ನ. 18ರಂದು ಕೊಳ್ಳೇಗಾಲದಲ್ಲಿ ಕೇಂದ್ರ ಸರ್ಕಾರದ ಸೇವೆ, ಪ್ರಧಾನಿಯವರ ದೂರದರ್ಶಿತ್ವ 2047 ವಿಷಯ, ಬುಡಕಟ್ಟು ಜನತೆ ಅಭಿವೃದ್ದಿಯ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ
ಚಾಮರಾಜನಗರ, ನವೆಂಬರ್ 17 - ಭಾರತ ಸಾತ್ವಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ, ಕೇಂದ್ರ ಸರ್ಕಾರದ 8 ವರ್ಷಗಳ ಸೇವೆ ಹಾಗೂ ಪ್ರಧಾನ ಮಂತ್ರಿಯವರ ದೂರದರ್ಶಿತ್ವ 2047 ವಿಷಯವನ್ನೊಳಗೊಂಡ ಛಾಯಾಚಿತ್ರ ಪ್ರದರ್ಶನವನ್ನು ನವೆಂಬರ್ 18 ಮತ್ತು 19ರಂದು ಕೊಳ್ಳೆಗಾಲದ ಜೆಎಸ್‍ಎಸ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ. ಆದಿವಾಸಿಗಳ ವೀರೋಚಿತ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ಆಚರಿಸುವ ಜನಜಾತೀಯ ಗೌರವದ ಸಪ್ತಾಹವಾಗಿಯೂ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಬುಡಕಟ್ಟು ಜನತೆಯ ಅಭಿವೃದ್ಧಿಯ ಬಗ್ಗೆಯೂ ಛಾಯಾಚಿತ್ರ ಪ್ರದರ್ಶನವಿರಲಿದೆ.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೈಸೂರಿನ ಕೇಂದ್ರ ಸಂವಹನ ಇಲಾಖೆ ಆಯೋಜಿಸುತ್ತಿರುವ ಈ ಛಾಯಾಚಿತ್ರ ಪ್ರದರ್ಶನ ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆ ಇವರ ಸಹಯೋಗದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ವಿದ್ಯಾಸಂಸ್ಥೆಗಳ ನೆರವಿನೊಂದಿಗೆ ಆಯೋಜಿಸಲಾಗಿದೆ.
ಕೊಳ್ಳೆಗಾಲದ ಜೆಎಸ್‍ಎಸ್ ಕಾಲೇಜಿನ ಆವರಣದಲ್ಲಿ ನವೆಂಬರ್ 18ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮಕ್ಕೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಚಾಲನೆ ನೀಡುವರು. ಶಾಸಕರಾದ ಎನ್. ಮಹೇಶ್ ಹಾಗೂ ಕೊಳ್ಳೇಗಾಲ ನಗರಸಭಾ ಅಧ್ಯಕ್ಷರಾದ ಸಿ.ಎನ್. ರೇಖಾ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಘನ ಉಪಸ್ಥಿತಿ ವಹಿಸುವರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬುಡಕಟ್ಟು ಸಂಶೋಧನ ಸಂಸ್ಥೆಯ ನಿರ್ದೇಶಕರಾದ ರಾಜೇಶ್ ಜಿ. ಗೌಡ ಭಾಗವಹಿಸಲಿದ್ದು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವರು.
ಕೇಂದ್ರ ಸರ್ಕಾರ ಜನತೆಯ ಉಪಯೋಗಕ್ಕಾಗಿ ಜಾರಿಗೆ ತಂದಿರುವ ಹಲವು ಯೋಜನೆಗಳ ಕುರಿತ ಛಾಯಾಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ಬುಡಕಟ್ಟು ಜನರ ವಿವರ, ಸರ್ವರಿಗೂ ಆರೋಗ್ಯ ಒದಗಿಸುವ ಆಯುಷ್ಮಾನ್ ಭಾರತ, ಆರೋಗ್ಯ ರಕ್ಷಣೆ ಮತ್ತು ಸಾಂಕ್ರಾಮಿಕ ನಿರ್ವಹಣೆ, ಸಶಕ್ತ ರೈತ ಸಮೃದ್ಧ ಭಾರತ, ಆದಿವಾಸಿಗಳ ಸರ್ವತೋಮುಖ ಅಭಿವೃದ್ದಿಯ ಖಾತ್ರಿ, ಹರ್ ಘರ್ ಜಲ್, ರಾಷ್ಟ್ರೀಯ ಶಿಕ್ಷಣ ನೀತಿ 2020, ದಿವ್ಯಾಂಗರ ಸಬಲೀಕರಣ, ಸಂಪರ್ಕಿತ ಭಾರತ ನಿರ್ಮಾಣ ಮುಂತಾದ ಹಲವು ಯೋಜನೆಗಳ ಮಾಹಿತಿ ದೊರೆಯಲಿದೆ.
ಭಾರತ ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ದೇಶದ ಪ್ರಗತಿಯನ್ನು ದೂರದರ್ಶಿತ್ವದಿಂದ ಮನಗಂಡಿರುವ ಪ್ರಧಾನಮಂತ್ರ್ರಿಯವರ ಪಂಚ ಸಂಕಲ್ಪದ ಪರಿಚಯವನ್ನೂ ಈ ಪ್ರದರ್ಶನ ಮಾಡಿಕೊಡಲಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕನ್ನಡನಾಡಿನ ವೀರ ಮಹನೀಯರನ್ನು ಈ ಅಮೃತ ಮಹೋತ್ಸವದ ಸವಿ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಮತ್ತು ಸ್ವಾತಂತ್ರ್ಯ ಹೋರಾಟದ ವೀರಗಾಥೆಗಳನ್ನು ಮತ್ತು ಹೆಜ್ಜೆ ಗುರುತುಗಳನ್ನು ದಾಖಲಿಸುವ ಪ್ರದರ್ಶನ ಇದಾಗಿದೆ.
ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ರ್ಯಾಲಿ, ಜಾಗೃತಿ ಜಾಥಾ, ವಿದ್ಯಾರ್ಥಿಗಳು ಹಾಗೂ ಆದಿವಾಸಿಗಳಿಗಾಗಿ ಸ್ಫರ್ಧೆಗಳನ್ನು ನಡೆಸಲಾಗುತ್ತದೆ. ಜನತೆಗೆ ಉಪಯುಕ್ತ ಮಾಹಿತಿ ಒದಗಿಸುವ ಉಪನ್ಯಾಸ, ರಾಷ್ಟ್ರಾಭಿಮಾನವನ್ನು ಸ್ಫುರಿಸುವ ಚಲನಚಿತ್ರ ಪ್ರದರ್ಶನ, ಭಾರತ ಸರ್ಕಾರದ ನಾಟಕ ಮತ್ತು ಸಂಗೀತ ವಿಭಾಗದ ಕಲಾ ತಂಡ ಮತ್ತು ಸ್ಥಳೀಯ ಆದಿವಾಸಿ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಾರ್ವಜನಿಕರಿಗೆ, ಮಹಿಳೆಯರಿಗೆ, ಫಲಾನುಭವಿಗಳಿಗೆ, ವಿದ್ಯಾರ್ಥಿಗಳಿಗೆ ಈ ಛಾಯಾಚಿತ್ರ ಪ್ರದರ್ಶನ ಉಪಯುಕ್ತವಾಗಲಿದೆ ಎಂದು ಮೈಸೂರಿನ ಕೇಂದ್ರ ಸಂವಹನ ಇಲಾಖೆಯ ಉಪನಿರ್ದೇಶಕರಾದ ಡಾ. ಟಿ.ಸಿ. ಪೂರ್ಣಿಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----ಛಾಯಾಚಿತ್ರ ಪ್ರದರ್ಶನ ಹಿನ್ನೆಲೆಯಲ್ಲಿ ಪೂರ್ವಭಾವಿ ಪ್ರಚಾರ : ಗಮನಸೆಳೆದ ಬುಡಕಟ್ಟು ಸಂಸ್ಕøತಿಯ ಕಾರ್ಯಕ್ರಮಗಳು
ಚಾಮರಾಜನಗರ, ನವೆಂಬರ್ 17 - ಕೊಳ್ಳೇಗಾಲದಲ್ಲಿ ನಾಳೆ (ನವೆಂಬರ್ 18ರಿಂದ) ಆರಂಭಗೊಳ್ಳಲಿರುವ ಎರಡು ದಿನಗಳ ಛಾಯಾಚಿತ್ರ ಪ್ರದರ್ಶನ ಹಾಗೂ ಸಂಸ್ಕøತಿ ಹಬ್ಬದ ಪ್ರಯುಕ್ತ ಪೂರ್ವ ಭಾವಿ ಪ್ರಚಾರ ಕಾರ್ಯಕ್ರಮ ಇಂದು ನಡೆಯಿತು.
ಕೊಳ್ಳೇಗಾಲದÀ ಜೆಎಸ್‍ಎಸ್ ಕಾಲೇಜು ಆವರಣದಿಂದ ಹೊರಟ ಜಾಗೃತಿ ಜಾಥಾಕ್ಕೆ ನಗರಸಭಾ ಅಧ್ಯಕ್ಷರಾದ ರೇಖಾ ಸಿ.ಎನ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪ ನಿರ್ದೇಶಕರಾದ ಡಾ. ಟಿ.ಸಿ. ಪೂರ್ಣಿಮಾ ಉಪಸ್ಥಿತರಿದ್ದರು. ಜನಜಾತೀಯ ಗೌರವ ದಿವಸ, ನಂತರ ವಿವಿಧ ಸ್ಫರ್ಧಾ ಚಟುವಟಿಕೆಗಳನ್ನು ನಡೆಸಲಾಯಿತು.
ಏಕಲವ್ಯ ಶಾಲೆಯ ಮಕ್ಕಳು ಬುಡಕಟ್ಟು ಸಂಸ್ಕøತಿಯನ್ನು ಪ್ರತಿಬಿಂಬಿಸುವ ನೃತ್ಯಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಕಾಲೇಜಿನ ಆವರಣದಲ್ಲಿ ನಡೆದ ವಿವಿಧ ಸ್ಫರ್ಧೆಗಳಲ್ಲಿ ರಂಗೋಲಿ, ವೇಷಭೂಷಣ ಮತ್ತು ಏಕಪಾತ್ರಾಭಿನಯ, ಚಿತ್ರಕಲಾ, ಸಾಮೂಹಿಕ ನೃತ್ಯ ಇನ್ನಿತರ ಸ್ಫರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

No comments:
Post a Comment