ಮಕ್ಕಳ ಆರೋಗ್ಯ ಸೌಲಭ್ಯಗಳ ಸದುಪಯೋಗಕ್ಕೆ ಜಿಪಂ ಸಿಇಓ ಸಲಹೆ
ಚಾಮರಾಜನಗರ, ಆ. 10 – ಮಕ್ಕಳ ಸಮಗ್ರ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸಲಹೆ ಮಾಡಿದರು.ನಗರದ ಸಂತಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಆರೋಗ್ಯ ಕಾಳಜಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಸದೃಢ ಆರೋಗ್ಯಪೂರ್ಣ ಸಮಾಜ ಕಟ್ಟುವ ಸದುದ್ದೇಶದಿಂದ ಒಂದಿಲ್ಲೊಂದು ಆರೋಗ್ಯಪೂರಕ ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಜಂತುಹುಳು ನಿವಾರಿಸಿ ಮಕ್ಕಳ ಆರೋಗ್ಯ ಸುಧಾರಿಸುವುದೂ ಸಹ ಮುಖ್ಯವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಪೋಷಕರು ಅನಗತ್ಯ ವಿಷಯಗಳಿಗೆ ಕಿವಿಗೊಡದೆ ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ತಾಯಿ ಮಗುವಿನ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ. ಶಿಕ್ಷಣ ಕೂಡ ಪ್ರಮುಖವಾದ ವಿಚಾರವಾಗಿದೆ. ವೈದ್ಯರು ಶಿಕ್ಷಕರು ಇಲ್ಲದ ಸಮಾಜ ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಉತ್ತಮ ಪ್ರಜೆ, ಸದೃಢ ಸಮಾಜ ನಿರ್ಮಾಣವಾಗಲು ವೈದ್ಯರು, ಶಿಕ್ಷಕರ ಪಾತ್ರ ಸಹ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ವೈದ್ಯರು ಶಿಕ್ಷಕರು ನೀಡುವ ಸಲಹೆಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡಬೇಕೆಂದು ಹರೀಶ್ ಕುಮಾರ್ ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಮಾತನಾಡಿ ಶೇ.30ರಷ್ಟು ಮಕ್ಕಳಲ್ಲಿ ಅಪೌಷ್ಠಿಕತೆ ಕಾಣಿಸಿಕೊಳ್ಳುತ್ತದೆ. ಈ ಅಪೌಷ್ಠಿಕತೆಯಿಂದ ಬಳಲುವವರಲ್ಲಿ ಶೇ.50ರಷ್ಟು ಮಕ್ಕಳು ರಕ್ತಹೀನತೆ ತೊಂದರೆ ಇರುತ್ತದೆ. ರಕ್ತಹೀನತೆಗೆ ಜಂತುಹುಳು, ಕೊಕ್ಕೆಹುಳು, ಲಾಡಿಹುಳುಗಳು ಇರುವುದೇ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹುಳುಗಳ ನಿವಾರಣೆಗೆ ವರ್ಷದಲ್ಲಿ 2 ಬಾರಿ ಆಲ್ಬೆಂಡ್‍ಜೊಲ್ ಮಾತ್ರೆಗಳನ್ನು ನೀಡಲು ಆರೋಗ್ಯ ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದರು.
ಮಕ್ಕಳಿಗೆ ಶುದ್ಧ ಆಹಾರ ನೀರು ಸೇವಿಸಲು ಸಲಹೆ ನೀಡಬೇಕು. ಬರಿಗಾಲಲ್ಲಿ ನಡೆಯದಂತೆ ಸೂಚಿಸಬೇಕು. ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಲು ಶುಚಿತ್ವ ಕ್ರಮಗಳನ್ನು ಅನುಸರಿಸಲು ಉತ್ತೇಜಿಸಬೇಕು. ಆರೋಗ್ಯ ಇಲಾಖೆ ವತಿಯಿಂದಲೂ ಶಾಲೆಗಳಿಗೆ ತೆರಳಿ ಆರೋಗ್ಯ ತಪಾಸಣೆಯಂತಹ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ನಡೆಸಿ ಎಲ್ಲಾ ಹಂತದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಯಾವುದೇ ತೊಂದರೆ ಕಂಡುಬಂದರೂ ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು ಪ್ರಸಾದ್ ತಿಳಿಸಿದರು.
ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಶಿಕ್ಷಣ ಇಲಾಖೆ ಅಧಿಕಾರಿ ಡಾ. ಬಸವರಾಜು, ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಪರಿಮಳ ಮೇರಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆ. 15ರಂದು ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ
ಚಾಮರಾಜನಗರ, ಆ. 10 ಜಿಲ್ಲಾಡಳಿತದ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವರಾದ ಎನ್. ಮಹೇಶ್ ಅವರು ಘನ ಉಪಸ್ಥಿತಿ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಶೋಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಜೆ 5.30 ಗಂಟೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 5.30 ರಿಂದ 6.30ರವರೆಗೆ ಅರುಣ್ ಕುಮಾರ್ ಮತ್ತು ತಂಡದವರಿಂದ ದೇಶಭಕ್ತಿ ಗೀತೆ ಗಾಯನ, ಸಂಜೆ 6.30 ರಿಂದ 7.30ರವರೆಗೆ ಶಾಲಾಮಕ್ಕಳಿಂದ ಕಾರ್ಯಕ್ರಮ ನಡೆಯಲಿದೆ. 7.30 ರಿಂದ 8 ಗಂಟೆÀಯವರೆಗೆÉ ಚಾಮರಾಜನಗರದ ಅವತಾರ್ ನೃತ್ಯ ಶಾಲೆಯ ಅವತಾರ್ ಪ್ರವೀಣ್ ಮತ್ತು ತಂಡದವರಿಂದ ನೃತ್ಯರೂಪಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆ. 15ರ ಸ್ವಾತಂತ್ರ್ಯ ದಿನಾಚರಣೆಯಂದು ಕಾರ್ಮಿಕರಿಗೆ ರಜೆ ನೀಡಲು ಸೂಚನೆ
ಚಾಮರಾಜನಗರ, ಆ. 10 - ಸ್ವಾತಂತ್ರ್ಯ ದಿನ ಆಚರಣೆಯ ಆಗಸ್ಟ್ 15ರಂದು ಜಿಲ್ಲೆಯ ಎಲ್ಲಾ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಕೆಲಸಗಾರರಿಗೆ ರಜೆ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಸೂಚಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯಿದೆ ಹಾಗೂ ನಿಯಮಗಳ ಅನ್ವಯ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯಂದು ರಜೆ ನೀಡಬೇಕು. ಆದರೆ ಕಾರ್ಮಿಕರು ರಜೆ ನಿರಾಕರಿಸಿ ಸ್ವಚ್ಚೆಯಿಂದ ಅಂದು ಕೆಲಸ ಮಾಡಲು ಬಯಸಿದರೆ ಅಂತಹ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಒಂದು ಪಟ್ಟು ವೇತನ ನೀಡಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂಚನೆ ನೀಡಿದ್ದಾರೆ.
ನಗರಸಭೆ ಚುನಾವಣೆ : ಜಿಲ್ಲಾಧಿಕಾರಿಯವರಿಂದ ಅಧಿಸೂಚನೆ ಪ್ರಕಟ
ಚಾಮರಾಜನಗರ, ಆ. 10 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಕುರಿತ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ಹೊರಡಿಸಿದ್ದಾರೆ.ನಾಮಪತ್ರ ಸಲ್ಲಿಸಲು ಆಗಸ್ಟ್ 17 ಕಡೆಯ ದಿನವಾಗಿದೆ. ಆಗಸ್ಟ್ 18ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಆಗಸ್ಟ್ 20 ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಆಗಸ್ಟ್ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮರುಮತದಾನ ಅಗತ್ಯವಿದ್ದಲ್ಲಿ ಆಗಸ್ಟ್ 31ರಂದು ನಡೆಸÀಲಾಗುತ್ತದೆ. ಸೆಪ್ಟೆಂಬರ್ 3ರಂದು ತಾಲೂಕಿನ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಸೆಪ್ಟೆಂಬರ್ 3ರಂದೇ ಚುನಾವಣೆ ಪ್ರಕ್ರಿಯೆ ಪೂರ್ಣವಾಗಲಿದೆ.
ಚಾಮರಾಜನಗರ ನಗರಸಭೆಯ 31 ವಾರ್ಡುಗಳ 31 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ವಾರ್ಡ್‍ಗಳ ಸಂಖ್ಯೆ ಹಾಗೂ ಮೀಸಲಾತಿ ವಿವರ ಹೀಗಿದೆ.
1ನೇ ವಾರ್ಡ್ - ಪರಿಶಿಷ್ಟ ಜಾತಿ ಮಹಿಳೆ, 2ನೇ ವಾರ್ಡ್ - ಹಿಂದುಳಿದ ವರ್ಗ (ಎ) ಮಹಿಳೆ, 3ನೇ ವಾರ್ಡ್ - ಸಾಮಾನ್ಯ, 4ನೇ ವಾರ್ಡ್ - ಸಾಮಾನ್ಯ, 5ನೇ ವಾರ್ಡ್ - ಸಾಮಾನ್ಯ ಮಹಿಳೆ, 6ನೇ ವಾರ್ಡ್ - ಹಿಂದುಳಿದ ವರ್ಗ (ಎ), 7ನೇ ವಾರ್ಡ್ - ಹಿಂದುಳಿದ ವರ್ಗ (ಎ) ಮಹಿಳೆ, 8ನೇ ವಾರ್ಡ್ - ಹಿಂದುಳಿದ ವರ್ಗ(ಬಿ), 9ನೇ ವಾರ್ಡ್ - ಪರಿಶಿಷ್ಟ ಜಾತಿ, 10ನೇ ವಾರ್ಡ್ - ಸಾಮಾನ್ಯ, 11ನೇ ವಾರ್ಡ್ - ಸಾಮಾನ್ಯ, 12ನೇ ವಾರ್ಡ್ - ಹಿಂದುಳಿದ ವರ್ಗ (ಎ), 13ನೇ ವಾರ್ಡ್ - ಸಾಮಾನ್ಯ ಮಹಿಳೆ, 14ನೇ ವಾರ್ಡ್ - ಪರಿಶಿಷ್ಟ ಜಾತಿ ಮಹಿಳೆ, 15ನೇ ವಾರ್ಡ್ ಸಾಮಾನ್ಯ, 16ನೇ ವಾರ್ಡ್ - ಪರಿಶಿಷ್ಟ ಪಂಗಡ ಮಹಿಳೆ, 17ನೇ ವಾರ್ಡ್ - ಸಾಮಾನ್ಯ, 18ನೇ ವಾರ್ಡ್ - ಸಾಮಾನ್ಯ ಮಹಿಳೆ, 19ನೇ ವಾರ್ಡ್ - ಹಿಂದುಳಿದ ವರ್ಗ (ಎ), 20ನೇ ವಾರ್ಡ್ - ಸಾಮಾನ್ಯ, 21ನೇ ವಾರ್ಡ್ - ಸಾಮಾನ್ಯ, 22ನೇ ವಾರ್ಡ್ - ಸಾಮಾನ್ಯ ಮಹಿಳೆ, 23ನೇ ವಾರ್ಡ್ - ಸಾಮಾನ್ಯ ಮಹಿಳೆ, 24ನೇ ವಾರ್ಡ್ - ಸಾಮಾನ್ಯ ಮಹಿಳೆ, 25ನೇ ವಾರ್ಡ್ - ಸಾಮಾನ್ಯ ಮಹಿಳೆ, 26ನೇ ವಾರ್ಡ್ - ಪರಿಶಿಷ್ಟ ಜಾತಿ ಮಹಿಳೆ, 27ನೇ ವಾರ್ಡ್ - ಪರಿಶಿಷ್ಟ ಪಂಗಡ, 28ನೇ ವಾರ್ಡ್ - ಪರಿಶಿಷ್ಟ ಪಂಗಡ, 29ನೇ ವಾರ್ಡ್ - ಸಾಮಾನ್ಯ ಮಹಿಳೆ, 30ನೇ ವಾರ್ಡ್ - ಪರಿಶಿಷ್ಟ ಜÁತಿ, 31ನೇ ವಾರ್ಡ್ - ಪರಿಶಿಷ್ಟ ಜಾತಿ.
ಕೊಳ್ಳೇಗಾಲ ನಗರಸಭೆಯ 31 ವಾರ್ಡುಗಳ 31 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ವಾರ್ಡ್‍ಗಳ ಸಂಖ್ಯೆ ಹಾಗೂ ಮೀಸಲಾತಿ ವಿವರ ಹೀಗಿದೆ.
1ನೇ ವಾರ್ಡ್ – ಹಿಂದುಳಿದ ವರ್ಗ (ಎ) ಮಹಿಳೆ, 2ನೇ ವಾರ್ಡ್ - ಪರಿಶಿಷ್ಟ ಜಾತಿ ಮಹಿಳೆ, 3ನೇ ವಾರ್ಡ್ - ಪರಿಶಿಷ್ಟ ಜಾತಿ ಮಹಿಳೆ, 4ನೇ ವಾರ್ಡ್ - ಸಾಮಾನ್ಯ, 5ನೇ ವಾರ್ಡ್ - ಸಾಮಾನ್ಯ, 6ನೇ ವಾರ್ಡ್ - ಪರಿಶಿಷ್ಟ ಜಾತಿ ಮಹಿಳೆ, 7ನೇ ವಾರ್ಡ್ - ಹಿಂದುಳಿದ ವರ್ಗ (ಎ), 8ನೇ ವಾರ್ಡ್ - ಸಾಮಾನ್ಯ ಮಹಿಳೆ, 9ನೇ ವಾರ್ಡ್ - ಪರಿಶಿಷ್ಟ ಪಂಗಡ, 10ನೇ ವಾರ್ಡ್ - ಹಿಂದುಳಿದ ವರ್ಗ (ಬಿ), 11ನೇ ವಾರ್ಡ್ - ಸಾಮಾನ್ಯ, 12ನೇ ವಾರ್ಡ್ - ಸಾಮಾನ್ಯ, 13ನೇ ವಾರ್ಡ್ - ಸಾಮಾನ್ಯ ಮಹಿಳೆ, 14ನೇ ವಾರ್ಡ್ - ಸಾಮಾನ್ಯ, 15ನೇ ವಾರ್ಡ್ ಸಾಮಾನ್ಯ, 16ನೇ ವಾರ್ಡ್ - ಸಾಮಾನ್ಯ ಮಹಿಳೆ, 17ನೇ ವಾರ್ಡ್ - ಸಾಮಾನ್ಯ, 18ನೇ ವಾರ್ಡ್ - ಸಾಮಾನ್ಯ, 19ನೇ ವಾರ್ಡ್ - ಸಾಮಾನ್ಯ ಮಹಿಳೆ, 20ನೇ ವಾರ್ಡ್ - ಸಾಮಾನ್ಯ ಮಹಿಳೆ, 21ನೇ ವಾರ್ಡ್ - ಪರಿಶಿಷ್ಟ ಜಾತಿ, 22ನೇ ವಾರ್ಡ್ - ಪರಿಶಿಷ್ಟ ಜಾತಿ, 23ನೇ ವಾರ್ಡ್ - ಪರಿಶಿಷ್ಟ ಜಾತಿ ಮಹಿಳೆ, 24ನೇ ವಾರ್ಡ್ - ಪರಿಶಿಷ್ಟ ಜಾತಿ, 25ನೇ ವಾರ್ಡ್ – ಪರಿಶಿಷ್ಟ ಜಾತಿ, 26ನೇ ವಾರ್ಡ್ - ಸಾಮಾನ್ಯ ಮಹಿಳೆ, 27ನೇ ವಾರ್ಡ್ – ಸಾಮಾನ್ಯ ಮಹಿಳೆ, 28ನೇ ವಾರ್ಡ್ - ಸಾಮಾನ್ಯ ಮಹಿಳೆ, 29ನೇ ವಾರ್ಡ್ - ಪರಿಶಿಷ್ಟ ಪಂಗಡ ಮಹಿಳೆ, 30ನೇ ವಾರ್ಡ್ - ಪರಿಶಿಷ್ಟ ಪಂಗಡ, 31ನೇ ವಾರ್ಡ್ - ಪರಿಶಿಷ್ಟ ಪಂಗಡ ಮಹಿಳೆ.
ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಗಣೇಶ ವಿಗ್ರಹ ತಯಾರಿ, ಮಾರಾಟ ತಡೆಯಲು ಡಿಸಿ ಸೂಚನೆ
ಚಾಮರಾಜನಗರ, ಆ. 10 - ಮುಂಬರುವ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ಬಣ್ಣಗಳಿಂದ ಗಣೇಶ ವಿಗ್ರಹ ತಯಾರಿ, ವಿತರಣೆ ಹಾಗೂ ಮಾರಾಟ ತಡೆಯಲು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳ ನಿಷೇಧ ಬಗ್ಗೆ ಕೈಗೊಳ್ಳಬೇಕಿರುವ ಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಿಂದೆಯೇ ಅಧಿಸೂಚನೆ ಹೊರಡಿಸಿದೆ. ಮಂಡಳಿಯ ಈ ಅಧಿಸೂಚನೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಸಹ ಕ್ರಮಬದ್ಧಗೊಳಿಸಿದೆ. ಹೀಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ಗಣೇಶ ವಿಗ್ರಹಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ವಿತರಿಸುವುದನ್ನು ನಿಷೇಧಿಸಲಾಗಿದೆ ಎಂದರು.
ಜಿಲ್ಲೆಯಲ್ಲೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣದ ವಿಗ್ರಹಗಳನ್ನು ಮಾರಾಟ ಮಾಡದಂತೆ ತಡೆಯಬೇಕು. ತಯಾರಕರು ಹಾಗೂ ವಿತರಕರಿಗೆ ಈ ಬಗ್ಗೆ ತಿಳಿಸಿ ಯಾವುದೇ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಗಣೇಶ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡದಂತೆ ಸೂಚಿಸಬೇಕು. ತಯಾರಿ, ವಿತರಣೆ ಸ್ಥಳಗಳಿಗೆ ನಗರ ಸ್ಥಳೀಯಸಂಸ್ಥೆ ಅಧಿಕಾರಿಗಳು ಭೇಟಿ ಕೊಟ್ಟು ಈಗಿನಿಂದಲೇ ತಡೆಯುವ ಕೆಲಸವನ್ನು ಮಾಡಬೇಕು.
ಪೊಲೀಸ್ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು ಸಹ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ವಿಗ್ರಹಗಳ ಮಾರಾಟ, ತಯಾರಿ, ವಿತರಣೆ ತಡೆಯುವ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಸಹಕರಿಸಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಸುತ್ತೋಲೆ, ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಎಲ್ಲ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಕಾವೇರಿಯವರು ತಿಳಿಸಿದರು.
ಇದೇವೇಳೆ ಹಾಜರಿದ್ದ ಜಿಲ್ಲೆಯ ಗಣೇಶ ವಿಗ್ರಹ ತಯಾರಕರು ಮಾತನಾಡಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ತಯಾರಿಯಿಂದ ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನಿಂದ ವಿಗ್ರಹ ತಯಾರಿಸುತ್ತಿರುವ ತಮ್ಮ ಕಸುಬಿಗೂ ತೊಂದರೆಯಾಗಿದೆ. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದೇವೆ. ಹಬ್ಬದ ಹಿಂದಿನ 3 ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ಗಣೇಶ ವಿಗ್ರಹವನ್ನು ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಕಾವೇರಿ ಅವರು ತಯಾರಕರು ಸಹ ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ವಿಗ್ರಹ ತಯಾರಿಸುವವರು ಇದ್ದರೆ ಮಾಹಿತಿ ನೀಡಬೇಕು. ಅಧಿಕಾರಿಗಳನ್ನು ಕಳುಹಿಸಿ ವಿಗ್ರಹ ತಯಾರಿ ಮೊದಲೇ ತಿಳಿವಳಿಕೆ ನೀಡಿ ಕ್ರಮ ವಹಿಸಲು ಸಾಧ್ಯವಾಗುತ್ತದೆ ಎಂದರು.
ಹಬ್ಬ ಸಂದರ್ಭದಲ್ಲಿ ಹಾನಿಕಾರಕ ಬಣ್ಣಗಳಿಂದ ಜಲಮಾಲಿನ್ಯ ತಡೆಗಟ್ಟಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಬಣ್ಣಲೇಪಿತ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಲು ಇರುವ ನಿಷೇಧ ಕಾಯಿದೆ ಬಗ್ಗೆ ಜಾಗೃತಿ ಮೂಡಿಸಬೇಕು. ಜೇಡಿಮಣ್ಣಿನಿಂದಲೇ ತಯಾರಿಸಿದ ಮಣ್ಣಿನ ಮೂರ್ತಿಗಳನ್ನು ಖರೀದಿಸುವಂತೆ ಅರಿವು ಮೂಡಿಸಬೇಕು. ಶಾಲಾ ಹಂತದಲ್ಲಿಯೂ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಿ ಪೋಷಕರಿಗೆ ಮನವರಿಕೆ ಮಾಡಿಕೊಡಲು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿ ಕಾವೇರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ, ಜಿಲ್ಲಾ ಪರಿಸರ ಅಧಿಕಾರಿ ರಘುರಾಂ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಸುರೇಶ್, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ತಹಸೀಲ್ದಾರರು, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ನಗರಸಭೆ ಚುನಾವಣೆ : ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಿಲ್ಲ.
ಚಾಮರಾಜನಗರ, ಆ. 10 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲು ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
No comments:
Post a Comment