Thursday, 9 August 2018

ಮಾಹಿತಿ ಹಕ್ಕು ಕುರಿತು ತಿಳಿವಳಿಕೆ ಹೊಂದಿ : ಮುಖ್ಯ ಮಾಹಿತಿ ಆಯುಕ್ತರ ಸಲಹೆ (09-08-20108)

ಮಾಹಿತಿ ಹಕ್ಕು ಕುರಿತು ತಿಳಿವಳಿಕೆ ಹೊಂದಿ : ಮುಖ್ಯ ಮಾಹಿತಿ ಆಯುಕ್ತರ ಸಲಹೆ 

ಚಾಮರಾಜನಗರ, ಆ. 09 - ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ, ಪಾರದರ್ಶಕತೆ ಕಾಪಾಡಿಕೊಳ್ಳುವ ಸಲುವಾಗಿ ಜಾರಿಗೆ ಬಂದಿರುವ ಮಾಹಿತಿ ಹಕ್ಕು ಅಧಿನಿಯಮದ ಕುರಿತು ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತಿಳಿವಳಿಕೆ ಹೊಂದಬೇಕೆಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಡಾ. ಸುಚೇತನ ಸ್ವರೂಪ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ಜತೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯಿದೆ ಅತ್ಯಂತ ಪ್ರಬಲವಾದ ಕಾಯಿದೆಯಾಗಿದೆ. ಸದುದ್ದೇಶದಿಂದ ಅನುಷ್ಠಾನಕ್ಕೆ ಬಂದಿರುವ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಸಂಪೂರ್ಣವಾಗಿ ಅಧಿಕಾರಿಗಳು ಅರಿವು ಹೊಂದಬೇಕಿದೆ. ಅರ್ಜಿದಾರರಿಂದ ಸ್ವೀಕರಿಸಲಾಗುವ ಅರ್ಜಿ ಹಾಗೂ ನೀಡಬೇಕಿರುವ ಮಾಹಿತಿ ವಿವರಗಳ ಕುರಿತು ಅಧಿನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಎಲ್ಲವನ್ನೂ ಸರಿಯಾಗಿ ಮನನ ಮಾಡಿಕೊಂಡರೆ ಅನಗತ್ಯವಾಗಿ ಗೊಂದಲಕ್ಕೆ ಈಡಾಗುವುದು ತಪ್ಪಲಿದೆ ಎಂದರು.
ಮಾಹಿತಿ ಕೋರಿ ಬರುವ ಅರ್ಜಿಗೆ 30 ದಿನಗಳ ಒಳಗೆ ಮಾಹಿತಿ ನೀಡಬೇಕು. ಸಿಬ್ಬಂದಿ ಕೊರತೆ, ಸಮಯ ಅಭಾವ ಇತರೆ ನೆಪ ಸಬೂಬು ಹೇಳಿ ಮಾಹಿತಿ ಕೊಡುವುದನ್ನು ನಿರಾಕರಿಸುವಂತಿಲ್ಲ. ಲಭ್ಯವಿರುವ ಮಾಹಿತಿಯನ್ನು ವಿಳಂಬಕ್ಕೆ ಅವಕಾಶವಿಲ್ಲದೆ ಅರ್ಜಿದಾರರಿಗೆ ಒದಗಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಆಯುಕ್ತರು ತಿಳಿಸಿದರು.
ಯಾವುದೇ ನೌಕರರ ಸೇವಾಪುಸ್ತಕ, ನೇಮಕಾತಿ ಆದೇಶದಂತಹ ದಾಖಲಾತಿಗಳನ್ನು ಮಾಹಿತಿ ಹಕ್ಕಿನಡಿ ನೀಡುವಂತಿಲ್ಲ. ಸಹಕಾರಿ ಸಂಸ್ಥೆ, ಸರ್ಕಾರದ ಅನುದಾನ ಪಡೆಯದ ಸಂಸ್ಥೆಗಳ ಮಾಹಿತಿಯನ್ನೂ ಸಹ ನೀಡುವಂತಿಲ್ಲ. ಆದರೆ ಸಹಕಾರಿ ಸಂಸ್ಥೆಗಳಿಗೆ ಕಾಮಗಾರಿ ಇತರೆ ಕೆಲಸಗಳನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದರೆ ಅಂತಹ ಮಾಹಿತಿಯನ್ನು ಯಾರ ವತಿಯಿಂದ ನೀಡಲಾಗಿರುತ್ತದೋ ಅದಕ್ಕೆ ಸಂಬಂಧಪಟ್ಟವರಿಂದ ಪಡೆಯಬಹುದಾಗಿದೆ ಎಂದರು.
ಮಾಹಿತಿ ನೀಡಲು ಕೋರಿಬರುವ ಅರ್ಜಿದಾರರಿಗೆ ಎಷ್ಟು ಪುಟಗಳ ಮಾಹಿತಿ ಒದಗಿಸಬೇಕಿದೆ ಎಂಬುದನ್ನು ನಿರ್ಧರಿಸಿ ಪ್ರತಿ ಪುಟಕ್ಕೆ 2 ರೂ.ಗಳಂತೆ ಶುಲ್ಕ ಪಡೆಯಬೇಕಾಗುತ್ತದೆ. ಅರ್ಜಿದಾರರ ವರಮಾನ ಕಡಿಮೆ ಇದ್ದಲ್ಲಿ 100 ಪುಟಗಳವರೆಗೆ ಮಾತ್ರ ಉಚಿತವಾಗಿ ಕೊಡಲು ಅವಕಾಶವಿದೆ. ಆದರೆ ಅರ್ಜಿದಾರರು ಇತ್ತೀಚಿನ ದೃಢೀಕೃತ ವರಮಾನ ಪ್ರಮಾಣ ಪತ್ರವನ್ನು ಲಗತ್ತಿಸಬೇಕಾಗುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ತನಿಖಾ ಹಂತದಲ್ಲಿರುವ ವಿಷಯಗಳನ್ನು ಒಳಗೊಂಡ ಮಾಹಿತಿಯನ್ನು ತನಿಖೆ ಪೂರ್ಣಗೊಳ್ಳುವವರೆಗೆ ನೀಡಲು ಅವಕಾಶವಿಲ್ಲ. ಯಾವುದೇ ಒಂದು ಇಲಾಖೆಗೆ ಮಾಹಿತಿ ಕೋರಿದಾಗ ಇತರೆ ಹಲವಾರು ಇಲಾಖೆಗಳಿಗೆ ವರ್ಗಾಯಿಸಿ ಕ್ರೋಡೀಕರಿಸಿ ಮಾಹಿತಿ ಕೊಡುವ ಹಾಗಿಲ್ಲ. ನÉೀರವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆಯಬಹುದಾಗಿದೆ ಎಂಬ ವಿಷಯವನ್ನು ಅರ್ಜಿದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಆಯುಕ್ತರು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

v
ನೀತಿಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯಕ್ರಮ ನಡೆಸಲು ಸೂಚನೆ

ಚಾಮರಾಜನಗರ, ಆ. 09 - ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನೀತಿಸಂಹಿತೆ ಜಾರಿಯಲ್ಲಿದ್ದರೂ ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬ ಹಾಗೂ ನಾಡಹಬ್ಬಗಳನ್ನು ಆಚರಿಸಲು ನೀತಿಸಂಹಿತೆ ಅಡ್ಡಿ ಇರುವುದಿಲ್ಲ. ಆದರೆ ಆಚರಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು, ಶಾಸಕರು, ಮಂತ್ರಿಗಳು ನೀತಿಸಂಹಿತೆಗೆ ಬಾಧಕವಾಗುವ ರೀತಿಯಲ್ಲಿ ಪಟ್ಟಣ ನಗರ ಪ್ರದೇಶದ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ, ಆಶ್ವಾಸನೆ ಇತ್ಯಾದಿಗಳನ್ನು ನೀಡುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗಮನ ಹರಿಸಿ ನೀತಿಸಂಹಿತೆ ಉಲ್ಲಂಘನೆಯಾದಂತೆ ಕಾರ್ಯಕ್ರಮ ನಡೆಸಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಬಿನಿಗೆ ಹೆಚ್ಚು ನೀರು : ಮುನ್ನೆಚ್ಚರಿಕೆ ವಹಿಸಲು ಡಿಸಿ ಸೂಚನೆ

ಚಾಮರಾಜನಗರ, ಆ. 09 - ಕಬಿನಿ ಜಲಾಶಯÀಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಜಲಾಶಯವು ಗರಿಷ್ಟ ಮಟ್ಟ ತಲುಪುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಾದರೂ ನದಿಗೆ ಹೆಚ್ಚು ನೀರು ಬಿಡುವ ಸಂಭವ ಇರುವ ಮಾಹಿತಿ ಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತ್ಲಿಯಲ್ಲಿ ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿ ವಾಸಿಸುತ್ತಿರುವ ಜನರು ಅವರ ಆಸ್ತಿಪಾಸ್ತಿ, ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ  ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ನಗರಸಭೆ ಚುನಾವಣೆ : ಮತಗಳ ಎಣಿಕೆ ದಿನಾಂಕ ಬದಲು
ಚಾಮರಾಜನಗರ, ಆ. 09- ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದ ಮತಗಳ ಎಣಿಕೆ ಕಾರ್ಯವು ಸೆಪ್ಟೆಂಬರ್ 1ರ ಬದಲಿಗೆ ಸೆಪ್ಟೆಂಬರ್ 3ರಂದು ನಡೆಸಲು ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.
ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರಪಾಲಿಕೆಗಳಿಗೆ ಇಂದು ಅಂದರೆ ಆಗಸ್ಟ್ 9ರಂದು ಆಯೋಗವು ಚುನಾವಣೆಯನ್ನು ಘೋಷಿಸಿದೆ. ಈ ಹಿನ್ನಲೆಯಲ್ಲಿ ಮಹಾನಗರಪಾಲಿಕೆಗಳು ಒಳಗೊಂಡಂತೆ ಎಲ್ಲಾ 108 ನಗರ, ಸ್ಥಳೀಯ ಸಂಸ್ಥೆಗಳ ಮತಗಳ ಎಣಿಕೆ ಕಾರ್ಯವನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದಿಂದ ಮತಗಳ ಎಣಿಕೆಯನ್ನು ಸೆಪ್ಟೆಂಬರ್ 1ರ ಬದಲಾಗಿ ಸೆಪ್ಟೆಂಬರ್ 3ರಂದು ನಡೆಸಲಾಗುತ್ತದೆ.
ಚುನಾವಣಾ ನೀತಿ ಸಂಹಿತೆಯು ಸೆಪ್ಟೆಂಬರ್ 3ರ ವರೆಗೂ ಜಾರಿಯಲ್ಲಿರುತ್ತದೆ. ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲವೆಂದು ರಾಜ್ಯ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.











No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು