Friday, 11 May 2018

(08-05-2018)ಅಕ್ರಮ ಹಣ ವಶ, ಚುನಾವಣಾ ಅಬಕಾರಿ ದಾಳಿಯಲ್ಲಿ ಈವರೆಗೆ 254 ಆರೋಪಿಗಳ ಬಂಧನ, ಮೇ 12 ರಂದು ಕಾರ್ಮಿಕರಿಗೆ ರಜೆ ಘೋಷಿಸಲು ಸೂಚನೆ


ಮೇ 12 ರಂದು ಕಾರ್ಮಿಕರಿಗೆ ರಜೆ ಘೋಷಿಸಲು ಸೂಚನೆ

ಚಾಮರಾಜನಗರ, ಮೇ. 08 - ವಿಧಾನಸಭಾ ಚುನಾವಣೆಯ ಮತದಾನ ನಡೆಯುವ ಮೇ 12 ರಂದು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಕಾರ್ಖಾನೆ, ಕೈಗಾರಿಕಾ ಸಂಸ್ಥೆಗಳು, ಅಂಗಡಿ, ವಾಣಿಜ್ಯ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳು ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂಚಿಸಿದ್ದಾರೆ.
ಮತದಾನ ದಿನದಂದು ಔದ್ಯಮಿಕ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ 1963 ರ ಕಲಂ 3(ಎ) ರ ಅನ್ವಯ ಸಂವಿಧಾನಾತ್ಮಕ ಹಕ್ಕಾದ ಮತ ಚಲಾಯಿಸಲು ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ ನೀಡುವಂತೆ  ಮಾಲೀಕರು, ನಿಯೋಜಕರಿಗೆ ಆದೇಶಿಸಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಅಕ್ರಮ ಹಣ ವಶ

ಚಾಮರಾಜನಗರ, ಮೇ. 08 - ವಿಧಾನಸಭಾ ಚುನಾವಣೆ ಸಂಬಂಧ ಮೇ 7ರಂದು ಚಾಮರಾಜನಗರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ಮೂಡಲ ಹೊಸಹಳ್ಳಿ ಚೆಕ್ ಪೋಸ್ಟ್ ಮೂಲಕ ಸಾಗಾಣಿಕೆ ಮಾಡುತ್ತಿದ್ದ 2 ಲಕ್ಷದ 76 ಸಾವಿರ ರೂ.ಗಳನ್ನು ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಅಬಕಾರಿ ದಾಳಿಯಲ್ಲಿ ಈವರೆಗೆ 254 ಆರೋಪಿಗಳ ಬಂಧನ

ಚಾಮರಾಜನಗರ, ಮೇ. 08:- ಅಬಕಾರಿ ಇಲಾಖೆಯ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ 27 ರಿಂದ ಮೇ 7ರವರೆಗೆ ಚುನಾವಣಾ ಮತಕ್ಷೇತ್ರಗಳಾದ ಚಾಮರಾಜನಗರ, ಕೊಳ್ಳೇಗಾಲ, ಹನೂರು ಹಾಗೂ ಗುಂಡ್ಲುಪೇಟೆಯಲ್ಲಿ ನಡೆಸಿದ ಒಟ್ಟು 585 ದಾಳಿಯಲ್ಲಿ           300 ಪ್ರಕರಣಗಳನ್ನು ದಾಖಲಿಸಲಾಗಿದೆ. 254 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 36 ವಾಹನ ಹಾಗೂ   1951.17 ಲೀ ಮದ್ಯ ವಶಪಡಿಸಿಕೊಳ್ಳಲÁಗಿದ್ದು ಅವುಗಳು ಅಂದಾಜು ಮೊತ್ತ ರೂ. 17,58,308ಗಳೆಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ಚಾಮರಾಜನಗರ ಮತಕ್ಷೇತ್ರದಲ್ಲಿ 156 ದಾಳಿ ನಡೆಸಿ 85 ಪ್ರಕರಣಗಳನ್ನು ದಾಖಲಿಸಲಾಗಿದ್ದು 75 ಆರೋಪಿಗಳನ್ನು ಬಂಧಿಸಲಾಗಿದೆ. 4 ವಾಹನಗಳು ಹಾಗೂ 1384.740 ಲೀಟರ್ ಮದ್ಯವನ್ನು ಜಪ್ತಿ ಮಾಡುವ ಮೂಲಕ ಅಂದಾಜು 711600 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಳ್ಳೇಗಾಲ ಮತಕ್ಷೇತ್ರದಲ್ಲಿ 149 ಬಾರಿ ದಾಳಿ ನಡೆಸಿ 73 ಪ್ರಕರಣಗಳನ್ನು ದಾಖಲಿಸಿದೆ. 65 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಅಂದಾಜು 365000 ರೂ. ಬೆಲೆಯ 10 ವಾಹನ ಹಾಗೂ 162.420 ಲೀ. ಮದ್ಯವನ್ನು ವಶಪಡಿಸಲಾಗಿದೆ.
ಹನೂರು ಮತಕ್ಷೇತ್ರದಲ್ಲಿ 92 ದಾಳಿ ನಡೆಸುವ ಮೂಲಕ 65 ಪ್ರಕರಣ ದಾಖಲಿಸಿ 53 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 244708ಗಳ ಅಂದಾಜು ಮೊತ್ತದ 9 ವಾಹನಗಳು ಹಾಗೂ 116.18 ಲೀ ಮದ್ಯವನ್ನು ವಶಪಡಿಸಿಕೊಂಡಿದೆ.
ಗುಂಡ್ಲುಪೇಟೆ ಮತಕ್ಷೇತ್ರದಲ್ಲಿ 188 ದಾಳಿಯಲ್ಲಿ 77 ಪ್ರಕರಣ ದಾಖಲಿಸಿದ್ದು 61 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 437000ಗಳ ಮೊತ್ತದ 13 ವಾಹನ, 287.83 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ ಏಪ್ರಿಲ್ 21ರಿಂದ ಸನ್ನದು ಷರತ್ತು ಉಲ್ಲಂಘನೆಗಳಿಗಾಗಿ ಜಿಲ್ಲೆಯಲ್ಲಿ ಒಟ್ಟು 10 ವಿವಿಧ ಬಗೆಯ ಸನ್ನದುಗಳನ್ನು ಚುನಾವಣೆ ಮುಕ್ತಾಯಗೊಳ್ಳುವವರೆಗೂ ಅಮಾನತ್ತಿನಲ್ಲಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.









No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು