Wednesday, 27 September 2017

ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಗೆ ಸಜೆ ,ಅ. 1 ರಿಂದ 15ರವರೆಗೆ ಜಿಲ್ಲೆಯ ಎಲ್ಲ ಗ್ರಾಮಪಂಚಾಯಿತಿಯಲ್ಲಿ ಗ್ರಾಮ ಸಮೃದ್ಧಿ, ಸ್ವಚ್ಚತಾ ಪಾಕ್ಷಿಕ ಆಚರಣೆ (27-09-2017)

     ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಗೆ ಸಜೆ

ಚಾಮರಾಜನಗರ, ಸೆ. 27 - ಮನೆಯ ಹಿತ್ತಲಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದ ವ್ಯಕ್ತಿಯೊಬ್ಬರಿಗೆ ಎರಡು ವರ್ಷ ಸಜೆ ಹಾಗೂ  ಒಂದು ಸÀÁವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕೊಳ್ಳೇಗಾಲ ತಾಲೂಕು ಮರೂರು ಗ್ರಾಮದ ನಾಗಪ್ಪ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ತನ್ನ ಮನೆಯ ಬಳಿ ಇರುವ ಹಿತ್ತಲಲ್ಲಿ ಸುಮಾರು 40 ಕೆಜಿ ತೂಕದ 75 ಗಾಂಜಾ ಗಿಡಗಳನ್ನು ಬೆಳೆದಿರುವುದು ಪತ್ತೆಯಾಗಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆದು ಅಕ್ರಮವಾಗಿ ಗಾಂಜಾ ಬೆಳೆದಿರುವುದು ರುಜುವಾತಾದ ಹಿನ್ನೆಲೆಯಲ್ಲಿ ನಾಗಪ್ಪನಿಗೆ 2 ವರ್ಷ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ತೀರ್ಪು ನೀಡಿದ್ದಾರೆ.

ಅ. 1 ರಿಂದ 15ರವರೆಗೆ ಜಿಲ್ಲೆಯ ಎಲ್ಲ ಗ್ರಾಮಪಂಚಾಯಿತಿಯಲ್ಲಿ ಗ್ರಾಮ ಸಮೃದ್ಧಿ, ಸ್ವಚ್ಚತಾ ಪಾಕ್ಷಿಕ ಆಚರಣೆ 

ಚಾಮರಾಜನಗರ, ಸೆ. 27 :- ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ಟೋಬರ್ 1 ರಿಂದ 15ರವರೆಗೆ ಗ್ರಾಮ ಸಮೃದ್ಧಿ ಹಾಗೂ ಸ್ವಚ್ಚತಾ ಪ್ರಾಕ್ಷಿಕ ಆಚರಿಸಲಾಗುತ್ತಿದೆ.
ಸ್ವಚ್ಚತಾ ಪಾಕ್ಷಿಕ ಆಚರಣೆಯನ್ನು ಎರಡು ಪ್ರಮುಖ ವಿಭಾಗಗಳನ್ನಾಗಿ ಮಾಡಲಾಗಿದೆ. ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅಕ್ಟೋಬರ್ 2ರಂದು ಗ್ರಾಮಸಭೆಗಳನ್ನು ಆಯೋಜಿಸಲಾಗುತ್ತದೆ. ಅಂದು ನೈರ್ಮಲ್ಯ ಮಹತ್ವ ತಿಳಿಸುವ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇದಕ್ಕೆ ಪೂರಕವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು, ಚಿತ್ರ ಪ್ರದರ್ಶನಗಳು, ವಿವಿಧ ಸ್ಪರ್ಧೆಗಳು ಏರ್ಪಾಡಾಗಲಿವೆ.
ಸ್ವಚ್ಚತಾ ಆಂದೋಲನ ಅಂಗವಾಗಿ ಕುಡಿಯುವ ನೀರು, ನೈರ್ಮಲ್ಯ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಇತರೆ ಸ್ವಚ್ಚತಾ ಕಾರ್ಯಕ್ರಮಗಳ ಬಗ್ಗೆ ಗ್ರಾಮೀಣ ಜನರು ವಿಶೇಷವಾಗಿ ಶಾಲಾಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ನಮ್ಮ ಗ್ರಾಮ ನಮ್ಮ ಯೋಜನೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಮತ್ತೊಂದು ಪ್ರಮುಖ ಭಾಗವಾಗಿ ಮಿಷನ್ ಅಂತ್ಯೋದಯ ಯೋಜನೆಯಡಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಚ ಭಾರತ ಮಿಷನ್, ಸಂಸದ ಆದರ್ಶ ಗ್ರಾಮ, ಆರ್ ಯು ಆರ್ ಬಿಎಎನ್ ಯೋಜನೆ ಪಿಎಂವೈ, ಪಿಎಂಜಿಎಸ್‍ವೈ ಗ್ರಾಮೀಣ ವಸತಿ ಯೋಜನೆ, ಸಾಮಾಜಿಕ ಭದ್ರತಾ ಯೋಜನೆ, ಡಿಜಿಟಲ್ ಸಾಕ್ಷರತೆ ಹಾಗೂ ಇತರೆ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮಿಷನ್ ಅಂತ್ಯೋದಯವು ಜೀವನಮಟ್ಟ ಮತ್ತು ಜೀವನೋಪಾಯಗಳ ಮೇಲಿನ ಬದಲಾವಣೆ ಹಾಗೂ ಫಲಿತಾಂಶವನ್ನು ಪರಿಣಾಮಕಾರಿಯಾಗಿ ಅಳೆಯುವ ಮತ್ತು ಉತ್ತರದಾಯಿತ್ವ ತರುವ ಸಾಧನವಾಗಲಿದೆ. ಗ್ರಾಮೀಣ ಕುಟುಂಬಗಳನ್ನು ಬಡತನದಿಂದ ಹೊರತರುವುದು 2020ರೊಳಗೆ ಗ್ರಾಮ ಪಂಚಾಯಿತಿಗಳನ್ನು ಮೊದಲ ಹಂತದಲ್ಲಿ ಬಡತನ ಮುಕ್ತವಾಗಿರಿಸುವುದು, ನೀರಿನ ಸಂರಕ್ಷಣೆ, ಕೌಶಲ್ಯ ಯೋಜನೆಗೆ ಒಳಪಡಿಸುವುದು, ವೈಯಕ್ತಿಕ ಜೀವನೋಪಾಯಕ್ಕೆ ಬೆಂಬಲ, ಎಲ್ಲ ಅರ್ಹ ಜನವಸತಿ ಪ್ರದೇಶಗಳನ್ನು ಸರ್ವಋತು ರಸ್ತೆಯ ಮೂಲಕ ಸಂಪರ್ಕಕ್ಕೆ ಅನುವು ಮಾಡಿಕೊಡುವುದು ಮಿಷನ್ ಅಂತ್ಯೋದಯ ಕಾರ್ಯಕ್ರಮದ ಉದ್ದೇಶವಾಗಿದೆ.
ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಮಹಿಳಾ ಸ್ವಯಂ ಸೇವಾ ಸಂಘಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸೇವಕರು, ಕಾಲೇಜು ವಿದ್ಯಾರ್ಥಿಗಳನ್ನು ಒಳಗೂಡಿಸಿಕೊಂಡು ಸ್ವಚ್ಚತಾ ಪಾಕ್ಷಿಕ ಆಚರಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಒಟ್ಟಾರೆ ಅಕ್ಟೋಬರ್ 1 ರಿಂದ 15ರವರೆಗೆ ಆಚರಿಸಲಾಗುವ ಸ್ವಚ್ಚತಾ ಪಾಕ್ಷಿಕ ಆಚರಣೆಯಡಿ ಮಿಷನ್ ಅಂತ್ಯೋದಯ ಯೋಜನೆಗೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳು ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತೆ ಸಂಬಂಧ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.

ನವೋದಯ ವಿದ್ಯಾಲಯ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 27 - ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 2018-19ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇದೇ ಪ್ರಥಮ ಬಾರಿಗೆ ಆನ್ ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಸುಲಭ ಹಾಗೂ ಸರಳ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಲಭ್ಯವಿರುವ ಹಳ್ಳಿಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ಭರ್ತಿ ಮಾಡಿಕೊಡಲಾಗುತ್ತದೆ.  ಅಭ್ಯರ್ಥಿಗಳು 2017-18ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ದಿನಾಂಕ 1.1.2005 ಹಾಗೂ 30.4.2009ರ ನಡುವೆ ಜನಿಸಿದವರಾಗಿರಬೇಕು. ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಂದ ವಿವರವುಳ್ಳ ಪ್ರಮಾಣ ಪತ್ರವನ್ನು ಪಡೆದು ಯಾವುದೇ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಮಾಣ ಪತ್ರವನ್ನು ಅಪ್ ಲೋಡ್ ಮಾಡಬೇಕು. ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಪ್ರವೇಶ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ. ಅರ್ಜಿ ಸಲ್ಲಿಕೆಗೆ ನವೆಂಬರ್ 25 ಕಡೆಯ ದಿನವಾಗಿದೆ.
ಸಂಪೂರ್ಣ ವಿವರಗಳಿಗೆ ಮೊಬೈಲ್ ಸಂಖ್ಯೆ 8277648280, 9611004274, 9449626242 ಹಾಗೂ 9742476738 ಸಂಪರ್ಕಿಸುವಂತೆ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ಕೋರಿದ್ದಾರೆ.


ಸೆ. 28ರಂದು ಬೇಗೂರಿನಲ್ಲಿ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ

ಚಾಮರಾಜನಗರ, ಸೆ. 27 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಬೇಗೂರು ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ ಸೆಪ್ಟೆಂಬರ್ 28ರಂದು ಮಧ್ಯಾಹ್ನ 3.30 ಗಂಟೆಗೆ ಬೇಗೂರು ಉಪವಿಭಾಗ ಕಚೇರಿ ಆವರಣದಲ್ಲಿ ಸಭೆ ನಡೆಯಲಿದೆ.
ಬೇಗೂರು ಉಪವಿಭಾಗ ವ್ಯಾಪ್ತಿಯ ಗ್ರಾಹಕರು ನಾಗರಿಕರು ವಿದ್ಯುತ್ ಸಂಬಂಧ ಸಮಸ್ಯೆ ದೂರುಗಳಿದ್ದಲ್ಲಿ ಸಭೆಗೆ ಹಾಜರಾಗಿ ಲಿಖಿತವಾಗಿ ಸಲ್ಲಿಸಬಹುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿ ನಾಪತ್ತೆ : ಮಾಹಿತಿಗೆ ಮನವಿ
ಚಾಮರಾಜನಗರ, ಸೆ. 27 - ಜ್ವರದ ಕಾರಣ ತಾಲೂಕಿನ ಸಂತೆಮರಹಳ್ಳಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದ ಮಹದೇವಪ್ಪ ಎಂಬುವರು ಕಾಣೆಯಾಗಿದ್ದಾರೆಂದು ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಕೆಂಪನಪುರ ಗ್ರಾಮದ 45 ವರ್ಷ ವÀಯಸ್ಸಿನ ಮಹದೇವಪ್ಪ ಅವರು 168 ಸೆಂ.ಮೀ. ಎತ್ತರವಿದ್ದಾರೆ. ಗೋದಿ ಮೈಬಣ್ಣ, ಗುಂಡು ಮುಖ, ಸಾದಾರಣ ಮೈಕಟ್ಟು ಹೊಂದಿದ್ದು ಕಪ್ಪುಬಿಳಿ ಚೆಕ್ಸ್ ಲುಂಗಿ ಹಾಗೂ ಗೆರೆಗಳಿರುವ ಹಸಿರು ಬಣ್ಣದ ಅರ್ಧ ತೋಲಿನ ಶರ್ಟ್, ಬಿಳಿ ಬಣ್ಣದ ಟವಲ್ ಧರಿಸಿರುತ್ತಾರೆ. ಕನ್ನಡ ಮಾತನಾಡಬಲ್ಲ ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ತಾಲೂಕಿನ ಸಂತೆಮರಹಳ್ಳಿ ಪೊಲೀಸ್ ಠಾಣೆಯ ದೂ.ಸಂ. 08226-240250, 08226-222092, 222090, 08226-226121, 0821-21445165 ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ತಿಳಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಆಡಳಿತ ನ್ಯಾಯಾಧೀಕರಣ ತರಬೇತಿಗೆ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 27 (ಕರ್ನಾಟಕ ವಾರ್ತೆ):- ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಆಡಳಿತ ನ್ಯಾಯಾಧೀಕರಣ ತರಬೇತಿಗಾಗಿ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಕಡೆ ದಿನಾಂಕಕ್ಕೆ ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಅಭ್ಯರ್ಥಿಗಳು 40ರ ವಯೋಮಿತಿಯೊಳಗಿರಬೇಕು. ಪೋಷಕರ ವರಮಾನ 2 ಲಕ್ಷ ರೂ. ಮೀರಿರಬಾರದು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 5 ಸಾವಿರ ರೂ. ಶಿಷ್ಯ ವೇತನ ನೀಡಲಾಗುತ್ತದೆ. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಪಡೆದು ಜಾತಿ ದೃಢೀಕರಣ ಪತ್ರ, ಅಂಕಪಟ್ಟಿ, ಪದವಿ ಪತ್ರ, ಬಾರ್ ಕೌನ್ಸಿಲ್ ನೋಂದಣಿ ಪತ್ರದ ದೃಢೀಕೃತ ಪ್ರತಿಗಳೊಂದಿಗೆ ಭರ್ತಿ ಮಾಡಿ ಅಕ್ಟೋಬರ್ 30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸೆ. 28ರ ಚಾಮರಾಜನಗರ ದಸರಾ ಕಾರ್ಯಕ್ರಮಗಳ ವಿವರ

 ಚಾಮರಾಜನಗರ, ಸೆ. 27 - ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಚಾಮರಾಜನಗರ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿದ್ದು ಸೆಪ್ಟಂಬರ್ 28ರ ಕಾರ್ಯಕ್ರಮಗಳು ಇಂತಿವೆ.
ಸಂಜೆ 5 ರಿಂದ 5.45ರವರೆಗೆ ನಗರದ ಎಂ. ಶಶಿಕುಮಾರ್ ಮತ್ತು ತಂಡದಿಂದ ಜಾನಪದ ಗಾಯನ, ಸಂಗೀತ ರಸಸಂಜೆ, ಸಂಜೆ 5.45 ರಿಂದ 6.15ರವರೆಗೆ ನಗರದ ಚಾಲೆಂಜರ್ಸ್ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ, 6.15 ರಿಂದ 7ರವರೆಗೆ ವೆಂಕಟರಮಣಸ್ವಾಮಿ ಮತ್ತು ತಂಡದಿಂದ ರಂಗಗೀತೆ ಮತ್ತು ಜಾನಪದ ಗೀತೆ, 7 ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30 ರಿಂದ 9.30ರವರೆಗೆ ಮೈಸೂರಿನ ಕೃಷ್ಣೆ ನೃತ್ಯ ಶಾಲೆಯ ವಿಧೂಷಿ ಡಿಂಪಲ್ ಮತ್ತು ತಂಡದಿಂದ ಚಾಮುಂಡೇಶ್ವರಿ ದೇವಿಂiÀi ನೃತ್ಯ ವೈಭವ, 9.30 ರಿಂದ 10.30ರವರೆಗೆ ಮೈಸೂರಿನ ಅಮ್ಮ ವಸುಂಧರಾ ಕಲಾತಂಡದಿಂದ ಜಾನಪದ ಮತ್ತು ಭಾವಗೀತೆ ಕಾರ್ಯಕ್ರಮ ನಡೆಯಲಿವೆ.



















Tuesday, 26 September 2017

ಹಣ ದುರುಪಯೋಗ : ದ್ವಿದಸ ನೌಕರರಿಗೆ 3 ವರ್ಷಗಳ ಸಜೆ (26-09-2017)


ಹಣ ದುರುಪಯೋಗ : ದ್ವಿದಸ ನೌಕರರಿಗೆ 3 ವರ್ಷಗಳ ಸಜೆ 

ಚಾಮರಾಜನಗರ, ಸೆ. 26 - ಖೋಟಾ ಬಿಲ್ಲುಗಳಿಗೆ ಅಧಿಕಾರಿಯ ಫೋರ್ಜರಿ ಸಹಿ ಮಾಡಿ ಹಣ ದುರುಪಯೋಗಪಡಿಸಿಕೊಂಡ ಜಲಾನಯನ ಅಭಿವೃದ್ಧಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರಿಗೆ ನಗರದ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ 3 ವರ್ಷಗಳ ಸಜೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚಾಮರಾಜನಗರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎ.ಎಂ. ವೆಂಕಟೇಶ್ ಶಿಕ್ಷೆಗೆ ಗುರಿಯಾದವರು. ಇವರು ಕಳೆದ 2001ರ ಸೆಪ್ಟೆಂಬರ್‍ನಿಂದ 2002ರ ಮಾರ್ಚ್ ಅವಧಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಿಳಿಯದಂತೆ ಅವರ ಪೂರಕ ವೇತನದ ಖೋಟಾ ಬಿಲ್ಲುಗಳನ್ನು ತಯಾರಿಸಿ ಬಟವಾಡೆ ಅಧಿಕಾರಿಗಳಂತೆ ಸಹಿ ಮಾಡಿ ಇಲಾಖೆಯ ಡಿ ದರ್ಜೆ ನೌಕರರಾಗಿದ್ದ ಬಸವಯ್ಯನವರ ಮುಖಾಂತರ ಜಿಲ್ಲಾ ಖಜಾನೆಗೆ ಸಲ್ಲಿಸಿ ಚೆಕ್ಕುಗಳನ್ನು ಪಡೆದುಕೊಂಡಿದ್ದರು. ಬಳಿಕ ಚೆಕ್ಕಿನ ಹಿಂಭಾಗದಲ್ಲೂ ಬಡವಾಡೆ ಅಧಿಕಾರಿಯ ಫೋರ್ಜರಿ ಸಹಿ ಮಾಡಿ ಬ್ಯಾಂಕಿನಿಂದ 8,79,070 ರೂ.ಗಳನ್ನು ಪಡೆದು ದುರುಪಯೋಗ ಮಾಡಿಕೊಂಡಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೆಂಕಟೇಶ್ 768172 ರೂ.ಗಳನ್ನು ಸರ್ಕಾರಕ್ಕೆ ಪಾವತಿಸಿದ್ದು ಉಳಿಕೆ 1,10,898 ರೂ.ಗಳನ್ನು ಪಾವತಿಸಬೇಕಿರುವುದು ತನಿಖೆಯಿಂದ ಕಂಡುಬಂದಿತ್ತು. ಸದರಿ ಪ್ರಕರಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೆಂಕಟೇಶನಿಗೆ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯವು 3 ವರ್ಷಗಳ ಸಜೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಯಶ್ರೀ ಎಸ್ ಶೆಣೈ ಅವರು ವಾದ ಮಂಡಿಸಿದ್ದರು.

     

ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ 

ಚಾಮರಾಜನಗರ, ಸೆ. 26 - ವಿಷನ್ 2025 ಡಾಕ್ಯುಮೆಂಟ್ ಯೋಜನೆ ಅಂಗವಾಗಿ 2025ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದರ ಕುರಿತು ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಧಿಕಾರಿ ಬಿ.ರಾಮು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ಏಳು ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯ ನೀಲನಕ್ಷೆ ಮತ್ತು ಅನುಷ್ಠಾನ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಕಾರ್ಯರಂಭ ಮಾಡಿದೆ. ಇದಕ್ಕಾಗಿ ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ, ನಗರ ಮತ್ತು ಗ್ರಾಮೀಣಾಭಿವೃದ್ಧಿ, ಆಡಳಿತ, ಕಾನೂನು ಸೇರಿದಂತೆ ಪ್ರಮುಖ ಇಲಾಖೆಗಳನ್ನೊಳಗೊಂಡ 13 ವಲಯಗಳನ್ನು ಗುರುತಿಸಿದೆ ಎಂದರು.
ವಿಷನ್ ಡಾಕ್ಯುಮೆಂಟರಿ ಪ್ರಾಜೆಕ್ಟ್ ತಯಾರಿಸಲು ಜಿಲ್ಲಾಡಳಿತ 13 ವಲಯಗಳನ್ನು ಪರಿಷ್ಕರಿಸಿ 5 ಗುಂಪು-ತಂಡಗಳನ್ನಾಗಿ ವಿಂಗಡಿಸಿದೆ. ನಗರ ಮೂಲಸೌಲಭ್ಯ ಹಾಗೂ ಸ್ಮಾರ್ಟ್‍ಸಿಟಿ, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಶಿಕ್ಷಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕಾಭಿವೃದ್ಧಿ ಮತ್ತು ಸೇವೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಇವೇ 5 ಪ್ರಮುಖ ವಲಯಗಳಾಗಿವೆ ಎಂದರು.
ನಗರ ಮೂಲಸೌಲಭ್ಯ ಹಾಗೂ ಸ್ಮಾರ್ಟ್‍ಸಿಟಿ ತಂಡದಲ್ಲಿ ಲೋಕೋಪಯೋಗಿ, ನಗರಸಭೆ, ಜಿಲ್ಲಾಧಿಕಾರಿ ಕಚೇರಿಯ ಡಿ.ಯು.ಡಿ.ಸಿ. ಅಧಿಕಾರಿಗಳಿರುತ್ತಾರೆ. ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಶಿಕ್ಷಣ ತಂಡದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಆರೋಗ್ಯಾಧಿಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಪಂಚಾಯತ್, ಕೃಷಿ, ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ ಅಧಿಕಾರಿಗಳು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ತಂಡದಲ್ಲಿರುತ್ತಾರೆ ಎಂದರು.
ಕೈಗಾರಿಕಾಭಿವೃದ್ಧಿ ಮತ್ತು ಸೇವೆಗಳ ತಂಡದಲ್ಲಿ ಡಿ.ಐ.ಸಿ, ಸೆಡಾಕ್, ಎನ್.ಐ.ಸಿ, ರುಡ್ಸೆಟ್, ಜಿ.ಟಿ.ಟಿ.ಸಿ ಮತ್ತು ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಎ.ಸಿ., ಸಿ.ಜೆ.ಎಂ. ಜೆ.ಎಂ.ಸಿ, ಬಾರ್ ಕೌನ್ಸಿಲ್ ಅಧಿಕಾರಿಗಳಿರುವ ಕಾನೂನು ಸುವ್ಯವಸ್ಥೆ ತಂಡಗಳನ್ನು ರಚಿಸಲಾಗಿದೆ. ಈ ಐದು ತಂಡಗಳಲ್ಲಿ ಪ್ರತಿತಂಡದಲ್ಲಿ ಜನಪ್ರತಿನಿಧಿಗಳು, ಧರ್ಮದರ್ಶಿಗಳು, ಎನ್.ಜಿ.ಒ ಗಳು, ಶಿಕ್ಷಣ ತಜ್ಞರು, ಬುದ್ದಿಜೀವಿಗಳು ಸಂಪನ್ಮೂಲ ವ್ಯಕ್ತಿಗಳು, ನಾಗರಿಕರನ್ನೊಳಗೊಂಡಂತೆ 20 ಮಂದಿ ಸದಸ್ಯರಿರÀಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಪ್ರಸ್ತುತ ಈಗಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸಿ ಮುಂದೆ ಕೊಂಡೊಯ್ಯಬಹುದು ಎಂಬ ಬಗ್ಗೆ ಜಿಲ್ಲಾಮಟ್ಟದಲ್ಲಿ ರಚಿಸಲಾಗಿರುವ ಪ್ರತಿತಂಡಗಳಲ್ಲಿಯೂ ಗುಂಪು ಚರ್ಚೆ ನಡೆಯಬೇಕು. ಮುಖ್ಯವಾಗಿ ಆಯಾ ಕ್ಷೇತ್ರದ ವಿಷಯವ್ಯಾಪ್ತಿಯ ಅರಿವಿದ್ದು, ಸುಲಲಿತವಾಗಿ ಮಾತನಾಡುವ ಪರಿಣತಿ ಇರುವ ಪ್ರತಿಭಾನ್ವಿತರನ್ನು ಗುರುತಿಸಬೇಕು. ಅಕ್ಟೋಬರ್ 3ರಂದು ಅಂತಹ ವಿಷಯ ಪರಿಣತರ ಪಟ್ಟಿ ಸಂಗ್ರಹಿಸಿ, ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
5 ತಂಡಗಳಲ್ಲಿನ ಪ್ರಮುಖರು ಅಕ್ಟೋಬರ್ 6ರಂದು ನಡೆಯುವ ಮೊದಲ ಸುತ್ತಿನ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಮುಂದೆ ವಿಷಯ ಮಂಡಿಸಬೇಕು. ಇದೇ ರೀತಿ ಅ. 9ಮತ್ತು 10ರಂದು 2 ಮತ್ತು 3ನೇ ಸುತ್ತಿನ ಸಂವಾದಗಳು ನಡೆಯಲಿವೆ. ಅ. 11ರಂದು ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಮಟ್ಟದಲ್ಲಿ ನಡೆಸಲಾಗಿರುವ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ನಡೆಸಲಿದೆ. ಈ ಹಂತದಲ್ಲಿ ನಾವು ವಿಷಯ ಮಂಡನೆಗೆ ಸಿದ್ಧರಿರಬೇಕು ಎಂದರು.
ಅ. 30 ರಂದು ವಿಷನ್ ಡಾಕ್ಯುಮೆಂಟ್ ಪ್ರಾಜೆಕ್ಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾ ಚಿದಂಬರಂ ಅವರು ಜಿಲ್ಲೆಗೆ ಭೇಟಿ ನೀಡಿ ಮುಂದಿನ 7 ವರ್ಷಗಳಲ್ಲಿ ರಾಜ್ಯದ ಸಮಗ್ರಾಭಿವೃದ್ಧಿಗೆ ನೀವು ಏನು ಬಯಸುತ್ತೀರಿ. ಎನ್ನುವ ಕುರಿತು ಪ್ರತಿ ವಿಷಯ ತಜ್ಞ ತಂಡಗಳಿಂದ ಅಭಿಪ್ರಾಯ, ಅನಿಸಿಕೆ ಹಾಗೂ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಿದೆ ಎಂದು ಜಿಲ್ಲಾಧಿಕಾರಿ ರಾಮು ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ  ಕೆ.ಎಂ.ಗಾಯತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



    


 


  


 

 



ತೋಟಗಾರಿಕೆ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಪಾಲಿಮನೆ ನೆರಳು ಪರದೆ ನಿರ್ಮಾಣಕ್ಕೆ 6 ಕೋಟಿ ರೂ. ಅನುದಾನ

ಚಾಮರಾಜನಗರ, ಸೆ. 26 ತೋಟಗಾರಿಕೆ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಕೃಷಿ ಭಾಗ್ಯ ಯೋಜನೆಯಡಿ ಪಾಲಿಮನೆ ನೆರಳು ಪರದೆ ನಿರ್ಮಾಣಕ್ಕಾಗಿ ನೆರವು ನೀಡುವ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಪ್ರಕ್ರಿಯೆ ನಡೆದಿದೆ.
ಜಿಲ್ಲೆಯ ಮೂರೂ ತಾಲೂಕುಗಳಾದ ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ಯೋಜನೆ ಅನುಷ್ಠಾನಕ್ಕಾಗಿ 6 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಯೋಜನೆಯಡಿ ಪಾಲಿಮನೆ, ನೆರಳು ಪರದೆ ಘಟಕಗಳನ್ನು ನಿರ್ಮಿಸಿಕೊಳ್ಳಲು ಸಾಮಾನ್ಯವರ್ಗದ ರೈರತಿಗೆ ಶೇ. 50ರಷ್ಟು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಶೇ. 90ರಷ್ಟು ಸಹಾಯಧನ ನೀಡಲಾಗುತ್ತದೆ. ಪ್ರತಿ ಫಲಾನುಭವಿಗೆ ಕನಿಷ್ಟ 500 ಚದರ ಮೀ.ನಿಂದ ಗರಿಷ್ಟ 4 ಸಾವಿರ ಚ.ಮೀ. ಪಾಲಿಮನೆ ನೆರಳು ಪರದೆ ನಿಮಾಣ ಮಾಡಿಕೊಳ್ಳಲು ಸಹಾಯಧನ ಒದಗಿಸಲಾಗುತ್ತದೆ.
ಯೋಜನೆಯಡಿ ಎಲ್ಲ ವರ್ಗದ ರೈತ ಫಲಾನುಭವಿಗಳು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ನಿಯಮಾನುಸಾರ ಆದ್ಯತೆ ಸಿಗಲಿದೆ.
ಯೋಜನೆ ಪ್ರಯೋಜನ ಪಡೆಯಲು ಫಲಾನುಭವಿಗಳು ರೈತರಾಗಿದ್ದು ಜಮೀನು ಅರ್ಜಿದಾರರ ಹೆಸರಿನಲ್ಲಿರಬೇಕು. ಪಾಲಿಮನೆ ನೆರಳು ಪರದೆ ಪ್ರದೇಶದ ವಿಸ್ತೀರ್ಣಕ್ಕೆ ಅನುಗುಣವಾಗಿ ಎರಡು ಪಟ್ಟು ವಿಸ್ತೀರ್ಣದ ಜಮೀನು ಫಲಾನುಭವಿಯ ಹೆಸರಿನಲ್ಲಿರಬೇಕು. ಯಾವುದೇ ಜಮೀನನ್ನು ಭೋಗ್ಯಕ್ಕೆ ಪಡೆದು ಅಥವಾ ಪರಭಾರೆ ಪಡೆದು ಅನುಷ್ಠಾನ ಮಾಡುವಂತಿಲ್ಲ. ಫಲಾನುಭವಿಯು ಈ ಹಿಂದೆ ಇಲಾಖೆಯ ಯಾವುದಾದರೂ ಯೋಜನೆಯಡಿ ಸಹಾಯಧನ ಪಡೆದಿದ್ದಲ್ಲಿ ಅದನ್ನೂ ಸೇರಿದಂತೆ ಪ್ರತಿ ಕುಟುಂಬ ಗರಿಷ್ಟ ಒಂದು ಎಕರೆ ವಿಸ್ತೀರ್ಣಕ್ಕೆ ಮಾತ್ರ ಸಹಾಯಧನ ಪಡೆಯಲು ಮಾತ್ರ ಅರ್ಹರಾಗಲಿದೆ.
ನೀರಾವರಿ ಮೂಲ ಹೊಂದಿದ್ದು ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವ ನೀರು ಹೊಂದಿರುವುದು ಕಡ್ಡಾಯವಾಗಿದೆ. ಪಾಲಿಮನೆ ಮತ್ತು ನೆರಳು ಪರದೆ ಘಟಕಗಳ ನಿರ್ಮಾಣ ಕಾರ್ಯವನ್ನು ಇಲಾಖೆಯಿಂದ ನೊಂದಾಯಿತವಾಗಿರುವ ಸಂಸ್ಥೆಗಳಿಂದಲೇ ಕೈಗೊಳ್ಳಬೇಕಿದೆ. ಘಟಕ ನಿರ್ಮಾಣಕ್ಕೆ ಸಾಲ ಪಡೆಯಬೇಕಿದ್ದರೆ ಸ್ಥಳೀಯ ಬ್ಯಾಂಕುಗಳಿಂದಲೇ ಪಡೆದು ಕೊಳ್ಳಬೇಕಿದೆ.
ಪಾಲಿಮನೆಗೆ 4 ಸಾವಿರ ಚ.ಮೀ. ವಿಸ್ತೀರ್ಣ ಘಟಕಕ್ಕೆ ಒಟ್ಟು 31.32 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯ ವರ್ಗದವರಿಗೆ 15.66 ಲಕ್ಷ ರೂ., ಪರಿಶಿಷ್ಟ ಜಾತಿ  ಪರಿಶಿಷ್ಟ ಪಂಗಡದವರಾಗಿದ್ದಲ್ಲಿ 28.188 ಲಕ್ಷ ರೂ., ಮಳೆ ನೀರು ಸಂಗ್ರಹಣ ಘಟಕಕ್ಕೆ (ಕೃಷಿ ಹೊಂಡ) 1.55 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯ ವರ್ಗದ ರೈತರಿಗೆ 0.775 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದಲ್ಲಿ 1.395 ಲಕ್ಷ ರೂ, ಡೀಸಲ್, ಸೋಲಾರ್ ಮೋಟಾರ್ ಅಳವಡಿಕೆಗೆ 40 ಸಾವಿರ ರೂ. ವೆಚ್ಚವಾಗಲಿದ್ದು ಸಾಮಾನ್ಯ ವರ್ಗದವರಿಗೆ 20 ಸಾವಿರ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 30 ಸಾವಿರ ನೀಡಲಾಗುತ್ತದೆ. ಅಧಿಕ ಮೌಲ್ಯದ ಬೆಳೆ ಉತ್ಪಾದನೆಗೆ 5.60 ಲಕ್ಷ ರೂ. ವೆಚ್ಚವಾಗಲಿದ್ದು ಸಾಮಾನ್ಯ ವರ್ಗದವರಿಗೆ 2.80 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 5.040 ಲಕ್ಷ ರೂ. ಲಭಿಸಲಿದೆ.
ನೆರಳು ಪರದೆ ಹಾಗೂ ಇದರ ಸಂಬಂಧಪಟ್ಟ ಚಟುವಟಿಕೆಗಳಿಗಾಗಿ 4 ಸಾವಿರ ಚ.ಮೀ. ವಿಸ್ತೀರ್ಣಕ್ಕೆ 15.36 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯವರ್ಗದ ರೈತರಿಗೆ 7.680 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 13.824 ಲಕ್ಷ ರೂ. ಅಧಿಕ ಮೌಲ್ಯ ಬೆಳೆ ಉತ್ಪಾದನೆಗೆ 5.60 ಲಕ್ಷ ರೂ. ವೆಚ್ಚವಾಗಲಿದ್ದು ಇದಕ್ಕಾಗಿ ಸಾಮಾನ್ಯ ವರ್ಗದವರಿಗೆ 2.80 ಲಕ್ಷ ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 5.040 ಲಕ್ಷ ರೂ. ನೀಡಲಾಗುತ್ತದೆ.
ಪಾಲಿಮನೆ ನಿರ್ಮಾಣಕ್ಕೆ ಅನುಗುಣವಾಗಿ ಕೃಷಿ ಹೊಂಡವನ್ನು ನಿರ್ಮಿಸಬೇಕಿದ್ದು 987 ಘ.ಮೀ. ಸಂಗ್ರಹಣ ಸಾಮಥ್ರ್ಯ ಕೃಷಿ ಹೊಂಡಕ್ಕೆ 1.550 ಲಕ್ಷ ರೂ. ವೆಚ್ಚವಾಗಲಿದೆ. ಇದಕ್ಕಾಗಿ ಸಾಮಾನ್ಯವರ್ಗದ ರೈತರಿಗೆ 0.775 ಲಕ್ಷ ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 1.395 ಲಕ್ಷ ರೂ. ಸಹಾಯಧನ, 447 ಘ.ಮೀ. ನೀರು ಸಂಗ್ರಹಣಾ ಸಾಮಥ್ರ್ಯ ಕೃಷಿ ಹೊಂಡಕ್ಕೆ 0.896 ಲಕ್ಷ ರೂ. ವೆಚ್ಚವಾಗಲಿದ್ದು ಸಾಮಾನ್ಯವರ್ಗದ ರೈತರಿಗೆ 0.448 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 0.806 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. 258 ಘ.ಮೀ. ನೀರು ಸಂಗ್ರಹಣಾ ಸಾಮಥ್ರ್ಯ ಕೃಷಿ ಹೊಂಡಕ್ಕೆ 0.625 ಲಕ್ಷ ರೂ. ವೆಚ್ಚವಾಗಲಿದ್ದು ಸಾಮಾನ್ಯ ವರ್ಗದ ರೈತರಿಗೆ 0.312 ಲಕ್ಷ ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ 0.562 ಲಕ್ಷ ರೂ. ಸಹಾಯಧನ ಲಭಿಸಲಿದೆ.
ತೋಟಗಾರಿಕೆ ಇಲಾಖೆಯು ಕೃಷಿ ಭಾಗ್ಯ ಯೋಜನೆಯಡಿ ನೀಡುವ ಈ ಎಲ್ಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿಯೊಂದಿಗೆ ಭಾವಚಿತ್ರ, ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಪ್ರತಿ (ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನೊಂದಾಯಿಸಿ ವಿವರ ಸಲ್ಲಿಸಲಾಗುವುದು ಎಂಬ ಸ್ವಯಂ ಘೋಷಣಾ ಪತ್ರ), ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಹಣಿ, ಚೆಕ್ಕುಬಂದಿ, ನೀರಿನ ಮೂಲಕ ವಿವರ, ಲಭ್ಯತೆಯ ಪ್ರಮಾಣ, ವಿದ್ಯುತ್ ಅಥವಾ ಶಕ್ತಿಮೂಲಗಳ ಲಭ್ಯತೆ, ಮಣ್ಣು. ನೀರು ವಿಶ್ಲೇಷಣೆ ಪ್ರಮಾಣಪತ್ರ, ಪರಿಶಿಷ್ಟ ಜಾತಿ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ, ಬ್ಯಾಂಕ್ ವಿವರ ಇನ್ನಿತರ ಅಗತ್ಯ ವಿವರಗಳೊಂದಿಗೆ ಅಕ್ಟೋಬರ್ 24ರೊಳಗೆ ಆಯಾ ತಾಲೂಕಿನ ತೋಟಗಾರಿಕೆ ಕಚೇರಿಗೆ ಅರ್ಜಿ ಸಲ್ಲಿಸಲು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.
ಜಿಲ್ಲಾಮಟ್ಟದ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾದಲ್ಲಿ ಗುರಿಗೆ ಅನುಗುಣವಾಗಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಾಟರಿ ಮೂಲಕವೇ ಜೇಷ್ಠತೆಯ ಆಧಾರದ ಮೇಲೆ ಪಟ್ಟಿ ಮಾಡಲಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಬಿ.ಎಲ್. ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರು, ಜಿ.ಪಂ, ಚಾಮರಾಜನಗರ ದೂ.ಸಂ. 08226-225022, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ, ಚಾಮರಾಜನಗರ ದೂ.ಸಂ. 08226-223049, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಳ್ಳೇಗಾಲ ದೂ.ಸಂ. 08226-253449, ಸಹಾಯಕ ತೋಟಗಾರಿಕೆ ನಿರ್ದೇಶಕರು, ಯಳಂದೂರು, ದೂ.ಸಂ. 08226-24600 ಹಾಗೂ ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರಾದ ಬಿ.ಎಲ್. ಶಿವಪ್ರಸಾದ್ ಕೋರಿದ್ದಾರೆ.

ಸೆ. 27ರ ಚಾಮರಾಜನಗರ ದಸರಾ ಕಾರ್ಯಕ್ರಮಗಳ ವಿವರ

 ಚಾಮರಾಜನಗರ, ಸೆ. 26 - ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಚಾಮರಾಜನಗರ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿದ್ದು ಸೆಪ್ಟಂಬರ್ 27ರ ಕಾರ್ಯಕ್ರಮಗಳು ಇಂತಿವೆ.
ಸಂಜೆ 5 ರಿಂದ 5.30ರವರೆಗೆ ಗುಂಡ್ಲುಪೇಟೆಯ ಮೋಹನ ಜಾನಪದ ನೃತ್ಯ ಕಲಾಸಂಘದಿಂದ ಜಾನಪದ ನೃತ್ಯ, ಸಂಜೆ 5.30 ರಿಂದ 6 ಗಂಟೆಯವರೆಗೆ ಯಳಂದೂರು ತಾಲ್ಲೂಕು ಗಂಗವಾಡಿಯ ಶಿವರುದ್ರಸ್ವಾಮಿ ತಂಡದಿಂದ ವೀರಗಾಸೆ, 6 ರಿಂದ 6.15ರವರೆಗೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಪುಷ್ಪಮಾಲೆ ಕಲಾಸಂಘದಿಂದ ಗೋರುಕಾನ ನೃತ್ಯ, 6.15 ರಿಂದ 6.30ರವರೆಗೆ ದೊಡ್ಡಮೋಳೆಯ ಸಿದ್ದಪ್ಪಾಜಿ ನೀಲಗಾರರ ಕಲಾಸಂಘದಿಂದ ನೀಲಗಾರರ ಮತ್ತು ತಂಬೂರಿ ಪದ, 7 ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30 ರಿಂದ 9.30ರವರೆಗೆ ಮೈಸೂರಿನ ದಿಶಾ ರಮೇಶ್ ಮತ್ತು ತಂಡದಿಂದ ರಂಗಗೀತೆಗಳು, 9.30 ರಿಂದ 10.30ರವರೆಗೆ ಡಾ.ಸಂಜಯ್ ಮತ್ತು ತಂಡದಿಂದ ಕರ್ನಾಟಕ ಕ್ಷೇತ್ರ ವೈಭವ ಕಾರ್ಯಕ್ರಮ ನಡೆಯಲಿದೆ.



















Monday, 25 September 2017

ಚಾಮರಾಜನಗರ ದಸರಾ ಮಹೋತ್ಸವ ವೈಭವಕ್ಕೆ ವಿಧ್ಯುಕ್ತ ಚಾಲನೆ ,ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧ : ಸಚಿವರಾದ ಎಂ.ಸಿ. ಮೋಹನಕುಮಾರಿ (25-09-2017)

     

ಚಾಮರಾಜನಗರ ದಸರಾ ಮಹೋತ್ಸವ ವೈಭವಕ್ಕೆ ವಿಧ್ಯುಕ್ತ ಚಾಲನೆ 

 ಚಾಮರಾಜನಗರ, ಸೆ. 25 :- ವಿಶ್ವವಿಖ್ಯಾತ ಮೈಸೂರು ದಸರಾ ಭಾಗವಾಗಿ ಜಿಲ್ಲಾಕೇಂದ್ರದಲ್ಲಿ ನಡೆಯಲಿರುವ ನಾಲ್ಕು ದಿನಗಳ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಇಂದು ಸಂಜೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.

ಚಾಮರಾಜೇಶ್ವರ ದೇವಾಲಯ ಬಳಿ ಹಾಕಲಾಗಿರುವ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ನಗಾರಿ ಬಾರಿಸುವ ಮೂಲಕ ಅಧಿಕೃತವಾಗಿ ನಾಡಹಬ್ಬ ಚಾಮರಾಜನಗರ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ದಸರಾಗೆ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಖಾದರ್ ಅವರು ದಸರಾ ಎಂದರೆ ಸಂತಸ ವಾತಾವರಣ ಕಲ್ಪನೆಗೆ ಬರುತ್ತದೆ. ಮೈಸೂರಿನಲ್ಲಿ ಬಹಳ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ನಾಡಹಬ್ಬ ದಸರಾ ಚಾಮರಾಜನಗರಕ್ಕೂ ಕಳೆದ ನಾಲ್ಕು ವರ್ಷಗಳಿಂದ ವಿಸ್ತಾರವಾಗಿದೆ. ಸರ್ವರು ಬೆರೆತು ಸಂತೋಷದಿಂದ ಸೇರುವ ಹಬ್ಬವಾಗಿ ದಸರಾ ಮಾರ್ಪಾಡಾಗಿದೆ ಎಂದರು.




ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರನ್ನು ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್ ಅವರು ಜಿಲ್ಲೆಗೂ ದಸರಾ ವಿಸ್ತರಿಸಲು ಪ್ರಸ್ತಾವನೆ ಇಟ್ಟು, ಚಾಮರಾಜನಗರ ಜಿಲ್ಲೆಯಲ್ಲಿ ದಸರಾ ಅಚರಣೆಗೆ ಕಾರಣರಾದರು ಎಂದು ಸ್ಮರಿಸಿದ ಉಸ್ತುವಾರಿ ಸಚಿವರು ನಾಲ್ಕು ದಿನಗಳ ಕಾಲ ನಡೆಯಲಿರುವ ದಸರಾ ಮಹೋತ್ಸವ ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಪ್ರಿಯತೆ ಗಳಿಸಲಿ. ಹೆಚ್ಚಿನ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದು ಜನರ ಮನಸ್ಸಿನಲ್ಲಿ ಉಳಿಯಲಿ ಎಂದು ಆಶಿಸಿದರು.
ದಸರಾ ಹಬ್ಬವನ್ನು ಜಿಲ್ಲೆಯಲ್ಲೂ ಆರಂಭಿಸಿಲು ಉಸ್ತುವಾರಿ ಸಚಿವರಾಗಿದ್ದ ಮಹದೇವಪ್ರಸಾದ್ ಆಸಕ್ತಿ ತೋರಿದರು. ಜಲಪಾತೋತ್ಸವ ಕಲ್ಪನೆಯು ಸಹ ಮಹದೇವಪ್ರಸಾದ್ ಅವರದ್ದೇ ಆಗಿದೆ. ದಸರಾ ಇಂದು ಎಲ್ಲರ ಮನೆಮನೆ ಹಾಗೂ ನಾಡಹಬ್ಬವಾಗಿದೆ. ಈ ಸಂದರ್ಭದಲ್ಲಿ ಸರ್ವರಿಗೂ ಸುಖ ಶಾಂತಿ ಬಯಸುವುದಾಗಿ ಮೋಹನಕುಮಾರಿ ಅವರು ನುಡಿದರು.
 ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ ಪ್ರಸ್ತುತ ಎಲ್ಲೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ 71 ಕೆರೆಗಳು ತುಂಬಿವೆ. ಚಿಕ್ಕಹೊಳೆ ಜಲಾಶಯ ಸಹ ಭರ್ತಿಯಾಗಿದೆ. ಇದು ಸಂತಸ ಪಡುವ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೊಂಚ ಉತ್ಸಾಹದಿಂದಲೇ ದಸರಾ ನಡೆಯುವಂತಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಮೈಸೂರಿಗೆ ಸೀಮಿತವಾಗಿದ್ದ ದಸರಾ ಆಚರಣೆಯು ಇಲ್ಲಿಯೂ ನಡೆಯುತ್ತಿರುವುದು ಸಂತಸ ತಂದಿದೆ. ಜಿಲ್ಲೆಯ ಜನತೆ ಎಲ್ಲ ಕಾರ್ಯಕ್ರಮಗಳನ್ನು ಆನಂದದಿಂದ ನೋಡುವಂತಾಗಲೆಂದರು.




ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಜಿಲ್ಲೆಯಲ್ಲಿ ದಸರಾ ಮಹೋತ್ಸವ ಆಚರಣೆಗೆ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಕಾರಣಕರ್ತರು. ಚಾಮರಾಜೇಶ್ವರ ದೇವಾಲಯ ಜೀರ್ಣೋದ್ದಾರಕ್ಕೆ 2.10 ಕೋಟಿ ರೂ. ಹಾಗೂ ಚಾಮರಾಜೇಶ್ವರ ನೂತನ ರಥ ನಿರ್ಮಾಣಕ್ಕೆ 1.20 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ದೇವಾಲಯದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ರಥ ನಿರ್ಮಾಣ ಕಾರ್ಯವು ಸಹ ಶೀಘ್ರವೇ ಆರಂಭವಾಗಲಿದೆ ಎಂದರು. 

ಇದೇ ವೇಳೆ ದಸರಾ ಮಹೋತ್ಸವ ಕಾರ್ಯಕ್ರಮದ ವೇದಿಕೆ ಬಳಿ ವ್ಯವಸ್ಥೆ ಮಾಡಿರುವ ಆಹಾರ ಮೇಳಕ್ಕೂ ಗಣ್ಯರು ಚಾಲನೆ ನೀಡಿದರು. 

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಸದಸ್ಯರಾದ ಸಿ.ಎನ್. ಬಾಲರಾಜು, ಯೋಗೇಶ್, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ ಚಾಮರಾಜೇಶ್ವರ ದೇವಾಲಯದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಕ್ಕರೆ ಸಚಿವರಾದ ಡಾ.ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಪೂಜೆ ಸಲ್ಲಿಸಿ ಬಳಿಕ ದೀಪ ಬೆಳಗಿಸಿ ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು. ಲೋಕಸಭಾ ಸzಸ್ಯರಾದ ಆರ್.ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಇತರೆ ಗಣ್ಯರು ಹಾಜರಿದ್ದರು.         

     ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧ : ಸಚಿವರಾದ ಎಂ.ಸಿ. ಮೋಹನಕುಮಾರಿ

ಚಾಮರಾಜನಗರ, ಸೆ. 25 - ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ನಿರತವಾಗಿದ್ದು ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ಶ್ರಮಿಸುತ್ತಿದೆ ಎಂದು ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ತಿಳಿಸಿದರು. 
ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಇಂದು ನೂತನ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಸರ್ವರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಸಮಾಜದ ಎಲ್ಲರಿಗೂ ಸರ್ವರಿಗೂ ಸಮಪಾಲು ಸಮಬಾಳು ಎಂಬ ಆಶಯದೊಂದಿಗೆ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಎಲ್ಲರಿಗೂ ಅವಕಾಶಗಳು ಸಿಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಮದುವೆ ಮಾಡಲು ಹಿಂದುಳಿದವರು, ಬಡವರಿಗೆ ಹೆಚ್ಚು ಕಷ್ಟವಾಗುತ್ತಿದೆ. ಸರಳ ವಿವಾಹದಿಂದ ದುಂದು ವೆಚ್ಚ ಕಡಿಮೆಯಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಮಾಜಿಕ ನೆರವು ಯೋಜನೆಯಡಿ ಸಾಮಾಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗುವ ಹಾಗೂ ಅಂತರ್ಜಾತಿ ಮದುವೆಯಾಗುವವರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದೆ. ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಳ ಸಹ ಮಾಡಿದೆ ಎಂದು ಸಚಿವರು ತಿಳಿಸಿದರು.
ಚಾಮರಾಜನಗರ ದಸರಾ ಮಹೋತ್ಸವದ ದಿನದಂದೇ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವು ನಡೆದಿರುವುದು ಸಂತಸದ ಸಂಗತಿಯಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನೂತನ ವಧುವರರ ಭವಿಷ್ಯ ಸುಖಕರವಾಗಿರಲಿ ಎಂದು ಸಚಿವರು ಹಾರೈಸಿದರು.
ಅಂಬೇಡ್ಕರ್ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ರಾಜ್ಯ ಸರ್ಕಾರ ಜಿಲ್ಲೆಯಲ್ಲಿ 131 ಭವನ ನಿರ್ಮಾಣಕ್ಕೆ 10.8 ಕೋಟಿ ರೂ. ಅನುದಾನ ನೀಡಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ 1.65 ಕೋಟಿ ರೂ. ನೀಡಿದೆ. ಇದರಿಂದ ಸಭಾಭವನ ಇನ್ನಿತರ ಕಾಮಗಾರಿ ನಡೆಯುತ್ತಿದೆ. ಕೊಳ್ಳೇಗಾಲ ಪಟ್ಟಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ಸಧ್ಯದಲ್ಲೇ ಉದ್ಘಾಟನೆಯಾಗಲಿದೆ. ಯಳಂದೂರು ಹಾಗೂ ಹನೂರಿನಲ್ಲಿಯೂ ಪ್ರಸ್ತುತ ಇರುವ ಅಂಬೇಡ್ಕರ್ ಭವನದ ಕಟ್ಟಡದಲ್ಲಿ ಮತ್ತೊಂದು ಮಹಡಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದರು. 
ಅಂಬೇಡ್ಕರ್ ಭವನ ಸದಾ ಚಟುವಟಿಕೆ ಕೇಂದ್ರವಾಗಿರಬೇಕು. ಶೈಕ್ಷಣಿಕ, ಇತರೆ ವೃತ್ತಿಗೆ ಪೂರಕವಾಗಿರುವ ತರಬೇತಿ ಚಟುವಟಿಕೆಗಳು ನಡೆಯಲು ಅವಕಾಶವಾಗಬೇಕು. ಆಗ ಮಾತ್ರ ಭವನದ ಉದ್ದೇಶವು ಈಡೇರಿದಂತಾಗುತ್ತದೆ ಎಂದು ಧ್ರುವನಾರಾಯಣ ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವನ ಉದ್ಘಾಟನೆ ಸಂದರ್ಭದಲ್ಲಿಯೇ ಸರಳ ಸಾಮಾಹಿಕ ವಿವಾಹ ಕಾರ್ಯಕ್ರಮವೂ ಏರ್ಪಾಡಾಗಿರುವುದು ಅರ್ಥಪೂರ್ಣವಾಗಿದೆ. ನವದಂಪತಿಗಳಿಗೆ ಆರೋಗ್ಯ ಆಯುಷ್ಯ ಹೊಂದಿ ದೀರ್ಘಕಾಲ ಸುಖಕರ ಬಾಳ್ವೆ ನಡೆಸುವಂತಾಗಲಿ ಎಂದು ಶುಭ ಕೋರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಳೆದ 8 ವರ್ಷಗಳ ಹಿಂದೆಯೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದ್ದು ಭವನ ನಿರ್ಮಾಣಕ್ಕೆ ತಮ್ಮ ಶಾಸಕ ಪ್ರದೇಶ ಅಭಿವೃದ್ಧಿ ಅನುದಾನದಡಿ 10 ಲಕ್ಷ ರೂ. ನೀಡಿದ್ದೇನೆ. ತಾಲೂಕಿನಲ್ಲಿ ಕನಕ, ಬಸವ, ಭಗೀರಥ, ವಾಲ್ಮೀಕಿ, ಬಾಬೂ ಜಗಜೀವನರಾಂ ಭವನ ಸೇರಿದಂತೆ ಇತರೆ ಸಮುದಾಯಗಳ ಭವನಕ್ಕೂ ಅಗತ್ಯ ನೆರವು ನೀಡುತ್ತಿದ್ದೇನೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಬಾಲರಾಜು ಮಾತನಾಡಿ ಅಂಬೇಡ್ಕರ್ ಅವರ ಆಶಯಗಳಿಗೆ ಅನುಗುಣವಾಗಿ ಭವನಗಳು ಸದ್ಬಳಕೆಯಾಗಬೇಕು. ಎಲ್ಲ ವರ್ಗದವರ ಉತ್ತಮ ಕಾರ್ಯಚಟುವಟಿಕೆಗಳಿಗೆ ಅಂಬೇಡ್ಕರ್ ಭವನ ಸದುಪಯೋಗವಾಗಬೇಕು ಎಂದು ಆಶಿಸಿದರು.
ಕೊಳ್ಳೇಗಾಲ ಜೀತವನದ ಪೂಜ್ಯ ಬೌದ್ಧ ಬಿಕ್ಕು ಮನೋರಖ್ಖಿತ ಬಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಡಿ ನವದಾಂಪತ್ಯಕ್ಕೆ ಕಾಲಿರಿಸಿದ 15 ಜೋಡಿಗಳಿಗೆ ಮೈಸೂರಿನ ಮಾನವ ಮಂಟಪದ ಆರ್. ಸ್ವಾಮಿ ಆನಂದ್ ಅವರು ಮಂತ್ರಮಾಂಗಲ್ಯ ಭೋದನೆ ಮಾಡಿದರು. ಇದೇವೇಳೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಮೀನು ನೀಡಿದ ದಾನಿ ಕಾಳೇಗೌಡ ಅವರನ್ನು ಸನ್ಮಾನಿಸಲಾಯಿತು. 
ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಿಕ್ಕಮಹದೇವು, ತಾಲೂಕು ಪಂಚಾಯತ್ ಸದಸ್ಯರಾದ ಮಹದೇವಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಪ್ಪಾಜಿ, ಉಪಾಧ್ಯಕ್ಷರಾದ ನಾಗನಾಯ್ಕ, ಜಿಲ್ಲಾಧಿಕಾರಿ ಬಿ. ರಾಮು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ. ಸತೀಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




ಶೌಚಾಲಯ ಕಡ್ಡಾಯ ಬಳಕೆಗೆ ಜಿಪಂ. ಸದಸ್ಯರಾದ ಬಾಲರಾಜು ಸಲಹೆ

ಚಾಮರಾಜನಗರ, ಸೆ. 25 - ಜನರು ಆರೋಗ್ಯದ ಕಾಳಜಿಯಿಂದ ಶೌಚಾಲಯಗಳನ್ನು ಕಡ್ಡಾಯವಾಗಿ ಬಳಸುವಂತಾಗಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಸಲಹೆ ಮಾಡಿದರು.
ತಾಲೂಕಿನ ಬದನಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಾಜಿಪುರದಲ್ಲಿ ಇಂದು ಮೇಲಾಜಿಪುರ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಘೋಷಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮಹಿಳೆಯರ ಆರೋಗ್ಯ ಮತ್ತು ಗೌರವ ಕಾಪಾಡುವ ಉದ್ದೇಶದಿಂದ ಸ್ವಚ್ಚ ಭಾರತ್ ಮಿಷನ್ ಅಡಿ ಪ್ರತೀ ಕುಟುಂಬಕ್ಕೂ ಶೌಚಾಲಯ ಹೊಂದಲೇಬೇಕು ಎಂಬ ಉದ್ದೇಶದೊಂದಿಗೆ ಕಾರ್ಯನಿರತವಾಗಿದೆ. ಶೌಚಾಲಯ ನಿರ್ಮಿಸಿ ಬಳಸುವುದರಿಂದ ಅನಾರೋಗ್ಯಕ್ಕೆ ಈಡಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಬಾಲರಾಜು ತಿಳಿಸಿದರು.
ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದಾಗುವ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ 15 ಸಾವಿರ, ಇತರೆ ವರ್ಗದವರಿಗೆ 12 ಸಾವಿರ ರೂ. ಪ್ರೋತ್ಸಾಹಧನವನ್ನು ಶೌಚಾಲಯ ನಿರ್ಮಿಸಿಕೊಳ್ಳಲು ಕೊಡಲಾಗುತ್ತದೆ. ಈ ಸೌಲಭ್ಯ ಬಳಸಿಕೊಂಡು ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಾಲಯವನ್ನು ಕಟ್ಟಿಕೊಳ್ಳಬೇಕು ಎಂದು ಬಾಲರಾಜು ತಿಳಿಸಿದರು.
ಶೌಚಾಲಯಗಳನ್ನು ಎಲ್ಲ ಗ್ರಾಮಗಳಲ್ಲಿಯೂ ನಿರ್ಮಿಸಿಕೊಳ್ಳಬೇಕು. ಪ್ರತಿಯೊಂದು ಗ್ರಾಮವು ಉದ್ದೇಶಿತ ಅವಧಿಯೊಳಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಘೋಷಣೆಯಾಗಬೇಕು ಎಂಬ ಆಶಯವನ್ನು ಬಾಲರಾಜು ಅವರು ವ್ಯಕ್ತಪಡಿಸಿದರು. ಇದೇವೇಳೆ ಗ್ರಾಮಸ್ಥರಿಗೆ ಶೌಚಾಲಯ ಕಡ್ಡಾಯ ಬಳಕೆ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್. ರಂಗರಾಜು ಮಾತನಾಡಿ ಬದನಗುಪ್ಪೆ ಗ್ರಾಮ ಪಂಚಾಯಿತಿ ಬರುವ ಬೇಡರಪುರ, ಬದನಗುಪ್ಪೆ, ಮರಿಯಾಲ ಇತರೆ ಗ್ರಾಮಗಳೂ ಸಹ ಅಕ್ಟೋಬರ್ 2ರೊಳಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಘೋಷಿಸಲು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜನರ ಸಹಕಾರ ಅಗತ್ಯವಿದೆ ಎಂದರು.
ತಾಲೂಕು ಪಂಚಾಯತ್ ಸದಸ್ಯರಾದ ಬಸವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುಕುಂದಮೂರ್ತಿ, ಉಪಾಧ್ಯಕ್ಷರಾದ ಸುಗುಣಲಿಂಗಪ್ಪ, ಸದಸ್ಯರಾದ ಮಲ್ಲೇಶ್, ನಾಗೇಂದ್ರ ಪ್ರಸಾದ್, ಮಹದೇವಪ್ಪ, ನಾಗರಾಜು, ಗೋವಿಂದನಾಯ್ಕ, ಸುಂದರಪ್ಪ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೆ. 26ರ ಚಾಮರಾಜನಗರ ದಸರಾ ಕಾರ್ಯಕ್ರಮಗಳ ವಿವರ

 ಚಾಮರಾಜನಗರ, ಸೆ. 25 
:- ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಚಾಮರಾಜನಗರ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿದ್ದು ಸೆಪ್ಟಂಬರ್ 26ರ ಕಾರ್ಯಕ್ರಮಗಳು ಇಂತಿವೆ.
ಸಂಜೆ 5ರಿಂದ 5.30ರವರೆಗೆ ಯಳಂದೂರು ತಾಲ್ಲೂಕು ಕೆಸ್ತೂರುಗ್ರಾಮದ ಸ್ವರಸಂಗಮ ಜಾನಪದ ಕಲಾತಂಡದವರು ಎಂ. ಪ್ರಕಾಶ್ ಮತ್ತು ಇತರರ ನೇತೃತ್ವದಲ್ಲಿ ಜಾನಪದ ಗೀತೆ, ಸಂಜೆ 5.30 ರಿಂದ 6ರವರೆಗೆ ತಾಲ್ಲೂಕಿನ ಅಮಚವಾಡಿಯ ಮಹದೇವಯ್ಯ ನೇತೃತ್ವದ ಅಂಕನಾಥೇಶ್ವರ ನಾಟಕ ಕಲಾಸಂಘದವರು ರಂಗಗೀತೆ ಮತ್ತು ದೃಶ್ಯಾವಳಿ, 6 ರಿಂದ 6.30ರವರೆಗೆ ಬಂಡಿಗೆರೆ ಗ್ರಾಮದ ಶ್ರೀ ಮಲೈಮಹದೇಶ್ವರ ಸ್ವಾಮಿ ಹುಲಿವೇಷ ಕಲಾತಂಡದವರು ಗುರುಮಲ್ಲಶೆಟ್ಟಿ ನೇತೃತ್ವದಲ್ಲಿ ಹುಲಿವೇಷ, 6.30 ರಿಂದ 7ರವರೆಗೆ ಕಮರವಾಡಿ ಮಹದೇವಸ್ವಾಮಿ ಮತ್ತು ತಂಡದಿಂದ ಜಾನಪದ ನೃತ್ಯರೂಪಕ, ಸಂಜೆ 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, ರಾತ್ರಿ 8.30 ರಿಂದ 10.30ರವರೆಗೆ ಖ್ಯಾತ ಕಲಾವಿದರಾದ ಬೆಂಗಳೂರಿನ ರಾಜೇಶ್‍ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
 

 ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ : ಪ.ಜಾ. ಪ.ಪಂ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 25 - ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಜವಳಿ ಆಧಾರಿತ ಉದ್ದಿಮೆ ಹಾಗೂ ಕೈಗಾರಿಕೆಗಳನ್ನು ಸ್ವಂತವಾಗಿ ಸ್ಥಾಪಿಸಲು ಆಸಕ್ತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಭಾವಿ ಉದ್ಯಮಶೀಲರು, ಯುವಕ ಯುವತಿಯರಿಗಾಗಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು 6 ದಿನಗಳದಾಗಿದ್ದು ಕನಿಷ್ಟ 18 ರಿಂದ 40ರ ವಯೋಮಿತಿಯೊಳಗಿರಬೇಕು. ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಇರಬೇಕು. ತರಬೇತಿ ಉಚಿತವಾಗಿದ್ದು ಸ್ವಂತ ಉದ್ಯೋಗ ಸ್ಥಾಪಿಸಲು ಉತ್ಸುಕರಾಗಿರಬೇಕು. ಯೋಜನಾ ವೆಚ್ಚದ ಶೇ.25ರಷ್ಟು ಮೊಬಲಗನ್ನು ಸ್ವಂತ ಬಂಡವಾಳ ಹೂಡಬೇಕು.
ತರಬೇತಿಯಲ್ಲಿ ವ್ಯಕ್ತಿತ್ವ ವಿಕಸನ, ಉದ್ಯಮಗಳ ಆಯ್ಕೆ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಹಾಗೂ ಹಣಕಾಸು ನಿರ್ವಹಣೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಬ್ಯಾಂಕಿನಿಂದ ದೊರೆಯುವ ಹಣಕಾಸು ಸೌಲಭ್ಯಗಳು ಹಾಗೂ ಇತರೆ ಮಾಹಿತಿಗಳ ಕುರಿತು ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಅಕ್ಟೋಬರ್ 9ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08226-222883 ಅಥವಾ ಮೊಬೈಲ್ 9945164259, 9620053122ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕುರಿ, ಮೇಕೆ ಘಟಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 25 - ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ 2017-18ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿ  ಹಾಗೂ ಗಿರಿಜನ ಉಪಯೋಜನೆಯಡಿ ಮತ್ತು ಎಲ್ಲ ವರ್ಗದವರಿಗೆ ಕುರಿ, ಮೇಕೆ ಘಟಕ ಹÉೂಂದಲು ಅರ್ಜಿ ಆಹ್ವಾನಿಸಲಾಗಿದೆ. 
ಶೇ. 90ರಷ್ಟು ಸಹಾಯಧನವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಲಭಿಸಲಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕುರಿ ಮೇಕೆ ಘಟಕಕ್ಕೆ ಎಲ್ಲ ವರ್ಗದವರಿಗೆ ಸಹಾಯಧನ ಲಭ್ಯವಿದೆ. 
ನೋದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಇಲಾಖೆ, ನಿಗಮದಿಂದ 3 ವರ್ಷಗಳಲ್ಲಿ ಸಹಾಯ ಸೌಲಭ್ಯ ಪಡೆಯದೆ ಇರುÀವ ಸದಸ್ಯರು ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಆಹಾರ ಪಡಿತರ ಚೀಟಿ ಹೊಂದಿರಬೇಕು. ಸ್ವಂತ ಜಮೀನು ಹೊಂದಿದ್ದು ಹಸಿರು, ಒಣ ಮೇವನ್ನು ಒದಗಿಸಲು ಅರ್ಹರಿರಬೇಕು. 
ಆಸಕ್ತರು ಅರ್ಜಿಯನ್ನು ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಸೆಪ್ಟೆಂಬರ್ 30ರೊಳಗೆ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರಾದ ಡಾ. ಖಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿಯ ಪತ್ತೆಗೆ ಮನವಿ

ಚಾಮರಾಜನಗರ, ಸೆ. 25 - ಬದನಗುಪ್ಪೆ ಗ್ರಾಮದ ಶಿವಮ್ಮ ಅವರು ಅವರ ಪತಿ ದೊಡ್ಡಮಾಸ್ತೇಗೌಡರು ಜುಲೈ 10ರಂದು ಮಹದೇಶ್ವರ ಬೆಟ್ಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆವಿಗೂ ಬಂದಿರುವುದಿಲ್ಲ. ಇದೇ ರೀತಿ ಬೆಟ್ಟಕ್ಕೆ ಹೋಗಿ ತಡವಾಗಿ ಬರುತ್ತಿದ್ದುದರಿಂದ ಬರುತ್ತಾರೆಂದು ತಿಳಿದು, ನಂತರ ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಪತಿಯನ್ನು ಪತ್ತೆ ಮಾಡಿಕೊಡುವಂತೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ವ್ಯಕ್ತಿಯು 70 ವರ್ಷದವರಾಗಿದ್ದು 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣ ಮೈಕಟ್ಟು, ಬಿಳಿ ಕೂದಲು ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಕನ್ನಡಕ ಹಾಕಿರುತ್ತಾರೆ.
ಇವರ ಕುರಿತು ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 08226-222243, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ 08226-222092 ಅಥವಾ ಜಿಲ್ಲಾ ನಿಸ್ತಂತು ಕೊಠಡಿ 08226-222383ಗೆ ತಿಳಿಸುವಂತೆ ಗ್ರಾಮಾಂತರ ಠಾಣೆ ಪಿಎಸ್‍ಐ ಎಂ.ಕೆ. ಲೋಹಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸ್ವಯಂ ಉದ್ಯೋಗ ಸೃಜನ ಯೋಜನೆಯಡಿ ಆರ್ಥಿಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 25:- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ಮತ್ತು ಸೇವಾ (ಆಯ್ದ ಸೇವಾ ಚಟುವಟಿಕೆಗಳು ಮಾತ್ರ) ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕಿನಿಂದ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದ ರೆವಿನ್ಯೂ ದಾಖಲಾತಿಗಳ ಪ್ರಕಾರ ವರ್ಗೀಕರಿಸುವ ಯಾವುದೇ ಗ್ರಾಮೀಣ ಪ್ರದೇಶ ಮತ್ತು 2001ರ ಜನಗಣತಿಯಲ್ಲಿ 20 ಸಾವಿರ ಜನರಿಗಿಂತ ಕಡಿಮೆ ಇರುವ ಪಟ್ಟಣವೆಂದು ವರ್ಗೀಕರಿಸಿರುವ ಪ್ರದೇಶದಲ್ಲಿನ ಅಭ್ಯರ್ಥಿಗಳು ಅರ್ಹರು. ವಯೋಮಿತಿ ಕನಿಷ್ಟ 21 ರಿಂದ 35 ವರ್ಷ ಇರಬೇಕು.  ಸಾಮಾನ್ಯ ವರ್ಗದವರಿಗೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಯೋಧರು ಹಾಗೂ ಅಂಗವಿಕಲರಿಗೆ ಗರಿಷ್ಟ 45 ವರ್ಷ ವಯೋಮಿತಿಯೊಳಗಿರಬೇಕು.
8ನೇ ತರಗತಿ ಉತ್ತೀರ್ಣರಾಗಿದ್ದು ಆದಾಯ ಮಿತಿ ಇರುವುದಿಲ್ಲ. ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಮಾತ್ರ ಪ್ರತಿ ಘಟಕಕ್ಕೆ ಗರಿಷ್ಟ 10 ಲಕ್ಷ ಯೋಜನಾ ವೆಚ್ಚದ ಕಿರು ಉತ್ಪಾದನಾ ಘಟಕ ಹಾಗೂ ಸೇವಾ ಉದ್ಯಮ ಪ್ರಾರಂಭಿಸಲು ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಸಾಲ ನೀಡಲಾಗುವುದು. ಹಿಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿ ಬ್ಯಾಂಕಿನಿಂದ ಸಾಲ ಮಂಜೂರಾಗದೇ ಇರುವವರು ಹೊಸದಾಗಿ ಅರ್ಜಿ ಸಲ್ಲಿಸಬೇಕು.
ಸಾಮಾನ್ಯ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ.25ರಷ್ಟು (ಗರಿಷ್ಟ 2.50 ಲಕ್ಷ ರೂ.ವರೆಗೆ) ಹಾಗೂ ವಿಶೇಷ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇಕಡ 35ರಷ್ಟು (ಗರಿಷ್ಟ 3.50 ಲಕ್ಷ ರೂ.ವರೆಗೆ) ಸಹಾಯಧನ ನೀಡಲಾಗುವುದು. 
ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿಗಳಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು ಅರ್ಹ ಯುವಜನರು ತಿತಿತಿ.ಛಿmegಠಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಅಕ್ಟೋಬರ್ 2ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಖಾದಿ ಗ್ರಾಮೋದ್ಯೋಗ ಮಂಡಳಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Sunday, 24 September 2017

ಸೆಪ್ಟೆಂಬರ್ 25ರಂದು ಚಂದಕವಾಡಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ (24-09-2017)

     

ಸೆಪ್ಟೆಂಬರ್ 25ರಂದು ಚಂದಕವಾಡಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ


ಚಾಮರಾಜನಗರ, ಸೆ. 24 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಚಂದಕವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಹೊಬಳಿಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತಾಲೂಕಿನ ಚಂದಕವಾಡಿಯಲ್ಲಿ ಸೆಪ್ಟಂಬರ್ 25ರಂದು ಬೆಳಗ್ಗೆ 9.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕೊಳ್ಳೆಗಾಲದ ಜೇತವನದ ಬೌದ್ಧ ಬಿಕ್ಕುಗಳಾದ ಪರಮಪೂಜ್ಯ ಮನೋ ರಖ್ಖಿತ ಬಂತೇಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಮತ್ತು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್. ಅಂಜನೇಯ ಅವರು ಘನ ಉಪಸ್ಥಿತಿ ವಹಿಸುವರು.

 ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಡಾ.ಬಿ.ಆರ್. ಅಂಬೇಡ್ಕರ್ ಭವನದ ಕಟ್ಟಡ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿ,ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಜಿ.ಪಂ. ಸದಸ್ಯರಾದ ಆರ್. ಬಾಲರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ತಾ.ಪಂ. ಸದಸ್ಯರಾದ ಮಹದೇವಶೆಟ್ಟಿ, ಚಂದಕವಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಸಿದ್ದಪ್ಪಾಜಿ, ಉಪಾಧ್ಯಕ್ಷರಾದ ನಾಗನಾಯ್ಕ ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಇದೇ ವೇಳೆ ಗಣ್ಯರು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು


                 

ಸೆಪ್ಟಂಬರ್ 25 ರಂದು ಚಾಮರಾಜನಗರ  ದಸರಾ  ಮಹೋತ್ಸವ ಆರಂಭ 


ಚಾಮರಾಜನಗರ, ಸೆ. 24 ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಾಡಹಬ್ಬ ಚಾಮರಾಜನಗರ ದಸರಾ ಮಹೋತ್ಸವ ಸೆಪ್ಟೆಂಬರ್ 25 ರಿಂದ 28ರ ವರೆಗೆ ನಡೆಯಲಿದೆ.

ನಾಲ್ಕು ದಿನಗಳ ಕಾಲ ದಸರಾ ಮಹೋತ್ಸವ ಕಾರ್ಯಕ್ರಮವು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ  ಏರ್ಪಾಡಾಗಿದೆ.

ಸೆಪ್ಟಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 4 ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ದಸರಾ ಮಹೋತ್ಸವವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ವಿಧ್ಯಕ್ತವಾಗಿ ಉದ್ಘಾಟಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ ಅವರು ಜ್ಯೋತಿ ಬೆಳಗಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ


ಚಾಮರಾಜನಗರ, ಸೆ. 24:- ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ಚಾಮರಾಜೇಶ್ವರ ದೇವಾಲಯ ಮುಂಭಾಗದ ವೇದಿಕೆಯಲ್ಲಿ ಸೆಪ್ಟಂಬರ್ 25 ರಿಂದ 28ರವರೆಗೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ವಿಭಿನ್ನ ಸಾಂಸ್ಕøತಿಕ ಕಾರ್ಯಕ್ರಮಗÀಳು ನಡೆಯಲಿವೆ.

ಸೆಪ್ಟಂಬರ್ 25 ರಂದು ಸಂಜೆ 5 ರಿಂದ 5.30 ರವರೆಗೆ ನಗರದ ಎನ್.ಪ್ರತಿಭಾ, ಅವರಿಂದ ಭಕ್ತಿಗೀತೆ, 5.30 ರಿಂದ 5.50ರ ವರೆಗೆ ಗುಂಡ್ಲುಪೇಟೆ ತಾಲ್ಲೂಕು ಕೊತನೂರು ಗ್ರಾಮದ ಮಾದಶೆಟ್ಟಿ ನೇತೃತ್ವದಲ್ಲಿ ಮಹದೇಶ್ವರ  ಕಲಾ ತಂಡದವರು ಕಂಸಾಳೆ, 5.50 ರಿಂದ 6.30ರವರೆಗೆ ಗುಂಡ್ಲುಪೇಟೆಯ ಎಸ್.ಎಂ. ಡ್ಯಾನ್ಸ್ ಗ್ರೂಪ್ ಮತ್ತು ಮೆಲೋಡಿಸ್ ತಂಡದಿಂದ ಸಂಗೀತ ಮತ್ತು ನೃತ್ಯ, ಸಂಜೆ 6.30 ರಿಂದ 7 ರವರೆಗೆ ನಗರದ ಚೇತನ ಕಲಾವಾಹಿನಿ ತಂಡದಿಂದ ಜಾನಪದಗೀತೆ 7ರಿಂದ 8.30 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ರಾತ್ರಿ 8.30 ರಿಂದ 10.30 ರವರೆಗೆ ಬೆಂಗಳೂರಿನ ಸಂತೋಷ್‍ವೆಂಕಿ ಮತ್ತು ತಂಡದಿಂದ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ಸೆಪ್ಟಂಬರ್ 26ರಂದು ಸಂಜೆ 5ರಿಂದ 5.30ರವರೆಗೆ ಯಳಂದೂರು ತಾಲ್ಲೂಕು ಕೆಸ್ತೂರುಗ್ರಾಮದ ಸ್ವರಸಂಗಮ ಜಾನಪದ ಕಲಾತಂಡದವರು ಎಂ.ಪ್ರಕಾಶ್ ಮತ್ತು ಇತರರ ನೇತೃತ್ವದಲ್ಲಿ ಜಾನಪದ ಗೀತೆ, ಸಂಜೆ 5.30 ರಿಂದ 6ರವರೆಗೆ ತಾಲ್ಲೂಕಿನ ಅಮಚವಾಡಿಯ ಮಹದೇವಯ್ಯ ನೇತೃತ್ವದ ಅಂಕನಾಥೇಶ್ವರ ನಾಟಕ ಕಲಾಸಂಘದವರು ರಂಗಗೀತೆ ಮತ್ತು ದೃಶ್ಯಾವಳಿ, 6 ರಿಂದ 6.30ರವರೆಗೆ ಬಂಡಿಗೆರೆ ಗ್ರಾಮದ ಶ್ರೀ ಮಲೈಮಹದೇಶ್ವರ ಸ್ವಾಮಿ ಹುಲಿವೇಷ ಕಲಾತಂಡದವರು ಗುರುಮಲ್ಲಶೆಟ್ಟಿ ನೇತೃತ್ವದಲ್ಲಿ ಹುಲಿವೇಷ, 6.30 ರಿಂದ 7ರವರೆಗೆ ಕಮರವಾಡಿ ಮಹದೇವಸ್ವಾಮಿ ಮತ್ತು ತಂಡದಿಂದ ಜಾನಪದ ನೃತ್ಯರೂಪಕ, ಸಂಜೆ 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, ರಾತ್ರಿ 8.30 ರಿಂದ 10.30ರವರೆಗೆ ಖ್ಯಾತ ಕಲಾವಿದರಾದ ಬೆಂಗಳೂರಿನ ರಾಜೇಶ್‍ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಸೆಪ್ಟಂಬರ್ 27 ರಂದು ಸಂಜೆ 5ರಿಂದ 5.30ರವರೆಗೆ ಗುಂಡ್ಲುಪೇಟೆಯ ಮೋಹನ ಜಾನಪದ ನೃತ್ಯ ಕಲಾಸಂಘದಿಂದ ಜಾನಪದ ನೃತ್ಯ, ಸಂಜೆ 5.30ರಿಂದ 6ಗಂಟೆಯವರೆಗೆ ಯಳಂದೂರು ತಾಲ್ಲೂಕು ಗಂಗವಾಡಿಯ ಶಿವರುದ್ರಸ್ವಾಮಿ ತಂಡದಿಂದ ವೀರಗಾಸೆ, 6ರಿಂದ 6.15ರವರೆಗೆ ಬಿಳಿಗಿರಿರಂಗನಬೆಟ್ಟದ ಸೋಲಿಗರ ಪುಷ್ಪಮಾಲೆ ಕಲಾಸಂಘದಿಂದ ಗೋರಾಕಾನ ನೃತ್ಯ, 6.15ರಿಂದ 6.30ರವರೆಗೆ ದೊಡ್ಡಮೋಳೆಯ ಸಿದ್ದಪ್ಪಾಜಿ ನೀಲಗಾರರ ಕಲಾಸಂಘದಿಂದ ನೀಲಗಾರರ ಮತ್ತು ತಂಬೂರಿಪದ, 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30 ರಿಂದ 9.30ರವರೆಗೆ ಮೈಸೂರಿನ ದಿಶಾ ರಮೇಶ್ ಮತ್ತು ತಂಡದಿಂದ ರಂಗಗೀತೆಗಳು, 9.30 ರಿಂದ 10.30ರವರೆಗೆ ಡಾ.ಸಂಜಯ್ ಮತ್ತು ತಂಡದಿಂದ ಕರ್ನಾಟಕ ಕ್ಷೇತ್ರ ವೈಭವ ಕಾರ್ಯಕ್ರಮ ನಡೆಯಲಿದೆ.

ಸೆಪ್ಟಂಬರ್ 28 ರಂದು ಸಂಜೆ 5.ರಿಂದ 5.45ರವರೆಗೆ ನಗರದ ಎಂ.ಶಶಿಕುಮಾರ್ ಮತ್ತು ತಂಡದಿಂದ ಜಾನಪದಗಾಯನ, ಸಂಗೀತ ರಸಸಂಜೆ, ಸಂಜೆ 5.45ರಿಂದ 6.15ರವರೆಗೆ ನಗರದ ಚಾಲೆಂಜರ್ಸ್ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ, 6.15ರಿಂದ 7ರವರೆಗೆ ವೆಂಕಟರಮಣಸ್ವಾಮಿ ಮತ್ತು ತಂಡದಿಂದ ರಂಗಗೀತೆ ಮತ್ತು ಜಾನಪದಗೀತೆ, 7 ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30ರಿಂದ 9.30ರವರೆಗೆ ಮೈಸೂರಿನ ಕೃಷ್ಣೆನೃತ್ಯ ಶಾಲೆಯ ವಿಧೂಷಿ ಡಿಂಪಲ್ ಮತ್ತು ತಂಡದಿಂದ ಚಾಮುಂಡೇಶ್ವರಿ ದೇವಿಂiÀi ನೃತ್ಯ ವೈಭವ, 9.30ರಿಂದ 10.30ರವರೆಗೆ ಮೈಸೂರಿನ ಅಮ್ಮ ವಸುಂಧರಾ ಕಲಾತಂಡದಿಂದ ಜಾನಪದ ಮತ್ತು ಭಾವಗೀತೆ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಸೆ.25ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ  


ಚಾಮರಾಜನಗರ, ಸೆ. 24 -  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ಸೆಪ್ಟೆಂಬರ್ 25ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಬೆಳಿಗ್ಗೆ ಮಧ್ಯಾಹ್ನ 3.30ಗಂಟೆಗೆ ಸಚಿವರು ನಗರಕ್ಕೆ ಆಗಮಿಸುವರು. ಸಂಜೆ 4.30ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯಲಿರುವ ಚಾಮರಾಜನಗರ ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೋಳ್ಳುವರು. ರಾತ್ರಿ 7ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎಂ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 23 September 2017

ಸೆಪ್ಟಂಬರ್ 25 ರಂದು ನಗರದಲ್ಲಿ ಚಾಮರಾಜನಗರ ವೈಭವ ದಸರಾ ಮಹೋತ್ಸವಕ್ಕೆ ಚಾಲನೆ ( 23-09-2017)..........

     

ಸೆಪ್ಟಂಬರ್ 25 ರಂದು ನಗರದಲ್ಲಿ ಚಾಮರಾಜನಗರ ವೈಭವ ದಸರಾ ಮಹೋತ್ಸವಕ್ಕೆ ಚಾಲನೆ ..........                           VSS



ಚಾಮರಾಜನಗರ, ಸೆ. 23 -  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರದಲ್ಲೂ ಸೆಪ್ಟಂಬರ್ 25 ರಿಂದ 28ರವರೆಗೆ ದಸರಾ ಮಹೋತ್ಸವ ಕಾರ್ಯಕ್ರಮವು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ  ನಾಡಹಬ್ಬ ದಸರಾ ಕಾರ್ಯಕ್ರಮದ ವಿವರಗಳನ್ನು ನೀಡಿದ ಜಿಲ್ಲಾಧಿಕಾರಿ ಬಿ.ರಾಮು ಅವರು ಒಟ್ಟು ನಾಲ್ಕು ದಿನಗಳ ಕಾಲ ದಸರಾ ಆಚರಣೆಗೆ ಸಕಲ ಸಿದ್ಧತೆಯಾಗಿದೆ. ಸೆಪ್ಟಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯದೊಂದಿಗೆ ದಸರಾ ಮಹೋತ್ಸವ ಆರಂಭವಾಗಲಿದೆ. ಸಂಜೆ 4 ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ದಸರಾ ವೈಭವಕ್ಕೆ ವಿಧ್ಯಕ್ತವಾಗಿ ಚಾಲನೆ ದೊರೆಯಲಿದೆ ಎಂದರು.

ಬೆಳಿಗ್ಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಇತರೆ ಗಣ್ಯರ ಸಮ್ಮುಖದಲ್ಲಿ ಪೂಜೆ ಕಾರ್ಯ ನಡೆಯಲಿದೆ. ಸಂಜೆ ಅದ್ಧೂರಿ ವೇದಿಕೆಯಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ನಾಲ್ಕು ದಿನಗಳ ದಸರಾ ಮಹೋತ್ಸವ ಉದ್ಘಾಟಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ ಅವರು ಜ್ಯೋತಿ ಬೆಳಗಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.

ದಸರಾ ಮಹೋತ್ಸವದ ಅಂಗವಾಗಿ ಸೆಪ್ಟಂಬರ್ 25 ರಿಂದ 28 ರವರೆಗೆ ಪ್ರತಿ ದಿನ ಸಂಜೆ 5 ರಿಂದ ರಾತ್ರಿ 10.30 ಗಂಟೆಯವರೆಗೆ  ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ವೈವಿದ್ಯಮಯ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಸ್ಥಳೀಯ ಕಲಾವಿದರು ಮೊದಲಿಗೆ ಕಾರ್ಯಕ್ರಮ ಪ್ರಸ್ತುತ ಪಡಿಸಲು ಅವಕಾಶ ನೀಡಲಾಗಿದೆ. ಸಂಜೆ 5 ರಿಂದ 7 ಗಂಟೆವರೆಗೆ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಪ್ರತಿದಿನ 7 ರಿಂದ 8.30 ವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಡೆದಿರುವ ಯುವ ಸಂಭ್ರಮ ಮಾದರಿಯಲ್ಲಿ ಕಾಲೇಜು ಸಂಜೆ ಎಂಬ ಕಾರ್ಯಕ್ರಮ ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳು ವಿಭಿನ್ನ ಸಾಂಸ್ಕøತಿಕ ಪ್ರದರ್ಶನದ ಮೂಲಕ ಗಮನ ಸೆಳೆಯಲಿದ್ದಾರೆ. ತದನಂತರ ಬೆಂಗಳೂರು ಮೈಸೂರಿನ ಖ್ಯಾತ ರಾಜ್ಯಮಟ್ಟದ ಕಲಾವಿದರಿಂದ ಚಲನಚಿತ್ರ ಗೀತೆಗಳು, ಸಂಗೀತ ರಸಸಂಜೆ, ನೃತ್ಯರೂಪಕ, ಜಾನಪದ ಮತ್ತು ಭಾವಗೀತೆ, ಕಾರ್ಯಕ್ರಮಗಳು  ಮೂಡಿಬರಲಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಇದೇ ಪ್ರಥಮ ಬಾರಿಗೆ ದಸರಾ ಮಹೋತ್ಸವ ನಡೆಯುವ ವೇದಿಕೆ ಬಳಿ ಸಣ್ಣ ಪ್ರಮಾಣದಲ್ಲಿ ಆಹಾರ ಮೇಳದ ಮಾದರಿಯಲ್ಲಿ ಆಹಾರ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮ ನೋಡಲು ಬರುವ ಜನರ ಜಿಹ್ವಾಚಾಪಲ್ಯ ತಣಿಸಲು ಸ್ಥಳೀಯ ಹೋಟೆಲ್, ಚಾಟ್ಸ್ ವ್ಯಾಪಾರಿಗಳು, ವೈವಿದ್ಯಮಯ್ಯ ಆಹಾರ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಲಿದ್ದಾರೆ. ಇದಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಂದು ಜಿಲ್ಲಾಧಿಕಾರಿ ರಾಮು ವಿವರಿಸಿದರು.

ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಮಾತನಾಡಿ ನಾಲ್ಕು ದಿನಗಳ ಕಾಲ ನಡೆಯುವ ದಸರಾ ಮಹೋತ್ಸವವು ಸುಗಮವಾಗಿ ಸಾಗಲು ಅವಶ್ಯವಿರುವ ಪೊಲೀಸ್ ಬಂದೊಬಸ್ತ್ ಮಾಡಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.




ಚಾಮರಾಜನಗರ ದಸರಾ : ಸಾಂಸ್ಕøತಿಕ ಕಾರ್ಯಕ್ರಮಗಳ ರಸದೌತಣ


ಚಾಮರಾಜನಗರ, ಸೆ. 23. - ಚಾಮರಾಜನಗರ ದಸರಾ ಮಹೋತ್ಸವ ಪ್ರಯುಕ್ತ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಸೆಪ್ಟಂಬರ್ 25 ರಿಂದ 28ರವರೆಗೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ವಿಭಿನ್ನ ಸಾಂಸ್ಕøತಿಕ ಕಾರ್ಯಕ್ರಮಗಳ ರಸದೌತಣವೆ ಇರಲಿದೆ.

ಸೆಪ್ಟಂಬರ್ 25 ರಂದು ಸಂಜೆ 5 ರಿಂದ 5.30 ರವರೆಗೆ ನಗರದ ಎನ್.ಪ್ರತಿಭಾ, ಅವರಿಂದ ಭಕ್ತಿಗೀತೆ, 5.30 ರಿಂದ 5.50ರ ವರೆಗೆ ಗುಂಡ್ಲುಪೇಟೆ ತಾಲ್ಲೂಕು ಕೊತನೂರು ಗ್ರಾಮದ ಮಾದಶೆಟ್ಟಿ ನೇತೃತ್ವದಲ್ಲಿ ಮಹದೇಶ್ವರ  ಕಲಾ ತಂಡದವರು ಕಂಸಾಳೆ, 5.50 ರಿಂದ 6.30ರವರೆಗೆ ಗುಂಡ್ಲುಪೇಟೆಯ ಎಸ್.ಎಂ. ಡ್ಯಾನ್ಸ್ ಗ್ರೂಪ್ ಮತ್ತು ಮೆಲೋಡಿಸ್ ತಂಡದಿಂದ ಸಂಗೀತ ಮತ್ತು ನೃತ್ಯ, ಸಂಜೆ 6.30 ರಿಂದ 7 ರವರೆಗೆ ನಗರದ ಚೇತನ ಕಲಾವಾಹಿನಿ ತಂಡದಿಂದ ಜಾನಪದಗೀತೆ 7ರಿಂದ 8.30 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ರಾತ್ರಿ 8.30 ರಿಂದ 10.30 ರವರೆಗೆ ಬೆಂಗಳೂರಿನ ಸಂತೋಷ್‍ವೆಂಕಿ ಮತ್ತು ತಂಡದಿಂದ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ಸೆಪ್ಟಂಬರ್ 26ರಂದು ಸಂಜೆ 5ರಿಂದ 5.30ರವರೆಗೆ ಯಳಂದೂರು ತಾಲ್ಲೂಕು ಕೆಸ್ತೂರುಗ್ರಾಮದ ಸ್ವರಸಂಗಮ ಜಾನಪದ ಕಲಾತಂಡದವರು ಎಂ.ಪ್ರಕಾಶ್ ಮತ್ತು ಇತರರ ನೇತೃತ್ವದಲ್ಲಿ ಜಾನಪದ ಗೀತೆ, ಸಂಜೆ 5.30 ರಿಂದ 6ರವರೆಗೆ ತಾಲ್ಲೂಕಿನ ಅಮಚವಾಡಿಯ ಮಹದೇವಯ್ಯ ನೇತೃತ್ವದ ಅಂಕನಾಥೇಶ್ವರ ನಾಟಕ ಕಲಾಸಂಘದವರು ರಂಗಗೀತೆ ಮತ್ತು ದೃಶ್ಯಾವಳಿ, 6 ರಿಂದ 6.30ರವರೆಗೆ ಬಂಡಿಗೆರೆ ಗ್ರಾಮದ ಶ್ರೀ ಮಲೈಮಹದೇಶ್ವರ ಸ್ವಾಮಿ ಹುಲಿವೇಷ ಕಲಾತಂಡದವರು ಗುರುಮಲ್ಲಶೆಟ್ಟಿ ನೇತೃತ್ವದಲ್ಲಿ ಹುಲಿವೇಷ, 6.30 ರಿಂದ 7ರವರೆಗೆ ಕಮರವಾಡಿ ಮಹದೇವಸ್ವಾಮಿ ಮತ್ತು ತಂಡದಿಂದ ಜಾನಪದ ನೃತ್ಯರೂಪಕ, ಸಂಜೆ 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, ರಾತ್ರಿ 8.30 ರಿಂದ 10.30ರವರೆಗೆ ಖ್ಯಾತ ಕಲಾವಿದರಾದ ಬೆಂಗಳೂರಿನ ರಾಜೇಶ್‍ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಸೆಪ್ಟಂಬರ್ 27 ರಂದು ಸಂಜೆ 5ರಿಂದ 5.30ರವರೆಗೆ ಗುಂಡ್ಲುಪೇಟೆಯ ಮೋಹನ ಜಾನಪದ ನೃತ್ಯ ಕಲಾಸಂಘದಿಂದ ಜಾನಪದ ನೃತ್ಯ, ಸಂಜೆ 5.30ರಿಂದ 6ಗಂಟೆಯವರೆಗೆ ಯಳಂದೂರು ತಾಲ್ಲೂಕು ಗಂಗವಾಡಿಯ ಶಿವರುದ್ರಸ್ವಾಮಿ ತಂಡದಿಂದ ವೀರಗಾಸೆ, 6ರಿಂದ 6.15ರವರೆಗೆ ಬಿಳಿಗಿರಿರಂಗನಬೆಟ್ಟದ ಸೋಲಿಗರ ಪುಷ್ಪಮಾಲೆ ಕಲಾಸಂಘದಿಂದ ಗೋರಾಕಾನ ನೃತ್ಯ, 6.15ರಿಂದ 6.30ರವರೆಗೆ ದೊಡ್ಡಮೋಳೆಯ ಸಿದ್ದಪ್ಪಾಜಿ ನೀಲಗಾರರ ಕಲಾಸಂಘದಿಂದ ನೀಲಗಾರರ ಮತ್ತು ತಂಬೂರಿಪದ, 7ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30 ರಿಂದ 9.30ರವರೆಗೆ ಮೈಸೂರಿನ ದಿಶಾ ರಮೇಶ್ ಮತ್ತು ತಂಡದಿಂದ ರಂಗಗೀತೆಗಳು, 9.30 ರಿಂದ 10.30ರವರೆಗೆ ಡಾ.ಸಂಜಯ್ ಮತ್ತು ತಂಡದಿಂದ ಕರ್ನಾಟಕ ಕ್ಷೇತ್ರ ವೈಭವ ಕಾರ್ಯಕ್ರಮ ನಡೆಯಲಿದೆ.

ಸೆಪ್ಟಂಬರ್ 28 ರಂದು ಸಂಜೆ 5.ರಿಂದ 5.45ರವರೆಗೆ ನಗರದ ಎಂ.ಶಶಿಕುಮಾರ್ ಮತ್ತು ತಂಡದಿಂದ ಜಾನಪದಗಾಯನ, ಸಂಗೀತ ರಸಸಂಜೆ, ಸಂಜೆ 5.45ರಿಂದ 6.15ರವರೆಗೆ ನಗರದ ಚಾಲೆಂಜರ್ಸ್ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ, 6.15ರಿಂದ 7ರವರೆಗೆ ವೆಂಕಟರಮಣಸ್ವಾಮಿ ಮತ್ತು ತಂಡದಿಂದ ರಂಗಗೀತೆ ಮತ್ತು ಜಾನಪದಗೀತೆ, 7 ರಿಂದ 8.30ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ, 8.30ರಿಂದ 9.30ರವರೆಗೆ ಮೈಸೂರಿನ ಕೃಷ್ಣೆನೃತ್ಯ ಶಾಲೆಯ ವಿಧೂಷಿ ಡಿಂಪಲ್ ಮತ್ತು ತಂಡದಿಂದ ಚಾಮುಂಡೇಶ್ವರಿ ದೇವಿಂiÀi ನೃತ್ಯ ವೈಭವ, 9.30ರಿಂದ 10.30ರವರೆಗೆ ಮೈಸೂರಿನ ಅಮ್ಮ ವಸುಂಧರಾ ಕಲಾತಂಡದಿಂದ ಜಾನಪದ ಮತ್ತು ಭಾವಗೀತೆ ಕಾರ್ಯಕ್ರಮ ನಡೆಯಲಿವೆ.

     

ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ  

ಚಾಮರಾಜನಗರ, ಸೆ. 23 -  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ಸೆಪ್ಟೆಂಬರ್ 25ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ ಮಧ್ಯಾಹ್ನ 3.30ಗಂಟೆಗೆ ನಗರಕ್ಕೆ ಆಗಮಿಸುವರು. ಸಂಜೆ 4.30ಗಂಟೆಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆಯಲಿರುವ ಚಾಮರಾಜನಗರ ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೋಳ್ಳುವರು. ರಾತ್ರಿ 7ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎಂ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.24ರಂದು ವಿದ್ಯುತ್ ವ್ಯತ್ಯಯ 

ಚಾಮರಾಜನಗರ, ಸೆ.:-  ತಾಲ್ಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಸೂಚಿತ ಅವಧಿಯಲ್ಲಿ ಪಣ್ಯದಹುಂಡಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.26ರಂದು ಸಂತೆಮರಹಳ್ಳಿಯಲ್ಲಿ ವಿದ್ಯುತ್ ಕುರಿತು ಜನಸಂಪರ್ಕ ಸಭೆ 

ಚಾಮರಾಜನಗರ, ಸೆ. 23-  ತಾಲ್ಲೂಕಿನ ಸಂತೆಮರಹಳ್ಳಿಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿಯ ಉಪವಿಭಾಗದಲ್ಲಿ ಸೆಪ್ಪೆಂಬರ್ 26ರಂದು ಮಧ್ಯಾಹ್ನ 3.30 ರಿಂದ ಸಂಜೆ 5.30ರವರೆಗೆ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು  ಹಾಜರಾಗಿ ಕುಂದು ಕೊರತೆಗಳನ್ನು ಸಭೆಗೆ ತಿಳಿಸಬಹುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಲು ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿ ಸಲಹೆ
ಚಾಮರಾಜನಗರ, ಸೆ. 23 -  ಪೌರಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಅವರು ಸಹ ಉನ್ನತ ಹುದ್ದೆಗಳಿಗೆ ಏರುವಂತಾಗಲು ಪ್ರೋತ್ಸಾಹಿಸಬೇಕು ಎಂದು  ಜಿಲ್ಲಾಧಿಕಾರಿ ಬಿ.ರಾಮು ಸಲಹೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಂದು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ, ಮ್ಯಾನ್ಯೂಯಲ್ ಸ್ಕಾವೆಂಜರ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ಲಭಿಸುವ ಸೌಲಭ್ಯಗಳ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮತನಾಡಿದರು.
ಸಮಾಜದಲ್ಲಿ ನೈರ್ಮಲ್ಯದಂತಹ ವೃತ್ತಿಯನ್ನು ನಿರ್ವಹಿಸುವ ಪೌರಕಾರ್ಮಿಕರು ವೈಯಕ್ತಿಕ ಬದುಕಿನ ಏಳಿಗೆಗೂ ಗಮನ ನೀಡಬೇಕು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಉನ್ನತ ಅಧ್ಯಯನ ವ್ಯಾಸಂಗಕ್ಕೆ ಅವಕಾಶ ನೀಡಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಊರಿನ ಸ್ವಚ್ಚತೆಗೆ ತೊಡಗಿಕೊಳ್ಳುವ ಪೌರ ಕಾರ್ಮಿಕರು ಆರೋಗ್ಯದ ಕಡೆ ಕಾಳಜಿವಹಿಸಬೇಕು. ಯಾವುದೇ ಕಾರಣಕ್ಕೂ ಮ್ಯಾನ್ ಹೋಲ್‍ಗಳಿಗೆ ಇಳಿದು ಕೆಲಸ ಮಾಡಬೇಡಿ. ಎಷ್ಟೆ ಒತ್ತಡ ಬಂದರೂ ಮ್ಯಾನ್ ಹೋಲ್‍ಗಳಿಗೆ ಇಳಿದು ಸ್ವಚ್ಚ ಕೆಲಸಮಾಡಬೇಡಿ. ಮ್ಯಾನ್‍ಹೋಲ್ ಕೆಲಸಗಳಿಗಾಗಿಯೇ ಅತ್ಯಾಧುನಿಕ ಯಂತ್ರಗಳು ಇವೆ. ಕಾಯ್ದೆ ಪ್ರಕಾರ ಮ್ಯಾನ್ಯೂಯಲ್ ಸ್ಕಾವೆಂಜರ್ ಕೆಲಸ ಮಾಡುವಂತಿಲ್ಲ. ಕೆಲಸ ಮಾಡಲು ಒತ್ತಾಯಿಸುವವರ ವಿರುದ್ದ ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಕಾಯ್ದೆ ಬಗ್ಗೆ ತಿಳಿಸಿಕೊಡುವ ಸಲುವಾಗಿಯೇ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಕಾಯಂ ನೌಕರರಿಗೆ ಮನೆ, ನಿವೇಶನ ನೀಡಲು ಅವಕಾಶವಿತ್ತು. ಆದರೆ ತಾವು ಗುತ್ತಿಗೆ ಅವಧಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೂ ನಿವೇಶನ ನೀಡಲು ಮುಂದಾಗಿದ್ದೇವೆ. ಪ್ರತಿ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ 6ಲಕ್ಷ ರೂ ನೀಡಲಾಗುತ್ತದೆ. ಈ ಅವಕಾಶವನ್ನು ಕಾರ್ಮಿಕರು ಪಡೆಯಲು ಎಲ್ಲ ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ  ಚಾಮರಾಜನಗರ ನಗರಸಭೆಯ ಆಯುಕ್ತರಾದ ರಾಜಣ್ಣ ಅವರು ಮ್ಯಾನ್ಯೂಯಲ್ ಸ್ಕಾವೆಂಜರ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮವು 2013ರಲ್ಲಿ ಜಾರಿಗೆ ಬಂದಿದೆ. ಕಾರ್ಮಿಕರ ಹಿತ ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇಂತಹ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದರು.
ಪೌರಕಾರ್ಮಿಕರು ನೈರ್ಮಲ್ಯ ಕೆಲಸ ಮಾಡುವಾಗ ಸುರಕ್ಷತಾ ಧಿರಿಸುಗಳನ್ನು ಧರಿಸಬೇಕು. ಬರಿಗೈಯಲ್ಲಿ ಸ್ವಚ್ಚತೆ ಕೆಲಸ ಮಾಡಬಾರದು. ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ರೋಗನಿರೋಧಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಯನ್ನು ಸ್ವಚ್ಚತೆ ಕೆಲಸ ನಿರ್ವಹಿಸುವ ಕಾರ್ಮಿಕರು ಮಾತ್ರ ಪಡೆಯುತ್ತಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಲಸಿಕೆಯನ್ನು ಪಡೆಯಲು ಮುಂದಾಗಬೇಕು. ವೈಯಕ್ತಿಕ ಆರೋಗ್ಯದ ಮೇಲೂ ನಿಗಾವಹಿಸಬೇಕು ಎಂದು ರಾಜಣ್ಣ ತಿಳಿಸಿದರು.
ಇದೇ ವೇಳೆ ಕರ್ತವ್ಯ ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕಾಗಿ ಆಯ್ಕೆಯಾಗಿರುವ ಕಾರ್ಮಿಕರಿಗೆ ಪ್ರಯಾಣದ ಟಿಕೇಟ್‍ಗಳನ್ನು ಗಣ್ಯರು ವಿತರಿಸಿದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ವಕೀಲರಾದ ಸುಬ್ರಮಣ್ಯಂ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಂದೋಲನಾದ ಸಹಸಂಯೋಜಕಿ ಪುಷ್ಪಲತಾ, ಪ್ರಗತಿಪರ ಚಿಂತಕರಾದ ಅರಕಲವಾಡಿ ನಾಗೇಂದ್ರ ಅವರು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಚಾಮರಾಜನಗರ ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ನಿಂಗರಾಜು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ್‍ಮೀನಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಹೆಚ್.ಸತೀಶ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ.ಎಂ.ರವಿಕುಮಾರ್, ಕೊಳ್ಳೇಗಾಲ ನಗರಸಭೆ ಆಯುಕ್ತರಾದ ಲಿಂಗರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



















Friday, 22 September 2017

ಫೇಸ್‌ಬುಕ್ ಖಾತೆ, ಆಧಾರ್ ಜೊತೆ ಜೋಡಣೆ ಕಡ್ಡಾಯ

ಬೆಂಗಳೂರು: ನಕಲಿ ಖಾತೆಗಳಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಫೇಸ್‌ಬುಕ್ ಅನ್ನು ಆಧಾರ್ ಜೊತೆ ಜೋಡಿಸುವುದನ್ನು ಕಡ್ಡಾಯಗೊಳಿಸಿದೆ.
ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯನ್ನು ಆಧಾರ್ ಜೊತೆ ಜೋಡಣೆ ಮಾಡಲು ಡಿ.31 ಕೊನೆಯ ದಿನವಾಗಿದೆ. ಒಂದು ವೇಳೆ ಡಿ.31ರ ಒಳಗಾಗಿ ಫೇಸ್‌ಬುಕ್ ಅನ್ನು ಆಧಾರ್ ಜೊತೆ ಲಿಂಕ್ ಮಾಡದೇ ಹೋದರೆ ಖಾತೆ ಡಿಲೀಟ್ ಆಗಲಿದೆ. ಹೊಸ ಖಾತೆ ತೆರೆಯಲೂ ಆಧಾರ್ ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2018ರ ಜ.1ರಿಂದ ಫೇಸ್‌ಬುಕ್‌ನಲ್ಲಿ ಆಧಾರ್ ಜೊತೆ ಲಿಂಕ್ ಆಗಿರುವವರ ಖಾತೆಗೆ ಹಸಿರು ಗುರುತಿನ ರೈಟ್ ಮಾರ್ಕ್ ಹಾಕಲಾಗುತ್ತದೆ. ಇದು ಅಧಿಕೃತ ಅಕೌಂಟ್ ಆಗಿರಲಿದೆ. ಅಲ್ಲದೇ, 10 ಗಂಟೆಗೂ ಹೆಚ್ಚು ಹೊತ್ತು ಫೇಸ್‌ಬುಕ್ ಮುಂದೆ ಕುಳಿತುಕೊಳ್ಳುವವರು ಮತ್ತು ದಿನವಿಡೀ ಚಾಟ್ ಮಾಡುವವರನ್ನು ಗುರುತಿಸಿ ವಾರ್ನಿಂಗ್ ನೀಡಲಾಗುತ್ತದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 
 [ಸುಳ್ ಸುದ್ದಿ ವಾರ್ತೆ]

ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರವು ಅಗತ್ಯ : ಲೋಕಾಯುಕ್ತ ನ್ಯಾಯಮೂರ್ತಿಯವರ ಅಭಿಮತ 22-09-2017

       

ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರವು ಅಗತ್ಯ : ಲೋಕಾಯುಕ್ತ ನ್ಯಾಯಮೂರ್ತಿಯವರ ಅಭಿಮತ




ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿಯವರು ಭ್ರಷ್ಟಾಚಾರ ಕಡಿವಾಣಕ್ಕೆ ನಾಗರಿಕರು ಸಹ ತೀವ್ರ ಗತಿಯಲ್ಲಿ ಪೂರಕವಾಗಿ ಸಹಕರಿಸಬೇಕಿದೆ. ವಿಶೇಷವಾಗಿ ಯುವಜನಾಂಗ ಕೂಡ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಬೇಕಿದೆ ಎಂದರು.


ರಾಜ್ಯ ಕೇಂದ್ರ ಸರ್ಕಾರ ಹಲವಾರು ಯೋಜನೆಗಳು ಕಾರ್ಯಕ್ರಮಗಳನ್ನು ಜನರ ಸೌಕರ್ಯಕ್ಕಾಗಿ ಅನುಷ್ಟಾನ ಮಾಡುತ್ತಿದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಸೌಲಭ್ಯಗಳು ಜನಸಾಮಾನ್ಯರಿಗೆ ಸರಿಯಾಗಿ ಲಭಿಸುತ್ತಿದ್ದೇಯೆ ಎಂಬ ಬಗ್ಗೆ ತೀವ್ರವಾಗಿ ನೋಡಬೇಕಿದೆ. ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಅಧಿಕಾರಿಗಳು ಲೋಪ ಎಸಗುತ್ತಿದ್ದಾರೆಯೆ ಎಂಬ ಬಗ್ಗೆ ಪರಿಶೀಲಿಸಬೇಕಿದೆ ಎಂದರು.
ತಾವು ಇದುವರೆಗೆ ರಾಜ್ಯದ 20 ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು ಆಯಾ ಭಾಗದ ಅಧಿಕಾರಿಗಳ ಸಭೆ ನಡೆಸಿ ಜನರಿಗೆ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಿದ್ದಾರೇ? ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೇಯೆ ? ಎಂಬ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ಪ್ರಥಮ ಹಂತದಲ್ಲಿ ಅಧಿಕಾರಿಗಳಿಂದ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಬಳಿಕ ಜಿಲ್ಲೆಗಳಿಗೆ ತೆರಳಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಲೋಕಾಯುಕ್ತರು ತಿಳಿಸಿದರು.


ಜನರಿಗೆ ಉತ್ತಮವಾಗಿ ಸ್ಪಂದಿಸಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಯಾವುದೇ ತೊಂದರೆ ನೀಡದೆ ಉತ್ತೇಜನ ನೀಡಬೇಕಾಗುತ್ತದೆ. ದುರಾಡಳಿತ ಭ್ರಷ್ಟಾಚಾರ ಎಸಗುವ ಅಧಿಕಾರಿ ಸಿಬ್ಬಂಧಿ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುತ್ತದೆ ಎಂದು  ಎಚ್ಚರಿಕೆ ನೀಡಲಾಗಿದೆ ಎಂದರು.ಪ್ರತಿ ಜಿಲ್ಲೆಯಲ್ಲಿಯು ಸಭೆ ನಡೆಸಿ  ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರಿ ಕೆಲಸ ಯೋಜನೆ ನಿರ್ವಹಣೆಯಲ್ಲಿ ಯಾವುದೇ ವಿಳಂಬ, ಲೋಪಕ್ಕೆ ಅವಕಾಶವಾಗಬಾರದು, ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕರ ಕೆಲಸ ಕಾರ್ಯ ಪ್ರಕ್ರಿಯೆಗಳಿಗೆ ತೊಡಕು ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಯವರು ವಿವರಿಸಿದರು.


ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಡಾ.ಎಸ್.ಪರಶಿವಮೂರ್ತಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಸುದ್ದಗೋಷ್ಠಿಯಲ್ಲಿ ಹಾಜರಿದ್ದರು.



ಸೆಪ್ಟೆಂಬರ್ 23ರಂದು ನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ, ಸಫಾಯಿ ಕರ್ಮಚಾರಿ ಪುನರ್ವಸತಿ ಅಧಿನಿಯಮ ಕಾನೂನು, ಸೌಲಭ್ಯ ಕುರಿತು ಕಾರ್ಯಾಗಾರ


ಚಾಮರಾಜನಗರ, ಸೆ. 22. :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪೌರಕಾರ್ಮಿಕರ ದಿನಾಚರಣೆ ಹಾಗೂ ಸಫಾಯಿ ಕರ್ಮಚಾರಿಗಳ, ಮ್ಯಾನ್ಯೂಯಲ್ ಸ್ಕಾವೆಂಜರುಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮದಡಿ ಸರ್ಕಾರದ ಕಾನೂನುಗಳು ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಕುರಿತು ಅರಿವು ಕಾರ್ಯಾಗಾರವನ್ನು ಸೆಪ್ಟಂಬರ್ 23 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಘನ ಉಪಸ್ಥಿತಿ ವಹಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.


ಸೆಪ್ಟೆಂಬರ್ 23ರಂದು ವಿಧಾನ ಪರಿಷತ್ ಸಭಾಪತಿಯವರ ಜಿಲ್ಲಾ ಪ್ರವಾಸ


ಚಾಮರಾಜನಗರ, ಸೆ. 22. :- ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾದ ಡಿ.ಹೆಚ್.ಶಂಕರಮೂರ್ತಿ ಅವರು ಸೆಪ್ಟಂಬರ್ 23 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಬೆಳಿಗ್ಗೆ 9.30 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸುವರು. ಬಳಿಕ ಅಲ್ಲಿನ ಆರ್ಯವೈಶ್ಯ ಸಂಘದ ಶ್ರೀವಾಸವಿ ವಿದ್ಯಾಕೇಂದ್ರದವರು ನೂತನವಾಗಿ ನಿರ್ಮಾಣ ಮಾಡಿರುವ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
     

ವಿಕಲಚೇತನರಿತೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕ್ರಮ: ಆರ್.ಧ್ರುವನಾರಾಯಣ



ಚಾಮರಾಜನಗರ, ಸೆ. 22 -  ವಿಕಲಚೇತನರಿಗೆ ಅವಶ್ಯವಿರುವ ಪರಿಕರಗಳಿಗೆ ತಮ್ಮ ಸಂಸದ ಪ್ರದೇಶ ಅಭಿವೃದ್ದಿ ಅನುದಾನದಲ್ಲಿ ಹೆಚ್ಚಿನ ನೆರವು ನೀಡಲು ಮುಂದಾಗುವುದಾಗಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದ ಬಳಿ ಇಂದು ತಮ್ಮ ಸಂಸದ ಪ್ರದೇಶ ಅಭಿವೃದ್ದಿ ಅನುದಾನದಡಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರತಿವರ್ಷವು ಸಂಸದರ ನಿಧಿಯಿಂದ ತಾವು ಪ್ರತಿನಿಧಿಸುವ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರು ಜಿಲ್ಲೆಯ ಭಾಗಗಳು ಹಾಗೂ ಚಾಮರಾಜನಗರ ಜಿಲ್ಲೆಯ ಪ್ರದೇಶದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಖರೀದಿಸಿ ನೀಡುತ್ತಿರುವೆ. ಮುಂಬರುವ ವರ್ಷಗಳಲ್ಲಿ ಇನ್ನು ಹೆಚ್ಚಿನ ನೆರವು ನೀಡುವುದಾಗಿ ಧ್ರುವನಾರಾಯಣ ತಿಳಿಸಿದರು.
ವಿಕಲಚೇತನರ ಸೌಲಭ್ಯಗಳನ್ನು ಹೆಚ್ಚಿಸಬೇಕೆಂಬ ಬೇಡಿಕೆ ಬಂದಿದೆ. ಇದನ್ನು ಮನಗಂಡು ತಮ್ಮ ಸಂಸದ ಅನುದಾನದಲ್ಲಿ ಸಾಧ್ಯವಾಗಬಹುದಾದ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಅವರು ತಿಳಿಸಿದರು.
ವಿತರಿಸಲಾಗುತ್ತಿರುವ ತ್ರಿಚಕ್ರ ವಾಹನಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಬೇಕು. ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಧ್ರುವನಾರಾಯಣ ನುಡಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಪಿ.ಎಂ.ಸಿ ಅಧ್ಯಕ್ಷರಾದ ಬಿ.ಕೆ.ರವಿಕುಮಾರ್, ಮದ್ಯಪಾನ ಸಂಯಮ ಮಂಡಳಿಯ ಸದಸ್ಯರಾದ ಕಾಗಲವಾಡಿ ಚಂದ್ರು, ವಿಕಲಚೇತನರ ಕಲ್ಯಾಣಾಧಿಕಾರಿ ಪೃಥ್ವಿದಾಸ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.















Thursday, 21 September 2017

ಗುಣಮಟ್ಟದಿಂದ ಚಾಮರಾಜೇಶ್ವರ ರಥ ನಿರ್ಮಾಣ : ಶಾಸಕರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ (21-09-2017)

     

ಗುಣಮಟ್ಟದಿಂದ ಚಾಮರಾಜೇಶ್ವರ ರಥ ನಿರ್ಮಾಣ : ಶಾಸಕರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ


ಚಾಮರಾಜನಗರ, ಸೆ. 21 - ಚಾಮರಾಜನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ರಥ ನಿರ್ಮಾಣ ಕಾರ್ಯವನ್ನು ಗುಣಮಟ್ಟದಿಂದ ನಿರ್ವಹಿಸುವಂತೆ  ಸಂಬಂಧಪಟ್ಟ ನಿರ್ಮಾಣಕಾರರಿಗೆ ಸೂಚನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಥನಿರ್ಮಾಣ ಸಂಬಂಧ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರ ಸಮ್ಮುಖದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಜಿಲ್ಲಾಧಿಕಾರಿಯವರು ಮಾತನಾಡಿದರು.

ರಥ ನಿರ್ಮಾಣ ಹಾಗೂ ಇದರ ಪೂರಕ ಕೆಲಸಗಳಿಗೆ ಒಟ್ಟು 1.20 ಕೋಟಿ ರೂ ರಥ ಅನುದಾನ ನಿಗಧಿಯಾಗಿದೆ. 1 ಕೋಟಿ ರೂ ವೆಚ್ಚದಲ್ಲಿ ರಥ ನಿರ್ಮಾಣ ಮಾಡಬೇಕಿದ್ದು ಉಳಿದ 20 ಲಕ್ಷ ರೂ ಅನುದಾನದಲ್ಲಿ ತೇರಿನ ಮನೆಯನ್ನು ನಿರ್ಮಿಸಬೇಕಿದೆ ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ರಥ ನಿರ್ಮಿಸುವ ಸಂಬಂಧ ವಿವರವಾಗಿ ಚರ್ಚಿಸಲಾಯಿತು.

ರಥ ನಿರ್ಮಾಣ ಕೆಲಸದಲ್ಲಿ ರಾಜೀಯಾಗುವ ಪ್ರಶ್ನೆಯೆ ಇಲ್ಲ. ಉತ್ತಮ ಗುಣಮಟ್ಟದ ಕೆತ್ತನೆ ನಿರ್ಮಾಣ ಕಾರ್ಯ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತದೆ. ಎಲ್ಲ ಸಾಂಪ್ರಾದಾಯಿಕ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.

ರಥನಿರ್ಮಾಣಕ್ಕೆ ಅಗತ್ಯವಿರುವ ಗುಣಮಟ್ಟದ ಮರ ಆಯ್ಕೆಯನ್ನು ಅರಣ್ಯಾಧಿಕಾರಿಗಳ ಸಹಕಾರ ಪಡೆದು ಮಾಡಲಾಗುತ್ತದೆ. ಇದಕ್ಕಾಗಿಯೆ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಗುಣಮಟ್ಟದ ವಸ್ತುಗಳನ್ನು ಬಳಸಲು ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಥ ನಿರ್ಮಾಣ ಕಾರ್ಯವು ಇಲ್ಲಿಯೆ ನಡೆಯಬೇಕು. ಬೇರೆಕಡೆ ನಿರ್ಮಾಣ ಮಾಡಬಾರದು. ರಥ ಕೆಲಸವು ಪಾರದರ್ಶಕವಾಗಿರಬೇಕು. ರಥ ನಿರ್ಮಾಣ ಕಾರ್ಯವನ್ನು ಜನರು ವೀಕ್ಷಿಸಲು ಅವಕಾಶವಾಗಬೇಕು ಎಂದು ನಿರ್ಮಾಣ ಹೊಣೆ ನಿರ್ವಹಿಸಲಿರುವ ಸಂಸ್ಥೆಗೆ ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮು ವಿವರಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಐತಿಹಾಸಿಕ ಚಾಮರಾಜೇಶ್ವರ ರಥ ನಿರ್ಮಾಣ ಕೆಲಸವು ಶೀಘ್ರವಾಗಿ ಆರಂಭವಾಗಬೇಕು. ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಪೂರ್ಣವಾಗಬೇಕು. ಈ ನಿಟ್ಟಿನಲ್ಲಿ ವಹಿಸಬೇಕಿರುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕೆಂದು ತಿಳಿಸಿದರು.

ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಮುಖಂಡರು ದೇವಾಲಯದ ಸುತ್ತಮುತ್ತಲ ಪರಿಸರವು ಸ್ವಚ್ಚವಾಗಿಡಲು ಅಗತ್ಯ ಕ್ರಮವಹಿಸಬೇಕು. ಮುಂಬರುವ ಆóಷಾಢ ಮಾಸದ ರಥೋತ್ಸವ ಸಂದರ್ಭದ ವೇಳೆಗೆ ನೂತನ ರಥ ನಿರ್ಮಾಣವಾಗಬೇಕು ಎಂಬುದು ಸೇರಿದಂತೆ ಇತರೆ ಸಲಹೆಗಳನ್ನು  ಸಭೆಯ ಮುಂದಿಟ್ಟರು.

ತಹಶೀಲ್ದಾರ್ ಪುರಂದರ್, ನಗರಸಭೆ ಆಯುಕ್ತರಾದ ರಾಜಣ್ಣ, ಚಾಮರಾಜೇಶ್ವರ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಮಂಜೇಶ್, ಅರ್ಚಕರಾದ ನಾಗರಾಜ ದೀಕ್ಷಿತ್, ಮುಖಂಡರಾದ ಸುದರ್ಶನ್‍ಗೌಡ, ರಾಜುನಾಯಕ, ಚಾ.ರಂ.ಶ್ರೀನಿವಾಸಗೌಡ, ಸಿ.ಎಂ.ಮಂಜುನಾಥ ಗೌಡ, ಸುರೇಶ್ ನಾಯಕ,  ಪ್ರಭುಸ್ವಾಮಿ, ಗು.ಪುರುಷೋತ್ತಮ್, ಎಂ.ನಾಗೇಶ್, ಭಾಸ್ಕರ್, ಶಿವಣ್ಣ,  ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸೆಪ್ಟಂಬರ್ 22 ರಂದು ನಗರದಲ್ಲಿ ರಾಜ್ಯ ಲೋಕಾಯುಕ್ತರ ಸಭೆ


ಚಾಮರಾಜನಗರ, ಸೆ. 21:-  ಗೌರವಾನ್ವಿತ ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿಯವರಾದ ಪಿ.ವಿಶ್ವನಾಥಶೆಟ್ಟಿ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು ಸೆಪ್ಟಂಬರ್ 22 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರದಿಂದ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.



ಸೆ. 22 ರಂದು ನಗರಕ್ಕೆ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ  ದೌರ್ಜನ್ಯ ನಿಯಂತ್ರಣಾ ಸಮಿತಿ ಅಧ್ಯಕ್ಷರ ಭೇಟಿ


ಚಾಮರಾಜನಗರ, ಸೆ. 21 - ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ  ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಆದ ವಿ.ಎಸ್.ಉಗ್ರಪ್ಪ ಅವರು ಸೆಪ್ಟಂಬರ್ 22 ರಂದು ನಗರಕ್ಕೆ ಭೇಟಿ ನೀಡುವರು.

ಬೆಳಗ್ಗೆ 10.30 ಗಂಟೆಗೆ ನಗರಕ್ಕೆ ಆಗಮಿಸುವರು. ಬಳಿಕ ಆದಿಕವಿ ಶ್ರೀ ಮಹರ್ಷಿವಾಲ್ಮೀಕಿ ಅವರ ಪುತ್ಥಳಿ ಲೋಕಾರ್ಪಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಮೈಸೂರಿಗೆ ತೆರಳುವರೆಂದು ಅಧ್ಯಕ್ಷರ ಅಧೀನ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಕೃಷಿ ಹೊಂಡಗಳ ಸುತ್ತಲೂ ರಕ್ಷಣಾತ್ಮಕ ಕ್ರಮ ವಹಿಸಲು ಕೃಷಿ ಇಲಾಖೆ ಮನವಿ


ಚಾಮರಾಜನಗರ, ಸೆ. 21 - ಕೃಷಿಭಾಗ್ಯ ಯೋಜನೆಯಡಿ ರೈತರಿಗಾಗಿ ನಿರ್ಮಿಸಲಾಗಿರುವ ಕೃಷಿ ಹೊಂಡಗಳ ಸುತ್ತ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ತಿರುಮಲೇಶ್ ಮನವಿ ಮಾಡಿದ್ದಾರೆ.

ಕೃಷಿ ಹೊಂಡ ಕಾಮಗಾರಿ ಪೂರ್ಣವಾದ ನಂತರ  ಮಳೆ ನೀರು ತುಂಬಿ ಮಣ್ಣಿನಲ್ಲಿ ಇಂಗುವುದನ್ನು ತಡೆಯುವ ಸಲುವಾಗಿ ಪಾಲಿಥೀನ್ ಹೊದಿಕೆಯನ್ನು ಕೃಷಿಹೊಂಡಗಳಿಗೆ ಹಾಕಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 4489 ಕೃಷಿ  ಹೊಂಡಗಳ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು 1904 ಕೃಷಿಹೊಂಡಗಳಿಗೆ ಪಾಲಿಥೀನ್ ಹೊದಿಕೆ ಹಾಕಲಾಗಿದೆ.

ಪ್ರಸ್ತುತ ಮಳೆ ಹೆಚ್ಚಾಗುತ್ತಿರುವ ಕಾರಣ ಕೃಷಿಹೊಂಡಗಳಲ್ಲಿ 9 ಅಡಿಗೂ ಹೆಚ್ಚು ನೀರು ಸಂಗ್ರಹಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಹೊಂಡದ ಸುತ್ತಲು ಮುನ್ನೆಚರಿಕೆಯಾಗಿ ಬೇಲಿಗಳನ್ನು ನಿರ್ಮಿಸಬೇಕು  ಈ ಮೂಲಕ ಜಾನುವಾರುಗಳು ಮಕ್ಕಳು ಹೊಂಡ ಹತ್ತಿರ ಪ್ರವೇಶಿಸದಂತೆ ತಡೆಯಬೇಕು. ಕೃಷಿಹೊಂಡಗಳಿಗೆ ಟೈರಿನ ಟ್ಯೂಬ್‍ಗಳು, ಉದ್ದವಾದ ಹಗ್ಗವನ್ನು ಕಟ್ಟಿ ಹೊಂಡಗಳಿಗೆ ಬಿಡಬೇಕು. ಕೃಷಿಹೊಂಡಗಳ ಸುತ್ತಲು ನೆರಳುಪರದೆ ಅಳವಡಿಸಬೇಕು. ನೆರಳುಪರದೆ ಅಳವಡಿಸುವ ರೈತರಿಗೆ ಶೇ.50.ರಷ್ಟು ಸಹಾಯಧನ ನೀಡಲಾಗುತ್ತದೆ. ರೈತರು ಹತ್ತಿರದ ರೈತಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು.

ಕೃಷಿಹೊಂಡಗಳ ಸುತ್ತಲು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುನ್ನೆಚರಿಕೆ ವಿಧಾನಗಳನ್ನು ಪಾಲಿಸುವಂತೆ ಜಂಟಿಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸೆ.23 ರಂದು ನೇರ ಫೋನ್ ಇನ್ ಕಾರ್ಯಕ್ರಮ


ಚಾಮರಾಜನಗರ, ಸೆ. 21 - ಜಿಲ್ಲೆಯ ನಾಗರಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಸೆಪ್ಟಂಬರ್ 23 ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳು, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿಗಳು, ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಫೋನ್ ಇನ್ ಕಾರ್ಯಕ್ರಮದಲ್ಲಿ  ಉಪಸ್ಥಿತರಿರುತ್ತಾರೆ. ನಾಗರಿಕರು ಯಾವುದೇ ದೂರು ಕುಂದುಕೊರತೆಗಳು ಇದ್ದಲ್ಲಿ ದೂರವಾಣಿ ಸಂಖ್ಯೆ 08226-224888 ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆ.25 ರಂದು ಕೊಳ್ಳೇಗಾಲ, 26 ರಂದು ಯಳಂದೂರಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ದೂರು ಸ್ವೀಕಾರ


ಚಾಮರಾಜನಗರ, ಸೆ. 21 :- ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಸೆಪ್ಟಂಬರ್ 25 ರಂದು ಕೊಳ್ಳೇಗಾಲ ಹಾಗೂ ಸೆಪ್ಟಂಬರ್ 26 ರಂದು ಯಳಂದೂರಿಗೆ ಭೇಟಿ ನೀಡಿ ನಾಗರಿಕರಿಂದ ದೂರುಗಳನ್ನು ಸ್ವೀಕರಿಸುವರು.

ಕೊಳ್ಳೇಗಾಲದ ಸರ್ಕಾರಿ ಅತಿಥಿಗೃಹ ಹಾಗೂ ಯಳಂದೂರು ಅತಿಥಿಗೃಹದಲ್ಲಿ ನಿಗದಿತ ದಿನಾಂಕದಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ಭರ್ತಿಮಾಡಿದ ಮತ್ತು ನೋಟರಿಯವರಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.

ಸರ್ಕಾರಿ ಕಚೇರಿಯಲ್ಲಿ ಕೆಲಸಕ್ಕೆ ವಿಳಂಬ, ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿ ನೌಕರರ ವಿರುದ್ಧ ದೂರುಗಳಿದಲ್ಲಿ ನಮೂನೆ 1 ಮತ್ತು 2 ರಲ್ಲಿ ಭರ್ತಿಮಾಡಿ ಅಫಿಡವಿಟ್ ಮಾಡಿಸಿ ಸಲ್ಲಿಸಬಹುದು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































Wednesday, 20 September 2017

ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ : ವಾಟಾಳ್ (20-09-2017)

ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ : ವಾಟಾಳ್

  ಚಾಮರಾಜನಗರ, ಸೆ.20- ನಗರದ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿಯ ಯಾವುದೇ ಕಟ್ಟಡವನ್ನ ಹೊಡೆಯಬಾರದು. ಹೊಡೆಯಲು ಮುಂದಾಗಿರುವ ಅವೈಜ್ಞಾನಿಕ ನೀತಿಯನ್ನು ಖಂಡಿಸಿ ಮುಂದಿನ ತಿಂಗ ಳು ಅಕ್ಟೊಬರ್ 10 ರಂದು ಚಾಮರಾಜನಗರ ಬಂದ್‍ಗೆ ಕರೆ ನೀಡಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅದ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
  ಇಂದು ನಗರದ ಸಂತೇಮರಹಳ್ಳಿ ವೃತ್ತದಿಂದ ಚಿಕ್ಕ ಅಂಗಡಿ, ದೊಡ್ಡ ಅಂಗಡಿ ಬೀದಿ ಮಾರ್ಗವಾಗಿ ಅನ್ವರ್ ಪಾಷ ವೃತ್ತದ ವರೆಗೆ ವಾಟಾಳ್ ನಾಗರಾಜ್ ಪಾದಯಾತ್ರೆ ಮಾಡಿ ನಗರಸಭೆ ಮತ್ತು ಜಿಲ್ಲಾಡಳಿತ ಕಟ್ಟಡಗಳ ಮೇಲೆ ಗುರುತು ಮಾಡಿರುವ ಸ್ಥಳವನ್ನು ಪರಿಶೀಲಿಸಿದರು. ಆ ಸಂದರ್ಭದಲ್ಲಿ ಅಂಗಡಿ ಮಾಲೀಕರುಗಳು, ವರ್ತಕರು, ವರ್ತಕರ ಸಂಘದ ಪದಾಧಿಕಾರಿಗಳು ವಾಟಾಳ್ ನಾಗರಾಜ್ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು.
  ನಂತರ ತಮ್ಮ ನೋವನ್ನು ವಾಟಾಳ್ ನಾಗರಾಜ್ ಅವರ ಜೊತೆ ಹಂಚಿಕೊಂಡು ಯಾವುದೇ ಕಾರಣಕ್ಕು ಅಂಗಡಿಗಳನ್ನು ಹೊಡೆಯದಂತೆ ಉಳಿಸಿಕೊಡುವಂತೆ ಮನವಿ ಮಾಡಿದರು. ಅಂಗಡಿಯನ್ನು ಹೊಡೆದರೆ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಹಲವಾರು ಬಡ ವ್ಯಾಪಾರಸ್ಥರು ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತದೆ ಎಂದು ತಿಳಿಸಿದರು.
  ನಂತರ ವರ್ತಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಗಂಭೀರ ಪರಿಸ್ಥಿತಿ ಉಂಟಾಗಿದೆ. ರಸ್ತೆಗಳನ್ನು ಮಾಡುವ ನೆಪದಲ್ಲಿ ಡಿವಿಯೇಷನ್ ರಸ್ತೆ, ಸಂತೇಮರಹಳ್ಳಿ ರಸ್ತೆ, ಕೆ.ಎಸ್.ಆರ್.ಟಿ.ಸಿ ರಸ್ತೆ, ಜೋಡಿರಸ್ತೆ, ನ್ಯಾಯಾಲಯ ರಸ್ತೆ ಸೇರಿದಂತೆ ಅನೇಕ ಕಡೆ ಕಟ್ಟಡಗಳನ್ನು, ವಾಸಿಸುವ ಮನೆಗಳ ನ್ನು ಏಕಾಏಕಿಯಾಗಿ ಹೊಡೆದು ಹಾಕಿ ಸಾರ್ವಜನಿಕರಿಗೆ ಹಾಗು ಕಟ್ಟಡ ಮಾಲೀಕರಿಗೆ ತುಂಬಾ ತೊಂದರೆ ಉಂಟುಮಾಡಿದ್ದಾರೆ. ರಸ್ತೆಗಳನ್ನು ಅಗಲ ಮಾಡುವಾಗ ಮಾಲೀಕರ ಸಭೆ ನಡೆಯಿಸಿ ಅವರಿಗೆ ಸೂಕ್ತ ಪರಿಹಾರ ನೀಡಿ ನಂತರ ಕಟ್ಟಡ ಹೊಡೆಯಲು ಕಾ¯ವಕಾಶ ನೀಡಿ ತೆರವು ಗೊಳಿಸಬೇಕು. ಇದಾವುದು ಮಾಡದೆ ಅವೈಜ್ಞಾನಿಕವಾಗಿ ತಮಗೆ ಇಷ್ಟ ಬಂದ ರೀತಿ ಕಾಮಗಾರಿ ಮಾಡುತ್ತಿರುವುದು ಇದೇನು ಮಿಲಿಟರಿ ಸರ್ಕಾರವೇ, ಪರಮಾಧಿಕಾರವೇ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
  ಅಂಗಡಿ ಬೀದಿಯಲ್ಲಿ ಯಾವುದೇ ಕಟ್ಟಡಗಳನ್ನು ಹೊಡೆಯಬಾರದು. ಹೊಡೆಯಲು ಮುಂದಾದರೆ ನಾನು ಸ್ಥಳದಲ್ಲೇ ತಡೆದು ಸತ್ಯಾಗ್ರಹ ಮಾಡುತ್ತೇನೆ ಎಂದು ತಿಳಿಸಿದರು. ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿಗಳು ಗಂಬೀರವಾಗಿ ಪರಿಗಣಿಸಬೇಕು ಎಂದು ವಾಟಾಳ್ ತಿಳಿಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ : ವಾಟಾಳ್


    ಚಾಮರಾಜನಗರ, ಸೆ.20- ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಲು ಸುಪ್ರಿಂಕೋರ್ಟ್‍ಗೆ ಅವಕಾಶವಿಲ್ಲ. ಯಾವುದೇ ಕಾರಣಕ್ಕು ಮಂಡಳಿ ರಚನೆ ಆಗಬಾರದು ಎಂದು ವಾಟಾಳ್ ತಿಳಿಸಿದರು.
ಕಾವೇರಿ ನೀರಿಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಯಾದರೆ ಕೆ.ಆರ್.ಎಸ್., ಹಾರಂಗಿ, ಹೇಮಾವತಿ ಸೇರಿದಂತೆ ನಮ್ಮ ರಾಜ್ಯದ ಎಲ್ಲಾ ನದಿಗಳು ರಾಜ್ಯದವರ ಕೈಯಲ್ಲಿ ಇರುವುದಿಲ್ಲ. ನಮ್ಮ ರಾಜ್ಯದ ಸಂಸದರು ಪಾರ್ಲಿಮೆಂಟ್‍ನಲ್ಲಿ ಪ್ರಧಾನಿಗಳ ಜೊತೆ ಮಾತನಾಡಿ ನಿರ್ವಹಣಾ ಮಂಡಳಿ ಬೇಡ ಎಂದು ಒತ್ತಡ ಏರಬೇಕು ಇಲ್ಲವೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ವಾಟಾಳ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಗೌರವ ಕಾರ್ಯದರ್ಶಿ ಎನ್.ಶಂಕರ್ ಖಜಾಂಚಿ ಸಿ.ಎಸ್.ಮಹೇಶ್‍ಕುಮಾರ್ ನಿರ್ದೇಶಕರಾದ ಎಸ್.ಎನ್.ಪಿ.ಶರತ್, ರಂಗರಾಜು, ಸ್ವಾಗತ್‍ರಮೇಶ್, ಹ.ವಿ.ನಟರಾಜು, ಬಿ.ನಾಗರಾಜು, ಸಯ್ಯದ್ ಅಲ್ತಾಫ್, ಅಬ್ರಹಾಂ ಡಿ ಸಿಲ್ವ, ಕಾರ್ ನಾಗೇಶ್, ದ ಳಪತಿ ವೀರತಪ್ಪ, ಶ್ರೀನಿವಾಸಗೌಡ, ಪುರುಶೋತ್ತಮ, ಸಿ.ಜಿ.ಬಾಬು, ವರದನಾಯಕ, ಶಿವಲಿಂಗಮೂರ್ತಿ, ವರದರಾಜು, ರೇವಣ್ಣಸ್ವಾಮಿ, ವಡ್ಡರಹಳ್ಳಿ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಸಹಕಾರ ಸಚಿವರ ಜಿಲ್ಲಾ ಪ್ರವಾಸ


ಚಾಮರಾಜನಗರ, ಸೆ. 20 - ಸಹಕಾರ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಸೆಪ್ಟೆಂಬರ್ 22ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಬೆಂಗಳೂರಿನ ವಿಧಾನಸೌಧ ಪಶ್ಚಿಮ ದ್ವಾರದ ಬಲಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ಪ್ರತಿಷ್ಠಾಪಿಸಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಯನ್ನು ಅಕ್ಟೋಬರ್ 5ರಂದು ಲೋಕಾರ್ಪಣೆಗೊಳಿಸುವ ಸಂಬಂಧ ಸೆ. 22ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರದಲ್ಲಿ ನಡೆಯಲಿರುವ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 25ರಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ, ಸದಸ್ಯರ ಜಿಲ್ಲಾ ಪ್ರವಾಸ


ಚಾಮರಾಜನಗರ, ಸೆ. 20- ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಆರ್. ವೆಂಕಟೇಶ ಹಾಗೂ ಸದಸ್ಯರಾದ ಮೀನಾಕ್ಷಮ್ಮ ಮತ್ತು ಗೋಕುಲನಾರಾಯಣಸ್ವಾಮಿ ಅವರುಗಳು ಸೆಪ್ಟೆಂಬರ್ 25ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಅಂದು ಬೆಳಿಗ್ಗೆ 9.30 ಗಂಟೆಗೆ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಬಗ್ಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ


ಚಾಮರಾಜನಗರ, ಸೆ. 20 -  ತಾಲೂಕಿನ 66/11 ಕೆವಿ ಅಟ್ಟುಗೂಳಿಪುರ ಎಂ.ಯು.ಎಸ್.ಎಸ್ ನಲ್ಲಿ ಪ್ರಸಕ್ತ ಸಾಲಿನ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಸೆಪ್ಟೆಂಬರ್ 21ರಂದು ಹಮ್ಮಿಕೊಳ್ಳಲಾಗಿದೆ.

ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ 11 ಕೆ.ವಿ ಫೀಡರ್‍ಗಳ ವ್ಯಾಪ್ತಿಗೆ ಬರುವ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಎನ್.ಜೆ.ವೈ, ಬಂದಿಗೌಡನಹಳ್ಳಿ, ಅಟ್ಟುಗೂಳಿಪುರ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 25ರಂದು ಚಂದಕವಾಡಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ

ಚಾಮರಾಜನಗರ, ಸೆ. 11 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಚಂದಕವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಹೊಬಳಿಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತಾಲೂಕಿನ ಚಂದಕವಾಡಿಯಲ್ಲಿ ಸೆಪ್ಟಂಬರ್ 25ರಂದು ಬೆಳಗ್ಗೆ 9.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕೊಳ್ಳೆಗಾಲದ ಜೇತವನದ ಬೌದ್ಧ ಬಿಕ್ಕುಗಳಾದ ಪರಮಪೂಜ್ಯ ಮನೋ ರಖ್ಖಿತ ಬಂತೇಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಮತ್ತು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್. ಅಂಜನೇಯ ಅವರು ಘನ ಉಪಸ್ಥಿತಿ ವಹಿಸುವರು.

 ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಡಾ.ಬಿ.ಆರ್. ಅಂಬೇಡ್ಕರ್ ಭವನದ ಕಟ್ಟಡ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.

ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿ,ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಜಿ.ಪಂ. ಸದಸ್ಯರಾದ ಆರ್. ಬಾಲರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ತಾ.ಪಂ. ಸದಸ್ಯರಾದ ಮಹದೇವಶೆಟ್ಟಿ, ಚಂದಕವಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಸಿದ್ದಪ್ಪಾಜಿ, ಉಪಾಧ್ಯಕ್ಷರಾದ ನಾಗನಾಯ್ಕ ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಇದೇ ವೇಳೆ ಗಣ್ಯರು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಸಲಹೆ

ಚಾಮರಾಜನಗರ, ಸೆ. 20 - ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಕಲೆ, ಸಂಸ್ಕøತಿ ಇನ್ನಿತರ ವೈವಿದ್ಯಮಯ ಕಲಾ ಕ್ರೀಡೆ ಪ್ರಕಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಯೋಗೇಶ್ ಸಲಹೆ ಮಾಡಿದರು.

ಯಳಂದೂರು ತಾಲ್ಲೂಕಿನ ಗುಂಬಳ್ಳಿಯಲ್ಲಿ ಇಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಲ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಇರುವ ಕಲೆ, ಸಂಸ್ಕøತಿ ಅಭಿವ್ಯಕ್ತಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿಗುರು ಕಾರ್ಯಕ್ರಮ ಆಯೋಜಿಸಿರುವುದು ಉತ್ತಮವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ಜಿಲ್ಲೆಯು ಜಾನಪದ ಕಲೆಗೆ ಹೆಸರುವಾಸಿಯಾಗಿದೆ. ಇಲ್ಲಿನ ನಾನಾ ಕಲಾ ಪ್ರಕಾರಗಳು ವೈವಿದ್ಯತೆಯಿಂದ ಕೂಡಿದ್ದು ಅನೇಕರ ಗಮನ ಸೆಳೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸೊಗಡುವುಳ್ಳ ಹಾಡುಗಾರಿಕೆ ಇನ್ನಿತರ ಸಂಸ್ಕøತಿ ಪರಂಪರೆ ಇಂದಿಗೂ ಕಂಡುಬರುತ್ತಿದೆ ಎಂದು ಯೋಗೇಶ್ ತಿಳಿಸಿದರು.
ಸರ್ಕಾರ ಕಲೆ ಸಂಸ್ಕøತಿ ಚಟುವಟಿಕೆಗಳಿಗೆ ಹೆಚ್ಚಿನ ನೆರವು ಪ್ರೋತ್ಸಾಹ ನೀಡುತ್ತಿದೆ. ಶೈಕ್ಷಣಿಕ ಪ್ರಗತಿಗೂ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವಿದ್ಯಾರ್ಥಿಗಳ ಜಾÐನರ್ಜನೆಗೆ ಪೂರಕವಾಗಿರುವ ಸೌಲಭ್ಯಗಳನ್ನು ಪಡೆಯಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲಿಯೇ ಅಧ್ಯಯನ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾಗಿ ಆಧ್ಯತೆ ನೀಡಬೇಕು. ಎಲ್ಲ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುವಂತಾಗಬೇಕು ಎಂದು ಯೋಗೇಶ್ ಸಲಹೆ ಮಾಡಿದರು.

ಕ್ಷೇತ್ರಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಾತನಾಡಿ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ನಾನಾ ಕಾರ್ಯಕ್ರಮಗಳ ಮೂಲಕ ಅವಕಾಶ ಮಾಡಿಕೊಡುತ್ತಿದೆ. ವಿದ್ಯಾರ್ಥಿಗಳ ಮುಖ್ಯ ಉದ್ದೇಶ ಶಿಕ್ಷಣ ಪಡೆಯುವುದೇ ಆದರೂ ಜತೆಯಲ್ಲಿಯೇ ಇತರೆ ಪಠ್ಯೇತರ ಚಟುವಟಿಕೆಗಳಿಗೆ ಉತೇಜನ ನೀಡುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಹಾಗೂ ವಿಕಾಸನಕ್ಕೆ ಮುಂದಾಗಿದೆ ಎಂದರು.

ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಂ.ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತ್ ಸದಸ್ಯರಾದ ಭಾಗ್ಯಮ್ಮ ನಂಜಯ್ಯ, ಯರಗಂಬಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಜಿ.ಗೌರಮ್ಮ, ಉಪಾಧ್ಯಕ್ಷರಾದ ಎಂ.ಸುಧಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಉಮಾಮಹೇಶ್ವರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ.ನಾಗವೇಣಿ, ಶಾಲಾ ಮುಖ್ಯೋಪಾಧ್ಯಾಯರಾದ ನಾರಾಯಣಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಜನಾ ಮತ್ತು ತಂಡದವರು ಕೋಲಾಟ, ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ಶರಣ್ಯ ಅವರು ಭರತನಾಟ್ಯ, ನಯನ ಮತ್ತು ತಂಡದವರು ಜನಪದ ನೃತ್ಯ ಪ್ರದರ್ಶನ ನೀಡಿದರು. ಗೂಳಿಪುರ ಶಾಲಾ ಮಕ್ಕಳು ಸಮೂಹ ನೃತ್ಯ, ಚಾಮರಾಜನಗರದ ರೋಹಿತ್‍ರಾಜ್ ಮತ್ತು ತಂಡ ಜನಪದ ಗೀತೆ ಹಾಗೂ ಗುಂಬ್ಬಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ ಸಂತೋಷ್ ಮತ್ತು ತಂಡ ನಮಾಮಿ ಗಂಗೆ ಎಂಬ ನಾಟಕ ಪ್ರದರ್ಶಿಸಿದರು.

ಸೆ. 23ರಂದು ಕಬ್ಬಳ್ಳಿ, ಹೊನ್ನೂರು ಗ್ರಾಮದಲ್ಲಿ ಕ್ರೀಡಾಸ್ಫರ್ಧೆ


ಚಾಮರಾಜನಗರ, ಸೆ. 20 - ನೆಹರು ಯುವ ಕೇಂದ್ರವು ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿ ಗ್ರಾಮದ ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಟದ ಮೈದಾನದಲ್ಲಿ ಹಾಗೂ ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ಡಾ.ಭೀಮರಾವ್ ರಾಮ್‍ಜೀ ಪ್ರೌಢಶಾಲೆ ಆವರಣದಲ್ಲಿ ಸೆಪ್ಟೆಂಬರ್ 23ರಂದು ಆಯೋಜಿಸಿದೆ.

ಹೊನ್ನೂರು ಗ್ರಾಮದಲ್ಲಿ ನಡೆಯಲಿರುವ ಕ್ರೀಡಾ ಕೂಟದಲ್ಲಿ ಯುವಕರಿಗೆ ವಾಲಿಬಾಲ್, ಬ್ಯಾಡ್ಮಿಂಟನ್, ಖೋ ಖೋ, ಯುವತಿಯರಿಗೆ ಬ್ಯಾಡ್ಮಿಂಟನ್, ಥ್ರೋ ಬಾಲ್ ಸ್ಫರ್ಧೆಗಳಿವೆ,   ಕಬ್ಬಳ್ಳಿ ಗ್ರಾಮದದಲ್ಲಿ ನಡೆಯಲಿರುವ ಕ್ರೀಡಾ ಕೂಟದಲ್ಲಿ ಯುವಕರಿಗೆ ವಾಲಿಬಾಲ್, ಕಬ್ಬಡಿ, 200ಮೀಟರ್ ಓಟ, ಹಾಗೂ ಯುವತಿಯರಿಗೆ ಬ್ಯಾಡ್ಮಿಂಟನ್, 100ಮೀ ಓಟ, ಥ್ರೋಬಾಲ್ ಸ್ಫರ್ಧೆಗಳು ಇವೆ.

ಸೆಪ್ಟೆಂಬರ್ 23ರಂದು ಬೆಳಿಗ್ಗೆ 9.30ಗಂಟೆಗೆ ಕ್ರೀಡಾಸ್ಫರ್ಧೆ ಆರಂಭವಾಗಲಿದೆ. ಆಸಕ್ತರು ಸೆಪ್ಟೆಂಬರ್ 22ರ ಮಧ್ಯಾಹ್ನ 2ಗಂಟೆಯೊಳಗೆ ಹೊನ್ನೂರಿನಲ್ಲಿ ನಡೆಯುವ ಸ್ಫರ್ಧೆಗೆ ನೊಂದಾಯಿಸಲು ಮೊಬೈಲ್ ನಂ.9591929631 (ಜಗದೀಶ್), 9916392143 (ಕೆ.ಆರ್.ಜಗದೀಶ್), ನೆಹರು ಯುವ ಕೇಂದ್ರ ದೂ.ಸಂ.08226-222120 ಸಂರ್ಪಕಿಸಬೇಕು. ಕಬ್ಬಳ್ಳಿಯಲ್ಲಿ ನಡೆಯಲಿರುವ ಸ್ಫರ್ಧೆಗೆ ನೊಂದಾಯಿಸಲು ಮೊಬೈಲ್ ನಂ.9590632002 (ಮಂಜಪ್ಪ), 9845537209 (ಸೌಭಾಗ್ಯ) ನೆಹರು ಯುವ ಕೇಂದ್ರ 08226-222120 ಸಂರ್ಪಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ


ಚಾಮರಾಜನಗರ, ಸೆ. 20 - ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ, ಪಿ.ಜಿ. ಡಿಪ್ಲೋಮಾ, ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಲಾಗುವ 6 ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ತರಬೇತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 3ರ ವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ ಞಚಿಡಿಟಿಚಿಣಚಿಞಚಿiಟಿಜಿoಡಿmಚಿಣioಟಿ.gov.iಟಿ ನೋಡಬಹುದು ಅಥವಾ ಸುದ್ಧಿ ಮತ್ತು ಪತ್ರಿಕಾ ವಿಭಾಗದ ಉಪನಿರ್ದೆಶಕರ ದೂರವಾಣಿ ಸಂಖ್ಯೆ 080-22028037/87 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.














 



Tuesday, 19 September 2017

ಮಹಾಲಯ ಅಮವಾಸ್ಯೆ :ವಿಶೇಷ ಪೂಜೆ ,ಹರಕೆ ಉತ್ಸವ (19-09-2017)

ಮಹಾಲಯ ಅಮವಾಸ್ಯೆ :ವಿಶೇಷ ಪೂಜೆ ,ಹರಕೆ  ಉತ್ಸವ



ಚಾಮರಾಜನಗರ: ಇಂದು (ದಿ:19-09-2017 ರಂದು) ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ನಡೆದ ಮಹಾಲಯ ಅಮವಾಸ್ಯೆ ಪ್ರಯುಕ್ತ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡು ವಿಶೇಷ ಪೂಜೆ ,ಹರಕೆ ಹಾಗು ಉತ್ಸವಗಳನ್ನು ನಡೆಸಿದರು. ಬಂದಿದ್ದ ಭಕ್ತಾಧಿಗಳಿಗೆ ಪ್ರಾಧಿಕಾರದ ವತಿಯಿಂದ ವಿಶೇಷ ದರ್ಶನದ ವ್ಯವಸ್ಥೆ,ನೆರಳಿನ ವ್ಯವಸ್ಥೆ,ಕುಡಿಯುವ ನೀರಿನ ವ್ಯವಸ್ಥೆ, ವಿಶೇಷ ದಾಸೋಹದ ವ್ಯವಸ್ಥೆ, ಹಾಗು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಯಿತು.
ದಿ:18-09-17 ರಂದು ಶ್ರೀ ಸ್ವಾಮಿಗೆ ವಿಶೇಷ ಪೂಜೆ ಹಾಗು ಎಣ್ಣೆಮಜ್ಜನದ ಸೇವೆಗಳು ಬಹಳ ವಿಜೃಂಭಣೆಯಿಂದ ನೆರವೇರಿದವು.

ಇದೇ ವೇಳೆ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ ,ಕ.ಆ.ಸೇ(ಹಿ.ಶ್ರೇ) ಅಪರ ಜಿಲ್ಲಾಧಿಕಾರಿಗಳು ಚಾಮರಾಜನಗರ, ಶ್ರೀ ಎಂ.ಬಸವರಾಜು ಉಪಕಾರ್ಯದರ್ಶಿಗಳು, ಶ್ರೀ ರವೀಂದ್ರ ಎಸ್ ಮನ್ವಾಚಾರ್ಯ ಸಹಾಯಕ ಅಭಿಯಂತರರು, ಶ್ರೀ ಮಾಧುರಾಜು ಅಧೀಕ್ಷಕರು, ಶ್ರೀ ಮಹದೇವಸ್ವಾಮಿ ಲೆಕ್ಕಾಧೀಕ್ಷಕರು ಹಾಗು ಎಲ್ಲಾ ನೌಕರ ವರ್ಗದವರು ಪಾಲ್ಗೊಂಡಿದ್ದರು.

Monday, 18 September 2017

ಜಿಲ್ಲೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಗಣಿಗಾರಿಕೆ, ಸಾಗಾಣಿಕೆ ನಿರ್ವಹಿಸಲು ಡಿಸಿ ಸೂಚನೆ (18-09-2017)

ಕೆ.ಸಿ.ರಂಗಯ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು...............ವೀರಭದ್ರಸ್ವಾಮಿ ರಾಮಸಮುದ್ರ

ಕೆ.ಸಿ.ರಂಗಯ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಶಿಕ್ಷಕರು

__________________________________________

ಜಿಲ್ಲೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಗಣಿಗಾರಿಕೆ, ಸಾಗಾಣಿಕೆ ನಿರ್ವಹಿಸಲು ಡಿಸಿ ಸೂಚನೆ

ಚಾಮರಾಜನಗರ, ಸೆ. 18 - ಜಿಲ್ಲೆಯಲ್ಲಿ ಮರಳು ಮತ್ತು ಉಪಖನಿಜಗಳಿಗೆ ಸಂಬಂಧಪಟ್ಟಂತೆ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಮರಳು ಉಸ್ತುವಾರಿ ಸಮಿತಿ ಮತ್ತು ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಬಿ. ರಾಮು ಅವರು ಸೂಚನೆ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 4ರಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಜಿಲ್ಲಾದ್ಯಂತ ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಚರ್ಚಿಸಲಾಗಿದೆ. ಈ ಸಭೆಯಲ್ಲಿ ನಿರ್ಧರಿಸಿರುವಂತೆ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994ರ ನಿಯಮ 31ಆರ್ (3)ರಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧಿಕಾರಗಳು ಹಾಗೂ ಕರ್ತವ್ಯಗಳಂತೆ ಉಪನಿಯಮ 23ರಲ್ಲಿ ತಿಳಿಸಿರುವಂತೆ ಮರಳು ಹಾಗೂ ಉಪಖನಿಜಗಳಿಗೆ ಸಂಬಂಧಪಟ್ಟಂತೆ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ನಿರ್ವಹಿಸಬೇಕು.
ಈ ಅವಧಿಯ ನಂತರ ಯಾವುದೇ ಗಣಿಗಾರಿಕೆ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಸದರಿ ಉದೃತ ನಿಯಮದ ನೇರ ಉಲ್ಲಂಘನೆ ಅನ್ವಯ ಗಣಿ ಗುತ್ತಿಗೆದಾರರ ಮೇಲೆ ಹಾಗೂ ಅಕ್ರಮ ಗಣಿಗಾರಿಕೆ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.

ಕೆ.ಸಿ.ರಂಗಯ್ಯ ಮತ್ತು ಎನ್.ಕೆ.ಶ್ರೀಧರ್ ಜನಮಾನಸದ ವಿದ್ಯಾಗುರುಗಳು –ಎಂ.ರಾಮಚಂದ್ರ


ಚಾಮರಾಜನಗರ - ಸೆಪ್ಟೆಂಬರ್– 18 ಅನೇಕ ವಿದ್ಯಾರ್ಥಿಗಳ ಬದುಕಿಗೆದಾರಿ ದೀಪಗಳಾದ ಶಿಕ್ಷಣತಜ್ಞ ಕೆ.ಸಿ.ರಂಗಯ್ಯ ಮತ್ತು ಎನ್.ಕೆ.ಶ್ರೀಧರ್ ಜನಮಾನಸದ ವಿದ್ಯಾಗುರುಗಳು ಎಂದು ಜಿಲ್ಲಾಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಬಣ್ಣಿಸಿದರು.
ಅವರು ರಂಗವಾಹಿನಿ (ರಿ) ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿಇಲ್ಲಿನಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಣ ತಜ್ಞ ಕೆ.ಸಿ.ರಂಗಯ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮತ್ತು ಶಿಕ್ಷಣ ತಜ್ಞ ಎನ್.ಕೆ.ಶ್ರೀಧರ್ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇvರಿಗೆÀಪಾರಿತೋಷಕ ವಿತರಣೆ ಹಾಗೂ ‘ಬೆಲ್ಲದದೋಣಿ’ ನಾಟಕ ಪ್ರದರ್ಶನಕಾರ್ಯಕ್ರಮದಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಡ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತುಜ್ಞಾನದಜೊತೆಗೆ ನೈತಿಕ ಶಿಕ್ಷಣದ ಪಾಠವನ್ನು ಹೇಳುತ್ತಿದ್ದ ಈ ಇಬ್ಬರು ಮಹನೀಯರು, ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕøತಿ, ಶಿಕ್ಷಣದ ಬೆಳವಣಿಗೆಗೆ ಪ್ರೋತ್ಸಾಹನೀಡಿದ್ದಾರೆ. ಇವರಿಂದ ಪಾಠ ಹೇಳಿಸಿಕೊಂಡ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಗಣ್ಯ ಮಾನ್ಯರಾಗಿ ಹೆಸರುವಾಸಿಯಾಗಿದ್ದಾರೆ. ಆ ವಿದ್ಯಾರ್ಥಿಗಳು ಇವರ ಹೆಸರಿನಲ್ಲಿ ಅವರ ಮನೆಯ ದೀಪ ಬೆಳಗಿಸಿ ಸ್ಮರಣೆ ಮಾಡಿಕೊಂಡಾಗ ಮಾತ್ರ ಈ ಮಹನೀಯರಸಾಧನೆಗಳು ಹೆಚ್ಚು ಅರ್ಥಪೂರ್ಣವಾಗುತ್ತದೆ.
 ಇವರ ಹೆಸರಿನಲ್ಲಿಆದರ್ಶ ಶಿಕ್ಷಕ ಪ್ರಶಸ್ತಿ ಮತ್ತು ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕೆ ಪ್ರಬಂಧ ಸ್ಪರ್ಧೆ ಏರ್ಪಡಿಸಿರುವ ರಂಗವಾಹಿನಿ ಸಂಸ್ಥೆಯಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕೆ.ಸಿ.ರಂಗಯ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಕೆ.ವೆಂಕಟರಾಜು,ಕೆ.ಸಿ.ರಂಗಯ್ಯ ಮತ್ತು ಎನ್.ಕೆ. ಶ್ರೀಧರ್ ಅಕ್ಷರವೇಗೊತ್ತಿಲ್ಲದಅನೇಕ ವಿದ್ಯಾರ್ಥಿಗಳಿಗೆ ಬದುಕಿನ ಪಾಠವನ್ನು ಕಲಿಸಿಕೊಡುವುದರ ಜೊತೆಗೆ ಮಾನವತೆ ಮತ್ತು ಆತ್ಮಸ್ಥೈರ್ಯವನ್ನುತುಂಬಿದ ಮಹಾನ್ ಗುರುಗಳು.ಬಡ ವಿದ್ಯಾರ್ಥಿಗಳ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಇವರ ಸೇವೆ ನಿಜಕ್ಕೂ ಸ್ಮರಣೀಯವಾದದ್ದುಎಂದು ಹೇಳಿದರು.
ಶಿಕ್ಷಣ ತಜ್ಞ ಎನ್.ಕೆ.ಶ್ರೀಧರ್ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಾದ ಕೊಳ್ಳೇಗಾಲ ತಾಲ್ಲೂಕು ತಿಮ್ಮರಾಜಿಪುರದಕಿತ್ತೂರುರಾಣಿಚೆನ್ನಮ್ಮ ವಸತಿ ಶಾಲೆಯ ಭಾಗ್ಯಶ್ರೀ, ರಾಮಸಮುದ್ರದಸೇಂಟ್ ಫ್ರಾನ್ಸಿಸ್ ಶಾಲೆಯಯೋಷಿತರಾಜ್, ಸೋಮವಾರ ಪೇಟೆಎಂ.ಸಿ.ಎಸ್ ಪಬ್ಲಿಕ್ ಶಾಲೆಯ ನಿಸರ್ಗ ಇವರಿಗೆ ಕ್ರಮವಾಗಿ 1000, 500, 250 ರೂಪಾಯಿ ನಗದು ಬಹುಮಾನಮತ್ತು ಪ್ರಶಸ್ತಿ ಫಲಕವನ್ನು ನೀಡಿ ನಿವೃತ್ತ ಪ್ರಾಧ್ಯಾಪಕಿ ಶೋಭಾ ಶ್ರೀಧರ್ ಗೌರವಿಸಿದರು.
ಇದೇ ಸಂಧರ್ಭದಲ್ಲಿ ಚಾಮರಾಜನಗರ ತಾಲ್ಲೂಕು  ಗಂಗವಾಡಿ ಸರ್ಕಾರಿ
ಶಾಲೆಯ ನಂಜುಂಡಸ್ವಾಮಿ.
ಯಳಂದೂರು ತಾಲ್ಲೂಕು ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯಮಧುಕರ್,ಚಾಮರಾಜನಗರದಆದರ್ಶ ವಿದ್ಯಾಲಯದ ವಿಶಾಲಾಕ್ಷಿ, ಚಾಮರಾಜನಗರ ತಾಲ್ಲೂಕಿನಮಸಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆÉಯ ಎನ್.ಎಸ್.ಮಹದೇವಸ್ವಾಮಿ,ಯಡಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಡಿ.ಮಹದೇವಸ್ವಾಮಿ, ತೆಳ್ಳನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿ.ಕೆ.ಮಲ್ಲಮ್ಮ, ಸರ್ಕಾರಿ ಉರ್ದು ಶಾಲೆಯ ಶಬನಾ ಅಂಜುಂ, ಚಂದಕವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿವರಾಜ್‍ಅವರಿಗೆ ಕೆ.ಸಿ.ರಂಗಯ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಫಲಕನೀಡಿ ಗೌರವಿಸಲಾಯಿತು.
ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮಹದೇವಸ್ವಾಮಿ, ಪ್ರೌಢಶಾಲಾಶಿಕ್ಷಕರ ಸಂಘದ ಕಾರ್ಯದರ್ಶಿಗಜೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಿ.ಕೆ.ರಾಮಸ್ವಾಮಿ,ರಂಗವಾಹಿನಿ ಕಾರ್ಯದರ್ಶಿ ಶಿವಕುಮಾರ್ ಕೆಂಪನಪುರ, ಜಯಸಿಂಹ, ರಂಗ ನಿರ್ದೇಶಕ ರೂಬಿನ್ ಸಂಜಯ್, ಗಾಯಕದೇವಾನಂದವರಪ್ರಸಾದ್‍ಭಾಗವಹಿಸಿದ್ದರು.ಕಾರ್ಯಕ್ರಮದ ನಂತರ ರಂಗವಾಹಿನಿ ಕಲಾವಿದರು ಅಭಿನಯಿಸಿದ ‘ಬೆಲ್ಲದದೋಣಿ’ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.


ಉದ್ಯೋಗ ಆಕಾಂಕ್ಷಿತರು, ವಿದ್ಯಾರ್ಥಿಗಳಿಗೆ ನೆರವಾಗಲಿರುವ ಉಚಿತ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವಾ ಕೇಂದ್ರಕ್ಕೆ ನಗರದಲ್ಲಿ ಚಾಲನೆ

ಚಾಮರಾಜನಗರ, ಸೆ. 18- ನಿರುದ್ಯೋಗಿ ವಿದ್ಯಾವಂತ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಉಚಿತವಾಗಿ ಅರ್ಜಿ ಸಲ್ಲಿಸಲು ನೆರವಾಗುವ ಆಶಯದೊಂದಿಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿ ವ್ಯವಸ್ಥೆಗೊಳಿಸಿರುವ ಉಚಿತ ಆನ್ ಲೈನ್ ಸೇವಾ ಕೇಂದ್ರ ಇಂದಿನಿಂದ ಆರಂಭವಾಗಿದೆ.
ನಗರದ ಮಾರುಕಟ್ಟೆ ಪಕ್ಕದ ನಗರಖಾನೆ ರಸ್ತೆಯಲ್ಲಿ ಆರಂಭಿಸಿರುವ ಉಚಿತ ಆನ್ ಲೈನ್ ಸೇವಾ ಕೇಂದ್ರವನ್ನು ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಆನ್ ಲೈನ್ ಸೇವಾ ಕೇಂದ್ರದ ರೂವಾರಿ ಹಾಗೂ ಪ್ರಾಯೋಜಕರಾದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಯುವ ಅಭ್ಯರ್ಥಿಯೊಬ್ಬರ ನೋಂದಣಿ ಮಾಡಿಕೊಂಡು ಅವರಿಗೆ ಪತ್ರ ನೀಡುವ ಮೂಲಕ ಸೇವೆ ಆರಂಭಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸೇವಾ ಕೇಂದ್ರದ ಯೋಜನೆ ಹಾಗೂ ಉದ್ದೇಶಗಳ ಬಗ್ಗೆ ವಿವರ ನೀಡಿದ ಪುಟ್ಟರಂಗಶೆಟ್ಟಿ ಅವರು ಎಲ್ಲಾ ವರ್ಗದ ನಿರುದ್ಯೋಗಿ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಆನ್ ಲೈನ ಮೂಲಕ ಅರ್ಜಿ ಸಲ್ಲಿಸಲು ಖಾಸಗಿಯವರ ಬಳಿ ಹಣ ನೀಡಿ ಪ್ರಕ್ರಿಯೆಗೆ ಮುಂದಾಗುತ್ತಿದ್ದರು. ಇದರಿಂದ ಆಗುತ್ತಿದ್ದ ವೆಚ್ಚ ತಪ್ಪಿಸಿ ಅನುಕೂಲ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ತಾವೇ ಉಚಿತವಾಗಿ ಆನ್ ಲೈನ್ ಮೂಲಕ ಯಾವುದೇ ಶುಲ್ಕ ಪಡೆಯದೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೇವಾ ಕೇಂದ್ರವನ್ನು ತೆರೆದಿದ್ದೇನೆ ಎಂದರು.
ಸೇವಾ ಕೇಂದ್ರದಲ್ಲಿ ಉದ್ಯೋಗ ಮಾಹಿತಿ ಸಹ ನೀಡಲಾಗುತ್ತದೆ. ಖಾಸಗಿ ಸರ್ಕಾರಿ ಉದ್ಯೋಗ ಅವಕಾಶಗಳ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ಕೊಡಲಾಗುತ್ತದೆ. ಅಭ್ಯರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ಯಾವುದೇ ಖಾಸಗಿ ಉದ್ಯಮ ಸರ್ಕಾರಿ ಇಲಾಖೆಗಳಿಂದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದಾಗ ನೊಂದಣಿಯಾದ ಅಭ್ಯರ್ಥಿಗಳಿಗೆ ವಿವರ ನೀಡಿ ಅರ್ಜಿ ಸಲ್ಲಿಸಲು ಮಾಹಿತಿ ಕಳುಹಿಸಲಾಗುತ್ತದೆ. ಒಂದುವೇಳೆ ಈಗಾಗಲೇ ಸಂಪೂರ್ಣ ವಿವರಗಳು, ವಿದ್ಯಾರ್ಹತೆ, ಅನುಭವ ಇನ್ನಿತರ ದಾಖಲೆಗಳನ್ನು ನೊಂದಾಯಿಸಿರುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಅವರ ಅನುಮತಿ ಪಡೆದು ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಸೇವಾ ಕೇಂದ್ರದಲ್ಲಿ ನಡೆಸಲಾಗುತ್ತದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಕೈಗಾರಿಕೆ ಪ್ರದೇಶಗಳು ಸಣ್ಣ ಉದ್ಯಮಗಳು ಆರಂಭವಾಗುವ ಬೆಳವಣಿಗೆಗಳು ಸಾಗಿವೆ. ಈ ನಿಟ್ಟಿನಲ್ಲಿ ಖಾಸಗಿ ಕ್ಷೇತ್ರದಲ್ಲೂ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಲಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ನೋಂದಣಿ ಪ್ರಕ್ರಿಯೆಯನ್ನು ವ್ಯಾಪಕವಾಗಿ ನಡೆಸುವ ಉದ್ದೇಶವು ಹೊಂದಲಾಗಿದೆ ಎಂದು ಶಾಸಕರು ತಿಳಿಸಿದರು.
ಉಚಿತ ಆನ್ ಲೈನ್ ಸೇವಾ ಕೇಂದ್ರದ ಪ್ರಯೋಜನ ಕೇವಲ ತಮ್ಮ ವಿಧಾನಸಭಾ ಕಾರ್ಯಕ್ಷೇತ್ರದ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಯಾವುದೇ ಭಾಗದ ವಿದ್ಯಾರ್ಥಿಗಳು, ನಿರುದ್ಯೋಗಿ ಅಭ್ಯರ್ಥಿಗಳು, ಉದ್ಯೋಗ ಆಕಾಂಕ್ಷಿಗಳು ಸೇವಾ ಕೇಂದ್ರದ ಪ್ರಯೋಜನ ಪಡೆಯಬಹುದು. ಜಿಲ್ಲೆಯ ಹೆಚ್ಚಿನ ಜನರಿಗೆ ಸೇವಾ ಕೇಂದ್ರ ಸದುಪಯೋಗವಾಗಲಿ ಎಂಬುದು ತಮ್ಮ ಮನದಾಸೆಯಾಗಿದೆ. ಆರಂಭಿಸಿರುವ ಸೇವಾ ಕೇಂದ್ರ ಯಶಸ್ವಿಯಾದರೆ ಇನ್ನಷ್ಟು ಸೌಲಭ್ಯಗಳನ್ನು ಸಹ ವಿಸ್ತರಿಸಲು ತಾವು ಸಿದ್ಧರಿರುವುದಾಗಿ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಕ್ರೀಡಾ ಚಟುವಟಿಕೆಗಳಿಗೂ ಮಹತ್ವ ನೀಡಿ : ಜಿ.ಪಂ. ಅಧ್ಯಕ್ಷರಾದ ರಾಮಚಂದ್ರ ಸಲಹೆ 

ಚಾಮರಾಜನಗರ, ಸೆ. 18 - ವಿದ್ಯಾರ್ಥಿಗಳು ಅಧ್ಯಯನ ವ್ಯಾಸಂಗಕ್ಕೆ ನೀಡುವ ಮಹತ್ವನ್ನು ಕ್ರೀಡಾ ಚಟುವಟಿಕೆಗಳಿಗೂ ನೀಡುವ ಮೂಲಕ ಉತ್ತಮ ಸಾಧನೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಸಲಹೆ ಮಾಡಿದರು.
ನಗರದ ಸಂತಫ್ರಾನ್ಸಿಸ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಇಂದು ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲಿಯೇ ಪಠ್ಯೇತರ ಚಟುವಟಿಕೆಗಳಿಗೆ ಒಲವು ತೋರಬೇಕು. ವಿಶೇಷವಾಗಿ ಆಟೋಟ ಸ್ಪರ್ಧೆಗಳಲ್ಲಿ ತೊಡಗಿಕೊಂಡು ಹೆಚ್ಚಿನ ಸಾಧನೆ ಮಾಡುವ ಮುಖಾಂತರ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಸ್ತು ಶ್ರದ್ಧೆ ಏಕಾಗ್ರತೆ ರೂಢಿಸಿಕೊಳ್ಳಬೇಕು. ಶಿಸ್ತಿನ ಜೀವನ ಭವಿಷ್ಯದಲ್ಲಿ ಉತ್ತಮ ಬದುಕಿಗೆ ದಾರಿಯಾಗಲಿದೆ. ಹೀಗಾಗಿ ನಿರ್ಲಕ್ಷ್ಯ ಮಾಡದೆ ಪರಿಶ್ರಮದಿಂದ ಮೇಲೆ ಬರಬೇಕು ಎಂದು ರಾಮಚಂದ್ರ ಕಿವಿಮಾತು ಹೇಳಿದರು.
ಧ್ವಜಾರೋಹಣ ನೆರವೇರಿಸಿ ತದನಂತರ ಚೆಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯ. ಇಂದಿನ ಸೋಲಿನ ಮೆಟ್ಟಿಲು ಮುಂದೆ ಜಯಶೀಲರಾಗುವ ಹಂತಕ್ಕೆ ತಲುಪಿರುವ ಅನೇಕ ನಿದರ್ಶನಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡಾಮನೋಭಾವದಿಂದ ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದು ಹುರುಪು ತುಂಬಿದರು.
ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಜಿಲ್ಲೆ ಹಾಗೂ ರಾಜ್ಯವನ್ನು ಪ್ರತಿನಿಧಿಸಿ ಕೀರ್ತಿ ತರುವಂತಾಗಬೇಕು. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ನಿರಂತರವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದೇಶಕರಾದ ರೆಜಿನಾ ಮೆಲಾಕಿ, ಪ್ರಾಂಶುಪಾಲರಾದ ಮಂಜು ಕೋಡಿಉಗನೆ, ಬಂಗಾರು ನಾಯಕ, ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು

ಸಾಲ ಸೌಲಭ್ಯ ಅರ್ಜಿದಾರರಿಗೆ ಸಂದರ್ಶನ

ಚಾಮರಾಜನಗರ, ಸೆ. 18:- ಚಾಮರಾಜನಗರಸಭೆಗೆ  ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಡೇನಲ್ಮ್ ಅಡಿ ವೈಯಕ್ತಿಕ ಸಾಲ ಹಾಗೂ ಗುಂಪು ಸಾಲ ಯೋಜನೆ (ಬಡ್ಡಿ ಸಹಾಯಧನ) ಗೆ ಅರ್ಜಿ ಸಲ್ಲಿಸಿರುವವರು ಸೆಪ್ಟೆಂಬರ್ 21ರಂದು ನಡೆಯಲಿರುವ ಟಾಸ್ಕ್ ಫೋರ್ಸ್ ಕಮಿಟಿ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಈಗಾಗಲೇ ಅಂಚೆ ಹಾಗು ಮೊಬೈಲ್ ಮೂಲಕ ಅರ್ಜಿದಾರರಿಗೆ ಸಂದೇಶ ಕಳುಹಿಸಲಾಗಿದೆ. ಅಂಚೆಪತ್ರ ಹಾಗೂ ಮೆಸೇಜ್ ತಲುಪದೇ ಇರುವ ಅರ್ಜಿದಾರರು ಕಮಿಟಿ ಸಭೆಗೆ ಹಾಜರಾಗಿ ಸೌಲಭ್ಯ ಪಡೆಯಬಹುದೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 20ರಂದು ಗುಂಬಳ್ಳಿಯಲ್ಲಿ ಚಿಗುರು ಕಾರ್ಯಕ್ರಮ 

ಚಾಮರಾಜನಗರ, ಸೆ. 18 - ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಬಾಲ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮವನ್ನು ಸೆಪ್ಟಂಬರ್ 20ರಂದು ಬೆಳಗ್ಗೆ 11 ಗಂಟೆಗೆ ಯಳಂದೂರು ತಾಲೂಕಿನ ಗುಂಬಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಎಸ್. ಜಯಣ್ಣ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಸದಸ್ಯರಾದ ಯೋಗೇಶ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಂ. ನಂಜುಂಡಯ್ಯ, ಉಪಾಧ್ಯಕ್ಷರಾದ ಪದ್ಮಾವತಿ, ಗುಂಬಳ್ಳಿ ತಾಲೂಕು ಪಂಚಾಯಿತಿ ಸದಸ್ಯರಾದ ಭಾಗ್ಯಮ್ಮ ನಂಜಯ್ಯ, ಯರಗಂಬಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಜಿ. ಗೌರಮ್ಮ, ಉಪಾಧ್ಯಕ್ಷರಾದ ಎಂ. ಸುಧಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮಾಮಹೇಶ್ವರಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ರಫ್ತು ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 18:- ರಾಜ್ಯ ಸರ್ಕಾರ ರಫ್ತುದಾರರನ್ನು ಉತ್ತೇಜಿಸುವ ಸಲುವಾಗಿ ನೀಡಲಿರುವ 2015-16ನೇ ಸಾಲಿನ ಶ್ರೇಷ್ಠ ರಫ್ತುದಾರ ಪ್ರಶಸ್ತಿಗೆ ಜಿಲ್ಲೆಯ ಸಣ್ಣ ಮತ್ತು ಭಾರಿ, ಅತಿ ಸಣ್ಣ, ಮದ್ಯಮ ಕೈಗಾರಿಕೆಗಳಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅರ್ಜಿ ಆಹ್ವಾನಿಸಿದೆ.
ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳು (ಕಾಫಿ, ಗೋಡಂಬಿ, ಸಾಂಬಾರ ಪದಾರ್ಥಗಳನ್ನು ಒಳಗೊಂಡು), ಸಿದ್ಧ ಉಡುಪುಗಳು (ಹತ್ತಿ, ಉಣ್ಣೆ, ರೇಷ್ಮೆ ಒಳಗೊಂಡು), ಖನಿಜಗಳು ಮತ್ತು ಖನಿಜ ಮೂಲಕ ಉತ್ಪನ್ನಗಳು (ಕಬ್ಬಿಣ ಅದಿರು ಹೊರತುಪಡಿಸಿ), ಜವಳಿ ಉತ್ಪನ್ನಗಳು (ಹತ್ತಿ, ಉಣ್ಣೆ, ರೇಷ್ಮೆ ಒಳಗೊಂಡು), ಪೆಟ್ರೋಲಿಯಂ ಹಾಗೂ ಇದರ ಉತ್ಪನ್ನಗಳು, ರತ್ನ ಮತ್ತು ಆಭರಣಗಳು, ಚರ್ಮದ ಉತ್ಪನ್ನಗಳು, ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ಸ್ (ಐಟಿ, ಬಿಟಿ ಮತ್ತು ಐಟಿಇಎಸ್ ವಲಯ ಹೊರತುಪಡಿಸಿ), ವಿದ್ಯುತ್ ಸಲಕರಣೆಗಳು, ಕರಕುಶಲ ವಸ್ತುಗಳು (ಕಲೆ, ಕ್ರಾಫ್ಟ್ ಒಳಗೊಂಡಂತೆ), ಎಂಜಿನಿಯರಿಂಗ್ ಉತ್ಪನ್ನಗಳು (ಮೆಷಿನ್ ಟೂಲ್ಸ್, ಆಟೋಮೊಬೈಲ್, ಏರೋಸ್ಪೇಸ್ ಒಳಗೊಂಡಂತೆ), ರಾಸಾಯನಿಕ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು, ಸಾಗರೋತ್ಪನ್ನಗಳು, ಸೇವೆಗಳು (ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ, ಆತಿಥ್ಯ ಮತ್ತು ಎಂಜಿನಿಯರಿಂಗ್), ಕೈಗಾರಿಕೆಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿನಿರ್ದೇಶಕರ ಕಚೇರಿ (ಕೊಠಡಿ ಸಂಖ್ಯೆ 323 ಹಾಗೂ 324)ಯಲ್ಲಿ ಅಥವಾ ವೆಬ್ ಸೈಟ್ ತಿತಿತಿ.iಟಿvesಣಞಚಿಡಿಟಿಚಿಣಚಿಞಚಿ.ಛಿo.iಟಿ, hಣಣಠಿs://ತಿತಿತಿ.vಣಠಿಛಿಞಚಿಡಿಟಿಚಿಣಚಿಞಚಿ.ಛಿo.iಟಿ, ತಿತಿತಿ.ಞಛಿಣu.ಞಚಿಡಿ.ಟಿiಛಿ.iಟಿ ನಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ನಗರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಭಾರಿ ವಾಹನ ಚಾಲನಾ ತರಬೇತಿಗೆ ಪ.ಜಾ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 

ಚಾಮರಾಜನಗರ, ಸೆ. 18 - ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ನಿರುದ್ಯೋಗಿ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಭಾರಿ ವಾಹನ ಚಾಲನೆ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು. 21ರಿಂದ 35ರ ವಯೋಮಿತಿಯೊಳಗಿರಬೇಕು. ಕನಿಷ್ಟ 160 ಸೆಂ.ಮೀ. ಎತ್ತರ, 50 ಕೆಜಿ ತೂಕ ಇರಬೇಕು. ಅಂಗವಿಕಲರಾಗಿರಬಾರದು. ಜಿಲ್ಲಾ ವೈದ್ಯಧಿಕಾರಿಗಳಿಂದ ದೃಢೀಕರಿಸಿದ ದೈಹಿಕ ಅರ್ಹತೆ ಪ್ರಮಾಣಪತ್ರ ಲಗತ್ತಿಸಬೇಕು. ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮೀರಿರಬಾರದು. ಲಘು ಪರವಾನಗಿ ಪಡೆದು ಒಂದು ವರ್ಷ ತುಂಬಿರಬೇಕು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 3ರೊಳಗೆ ಸಲ್ಲಿಸಬೇಕು. ಸಂಪೂರ್ಣ ವಿವರಗಳಿಗೆ ಸದರಿ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ತಾತ್ಕಾಲಿಕ ಆಯ್ಕೆ ಪಟ್ಟಿ : ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನ
ಚಾಮರಾಜನಗರ, ಸೆ. 18 - ತಾಲೂಕಿನ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇದ್ದ 2 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 3 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 23ರೊಳಗೆ ಸಂತೆಮರಹಳ್ಳಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಿಗೆ ಲಿಖಿತವಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.








01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು