ಸೆಪ್ಟೆಂಬರ್ 25ರಂದು ಚಂದಕವಾಡಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ
ಚಾಮರಾಜನಗರ, ಸೆ. 24 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಚಂದಕವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಹೊಬಳಿಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತಾಲೂಕಿನ ಚಂದಕವಾಡಿಯಲ್ಲಿ ಸೆಪ್ಟಂಬರ್ 25ರಂದು ಬೆಳಗ್ಗೆ 9.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕೊಳ್ಳೆಗಾಲದ ಜೇತವನದ ಬೌದ್ಧ ಬಿಕ್ಕುಗಳಾದ ಪರಮಪೂಜ್ಯ ಮನೋ ರಖ್ಖಿತ ಬಂತೇಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.
ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಮತ್ತು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್. ಅಂಜನೇಯ ಅವರು ಘನ ಉಪಸ್ಥಿತಿ ವಹಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಡಾ.ಬಿ.ಆರ್. ಅಂಬೇಡ್ಕರ್ ಭವನದ ಕಟ್ಟಡ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿ,ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಜಿ.ಪಂ. ಸದಸ್ಯರಾದ ಆರ್. ಬಾಲರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ತಾ.ಪಂ. ಸದಸ್ಯರಾದ ಮಹದೇವಶೆಟ್ಟಿ, ಚಂದಕವಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಸಿದ್ದಪ್ಪಾಜಿ, ಉಪಾಧ್ಯಕ್ಷರಾದ ನಾಗನಾಯ್ಕ ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಇದೇ ವೇಳೆ ಗಣ್ಯರು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು
ಸೆಪ್ಟಂಬರ್ 25 ರಂದು ಚಾಮರಾಜನಗರ ದಸರಾ ಮಹೋತ್ಸವ ಆರಂಭ
ಚಾಮರಾಜನಗರ, ಸೆ. 24 ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಾಡಹಬ್ಬ ಚಾಮರಾಜನಗರ ದಸರಾ ಮಹೋತ್ಸವ ಸೆಪ್ಟೆಂಬರ್ 25 ರಿಂದ 28ರ ವರೆಗೆ ನಡೆಯಲಿದೆ.
ನಾಲ್ಕು ದಿನಗಳ ಕಾಲ ದಸರಾ ಮಹೋತ್ಸವ ಕಾರ್ಯಕ್ರಮವು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ಏರ್ಪಾಡಾಗಿದೆ.
ಸೆಪ್ಟಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 4 ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ದಸರಾ ಮಹೋತ್ಸವವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ವಿಧ್ಯಕ್ತವಾಗಿ ಉದ್ಘಾಟಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ ಅವರು ಜ್ಯೋತಿ ಬೆಳಗಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ
ಚಾಮರಾಜನಗರ, ಸೆ. 24:- ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ಚಾಮರಾಜೇಶ್ವರ ದೇವಾಲಯ ಮುಂಭಾಗದ ವೇದಿಕೆಯಲ್ಲಿ ಸೆಪ್ಟಂಬರ್ 25 ರಿಂದ 28ರವರೆಗೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ವಿಭಿನ್ನ ಸಾಂಸ್ಕøತಿಕ ಕಾರ್ಯಕ್ರಮಗÀಳು ನಡೆಯಲಿವೆ.
ಸೆಪ್ಟಂಬರ್ 25 ರಂದು ಸಂಜೆ 5 ರಿಂದ 5.30 ರವರೆಗೆ ನಗರದ ಎನ್.ಪ್ರತಿಭಾ, ಅವರಿಂದ ಭಕ್ತಿಗೀತೆ, 5.30 ರಿಂದ 5.50ರ ವರೆಗೆ ಗುಂಡ್ಲುಪೇಟೆ ತಾಲ್ಲೂಕು ಕೊತನೂರು ಗ್ರಾಮದ ಮಾದಶೆಟ್ಟಿ ನೇತೃತ್ವದಲ್ಲಿ ಮಹದೇಶ್ವರ ಕಲಾ ತಂಡದವರು ಕಂಸಾಳೆ, 5.50 ರಿಂದ 6.30ರವರೆಗೆ ಗುಂಡ್ಲುಪೇಟೆಯ ಎಸ್.ಎಂ. ಡ್ಯಾನ್ಸ್ ಗ್ರೂಪ್ ಮತ್ತು ಮೆಲೋಡಿಸ್ ತಂಡದಿಂದ ಸಂಗೀತ ಮತ್ತು ನೃತ್ಯ, ಸಂಜೆ 6.30 ರಿಂದ 7 ರವರೆಗೆ ನಗರದ ಚೇತನ ಕಲಾವಾಹಿನಿ ತಂಡದಿಂದ ಜಾನಪದಗೀತೆ 7ರಿಂದ 8.30 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ರಾತ್ರಿ 8.30 ರಿಂದ 10.30 ರವರೆಗೆ ಬೆಂಗಳೂರಿನ ಸಂತೋಷ್‍ವೆಂಕಿ ಮತ್ತು ತಂಡದಿಂದ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
ಸೆಪ್ಟಂಬರ್ 26ರಂದು ಸಂಜೆ 5ರಿಂದ 5.30ರವರೆಗೆ ಯಳಂದೂರು ತಾಲ್ಲೂಕು ಕೆಸ್ತೂರುಗ್ರಾಮದ ಸ್ವರಸಂಗಮ ಜಾನಪದ ಕಲಾತಂಡದವರು ಎಂ.ಪ್ರಕಾಶ್ ಮತ್ತು ಇತರರ ನೇತೃತ್ವದಲ್ಲಿ ಜಾನಪದ ಗೀತೆ, ಸಂಜೆ 5.30 ರಿಂದ 6ರವರೆಗೆ ತಾಲ್ಲೂಕಿನ ಅಮಚವಾಡಿಯ ಮಹದೇವಯ್ಯ ನೇತೃತ್ವದ ಅಂಕನಾಥೇಶ್ವರ ನಾಟಕ ಕಲಾಸಂಘದವರು ರಂಗಗೀತೆ ಮತ್ತು ದೃಶ್ಯಾವಳಿ, 6 ರಿಂದ 6.30ರವರೆಗೆ ಬಂಡಿಗೆರೆ ಗ್ರಾಮದ ಶ್ರೀ ಮಲೈಮಹದೇಶ್ವರ ಸ್ವಾಮಿ ಹುಲಿವೇಷ ಕಲಾತಂಡದವರು ಗುರುಮಲ್ಲಶೆಟ್ಟಿ ನೇತೃತ್ವದಲ್ಲಿ ಹುಲಿವೇಷ, 6.30 ರಿಂದ 7ರವರೆಗೆ ಕಮರವಾಡಿ ಮಹದೇವಸ್ವಾಮಿ ಮತ್ತು ತಂಡದಿಂದ ಜಾನಪದ ನೃತ್ಯರೂಪಕ, ಸಂಜೆ 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, ರಾತ್ರಿ 8.30 ರಿಂದ 10.30ರವರೆಗೆ ಖ್ಯಾತ ಕಲಾವಿದರಾದ ಬೆಂಗಳೂರಿನ ರಾಜೇಶ್‍ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಸೆಪ್ಟಂಬರ್ 27 ರಂದು ಸಂಜೆ 5ರಿಂದ 5.30ರವರೆಗೆ ಗುಂಡ್ಲುಪೇಟೆಯ ಮೋಹನ ಜಾನಪದ ನೃತ್ಯ ಕಲಾಸಂಘದಿಂದ ಜಾನಪದ ನೃತ್ಯ, ಸಂಜೆ 5.30ರಿಂದ 6ಗಂಟೆಯವರೆಗೆ ಯಳಂದೂರು ತಾಲ್ಲೂಕು ಗಂಗವಾಡಿಯ ಶಿವರುದ್ರಸ್ವಾಮಿ ತಂಡದಿಂದ ವೀರಗಾಸೆ, 6ರಿಂದ 6.15ರವರೆಗೆ ಬಿಳಿಗಿರಿರಂಗನಬೆಟ್ಟದ ಸೋಲಿಗರ ಪುಷ್ಪಮಾಲೆ ಕಲಾಸಂಘದಿಂದ ಗೋರಾಕಾನ ನೃತ್ಯ, 6.15ರಿಂದ 6.30ರವರೆಗೆ ದೊಡ್ಡಮೋಳೆಯ ಸಿದ್ದಪ್ಪಾಜಿ ನೀಲಗಾರರ ಕಲಾಸಂಘದಿಂದ ನೀಲಗಾರರ ಮತ್ತು ತಂಬೂರಿಪದ, 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30 ರಿಂದ 9.30ರವರೆಗೆ ಮೈಸೂರಿನ ದಿಶಾ ರಮೇಶ್ ಮತ್ತು ತಂಡದಿಂದ ರಂಗಗೀತೆಗಳು, 9.30 ರಿಂದ 10.30ರವರೆಗೆ ಡಾ.ಸಂಜಯ್ ಮತ್ತು ತಂಡದಿಂದ ಕರ್ನಾಟಕ ಕ್ಷೇತ್ರ ವೈಭವ ಕಾರ್ಯಕ್ರಮ ನಡೆಯಲಿದೆ.
ಸೆಪ್ಟಂಬರ್ 28 ರಂದು ಸಂಜೆ 5.ರಿಂದ 5.45ರವರೆಗೆ ನಗರದ ಎಂ.ಶಶಿಕುಮಾರ್ ಮತ್ತು ತಂಡದಿಂದ ಜಾನಪದಗಾಯನ, ಸಂಗೀತ ರಸಸಂಜೆ, ಸಂಜೆ 5.45ರಿಂದ 6.15ರವರೆಗೆ ನಗರದ ಚಾಲೆಂಜರ್ಸ್ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ, 6.15ರಿಂದ 7ರವರೆಗೆ ವೆಂಕಟರಮಣಸ್ವಾಮಿ ಮತ್ತು ತಂಡದಿಂದ ರಂಗಗೀತೆ ಮತ್ತು ಜಾನಪದಗೀತೆ, 7 ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30ರಿಂದ 9.30ರವರೆಗೆ ಮೈಸೂರಿನ ಕೃಷ್ಣೆನೃತ್ಯ ಶಾಲೆಯ ವಿಧೂಷಿ ಡಿಂಪಲ್ ಮತ್ತು ತಂಡದಿಂದ ಚಾಮುಂಡೇಶ್ವರಿ ದೇವಿಂiÀi ನೃತ್ಯ ವೈಭವ, 9.30ರಿಂದ 10.30ರವರೆಗೆ ಮೈಸೂರಿನ ಅಮ್ಮ ವಸುಂಧರಾ ಕಲಾತಂಡದಿಂದ ಜಾನಪದ ಮತ್ತು ಭಾವಗೀತೆ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಸೆ.25ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಸೆ. 24 - ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ಸೆಪ್ಟೆಂಬರ್ 25ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ ಮಧ್ಯಾಹ್ನ 3.30ಗಂಟೆಗೆ ಸಚಿವರು ನಗರಕ್ಕೆ ಆಗಮಿಸುವರು. ಸಂಜೆ 4.30ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯಲಿರುವ ಚಾಮರಾಜನಗರ ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೋಳ್ಳುವರು. ರಾತ್ರಿ 7ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎಂ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment