ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 :– ತೋಟಗಾರಿಕೆ ಇಲಾಖೆಯು ರೈತ ಮಕ್ಕಳಿಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್‍ನ ತೋಟಗಾರಿಕೆ ತರಬೇತಿ ಕೇಂದ್ರ ಹಾಗೂ ಟಿ. ನರಸೀಪುರ ತಾಲೂಕಿನ ರಂಗಸಮುದ್ರ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2018 ಜೂನ್ 1 ರಿಂದ 2019ರ ಮಾರ್ಚ್ 30ರವರೆಗೆ ತೋಟಗಾರಿಕೆ ತರಬೇತಿ ನೀಡಲಿದ್ದು ಅರ್ಜಿ ಆಹ್ವಾನಿಸಿದೆ.ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿದ್ದು ತಂದೆ, ತಾಯಿ, ಪೋಷಕರು ಜಮೀನು ಹೊಂದಿದ್ದು ಸ್ವಂತ ಸಾಗುವಳಿ ಮಾಡುತ್ತಿರಬೇಕು.
ಆಸಕ್ತ ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಮೇ 24ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಅಥವಾ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಇವರನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತೆಮರಹಳ್ಳಿ : ನೂತನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಆರಂಭ
ಚಾಮರಾಜನಗರ, ಮೇ. 17 :– ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯಲ್ಲಿ ನೂತನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಆರಂಭಿಸಲಿದೆ.
ಮೆಟ್ರಿಕ್ ನಂತರದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ (ಪದವಿಪೂರ್ವ, ಸಾಮಾನ್ಯ ಕೋರ್ಸ್, ವೃತ್ತಿಪರ ಕೋರ್ಸ್) ಪ್ರವೇಶ ಲಭ್ಯ. ಉಚಿತ ವಸತಿ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಗ್ರಂಥಾಲಯ, ಕಂಪ್ಯೂಟರ್ ತರಬೇತಿ, ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ (ದೂ.ಸಂ.08226-222180) ಮತ್ತು ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರದ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ (ದೂ.ಸಂ. 08226-222069) ಸಂಪರ್ಕಿಸುವಂತೆ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಮನೆ ನೀಡಲು ಮನವಿ
ಚಾಮರಾಜನಗರ, ಮೇ. 17 – ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯಲ್ಲಿ ನೂತನವಾಗಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥೀನಿಲಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯ ನಿರ್ವಹಿಸಲು ಬಾಡಿಗೆ ಮನೆ ಅವಶ್ಯವಿರುತ್ತದೆ.
ಸರ್ಕಾರಿ ಕಟ್ಟಡ ಮಂಜೂರಾಗಿಲ್ಲದಿರುವ ಕಾರಣ ಬಾಡಿಗೆ ಮನೆ ಅವಶ್ಯವಿದ್ದು ಮನೆ ಬಾಡಿಗೆಗೆ ನೀಡುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ (ಕೊಠಡಿ ಸಂಖ್ಯೆ 131,132) (ದೂ.ಸಂ.08226-222180) ಮತ್ತು ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರದ ದೇವರಾಜ ಅರಸು ಭವನದಲ್ಲಿರುವ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ (ದೂ.ಸಂ. 08226-222069) ಸಂಪರ್ಕಿಸುವಂತೆ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 – ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಚಾಮರಾಜನಗರ ತಾಲೂಕಿನ ವ್ಯಾಪ್ತಿಯ ನಗರದಲ್ಲಿರುವ ಪರಿಶಿಷ್ಟ ವರ್ಗಗಳ 2 ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯ (5 ರಿಂದ 10ನೇ ತರಗತಿವರೆಗೆ ಮಾತ್ರ) ಹಾಗೂ 2 ಮೆಟ್ರಿಕ್ ನಂತರದ ಬಾಲಕಬಾಲಕಿಯರ ವಿದ್ಯಾರ್ಥಿನಿಲಯ (ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇತರೆ), ಪುಣಜನೂರು, ಬೇಡರಗುಳಿ, ರಂಗಸಂದ್ರ, ಕೆ. ಗುಡಿ, ಮುರಟಿಪಾಳ್ಯ , ಕೋಳಿಪಾಳ್ಯ ಗಿರಿಜನ ಕಾಲೋನಿಗಳಲ್ಲಿನ ಆಶ್ರಮಶಾಲೆಗಳಲ್ಲಿ (1 ರಿಂದ 5ನೇ ತರಗತಿವರೆಗೆ ಮಾತ್ರ) ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಪರಿಶಿಷ್ಟ ವರ್ಗ ಹಾಗೂ ಇತರೆ ವಿದ್ಯಾರ್ಥಿಗಳು ಸಂಬಂಧಪಟ್ಟ ನಿಲಯ ಮೇಲ್ವಿಚಾರಕರು ಹಾಗೂ ನಗರದ ಖಾಸಗಿ ಬಸ್ ನಿಲ್ದಾಣ ರಸ್ತೆಯ ಕೊಳದ ಬೀದಿಯಲ್ಲಿರುವ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಸಂಬಂಧಿಸಿದ ವಿದ್ಯಾರ್ಥಿನಿಲಯಗಳಿಗೆ ಜೂನ್ 11ರ ಒಳಗೆ ಸಲ್ಲಿಸಬೇಕು.
ಇಲಾಖೆಯ ವೆಬ್ ಸೈಟ್ ತಿತಿತಿ.ಣತಿ.ಞಚಿಡಿ.ಟಿiಛಿ.iಟಿ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 – ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಚಾಮರಾಜನಗರ, ಚಂದಕವಾಡಿ, ಸಂತೆಮರಹಳ್ಳಿಯ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯ, ಜನ್ನೂರು, ಕುದೇರು, ಹೊಂಗನೂರು, ಆಲೂರು, ಉಡಿಗಾಲ, ಹರವೆ, ವೆಂಕಟಯ್ಯನ ಛತ್ರ ಹಾಗೂ ಬಿಸಲವಾಡಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಸಲ್ಲಿಸಬಹುದು.
ನಗರದ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕಬಾಲಕಿಯರ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಪ್ರಥಮದರ್ಜೆ ಕಾಲೇಜು ಬಾಲಕಿಯರ ವಿದ್ಯಾರ್ಥಿನಿಲಯ, ವರ್ಗೀಕೃತ ಕಾಲೇಜು ಬಾಲಕಿಯರ ವಿದ್ಯಾರ್ಥಿನಿಲಯ, ಹರದನಹಳ್ಳಿಯ ಕಾಲೇಜು ವಿದ್ಯಾರ್ಥಿನಿಲಯ, ಪ್ರಥಮದರ್ಜೆ ಕಾಲೇಜು ಬಾಲಕರ ವಿದ್ಯಾರ್ಥಿನಿಲಯ ಹಾಗೂ ವರ್ಗೀಕೃತ ಕಾಲೇಜು ಬಾಲಕರ ವಿದ್ಯಾರ್ಥಿನಿಲಯಗಳಿಗೂ ಅರ್ಜಿ ಸಲ್ಲಿಸಬಹುದು.
ಸಂಬಂಧಿಸಿದ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಂದ ಅರ್ಜಿ ಪಡೆದು, ಭರ್ತಿ ಮಾಡಿ ಜೂನ್ 30ರೊಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ನಗರದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ (ದೂ.ಸಂ.08226-223143) ಮತ್ತು ಹತ್ತಿರದ ವಿದ್ಯಾರ್ಥಿನಿಲಯಗಳ ನಿಲಯಪಾಲಕರುಗಳನ್ನು ಸಂಪರ್ಕಿಸುವಂತೆ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರ್ಶ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಸೂಚನೆ
ಚಾಮರಾಜನಗರ, ಮೇ. 17 – ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ ವಿದ್ಯಾಲಯಗಳಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಇಲಾಖೆಯ ವೆಬ್ ಸೈಟ್ sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಹಾಗೂ ವಿದ್ಯಾವಾಹಿನಿಯ ವೆಬ್ ಸೈಟ್ ತಿತಿತಿ.iಜಥಿಚಿvಚಿhiಟಿi.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿಯೂ ಪ್ರಕಟಿಸಲಾಗಿದೆ.
ದಾಖಲಾತಿಯನ್ನು ಮೇ 25ರ ಸಂಜೆ 5 ಗಂಟೆಯವರೆಗೆ ಸಂಬಂಧಿಸಿದ ತಾಲೂಕುಗಳ ಆದರ್ಶ ವಿದ್ಯಾಲಯಗಳಲ್ಲಿ ಆನ್ ಲೈನ್ ಮೂಲಕ ದಾಖಲಿಸಿಕೊಳ್ಳಲಾಗುತ್ತದೆ. ವೆಬ್ ಸೈಟ್‍ನಲ್ಲಿ ಪ್ರಕಟಿಸಲಾದ ವಿದ್ಯಾರ್ಥಿಗಳ ಅಲಾಂಟ್‍ಮೆಂಟ್ ಕಾರ್ಡನ್ನು ಪಡೆದುಕೊಂಡು ಆಯ್ಕೆಗೊಂಡಿರುವ ಆದರ್ಶ ವಿದ್ಯಾಲಯಗಳ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ನಿಯಮಾನುಸಾರ ದಾಖಲಾತಿ ಮಾಡಿಕೊಳ್ಳುವುದು.ನಿಗದಿತ ಅವಧಿಯ ನಂತರ ಬರುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊರಾರ್ಜಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಿರ್ವಹಿಸಲಾಗುತ್ತಿರುವ ಹನೂರು ಹಾಗೂ ಯಡವನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆ ಹಾಗೂ ಹನೂರಿನ ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಕಾಲೇಜಿನಲ್ಲಿ ಪಡೆದು ಭರ್ತಿ ಮಾಡಿ ಮೇ 19ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ಮೊಬೈಲ್ 9620452781, 9110844833 ಸಂಪರ್ಕಿಸುವಂತೆ ಹನೂರು ಮೊರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪರೀಕ್ಷಾಪೂರ್ವ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2018-19ನೇ ಸಾಲಿನಲ್ಲಿ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಪ್ರೊಬೇಷನರಿ ಆಫೀಸರ್ಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮೇ 30 ಕಡೆಯ ದಿನ.
ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿss.ಞಚಿಡಿ.ಟಿiಛಿ.iಟಿ ನೋಡುವುದು. ಸಹಾಯವಾಣಿ ಸಂಖ್ಯೆ 8050770004ನ್ನು ಸಂಪರ್ಕಿಸಿಯೂ ಪಡೆಯಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಗಂಡಸಿನ ಶವ ಪತ್ತೆ
ಚಾಮರಾಜನಗರ, ಮೇ. 17 ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಪ್ರಾಧಿಕಾರಕ್ಕೆ ಸೇರಿದ ಮಾಸ್ಟರ್ ಪ್ಲಾನ್ ಆವರಣದಲ್ಲಿಯ WಖಿP ಮುಂಭಾಗ ವಾಹನ ಪೂಜಾ ಪಾರ್ಕಿನಲ್ಲಿ ಒಬ್ಬ ಗಂಡಸು ಮೃತಪಟ್ಟಿರುವುದಾಗಿ ಮೇಸ್ತ್ರಿ ನಾಗರಾಜು ಅವರು ಪ್ರಾಧಿಕಾರದ ಕಚೇರಿಗೆ ಲಿಖಿತ ದೂರು ಸಲ್ಲಿಸಿರುತ್ತಾರೆ.
ದೂರಿನ ಮೇರೆಗೆ ಸ್ಥಳದಲ್ಲಿ ಪರಿಶೀಲಿಸಲಾಗಿ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರಾಧಿಕಾರದ ನೌಕರರಾದ ಕಾರ್ಯದರ್ಶಿಗಳ ಪರವಾಗಿ ರಾಜಶೇಖರ ಅವರು ಠಾಣೆಗೆ ತಿಳಿಸಿದ್ದು ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ 47 ವರ್ಷದವರಾಗಿದ್ದು 163 ಸೆಂ.ಮೀ. ಎತ್ತರವಿರುತ್ತಾರೆ. ಎಣ್ಣೆಗೆಂಪು ಬಣ್ಣ, ಸಾದಾರಣ ಮೈಕಟ್ಟು, ಕೋಲುಮುಖ, ಕಪ್ಪು ತಲೆಗೂದಲು ಇರುತ್ತದೆ. ಒಂದು ನೀಲಿ ಮತ್ತು ಕಡುನೀಲಿ ಸಣ್ಣ ಚಾಕುಳಿಯ ತುಂಬುತೋಳಿನ ಶರ್ಟ್, ಆಕಾಶನೀಲಿ, ನಶ್ಯಾ ಬಿಳಿ ಸಣ್ಣ ಚಾಕುಳಿಯುಳ್ಳ ಲುಂಗಿ, ಸಿಮೆಂಟ್ ಬಣ್ಣದ ಹೂವಿನ ಡಿಸೈನ್ ಇರುವ ಬೆಟ್ ಶೀಟ್ ಧರಿಸಿರುತ್ತಾರೆ.
ಮೃತರ ವಾರಸುದಾರರು ಇದ್ದಲ್ಲಿ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08225-272141, ಮೊಬೈಲ್ 9480804658, ಕಂಟ್ರೋಲ್ ರೂಂ 08226-222398ಗೆ ಮಾಹಿತಿ ನೀಡುವಂತೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಅರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 19 ರಿಂದ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆ: ನಿಷೇದಾಜ್ಞೆ ಜಾರಿ
ಚಾಮರಾಜನಗರ, ಮೇ. 17 - ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯನ್ನು ನಗರದ ಜೆ ಎಸ್ ಎಸ್ ಬಾಲಕರ ಪ್ರೌಢಶಾಲೆಯಲ್ಲಿ ಮೇ 19 ರಿಂದ 21ರವರೆಗೆ ನಡೆಸಲಿದೆ.
ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 5.30 ಗಂಟೆಯವರೆಗೆ ನಿಷ್ಭೆದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 5.30 ಗಂಟೆಯವರೆಗೆ ಮುಚ್ಚುವಂತೆಯೂ ಆದೇಶಿಸಿದ್ದಾರೆ. ಆದರೆ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಿಷೇಧಾಜ್ಞೆ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ.
ಯಳಂದೂರು : ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 - ಯಳಂದೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
8 ರಿಂದ 10ನೇ ತರಗತಿವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ವರ್ಗದ ಜನಾಂಗದ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ, ಸಂಬಂಧಿಸಿದ ಮೇಲ್ವಿಚಾರಕರು ಅಥವಾ ಕಚೇರಿ ದೂರವಾಣಿ ಸಂಖ್ಯೆ 08226-240309 ಹಾಗೂ ಇಲಾಖಾ ವೆಬ್ ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನೋಡುವಂತೆ ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಗುತ್ತಿಗೆದಾರರಿಂದ ದರಪಟ್ಟಿ ಆಹ್ವಾನ
ಚಾಮರಾಜನಗರ, ಮೇ. 17 :- ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಸ್ಥಳದಿಂದ ವಿದÀ್ಯುತ್ ಕಂಬ ಮತ್ತು ಲೈನ್ ಸ್ಥಳಾಂತರಿಸಲು ಪುರಸಭಾ ನಿಧಿಯಡಿಯಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಕಚೇರಿಯಿಂದ ಅಂದಾಜು ಪಟ್ಟಿ ಮಾಹಿತಿ ಪಡೆದು ಇಚ್ಚೆಯುಳ್ಳ ಗುತ್ತಿಗೆದಾರರಿಂದ ದರಪಟ್ಟಿ ಸಲ್ಲಿಸಲು ಆಹ್ವಾನಿಸಲಾಗಿದೆ. ತಮ್ಮ ದರವನ್ನು ದಿನಾಂಕ 24.05.2018ರ ಸಂಜೆ 4 ಗಂಟೆಯೊಳಗೆ ಸೀಲು ಮಾಡಿದ ಲಕೋಟೆಯಲ್ಲಿ ಸಲ್ಲಿಸಲು ತಿಳಿಸಿದೆ.
ಷರತ್ತು ಮತ್ತು ನಿಬಂಧನೆಗಳು- ಕೊಟೇಷನ್ ಅನ್ನು ಅಂಗೀಕರಿಸುವ, ತಿರಸ್ಕರಿಸುವ ಹಕ್ಕು ಪುರಸಭೆಗೆ ಇರುತ್ತದೆ. ಅವಧಿ ಮೀರಿ ಬಂದ ಕೊಟೇಷನ್‍ಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ವಿವರಗಳನ್ನು ಪುರಸಭೆಯ ವಿದ್ಯುತ್ ಶಾಖೆಯಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
No comments:
Post a Comment