Wednesday, 14 February 2018

ಫೆ. 17ರಂದು ಚಾಮರಾಜನಗರ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟನೆ (14-02-2018)

ಮಾಂಗಲ್ಯ ಸರ :ಆರೋಪಿಯಾದ ವಸೀಂ @ ಬಾಬಾ ಬಿನ್ ಅಮಾನುಲ್ಲಾ ವಶ

ದಿನಾಂಕ 30-01-2018 ರಂದು ಸಂಜೆ 4-00 ಗಂಟೆಯಲ್ಲಿ ಚಾಮರಾ ಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದು ಕಲ್ಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಸ್‍ಗಾಗಿ ಕಾಯುತ್ತಾ ನಿಂತಿದ್ದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸೌಭಾಗ್ಯ ಎಂಬವವರ ಕುತ್ತಿಗೆಯಲ್ಲಿದ್ದ ಸುಮಾರು 1 ಲಕ್ಷ ಬೆಳೆಬಾಳುವ ಚಿನ್ನದ ಮಾಂಗಲ್ಯ ಸರವನ್ನು ಮೊ/ಸೈನಲ್ಲಿ ಬಂದ ಯಾರೋ ಇಬ್ಬರು ಅಪರಿಚಿತ ಆಸಾಮಿಗಳು ಸುಲಿಗೆ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ 24/2018 ಕಲಂ 392 ಐಪಿಸಿ  ರೀತ್ಯ ಪ್ರಕರಣ ದಾಖಲಾಗಿರುತ್ತದೆ.
      ಪ್ರಕರಣದ ಆರೋಪಿಗಳ ಪತ್ತೆಯ ಸಂಬಂಧವಾಗಿ ಚಾಮರಾಜನಗರ ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಧರ್ಮೇಂಧರ್‍ಕುಮಾರ್‍ಮೀನಾ. ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಶ್ರೀಮತಿ ಗೀತಾಪ್ರಸನ್ನ ಮತ್ತು ಚಾಮರಾಜನಗರ ಉಪವಿಭಾಗ ಉಪಾಧೀಕ್ಷಕರಾದ ಶ್ರೀ ಸಿ.ಟಿ.ಜಯಕುಮಾರ್‍ರವರ ಮಾರ್ಗದÀರ್ಶನದಲ್ಲಿ ಚಾಮರಾಜನಗರ ಗ್ರಾಮಾಂತರ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಮತ್ತು ತಂಡದವರು ದಿನಾಂಕ 13-02-2018 ರಂದು ಮಧ್ಯಾಹ್ನ 3-15 ಗಂಟೆಯ ಸಮಯದಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಈ ಕೇಸಿನ ಒಬ್ಬ ಆರೋಪಿಯಾದ ವಸೀಂ @ ಬಾಬಾ ಬಿನ್ ಅಮಾನುಲ್ಲಾ, 20 ವರ್ಷ, ಹೋಟೆಲ್‍ನಲ್ಲಿ ಕೆಲಸ, ಮುಸ್ಲಿಂ ಜನಾಂಗ, ಗುಂಡ್ಲುಪೇಟೆ ಪಟ್ಟಣ ಈತನನ್ನು ವಶಕ್ಕೆ ಪಡೆದಿದ್ದು ಈತನಿಂದ 32.7 ಗ್ರಾಂ ಚಿನ್ನದ ಮಾಂಗಲ್ಯ ಚೈನ್ ಮತ್ತು 02 ಕಾಸುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಅಂದಾಜು ಬೆಲೆ 88,000/- ರೂಗಳಾಗುತ್ತದೆ.
       ಅಪರಾಧ ಪತ್ತೆಯಲ್ಲಿ ಚಾಮರಾಜನಗರ ಗ್ರಾಮಾಂತರ ವೃತ್ತದ ಸಿ.ಪಿ.ಐ ರವರಾದ ಶ್ರೀ ಕೆ.ರಾಜೇಂದ್ರ ಮತ್ತು ಸಿಬ್ಬಂದಿಯವರುಗಳಾದ ಸಿಹೆಚ್‍ಸಿ 42 ರಮೇಶ, ಸಿಹೆಚ್‍ಸಿ 112 ಸೈಯದ್ ಹುಸೇನ್, ಸಿಪಿಸಿ 370 ಅಶೋಕ, ಸಿಪಿಸಿ 449 ಚಿನ್ನಸ್ವಾಮಿ, ಸಿಪಿಸಿ 37 ಸಿದ್ದರಾಮು, ಸಿಹೆಚ್‍ಸಿ 230 ರೇವಣ್ಣ ಮತ್ತು ಜೀಪ್ ಚಾಲಕರುಗಳಾದ ಎಹೆಚ್‍ಸಿ 49 ನಾಗೇಂದ್ರ, ಎಹೆಚ್‍ಸಿ 101 ಕುಮಾರಸ್ವಾಮಿರವರುಗಳು ಭಾಗವಹಿಸಿರುತ್ತಾರೆ. ಮಾನ್ಯ ಎಸ್.ಪಿ ಸಾಹೇಬರವರು ಮೇಲ್ಕಂಡ ತಂಡಕ್ಕೆ ಬಹುಮಾನ ಘೋಷಿಸಿರುತ್ತಾರೆ. 

ಫೆ. 17ರಂದು ಚಾಮರಾಜನಗರ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟನೆ

ಚಾಮರಾಜನಗರ, ಫೆ. 14 - ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಾಪುರದ ಗೌತಮಬುದ್ಧ ಸಾಂಸ್ಕøತಿಕ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರವರಿ 17ರಂದು ಬೆಳಿಗ್ಗೆ 11.30 ಗÀಂಟೆಗೆ ಆಯೋಜಿಸಲಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಕ್ರೀಡಾಕೂಟ ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ನಗರಸಭೆ ಅಧ್ಯಕ್ಷರಾದ ಶೋಭ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ದಯಾನಿಧಿ, ನಗರಸಭೆ ಸದಸ್ಯರಾದ ಎಂ. ರಾಜಶೇಖರಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸ್ಪರ್ಧಿಗಳಿಗೆ 100 ಮೀ, 200 ಮೀ. ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಖೋಖೋ ಹಾಗೂ ಕಬಡ್ಡಿ ಸ್ಪರ್ಧೆಗಳಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಫೆ. 14 - ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳು ಫೆಬ್ರವರಿ 20 ರಿಂದ 27ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ಫೆಬ್ರವರಿ 20ರಂದು ಹನೂರು, 21ರಂದು ಕೊಳ್ಳೇಗಾಲ, 22ರಂದು ಯಳಂದೂರು, 26ರಂದು ಚಾಮರಾಜನಗರ ಹಾಗೂ 27ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಸರ್ಕಾರಿ ನೌಕರರ ಗøಹ ನಿರ್ಮಾಣ ಸಹಕಾರ ಸಂಘ ಸಮಾಪನೆ : ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನ

ಚಾಮರಾಜನಗರ, ಫೆ. 12 :- ನಗರದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಉದ್ದೇಶಿತ ಕಾರ್ಯಚಟುವಟಿಕೆಗಳನ್ನು ನಿರ್ವಹಿಸದೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಂಘದ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72(2)(ಬಿ)ಯನ್ವಯ ಸಮಾಪನೆಗೆ ಆದೇಶಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ನಿರೀಕ್ಷಕರನ್ನು ಸಮಾಪನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಸಂಘವು ಯಥಾಸ್ಥಿತಿಯಲ್ಲಿದ್ದು ಯಾವುದೇ ಪ್ರಯೋಜನ ಇಲ್ಲದಿರುವುದರಿಂದ ಸಹಕಾರ ಸಂಘದ ನೋಂದಣಿ ರದ್ದುಪಡಿಸಲು ಕ್ರಮ ವಹಿಸಲಾಗಿದೆ. ಸಂಘದಲ್ಲಿ ಷೇರು ಹಣ ತೊಡಗಿಸಿರುವವರು ಫೆಬ್ರವರಿ 27ರೊಳಗೆ ಕಚೇರಿಗೆ ಖುದ್ದು ಹಾಜರಾಗಿ ಸಂಘವು ನೀಡಿರುವ ಅಧಿಕೃತ ರಸೀತಿಯನ್ನು ಹಾಜರುಪಡಿಸಿ ಷೇರು ಹಣ, ಇನ್ನಿತರ ಬಾಕಿ ಹಣವನ್ನು ಪಾವಸ್ಸು ಪಡೆಯಲು ತಿಳಿಸಿದೆ. ಹಾಗೂ ಸಂಘದ ನೋಂದಣಿ ರದ್ದತಿ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಸಹ ಸಲ್ಲಿಸಲು ತಿಳಿಸಿದೆ.
ನಿಗಧಿತ ಅವಧಿಯೊಳಗೆ ಷೇರು ಹಣ ಹಾಗೂ ಇನ್ನಿತರ ಬಾಕಿ ಹಣವನ್ನು ವಾಪಸ್ಸು ಪಡೆಯದಿದಲ್ಲಿ ಹಾಗೂ ನೋಂದಣಿ ರದ್ದತಿ ಸಂಬಂಧ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಬಾಕಿ ಹಣವನ್ನು ವಾಪಸ್ಸು ಪಡೆಯಲು ಯಾರಿಗೂ ಆಸಕ್ತಿ ಇಲ್ಲವೆಂದು ಹಾಗೂ ಸಂಘದ ನೋಂದಣಿ ರದ್ದತಿಗೆ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಕ್ರಮ ವಹಿಸಲಾಗÀುವುದು ಎಂದು ಸಹಕಾರ ಸಂಘಗಳ ಸಮಾಪನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÀÉ.






















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು