Monday, 11 September 2017

ಅದಿಕಾರಿಗಳ ಜೊತೆ ಜನರ ಪಾತ್ರ ದೊಡ್ಡದು: ಜಿಲ್ಲಾ ನ್ಯಾಯಾದೀಶರು, ರಸ್ತೆ ಬಂದ್ ವಾಟಾಳ್ ನಾಗರಾಜ್ ( 10-09-2017)

ಅದಿಕಾರಿಗಳ ಜೊತೆ ಜನರ ಪಾತ್ರ ದೊಡ್ಡದು: ಜಿಲ್ಲಾ ನ್ಯಾಯಾದೀಶರು

         ವರದಿ:ರಾಮಸಮುದ್ರ ಎಸ್. ವೀರಭದ್ರಸ್ವಾಮಿ 


ಚಾಮರಾಜನಗರ: ಅರಣ್ಯ ರಕ್ಷಣೆ ಜೊತೆಗೆ ಜನರ ಪಾತ್ರ ದೊಡ್ಡದು, ಅವರೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಸತ್ರ ನ್ಯಾಯಾದೀಶ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಹೇಳಿದರು.*ಅವರು ನಗರದ ಅರಣ್ಯ ನರ್ಸರಿಯಲ್ಲಿ ನಡೆದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ‌ ಮಾತನಾಡಿದರು‌

  *ಅರಣ್ಯದ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ಜೀವತೆತ್ತ ಅದಿಕಾರಿ ಶ್ರೀನಿವಾಸ ಅವರು ವೀರಪ್ಪನ್ ಕುಕೃತ್ಯಕ್ಕೆ ಬಲಿಯಾದರು. ಇವರ ಸ್ಮರಣೆಗಾಗಿ ಶ್ರದ್ದಾಂಜಲಿ ಅರ್ಪಿಸಲು ಸರ್ಕಾರ ಹುತಾತ್ಮರ ದಿನಾಚರಣೆ ಆಚರಿಸಲು ನಿರ್ದರಿಸಲಾಯಿತು *ಕಾರ್ಯಕ್ರದಲ್ಲಿ ಜಿ.ಪಂ.ನ ಸಿ.ಇ.ಓ ಹರೀಶ್ ಕುಮಾರ್ , ಹೆಚ್ಚುವರಿ ಪೊಲೀಸ್ ವರೀಷ್ಟಾದಿಕಾರಿ ಗೀತಾ ಪ್ರಸನ್ನ , ಅರಣ್ಯಾದಿಕಾರಿ ವಿಜಯ್ ಕುಮಾರ್ ಮೀನಾ ಹಾಜರಿದ್ದರು.

ರಸ್ತೆ ಬಂದ್    ಮಾಡಿದ ವಾಟಾಳ್ ನಾಗರಾಜ್ 


ಚಾಮರಾಜನಗರ,ಸೆ,11- ರಾಷ್ಟ್ರೀಯ ಹೆದ್ದಾರಿ 209 ಮುಖ್ಯ ರಸ್ತೆಯಿಂದ ಕರಡಿಮೋಳೆ ಗ್ರಾಮದ ಮಾರ್ಗವಾಗಿ ಯಲಕ್ಕೂರು – ಕುದೇರು ಗ್ರಾಮಕ್ಕೆ ತುರ್ತಾಗಿ ರಸ್ತೆ ಕಾಮಗಾರಿಯಾಗಬೇಕು ಅಲ್ಲದೆ ಚಾಮರಾಜನಗರ ಸಮಗ್ರ ಅಭಿವೃಧ್ಧಿಗೆ ಒತ್ತಾಯಿಸಿ ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ರಸ್ತೆ ಬಂದ್ ಸತ್ಯಾಗ್ರಹ ಮಾಡಿದರು.
ಇಂದು ಚಾಮರಾಜನಗರ -ಸಂತೇಮರಳ್ಳಿ ರಾಷ್ಟ್ರೀಯ ಹೆದ್ದಾರಿ 209, ಮಂಗಲ ಗ್ರಾಮದ ಕಾವೇರಿ ಕುಡಿಯುವ ನೀರು  ಶುಧ್ಧಿಕರಣ ಕೇಂದ್ರದ ಮುಂದೆ ವಾಟಾಳ್ ನಾಗರಾಜ್ ಅವರ ನಾಯಕತ್ವದಲ್ಲಿ ಜಮಾಯಿಸಿದ ವಾಟಾಳ್ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಇದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ಥವಾಯಿತು. ಇದನ್ನು ಕಂಡ ಪೋಲಿಸರು ವಾಟಾಳ್ ನಾಗರಾಜ್ ಸೇರಿದಂತೆ ಇತರೆ ಮಂದಿ ಪ್ರತಿಭಟನಕಾರರನ್ನು ಬಂಧಿಸಿ, ಸಂತೇಮರಳ್ಳಿ ಪೋಲಿಸ್ ಠಾಣೆಗೆ ಕರೆದೊಯ್ಯದು ನಂತರ ಬಿಡುಗಡೆಗೊಳಿಸಿದರು.
ಇದಕ್ಕು ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಚಾಮರಾಜನಗರ ಜಿಲ್ಲೆಯಾಗಿ 20 ವರ್ಷಗಳಾದರು ಅಭಿವೃಧ್ಧಿ ಕಂಡಿಲ್ಲ. ನಗರ ಪ್ರದೇಶದ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹಳ್ಳ-ಕೊಳ್ಳ-ಗುಂಡಿಗಳಾಗಿ. ಶಾಲಾ ಮಕ್ಕಳು, ವೃದ್ದರು, ಸಾರ್ವಜನಿಕರು ಅಲ್ಲದೆ ವಾಹನಗಳು ತಿರುಗಾಡಲು ನರಕವಾಗಿದೆ. ತಕ್ಷಣವೇ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ನಗರ ಪ್ರದೇಶದ ಸಮಗ್ರ ಅಭಿವೃಧ್ಧಿ ಮಾಡಲು ಜಿಲ್ಲಾ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರದ ನಗರ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಬಡಾವಣೆಯ ನಿವಾಸಿಗಳಿಗೆ ಮನೆಯಿಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಒಂದು ಮನೆಯಲ್ಲಿ 5 ಕುಟುಂಬಗಳು ವಾಸಮಾಡುತ್ತಿದೆ ಅವರಿಗೆ ಪ್ರತ್ಯೇಕ ಮನೆಗಳು ಬೇಕಾಗಿದೆ. ನಗರದ ಸಮಗ್ರ ಅಭಿವೃಧ್ಧಿಗೆ 5000 ಕೋಟಿ ರೂಪಾಯಿ ತಕ್ಷವೇ ವಿಶೇಷವಾಗಿ ಪ್ಯಾಕೇಜ್ ಮುಖಾಂತರ ಕೂಡಲೇ ಬಿಡುಗಡೆ ಮಾಡಬೇಕು ಎಂದು ವಾಟಾಳ್ ಸರ್ಕಾರಕ್ಕೆ ಅಗ್ರಹಿಸಿದರು.
ಟಿ-ನರಸೀಪುರದಿಂದ ಅಂದರೆ ಕಾವೇರಿ-ಕಪಿಲ-ಸ್ಪಟಿಕ ತ್ರಿವೇಣಿ ಸಂಗಮದಿಂದ ಚಾವiರಾಜನಗರಕ್ಕೆ ಕಾವೇರಿ ಕುಡಿಯುವ ನೀರಿನ 2ನೇ ಹಂತಜಾರಿ ಯಾಗಬೇಕು ಇದರ ಜೊತೆಯಲಿ ಸುತ್ತ-ಮುತ್ತಲ್ಲಿನ ನೂರಾರು ಗ್ರಾಮಗಳಿಗೆ ಖಾಯಂ ಕುಡಿಯುವ ನೀರು ಕೊಡಬೇಕು ತಕ್ಷವೆ ಸರ್ಕಾರ ಕಾರ್ಯ ಪ್ರವೃತ್ತಯಾಗಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರ ತಾಲೂಕಿನಲ್ಲಿ ಉಪ್ಪಾರ ಜನಾಂಗದವರು ವಾಸಿಸುತ್ತಿರುವ ಮೋಳೆಗಳು ಪರಿಸ್ಥಿತಿ ಚಿಂತಜನಕವಾಗಿದೆ. ಅವರಿಗೆ ಮನೆ-ನಿವೇಶನ-ರಸ್ತೆ-ಚರಂಡಿ ಸೇರಿದಂತೆ ಅನೇಕ ಮೂಲಭೂತ ಸೌಕಾರ್ಯದಿಂದ ವಂಚಿತರಾಗಿದ್ದರಾರೆ. ಈ ಕೊಡಲೆ ರಾಜ್ಯ ಸರ್ಕಾರ ಸಮಗ್ರ ಮೋಳೆಗಳ ಅಭಿವೃüಧ್ಧಿಗಾಗಿ  ಒಂದು ವಿಶೇಷ ಯೋಜನೆ ತಯಾರು  ಮಾಡಿ ವಿಶೇಷವಾಗಿ ಅನುದಾನ ಕೊಡಬೇಕು ಎಂದು ಕೇಳಿದರು.
ಕೊತ್ತಲವಾಡಿಕೆರೆ, ಯಡಿಯೂರುಕೆರೆ, ಸುವರ್ಣನಗರಕೆರೆ,ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬಾರದು ಒಂದು ತಿಂಗಳ ಒಳಗಾಗಿ ಕೆರೆಗಳಿಗೆ ನೀರು ತುಂಬಿಸ ಬೇಕು ಇಲ್ಲಾವಾದ್ದಲ್ಲಿ ಕೆರಗಳ ಸತ್ಯಾಗ್ರಹ ಎಂಬ ಚಳವಳಿ ಆರಂಭಿಸಬೇಕಾಗುತ್ತದೆ. ಎಂದು ವಾಟಾಳ್ ಎಚ್ಚರಿಸಿದರು.
ಕುದೇರು- ಸಪ್ಪಯ್ಯನಪುರ ಗ್ರಾಮಕ್ಕೆ ಬಸ್ ಸೌಕಾರ್ಯ ಬೇಕು. ಯಲಕ್ಕೂರನ್ನು  ಚಾಮರಾಜನಗರದ ವಿಧಾನ ಸಭಾದ ಕ್ಷೇತ್ರದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಕು ಮಂಗಲ,ಭೋಗಪುರ,ಮಾದಪುರ, ಕೂಡ್ಲೂರುಗ್ರಾಮ ಸೇರಿದಂತೆ ಇನ್ನು ಅನೇಕ ಗ್ರಾಮಗಳ ಸಮಗ್ರ ಅಭಿವೃದ್ಧಿ ಯಾಗಬೇಕು ಎಂದು ಅಗ್ರಹಿಸಿದರು.
     

ಸೆಪ್ಟೆಂಬರ್ 16ರಂದು ನಗರದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ

ಚಾಮರಾಜನಗರ, ಸೆ. 11 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಅವರ ಜಯಂತಿ ಕಾರ್ಯಕ್ರಮವನ್ನು ಸೆಪ್ಟಂಬರ್ 16ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಘನ ಉಪಸ್ಥಿತಿ ವಹಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಬ್ರಹ್ಮರ್ಷಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಗುಂಡ್ಲುಪೇಟೆಯ ಪ್ರಗತಿಪರ ಚಿಂತಕರು ಹಾಗೂ ಪತ್ರಕರ್ತರಾದ ಡಾ. ಕೃಷ್ಣಮೂರ್ತಿ ಚಮರಂ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಬೆಳಿಗ್ಗೆ 9.30 ಗಂಟೆಗೆ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 17ರಂದು ನಗರದಲ್ಲಿ ವಿಶ್ವಕರ್ಮ ಜಯಂತಿ

ಚಾಮರಾಜನಗರ, ಸೆ. 11 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ವಿಶ್ವಕರ್ಮ ಅವರ ಜಯಂತಿ ಕಾರ್ಯಕ್ರಮವನ್ನು ಸೆಪ್ಟಂಬರ್ 17ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಘನ ಉಪಸ್ಥಿತಿ ವಹಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಬ್ರಹ್ಮರ್ಷಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮೈಸೂರಿನ ಪ್ರಸಾರಾಂಗಣದ ಸಿ. ನಾಗಣ್ಣಚಾರ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಬೆಳಿಗ್ಗೆ 9.30 ಗಂಟೆಗೆ ವೇದಿಕೆಯಲ್ಲಿ ಕಾಡಹಳ್ಳಿಯ ರಾಜಮೂರ್ತಿ ಮತ್ತು ತಂಡದವರಿಂದ ಹಾಡುಗಾರಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 12ರಂದು ವಿಶ್ವ ಆತ್ಮಹತ್ಯೆ ತಡೆ ಕುರಿತು ಅರಿವು ಜಾಥಾ

ಚಾಮರಾಜನಗರ, ಸೆ. 11 :- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಆಯೋಜಿಸಲಾಗುವ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಸ್ಥಾನ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ನಾಗರಿಕರಿಗೆ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸುವ ಸಲುವಾಗಿ ಸೆಪ್ಟೆಂಬರ್ 12ರಂದು ಬೆಳಿಗ್ಗೆ 10 ಗಂಟೆಗೆ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 14ರಂದು ವಾಲ್ಮೀಕಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ

ಚಾಮರಾಜನಗರ, ಸೆ. 11 :- ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು 2017ರ ಅಕ್ಟೋಬರ್ 5ರಂದು ಆಚರಿಸುವ ಸಂಬಂಧ ಸೆಪ್ಟೆಂಬರ್ 14ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಪರಿಶಿಷ್ಟ ವರ್ಗದ ಹಾಗೂ ಇತರೆ ಸಮುದಾಯದ ಮುಖಂಡರು, ಎಲ್ಲಾ ಸಂಘಸಂಸ್ಥೆಗಳು ಮತ್ತು ಕನ್ನಡ ಪರ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ನಾಗರಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಜಿಲ್ಲಧಿಕಾರಿ ಕಚೇರಿ ಪ್ರಕಟ¨ಣೆ ತಿಳಿಸಿದೆ.

ಕೃಷಿ ಟ್ರಾಕ್ಟರ್, ಟ್ರೈಲರ್, ಮೋಟಾರ್ ಸೈಕಲ್ ಹೊಂದಿರುವ ರೈತರಿಗೆ ಚಾಲನಾ ತರಬೇತಿ 

ಚಾಮರಾಜನಗರ, ಸೆ. 11 - ಪ್ರಸಕ್ತ ಸಾಲಿನಲ್ಲಿ ಸಾರಿಗೆ ಇಲಾಖೆಯ ರೈತ ಸಾರಥಿ ಯೋಜನೆಯಡಿ ಕೃಷಿ ಟ್ರಾಕ್ಟರ್, ಟ್ರೈಲರ್ ಹೊಂದಿರುವ ರೈತರಿಗೆ ಹಾಗೂ ರೈತರು ಹೊಂದಿರುವ ಮೋಟಾರು ಸೈಕಲ್‍ಗೆ ಕಲಿಕಾ ಪರವಾನಗಿ(ಲೈಸೆನ್ಸ್) ಕುರಿತು ತರಬೇತಿ ನೀಡಿ ಚಾಲನಾ ಅನುಜ್ಞಾ ಪತ್ರ ನೀಡಲಾಗುತ್ತಿದೆ.
ಜಿಲ್ಲೆಯ ರೈತರು ಯೋಜನೆಯ ಸದುಪಯೋಗ ಪಡೆಯುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 14ರಂದು ಲಕ್ಕೂರಿನಲ್ಲಿ ಅಂಚೆ ಸಂತೆ  

ಚಾಮರಾಜನಗರ, ಸೆ. 11 - ಅಂಚೆ ಇಲಾಖೆವತಿಯಿಂದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೊಬಳಿ ಲಕ್ಕೂರು ಗ್ರಾಮದಲ್ಲಿ ಸೆಪ್ಟೆಂಬರ್ 14ರಂದು ಅಂಚೆ ಸಂತೆ ಏರ್ಪಡಿಸಲಾಗಿದೆ.
ಅಂಚೆ ಸಂತೆ ಕಾರ್ಯಕ್ರಮದಲ್ಲಿ ಉಳಿತಾಯ, ಅವರ್ತಕ, ಸುಕನ್ಯಾ ಸಮೃದ್ದಿ, ಸಾರ್ವಜನಿಕ ಭವಿಷ್ಯ ನಿಧಿ, ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ, ಜೀವನ ಸುರಕ್ಷಾ ಭೀಮಾ, ಅಟಲ್ ಪಿಂಚಣಿ ಯೋಜನೆ, ಗ್ರಾಮಿಣ ಅಂಚೆ ಜೀವ ವಿಮೆ ಮತ್ತು ಅಂಚೆ ಜೀವ ವಿಮೆ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಸ್ಥಳದಲ್ಲಿಯೆ ಪರಿಶೀಲಿಸಲಾಗುವುದು ಎಂದು ನಂಜನಗೂಡು ಅಂಚೆ ವಿಭಾಗದ ಅಧೀಕ್ಷಕರಾದ ಜಿ.ಸಿ. ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 21ರಂದು ಚಂದಕವಾಡಿಯಲ್ಲಿ ಅಂಚೆ ಸಂತೆ  

ಚಾಮರಾಜನಗರ, ಸೆ. 11 - ಅಂಚೆ ಇಲಾಖೆವತಿಯಿಂದ ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಸೆಪ್ಟೆಂಬರ್ 21ರಂದು ಅಂಚೆ ಸಂತೆ ಏರ್ಪಡಿಸಲಾಗಿದೆ.
ಅಂಚೆ ಸಂತೆ ಕಾರ್ಯಕ್ರಮದಲ್ಲಿ ಉಳಿತಾಯ, ಅವರ್ತಕ, ಸುಕನ್ಯಾ ಸಮೃದ್ದಿ, ಸಾರ್ವಜನಿಕ ಭವಿಷ್ಯ ನಿಧಿ, ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ, ಜೀವನ ಸುರಕ್ಷಾ ಭೀಮಾ, ಅಟಲ್ ಪಿಂಚಣಿ ಯೋಜನೆ, ಗ್ರಾಮಿಣ ಅಂಚೆ ಜೀವ ವಿಮೆ ಮತ್ತು ಅಂಚೆ ಜೀವ ವಿಮೆ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಸ್ಥಳದಲ್ಲಿಯೆ ಪರಿಶೀಲಿಸಲಾಗುವುದು ಎಂದು ನಂಜನಗೂಡು ಅಂಚೆ ವಿಭಾಗದ ಅಧೀಕ್ಷಕರಾದ ಜಿ.ಸಿ. ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆ. 12ರಂದು ವಿಶ್ವ ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆ

ಚಾಮರಾಜನಗರ, ಸೆ. 1:- ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ವಿಶ್ವ ಹಿರಿಯ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು ಈ ಸಂಬಂಧ ಸೆಪ್ಟೆಂಬರ್ 12ರಂದು ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ಆಸಕ್ತ ನಾಗರಿಕರು ತಮ್ಮ ಹೆಸರನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿ (ದೂ.ಸಂ. 08226-223688) ಅಥವಾ ನಗರದ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿರುವ  ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ (ದೂ.ಸಂ. 08226-222030) ನೊಂದಾಯಿಸಿಕೊಳ್ಳುವಂತೆ ಕಚೇರಿ ಪ್ರಕಟಣೆ ತಿಳಿಸಿದೆ.

ತಿದ್ದುಪಡಿ ಪ್ರಕಟಣೆÀ
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ಸಂಪರ್ಕಿಸಿ

ಚಾಮರಾಜನಗರ, ಸೆ. 11- ಹರದನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ (ಪರಿಶಿಷ್ಟ ವರ್ಗ) ಪ್ರಸಕ್ತ ಸಾಲಿಗೆ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ (ಬಿಎಸ್ಸಿ, ಬಿಪಿಎಡ್) ಅಥವಾ ತತ್ಸಮಾನ ಖಾಲಿ ಇದ್ದು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು.
ಅರ್ಹರು ಶೀಘ್ರವಾಗಿ ಖುದ್ದಾಗಿ ಶಾಲಾ ಕಚೇರಿ (ಮೊ.9448167272)ಯನ್ನು ಸಂಪರ್ಕಿಸುವಂತೆ ವಸತಿ ಶಾಲೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು