ನಗರಸಭೆ ಚುನಾವಣೆ : ಸೆಕ್ಟರ್ ಅಧಿಕಾರಿಗಳ ವಿವರ
ಚಾಮರಾಜನಗರ, ಆ. 08 ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಅನುಷ್ಠಾನ ಹಾಗೂ ನ್ಯಾಯ ಸಮ್ಮತ, ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸೆಕ್ಟರ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ನೇಮಕ ಮಾಡಿದ್ದಾರೆ.ಚಾಮರಾಜನಗರ ನಗರಸಭೆಯ ವಾರ್ಡ್ 1 ರಿಂದ 10ರವರೆಗಿನ ವಾರ್ಡ್‍ಗಳಿಗೆ ಜಗದೀಶ್, ಹಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಚಾಮರಾಜನಗರ (ಮೊ. 9972584272)ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. 11 ರಿಂದ 20ರವರೆಗಿನ ವಾರ್ಡ್‍ಗಳಿಗೆ ಮಹೇಶ್, ಸಹಾಯಕ ಅಭಿಯಂತರರು, ನಂ.2, ಸಿಆರ್‍ಆರ್ ಉಪವಿಭಾಗ, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ (ಮೊ. 9731634760) ವಾರ್ಡ್ 21 ರಿಂದ 31ರವರೆಗಿನ ವಾರ್ಡ್‍ಗಳಿಗೆ ಎಂ. ರಾಜಶೇಖರಮೂರ್ತಿ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಚಾಮರಾಜನಗರ (ಮೊ. 9663303962) ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕೊಳ್ಳೇಗಾಲ ನಗರಸಭೆಯ ವಾರ್ಡ್ 1ರಿಂದ 10ರವರೆಗಿನ ವಾರ್ಡ್‍ಗಳಿಗೆ ಗಂಗಾಧರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಕೊಳ್ಳೇಗಾಲ (ಮೊ. 9481532318), 11 ರಿಂದ 20ರವರೆಗಿನ ವಾರ್ಡ್‍ಗಳಿಗೆ ನಿಂಗರಾಜು, ಸಹಾಯಕ ನಿರ್ದೇಶಕರು, ತಾಲೂಕು ಪಂಚಾಯಿತಿ, ಕೊಳ್ಳೇಗಾಲ (ಮೊ. 9448602109), 21 ರಿಂದ 31ರವರೆಗಿನ ವಾರ್ಡ್‍ಗಳಿಗೆ ರಾಚಪ್ಪ, ರೇಷ್ಮೆ ಸಹಾಯಕ ನಿರ್ದೇಶಕರು (ರೀಲಿಂಗ್), ಕೊಳ್ಳೇಗಾಲ (ಮೊ. 9880440073) ಇವರು ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
v
ನಗರಸಭೆ ಚುನಾವಣೆ : ನಾಮಪತ್ರ ಸ್ವೀಕರಿಸುವ ಸ್ಥಳದ ವಿವರ
ಚಾಮರಾಜನಗರ, ಆ. 08 - ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‍ವಾರು ನಾಮಪತ್ರ ಸಲ್ಲಿಸಲು ಸ್ಥಳಗಳನ್ನು ನಿಗದಿಮಾಡಲಾಗಿದೆ. ಆಗಸ್ಟ್ 10 ರಿಂದ 17ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಈ ಕೆಳಕಂಡ ಸ್ಥಳಗಳಲ್ಲಿ ವಾರ್ಡ್‍ವಾರು ನಾಮಪತ್ರವನ್ನು ಸಲ್ಲಿಸಬಹುದಾಗಿದೆ.ಚಾಮರಾಜನಗರ ನಗರಸಭೆ ವಾರ್ಡ್ 1 ರಿಂದ 8ರವರೆಗೆ - ಸಾಮಥ್ರ್ಯ ಸೌಧ ಕಟ್ಟಡ, ಪಶ್ಚಿಮ ಭಾಗದ ಕೊಠಡಿ, ತಾಲೂಕು ಪಂಚಾಯಿತಿ ಆವರಣ, ಸತ್ಯಮಂಗಲ ರಸ್ತೆ, ಚಾಮರಾಜನಗರ
ವಾರ್ಡ್ 9 ರಿಂದ 16ರವರೆಗೆ - ಸಾಮಥ್ರ್ಯ ಸೌಧ ಕಟ್ಟಡ, ಪೂರ್ವ ಭಾಗದ ಕೊಠಡಿ, ತಾಲೂಕು ಪಂಚಾಯಿತಿ ಆವರಣ, ಸತ್ಯಮಂಗಲ ರಸ್ತೆ, ಚಾಮರಾಜನಗರ
ವಾರ್ಡ್ 17 ರಿಂದ 24ರವರೆಗೆ - ಸಿಡಿಎಸ್ ಸಮುದಾಯ ಭವನ, ಪೂರ್ವಭಾಗದ ಕೊಠಡಿ, ಪ್ರಗತಿ ನಗರ, ಸಂತಪೌಲ್ ಚರ್ಚ್ ಹಿಂಭಾಗ, ಬಿ.ಆರ್. ಹಿಲ್ಸ್ ರಸ್ತೆ, ಚಾಮರಾಜನಗರ
ವಾರ್ಡ್ 25 ರಿಂದ 31ರವರೆಗೆ - ಸಿಡಿಎಸ್ ಸಮುದಾಯ ಭವನ, ಪಶ್ಚಿಮ ಭಾಗದ ಕೊಠಡಿ, ಪ್ರಗತಿ ನಗರ, ಸಂತ ಪೌಲ್ ಚರ್ಚ್ ಹಿಂಭಾಗ, ಬಿ.ಆರ್. ಹಿಲ್ಸ್ ರಸ್ತೆ, ಚಾಮರಾಜನಗರ
ಕೊಳ್ಳೇಗಾಲ ನಗರಸಭೆ ವಾರ್ಡ್ 1ರಿಂದ 8ರವರೆಗೆ – ತಾಲೂಕು ಕಚೇರಿ ಕಟ್ಟಡ, ಕೆಎಸ್‍ಡಬ್ಲೂಎಎನ್ (ಏSWಂಓ) ಕೊಠಡಿ, ಕೊಳ್ಳೇಗಾಲ
ವಾರ್ಡ್ 9 ರಿಂದ 16ರವರೆಗೆ – ತಾಲೂಕು ಪಂಚಾಯಿತಿ ಸಭಾಂಗಣ, ತಾಲೂಕು ಪಂಚಾಯಿತಿ ಕಚೇರಿ, ಕೊಳ್ಳೇಗಾಲ
ವಾರ್ಡ್ 17 ರಿಂದ 24ರವರೆಗೆ – ಸಿಡಿಎಸ್ ಭವನ, ಜನನಿ ಆಸ್ಪತ್ರೆ ಹತ್ತಿರ, ಕೊಳ್ಳೇಗಾಲ
ವಾರ್ಡ್ 25 ರಿಂದ 31ರವರೆಗೆ – ಕೊಠಡಿ ಸಂಖ್ಯೆ 04, ಎಪಿಎಂಸಿ ಕಚೇರಿ, ಕೊಳ್ಳೇಗಾಲ
ಮೇಲ್ಕಂಡ ಸ್ಥಳಗಳಲ್ಲಿ ವಾರ್ಡ್‍ವಾರು ನಾಮಪತ್ರವನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ. 11ರ ಎರಡನೇ ಶನಿವಾರದಂದೂ ಸಹ ನಾಮಪತ್ರ ಸ್ವೀಕಾರ
ಚಾಮರಾಜನಗರ, ಆ. 08 ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ವೇಳಾಪಟ್ಟಿ ಅನುಸಾರ ಆಗಸ್ಟ್ 10 ರಿಂದ 17ರವರೆಗೆ ನಾಮಪತ್ರ ಸ್ವೀಕರಿಸಬೇಕಿದೆ. ಆಗಸ್ಟ್ 12ರ ಭಾನುವಾರ ಹಾಗೂ ಸ್ವಾತಂತ್ರ್ಯ ದಿನ ಆಚರಣೆಯ ಆಗಸ್ಟ್ 15ರಂದು ಸಾರ್ವತ್ರಿಕ ರಜೆ ಇರುವ ಕಾರಣ ಈ ಎರಡೂ ದಿನಗಳಂದು ನಾಮಪತ್ರ ಸ್ವೀಕರಿಸಲಾಗುವುದಿಲ್ಲ. ಉಳಿದಂತೆ ಎಲ್ಲ ದಿನಗಳಂದು ನಾಮಪತ್ರ ಸ್ವೀಕರಿಸಲಾಗುತ್ತದೆ. ಆಗಸ್ಟ್ 11ರಂದು 2ನೇ ಶನಿವಾರವಾಗಿದ್ದು ನೆಗೋಷಿಯಬಲ್ ಇನ್‍ಸ್ಟ್ರುಮೆಂಟ್ಸ್ ಆಕ್ಟ್ 1881ರ ಪ್ರಕಾರ ಸಾರ್ವತ್ರಿಕ ರಜಾ ಅಲ್ಲದ ಕಾರಣ ಅಂದು ಸಹ ಚುನಾವಣಾ ಅಧಿಕಾರಿಗಳು ಕಚೇರಿಯಲ್ಲಿ ಹಾಜರಿದ್ದು ನಾಮಪತ್ರವನ್ನು ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.ಆ. 9ರಂದು ಜಿಲ್ಲೆಗೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಭೇಟಿ
ಚಾಮರಾಜನಗರ, ಆ. 08 - ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಡಾ. ಸುಚೇತನ ಸ್ವರೂಪ ಅವರು ಆಗಸ್ಟ್ 9ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ಜತೆಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕುರಿತು ಸಂವಾದ ನಡೆಸುವರು. ನಂತರ ಬೆಂಗಳೂರಿಗೆ ತೆರಳುವರು.
ಆ. 9ರಂದು ಆಸಿಡ್ ದಾಳಿ ಸಂತ್ರಸ್ಥರಿಗಿರುವ ಕಾನೂನು ಸೇವೆ ಕುರಿತು ಅರಿವು ಕಾರ್ಯಕ್ರಮ
ಚಾಮರಾಜನಗರ, ಆ. 08 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಆಗಸ್ಟ್ 9ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಆಸಿಡ್ ದಾಳಿ ಸಂತ್ರಸ್ಥರಿಗಿರುವ ಕಾನೂನು ಸೇವೆಗಳ ಕುರಿತು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಜಿಲ್ಲಾ ಕಾನೂಣು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯವರಾದ ಸಿ.ಜಿ. ವಿಶಾಲಾಕ್ಷಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಡಾ. ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಆರ್. ಅರುಣ್ ಕುಮಾರ್, ಪೊಲೀಸ್ ಉಪ ಅಧೀಕ್ಷಕರಾದ ಜಯಕುಮಾರ್, ಬಾಲ ನ್ಯಾಯಮಂಡಳಿ ಸದಸ್ಯರಾದ ಟಿ.ಜೆ. ಸುರೇಶ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.
No comments:
Post a Comment