ನಗರಸಭೆ ಚುನಾವಣೆ : ಚೆಕ್‍ಪೋಸ್ಟ್ ತಂಡಗಳ ರಚನೆ
ಚಾಮರಾಜನಗರ ಅ11 : ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಹಿನ್ನಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟು ಅನುಷ್ಠಾನ ಹಾಗೂ ಚುನಾವಣಾ ಅಪರಾಧ ತಡೆಯುವ ಸಲುವಾಗಿ ಚೆಕ್‍ಪೋಸ್ಟ್ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.ಚಾಮರಾಜನಗರ ಸಭೆ ವ್ಯಾಪ್ತಿ ಚೆಕ್‍ಪೋಸ್ಟ್ ಹೆಸರು, ತಂಡದ ಅಧಿಕಾರಿಗಳ ವಿವರ : 1.ಗುಂಡ್ಲುಪೇಟೆ ರಸ್ತೆ, ಪೆಟ್ರೋಲ್ ಬಂಕ್ ಮುಂಭಾಗ - ಪ್ರವೀಣ್ ಕುಮಾರ್, ಗ್ರಾಮಲೆಕ್ಕಾಧಿಕಾರಿ, ಬಸಾವಪುರ (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ಸುರೇಶ್ ಗ್ರಾಮಲೆಕ್ಕಾಧಿಕಾರಿ, ಬೇಡಗುಳಿ, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ರಾಜೇಶ್ ನಾಯ್ಕ, ಗ್ರಾಮಲೆಕ್ಕಾಧಿಕಾರಿ, ಪುಣಜನೂರು (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ)
2.ಸತ್ತಿ ರಸ್ತೆ, ಮಾಯಾ ಹೋಟೆಲ್ ಮುಂಬಾಗ – ರಾಜಶೇಖರ ಮೂರ್ತಿ, ಗ್ರಾಮಲೆಕ್ಕಾಧಿಕಾರಿ, ಹೆಬ್ಬಸೂರು (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ವಿಜಯ್ ಕುಮಾರ್ ಗಾಜಿ, ಗ್ರಾಮಲೆಕ್ಕಾಧಿಕಾರಿ, ಕಿಲಗೆರೆ (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ಸಚಿನ್ ಮಿರ್ಜಾಕರ್, ಗ್ರಾಮಲೆಕ್ಕಾಧಿಕಾರಿ, ಅರಕಲವಾಡಿ, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ)
3. ದೊಡ್ಡರಾಯಪೇಟೆ ಅಡ್ಡ ರಸ್ತೆ, ಸಂತೆಮರಹಳ್ಳಿ ರಸ್ತೆ – ಗಂಗಾಧರ, ಗ್ರಾಮಲೆಕ್ಕಾಧಿಕಾರಿ, ದೊಡ್ಡಮೋಳೆ, (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ಗುರುಸಿದ್ದಪ್ಪ, ಗ್ರಾಮಲೆಕ್ಕಾಧಿಕಾರಿ, ಯಾನಗಹಳ್ಳಿ, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ನಂದೀಶ್, ಗ್ರಾಮಲೆಕ್ಕಾಧಿಕಾರಿ, ಮಸಗಾಪುರ, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ)
4.ನಂಜನಗೂಡು ರಸ್ತೆ, ಕಾಳನಹುಂಡಿ ಕ್ರಾಸ್ ಹತ್ತಿರ, ಕಮಾನುಗೇಟ್- ರೇವಣ್ಣ, ಗ್ರಾಮಲೆಕ್ಕಾಧಿಕಾರಿ, ಹರವೆ, (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ಷಡಕ್ಷರಿ, ಗ್ರಾಮಲೆಕ್ಕಾಧಿಕಾರಿ,ಯರಗನಹಳ್ಳಿ, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ಯದುಗಿರಿ, ಗ್ರಾಮಲೆಕ್ಕಾಧಿಕಾರಿ, ಅಮಚವಾಡಿ, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ)
5.ಚಂದಕವಾಡಿ ರಸ್ತೆ, ಹಾಲಿನ ಡೈರಿ ಮುಂಬಾಗ – ರಾಜೇಂದ್ರ ಪ್ರಸಾದ್, ಗ್ರಾಮಲೆಕ್ಕಾಧಿಕಾರಿ, ಹುಲ್ಲೇಪುರ, (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ರಮೇಶ್, ಗ್ರಾಮಲೆಕ್ಕಾಧಿಕಾರಿ, ಕೂಡ್ಲೂರು, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ನಾಗೇಶ್ ಮೂರ್ತಿ, ಗ್ರಾಮಲೆಕ್ಕಾಧಿಕಾರಿ, ಹೊಂಗನೂರು, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ)
ಕೊಳ್ಳೇಗಾಲ ನಗರ ಸಭೆ ವ್ಯಾಪ್ತಿ ಚೆಕ್‍ಪೋಸ್ಟ್ ಹೆಸರು, ತಂಡದ ಅಧಿಕಾರಿಗಳ ವಿವರ : 1.ಮುಡಿಗುಂಡ ಸೇತುವೆ ಬಳಿ - ನಾಗೇಶ್, ಗ್ರಾಮಲೆಕ್ಕಾಧಿಕಾರಿ, ಧನಗೆರೆ (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ಪ್ರಸಾದ್, ಗ್ರಾಮಲೆಕ್ಕಾಧಿಕಾರಿ, ಸಿಂಗಾನಲ್ಲೂರು, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ಕುಮಾರ್, ಗ್ರಾಮಲೆಕ್ಕಾಧಿಕಾರಿ, ಇಕ್ಕಡಹಳ್ಳಿ, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ).
2. ಹೂಸ ಹಂಪಾಪುರ : ಶಿವಕುಮಾರ್, ಗ್ರಾಮಲೆಕ್ಕಾಧಿಕಾರಿ,ಮಧುವನಹಳ್ಳಿ, (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ಶಾಂತರಾಜು, ಗ್ರಾಮಲೆಕ್ಕಾಧಿಕಾರಿ, ಪೂನ್ನಾಚಿ, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ಶಿವಣ್ಣ, ಗ್ರಾಮಲೆಕ್ಕಾಧಿಕಾರಿ, ಚೆನ್ನಾಲಿಂಗನಹಳ್ಳಿ, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ).
3.ಹೂಸ ಅಣಗಳ್ಳಿ : ಪದ್ಮಪ್ರಸನ್ನಸುಹಾರ್,ಗ್ರಾಮಲೆಕ್ಕಾಧಿಕಾರಿ,ಉಗನೀಯ, (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ಶರವಣ ಕುಮಾರ್,ಗ್ರಾಮಲೆಕ್ಕಾಧಿಕಾರಿ,ಹೂಗ್ಯಂ, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ಹೊಂಬೆಗೌಡ,ಗ್ರಾಮಲೆಕ್ಕಾಧಿಕಾರಿ, ಅಜ್ಜೀಪುರ, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ).
4.ಸಿದ್ದಯ್ಯನಪುರ : ಜಯರಾಮು,ಗ್ರಾಮಲೆಕ್ಕಾಧಿಕಾರಿ,ಹೊಂಡರಬಾಳು, (ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ), ಮಲ್ಲೇಶ್, ಗ್ರಾಮಲೆಕ್ಕಾಧಿಕಾರಿ,ಹನೂರು, (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ), ಬಿ.ಕುಮಾರ್, ಗ್ರಾಮಲೆಕ್ಕಾಧಿಕಾರಿ, ಬೆಳತ್ತೂರು, (ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ).
ಪ್ರತಿ ತಂಡದಲ್ಲಿ ಓರ್ವ ಎ.ಎಸ್.ಐ, ಪೊಲೀಸ್ ಕಾನ್ಸ್‍ಟೇಬಲ್, ಹೋಮ್‍ಗಾರ್ಡ್ ಇರಲಿದ್ದಾರೆ.
ನಗರಸಭೆ ಚುನಾವಣೆ : ಎರಡನೇ ದಿನವು ಯಾವುದೇ ನಾಮ ಪತ್ರ ಸಲ್ಲಿಕೆಯಿಲ್ಲ
ಚಾಮರಾಜನಗರ ಅ11 ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಎರಡನೇ ದಿನವಾದ ಇಂದು ಸಹ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.ಅಗಸ್ಟ್ 13ರಂದು ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಸಮಾರಂಭ
ಚಾಮರಾಜನಗರ ಅ11: ತಾಲ್ಲೂಕಿನ ಮಾದಾಪುರ ಬಳಿ ನಿರ್ಮಾಣವಾಗಿರುವ ಕೇಂದ್ರಿಯ ವಿದ್ಯಾಲಯದ ನೂತನ ಕಟ್ಟಡ ಹಾಗೂ ಸಿಬ್ಬಂದಿ ವರ್ಗದ ವಸತಿಗೃಹಗಳ ಉದ್ಘಾಟನ ಸಮಾರಂಭವು ಅಗಸ್ಟ್ 13 ರಂದು ಮಧ್ಯಾಹ್ನ 12 ಗಂಟೆಗೆ ಮಾದಾಪುರ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ನಡೆಯಲಿದೆ.
ಕೇಂದ್ರ ರಾಸಾಯನಿಕ, ರಸಗೊಬ್ಬರಗಳು ಮತ್ತು ಸಂಸತ್ತಿನ ವ್ಯವಹಾರಗಳ ಸಚಿವರಾದ ಅನಂತ್ ಕುಮಾರ್ ಅವರು ನೂತನ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಾಣ ಅವರು ಸಿಬ್ಬಂದಿ ವಸತಿ ಗೃಹಗಳ ಉದ್ಘಾಟನೆ ನೆರವೇರಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪೌಢಶಿಕ್ಷಣ ಇಲಾಖೆ ಸಚಿವರಾದ ಎನ್.ಮಹೇಶ್ ಅವರು ಜ್ಯೋತಿ ಬೆಳಗಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಶಾಸಕರಾದ ಆರ್.ನರೇಂದ್ರ, ಸಿ.ಎಸ್.ನಿರಂಜನ್ ಕುಮಾರ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಎಸ್.ನಾಗರಾಜು(ಸಂದೇಶ್ ನಾಗರಾಜು), ಆರ್.ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ.ಯೋಗೀಶ್, ಸದಸ್ಯರಾದ ಸಿ.ಎನ್.ಬಾಲರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ದೂಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಸದಸ್ಯರಾದ ಪುಪ್ಪಲತಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಎಸ್.ಸಿದ್ದರಾಜು ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮಂದರ್ ಕುಮಾರ್ ಮೀನಾ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉಪಾಧ್ಯಕ್ಷರಾದ ಡಾ|| ಪಿ.ದೇವಕುಮಾರ್ ವಿಶೇಷ ಅಹ್ವಾನಿತರಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ.
ಆಗಸ್ಟ್ 14 ರಂದು ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಪೂರ್ವಭಾವಿ ಸಭೆ
ಚಾಮರಾಜನಗರ ಅ11 ಜಿಲ್ಲಾಡಳಿತ ವತಿಯಿಂದ ಡಿ.ದೇವರಾಜ ಅರಸು ಅವರ 103ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಗಸ್ಟ್ 14ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರತಿನಿಧಿಗಳು, ಡಿ.ದೇವರಾಜು ಅರಸು ಅವರ ಅಭಿಮಾನಿಗಳು, ಹಿಂದುಳಿದ ವರ್ಗಗಳ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕಾರ್ಯಕ್ರಮ ಆಯೋಜನೆ ಕುರಿತು ಚರ್ಚಿಸಲು ಸಭೆ ನಿಗದಿಯಾಗಿದೆ. ಸದರಿ ಸಭೆಗೆ ಎಲ್ಲರೂ ಆಗಮಿಸಿ ಸಲಹೆ ಅಭಿಪ್ರಾಯ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಆಗಸ್ಟ್ 14 ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಪೂರ್ವಭಾವಿ ಸಭೆ
ಚಾಮರಾಜನಗರ ಅ11: ಜಿಲ್ಲಾಡಳಿತ ವತಿಯಿಂದ ಬ್ರಹಶ್ರೀ ನಾರಾಯಣಗುರು ಅವರ ಜಯಂತಿ ಆಚರಿಸುವ ಕುರಿತು ಚರ್ಚಿಸಲು ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಗಸ್ಟ್ 14ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಈ ಸಭೆಗೆ ಸಂಘ ಸಂಸ್ಥೆ ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಸಮುದಾಯದವರು ಹಾಜರಾಗಿ ಸಲಹೆ ನೀಡುವಂತೆ ಕನ್ನಡ ಮತ್ತು ಸಂಸ್ರøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ನಗರಸಭೆ ಚುನಾವಣೆ : ಬಂದೂಕು, ಶಸ್ತ್ರ ಠೇವಣಿ ಮಾಡಲು ಸೂಚನೆ
ಚಾಮರಾಜನಗರ ಅ11 ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಸಂಬಂಧಪಟ್ಟ ಪಟ್ಟಣ ವ್ಯಾಪ್ತಿಯ ಎಲ್ಲಾ ಶಸ್ತ್ರ ಬಂದೂಕು ಪರವಾನಗಿದಾರರು ಶಸ್ತ್ರ ಬಂದೂಕುಗಳನ್ನು ಸಂಬಂಧಪಟ್ಟ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶಿಸಿದ್ದಾರೆ.ಚುನಾವಣಾ ಘೋಷಿತ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ ಬಂದೂಕುಗಳನ್ನು ತರುವುದನ್ನು ನಿಷೆದಿಸಲಾಗಿದೆ. ಈ ಆದೇಶವು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಸೆಪ್ಟೆಂಬರ್ 3 ರವರೆಗೂ ಜಾರಿಯಲ್ಲಿರುತ್ತದೆ. ಸದರಿ ಆದೇಶವನ್ನು ಉಲ್ಲಂಘಿಸಿದಲ್ಲಿ ಆಮ್ರ್ಸ್ ಆಕ್ಟ್ 1959 ರ ರೀತ್ಯಾ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಬ್ಯಾಂಕುಗಳು, ಸರ್ಕಾರಿ ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಹೊಂದಿರುವ ಶಸ್ತ್ರ, ಬಂದೂಕುಗಳಿಗೆ ಹಾಗೂ ವೈಯಕ್ತಿಕವಾಗಿ ಜೀವ ಬೆದರಿಕೆ ಹೊಂದಿರುವವರು ಆಯುಧಗಳನ್ನು ಅತ್ಯಗತ್ಯವಾಗಿ ಅವರಲ್ಲೇ ಇಟ್ಟುಕೊಳ್ಳುವ ಅನಿವಾರ್ಯತೆಯ ಸಕಾರಣಗಳೊಂದಿಗೆ ಸಂಬಂಧಿಸಿದ ವ್ಯಾಪ್ತಿ ಪ್ರದೇಶದ ಪೋಲಿಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಬೇಕು. ಸದರಿ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಗಳ ಆಧಾರದನ್ವಯ ಪೋಲಿಸ್ ಠಾಣೆಯ ಮುಖ್ಯಸ್ಥರ ಜವಬ್ದಾರಿ ಮೇಲೆ ಆಯುಧಗಳನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
No comments:
Post a Comment