ಸೆಪ್ಟಂಬರ್ 25 ರಂದು ನಗರದಲ್ಲಿ ಚಾಮರಾಜನಗರ ವೈಭವ ದಸರಾ ಮಹೋತ್ಸವಕ್ಕೆ ಚಾಲನೆ .......... VSS
ಚಾಮರಾಜನಗರ, ಸೆ. 23 - ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರದಲ್ಲೂ ಸೆಪ್ಟಂಬರ್ 25 ರಿಂದ 28ರವರೆಗೆ ದಸರಾ ಮಹೋತ್ಸವ ಕಾರ್ಯಕ್ರಮವು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಡಹಬ್ಬ ದಸರಾ ಕಾರ್ಯಕ್ರಮದ ವಿವರಗಳನ್ನು ನೀಡಿದ ಜಿಲ್ಲಾಧಿಕಾರಿ ಬಿ.ರಾಮು ಅವರು ಒಟ್ಟು ನಾಲ್ಕು ದಿನಗಳ ಕಾಲ ದಸರಾ ಆಚರಣೆಗೆ ಸಕಲ ಸಿದ್ಧತೆಯಾಗಿದೆ. ಸೆಪ್ಟಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯದೊಂದಿಗೆ ದಸರಾ ಮಹೋತ್ಸವ ಆರಂಭವಾಗಲಿದೆ. ಸಂಜೆ 4 ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ದಸರಾ ವೈಭವಕ್ಕೆ ವಿಧ್ಯಕ್ತವಾಗಿ ಚಾಲನೆ ದೊರೆಯಲಿದೆ ಎಂದರು.
ಬೆಳಿಗ್ಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಇತರೆ ಗಣ್ಯರ ಸಮ್ಮುಖದಲ್ಲಿ ಪೂಜೆ ಕಾರ್ಯ ನಡೆಯಲಿದೆ. ಸಂಜೆ ಅದ್ಧೂರಿ ವೇದಿಕೆಯಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ನಾಲ್ಕು ದಿನಗಳ ದಸರಾ ಮಹೋತ್ಸವ ಉದ್ಘಾಟಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ ಅವರು ಜ್ಯೋತಿ ಬೆಳಗಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ದಸರಾ ಮಹೋತ್ಸವದ ಅಂಗವಾಗಿ ಸೆಪ್ಟಂಬರ್ 25 ರಿಂದ 28 ರವರೆಗೆ ಪ್ರತಿ ದಿನ ಸಂಜೆ 5 ರಿಂದ ರಾತ್ರಿ 10.30 ಗಂಟೆಯವರೆಗೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ವೈವಿದ್ಯಮಯ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಸ್ಥಳೀಯ ಕಲಾವಿದರು ಮೊದಲಿಗೆ ಕಾರ್ಯಕ್ರಮ ಪ್ರಸ್ತುತ ಪಡಿಸಲು ಅವಕಾಶ ನೀಡಲಾಗಿದೆ. ಸಂಜೆ 5 ರಿಂದ 7 ಗಂಟೆವರೆಗೆ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಪ್ರತಿದಿನ 7 ರಿಂದ 8.30 ವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಡೆದಿರುವ ಯುವ ಸಂಭ್ರಮ ಮಾದರಿಯಲ್ಲಿ ಕಾಲೇಜು ಸಂಜೆ ಎಂಬ ಕಾರ್ಯಕ್ರಮ ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳು ವಿಭಿನ್ನ ಸಾಂಸ್ಕøತಿಕ ಪ್ರದರ್ಶನದ ಮೂಲಕ ಗಮನ ಸೆಳೆಯಲಿದ್ದಾರೆ. ತದನಂತರ ಬೆಂಗಳೂರು ಮೈಸೂರಿನ ಖ್ಯಾತ ರಾಜ್ಯಮಟ್ಟದ ಕಲಾವಿದರಿಂದ ಚಲನಚಿತ್ರ ಗೀತೆಗಳು, ಸಂಗೀತ ರಸಸಂಜೆ, ನೃತ್ಯರೂಪಕ, ಜಾನಪದ ಮತ್ತು ಭಾವಗೀತೆ, ಕಾರ್ಯಕ್ರಮಗಳು ಮೂಡಿಬರಲಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಇದೇ ಪ್ರಥಮ ಬಾರಿಗೆ ದಸರಾ ಮಹೋತ್ಸವ ನಡೆಯುವ ವೇದಿಕೆ ಬಳಿ ಸಣ್ಣ ಪ್ರಮಾಣದಲ್ಲಿ ಆಹಾರ ಮೇಳದ ಮಾದರಿಯಲ್ಲಿ ಆಹಾರ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮ ನೋಡಲು ಬರುವ ಜನರ ಜಿಹ್ವಾಚಾಪಲ್ಯ ತಣಿಸಲು ಸ್ಥಳೀಯ ಹೋಟೆಲ್, ಚಾಟ್ಸ್ ವ್ಯಾಪಾರಿಗಳು, ವೈವಿದ್ಯಮಯ್ಯ ಆಹಾರ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಲಿದ್ದಾರೆ. ಇದಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಂದು ಜಿಲ್ಲಾಧಿಕಾರಿ ರಾಮು ವಿವರಿಸಿದರು.
ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಮಾತನಾಡಿ ನಾಲ್ಕು ದಿನಗಳ ಕಾಲ ನಡೆಯುವ ದಸರಾ ಮಹೋತ್ಸವವು ಸುಗಮವಾಗಿ ಸಾಗಲು ಅವಶ್ಯವಿರುವ ಪೊಲೀಸ್ ಬಂದೊಬಸ್ತ್ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಚಾಮರಾಜನಗರ ದಸರಾ : ಸಾಂಸ್ಕøತಿಕ ಕಾರ್ಯಕ್ರಮಗಳ ರಸದೌತಣ
ಚಾಮರಾಜನಗರ, ಸೆ. 23. - ಚಾಮರಾಜನಗರ ದಸರಾ ಮಹೋತ್ಸವ ಪ್ರಯುಕ್ತ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಸೆಪ್ಟಂಬರ್ 25 ರಿಂದ 28ರವರೆಗೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ವಿಭಿನ್ನ ಸಾಂಸ್ಕøತಿಕ ಕಾರ್ಯಕ್ರಮಗಳ ರಸದೌತಣವೆ ಇರಲಿದೆ.
ಸೆಪ್ಟಂಬರ್ 25 ರಂದು ಸಂಜೆ 5 ರಿಂದ 5.30 ರವರೆಗೆ ನಗರದ ಎನ್.ಪ್ರತಿಭಾ, ಅವರಿಂದ ಭಕ್ತಿಗೀತೆ, 5.30 ರಿಂದ 5.50ರ ವರೆಗೆ ಗುಂಡ್ಲುಪೇಟೆ ತಾಲ್ಲೂಕು ಕೊತನೂರು ಗ್ರಾಮದ ಮಾದಶೆಟ್ಟಿ ನೇತೃತ್ವದಲ್ಲಿ ಮಹದೇಶ್ವರ ಕಲಾ ತಂಡದವರು ಕಂಸಾಳೆ, 5.50 ರಿಂದ 6.30ರವರೆಗೆ ಗುಂಡ್ಲುಪೇಟೆಯ ಎಸ್.ಎಂ. ಡ್ಯಾನ್ಸ್ ಗ್ರೂಪ್ ಮತ್ತು ಮೆಲೋಡಿಸ್ ತಂಡದಿಂದ ಸಂಗೀತ ಮತ್ತು ನೃತ್ಯ, ಸಂಜೆ 6.30 ರಿಂದ 7 ರವರೆಗೆ ನಗರದ ಚೇತನ ಕಲಾವಾಹಿನಿ ತಂಡದಿಂದ ಜಾನಪದಗೀತೆ 7ರಿಂದ 8.30 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ರಾತ್ರಿ 8.30 ರಿಂದ 10.30 ರವರೆಗೆ ಬೆಂಗಳೂರಿನ ಸಂತೋಷ್‍ವೆಂಕಿ ಮತ್ತು ತಂಡದಿಂದ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
ಸೆಪ್ಟಂಬರ್ 26ರಂದು ಸಂಜೆ 5ರಿಂದ 5.30ರವರೆಗೆ ಯಳಂದೂರು ತಾಲ್ಲೂಕು ಕೆಸ್ತೂರುಗ್ರಾಮದ ಸ್ವರಸಂಗಮ ಜಾನಪದ ಕಲಾತಂಡದವರು ಎಂ.ಪ್ರಕಾಶ್ ಮತ್ತು ಇತರರ ನೇತೃತ್ವದಲ್ಲಿ ಜಾನಪದ ಗೀತೆ, ಸಂಜೆ 5.30 ರಿಂದ 6ರವರೆಗೆ ತಾಲ್ಲೂಕಿನ ಅಮಚವಾಡಿಯ ಮಹದೇವಯ್ಯ ನೇತೃತ್ವದ ಅಂಕನಾಥೇಶ್ವರ ನಾಟಕ ಕಲಾಸಂಘದವರು ರಂಗಗೀತೆ ಮತ್ತು ದೃಶ್ಯಾವಳಿ, 6 ರಿಂದ 6.30ರವರೆಗೆ ಬಂಡಿಗೆರೆ ಗ್ರಾಮದ ಶ್ರೀ ಮಲೈಮಹದೇಶ್ವರ ಸ್ವಾಮಿ ಹುಲಿವೇಷ ಕಲಾತಂಡದವರು ಗುರುಮಲ್ಲಶೆಟ್ಟಿ ನೇತೃತ್ವದಲ್ಲಿ ಹುಲಿವೇಷ, 6.30 ರಿಂದ 7ರವರೆಗೆ ಕಮರವಾಡಿ ಮಹದೇವಸ್ವಾಮಿ ಮತ್ತು ತಂಡದಿಂದ ಜಾನಪದ ನೃತ್ಯರೂಪಕ, ಸಂಜೆ 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, ರಾತ್ರಿ 8.30 ರಿಂದ 10.30ರವರೆಗೆ ಖ್ಯಾತ ಕಲಾವಿದರಾದ ಬೆಂಗಳೂರಿನ ರಾಜೇಶ್‍ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಸೆಪ್ಟಂಬರ್ 27 ರಂದು ಸಂಜೆ 5ರಿಂದ 5.30ರವರೆಗೆ ಗುಂಡ್ಲುಪೇಟೆಯ ಮೋಹನ ಜಾನಪದ ನೃತ್ಯ ಕಲಾಸಂಘದಿಂದ ಜಾನಪದ ನೃತ್ಯ, ಸಂಜೆ 5.30ರಿಂದ 6ಗಂಟೆಯವರೆಗೆ ಯಳಂದೂರು ತಾಲ್ಲೂಕು ಗಂಗವಾಡಿಯ ಶಿವರುದ್ರಸ್ವಾಮಿ ತಂಡದಿಂದ ವೀರಗಾಸೆ, 6ರಿಂದ 6.15ರವರೆಗೆ ಬಿಳಿಗಿರಿರಂಗನಬೆಟ್ಟದ ಸೋಲಿಗರ ಪುಷ್ಪಮಾಲೆ ಕಲಾಸಂಘದಿಂದ ಗೋರಾಕಾನ ನೃತ್ಯ, 6.15ರಿಂದ 6.30ರವರೆಗೆ ದೊಡ್ಡಮೋಳೆಯ ಸಿದ್ದಪ್ಪಾಜಿ ನೀಲಗಾರರ ಕಲಾಸಂಘದಿಂದ ನೀಲಗಾರರ ಮತ್ತು ತಂಬೂರಿಪದ, 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30 ರಿಂದ 9.30ರವರೆಗೆ ಮೈಸೂರಿನ ದಿಶಾ ರಮೇಶ್ ಮತ್ತು ತಂಡದಿಂದ ರಂಗಗೀತೆಗಳು, 9.30 ರಿಂದ 10.30ರವರೆಗೆ ಡಾ.ಸಂಜಯ್ ಮತ್ತು ತಂಡದಿಂದ ಕರ್ನಾಟಕ ಕ್ಷೇತ್ರ ವೈಭವ ಕಾರ್ಯಕ್ರಮ ನಡೆಯಲಿದೆ.
ಸೆಪ್ಟಂಬರ್ 28 ರಂದು ಸಂಜೆ 5.ರಿಂದ 5.45ರವರೆಗೆ ನಗರದ ಎಂ.ಶಶಿಕುಮಾರ್ ಮತ್ತು ತಂಡದಿಂದ ಜಾನಪದಗಾಯನ, ಸಂಗೀತ ರಸಸಂಜೆ, ಸಂಜೆ 5.45ರಿಂದ 6.15ರವರೆಗೆ ನಗರದ ಚಾಲೆಂಜರ್ಸ್ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ, 6.15ರಿಂದ 7ರವರೆಗೆ ವೆಂಕಟರಮಣಸ್ವಾಮಿ ಮತ್ತು ತಂಡದಿಂದ ರಂಗಗೀತೆ ಮತ್ತು ಜಾನಪದಗೀತೆ, 7 ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30ರಿಂದ 9.30ರವರೆಗೆ ಮೈಸೂರಿನ ಕೃಷ್ಣೆನೃತ್ಯ ಶಾಲೆಯ ವಿಧೂಷಿ ಡಿಂಪಲ್ ಮತ್ತು ತಂಡದಿಂದ ಚಾಮುಂಡೇಶ್ವರಿ ದೇವಿಂiÀi ನೃತ್ಯ ವೈಭವ, 9.30ರಿಂದ 10.30ರವರೆಗೆ ಮೈಸೂರಿನ ಅಮ್ಮ ವಸುಂಧರಾ ಕಲಾತಂಡದಿಂದ ಜಾನಪದ ಮತ್ತು ಭಾವಗೀತೆ ಕಾರ್ಯಕ್ರಮ ನಡೆಯಲಿವೆ.
ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಸೆ. 23 - ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ಸೆಪ್ಟೆಂಬರ್ 25ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಅಂದು ಬೆಳಿಗ್ಗೆ ಮಧ್ಯಾಹ್ನ 3.30ಗಂಟೆಗೆ ನಗರಕ್ಕೆ ಆಗಮಿಸುವರು. ಸಂಜೆ 4.30ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯಲಿರುವ ಚಾಮರಾಜನಗರ ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೋಳ್ಳುವರು. ರಾತ್ರಿ 7ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎಂ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.24ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ.:- ತಾಲ್ಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಸೂಚಿತ ಅವಧಿಯಲ್ಲಿ ಪಣ್ಯದಹುಂಡಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸೆ.26ರಂದು ಸಂತೆಮರಹಳ್ಳಿಯಲ್ಲಿ ವಿದ್ಯುತ್ ಕುರಿತು ಜನಸಂಪರ್ಕ ಸಭೆ
ಚಾಮರಾಜನಗರ, ಸೆ. 23- ತಾಲ್ಲೂಕಿನ ಸಂತೆಮರಹಳ್ಳಿಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿಯ ಉಪವಿಭಾಗದಲ್ಲಿ ಸೆಪ್ಪೆಂಬರ್ 26ರಂದು ಮಧ್ಯಾಹ್ನ 3.30 ರಿಂದ ಸಂಜೆ 5.30ರವರೆಗೆ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಹಾಜರಾಗಿ ಕುಂದು ಕೊರತೆಗಳನ್ನು ಸಭೆಗೆ ತಿಳಿಸಬಹುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಲು ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿ ಸಲಹೆ
ಚಾಮರಾಜನಗರ, ಸೆ. 23 - ಪೌರಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಅವರು ಸಹ ಉನ್ನತ ಹುದ್ದೆಗಳಿಗೆ ಏರುವಂತಾಗಲು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಸಲಹೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಂದು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ, ಮ್ಯಾನ್ಯೂಯಲ್ ಸ್ಕಾವೆಂಜರ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ಲಭಿಸುವ ಸೌಲಭ್ಯಗಳ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮತನಾಡಿದರು.
ಸಮಾಜದಲ್ಲಿ ನೈರ್ಮಲ್ಯದಂತಹ ವೃತ್ತಿಯನ್ನು ನಿರ್ವಹಿಸುವ ಪೌರಕಾರ್ಮಿಕರು ವೈಯಕ್ತಿಕ ಬದುಕಿನ ಏಳಿಗೆಗೂ ಗಮನ ನೀಡಬೇಕು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಉನ್ನತ ಅಧ್ಯಯನ ವ್ಯಾಸಂಗಕ್ಕೆ ಅವಕಾಶ ನೀಡಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಊರಿನ ಸ್ವಚ್ಚತೆಗೆ ತೊಡಗಿಕೊಳ್ಳುವ ಪೌರ ಕಾರ್ಮಿಕರು ಆರೋಗ್ಯದ ಕಡೆ ಕಾಳಜಿವಹಿಸಬೇಕು. ಯಾವುದೇ ಕಾರಣಕ್ಕೂ ಮ್ಯಾನ್ ಹೋಲ್‍ಗಳಿಗೆ ಇಳಿದು ಕೆಲಸ ಮಾಡಬೇಡಿ. ಎಷ್ಟೆ ಒತ್ತಡ ಬಂದರೂ ಮ್ಯಾನ್ ಹೋಲ್‍ಗಳಿಗೆ ಇಳಿದು ಸ್ವಚ್ಚ ಕೆಲಸಮಾಡಬೇಡಿ. ಮ್ಯಾನ್‍ಹೋಲ್ ಕೆಲಸಗಳಿಗಾಗಿಯೇ ಅತ್ಯಾಧುನಿಕ ಯಂತ್ರಗಳು ಇವೆ. ಕಾಯ್ದೆ ಪ್ರಕಾರ ಮ್ಯಾನ್ಯೂಯಲ್ ಸ್ಕಾವೆಂಜರ್ ಕೆಲಸ ಮಾಡುವಂತಿಲ್ಲ. ಕೆಲಸ ಮಾಡಲು ಒತ್ತಾಯಿಸುವವರ ವಿರುದ್ದ ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಕಾಯ್ದೆ ಬಗ್ಗೆ ತಿಳಿಸಿಕೊಡುವ ಸಲುವಾಗಿಯೇ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಕಾಯಂ ನೌಕರರಿಗೆ ಮನೆ, ನಿವೇಶನ ನೀಡಲು ಅವಕಾಶವಿತ್ತು. ಆದರೆ ತಾವು ಗುತ್ತಿಗೆ ಅವಧಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೂ ನಿವೇಶನ ನೀಡಲು ಮುಂದಾಗಿದ್ದೇವೆ. ಪ್ರತಿ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ 6ಲಕ್ಷ ರೂ ನೀಡಲಾಗುತ್ತದೆ. ಈ ಅವಕಾಶವನ್ನು ಕಾರ್ಮಿಕರು ಪಡೆಯಲು ಎಲ್ಲ ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಚಾಮರಾಜನಗರ ನಗರಸಭೆಯ ಆಯುಕ್ತರಾದ ರಾಜಣ್ಣ ಅವರು ಮ್ಯಾನ್ಯೂಯಲ್ ಸ್ಕಾವೆಂಜರ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮವು 2013ರಲ್ಲಿ ಜಾರಿಗೆ ಬಂದಿದೆ. ಕಾರ್ಮಿಕರ ಹಿತ ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇಂತಹ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದರು.
ಪೌರಕಾರ್ಮಿಕರು ನೈರ್ಮಲ್ಯ ಕೆಲಸ ಮಾಡುವಾಗ ಸುರಕ್ಷತಾ ಧಿರಿಸುಗಳನ್ನು ಧರಿಸಬೇಕು. ಬರಿಗೈಯಲ್ಲಿ ಸ್ವಚ್ಚತೆ ಕೆಲಸ ಮಾಡಬಾರದು. ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ರೋಗನಿರೋಧಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಯನ್ನು ಸ್ವಚ್ಚತೆ ಕೆಲಸ ನಿರ್ವಹಿಸುವ ಕಾರ್ಮಿಕರು ಮಾತ್ರ ಪಡೆಯುತ್ತಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಲಸಿಕೆಯನ್ನು ಪಡೆಯಲು ಮುಂದಾಗಬೇಕು. ವೈಯಕ್ತಿಕ ಆರೋಗ್ಯದ ಮೇಲೂ ನಿಗಾವಹಿಸಬೇಕು ಎಂದು ರಾಜಣ್ಣ ತಿಳಿಸಿದರು.
ಇದೇ ವೇಳೆ ಕರ್ತವ್ಯ ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕಾಗಿ ಆಯ್ಕೆಯಾಗಿರುವ ಕಾರ್ಮಿಕರಿಗೆ ಪ್ರಯಾಣದ ಟಿಕೇಟ್‍ಗಳನ್ನು ಗಣ್ಯರು ವಿತರಿಸಿದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ವಕೀಲರಾದ ಸುಬ್ರಮಣ್ಯಂ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಂದೋಲನಾದ ಸಹಸಂಯೋಜಕಿ ಪುಷ್ಪಲತಾ, ಪ್ರಗತಿಪರ ಚಿಂತಕರಾದ ಅರಕಲವಾಡಿ ನಾಗೇಂದ್ರ ಅವರು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಚಾಮರಾಜನಗರ ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ನಿಂಗರಾಜು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ್‍ಮೀನಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಹೆಚ್.ಸತೀಶ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ.ಎಂ.ರವಿಕುಮಾರ್, ಕೊಳ್ಳೇಗಾಲ ನಗರಸಭೆ ಆಯುಕ್ತರಾದ ಲಿಂಗರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment