ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018
ಜಿಲ್ಲೆಯಲ್ಲಿ ಶೇ. 82.44ರಷ್ಟು ಮತದಾನ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು, ಕೊಳ್ಳೇಗಾಲದಲ್ಲಿ ಕಡಿಮೆ ಮತ ಚಲಾವಣೆ
ಚಾಮರಾಜನಗರ, ಮೇ. 13 :- ಜಿಲ್ಲೆಯಲ್ಲಿ ಶನಿವಾರ ನಡೆದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟಾರೆ ಶೇ. 82.44ರಷ್ಟು ಮತದಾನವಾಗಿದೆ.ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 81.61 ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ. 79.15 ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 80.52 ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶೇ. 88.57ರಷ್ಟು ಮತದಾನವಾಗಿದೆ.
ಶೇಕಡಾವಾರು ಅಂಕಿಅಂಶಗಳನ್ನು ಗಮನಿಸಿದಾಗ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದ್ದರೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ
ಜಿಲೆಯಲ್ಲ್ಲಿ 4,14,366 ಪುರುಷರು, 4,16,460 ಮಹಿಳೆಯರು, ಇತರರು 61 ಮತದಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 8,30,887 ಮತದಾರರಿದ್ದಾರೆ. ಇವರ ಪೈಕಿ 3,46,079 ಪುರುಷರು, 3,38,870 ಮಹಿಳೆಯರು, ಇತರ 9 ಮಂದಿ ಸೇರಿದಂತೆ ಒಟ್ಟಾರೆ 6,84,958 ಮತದಾರರು ಮತ ಚಲಾಯಿಸಿದ್ದಾರೆ. ಶೇ. 83.52ರಷ್ಟು ಪುರುಷರು, ಶೇ. 81.37ರಷ್ಟು ಮಹಿಳೆಯರು, ಶೇ. 14.75ರಷ್ಟು ಇತರೆ ಮಂದಿ ಸೇರಿದಂತೆ ಒಟ್ಟಾರೆ ಶೇ. 82.44ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,05,638 ಪುರುಷರು, 1,01,949 ಮಹಿಳೆಯರು, ಇತರರು 16 ಮಂದಿ ಸೇರಿದಂತೆ ಒಟ್ಟು 2,07,603 ಮತದಾರರಿದ್ದಾರೆ. ಈ ಪೈಕಿ 86,585 ಪುರುಷರು, 82,835 ಮಹಿಳೆಯರು, ಇತರರು ಐವರು ಸೇರಿದಂತೆ ಒಟ್ಟು 1,69,425 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 81.96ರಷ್ಟು ಪುರುಷರು, ಶೇ.81.25ರಷ್ಟು ಮಹಿಳೆಯರು, ಶೇ. 31.25ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 81.61ರಷ್ಟು ಮತದಾನವಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 1,05,129 ಪುರುಷರು, 1,06,380 ಮಹಿಳೆಯರು, ಇತರರು 13 ಮಂದಿ ಸೇರಿದಂತೆ ಒಟ್ಟು 2,11,522 ಮತದಾರರಿದ್ದಾರೆ. ಈ ಪೈಕಿ 84,654 ಪುರುಷರು, 82,775 ಮಹಿಳೆಯರು, ಇತರರು ಒರ್ವ ಸೇರಿದಂತೆ ಒಟ್ಟು 1,67,430 ಮತದಾರರು ಮತ ಚಲಾಯಿಸಿದ್ದಾರೆ. ಶೇ. 80.52ರಷ್ಟು ಪುರುಷರು, ಶೇ.77.81ರಷ್ಟು ಮಹಿಳೆಯರು, ಶೇ. 7.69ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 79.15ರಷ್ಟು ಮತದಾನವಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 1,01,659 ಪುರುಷರು, 1,04,471 ಮಹಿಳೆಯರು, ಇತರರು 16 ಮಂದಿ ಸೇರಿದಂತೆ ಒಟ್ಟು 2,06,146 ಮತದಾರರಿದ್ದಾರೆ. ಈ ಪೈಕಿ 83,752 ಪುರುಷರು, 82,242 ಮಹಿಳೆಯರು, ಇತರರು ಇಬ್ಬರು ಸೇರಿದಂತೆ ಒಟ್ಟು 1,65,996 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 82.39ರಷ್ಟು ಪುರುಷರು, ಶೇ. 78.72ರಷ್ಟು ಮಹಿಳೆಯರು, ಶೇ. 12.50ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 80.52ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,01,940 ಪುರುಷ, 1,03,660 ಮಹಿಳೆಯರು, ಇತರರು 16 ಮಂದಿ ಸೇರಿದಂತೆ ಒಟ್ಟು 2,05,616 ಮತದಾರರಿದ್ದಾರೆ. ಇವರಲ್ಲಿ 91,088 ಪುರುಷರು, 91,018 ಮಹಿಳೆಯರು, ಇತರೆ ಒರ್ವ ಸೇರಿದಂತೆ ಒಟ್ಟು 1,82,107 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 89.35ರಷ್ಟು ಪುರುಷರು, ಶೇ.87.80ರಷ್ಟು ಮಹಿಳೆಯರು, ಶೇ. 6.25ರಷ್ಟು ಇತರರು ಸೇರಿದಂತೆ ಒಟ್ಟಾರೆ ಕ್ಷೇತ್ರದಲ್ಲಿ ಶೇ. 88.57ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತಂಗೇರಿಹುಂಡಿಯಲ್ಲಿ ಅತೀ ಹೆಚ್ಚು, ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆ ಮತಗಟ್ಟೆಯಲ್ಲಿ ಅತೀ ಕಡಿಮೆ ಮತದಾನ
ಚಾಮರಾಜನಗರ, ಮೇ. 13 - ಜಿಲ್ಲೆಯಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉತ್ತಂಗೇರಿಹುಂಡಿ ಮತಗಟ್ಟೆಯಲ್ಲಿ (ಮತಗಟ್ಟೆ ಸಂಖ್ಯೆ 242) ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ಶೇ. 97.78ರಷ್ಟು ಮತದಾನವಾಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕೊಳ್ಳೇಗಾಲದ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 140ಎ)ಯಲ್ಲಿ ಅತೀ ಕಡಿಮೆ ಅಂದರೆ ಶೇ. 47.38ರಷ್ಟು ಮತದಾನ ನಡೆದಿದೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನಲ್ಲಿಕತ್ರಿ ಮತಗಟ್ಟೆ (ಮತಗಟ್ಟೆ ಸಂಖ್ಯೆ 229)ಯಲ್ಲಿ ಅತೀ ಹೆಚ್ಚು ಅಂದರೆ ಶೇ. 95.58ರಷ್ಟು ಮತದಾನವಾಗಿದೆ. ಅತ್ತೀಖಾನೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 230) ಯಲ್ಲಿ ಅತೀ ಕಡಿಮೆ ಅಂದರೆ ಶೇ. 55.38ರಷ್ಟು ಮತದಾನವಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕೆ.ದೇವರಹಳ್ಳಿ ಮತಗಟ್ಟೆ (ಮತಗಟ್ಟೆ ಸಂಖ್ಯೆ 194)ಯಲ್ಲಿ ಅತೀ ಹೆಚ್ಚು ಅಂದರೆ ಶೇ. 94.07ರಷ್ಟು ಮತದಾನವಾಗಿದೆ. ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 140ಎ)ಯಲ್ಲಿ ಅತೀ ಕಡಿಮೆ ಅಂದರೆ ಶೇ. 47.38ರಷ್ಟು ಮತದಾನ ನಡೆದಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಳ್ಳೂರು ಮತಗಟ್ಟೆ (ಮತಗಟ್ಟೆ ಸಂಖ್ಯೆ 154)ಯಲ್ಲಿ ಅತೀ ಹೆಚ್ಚು ಅಂದರೆ ಶೇ. 96.12ರಷ್ಟು ಮತದಾನವಾಗಿದೆ. ಚಾಮರಾಜನಗರ ಪಟ್ಟಣದ ಪಿಡಬ್ಲೂಡಿ ಕಾಲೋನಿಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 78) ಯಲ್ಲಿ ಅತೀ ಕಡಿಮೆ ಅಂದರೆ ಶೇ. 50ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಂಗೇರಿಹುಂಡಿ ಮತಗಟ್ಟೆಯಲ್ಲಿ (ಮತಗಟ್ಟೆ ಸಂಖ್ಯೆ 242) ಅತೀ ಹೆಚ್ಚು ಅಂದರೆ ಶೇ. 97.78ರಷ್ಟು ಮತದಾನವಾಗಿದ್ದರೆ ಗುಂಡ್ಲುಪೇಟೆ ಪಟ್ಟಣದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ (ಮತಗಟ್ಟೆ ಸಂಖ್ಯೆ 213) ಯಲ್ಲಿ ಅತೀ ಕಡಿಮೆ ಅಂದರೆ ಶೇ. 59.68ರಷ್ಟು ಮತದಾನ ನಡೆದಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾನ ಪ್ರಮಾಣ ಹೆಚ್ಚಳ: ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ. ಹರೀಶ್ ಕುಮಾರ್ ಅವರಿಂದ ಮತದಾರರಿಗೆ ಅಭಿನಂದನೆ
ಚಾಮರಾಜನಗರ, ಮೇ. 13 - ಜಿಲ್ಲೆಯ ವಿಧಾನಸಭಾ ಕ್ಷೇತ್ರ ಚುನಾವಣೆ ಇತಿಹಾಸದಲ್ಲಿಯೆ ಇದೇ ಮೊದಲ ಬಾರಿಗೆ ಮತದಾರರು ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿರುವುದಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮತದಾರರಿಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರು ಮತದಾನದಂತಹ ಪವಿತ್ರ ಕಾರ್ಯದಲ್ಲಿ ಸ್ವಇಚ್ಚೆಯಿಂದ, ಉತ್ಸಾಹದಿಂದ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮತ್ತÀಷ್ಟು ನಂಬಿಕೆ ಪ್ರದರ್ಶಿಸಿದ್ದಾರೆ. ಜಿಲ್ಲಾ ಸ್ವೀಪ್ ಸಮಿತಿಯ ಚಟುವಟಿಕೆಗಳಿಗೆ ಉತ್ತಮ ಪ್ರತಿಕ್ರಿಯೆ ನೀಡಿ ಗರಿಷ್ಠ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣೀಭೂತರಾಗಿದ್ದಾರೆ ಎಂದು ಹರೀಶ್‍ಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಮತದಾನ ಜಾಗೃತಿಗಾಗಿ ಕಳೆದ 2013ರ ವಿಧಾನಸಭಾ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಹೆಚ್ಚು ಮತದಾನವಾಗಲು ಸಾಕಷ್ಟು ಯೋಜನೆ, ಚಟುವಟಿಕೆಗಳನ್ನು ಸ್ವೀಪ್ ಸಮಿತಿ ಗುರಿ ಇಟ್ಟುಕೊಂಡು ಅನುಷ್ಟಾನಗೊಳಿಸಿತು. ರಾಜ್ಯದಲ್ಲಿಯೆ ಜಿಲ್ಲೆಯು ಉತ್ತಮ ಸಾzsನೆ ಮಾಡಲು ಸಹಕರಿಸಿದ ಜಿಲ್ಲೆಯ ಮತದಾರರು, ದೃಶ್ಯ ಹಾಗೂ ಪತ್ರಿಕಾ ಮಾದ್ಯಮಮಿತ್ರರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್, ಶಿಕ್ಷಣ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ಕಲಾತಂಡಗಳು, ಸಮಸ್ತ ನಾಗರಿಕರಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತಿರುವುದಾಗಿ ಡಾ. ಕೆ. ಹರೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018
ಮತ ಎಣಿಕೆ: ವಿಜಯೋತ್ಸವ ಮೆರವಣಿಗೆ ನಿಷೇಧ
ಚಾಮರಾಜನಗರ, ಮೇ. 13 - ಜಿಲ್ಲೆಯ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಮತ ಎಣಿಕೆ ಕಾರ್ಯವು ಮೇ 15ರಂದು ನಡೆಯಲಿರುವ ಹಿನ್ನಲೆಯಲ್ಲಿ ಮೇ 15ರ ಬೆಳಿಗ್ಗೆ 6ರಿಂದ ಮೇ 16ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ) ವಿಜಯೋತ್ಸವ, ಮೆರವಣಿಗೆ, ಸಭೆ, ಸಮಾರಂಭ, ಪಟಾಕಿ ಸಿಡಿಸುವಿಕೆ, ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವಿಕೆಯಂತಹ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.ಮತ ಎಣಿಕೆ ಕಾರ್ಯವು ಚಾಮರಾಜನಗರ ತಾಲೂಕಿನ ಬೇಡರಪುರದ ನಂಜನಗೂಡು-ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ವಿಜಯಿ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಭೆ, ಸಮಾರಂಭ, ಪಟಾಕಿ ಸಿಡಿಸುವುದು, ಉದ್ರೇಕಕಾರಿ ಘೋಷಣೆಗಳನ್ನು ಕೂಗುವುದು, ಸೋತ ಅಭ್ಯರ್ಥಿಗಳ, ಪಕ್ಷಗಳ ಕಾರ್ಯಕರ್ತರನ್ನು ಛೇಡಿಸುವುದು, ಸ್ಪೋಟಕ ವಸ್ತುಗಳು, ಮಾರಕಾಸ್ತ್ರಗಳನ್ನು ಒಯ್ಯುವುದು, ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ವಿಜಯೋತ್ಸವ ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
No comments:
Post a Comment