Sunday, 4 February 2018

ಶಿವರಾತ್ರಿ ಜಾತ್ರಾ ಮಹೋತ್ಸವ : ಅಗತ್ಯ ಸಿದ್ದತೆಗೆ ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ ಸೂಚನೆ (04-02-2018)

   

ಶಿವರಾತ್ರಿ ಜಾತ್ರಾ ಮಹೋತ್ಸವ : ಅಗತ್ಯ ಸಿದ್ದತೆಗೆ ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ ಸೂಚನೆ

  (#VSS #RAMASAMUDRA #VEERABHADRA #SWAMY)

ಚಾಮರಾಜನಗರ, ಫೆ. 04 - ಕೊಳ್ಳೆಗಾಲ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.12 ರಿಂದ 16 ರವರಗೆ ಶಿವರಾತ್ರಿ ಜಾತ್ರಾಮಹೋತ್ಸವ ನಡೆಯಲಿರುವ ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಸಿದ್ದತೆ ಮಾಡುವಂತೆ ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ||ಗೀತಾ ಮಹದೇವಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ನಗರದ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ಇಂದು ಶಿವರಾತ್ರಿ ಜಾತ್ರಾಮಹೋತ್ಸವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲೆಮಹದೇಶ್ವರಬೆಟ್ಟಕ್ಕೆ ಈಚಿನ ದಿನಗಳಲ್ಲಿ ವಿಶೇಷ ಸಂದರ್ಭದಲ್ಲಿ ಸೇರಿದಂತೆ ಪ್ರತಿದಿನವೂ ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ, ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಡೆಯುವ ಜಾತ್ರೆಯಲ್ಲಿ ರಾಜ್ಯಸೇರಿದಂತೆ ನೆರೆರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಕುಡಿಯುವ ನೀರು, ವಾಸ್ತವ್ಯ, ದಾಸೋಹ ವಿತರಣೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಭಕ್ತಾದಿಗಳ ಸುರಕ್ಷತೆ ಸಹ ಮುಖ್ಯವಾಗಿದೆ, ಶೌಚಾಲಯ, ಸ್ವಚ್ಚತೆ ಸೇರಿದಂತೆ ಅಗತ್ಯ ಸೌಲಭ್ಯಗಳು ಸರಿಯಾಗಿ ವ್ಯವಸ್ಥೆಯಾಗಬೇಕು. ಎಲ್ಲಾ ಭಕ್ತದಿಗಳಿಗೂ ದೇವರ ದರ್ಶನ, ಇನ್ನಿತರ ವ್ಯವಸ್ಥೆಗಳಿಗೆ ಪೂರ್ಣ ಪ್ರಮಾಣದಲ್ಲಿ ತೊಂದರೆಯಾಗದಂತೆ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಹನೂರು ಶಾಸಕರಾದ ಆರ್.ನರೇಂದ್ರ ಮಾತನಾಡಿ, ಶಿವರಾತ್ರಿ ಜಾತ್ರಾಮಹೋತ್ಸವ ಸಂದರ್ಭದಲ್ಲಿ, ವಾಹನನಿಲುಗಡೆಗೆ ಯಾವುದೇ ತೊಂದರೆಯಾಗದಂತೆ ಪಾರ್ಕಿಂಗ್ ನಿರ್ಮಾಣ ಮಾಡಬೇಕು, ಅಪರಾಧಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಟ್ಟದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಅಳವಡಿಸಬೇಕು, ಬೆಟ್ಟಕ್ಕೆ ಬಸ್‍ನಲ್ಲಿ ಬರುವವರಲ್ಲದೇ, ನಾನಾ ಭಾಗದಿಂದಲೂ ಪಾದಯಾತ್ರೆಯಲ್ಲಿ ಬರುತ್ತಾರೆ, ಅವರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಟ್ಯಾಂಕರ್ ಬಳಸುವಂತೆ ಸೂಚಿಸಿದರು.
ಜಾತ್ರಾಮಹೋತ್ಸವದಲ್ಲಿ ಹೆಚ್ಚಿನಭಕ್ತಾದಿಗಳು ಭಾಗವಹಿಸುವುದರಿಂದ ವಾಸ್ತವ್ಯಕ್ಕೆ ಸಮಸ್ಯೆಯಾಗಬಾರದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನೆರಳಿಗಾಗಿ ಅಗತ್ಯ ವ್ಯವಸ್ಥೆ ಅಳವಡಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಭಕ್ತಾದಿಗಳಿಗೆ ದಾಸೋಹದಲ್ಲಿ ಯಾವುದೇ ವ್ಯತ್ಯಯವಾಗಬಾರದು, ಅಂತರ್ಜಲಸ್ನಾನಘಟ್ಟದಲ್ಲಿ ಶವರ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು, ಬಯಲುಬಹಿರ್ದೆಸೆ ತಡೆಗಟ್ಟುವ ನಿಟ್ಟಿನಲ್ಲಿ ತಾತ್ಕಾಲಿಕಶೌಚಾಲಯ ನಿರ್ಮಾಣ ಮಾಡಲು ಆಧ್ಯತೆ ನೀಡಬೇಕು ಎಂದು ನರೇಂದ್ರರವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿ, ಕೊಳ್ಳೇಗಾಲದಲ್ಲಿ ರಸ್ತೆ ಅಗಲೀಕರಣ ಹಾಗೂ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಬಸ್‍ಗಳ ನಿಲುಗಡೆಗೆ ಸಮಸ್ಯೆಯಾಗಬಹುದು, ಇದಕ್ಕಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು ಆಯಾಸ್ಥಳಗಳಿಂದಲೇ ನೇರವಾಗಿ ಹೆಚ್ಚು ಬಸ್ ಸಂಚಾರಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಜಾತ್ರೆಯಲ್ಲಿ ಭಾಗವಹಿಸುವ ಜನರಿಗೆ ತೊಂದರೆಯಾಗದಂತೆ ಕರ್ನಾಟಕ ಸಾರಿಗೆ ನಿಗಮವು ಬಸ್ ಸೌಕರ್ಯ ಕಲ್ಪಿಸಬೇಕಿದೆ, ಈ ಹಿಂದಿನಿಂದಲೂ ಪರವಾನಗಿ ಪಡೆದಿರುವ ಖಾಸಗಿ ಬಸ್‍ಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಬೇಕು, ತಪಾಸಣೆ ಮಾಡಿ, ಬಿಡಲು ತಾಳಬೆಟ್ಟದಲ್ಲೇ ಚೆಕ್‍ಪೋಸ್ಟ್ ತೆರೆಯಬೇಕು ಎಂದರು.
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್' ಜಾತ್ರಾಮಹೋತ್ಸವ ಸಂಬಂಧ ಹೆಚ್ಚಿನ ಬಸ್‍ಗಳನ್ನು ಆಯಾಘಟಕಗಳಿಂದಲೇ ಓಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಮಿಳುನಾಡು ಸಾರಿಗೆಸಂಸ್ಥೆಯ ಅಧಿಕಾರಿಗಳು ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಬಸ್ ಓಡಿಸುವುದಾಗಿ ತಿಳಿಸಿದರು.
ಸಾಲೂರುಬೃಹನ್ಮಠದ ಪಟ್ಟದ ಗುರುಸ್ವಾಮೀಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ||ಕೆ.ಹರೀಶ್ ಕುಮಾರ್ ಮಲೆಮಹದೇಶ್ವರಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ.ರೂಪಾ, ಅಧಿಕಾರಿ  ಬಸವರಾಜು ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಪ್ರಾಧಿಕಾರದ ಸದಸ್ಯರಾದ ಕೊಪ್ಪಾಳಿಮಹದೇವನಾಯಕ, ಕೀಳನಪುರ ಮಹದೇವಪ್ಪ, ಜವರೇಗೌಡ, ದೇವರಾಜು, ಕಾವೇರಿ ಶಿವಕುಮಾರ್, ಎ.ಎಸ್.ಪಿ ಗೀತಾ ಪ್ರಸನ್ನ, ಇನ್ನೀತರರು ಹಾಜರಿದ್ದರು.
*****

ಚಾಮರಾಜನಗರತಾಲ್ಲೂಕಿನ ಪುಣಜೂರು ಗ್ರಾಮದಲ್ಲಿಆರೋಗ್ಯ ಶಿಬಿರದಲ್ಲಿಡಾ.ಶ್ರೀನಿವಾಸ ಕೊತಬಾಳ ಮಾತನಾಡಿದರು.

ಸೂಕ್ತ ಆಹಾರದಿಂದಆರೋಗ್ಯವೃದ್ಧಿ: ಶ್ರೀನಿವಾಸ ಕೊತಬಾಳ

ಚಾಮರಾಜನಗರ:ಗುಣಮಟ್ಟಆಹಾರವನ್ನು ಸರಿಯಾದ ಸಮಯದಲ್ಲಿಸೇವನೆ ಮಾಡುವುದರಿಂದಆರೋಗ್ಯವನ್ನು ಕಾಪಾಡಿಕೊಳ್ಳಬಹುದುಎಂದುಡಾ. ಶ್ರೀನಿವಾಸ ಕೊತಬಾಳ ಅವರು ಸಲಹೆ ನೀಡಿದರು.

ತಾಲ್ಲೂಕಿನ ಪುಣಜೂರುಗ್ರಾಮದಲ್ಲಿ ಆಯುಷ್‍ಇಲಾಖೆಯಿಂದ ಏರ್ಪಡಿಸಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಆರೋಗ್ಯ ಹದಗೆಡಲು ಮುಖ್ಯಕಾರಣಆತ ಸೇವಿಸುವ ಆಹಾರ.ಮಾನವನ ಬೆಳವಣಿಗೆಗೆ ಆಹಾರಅತಿ ಮುಖ್ಯ.ಆದರೆಅದನ್ನು ನಿಯಮಿತ ಮತ್ತು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಹೊತ್ತಿಲ್ಲದ ಹೊತ್ತಿನಲ್ಲಿ ಸಿಕ್ಕಾಪಟ್ಟೆ ತಿನ್ನುವುದರಿಂದ ಶರೀರದಲ್ಲಿರೋಗ ನಿರೋಧಕ ಶಕ್ತಿ ಕುಂದುಹೋಗುತ್ತದೆ. ಬೊಜ್ಜು ಬೆಳೆಯುತ್ತದೆ.ಆದ್ದರಿಂದ ಸೂಕ್ತ ಆಹಾರ ಸೇವಿಸಿ, ತಕ್ಕಮಟ್ಟಿಗೆವ್ಯಾಯಮ, ಕೆಲಸ ಮಾಡಬೇಕುಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶದಜನರುತರಕಾರಿ, ಬೆಳೆ ಕಾಳುಗಳಿಗೆ ಪಟ್ಟಣದ ಮಾರುಕಟ್ಟೆಯನ್ನೇ ಅವಲಂಬಿಸಬಾರದು.ಮನೆಯ ಹಿತ್ತಲಿನಲ್ಲಿತರಕಾರಿ, ಸೊಪ್ಪು, ಪಪ್ಪಾಯಿ, ನುಗ್ಗೆಯನ್ನು ಬೆಳೆದುಕೊಳ್ಳಬೇಕು.ಜಮೀನಿನಲ್ಲಿ ಸಿರಿಧಾನ್ಯಗಳನ್ನು ಬೆಳೆದು ಅದನ್ನೇಆಹಾರಕ್ಕೆ ಬಳಕೆ ಮಾಡಿಕೊಳ್ಳಬೇಕು. ಇದರಿಂದಖರ್ಚು ಉಳಿಯುತ್ತದೆ.ಆರೋಗ್ಯಚನ್ನಾಗಿರುತ್ತದೆಎಂದರು.
ಕಾರ್ಯಕ್ರಮದಲ್ಲಿಡಾ.ಶೋಭಾ, ಡಾ.ವೀರಣ್ಣ, ಡಾ. ಅವಿನಾಶ್ ಶಾಲಾ ಮುಖ್ಯ ಶಿಕ್ಷಕಿ ಗೀತಾ  ಸಂಯೋಜಕಿ ಲೀನಾ ಕುಮಾರಿ ಮತ್ತಿತರರು ಹಾಜರಿದ್ದರು. ಪುಣಜೂರುಗ್ರಾಮಸ್ಥರಿಗೆಆರೋಗ್ಯತಪಾಸಣೆ ನಡೆಸಲಾಯಿತು.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು