ನಗರ ಸ್ಥಳೀಯ ಸಂಸ್ಥೆ ಮೂಲಸೌಕರ್ಯ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ.
ಚಾಮರಾಜನಗರ, ಸೆ. 18 :- ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಹನೂರು ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಆರಂಭವಾಗಿ ಸಾಕಷ್ಟು ಸಮಯವಾಗಿದೆ ಆದರೂ ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ಇದರಿಂದ ನಾಗರಿಕರಿಗೂ ತೊಂದರೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ನಿಗಾವಹಿಸಬೇಕೆಂದು ಸಚಿವರು ತಿಳಿಸಿದರು.
ರಸ್ತೆ ಕಾಮಗಾರಿಗೆ ತೊಡಕು ನಿವಾರಣೆಯಾಗಿರುವ ಕಡೆ ಶೀಘ್ರವಾಗಿ ಕಾಮಗಾರಿ ಆರಂಭಿಸಬೇಕು. ಅಪೂರ್ಣ ಕೆಲಸವನ್ನು ಪೂರೈಸಬೇಕು. ನಗರಸಭೆ ಅಧಿಕಾರಿಗಳು ಹಾಗೂ ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮುಗಿಸಲು ಆದ್ಯತೆ ನೀಡಬೇಕು. ವಿಳಂಭವಾದರೆ ಸಹಿಸಲಾಗುವುದಿಲ್ಲ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ 50 ಕೋಟಿ ರೂ ವೆಚ್ಚದಲ್ಲಿ ಆರಂಭಿಸಿರುವ ಅಭಿವೃದ್ದಿ ಕಾಮಗಾರಿಗಳನ್ನು ಹೆಚ್ಚಿನ ಗಮನ ನೀಡಿ ನಿರ್ವಹಿಸಬೇಕು. ಮುಖ್ಯವಾಗಿ ಕೋರ್ಟ್‍ರಸ್ತೆ, ಡಾ:: ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ನಿರ್ಮಾಣ ಮಾಡಬೇಕು, ಖಾಸಗಿ ಬಸ್ ನಿಲ್ದಾಣದ ಅಭಿವೃದ್ದಿ ಕಾಮಗಾರಿಗಳನ್ನು ಸಹ ತ್ವರಿತವಾಗಿ ಪ್ರಗತಿ ಸಾಧಿಸಬೇಕು ಎಂದರು.
ನಗರೋತ್ಥಾನ 3ನೇ ಹಂತದ ಯೋಜನೆಯಡಿ ಈಗಾಗಲೇ ಆರಂಭಿಸಲಾಗಿರುವ ರಸ್ತೆ, ಚರಂಡಿ, ವಾಣಿಜ್ಯ ಸಂಕೀರ್ಣ ಮತ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಸಹ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಅನುದಾನ ಸಮಪರ್ಕವಾಗಿ ಬಳಕೆಯಾಗಬೇಕು. ಕೆಲವೆಡೆ ಆಡಚಣೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಂಡು ಕಾಮಗಾರಿ ಸಂಪೂರ್ಣಗೊಳಿಸಿ ಅನುಕೂಲ ಕಲ್ಪಿಸಬೇಕೆಂದು ಸಚಿವರು ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಯೋಜನೆ ಜಾರಿಗೆ ವಿಳಂಭ ಮಾಡಬಾರದು. ಎಸ್.ಎಫ್.ಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಅನುದಾನದಡಿ ಮಂಜೂರಾಗಿರುವ ಕಾಮಗಾರಿ ನಿರ್ವಹಣೆಯಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳು ನಿಧಾನಗತಿಯ ಧೋರಣೆ ಅನುಸರಿಸುತ್ತಿದೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನ ಅತ್ಯಂತ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆ ಕೆಲಸಗಳಿಗೆ ವಿಶೇಷ ಆಸಕ್ತಿವಹಿಸಿ ನಿಗಧಿತ ವೇಳೆಗೆ ಪೂರ್ಣಗೊಳಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ಡಾ:: ಬಿ.ಆರ್. ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ವಹಿಸಬೇಕು. ಇನ್ನೂ ಹಲವು ಸ್ಥಳೀಯ ಸಂಸ್ಥೆಗಳು ಪ್ರಗತಿಯಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಬಾಕಿ ಇರುವ ಮನೆಗಳನ್ನು ಫಲಾನುಭವಿಗಳಿಗೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ ಮೂಲಸೌಲಭ್ಯ ಕಾಮಗಾರಿ ನಿರ್ವಹಣೆಯಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಾಗಬಾರದು ಅಧಿಕಾರಿಗಳು ಹೊಣೆಗಾರಿಕೆಯಿಂದ ಗುಣಮಟ್ಟದ ಕೆಲಸಗಳನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪಾತ್ರವೂ ಸಹ ಪ್ರಮುಖವಾಗಿದೆ ಈ ಹಿನ್ನೆಲೆಯಲ್ಲಿ ಸಮಾರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಕಾರ್ಯಪಾಲಕ ಎಂಜಿನಿಯರ್, ಕೆ.ಎಂ. ರವಿಕುಮಾರ್, ನಗರಸಭೆ ಪೌರಾಯುಕ್ತರಾದ ಎಂ. ರಾಜಣ್ಣ, ಎಸ್.ಜಿ.ರಾಜಶೇಖರ್, ಪುರಸಭೆ, ಪಟ್ಟಣ ಪಂಚಾಯಿತಿಗಳಾದ ಎ.ರಮೇಶ್, ಎಸ್. ಉಮಾಶಂಕರ್ ಹಾಗೂ ಎಸ್.ಡಿ. ಮೋಹನ್‍ಕೃಷ್ಣ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಶೀಘ್ರವೇ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭ: ಆರ್. ಧ್ರುವನಾರಾಯಣ
ಚಾಮರಾಜನಗರ, ಸೆ. 19 :- ನಗರದ ಉಪ ವಿಭಾಗ ಅಂಚೆ ಕಚೇರಿಯಲ್ಲಿ ಶೀಘ್ರವೇ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ಆರಂಭವಾಗಲಿದೆ ಎಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ತಿಳಿಸಿದರು.
ನಗರದ ಉಪ ವಿಭಾಗ ಅಂಚೆ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಪಾಸ್‍ಪೆÇೀರ್ಟ್ ಸೇವಾ ಕೇಂದ್ರವನ್ನು ಆರಂಭಿಸುವ ಸಂಬಂಧ ಸಂಸದ ಆರ್. ಧ್ರುವನಾರಾಯಣ ಹಾಗೂ ಪಾಸ್‍ಪೆÇೀರ್ಟ್ ಉಪ ಪ್ರಾದೇಶಿಕ ಅಧಿಕಾರಿ ರಾಜೇಶ್ ನಾಯಕ್ ಅವರೊಡನೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಮೈಸೂರು ಮತ್ತು ಚಾಮರಾಜನಗರದಲ್ಲಿ ಪಾಸ್‍ಪೆÇೀರ್ಟ್ ಸೇವಾ ಕೇಂದ್ರವನ್ನು ಆರಂಭಿಸುವಂತೆ ಬಹಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ರಾಜೇಶ್‍ನಾಯಕ್ ಅವರು ಕನ್ನಡಿಗರೆ ಆಗಿರುವುದರಿಂದ ಅವರೊಡನೆ ಮಾತನಾಡಿ ನಗರದಲ್ಲೂ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ಆರಂಭಿಸುವಂತೆ ಮನವಿಗೆ ಸ್ಪಂದಿಸಿದ ಅವರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು ಎಂದರು.
ಅಷ್ಟು ಮಾತ್ರವಲ್ಲದೇ ಮೂರೇ ದಿನಗಳಲ್ಲಿ ಸ್ಥಳ ಪರಿಶೀಲನೆಗೆ ಬರುವುದಾಗಿ ತಿಳಿಸಿದರು. ಅವರು ಆಸಕ್ತಿ ವಹಿಸಿದ್ದರಿಂದ ಇಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಂಚೆ ಕಚೇರಿಯ ಆವರಣದಲ್ಲಿರುವ ಕಟ್ಟಡದಲ್ಲಿ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ಸ್ಥಾಪಿಸಲು ಸಮ್ಮತಿ ಸೂಚಿಸಿದ್ದಾರೆ. ಆ ಕಟ್ಟಡವನ್ನು ಸ್ವಲ್ಪ ಪ್ರಮಾಣದಲ್ಲಿ ನವೀಕರಣಗೊಳಿಸಿ ಸೇವಾಕೇಂದ್ರ ಆರಂಭಿಸಲಾಗುವುದು ಎಂದು ಲೋಕಸಭಾ ಸದಸ್ಯರು ತಿಳಿಸಿದರು.
ಪಾಸ್‍ಪೆÇೀರ್ಟ್ ಉಪ ಪ್ರಾದೇಶಿಕ ಅಧಿಕಾರಿ ರಾಜೇಶ್‍ನಾಯಕ್ ಅವರು ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿz್ದÉೀವೆ. ಇನ್ನೊಂದು ತಿಂಗಳಲ್ಲೇ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ಆರಂಭಿಸಲಾಗುವುದು. ಅಂಚೆ ಇಲಾಖೆಯ ಇಬ್ಬರು ಹಾಗೂ ಪಾಸ್‍ಪೆÇೀರ್ಟ್ ಇಲಾಖೆಯಿಂದ ಒಬ್ಬರು ಸಿಬ್ಬಂದಿ ಈ ಪಾಸ್ ಪೋರ್ಟ್ ಸೇವಾಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆ 9.30 ರಿಂದ ಸಂಜೆ 5.30ರವರೆಗೆ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ಕೆಲಸ ನಿರ್ವಹಿಸಲಿದೆ ಎಂದರು.
ಪಾಸ್‍ಪೆÇೀರ್ಟ್ ಸೇವಾಕೇಂದ್ರಗಳು ದೊಡ್ಡ ದೊಡ್ಡ ನಗರಕೇಂದ್ರೀಕೃತವಾಗಿವೆ. ಅದನ್ನು ಜಿಲ್ಲಾ ಮಟ್ಟದಲ್ಲಿ ಜನರ ಬಳಿ ಕೊಂಡೊಯ್ಯಬೇಕು ಎಂಬುದು ಭಾರತ ಸರ್ಕಾರದ ವಿದೇಶಾಂಗ ಇಲಾಖೆಯ ಉz್ದÉೀಶವಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ಸ್ಥಾಪಿಸಲಾಯಿತು. ಅಲ್ಲಿ ಜನರಿಂದ ಅಭೂತಪೂರ್ವ ಬೆಂಬಲ ದೊರಕಿತು. ಬೆಂಗಳೂರಿಗೆ ಹೋಗಬೇಕಾಗಿದ್ದ ವೃದ್ಧರು, ಮಕ್ಕಳು ಮೈಸೂರಿನಲ್ಲೇ ಪಾಸ್‍ಪೆÇೀರ್ಟ್ ಮಾಡಿಸಲು ಅವಕಾಶವಾಯಿತು. ಜನರಂದ ಮೆಚ್ಚುಗೆಯು ಸಹ ವ್ಯಕ್ತವಾಗಿದೆ. ಇದರಿಂದ ಪ್ರೇರಿತರಾಗಿ ರಾಜ್ಯದ 11 ಜಿಲ್ಲೆಗಳಲ್ಲಿ ಸೇವಾಕೇಂದ್ರ ತೆರೆಯಲಾಗಿದೆ ಎಂದರು.
ಅಂಚೆ ಇಲಾಖೆಯ ಸಹಯೋಗದಿಂದ ಮೂರನೇ ಹಂತದಲ್ಲಿ ಚಾಮರಾಜನಗರ, ಮಂಡ್ಯ, ಕೋಲಾರ ಸೇರಿದಂತೆ 7 ಸ್ಥಳಗಳಲ್ಲಿ ಪಾಸ್‍ಪೆÇೀರ್ಟ್ ಸೇವಾ ಕೇಂದ್ರ ಆರಂಭಿಸಲಾಗುತ್ತಿದೆ. ಇಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಗತ್ಯ ಸೌಲಭ್ಯಗಳು ಇಲ್ಲಿವೆ. ಅಂಚೆ ಇಲಾಖೆಯಿಂದ ನಮಗೆ ಉತ್ತಮ ಸ್ಪಂದನೆ ದೊರೆತಿದೆ. ಈ ಸೇವೆಯನ್ನು ಇನ್ನಷ್ಟು ವಿಕೇಂದ್ರೀಕರಣಗೊಳಿಸಲಾಗುವುದು ಎಂದು ನಾಯಕ್ ತಿಳಿಸಿದರು.
ಪಾಸ್‍ಪೆÇೀರ್ಟ್ ನೀಡಿಕೆ ಈಗ ಸರಳವಾಗಿದೆ. ಆಧಾರ್, ಪ್ಯಾನ್‍ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕಗಳನ್ನು ನೀಡಿ, ಅವುಗಳಲ್ಲಿರುವ ಮಾಹಿತಿ ಹೊಂದಾಣಿಕೆಯಾದರೆ ಒಂದು ವಾರದೊಳಗೇ ಪಾಸ್‍ಪೆÇೀರ್ಟ್ ದೊರಕುತ್ತದೆ ಎಂದು ಇದೇ ಸಂದರ್ಭದಲ್ಲಿ ರಾಜೇಶ್‍ನಾಯಕ್ ಅವರು ತಿಳಿಸಿದರು.
ನಂತರ ಸಂಸದರಾದ ಧ್ರುವನಾರಾಯಣ ಅವರು ಮಾತನಾಡಿ ನಂಜನೂಡು ವಿಭಾಗದಿಂದ ಪ್ರತ್ಯೇಕವಾಗಿ ಚಾಮರಾಜನಗರದಲ್ಲೇ ಅಂಚೆ ವಿಭಾಗೀಯ ಕಚೇರಿಯನ್ನು ಸ್ಥಾಪಿಸಲಾಗುತ್ತಿದೆ. ಕಟ್ಟಡ ಪರಿಶೀಲನೆ ನಡೆಸಲಾಗಿದೆ. ಶೀಘ್ರದಲ್ಲೇ ಜಿಲ್ಲಾಕೇಂದ್ರದಲ್ಲಿ ವಿಭಾಗೀಯ ಅಂಚೆ ಕಚೇರಿಯು ಸಹ ಆರಂಭವಾಗಲಿದೆ ಎಂದರು.
ನಂಜನಗೂಡು ವಿಭಾಗ ಅಂಚೆ ಅಧೀಕ್ಷಕಿ ಅಣ್ಣಾ ಲಕ್ಷ್ಮಿ, ಅಂಚೆ ಸಹಾಯಕ ಅಧೀಕ್ಷಕ ನರಸಿಂಹಮೂರ್ತಿ, ಉಪವಿಭಾಗ ಅಂಚೆ ನಿರೀಕ್ಷಕಿ ಸುಪ್ರಿಯಾ, ಪೆÇೀಸ್ಟ್ ಮಾಸ್ಟರ್ ವೆಂಕಟೇಶ್, ಅಂಚೆ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ಮಾನಸ್‍ಜಾರ್ಜ್, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ತಾ.ಪಂ. ಸದಸ್ಯ ಎಚ್.ವಿ. ಚಂದ್ರು ಇದೇ ವೇಳೆ ಹಾಜರಿದ್ದರು.
ಸೆಪ್ಟೆಂಬರ್ 18ರಂದು ನಲ್ಮ್ ಫಲಾನುಭವಿಗಳ ಆಯ್ಕೆ
ಚಾಮರಾಜನಗರ, ಸೆ. - ಚಾಮರಾಜನಗರ ನಗರಸಭೆಯ 2018-19ನೇ ಸಾಲಿನ ದೀನ ದಯಾಳ್ ಆಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ (ಡೇ ನಲ್ಮ್) ವೈಯಕ್ತಿಕ ಸಾಲ ಮತ್ತು ಗುಂಪು ಸಾಲ ಪಡೆಯಲು ಅರ್ಜಿ ಸಲ್ಲಿಸಿರುವವರನ್ನು ಫಲಾನುಭವಿಗಳನ್ನಾಗಿ ಅಯ್ಕೆ ಮಾಡಲು ಸೆಪ್ಟೆಂಬರ್ 18ರಂದು ಬೆಳಿಗ್ಗೆ 11 ಗಂಟೆಗೆ ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ವರ್ತಕರ ಭವನದ ಎದುರಿನ ಸಿ.ಡಿ.ಎಸ್. ಸಮುದಾಯ ಭವನದಲ್ಲಿ ಟಾಸ್ಕ್‍ಪೋರ್ಸ್ ಸಮಿತಿ ಸಭೆ ನಡೆಯಲಿದೆ
ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುವ ಈ ಸಭೆಗೆ ಅರ್ಜಿದಾರರು ಮೂಲ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
x
No comments:
Post a Comment