ಜಿಲ್ಲಾದಿಕಾರಿಗಳು ಘೋಷಣೆ ಮಾಡೋ ನಿಷೇದಾಜ್ಞೆ ನಿಜಕ್ಕೂ ವೇಸ್ಟ್.!
ಹೌದು ಇದೇನ್ರಿ ಇದು ಖಡಕ್ ಆಗಿ ಈ ತರಹ ಹೇಳ್ತಿದೀರಾ ಅಂದ್ಕೋತಿದೀರಾ.? ಎಸ್.. ಮುಲಾಜೆ ಇಲ್ಲ.. ಎಂದು ಶೀಘ್ರದಲ್ಲೆ ಗೊತ್ತಾಗಲಿದೆ.ಗಲಾಟೆ ಘರ್ಷಣೆಗಳು ನಡೆದಾಗ ಜಿಲ್ಲಾ ದಂಢದಿಕಾರಿ ಜಿಲ್ಲಾದಿಕಾರಿ ಸೂಕ್ತ ಮಾರ್ಗದರ್ಶನ ಆಧೇಶದ ಮೇರೆಗೆ ನಿಷೇದಾಜ್ಞೆ, 144 ಹೇರಲು ಅನುಮತಿ ಕೊಟ್ಟರೂ ಅದನ್ನು ಕಟ್ಟುನಿಟ್ಟಿನಲ್ಲಿ ತರೋಕೆ ಪೊಲೀಸರು ಸಿದ್ದರಾಗುತ್ತಾರೆ. ಇವರಿಗೆ ಕಾನೂನು ಸುವ್ಯಸ್ಥೆ ಹದಗೆಡಬಾರದು, ಜನರ ಆಸ್ತಿಪಾಸ್ತಿ ರಕ್ಷಣೆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾತ್ರ ಈ ನಿರ್ದಾರ ತೆಗೆದುಕೊಂಡು ಎದೆ ಹೇರಿಸಿ ನಿಲ್ಲುತ್ತಾರೆ.
ನಿಷೇದಾಜ್ಞೆ,144 ಸೆಕ್ಷನ್ ಹೇಗೆ ವೇಸ್ಟ್ ಅಂತ ಹೇಳ್ತೀರಾ.? ಅಂದ್ರೆ ನಾವು ಕೊಡ್ತೇವೆ ..ಉತ್ತರ. ಕೇಳಿದ್ರೆ ಅದಿಕಾರಿಗಳ ಜೊತೆ ಜನರು ಕೂಡ ತತ್ತರ ಆಗಲೇಬೇಕು. ಪರೀಕ್ಷಾ ಕೇಂದ್ರ ಘೋಷಣೆ ಮಾಡಿದಾಗಲೇ 100 ಮೀಟರ್ ಅಭ್ಯರ್ಥಿ, ಮೇಲ್ವಿಚಾರಕರು ಸಂಬಂದಿಸಿದವರು ಬಿಟ್ಟು ಬೇರೆ ಯಾರು ಇರಕೂಡದು.. ಪರೀಕ್ಷಾ ಕೇಂದ್ರ ಕೊಠಡಿಯಲ್ಲಿ ಮೊಬೈಲ್ ಬಳಕೆಯಿರಲಿ ತರದೇ ಇರುವಂತೆ ನೋಡಿಕೊಳ್ಳುವುದು. ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸುವುದು ಸೇರಿದಂತೆ ಹತ್ತು ಹಲವಾರು ನಿಬಂದನೆಗಳಡಿ ಸೆ .144 ಘೋಷಣೆ ಮಾಢುತ್ತಾರೆ.
ಸೆ ನಿಷೇದಾಜ್ಞೆ,.144 ಘೋಷಣೆ ಮಾಡಿದ ಮೇಲೇ ಎಗ್ಗಿಲ್ಲದೆ . ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸೋದೆ ಇಲ್ಲ, ಅಲ್ಲೋಂದು ಇಲ್ಲೋಂದು ದೂರು ಹೋದಾಗ ಯಾರನ್ನು ಜವಬ್ದಾರಿ ಮಾಢಿರುತ್ತಾರೋ ಅವರಿಗೆ ಜಾಗೃತವಾಗುವಂತೆ ಹೇಳ್ತಾರೆ. ಅವರು ಬಂದು ಮುಚ್ಚಿಸುತ್ತಾರೆ. ಮೊಬೈಲ್ ಬಳಕೆಯೂ ಅಷ್ಟೆ ಎಗ್ಗಿಲ್ಲದೆಡುತ್ತಿದ್ದ ಪ್ರಸಂಗ ಕಳೆದೆರಡು ವರ್ಷಗಳ ಹಿಂದೆಯೇ ಮಾದ್ಯಮಗಳಲ್ಲಿ ಪ್ರಕಟಿಸಿದ ಮಾಹಿತಿ ಲಭ್ಯವಿದೆ. ಆದರೂ ಮುಂಚೆಯೇ ನಿರ್ದೇಶಕರು ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಯಾಗುವ ಬಹುತೇಕ ಅದಿಕಾರಿಗಳು ಅದು ಕೇಂದ್ರಕ್ಕೆ ನಿಯೋಜನೆಗೊಂಡ ಉನ್ನತ ಅದಿಕಾರಿಗಳೆ ಮೊಬೈಲ್ ಬಳಸದಂತೆ ಈಗಾಗಲೇ ಶಿಖಾ ಅವರು ಕಟ್ಟು ನಿಟ್ಟಾಗಿ ಸೂಚನೆ ನೀಡಲಾಗಿದೆ..
------------
ಎಲ್ಲಿ ಯಾವ ಕೇಂದ್ರಗಳು ಹೇಗೆ ನಡೆಯುತ್ತದೆ ಎಂಬುದು ಗೊತ್ತಿಲ್ಲ. ಆದರೆ ಈಗ ನಾವು ಕೊಡೋ ಉದಾಹರಣೆ ಕೇಳಿದರೆ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯೇ ಮುಂದೆ ನಿಂತು ಕ್ರಮ ಕೈಗೊಳ್ಳಬೇಕಷ್ಟೆ! ಚಾಮರಾಜನಗರದ ಬಹುತೇಕ ಪರೀಕ್ಷಾ ಕೇಂದ್ರಗಳು ಪರೀಕ್ಷೆ ನಡೆಯುವ ವೇಳೆಯಲ್ಲಿಯೇ ಅನಗತ್ಯ ವ್ಯಕ್ತಿಗಳು ಬರುವುದು ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕಿರಿಕಿರಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಇಲಾಖೆ ಉತ್ತರಿಸಬೇಕಿದೆ.
ಪದವಿಪೂರ್ವ ಅಂದರೆ ಪಿ.ಯು. ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿಯೇ ಅದಕ್ಕೆ ಸಂಬಂದಿಸಿದಲ್ಲದ ಅಂದರೆ ಬೇರೆ ಜನರ ಜೊತೆ ಎಸ್ ಎಸ್.ಎಲ್.ಸಿ. ಹಾಗೂ ಪದವಿ ವಿದ್ಯಾರ್ಥಿಗಳು ಆ ಕೇಂದ್ರದ ಸುತ್ತವೇ ಓಡಾಡುತ್ತಿರುತ್ತಾರೆ. ಇದಕ್ಕೆ ಪ್ರಮುಖವಾಗಿ ಅದೆ ಕೇಂದ್ರದಲ್ಲಿಯೇ ಜಂಟಿಯಾಗಿ (sslc,Pu,Degre) ಶಿಕ್ಷಣ ವ್ಯವಸ್ಥೆ ನಡೆಯುತ್ತಿರುವುದು ಕಾರಣವಾಗಿದೆ. ಪರೀಕ್ಷೆ ಮುಗಿಯುವ ತನಕ ಪರೀಕ್ಷೆಗೆ ಸಂಬಂದಿಸದೇ ಯಾವುದೇ ಇರುವ ವಿದ್ಯಾರ್ಥಿಗಳು ಒಳ ಬರದಂತೆ ನೋಡಿಕೊಂಡರೆ ವಿದ್ಯಾರ್ಥಿಗಳು ಮತ್ತಷ್ಟು ಪರೀಕ್ಷೆಯನ್ನು ಸಮದಾನವಾಗಿ ಬರೆಯಲು ಹಾಗೂ ಸುಸೂತ್ರವಾಗಿ ನಡೆಸಲು ಸಾದ್ಯವಾಗಬಹುದು.
ಪ್ರಮುಖವಾದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸಿದರೆ ಯಾವುದೆ ಜಿಲ್ಲೆಗೆ ಕೀರ್ತಿ ತರುವುದರ ಜೊತೆಗೆ ಸೆ.144 ಗೂ ಬೆಲೆ ಸಿಕ್ಕಿದಂತಾಗುತ್ತದೆ ಇಲ್ಲವಾದರೆ ಅದು ವೇಸ್ಟ್ ಅಲ್ಲದೆ ಇನ್ನೇನು.? ನೀವೇ ಯೋಚಿಸಿ.
ಪುಟ್ಟ ಅಭಿನಂದನೆ: ಪ್ರತಿ ವರ್ಷದಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ, ಸೋರಿಕೆ ಎಂಬ ಪದಗಳನ್ನು ಕೇಳಿ ಜಿಜ್ಞಾಸೆ ಮೂಡಿಸಿದ್ದ ಪೋಷಕರು, ವಿದ್ಯಾರ್ಥಿಗಳಿಗೆ ಉತ್ತಮವಾಗಿ ಆಡಳಿತ ಮಾಡಿ ಸೋರಿಕೆ ಎಂಬ ಪದವನ್ನೆ ಕೇಳದಂತೆ ಕಳೆದ ಸಾರಿ ಮಾಢಿದ್ದಾರೆ ಅಂದರೆ ಅದು ಈ ಹಿಂದೆ ಮೈಸೂರು ಜಿಲ್ಲಾದಿಕಾರಿಯಾಗಿದ್ದ ಹಾಲಿ ಪ.ಪೂ.ಶಿ.ಇ ನಿರ್ದೇಶಕರಾದ ಶಿಖಾ ಅವರು.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಂತೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮ, ಕೇಂಧ್ರಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಕೆ, ಜಿಲ್ಲಾ ಕೇಂದ್ರದ ಖಜಾನೆಯಿಂದಲೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪತ್ರಿಕೆಗಳ ರವಾನೆ ಮಾಢುವುದರ ಮೂಲಕ ತಮ್ಮ ಕಾರ್ಯದಕ್ಷತೆಯನ್ನು ಮಾಡಿದ್ದಾರೆ. ಚಾಮರಾಜನಗರ ಜಿಲ್ಲಾ ಕೇಂದ್ರ ಅದು ಜಿಲ್ಲಾಡಳಿತಭವವನದ ಖಜಾನೆ ಸುತ್ತಮುತ್ತ ನಮಗೆ ತಿಳಿದಂತೆ 10 ಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಿ ಯಾವುದೇ ದೂರು ಬರದಂತೆ ನೋಡಿಕೊಂಡಿದ್ದಾರೆ. ಬಹುತೇಕ ಇದೇ ತರಹ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಕಟ್ಟುನಿಟ್ಟು ಕ್ರಮ ತೆಗೆದುಕೊಂಡು ಕೆಲಸ ಮಾಡಲು ಕಾರಣ ಕರ್ತರಾದವರು ಶಿಖಾ ಅವರು ಎಂದರೆ ತಪ್ಪಾಗಲಾರದು.
ನಮ್ಮದೊಂದು ಮನವಿ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಂತೆ ಎಷ್ಟು ಕ್ರಮ ಜರುಗಿಸಿದ್ದೀರೋ ಅಷ್ಟೇ ಪ್ರಮುಖವಾಗಿ ಯಾವ ಪರೀಕ್ಷಾ ಕೇಂಧ್ರದಲ್ಲಿ ಸಿ.ಸಿ. ಕ್ಯಾಮೆರಾ ಹಾಕಿಲ್ಲ ಅಂತಹ ಕಾಲೇಜನ್ನು ಕೇಂದ್ರವನ್ನಾಗಿ ಮಾಡಲೇ ಬೇಡಿ.ಕಾರಣ ಅಂತಹ ಕಾಲೇಜಿನಲ್ಲಿ ನಕಲು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇವರಿಗೂ ನಮ್ಮ ಧನ್ಯವಾದ: ಸೋರಿಕೆಗೆ ಕಾರಣರಾದ ಕಿಡಿಗೇಡಿಗಳನ್ನ
ಕಳೆದ ವರ್ಷ ದೇವನಹಳ್ಳಿಯಲ್ಲಿ ಬಂದಿಸಿದ್ದರು. ಸಂತಸದ ವಿಚಾರ ಎಂದರೆ ಪ್ರಮುಖ ಆರೋಪಿ ಬಂದಿಸಿದ ಪ್ರಮುಖ ಸಿಬಿಐ ಅದಿಕಾರಿಗಳಲ್ಲಿ ಓರ್ವರು ಚಾಮರಾಜನಗರ ದಲ್ಲಿ ಕೆಲಸ ನಿರ್ವಹಿಸಿದ ಇನ್ಸ್ ಪೆಕ್ಟರ್ ಮಹದೇವಪ್ಪ ಎಂಬುದು ಒಂದು. ಎಲ್ಲಾ ತಂಡದ ಅದಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಲೆಬೇಕು.
ಯಾವುದೆ ಗೊಂದಲ ಆಗದಂತೆ ಕಾನೂನಡಿಯಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಈಗಾಗಲೇ ಪತ್ರ ಬರೆಯಲಾಗಿದ್ದು ಚಾಮರಾಜನಗರ ಕಡೆಯಿಂದ ಪತ್ರವೊಂದನ್ನ ರವಾನಿಸಲಾಗಿದ್ದು ಉಪನಿರ್ದೇಶಕರಿಗೆ ಸೂಕ್ತ ಸಹಕಾರ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವೀರಭದ್ರಸ್ವಾಮಿ ಅವರು ಮನವಿ ಮಾಡಿದ್ದಾರೆ.
ಇಲಾಖೆಗೆ ಚಳ್ಳೆಹಣು ತಿನ್ನಿಸಿದ ಪರೀಕ್ಷಾ ಕೇಂಧ್ರಗಳು: ಕೇಂದ್ರದಲ್ಲಿ ಸಿ.ಸಿ.ಇಲ್ಲದಿದ್ದರೂ ಅಳವಡಿಸಲಾಗಿದೆ ಎಂಬ ಮಾಹಿತಿ ಇಲಾಖೆಗೆ ಕೊಟ್ಟರು ನಂತರ ಮಾಹಿತಿ ಹಕ್ಕಿ ಅರ್ಜಿದಾರ ಮಾಹಿತಿ ಕೇಳಿದಾಗ ಅಲ್ಲಿ ಕೆಟ್ಟುಹೋಗಿರುವ ಅಂಶ ಗೊತ್ತಾಗಿದೆ.)
ಯಾವ ಕಾಲೇಜಿನಲ್ಲಿ ಕೇಂದ್ರ ಮಾಡಿದ್ದಾರೋ ಆ ಕೇಂದ್ರದಲ್ಲಿ ಕೆಲಸ ಮಾಡುವ ಯಾವುದೇ ಸಿಬ್ಬಂದಿಯನ್ನು ಅಲ್ಲಿಗೆ ಸೇರಿಸಬೇಡಿ.ಕಾರ್ಯಕ್ಕೆ ನಿಯೋಜನೆ ( ನೀರು ತರುªವನಿಂದ ಹಿಡಿದು. ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ಕೊಡುವುದು, ಮತ್ತೆ ವಾಪಸ್ ಪಡೆದು ಕೇಂದ್ರದ ಮೇಲ್ವಿಚಾರಕರತ್ತ ಹೋಗುವ ಬಹುಶಃ ಇನ್ವೆಲಿಟೆರ್ ಸಿಬ್ಬಂಧಿಗಳು) ಮಾಡಿಕೊಳ್ಳಬೇಡಿ.
ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಯಾಗುವ ಪೊಲೀಸರ ಮಕ್ಕಳು ಪರೀಕ್ಷೆ ಬರೆಯುವಂತಿದ್ದರೆ ಅಂತಹ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತಿಲ್ಲ. ಅಂತಹವರನ್ನ ಕೇಂದ್ರಸ್ಥಾನದಿಂದ ತೆರೆವು ಮಾಡಿಸುವುದು ( ಕಳೆದೆರಡು ವರ್ಷದ ಹಿಂದೆ ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರು ಆದೇಶ ಹೊರಡಿಸಿ ಬೇರೆ ಸಿಬ್ಬಂಧಿಗಳನ್ನು ನಿಯೋಜಿಸುವಂತೆ ನಿಸ್ತಂತು ಮೂಲಕ ಮಾಹಿತಿ ರವಾನಿಸಿದ್ದರು)
ಮಾದ್ಯಮದವರೊಂದಿಗೆ ಜಾಗೃತದಳದ ಸಿಬ್ಬಂದಿಗಳು ಸಹಕರಿಸುವಂತೆ ಸೂಚಿಸುವುದು ಹಾಗೂ ಕೆಲವು ಮಾದ್ಯಮದವರಿಗೆ ಕೊಠಡಿಯೊಳಗೆ ಹೋಗದಂತೆ ಮಾರ್ಗದರ್ಶನ ನೀಡುವುದು.
ಮಾಹಿತಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ (*9480030980)
ಕಳೆದ ಭಾರಿ ಜಾಗೃತರಾಗಿ ನೋಢಿಕೊಂಡ ಉಪವಿಭಾಗಾದಿಕಾರಿ (ಎ.ಸಿ) ಕವಿತಾ ಜಯರಾಂ, ಡಿಡಿಪಿಐ ಮಮತ, ಅಪರ ಜಿಲ್ಲಾದಿಕಾರಿ ಭಾರತಿ ಅವರ ಕಾರ್ಯ ನಿಜಕ್ಕೂ ಮೆಚ್ಚಬೇಕು ಹಾಗೂ ಈವಾಗ ಈಗ ಜಿಲ್ಲಾ ಕೇಂದ್ರದಲ್ಲಿ ಇಲ್ಲ ಆದರೂ ಅವರಿಗೂ ಜನತೆ ಪರವಾಗಿ ಅಭಿನಂದನೆ ಸಲ್ಲಿಸಬೇಕಾಗಿದೆ
No comments:
Post a Comment