ಮತದಾರರ ಚೀಟಿ ವಿತರಣೆ ಪ್ರಕ್ರಿಯೆ : ಸಹಕರಿಸಲು ಡಿಸಿ ಮನವಿ
ಚಾಮರಾಜನಗರ, ಮೇ. 4 - ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಮತದಾರರ ಚೀಟಿಯನ್ನು ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು ವಿತರಿಸಲಿದ್ದು ಈ ಪ್ರಕ್ರಿಯೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಮನವಿ ಮಾಡಿದ್ದಾರೆ.ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಲ್ಲಾ ಮತಗಟ್ಟೆಗಳ ವ್ಯಾಪ್ತಿಯ ಮತದಾರರಿಗೆ ಭಾವಚಿತ್ರವಿರುವ ಮತದಾರರ ಚೀಟಿಯನ್ನು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ವಿತರಿಸಿ ಮತದಾರರು ಚೀಟಿ ಪಡೆದಿರುವುದಕ್ಕೆ ವಿತರಣಾ ವಹಿಯಲ್ಲಿ ಸಹಿ ಪಡೆಯಲಿದ್ದಾರೆ.
ಮತದಾರರ ಪಟ್ಟಿಯಲ್ಲಿರುವ ಮತದಾರರು ಮತಗಟ್ಟೆ ಮಟ್ಟದ ಅಧಿಕಾರಿಯು ಮನೆಮನೆಗೆ ಭೇಟಿ ನೀಡಿ ಮತದಾರರ ಚೀಟಿ ವಿತರಿಸುವ ಸಂದರ್ಭದಲ್ಲಿ ಭಾವಚಿತ್ರವಿರುವ ಮತದಾರರ ಚೀಟಿ ಪಡೆದು ವಿತರಣಾ ವಹಿಯಲ್ಲಿ ಸಹಿ ಮಾಡಬೇಕು. ಅಲ್ಲದೆ ಮನೆಯ ಸದಸ್ಯರ ಮಾಹಿತಿ ನೀಡಿ ಅವರಿಗೂ ಮತದಾರರ ಚೀಟಿ ವಿತರಿಸಲು ಸಹಕರಿಸಬೇಕು. ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಚಲನವಲನಗಳ ಬಗ್ಗೆ ಮಾಹಿತಿ ಕೋರಿದಲ್ಲಿ ಮಾಹಿತಿ ನೀಡಿ ಆಬ್ಸೆಂಟಿ ಶಿಫ್ಟೆಡ್ ಹಾಗೂ ನಿಧನರಾದ (ಎಎಸ್‍ಡಿ) ಮತದಾರರ ವಿವರ ನೀಡಿ ಎಎಸ್‍ಡಿ ಮತದಾರರ ಪಟ್ಟಿ ತಯಾರಿಸಲು ಅನುವು ಮಾಡಿಕೊಡಬೇಕು.
ಮತದಾನದ ದಿನದಂದು ಭಾವಚಿತ್ರವಿರುವ ಮತದಾರರ ಚೀಟಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ಹಾಜರುಪಡಿಸಿ ಮತದಾನ ಮಾಡಬೇಕು. ಎಲ್ಲ ಮತದಾರರು ಸಹ ಭಾವಚಿತ್ರವಿರುವ ಮತದಾರರ ಚೀಟಿ ಪಡೆಯುವಂತೆ ಸಲಹೆ ನೀಡಬೇಕು. ಭಾರತ ಚುನಾವಣಾ ಆಯೋಗದ ಉದ್ದೇಶದಂತೆ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಹಾಗೂ ಶಾಂತಿಯುತ ಮತದಾನ ನಡೆಸಲು ಅನುವು ಮಾಡಿಕೊಡಬೇಕು. ಭಾವಚಿತ್ರವಿರುವ ಮತದಾರರ ಚೀಟಿ ವಿತರಣೆಗೆ ಸಹಕಾರ ನೀಡಿ ಉದ್ದೇಶಿತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರÉ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿಗೆ ಅಂಚೆ ಮತಪತ್ರ ಮೂಲಕ ಮತದಾನಕ್ಕೆ ವ್ಯವಸ್ಥೆಚಾಮರಾಜನಗರ, ಮೇ. 04 - ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿಗೆ ಅಂಚೆ ಮತಪತ್ರದ ಮೂಲಕ ಮತದಾನದ ಹಕ್ಕನ್ನು ಚಲಾಯಿಸಲು ಪೋಸ್ಟಲ್ ಬ್ಯಾಲೆಟ್(ಅಂಚೆ ಮತಪತ್ರ) ಸೌಲಭ್ಯ ಕೇಂದ್ರವನ್ನು ಮೇ 8ರಂದು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ತೆರೆಯಲಾಗುತ್ತದೆ. ಅಲ್ಲದೆ ಎರಡನೇ ಹಂತದ ತರಬೇತಿ ನಡೆಯುವ ಮೇ 5ರಂದು ಕೊಳ್ಳೇಗಾಲದ ದಕ್ಷಿಣ ಬಡಾವಣೆಯಲ್ಲಿರುವ ವಾಸವಿ ವಿದ್ಯಾಕೇಂದ್ರ, ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಕೆ.ಎಸ್.ಎನ್. ಸ್ಕೂಲ್, ಶ್ರೀ ಜವಹರ್ ಎಜುಕೇಷನ್ ಟ್ರಸ್ಟ್, ಮೇ 7ರಂದು ಕೊಳ್ಳೇಗಾಲದ ದಕ್ಷಿಣ ಬಡಾವಣೆಯಲ್ಲಿರುವ ವಾಸವಿ ವಿದ್ಯಾಕೇಂದ್ರ, ಚಾಮರಾಜನಗರ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂಚೆ ಮತಪತ್ರ ಸೌಲಭ್ಯ ಕೇಂದ್ರ ತೆರೆಯಲಾಗುತ್ತದೆ.
ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಕೆ.ಎಸ್.ಆರ್.ಟಿ.ಸಿ., ಅಗ್ನಿ ಶಾಮಕ ಠಾಣೆ ಇತರೆ ಇಲಾಖೆ ಅಧಿಕಾರಿ ಸಿಬ್ಬಂದಿ ಸೇರಿದಂತೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಯಾವುದೇ ಅಧಿಕಾರಿ ಸಿಬ್ಬಂದಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪೋಸ್ಟಲ್ ಬ್ಯಾಲೆಟ್(ಅಂಚೆ ಮತಪತ್ರ)ದ ಮೂಲಕ ಮತದಾನ ಮಾಡಲು ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮೇ 8ರಂದು ಅಂಚೆ ಮತಪತ್ರ ಸೌಲಭ್ಯ ಕೇಂದ್ರ ತೆರಯಲಾಗುವುದು. ಅಲ್ಲದೆ ಎರಡನೇ ಹಂತದ ತರಬೇತಿ ನಡೆಯುವ ಮೇ 5ರಂದು ಕೊಳ್ಳೇಗಾಲದ ದಕ್ಷಿಣ ಬಡಾವಣೆಯಲ್ಲಿರುವ ವಾಸವಿ ವಿದ್ಯಾಕೇಂದ್ರ, ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಕೆ.ಎಸ್.ಎನ್. ಸ್ಕೂಲ್, ಶ್ರೀ ಜವಹರ್ ಎಜುಕೇಷನ್ ಟ್ರಸ್ಟ್, ಮೇ 7ರಂದು ಕೊಳ್ಳೇಗಾಲದ ದಕ್ಷಿಣ ಬಡಾವಣೆಯಲ್ಲಿರುವ ವಾಸವಿ ವಿದ್ಯಾಕೇಂದ್ರ, ಚಾಮರಾಜನಗರ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂಚೆ ಮತಪತ್ರ ಸೌಲಭ್ಯ ಕೇಂದ್ರ ತೆರೆಯಲಾಗುತ್ತದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜೆನಗೊಂಡ ಎಲ್ಲಾ ನೌಕರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ವಿತರಣೆ
ಚಾಮರಾಜನಗರ, ಮೇ. 04 - ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಮುದ್ರಿತವಾಗಿ ಬಂದಿರುವ ಮತದಾರರ ಗುರುತಿನ ಚೀಟಿಗಳನ್ನು ಮತಗಟ್ಟೆ ಅಧಿಕಾರಿಗಳು ಮೇ 5ರಂದು ಮನೆ ಮನೆಗೆ ತೆರಳಿ ಹಂಚಿಕೆ ಮಾಡಲಿದ್ದಾರೆ.ಉಳಿದ ಮತದಾರರಿಗೆ ಮೇ 6ರಂದು ಮತಗಟ್ಟೆ ಅಧಿಕಾರಿಗಳು ಆಯಾ ಮತಗಟ್ಟೆ ಬಳಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಹಂಚಿಕೆ ಮಾಡಲಿದ್ದಾರೆ. ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಯಾ ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಓ) ಅಧಿಕಾರಿಗಳಿಂದ ಪಡೆದು ಮೇ 12 ರಂದು ಮತ ಚಲಾಯಿಸುವಂತೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ಫೌಜಿಯ ತರನುಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಮೇ 5ರಂದು ಪಿಆರ್‍ಓ, ಎಪಿಆರ್‍ಓಗೆ ತರಬೇತಿ
ಚಾಮರಾಜನಗರ, ಮೇ. 04 - ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳಿಗೆ ವಾಸವಿ ವಿದ್ಯಾ ಕೇಂದ,್ರ ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳಿಗೆ ಕೆ.ಎಸ್.ಎನ್. ಶಾಲೆ, ಚಾಮರಾಜನಗರ ರಸ್ತೆ, ಗುಂಡ್ಲುಪೇಟೆ ಇಲ್ಲಿ ಎರಡನೇ ಹಂತದ ಚುನಾವಣಾ ತರಬೇತಿಯನ್ನು ಮೇ 5ರಂದು ಹಮ್ಮಿಕೊಳ್ಳಲಾಗಿದೆ.ಪಿಆರ್‍ಓ ಮತ್ತು ಎಪಿಆರ್‍ಓ (1ನೇ ಪೋಲಿಂಗ್ ಅಧಿಕಾರಿ) ಅಧಿಕಾರಿಗಳು ಬೆಳಗ್ಗೆ 9.00 ಗಂಟೆಗೆ ತರಬೇತಿಗೆ ಹಾಜರಾಗುವುದು ಹಾಗೂ 2,3,4 ನೇ ಮತಗಟ್ಟೆ ಅಧಿಕಾರಿಗಳಿಗೆ (ಪಿಓ) ಮದ್ಯಾಹ್ನ 2.00 ಗಂಟೆಗೆ ಮೇಲ್ಕಂಡ ತರಬೇತಿ ಕೇಂದ್ರಗಳಲ್ಲಿ ತರಬೇತಿಗೆ ಹಾಜರಾಗುವುದು. ಸರಿಯಾದ ಸಮಯಕ್ಕೆ ತಪ್ಪದೇ ಕಡ್ಡಾಯವಾಗಿ ಹಾಜರಾಗಬೇಕು.
ಗೈರು ಹಾಜರಾಗುವ ಮತಗಟ್ಟೆ ಅಧಿಕಾರಿಗಳಿಗೆ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ
ಮದ್ಯ ಮಾರಾಟ ನಿಷೇಧ
ಚಾಮರಾಜನಗರ, ಮೇ 04 - ವಿಧಾನಸಭಾ ಚುನಾವಣೆಯ ಮತದಾನ ಹಾಗೂ ಮತ ಏಣಿಕೆ ಕಾರ್ಯವನ್ನು ಶಾಂತ ರೀತಿಯಿಂದ ನಡೆಸುವ ಉದ್ದೇಶದಿಂದ ಮತದಾನ, ಮತ ಎಣಿಕೆ ದಿನಗಳ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.ಮತದಾನ ಹಿನ್ನಲೆಯಲ್ಲಿ ಮೇ 10ರಂದು ಸಂಜೆ 6 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 14ರ ಮಧ್ಯರಾತ್ರಿಯಿಂದ ಮೇ 15ರ ಮಧ್ಯರಾತ್ರಿವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ, ಶೇಖರಣೆ, ಸಾಗಾಣಿಕೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಒಣದಿನವೆಂದು ಘೋಷಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ಸದರಿ ಅವಧಿಯಂದು ಬಾರ್, ಕ್ಲಬ್, ರೆಸ್ಟೋರೆಂಟ್, ಹೋಟೆಲ್, ಸ್ಟಾರ್ ಹೋಟೆಲ್, ಡಾಬಾ ಅಥವಾ ಯಾವುದೇ ತರಹದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಣದಿವಸಗಳೆÀಂದು ಘೋಷಣೆಯಾಗಿರುವ ಸಮಯದಲ್ಲಿ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ಆಥವಾ ಹಂಚಿಕೆ ಮಾಡುವುದು ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.
ರಸ್ತೆ ಡಾಂಬರೀೀಕರಣ ಕಾರ್ಯ : ಬದಲಿ ಮಾರ್ಗದಲ್ಲಿ ಸಂಚರಿಸಲು ಮನವಿ
ಚಾಮರಾಜನಗರ, ಮೇ. 4 - ಚಾಮರಾಜನಗರ ಪಟ್ಟಣದ ನಗರÀಸಭೆ ವ್ಯಾಪ್ತಿಯ ರಥದ ಬೀದಿಯ ಚಾಮರಾಜೇಶ್ವರ ಪಾರ್ಕ್ ಮುಂಭಾಗದಿಂದ (ಬಲಭಾಗ) ನಗರಸಭಾ ಕಚೇರಿ ಮುಂಭಾಗದವರೆಗೆ ಹಾಗೂ ರಥದ ಬೀದಿ ನಗರಸಭಾ ಕಚೇರಿ ಪಕ್ಕದಲ್ಲಿರುವ ಅರಳೀಮರದಿಂದ ಎಸ್‍ಬಿಎಂ ಶಾಖೆಯವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಮೇ 4 ರಿಂದ 7ರವರೆಗೆ ಅಂದರೆ ನಾಲ್ಕು ದಿನಗಳ ಕಾಲ ನಡೆಸಲಾಗುತ್ತದೆ.ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಈ ಮಾರ್ಗದ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ರಸ್ತೆ ಮೂಲಕ ಸಂಚರಿಸಬೇಕಾಗಿ ಹಾಗೂ ನಗರಸಭೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment