ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ನೇಮಕಾತಿಗಾಗಿ ನೇರ ಸಂದರ್ಶನ
ಚಾಮರಾಜನಗರ, ಫೆ. 07 - ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಶಿಕ್ಷಕರ ನೇಮಕಾತಿಗಾಗಿ ಫೆಬ್ರವರಿ 14ರಂದು ನೇರ ಸಂದರ್ಶನ ಕರೆಯಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. 1 ರಿಂದ 5ನೇ ತರಗತಿಯವರೆಗೆ ಬೋಧಿಸಲು ಕಂಪ್ಯೂಟರ್ ಇನ್ಸಸ್ಟ್ರಕ್ಟರ್, ಸಂಗೀತ ವಿಷಯಗಳಲ್ಲಿ ಪ್ರಾಥಮಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದು ಮಾಸಿಕ ಸಂಬಳ 21250 ರೂ.ಗಳಾಗಿರುತ್ತದೆ.
6 ರಿಂದ 9ನೇ ತರಗತಿವರೆಗೆ ಇಂಗ್ಲೀಷ್, ಹಿಂದಿ, ಸಂಸ್ಕøತ, ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಪಿಇಟಿ, ವರ್ಕ್ ಎಕ್ಸ್‍ಪೀರಿಯನ್ಸ್, ಆರ್ಟ್ ಎಜುಕೇಷನ್ ವಿಷಯ ಬೋಧಿಸಲು ಟ್ರೈನ್ಡ್ ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಶಿಕ್ಷಕರಿಗೆ ಮಾಸಿಕ ಸಂಬಳ 26250 ರÀೂ. ನೀಡಲಾಗುತ್ತದೆ.
ಡಿಇಓ, ಯೋಗ ಇನ್‍ಸ್ಟ್ರಕ್ಟರ್ ಹಾಗೂ ಕನ್ನಡ ಶಿಕ್ಷಕರನ್ನು (ಪಾರ್ಟ್ ಟೈಂ) ಮಾಸಿಕ ಕನ್‍ಸಾಲಿಡೇಟೆಡ್ ವೇತನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಅಂದು ಬೆಳಿಗ್ಗೆ 8 ರಿಂದ 8.30ರವರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ವಿದ್ಯಾರ್ಹತೆ, ಇನ್ನಿತರ ಎಲ್ಲ ವಿವರಗಳಿಗೆÀ ವೆಬ್ ಸೈಟ್ ತಿತಿತಿ.ಞಜಛಿhಚಿmಚಿಡಿಚಿರಿಚಿಟಿಚಿgಚಿಡಿ.ಚಿಛಿ.iಟಿ ನೋಡುವಂತೆ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಶವ : ಹೆಸರು ವಿಳಾಸ ಪತ್ತೆಗೆ ಮಾಹಿತಿ ನೀಡಲು ಕೋರಿಕೆಚಾಮರಾಜನಗರ, ಫೆ. 07 - ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಬೇಗೂರು ರಸ್ತೆ ಕೋಳಿಪಾರಂ ಬಳಿ ಅಪರಿಚಿತ ಪುರುಷನ ಶವವೊಂದು ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದರ ಗುರುತು ಹಿಡಿಯಲು ಮಾಹಿತಿ ನೀಡುವಂತೆ ತೆರಕಣಾಂಬಿ ಪೊಲೀಸ್ ಠಾಣೆ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.
20 ರಿಂದ 25 ವರ್ಷ ವಯಸ್ಸಿನ ವ್ಯಕ್ತಿಯನ್ನು ಯಾರೋ ವ್ಯಕ್ತಿಗಳು ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಯಾರಿಗೂ ಗೊತ್ತಾಗದ ಹಾಗೆ ಸಾಕ್ಷ್ಯಾಧಾರಗಳನ್ನು ನಾಶಮಾಡಲು ಬೆಂಕಿ ಹಾಕಿ ಸುಟ್ಟು ಹಾಕಿರುವ ಬಗ್ಗೆ ಠಾಣೆಯಲ್ಲಿ ಕೇಸು ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ. ಈ ಅಪರಿಚಿತ ಮೃತನ ಹೆಸರು, ವಿಳಾಸ ಪತ್ತೆಗೆ ಮಾಹಿತಿ ಇದ್ದಲ್ಲಿ ತೆರಕಣಾಂಬಿ ಪೊಲೀಸ್ ಠಾಣೆಗೆ (08229-232235) ತಿಳಿಸುವಂತೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
x
ಹಿಂದುಳಿದ ವರ್ಗಗಳ ಮಹಿಳಾ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಚಾಮರಾಜನಗರ, ಫೆ. 07 - ಕೊಳ್ಳೇಗಾಲ ನಗರಸಭೆಯು 2017-18ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ನೀಡಲಾಗುವ ಸಹಾಯಧನಕ್ಕೆ ಹಿಂದುಳಿದ ವರ್ಗಗಳ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಂತ ಖಾಲಿ ನಿವೇಶನ ಹೊಂದಿರಬೇಕು. ಅರ್ಜಿಯನ್ನು ಪಡೆದು ಭರ್ತಿ ಮಾಡಿ ಫೆಬ್ರವರಿ 28ರೊಳಗೆ ಜಾತಿ, ವರಮಾನ ಪತ್ರ, ಪಡಿತರ ಚೀಟಿ, ನಿವೇಶನ ದಾಖಲೆ, ಆದಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ನೋಟರಿ ಪ್ರಮಾಣ ಪತ್ರ (ಅಫಿಡವಿಟ್), ನಿವೇಶನದ ನಮೂನೆ 3 ದಾಖಲಾತಿಗಳನ್ನು ಗೆಜೆಟೆಟ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ವಿವರಗಳಿಗೆ ನಗರಸಭೆ ಕಚೇರಿ ಸಂಪರ್ಕಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಫೆ. 16ರಂದು ಕೊಳ್ಳೇಗಾಲ ತಾಲೂಕು ಪ.ಜಾ, ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ: ಕುಂದುಕೊರತೆ ಬಗ್ಗೆ ಲಿಖಿತ ಸಲ್ಲಿಕೆಗೆ ಮನವಿ
ಚಾಮರಾಜನಗರ, ಫೆ. 07:- ಕೊಳ್ಳೇಗಾಲ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಪರಿಶಿಷ್ಟ ಜಾತಿ ವರ್ಗದವರ ಹಿತರಕ್ಷಣೆ ಸಂಬಂಧ ಹಾಗೂ ಕುಂದುಕೊರತೆಗಳ ಬಗ್ಗೆ ಸಭೆಯಲ್ಲಿ ಸಂಘಸಂಸ್ಥೆಯವರು, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಚರ್ಚಿಸಲು ಇಚ್ಚಿಸಿದ್ದಲ್ಲಿ ಫೆಬ್ರವರಿ 12ರೊಳಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಲಿಖಿತವಾಗಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.
ಪ್ರಕಾಶಕರ ನೋಂದಣಿಗೆ ಅರ್ಜಿ ಆಹ್ವಾನಚಾಮರಾಜನಗರ, ಫೆ. 07 - ಕನ್ನಡ ಪುಸ್ತಕ ಪ್ರಾಧಿಕಾರವು ಪುಸ್ತಕ ಪ್ರಕಾಶಕರ ವಿವರಗಳನ್ನು ಸಾಹಿತ್ಯಾಸಕ್ತರಿಗೆ ಒಂದೆಡೆ ಲಭಿಸುವಂತೆ ಮಾಡುವ ಉದ್ದೇಶದಿಂದ ಪ್ರಕಾಶಕರ ನೋಂದಣಿ ಯೋಜನೆಯನ್ನು ಆರಂಭಿಸಿದ್ದು ಎಲ್ಲ ಪ್ರಕಾಶಕರು ಹೆಸರು ನೊಂದಾಯಿಸುವಂತೆ ಕೋರಿದೆ.
ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ಸಂಪರ್ಕಿಸಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು – 560002 ಇಲ್ಲಿಗೆ ಕಳುಹಿಸಬೇಕು. ವಿವರಗಳಿಗೆ 080-22107704/22484516 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment