ನಮ್ಮೂರ ಸೈನಿಕನಿಗೊಂದು ಸಲಾಂ, ಗಡಿ ಕಾದು, ಗಡಿ ತಲುಪಿದ ವೀರ ಸೈನಿಕ
WRITTEN BY...ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ (ಚಿತ್ರಗಳು ರಾಮಸಮುದ್ರ, ಎಸ್.ವೀರಭದ್ರಸ್ವಾಮಿ ಹಾಗೂ ಇತರ ಕುಟುಂಬ ಚಿತ್ರಗಳು ಕುಟುಂಬದವರೇ ಆದ . ಎಲ್.ಐ.ಸಿ. ಶ್ರೀನಿವಾಸ್ ಅವರಿಂದ ಸಂಗ್ರಹಿಸಲಾಗಿದೆ)
ಚಾಮರಾಜನಗರ: ದೇಶದಲ್ಲಿ ಅಪ್ರಾಮಾಣಿಕ ಜನ ಇರಬಹುದು, ಆದರೆ ಯೋಧ ಎಂದು ಇರಲಾರ. ತಾನು ದೇಶಕ್ಕಾಗಿ ಸೇವೆ ಸಲ್ಲಿಸಲು ಬಂದಿದ್ದೇನೆ. ದೇಶಕ್ಕಾಗಿ ನನ್ನ ಪ್ರಾಣ. ಸತ್ತರೆ ಭಾರತ ಮಾತೇಯ ಮಡಿಲೇ ನನ್ನ ಸ್ಥಳ ಎಂದು ನಂಬಿ ದೇಶ ಕಾಯಲು ಹೊರಟ ಹಾಗೂ ಹಾಗೂ ವಾಪಸ್ ಬಂದ ವೀರ ಯೋಧರಿಗೆ ನಮ್ಮ ನಮನಗಳು .
***********************************
.
ಶಿಸ್ತಿನಲ್ಲಿ ಆಂತರಿಕ ಸೈನಿಕರಾಗಿ ಪೋಲೀಸರಿದ್ದರೆ, ಗಡಿಯಲ್ಲಿ ನಮ್ಮ ವೀರ ಯೋಧರು ಶತ್ರುಗಳ ಸದೆಬಡಿದು ಭಾರತದಲ್ಲಿನ ಜನರು ಶಾಂತಿಯಿಂದ ಮಲಗುತ್ತಿದ್ದೇವೆ ಎಂದರೆ ಅದು ವೀರ ಯೋಧರಿಂದ ಸಾದ್ಯ ಅಂತಹವರಲ್ಲಿ ನಮ್ಮ ಹೆಮ್ಮೆಯ ವೀರಪುತ್ರ ಚಾಮರಾಜನಗರದ ಸೈನಿಕರಾದ ಮಂಜುನಾಥ್. ಆರ್ ಅವರ ಚಿತ್ರಣವನ್ನು ನಮ್ಮ ಓದುಗರಿಗೆ ನಮ್ಮ ಪ್ರತಿನಿದಿ ಎಸ್.ವೀರಭದ್ರಸ್ವಾಮಿ ಅವರು ತೆರೆದಿಟ್ಟಿದ್ದಾರೆ.
**********************************
ಚಾಮರಾಜನಗರಕ್ಕೆ ತಲುಪಿದಾಗ ಚಾಮರಾಜೇಶ್ವರ ದೇವಾಲಯದ ಮುಂಬಾಗ ನಮಸ್ಕರಿಸಿದ ದೃಶ್ಯ. ಚಿತ್ರ..ಎಸ್.ವಿ.ಎಸ್. |
ಚಾಮರಾಜನಗರ ಜಿಲ್ಲೆಯ ಚಾಮರಾಜನಗರದ ತಾಲ್ಲೂಕಿನ ಪಟ್ಟಣದ ದೇವಾಂಗದ ಬೀದಿಯ ನಿವಾಸಿಯಾದ ಶ್ರೀಯುತ ಸಿ.ಎಸ್.ರಂಗಸ್ವಾಮಿ ಹಾಗೂ ಶ್ರೀಯುತ ಮಂಗಳಮ್ಮ ಎಂಬುವವರ ದ್ವಿತೀಯ ಪುತ್ರ ಆಗಿರುವ ಆರ್.ಮಂಜುನಾಥ್ ಓದುವಾಗಲೇ ಸೈನಿಕನಾಗಬೇಕೆಂಬ ಆಸೆಯಂತೆ ಸೈನ್ಯ ಸೇರಿ ದೇಶ ಕಾದು 22 ವರ್ಷಗಳ ಕಾಲ ಸೇವೆ ಸಲ್ಲಿಸಿ . ಈಗ ಮರಳಿ ಸ್ವಸ್ಥಾನ,ಮಾತೃನಾಡು ಚಾಮರಾಜನಗರಕ್ಕೆ ವಾಪಸ್ ಆಗಿದ್ದಾರೆ.
ಪೆಬ್ರವರಿ 10 , 1977 ರಂದು ಚಾಮರಾಜನಗರದಲ್ಲಿ ಜನಿಸಿದ ಇವರು ನಗರದ ಅಂಗಡಿ ಬೀದಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಯನ್ನು, ಪ್ರೌಡ ಪ್ರಾಥಮಿಕ ಶಿಕ್ಷಣವನ್ನು ಬಾಲಕರ ಸರ್ಕಾರಿ ಪ್ರೌಡಶಾಲೆಯಲ್ಲೂ, ಪ್ರೌಡಶಾಲೆ ವ್ಯಾಸಂಗವನ್ನು ಜೆ.ಎಸ್.ಎಸ್ ಪ್ರೌಡಶಾಲೆಯಲ್ಲೂ, ಕಾಲೇಜಿನ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.
ಸೇನೆ ಅಭ್ಯರ್ಥಿಯ ಆಯ್ಕೆಯು ಮೈಸೂರಿನಲ್ಲಿ ನಡೆದು, 1996 ಏಪ್ರಿಲ್ 30 ರಂದು ಸೇನೆಗೆ ಭರ್ತಿಯಾದ ಇವರು, ಬೆಳಗಾವಿಯ ಮರಾಠ ಲೈಟ್ ಇನ್ಪ್ಯಾಟ್ರಿ ರಿಜಿಮಿನ್ ಸೆಂಟರ್ ಹೋಗಿ ಒಂದು ವರ್ಷ ಕಾಲ ತರಬೇತಿ ಮುಗಿಸಿ, ಗುಜರಾತ್‍ಗೆ ಪ್ರಥಮ ವರ್ಗಾವಣೆಯಾಗಿ 1997 ರಿಂದ 1998 ರವರೆಗೆ ಸೇವೆ ಸಲ್ಲಿಸಿದರು.
1998 ನವೆಂಬರ್ ಗೆ ಜಮ್ಮು ಕಾಶ್ಮೀರ ಪೂಂಚ್ (ಪೂಂಚ್ ಸೆಕ್ಟರ್ ) ಲೈನ್ ಆಫ್ ಕಂಟ್ರೋಲ್ ಅಲ್ಲಿ 2002 ರ ವರೆಗೆ ಸೇವೆ ಸಲ್ಲಸಿ, 1999 ವಿಜಯ್ ಪೂಂಚ್ ಅಲ್ಲಿ ಸೇವೆ ಸಲ್ಲಿಸಿದ್ದಾರೆ.ಆಗಸ್ಟ್ 2002 ರಿಂದ ಜನವರಿ 2005 ವರೆಗೆ ಫೈಝಾಬಾದ್, ಜುಲೈ 2005 ರಿಂದ ಏಪ್ರಿಲ್2006 ಜೆ.&ಕೆ, ರಜೋರಿ ಸೆಕ್ಟರ್ ಅಲ್ಲಿ, ಮೇ2006 ರಿಂದ ಅಕ್ಟೋಬರ್ 2006 ರಲ್ಲಿ ಅಮರನಾಥಯಾತ್ರೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.
ನವೆಂಬರ್ 2006 ರಿಂದ ಜೂನ್ 2008 ಉರಿ ಸೆಕ್ಟರ್ (ಲೈನ್ ಆಫ್ ಕಂಟ್ರೋಲ್ (ಜೆ&ಕೆ)), ಅಲ್ಲೂ, ಜುಲೈ 2008 ರಿಂದ ಆಗಸ್ಟ್ 2011 ವರೆಗೆ ದೆಹಲಿಯಲ್ಲೂ, ಸೆಪ್ಟೆಂಬರ್ 2011 ರಿಂದ ಅಕ್ಟೋಬರ್ 2012 ಉರಿ ಸೆಕ್ಟರ್, ನವೆಂಬರ್ 2012 ರಿಂದ ಜುಲೈ 2014 ವರೆಗೆ (41 ಆರ್.ಆರ್(ಜೆಕೆ)) ಕುಪವಾಡ ಅಲ್ಲಿಯೂ ಸೇವೆ ಸಲ್ಲಿಸಿದ್ದಾರೆ
ನವೆಂಬರ್ 2, 2014 ರಿಂದ 2015 ಜುಲೈ11 ರವರೆಗೆ ಯು.ಎನ್.ಮಿಷನ್ಸ, ಸೌಥ್ ಸುದನ್ ಅಲ್ಲಿಯೂ, ಆಗಸ್ಟ್ 2015 ರಿಂದ ಡಿಸೆಂಬರ್ 2017 ವರೆಗೆ ಗುಜರಾತ್ ಮತ್ತು ರಾಜಸ್ಥಾನ್ ಅಲ್ಲೂ, ಜನವರಿ 2018 ರಿಂದ ಜೂನ್ 2018 ವರೆಗೆ ಅರುಣಾಚಲ ಪ್ರದೇಶದಲ್ಲೂ, ಜುಲೈ 2018 ರಲ್ಲಿ ಬೆಳಗಾವಿಯ ದಿ ಮರಾಠ ರಿಜಿಮೆಂಟ್ ಸೆಂಟರ್ ಯಿಂದ ಸೇನಾ ವೃತ್ತಿಯಿಂದ ನಿವೃತ್ತಿಯಾಗಿ ಚಾಮರಾಜನಗರಕ್ಕೆ ಬಂದರು .
(ಸೂಚನೆ: ನಮ್ಮ ಗಮನಕ್ಕೆ ಬಾರದೇ ಕೆಲವು ಪೋಟೋ ನಕಲಿಸುವುದು ಕಂಡು ಬಂದರೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಬದ್ದರಾಗಿದ್ದೇವೆ. . ಇಂತಿ ಬರಹಗಾರರು. ಎಸ್.ವೀರಭದ್ರಸ್ವಾಮಿ)
(ಸೂಚನೆ: ನಮ್ಮ ಗಮನಕ್ಕೆ ಬಾರದೇ ಕೆಲವು ಪೋಟೋ ನಕಲಿಸುವುದು ಕಂಡು ಬಂದರೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಬದ್ದರಾಗಿದ್ದೇವೆ. . ಇಂತಿ ಬರಹಗಾರರು. ಎಸ್.ವೀರಭದ್ರಸ್ವಾಮಿ)
No comments:
Post a Comment