ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ: ಸಿಇಓ ಡಾ. ಕೆ. ಹರೀಶ್ ಕುಮಾರ್
ನಗರದ ಉಪ್ಪಾರ ಬೀದಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣ ದಿನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾತ್ರೆ ವಿತರಿಸಿ ಅವರು ಮಾತನಾಡಿದರು.
ಮಕ್ಕಳ ಆರೋಗ್ಯ ಸರ್ಕಾರದ ಜವಬ್ದಾರಿಯಾಗಿದೆ. ಮಕ್ಕಳ ಅರೋಗ್ಯ ಪೂರ್ಣ ಬದುಕಿಗೆ ಪೂರಕ ಸೌಲಭ್ಯ ಒದಗಿಸುವುದು ಗುರಿ ಹಾಗೂ ಬದ್ಧತೆಯಾಗಿದೆ. ಜಂತು ಹುಳು ನಿವಾರಣೆ ಕುರಿತು ಅರಿವು ಮೂಡಿಸುವ ಸಲುವಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯರ ಸಲಹೆಯಂತೆ ಜಂತು ಹುಳು ನಿವಾರಣೆಗೆ ನೀಡಲಾಗುವ ಮಾತ್ರೆಯನ್ನು ಉಪಯೋಗಿಸಬೇಕೆಂದು ಹರೀಶ್ ಕುಮಾರ್ ಅವರು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಅವರು ವೈಯಕ್ತಿಕ ಸ್ವಚ್ಛತೆ ರೋಗನಿರೋಧಕ ಶಕ್ತಿಯನು ಹೆಚ್ಚಿಸುತ್ತದೆ. ಈ ಹಿನ್ನಲೆಯಲ್ಲಿ ಆರೋಗ್ಯದ ಕಾಳಜಿಯಿಂದ ಪ್ರತಿಯೊಬ್ಬರೂ ನೈರ್ಮಲ್ಯಕ್ಕೆ ವಿಶೇಷ ಗಮನ ವಹಿಸಬೇಕೆಂದು ಅವರು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಕೆ.ಹೆಚ್. ಪ್ರಸಾದ್ ಅವರು ಭಾರತ ದೇಶದಲ್ಲಿ ಹೆಚ್ಚಿನ ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಆಹಾರವನ್ನು ಸರಿಯಾಗಿ ತೊಳೆಯದೇ, ಬೇಯಿಸದೇ ಸೇವಿಸುವುದರಿಂದ ಆಹಾರದ ಜೊತೆಯಲ್ಲಿ ಜಂತು ಹುಳುವಿನ ಮೊಟ್ಟೆ ದೇಹವನ್ನು ಸೇರುತ್ತದೆ. ಇದರಿಂದ ರಕ್ತಹೀನತೆ ದೇಹವನ್ನು ಬಾಧಿಸುತ್ತದೆ ಎಂದರು.
ರಾಷ್ಟ್ರೀಯ ಜಂತು ಹುಳು ನಿವಾರಣ ದಿನವಾದ ಇಂದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 19 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಆಲ್‍ಬೆಂಡಾಜೋಲ್ ಮಾತ್ರೆಗಳನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಅಂಗನವಾಡಿಯ ಮೂಲಕವೂ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯರಾದ ಮಹದೇವಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಆರ್‍ಸಿಹೆಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಉಪ ಜಿಲ್ಲಾ ಆರೋಗ್ಯ ಪ್ರಭಾರ ಶಿಕ್ಷಣಾಧಿಕಾರಿ ನಾರಾಯಣ ಸ್ವಾಮಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಳಂದೂರು ಪ.ಪಂ: ಫೆ. 16ರಂದು ಆಯವ್ಯಯ ತಯಾರಿ ಕುರಿತ ಪೂರ್ವಭಾವಿ ಸಭೆ
ಚಾಮರಾಜನಗರ, ಫೆ. 12:- ಯಳಂದೂರು ಪಟ್ಟಣ ಪಂಚಾಯಿತಿಯ 2018-19ನೇ ಸಾಲಿನ ಆಯವ್ಯಯ ತಯಾರಿ ಸಂಬಂಧ ಪೂರ್ವಭಾವಿ ಸಮಾಲೋಚನ ಸಭೆಯನ್ನು ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಫೆಬ್ರವರಿ 16ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಏರ್ಪಡಿಸಿದೆ.ನೊಂದಾಯಿತ ಸಂಘಸಂಸ್ಥೆಗಳು, ವರ್ತಕರ ಸಂಘಸಂಸ್ಥೆಗಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಯಳಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 19ರಂದು ಬೇಗೂರು ಹೋಬಳಿ ಅಂಚೆಸಂತೆ
ಚಾಮರಾಜನಗರ, ಫೆ. 12 ಅಂಚೆ ಇಲಾಖೆಯು ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯಲ್ಲಿ ಫೆಬ್ರವರಿ 19ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.
ಈ ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಬೇಗೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸ್ಥಗಿತಗೊಂಡಿರುವ ನೀರು ಬಳಕೆದಾರರ ಸಹಕಾರ ಸಂಘಗಳ ಸಮಾಪನೆ : ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನ
ಚಾಮರಾಜನಗರ, ಫೆ. 12 (ಕರ್ನಾಟಕ ವಾರ್ತೆ):- ಚಾಮರಾಜನಗರÀ ಜಿಲ್ಲೆಯಲ್ಲಿ ತಾಲೂಕುಗಳ ಕೆಲ ನೀರು ಬಳಕೆದಾರರ ಸಹಕಾರ ಸಂಘಗಳು ಬೈಲಾದಂತೆ ಉದ್ದೇಶಿತ ಕಾರ್ಯಚಟುವಟಿಕೆಗಳನ್ನು ನಿರ್ವಹಿಸದೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಮಾಪನೆಗೆ ಪ್ರಸ್ತಾವಿಸಲಾಗಿದೆ.ಚಾಮರಾಜನಗರ ತಾಲೂಕಿನ ಕಮರವಾಡಿ, ಯಳಂದೂರು ತಾಲೂಕಿನ ಕುಮಾರನಪುರ, ಕಟ್ನೆವಾಡಿ (ಕಲ್ಲುಗುಡಿ), ಗೌಡಹಳ್ಳಿ, ವೈ.ಕೆ. ಮೋಳೆ, ಅಲ್ಕರೆ ಅಗ್ರಹಾರ, ಹೊನ್ನೂರು ಹಾಗೂ ಮದ್ದೂರು ಸಹಕಾರ ಸಂಘಗಳು ಸ್ಥಗಿತಗೊಂಡಿವೆ.
ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ, ಕೊಳ್ಳೇಗಾಲ, ಅಲಹಳ್ಳಿ (ಟಗರಪುರ 11), ಮಧುವನಹಳ್ಳಿ, ಚÀನ್ನಮರದೊಡ್ಡಿ (ಸತ್ತೇಗಾಲ), ಪಾಳ್ಯ, ಚಿಲಕವಾಡಿ, ಮುಡಿಗುಂಡ, ಸತ್ತೇಗಾಲ (ಅಗ್ರಹಾರ), ಸತ್ತೇಗಾಲ, ಸಿಂಗಾನಲ್ಲೂರು, ಕುಣಗಳ್ಳಿ, ಮುಳ್ಳೂರು, ಕುಂತೂರು, ದೊಡ್ಡ ಇಂದುವಾಡಿ, ಕುಂತೂರು ಹಾಗೂ ಆಲನಹಳ್ಳಿ ನೀರು ಬಳಕೆದಾರರ ಸಹಕಾರ ಸಂಘಗಳು ಸ್ಥಗಿತಗೊಂಡಿವೆ.
ಈ ಸಂಘಗಳಿಂದ ಯಾವುದೆÉೀ ಸೇವೆ, ಸೌಲಭ್ಯಗಳು ದೊರೆಯದೆ ಅನುಪಯುಕ್ತವಾಗಿರುವುದರಿಂದ ಇವುಗಳನ್ನು ಸ್ಥಗಿತವಾಗಿ ಮುಂದುವರಿಸಿಕೊಂಡು ಹೋಗಲು ಅವಕಾಶ ಇರುವುದಿಲ್ಲ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72ರನ್ವಯ ಸಮಾಪನೆಗೆ ಆದೇಶಿಸಿ ಸಮಾಪಕರನ್ನು ನೇಮಕ ಮಾಡಲು ಉದ್ದೇಶಿಸಿದೆ.
ಸಂಘಗಳ ಸಂಬಂಧಪಟ್ಟ ಸದಸ್ಯರು, ಸಾರ್ವಜನಿಕರು, ಸಂಘÀಗಳನ್ನು ಪುನಶ್ಚೇತನಗೊಳಿಸಿ ಮುನ್ನಡೆಸಿಕೊಂಡು ಹೋಗಲು ಆಸಕ್ತಿ ಇದ್ದಲ್ಲಿ ಅಥವಾ ಆಕ್ಷೇಪಣೆಗಳಿದ್ದಲ್ಲಿ 15 ದಿವಸದೊಳಗಾಗಿ ಲಿಖಿತ ಮನವಿಯನ್ನು ಭೂ ಅಭಿವೃದ್ಧಿ ಅಧಿಕಾರಿ (ಸಹಕಾರ), ಕಾಡಾ, ಕಾವೇರಿ ಜಲಾನಯನ ಯೋಜನೆಗಳು, ಮೈಸೂರು ಅಥವಾ ಸಂಬಂಧಪಟ್ಟ ವ್ಯಾಪ್ತಿಯ ಸಹಾಯಕ ಕೃಷಿ ನಿರ್ದೇಶಕರು. ಭೂ ಅಭಿವೃದ್ಧಿ ಯೋಜನೆ. ಕಾಡಾ, ಮೈಸೂರು ಇವರ ಕಚೇರಿಗೆ ಸಲ್ಲಿಸಬೇಕು.
ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಉದ್ದೇಶಿಸಿರುವಂತೆ ಸಂಘವನ್ನು ಸಮಾಪನೆಗೆ ಆದೇಶಿಸಿ ಸಮಾಪಕರಾಗಿ ನೇಮಕ ಮಾಡಲಾಗÀುವುದು. ನಂತರ ಬರುವ ಆಕ್ಷೇಪಣೆಗಳಿಗೆ ಜವಾಬ್ದಾರರಾಗುವುದಿಲ್ಲವೆಂದು ಕಾಡಾ ಭೂ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÀÉ.
ಫೆ. 13ರಂದು ಮಾಂಸ ಮಾರಾಟ ನಿಷೇಧ
ಚಾಮರಾಜನಗರ, ಫೆ. 12 ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಫೆಬ್ರವರಿ 13ರಂದು ಮಾಂಸ ಮಾರಾಟ, ಪ್ರಾಣಿವಧೆ ನಿಷೇಧಿಸಲಾಗಿದೆ.ಮಹಾಶಿವರಾತ್ರಿ ದಿನದಂದು ಮಾಂಸ ಮಾರಾಟ, ಪ್ರಾಣಿವಧೆ ಮಾಡುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಲು ಸೆಕ್ಟರ್ ಅಧಿಕಾರಿಗಳಿಗೆ ಡಿಸಿ ಸೂಚನೆ
ಚಾಮರಾಜನಗರ, ಫೆ. 12 - ಮುಂಬರುವ ವಿಧಾನಸಭಾ ಚುನಾವಣೆಗೆ ನಿಯೋಜನೆಗೊಂಡಿರುವ ಸೆಕ್ಟರ್ ಅಧಿಕಾರಿಗಳು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಲು ಸಿದ್ಧರಾಗಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸೆಕ್ಟರ್ ಅಧಿಕಾರಿಗಳಾಗಿ ಚುನಾವಣಾ ಕೆಲಸಕ್ಕೆ ನಿಯೋಜಿತರಾಗಿರುವ ಜಿಲ್ಲೆಯ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಜಾಪ್ರತಿನಿಧಿ ಕಾಯ್ದೆ 1951ರ ಪ್ರಕಾರ ನಿಯೋಜನೆಗೊಂಡಿರುವ ಪ್ರತಿ ಸೆಕ್ಟರ್ ಅಧಿಕಾರಿಯು ಚುನಾವಣಾ ಆಯೋಗದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕಿದೆ. ಒಬ್ಬ ಸೆಕ್ಟರ್ ಅಧಿಕಾರಿಗೆ 10 ರಿಂದ 12 ಮತಗಟ್ಟೆಗಳ ಪೂರ್ಣ ಜವಾಬ್ದಾರಿ ನೀಡಲಾಗುತ್ತದೆ. ನೀತಿಸಂಹಿತೆ ಉಲ್ಲಂಘನೆ ಸಂಬಂಧ ಕುರಿತು ವರದಿ, ಮಾಹಿತಿ, ಇನ್ನಿತರ ವಿವರಗಳನ್ನು ಒದಗಿಸುವುದು ಸೆಕ್ಟರ್ ಅಧಿಕಾರಿಗಳ ಮುಖ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ಮತದಾರರಿಗೆ ನೀರಿನ ಸೌಲಭ್ಯ, ನೆರಳು, ಶೌಚಾಲಯ, ಅಂಗವಿಕಲರು, ವೃದ್ಧರಿಗೆ ರ್ಯಾಂಪ್ ನಿರ್ಮಿಸಿರುವ ಬಗ್ಗೆ ಪರಿಶೀಲಿಸಿ ವರದಿ ಮಾಡಬೇಕು. ಮತಗಟ್ಟೆ ಸುತ್ತಲಿನ 200 ಮೀ. ಒಳಗೆ ಬರುವ ಕಚೇರಿಗಳನ್ನು ಪರಿಶೀಲಿಸಬೇಕು. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇರುವ ಬಗ್ಗೆ ಬಿಎಲ್‍ಒ ಬಳಿ ಪರಿಶೀಲಿಸಲು ತಿಳಿವಳಿಕೆ ನೀಡಬೇಕು ಎಂದರು.
ಸೆಕ್ಟರ್ ಅಧಿಕಾರಿಗಳಾಗಿ ನಿಯೋಜಿತರಾಗಿರುವವರು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು. ಪಾರದರ್ಶಕ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಯಾವುದೇ ಲೋಪವಿಲ್ಲದೆ ಕಾರ್ಯ ನಿರ್ವಹಿಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ರಾಮು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
No comments:
Post a Comment