ಡಿ. 8ರಂದು ಲೋಕ್ ಅದಾಲತ್ : ರಾಜಿ ಸಂಧಾನದ ಮೂಲಕ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅವಕಾಶ
S.VEERABHADRA SWAMY. RAAMASAMUDRA
9480030980
---------------------------------------------
ಚಾಮರಾಜನಗರ, ನ. 22 - ನ್ಯಾಯಾಲಯದಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಇರುವ ರಾಷ್ಟ್ರೀಯ ಲೋಕ್ ಅದಾಲತ್ ಡಿಸೆಂಬರ್ 8ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯಲಿದ್ದು ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಲೋಕ್ ಅದಾಲತ್‍ನಲ್ಲಿ ತೀರ್ಮಾನವಾಗಬಹುದಾದ ಎಲ್ಲ ಸ್ವರೂಪದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಉಭಯ ಪಕ್ಷಗಾರರನ್ನು ವಿಶವಾಸಕ್ಕೆ ತೆಗೆದುಕೊಂಡು ರಾಜಿ ಸಂಧಾನದ ಮೂಲಕ ತೀರ್ಮಾನ ಮಾಡಲಾಗುತ್ತದೆ. ಈ ಜನತಾ ನ್ಯಾಯಾಲಯದ ಮೂಲಕ ಶೀಘ್ರವಾಗಿ ಪ್ರಕರಣ ಇತ್ಯರ್ಥಗೊಳ್ಳಲಿದೆ ಎಂದರು.
ಲೋಕ್ ಅದಾಲತ್‍ನಲ್ಲಿ ಪಕ್ಷಗಾರರೇ ನೇರವಾಗಿ ಅಥವಾ ವಕೀಲರ ಮೂಲಕ ಪಾಲ್ಗೊಳ್ಳಬಹುದು. ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುತ್ತದೆ. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿಯಲಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ನ್ಯಾಯಾಲಯಗಳಲ್ಲಿ ದಾಖಲಾಗದೆ ಇರುವ ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಹ ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ನ್ಯಾಯಾಲುಯದ ಶುಲ್ಕ ನೀಡಬೇಕಾಗಿಲ್ಲ. ಅಲ್ಲದೆ ನ್ಯಾಯಾಲದಲ್ಲಿ ದಾಖಲಾಗಿರುವ ಪ್ರಕರಣಗಳು ಲೋಕ್ ಅದಾಲತ್‍ನಲ್ಲಿ ಇತ್ಯರ್ಥಗೊಂಡರೆ ಈಗಾಗಲೇ ಪಾವತಿಸಲಾಗಿರುವ ನ್ಯಾಯಾಲಯ ಶುಲ್ಕದ ಶೇ.75ರಷ್ಟನ್ನು ವಾಪಸ್ಸು ನೀಡಲಾಗುತ್ತದೆ ಎಂದರು.
ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಇದರಲ್ಲಿ ಯಾವುದೇ ಒತ್ತಡ ಹೇರಲಾಗುವುದಿಲ್ಲ. ಕಡಿಮೆ ವೆಚ್ಚದಲ್ಲಿ ಶೀಘ್ರ ತೀರ್ಮಾನಕ್ಕಾಗಿ ಲೋಕ್ ಅದಾಲತ್ ವಿಶೇಷ ಅವಕಾಶವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನಡೆಯಲಿದೆ. ಕಳೆದ ಬಾರಿ ನಡೆದ ಲೋಕ್ ಅದಾಲತ್‍ನಲ್ಲಿ 338 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ಇದೇ ವೇಳೆ ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಸಿ.ಜಿ. ವಿಶಾಲಾಕ್ಷಿ, ಸಿವಿಲ್ ನ್ಯಾಯಾಧೀಶರಾದ ಉಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಇಂದುಶೇಖರ್, ಕಾಂiÀರ್iದರ್ಶಿ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ನ. 24ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ನ. 22 - ಜಿಲ್ಲೆಯನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ 24ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾವಿದರ ದಾಖಲಾತಿ ಪರಿಶೀಲನೆ
ಚಾಮರಾಜನಗರ, ನ. 22 :- ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಚಾಮರಾಜನಗರ ಜಿಲ್ಲಾ ಕಚೇರಿಗೆ ಆನ್ ಲೈನ್ ಮೂಲಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಿರುವ ಕಲಾವಿದರ ಮೂಲ ದಾಖಲಾತಿ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಅರ್ಜಿದಾರರು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಿದೆ.
ಈಗಾಗಲೇ ದಾಖಲಾತಿ ಪರಿಶೀಲನೆ ಕಾರ್ಯ ಆರಂಭವಾಗಿದೆ. ನವೆಂಬರ್ 24ರ ಮಧ್ಯಾಹ್ನ 3 ಗಂಟೆಯವರೆಗೂ ಕಲಾವಿದರು ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 23, 24, 25ರಂದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಿಶೇಷ ನೋಂದಣಿ ಅಭಿಯಾನ
ಚಾಮರಾಜನಗರ, ನ. 22 - ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರ ಹೆಸರು ಸೇರ್ಪಡೆ, ಪಟ್ಟಿಯಲ್ಲಿ ಕಂಡುಬರುವ ಕಾಗುಣಿತ ಲೋಪದೋಷಗಳು, ಮತದಾರರೊಡನೆ ಸಂಬಂಧ ಇತರೆ ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ನವೆಂಬರ್ 23 ರಿಂದ 25ರವರೆಗೆ ಬೆಳಿಗ್ಗೆ 9.30ರಿಂದ ಸಂಜೆ 5.30 ಗಂಟೆಯವರೆಗೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ದಿನಾಂಕ 01.01.2019ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿ, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕೈಗೊಳ್ಳಲಾಗಿದೆ. ನವೆಂಬರ್ 23, 24 ಹಾಗೂ 25ರಂದು ನಡೆಯುವ ವಿಶೇಷ ನೋಂದಣಿ ಅಭಿಯಾನದಲ್ಲಿ ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಹರಿಂದ ನಮೂನೆ 6, 7, 8 ಮತ್ತು 8ಎ.ರಲ್ಲಿ ಅರ್ಜಿಗಳನ್ನು ಪಡೆಯಲಿದ್ದಾರೆ.
ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಹಾಗೂ ಮತದಾರರ ಪಟ್ಟಿಯಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಶೇ. 100ರಷ್ಟು ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸುವ ಸಲುವಾಗಿ ಚುನಾವಣಾ ಆಯೋಗದ ವಿಶೇಷ ನೋಂದಣಿ ಅಭಿಯಾನವನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಪೋಲಾಗದಂತೆ ಕ್ರಮ ವಹಿಸಿ : ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸೂಚನೆ
ಚಾಮರಾಜನಗರ, ನ. 22 - ಗ್ರಾಮೀಣ ಭಾಗಗಳಲ್ಲಿ ವಿದ್ಯುತ್, ನೀರು ಇತರೆ ಪ್ರಮುಖ ಸೌಲಭ್ಯಗಳು ಪೋಲಾಗದಂತೆ ಅಧಿಕಾರಿಗಳು ಹೆಚ್ಚು ಗಮನ ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿಯೂ ಬೀದಿ ದೀಪಗಳು ಚಾಲನೆಯಲ್ಲಿರುವುದನ್ನು ಗಮನಿಸಿದ್ದೇನೆ. ಅತ್ಯಂತ ಅವಶ್ಯಕವಾಗಿರುವ ವಿದ್ಯುತ್‍ನ್ನು ನಿರ್ಲಕ್ಷ್ಯದಿಂದ ಪೋಲು ಮಾಡಬಾರದು. ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್ ಅವರು ಮಾತನಾಡಿ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪ ನಿಯಂತ್ರಣದ ಸ್ವಿಚ್‍ನ್ನು ಅಳವಡಿಸಲಾಗಿರುತ್ತದೆ. ಆಯಾ ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡುವ ವೇಳೆ ಗಮನಿಸಬೇಕಾಗುತ್ತದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿಳಂಬವಾಗಿ ವಿದ್ಯುತ್ ಸಂಪರ್ಕ ನೀಡುವುದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ನಿಗಮದ ಅಧಿಕಾರಿಗಳು ವಿದ್ಯುತ್ ಸರಬರಾಜು ನಿಗಮದ ಇಲಾಖೆಯವರೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಯೋಗೀಶ್ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾಹಿತಿ ನೀಡುವಲ್ಲಿ ತಾಳೆಯಾಗುತ್ತಿಲ್ಲ. ಅನುಷ್ಟಾನ ನಿಗಮಗಳು ಹಾಗೂ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಪಟ್ಟ ಪ್ರತಿಯೊಂದು ಅರ್ಜಿದಾರರ ವಿವರಗಳನ್ನು ಸಮರ್ಪಕವಾಗಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್ ಅವರು ಮಾತನಾಡಿ ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಾಗಿ ಬ್ಯಾಂಕುಗಳಲ್ಲಿ ಸಾಲ ನೀಡಲಾಗುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಬಡವರಿಗೆ ಸ್ಪಂದಿಸದೇ ಇದ್ದರೆ ಹೇಗೆ? ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಲೀಡ್‍ಬ್ಯಾಂಕ್ ವ್ಯವಸ್ಥಾಪಕರು ಸಾಲ ಸೌಲಭ್ಯ ಸೇರಿದಂತೆ ಅನುಕೂಲಗಳನ್ನು ಕಲ್ಪಿಸಲು ಸೂಚನೆ ನೀಡಬೇಕು. ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸವಲತ್ತುಗಳನ್ನು ತಲುಪಿಸುವ ದಿಸೆಯಲ್ಲಿ ಆದ್ಯತೆ ನೀಡುವಂತೆ ನಿರ್ದೇಶನ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾವತಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪದ್ಮಾಶೇಖರ್ ಪಾಂಡೆ ಸಭೆಯಲ್ಲಿ ಹಾಜರಿದ್ದರು.
ನ. 24ರಂದು ಹೆಗ್ಗವಾಡಿಯಲ್ಲಿ ಕೃಷಿಕರ ಜೊತೆ ಶುಭ ಮುಂಜಾನೆ, ನೇಗಿಲಯೋಗಿಗೆ ಜೀವನೋತ್ಸಾಹ ಕಾರ್ಯಕ್ರಮ
ಚಾಮರಾಜನಗರ, ನ. 22 ರೈತರಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಮಾಹಿತಿ ನೀಡುವ ಕೃಷಿಕರ ಜೊತೆ ಶುಭ ಮುಂಜಾನೆ ನೇಗಿಲಯೋಗಿಗೆ ಜೀವನೋತ್ಸಾಹ ಕಾರ್ಯಕ್ರಮವು ನವೆಂಬರ್ 24ರಂದು ಬೆಳಿಗ್ಗೆ 7 ಗಂಟೆÉಗೆ ತಾಲೂಕಿನ ಹರವೆ ಹೋಬಳಿಯ ಹೆಗ್ಗವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೃಷಿ ಇಲಾಖೆಯ ನಾನಾ ಯೋಜನೆಗಳು, ಸೌಕರ್ಯಗಳು ಕುರಿತು ಮಾಹಿತಿ ನೀಡುವ ಹಾಗೂ ರೈತರು ಗ್ರಾಮೀಣ ಪ್ರದೇಶಗಳ ಮಹಿಳೆಯರು ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ. ತಿರುಮಲೇಶ್ ಅವರ ನೇತೃತ್ವದಲ್ಲಿ ಕೃಷಿಕರ ಜೊತೆ ಶುಭ ಮುಂಜಾನೆ ನೇಗಿಲಯೋಗಿಗೆ ಜೀವನೋತ್ಸಾಹ ಕಾರ್ಯಕ್ರಮವು ಈಗಾಗಲೇ 24 ವಾರಗಳನ್ನು ಪೂರೈಸಿದೆ.
25ನೇ ವಿಶೇಷ ಕಾರ್ಯಕ್ರಮವು ಹೆಗ್ಗವಾಡಿಯಲ್ಲಿ ನಡೆಯಲಿದ್ದು, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಉದ್ಘಾಟಿಸುವರು. ಇತರೆ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ರೈತ ಭಾಂದವರು, ಅಸಕ್ತರು ಭಾಗವಹಿಸಿ ಕೃಷಿ ಇಲಾಖೆ ಯೋಜನೆಗಳ ಮಾಹಿತಿ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ. ತಿರುಮಲೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ದಾಖಲೆ ವಿವರಗಳನ್ನು ಸಲ್ಲಿಸಲು ಗ್ರೀನ್ ಬಡ್ಸ್ ಠೇವಣಿ ಹೂಡಿಕೆದಾರರಿಗೆ ಸೂಚನೆ
ಚಾಮರಾಜನಗರ, ನ. 22 - ಗ್ರೀನ್ ಬಡ್ಸ್ ಸಂಸ್ಥೆಯಲ್ಲಿ ಠೇವಣಿ ಹೂಡಿಕೆ ಮಾಡಿರುವವರು ಸಂಬಂಧಪಟ್ಟ ಮೊತ್ತ ಹಾಗೂ ದಾಖಲೆಗಳ ವಿವರಗಳನ್ನು ಸಲ್ಲಿಸುವಂತೆ ಮೈಸೂರು ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ ಕಾಯಿದೆ 2004 ರ ಕಲಂ7(1) ರಿಂದ (4) ರ ಮೇರೆಗೆ ಮೆ: ಗ್ರೀನ್ ಬಡ್ಸ್ ಆಗ್ರೋ ಫಾರಂ ಪ್ರೈ. ಲಿ., ಮೈಸೂರು ರವರು ರಾಜ್ಯಾಧ್ಯಂತ ಹೊಂದಿದ ಶಾಖೆಗಳಲ್ಲಿ ಸಾರ್ವಜನಿಕರು ನಿಶ್ಚಿತ ಠೇವಣಿ (ಎಫ್.ಡಿ.), ರೆಕರಿಂಗ್ ಡಿಪಾಸಿಟ್ (ಆರ್.ಡಿ.), ಮಾಸಿಕ ವಂತಿಗೆ (ಮಾಸಿಕ ಚೀಟಿ ಹಣ) ಹಾಗೂ ಇತರೆ ರೂಪದಲ್ಲಿ ಠೇವಣಿಯಾಗಿ ಇಡಲಾಗಿದ್ದ ಹಣವನ್ನು ಸಕಾಲದಲ್ಲಿ ಹೂಡಿಕೆದಾರರಿಗೆ ಹಿಂತಿರುಗಿಸದ ಕಾರಣ ಸದರಿ ಸಂಸ್ಥೆ ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಕ್ರಿಮಿನಲ್ (ಇತರೆ) ದಾವೆಯನ್ನು ಹೂಡಲಾಗಿದ್ದು ಅವುಗಳು ವಿಚಾರಣೆ ಹಂತದಲ್ಲಿರುತ್ತದೆ.
ಸದರಿ ಸಂಸ್ಥೆಯಲ್ಲಿ ಹೂಡಲಾಗಿರುವ ಠೇವಣಿಗೆ ಸಂಬಂಧಿಸಿದ ಅತ್ಯಾವಶ್ಯಕವಾದ ಮೂಲ ದಾಖಲೆಗಳನ್ನು ಹಾಗೂ ಸದರಿ ಸಂಸ್ಥೆಯವರು ಹೂಡಿಕೆದಾರರಿಗೆ ಭದ್ರತಾ ದೃಷ್ಠಿಯಿಂದ ನೀಡಿರುವ ಮುಖಬೆಲೆ ದಾಖಲೆಗಳ ವಿವರಗಳನ್ನು ಗೌರವಾನ್ವಿತ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುವುದರಿಂದ ನವೆಂಬರ್ 27ರೊಳಗೆ (ಸಂಜೆ 5 ಗಂಟೆಯೊಳಗೆ) ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಮೈಸೂರಿನ ಉಪವಿಭಾಗಾಧಿಕಾರಿಗಳ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು.
ಠೇವಣಿದಾರರು, ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಠೇವಣಿ ಹೂಡಿಕೆಯ ವಿವರ (ಆರ್.ಡಿ. ಎಫ್.ಡಿ, ಮಾಸಿಕ ಚೀಟಿ ವಂತಿಕೆ), ಹೂಡಿಕೆಗೆ ಸಂಬಂಧಿಸಿದಂತೆ ಗ್ರೀನ್ ಬಡ್ಸ್ ಸಂಸ್ಥೆಯವರು ನೀಡಿರುವ ಬಾಂಡ್, ಪಾಸ್ ಪುಸ್ತಕ ಇತ್ಯಾದಿ ಹಾಗೂ ಠೇವಣಿದಾರರು ಹೂಡಿರುವ ಒಟ್ಟು ಮೊತ್ತ, ಹಿಂಪಡೆದ ಮೊಬಲಗು (ಠೇವಣಿ ಹಣದಲ್ಲಿ, ಬಡ್ಡಿ ರೂಪದಲ್ಲಿ), ಬರಬೇಕಾದ ಮೊತ್ತ ಹಾಗೂ ಇತರೆ ದಾಖಲೆಗಳನ್ನು ಅರ್ಜಿಯೊಡನೆ ಸಂಬಂಧಿಸಿದ ಎಲ್ಲಾ ಮೂಲ (ಔಡಿigiಟಿಚಿಟ ಆoಛಿumeಟಿಣs) ದಾಖಲೆಗಳನ್ನು ಮತ್ತು ಮೂಲ ದಾಖಲಾತಿಗಳ ಜೆರಾಕ್ಸ್ ಪ್ರತಿಯನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಡೀಕರಿಸಿ ಸಲ್ಲಿಸುಬೇಕು. ನಿಗದಿತ ಅವಧಿಯ ನಂತರ ಬರುವ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2422100 ನ್ನು ಸಂಪರ್ಕಿಸುವಂತೆ ಮೈಸೂರು ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವೆಂಬರ್ 23ರಂದು ಕುರುಬನ ಕಟ್ಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಚಾಮರಾಜನಗರ, ನ. 22 - ಕುರುಬನ ಕಟ್ಟೆ ಕ್ಷೇತ್ರದಲ್ಲಿ ಇಂಟರ್‍ಲಾಕ್ ಅಳವಡಿಸುವ ಕಾಮಗಾರಿಗೆ ಶಾಸಕರಾದ ಎನ್. ಮಹೇಶ್ ಅವರು ನವೆಂಬರ್ 23ರಂದು ಬೆಳಿಗ್ಗೆ 11 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ದೇಶಿ ಸಂಸ್ಕøತಿ ಪರಂಪರೆಯ ಶಕ್ತಿ ಕೇಂದ್ರಗಳಾದ ಚಿಕ್ಕಲ್ಲೂರು ಹಾಗೂ ಕುರುಬನಕಟ್ಟೆ ಕ್ಷೇತ್ರಗಳಗೆ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x
No comments:
Post a Comment