ಯುವಕನ ಕೈ ಊನಗೊಳಿಸಿದ ಜೀಪು ಚಾಲಕ.. .VSS
ಚಾಮರಾಜನಗರ,ಸೆ.9-ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಯುವಕನ ಕೈ ಊನ ಮಾಡಿರುವ ಪಟ್ಟಣ ಪೊಲೀಸ್ ಠಾಣೆಯ ಜೀಪು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಯುವಕನ ಕಡೆಯವರು ಪಟ್ಟಣ ಠಾಣೆಗೆ ಆಗಮಿಸಿ ಇನ್ ಸ್ಪೆಕ್ಟರ್ ಅವರನ್ನು ಒತ್ತಾಯಿಸಿದ್ದಾರೆ.
ರಾಮಸಮುದ್ರದ ನಂಜುಂಡಸ್ವಾಮಿ (24) ಎಂಬ ಯುವಕನ ಕೈಯನ್ನು ಪಟ್ಟಣ ಪೊಲೀಸ್ ಠಾಣೆಯ ಚಾಲಕ ರಾಜು ಊನ ಮಾಡಿದ್ದಾನೆ ಎಂದು ಯುವಕನ ಕಡೆಯವರು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿ ತಾಲೂಕು ಕಚೇರಿ ಸಮೀಪವಿರುವ ವಸ್ತುಪ್ರದರ್ಶನ ಮಳಿಗೆ ಪ್ರವೇಶ ಸಂಬಂಧ ಗಲಾಟೆಯಾಗಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಲಾಟೆ ಮಾಡುತ್ತಿದ್ದವರನ್ನು ತಡೆಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಚಾಲಕ ತನ್ನ ಕೆಲಸ ಮಾಡುವುದನ್ನು ಬಿಟ್ಟು ಈ ರೀತಿ ಯುವಕರ ಮೇಲೆ ಹಲ್ಲೆ ಮಾಡಿರುವುದು ಸರಿಯೇ ಎಂದು ಇನ್ ಸ್ಪೆಕ್ಟರ್ ನ್ನು ಪ್ರಶ್ನಿಸಿದ್ದಾರೆ.
ಜಿಲ್ಲಾ ಮಟ್ಟದ ಎರಡುದಿನಗಳ ದಸರಾ ಕ್ರೀಡಾಕೂಟಕ್ಕೆ ಚಾಲನೆ.. ......vss
ಜಿಲ್ಲಾ ಪಂಚಾಯಿತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ ಗುಂಡು ಎಸೆದು ಬಳಿಕ ಖೊಖೊ ಪಂದ್ಯಾವಳಿಗೆ ಟಾಸ್ ಹಾಕುವ ಮೂಲಕ ದಸರಾ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಕೆ.ಪಿ.ಸದಾಶಿವಮೂರ್ತಿ ಅವರು ಕ್ರೀಡೆಯಲ್ಲಿ ಸೋಲು,ಗೆಲುವು ಸಾಮಾನ್ಯ.ಗೆದ್ದವರು ಬೀಗದೆ ಸೋತವರು ಅಳುಕದೆ ಮುಂದಿನ ಸ್ಪರ್ಧೆಗಳಿಗೆ ಸಜ್ಜಾಗಬೇಕು. ಪ್ರತಿ ಸ್ಪರ್ಧಿಯು ಕ್ರೀಡಾಮನೋಭಾವನೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ತಾಲ್ಲೂಕುಗಳಲ್ಲಿ ಈಗಾಗಲೇ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಸಲಾಗಿದೆ. ತಾಲ್ಲೂಕು ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ. ಸುಮಾರು 15ಕ್ಕೂ ಹೆಚ್ಚು ಆಟೋಟಗಳಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯ ನಾನಾ ಭಾಗದಿಂದ ಸ್ಪರ್ಧಿಸಿರುವ ಕ್ರೀಡಾಪಟುಗಳಲ್ಲಿ ಉತ್ಸಾಹವಿದೆ. ಸ್ಪರ್ಧಿಗಳು ಎಲ್ಲಾ ಆಟೋಟ,ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಭಾಗಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು. ಜಿಲ್ಲೆಯನ್ನು ಪ್ರತಿನಿಧಿಸಿ ಹೆಚ್ಚು ಸ್ಪರ್ಧೆಗಳಲ್ಲಿ ವಿಜೇತರಾಗಿ ಕಿರ್ತಿತರಬೇಕೆಂದು ಸದಾಶಿವಮೂರ್ತಿ ಹಾರೈಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಚಲುವಯ್ಯ ಮಾತನಾಡಿ ಎರಡು ದಿನಗಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 100 ಮೀ.ಓಟ,200 ಮೀ.ಓಟ, 400 ಮೀ.ಓಟ,800 ಮೀ.ಓಟ, 1500 ಮೀ.ಓಟ,3000 ಮೀ.ಓಟ, ಉದ್ದ,ಎತ್ತರಜಿಗಿತ, ಗುಂಡು,ಡಿಸ್ಕಸ್,ಜಾವಲೀನ್ ಎಸೆತ, ಕಬಡ್ಡಿ, ಖೋಖೋ, ವಾಲಿಬಾಲ್,ಥ್ರೋಬಾಲ್ ಸೇರಿದಂತೆ ಒಟ್ಟು 21 ಸ್ಪರ್ಧೆಗಳು ಇವೆ. ಪುರುಷರು ಹಾಗೂ ಮಹಿಳೆಯರಿಗೆ ಪ್ರತೇಕ ವಿಭಾಗಗಳಲ್ಲಿ ಸ್ಪರ್ಧೆ ಅಯೋಜಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಒಟ್ಟು 1200 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಸೆಪ್ಟಂಬರ್ 17ಹಾಗೂ 18ರಂದು ವಿಭಾಗ ಮಟ್ಟದ ಫುಟ್‍ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಚಲುವಯ್ಯ ತಿಳಿಸಿದರು.ದೈಹಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಇಲಾಖೆ ಅಧಿಕಾರಿಗಳು ಸಿಬಂದ್ದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
.ಸೆ. 25ರಿಂದ 28ರವರೆಗೆ ಜಿಲ್ಲಾಕೇಂದ್ರದಲ್ಲಿ ದಸರಾ ಮಹೋತ್ಸವ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ, ಸೆ. 09 - ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿಯೂ ಸೆಪ್ಟೆಂಬರ್ 25ರಿಂದ 28ರವರೆಗೆ ಒಟ್ಟು 4 ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದೆ.
ಕಳೆದ ಬಾರಿಯಂತೆ ಈ ಬಾರಿಯೂ ದಸರಾ ಉತ್ಸವ ಕಾರ್ಯಕ್ರಮವನ್ನು ನಗರದ ಚಾಮರಾಜೇಶ್ವರ ದೇವಾಲಯ ಮುಂಭಾಗ ನಡೆಸಲಾಗುತ್ತದೆ. ಪ್ರತಿ ದಿನ ಸಂಜೆಯ ವೇಳೆಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ದಸರಾ ಉತ್ಸವಕ್ಕೆ ಮೆರುಗು ನೀಡಲಿವೆ.
ದಸರಾ ಕಾರ್ಯಕ್ರಮ ಸುಗಮವಾಗಿ ನಿರ್ವಹಣೆÀಯಾಗಲೂ ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿ, ಸಾಂಸ್ಕ್ರತಿಕ ಸಮಿತಿ, ಸ್ಥಳೀಯ ಕಲಾವಿದರು ಹಾಗೂ ರಾಜ್ಯಮಟ್ಟದ ಕಲಾವಿದರ ಆಯ್ಕೆ ಸಮಿತಿ, ಆಹಾರ ಸಮಿತಿ, ವೇದಿಕೆ ನಿರ್ಮಾಣ ಸಮಿತಿ, ಸ್ವಚ್ಚತಾ ಸಮಿತಿ, ಆರೋಗ್ಯ ಸಮಿತಿ, ಸಂಚಾರ ನಿಯಂತ್ರಣ ಮತ್ತು ಭದ್ರತಾ ಸಮಿತಿ ಹಾಗೂ ಪ್ರಚಾರ ಸಮಿತಿಯನ್ನು ಜಿಲ್ಲಾಧಿಕಾರಿಯವರು ರಚಿಸಿದ್ದಾರೆ.
ಸೆಪ್ಟೆಂಬರ್ 25ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದಿನಿಂದಲೇ ಕಾರ್ಯಕ್ರಮಗಳು ಆರಂಭವಾಗಲಿವೆ.
ಜಿಲ್ಲಾಧಿಕಾರಿ ಬಿ.ರಾಮು ಅವರು ದಸರಾ ಉತ್ಸವ ಆಚರಣೆ ಸಂಬಂಧ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಕೈಗೊಳ್ಳಬೇಕಿರುವ ಕಾರ್ಯಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಸ್ವಾಗತ ಸಮಿತಿ ಅಧಿಕಾರಿಗಳು ಸುಸೂತ್ರವಾಗಿ ವಹಿಸಿದ ಎಲ್ಲಾ ಕೆಲಸಗಳನ್ನು ನಿಭಾಯಿಸಬೇಕು. ಆಹ್ವಾನ ಪತ್ರಿಕೆ ಮುದ್ರಣ, ಶಿಷ್ಠಾಚಾರ ಪಾಲನೆ, ಗಣ್ಯರ ಬರಮಾಡಿಕೊಳ್ಳುವಿಕೆ ಸೇರಿದಂತೆ ಇತರ ಅಗತ್ಯ ಕೆಲಸಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಾಂಸ್ಕøತಿಕ ಸಮಿತಿಯು ಕಲಾವಿದರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸಿದ್ಧತೆ ಮಾಡಬೇಕು. ಕಲಾವಿದರ ಆಯ್ಕೆ ಸಮಿತಿಯು ಪಾರದಶರ್Àಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರ ಆಯ್ಕೆಗೆ ಅವಕಾಶ ಮಾಡಿಕೊಡಬೇಕು. ಯಾವುದೇ ಗೊಂದ¯ಕ್ಕೆ ಆಸ್ಪದ ನೀಡಬಾರದೆಂದು ರಾಮು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವೇದಿಕೆ ನಿಮಾಣ ಸಮಿತಿ ಸದಸ್ಯರು ಕಾರ್ಯಕ್ರಮ ನಡೆಯುವ ಚಾಮರಾಜೇಶ್ವರ ದೇವಾಲಯ ಮುಂಬಾಗದಲ್ಲಿ ವೇದಿಕೆ ಧ್ವನಿವರ್ಧಕ, ವಿದ್ಯುತ್ ಸರಬರಾಜು, ಜನರೇಟರ್, ಶಾಮಿಯಾನ ವ್ಯವಸ್ಥೆ ನೋಡಿಕೊಳ್ಳಬೇಕು. ಸ್ವಚ್ಚತಾ ಸಮಿತಿಯು ಕಾರ್ಯಕ್ರಮ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿದಿನ ವಿಶೇಷವಾಗಿ ಸ್ವಚ್ಚತೆ ಕೆಲಸ ಕೈಗೊಳ್ಳಬೇಕು. ಇತರೆ ಸಮಿತಿಗಳು ನಿಗಧಿಪಡಿಸಿರುವ ಜವಾಬ್ದಾರಿಯನ್ನು ಯಾವುದೇ ಲೋಪಕ್ಕೆ ಅವಕಶವಾಗದಂತೆ ನಿಭಾಯಿಸಬೇಕು. ಒಟ್ಟಾರೆ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಎಲ್ಲಾ ಸಿದ್ಧತೆಯನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.
ದಸರಾ ಕಾರ್ಯಕ್ರಮಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 09 - ಚಾಮರಾಜನಗರ ದಸರಾ ಮಹೋತ್ಸವ-2017ರ ಅಂಗವಾಗಿ ಸೆಪ್ಟೆಂಬರ್ 25 ರಿಂದ 28 ರವರೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಲಾಗುವುದು.ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ, ಸುಗಮ, ಜಾನಪದ, ವಾದ್ಯಸಂಗೀತ ಹಾಗೂ ಇನ್ನಿತರ ಸಂಗೀತ ಕಲಾಪ್ರಕಾರಗಳು, ಶಾಸ್ತ್ರೀಯ ನೃತ್ಯ ಪ್ರಕಾರಗಳು, ನೃತ್ಯ ರೂಪಕ ಹಾಗೂ ನೃತ್ಯದ ವಿವಿಧ ಕಲಾಪ್ರಕಾರಗಳಲ್ಲಿ ಅಪಾರ ಅನುಭವವಿರುವ ಕಲಾವಿದರುಗಳು ಅರ್ಜಿ ಸಲ್ಲಿಸಬಹುದು.
ಆಸ್ತಕರು ಸೆಪ್ಟಂಬರ್ 15ರಂದು ಸಂಜೆ 4 ಗಂಟೆಯೊಳಗೆ ಸ್ವ-ವಿವರವುಳ್ಳ ಅರ್ಜಿ ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 104ಕ್ಕೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08226-223160 ರಲ್ಲಿ ಈ ಕಚೇರಿಯ ಹರೀಶ್ ಮತ್ತು ಮಹೇಶ್‍ರವರನ್ನು ಸಂಪರ್ಕಿಸುವುದು.
ಅರ್ಜಿಯನ್ನು ಸೆಪ್ಟೆಂಬರ್ 15ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು. ಕಾರ್ಯಕ್ರಮಗಳು ಸಮಯದ ಮಿತಿಗೊಳಪಟ್ಟಿರುತ್ತದೆ. ಅರ್ಜಿಯ ಜೊತೆ ಕಾರ್ಯಕ್ರಮದ ಪೋಟೋ ಮತ್ತು ಸಿಡಿಗಳನ್ನು ಸಲ್ಲಿಸತಕ್ಕದ್ದು. ಕಳೆದ ಮೂರು ವರ್ಷಗಳಲ್ಲಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸದ ಕಲಾವಿದರುಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಕಾರ್ಯಕ್ರಮದ ಆಯ್ಕೆಯು ಆಯ್ಕೆ ಸಮಿತಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ದಸರಾ ಸಾಂಸ್ಕ್ರತಿಕ ಸಮಿತಿ ಪ್ರಕಟಣೆ ತಿಳಿಸಿದೆ.
No comments:
Post a Comment