Saturday, 19 May 2018

ಪಟಾಕಿ, ಬಿಡಿ ಪೆಟ್ರೋಲ್ ಮಾರಾಟ ನಿಷೇಧ (19-05-2018)

    ಪಟಾಕಿ, ಬಿಡಿ ಪೆಟ್ರೋಲ್ ಮಾರಾಟ ನಿಷೇಧ

ಚಾಮರಾಜನಗರ, ಮೇ. 19 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಹುಮತ ಸಾಬೀತು ಪ್ರಕ್ರಿಯೆ ನಂತರ ಸಂಭ್ರಮಾಚರಣೆಯ ಹೆಸರಿನಲ್ಲಿ ಪಟಾಕಿ ಸಿಡಿಸಿ ಸೋತವರನ್ನು ಕೆರಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹಾಗೂ  ಮುಂಜಾಗ್ರತಾ ಕ್ರಮವಾಗಿ ಪಟಾಕಿ ಮಾರಾಟ ಹಾಗೂ ಬಿಡಿ ಪೆಟ್ರೋಲ್ ಮಾರಾಟ ನಿಷೇಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಆದೇಶ ಹೊರಡಿಸಿದ್ದಾರೆ.
ಸಿಆರ್‍ಪಿಸಿ 1973ರ ಕಲಂ 144ರ ಪ್ರಕಾರ ಜಿಲ್ಲೆಯಾದ್ಯಂತ ಮೇ 19ರ ಬೆಳಿಗ್ಗೆ 6 ಗಂಟೆಯಿಂದ ಮೇ 21ರ ಮಧ್ಯರಾತ್ರಿ 6 ಗಂಟೆಯವರೆಗೆ ಪಟಾಕಿ ಮಾರಾಟ ಹಾಗೂ ಪೆಟ್ರೋಲ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನಿಷೇಧಾಜ್ಞೆ

ಚಾಮರಾಜನಗರ, ಮೇ. 19  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ವಿಶ್ವಾಸಮತ ಸಂಬಂಧ ಪರ ವಿರೋಧ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳ ರ್ಯಾಲಿ, ಮೆರವಣಿಗೆ, ಸಭೆ ಸಮಾರಂಭ, ಪಟಾಕಿ ಸಿಡಿಸುವಿಕೆ, ಉದ್ರೇಕಕಾರಿ ಘೋಷಣೆ, ಪರಸ್ಪರ ಛೇಡಿಸುವಿಕೆಯಂತಹ ಸಾಧ್ಯತೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೇ 19ರ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಯಾವುದೇ ರ್ಯಾಲಿ, ಮೆರವಣಿಗೆ, ಸಭೆ ಸಮಾರಂಭ, ಪಟಾಕಿ ಸಿಡಿಸುವಿಕೆ, ಘೋಷಣೆ ಕೂಗುವುದು, ವಿರೋಧಪಕ್ಷಗಳ ಕಾರ್ಯಕರ್ತರು ಪರಸ್ಪರ ಛೇಡಿಸುವುದು ಇತ್ಯಾದಿ ನಡೆಸದಂತೆ ಸಿಆರ್‍ಪಿಸಿ ಕಲಂ 144 ಅನ್ವಯ ನಿಷೇಧಾಜ್ಞೆ ವಿಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಆದೇಶ ಹೊರಡಿಸಿದ್ದಾರೆ.

ಮೇ. 21ರಂದು ಹರದನಹಳ್ಳಿಯಲ್ಲಿ ಜನಸÀಂಪರ್ಕ ಸಭೆ

ಚಾಮರಾಜನಗರ, ಮೇ. 19 (ಕರ್ನಾಟಕ ವಾರ್ತೆ):– ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಉಪವಿಭಾಗದ ಕಚೇರಿಯಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಿದೆ.
ಸಾರ್ವಜನಿಕರು ಸಭೆಗೆ ಹಾಜರಾಗಿ ವಿದ್ಯುತ್ ಸಂಬಂಧಿಸಿದ ಯಾವುದೇ ಕುಂದುಕೊರತೆಗಳಿದ್ದಲ್ಲಿ ಸಭೆಗೆ ತಿಳಿಸಿ ಪರಿಹರಿಸಿಕೊಳ್ಳುವಂತೆ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ. 20ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಮೇ. 19– ಚಾಮರಾಜನಗರದ ಬಿ.ರಾಚಯ್ಯ ಚೋಡಿ ರಸ್ತೆ ಭಾಗಗಳಲ್ಲಿ ರಸ್ತೆ ಅಗಲೀಕರಣಕ್ಕಾಗಿ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಕಾಮಗಾರಿಯನ್ನು ಮೇ 20ರಂದು ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಬಿ.ರಾಚಯ್ಯ ಜೋಡಿ ರಸ್ತೆ, ಹೌಸಿಂಗ್ ಬೋರ್ಡ್, ಕರಿನಂಜನಪುರ, ಕೋರ್ಟ್ ರಸ್ತೆ, ರಾಮಸಮುದ್ರ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ನಾಗರಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

   ಕೊಳ್ಳೇಗಾಲ : ಪಪಂ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 19 – ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ವಿವಿಧೆಡೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿವರ್Àಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯಲಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೊಳ್ಳೇಗಾಲ ಪಟ್ಟಣ, ಬಂಡಳ್ಳಿ, ಒಡೆಯರಪಾಳ್ಯದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಮಲೆಮಹದೇಶ್ವರ ಬೆಟ್ಟದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಕೊಳ್ಳೇಗಾಲ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳಿಗೆ ಉಚಿತ ಊಟ ತಿಂಡಿ, ಸಮವಸ್ತ್ರ, ಪಠ್ಯಪುಸ್ತಕ, ಲೇಖನಸಾಮಗ್ರಿ, ಅಂಶಕಾಲಿಕ ಬೋಧಕರಿಂದ ವಿಶೇಷ ಬೋಧನೆ, ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಅರ್ಜಿಗಳನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯ ಅಥವಾ ಕೊಳ್ಳೇಗಾಲ ಪಟ್ಟಣದಲ್ಲಿರುವ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಜೂನ್ 10ರೊಳಗೆ ಸಂಬಂಧಿಸಿದ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸುವಂತೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಲ್. ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣಾ ವೇಳಾಪಟ್ಟಿ ಪ್ರಕಟ (18-05-2018)

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣಾ ವೇಳಾಪಟ್ಟಿ ಪ್ರಕಟ

ಚಾಮರಾಜನಗರ, ಮೇ. 18 – ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ಭಾರತ ಚುನಾವಣಾ ಆಯೋಗವು ಮೈಸೂರಿನ ಮಾನ್ಯ ಪ್ರಾದೇಶಿಕ ಆಯುಕ್ತರÀನ್ನು ದಕ್ಷಿಣ ಶಿಕ್ಷಕರ ಕ್ಷೇತ್ರ (ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ ) ಚುನಾವಣಾಧಿಕಾರಿಗಳಾಗಿ ನೇಮಿಸಿದೆ.
ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಿದ್ದು, ಮೇ 12 ರಂದು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿದೆ. ಮೇ 15 ರಿಂದ ಜೂನ್ 15 ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ಮೇ 15ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸ್ವೀಕರಿಸಲು ಮೇ 22 ಕಡೆಯ ದಿನವಾಗಿದೆ. 23ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ನಾಮಪತ್ರಗಳನ್ನು ವಾಪಸ್ಸು ಪಡೆಯಲು 25 ಕೊನೆಯ ದಿನ. ಜೂನ್ 8ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 12ರಂದು ಮತ ಎಣಿಕೆ ನಡೆಯಲಿದೆ. ಜೂನ್ 15 ಚುನಾವಣಾ ಕೆಲಸ ಕಾರ್ಯಗಳ ಅಂತಿಮ ದಿನವಾಗಿದೆ.
ಜಿಲ್ಲೆಯಲ್ಲಿ ಚಾಮರಾಜನಗರ. ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಮತ್ತು ಹನೂರು ಸೇರಿದಂತೆ 5 ತಾಲೂಕು ಕೇಂದ್ರಗಳಲ್ಲಿಯು ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. 2018ರ ಜನವರಿ 19ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 1868 ಮಂದಿ ಮತದಾರರಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲಿ 282 ಪುರುಷರು, 61 ಮಹಿಳೆಯರು ಸೇರಿದಂತೆ ಒಟ್ಟು 343 ಮತದಾರರಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 423 ಪುರುಷರು ಹಾಗೂ 227 ಮಹಿಳೆಯರು ಸೇರಿದಂರೆ ಒಟ್ಟು 650 ಮಂದಿ ಮತ ಚಲಾಯಿಸಲಿದ್ದಾರೆ. ಯಳಂದೂರು ತಾಲೂಕಿನಲ್ಲಿ 129 ಪುರುಷರು, 43 ಮಹಿಳೆಯರು ಸೇರಿದಂತೆ ಒಟ್ಟು 172, ಕೊಳ್ಳೇಗಾಲ ತಾಲೂಕಿನಲ್ಲಿ 338 ಪುರುಷರು, 189 ಮಹಿಳೆಯರು ಮತ್ತು ಹನೂರು ತಾಲೂಕಿನಲ್ಲಿ 153 ಪುರುಷರು ಹಾಗೂ 23 ಮಹಿಳೆಯರು ಸೇರಿದಂತೆ ಒಟ್ಟು 176 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
 
************************************************************************

ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ : ಹೆಸರು ನೊಂದಾಯಿಸಲು ಅವಕಾಶ

ಚಾಮರಾಜನಗರ, ಮೇ. 18 - ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯನ್ನು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಹೋಬಳಿ, ಗ್ರಾಮ ಪಂಚಾಯಿತಿ, ಬೆಳೆಗಳ ಬಗ್ಗೆ  ಅನುಷ್ಠಾನಗೊಳಿಸಲಾಗುತ್ತಿದೆ.
 ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ಮುಸುಕಿನ ಜೋಳ, ರಾಗಿ, ಜೋಳ, ಸಜ್ಜೆ, ಸೂರ್ಯಕಾಂತಿ, ಈರುಳ್ಳಿ, ಟೊಮೆಟೊ, ಆಲೂಗೆಡ್ಡೆ, ಅರಿಶಿಣ ಹಾಗೂ ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಜೋಳ, ಮುಸುಕಿನ ಜೋಳ, ರಾಗಿ, ಸಜ್ಜೆ, ಹೆಸರು, ಹುರುಳಿ, ತೊಗರಿ, ಉದ್ದು, ಅಲಸಂದೆ, ಸೂರ್ಯಕಾಂತಿ, ನೆಲಗಡಲೆ (ಶೇಂಗಾ), ಎಳ್ಳು, ಹತ್ತಿ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ವಿಮೆಗೆ ಒಳಪಡಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಚಾಮರಾಜನಗರ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ಗುಂಡ್ಲುಪೇಟೆ ತಾಲೂಕಿಗೆ ಜೋಳ ಮತ್ತು ಸೂರ್ಯಕಾಂತಿ (ಮಳೆಯಾಶ್ರಿತ) ಹಾಗೂ ಕೊಳ್ಳೇಗಾಲ ತಾಲೂಕಿಗೆ ರಾಗಿ ಮತ್ತು ಮುಸುಕಿನ ಜೋಳ (ಮಳೆಯಾಶ್ರಿತ) ಹಾಗೂ ಯಳಂದೂರು ತಾಲೂಕಿಗೆ ಭತ್ತ (ನೀರಾವರಿ) ಬೆಳೆಯನ್ನು ವಿಮೆಗೆ ಅಧಿಸೂಚಿಸಿದೆ.
ಮುಂಗಾರು ಹಂಗಾಮಿಗೆ ಮಳೆಯಾಶ್ರಿತ ಉದ್ದು, ಹೆಸರು, ಎಳ್ಳು ಬೆಳೆಗೆ ನೊಂದಾಯಿಸಲು ಜೂನ್ 30 ಕಡೆಯ ದಿನವಾಗಿದೆ. ನೀರಾವರಿ ಆಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ಟೊಮೆಟೊ, ಆಲೂಗೆಡ್ಡೆ, ಈರುಳ್ಳಿ, ಮಳೆಯಾಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಅಲಸಂದೆ, ಸೂರ್ಯಕಾಂತಿ, ನೆಲಗಡಲೆ (ಶೇಂಗಾ) ಬೆಳೆಗೆ ನೊಂದಾಯಿಸಲು  ಜುಲೈ 16 ಕಡೆಯ ದಿನ. ಮಳೆಯಾಶ್ರಿತ ತೊಗರಿ, ಹುರುಳಿ ಮತ್ತು ಅರಿಶಿನ ಬೆಳೆಗೆ ನೊಂದಾಯಿಸಲು ಜುಲೈ 31ರಂದು ಕಡೆಯ ದಿನ. ನೀರಾವರಿ ಆಶ್ರಿತ ಭತ್ತ, ರಾಗಿ ಮತ್ತು ಹತ್ತಿ ಬೆಳೆಗಳಿಗೆ ನೊಂದಾಯಿಸಲು ಆಗಸ್ಟ್ 14ರಂದು ಅಂತಿಮ ದಿನವಾಗಿದೆ.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀತಿಯಂತಹ ದಾಖಲೆಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 21ರಂದು ವಿದ್ಯುತ್ ಜನಸಂಪರ್ಕ ಸಭೆ

ಚಾಮರಾಜನಗರ, ಮೇ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ನಿಗಮದ ಉಪವಿಭಾಗದ ಕಚೇರಿಯಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಿದೆ.
ಸಾರ್ವಜನಿಕರು ಸಭೆಗೆ ಹಾಜರಾಗಿ ವಿದ್ಯುತ್ ಸಂಬಂಧಿಸಿದ ಯಾವುದೇ ಕುಂದುಕೊರತೆಗಳಿದ್ದಲ್ಲಿ ಸಭೆಗೆ ತಿಳಿಸಿ ಪರಿಹರಿಸಿಕೊಳ್ಳುವಂತೆ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ವರ್ಗ, ಪಂಗಡದ ರೈತರಿಗೆ ಸಹಾಯಧನ : ಹೆಸರು ನೊಂದಾಯಿಸಿ
ಚಾಮರಾಜನಗರ, ಮೇ. 18  ತೋಟಗಾರಿಕೆ ಇಲಾಖೆಯು 2018-19ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪರಿಶಿಷ್ಟ ವರ್ಗ ಪಂಗಡದ ರೈತರಿಗೆ ಬಾಳೆ ನಿಖರ ಬೇಸಾಯ ಕಾರ್ಯಕ್ರಮದಡಿ ಸಹಾಯಧನ ನೀಡಲು ಉದ್ದೇಶಿಸಿದೆ.
ಹೊಸದಾಗಿ ಅಂಗಾಂಶ ಕೃಷಿ ಬಾಳೆಯನ್ನು ಅಧಿಕ ಸಾಂದ್ರತೆ ಪದ್ಧತಿಯಲ್ಲಿ ಮುಖ್ಯ ಬೆಳೆಯಾಗಿ ನಾಟಿ ಮಾಡಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡು ಬಾಳೆ ತಾಕು ಅಭಿವೃದ್ಧಿಪಡಿಸುವ ರೈತರಿಗೆ ಪ್ರತಿ ಎಕರೆಗೆ ಶೇ. 90ರಷ್ಟು ಸಹಾಯಧನ, ಗರಿಷ್ಟ 45 ಸಾವಿರ ರೂ.ಗಳನ್ನು ಪಡೆಯಲು ಅವಕಾಶ ಕಲ್ಪಿಸಿದೆ.
ಆಸಕ್ತ ರೈತರು ಅರ್ಜಿ, ಭಾವಚಿತ್ರ, ಪಹಣಿ, ಚೆಕ್ಕುಬಂದಿ, ನೀರಾವರಿ ಮೂಲ ದೃಢೀಕರಣ, ಎಲೆಕ್ಷನ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಖಾಲಿ ಜಮೀನಿನ ಫೋಟೋ ಇತ್ಯಾದಿ ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‍ಎಂಎಸ್ ಮೂಲಕ ರೈತರಿಗೆ ಮಾಹಿತಿ

ಚಾಮರಾಜನಗರ, ಮೇ. 18 :– ತೋಟಗಾರಿಕೆ ಇಲಾಖೆಯ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಡಿ ದೊರೆಯುವ ಸವಲತ್ತು, ಸಹಾಯಧನ, ಬೆಳೆ ವಿಮೆ ಸೌಲಭ್ಯ, ಹವಾಮÁನ ಮಾಹಿತಿ, ತರಬೇತಿ, ತೋಟಗಾರಿಕೆ ಬೆಳೆ ಆಧಾರಿತ ತಾಂತ್ರಿಕ ಸಲಹೆ ಇತ್ಯಾದಿ ಮಾಹಿತಿಯನ್ನು ಜಿಲ್ಲೆಯ ರೈತರಿಗೆ ಮೊಬೈಲ್ ಎಸ್‍ಎಂಎಸ್ ಮುಖಾಂತರ ಕಳುಹಿಸಲು ಇಲಾಖೆಯಿಂದ ಅವಕಾಶ ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಎಲ್ಲಾ ರೈತರು ತಮ್ಮ ಪೂರ್ಣ ವಿಳಾಸ (ಮೊಬೈಲ್ ಸಂಖ್ಯೆಯೊಂದಿಗೆ)  ಹಾಗೂ ತಾವು ಬೆಳೆಯುವ ಬೆಳೆಗಳ ಕುರಿತು ಮಾಹಿತಿಯನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ನೊಂದಾಯಿಸಿಕೊಂಡು ಸೌಲಭ್ಯ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳ್ಳಗಾಲ ವಿದಾನ ಸಭಾ ಕ್ಷೇತ್ರ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ (17-05-2018)










ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 17 :– ತೋಟಗಾರಿಕೆ ಇಲಾಖೆಯು ರೈತ ಮಕ್ಕಳಿಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್‍ನ ತೋಟಗಾರಿಕೆ ತರಬೇತಿ ಕೇಂದ್ರ ಹಾಗೂ ಟಿ. ನರಸೀಪುರ  ತಾಲೂಕಿನ ರಂಗಸಮುದ್ರ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2018 ಜೂನ್  1 ರಿಂದ 2019ರ ಮಾರ್ಚ್ 30ರವರೆಗೆ ತೋಟಗಾರಿಕೆ ತರಬೇತಿ ನೀಡಲಿದ್ದು ಅರ್ಜಿ ಆಹ್ವಾನಿಸಿದೆ.
ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿದ್ದು ತಂದೆ, ತಾಯಿ, ಪೋಷಕರು ಜಮೀನು ಹೊಂದಿದ್ದು ಸ್ವಂತ ಸಾಗುವಳಿ ಮಾಡುತ್ತಿರಬೇಕು.
ಆಸಕ್ತ ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಮೇ 24ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಅಥವಾ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಇವರನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತೆಮರಹಳ್ಳಿ : ನೂತನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಆರಂಭ
ಚಾಮರಾಜನಗರ, ಮೇ. 17 :– ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯಲ್ಲಿ ನೂತನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಆರಂಭಿಸಲಿದೆ.
ಮೆಟ್ರಿಕ್ ನಂತರದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ (ಪದವಿಪೂರ್ವ, ಸಾಮಾನ್ಯ ಕೋರ್ಸ್, ವೃತ್ತಿಪರ ಕೋರ್ಸ್) ಪ್ರವೇಶ ಲಭ್ಯ. ಉಚಿತ ವಸತಿ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಗ್ರಂಥಾಲಯ, ಕಂಪ್ಯೂಟರ್ ತರಬೇತಿ, ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ (ದೂ.ಸಂ.08226-222180) ಮತ್ತು ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರದ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ (ದೂ.ಸಂ. 08226-222069) ಸಂಪರ್ಕಿಸುವಂತೆ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನೂತನ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಮನೆ ನೀಡಲು ಮನವಿ

ಚಾಮರಾಜನಗರ, ಮೇ. 17 – ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯಲ್ಲಿ ನೂತನವಾಗಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥೀನಿಲಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯ ನಿರ್ವಹಿಸಲು ಬಾಡಿಗೆ ಮನೆ ಅವಶ್ಯವಿರುತ್ತದೆ.

ಸರ್ಕಾರಿ ಕಟ್ಟಡ ಮಂಜೂರಾಗಿಲ್ಲದಿರುವ ಕಾರಣ ಬಾಡಿಗೆ ಮನೆ ಅವಶ್ಯವಿದ್ದು ಮನೆ ಬಾಡಿಗೆಗೆ ನೀಡುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ (ಕೊಠಡಿ ಸಂಖ್ಯೆ 131,132) (ದೂ.ಸಂ.08226-222180) ಮತ್ತು ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರದ ದೇವರಾಜ ಅರಸು ಭವನದಲ್ಲಿರುವ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ (ದೂ.ಸಂ. 08226-222069) ಸಂಪರ್ಕಿಸುವಂತೆ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 17 – ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಚಾಮರಾಜನಗರ ತಾಲೂಕಿನ ವ್ಯಾಪ್ತಿಯ ನಗರದಲ್ಲಿರುವ ಪರಿಶಿಷ್ಟ ವರ್ಗಗಳ 2 ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯ (5 ರಿಂದ 10ನೇ ತರಗತಿವರೆಗೆ ಮಾತ್ರ) ಹಾಗೂ 2 ಮೆಟ್ರಿಕ್ ನಂತರದ ಬಾಲಕಬಾಲಕಿಯರ ವಿದ್ಯಾರ್ಥಿನಿಲಯ (ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇತರೆ), ಪುಣಜನೂರು, ಬೇಡರಗುಳಿ, ರಂಗಸಂದ್ರ, ಕೆ. ಗುಡಿ, ಮುರಟಿಪಾಳ್ಯ , ಕೋಳಿಪಾಳ್ಯ ಗಿರಿಜನ ಕಾಲೋನಿಗಳಲ್ಲಿನ ಆಶ್ರಮಶಾಲೆಗಳಲ್ಲಿ (1 ರಿಂದ 5ನೇ ತರಗತಿವರೆಗೆ ಮಾತ್ರ) ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಪರಿಶಿಷ್ಟ ವರ್ಗ ಹಾಗೂ ಇತರೆ ವಿದ್ಯಾರ್ಥಿಗಳು ಸಂಬಂಧಪಟ್ಟ ನಿಲಯ ಮೇಲ್ವಿಚಾರಕರು ಹಾಗೂ ನಗರದ ಖಾಸಗಿ ಬಸ್ ನಿಲ್ದಾಣ ರಸ್ತೆಯ  ಕೊಳದ ಬೀದಿಯಲ್ಲಿರುವ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಸಂಬಂಧಿಸಿದ ವಿದ್ಯಾರ್ಥಿನಿಲಯಗಳಿಗೆ ಜೂನ್ 11ರ ಒಳಗೆ ಸಲ್ಲಿಸಬೇಕು.
ಇಲಾಖೆಯ ವೆಬ್ ಸೈಟ್ ತಿತಿತಿ.ಣತಿ.ಞಚಿಡಿ.ಟಿiಛಿ.iಟಿ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 – ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಚಾಮರಾಜನಗರ, ಚಂದಕವಾಡಿ, ಸಂತೆಮರಹಳ್ಳಿಯ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯ, ಜನ್ನೂರು, ಕುದೇರು, ಹೊಂಗನೂರು, ಆಲೂರು, ಉಡಿಗಾಲ, ಹರವೆ, ವೆಂಕಟಯ್ಯನ ಛತ್ರ ಹಾಗೂ ಬಿಸಲವಾಡಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಸಲ್ಲಿಸಬಹುದು.
ನಗರದ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕಬಾಲಕಿಯರ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಪ್ರಥಮದರ್ಜೆ ಕಾಲೇಜು ಬಾಲಕಿಯರ ವಿದ್ಯಾರ್ಥಿನಿಲಯ, ವರ್ಗೀಕೃತ ಕಾಲೇಜು ಬಾಲಕಿಯರ ವಿದ್ಯಾರ್ಥಿನಿಲಯ, ಹರದನಹಳ್ಳಿಯ ಕಾಲೇಜು ವಿದ್ಯಾರ್ಥಿನಿಲಯ, ಪ್ರಥಮದರ್ಜೆ ಕಾಲೇಜು ಬಾಲಕರ ವಿದ್ಯಾರ್ಥಿನಿಲಯ ಹಾಗೂ ವರ್ಗೀಕೃತ ಕಾಲೇಜು ಬಾಲಕರ ವಿದ್ಯಾರ್ಥಿನಿಲಯಗಳಿಗೂ ಅರ್ಜಿ ಸಲ್ಲಿಸಬಹುದು.
ಸಂಬಂಧಿಸಿದ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಂದ ಅರ್ಜಿ ಪಡೆದು, ಭರ್ತಿ ಮಾಡಿ ಜೂನ್ 30ರೊಳಗೆ ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗೆ ನಗರದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ (ದೂ.ಸಂ.08226-223143) ಮತ್ತು ಹತ್ತಿರದ ವಿದ್ಯಾರ್ಥಿನಿಲಯಗಳ ನಿಲಯಪಾಲಕರುಗಳನ್ನು ಸಂಪರ್ಕಿಸುವಂತೆ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆದರ್ಶ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಸೂಚನೆ

ಚಾಮರಾಜನಗರ, ಮೇ. 17 – ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ ವಿದ್ಯಾಲಯಗಳಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಇಲಾಖೆಯ ವೆಬ್ ಸೈಟ್ sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಹಾಗೂ ವಿದ್ಯಾವಾಹಿನಿಯ ವೆಬ್ ಸೈಟ್ ತಿತಿತಿ.iಜಥಿಚಿvಚಿhiಟಿi.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿಯೂ ಪ್ರಕಟಿಸಲಾಗಿದೆ.
ದಾಖಲಾತಿಯನ್ನು ಮೇ 25ರ ಸಂಜೆ 5 ಗಂಟೆಯವರೆಗೆ ಸಂಬಂಧಿಸಿದ ತಾಲೂಕುಗಳ ಆದರ್ಶ ವಿದ್ಯಾಲಯಗಳಲ್ಲಿ ಆನ್ ಲೈನ್ ಮೂಲಕ ದಾಖಲಿಸಿಕೊಳ್ಳಲಾಗುತ್ತದೆ. ವೆಬ್ ಸೈಟ್‍ನಲ್ಲಿ ಪ್ರಕಟಿಸಲಾದ ವಿದ್ಯಾರ್ಥಿಗಳ ಅಲಾಂಟ್‍ಮೆಂಟ್ ಕಾರ್ಡನ್ನು ಪಡೆದುಕೊಂಡು ಆಯ್ಕೆಗೊಂಡಿರುವ ಆದರ್ಶ ವಿದ್ಯಾಲಯಗಳ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ನಿಯಮಾನುಸಾರ ದಾಖಲಾತಿ ಮಾಡಿಕೊಳ್ಳುವುದು.
ನಿಗದಿತ ಅವಧಿಯ ನಂತರ ಬರುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 ಮೊರಾರ್ಜಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಿರ್ವಹಿಸಲಾಗುತ್ತಿರುವ ಹನೂರು ಹಾಗೂ ಯಡವನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆ ಹಾಗೂ ಹನೂರಿನ ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಕಾಲೇಜಿನಲ್ಲಿ ಪಡೆದು ಭರ್ತಿ ಮಾಡಿ ಮೇ 19ರೊಳಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ ಮೊಬೈಲ್ 9620452781, 9110844833 ಸಂಪರ್ಕಿಸುವಂತೆ ಹನೂರು ಮೊರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪರೀಕ್ಷಾಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 17  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2018-19ನೇ ಸಾಲಿನಲ್ಲಿ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಪ್ರೊಬೇಷನರಿ ಆಫೀಸರ್ಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮೇ 30 ಕಡೆಯ ದಿನ.
ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿss.ಞಚಿಡಿ.ಟಿiಛಿ.iಟಿ ನೋಡುವುದು. ಸಹಾಯವಾಣಿ ಸಂಖ್ಯೆ 8050770004ನ್ನು ಸಂಪರ್ಕಿಸಿಯೂ ಪಡೆಯಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಪರಿಚಿತ ಗಂಡಸಿನ ಶವ ಪತ್ತೆ
ಚಾಮರಾಜನಗರ, ಮೇ. 17  ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಪ್ರಾಧಿಕಾರಕ್ಕೆ ಸೇರಿದ ಮಾಸ್ಟರ್ ಪ್ಲಾನ್ ಆವರಣದಲ್ಲಿಯ WಖಿP  ಮುಂಭಾಗ ವಾಹನ ಪೂಜಾ ಪಾರ್ಕಿನಲ್ಲಿ ಒಬ್ಬ ಗಂಡಸು ಮೃತಪಟ್ಟಿರುವುದಾಗಿ ಮೇಸ್ತ್ರಿ ನಾಗರಾಜು ಅವರು ಪ್ರಾಧಿಕಾರದ ಕಚೇರಿಗೆ ಲಿಖಿತ ದೂರು ಸಲ್ಲಿಸಿರುತ್ತಾರೆ.
ದೂರಿನ ಮೇರೆಗೆ ಸ್ಥಳದಲ್ಲಿ ಪರಿಶೀಲಿಸಲಾಗಿ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರಾಧಿಕಾರದ ನೌಕರರಾದ ಕಾರ್ಯದರ್ಶಿಗಳ ಪರವಾಗಿ ರಾಜಶೇಖರ ಅವರು ಠಾಣೆಗೆ ತಿಳಿಸಿದ್ದು ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ 47 ವರ್ಷದವರಾಗಿದ್ದು 163 ಸೆಂ.ಮೀ. ಎತ್ತರವಿರುತ್ತಾರೆ. ಎಣ್ಣೆಗೆಂಪು ಬಣ್ಣ, ಸಾದಾರಣ ಮೈಕಟ್ಟು, ಕೋಲುಮುಖ, ಕಪ್ಪು ತಲೆಗೂದಲು ಇರುತ್ತದೆ. ಒಂದು ನೀಲಿ ಮತ್ತು ಕಡುನೀಲಿ ಸಣ್ಣ ಚಾಕುಳಿಯ ತುಂಬುತೋಳಿನ ಶರ್ಟ್, ಆಕಾಶನೀಲಿ, ನಶ್ಯಾ ಬಿಳಿ ಸಣ್ಣ ಚಾಕುಳಿಯುಳ್ಳ ಲುಂಗಿ, ಸಿಮೆಂಟ್ ಬಣ್ಣದ ಹೂವಿನ ಡಿಸೈನ್ ಇರುವ ಬೆಟ್ ಶೀಟ್ ಧರಿಸಿರುತ್ತಾರೆ.
ಮೃತರ ವಾರಸುದಾರರು ಇದ್ದಲ್ಲಿ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08225-272141, ಮೊಬೈಲ್ 9480804658, ಕಂಟ್ರೋಲ್ ರೂಂ 08226-222398ಗೆ ಮಾಹಿತಿ ನೀಡುವಂತೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಅರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 19 ರಿಂದ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆ: ನಿಷೇದಾಜ್ಞೆ ಜಾರಿ
ಚಾಮರಾಜನಗರ, ಮೇ. 17 - ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯನ್ನು ನಗರದ ಜೆ ಎಸ್ ಎಸ್ ಬಾಲಕರ ಪ್ರೌಢಶಾಲೆಯಲ್ಲಿ ಮೇ 19 ರಿಂದ 21ರವರೆಗೆ ನಡೆಸಲಿದೆ.
ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 5.30 ಗಂಟೆಯವರೆಗೆ ನಿಷ್ಭೆದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 5.30 ಗಂಟೆಯವರೆಗೆ ಮುಚ್ಚುವಂತೆಯೂ ಆದೇಶಿಸಿದ್ದಾರೆ. ಆದರೆ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಿಷೇಧಾಜ್ಞೆ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ.

ಯಳಂದೂರು : ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 - ಯಳಂದೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
8 ರಿಂದ 10ನೇ ತರಗತಿವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ವರ್ಗದ ಜನಾಂಗದ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ, ಸಂಬಂಧಿಸಿದ ಮೇಲ್ವಿಚಾರಕರು ಅಥವಾ ಕಚೇರಿ ದೂರವಾಣಿ ಸಂಖ್ಯೆ 08226-240309 ಹಾಗೂ ಇಲಾಖಾ ವೆಬ್ ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನೋಡುವಂತೆ ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಗುತ್ತಿಗೆದಾರರಿಂದ ದರಪಟ್ಟಿ ಆಹ್ವಾನ
ಚಾಮರಾಜನಗರ, ಮೇ. 17 :- ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಸ್ಥಳದಿಂದ ವಿದÀ್ಯುತ್ ಕಂಬ ಮತ್ತು ಲೈನ್ ಸ್ಥಳಾಂತರಿಸಲು ಪುರಸಭಾ ನಿಧಿಯಡಿಯಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಕಚೇರಿಯಿಂದ ಅಂದಾಜು ಪಟ್ಟಿ ಮಾಹಿತಿ ಪಡೆದು ಇಚ್ಚೆಯುಳ್ಳ ಗುತ್ತಿಗೆದಾರರಿಂದ ದರಪಟ್ಟಿ ಸಲ್ಲಿಸಲು ಆಹ್ವಾನಿಸಲಾಗಿದೆ. ತಮ್ಮ ದರವನ್ನು ದಿನಾಂಕ 24.05.2018ರ ಸಂಜೆ 4 ಗಂಟೆಯೊಳಗೆ ಸೀಲು ಮಾಡಿದ ಲಕೋಟೆಯಲ್ಲಿ ಸಲ್ಲಿಸಲು ತಿಳಿಸಿದೆ.
ಷರತ್ತು ಮತ್ತು ನಿಬಂಧನೆಗಳು- ಕೊಟೇಷನ್ ಅನ್ನು ಅಂಗೀಕರಿಸುವ, ತಿರಸ್ಕರಿಸುವ ಹಕ್ಕು ಪುರಸಭೆಗೆ ಇರುತ್ತದೆ. ಅವಧಿ ಮೀರಿ ಬಂದ ಕೊಟೇಷನ್‍ಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ವಿವರಗಳನ್ನು ಪುರಸಭೆಯ ವಿದ್ಯುತ್ ಶಾಖೆಯಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.








Tuesday, 15 May 2018

ಚಾಮರಾಜನಗರ ಯಾರು ಗೆದ್ದ ಅಭ್ಯರ್ಥಿಗಳು, ಪಡೆದ ಮತಗಳು, ನೋಟಾದ ಬಗ್ಗೆ ಖಡಕ್ ಮಾತು, ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018 ಇಬ್ಬರು ಕಾಂಗ್ರೆಸ್, ಒರ್ವ ಬಿ.ಜೆ.ಪಿ, ಬಿ.ಎಸ್.ಪಿ ಅಭ್ಯರ್ಥಿ ಗೆಲುವು! (15-05-2018)

S.VEERABJADRA SWAMY-TIGER: ಕೊಳ್ಳೇಗಾಲ ಕ್ಷೇತ್ರ -222 ನ 18 ಸುತ್ತುಗಳ ಮತೆಣಿಕೆ ನಂತರ *(VBS)* ಬಿಎಸ್ ಪಿ ಯ ಅಭ್ಯರ್ಥಿ ಎನ್ ಮಹೇಶ್ ಅವರು *(VBS)* ಕಾಂಗ್ರೆಸ್‌ನ ಎ ಆರ್ ಕೃಷ್ಣ ಮೂರ್ತಿ  ಅವರಿಗಿಂತ 19454 ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. S.VEERABJADRA SWAMY-TIGER: ಚಾಮರಾಜನಗರ ಕ್ಷೇತ್ರ -223 ನ 17 ಸುತ್ತುಗಳ ಮತೆಣಿಕೆ ನಂತರ *(VBS) ಇದು ನಮ್ಮ ಪಲಿತಾಂಶ ಪಿಕ್ಸ) ಕಾಂಗ್ರೆಸ್‌ನ ಪುಟ್ಟರಂಗಶೆಟ್ಟಿ ಅವರು *(VBS)* ಬಿಜೆಪಿಯ ಮಲ್ಲಿಕಾರ್ಜುನ ಅವರಿಗಿಂತ 4913 ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.
 S.VEERABJADRA SWAMY-TIGER: ಹನೂರು ಕ್ಷೇತ್ರ -221 ನ 18 ಸುತ್ತುಗಳ ಮತೆಣಿಕೆ ನಂತರ ಕಾಂಗ್ರೆಸ್‌ನ ಆರ್ ನರೇಂದ್ರ ಅವರು  ಬಿಜೆಪಿಯ ಪ್ರೀತನ್ ನಾಗಪ್ಪ ಅವರಿಗಿಂತ 3513 ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.
 S.VEERABJADRA SWAMY-TIGER: ಗುಂಡ್ಲುಪೇಟೆ ಕ್ಷೇತ್ರ -224 ನ 18 ಸುತ್ತುಗಳ ಮತೆಣಿಕೆ ನಂತರ ಬಿಜೆಪಿಯ ಸಿ ಎಸ್ ನಿರಂಜನ್ ಕುಮಾರ್ ಅವರು(VBS) ಕಾಂಗ್ರೆಸ್‌ನ ಎಂ ಸಿ ಮೋಹನ ಕುಮಾರಿ   ಅವರಿಗಿಂತ 16684 ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. *VSS*
*ಬಹುತೇಕ‌ ಜಿಲ್ಲೆಯಲ್ಲಿ ರಾಜಕೀಯ, ರಾಜಕಾರಣಿಗಳಿಂದ ಬೇಸತ್ತು ೫೦೦೦/ಕ್ಕೂ ಹೆಚ್ಚು ಮೋಟಾ ಮತಗಳು ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.
*ನೋಟ ಬಟನ್ ಆದರೂ ಒತ್ತಿ ನಿಮ್ಮ ಹಕ್ಕು ಚಲಾಯಿಸಿ ಎಂದು ಅಬಿಯಾನ‌ ಆರಂಬಿಸಿದ ಚಾಮರಾಜನಗರ ಎಸ್.ವೀರಭದ್ರಸ್ವಾಮಿ ಅವರಿಗೆ ಅಭೂತಪೂರ್ವ ಮತಗಳು‌ ಬಿದ್ದಿವೆ. ನೋಟಾದ ಬಗ್ಗೆ ಯಾವುದಾದರೂ ವ್ಯಕ್ತಿ ಅವಹೇಳನವಾಗಿ ಏನು ಉಪಯೋಗ ಎಂದು ಮಾತನಾಡಿದರೆ ಅವರನ್ನ ಕೆಟ್ಟಪದಗಳಿಂದಲೇ ವರ್ಣಿಸಬೇಕು ಎಂದಿರುವ ಅವರು ಮತ ಚಲಾವಣೆ ಮಾಡದೆ ಸತ್ತ ಪ್ರಜೆಯಾಗುವ ಬದಲು ಸಂವಿದಾನ ಬದ್ದ‌ಹಕ್ಕು ಮತ ಚಲಾಯಿಸಿ ಸತ್ಪ್ರಜೆಯಾಗಿದ್ದೇವೆ . ಕೆಲವು‌ ನಾಯಿಗಳು ಹಣ ಪಡೆದು ಮತ ಹಾಕಿದರೆ ಅವರಿಗಿಂತ ನಾವು ಉತ್ತಮರಲ್ಲವೇ!? ಇತರ ಪಕ್ಷಗಳಿಂರ ಯಾರು ಋಣಿಯಾಗಿದ್ದೀರಾ ಅವರು ಅವರ ಋಣ ತೀರಿಸಿದ್ದಾರೆ. ನಾವು ಯಾರ ಹಂಗೂ ಇಲ್ಲದೆ ನಮ್ಮ ಹಕ್ಕು  ಚಲಾಯಿಸಿದ್ದೇವೆ ಎಂದು ಕಂಟಾಘೋಷವಾಗಿ ಹೇಳಿ ಎಂದ ನೋಟ ಮತದಾನ ಮಾಡಿದ ಮತದಾರರಿಗೆ ಕಿವಿ ಮಾತು ಹೇಳಿದ್ದಾರೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018

ಇಬ್ಬರು ಕಾಂಗ್ರೆಸ್, ಒರ್ವ ಬಿ.ಜೆ.ಪಿ, ಬಿ.ಎಸ್.ಪಿ ಅಭ್ಯರ್ಥಿ ಗೆಲುವು

ಚಾಮರಾಜನಗರ, ಮೇ. 15 - ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು, ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು, ಒರ್ವ ಬಿ.ಜೆ.ಪಿ, ಒರ್ವ ಬಿ.ಎಸ್.ಪಿ ಅಭ್ಯರ್ಥಿ ಜಯಶೀಲರಾಗಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆರ್. ನರೇಂದ್ರ ಅವರು 60,444 ಮತಗಳನ್ನು ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ. ಸಮೀಪ ಸ್ಪರ್ಧಿ ಬಿ.ಜೆ.ಪಿ ಪಕ್ಷದ ಡಾ. ಪ್ರೀತನ್ ನಾಗಪ್ಪ 56,931 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ. ಮಂಜುನಾಥ ಎಂ.ಆರ್ (ಜಾತ್ಯತೀತ ಜನತಾ ದಳ) 44,957, ಎಸ್. ಗಂಗಾಧರ್ (ಲೋಕ್ ಅವಾಜ್ ದಳ್) 572, ಪ್ರದೀಪ್ ಕುಮಾರ್ ಎಂ. (ಅಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ) 479, ಬಿ.ಭಾನುಪ್ರಕಾಶ್ (ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ) 326, ಆರ್.ಪಿ. ವಿಷ್ಣುಕುಮಾರ್ (ಎ.ಐ.ಎ.ಡಿ.ಎಂ.ಕೆ) 503, ಡಿ. ಶ್ರೀಕಂಠಸ್ವಾಮಿ (ಸ್ವರಾಜ್ ಇಂಡಿಯಾ) 562, ಜಯಪ್ರಕಾಶ್ ಜೆ (ಪಕ್ಷೇತರ) 701, ಜಾನ್ ಡಾನ್ ಬೋಸ್ಕೋ ಕೆ (ಪಕ್ಷೇತರ) 755, ಜ್ಞಾನಪ್ರಕಾಶ್ ಜೆ (ಪಕ್ಷೇತರ) 245, ಮಹೇಶ(ಪಕ್ಷೇತರ) 352, ಆರ್. ಮಹೇಶ (ಪಕ್ಷೇತರ) 502, ಸಿದ್ದಪ್ಪ (ಪಕ್ಷೇತರ) 873, ಸೆಲ್ವರಾಜ್ ಎಸ್ (ಪಕ್ಷೇತರ) 758, ನೋಟಾ 1373. 
157 ಮತಗಳು ತಿರಸ್ಕ್ರತವಾಗಿವೆ. 3 ಟೆಂಡರ್ಡ್ ಮತಗಳಾಗಿವೆ. 
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಹುಜನ್ ಸಮಾಜ ಪಾರ್ಟಿ ಅಭ್ಯರ್ಥಿ ಎನ್. ಮಹೇಶ್ ಅವರು 71,792 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಸಮೀಪ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಎ.ಆರ್. ಕೃಷ್ಣಮೂರ್ತಿ ಅವರು 52,338 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ. ಜಿ.ಎನ್. ನಂಜುಂಡಸ್ವಾಮಿ (ಬಿ.ಜೆ.ಪಿ) 39,690, ಚಿಕ್ಕಸಾವಕ ಎಸ್ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ)) 1,591 ನಿಂಗರಾಜ್ ಜಿ (ರಿಪಬ್ಲಿಕನ್ ಸೇನ) 871, ಲಕ್ಷ್ಮೀ ಜಯಶಂಕರ (ಅಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ) 643, ನಾಗರತ್ನ ಎಂ (ಪಕ್ಷೇತರ) 422, ನೋಟಾ 1524. 
116 ಮತಗಳು ತಿರಸ್ಕ್ರತವಾಗಿವೆ. 1 ಟೆಂಡರ್ಡ್ ಮತಗಳಾಗಿವೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ ಅವರು 75,404 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಸಮೀಪ ಸ್ಪರ್ಧಿ ಬಿ.ಜೆ.ಪಿ ಪಕ್ಷದ ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು 70,503 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ. ಎ.ಎಂ. ಮಲ್ಲಿಕಾರ್ಜುನಸ್ವಾಮಿ (ಆಲೂರು ಮಲ್ಲು) (ಬಹುಜನ್ ಸಮಾಜ ಪಾರ್ಟಿ) 7062, ಎಸ್. ಗಣೇಶ್ (ಭಾರತೀಯ ಬಿ,ಆರ್. ಅಂಬೇಡ್ಕರ್ ಜನತಾ ಪಾರ್ಟಿ) 279, ನಾಗಸುಂದರ ಡಿ. (ಭಾರತೀಯ ರಿಪಬ್ಲಿಕನ್ ಪಕ್ಷ) 262, ನಾರಾಯಣಸ್ವಾಮಿ ಜೆ (ಸಾಮಾನ್ಯ ಜನತಾ ಪಾರ್ಟಿ(ಲೋಕ ತಾಂತ್ರಿಕ್)) 552, ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ) 5963, ಸರಸ್ವತಿ ಎಂ.ಆರ್ (ಅಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ) 523, ಲಾಯರ್ ಚಿನ್ನಸ್ವಾಮಿ ಎಂ (ಪಕ್ಷೇತರ) 501, ಪ್ರಸನ್ನ ಕುಮಾರ್ ಬಿ (ಪಕ್ಷೇತರ) 359, ಎಂಎಸ್. ಮಲ್ಲಿಕಾರ್ಜುನ್ (ಪಕ್ಷೇತರ) 440, ರಂಗಸ್ವಾಮಿ (ಪಕ್ಷೇತರ) 552, ಸುರೇಶ ಬಿ.ಎನ್ (ಪಕ್ಷೇತರ) 540, ಎಂ. ಹೊನ್ನೂರಯ್ಯ (ಪಕ್ಷೇತರ) 903, ನೋಟಾ 2054. 
62 ಮತಗಳು ತಿರಸ್ಕ್ರತವಾಗಿವೆ. 
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಸಿ.ಎಸ್. ನಿರಂಜನ್‍ಕುಮಾರ್ ಅವರು 94,151 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಸಮೀಪ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು 77,467 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ. ಎಸ್. ಗುರುಪ್ರಸಾದ್ (ಬಹುಜನ್ ಸಮಾಜ ಪಾರ್ಟಿ) 6,412, ಕಾಂತರಾಜ್ ಸಿ.ಜಿ. (ಪ್ರಜಾ ಪರಿವರ್ತನ್ ಪಾರ್ಟಿ) 1419, ಎ.ಜಿ. ರಾಮಚಂದ್ರರಾವ್ (ಅಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ) 857, ಬಿ.ಸಿ. ಶೇಖರರಾಜು (ಪಕ್ಷೇತರ) 717, ಬೆಳ್ಳಶೆಟ್ಟಿ ಸಿದ್ದಯ್ಯ (ಪಕ್ಷೇತರ) 648, ನೋಟಾ 1231. 
328 ಮತಗಳು ತಿರಸ್ಕ್ರತವಾಗಿವೆ. 

ಪರಿಷತ್ ಚುನಾವಣೆ: ವೇಳಾಪಟ್ಟಿ ಪ್ರಕಟ 
ಚಾಮರಾಜನಗರ, ಮೇ. 15 - ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕೆÀ್ಷೀತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮೇ 15ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಮೇ 22 ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನಾ ಕಾರ್ಯವು ಮೇ 23ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 25 ಕಡೆಯ ದಿನವಾಗಿದೆ. ಜೂನ್ 8ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಜೂನ್ 12ರಂದು ಬೆಳಿಗ್ಗೆ 8 ಗಂಟೆಗೆ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ. ಜೂನ್ 15ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ. 
ಹೆಚ್ಚಿನ ವಿವರಗಳಿಗೆ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಪಿ. ಹೇಮಲತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





ಎಸ್.ಎಸ್.ಎಲ್.ಸಿ : ಹರದನಹಳ್ಳಿ ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆಗೆ ಶೇ. 96.66 ಫಲಿತಾಂಶ

ಚಾಮರಾಜನಗರ, ಮೇ. 15 – ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಿರ್ವಹಿಸುತ್ತಿರುವ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆಯಿಂದ 2017-18ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಒಟ್ಟು 30 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಶೇ.96.66ರಷ್ಟು ಫಲಿತಾಂಶ ಬಂದಿದೆ.  
ಇವರಲ್ಲಿ 29 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ಹಾಗೂ 7 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಯು. ಹೇಮಲತ 625ಕ್ಕೆ 582 ಅಂಕ ಪಡೆದು ಶೇ.93.12ರಷ್ಟು ಹಾಗೂ ಡಿ. ತೇಜಸ್ವಿನಿ 544 ಅಂಕ ಪಡೆದು ಶಾಲೆಗೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ತಂದಿದ್ದಾರೆ. ಶಾಲೆಗೆ ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಪ್ರಾಂಶುಪಾಲರಾದ ಮಹದೇವಪ್ರಸಾದ್ ಅವರು ಅಭಿನಂದಿಸಿದ್ದಾರೆ. 

ಯುವ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 15:– ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ವಿಧಾನದ ಮನವರಿಕೆ ಮಾಡುವುದು, ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವುದು, ರಾಜ್ಯದ, ರಾಷ್ಟ್ರದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು, ಮೂಲ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹಾಗೂ ಚಿಂತನ ಕೌಶಲ್ಯ ವರ್ಧಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2017-18ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
9 ರಿಂದ 12ನೇ ತರಗತಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಅಥವಾ ಪರಿಷತ್ತಿನ ವೆಬ್‍ಷೈಟ್ ತಿತಿತಿ.ಞಡಿvಠಿ.oಡಿg ಯಿಂದ ಅರ್ಜಿ ಹಾಗೂ ಮಾಹಿತಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲಾತಿಗಳನ್ನು ಲಗತ್ತಿಸಿ ಜೂನ್ 14ರೊಳಗೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹಾಗೂ ಅರ್ಜಿಯ ಒಂದು ಪ್ರತಿಯನ್ನು ಪರಿಷತ್ತಿನ ಕೇಂದ್ರ ಕಚೇರಿಗೆ ಕಳುಹಿಸಬೇಕು.
ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜೂನ್ 23ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಯುವ ವಿಜ್ಞಾನಿಗಳು ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ ಬಹುಮಾನ 3 ಸಾವಿರ ರೂ. ಹಾಗೂ ತೃತೀಯ ಬಹುಮಾನ 2 ಸಾವಿರ ರೂ.ಗಳಾಗಿರುತ್ತದೆ.
ರಾಜ್ಯ ಮಟ್ಟದಲ್ಲಿ 4 ಯುವ ವಿಜ್ಞಾನಿಗಳಿಗೆ ತಲಾ 10 ಸಾವಿರ ರೂ. ಬಹುಮಾನವಿರುತ್ತದೆ.
ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಚೇರಿ ದೂ.ಸಂ. 080-26718939 ಅಥವಾ ಮೊಬೈಲ್ 9483549159, 9008442557, 9449530245 ಸಂಪರ್ಕಿಸಿ ಪಡೆಯುವಂತೆ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಬಿ. ಕಡ್ಲೇವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


































































Monday, 14 May 2018

(12-05-2018) ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018 ಜಿಲ್ಲೆಯಲ್ಲಿ ಶೇ. 82.44ರಷ್ಟು ಮತದಾನ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು, ಕೊಳ್ಳೇಗಾಲದಲ್ಲಿ ಕಡಿಮೆ ಮತ ಚಲಾವಣೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018
ಜಿಲ್ಲೆಯಲ್ಲಿ ಶೇ. 82.44ರಷ್ಟು ಮತದಾನ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು, ಕೊಳ್ಳೇಗಾಲದಲ್ಲಿ ಕಡಿಮೆ ಮತ ಚಲಾವಣೆ

ಚಾಮರಾಜನಗರ, ಮೇ. 13 :- ಜಿಲ್ಲೆಯಲ್ಲಿ ಶನಿವಾರ ನಡೆದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟಾರೆ ಶೇ. 82.44ರಷ್ಟು ಮತದಾನವಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 81.61 ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ. 79.15 ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 80.52 ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶೇ. 88.57ರಷ್ಟು ಮತದಾನವಾಗಿದೆ.
ಶೇಕಡಾವಾರು ಅಂಕಿಅಂಶಗಳನ್ನು ಗಮನಿಸಿದಾಗ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದ್ದರೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ
ಜಿಲೆಯಲ್ಲ್ಲಿ 4,14,366 ಪುರುಷರು, 4,16,460 ಮಹಿಳೆಯರು, ಇತರರು 61 ಮತದಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 8,30,887 ಮತದಾರರಿದ್ದಾರೆ. ಇವರ ಪೈಕಿ 3,46,079 ಪುರುಷರು, 3,38,870 ಮಹಿಳೆಯರು, ಇತರ 9 ಮಂದಿ ಸೇರಿದಂತೆ ಒಟ್ಟಾರೆ 6,84,958 ಮತದಾರರು ಮತ ಚಲಾಯಿಸಿದ್ದಾರೆ. ಶೇ. 83.52ರಷ್ಟು ಪುರುಷರು, ಶೇ. 81.37ರಷ್ಟು ಮಹಿಳೆಯರು, ಶೇ. 14.75ರಷ್ಟು ಇತರೆ ಮಂದಿ ಸೇರಿದಂತೆ ಒಟ್ಟಾರೆ ಶೇ. 82.44ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,05,638 ಪುರುಷರು, 1,01,949 ಮಹಿಳೆಯರು, ಇತರರು 16 ಮಂದಿ ಸೇರಿದಂತೆ ಒಟ್ಟು 2,07,603 ಮತದಾರರಿದ್ದಾರೆ. ಈ ಪೈಕಿ 86,585 ಪುರುಷರು, 82,835 ಮಹಿಳೆಯರು, ಇತರರು ಐವರು ಸೇರಿದಂತೆ  ಒಟ್ಟು 1,69,425 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 81.96ರಷ್ಟು ಪುರುಷರು, ಶೇ.81.25ರಷ್ಟು ಮಹಿಳೆಯರು, ಶೇ. 31.25ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 81.61ರಷ್ಟು ಮತದಾನವಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 1,05,129 ಪುರುಷರು, 1,06,380 ಮಹಿಳೆಯರು, ಇತರರು 13 ಮಂದಿ ಸೇರಿದಂತೆ ಒಟ್ಟು 2,11,522 ಮತದಾರರಿದ್ದಾರೆ. ಈ ಪೈಕಿ 84,654 ಪುರುಷರು, 82,775 ಮಹಿಳೆಯರು, ಇತರರು ಒರ್ವ ಸೇರಿದಂತೆ ಒಟ್ಟು 1,67,430 ಮತದಾರರು ಮತ ಚಲಾಯಿಸಿದ್ದಾರೆ. ಶೇ. 80.52ರಷ್ಟು ಪುರುಷರು, ಶೇ.77.81ರಷ್ಟು ಮಹಿಳೆಯರು, ಶೇ. 7.69ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 79.15ರಷ್ಟು ಮತದಾನವಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 1,01,659 ಪುರುಷರು, 1,04,471 ಮಹಿಳೆಯರು, ಇತರರು 16 ಮಂದಿ ಸೇರಿದಂತೆ ಒಟ್ಟು 2,06,146 ಮತದಾರರಿದ್ದಾರೆ. ಈ ಪೈಕಿ 83,752 ಪುರುಷರು, 82,242 ಮಹಿಳೆಯರು, ಇತರರು ಇಬ್ಬರು ಸೇರಿದಂತೆ ಒಟ್ಟು 1,65,996 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 82.39ರಷ್ಟು ಪುರುಷರು, ಶೇ. 78.72ರಷ್ಟು ಮಹಿಳೆಯರು, ಶೇ. 12.50ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 80.52ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,01,940 ಪುರುಷ, 1,03,660 ಮಹಿಳೆಯರು, ಇತರರು 16 ಮಂದಿ ಸೇರಿದಂತೆ ಒಟ್ಟು 2,05,616 ಮತದಾರರಿದ್ದಾರೆ. ಇವರಲ್ಲಿ 91,088 ಪುರುಷರು, 91,018 ಮಹಿಳೆಯರು, ಇತರೆ ಒರ್ವ ಸೇರಿದಂತೆ ಒಟ್ಟು 1,82,107 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 89.35ರಷ್ಟು ಪುರುಷರು, ಶೇ.87.80ರಷ್ಟು ಮಹಿಳೆಯರು, ಶೇ. 6.25ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 88.57ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತಂಗೇರಿಹುಂಡಿಯಲ್ಲಿ ಅತೀ ಹೆಚ್ಚು, ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆ ಮತಗಟ್ಟೆಯಲ್ಲಿ ಅತೀ ಕಡಿಮೆ ಮತದಾನ
ಚಾಮರಾಜನಗರ, ಮೇ. 13 - ಜಿಲ್ಲೆಯಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉತ್ತಂಗೇರಿಹುಂಡಿ ಮತಗಟ್ಟೆಯಲ್ಲಿ (ಮತಗಟ್ಟೆ ಸಂಖ್ಯೆ 242) ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ಶೇ. 97.78ರಷ್ಟು ಮತದಾನವಾಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕೊಳ್ಳೇಗಾಲದ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 140ಎ)ಯಲ್ಲಿ ಅತೀ ಕಡಿಮೆ ಅಂದರೆ ಶೇ. 47.38ರಷ್ಟು ಮತದಾನ ನಡೆದಿದೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನಲ್ಲಿಕತ್ರಿ ಮತಗಟ್ಟೆ (ಮತಗಟ್ಟೆ ಸಂಖ್ಯೆ 229)ಯಲ್ಲಿ ಅತೀ ಹೆಚ್ಚು ಅಂದರೆ ಶೇ. 95.58ರಷ್ಟು ಮತದಾನವಾಗಿದೆ. ಅತ್ತೀಖಾನೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 230) ಯಲ್ಲಿ ಅತೀ ಕಡಿಮೆ ಅಂದರೆ ಶೇ. 55.38ರಷ್ಟು ಮತದಾನವಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕೆ.ದೇವರಹಳ್ಳಿ ಮತಗಟ್ಟೆ (ಮತಗಟ್ಟೆ ಸಂಖ್ಯೆ 194)ಯಲ್ಲಿ ಅತೀ ಹೆಚ್ಚು ಅಂದರೆ ಶೇ. 94.07ರಷ್ಟು ಮತದಾನವಾಗಿದೆ. ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 140ಎ)ಯಲ್ಲಿ ಅತೀ ಕಡಿಮೆ ಅಂದರೆ ಶೇ. 47.38ರಷ್ಟು ಮತದಾನ ನಡೆದಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಳ್ಳೂರು ಮತಗಟ್ಟೆ (ಮತಗಟ್ಟೆ ಸಂಖ್ಯೆ 154)ಯಲ್ಲಿ ಅತೀ ಹೆಚ್ಚು ಅಂದರೆ ಶೇ. 96.12ರಷ್ಟು ಮತದಾನವಾಗಿದೆ. ಚಾಮರಾಜನಗರ ಪಟ್ಟಣದ ಪಿಡಬ್ಲೂಡಿ ಕಾಲೋನಿಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 78) ಯಲ್ಲಿ ಅತೀ ಕಡಿಮೆ ಅಂದರೆ ಶೇ. 50ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಂಗೇರಿಹುಂಡಿ ಮತಗಟ್ಟೆಯಲ್ಲಿ (ಮತಗಟ್ಟೆ ಸಂಖ್ಯೆ 242) ಅತೀ ಹೆಚ್ಚು ಅಂದರೆ ಶೇ. 97.78ರಷ್ಟು ಮತದಾನವಾಗಿದ್ದರೆ ಗುಂಡ್ಲುಪೇಟೆ ಪಟ್ಟಣದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 213) ಯಲ್ಲಿ ಅತೀ ಕಡಿಮೆ ಅಂದರೆ ಶೇ. 59.68ರಷ್ಟು ಮತದಾನ ನಡೆದಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾನ ಪ್ರಮಾಣ ಹೆಚ್ಚಳ: ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ. ಹರೀಶ್ ಕುಮಾರ್ ಅವರಿಂದ ಮತದಾರರಿಗೆ ಅಭಿನಂದನೆ

ಚಾಮರಾಜನಗರ, ಮೇ. 13 - ಜಿಲ್ಲೆಯ ವಿಧಾನಸಭಾ ಕ್ಷೇತ್ರ ಚುನಾವಣೆ ಇತಿಹಾಸದಲ್ಲಿಯೆ ಇದೇ ಮೊದಲ ಬಾರಿಗೆ ಮತದಾರರು ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿರುವುದಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮತದಾರರಿಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರು ಮತದಾನದಂತಹ ಪವಿತ್ರ ಕಾರ್ಯದಲ್ಲಿ ಸ್ವಇಚ್ಚೆಯಿಂದ, ಉತ್ಸಾಹದಿಂದ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮತ್ತÀಷ್ಟು ನಂಬಿಕೆ ಪ್ರದರ್ಶಿಸಿದ್ದಾರೆ. ಜಿಲ್ಲಾ ಸ್ವೀಪ್ ಸಮಿತಿಯ ಚಟುವಟಿಕೆಗಳಿಗೆ ಉತ್ತಮ ಪ್ರತಿಕ್ರಿಯೆ ನೀಡಿ ಗರಿಷ್ಠ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣೀಭೂತರಾಗಿದ್ದಾರೆ ಎಂದು ಹರೀಶ್‍ಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಮತದಾನ ಜಾಗೃತಿಗಾಗಿ ಕಳೆದ 2013ರ ವಿಧಾನಸಭಾ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಹೆಚ್ಚು ಮತದಾನವಾಗಲು ಸಾಕಷ್ಟು ಯೋಜನೆ, ಚಟುವಟಿಕೆಗಳನ್ನು ಸ್ವೀಪ್ ಸಮಿತಿ ಗುರಿ ಇಟ್ಟುಕೊಂಡು ಅನುಷ್ಟಾನಗೊಳಿಸಿತು. ರಾಜ್ಯದಲ್ಲಿಯೆ ಜಿಲ್ಲೆಯು ಉತ್ತಮ ಸಾzsನೆ ಮಾಡಲು ಸಹಕರಿಸಿದ ಜಿಲ್ಲೆಯ ಮತದಾರರು, ದೃಶ್ಯ ಹಾಗೂ ಪತ್ರಿಕಾ ಮಾದ್ಯಮಮಿತ್ರರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್, ಶಿಕ್ಷಣ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ಕಲಾತಂಡಗಳು, ಸಮಸ್ತ ನಾಗರಿಕರಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತಿರುವುದಾಗಿ ಡಾ. ಕೆ. ಹರೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018
ಮತ ಎಣಿಕೆ: ವಿಜಯೋತ್ಸವ ಮೆರವಣಿಗೆ ನಿಷೇಧ

ಚಾಮರಾಜನಗರ, ಮೇ. 13 - ಜಿಲ್ಲೆಯ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಮತ ಎಣಿಕೆ ಕಾರ್ಯವು ಮೇ 15ರಂದು ನಡೆಯಲಿರುವ ಹಿನ್ನಲೆಯಲ್ಲಿ ಮೇ 15ರ ಬೆಳಿಗ್ಗೆ 6ರಿಂದ ಮೇ 16ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ) ವಿಜಯೋತ್ಸವ, ಮೆರವಣಿಗೆ, ಸಭೆ, ಸಮಾರಂಭ, ಪಟಾಕಿ ಸಿಡಿಸುವಿಕೆ, ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವಿಕೆಯಂತಹ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆ ಕಾರ್ಯವು ಚಾಮರಾಜನಗರ ತಾಲೂಕಿನ ಬೇಡರಪುರದ ನಂಜನಗೂಡು-ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ವಿಜಯಿ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಭೆ, ಸಮಾರಂಭ, ಪಟಾಕಿ ಸಿಡಿಸುವುದು, ಉದ್ರೇಕಕಾರಿ ಘೋಷಣೆಗಳನ್ನು ಕೂಗುವುದು, ಸೋತ ಅಭ್ಯರ್ಥಿಗಳ, ಪಕ್ಷಗಳ ಕಾರ್ಯಕರ್ತರನ್ನು ಛೇಡಿಸುವುದು, ಸ್ಪೋಟಕ ವಸ್ತುಗಳು, ಮಾರಕಾಸ್ತ್ರಗಳನ್ನು ಒಯ್ಯುವುದು, ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ವಿಜಯೋತ್ಸವ ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಮೇ 15ರಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ರಜೆ

ಚಾಮರಾಜನಗರ, ಮೇ. 13- ಜಿಲ್ಲೆಯ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಮತ ಎಣಿಕೆ ಕಾರ್ಯವು ಮೇ 15ರಂದು ಚಾಮರಾಜನಗರ ತಾಲೂಕಿನ ಬೇಡರಪುರದ ನಂಜನಗೂಡು-ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಮತ ಎಣಿಕೆ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮೇ 15ರಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶದಲ್ಲಿ ಹೊರಡಿಸಿದ್ದಾರೆ.

 





 

ವಿಧಾನಸಭಾ ಸಾರ್ವತ್ರಿಕ ಚುನಾವಣೆ - 2018 ಮೇ 15ರಂದು ಮತ ಎಣಿಕೆ : ಸರ್ವಸಿದ್ಧತೆ – ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ (14-05-2018)

ವಿಧಾನಸಭಾ ಸಾರ್ವತ್ರಿಕ ಚುನಾವಣೆ - 2018
ಮೇ 15ರಂದು ಮತ ಎಣಿಕೆ : ಸರ್ವಸಿದ್ಧತೆ – ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ 

ಚಾಮರಾಜನಗರ, ಮೇ. 14 :– ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ಮೇ 12ರಂದು ನಡೆದ ಮತದಾನದ ಮತ ಎಣಿಕೆ ಕಾರ್ಯವು ಮೇ 15ರಂದು ಚಾಮರಾಜನಗರ ತಾಲೂಕಿನ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಕಟ್ಟಡದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ, ಇದಕ್ಕಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಪ್ರತೀ ಕ್ಷೇತ್ರಕ್ಕೆ ತಲಾ ಒಂದು ಹಾಲ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತೀ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್‍ಗಳನ್ನು ಬಳಸಲಾಗುತ್ತದೆ. ವಿದ್ಯುನ್ಮಾನ ಮತಯಂತ್ರಗಳನ್ನು ಒಟ್ಟು 7 ಭದ್ರತಾ ಕೊಠಡಿಗಳಲ್ಲಿ ಇಡಲಾಗಿದೆ. ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಒಟ್ಟು 56 ಟೇಬಲ್‍ಗಳಲ್ಲಿ ನಡೆಯಲಿದ್ದು, ಹನೂರು, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಮತ ಎಣಿಕೆಯು ತಲಾ 18 ಸುತ್ತುಗಳಲ್ಲಿ ನಡೆಯಲಿದ್ದು, ಚಾಮರಾಜನಗರ ಕ್ಷೇತ್ರದ ಮತ ಎಣಿಕೆಯು ಒಟ್ಟು 17 ಸುತ್ತುಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಮತ ಎಣಿಕೆ ಕಾರ್ಯಕ್ಕಾಗಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 20 ಮೈಕ್ರೋ ಅಬ್ಸರ್‍ವರ್‍ಗಳು, 17 ಎಣಿಕೆ ಮೇಲ್ವಿಚಾರಕರು, 18 ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ 80 ಮೈಕ್ರೋ ಅಬ್ಸರ್‍ವರ್‍ಗಳು, 68 ಎಣಿಕೆ ಮೇಲ್ವಿಚಾರಕರು ಹಾಗೂ 72 ಎಣಿಕೆ ಸಹಾಯಕರು ಮತ ಎಣಿಕೆ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗವು ಬಿಇಎಲ್ ಸಂಸ್ಥೆಯಿಂದ ಇಬ್ಬರು ವಿದ್ಯುನ್ಮಾನ ಯಂತ್ರಗಳ ತಂತ್ರಜ್ಞರನ್ನು ನಿಯೋಜಿಸಿದೆ. ಮತ ಎಣಿಕೆ ಕೇಂದ್ರದಲ್ಲಿ ತುರ್ತು ಆರೋಗ್ಯ ಸೇವೆ ಹಾಗೂ ಅಗ್ನಿಶಾಮಕ ಸೇವೆಯನ್ನು ಸಹ ಸನ್ನದ್ಧವಾಗಿರಿಸಿದೆ.
ಮತ ಎಣಿಕೆ ಕೇಂದ್ರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭದ್ರತಾ ಕೊಠಡಿಯ ಸುರಕ್ಷತೆಯನ್ನು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಏಜೆಂಟರು ಮತ ಎಣಿಕೆ ಕೇಂದ್ರದ ಹೊರಗಿನಿಂದ ಸಿಸಿ ಟಿವಿ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಮತ ಎಣಿಕೆ ಕೇಂದ್ರ ಹಾಗೂ ಆವರಣದ  ಸುತ್ತಲೂ 24*7 ಅವಧಿಯಲ್ಲೂ ಅತ್ಯಂತ ಬಿಗಿಯಾದ ಮೂರು ಸುತ್ತಿನ ಭದ್ರತಾ ವ್ಯವಸ್ಥೆಯನ್ನು ಸಿಎಪಿಎಫ್, ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‍ಆರ್‍ಪಿ) ಮತ್ತು ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ ಮೂಲಕ ಕಲ್ಪಿಸಲಾಗಿದೆ.
ಮತ ಎಣಿಕೆಯಂದು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎಣಿಕೆ ಸಮಯದಲ್ಲಿ ಹಾಗೂ ಎಣಿಕೆ ಕಾರ್ಯ ಮುಗಿದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಹೊರ ಆವರಣದ 200 ಮೀ. ದೂರದಲ್ಲಿ ವಾಹನಗಳ ನಿಲುಗಡೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅಧಿಕೃತ ಗುರುತಿನ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪ್ರವೇಶಪತ್ರ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಮೇ 15ರ ಬೆಳಿಗ್ಗೆ 6 ರಿಂದ ಮೇ 16ರ ಮದ್ಯರಾತ್ರಿ 12 ಗಂಟೆಯವರೆಗೆ ಸಿಆರ್‍ಪಿಸಿ ಕಲಂ 144ರ ಕಲಂ ಅನ್ವಯ ನಿಷೇದಾಜ್ಞೆಯನ್ನು ಹೊರಡಿಸಲಾಗಿದೆ. (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ)
ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಮೇ 14ರ ಮಧÀ್ಯರಾತ್ರಿಯಿಂದ ಮೇ 15ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ, ಸಾಗಾಣೀಕೆ, ಶೇಖರಣೆ ಮತ್ತು ಹಂಚಿಕೆಯನ್ನು ನಿಷೇಧಿಸಿ ಈ ಅವಧಿಯನ್ನು ಒಣದಿನಗಳೆಂದು ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 43 ಅಭ್ಯರ್ಥಿಗಳು ಇದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 984 ಬಿಯು ಹಾಗೂ ಸಿಯು (ವಿದ್ಯುನ್ಮಾನ ಮತಯಂತ್ರ) ಹಾಗೂ 998 ವಿವಿ ಪ್ಯಾಟ್‍ಗಳನ್ನು ಒಳಸಲಾಗಿದೆ. ಮತ ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಜಿಲ್ಲಾ ಕೇಂದ್ರದ ಭದ್ರತಾ ಕೊಠಡಿಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಆದರ್ಶ ವಿದ್ಯಾಲಯ : 6ನೇ ತರಗತಿ ಪ್ರವೇಶಕ್ಕೆ ಅವಕಾಶ

ಚಾಮರಾಜನಗರ, ಮೇ. 14  ಚಾಮರಾಜನಗರದ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಕ್ಕೆ ಮೇ 16 ರಿಂದ 25ರ ಸಂಜೆ 5 ಗಂಟೆಯವರೆಗೆ ಪ್ರವೇಶಕ್ಕೆ ಅವಕಾಶವಿದೆ.
ಮೊದಲ ಹಂತದಲ್ಲಿ ಆಯ್ಕೆಗೊಂಡ ಪೋಷಕರಿಗೆ ಸಂದೇಶ ರವಾನಿಸಿದ್ದು ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ತಿಳಿಸಿದೆ ಎಂದು ಆದರ್ಶ  ವಿದ್ಯಾಲಯದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























































Friday, 11 May 2018

ಇಂದು ತಪ್ಪದೇ ಮತದಾನ ಮಾಡಿ: ಡಿ.ಸಿ ಮನವಿ (1105-20108)

   

ಇಂದು ತಪ್ಪದೇ ಮತದಾನ ಮಾಡಿ: ಡಿ.ಸಿ ಮನವಿ

ಚಾಮರಾಜನಗರ, ಮೇ. 11:– ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018ರ ಪ್ರಯುಕ್ತ ಇಂದು ಅಂದರೆ ದಿನಾಂಕ 12-05-2018ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ ಎಲ್ಲ ಅರ್ಹ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ತಪ್ಪದೇ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಕೋರಿದ್ದಾರೆ.

































(08-05-2018)ಅಕ್ರಮ ಹಣ ವಶ, ಚುನಾವಣಾ ಅಬಕಾರಿ ದಾಳಿಯಲ್ಲಿ ಈವರೆಗೆ 254 ಆರೋಪಿಗಳ ಬಂಧನ, ಮೇ 12 ರಂದು ಕಾರ್ಮಿಕರಿಗೆ ರಜೆ ಘೋಷಿಸಲು ಸೂಚನೆ


ಮೇ 12 ರಂದು ಕಾರ್ಮಿಕರಿಗೆ ರಜೆ ಘೋಷಿಸಲು ಸೂಚನೆ

ಚಾಮರಾಜನಗರ, ಮೇ. 08 - ವಿಧಾನಸಭಾ ಚುನಾವಣೆಯ ಮತದಾನ ನಡೆಯುವ ಮೇ 12 ರಂದು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಕಾರ್ಖಾನೆ, ಕೈಗಾರಿಕಾ ಸಂಸ್ಥೆಗಳು, ಅಂಗಡಿ, ವಾಣಿಜ್ಯ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳು ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂಚಿಸಿದ್ದಾರೆ.
ಮತದಾನ ದಿನದಂದು ಔದ್ಯಮಿಕ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ 1963 ರ ಕಲಂ 3(ಎ) ರ ಅನ್ವಯ ಸಂವಿಧಾನಾತ್ಮಕ ಹಕ್ಕಾದ ಮತ ಚಲಾಯಿಸಲು ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ ನೀಡುವಂತೆ  ಮಾಲೀಕರು, ನಿಯೋಜಕರಿಗೆ ಆದೇಶಿಸಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಅಕ್ರಮ ಹಣ ವಶ

ಚಾಮರಾಜನಗರ, ಮೇ. 08 - ವಿಧಾನಸಭಾ ಚುನಾವಣೆ ಸಂಬಂಧ ಮೇ 7ರಂದು ಚಾಮರಾಜನಗರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ಮೂಡಲ ಹೊಸಹಳ್ಳಿ ಚೆಕ್ ಪೋಸ್ಟ್ ಮೂಲಕ ಸಾಗಾಣಿಕೆ ಮಾಡುತ್ತಿದ್ದ 2 ಲಕ್ಷದ 76 ಸಾವಿರ ರೂ.ಗಳನ್ನು ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಅಬಕಾರಿ ದಾಳಿಯಲ್ಲಿ ಈವರೆಗೆ 254 ಆರೋಪಿಗಳ ಬಂಧನ

ಚಾಮರಾಜನಗರ, ಮೇ. 08:- ಅಬಕಾರಿ ಇಲಾಖೆಯ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ 27 ರಿಂದ ಮೇ 7ರವರೆಗೆ ಚುನಾವಣಾ ಮತಕ್ಷೇತ್ರಗಳಾದ ಚಾಮರಾಜನಗರ, ಕೊಳ್ಳೇಗಾಲ, ಹನೂರು ಹಾಗೂ ಗುಂಡ್ಲುಪೇಟೆಯಲ್ಲಿ ನಡೆಸಿದ ಒಟ್ಟು 585 ದಾಳಿಯಲ್ಲಿ           300 ಪ್ರಕರಣಗಳನ್ನು ದಾಖಲಿಸಲಾಗಿದೆ. 254 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 36 ವಾಹನ ಹಾಗೂ   1951.17 ಲೀ ಮದ್ಯ ವಶಪಡಿಸಿಕೊಳ್ಳಲÁಗಿದ್ದು ಅವುಗಳು ಅಂದಾಜು ಮೊತ್ತ ರೂ. 17,58,308ಗಳೆಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ಚಾಮರಾಜನಗರ ಮತಕ್ಷೇತ್ರದಲ್ಲಿ 156 ದಾಳಿ ನಡೆಸಿ 85 ಪ್ರಕರಣಗಳನ್ನು ದಾಖಲಿಸಲಾಗಿದ್ದು 75 ಆರೋಪಿಗಳನ್ನು ಬಂಧಿಸಲಾಗಿದೆ. 4 ವಾಹನಗಳು ಹಾಗೂ 1384.740 ಲೀಟರ್ ಮದ್ಯವನ್ನು ಜಪ್ತಿ ಮಾಡುವ ಮೂಲಕ ಅಂದಾಜು 711600 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಳ್ಳೇಗಾಲ ಮತಕ್ಷೇತ್ರದಲ್ಲಿ 149 ಬಾರಿ ದಾಳಿ ನಡೆಸಿ 73 ಪ್ರಕರಣಗಳನ್ನು ದಾಖಲಿಸಿದೆ. 65 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಅಂದಾಜು 365000 ರೂ. ಬೆಲೆಯ 10 ವಾಹನ ಹಾಗೂ 162.420 ಲೀ. ಮದ್ಯವನ್ನು ವಶಪಡಿಸಲಾಗಿದೆ.
ಹನೂರು ಮತಕ್ಷೇತ್ರದಲ್ಲಿ 92 ದಾಳಿ ನಡೆಸುವ ಮೂಲಕ 65 ಪ್ರಕರಣ ದಾಖಲಿಸಿ 53 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 244708ಗಳ ಅಂದಾಜು ಮೊತ್ತದ 9 ವಾಹನಗಳು ಹಾಗೂ 116.18 ಲೀ ಮದ್ಯವನ್ನು ವಶಪಡಿಸಿಕೊಂಡಿದೆ.
ಗುಂಡ್ಲುಪೇಟೆ ಮತಕ್ಷೇತ್ರದಲ್ಲಿ 188 ದಾಳಿಯಲ್ಲಿ 77 ಪ್ರಕರಣ ದಾಖಲಿಸಿದ್ದು 61 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 437000ಗಳ ಮೊತ್ತದ 13 ವಾಹನ, 287.83 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ ಏಪ್ರಿಲ್ 21ರಿಂದ ಸನ್ನದು ಷರತ್ತು ಉಲ್ಲಂಘನೆಗಳಿಗಾಗಿ ಜಿಲ್ಲೆಯಲ್ಲಿ ಒಟ್ಟು 10 ವಿವಿಧ ಬಗೆಯ ಸನ್ನದುಗಳನ್ನು ಚುನಾವಣೆ ಮುಕ್ತಾಯಗೊಳ್ಳುವವರೆಗೂ ಅಮಾನತ್ತಿನಲ್ಲಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.









Wednesday, 9 May 2018

ಬಾಗಲಕೋಟೆ ಸಮೀಪ ನಡೆದ ಅಪಘಾತದಲ್ಲಿ ಚಾಮರಾಜನಗರ ಪೊಲೀಸ್ ಸ್ಥಳದಲ್ಲೆ ಸಾವು. Breaking n shocking news (10-05-2018)


S.VEERABJADRA SWAMY-TIGER: *ಬಾಗಲಕೋಟೆ ಸಮೀಪ ನಡೆದ ಅಪಘಾತದಲ್ಲಿ ಚಾಮರಾಜನಗರ ಪೊಲೀಸ್ ಸ್ಥಳದಲ್ಲೆ ಸಾವು. ಎಚ್.ಕೆ. ಶಿವಸ್ವಾಮಿ.‌ ಅವರು ಹಿಂದೆ ಚಾಮರಾಜನಗರ ಎಸ್ಪಿ ಕಚೇರಿ ಅಪರಾದ ವಿಭಾಗದ ಇನ್ಸ್‌ಪೆಕ್ಟರ್  ಆಗಿ ಕೆಲಸ ಮಾಡುತ್ತಿದ್ದು ಈಗ ಬೆಂಗಳೂರು ಸಿಐಡಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು  ಎಂದು ತಿಳಿದು‌ಬಂದಿದೆ. *ಬಾಗಲಕೋಟೆ ಕೇವಲ ೧೧ ಕಿ.ಮಿ ಅಂತರದಲ್ಲಿ ಲಾರಿ ಜೀಪ್ ಡಿಕ್ಕಿಯಾಗಿ ಕನಕಪುರ ಮೂಲದ ಡಿವೈಸ್ಪಿ ಬಳೇಗೌಡ, ಚಾಲಕ‌ ವೇಣುಗೋಪಾಲ್ ಎಂಬುವರು ಸೇರಿದಂತೆ  ಮೂವರು ಸಾವನ್ನಪ್ಪಿದ್ದಾರೆ  ಎಂದು ತಿಳಿದುಬಂದಿದೆ.
ಓದಿದ ಮೇಲೆ ಶೇರ್ ಮಾಡಿ ಇತರರಿಗೂ ತಿಳಿಯಲಿ.‌ಕ್ಷಣ ಕ್ಷಣದ ಅಪ್ಡೇಟ್ ಆಗಿತ್ತಿರುತ್ತದೆ ನೆನಪಿರಲಿ. ಇನ್ಸ್‌ಪೆಕ್ಟರ್ ಶಿವಸ್ವಾಮಿ ಅವರು‌ ಚಾಮರಾಜನಗರ ಇಂದ ಬಾಗಲಕೋಟೆಗೆ ಚುನಾವಣಾ ಕಾರ್ಯ ನಿಮಿತ್ತ ಅಲ್ಲಿಗೆ ನಿಯೋಜನೆಗೊಂಡಿದ್ದರು.‌ 
ಪುಲ್ ಡಿಟೇಲ್ಸ್: ತುಮಕೂರು;-
ಬಾಗಲಕೋಟೆಯ ಬಳಿ ಭೀಕರ ರಸ್ತೆ  ಅಪಘಾತ ಸ್ಥಳದಲ್ಲಿಯೇ ಡಿ ವೈ ಎಸ್ಪಿಯವರು ಸೇರಿದಂತೆ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಸುದ್ದಿ  ಫೋಲಿಸ್ ಇಲಾಖೆಗೆ ಬರ ಸಿಡಿಲಿನಂತೆ  ಬಂದು ಅಪ್ಪಳಿಸಿದೆ.....
ಯಾರು ಈ ಅದಿಕಾರಿಗಳು..ಯಾಕೆ ಅಪಘಾತ ಸಂಭವಿಸಿದೆ...ಪೂರ್ಣ ವಿವರ ಇಲ್ಲಿದೆ ನೋಡಿ....
ಕಾನೂನು ಬಾಹಿರ ಚಟುವಟಿಕೆಗಳಿಗೆ ಸಿಂಹ ಸ್ವಪ್ನವಾಗಿ ತುಮಕೂರು ನಗರದ ತಿಲಕ್ ಪಾರ್ಕ್ ವೃತ್ತನೀರಿಕ್ಷಕರಾಗಿ ಕರ್ತವ್ಯ ನಿರ್ವಸಿದ್ದ ಭಾಳೇಗೌಡರು ಅತ್ಯಂತ ಜನ ಪ್ರೀಯ ಸ್ನೇಹ ಮನೋಭಾವ ಹೊಂದಿದ್ದ ಇವರು ಕುಣಿಗಲ್ ಗೆ ವರ್ಗಾವಣೆ ಅಗಿ ಕೆಲಸ ನಿರ್ವಹಣೆ ಮಾಡಿದ್ದರು ರಾಜ್ಯ ಸರ್ಕಾರ ಇವರ ಸೇವೆಯನ್ನು ಮನಗೊಂಡು ರಾಷ್ಟ್ರಪತಿಗಳ ಪದಕ,ಮುಖ್ಯ ಮಂತ್ರಿಗಳು ಪದಕ ಸೇರಿದಂತೆ ಹಲವು ಪ್ರಶಸ್ತಿಗಳು ಲಬಿಸಿದ್ದವು ಇತ್ತೀಚೆಗೆ ಅಷ್ಟೇ ಇವರಿಗೆ ಬಡ್ತಿ ನೀಡಿ Dysp  ಅಗಿ   C i D ವರ್ಗಾವಣೆ ಅಗಿತ್ತು ಇತ್ತೀಚೆಗೆ ತುಮಕೂರು ನಗರದ ಫೋಲಿಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣದಲ್ಲಿ ಇವರೆ ತನಿಖೆ ಕೈಗೊಂಡಿದ್ದರು...
ಕರ್ನಾಟಕ ದಲ್ಲಿ 12 ರಂದು ನೆಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯ ದ ಮೇರೆಗೆ
ಬಾಗಲಕೋಟೆಗೆ ಚುನಾವಣೆ ಕರ್ತವ್ಯ ಕ್ಕೆ ನಿಯೋಜನೆ ಮಾಡಲಾಗಿತ್ತು..
ಬೆಂಗಳೂರು ನಿಂದ ರಾತ್ರಿ 8 ಗಂಟೆಯಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಲ್ಲಿ ಬರುವ ಕೋರಾ ಫೋಲಿಸ್ ಠಾಣೆ ಯ ವ್ಯಾಪ್ತಿಯಲ್ಲಿ ಬರುವ ಹೋಟೆಲ್ ಹೊಂದರಲ್ಲಿ ಊಟ ಮಾಡಿ ಬಾಗಲಕೋಟೆ ಗೆ ತೆರಳಿದ್ದರು....

ಭೀಕರ ರಸ್ತೆ ಅಪಘಾತ
---------------
ಬಾಗಲಕೋಟೆ ಗೆ ಇನ್ನು ಏಳು ಕಿಲೋಮೀಟರ್ ದೂರದಲ್ಲಿ ಇರುವ ಬಾಗಲಕೋಟೆ ಇಳಕಲ್ಲು ರಸ್ತೆಯಲ್ಲಿ ಮಲ್ಲಾಪುರ ಕ್ರಾಸ್ (ಕೊಡಲ ಸಂಗಮ ಕ್ರಾಸ್) ಬಾಗಲಕೋಟೆ ಕಡೇ ಯಿಂದ ಬಂದ ಲಾರಿ ಹಾಗೂ ಬಾಗಲಕೋಟೆ ಕಡೇ ಹೋಗುತ್ತಿದ್ದ ಫೋಲಿಸ್ ಜೀಪಿನ ನಡುವೆ ಮುಖಾ ಮುಖಿ ಬೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಮೊರು ಜನರು ಮೃತಪಟ್ಟಿದ್ದರು ಡಿ ವೈ ಎಸ್ಪಿಯವರು ಅದಾ ಭಾಳೇಗೌಡರು, ಸಬ್ ಇನ್ ಸ್ಪೆಕ್ಟರ್ ಹೆಚ್ ಕೆ,ಶಿವಸ್ವಾಮಿ,ಚಾಲಕ,ವೇಣುಗೋಪಾಲ್ ಇವರು ಈ ದುರಂತ ದಲ್ಲಿ ಮೃತಪಟ್ಟಿದ್ದಾರೆ. ಅಪಘಾತ ಮದ್ಯ ರಾತ್ರಿ  ರಾತ್ರಿ 1 ಗಂಟೆಯಲ್ಲಿ ಸಂಬಂಧಿಸಿದೆ.
ಸ್ಥಳಕ್ಕೆ ಬಾಗಲಕೋಟೆ ಎಸ್ಪಿಯವರು ಸ್ಥಳಕ್ಕೆ ದೌಡಾಯಿಸಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವರನ್ನು ಅಸ್ಪತ್ರೆಗೆ ಸಾಗಿಸಲು ಹರ ಸಾಹಸ ಪಟ್ಟರು ಅದರೆ ಲಾರಿಗೆ ಜೀಪು ಕಚ್ಚಿ ಕೊಂಡಿತ್ತು ಸಾವಿರಾರು ಮಂದಿ ಸಾರ್ವಜನಿಕರು ಸೇರಿದಂತೆ ಬಾಗಲಕೋಟೆ ಯ ಫೋಲಿಸರು ಜೀಪಿನಲ್ಲಿ ಇದ್ದವರನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನ ವಾಗಲಿಲ್ಲ..ಮೂರು ಜನ ಮೃತಪಟ್ಟಿದ್ದರು..

ಸೂತಕದ ಮನೆಯಾದ ಬೆಂಗಳೂರಿನ C I D  ಕಛೇರಿ...
ಡಿ ವೈ ಎಸ್ಪಿಯವರು ಅದಾ ಭಾಳೇಗೌಡರು ಬೆಂಗಳೂರು ಸೇರಿದಂತೆ ಹಲವು ಕಡೇ ಕರ್ತವ್ಯ ನಿರ್ವಸಿದ್ದ ಅವರು ಅಪಾರ ಪ್ರಮಾಣದಲ್ಲಿ ತನ್ನದೆ ಅದ ಬೆಂಬಲಿಗರು,ಹೊಂದಿರು ಅವರು  ಅಷ್ತರಿಗೆ ಹಾಗೂ
. ಇಲಾಖೆ ಯಲ್ಲಿ ಹಾಗೂ ಸಿ ಐ ಡಿ ಇರುವವರಿಗೆ ಭಾಳೇಗೌಡರು ಹಾಗೂ ಸಿಬ್ಬಂದಿಗಳು ಸಾವಿರ ಸುದ್ದಿ ಬರ ಸಿಡಿಲಿನಂತೆ ಬಂದು ಅಪ್ಪಳಿಸಿದೆ.....
ಮುಗಿಲು ಮುಟ್ಟಿದ ಅಕ್ರಂದನ.......
ಭಾಳೇಗೌಡರು ಸೇರಿದಂತೆ ಮೃತ ಪಟ್ಟ ಕುಟುಂಬದ ವರು  ಸಂಬಂಧಿಕರು ಅಕ್ರಂದನ ಕರುಳು ಕಿತ್ತು ಬರುತ್ತಿತ್ತು....
ರಾಜ್ಯ ಪಾಲರು,ಫೋಲಿಸ್ ಮಹಾ ನಿರ್ದೇಶಕರು,ಹಲವು ಐಜಿಪಿ ಯವರು,ಸೇರಿದಂತೆ ತುಮಕೂರು ಜಿಲ್ಲಾ ಫೋಲಿಸ್ ವರಿಷ್ಟಾದಿಕಾರಿ ಡಾ ದಿವ್ಯ ಗೋಪಿನಾಥ್,ಡಾ ಶೋಭಾ ರಾಣಿ,ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿಗಳು , ತೀವ್ರವಾಗಿ ಕಂಬನಿ ಮಿಡಿದಿದ್ದಾರೆ.....

ತುಮಕೂರು ಎಸ್ಪಿಯವರ   ಸ್ಪಷ್ಟನೆ.....
ಬೀಕರ ಅಪಘಾತ ದಲ್ಲಿ ಮೃತ ಮೃತ ಪಟ್ಟಿದ್ದು ಅಲ್ಲಿನ ವೈದ್ಯಕೀಯ ಪರೀಕ್ಷೆ ನಂತರ ಅವರ ಪಾರ್ಥಿವ ಶರೀರದ ಅಂತಿಮ ನಮನಕ್ಕೆ ತುಮಕೂರು ನಗರದ ಜಿಲ್ಲಾ ಶಸಸ್ತ  ಮೀಸಲು ಪಡೆಯ ಮೈದಾನದಲ್ಲಿ  ಪಾರ್ಥಿವ ಶರೀರ ಬಂದಾಗ ಗೌರವ ಸಲ್ಲಿಸಲೂ ವ್ಯವಸ್ಥೆ ಕಲ್ಪಿಸಲಾಗಿದೆ.. ಭಾಳೇಗೌಡರು ಹಾಗೂ ಸಿಬ್ಬಂದಿಗಳ ಪಾರ್ಥಿವಕ್ಕೆ  ಅಂತಿಮ ನಮನ ಸಲ್ಲಿಸಲು ಸಿದ್ದತೆ ಕೈಗೊಂಡಿದ್ದಾರೆ ...

(09-05-2018)ಮೈಕ್ರೋ ಅಬ್ಸರ್‍ವರ್‍ಗಳು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ : ಚುನಾವಣಾ ವೀಕ್ಷಕರ ಸೂಚನೆ

ಮೈಕ್ರೋ ಅಬ್ಸರ್‍ವರ್‍ಗಳು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ : ಚುನಾವಣಾ ವೀಕ್ಷಕರ ಸೂಚನೆ

ಚಾಮರಾಜನಗರ, ಮೇ. 9 :– ಚುನಾವಣಾ ಸಂಬಂಧ ನೇಮಕವಾಗಿರುವ ಮೈಕ್ರೋ ಅಬ್ಸರ್‍ವರ್‍ಗಳು ಮತದಾನದಂದು ನಡೆಯುವ ಸಂಪೂರ್ಣ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಿ ವರದಿ ಸಲ್ಲಿಸುವಂತೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ  ಸಾಮಾನ್ಯ ಚುನಾವಣಾ ವೀಕ್ಷಕರಾದ ಲಕ್ಷ್ಮೀನಾರಾಯಣ ಸೋನಿ ಅವರು ಸೂಚನೆ ನೀಡಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಮೈಕ್ರೋ ಅಬ್ಸರ್‍ವರ್‍ಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಮತದಾನ ಪ್ರಕ್ರಿಯೆಯು ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಮೈಕ್ರೋ ಅಬ್ಸರ್‍ವರ್‍ಗಳು ನಿಗಾ ವಹಿಸಬೇಕು. ನಿಷ್ಪಕ್ಷಪಾತವಾಗಿ ಮತದಾನ ಚಟುವಟಿಕೆಗಳು ನಡೆಯುತ್ತಿದೆಯೇ ಎಂಬ ಬಗ್ಗೆ ಗಮನಿಸಬೇಕು. ಯಾವುದೇ ಅನವಶ್ಯಕ ಪ್ರಕ್ರಿಯೆ ಬಗ್ಗೆ ಕಂಡುಬಂದಲ್ಲಿ ಸಾಮಾನ್ಯ ವೀಕ್ಷಕರಿಗೆ ವರದಿ ಮಾಡಬೇಕು ಎಂದು ಲಕ್ಷ್ಮೀನಾರಾಯಣ ಸೋನಿ ಅವರು ತಿಳಿಸಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಮನೋಜ್ ಕುಮಾರ್ ಅವರು ಮಾತನಾಡಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವೇಳೆ ಹಾಜರಿದ್ದು ಮಾರ್ಗದರ್ಶನ ಪಡೆಯಬೇಕು. ಮತದಾನದಂದು ಬೆಳಿಗ್ಗೆ ಅಣುಕು ಮತದಾನ ಸಂದರ್ಭದಲ್ಲಿ ಹಾಜರಿದ್ದು ಎಲ್ಲ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಬೇಕು. ಅಣುಕು ಮತದಾನದ ಬಳಿಕ ದಾಖಲಾಗಿರುವ ಅಂಶಗಳನ್ನು ತೆಗೆದುಹಾಕಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ನಿಗಧಿತ ವೇಳೆಗೆ ಮತದಾನ ಆರಂಭವಾಗುವ ಮುನ್ನ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಎಲ್ಲಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಿರಬೇಕು ಎಂದು ತಿಳಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಅನಿಲ್ ಕುಮಾರ್ ಅವರು ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಮೈಕ್ರೋ ಅಬ್ಸರ್‍ವರ್‍ಗಳು ಕಾರ್ಯ ನಿರ್ವಹಿಸಬೇಕಿದೆ. ಮೈಕ್ರೋ ಅಬ್ಸರ್‍ವರ್‍ಗಳು ಮತದಾನದಂದು ಆರಂಭದಿಂದ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ಪೂರೈಸಬೇಕು. ವೀಕ್ಷಕರೊಂದಿಗೆ ಸಂಪರ್ಕದಲ್ಲಿದ್ದು ನಿಗದಿತ ವೇಳೆಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ ಮೈಕ್ರೋ ಅಬ್ಸರ್‍ವರ್‍ಗಳು ಕಾರ್ಯನಿರ್ವಹಿಸಬೇಕಾದ ಮತಗಟ್ಟೆಗಳಿಗೆ ತೆರಳಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿದೆ. ವೀಕ್ಷಕರಿಗೆ ಮತದಾನದಂದು ನಡೆಯುವ ಪ್ರತಿ ಚಟುವಟಿಕೆಗಳ ಬಗ್ಗೆ ಗಮನಿಸಿ ವರದಿ ಸಲ್ಲಿಸುವ ಪ್ರಮುಖ ಕೆಲಸ ಮಾಡಬೇಕಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಚಾಮರಾಜನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಭೀಮಣ್ಣ ಕಲಘಟಗಿ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆ.ಎಚ್. ಸತೀಶ್, ಹನೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮರುಳೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಅವರು ಮ್ರೈಕ್ರೋ ಅಬ್ಸರ್‍ವರ್‍ಗಳ ಕಾರ್ಯನಿರ್ವಹಣೆ ಸಂಬಂಧ ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ತರಬೇತಿ ನೀಡಿದರು..

ಮೇ 12ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ

ಚಾಮರಾಜನಗರ, ಮೇ. 09 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮೇ 12ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅಂದು ವೇತನಸಹಿತ ರಜೆ ನೀಡಬೇಕೆಂದು ಕಾರ್ಮಿಕ ಇಲಾಖೆ ಸೂಚಿಸಿದೆ.
ಮೇ 12ರಂದು ಜಿಲ್ಲಾ ವ್ಯಾಪ್ತಿಯಲ್ಲಿರುವ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾಪ್ರತಿನಿಧಿ ಕಾಯಿದೆ ಕಲಂ 135 (ಬಿ) ಅಡಿ ವೇತನಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕು ಆದ ಮತ ಚಲಾಯಿಸಲು ಅನುವು ಮಾಡಿಕೊಡಬೇಕಿದೆ. ಹೀಗಾಗಿ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಜಿಲ್ಲಾ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು ಮೇ 12ರಂದು ವೇತನಸಹಿತ ರಜೆ ನೀಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಡಿ.ಎಂ. ವಿನುತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 28ರಂದು ಕೆಲ್ಲಂಬಳ್ಳಿಯಲ್ಲಿ ಅಂಚೆ ಸಂತೆ
ಚಾಮರಾಜನಗರ, ಮೇ. 9  ಅಂಚೆ ಇಲಾಖೆಯು ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಮೇ 28ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಕೆಲ್ಲಂಬಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೇ 31ರಂದು ಮಸಣಾಪುರ ಗ್ರಾಮದಲ್ಲಿ ಅಂಚೆ ಸಂತೆ

ಚಾಮರಾಜನಗರ, ಮೇ. 9 – ಅಂಚೆ ಇಲಾಖೆ ವತಿಯಿಂದ ಚಾಮರಾಜನಗರ ತಾಲೂಕಿನ ಕಾಗಲವಾಡಿ ಹೋಬಳಿಯ ಮಸಣಾಪುರ ಗ್ರಾಮದಲ್ಲಿ ಮೇ 31ರಂದು ಅಂಚೆ ಸಂತೆ ಹಮ್ಮಿಕೊಳ್ಳಲಾಗಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುವುದು.
ಮಸಣಾಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆದರ್ಶ ವಿದ್ಯಾಲಯಕ್ಕೆ ಶೇ.94.20ರಷ್ಟು ಫಲಿತಾಂಶ
ಚಾಮರಾಜನಗರ, ಮೇ. 09 - ಚಾಮರಾಜನಗರದ ಆದರ್ಶ ವಿದ್ಯಾಲಯಕ್ಕೆ 2017-18ನೇ ಸಾಲಿನ ಎಸ್ ಎಸ್ ಎಲ್ ಸಿ. ಪರೀಕ್ಷೆಯಲ್ಲಿ ಶೇ. 94.20ರಷ್ಟು ಫಲಿತಾಂಶ ಬಂದಿದೆ.
ಒಟ್ಟು 69 ವಿದ್ಯಾರ್ಥಿಗಳ ಪೈಕಿ 65 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣೀಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



ಚುನಾವಣಾ ಅಬಕಾರಿ ದಾಳಿಯಲ್ಲಿ ಈವರೆಗೆ 254 ಆರೋಪಿಗಳ ಬಂಧನ

ಚಾಮರಾಜನಗರ, ಮೇ. 08 (ಕರ್ನಾಟಕ ವಾರ್ತೆ):- ಅಬಕಾರಿ ಇಲಾಖೆಯ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ 27 ರಿಂದ ಮೇ 7ರವರೆಗೆ ಚುನಾವಣಾ ಮತಕ್ಷೇತ್ರಗಳಾದ ಚಾಮರಾಜನಗರ, ಕೊಳ್ಳೇಗಾಲ, ಹನೂರು ಹಾಗೂ ಗುಂಡ್ಲುಪೇಟೆಯಲ್ಲಿ ನಡೆಸಿದ ಒಟ್ಟು 585 ದಾಳಿಯಲ್ಲಿ           300 ಪ್ರಕರಣಗಳನ್ನು ದಾಖಲಿಸಲಾಗಿದೆ. 254 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 36 ವಾಹನ ಹಾಗೂ   1951.17 ಲೀ ಮದ್ಯ ವಶಪಡಿಸಿಕೊಳ್ಳಲÁಗಿದ್ದು ಅವುಗಳು ಅಂದಾಜು ಮೊತ್ತ ರೂ. 17,58,308ಗಳೆಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ಚಾಮರಾಜನಗರ ಮತಕ್ಷೇತ್ರದಲ್ಲಿ 156 ದಾಳಿ ನಡೆಸಿ 85 ಪ್ರಕರಣಗಳನ್ನು ದಾಖಲಿಸಲಾಗಿದ್ದು 75 ಆರೋಪಿಗಳನ್ನು ಬಂಧಿಸಲಾಗಿದೆ. 4 ವಾಹನಗಳು ಹಾಗೂ 1384.740 ಲೀಟರ್ ಮದ್ಯವನ್ನು ಜಪ್ತಿ ಮಾಡುವ ಮೂಲಕ ಅಂದಾಜು 711600 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಳ್ಳೇಗಾಲ ಮತಕ್ಷೇತ್ರದಲ್ಲಿ 149 ಬಾರಿ ದಾಳಿ ನಡೆಸಿ 73 ಪ್ರಕರಣಗಳನ್ನು ದಾಖಲಿಸಿದೆ. 65 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಅಂದಾಜು 365000 ರೂ. ಬೆಲೆಯ 10 ವಾಹನ ಹಾಗೂ 162.420 ಲೀ. ಮದ್ಯವನ್ನು ವಶಪಡಿಸಲಾಗಿದೆ.
ಹನೂರು ಮತಕ್ಷೇತ್ರದಲ್ಲಿ 92 ದಾಳಿ ನಡೆಸುವ ಮೂಲಕ 65 ಪ್ರಕರಣ ದಾಖಲಿಸಿ 53 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 244708ಗಳ ಅಂದಾಜು ಮೊತ್ತದ 9 ವಾಹನಗಳು ಹಾಗೂ 116.18 ಲೀ ಮದ್ಯವನ್ನು ವಶಪಡಿಸಿಕೊಂಡಿದೆ.
ಗುಂಡ್ಲುಪೇಟೆ ಮತಕ್ಷೇತ್ರದಲ್ಲಿ 188 ದಾಳಿಯಲ್ಲಿ 77 ಪ್ರಕರಣ ದಾಖಲಿಸಿದ್ದು 61 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 437000ಗಳ ಮೊತ್ತದ 13 ವಾಹನ, 287.83 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ ಏಪ್ರಿಲ್ 21ರಿಂದ ಸನ್ನದು ಷರತ್ತು ಉಲ್ಲಂಘನೆಗಳಿಗಾಗಿ ಜಿಲ್ಲೆಯಲ್ಲಿ ಒಟ್ಟು 10 ವಿವಿಧ ಬಗೆಯ ಸನ್ನದುಗಳನ್ನು ಚುನಾವಣೆ ಮುಕ್ತಾಯಗೊಳ್ಳುವವರೆಗೂ ಅಮಾನತ್ತಿನಲ್ಲಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


ಮಸ್ಟರಿಂಗ್ ಕೇಂದ್ರ ತಲುಪಲು ಮತಗಟ್ಟೆ ಅಧಿಕಾರಿಗಳಿಗೆ ಬಸ್ ವ್ಯವಸ್ಥೆ

ಚಾಮರಾಜನಗರ, ಮೇ. 9 – ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ, ಚಾಮರಾಜನಗರ ಜಿಲ್ಲೆಯಾದ್ಯಂತ ಚುನಾವಣಾ ಕರ್ತವ್ಯಕ್ಕೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳು ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ತಲುಪಲು ಅನುಕೂಲವಾಗುವಂತೆ ಮೇ 11 ರಂದು ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಬಸ್‍ಗಳು ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿರುವ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣಗಳಿಂದ ಅಂದು ಬೆಳಿಗ್ಗೆ 5-30 ಗಂಟೆಗೆ ಹೊರಡಲಿವೆ.

ಬಸ್‍ಗಳು ಪ್ರತಿ 15 ನಿಮಿಷಕ್ಕೊಮ್ಮೆ ಹೊರಡಲಿವೆ, ಮೈಸೂರುನಗರದ ಕೆ.ಎಸ್.ಆರ್.ಟಿ.ಸಿ ಬಸ್‍ನಿಲ್ದಾಣದಿಂದಲೂ ಸಹ ಬಸ್‍ಗಳು ಅಂದು ಬೆಳಿಗ್ಗೆ 5-30 ಗಂಟೆಗೆ ಜಿಲ್ಲೆಯ ನಾಲ್ಕು ಮಸ್ಟರಿಂಗ್ ಕೇಂದ್ರಗಳಿಗೆ ಹೊರಡಲಿವೆ.

ಅಲ್ಲದೆ ಅಂದು ಬೆಳಿಗ್ಗೆ  5-00 ಗಂಟೆಗೆ ಮಲೈಮಹದೇಶ್ವರಬೆಟ್ಟ ಮತ್ತು ಮಾರ್ಟಳ್ಳಿಯಿಂದ ರಾಮಾಪುರ ಮಾರ್ಗವಾಗಿಯೂ ಸಹ ಮತಗಟ್ಟೆ ಅಧಿಕಾರಿಗಳು ಕೊಳ್ಳೇಗಾಲ ಪಟ್ಟಣಕ್ಕೆ ತಲುಪಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ

ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಚುನಾವಣಾ ಕರ್ತವ್ಯಕ್ಕೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳು ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ಬೆಳಿಗ್ಗೆ 8-00 ಗಂಟೆಯೊಳಗೆ ತಲುಪಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018

ಬಹಿರಂಗ ಪ್ರಚಾರ ನಿರ್ಬಂಧ: 10 ಜನಕ್ಕಿಂತ ಹೆಚ್ಚು ಸೇರದಂತೆ ಮನೆ ಮನೆಗೆ ತೆರಳಿ ಮತಯಾಚಿಸಲು ಅವಕಾಶ
ಚಾಮರಾಜನಗರ, ಮೇ. 9–  ಚುನಾವಣೆ ಬಹಿರಂಗ ಪ್ರಚಾರದ ಅವಧಿ ಮೇ 10ರಂದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದ್ದು, ಇದರ ನಂತರ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಅವರ ಬೆಂಬಲಿಗರು ಬಹಿರಂಗ ಪ್ರಚಾರ ನಡೆಸುವುದನ್ನು ನಿರ್ಬಂಧಿಸಲಾಗಿದೆ. 
10 ಜನಕ್ಕಿಂತ ಹೆಚ್ಚಿಗೆ ಸೇರದಂತೆ ಮನೆ ಮನೆಗೆ ತೆರಳಿ ಮತಯಾಚಿಸಲು ಮತ್ತು ಕರಪತ್ರ ವಿತರಿಸಲು ಮಾತ್ರ ಅವಕಾಶ ನೀಡಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126ರ ಪ್ರಕಾರ ಮತದಾನ ಮುಕ್ತಾಯವಾಗುವ ಸಮಯದ 48 ಗಂಟೆಗಳ ಮುಂಚಿತವಾಗಿ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಉಮೇದುವಾರರು ಅಥವಾ ಅವರ ಪರ ಬೆಂಬಲಿಗರು ಚುನಾವಣಾ ಸಂಬಂಧ ಯಾವುದೇ ಸಭೆ ಸಮಾರಂಭ ಮೆರವಣಿಗೆ ನಡೆಸುವಂತಿಲ್ಲ.  ಚುನಾವಣೆ ಸಭೆ ಉದ್ದೇಶಿಸಿ ಮಾತನಾಡುವಂತಿಲ್ಲ.  ಸಾರ್ವಜನಿಕರಿಗೆ ಮತದಾರರಿಗೆ ಸುದ್ಧಿ ಮಾಧ್ಯಮಗಳಾದ ಎಫ್.ಎಂ., ರೇಡಿಯೋ, ದೂರದರ್ಶನ, ಸಿನಿಮಾ ಇತ್ಯಾದಿಗಳ ಮೂಲಕ ಚುನಾವಣಾ ಪ್ರಚಾರ ಮಾಡುವಂತಿಲ್ಲ.  ಮೊಬೈಲ್ ಮೂಲಕ ಎಸ್.ಎಂ.ಎಸ್, ವಾಟ್ಸ್‍ಆಪ್, ಫೇಸ್‍ಬುಕ್, ಟ್ವಿಟರ್, ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಸಂಬಂಧ ಪ್ರಚಾರ ಸಂದೇಶಗಳನ್ನು  ಕಳುಹಿಸುವಂತಿಲ್ಲ. 
ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸುವಂತಿಲ್ಲ.  ಯಾವುದೇ ಮತಗಟ್ಟೆಯ ಮುಂದೆ ಜನರನ್ನು ಆಕರ್ಷಿಸಲು ಸಂಗೀತ, ನಾಟಕ, ರಂಗ ಕಲಾಪ ನಡೆಸುವಂತಿಲ್ಲ.  ದಿನಪತ್ರಿಕೆಗಳಲ್ಲಿ ಅನುಮತಿ ಇಲ್ಲದೆ ಜಾಹಿರಾತು ಹೊರಡಿಸುವಂತಿಲ್ಲ. 
ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126ರನ್ನು ಉಲ್ಲಂಘಿಸಿದರೆ ಕಾಯ್ದೆ ಅನುಸಾರ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ತಿಳಿಸಿದ್ದಾರೆ.
 

ಮತಗಟ್ಟೆಯ ಬಳಿ ಪ್ರಚಾರ ನಿಷೇದÀ

ಚಾಮರಾಜನಗರ, ಮೇ. 9 :–  ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತಗಟ್ಟೆ ಒಳಗೆ ಹಾಗೂ ಮತಗಟ್ಟೆಯ 100 ಮೀ.ಅಂತರದ ಪ್ರದೇಶದಲ್ಲಿರುವ ಸಾರ್ವಜನಿಕ ಮತ್ತು ಖಾಸಗಿ ಸ್ಥಳದಲ್ಲಿ ಪ್ರಚಾರ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ. 
ಮತಗಟ್ಟೆಯ ಒಳಗೆ ಹಾಗೂ ಮತಗಟ್ಟೆಯ 100 ಮೀ.ಗಳ ಅಂತರದೊಳಗಿರುವ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಪ್ರಚಾರ ನಡೆಸಬಾರದು.  ಯಾವುದೇ ಅಭ್ಯರ್ಥಿಗೆ ಮತ ನೀಡುವಂತೆ ಕೇಳುವುದು, ಮತ ಹಾಕದಂತೆ ಪ್ರೆರೇಪಿಸುವುದು, ಯಾವುದೇ ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವುದು, ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 130ನ್ನು ಉಲ್ಲಂಘಿಸಿದರೆ ಕಾಯ್ದೆಗೆ ಅನುಸಾರವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬಾಲಮಂದಿರದ ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ
ಚಾಮರಾಜನಗರ, ಮೇ. 9 – ಅನಾಥ, ನಿರ್ಗತಿಕ, ಏಕಪೋಷಕ, ಭಿಕ್ಷಾಟನೆ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹಕ್ಕೆ ಒಳಗಾದ ಹಾಗೂ ಇತರೆ ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗಾಗಿ ಪುರ್ನವಸತಿ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಡಿ  ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಬಾಲಕಿಯರ ಸರ್ಕಾರಿ ಬಾಲಮಂದಿರದ ನಿವಾಸಿ ಮಕ್ಕಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಗೀತಾ(75.36%), ಶೋಭ (72.96%), ಮೀನಾ (69.60%), ಸತ್ಯ (61.60%), ನೇತ್ರಾವತಿ  (56%), ಪಡೆದು ಇಲಾಖೆಗೆ ಕೀರ್ತಿ ತಂದಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಬಾಲಮಂದಿರದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ
ಚಾಮರಾಜನಗರ, ಮೇ. 9 –   ಚಾಮರಾಜನಗರ ಜಿಲ್ಲೆಯ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಮೇ14 ರವರೆಗೆ ವಿಶ್ವ ಹಿಂದೂ ಪರೀಷತ್ ಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಿದ್ದು,  ವ್ಯಕ್ತಿತ್ವ ವಿಕಸನ ಶಿಬಿರದ ಉಧ್ಘಾಟಣೆಯನ್ನು ಶ್ರೀ ಸಂದೇಶ್.ವಿ.ಭಂಡಾರಿ, ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಚಾಮರಾಜನಗರರವರು ನೆರವೇರಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅರುಣ್ ಎಂ ರೇ, ಸದ್ಯಸರು, ಮಕ್ಕಳ ಕಲ್ಯಾಣ ಸಮಿತಿರವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ವಾಸುದೇವರಾವ್ ಟ್ರಸ್ಟಿಗಳು, ವಿಶ್ವ ಹಿಂದೂ ಪರಿಷತ್, ಚಾಮರಾಜನಗರ.  ಶ್ರೀ ಎ.ಎಸ್.ಮಂಜುನಾಥಸ್ವಾಮಿ, ಹಾಗೂ ಶ್ರೀಮತಿ ಚಂದ್ರಮ್ಮ ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ, ಚಾಮರಾಜನಗರ, ಶ್ರೀ ಟಿ.ಜೆ.ಸುರೇಶ್, ಸದ್ಯಸರು, ಬಾಲನ್ಯಾಯ ಮಂಡಳಿ, ಚಾಮರಾಜನಗರ. ಶ್ರೀ ಅರುಣ್ ಕುಮಾರ್, ಐ-ಸೆಟ್ ಸಂಸ್ಥೆ, ಚಾಮರಾಜನಗರ, ಶ್ರೀಮತಿ ಶಿವಲೀಲಾ ಬೆಟಗೇರಿ, ಅಧೀಕ್ಷರು, ಬಾಲಕಿಯರ ಸರ್ಕಾರಿ ಬಾಲಮಂದಿರ, ಚಾಮರಾಜನಗರ. ಹಾಗೂ ಬಾಲಮಂದಿರದ ಮಕ್ಕಳು, ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು/ಸಿಬ್ಬಂದಿಗಳು ಹಾಜರಿದ್ದರು.
ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ
ಚಾಮರಾಜನಗರ, ಮೇ. 9    ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಇಂದು ಚಾಮರಾಜೇಶ್ವರ ದೇವಾಲಯದ ಆವರಣದಿಂದ ಮತದಾನದ ಜಾಗೃತಿ ಮೂಡಿಸುವ ಪಂಚಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾ ಅಧಿಕಾರಿ ಧನುಷ್ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯೂ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡಿತು.  ಈ ವೇಳೆ ಮತದಾನ ಮಹತ್ವದ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ರಮೇಶ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು. 
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘದ ಸುಮಾರು 200 ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

























Tuesday, 8 May 2018

( 07-05-2018)ಮೇ 10ಕ್ಕೆ ಬಹಿರಂಗ ಪ್ರಚಾರ ಅಂತ್ಯ ನಂತರದ ಮುದ್ರಣ ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ



ಮೇ 10ಕ್ಕೆ ಬಹಿರಂಗ ಪ್ರಚಾರ ಅಂತ್ಯ
ನಂತರದ ಮುದ್ರಣ ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ

ಚಾಮರಾಜನಗರ, ಮೇ 07 - ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10ರಂದು ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಈ ಹಿನ್ನಲೆಯಲ್ಲಿ ಮೇ 11 ಮತ್ತು 12 ರಂದು ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘ ಸಂಸ್ಥೆ ಅಥವಾ ಖಾಸಗಿ ವ್ಯಕ್ತಿ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದಲ್ಲಿ  ಜಿಲ್ಲಾ ಮಾಧ್ಯಮ ಪ್ರಮಾಣಿಕರಣ ಮತ್ತು ಮಾಧ್ಯಮ ನಿಗಾ ಸಮಿತಿ (ಎಂ.ಸಿ.ಎಂ.ಸಿ) ಯಿಂದ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮೇ 11 ಹಾಗೂ 12ರಂದು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ಮೇ 9ರ ಒಳಗಾಗಿ ಸಂಬಂಧಿಸಿದ ರಾಜಕೀಯ ಪಕ್ಷಗಳು ಪ್ರಕಟಿಸಬೇಕಾದ ಜಾಹಿರಾತಿನ ಅಂಶಗಳನ್ನು ಸ್ವಯಂ ದೃಢೀಕರಿಸಿ ನಿಗದಿತ ನಮೂನೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ಇವರಿಗೆ ಸಲ್ಲಿಸಿ ಅನುಮತಿ ಪಡೆಯುವುದು ಹಾಗೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅದೇ ಮಾದರಿಯಲ್ಲಿ ಜಿಲ್ಲಾ ಚುನಾಣಾಧಿಕಾರಿಗಳ ಅಧ್ಯಕ್ಷತೆಯ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಅನುಮತಿ ಪಡೆದುಕೊಂಡು ಜಾಹೀರಾತು ಪ್ರಕಟಿಸಬೇಕು ಎಂದು ತಿಳಿಸಿದ್ದಾರೆ.
 ದೃಶ್ಯ, ರೇಡಿಯೋ ಹಾಗೂ ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ  ಮೇ 10ರಂದು ಸಾಯಂಕಾಲ 6 ಗಂಟೆಯಿಂದ ಮೇ 12ರಂದು ಸಾಯಂಕಾಲ 6.30ರವರೆಗೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಮೇಲೆ ಅಥವಾ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಯಾವುದೇ ಚರ್ಚೆ ಸಂವಾದ ವಿಶ್ಲೇಷಣೆ ಚುನಾವಣೋತ್ತರ ಸಮೀಕ್ಷೆಯಂತಹ ವಿಷಯಗಳನ್ನು ಪ್ರಚಾರ ಮಾಡುವುದು ಅಥವಾ ಬಿತ್ತರಿಸುವುದು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


 ಸಾಹಸ ಚಾರಣ : ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 07 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ರಾಕ್ ಕ್ಲೈಂಬಿಂಗ್, ರಿವರ್ ಕ್ರಾಸಿಂಗ್ ಸಾಹಸ ಚಾರಣ ಕ್ರೀಡೆಯನ್ನು ಮೇ 16 ರಿಂದ 18ರವರೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಂತಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ನೊಂದಾಯಿತ ಸಂಘಗಳ ಯುವಕ ಯುವತಿಯರು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, 15 ರಿಂದ 35ರ ವಯೋಮಿತಿಯ ಜಿಲ್ಲೆಯ ಯುವಜನರು ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಮೇ 11ರ ಒಳಗೆ ಸಲ್ಲಿಸಬೇಕು.  ಭಾಗವಹಿಸುವ ಅಭ್ಯರ್ಥಿಗಳಿಗೆ ದಿನಭತ್ಯೆ ಹಾಗೂ ಪ್ರಯಾಣ ಭತ್ಯೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿÀ ಸಂಖ್ಯೆ: 08226-224932, ಮೊಬೈಲ್ 9482718278 ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ  ಪ್ರಕಟಣೆಯಲ್ಲಿ ತಿಳಿಸಿದ್ದಾರÉ.




ಮೇ 20 ರಂದು ಸಹಕಾರ ಸಂಘದ ಚುನಾವಣೆ

ಚಾಮರಾಜನಗರ, ಮೇ 07 - ಕೊಳ್ಳೇಗಾಲ ತಾಲೂಕು ರೇಷ್ಮೆ ನೂಲು ಬಿಚ್ಚಿಸುವವರ ಕೈಗಾರಿಕಾ ಸಹಕಾರ ಸಂಘ ನಿಯಮಿತ ಇದರ ಚುನಾವಣೆಯನ್ನು ಮೇ 20ರಂದು ನಡೆಸಲಿದೆ.
ಮೇ 12 (ಮಧ್ಯಾಹ್ನ 3 ಗಂಟೆಯವರೆಗೆ) ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು,  ಮೇ 13 ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ14(ಮಧ್ಯಾಹ್ನ 3 ಗಂಟೆಯ ಒಳಗೆ) ನಾಮಪತ್ರ ವಾಪಸ್ಸು ಪಡೆಯಲು ಕಡೆಯ ದಿನಾಂಕವಾಗಿದೆ.  ಚುನಾವಣೆ 20ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ಸಹಕಾರ ಸಂಘದವನ್ನು ಸಂಪರ್ಕಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಪ್ರಕಟಣೆ ತಿಳಿಸಿದೆ.


ಪ.ಜಾತಿ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 07 - ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೋತ್ಸಾಹಧನ ಮಂಜೂರಾತಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕಡೆಯ ದಿನವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜವಾಹರ್ ನವೋದಯ ವಿದ್ಯಾಲಯ  : ಪ್ರವೇಶಪತ್ರ ಪಡೆಯಲು ಸೂಚನೆ
ಚಾಮರಾಜನಗರ, ಮೇ. 07 - ಪ್ರಸಕ್ತ ಸಾಲಿಗೆ ಜವಾಹರ್ ನವೋದಯ ವಿದ್ಯಾಲಯಕ್ಕೆ 9ನೇ ತರಗತಿ ದಾಖಲಾತಿಗೆ ಮೇ 19ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‍ಸೈಟ್ ತಿತಿತಿ.ಟಿvshq.oಡಿg ಮೂಲಕ ಡೌನ್‍ಲೋಡ್ ಮÁಡಿಕೊಳ್ಳಬಹುದು. ಡೌನ್ ಲೋಡ್ ಮಾಡಿಕೊಳ್ಳಲು ತೊಂದರೆಯಾದಲ್ಲಿ ಕಚೇರಿಯಿಂದಲೇ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ 9449090970 ಮತ್ತು 9448552463ನ್ನು ಸಂಪರ್ಕಿಸುವಂತೆ ಜವಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರ

ಶಾಲಾ ದಾಖಲಾತಿ ಆಂದೋಲನ

ಚಾಮರಾಜನಗರ, ಮೇ. 07 :- ಸಾರ್ವಜನಿಕ ಶಿಕ್ಷಣ ಇಲಾಖೆಯು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರನ್ವಯ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯ, ಉಚಿತ ಹಾಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸಲು ಉದ್ದೇಶಿಸಿದ್ದು,  ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ.
5 ವರ್ಷ 10 ತಿಂಗಳು ತುಂಬಿದ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಲು, ಶಾಲೆಗೆ ಬರುತ್ತಿರುವ ಎಲ್ಲ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಂದೇ ಶಾಲೆಗೆ ಹಾಜರಾಗುವಂತೆ ಮಾಡಲು ಹಾಗೂ ವಿವಿಧ ಕಾರಣಗಳಿಂದ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದೆ ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಕರೆತರುವ ಉದ್ದೇಶದಿಂದ ಮೇ 16 ರಿಂದ 31ರವರೆಗೆ ವಿಶೇಷ ದಾಖಲಾತಿ ಆಂದೋಲನ ಹಾಗೂ ಮೇ 29 ರಿಂದ ಜೂನ್ 30ರವರೆಗೆ ಸಾಮಾನ್ಯ ದಾಖಲಾತಿ ನಡೆಸಲಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನಿಕರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ಭಾಗವಹಿಸಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸುವಲ್ಲಿ ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.












(06-05-2018) ವಿಧಾನಸಭಾ ಚುನಾವಣೆ- 2018 ಮೇ. 7ರಂದು ಮತಗಟ್ಟೆ ಅಧಿಕಾರಿಗಳಿಗೆ 2ನೇ ಹಂತದ ಚುನಾವಣಾ ತರಬೇತಿ ಕಾರ್ಯಕ್ರಮ,ಪುಣಜನೂರು ಚೆಕ್‍ಪೋಸ್ಟ್‍ನಲ್ಲಿ ಅಕ್ರಮ ಹಣ ವಶ

ವಿಧಾನಸಭಾ ಚುನಾವಣೆ- 2018
ಮೇ. 7ರಂದು ಮತಗಟ್ಟೆ ಅಧಿಕಾರಿಗಳಿಗೆ 2ನೇ ಹಂತದ ಚುನಾವಣಾ ತರಬೇತಿ ಕಾರ್ಯಕ್ರಮ

ಚಾಮರಾಜನಗರ, ಮೇ. 06 - ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚಾಮರಾಜನಗರ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳ ಚುನಾವನಾ ಕೆಲಸಕ್ಕೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳಿಗೆ ಮೇ 7ರಂದು 2ನೇ ಹಂತದ ಚುನಾವಣಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ. ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದಲ್ಲಿ ತರಬೇತಿ ಏರ್ಪಡಿಸಲಾಗಿದೆ.
ಪಿ.ಆರ್.ಒ ಮತ್ತು ಎ.ಪಿ.ಆರ್.ಒ (1ನೇ ಪೊಲಿಂಗ್ ಅಧಿಕಾರಿ)ಗಳು ಬೆಳಿಗ್ಗೆ 9 ಗಂಟೆಗೆ ತರಬೇತಿಗೆ ಹಾಜರಾಗಬೇಕು. 2,3,4 ನೇ ಮತಗಟ್ಟೆ ಅಧಿಕಾರಿಗಳಿಗೆ (ಪಿ.ಒ) ಮಧ್ಯಾಹ್ನ 2 ಗಂಟೆಗೆ ತರಬೇತಿ ಆಯೋಜಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ತರಬೇತಿಗೆ ತಪ್ಪದೆ ಕಡ್ಡಾಯವಾಗಿ ಹಾಜರಾಗಬೇಕು. ಗೈರು ಹಾಜರಾಗುವ ಮತಗಟ್ಟೆ ಅಧಿಕಾರಿಗಳಿಗೆ ಪ್ರಜಾ ಪ್ರತಿನಿಧಿ ಕಾಯ್ದೆ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಮೇ. 6ರಂದು ಪುಣಜನೂರು ಚೆಕ್‍ಪೋಸ್ಟ್‍ನಲ್ಲಿ ಅಕ್ರಮ ಹಣ ವಶ

ಚಾಮರಾಜನಗರ, ಮೇ. 06- ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇ 6ರಂದು ಪುಣಜನೂರು ಚೆಕ್‍ಪೋಸ್ಟ್ ಮೂಲಕ ಸಾಗಣೆ ಮಾಡುತ್ತಿದ್ದ 1,82,100 ರೂ. ಗಳನ್ನು ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 12ರಂದು ಸಂತೆ ಮತ್ತು ಜಾತ್ರೆ ನಿಷೇಧ

ಚಾಮರಾಜನಗರ, ಮೇ. 06 - ವಿಧಾನಸಭಾ ಸಾರ್ವತ್ರಿಕ ಚುನಾವಣಾ ಸಂಬಂಧ ಮೇ. 12ರಂದು ಮತದಾನ ನಡೆಯುವ ಹಿನ್ನಲೆಯಲ್ಲಿ ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತಗಳ ವ್ಯಾಪ್ತಿಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯೊಳಗಿನ ಎಲ್ಲಾ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 5 ರಿಂದ ಸಂಜೆ 7 ಗಂಟೆಯವರೆಗೆ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

ಮೇ. 12ರಂದು ವೇತನ ಸಹಿತ ರಜೆ

ಚಾಮರಾಜನಗರ, ಮೇ. 06 - ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಸಂಬಂಧ ಮೇ. 12ರಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿರುವುದರಿಂದ ವ್ಯವಹಾರಿಕ, ಔದ್ಯಮಿಕ ಹಾಗೂ ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಖಾಯಂ ಮತ್ತು ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಮತದಾರರಾಗಿರುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಮಂಜೂರು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಸದರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 135ಬಿ(3)ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.


(05-05-2018)ಪಿಯುಸಿ ವಿದ್ಯಾರ್ಥಿಗಳ ಬಸ್‍ಪಾಸ್ ಅವಧಿ ವಿಸ್ತರಣೆ


ಪಿಯುಸಿ ವಿದ್ಯಾರ್ಥಿಗಳ ಬಸ್‍ಪಾಸ್ ಅವಧಿ ವಿಸ್ತರಣೆ

ಚಾಮರಾಜನಗರ, ಮೇ 05 - 2018-19ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ತರಗತಿಗಳು ಮೇ 2ರಿಂದ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಉಚಿತ ವಿದ್ಯಾರ್ಥಿ ಪಾಸನ್ನು ನೀಡಲು ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕರು ಅನುಮತಿ ನೀಡಿದ್ದಾರೆ.
ಕಳೆದ ವರ್ಷದ ಬಸ್ ಪಾಸ್ ಅಥವಾ ಕಾಲೇಜಿನ ಗುರುತಿನ ಚೀಟಿಯನ್ನು ನೀಡಿ ಉಚಿತವಾಗಿ ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸಬಹುದಾಗಿದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಪಡೆದು ತರಗತಿಗೆ ಸಕಾಲದಲ್ಲಿ ಹಾಜರಾಗುವಂತೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜವಹರ್ ನವೋದಯ ವಿದ್ಯಾಲಯ  : ಪ್ರವೇಶಪತ್ರ ಪಡೆಯಲು ಸೂಚನೆ

ಚಾಮರಾಜನಗರ, ಮೇ. 05- ಪ್ರಸಕ್ತ ಸಾಲಿಗೆ ಜವಹರ್ ನವೋದಯ ವಿದ್ಯಾಲಯಕ್ಕೆ 6ನೇ ತರಗತಿ ದಾಖಲಾತಿಗೆ ಮೇ 19ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‍ಸೈಟ್ ತಿತಿತಿ.ಟಿvshq.oಡಿg ಮೂಲಕ ಡೌನ್‍ಲೋಡ್ ಮÁಡಿಕೊಳ್ಳಬಹುದು. ಡೌನ್ ಲೋಡ್ ಮಾಡಿಕೊಳ್ಳಲು ತೊಂದರೆಯಾದಲ್ಲಿ ಕಚೇರಿಯಿಂದಲೇ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ 9449090970 ಮತ್ತು 9448552463ನ್ನು ಸಂಪರ್ಕಿಸುವಂತೆ ಜವಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಮೇ 10 ರಂದು ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ  ಜಯಂತಿ ಆಚರಣೆ

ಚಾಮರಾಜನಗರ, ಮೇ. 05   ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯನ್ನು ಮೇ 10 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ (ಕೊಠಡಿ ಸಂಖ್ಯೆ 103)ದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಯವರು ಹೇಮರೆಡ್ಡಿ ಮಲ್ಲಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿರುವರು.
ಈ ಕಾರ್ಯಕ್ರಮಕ್ಕೆ ಎಲ್ಲಾ ಸಂಘ ಸಂಸ್ಥೆ ಪದಾಧಿಕಾರಿಗಳು, ಸಮುದಾಯ, ನಾಗರಿಕರು, ಅಧಿಕಾರಿ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.


(03-05-2018)ವಿಧಾನಸಭಾ ಸಾರ್ವತ್ರಕ ಚುನಾವಣೆ ಮತದಾನಕ್ಕೆ ಅವಶ್ಯ ದಾಖಲೆ


ವಿಧಾನಸಭಾ ಸಾರ್ವತ್ರಕ ಚುನಾವಣೆ
ಮತದಾನಕ್ಕೆ ಅವಶ್ಯ ದಾಖಲೆ 

ಚಾಮರಾಜನಗರ, ಮೇ. 3 -  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮೇ 12ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು ಮತದಾರರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ನೀಡಿ ಮತಚಲಾಯಿಸಬೇಕಾಗಿರುತ್ತದೆ.  ಒಂದುವೇಳೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಹಾಜರು ಪಡಿಸಲು ಸಾಧ್ಯವಾಗದಿದ್ದಲ್ಲಿ ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ/ರಾಜ್ಯ ಸರ್ಕಾರದ ಸಾರ್ವಜನಿಕ ಸೇವಾ ವಲಯ, ಸಾರ್ವಜನಿಕ ಕಂಪನಿಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಗಳು ವಿತರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಪಾನ್ ಕಾರ್ಡ್, ನರೇಗಾ ಉದ್ಯೋಗ ಪತ್ರ, ನೋಂದಾಯಿತ ಗ್ಯಾಸ್ ಏಜೆನ್ಸಿಗಳು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (ಎನ್‍ಪಿಆರ್) ಅಡಿಯಲ್ಲಿ ವಿತರಿಸುವ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುವ ಆರೋಗ್ಯ ವಿಮಾ ಗುರುತಿನ ಚೀಟಿ, ಭಾವಚಿತ್ರವಿರುವ ಪಿಂಚಣಿ ದಾಖಲಾತಿ, ಚುನಾವಣಾ ಆಯೋಗವು ವಿತರಿಸಿರುವ ಭಾವಚಿತ್ರವಿರುವ ದೃಡೀಕೃತ ಮತದಾರರ ಚೀಟಿ, ಲೋಕಸಭಾ/ವಿಧಾನಸಭಾ/ವಿಧಾನಪರಿಷತ್ ಸದಸ್ಯರು ವಿತರಿಸಿರುವ ಅಧಿಕೃತ ಗುರುತಿನ ಪತ್ರ, ಆಧಾರ್ ಕಾರ್ಡ್ ಈ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಹಾಜರು ಪಡಿಸಿ ಮತಚಲಾಯಿಸಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಅಭ್ಯರ್ಥಿಗಳ ಸರ್ಕಾರಿ ಬಾಕಿ ವಿವರ ಕುರಿತ ಅಫಿಡವಿಟ್ ಮಾಹಿತಿ ಪ್ರಕಟ

ಚಾಮರಾಜನಗರ, ಮೇ. 2 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಒಟ್ಟು 43 ಅಭ್ಯರ್ಥಿಗಳು ಸರ್ಕಾರಕ್ಕೆ ಕೊಡಬೇಕಾದ ಬಾಕಿ ಬಗ್ಗೆ ಸಲ್ಲಿಸುವ ಅಫಿಡವಿಟ್‍ನಲ್ಲಿರುವ ಮಾಹಿತಿಯನ್ನು ಮತದಾರರ ಮಾಹಿತಿಗೆ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಸರ್ಕಾರಿ ವಸತಿ, ನೀರು ಸರಬರಾಜು, ವಿದ್ಯುತ್ ಸರಬರಾಜು, ಟೆಲಿಫೋನ್, ಸರ್ಕಾರಿ ಸಾರಿಗೆ (ಏರ್ ಕ್ರಾಫ್ಟ್ ಮತ್ತು ಹೆಲಿಕ್ಯಾಪ್ಟರ್ ಸೇರಿದಂತೆ) ಇತರೆ ಯಾವುದೇ ಸರ್ಕಾರಿ ಬಾಕಿ ಇರುವುದಿಲ್ಲವೆಂದು ಅಭ್ಯರ್ಥಿಗಳು ಅಫಿಡವಿಟ್‍ನಲ್ಲಿ ಘೋಷಿಸಿಕೊಂಡಿರುತ್ತಾರೆ.

ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಚಾಮರಾಜನಗರ, ಮೇ. 2 - ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಪ್ರಥಮ ಎಂಎ ವಿದ್ಯಾರ್ಥಿಗಳಿಂದ ದ್ವಿತೀಯ ಎಂಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಕನ್ನಡ ಪದಕ ವಿಜೇತರಿಗೆ ಸನ್ಮಾನ ಹಾಗೂ ಸುವರ್ಣ ಕನ್ನಡ ಬಹುಮಾನ ವಿತರಣಾ ಸಮಾರಂಭ ಮೇ 3ರಂದು ಬೆಳಿಗ್ಗೆ 10.30 ಗಂಟೆಗೆ ಏರ್ಪಡಿಸಲಾಗಿದೆ.
ನಗರದ ಸುವರ್ಣ ಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಲಿರುವ ಸಮಾರಂಭವು ಅತಿಥಿ ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ. ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಪ್ರೊ. ನೀಲಗಿರಿ ಎಂ ತಳವಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ/ ಕೃಷ್ಣಮೂರ್ತಿ ಹನೂರು, ಅತಿಥಿಒ ಉಪನ್ಯಾಸಕರಾದ ಯು.ಪಿ. ತಮ್ಮೇಗೌಡ, ಎಂ.ಎಸ್. ಬಸವಣ್ಣ, ಡಾ. ಎಂ. ಭೈರಪ್ಪ, ಪಿ. ಮಹೇಶ್ ಬಾಬು ಹಾಗೂ ಪಿ. ರಾಣಿ ಅವರುಗಳು ಉಪಸ್ಥಿತರಿರುವರು.
2015-17ನೇ ಸಾಲಿನ ಕನ್ನಡ ಎಂಎ ವಿದ್ತಾರ್ಥಿಗಳಾದ ವನಜ ಕೆ.ಜಿ, ಶೈಲಶ್ರೀ ಎನ್, ಭವಾನಿ ಎಸ್ ಚಿನ್ನದ ಪದಕ ವಿಜೇತರಾಗಿದ್ದಾರೆ ಹಾಗೂ 2016-17ನೇ ಸಾಲಿನ ದ್ವಿತೀಯ ಕನ್ನಡ ಎಂಎ ವಿದ್ಯಾರ್ಥಿಗಳಾದ ಪವನ್ ಕುಮಾರ್ ಎಸ್, ಭಾಗ್ಯಮ್ಮ ಕೆ.ಎಸ್. ಪ್ರೇಮ್ ಕುಮಾರ್ ಎಂ ಸುವರ್ಣ ಕನ್ನಡ ಬಹುಮಾನಿತರು ಕಾರ್ಯಕ್ರಮದಲ್ಲಿ ಹಾಜರಿರುವರು ಎಂದು ಪ್ರಕಟಣೆ ತಿಳಿಸಿದೆ.
ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ
ಚಾಮರಾಜನಗರ, ಮೇ. 02 - ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೇ 7 ರಿಂದ 29ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ಮೇ 7ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ,  15ರಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು. 21ರಂದು ಯಳಂದೂರು, 25ರಂದು ಕೊಳ್ಳೇಗಾಲ ಹಾಗೂ 29ರಂದು ಹನೂರಿನಲ್ಲಿ ದೂರುಗಳನ್ನು ಅಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಕ್ಕೆ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಸ್‍ಆರ್‍ಟಿಸಿ : ದಂಡ ವಸೂಲಿ

 ಚಾಮರಾಜನಗರ, ಮೇ. 2 - ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2018ರ ಮಾರ್ಚ್ ಮಾಹೆಯಲ್ಲಿ 2542 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 235 ಪ್ರಕರಣಗಳನ್ನು ಪತ್ತೆ ಹಚ್ಚಿದೆ.
 ಅಧಿಕೃತ ಟಿಕೆಟ್ ಪಡೆಯದೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 353 ಪ್ರಯಾಣಿಕರಿಂದ ರೂ. 45330ಗಳ  ದಂಡ ವಸೂಲಿ ಮಾಡಲÁಗಿದೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ತರಗತಿ ಆರಂಭ

 ಚಾಮರಾಜನಗರ, ಮೇ. 2 :- ದ್ವಿತೀಯ ಪಿಯುಸಿ ತರಗತಿಗಳು ಮೇ 2ರಿಂದ ಪ್ರಾರಂಭವಾಗಿದ್ದು ಪ್ರಥಮ ಪಿಯುಸಿ ತರಗತಿಗಳು ಮೇ 24ರಿಂದ ಆರಂಭವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮೇ 2ರಿಂದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿರುವುದರಿಂದ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ಪ್ರಥಮ ಪಿಯುಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗುವಂತೆ ತಿಳಿಸಬೇಕು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಈಹಿಂದೆ ಮೇ 14ರಿಂದ ತರಗತಿಗಳು ಆರಂಭವಾಗಲಿವೆ ಎಂದು ತಿಳಿಸಲಾಗಿತ್ತು. ಆದರೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ  ಮೇ 24ರಿಂದ ಪ್ರಥಮ ಪಿಯುಸಿ ತರಗತಿಗಳು ಪ್ರಾರಂಭವಾಗಲಿದೆ.
ಕಾಲೇಜು ಪ್ರಾಂಶುಪಾಲರು ದಾಖಲಾತಿ ಆಂದÉೂೀಲನಕ್ಕಾಗಿ ಅಗತ್ಯಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಸಂಖ್ಯೆಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರ ಸ್ವೀಕಾರ

 ಚಾಮರಾಜನಗರ, ಮೇ. 2 -  ಚಾಮರಾಜನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಹಿರಿಯ ಸಹಾಯಕ ನಿರ್ದೇಶಕರಾಗಿ ಪಲ್ಲವಿ ಹೊನ್ನಾಪುರ ಅವರು ಅಧಿಕಾರ ವಹಿಸಿಕೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ.
.
ಮೇ 5ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ
 ಚಾಮರಾಜನಗರ, ಮೇ. 2 - ಜಿಲ್ಲಾಡಳಿತದ ವತಿಯಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಚುನಾವಣೆ ನೀತಿ ಸಂಹಿತಿ ಜಾರಿ ಹಿನ್ನಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇ 5ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ಸಮುದಾಯ ಮುಖಂಡರು ಆಗಮಿಸಿ ಆಚರಣೆ ಸಂಬಂಧ ಸಲಹೆ ಸಹಕಾರ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನೈತಿಕ ಮತದಾನಕ್ಕೆ ಪ್ರೆರೇಪಿಸಿ: ಜಿ.ಪಂ ಸಿಇಓ ಡಾ.ಕೆ.ಹರೀಶ್ ಕುಮಾರ್ 

 ಚಾಮರಾಜನಗರ, ಮೇ. 2 :- ಪ್ರಜಾಪಭುತ್ವದ ಯಶಸ್ವಿಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.  ನೈತಿಕ ಮತದಾನಕ್ಕೆ ಜನರನ್ನು ಉತ್ತೇಜಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.  


ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ನಗರಸಭೆ, ರೆಡ್ ಕ್ರಾಸ್ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿದಿಗಳು ಮತದಾನ ಜಾಗೃತಿಗಾಗಿ ನಡೆಸಿದ ಜಾಥಾ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನತಂತ್ರ ವ್ಯವಸ್ಥೆ ಸಂಪೂರ್ಣವಾಗಿ ಫಲಪ್ರದವಾಗಬೇಕಾದರೆ ಎಲ್ಲರೂ ಮತದಾನದಂತಹ ಮಹತ್ವದ ಹಕ್ಕನ್ನು ಚಲಾಯಿಸಬೇಕು.  ಯಾವುದೇ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಬೇಕು.  ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.
ಮತದಾನದ ಪ್ರಮಾಣ ಹೆಚ್ಚಳವಾಗಬೇಕು.  ಯಾರೂ ಸಹ ಮತದಾನದಿಂದ ದೂರ ಉಳಿಯಬಾರದು.  ವಿಶೇಷ ಚೇತನರು ಸೇರಿದಂತೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿಶೇಷ ಚೇತನರಿಗೆ ಅಗತ್ಯವಿರುವ ತ್ರಿಚಕ್ರ ವಾಹನ ಇನ್ನಿತರ ಅವಶ್ಯಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಬಗ್ಗೆ ವಿಶೇಷ ಗಮನ ವಹಿಸಬೇಕು.  ಮುಕ್ತವಾಗಿ ಮತದಾನ ಮಾಡಲು ಉತ್ತೇಜಿಸಬೇಕೆಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಡಾ.ಮಹೇಶ್ ಮಾತನಾಡಿ ಮತದಾನ ಜಾಗೃತಿಗಾಗಿ ರೆಡ್ ಕ್ರಾಸ್ ಸಂಸ್ಥೆಯು ಕೈ ಜೋಡಿಸಿದೆ.  ಮತದಾನ ಮಹತ್ವ ಕುರಿತು ಅರಿವು ಮೂಡಿಸುವ ಸ್ಟಿಕ್ಕರ್‍ಗಳನ್ನು ಮನೆಗಳಿಗೆ ಅಳವಡಿಸಲಾಗುತ್ತಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯ ಬಳಿ ಜಾಥಾಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಅವರು ಚಾಲನೆ ನೀಡಿದರು.
ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. 




ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅಲೆಮಾರಿ, ಅರೆ ಅಲೆಮಾರಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 3 - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಎಸ್‍ಡಿಎ ಇಂಗ್ಲೀಷ್ ಹೈಸ್ಕೂಲ್ (ಸವೆಂತ್ ಡೇ ಇಂಗ್ಲೀಷ್ ಹೈಸ್ಕೂಲ್),  ಮತ್ತು ಹನೂರಿನ ವಿವೇಕಾಂದ ಹೆಚ್‍ಪಿಎಸ್ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
5ನೇ ತರಗತಿ ಉತ್ತೀರ್ಣರಾಗಿದ್ದು, ವಾರ್ಷಿಕ ವರಮಾನ 2 ಲಕ್ಷ ರೂ.ಗಳ ಒಳಗಿರುವ ಗೊಲ್ಲ, ಹೆಳವ, ಬುಡಬುಡಿಕೆ, ಬುಂಡೆ ಬೆಸ್ತ, ದರ್ವೇಶ್, ಬಾಜಿಗರ್, ದೊಂಬಿದಾಸ, ಜೋಗಿ, ಬೈರಾಗಿ, ಗೋಂದಳಿ ಇತ್ಯಾದಿ ಜನಾಂಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದು ಭರ್ತಿ ಮಾಡಿ ಮೇ 31ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿ ಹಾಗೂ ದೂರವಾಣಿ ಸಂಖ್ಯೆ 08226-222180 ಸಂಪರ್ಕಿಸುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ.







(01-05-2018)ಚಾಮರಾಜನಗರ, ಪಿ.ಯು.ಸಿ ಫಲಿತಾಂಶ: ಜಿಲ್ಲೆಗೆ 6ನೇ ಸ್ಥಾನ

ಚಾಮರಾಜನಗರ, ಪಿ.ಯು.ಸಿ ಫಲಿತಾಂಶ: ಜಿಲ್ಲೆಗೆ 6ನೇ ಸ್ಥಾನ 

ಚಾಮರಾಜನಗರ, ಮೇ.01 - ಕಳೆದ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ.75.30ರಷ್ಟು ಫಲಿತಾಂಶ ಪಡೆದು 6ನೇ ಸ್ಥಾನಕ್ಕೆ ಏರಿದೆ.
ಒಟ್ಟು 5838 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಈ ಪೈಕಿ 4936 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.  ಕಳೆದ ಬಾರಿ 65.34 ಫಲಿತಾಂಶಗಳಿಸಿ ಜಿಲ್ಲೆಯು 9ನೇ ಸ್ಥಾನದಲ್ಲಿತ್ತು.  ಈ ಬಾರಿ ಗಣನೀಯವಾಗಿ ಫಲಿತಾಂಶದಲ್ಲಿ ಚೇತರಿಕೆ ಕಂಡು ಬಂದಿದೆ.
ಪರೀಕ್ಷೆಯಲ್ಲಿ 3791 ಬಾಲಕರು ಹಾಜರಾಗಿದ್ದರು.  ಈ ಪೈಕಿ 2109 ಮಂದಿ ಉತ್ತೀರ್ಣರಾಗಿದ್ದು, ಶೇ.55.63 ರಷ್ಟು ಫಲಿತಾಂಶ ದಾಖಲಾಗಿದೆ.  ಒಟ್ಟು 3801 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು.  ಇವರ ಪೈಕಿ 2737 ಮಂದಿ ಉತ್ತೀರ್ಣರಾಗಿದ್ದು, ಶೇ.72.01 ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ 2059 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.  ಇವರಲ್ಲಿ 1436 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 69.74ರಷ್ಟು ಫಲಿತಾಂಶ ಬಂದಿದೆ.  ವಾಣಿಜ್ಯ ವಿಭಾಗದಲ್ಲಿ 2545 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರ ಪೈಕಿ 2071 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.81.38 ರಷ್ಟು ಫಲಿತಾಂಶ ಬಂದಿದೆ.  ವಿಜ್ಞಾನ ವಿಭಾಗದಲ್ಲಿ 1234 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಈ ಪೈಕಿ 889 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.72.04 ರಷ್ಟು ಫಲಿತಾಂಶ ದಾಖಲಾಗಿದೆ.
ಪಟ್ಟಣ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 3981 ರಷ್ಟಿದ್ದು ಇವರ ಪೈಕಿ 2980 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.74.86 ರಷ್ಟು ಫಲಿತಾಂಶ ಬಂದಿದೆ.  ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 1857 ರಷ್ಟಿದ್ದು ತೇರ್ಗಡೆಯಾದವರ ಸಂಖ್ಯೆ 1416 ಇದ್ದು ಒಟ್ಟಾರೆ 76.25 ರಷ್ಟು ಫಲಿತಾಂಶ ದಾಖಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.92 ರಷ್ಟು ಫಲಿತಾಂಶ ಪಡೆಯುವ ಮೂಲಕ ಅತಿ ಹೆಚ್ಚು ಫಲಿತಾಂಶ ಪಡೆದ  ಸರ್ಕಾರಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜೆ.ಎಸ್.ಎಸ್. ಪದವಿ ಪೂರ್ವ ಕಾಲೇಜು ಶೇ.85.45 ರಷ್ಟು ಫಲಿತಾಂಶ ಪಡೆಯುವ ಮೂಲಕ ಅತಿ ಹೆಚ್ಚು ಫಲಿತಾಂಶ ಪಡೆದ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜು ಎನಿಸಿಕೊಂಡಿದೆ.  ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆಯ ಸೆಂಟ್ ಮಾರ್ಗರೇಟ್ ಪದವಿ ಪೂರ್ವ ಕಾಲೇಜು ಶೇ. 100 ರಷ್ಟು ಫಲಿತಾಂಶ ಪಡೆಯುವ ಮೂಲಕ  ಅತಿ ಹೆಚ್ಚು ಫಲಿತಾಂಶ ಪಡೆದ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಎನಿಸಿಕೊಂಡಿದೆ.
ಕೊಳ್ಳೇಗಾಲ ತಾಲ್ಲೂಕಿನ ರಾಮಾಪುರದ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು ಶೇ.61.5 ರಷ್ಟು ಫಲಿತಾಂಶ ಪಡೆದು ಅತಿ ಕಡಿಮೆ ಫಲಿತಾಂಶ ಪಡೆದ ಖಾಸಗಿ ಅನುದಾನಿ ಪದವಿ ಪೂರ್ವ ಕಾಲೇಜು ಎನಿಸಿಕೊಂಡಿದೆ.  ಕೊಳ್ಳೇಗಾಲದ ವರ್ಮ ಬಾಲಕರ ಪದವಿ ಪೂರ್ವ ಕಾಲೇಜು ಶೇ. 42.85 ಹಾಗೂ ಗುಂಡ್ಲುಪೇಟೆಯ ಮಾನಸ ಪದವಿ ಪೂರ್ವ ಕಾಲೇಜು ಶೇ. 42.85 ರಷ್ಟು ಫಲಿತಾಂಶ ಪಡೆದಿದ್ದು ಅತೀ ಕಡಿಮೆ ಫಲಿತಾಂಶ ಪಡೆದ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಎನಿಸಿಕೊಂಡಿದೆ.
ಕಲಾ ವಿಭಾಗದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹೆಚ್.ಸಿ ಭುವನೇಶ್ವರಿ 562 ಅಂಕ(ಶೇ.93.07), ಕೊಳ್ಳೇಗಾಲ ತಾಲ್ಲೂಕಿನ ಬಂಡಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಂದಿನಿ 557 ಅಂಕ(ಶೇ. 92.83) ಹಾಗೂ ಗೌರಮ್ಮ 549 ಅಂಕ(ಶೇ.91.5) ಅಂಕಗಳನ್ನು ಪಡೆದು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಅನುದಾನಿತ ಪದವಿ ಪೂರ್ವ ಕಾಲೇಜು ಪೈಕಿ ಕೊಳ್ಳೇಗಾಲ ತಾಲ್ಲೂಕಿನ ಮಾರ್ಟಳ್ಳಿಯ, ಸೆಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎ.ದಯಾಳ್ 530 ಅಂಕ(ಶೇ.88.33), ಆಂತೋಣಿ ಸ್ವಾಮಿ.ಜೆ 517 ಅಂಕ(86.16), ರಂಜಿತ ಶರ್ಮ.ಆರ್ 517 ಅಂಕ(ಶೇ.86.16), ಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಎಂ.ಮಹದೇವ ಪ್ರಶಾಂತ್ 517 ಅಂಕ(ಶೇ.86.16), ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಬಿ.ಎಂ.ಭವ್ಯ 506 ಅಂಕ(ಶೇ.84.33) ಪಡೆದು ಹೆಚ್ಚಿನ ಅಂಕ ಪಡೆದ ಅನುದಾನಿತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಎನಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲ್ಲೂಕಿ£ ಹರವೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವ ಚಂದನ 553 (ಶೇ.92.16), ಕುದೇರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಜಯ್ ಶರ್ಮಾ 546 ಅಂಕ (ಶೇ.91) ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಬಂಡಳ್ಳಿಯ ಸರ್ಕಾರಿ ಪದವಿ ಪೂರ್ವ ತಾಲ್ಲೂಕಿನ ಜಯಲಕ್ಷ್ಮಿ 540 ಅಂಕ(ಶೇ.90) ಪಡೆದು ವಿಜ್ಞಾನ ವಿಭಾಗದಲ್ಲಿ  ಅತೀ ಹೆಚ್ಚು ಅಂಕ ಪಡೆದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಎನಿಸಿಕೊಂಡಿದ್ದಾರೆ.
ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಎನ್.ಸಹನ 558 ಅಂಕ(ಶೇ.93), ಚಾಮರಾಜನಗರದ ಜೆ.ಎಸ್.ಎಸ್ ಕಾಲೇಜಿನ  ಶಿವ ಕುಮಾರ್.ಎನ್ 557 (ಶೇ.92.83), ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಸ್ಪೂರ್ತಿ 556 ಅಂಕ (ಶೇ.92.66) ಪಡೆದು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ.
ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪೈಕಿ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ಹರ್ಷಿತ.ಟಿ.ಎಂ 592 ಅಂಕ(ಶೇ.98.66), ಎಸ್.ರಷ್ಮಿ 573 ಅಂಕ(ಶೇ.95.50) ಹಾಗೂ ಲಯನ್ಸ್ ಪದವಿ ಪೂರ್ವ ಕಾಲೇಜಿನ ನಿಶ್ಚಿತ್ ಎಂ.ಎನ್.572 ಅಂಕ(ಶೇ.95.33)ರಷ್ಟು ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ.
ಕಲಾ ವಿಭಾಗದಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದ ವಿದ್ಯಾರ್ಥಿಗಳ ವಿವರ ಇಂತಿದೆ.
ಭುವನೇಶ್ವರಿ ಹೆಚ್.ಸಿ. 562 ಅಂಕ (ಶೇ.93.07) ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಗೂರು, ಗುಂಡ್ಲುಪೇಟೆ ತಾಲ್ಲೂಕು, ನಂದಿನಿ.ಎಸ್ 557 ಅಂಕ (ಶೇ.92.83) ಸ.ಪೂ.ಕಾಲೇಜು, ಬಂಡಳ್ಳಿ, ಕೊಳ್ಳೇಗಾಲ.  ಕುಸುಮ.ಎನ್ 553 ಅಂಕ (ಶೇ.92.16) ನಿಸರ್ಗ ಸ್ವ.ಪ.ಪೂ. ಕಾಲೇಜು, ಕೊಳ್ಳೇಗಾಲ.
ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದ ವಿದ್ಯಾರ್ಥಿಗಳ ವಿವರ ಇಂತಿದೆ.  ವಿಜಯ.ಆರ್ 579 ಅಂಕ (ಶೇ.96.50) ನಿಸರ್ಗ ಸ್ವ.ಪ.ಪೂ ಕಾಲೇಜು, ಕೊಳ್ಳೇಗಾಲ.  ಕೆ.ಕಾವ್ಯ 578 ಅಂಕ (ಶೇ.96.33) ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ. ಸೈಯದ್ ಹಿಫಿಜು ರೆಹಮಾನ್ 578 ಅಂಕ (ಶೇ.96.33) ಕೆ.ಎಸ್.ಎನ್ ಪ.ಪೂ ಕಾಲೇಜು, ಗುಂಡ್ಲುಪೇಟೆ,  ಸುಷ್ಮ.ಎಸ್ 576 (ಶೇ.96). ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ.
ಅನುದಾನ ರಹಿತ ಪದವಿ ಪೂರ್ವ ಕಾಲೇಜು
ಕುಸುಮ ಎನ್. 553 (ಶೇ.92.16) ನಿಸರ್ಗ ಸ್ವ.ಪ.ಪೂ ಕಾಲೇಜು, ಕೊಳ್ಳೇಗಾಲ.  ಅನುಷ.ಎಂ 547 (ಶೇ.91.16) ಶ್ರೀಮಹದೇಶ್ವರ ಪ.ಪೂ.ಕಾಲೇಜು.ಒಡೆಯರ ಪಾಳ್ಯ, ಕೊಳ್ಳೇಗಾಲ.  ಎಂ.ಪಲ್ಲವಿ 544 ಅಂಕ (ಶೇ.90.06) ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಯಳಂದೂರು.
ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ
ಸರ್ಕಾರಿ ಪ.ಪೂ ಕಾಲೇಜುಗಳು:- ಲಿಂಗರಾಜು 559 ಅಂಕ (ಶೇ.93.16) ಬಾಲಕರ ಸ.ಪ.ಪೂ ಕಾಲೇಜು, ಚಾಮರಾಜನಗರ.  ಪಿ.ಅನಿಶಾ 558 ಅಂಕ (ಶೇ.98) ಬಾಲಕಿಯರ ಸ.ಪ.ಪೂ ಕಾಲೇಜು, ಗುಂಡ್ಲುಪೇಟೆ.  ರಾಜೇಶ್ವರಿ.ಎಸ್ 549 ಅಂಕ (ಶೇ.91.5) ಎಸ್.ವಿ.ಕೆ ಬಾಲಕಿಯರ ಸ.ಪ.ಪೂ ಕಾಲೇಜು, ಕೊಳ್ಳೇಗಾಲ.  ಶಿಲ್ಪ.ಡಿ 549 ಅಂಕ (ಶೇ.91.5) ಸ.ಪ.ಪೂ.ಕಾಲೇಜು, ಲೊಕ್ಕನಹಳ್ಳಿ, ಕೊಳ್ಳೇಗಾಲ.
ಅನುದಾನಿತ ಪದವಿ ಪೂರ್ವ ಕಾಲೇಜು
ವಿಸ್ಮಯ ಸಿಂಹ 569 (ಶೇ.94.83) ಜೆ.ಎಸ್.ಎಸ್. ಮಹಿಳಾ ಪ.ಪೂ.ಕಾಲೇಜು ಚಾಮರಾಜನಗರ, ಪ್ರೀತಿ.ಎಸ್ 558 (ಶೇ.93) ಹಾಗೂ ಕೀರ್ತಿ ಹೆಚ್.ಎಂ 552 (ಶೇ.92)ಜೆ.ಎಸ್.ಎಸ್. ಮಹಿಳಾ ಪ.ಪೂ.ಕಾಲೇಜು, ಗುಂಡ್ಲುಪೇಟೆ.
ಅನುದಾನ ರಹಿತ ಪದವಿ ಪೂರ್ವ ಕಾಲೇಜು
ವಿಜಯ.ಆರ್ 579 (ಶೇ,.96.50) ನಿಸರ್ಗ ಸ್ವ.ಪ.ಪೂ ಕಾಲೇಜು, ಕೊಳ್ಳೇಗಾಲ.  ಕಾವ್ಯ.ಕೆ 578 (ಶೇ.96.33) ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ. ಸೈಯದ್ ಹಿಫಿಜು ರೆಹಮಾನ್ 578 ಅಂಕ (ಶೇ.96.33) ಕೆ.ಎಸ್.ಎನ್ ಪ.ಪೂ ಕಾಲೇಜು, ಗುಂಡ್ಲುಪೇಟೆ,  ಸುಷ್ಮ.ಎಸ್ 576 (ಶೇ.96). ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ.
ವಿಜ್ಞಾನ ವಿಭಾಗದಲ್ಲಿ ಹರ್ಷಿತ.ಟಿ.ಎಂ 592 ಅಂಕ(ಶೇ.98.66) ಹಾಗೂ ಎಸ್.ರಷ್ಮಿ 573 ಅಂಕ(ಶೇ.95.50)  ನಿಸರ್ಗ ಸ್ವ.ಪ.ಪೂ ಕಾಲೇಜು, ಕೊಳ್ಳೇಗಾಲ. ಹಾಗೂ ನಿಶ್ಚಿತ್ ಎಂ.ಎನ್.572 ಅಂಕ(ಶೇ.95.33) ಲಯನ್ಸ್ ಪದವಿ ಪೂರ್ವ ಕಾಲೇಜಿನ ಕೊಳ್ಳೇಗಾಲ ಇವರು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದ ವಿದ್ಯಾರ್ಥಿಗಳು ಎನಿಸಿಕೊಂಡಿದ್ದಾರೆ.  ಹರ್ಷಿತ.ಟಿ.ಎಂ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ರಾಜ್ಯದಲ್ಲೇ 5ನೇ ಸ್ಥಾನ ಪಡೆದು ಕೊಂಡಿದ್ದಾರೆ.
ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಪಡೆದ ಕಾಲೇಜು ಯಾವುದೇ ಇರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಲೈವ್ ವೆಬ್‍ಕ್ಯಾಸ್ಟಿಂಗ್‍ಗೆ ನೋಡಲ್ ಅಧಿಕಾರಿ, ಸಹಾಯಕ ಅಧಿಕಾರಿಗಳ ನೇಮಕ

ಚಾಮರಾಜನಗರ, ಮೇ. 01 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮೇ 12ರಂದು ನಡೆಯುವ ಮತದಾನ ಕಾರ್ಯವನ್ನು ಲೈವ್ ವೆಬ್‍ಕ್ಯಾಸ್ಟಿಂಗ್ ಮೂಲಕ ಚಿತ್ರೀಕರಣ ಸಂಬಂಧ ಮೇಲುಸ್ತುವಾರಿ ಕಾರ್ಯ ನಿರ್ವಹಿಸಲು ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಗೆ ಚೇತನ್ ಕುಮಾರ್ ಡಿ., ಜಿಲ್ಲಾ ನಗರಾಭಿವೃದ್ಧಿ ಕೋಶ, ಚಾಮರಾಜನಗರ (ಮೊಬೈಲ್ 8892519864) ಇವರನ್ನು ಲೈವ್ ವೆಬ್‍ಕ್ಯಾಸ್ಟಿಂಗ್ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕಾರ್ತಿಕೇಯನ್ ಎ, ನೆಟ್‍ವರ್ಕ್ ಇಂಜಿನಿಯರ್, ಎನ್‍ಐಸಿ, ಜಿಲ್ಲಾಧಿಕಾರಿಗಳ ಕಚೇರಿ, ಚಾಮರಾಜನಗರ (ಮೊಬೈಲ್ 7904504980) ಇವರನ್ನು ತಾಂತ್ರಿಕ ಸಹಾಯಕರನ್ನಾಗಿ ನೇಮಕ ಮಾಡಲಾಗಿದೆ.
ಹನೂರು ವಿಧಾನಸಭಾ ಕ್ಷೇತ್ರಕ್ಕೆ ಖಜಾನೆ-2 ಅಭಿಯಂತರಾದ ಜಿಲ್ಲಾ ಖಜಾನೆ, ಚಾವiರಾಜನಗರದ ಹರೀಶ್ (ಮೊಬೈಲ್ 8861461509) ಅವರನ್ನು ಉಸ್ತುವಾರಿ ಅಧಿಕಾರಿಯಾಗಿ ಹಾಗೂ ನಾಗೇಂದ್ರ (ಮೊಬೈಲ್ 9980873720)  ಅವರನ್ನು ತಾಂತ್ರಿಕ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಗುರುರಾಜ್ (ಮೊಬೈಲ್ 9480832166), ಜಿಲ್ಲಾ ಭೂಮಿ ಸಂಯೋಜಕರು, ಚಾಮರಾಜನಗರ ಅವರನ್ನು ಕ್ಷೇತ್ರ ಉಸ್ತುವಾರಿ ಅಧಿಕಾರಿಯಾಗಿ, ಡೇನಿಯಲ್, ಪ್ರೋಗ್ರಾಮರ್, ಜಿಲ್ಲಾ ಪಂಚಾಯತ್, ಚಾಮರಾಜನಗರ ಇವರನ್ನು ತಾಂತ್ರಿಕ ಉಸ್ತುವಾರಿ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ವಿದ್ಯಾಶ್ರೀ (ಮೊಬೈಲ್ 9739381089), ಅಟಲ್ ಜೀ ಜಿಲ್ಲಾ ಸಂಯೋಜಕರು, ಜಿಲ್ಲಾಧಿಕಾರಿಗಳ ಕಚೇರಿ ಇವರು ಕ್ಷೇತ್ರ ಉಸ್ತುವಾರಿ ಅಧಿಕಾರಿಯಾಗಿ ಹಾಗೂ ನಂಜುಂಡಸ್ವಾಮಿ (ಮೊಬೈಲ್ 9538100543), ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಚಾಮರಾಜನಗರ ಇವರು ತಾಂತ್ರಿಕ ಉಸ್ತುವಾರಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ರಾಮ್ ಪ್ರಸಾದ್ (ಮೊಬೈಲ್ 9945275410), ಆಧಾರ್ ಸಂಯೋಜಕರು, ಜಿಲ್ಲಾಧಿಕಾರಿಗಳ ಕಚೇರಿ, ಚಾಮರಾಜನಗರ ಅವರನ್ನು  ಲೈವ್ ವೆಬ್‍ಕ್ಯಾಸ್ಟಿಂಗ್ ಉಸ್ತುವಾರಿ ಅಧಿಕಾರಿ ಹಾಗೂ ಫೇಸ್ ಬುಕ್, ಟ್ಟಿಟರ್, ಇನ್‍ಸ್ಟಾಗ್ರಾಮ್, ಇಟಿಪಿಬಿಎಸ್ ನಿರ್ವಹಣೆ ಅಧಿಕಾರಿಯಾಗಿ, ನಾಗಸುಂದರ್ ಹೆಚ್.ಬಿ. (ಮೊಬೈಲ್  9742105225), ಜಿಲ್ಲಾ ಸಕಾಲ ಸಂಯೋಜಕರು, ಜಿಲ್ಲಾಧಿಕಾರಿಗಳ ಕಚೇರಿ, ಚಾಮರಾಜನಗರ ಅವರನ್ನು ತಾಂತ್ರಿಕ ಉಸ್ತುವಾರಿ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ರುದ್ರಸ್ವಾಮಿ ಎನ್ (ಮೊಬೈಲ್ 9513143766),  ಕಂಪ್ಯೂಟರ್ ಆಪರೇಟರ್, ಸಾಮಾಜಿಕ ಭದ್ರತಾ ಯೋಜನಾ ಶಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಚಾಮರಾಜನಗರ ಹಾಗೂ ಪುರುಷೋತ್ತಮ (ಮೊಬೈಲ್ 9538342024), ಕಂಪ್ಯೂಟರ್ ಆಪರೇಟರ್, ನಗರಸಭೆ, ಚಾಮರಾಜನಗರ ಇವರನ್ನು ಸಹಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ 6ನೇ ಸ್ಥಾನ: ಜಿ.ಪಂ.ಸಿಇಓ ಅಭಿನಂದನೆ

ಚಾಮರಾಜನಗರ, ಮೇ.01:- ಚಾಮರಾಜನಗರ ಜಿಲ್ಲೆಯು ಕಳೆದ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಆರನೇ ಸ್ಥಾನ ಗಳಿಸುವ ಮೂಲಕ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದೆ. ಕಳೆದ  ಸಾಲಿನಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ವರ್ಷ ಮೂರು ಸ್ಥಾನಗಳ ಜಿಗಿತ ಕಂಡಿದೆ. ಜಿಲ್ಲೆಯು ಈ ಬಾರಿ  ಶೇ.75.30 ಫಲಿತಾಂಶ ದಾಖಲಿಸಿದೆ. 2016ನೇ ಸಾಲಿನಲ್ಲಿ ಜಿಲ್ಲೆಯ ಶೇ. 64.86 ಫಲಿತಾಂಶದೊಂದಿಗೆ 13ನೇ ಸ್ಥಾನ ಹಾಗೂ 2017ನೇ ಸಾಲಿನಲ್ಲಿ ಶೇ. 65.34 ಫಲಿತಾಂಶದೊಂದಿಗೆ 9ನೇ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದರೊಂದಿಗೆ ಗುಣಾತ್ಮಕ ಫಲಿತಾಂಶ ಪಡೆಯಲು ಜಿಲ್ಲೆಯಲ್ಲಿ ಹಮ್ಮಿಕೊಂಡ ಹಲವಾರು ಪರಿಣಾಮಕಾರಿ ಶೈಕ್ಷÀಣಿಕÀ ಕ್ರಮಗಳು ಫಲ ನೀಡಿವೆ. ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರ ಸಭೆಗಳನ್ನು ಹಮ್ಮಿಕೊಂಡು ಗುಣಾತ್ಮಕ ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಶೈಕ್ಷÀಣಿಕ ಸಾಲಿನಲ್ಲಿ ಅಳವಡಿಸಿಕೊಳ್ಳಲು ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿತ್ತು. ಶೇ. 75ಕ್ಕೂ ಹೆಚ್ಚು ಫಲಿತಾಂಶ ಪಡೆಯಲು ಗುರಿ ಹೊಂದಲಾಗಿತ್ತು.
ಪ್ರಮುಖವಾಗಿ ಅಂಕ ಗಳಿಕೆಗಿಂತ ಗುಣಾತ್ಮಕ ಕಲಿಕೆಗೆ ಆದ್ಯತೆ ನೀಡಲಾಗಿತ್ತು. ಹೀಗಾಗಿ ಜಿಲ್ಲೆಯು ಆರನೇ ಸ್ಥಾನದಲ್ಲಿದ್ದರೂ ಸಹ ರಾಜ್ಯಮಟ್ಟದಲ್ಲಿ ಶೇಖಡವಾರು ಫಲಿತಾಂಶವನ್ನು ಪರಿಗಣಿಸಿದಾಗ ಶೇ. 75.30ರಷ್ಟು ದಾಖಲಾಗಿರುವುದು ವಿಶೇಷವಾಗಿದೆ. ಇದರಿಂದ ಗುಣಾತ್ಮಕ ಫಲಿತಾಂಶ ಬಂದಿರುವುದು ಸಮಾಧಾನ ತಂದಿದೆ. ನಿರೀಕ್ಷೆಯಂತೆ ಜಿಲ್ಲೆಯು ಉತ್ತಮ ಫಲಿತಾಂಶವನ್ನು ಗಳಿಸಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ರವರು ಉತ್ತಮ ಫಲಿತಾಂಶ  ಪÀಡೆಯಲು ಶ್ರಮಿಸಿದ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಎಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯು ಇನ್ನೂ ಉತ್ತಮ ಫಲಿತಾಂಶವನ್ನು ಪಡೆದು ಅಗ್ರಸ್ಥಾನಕ್ಕೆ ಏರಲಿ ಎಂದು ಆಶಿಸಿದ್ದಾರೆ.



ಕೊಳ್ಳೇಗಾಲ:ಜೆಎಸ್‍ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶೇ.84


   ಕೊಳ್ಳೇಗಾಲ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಜೆಎಸ್‍ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ.84 ರಷ್ಠು ಫಲಿತಾಂಶ ಗಳಿಸಿದೆ. ಪರೀಕ್ಷೆಗೆ ಹಾಜರಾದ 164 ವಿದ್ಯಾರ್ಥಿನಿಯರ ಪೈಕಿ 138 ಮಂದಿ ಉತ್ತೀರ್ಣರಾಗಿದ್ದಾರೆ 27 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 85 ಪ್ರಥಮ, 21 ದ್ವಿತೀಯ ಹಾಗೂ 4 ವಿದ್ಯಾರ್ಥಿನಿಯರು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
     ವಾಣಿಜ್ಯ ವಿಭಾಗದಲ್ಲಿ ಶೇ.95 ಫಲಿತಾಂಶ ಬಂದಿದ್ದು ಅತ್ಯುತ್ತಮ 23, ಪ್ರಥಮ 43, ದ್ವಿತೀಯ 6 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಕಾವ್ಯ.ಕೆ(578), ಸುಷ್ಮ.ಎಸ್.(576), ಮಹೇಶ್ವರಿ.ಎಸ್.(571), ಅರ್ಬಿಯಾಖಾನಂ(566), ಚೈತ್ರ.ಎಂ.(554), ಪ್ರೇಮ.ಎಸ್.(554), ವೀಣಾ.ಎಂ.(551), ಅಖಿಲಾ.ಎಲ್.(550), ಶಿಲ್ಪಶ್ರೀ(534), ಸಂಗೀತ.ಎಸ್.ಡಿ.(533), ರುಚಿತ.ಬಿ.ಎಂ.(537), ಅರ್ಪಿತ.ಎನ್.(534), ಪೂಜಾ.ಎನ್.(531), ಚಿತ್ರ.ಎಂ.(530), ಭಾನುಪ್ರಿಯಾ(528), ಕಾವ್ಯ.ಬಿ.ಪಿ.(526), ಭಾರತಿ(524), ಕಲ್ಯಾಣಿ.ಎಸ್.(521), ರಶ್ಮಿ.ಎಂ.(515), ರಮ್ಯ.ಆರ್.(512), ಪ್ರತಿಮಾ.ಎಸ್.(510) ಅಂಕಗಳನ್ನು ಪಡೆದಿರುತ್ತಾರೆ. ಕಾವ್ಯ.ಕೆ. ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರದಲ್ಲಿ 100 ಕ್ಕೆ 100, ಮಹೇಶ್ವರಿ.ಎಸ್. ವ್ಯವಹಾರ ಅಧ್ಯಯನ 100 ಕ್ಕೆ 100 ಪೂಜಾ.ಎನ್. ಲೆಕ್ಕಶಾಸ್ತ್ರದಲ್ಲಿ 100 ಕ್ಕೆ 100 ಅರ್ಬಿಯಾಖಾನಂ ಭೂಗೋಳಶಾಸ್ತ್ರದಲ್ಲಿ 100 ಕ್ಕೆ 100 ಅಂಕ ಪಡೆದಿರುತ್ತಾರೆ.
ಕಲಾವಿಭಾಗದಲ್ಲಿ ಶೇ.85 ಫಲಿತಾಂಶ ಬಂದಿದ್ದು, ಅದರಲ್ಲಿ ಅತ್ಯುತ್ತಮ 3, ಪ್ರಥಮ 22, ದ್ವಿತೀಯ 10 ತೃತೀಯ ದರ್ಜೆಯಲ್ಲಿ 3 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಅನುಷ.ಎನ್.(533), ಜಮುನ.ಆರ್.(532), ಕೋಕಿಲ(520) ಅಂಕಗಳನ್ನು ಪಡೆದಿರುತ್ತಾರೆ.
    ವಿಜಾÐನ ವಿಭಾಗದಲ್ಲಿ ಅತ್ಯುತ್ತಮ 1, ಪ್ರಥಮ 20, ದ್ವಿತೀಯ 5 ಹಾಗೂ ತೃತೀಯ ದರ್ಜೆಯಲ್ಲಿ 1 ವಿದ್ಯಾರ್ಥಿನಿಯರು ಉತ್ತೀರ್ಣರಾಗಿತ್ತಾರೆ. ಅಮೃತ.ಜಿ.(560) ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿಯರನ್ನು, ಪೋಷಕರನ್ನು ಹಾಗೂ ಅದ್ಯಾಪಕರನ್ನು ಆಡಳಿತ ಮಂಡಳಿಯ ವತಿಯಿಂದ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.







   
   ಕಾವ್ಯ ಕೆ          ಸುಷ್ಮಾ ಎಸ್        ಮಹೇಶ್ವರಿ ಎಸ್     ಅರ್ಬಿಯಾ ಖಾನಂ   ಚೈತ್ರ ಎಂ
  ವಾಣಿಜ್ಯ (578)       ವಾಣಿಜ್ಯ (576)      ವಾಣಿಜ್ಯ (571)       ವಾಣಿಜ್ಯ (566)    ವಾಣಿಜ್ಯ (554)


   
  ಪ್ರೇಮ ಎಸ್    ವೀಣಾ ಎಂ        ಅಖಿಲಾ        ರುಚಿತಾ ಬಿ ಎಂ     ಅರ್ಪಿತಾ ಎನ್
  ವಾಣಿಜ್ಯ (554)     ವಾಣಿಜ್ಯ(551)       ವಾಣಿಜ್ಯ (550)        ವಾಣಿಜ್ಯ (537)        ವಾಣಿಜ್ಯ (534)




      ಶಿಲ್ಪಶ್ರೀ ಸಿ ಸಂಗೀತಾ ಎಸ್ ಡಿ    ರಂಜಿತಾ ಎಂ      ಪೂಜಾ ಎನ್    ಚೈತ್ರಾ ಎಂ
     ವಾಣಿಜ್ಯ (534) ವಾಣಿಜ್ಯ (533) ವಾಣಿಜ್ಯ (532)        ವಾಣಿಜ್ಯ (531)     ವಾಣಿಜ್ಯ (530)



  ಭಾನುಪ್ರಿಯಾ     ಕಾವ್ಯ ಬಿ ಪಿ     ಭಾರತಿ ಅನುಷಾ ಆರ್   ಕಲ್ಯಾಣಿ
  ವಾಣಿಜ್ಯ (528)    ವಾಣಿಜ್ಯ (526)    ವಾಣಿಜ್ಯ(524) ವಾಣಿಜ್ಯ (524) ವಾಣಿಜ್ಯ (521)


      ರಶ್ಮಿ ಎಂ ರಮ್ಯ ಆರ್ ಪ್ರತಿಮಾ ಎಸ್
     ವಾಣಿಜ್ಯ (515) ವಾಣಿಜ್ಯ (512) ವಾಣಿಜ್ಯ (510)

         
            ಅಮೃತ         ಅನುಷ ಎನ್     ಜಮುನ ಆರ್   ಕೋಕಿಲಾ
            ವಿಜ್ಞಾನ (560)         ಕಲಾ (533)        ಕಲಾ (532)     ಕಲಾ (520)
 

             















01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು