Sunday, 11 November 2018

10-11-2018 (ಟಿಪ್ಪುಸುಲ್ತಾನ್ ರಾಷ್ಟ್ರಪ್ರೇಮಿ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗ ಶೆಟ್ಟಿ )

ಟಿಪ್ಪುಸುಲ್ತಾನ್ ರಾಷ್ಟ್ರಪ್ರೇಮಿ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗ ಶೆಟ್ಟಿ  
participant public

ಚಾಮರಾಜನಗರ ನ.10 ಬ್ರಿಟಿಷರ ವಿರುದ್ದ ಕೆಚ್ಚೆದೆಯಿಂದ  ಪ್ರಬಲ ಹೋರಾಟ ಮಾಡಿದ ಟಿಪ್ಪುಸುಲ್ತಾನ್ ಅವರು ರಾಷ್ಟ್ರಪ್ರೇಮಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.
ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ನಾಡಿನ ರಕ್ಷಣೆಗಾಗಿ ವೀರಾವೇಶದಿಂದ ಟಿಪ್ಪುಸುಲ್ತಾನ್ ಹೋರಾಡಿದರು. ದೇಶದ ಹಿತಕೋಸ್ಕರ ಶ್ರಮಿಸಿದ ಟಿಪ್ಪುಸುಲ್ತಾನ್ ಅವರ ಜಯಂತಿಯನ್ನು ಸರ್ಕಾರದ ವತಿಯಿಂದದಲೇ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಸಚಿವರು ನುಡಿದರು.
ಟಿಪ್ಪುಸುಲ್ತಾನ್ ಅವರು ಚಿಕ್ಕವಯಸ್ಸಿನಲ್ಲೆ ಸಕಲ ವಿದ್ಯೆಗಳನ್ನು ಪಡೆದು ಪರಿಣತಿ ಹೊಂದಿದ್ದರು. ಟಿಪ್ಪು ದಕ್ಷ ಆಡಳಿತಗಾರರಾಗಿದ್ದರು. ಅವರ ಆಳ್ವಿಕೆಯಲ್ಲಿ ರೇಷ್ಮೆಯನ್ನು ನಾಡಿಗೆ ಪರಿಚಯಿಸಲಾಯಿತು. ಜಮೀನುದಾರರಿಂದ ಸಮರ್ಪಕವಾಗಿ ಕಂದಾಯ ವಸೂಲಿಯಂತಹ ಸುಧಾರಣಾ ಕ್ರಮಗಳನ್ನು ಟಿಪ್ಪು ಜಾರಿಗೊಳಿಸಿದ್ದರೆಂದು ಉಸ್ತವಾರಿ ಸಚಿವರು ತಿಳಿಸಿದರು.
ರಾಜ್ಯಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿ ಕಾರ್ಯಕ್ರಮಗಳಿಗಾಗಿ 2377ಕೋಟಿ ರೂ ಅನುದಾನ ಮೀಸಲಿಟ್ಟಿದೆ. ಸಾಲಸೌಲಭ್ಯ, ಗಂಗಾಕಲ್ಯಾಣ, ಮಸೀದಿಗಳ ಅಭಿವೃದ್ಧಿ , ಶಾದಿ ಮಹಲ್ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಕೂಲವನ್ನು ಮಾಡುತ್ತಿದೆ ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಅವರು ಮಾತನಾಡಿ ಟಿಪ್ಪುಸುಲ್ತಾನ್ ಅವರು ಅಪ್ರತಿಮ ವೀರ. ಅಂದೇ ರಾಕೆಟ್ ತಂತ್ರಜ್ಞಾನವನ್ನು ಮೊದಲಿಗೆ ಪರಿಚಯಿಸಿ ಬಳಕೆ ಮಾಡಿದರು. ಅಷ್ಟೇ ಅಲ್ಲ ಅನೇಕ ತಂತ್ರಜ್ಞಾನ ಕೌಶಲ್ಯಗಳನ್ನು ಯುದ್ದದಲ್ಲಿ ಪರಿಣಾಮಕಾರಿಯಾಗಿ ಬಳಸಿ ಪ್ರಯೋಜನ ಪಡೆದರು ಎಂದರು.
ಟಿಪ್ಪು ಅವರ ಆಡಳಿತಾವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು ಅಂದೇ ಪ್ರತಿಯೊಬ್ಬರ ತಲಾ ಆದಾಯ ಬ್ರಿಟನ್ ದೇಶದ ತಲಾ ಆದಾಯಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು. ಕನಿಷ್ಠ ಕೊಲಿಗಿಂತಲೂ ಹೆಚ್ಚಿನ ಆದಾಯ ಕಾರ್ಮಿಕರಿಗೆ ಸಿಗುತ್ತಿತ್ತು ಎಂದು ಧ್ರುವನಾರಾಯಣ ತಿಳಿಸಿದರು
ಮುಖ್ಯ ಉಪನ್ಯಾಸ ನೀಡಿದ ಚಿಂತಕರು ಹಾಗೂ ಪತ್ರಕರ್ತರು ಆದ  ಟಿ.ಗುರುರಾಜ್ ಅವರು ಟಿಪ್ಪು ಮಹಾನ್ ಮಾನವತಾವಾದಿ. ಧರ್ಮವನ್ನು ಮೀರಿದ ವ್ಯಕ್ತಿ. ಕಾವೇರಿಯಿಂದ ಗೋದಾವರಿವರೆಗೆ ಅವರ ಆಡಳಿತದ ಹರಿವು ಇತ್ತು ಎಂದರು.

ಟಿಪ್ಪು ಜನರ ಕಲ್ಯಾಣಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ತಂದರು ಶಾಲೆ, ತಂಗದಾಣ ನಿರ್ಮಿಸಿದರು, 250 ವರ್ಷಗಳ ಹಿಂದೆಯೆ ಪಾನ ನಿಷೇಧ ಜಾರಿಗೊಳಿಸಿದ್ದರು. ಚೀನಾ, ಟರ್ಕಿ, ಪರ್ಷಿಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ರಾಯಬಾರಿಗಳನ್ನು ಕಳುಹಿಸಿ ಹೊಸ ವಿಷಯಗಳನ್ನು ಪರಿಚಯಿಸಿದರೆಂದು ಗುರುರಾಜ್ ತಿಳಿಸಿದರು.
        ಧರ್ಮಗುರುಗಳಾದ ಮಹಮದ್ ಇಸ್ಮಾಯಿಲ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|| ಕೆ ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಮುಖಂಡರಾದ ಇರ್ಷಾದುಲ್ಲಾ ಖಾನ್, ಜಿಯಾ ಉಲ್ಲಾ ಷರೀಫ್, ಸೈಯದ್ ಅತೀಕ್ ಅಹಮದ್, ಸೈಯದ್ ರಫಿ, ಮಹಮದ್ ಅಸ್ಗರ್, ಸುಹೇಲ್ ಅಲಿಖಾನ್, ನಗರಸಭಾ ಸದಸ್ಯರಾದ ಅಬ್ರಾರ್ ಅಹಮದ್, ಅಮೀಕ್ ಅಹಮದ್, ರಾಜಪ್ಪ, ಚಿನ್ನಮ್ಮ, ಮಹೇಶ್, ಕಲೀಲ್‍ಉಲ್ಲಾಖಾನ್, ಸಮೀ ಉಲ್ಲಾ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರಾಜೇಂದ್ರ ಪ್ರಸಾದ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಮೈಸೂರಿನ ಜಹೀದುಲ್ಲಾ ಖಾನ್ ಮತ್ತು ತಂಡದವರು ಖವಾಲಿ ಕಾರ್ಯಕ್ರಮ ನಡೆಸಿಕೊಟ್ಟರು.

x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು