Tuesday, 5 September 2017

ನಾನು ನನ್ನ ಬದುಕು- *"ಸಾವು ನಮ್ಮನ್ನ ನೋಡಿ ಅಂಜಬೇಕೆ ಹೊರತು, ಅದನ್ನ ನೋಡಿ ನಾವಲ್ಲ"* ಸ್ವಾರ್ಥ ಎಂದರೂ ಸರಿಯೇ ನಮ್ಮ ಹೋರಾಟ, ನನ್ನ ಹೆಜ್ಜೆ

#ಮನದಾಳದ ಮಾತು,

*"ಸಾವು ನಮ್ಮನ್ನ ನೋಡಿ ಅಂಜಬೇಕೆ ಹೊರತು, ಅದನ್ನ ನೋಡಿ ನಾವಲ್ಲ"*

*ಜೋಪಾನ ಪಾ. ನಿಮ್ಮನ್ನ ಹೊಡೆದುರುಳಿಸಿದಾರು ಎಂಬ ಪದಗಳು ಇಂದು ಕೆಲವೆಡೆ ನನ್ನ ನೋಡಿಯೇ ಹೇಳಲಾರಂಬಿಸಿದರು....ಯಾಕೊ ಏನೋ ಕೆಲವು ಗೆಳೆಯರು/ಗೆಳತಿಯರು ಕರೆ ಮಾಡಿ ಏನ್ರಿ ಚೆನ್ನಾಗಿದ್ದೀರಾ ,ಈ ತರಹ ಹುದ್ದೆ ಅಂದ್ರೆ ಹೀಗೆನಾ? ಜೋಪಾನ ಪಾ. ಅಂತ ಕುಶಲೋಪಚಾರಿ ವಿಚಾರಿಸಿದರು.
ಮತ್ತೊಂದೆಡೆ ಜೋಪಾನವಾಗಿರಿ‌ ಮುಂದೆ ನಿಮಗೂ ಏನಾದರೂ .‌‌..ಅಂತ ನನ್ನ ಆರಕ್ಷಕ ಸ್ನೇಹಿತ,ನನ್ನ ಪೊಲೀಸ್ ಇಲಾಖೆ ಜೊತೆಗಿನ ಹೋರಾಟ ನೋಡಿ ತಮಾಷೆಗೆ ಹೇಳಲಾರಂಬಿಸಿದ.
ಪತ್ರಕರ್ತೆ ಗೌರಿ ಲಂಕೇಶ್ ಅವರು ಎಲ್ರಿ ನಾವೆಲ್ಲಿ ಬಿಡ್ರಿ. ಸಮಾಜಕ್ಕೆ ಅವರದ್ದು ಅಪಾರ ಕೊಡುಗೆ ,ನಕ್ಸಲ್ ವರ್ಗವನ್ನ ಉತ್ತಮ ಸಮಾಜದೆಡೆಗೆ ಕರೆತರಲು ಮಾಡಿದ ಪ್ರಯತ್ನ ಇವೆಲ್ಲದರ‌ ಮುಂದೆ ಶೂನ್ಯ ಎಂದೆ.
ಆದರೆ
ಇಂದಿಗೂ ಒಂದು ಮಾತು ಕಿವಿಯಲ್ಲೆ ಕೇಳುತ್ತಿದೆ "ಅನಾಥ‌ ಹೆಣವಾಗುತ್ತೀಯಾ ಸುಮ್ಮನಿರು" ಎಂದು ನಾಲ್ಕು ವರ್ಷದ ಹಿಂದೆ ಹೇಳಿದ ಸ್ನೇಹಿತನೋರ್ವನ ಮಾತು.
ಯಾಕೊ ಏನೊ ಕೆಲವೊಮ್ಮೆ ಇಂತಹ ಘಟನೆಯಾದಗಲೇ ಈ ಮಾತು ನೆನಪಾಗೋದು. ಆದರೆ ಕೊನೆಗಾಲದಲ್ಲಿ ಸಣ್ಣಪುಟ್ಟ ಇರುವೆಗಳಿಗಾದರೂ ಸ್ವಲ್ಪ ಆಹಾರವಾಗುವೆನು ಎಂಬ ಆಶಾಭಾವನೆ ಅದೆಲ್ಲವನ್ನ ಮನಸ್ಸು ಮರೆಸಿ ಬಿಡುತ್ತದೆ.
*ಕೇವಲ ೧೦೦ ರೂ.ಗೆ ಜೆಎಸ್ಎಸ್ ಸಂಸ್ಥೆಯೊಂದಿಗಿನ ಕಾನೂನು ಹೋರಾಟ,
*ಅಕ್ರಮವಾಗಿ ನಡೆದ ಪತ್ರಕರ್ತರ ಭವನದ ವಿರುದ್ದ ಹೋರಾಟ,
*ಕ್ರಿಮಿನಲ್ ಪ್ರಕರಣ ಹೊಂದಿದ ಪತ್ರಕರ್ತರ ಬಸ್ ಪಾಸ್ ರದ್ದು ‌ಮಾಡೋಕೆ ಹೋರಾಡಿದ ಪ್ರಯತ್ನ,
*2.50 ಕೋಟಿ ಲಕ್ಕಿ ಡಿಪ್ ಯೋಜನೆಗೆ ತಿಲಾಂಜಲಿ,
*ನನ್ನದೇ ‌ನ್ಯಾಯಕ್ಕಾಗಿ ಪೊಲೀಸ್ ಇಲಾಖೆಯೊಂದಿಗಿನ ಹೋರಾಟ, ಹೊಡೆದಾಟ ಎಲ್ಲವೂ ಕೆಲವೊಮ್ಮೆ ಎದುರು ಬಂದರೂ ಸಾವು‌ ಮಾತ್ರ ಕಣ್ಣೆದುರು ಬರೋದಕ್ಕೆ ಯೋಚಿಸಿತ್ತಿದೆ.
*ಕೆಲವರು ತೀಟೆ ಜಗಳ ತೆಗೆದು ಕುಟುಂಬದ ಸದಸ್ಯರ ....ಮುಂದೆ ಬಿಟ್ಟು ನನ್ನ ಹೋರಾಟ ಅದುಮುವ ದುಷ್ಟರಿಗೆ ಕಾನೂನಿನ ನ್ಯಾಯದೇವತೆ ಗೆರೆ ಎಳೆಯಿತು. (ಕೈಲಾಗದ‌ ಗಂಡ ಕೈಲಾಸ ಕಂಡ ಅನ್ನೊ ಹಾಗೇ)
ಅದೇನೆ ಇರಲಿ ಕೇವಲ ಪತ್ರಕರ್ತರಿಗೆ ರಕ್ಷಣೆ ಯಾಕೆ ಬೇಕು ಎನ್ನುವ ನಿಟ್ಟಿನಲ್ಲಿ ಚಿಂತಿಸುವುದಾದರೆ ಇತ್ತೀಚೆಗೆ ಮಾದ್ಯಮಗಳಲ್ಲಿ ಅಕ್ರಮ ವರದಿಗಳು ಅಲ್ಪ,ತನಿಖಾ ವರದಿ‌ಗಳು ಕೆಲವೆಡೆ ಇಲ್ಲವೇ ಇಲ್ಲ. ? ಅಂತಹದ್ದರಲ್ಲಿ ರಕ್ಷಣೆಗಾಗಿ‌ ಪ್ರತಿಭಟನೆ, ಮನವಿ ಪೂರ. ಆದರೆ
ಯಾಕೆ ಬೇಕು. ಹೋರಾಟಕ್ಕೆ ನಿಂತವರಲ್ಲಿ ನಾ ಕಂಡಂತೆ ಪತ್ರಕರ್ತ #ಅಗ್ನಿ ಶ್ರೀದರ್, ಮೈಸೂರು #ಗುರುರಾಜ್ ಇವರು ಪತ್ರಕರ್ತರ ಜವಬ್ದಾರಿ, ಕಾನೂನು ಅರಿವು‌ ಮಾದ್ಯಮದಲ್ಲಿ ಹೇಳುತ್ತಿದ್ದರು ಯಾರು ಎಚ್ಚೆತ್ತಿಲ್ಲ. ಕೆಲವರು ಅವರ ವೈಯುಕ್ತಿಕ ಬದುಕು ಮುಂದಿಟ್ಟು ಮಾದ್ಯಮ ಡಾನ್ ಆಗಲು ಮುಂದೆ ಹೋದರೂ ಕಾನೂನು ಲಗಾಮು ಬೇರೆಡೆ ಇರುತ್ತದೆ ಎಂಬುದನ್ನ ಮರೆತಿರಿತ್ತಾರೆ. ಪದ‌ ವ್ಯಾಕರಣದ, ಗೊತ್ತಿರದ,ವೃತ್ತಿ ದರ್ಮ,ಬದ್ದತೆ ಗೊತ್ತಿಲ್ಲದವರು ಕಾಲು ಹಾಕುತ್ತಿರುವುದು‌ ಮಾತ್ರ ವಿಪರ್ಯಾಸ..

ಹೋರಾಟ ಕಾನೂನು ಬದ್ದವಾಗಿರಲಿ.
ಇಂತಿ ಎಸ್.ವೀರಭದ್ರಸ್ವಾಮಿ

 (ವಿಎಸ್ಎಸ್.) ಚಾಮರಾಜನಗರ

9480030980

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು