Thursday, 8 November 2018

05-11-2018 (ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ)


ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳನ್ನು ಕೋರಲಾಗಿದೆ. ದೀಪಾವಳಿ ಹಬ್ಬದ ಸಂಬಂಧ ಪಟಾಕಿ ಹೊಡೆಯುವ ಸಂಪ್ರದಾಯವಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತಕ್ಕಾಗಿ ಹಾಗೂ ಘನ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 23.10.2018, 30.10.2018 ಮತ್ತು 31.10.2018 ರಂದು ರಿಟ್ ಪಿಟಿಷನ್ (ಸಿವಿಲ್) ನಂ. 728/2015ಕ್ಕೆ ಸಂಬಂಧಿಸಿದಂತೆ, ತೀರ್ಪು ನೀಡಿದ್ದು, ಅದರಂತೆ ಈ ಕೆಳಕಂಡ ಸೂಚನೆಗಳನ್ನು ತಪ್ಪದೆ ಪಾಲಿಸಲು ಕೋರಲಾಗಿದೆ.

1. ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನ ತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ, ಸರಣಿ ಸ್ಪೋಟಕ ಪಟಾಕಿಗಳನ್ನು (ಎoiಟಿeಜ ಜಿiಡಿeಛಿಡಿಚಿಛಿಞeಡಿs (seಡಿies ಛಿಡಿಚಿಛಿಞeಡಿs oಡಿ ಟಚಿಡಿis) ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಿದ್ದು, ಈ ರೀತಿಯ ಕ್ರಿಯೆಗಳನ್ನು ಮಾಡದೆ ಇರುವುದು.
2. ಸ್ಪೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ಮತ್ತು ಅಧಿಕೃತವಾಗಿ ಪರವಾನಗಿ ಪಡೆದವರು ಸ್ಪೋಟಕ ಪಟಾಕಿಗಳನ್ನು ಈ ಆದೇಶಾನುಸಾರ ಮಾತ್ರ ಮಾರಾಟ ಮಾಡುವುದು.
3. ದೀಪಾವಳಿ ಹಬ್ಬದ ಸಂಬಂಧ, ಧನತೇರಸ್-5ನೇ ತಾರೀಖು, ನರಕಚತುರ್ದಶಿ-6ನೇ ತಾರೀಖು, ದೀಪಾವಳಿ ಅಮಾವಾಸ್ಯ-7ನೇ ತಾರೀಖು, ಬಲಿಪಾಡ್ಯಮಿ-8ನೇ ತಾರೀಖು, ನವೆಂಬರ್ 2018ರ ಹಬ್ಬದ ಸಮಯದಲ್ಲಿ ಪಟಾಕಿಗಳನ್ನು ರಾತ್ರಿ 8.00 ಗಂಟೆಯಿಂದ 10.00 ಗಂಟೆಯವರೆಗೆ ಮಾತ್ರ ಸಿಡಿಸುವುದು.
4. 14 ದಿನಗಳ ಕಾಲ ಅಂದರೆ, ದೀಪಾವಳಿ ಹಬ್ಬ ಆರಂಭವಾಗುವ 7 ದಿನಗಳ ಮೊದಲು ಮತ್ತು ದೀಪಾವಳಿ ಹಬ್ಬದ ನಂತರ 7 ದಿನಗಳ ಮೊದಲು ಮತ್ತು ದೀಪಾವಳಿ ಹಬ್ಬದ ನಂತರ 7 ದಿನಗಳು ಪಟಾಕಿ ಸಿಡಿಸುವುದರ ಬಗ್ಗೆ ಅನುಮತಿ ಇದ್ದು, ನಿಯಮಗಳನ್ವಯ ಮಾತ್ರ ಕ್ರಮ ವಹಿಸುವುದು.
5. ಅಗ್ನಿದುರಂತಕ್ಕೆ ಕಾರಣವಾಗಬಹುದಾದ ಸಾಧ್ಯತೆಗಳಿರುವ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು ಉದಾಹರಣೆಗೆ ಪೆಟ್ರೋಲ್ ಬಂಕ್ ಸಮೀಪ, ವಿದ್ಯುತ್ ಟ್ರ್ಯಾನ್ಸಫಾರ್ಮರ್ ಬಳಿ, ಪಟಾಕಿ ಸಂಗ್ರಹಿತ ಅಂಗಡಿಗಳ ಬಳಿ ಇತ್ಯಾದಿ.
6. ಮಕ್ಕಳು ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪೋಷಕರು ಖುದ್ದು ಜೊತೆಯಲ್ಲಿರುವುದು. ಬೆಂಕಿ ನಿರೋದಕ ಶಕ್ತಿಯುಳ್ಳ ಬಟ್ಟೆಗಳನ್ನು ಧರಿಸುವುದು. ಯಾವುದೇ ಕಾರಣಕ್ಕೂ ಚಿಕ್ಕ ವಯಸ್ಸಿನ ಮಕ್ಕಳ ಬಳಿ ಪಟಾಕಿ ಸಿಡಿಸಬಾರದು.
7. ರಸ್ತೆಯ ಮದ್ಯದಲ್ಲಿ, ಅಥವಾ ವಸತಿ ಸಮುಚ್ಚಯಗಳ ಬಳಿ ರಾಕೇಟ್, ಹೆಚ್ಚು ಶಬ್ಧ ಬರುವ ಪಟಾಕಿಗಳನ್ನು ಸಿಡಿಸಬಾರದು.
8. ಅತೀ ಹೆಚ್ಚು ಶಬ್ಧ ಮಾಲಿನ್ಯ ಉಂಟುಮಾಡುವ, ನಿಷೇಧಿತ ಪಟಾಕಿಗಳು, ಹೆಚ್ಚು ಅಪಾಯಕಾರಿ ಪಟಾಕಿಗಳನ್ನು ಹೊಡೆಯಬಾರದು.

  ಆದ್ದರಿಂದ ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಹಿನ್ನಲೆಯಲ್ಲಿ, ಮೇಲ್ಕಂಡ ಅಂಶಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡಲು ಹಾಗೂ ಘನ ಸರ್ವೋಚ್ಛ ನ್ಯಾಯಾಲಯದ ನಿಬಂಧನೆಗಳನ್ನು ಪಾಲಿಸಲು ಕೋರಲಾಗಿದೆ. ಮೇಲ್ಕಂಡ ಅಂಶಗಳ ಉಲ್ಲಂಘನೆ ಕಂಡುಬಂದಲ್ಲಿ ಅಥವಾ ಶಾಂತಿ ಭಂಗ ಉಂಟುಮಾಡಲು ಯಾರಾದರೂ ಪ್ರಯತ್ನಿಸುವುದು ಕಂಡು ಬಂದಲ್ಲಿ ಕೂಡಲೇ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಲು ಕೋರಲಾಗಿದೆ.

ಕ್ರ.ಸಂ ಪೊಲೀಸ್ ಅಧಿಕಾರಿಗಳು ಸ್ಥಿರ ದೂರವಾಣಿ
ಸಂಖ್ಯೆ ಮೊಬೈಲ್
ದೂರವಾಣಿ
1 ಪೊಲೀಸ್ ಅಧೀಕ್ಷಕರು 08226-222243 9480804601
2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು 08226-225979 9480804602
3 ಡಿ.ಎಸ್.ಪಿ ಚಾ-ನಗರ 08226-222090 9480804620
4 ಡಿ.ಎಸ್.ಪಿ ಕೊಳ್ಳೇಗಾಲ 08224-252840 9480804621
5 ಜಿಲ್ಲಾ ನಿಯಂತ್ರಣ ಕೊಠಡಿ 08226-222383 9480804600




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು