ಸರ್ವಜ್ಞನ ತ್ರಿಪದಿ ರೂಪದ ಚಿಂತನೆಗಳು ಇಂದಿಗೂ ಪ್ರಸ್ತುತ
ಚಾಮರಾಜನಗರ, ಫೆ. 27 - ಸಮಾಜಿಕ ಬದಲಾವಣೆಯ ಪ್ರಜ್ಞೆ ಹೊಂದಿದ್ದ ಸರ್ವಜ್ಞನ ತ್ರಿಪದಿ ರೂಪದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಚನ್ನಲಿಂಗನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶಿವಣ್ಣ ಇಂದುವಾಡಿ ಅವರು ಅಭಿಪ್ರಾಯಪಟ್ಟರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ನಗರದ ಜೆ. ಹೆಚ್. ಪಟೇಲ್ ಸಭಾಂಗಣದಲ್ಲಿಂದು ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಸರ್ವಜ್ಞನ ಸಾವಿರಾರು ತ್ರಿಪದಿಗಳು ಅತ್ಯಂತ ಸರಳವಾಗಿದ್ದು, ಸಾಮಾನ್ಯ ಜನರು ಸುಲಭವಾಗಿ ಅರ್ಥಮಾಡಿ ಕೊಳ್ಳಬಹುದಿತ್ತು ಹೀಗಾಗಿ ಪಂಪನ ನಂತರದ ಕಾಲಘಟ್ಟದಲ್ಲಿ ಈತನ ಚಿಂತನೆಗಳು ಹೆಚ್ಚು ಶ್ರೇಷ್ಠತೆಯನ್ನು ಪಡೆದುಕೊಂಡವು. ಇರುವುದೊಂದು ಭೂಮಿ, ಕುಡಿಯುವುದೊಂದೆ ನೀರು, ಸುಡುವುದೊಂದೆ ಬೆಂಕಿ ಕುಲ ಗೋತ್ರ ಯಾವುದಯ್ಯ ಎನ್ನುವ ಸರ್ವಜ್ಞನ ನುಡಿಯನ್ನು ಅರ್ಥೈಸಿಕೊಂಡರೆ ಸಮಾಜದಲ್ಲಿ ಜಾತಿ-ಧರ್ಮಗಳ ನಡುವೆ ಸಂಘರ್ಷವೆ ಇರುವುದಿಲ್ಲ ಎಂದರು.
ಸರ್ವಜ್ಞನು ಸಮಾಜದ ಅಸಮಾನತೆ, ಅಜ್ಞಾನ, ಮೌಡ್ಯ, ಅಂಧಕಾರ ಮತ್ತು ಅನಿಷ್ಟತೆಗಳನ್ನು ಹೋಗಲಾಡಿಸಲು ಲೋಕ ಸಂಚಾರ ಮಾಡಿ ಸಕ¯ ಸಿದ್ಧಿಗಳನ್ನು ಪಡೆದು ಜನಸಮಾನ್ಯರನ್ನು ತಿದ್ದಲು ಮಾನಸಿಕ ಚಿಕಿತ್ಸಕ ಔಷಧಗಳನ್ನು ತಮ್ಮ ತ್ರಿಪದಿಗಳ ಮೂಲಕ ತಯಾರಿಸಿದ್ದರು ಎಂದು ಶಿವಣ್ಣ ಇಂದುವಾಡಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ನಮ್ಮ ನಾಡಿನಲ್ಲಿ ದಾರ್ಶನಿಕರು ಸಮಾಜ ಕಟ್ಟುವ ಕೆಲಸ ಮಾಡಿ ಸಮಾಜ ಸುಧಾರಕರಾದರು. ಸಮಾಜದ ಮೌಡ್ಯ ಹೋಗಲಾಡಿಸಲು ಶ್ರಮಿಸಿದ ಇವರುಗಳನ್ನು ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಒಂದು ವರ್ಗಕ್ಕೆ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ಇವರ ಚಿಂತನೆಗಳು, ಉತ್ತಮ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮಲ್ಲಿ ಅಳವಡಿಸಿಕೊಂಡು ಇತರರನ್ನು ಬೆಳಕಿನೆಡೆಗೆ ಕೊಂಡೊಯ್ಯಬೇಕು ಎಂದು ನುಡಿದರು.
ಜಿಲ್ಲಾಧಿಕಾರಿ ಬಿ.ರಾಮು ಅವರು ಮಾತನಾಡಿ ಸರ್ವಜ್ಞರು ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೂ ಜೀವನದ ವಿವಿಧ ಹಂತಗಳ ಅನುಭವವನ್ನು ಜನತೆಗೆ ಸರಳವಾಗಿ ತಿಳಿಸಿದರು. ಅವರ ತ್ರಿಪದಿಗಳು ಸಾರ್ವಕಾಲಿಕ ಸತ್ಯವಾದದ್ದು. ಯುವಜನರು ಇವುಗಳನ್ನು ಅರಿತು ತಮ್ಮ ಜೀವನದುದ್ದಕ್ಕೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ, ಸಮುದಾಯದ ಮುಖಂಡರಾದ ಮದ್ದೂರು ವಿರುಪಾಕ್ಷಪ್ಪ ಹಾಗೂ ವಿವಿಧ ಸಂಘ ಸಂಸ್ಥೆಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕೊಳ್ಳೇಗಾಲ ತಾಲೂಕು ದೊಡ್ಡಿಂದುವಾಡಿಯ ಸಂಗೀತ ಶಿಕ್ಷಕರಾದ ವಿದ್ವಾನ್ ಮಹಾಂತಯ್ಯ ಮತ್ತು ತಮಡದವರಿಂದ ವಚನ ಗಾಯನ ಕಾರ್ಯಕ್ರಮ ಆಯೊಜಿಸಲಾಗಿತ್ತು.
ಶ್ರೀಗಂಧದ ಮರ ಕಳ್ಳಸಾಗಣೆ : ಶಿಕ್ಷೆ ಪ್ರಕಟ
ಚಾಮರಾಜನಗರ, ಫೆ. 27- ಶ್ರೀಗಂಧದ ಮರದ ತುಂಡುಗಳನ್ನು ಕಳ್ಳತನದಲ್ಲಿ ಸಾಗಿಸುತ್ತಿದ್ದ ಸಮಯದಲ್ಲಿ ಆರೋಪಿಯು ಮಾಲು ಸಮೇತ ಸಿಕ್ಕಿಬಿದ್ದ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಫೆಬ್ರವರಿ 26ರಂದು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ವಿನಯ್ ಅವರು ತೀರ್ಪು ನೀಡಿದ್ದಾರೆ.ನಗರದ ಸಂತೆಮರಹಳ್ಳಿ ವೃತ್ತದ ಬಳಿ 2012ರ ಅಕ್ಟೋಬರ್ 11ರಂದು ಆರಕ್ಷಕ ಉಪನಿರೀಕ್ಷಕರಾದ ಎಲ್. ದೀಪಕ್ ಅವರು ಸಿಬ್ಬಂದಿಯೊಡನೆ ಕರ್ತವ್ಯ ನಿರ್ವಹಿಸುತ್ತಿದ್ದು ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಟಾಟಾ ಎಸ್ ವಾಹನ ಬರುತ್ತಿದ್ದಾಗ ಅನುಮಾನಗೊಂಡು ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ರಹದಾರಿ ಇಲ್ಲದೆ ಟಾಟಾ ಎಸ್ ವಾಹನದಲ್ಲಿ ಅಕ್ರಮವಾಗಿ 10 ಕೆಜಿ ತೂಕದ 52 ಸಾವಿರ ರೂ. ಬೆಲೆ ಬಾಳುವ ಶ್ರೀಗಂಧದ ಮರದ ತುಂಡುಗಳನ್ನು ಕಳ್ಳತನದಿಂದ ಮೈಸೂರಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದು, ಇಬ್ಬರು ಆರೋಪಿತರು ಮಾಲು ಸಹಿತ ಸಿಕ್ಕಿಬಿದ್ದು ಕೃತ್ಯ ಎಸಗಿರುವುದು ರುಜುವಾತಾದ ಹಿನ್ನೆಲೆಯಲ್ಲಿ 5 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಎಸ್. ಉಷಾ ಅವರು ವಾದ ಮಂಡಿಸಿರುತ್ತಾರೆ.
ಫೆ. 28ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿ.ಟಿ ಸ್ಕ್ಯಾನ್ ಸೇವೆಗೆ ಉಸ್ತುವಾರಿ ಸಚಿವರಿಂದ ಚಾಲನೆÀ
ಚಾಮರಾಜನಗರ, ಫೆ. 27 :- ಬಡವರು ಹಾಗೂ ಅವಶ್ಯವಿರುವ ರೋಗಿಗಳಿಗೆ ಉಚಿತ ಸಿ.ಟಿ. ಸ್ಕ್ಯಾನ್ ಸೇವೆಗೆ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಫೆ. 28ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಿದ್ದಾರೆ.ಅರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಲ್ಲಿ ಹೊಸ ಅವಿಷ್ಕಾರ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಪುಣೆಯ ಕೃಸ್ನಾ ಡಯಾಗ್ನೋಸ್ಟಿಕ್ಸ್ ಪ್ರೈ. ಲಿ. ಸಂಸ್ಥೆಯವರು ಕೇಂದ್ರ ಮತ್ತು ರಾಜ್ಯಸರ್ಕಾರದ ಸಹಭಾಗಿತ್ವದೊಂದಿಗೆ ಪಿ.ಪಿ.ಪಿ. ತತ್ವದ ಆಧಾರದಲ್ಲಿ ಉಚಿತ ಸೇವೆ ನೀಡಲಿದ್ದಾರೆ. ಇದರಿಂದ ಜಿಲ್ಲೆಯ ಬಡವರು ಹಾಗೂ ಅಗತ್ಯವಿರುವ ರೋಗಿಗಳಿಗೆ ಅನುಕೂಲವಾಗಲಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಇತರೆ ಜನಪ್ರತಿನಿಧಿಗಳು ಹಾಜರಿರುವರು ಎಂದು ಜಿಲ್ಲಾ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಫೆ. 28ರಂದು ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ
ಚಾಮರಾಜನಗರ, ಫೆ. 27 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಫೆಬ್ರವರಿ 28ರಂದು ನಗರದಲ್ಲಿ ಏರ್ಪಡಿಸಲಾಗಿದೆ.ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಕಾರ್ಯಕ್ರಮ ಉದ್ಫಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಮೈಸೂರು ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪÀ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಮಚವಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯ್ರಾಸಕರಾದ ಸುರೇಶ್ ಎನ್. ಋಗ್ವೇದಿ ವಿಶೇಷ ಉಪನ್ಯಾಸ ನೀಡುವರು. ನಗರದ ಹಿರಿಯ ಕಲಾವಿದರಾದ ವಿದ್ವಾನ್ ಸಿ.ಎಂ. ನರಸಿಂಹಮೂರ್ತಿ ಸುಗಮ ಸಂಗಿತ ಕಾರ್ಯಕ್ರಮ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment