ಚಾಮರಾಜನಗರದಲ್ಲಿ ಆತ್ಮಹತ್ಯೆ ತಡೆ ದಿನ ಜಾಗೃತಿ ಜಾಥಾ
ಚಾಮರಾಜನಗರ, ಸೆ. 12- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಹಸಿರು ನಿಶಾನೆ ತೋರುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ರಾಮಚಂದ್ರ ಅವರು ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗತೊಡಗಿದೆ.ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗದು. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಯಾವುದೆ ಕಾರಣಕ್ಕೂ ದೃತಿಗೆಡಬಾರದು ಎಂದರು.
ಯಾರೆ ಇರಲಿ ಸಮಸ್ಯೆಗಳಿಗೆ ಪರಿಹಾರ ಇದ್ದೆಇರುತ್ತದೆ. ಕ್ಷಣಿಕ ಮಾತ್ರದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಆರೋಗ್ಯಕರ ಚಿಂತನೆಗಳಿಗೆ ಮನಸ್ಸನ್ನು ಹರಿಯಬಿಡಬೇಕು ಎಂದು ರಾಮಚಂದ್ರ ಸಲಹೆ ಮಾಡಿದರು.
ಜನರ ಆರೋಗ್ಯ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ನೀಡುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲ ಬಗೆಯ ಚಿಕಿತ್ಸೆ, ಔಷಧಿ ಉಪಚಾರಕ್ಕೆ ಹೆಚ್ಚಿನ ನೆರವನ್ನು ಸರ್ಕಾರ ನೀಡುತ್ತಿದೆ. ಅರೋಗ್ಯ ಸೇವೆಗಳನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾಮಚಂದ್ರ ತಿಳಿಸಿದರು.
ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ,ಡಾ.ಅನಿಲ್‍ಕುಮಾರ್,ಡಾ.ರಾಜು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸೆ. 13ರಂದು ವಿಧಾನಸಭೆಯ ಕಾಗದಪತ್ರಗಳ ಸಮಿತಿ ಸಭೆ
ಚಾಮರಾಜನಗರ, ಸೆ. 12- ಕರ್ನಾಟಕ ವಿಧಾನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯು ಸೆಪ್ಟೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ ವಾರ್ಷಿಕ ವರದಿಗಳನ್ನು ಸಲ್ಲಿಸದಿರುವ ಬಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದೆ.ವಿಧಾನಸಭೆಯ ಸದಸ್ಯರು ಹಾಗೂ ಸಮಿತಿಯ ಅಧ್ಯಕ್ಷರಾದ ಸಾ.ರಾ. ಮಹೇಶ್, ಸಮಿತಿಯ ಸದಸ್ಯರಾಗಿರುವ ವಿಧಾನ ಸಭೆಯ ಸದಸ್ಯರಾದ ಎಂ.ಎಚ್. ಅಂಬರೀಶ್, ಶಾಮನೂರು ಶಿವಶಂಕರಪ್ಪ, ಎನ್.ವೈ. ಗೋಪಾಲಕೃಷ್ಣ, ಎ.ಎಸ್. ಪಾಟೀಲ (ನಡಹಳ್ಳಿ), ಡಿ.ಜಿ. ಶಾಂತನಗೌಡ, ಎಚ್.ವೈ. ಮೇಟಿ, ಪ್ರಿಯಕೃಷ್ಣ, ಮುನಿರತ್ನ, ಎಸ್. ಮುನಿರಾಜು, ಎಂ.ಕೃಷ್ಣಪ್ಪ, ಟಿ.ಎಚ್. ಸುರೇಶ್ ಬಾಬು, ಎಂ. ಕೃಷ್ಣಾರೆಡ್ಡಿ, ಕೆ.ಎಸ್. ಪುಟ್ಟಣ್ಣಯ್ಯ, ಬಿ. ನಾಗೇಂದ್ರ, ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಯು. ಮಲ್ಲಿಕಾರ್ಜುನ, ವಿವೇಕರಾವ್ ವಸಂತರಾವ್ ಪಾಟೀಲ್, ಜಿ. ರಘು ಆಚಾರ್, ವಿಧಾನಸಭೆ ಸಚಿವಾಲಯ ಅಧಿಕಾರಿಗಳಾದ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ. ಕಾಳೆ, ಉಪಕಾರ್ಯದರ್ಶಿ ಎಜಾಜ್ ಅಹಮದ್ ಖಾನ್, ಅಧೀನ ಕಾರ್ಯದರ್ಶಿ ಕೆ.ಎಸ್. ಗಣೇಶ, ಶಾಖಾಧಿಕಾರಿ ನೂರ್ ಅಹಮದ್ ಹಾಜಿ ಸಾಹೇಬ್ ಜಮಾದಾರ್ ಅವರು ಭೇಟಿ ನೀಡುವರು.
ಸೆಪ್ಟೆಂಬರ್ 13ರ ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ಜಿಲ್ಲಾ ಪಂಚಾಯತ್ ಕಚೇರಿಗೆ ಸಮಿತಿಯು ಭೇಟಿ ನೀಡಲಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವಾರ್ಷಿಕ ವರದಿಗಳನ್ನು ಸಲ್ಲಿಸದಿರುವ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದೆ. ಮಧ್ಯಾಹ್ನ 3 ಗಂಟೆಗೆ ಸಮಿತಿಯು ಬೆಂಗಳೂರಿಗೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಚನ ಸಂಪುಟ ಮಾರಾಟ
ಚಾಮರಾಜನಗರ, ಸೆ. 12 - ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯವಾಗಿರುವ ವಚನಗಳು ನಮ್ಮ ಪರಂಪರೆಯ ಅಪೂರ್ವ ಆಸ್ತಿ ಎನಿಸಿದೆ. ಪ್ರಸ್ತುತ ಕನ್ನಡ ಸಾಹಿತ್ಯ ಲೋಕದಲ್ಲಿ ಹತ್ತಾರು ವಚನಕಾರರ ಸಾವಿರಾರು ವಚನಗಳು ಲಭ್ಯವಿದೆ. ಇಂತಹ ವಚನಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹವುಗಳಾಗಿದ್ದು ಸಮಾಜಕ್ಕೆ ಅತ್ಯಂತ ಪ್ರಸ್ತುತ ಸಾಹಿತ್ಯವಾಗಿದೆ.ಇಂತಹ ಸಾವಿರಾರು ವಚನಗಳನ್ನು ಒಟ್ಟುಗೂಡಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಬಸವಯುಗದ ವಚನ ಮಹಾಸಂಪುಟ-1952 ಪುಟಗಳು ಹಾಗೂ ಬಸವೋತ್ತರ ಯುಗದ ವಚನ ಮಹಾಸಂಪುಟ-1536 ಪುಟಗಳನ್ನು ಹೊಂದಿದಂತೆ 3ನೆಯ ಮುದ್ರಣವಾಗಿ ಎರಡು ಮಹಾಸಂಪುಟಗಳನ್ನು ಮುದ್ರಣ ಮಾಡಿಸಿ ಬಿಡುಗಡೆ ಮಾಡಿದೆ.
ಸದರಿ ಎರಡು ಸಂಪುಟಗಳ ಒಟ್ಟಾರೆ ಖರೀದಿ ಮೌಲ್ಯ 600 ರೂ.ಗಳು. ಈ ಸಂಪುಟಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಿಲ್ಲಾ ಕಚೇರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಸೆ. 12 - 2017-18ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಗುಂಡ್ಲುಪೇಟೆ : ವಿವಿಧ ವಿಷಯಗಳ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 12 - ಗುಂಡ್ಲುಪೇಟೆ ಪುರಸಭೆ ವತಿಯಿಂದ ಡೇ ನಲ್ಮ್ ಯೋಜನೆಯಡಿ ವಿವಿಧ ತರಬೇತಿ ನೀಡಲಿದೆ.5ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಸೀವಿಂಗ್ ಮಿಷನ್ ಆಪರೇಟರ್, 10ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಟ್ಯಾಕ್ಸಿ ಡ್ರೈವಿಂಗ್, ಬಯೋಮೆಟ್ರಿಕ್ ಡಾಟಾ ಆಪರೇಟರ್, ಡಾಟಾ ಆಪರೇಟರ್ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು 18 ರಿಂದ 45ರ ವಯೋಮಿತಿಯೊಳಗಿರಬೇಕು. ಆಸಕ್ತರು ಸೆಪ್ಟೆಂಬರ್ 20ರೊಳಗೆ ಪುರಸಭೆ ಕಾರ್ಯಾಲಯ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment