Saturday, 17 February 2018

ಫೆ. 19ರಂದು ದಲಿತ ವಚನಕಾರರು, ಶ್ರೀ ಸೇವಾಲಾಲ, ಸರ್ವಜ್ಞ, ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ (17-02-2018)

ವೈದ್ಯ್ಯಕೀಯ ಕಾಲೇಜಿನ ಡಿ.ನ್‍ಚಂದ್ರಶೇಖರ್ ಅವರಿಗೆ ಜಿಲ್ಲಾಸ್ಪತ್ರೆಯಿಂದ ಬಿಳ್ಕೋಡುಗೆ 

ಚಾಮರಾಜನಗರ ಫೆಬ್ರವರಿ.17- ಜಿಲ್ಲೆಗೆ ಕೊಡುಗೆಯಾಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ನೀಡಿದ  ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ದಿವಂಗತ ಉಸ್ತುವಾರಿ ಸಚಿವರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರನ್ನು ನಾವುಗಳು ಸ್ಮರಿಸಬೇಕು ಎಂದು ವರ್ಗವಣೆ ಗೊಂಡ ಚಾಮರಾಜನಗರ ವೈದ್ಯಕೀಯ ಕಾಲೇಜಿನ (ಡಿ.ನ್)ಡಾ.ಟಿ.ಎನ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಸ್ಪತ್ರೆಯ ಹಿಂಭಾಗ ಸರ್ಕಾರಿ ಶಶ್ರೂಷಕರ ತರಬೇತಿ ಕೇಂದ್ರದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ನಡೆದ ಡಿ.ನ್ ಚಂದ್ರಶೇಖರ್ ಅವರ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಿಲ್ಲೆಯ ವೈದ್ಯಕೀಯ ಕಾಲೇಜಿನ ಪ್ರಪ್ರಥಮ ನಿರ್ದೇಶಕರಾಗಿ ಸರ್ಕಾರವು ನನನ್ನು ನೇಮಕಮಾಡಿತ್ತು. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಉತ್ತಮಗೊಳಿಸಿ ವೈದ್ಯಕೀಯ ಕಾಲೇಜನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜಿನ ಸಮೀಪದಲ್ಲಿ  450 ಹಾಸಿಗೆಗಳ ಅಸ್ಪತ್ರೆಯನ್ನು ತರೆಯಲು ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಗೊಷಣೆಮಾಡಿರುವುದು ಸಂತೋಷದ ವಿಷಯವಾಗಿದೆ. ಜಿಲ್ಲೆಯಲ್ಲಿ ಇರುವ ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ಉತ್ತಮಸೇವೆ ಸಲ್ಲಿಸುತ್ತಿದ್ದಾರೆ. ಅಸ್ಪತ್ರೆ ಅಭಿವೃದ್ದಿ ಹೊಂದಬೇಕಾದರೆ ಎಲ್ಲಾರೂ ಒಟ್ಟಿಗೆನಿಂದ ಕೆಲಸ ನಿರ್ವಹಿಸಿದರೆ ಮಾತ್ರ ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಸರ್ಜನ್ ರಘುರಾಮ್‍ಸರ್ವೆಗರ್ ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ ಉತ್ತಮವಾದ ಯಂತ್ರೋಪಕರಣಗಳು ಸಿ.ಟಿ.ಸ್ಯಾನಿಗ್ ಕೆಲಸ ನಿರ್ವಹಿಸುತ್ತಿದೆ ಇವೇಲ್ಲವೂ ಬರಲು ಬರಲು ಕಾರಣ ಜಿಲ್ಲೆಗೆ ಬಂದಿರುವ ವೈದ್ಯಕೀಯ ಕಾಲೇಜು. ನಮ್ಮ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರರಾಂಭವಾದ ಸಂದರ್ಭದಲ್ಲಿ ಕೆಲವು ಜಿಲ್ಲೆಯಲ್ಲಿ ಡಿ.ನ್. ಹಾಗಿ ಕೆಲಸ ನಿರ್ವಸುತ್ತಿದ್ದ ಅವರನ್ನು 1-2 ವರ್ಷದಲ್ಲಿ ವರ್ಗವಣೆಗೊಂಡಿದ್ದಾರೆ. ಅದರೆ ನಿಷ್ಠೆಯಿಂದ ಚಾಮರಾಜನಗರದ ವೈದ್ಯಕೀಯ ಕಾಲೇಜಿನಲ್ಲಿ  4 ವರ್ಷಗಳು ಪೂರೈಸಿದ ಹೆಗ್ಗಳಿಕೆಗೆ ಚಂದ್ರಶೇಖರ್‍ಅವರು ಪಾತ್ರರಾಗಿದ್ದಾರೆ. ಎಂದು ತಿಳಿಸಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡ ವೈದ್ಯಕೀಯ ಕಾಲೇಜಿ ಪ್ರಭಾರ ಡಿ.ನ್. ಶ್ರೀನಿವಾಸ್ ಅವರು ಮಾತನಾಡಿ ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಾಕರಾಗಿ  ಸೇವೆ ಸಲ್ಲಿಸಿ ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡಿನ್ (ಪ್ರಭಾರ) ಹಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಜಿಲ್ಲಾಸ್ಪತ್ರೆಯ ವೈದ್ಯರುಗಳ ಹಾಗೂ ಕಾಲೇಜಿನ ಮತ್ತು ಸ್ಪತ್ರೆಯ ಸಿಬಂದ್ದಿಗಳ ಸಹಕಾರ ಬಹಳ ಮುಖ್ಯ ನೌಕರರಿಗೆ ತೊಂದರೆ ಇದ್ದರೆ ನನನ್ನು ಕುದ್ದಗಿ ಸಂರ್ಪಕಿಸಬಹುದು. ನಿಮ್ಮೇಲ್ಲರ ಸಹಾಕರದಿಂದ ಉತ್ತಮ ಮಟ್ಟದಲ್ಲಿ ಕೆಲಸವನ್ನು ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಕೃಷ್ಣಪ್ರಸಾದ್, ಡಾ,ಸಂಜೀವರೆಡ್ಡಿ, ಡಾ.ಮಹೇಶ್, ಡಾ. ಮಾರುತಿ, ಡಾ.ಶಿವಣ್ಣ, ಡಾ.ಭಾಗೀರಥಿ, ಡಾ.ಸುಜಾತ, ಡಾ.ಮೋಹನ್‍ಗೌಡರ್, ಡಾ.ಸತ್ಯಪ್ರಕಾಶ್, ಡಾ.ಬಾಲಸುಬ್ರಮಣ್ಯ, ಡಾ.ರಾಜೇಶ್ವರಿ, ಶಶ್ರೂಷಕ ಮಹದೇವು ಇನ್ನುಮುಂತಾದವರು ಹಾಜರಿದ್ದರು.

ಪರಿಶಿಷ್ಟ ವರ್ಗ, ಪಂಗಡದ ರೈತರಿಗೆ ಹನಿ ನೀರಾವರಿಗೆ ಸಹಾಯಧನ

ಚಾಮರಾಜನಗರ, ಫೆ. 17- ತೋಟಗಾರಿಕೆ ಇಲಾಖೆಯು 2017-18ನೇ ಸಾಲಿನ ಸೂಕ್ಷ್ಮ ಹನಿ ನೀರಾವರಿ ಯೋಜನೆ (ಡ್ರಿಪ್ ಇರಿಗೇಷನ್) ಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳುವ ಪರಿಶಿಷ್ಟ ವರ್ಗ, ಪಂಗಡದ ರೈತರಿಗೆ ಸರ್ಕಾರ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿಟ್ಟು ಶೇ.90ರ ಸಹಾಯಧವನ್ನು ಪರಿಷ್ಕøತ ದರದಂತೆ ನೀಡಲು ಅವಕಾಶ ಕಲ್ಪಿಸಿದೆ.
ಕೊಳವೆ ಬಾವಿ, ನೀರಾವರಿ ಮೂಲ ಹೊಂದಿರುವ ರೈತರು ಪ್ರಸಕ್ತ ಆರ್ಥಿಕ ವರ್ಷ ಅಂತ್ಯಕ್ಕೆ ಬಂದಿರುವುದರಿಂದ ಕೂಡಲೇ ಅವಶ್ಯಕ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 19ರಂದು ದಲಿತ ವಚನಕಾರರು, ಶ್ರೀ ಸೇವಾಲಾಲ, ಸರ್ವಜ್ಞ, ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ

ಚಾಮರಾಜನಗರ, ಫೆ. 1- ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ದಲಿತ ವಚನಕಾರರ ಜಯಂತಿ, ಸಂತ ಶ್ರೀ ಸೇವಾಲಾಲ ಜಯಂತಿ, ಸರ್ವಜ್ಞ ಜಯಂತಿ, ಛತ್ರಪತಿ ಶಿವಾಜಿ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಫೆಬ್ರವರಿ 19ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಮುದಾಯದ ಮುಖಂಡರು, ಸಂಘಸಂಸ್ಥೆ, ಕನ್ನಡಪರ ಸಂಘಟನೆಗಳ ಮುಖಂಡರು, ನಾಗರಿಕರು, ಪ್ರತಿನಿಧಿಗಳು ಹಾಜರಾಗಿ ಸಲಹೆ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು