ಮುಖ್ಯಮಂತ್ರಿಗಳೇ, ಇದೇನಾ 108 ನ ಅಮಾನವೀಯತೆ.!
ಮಾನವೀಯತೆ ಮೆರೆದ ಸಂಚಾರಿ ಮತ್ತು ಹೈ-ವೇ ಪ್ಯಾಟ್ರೋಲ್ ವಿಭಾಗದ,ಪೋಲೀಸರು
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ ಹರದನಹಳ್ಳಿ ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ಸಮಯ 11.15 ವೇಳೆಯಲ್ಲಿ ಅಪಘಾತವಾಗಿದೆ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು 108 ಕರೆ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಬರುವ ವೇಳೇಗಾಗಲೇ ನಮ್ಮ ಚಾಮರಾಜನಗರದ ಹೈವೆ.,ಪ್ಯಾಟ್ರಾಲ್ ಪೊಲೀಸರೆ ಅವರೇ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿ ಮೆರೆದಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಈರೋಡಿನ ಕೋವಿಲ್ ಪಾಲಯಂ ನ ವಿಜಯಮಂಗಲಂ ಮೂಲದ ಕಾರ್ತಿಕ್ ಮತ್ತು ಸೆಲ್ವಮಣಿಗೆ ಕಾರು ಡಿಕ್ಕಿಯಾದ ಪರಿಣಾಮ ರಸ್ತೆಯಲ್ಲಿ ಸತ್ತಂತೆ ಬಿದ್ದಿದ್ದಾರೆ ಆದರೆ ಅವರು ಸತ್ತಿರಲಿಲ್ಲ.. ಆವೇಳೆಗೆ ಕರೆ ಮಾಢಿದರೂ ಸರಿಯಾಗಿ ಸ್ಪಂದಿಸಲಿಲ್ಲ ಎಂಬುದು ಸಾರ್ವಜನಿಕರೋರ್ವರ ಆರೋಪವಾಗಿದೆ.
ಅಪಘಾತವಾದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಕೆಲಸ ಅವರದ್ದಾಗಿದ್ದು ಅಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ಮಾಢದೇ ಇರುವುದರಿಂಧ ಸಂಚಾರಿ ಪೊಲೀಸರು ಅವರೇ ಖುದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾರ್ವಜನಿಕರೋರ್ವರು ಆರೋಪಿಸುವಂತೆ 108 ಬರುತ್ತಿದೆ ಆದರೆ ಸತ್ತಿದ್ದರೆ ಬರೋಲ್ಲ ಎಂದು ತಟಸ್ಥರಾಗಿ ಉಳಿದಿದ್ದಾರೆ ಎಂದು ಹೇಳುತ್ತಿದ್ದು 108 ವಾಹನ ವ್ಯವಸ್ಥೆಯು ನಮಗೆ ತಿಳಿದುಬಂದ ಮಾಹಿತಿ ಪ್ರಕಾರ ಕುದೇರು ವಿಭಾಗದಿಂದ ಬರಬೇಕಿತ್ತು ಎಂದು ಬೆಂಗಳೂರು 108 ಮೂಲ ತಿಳಿಸಿದೆ.ಸಂಚಾರ ಪೋಲೀಸರಲ್ಲಿ ಒಬ್ಬರಾದ ಶಿವಕುಮಾರ್ ಎಂಬುವವರು ಈ ಬಗ್ಗೆ 108 ಗೆ ಕರೆ ಮಾಡಿ ಲೋಪೆವಾಗಿದಿಯೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ ಅಷ್ಟೆ ಅಲ್ಲ ಜಿಪಿಎಸ್ ಅಳವಡಿಸಿರುವುದರಿಂದ ನಿಮಗೆ ವಾಸ್ತವ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿ ವಿಚಾರದಲ್ಲಿ ಸ್ಪಷ್ಟನೆ ಕೇಳಲಾಗಿ, ವಿಚಾರ ಮಾಡಿ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರಿನ 108 ವ್ಯವಸ್ಥೆಯ ಮಹಿಳಾ ಸುಪರ್‍ವೈಷರ್ ಒಬ್ಬರು ತಿಳಿಸಿದ್ದರೂ ಯಾವುದೇ ಮಾಹಿತಿಯನ್ನೆ ನೀಡದೇ ಸುಮ್ಮನಾಗಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಅವರೇ ಆಗಿದ್ದರೆ ಸತ್ತವರನ್ನು ಕರೆದುಕೊಂಡು ಬರಲು 108 ವ್ಯವಸ್ಥೆ ಇಲ್ಲ ಅಂದರೆ ಇದೇಂಥಾ ಅಮಾನವೀಯತೆ ನೀವೆ ನೋಡಿ ಸ್ವಾಮಿ..ಜಿಡ್ಡುಗಟ್ಟಿರುವ ಜಿವಿಕೆ 108 ಗೆ ತುರ್ತು ಚಿಕಿತ್ಸೆ ನೀವೇ ನೀಡಬೇಕಾಗಿದೆ.
No comments:
Post a Comment