಡಿಸಿಕೊಂಡಿರುತ್ತೆ. ಸರ್ಕಾರಕ್ಕೆ ತೆರಿಗೆ ವಂಚಿಸಲು ಕೃತ್ಯವೆಸಗಿರುವುದಾಗಿ ತನಿಖೆಯಿಂದ ದೃಢಪಟ್ಟಿರುತ್ತೆ.
ಚಾಮರಾಜನಗರ ತಾಲ್ಲೂಕು ಮಾದಲವಾಡಿ ಗ್ರಾಮದ ವಾಸಿ ಮಾದೇಗೌಡ ಬಿನ್ ಲೇಟ್ ಕರಿಯಗೌಡರವರ ಮನೆಯ ಬಾಗಿಲ ಬೀಗ ಒಡೆದು ಮನೆಯಲ್ಲಿ ಟ್ರಂಕ್‍ನಲ್ಲಿಟ್ಟಿದ್ದ 1,00,000/- ರೂ. ಹಾಗೂ ದಾಖಲಾತಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ದಾಖಲಾಗಿ ತನಿಖೆ ಕೈಗೊಂಡಿದ್ದು, ಈ ಪ್ರಕರಣವು ವರದಿಯಾದ 24 ಗಂಟೆಯೊಳಗೆ ಆರೋಪಿಗಳಾದ 1. ರವಿ ಬಿನ್ ಮಲ್ಲೇಗೌಡ, 30 ವರ್ಷ, ಕುರುಬ ಗೌಡ ಜನಾಂಗ, ವ್ಯವಸಾಯ, ಮಾದಲವಾಡಿ ಗ್ರಾಮ, ಚಾ|| ನಗರ ತಾಲ್ಲೂಕು. 2. ಗಿರಿಮಲ್ಲೇಗೌಡ ಬಿನ್ ಮಲ್ಲೇಗೌಡ 35 ವರ್ಷ, ಕುರುಬಗೌಡ ಜನಾಂಗ, ಮಾದಲವಾಡಿ ಗ್ರಾಮ ಚಾ|| ನಗರ ತಾಲ್ಲೂಕು ರವರುಗಳನ್ನು ದಸ್ತಗಿರಿ ಮಾಡಿ, ಅವರುಗಳಿಂದ ಕಳ್ಳತನ ಮಾಡಿದ್ದ 95,000/- ರೂ ನಗದು ಹಣ ಮತ್ತು ದಾಖಲಾತಿಗಳನ್ನು ವಶಪಡಿಸಿಕೊಂಡಿರುತ್ತೆ.

ಇತ್ತೀಚೆಗೆ ಪಣ್ಯದಹುಂಡಿ ಗ್ರಾಮದ ಶ್ರೀ ಗುರುರಾಜ ಕಲ್ಯಾಣಮಂಟಪದ ಮುಂದೆ ನಿಲ್ಲಿಸಿದ್ದ ಒಂದು ಮೋಟಾರ್ ಸೈಕಲ್ ಕೆಎ-09-ಎಎಕ್ಸ್-1355 ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾನ್ಯ ಡಿವೈ.ಎಸ್.ಪಿ. ಸಾಹೇಬರವರ ಉಪವಿಭಾಗ ಮಟ್ಟದ ಪತ್ತೆದಳ ಕಾರ್ಯೋನ್ಮುಖರಾಗಿ ಸುಹೇಲ್ ಅಹಮದ್ @ ಸುಹೇಲ್ ಬಿನ್ ರಿಯಾಜ್ ಅಹ್ಮದ್, 19 ವರ್ಷ, ಮುಸ್ಲಿಂ, ವೆಲ್ಡಿಂಗ್ ಕೆಲಸ, ಚಂದಕವಾಡಿ ಗ್ರಾಮ, ಚಾಮರಾಜನಗರ ತಾಲ್ಲೂಕು ಎಂಬುವವನನ್ನು ಚಾಮರಾಜನಗರದ ಶ್ರೀ ಸೂರ್ಯೋದಯ ಕಲ್ಯಾಣ ಮಂಟಪದ ಮುಂಭಾಗ ಅನುಮಾನಾಸ್ಪದವಾಗಿ ಮೋಟಾರ್ ಸೈಕಲ್‍ನಲ್ಲಿ ಬರುತ್ತಿದ್ದ ಆಸಾಮಿಯನ್ನು ಹಿಡಿದು ವಿಚಾರಿಸಲಾಗಿ ಆರೋಪಿಯು ತನ್ನ ಸಹಚರನಾದ ಸದ್ದಾಂ ಹುಸೇನ್ @ ಸದ್ದಾಂ ಎಂಬುವವನ ಜೊತೆ ಸೇರಿ ಮೋಟಾರ್ ಸೈಕಲ್‍ನ್ನು ಕಳ್ಳತನಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.  ಸದರಿ ಮೋಟಾರ್ ಸೈಕಲ್‍ನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 35,000/- ರೂ. ಆಗಿರುತ್ತದೆ.
ಮೂರೂ ಪ್ರಕರಣಗಳÀ ಪತ್ತೆ ಕಾರ್ಯದಲ್ಲಿ ಮಾನ್ಯ ಎಸ್.ಪಿ ಸಾಹೇಬರವರು ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು, ಚಾಮರಾಜನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಸೂಕ್ತ ಮಾರ್ಗದರ್ಶನದಲಿ, ಚಾಮರಾಜನಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಕೆ.  ರಾಜೇಂದ್ರ ರವರ  ನೇತೃತ್ವದಲ್ಲಿ   ಶ್ರೀ ರವಿಕಿರಣ್. ಎಸ್.ಎಸ್. ಪಿ.ಎಸ್.ಐ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ,     ಶ್ರೀ ಪುಟ್ಟಸ್ವಾಮಿ, ಪಿ.ಎಸ್.ಐ ಪೂರ್ವ ಪೊಲೀಸ್ ಠಾಣೆ ಹಾಗೂ ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಹಾಗೂ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ. ಜಯರಾಂ, ಬಿ.ಮಹದೇವ, ಶಾಂತರಾಜು, ಸೈಯದ್ ಹುಸೇನ್, ರಮೇಶ್ ಕುಮಾರ್, ಬಾಬು, ಜಿ.ಡಿ.ರವಿ, ಕುಮಾರಸ್ವಾಮಿ, ಕಿಶೋರ, ಚಂದ್ರ, ಗಿರೀಶ, ಚಿನ್ನಸ್ವಾಮಿ, ಮಂಜುನಾಥ, ಲಿಂಗರಾಜು, ಜಗದೀಶ, ಎನ್.ಮಹದೇವಸ್ವಾಮಿ, ಸೈಯದ್ ಮಹಮ್ಮದ್ ರಫೀ, ಜಿ.ಮಹದೇವಸ್ವಾಮಿ, ಪ್ರದೀಪ್.ಕೆ.ಎಸ್., ಕುಮಾರ, ಮತ್ತು ಜಗದೀಶ ರವರು ಭಾಗವಹಿಸಿದ್ದು, ಮಾನ್ಯ ಎಸ್.ಪಿ. ಸಾಹೇಬರವರು ಸದರಿ ಪತ್ತೆ ಕಾರ್ಯದ ಬಗ್ಗೆ ಶ್ಲಾಘಿಸಿರುತ್ತಾರೆ.

x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು