ಚಾಮರಾಜನಗರ ದಸರಾ ಮಹೋತ್ಸವ ವೈಭವಕ್ಕೆ ವಿಧ್ಯುಕ್ತ ಚಾಲನೆ
ಚಾಮರಾಜನಗರ, ಸೆ. 25 :- ವಿಶ್ವವಿಖ್ಯಾತ ಮೈಸೂರು ದಸರಾ ಭಾಗವಾಗಿ ಜಿಲ್ಲಾಕೇಂದ್ರದಲ್ಲಿ ನಡೆಯಲಿರುವ ನಾಲ್ಕು ದಿನಗಳ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಇಂದು ಸಂಜೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ಚಾಮರಾಜೇಶ್ವರ ದೇವಾಲಯ ಬಳಿ ಹಾಕಲಾಗಿರುವ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ನಗಾರಿ ಬಾರಿಸುವ ಮೂಲಕ ಅಧಿಕೃತವಾಗಿ ನಾಡಹಬ್ಬ ಚಾಮರಾಜನಗರ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ದಸರಾಗೆ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಖಾದರ್ ಅವರು ದಸರಾ ಎಂದರೆ ಸಂತಸ ವಾತಾವರಣ ಕಲ್ಪನೆಗೆ ಬರುತ್ತದೆ. ಮೈಸೂರಿನಲ್ಲಿ ಬಹಳ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ನಾಡಹಬ್ಬ ದಸರಾ ಚಾಮರಾಜನಗರಕ್ಕೂ ಕಳೆದ ನಾಲ್ಕು ವರ್ಷಗಳಿಂದ ವಿಸ್ತಾರವಾಗಿದೆ. ಸರ್ವರು ಬೆರೆತು ಸಂತೋಷದಿಂದ ಸೇರುವ ಹಬ್ಬವಾಗಿ ದಸರಾ ಮಾರ್ಪಾಡಾಗಿದೆ ಎಂದರು.
ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರನ್ನು ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್ ಅವರು ಜಿಲ್ಲೆಗೂ ದಸರಾ ವಿಸ್ತರಿಸಲು ಪ್ರಸ್ತಾವನೆ ಇಟ್ಟು, ಚಾಮರಾಜನಗರ ಜಿಲ್ಲೆಯಲ್ಲಿ ದಸರಾ ಅಚರಣೆಗೆ ಕಾರಣರಾದರು ಎಂದು ಸ್ಮರಿಸಿದ ಉಸ್ತುವಾರಿ ಸಚಿವರು ನಾಲ್ಕು ದಿನಗಳ ಕಾಲ ನಡೆಯಲಿರುವ ದಸರಾ ಮಹೋತ್ಸವ ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಪ್ರಿಯತೆ ಗಳಿಸಲಿ. ಹೆಚ್ಚಿನ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದು ಜನರ ಮನಸ್ಸಿನಲ್ಲಿ ಉಳಿಯಲಿ ಎಂದು ಆಶಿಸಿದರು.
ದಸರಾ ಹಬ್ಬವನ್ನು ಜಿಲ್ಲೆಯಲ್ಲೂ ಆರಂಭಿಸಿಲು ಉಸ್ತುವಾರಿ ಸಚಿವರಾಗಿದ್ದ ಮಹದೇವಪ್ರಸಾದ್ ಆಸಕ್ತಿ ತೋರಿದರು. ಜಲಪಾತೋತ್ಸವ ಕಲ್ಪನೆಯು ಸಹ ಮಹದೇವಪ್ರಸಾದ್ ಅವರದ್ದೇ ಆಗಿದೆ. ದಸರಾ ಇಂದು ಎಲ್ಲರ ಮನೆಮನೆ ಹಾಗೂ ನಾಡಹಬ್ಬವಾಗಿದೆ. ಈ ಸಂದರ್ಭದಲ್ಲಿ ಸರ್ವರಿಗೂ ಸುಖ ಶಾಂತಿ ಬಯಸುವುದಾಗಿ ಮೋಹನಕುಮಾರಿ ಅವರು ನುಡಿದರು.ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ ಪ್ರಸ್ತುತ ಎಲ್ಲೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ 71 ಕೆರೆಗಳು ತುಂಬಿವೆ. ಚಿಕ್ಕಹೊಳೆ ಜಲಾಶಯ ಸಹ ಭರ್ತಿಯಾಗಿದೆ. ಇದು ಸಂತಸ ಪಡುವ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೊಂಚ ಉತ್ಸಾಹದಿಂದಲೇ ದಸರಾ ನಡೆಯುವಂತಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಮೈಸೂರಿಗೆ ಸೀಮಿತವಾಗಿದ್ದ ದಸರಾ ಆಚರಣೆಯು ಇಲ್ಲಿಯೂ ನಡೆಯುತ್ತಿರುವುದು ಸಂತಸ ತಂದಿದೆ. ಜಿಲ್ಲೆಯ ಜನತೆ ಎಲ್ಲ ಕಾರ್ಯಕ್ರಮಗಳನ್ನು ಆನಂದದಿಂದ ನೋಡುವಂತಾಗಲೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಜಿಲ್ಲೆಯಲ್ಲಿ ದಸರಾ ಮಹೋತ್ಸವ ಆಚರಣೆಗೆ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಕಾರಣಕರ್ತರು. ಚಾಮರಾಜೇಶ್ವರ ದೇವಾಲಯ ಜೀರ್ಣೋದ್ದಾರಕ್ಕೆ 2.10 ಕೋಟಿ ರೂ. ಹಾಗೂ ಚಾಮರಾಜೇಶ್ವರ ನೂತನ ರಥ ನಿರ್ಮಾಣಕ್ಕೆ 1.20 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ದೇವಾಲಯದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ರಥ ನಿರ್ಮಾಣ ಕಾರ್ಯವು ಸಹ ಶೀಘ್ರವೇ ಆರಂಭವಾಗಲಿದೆ ಎಂದರು.
ಇದೇ ವೇಳೆ ದಸರಾ ಮಹೋತ್ಸವ ಕಾರ್ಯಕ್ರಮದ ವೇದಿಕೆ ಬಳಿ ವ್ಯವಸ್ಥೆ ಮಾಡಿರುವ ಆಹಾರ ಮೇಳಕ್ಕೂ ಗಣ್ಯರು ಚಾಲನೆ ನೀಡಿದರು.
ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಸದಸ್ಯರಾದ ಸಿ.ಎನ್. ಬಾಲರಾಜು, ಯೋಗೇಶ್, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೆಳಿಗ್ಗೆ ಚಾಮರಾಜೇಶ್ವರ ದೇವಾಲಯದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಕ್ಕರೆ ಸಚಿವರಾದ ಡಾ.ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಪೂಜೆ ಸಲ್ಲಿಸಿ ಬಳಿಕ ದೀಪ ಬೆಳಗಿಸಿ ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು. ಲೋಕಸಭಾ ಸzಸ್ಯರಾದ ಆರ್.ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಇತರೆ ಗಣ್ಯರು ಹಾಜರಿದ್ದರು.
ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧ : ಸಚಿವರಾದ ಎಂ.ಸಿ. ಮೋಹನಕುಮಾರಿ
ಚಾಮರಾಜನಗರ, ಸೆ. 25 - ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ನಿರತವಾಗಿದ್ದು ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ಶ್ರಮಿಸುತ್ತಿದೆ ಎಂದು ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ತಿಳಿಸಿದರು.
ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಇಂದು ನೂತನ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಸರ್ವರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಸಮಾಜದ ಎಲ್ಲರಿಗೂ ಸರ್ವರಿಗೂ ಸಮಪಾಲು ಸಮಬಾಳು ಎಂಬ ಆಶಯದೊಂದಿಗೆ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಎಲ್ಲರಿಗೂ ಅವಕಾಶಗಳು ಸಿಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಮದುವೆ ಮಾಡಲು ಹಿಂದುಳಿದವರು, ಬಡವರಿಗೆ ಹೆಚ್ಚು ಕಷ್ಟವಾಗುತ್ತಿದೆ. ಸರಳ ವಿವಾಹದಿಂದ ದುಂದು ವೆಚ್ಚ ಕಡಿಮೆಯಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಮಾಜಿಕ ನೆರವು ಯೋಜನೆಯಡಿ ಸಾಮಾಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗುವ ಹಾಗೂ ಅಂತರ್ಜಾತಿ ಮದುವೆಯಾಗುವವರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದೆ. ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಳ ಸಹ ಮಾಡಿದೆ ಎಂದು ಸಚಿವರು ತಿಳಿಸಿದರು.
ಚಾಮರಾಜನಗರ ದಸರಾ ಮಹೋತ್ಸವದ ದಿನದಂದೇ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವು ನಡೆದಿರುವುದು ಸಂತಸದ ಸಂಗತಿಯಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನೂತನ ವಧುವರರ ಭವಿಷ್ಯ ಸುಖಕರವಾಗಿರಲಿ ಎಂದು ಸಚಿವರು ಹಾರೈಸಿದರು.
ಅಂಬೇಡ್ಕರ್ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ರಾಜ್ಯ ಸರ್ಕಾರ ಜಿಲ್ಲೆಯಲ್ಲಿ 131 ಭವನ ನಿರ್ಮಾಣಕ್ಕೆ 10.8 ಕೋಟಿ ರೂ. ಅನುದಾನ ನೀಡಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ 1.65 ಕೋಟಿ ರೂ. ನೀಡಿದೆ. ಇದರಿಂದ ಸಭಾಭವನ ಇನ್ನಿತರ ಕಾಮಗಾರಿ ನಡೆಯುತ್ತಿದೆ. ಕೊಳ್ಳೇಗಾಲ ಪಟ್ಟಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ಸಧ್ಯದಲ್ಲೇ ಉದ್ಘಾಟನೆಯಾಗಲಿದೆ. ಯಳಂದೂರು ಹಾಗೂ ಹನೂರಿನಲ್ಲಿಯೂ ಪ್ರಸ್ತುತ ಇರುವ ಅಂಬೇಡ್ಕರ್ ಭವನದ ಕಟ್ಟಡದಲ್ಲಿ ಮತ್ತೊಂದು ಮಹಡಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದರು.
ಅಂಬೇಡ್ಕರ್ ಭವನ ಸದಾ ಚಟುವಟಿಕೆ ಕೇಂದ್ರವಾಗಿರಬೇಕು. ಶೈಕ್ಷಣಿಕ, ಇತರೆ ವೃತ್ತಿಗೆ ಪೂರಕವಾಗಿರುವ ತರಬೇತಿ ಚಟುವಟಿಕೆಗಳು ನಡೆಯಲು ಅವಕಾಶವಾಗಬೇಕು. ಆಗ ಮಾತ್ರ ಭವನದ ಉದ್ದೇಶವು ಈಡೇರಿದಂತಾಗುತ್ತದೆ ಎಂದು ಧ್ರುವನಾರಾಯಣ ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವನ ಉದ್ಘಾಟನೆ ಸಂದರ್ಭದಲ್ಲಿಯೇ ಸರಳ ಸಾಮಾಹಿಕ ವಿವಾಹ ಕಾರ್ಯಕ್ರಮವೂ ಏರ್ಪಾಡಾಗಿರುವುದು ಅರ್ಥಪೂರ್ಣವಾಗಿದೆ. ನವದಂಪತಿಗಳಿಗೆ ಆರೋಗ್ಯ ಆಯುಷ್ಯ ಹೊಂದಿ ದೀರ್ಘಕಾಲ ಸುಖಕರ ಬಾಳ್ವೆ ನಡೆಸುವಂತಾಗಲಿ ಎಂದು ಶುಭ ಕೋರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಳೆದ 8 ವರ್ಷಗಳ ಹಿಂದೆಯೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದ್ದು ಭವನ ನಿರ್ಮಾಣಕ್ಕೆ ತಮ್ಮ ಶಾಸಕ ಪ್ರದೇಶ ಅಭಿವೃದ್ಧಿ ಅನುದಾನದಡಿ 10 ಲಕ್ಷ ರೂ. ನೀಡಿದ್ದೇನೆ. ತಾಲೂಕಿನಲ್ಲಿ ಕನಕ, ಬಸವ, ಭಗೀರಥ, ವಾಲ್ಮೀಕಿ, ಬಾಬೂ ಜಗಜೀವನರಾಂ ಭವನ ಸೇರಿದಂತೆ ಇತರೆ ಸಮುದಾಯಗಳ ಭವನಕ್ಕೂ ಅಗತ್ಯ ನೆರವು ನೀಡುತ್ತಿದ್ದೇನೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಬಾಲರಾಜು ಮಾತನಾಡಿ ಅಂಬೇಡ್ಕರ್ ಅವರ ಆಶಯಗಳಿಗೆ ಅನುಗುಣವಾಗಿ ಭವನಗಳು ಸದ್ಬಳಕೆಯಾಗಬೇಕು. ಎಲ್ಲ ವರ್ಗದವರ ಉತ್ತಮ ಕಾರ್ಯಚಟುವಟಿಕೆಗಳಿಗೆ ಅಂಬೇಡ್ಕರ್ ಭವನ ಸದುಪಯೋಗವಾಗಬೇಕು ಎಂದು ಆಶಿಸಿದರು.
ಕೊಳ್ಳೇಗಾಲ ಜೀತವನದ ಪೂಜ್ಯ ಬೌದ್ಧ ಬಿಕ್ಕು ಮನೋರಖ್ಖಿತ ಬಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಡಿ ನವದಾಂಪತ್ಯಕ್ಕೆ ಕಾಲಿರಿಸಿದ 15 ಜೋಡಿಗಳಿಗೆ ಮೈಸೂರಿನ ಮಾನವ ಮಂಟಪದ ಆರ್. ಸ್ವಾಮಿ ಆನಂದ್ ಅವರು ಮಂತ್ರಮಾಂಗಲ್ಯ ಭೋದನೆ ಮಾಡಿದರು. ಇದೇವೇಳೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಮೀನು ನೀಡಿದ ದಾನಿ ಕಾಳೇಗೌಡ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಿಕ್ಕಮಹದೇವು, ತಾಲೂಕು ಪಂಚಾಯತ್ ಸದಸ್ಯರಾದ ಮಹದೇವಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಪ್ಪಾಜಿ, ಉಪಾಧ್ಯಕ್ಷರಾದ ನಾಗನಾಯ್ಕ, ಜಿಲ್ಲಾಧಿಕಾರಿ ಬಿ. ರಾಮು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ. ಸತೀಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶೌಚಾಲಯ ಕಡ್ಡಾಯ ಬಳಕೆಗೆ ಜಿಪಂ. ಸದಸ್ಯರಾದ ಬಾಲರಾಜು ಸಲಹೆ
ಚಾಮರಾಜನಗರ, ಸೆ. 25 - ಜನರು ಆರೋಗ್ಯದ ಕಾಳಜಿಯಿಂದ ಶೌಚಾಲಯಗಳನ್ನು ಕಡ್ಡಾಯವಾಗಿ ಬಳಸುವಂತಾಗಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಸಲಹೆ ಮಾಡಿದರು.
ತಾಲೂಕಿನ ಬದನಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಾಜಿಪುರದಲ್ಲಿ ಇಂದು ಮೇಲಾಜಿಪುರ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಘೋಷಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮಹಿಳೆಯರ ಆರೋಗ್ಯ ಮತ್ತು ಗೌರವ ಕಾಪಾಡುವ ಉದ್ದೇಶದಿಂದ ಸ್ವಚ್ಚ ಭಾರತ್ ಮಿಷನ್ ಅಡಿ ಪ್ರತೀ ಕುಟುಂಬಕ್ಕೂ ಶೌಚಾಲಯ ಹೊಂದಲೇಬೇಕು ಎಂಬ ಉದ್ದೇಶದೊಂದಿಗೆ ಕಾರ್ಯನಿರತವಾಗಿದೆ. ಶೌಚಾಲಯ ನಿರ್ಮಿಸಿ ಬಳಸುವುದರಿಂದ ಅನಾರೋಗ್ಯಕ್ಕೆ ಈಡಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಬಾಲರಾಜು ತಿಳಿಸಿದರು.
ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದಾಗುವ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ 15 ಸಾವಿರ, ಇತರೆ ವರ್ಗದವರಿಗೆ 12 ಸಾವಿರ ರೂ. ಪ್ರೋತ್ಸಾಹಧನವನ್ನು ಶೌಚಾಲಯ ನಿರ್ಮಿಸಿಕೊಳ್ಳಲು ಕೊಡಲಾಗುತ್ತದೆ. ಈ ಸೌಲಭ್ಯ ಬಳಸಿಕೊಂಡು ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಾಲಯವನ್ನು ಕಟ್ಟಿಕೊಳ್ಳಬೇಕು ಎಂದು ಬಾಲರಾಜು ತಿಳಿಸಿದರು.
ಶೌಚಾಲಯಗಳನ್ನು ಎಲ್ಲ ಗ್ರಾಮಗಳಲ್ಲಿಯೂ ನಿರ್ಮಿಸಿಕೊಳ್ಳಬೇಕು. ಪ್ರತಿಯೊಂದು ಗ್ರಾಮವು ಉದ್ದೇಶಿತ ಅವಧಿಯೊಳಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಘೋಷಣೆಯಾಗಬೇಕು ಎಂಬ ಆಶಯವನ್ನು ಬಾಲರಾಜು ಅವರು ವ್ಯಕ್ತಪಡಿಸಿದರು. ಇದೇವೇಳೆ ಗ್ರಾಮಸ್ಥರಿಗೆ ಶೌಚಾಲಯ ಕಡ್ಡಾಯ ಬಳಕೆ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್. ರಂಗರಾಜು ಮಾತನಾಡಿ ಬದನಗುಪ್ಪೆ ಗ್ರಾಮ ಪಂಚಾಯಿತಿ ಬರುವ ಬೇಡರಪುರ, ಬದನಗುಪ್ಪೆ, ಮರಿಯಾಲ ಇತರೆ ಗ್ರಾಮಗಳೂ ಸಹ ಅಕ್ಟೋಬರ್ 2ರೊಳಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಘೋಷಿಸಲು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜನರ ಸಹಕಾರ ಅಗತ್ಯವಿದೆ ಎಂದರು.
ತಾಲೂಕು ಪಂಚಾಯತ್ ಸದಸ್ಯರಾದ ಬಸವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುಕುಂದಮೂರ್ತಿ, ಉಪಾಧ್ಯಕ್ಷರಾದ ಸುಗುಣಲಿಂಗಪ್ಪ, ಸದಸ್ಯರಾದ ಮಲ್ಲೇಶ್, ನಾಗೇಂದ್ರ ಪ್ರಸಾದ್, ಮಹದೇವಪ್ಪ, ನಾಗರಾಜು, ಗೋವಿಂದನಾಯ್ಕ, ಸುಂದರಪ್ಪ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೆ. 26ರ ಚಾಮರಾಜನಗರ ದಸರಾ ಕಾರ್ಯಕ್ರಮಗಳ ವಿವರ
ಚಾಮರಾಜನಗರ, ಸೆ. 25
:- ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಚಾಮರಾಜನಗರ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿದ್ದು ಸೆಪ್ಟಂಬರ್ 26ರ ಕಾರ್ಯಕ್ರಮಗಳು ಇಂತಿವೆ.
ಸಂಜೆ 5ರಿಂದ 5.30ರವರೆಗೆ ಯಳಂದೂರು ತಾಲ್ಲೂಕು ಕೆಸ್ತೂರುಗ್ರಾಮದ ಸ್ವರಸಂಗಮ ಜಾನಪದ ಕಲಾತಂಡದವರು ಎಂ. ಪ್ರಕಾಶ್ ಮತ್ತು ಇತರರ ನೇತೃತ್ವದಲ್ಲಿ ಜಾನಪದ ಗೀತೆ, ಸಂಜೆ 5.30 ರಿಂದ 6ರವರೆಗೆ ತಾಲ್ಲೂಕಿನ ಅಮಚವಾಡಿಯ ಮಹದೇವಯ್ಯ ನೇತೃತ್ವದ ಅಂಕನಾಥೇಶ್ವರ ನಾಟಕ ಕಲಾಸಂಘದವರು ರಂಗಗೀತೆ ಮತ್ತು ದೃಶ್ಯಾವಳಿ, 6 ರಿಂದ 6.30ರವರೆಗೆ ಬಂಡಿಗೆರೆ ಗ್ರಾಮದ ಶ್ರೀ ಮಲೈಮಹದೇಶ್ವರ ಸ್ವಾಮಿ ಹುಲಿವೇಷ ಕಲಾತಂಡದವರು ಗುರುಮಲ್ಲಶೆಟ್ಟಿ ನೇತೃತ್ವದಲ್ಲಿ ಹುಲಿವೇಷ, 6.30 ರಿಂದ 7ರವರೆಗೆ ಕಮರವಾಡಿ ಮಹದೇವಸ್ವಾಮಿ ಮತ್ತು ತಂಡದಿಂದ ಜಾನಪದ ನೃತ್ಯರೂಪಕ, ಸಂಜೆ 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, ರಾತ್ರಿ 8.30 ರಿಂದ 10.30ರವರೆಗೆ ಖ್ಯಾತ ಕಲಾವಿದರಾದ ಬೆಂಗಳೂರಿನ ರಾಜೇಶ್‍ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ : ಪ.ಜಾ. ಪ.ಪಂ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 25 - ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಜವಳಿ ಆಧಾರಿತ ಉದ್ದಿಮೆ ಹಾಗೂ ಕೈಗಾರಿಕೆಗಳನ್ನು ಸ್ವಂತವಾಗಿ ಸ್ಥಾಪಿಸಲು ಆಸಕ್ತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಭಾವಿ ಉದ್ಯಮಶೀಲರು, ಯುವಕ ಯುವತಿಯರಿಗಾಗಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು 6 ದಿನಗಳದಾಗಿದ್ದು ಕನಿಷ್ಟ 18 ರಿಂದ 40ರ ವಯೋಮಿತಿಯೊಳಗಿರಬೇಕು. ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಇರಬೇಕು. ತರಬೇತಿ ಉಚಿತವಾಗಿದ್ದು ಸ್ವಂತ ಉದ್ಯೋಗ ಸ್ಥಾಪಿಸಲು ಉತ್ಸುಕರಾಗಿರಬೇಕು. ಯೋಜನಾ ವೆಚ್ಚದ ಶೇ.25ರಷ್ಟು ಮೊಬಲಗನ್ನು ಸ್ವಂತ ಬಂಡವಾಳ ಹೂಡಬೇಕು.
ತರಬೇತಿಯಲ್ಲಿ ವ್ಯಕ್ತಿತ್ವ ವಿಕಸನ, ಉದ್ಯಮಗಳ ಆಯ್ಕೆ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಹಾಗೂ ಹಣಕಾಸು ನಿರ್ವಹಣೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಬ್ಯಾಂಕಿನಿಂದ ದೊರೆಯುವ ಹಣಕಾಸು ಸೌಲಭ್ಯಗಳು ಹಾಗೂ ಇತರೆ ಮಾಹಿತಿಗಳ ಕುರಿತು ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಅಕ್ಟೋಬರ್ 9ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08226-222883 ಅಥವಾ ಮೊಬೈಲ್ 9945164259, 9620053122ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕುರಿ, ಮೇಕೆ ಘಟಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 25 - ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ 2017-18ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಮತ್ತು ಎಲ್ಲ ವರ್ಗದವರಿಗೆ ಕುರಿ, ಮೇಕೆ ಘಟಕ ಹÉೂಂದಲು ಅರ್ಜಿ ಆಹ್ವಾನಿಸಲಾಗಿದೆ.
ಶೇ. 90ರಷ್ಟು ಸಹಾಯಧನವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಲಭಿಸಲಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕುರಿ ಮೇಕೆ ಘಟಕಕ್ಕೆ ಎಲ್ಲ ವರ್ಗದವರಿಗೆ ಸಹಾಯಧನ ಲಭ್ಯವಿದೆ.
ನೋದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಇಲಾಖೆ, ನಿಗಮದಿಂದ 3 ವರ್ಷಗಳಲ್ಲಿ ಸಹಾಯ ಸೌಲಭ್ಯ ಪಡೆಯದೆ ಇರುÀವ ಸದಸ್ಯರು ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಆಹಾರ ಪಡಿತರ ಚೀಟಿ ಹೊಂದಿರಬೇಕು. ಸ್ವಂತ ಜಮೀನು ಹೊಂದಿದ್ದು ಹಸಿರು, ಒಣ ಮೇವನ್ನು ಒದಗಿಸಲು ಅರ್ಹರಿರಬೇಕು.
ಆಸಕ್ತರು ಅರ್ಜಿಯನ್ನು ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಸೆಪ್ಟೆಂಬರ್ 30ರೊಳಗೆ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರಾದ ಡಾ. ಖಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಕ್ತಿಯ ಪತ್ತೆಗೆ ಮನವಿ
ಚಾಮರಾಜನಗರ, ಸೆ. 25 - ಬದನಗುಪ್ಪೆ ಗ್ರಾಮದ ಶಿವಮ್ಮ ಅವರು ಅವರ ಪತಿ ದೊಡ್ಡಮಾಸ್ತೇಗೌಡರು ಜುಲೈ 10ರಂದು ಮಹದೇಶ್ವರ ಬೆಟ್ಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆವಿಗೂ ಬಂದಿರುವುದಿಲ್ಲ. ಇದೇ ರೀತಿ ಬೆಟ್ಟಕ್ಕೆ ಹೋಗಿ ತಡವಾಗಿ ಬರುತ್ತಿದ್ದುದರಿಂದ ಬರುತ್ತಾರೆಂದು ತಿಳಿದು, ನಂತರ ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಪತಿಯನ್ನು ಪತ್ತೆ ಮಾಡಿಕೊಡುವಂತೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ವ್ಯಕ್ತಿಯು 70 ವರ್ಷದವರಾಗಿದ್ದು 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣ ಮೈಕಟ್ಟು, ಬಿಳಿ ಕೂದಲು ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಕನ್ನಡಕ ಹಾಕಿರುತ್ತಾರೆ.
ಇವರ ಕುರಿತು ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 08226-222243, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ 08226-222092 ಅಥವಾ ಜಿಲ್ಲಾ ನಿಸ್ತಂತು ಕೊಠಡಿ 08226-222383ಗೆ ತಿಳಿಸುವಂತೆ ಗ್ರಾಮಾಂತರ ಠಾಣೆ ಪಿಎಸ್‍ಐ ಎಂ.ಕೆ. ಲೋಹಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ಸೃಜನ ಯೋಜನೆಯಡಿ ಆರ್ಥಿಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 25:- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ಮತ್ತು ಸೇವಾ (ಆಯ್ದ ಸೇವಾ ಚಟುವಟಿಕೆಗಳು ಮಾತ್ರ) ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕಿನಿಂದ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದ ರೆವಿನ್ಯೂ ದಾಖಲಾತಿಗಳ ಪ್ರಕಾರ ವರ್ಗೀಕರಿಸುವ ಯಾವುದೇ ಗ್ರಾಮೀಣ ಪ್ರದೇಶ ಮತ್ತು 2001ರ ಜನಗಣತಿಯಲ್ಲಿ 20 ಸಾವಿರ ಜನರಿಗಿಂತ ಕಡಿಮೆ ಇರುವ ಪಟ್ಟಣವೆಂದು ವರ್ಗೀಕರಿಸಿರುವ ಪ್ರದೇಶದಲ್ಲಿನ ಅಭ್ಯರ್ಥಿಗಳು ಅರ್ಹರು. ವಯೋಮಿತಿ ಕನಿಷ್ಟ 21 ರಿಂದ 35 ವರ್ಷ ಇರಬೇಕು. ಸಾಮಾನ್ಯ ವರ್ಗದವರಿಗೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಯೋಧರು ಹಾಗೂ ಅಂಗವಿಕಲರಿಗೆ ಗರಿಷ್ಟ 45 ವರ್ಷ ವಯೋಮಿತಿಯೊಳಗಿರಬೇಕು.
8ನೇ ತರಗತಿ ಉತ್ತೀರ್ಣರಾಗಿದ್ದು ಆದಾಯ ಮಿತಿ ಇರುವುದಿಲ್ಲ. ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಮಾತ್ರ ಪ್ರತಿ ಘಟಕಕ್ಕೆ ಗರಿಷ್ಟ 10 ಲಕ್ಷ ಯೋಜನಾ ವೆಚ್ಚದ ಕಿರು ಉತ್ಪಾದನಾ ಘಟಕ ಹಾಗೂ ಸೇವಾ ಉದ್ಯಮ ಪ್ರಾರಂಭಿಸಲು ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಸಾಲ ನೀಡಲಾಗುವುದು. ಹಿಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿ ಬ್ಯಾಂಕಿನಿಂದ ಸಾಲ ಮಂಜೂರಾಗದೇ ಇರುವವರು ಹೊಸದಾಗಿ ಅರ್ಜಿ ಸಲ್ಲಿಸಬೇಕು.
ಸಾಮಾನ್ಯ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ.25ರಷ್ಟು (ಗರಿಷ್ಟ 2.50 ಲಕ್ಷ ರೂ.ವರೆಗೆ) ಹಾಗೂ ವಿಶೇಷ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇಕಡ 35ರಷ್ಟು (ಗರಿಷ್ಟ 3.50 ಲಕ್ಷ ರೂ.ವರೆಗೆ) ಸಹಾಯಧನ ನೀಡಲಾಗುವುದು.
ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿಗಳಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು ಅರ್ಹ ಯುವಜನರು ತಿತಿತಿ.ಛಿmegಠಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಅಕ್ಟೋಬರ್ 2ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಖಾದಿ ಗ್ರಾಮೋದ್ಯೋಗ ಮಂಡಳಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment