Friday, 10 February 2017

10-02-2017 ಕೇಂದ್ರ ಬರ ಅಧ್ಯಯನ ತಂಡದಿಂದ ಜಿಲ್ಲೆಯ ಪರಿಸ್ಥಿತಿ ವೀಕ್ಷಣೆ (ಚಾಮರಾಜನಗರ)

ಕೇಂದ್ರ ಬರ ಅಧ್ಯಯನ ತಂಡದಿಂದ ಜಿಲ್ಲೆಯ ಪರಿಸ್ಥಿತಿ ವೀಕ್ಷಣೆ ಚಾಮರಾಜನಗರ ಫೆ.10 : ಹಿಂಗಾರು ಅವಧಿಯಲ್ಲಿನ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಸಲುವಾಗಿ ನೇಮಕವಾಗಿರುವ ಕೇಂದ್ರ ಅಧಿಕಾರಿಗಳನ್ನೊಳಗೊಂಡ ತಂಡ ಇಂದು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಲಜ್‍ಶ್ರೀವಾಸ್ತವ, ನೀತಿ ಆಯೋಗದ ಸಂಶೋಧನ ಅಧಿಕಾರಿ ಬಿ.ಅನುರಾಧ, ಕೇಂದ್ರ ಜಲ ಆಯೋಗದ ಅಧೀಕ್ಷಕ ಎಂಜಿನಿಯರ್ ವಿ.ಮೋಹನ್ ಮುರುಳಿ ಅವರನ್ನೊಳಗೊಂಡ ತಂಡ ಇಂದು ಕೊಳ್ಳೇಗಾಲದ ಮೂಲಕ ಜಿಲ್ಲೆಯನ್ನು ಪ್ರವೇಶಿಸಿತು. ಚಾಮರಾಜನಗರ ತಾಲ್ಲೂಕಿನ ಮಂಗಲದಲ್ಲಿ ತೆರೆಯಲಾಗಿರುವ ಗೋಶಾಲೆಗೆ ಭೇಟಿ ನೀಡಿತು. ಅಲ್ಲಿ ಗೋವುಗಳಿಗಾಗಿ ಕಲ್ಪಿಸಿರುವ ಮೇವು, ಕುಡಿಯುವ ನೀರು, ಔಷಧೋಪಚಾರ ಇನ್ನಿತರ ವ್ಯವಸ್ಥೆಯನ್ನು ಪರಿಶೀಲಿಸಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಕೇಂದ್ರ ಬರ ಅಧ್ಯಯನ ತಂಡದವರನ್ನು ಭೇಟಿ ಮಾಡಿ ಅಭಾವ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿದರು. ಇದೇ ವೇಳೆ ಸ್ಥಳದಲ್ಲಿದ್ದ ನಾಗರಿಕರು, ಜಾನುವಾರು ಮಾಲೀಕರು ಜಿಲ್ಲೆಯಲ್ಲಿ ಬರಗಾಲದಿಂದ ಎದುರಿಸುತ್ತಿರುವ ಸಂಕಷ್ಟವನ್ನು ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ತೋಡಿಕೊಂಡರು. ಒಂದು ಸಾವಿರ ಅಡಿ ಆಳ ಕೊಳವೆ ಬಾವಿ ಕೊರೆದರು ನೀರು ಲಭಿಸುತ್ತಿಲ್ಲ. ಅಂರ್ತಜಲ ಮಟ್ಟ ಕುಸಿದಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳನ್ನು ಪೋಷಣೆ ಮಾಡುವುದು ಕಷ್ಟವಾಗಿದೆ. ಇದನ್ನು ಅರಿತು ಜಿಲ್ಲಾಡಳಿತ ಗೋಶಾಲೆ ತೆರೆದಿರುವುದು ನಮಗೆ ಅನುಕೂಲವಾಗಿದೆ. ಇನ್ನೂ ಸೌಲಭ್ಯಗಳನ್ನು ಹೆಚ್ಚಿಸಿ ನೆರವಾಗಬೇಕೆಂದು ಮನವಿ ಮಾಡಿದರು. ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ಆಗಮಿಸಿ ಬರ ನಿರ್ವಹಣೆ ಸಂಬಂಧ ಜಿಲ್ಲೆಯ ಅಧಿಕಾರಿಗಳೊಂದಿಗೆ ಅಧ್ಯಯನ ತಂಡ ಸಭೆ ನಡೆಸಿತು. ಜಿಲ್ಲಾಧಿಕಾರಿ ಬಿ.ರಾಮು ಅವರು ಹಿಂಗಾರು ಅವಧಿಯಲ್ಲಿ ಆಗಿರುವ ಮಳೆ ಪ್ರಮಾಣ, ಬೆಳೆ ನಷ್ಟ, ಕುಡಿಯುವ ನೀರು, ಮೇವು, ಬೆಳೆ ಪರಿಹಾರ ಸಂಬಂಧ ಮಾಹಿತಿಯನ್ನು ಪವರ್‍ಪಾಯಿಂಟ್ ಮೂಲಕ ವಿವರವಾಗಿ ಒದಗಿಸಿದರು. ಕೇಂದ್ರ ಬರ ಅಧ್ಯಯನ ತಂಡವು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರತಿ ಇಲಾಖೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಿತು. ತದನಂತರ ತಾಲ್ಲೂಕಿನ ಉತ್ತುವಳ್ಳಿಗೆ ತೆರಳಿದ ಬರ ಅಧ್ಯಯನ ತಂಡಕ್ಕೆ ಅಲ್ಲಿನ ಗ್ರಾಮಸ್ಥರು ಕುಡಿಯುವ ನೀರಿನ ಬವಣೆ ಕುರಿತು ವಿವರಿಸಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ಸರತಿಸಾಲಿನಲ್ಲಿ ನಿಂತು ನೀರು ಹಿಡಿಯುತ್ತಿದ್ದ ಮಹಿಳೆಯರು ಹಾಗೂ ಇತರರನ್ನು ಕಂಡು ಮನವಿಯನ್ನು ಅಧಿಕಾರಿಗಳು ಆಲಿಸಿದರು. ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿದ್ದೇವೆ. ತಾತ್ಕಾಲಿಕವಾಗಿ ಪರಿಹಾರ ನೀಡಿದರಷ್ಟೆ ಸಾಲದು. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಬೆಳೆ ಪರಿಹಾರ ಶೀಘ್ರವೇ ಕೈಸೇರುವಂತೆ ಮಾಡಿದ್ದಲ್ಲಿ ಅನುಕೂಲವಾಗುತ್ತದೆಂದು ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಮನವಿ ಮಾಡಿದರು. ಬಳಿಕ ಕಟ್ನಾವಾಡಿಗೆ ತೆರಳಿ ಅಲ್ಲಿ ಒಣಗಿರುವ ಬೆಳೆಯನ್ನು ಅಧ್ಯಯನ ತಂಡ ವೀಕ್ಷಿಸಿತು. ಅಲ್ಲಿಯೂ ಸ್ಥಳೀಯ ಗ್ರಾಮಸ್ಥರು ಬೆಳೆ ನಷ್ಟ, ಪರಿಹಾರ ಇನ್ನಿತರ ಸಂಬಂಧ ತಂಡದ ಅಧಿಕಾರಿಗಳಿಗೆ ವಿವರ ನೀಡಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಂಡದ ಮುಖ್ಯಸ್ಥರಾದ ಜಲಜ್‍ಶ್ರೀವಾಸ್ತವ ಅವರು ಇಂದಿನಿಂದ ಮೂರು ದಿನಗಳ ಕಾಲ ಮೂರು ತಂಡವು ರಾಜ್ಯದಲ್ಲಿ ಬರ ಅಧ್ಯಯನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಮೂವರು ಅಧಿಕಾರಿಗಳನ್ನೊಳಗೊಂಡ ತಂಡ ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಅಭಾವ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ವಾಸ್ತವ ಪರಿಸ್ಥಿತಿಯನ್ನು ತಿಳಿಯುತ್ತಿದ್ದೇವೆ. ಅನೇಕ ಮಂದಿ ಇಲ್ಲಿನ ಪ್ರಸ್ತುತ ಎದುರುಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಬೇರೆ ಜಿಲ್ಲೆಗಳಿಗೂ ತೆರಳಿ ಮೂರು ದಿನಗಳ ಬಳಿಕ ದೆಹಲಿ ತಲುಪಲಿದ್ದೇವೆ. ಅಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲಿದ್ದೇವೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಉಪವಿಭಾಗಾಧಿಕಾರಿ ನಳಿನ್ ಅತುಲ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರಾದ ಡಾ.ಬಾಲಸುಂದರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ದೇವರಾಜು ಇನ್ನಿತರ ಅಧಿಕಾರಿಗಳು ಹಾಜರಿದ್ದರು. ------------------------------------------------------------------------------------------------------ ದ್ವಿದಸ, ಆಹಾರ ನಾಗರಿಕ ಸರಬರಾಜು ನಿಗಮದ ಕಿರಿಯ ಸಹಾಯಕ ಹುದ್ದೆಯ ಸ್ಪಧಾತ್ಮಕ ಪರೀಕ್ಷೆ : ನಿಷೇದಾಜ್ಞೆ ಜಾರಿ ಚಾಮರಾಜನಗರ, ಫೆ. 10 :- ಕರ್ನಾಟಕ ಲೋಕಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕರ ಹಾಗೂ ಆಹಾರ ನಾಗರಿಕ ಸರಬರಾಜು ನಿಗಮದಲ್ಲಿನ ಕಿರಿಯ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ 17 ಉಪ ಪರೀಕ್ಷಾ ಕೇಂದ್ರದಲ್ಲಿ ಹಾಗೂ ಕೊಳ್ಳೇಗಾಲ ಟೌನ್ ವ್ಯಾಪ್ತಿಯಲ್ಲಿ 3 ಒಟ್ಟು 20 ಉಪಪರೀಕ್ಷಾ ಕೇಂದ್ರಗಳಲ್ಲಿ ಫೆಬ್ರವರಿ 11 ಹಾಗೂ 12ರಂದು ನಡೆಸಲಿದ್ದು ಈ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ಪವಿತ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಹಾಗೂ ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಯಲೆಂಬ ಸದುದ್ದೇಶದಿಂದ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಫೆಬ್ರವರಿ 11 ಹಾಗೂ 12ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕ ನಿಷೇಧಿತ ಸ್ಥಳವೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ನಿಷೇದಾಜ್ಞೆ ಆದೇಶವು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ. ------------------------------------------------------------------------------------------------- ಫೆ. 11ರಂದು ಚಂದಕವಾಡಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ ಚಾಮರಾಜನಗರ, ಫೆ. 10 :- ಚಾಮರಾಜನಗರ ತಾಲೂಕು ಚಂದಕವಾಡಿ ಹೋಬಳಿ ಉಪತಹಸೀಲ್ದಾರ್ ಅವರ ಕಾರ್ಯಾಲಯ ನಾಡ ಕಚೇರಿ ಎದುರು ಆವರಣದಲ್ಲಿ ಶಾಸಕರಿಂದ ಮೇವು ಬ್ಯಾಂಕ್ ಅನ್ನು ಫೆಬ್ರವರಿ 11ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಾಗುವುದು. ಸಾರ್ವಜನಿಕರು ಮೇವು ಬ್ಯಾಂಕ್‍ನ್ನು ಸದುಪಯೋಗಪಡಿಕೊಳ್ಳುವಂತೆ ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------------------------------------------------------------------------- ಫೆ. 12ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಚಾಮರಾಜನಗರ, ಫೆ. 10 - ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಫೆಬ್ರವರಿ 12ರಂದು ಜಿಲ್ಲೆಗೆ ಭೇಟಿ ನೀಡುವರು. ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ, ಅಲ್ಲಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮದ್ಯಾಹ್ನ 2 ಗಂಟೆಗೆ ನಂಜನಗೂಡಿಗೆ ತೆರಳುವರೆಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ. ಫೆ. 12ರಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಚಾಮರಾಜನಗರ, ಫೆ. 10 ):- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮದ್ಯಾಹ್ನ 3 ಗಂಟೆಗೆ ನಗರದಲ್ಲಿ ನಡೆಯಲಿರುವ ಸಭೆಯೊಂದರಲ್ಲಿ ಭಾಗವಹಿಸುವವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------------------------------------------------------- ಫೆ. 12ರಂದು ವಸತಿ ಖಾತೆ ಸಚಿವರ ಜಿಲ್ಲಾ ಪ್ರವಾಸ ಚಾಮರಾಜನಗರ, ಫೆ. 10- ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಕೃಷ್ಣಪ್ಪ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------------------------------------------------- ಫೆ. 13ರಂದು ಸಂತೇಮರಹಳ್ಳಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ ಚಾಮರಾಜನಗರ, ಫೆ. 10- ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಎಪಿಎಂಸಿ ಕಾರ್ಯಾಲಯದ ಆವರಣದಲ್ಲಿ ಶಾಸಕರಾದ ಜಯಣ್ಣ ಅವರಿಂದ ಮೇವು ಬ್ಯಾಂಕ್ ಅನ್ನು ಫೆಬ್ರವರಿ 13ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸುವರು. ಸಾರ್ವಜನಿಕರು ಮೇವು ಬ್ಯಾಂಕ್ ಸದುಪಯೋಗಪಡಿಕೊಳ್ಳುವಂತೆ ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

10-02-2017 ಚಾಮರಾಜನಗರ / ಕೊಳ್ಳೇಗಾಲ (ವಿದ್ಯಾರ್ಥಿಗಳಿಗೆ ಯೋಜನೆ, ಅಭ್ಯಾಸ, ಪರಿಪೂರ್ಣತೆ ಅತ್ಯಂತ ಮುಖ್ಯ: -ಸಿ.ಎಸ್.ಹೊನ್ನೇಗೌಡ)

ವಿದ್ಯಾರ್ಥಿಗಳಿಗೆ ಯೋಜನೆ, ಅಭ್ಯಾಸ, ಪರಿಪೂರ್ಣತೆ ಅತ್ಯಂತ ಮುಖ್ಯ: -ಸಿ.ಎಸ್.ಹೊನ್ನೇಗೌಡ ಕೊಳ್ಳೇಗಾಲ:- 10 (ಚಾಮರಾಜನಗರ ಜಿಲ್ಲೆ) –ವಿದ್ಯಾರ್ಥಿಗಳಿಗೆ ಯೋಜನೆ, ಅಭ್ಯಾಸ, ಪರಿಪೂರ್ಣತೆ ಅತ್ಯಂತ ಮುಖ್ಯ ಎಂಧು ಗುಂಡ್ಲುಪೇಟೆ ಜೆಎಸ್‍ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಿ.ಎಸ್.ಹೊನ್ನೇಗೌಡ -ಸಿ.ಎಸ್.ಹೊನ್ನೇಗೌಡ ಅವರು ಹೇಳಿದರು ಅವರು ಕೊಳ್ಳೇಗಾಲ ಜೆಎಸ್‍ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ನಡೆದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಥನಾಡಿದರು ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ. ಅ ಗುರಿಯನ್ನು ನೀವು ಮುಟ್ಟಬೇಕು. ಮುಂದಿನ ದಿನಗಳಲ್ಲಿ ನೀವು ಏನಾಗಬೇಕು ಎಂಬುದನ್ನು ನೀವು ಈಗಾಗಲೇ ನಿರ್ಧರಿಸಿ ಮುನ್ನಡೆಯಿರಿ. ನಿಮ್ಮ ಬದುಕಿಗೆ ಭದ್ರವಾದ ಬುನಾದಿ ಹಾಕಿರಿ. ನಿಮ್ಮ ಕನಸು ನನಸಾಗಬೇಕಾದರೇ ನೀವು ಶ್ರಮ ಪಟ್ಟರೆ ಮಾತ್ರ ಸಾಧ್ಯ. ಶ್ರಮಪಟ್ಟು ಸತತವಾಗಿ ಅಧ್ಯಯನ ಮಾಡಿದರೆ ಏನಾದರೂ ಸಾಧಿಸಬಹುದೆಂದರು. ವಿದ್ಯಾರ್ಥಿಗಳಿಗೆ ಯೋಜನೆ, ಅಭ್ಯಾಸ, ಪರಿಪೂರ್ಣತೆ ಅತ್ಯಂತ ಮುಖ್ಯ ಅದು ಇದ್ದಾಗ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.ಸಮಾಜದಲ್ಲಿ ತಂದೆ-ತಾಯಿ ನಿಮ್ಮ ಗುರುಗಳಿಗೆ ಹೆಸರು ತರುವಂತಹ ಕೆಲಸ ಮಾಡಿ. ಭವ್ಯ ಭಾರತವನ್ನು ಕಟ್ಟುವ ಹಾಗೂ ಕನಸನ್ನು ನನಸಾಗಿಸುವ ಸಮುದಾಯ ನೀವಾಗಿದ್ದೀರಿ. ಬುದಕಿನಲ್ಲಿ ಯಾವುದು ಅಸಾಧ್ಯವಿಲ್ಲ. ಎಲ್ಲವೂ ಸಾಧ್ಯ ಅದಕ್ಕೆ ಬದುಕಿನಲ್ಲಿ ಛಲ ಎಂಬುದಿರಬೇಕೆಂದು ತಿಳಿಸಿದರು. ಹನೂರಿನ ವಿವೇಕನಂದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಧುಸೂಧನ್ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಬೇಕಾದ ಶಿಸ್ತು, ಅಧ್ಯಯನ ಸಮಯ, ಸಾಂಸ್ಕøತಿಕ ಹಾಗೂ ಪರಂಪರೆಯ ಮಹತ್ವನ್ನು ತಿಳಿಸುತ್ತಾ ವಿದ್ಯಾರ್ಥಿಗಳ ಶತ್ರು ಅಲಸ್ಯ ಹಾಗೂ ಕಿಳಿರಮೆ ಇವುಗಳನ್ನು ತೊರೆದು ಕಲಿಯುವ ಹಾಗೂ ಕೇಳುವ ಹಂಬಲ ವಿದ್ಯಾರ್ಥಿಗಳಲ್ಲಿ ಇರಬೇಕು. ವಿದ್ಯಾರ್ಥಿಗಳಿಗೆ ಕಲಿಯುವ ಮನಸ್ಸು ಛಲ, ಗುರಿ, ಕನಸು, ಬದ್ದತೆ ಆತ್ಮ ವಿಶ್ವಾಸವನ್ನು ಹೊಂದಿರಬೇಕೆಂದು ತಿಳಿಸುತ್ತಾ ನೀವು ಮುಂದೆ ಸಮಾಜ ಹಾಗೂ ಕುಟುಂಬದ ನಂದಾದೀಪಗಳಾಗಿ ಎಂದು ಹಾರೈಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಎನ್ ಮಹದೇವಸ್ವಾಮಿ ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ತಮ ಆದರ್ಶ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡು ನೆಮ್ಮದಿಯ ಬದುಕನ್ನು ನಡೆಸಿ ಸಮಾಜದಿಂದ ಎಲ್ಲವನ್ನು ಪಡೆದಿರುವ ನೀವು ಮುಂದೆ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಿ ಹಾಗೂ ಆದರ್ಶ ವ್ಯಕ್ತಿಗಳಾದರೇ ಅದೇ ನೀವು ಸಂಸ್ಥೆ ನೀಡುವ ಕೊಡುಗೆಯಾಗಿದೆ ಎಂದರು ಸಮಾರಂಭದಲ್ಲಿ ಕಾಲೇಜಿನ ಅಧ್ಯಾಪಕರು, ಅದ್ಯಾಪಕೇತರರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Thursday, 9 February 2017

09-02-2017 ಚಾಮರಾಜನಗರ ಸುದ್ದಿಗಳು (ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ:ಪರಿಶೀಲನೆ)

ಫೆಬ್ರವರಿ 09, 2017 ಫೆಬ್ರವರಿ 10 ರಂದು ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ:ಪರಿಶೀಲನೆ ಚಾಮರಾಜನಗರ, ಫೆ. 09 - ಕೇಂದ್ರ ಅಧಿಕಾರಿಗಳನ್ನೊಳಗೊಂಡ ಬರ ಅಧ್ಯಯನ ಸಮಿತಿಯು ಫೆಬ್ರವರಿ 10 ರಂದು ಜಿಲ್ಲೆಗೆ ಭೇಟಿ ನೀಡಿ, ಹಿಂಗಾರು ಅವಧಿಯ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದೆ. ಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಲಜ್‍ಶ್ರೀವಾಸ್ತವ, ನವದೆಹಲಿಯ ನೀತಿ ಆಯೋಗದ ಸಂಶೋಧಾನ ಅಧಿಕಾರಿ ಬಿ.ಅನುರಾಧ, ಬೆಂಗಳೂರಿನ ಕೇಂದ್ರ ಜಲ ಆಯೋಗದ ಅಧೀಕ್ಷಕ ಎಂಜಿನಿಯರ್ ವಿ.ಮೋಹನ್‍ಮುರುಳಿ ಅವರನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದೆ. ಹಿಂಗಾರು ಅವಧಿಯಲ್ಲಾಗಿರುವ (ರಬಿ) ಬೆಳೆ ನಷ್ಟ, ಕುಡಿಯುವ ನೀರು, ಮೇವು ಅಭಾವ ಪರಿಸ್ಥಿತಿಯನ್ನು ತಂಡವು ಪರಾಮರ್ಶಿಸಲಿದೆ. ಕೊಳ್ಳೇಗಾಲದ ಮೂಲಕ ಜಿಲ್ಲೆಗೆ ಆಗಮಿಸಲಿರುವ ತಂಡವು ಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮದಲ್ಲಿರುವ ಗೋಶಾಲೆಗೆ ಭೇಟಿ ನೀಡಲಿದೆ. ತದನಂತರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬರಪರಿಸ್ಥಿತಿ ಸಂಬಂಧ ಮಾಹಿತಿ ಪಡೆಯಲಿದೆ ಬಳಿಕ ಉಡಿಗಾಲ, ತೆರಕಣಾಂಬಿ, ಗುಂಡ್ಲುಪೇಟೆ ಮಾರ್ಗವಾಗಿ ತಂಡವು ತೆರಳಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. -------------------------------------------------------------------------- ಕೆ.ಡಿ.ಪಿ.ಸಭೆ ಮುಂದೂಡಿಕೆ ಚಾಮರಾಜನಗರ, ಫೆ. 09 - ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 13 ರಂದು ನಗರದಲ್ಲಿ ನಿಗದಿಯಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಮುಂದೂಡಲಾಗಿದೆ. ಕರ್ನಾಟಕ ವಿಧಾನ ಮಂಡಲ ಅಧಿವೇಶನವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13 ರಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಕೆ.ಡಿ.ಪಿ ಸಭೆ ಮುಂದೂಡಿಕೆಯಾಗಿದೆ. ಅಲ್ಲದೆ ಅಂದು ಸಚಿವರು ಕೈಗೊಳ್ಳಲಿದ್ದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಕಾರ್ಯಕ್ರಮವನ್ನು ಸಹ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ---------------------------------------------------------------------------------------- ಗ್ರಾ.ಪಂ. ಉಪಚುನಾವಣೆ : ಫೆ. 12ರಂದು ಸಂತೆ, ಜಾತ್ರೆ ನಿಷೇಧ ಚಾಮರಾಜನಗರ, ಫೆ. 09- ವಿವಿಧ ಕಾರಣಗಳಿಂದ ತೆರವಾಗಿರುವ ಕೆಲ ಗ್ರಾಮಪಂಚಾಯಿತಿಯ ಸದಸ್ಯ ಸ್ಥಾನಗಳಿಗೆ ಫೆಬ್ರವರಿ 12ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ಸಂಬಂಧಪಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಂತೆ, ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ. ಚಾಮರಾಜನಗರ ತಾಲೂಕಿನ ಹೊಂಗನೂರು, ಕೊಳ್ಳೇಗಾಲ ತಾಲೂಕಿನ ದೊಡ್ಡಾಲತ್ತೂರು, ಮಾರ್ಟಳ್ಳಿ, ಗುಂಡ್ಲುಪೇಟೆ ತಾಲೂಕಿನ ಕೊತನೂರು, ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಫೆಬ್ರವರಿ 12ರಂದು ಸೂಚಿಸಲಾಗಿರುವ ಅವಧಿಯಲ್ಲಿ ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. **************************************************************************** ಆಧಾರ್, ಬ್ಯಾಂಕ್ ಖಾತೆ ವಿವರ ಕಡ್ಡಾಯ : ಡಿಸಿ ಸೂಚನೆ ಚಾಮರಾಜನಗರ, ಫೆ. 09 :- ಸಾಮಾಜಿಕ ಭದ್ರತಾ ಹಾಗೂ ಪಿಂಚಣಿ ಯೋಜನೆಗಳಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಆಧಾರ್, ಬ್ಯಾಂಕ್/ ಅಂಚೆ ಖಾತೆ ವಿವರಗಳನ್ನು ಮಾರ್ಚ್ ಅಂತ್ಯದೊಳಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ. ಆಧಾರ್ ಸಂಖ್ಯೆ ಸಂಗ್ರಹಣೆಗಾಗಿ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು, ಗ್ರಾಮ ಸಹಾಯಕರು ಗ್ರಾಮಗಳಿಗೆ ಭೇಟಿನೀಡಿದ ಸಂದರ್ಭದಲ್ಲಿ ಪಿಂಚಣಿ ಮಂಜೂರಾತಿ ಆದೇಶ ಸಂಖ್ಯೆ, ಪಿಪಿಓಐಡಿ ಜತೆಗೆ ಆಧಾರ್ ಸಂಖ್ಯೆ, ಅಂಚೆ/ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮಸಹಾಯಕರು, ಗ್ರಾಮಲೆಕ್ಕಿಗರು ಕಂದಾಯ ನಿರೀಕ್ಷಕರ ಮುಖಾಂತರ (ಹೋಬಳಿ ಮಟ್ಟದಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರಗಳು) ಹಾಗೂ ತಾಲೂಕು ಕೇಂದ್ರ, ನಗರ ಪ್ರದೇಶಗಳಲ್ಲಿ ತಾಲೂಕು ಕಚೇರಿಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಬೇಕು. ಆಧಾರ್ ಸಂಖ್ಯೆ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದವರು ಆಧಾರ್ ಸಂಖ್ಯೆ ಇನ್ನು ದೊರೆತಿಲ್ಲದಿದ್ದರೆ 28 ಅಂಕಿಯ ಇಐಡಿ (ಆಧಾರ್ ಎನ್‍ರೋಲ್‍ಮೆಂಟ್ ಸಂಖ್ಯೆ) ನೀಡಬಹುದು. ಇಐಡಿ ಸಂಖ್ಯೆಗೆ ಯಶಸ್ವಿಯಾಗಿ ಆಧಾರ್ ಸಂಖ್ಯೆ ಲಭ್ಯವಾದಲ್ಲಿ ಇಲಾಖೆ ವತಿಯಿಂದಲೇ ಅದನ್ನು ಸೇರಿಸಲಾಗುವುದು. ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಲು ಹೋಬಳಿ ಮಟ್ಟದಲ್ಲಿ ಇರುವ ಅಟಲ್ ಜೀ ಜನಸ್ನೇಹಿ ಕೇಂದ್ರ, ನಗರ ಪ್ರದೇಶಗಳಲ್ಲಿ ನೋಂದಣಿ ಕೇಂದ್ರಗಳನ್ನು ಸಂಪಕಿಸಬೇಕು. ಕೇಂದ್ರ ಸರ್ಕಾರದ ನೇರ ಹಣ ಸಂದಾಯ ಯೋಜನೆಯಡಿ ಪ್ರತಿ ಫಲಾನುಭವಿ ಸರ್ಕಾರದ ಸವಲತ್ತನ್ನು ಪಡೆಯಲು ಆಧಾರ್ ಸಂಖ್ಯೆ, ಬ್ಯಾಂಕ್ ಅಥವಾ ಅಂಚೆ ಖಾತೆ ಸಂಖ್ಯೆ ಕಡ್ಡಾಯವಾಗಿದೆ. ಆಧಾರ್ ಹೊಂದಾಣಿಕೆಯಾದ ಖಾತೆ ಮೂಲಕ ಪಿಂಚಣಿ ಪಡೆಯುವುದಕ್ಕೆ ಒಪ್ಪಿಗೆ ಪತ್ರದೊಂದಿಗೆ ತಾಲೂಕು ಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡÀಬೇಕು. ಇ- ಮನಿಯಾರ್ಡರ್ ಮುಖಾಂತರ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಜೆರಾಕ್ಸ್ ಪ್ರತಿ, ಇ ಮನಿಯಾರ್ಡರ್ ಸ್ವೀಕೃತಿ, ರಸೀತಿ ಹಾಗೂ ಭಾವಚಿತ್ರವನ್ನು ಅಂಚೆಕಚೇರಿಗೆ ನೀಡಿ ಅಂಚೆ ಖಾತೆ ತೆರೆಯಬೇಕು. ನಗರ ಪ್ರದೇಶದಲ್ಲಿ ವಾಸವಾಗಿದ್ದು ಪಿಂಚಣಿ ಪಡೆಯುತ್ತಿರುವವರು ತಮ್ಮ ವಾಸಸ್ಥಳ ಅಥವಾ ವಿಳಾಸ ಬದಲಾವಣೆಯಾಗಿದ್ದಲ್ಲಿ ಬದಲಾದ ವಿಳಾಸದ ಜತೆಗೆ ಆಧಾರ್ ಜೋಡಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ತಾಲೂಕು ಕಚೇರಿಯಲ್ಲಿ ನೀಡಬೇಕು. ಇಲ್ಲವಾದಲ್ಲಿ ಪಿಂಚಣಿ ಮಂಜೂರು ವಿಳಾಸದಲ್ಲಿ ಫಲಾನುಭವಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗುತ್ತದೆ. ಈ ಕುರಿತ ಏನೇ ದೂರುಗಳು ಇದ್ದಲ್ಲಿ ಸಂಬಂಧಪಟ್ಟ ಅಟಲ್ ಜೀ ಜನಸ್ನೇಹಿ ಕೇಂದ್ರ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಅಥವಾ ಬೆಂಗಳೂರಿನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ****************************************************************************** ಫೆ. 10ರಂದು ದಲಿತ ವಚನಕಾರರು, ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ ಪೂರ್ವಭಾವಿ ಸಭೆ ಚಾಮರಾಜನಗರ, ಫೆ. 09- ಜಿಲ್ಲಾಡಳಿತದ ವತಿಯಿಂದ ಛತ್ರಪತಿ ಶಿವಾಜಿ, ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಫೆಬ್ರವರಿ 10ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಗೆ ಎಲ್ಲಾ ಸಮುದಾಯ, ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಸೇರಿದಂತೆ ಸರ್ವರೂ ಆಗಮಿಸಿ ಸಲಹೆ, ಸಹಕಾರ ನೀಡುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ. ವಿವಿಧ ಸಾಲಸೌಲಭ್ಯಕ್ಕೆ ವಿಶ್ವಕರ್ಮ ಸಮುದಾಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 09 :- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ನೀಡಲಿರುವ ವಿವಿಧ ಸೌಲಭ್ಯಕ್ಕಾಗಿ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೃಷಿ ವಲಯ, ಸಣ್ಣ ವ್ಯಾಪಾರ, ಸೇವಾವಲಯ, ಸಾರಿಗೆ ವಲಯ, ಶೈಕ್ಷಣಿಕ ಸಾಲ ಯೋಜನೆ, ಮಹಿಳೆಯರಿಗೆ ನ್ಯೂ ಸ್ವರ್ಣಿಮ ಸಾಲ, ಶಿಲ್ಪ ಸಂಪದ, ಸ್ವಯಂ ಸಕ್ಷಮ ಸಾಲ, ಮೈಕ್ರೋಫೈನಾನ್ಸ್, ಕೃಷಿ ಸಂಪದ, ಮಹಿಳೆಯರಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮಹಿಳಾ ಸಮೃದ್ಧಿ ಯೋಜನೆಯಡಿ ಸೌಲಭ್ಯ ಲಭಿಸಲಿದೆ. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ 98 ಸಾವಿರ, ಪಟ್ಟಣ ಪ್ರದೇಶದವರಾಗಿದ್ದಲ್ಲಿ 1 ಲಕ್ಷದ 20 ಸಾವಿರ ರೂ.ಗಿಂತ ಕಡಿಮೆ ಇರಬೇಕು. 18 ರಿಂದ 55ರ ವಯೋಮಿತಿಯೊಳಗಿರಬೇಕು. ಶೈಕ್ಷಣಿಕ ಸಾಲ ಪಡೆಯಲು 18 ರಿಂದ 32ರ ವಯೋಮಿತಿಯಲ್ಲಿರಬೇಕು. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಫೆಬ್ರವರಿ 25ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ನಿಗಮದ ಕಚೇರಿ ಸಂಪರ್ಕಿಸಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

Wednesday, 8 February 2017

08-02-2017 ಚಾಮರಾಜನಗರ- ಯಶಸ್ವಿಯಾಗಿ ನಡೆಯುತ್ತಿರುವ ರುಬೆಲ್ಲಾ ಲಸಿಕಾ ಕಾರ್ಯಕ್ರಮ.

iv dir="ltr" style="text-align: left;" trbidi="on">
ಯಶಸ್ವಿಯಾಗಿ ನಡೆಯುತ್ತಿರುವ ರುಬೆಲ್ಲಾ ಲಸಿಕಾ ಕಾರ್ಯಕ್ರಮ. ವರದಿ- ವರದಿ.ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ- ಕೆಲ ವದಂತಿಗೆ ಬೆಚ್ಚಿ ಬಿದ್ದ ಹಿನ್ನಲೆಯಲ್ಲಿ ಅರ್ದಕ್ಕೆ ನಿಂತ ಲಸಿಕಾ ವಿತರಣಾ ಕಾರ್ಯಕ್ರಮ ಇಂದು ಬಿರುಸಾಗಿ ನಡೆಯಿತು. ಮಕ್ಕಳಿಗೆ ದಡಾರ ಲಸಿಕೆ ಹಾಕಿದಾಗ ಏನೋ ಆಗುತ್ತದೆಯಂತೆ ಎಂದು ಗಾಬರಿಗೊಂಡು ಶಾಲೆಗೆ ದೌಡಾಯಿಸಿ ಮಕ್ಕಳನ್ನು ವಾಪಸ್ ಕರೆದೊಯ್ದಿದ್ದರು ಇದರಿಂದ ಅನಿವಾರ್ಯವಾಗಿ ಲಸಿಕಾ ಕಾರ್ಯಕ್ರಮ ನಿಲ್ಲಿಸಬೇಕಾಗಿತ್ತು. ಮಗುವಿಗೆ ಏನು ಆಗುವುದಿಲ್ಲ . ದಯಮಾಡಿ ಮಕ್ಕಳ ಉಜ್ವಲ ಭವಿಷ್ಯದ ಹಿತಾದೃಷ್ಟಿಯಿಂದ ಮಕ್ಕಳ ಪೋಷಕರು ಸಹಕರಿಸಬೇಕಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಇಂದು ಎಲ್ಲಾ ಶಾಲೆಗಳಲ್ಲೂ ಪೋಷಕರೊಡಗೂಡಿ ತಾವೇ ಖುದ್ದು ಇದ್ದು ಲಸಿಕಾ ಹಾಕಿಸಿಕೊಂಡು ಹೋದರು. ಚಾಮರಾಜನಗರದಲ್ಲಿ ಮೊದಲ ದಿನ ೧೮೪೦೦ ಮಕ್ಕಳಿಗೆ ಲಸಿಕಾ ಹಾಕಲಾಗಿದ್ದು ವದಂತಿ ಎನ್ನ ಹಿನ್ನಲೆಯಲ್ಲಿ ಬಹುತೇಕ ಹೆಚ್ಚಾಗುವ ಸಾದ್ಯತೆ ಇದೆ *************************************************************************************************************************************************** ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಚಾಮರಾಜನಗರ, ಫೆ. 08 -ಜಿಲ್ಲಾ ಪೋಲಿಸ್ ಘಟಕದಲ್ಲಿನ ಸಿಪಿಸಿ, ಮಪಿಸಿ ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾದ ಲಿಖಿತ ಪರೀಕ್ಷೆ ದೇಹದಾಢ್ರ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಗಳಲ್ಲಿ ಅರ್ಹರಾದ 60 ಪುರುಷ ಹಾಗೂ 14 ಮಹಿಳಾ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ************************************************************************************************************************************ ಆಧಾರ್, ಬ್ಯಾಂಕ್ ಖಾತೆ ವಿವರ ಸಲ್ಲಿಕೆಗೆ ಸೂಚನೆ ಚಾಮರಾಜನಗರ, ಫೆ. 08 - ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು, ಹೊಸದಾಗಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವವರು ಆಧಾರ್, ಬ್ಯಾಂಕ್, ಅಂಚೆ ಖಾತೆ ವಿವರಗಳನ್ನು ಸಲ್ಲಿಸುವಂತೆ ಚಾಮರಾಜನಗರ ತಾಲೂಕು ತಹಸೀಲ್ದಾರ್ ತಿಳಿಸಿದ್ದಾರೆ. ಸರ್ಕಾರದ ಆದೇಶದಂತೆ ಕಂದಾಯ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ಹಾಗೂ ಹೊಸದಾಗಿ ಸೌಲಭ್ಯ ಕೋರಿ ಬರುವ ಅರ್ಜಿದಾರರು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕಿದೆ. ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿದ್ದು ಈಗಾಗಲೇ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ಬ್ಯಾಂಕ್, ಅಂಚೆ ಖಾತೆ ವಿವರಗಳನ್ನು ಸಹ ನೀಡುವಂತೆ ತಹಸೀಲ್ದಾರ್ ಪುರಂಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *************************************************************************************************************************************** ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ ಚಾಮರಾಜನಗರ, ಫೆ. 08 - ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್ ಅವರು ಫೆಬ್ರವರಿ 11 ಹಾಗೂ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಫೆಬ್ರವರಿ 11ರಂದು ಮಧ್ಯಾಹ್ನ 3 ಗಂಟೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಅಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿರುವ ಸಂತ ಪರಂಪರೆ ಮತ್ತು ಸಾಮಾಜಿಕ ಬದಲಾವಣೆ ಕುರಿತ ಕಮ್ಮಟದಲ್ಲಿ ಭಾಗವಹಿಸುವರು. ರಾತ್ರಿ ಮಲೆಮಹದೇಶ್ವರ ಬೆಟ್ಟದಲ್ಲೇ ವಾಸ್ತವ್ಯ ಹೂಡುವರು. ಫೆಬ್ರವರಿ 12ರಂದು ಮಧ್ಯಾಹ್ನ 12 ಗಂಟೆಗೆ ಹಾರೋಹಳ್ಳಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ. ********************************************************************************************************************************************* ಫೆ. 13ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾರ್ವಜನಿಕರ ಕುಂದುಕೊರತೆ ಆಲಿಕೆ ಚಾಮರಾಜನಗರ, ಫೆ. 08 :- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಫೆಬ್ರವರಿ 13ರಂದು ಬೆಳಿಗ್ಗೆ 9.30 ರಿಂದ 10.30 ಗಂಟೆಯವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಅವರ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವರು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಚಿವರಿಗೆ ಅಹವಾಲುಗಳನ್ನು ನೀಡುವ ಮೂಲಕ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. **************************************************************************

Tuesday, 7 February 2017

ಚಾಮರಾಜನಗರ, ಫೆ. 07 - ದಡಾರ ರುಬೆಲ್ಲಾ ಲಸಿಕೆ : ಆತಂಕ ಬೇಡ – ಡೀಸಿ ಮನವಿ (07-02-2017)

ಪೋಷಕರೆ ಗಾಬರಿಯಾಗದಿರಿ ...ವದಂತಿಗೆ ಕಿವಿಗೊಡಬೇಡಿ. * ವಿಎಸ್ಎಸ್ * ರುಬೆಲ್ಲಾ ಮತ್ತು ದಡಾರ ಲಸಿಕೆ ಹಾಕಿದಾಗ ಮಗುವಿಗೆ ಏನು ಆಗುವುದಿಲ್ಲ. ಕೆಲವರು ಏನೋ ಆಯ್ತಂತೆ,ಇಲ್ಲಿ ಆಯ್ತಂತೆ ಎಂಬ ಊಹಾಪೊಹ ಸುದ್ದಿಗೆ ಕಿವುಕೊಟ್ಟು ಮಕ್ಕಳನ್ನ ಶಾಲೆಯಿಂದ ಲಸಿಕೆ ಹಾಕಿಸದೆ ವಾಪಸ್ ಕರೆದೊಯ್ದಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಂಡರೆ ಏನು ಆಗುವುದಿಲ್ಲ.ಉಜ್ವಲ ಭವಿಷ್ಯದ ಹಿತಾದೃಷ್ಟಿಯಿಂದ ಮಕ್ಕಳ ಪೋಷಕರು ಸಹಕರಿಸಬೇಕಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಪೋಷಕರೆ ಗಾಬರಿಯಾಗದಿರಿ ...ವದಂತಿಗೆ ಕಿವಿಗೊಡಬೇಡಿ. * ವಿಎಸ್ಎಸ್ * ರುಬೆಲ್ಲಾ ಮತ್ತು ದಡಾರ ಲಸಿಕೆ ಹಾಕಿದಾಗ ಮಗುವಿಗೆ ಏನು ಆಗುವುದಿಲ್ಲ. ಕೆಲವರು ಏನೋ ಆಯ್ತಂತೆ,ಇಲ್ಲಿ ಆಯ್ತಂತೆ ಎಂಬ ಊಹಾಪೊಹ ಸುದ್ದಿಗೆ ಕಿವುಕೊಟ್ಟು ಮಕ್ಕಳನ್ನ ಶಾಲೆಯಿಂದ ಲಸಿಕೆ ಹಾಕಿಸದೆ ವಾಪಸ್ ಕರೆದೊಯ್ದಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಂಡರೆ ಏನು ಆಗುವುದಿಲ್ಲ.ಉಜ್ವಲ ಭವಿಷ್ಯದ ಹಿತಾದೃಷ್ಟಿಯಿಂದ ಮಕ್ಕಳ ಪೋಷಕರು ಸಹಕರಿಸಬೇಕಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ದಡಾರ ರುಬೆಲ್ಲಾ ಲಸಿಕೆ : ಆತಂಕ ಬೇಡ – ಡೀಸಿ ಮನವಿ ಚಾಮರಾಜನಗರ, ಫೆ. 07 - ದೇಶವನ್ನು ದಡಾರ, ರುಬೆಲ್ಲಾ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಇಂದಿನಿಂದ ವ್ಯಾಪಕವಾಗಿ ಲಸಿಕಾ ಅಭಿಯಾನವನ್ನು ಆರಂಭಿಸಿದ್ದು ಈ ಬಗ್ಗೆ ಅನಗತ್ಯವಾಗಿ ಹರಡುವ ವದಂತಿಗಳಿಗೆ ನಾಗರಿಕರು ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ. ದಡಾರ ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುವ ಸಲುವಾಗಿ ವಿಶೇಷ ಅಭಿಯಾನದ ಮೂಲಕ 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎಂಆರ್ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಚುಚ್ಚುಮದ್ದು ಹಾಕಲಾಗುತ್ತಿದೆ. ಆದರೆ ಕೆಲವೆಡೆ ಚುಚ್ಚುಮದ್ದು ನೀಡಿದ್ದರಿಂದ ತೊಂದರೆ ಉಂಟಾಗಿದೆ ಎಂಬ ಗಾಳಿಸುದ್ದಿ ಹರಡಲಾಗಿದ್ದು ಈ ಬಗ್ಗೆ ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಲಸಿಕೆ ನೀಡುವುದರಿಂದ ಯಾವುದೇ ತೀವ್ರ ತರಹದ ಅಡ್ಡಪರಿಣಾಮ ಉಂಟಾಗುವುದಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ದಡಾರ ರುಬೆಲ್ಲಾ ಲಸಿಕೆಯನ್ನು ಯಾವುದೇ ಹಿಂಜರಿಕೆ ಇಲ್ಲದೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿದ್ದಾರೆ. ದಡಾರ ರುಬೆಲ್ಲಾ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ಚಾಮರಾಜನಗರ, ಫೆ. 07- ದಡಾರ ಮತ್ತು ರುಬೆಲ್ಲಾ ರೋಗ ತಡೆಗೆ ಆರಂಬಿಸಲಾಗಿರುವ ಲಸಿಕಾ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು. ನಗರದ ಚೆನ್ನೀಪುರದಮೋಳೆಯ ಹೂವಿನೂರಿನ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ದಡಾರ ರುಬೆಲ್ಲಾ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಪಲ್ಸ್ ಪೋಲಿಯೋ ಮಾದರಿಯಲ್ಲಿಯೇ 2020ರೊಳಗೆ ಯಶಸ್ವಿಯಾಗಿ ಅಭಿಯಾನವನ್ನು ಪೂರ್ಣಗೊಳಿಸಬೇಕಿದೆ. 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಚುಚ್ಚುಮದ್ದು ನೀಡುವ ಮೂಲಕ ಪೋಷಕರು ಸಹಕರಿಸಬೇಕು ಎಂದರು. ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕಾ ಅವರು ಎಇಎಫ್‍ಐ ಕಿಟ್ ಬಿಡುಗಡೆ ಮಾಡಿ ಮಾತನಾಡಿ ದಡಾರ ರುಬೆಲ್ಲಾ ಲಸಿಕೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಲಸಿಕೆ ಪಡೆಯುವುದರಿಂದ ಮಕ್ಕಳಿಗೆ ರೋಗದಿಂದ ರಕ್ಷಣೆ ಉಂಟಾಗುತ್ತದೆ. ಹೀಗಾಗಿ ಪೋಷಕರಿಗೆ ಕಾರ್ಯಕ್ರಮದ ಉದ್ದೇಶವನ್ನು ಮನವರಿಕೆ ಮಾಡಿಕೊಡಬೇಕು. ಶೇಕಡ 100ರಷ್ಟು ಅಭಿಯಾನ ಯಶಸ್ವಿಯಾಗಲು ಎಲ್ಲರೂ ಪೋಷಕರಿಗೆ ಹಾಗೂ ಮಕ್ಕಳಿಗೆ ತಿಳಿವಳಿಕೆ ನೀಡಬೇಕು ಎಂದರು. ಆರ್ ಸಿ ಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ದಡಾರ ರುಬೆಲ್ಲಾ ಲಸಿಕೆಯನ್ನು ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ನೀಡುವ ಗುರಿ ಹೊಂದಲಾಗಿದ್ದು ಇದಕ್ಕಾಗಿ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಅನುಷ್ಠಾನ ಮಾಡುತ್ತಿದ್ದೇವೆ. ಪೋಷಕರಿಗೆ ಮತ್ತು ಮಕ್ಕಳಿಗೆ ಲಸಿಕೆಯಿಂದ ಉಂಟಾಗುವ ಪ್ರಯೋಜನ ತಿಳಿಸಬೇಕು ಹಾಗೂ ಈ ಬಗ್ಗೆ ಅನಗತ್ಯವಾಗಿ ಇರಬಹುದಾದ ಸಂದೇಹಗಳನ್ನು ದೂರ ಮಾಡಬೇಕು ಎಂದರು. ಲಸಿಕೆ ನೀಡುವ ಕಾರ್ಯಕ್ರಮಕ್ಕಾಗಿ ಒಂದು ತಂಡದಲ್ಲಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಲಸಿಕೆ ನೀಡುವುದರಿಂದ ಆರೋಗ್ಯದಲ್ಲಿ ಏನಾದರೂ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದರೂ ಅದಕ್ಕೆ ತಕ್ಷಣವೇ ಚಿಕಿತ್ಸೆ ನೀಡಲು ಬೇಕಾದ ಎಇಎಫ್‍ಐ ಕಿಟ್ ಲಭ್ಯವಿದೆ. ಹೀಗಾಗಿ ಪೋಷಕರು ಅನಗತ್ಯವಾಗಿ ಆತಂಕಗೊಳ್ಳಬಾರದು ಎಂದು ಡಾ. ವಿಶ್ವೇಶ್ವರಯ್ಯ ಸ್ಪಷ್ಟಪಡಿಸಿದರು. ಜಿಲ್ಲಾ ಸರ್ಜನ್ ಡಾ. ರಘುರಾಂ ಅವರು ವ್ಯಾಕ್ಸಿನ್ ಕಿಟ್ ಬಿಡುಗಡೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಮಹೇಶ್, ಲಯನ್ಸ್ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎನ್. ಮಹದೇವ್, ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಡಾ. ಶ್ವೇತಾ ಶಶಿಧರ್, ಡಾ. ಶಶಿಧರ್, ಶಾಲೆಯ ಎಸ್‍ಡಿಎಂಸಿ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು, ಇತರರು ಉಪಸ್ಥಿತರಿದ್ದರು.

Saturday, 4 February 2017

27 ರಂದು ಕರ್ನಾಟಕ ಬಂದ್

27 ರಂದು ಕರ್ನಾಟಕ ಬಂದ್ ಚಾಮರಾಜನಗರ, ಫೆ.04 :- ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಹಾಗೂ ಮೇವು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿ ಹರದನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ರಸ್ತೆ ಸತ್ಯಾಗ್ರಹ ಮಾಡುತ್ತಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರವರನ್ನು ಪೊಲೀಸರು ಬಂಧಿಸಿದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ವಾಟಾಳ್‍ನಾಗರಾಜ್‍ರವರು ತಮ್ಮ ಬೆಂಬಲಿಗರೊಂದಿಗೆ ತೆರೆದ ವಾಹನಗಳಲ್ಲಿ ಮೆರವಣಿಗೆ ಪ್ರಾರಂಭಿಸಿ ಮೆರವಣಿಗೆಯು ತ್ಯಾಗರಾಜ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಸರ್ಕಾರಿ ಬಸ್ ನಿಲ್ದಾಣದ ರಸ್ತೆ, ಲಾರಿ ನಿಲ್ದಾಣದ ರಸ್ತೆ, ಸುಲ್ತಾನ್ ಷರೀಫ್ ವೃತ್ತ, ಸತ್ಯಮಂಗಲ ರಸ್ತೆ, ಮಾರ್ಗವಾಗಿ ಹರದನಹಳ್ಳಿ ತಲುಪಿ. ಹರದನಹಳ್ಳಿಯಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ 209 ತಡೆದು ಸತ್ಯಾಗ್ರಹ ಮಾಡಿದರು. ಇದರಿಂದ ವಾಹನ ಸಂಚಾರ ಅಸ್ತ-ವ್ಯಸ್ತ ಉಂಟಾದ ಕಾರಣ ವಾಟಾಳ್‍ನಾಗರಾಜ್‍ರವರನ್ನು ಹಾಗೂ ಪ್ರತಿಭಟಿಸುತ್ತಿದ್ದ ಮುಖಂಡರನ್ನು ಪೊಲೀಸರು ಬಂಧಿಸಿ ಚಾಮರಾಜನಗರಕ್ಕೆ ಕರೆತಂದು ನಂತರ ಬಿಡುಗಡೆಗೊಳಿಸಿದರು. ಇದಕ್ಕೂ ಮೊದಲು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್‍ನಾಗರಾಜ್ ಜಿಲ್ಲೆಯ ಹಾಗೂ ತಾಲ್ಲೂಕಿನ ಕೆರೆಗಳಲ್ಲಿ ನೀರಿಲ್ಲದೆ. ಕೊಳವೆ ಬಾವಿಗಳಲ್ಲಿ ಅಂತರ ಜಲ ಕುಸಿದಿದ್ದು ಮಹಿಳೆಯರು ನೀರಿಗಾಗಿ ಪರಿತಪಿಸುತ್ತಾ ಕಣ್ಣೀರಿಡುತ್ತಿದ್ದಾರೆ ಸುಮಾರು 2-3 ಕಿ.ಮೀ ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಬಂದೊದಗದೆ ಆದ್ದರಿಂದ, ಕೊತ್ತಲವಾಡಿ ಕೆರೆ, ಸುವರ್ಣನಗರಕೆರೆ, ಅರಕಲವಾಡಿಕೆರೆ, ಎಣ್ಣೆಹೊಳೆಕೆರೆ, ಬಂಡಿಗೆರೆ, ಮರಗದಕೆರೆ. ನಗರದಕೆರೆ, ಚಿಕ್ಕಕೆರೆ, ದೊಡ್ಡಕೆರೆ, ಸಿಂಡನಕೆರೆ, ಕೋಡಿಮೋಳೆಕೆರೆ, ದೊಡ್ಡರಾಯಪೇಟೆಕೆರೆ, ಮಾಲಗೆರೆ ಸೇರಿದಂತೆ ತಾಲ್ಲೂಕಿನ ಇನ್ನಿತರ ಕೆರೆಗಳಿಗೆ ನೀರು ತುಂಬಿಸಬೇಕು 15 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ತಿಂಗಳು ಮಾರ್ಚ್- 1 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು. ಪ್ರತಿ ಹಳ್ಳಿಗಳಿಂದ ರೈತರು, ಬಡವರು ಕೂಲಿಗಾಗಿ ಹೊರ ರಾಜ್ಯಕ್ಕೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ತಾಂಡÀವಾಡುತ್ತಿದೆ ಕೂಡಲೆ ಬರ ಪರಿಹಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಅಲ್ಲದೆ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು ರಾಜ್ಯ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಇದೇ 27 ರಂದು ಕರ್ನಾಟಕ ಬಂದ್‍ಗೆ ಕರೆನೀಡಿದ್ದೇನೆ ಎಂದು ವಾಟಾಳ್ ತಿಳಿಸಿದರು. ಚಾಮರಾಜನಗರ ಧೂಳಿನ ನಗರವಾಗಿದೆ ಅಂಗಡಿಬೀದಿಗಳು ಸೇರಿದಂತೆ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿ ಧೂಳಿನಿಂದ ಕೂಡಿದೆ. ಕೂಡಲೇ ಧೂಳು ಮುಕ್ತ ನಗರ ಮತ್ತು ಬೀದಿಯನ್ನಾಗಿ ಮಾಡಬೇಕು ಎಂದು ವಾಟಾಳ್‍ನಾಗರಾಜ್ ತಿಳಿಸಿದರು.

ಚಾಮರಾಜನಗರ ಜಿಲ್ಲೆ=ಉಷಾ: ಭವಿಷ್ಯದ ಭದ್ರ ಬುನಾದಿಗೆ ದಾರಿದೀಪ;S.VEERABHADRA SWAMY (KIRIK)

ಉಷಾ: ಭವಿಷ್ಯದ ಭದ್ರ ಬುನಾದಿಗೆ ದಾರಿದೀಪ ದೇಶದಲ್ಲೇ ಪ್ರಥಮ ಎನ್ನಬಹುದಾದ “ಉಷಾ” ಆಂದೋಲನ ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲೆಯಲ್ಲಿ ದಿನಾಂಕ: 25-11-2016ರಿಂದ ಪ್ರಾರಂಭಿಸಲಾಯಿತು. ಇದರ ಪ್ರಭಾವದಿಂದ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಪ್ರಗತಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ 50 ಸಾವಿರ ಶೌಚಾಲಯ ನಿರ್ಮಾಣದ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಇದರಲ್ಲಿ ನವೆಂಬರ್-24. 2016ವರೆಗೆ ಜಿಲ್ಲೆಯಾದ್ಯಂತ 8788 ಶೌಚಾಲಯಗಳು ಮಾತ್ರ ನಿರ್ಮಾಣಗೊಂಡಿದ್ದವು. ಆದರೆ ನವೆಂಬರ್-24 ರಂದು ಉಷಾ ಆಂದೋಲನವನ್ನು ಪ್ರಾರಂಭಿಸಿ, ಅಭಿಯಾನವನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಿದ ಬಳಿಕ ಡಿಸೆಂಬರ್-2016 ಹಾಗೂ ಜನವರಿ-2017 ಎರಡು ತಿಂಗಳ ಅವಧಿಯಲ್ಲಿ 9403 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದವರೆವಿಗೂÀ 18191 ಶೌಚಾಲಯಗಳು ಪೂರ್ಣಗೊಂಡಿವೆ. 9053 ಶೌಚಾಲಯಗಳು ಪ್ರಗತಿಯಲ್ಲಿವೆ. ಚಾಮರಾಜನಗರ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 2016-17ನೇ ಸಾಲಿನಲ್ಲಿ ಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯಿತಿಯಲ್ಲಿ 318, ಕೊತ್ತಲವಾಡಿ ಗ್ರಾಮ ಪಂಚಾಯಿತಿಯಲ್ಲಿ 291, ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ ಗ್ರಾಮ ಪಂಚಾಯಿತಿಯಲ್ಲಿ 248, ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿಯಲ್ಲಿ 256 ಹಾಗೂ ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ 208 ಶೌಚಾಲಯ ನಿರ್ಮಾಣವಾಗಿವೆ. ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಪಂಚಾಯಿತಿಯಲ್ಲಿ 2016-17ನೇ ಸಾಲಿನಲ್ಲಿ 200 ಶೌಚಾಲಯ ನಿರ್ಮಾಣವಾಗಿದ್ದು, ಇನ್ನು 96 ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಶೌಚಾಲಯಗಳು ಪೂರ್ಣಗೊಂಡರೆ ಪಂಚಾಯಿತಿ ಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತವಾಗುತ್ತದೆ. “ಉಷಾ” ಆಂದೋಲನದ ಪ್ರಭಾವ ಜಿಲ್ಲೆಯಲ್ಲಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಾಣಗೊಂಡಿವೆ ಎಂದರೆ ಅದು ಉಷಾ ಆಂದೋಲನದ ಪ್ರಭಾವದಿಂದ ಎನ್ನಬಹುದು. ಉಷಾ ಆಂದೋಲನದ ಧ್ಯೇಯೋದ್ದೇಶವೂ ಕೂಡಾ ಇದೇ ಆಗಿದೆ. ಜಿಲ್ಲೆಯ ಜನರಿಗೆ ಮೊದಲಿಗೆ ತಿಳಿವಳಿಕೆ ಮೂಡಿಸುವುದು, ಅವರನ್ನು ಸಂವೇದನಾಶೀಲರನ್ನಾಗಿಸುವುದು, ಅವರಿಗೆ ಸರ್ಕಾರದ ಕಡೆಯಿಂದ ಸಹಾಯವನ್ನು ಮಾಡುವುದು, ತನ್ಮೂಲಕ ಸಾಧನೆಗೆ ಶ್ರೀಕಾರ ಹಾಕುವುದು. ಈ ಕಾರ್ಯತಂತ್ರವನ್ನು ಪ್ರಯೋಗಗೊಳಿಸಿದ ಪರಿಣಾಮವೇ ಇಂದು ಪ್ರಗತಿ ಕಾಣುತ್ತಿದೆ. ಉಷಾ ಆಂದೋಲನ ಜಿಲ್ಲಾ ಪಂಚಾಯಿತಿಯ ಮುಖ್ಯ ಕಚೇರಿಯಲ್ಲಿ ಕಡತಗಳ ಮಧ್ಯದಲ್ಲಿ ಉಳಿದುಕೊಳ್ಳದೆ ಜನರ ಬಳಿಗೆ ಮುಟ್ಟಿತು. ಪ್ರತಿ ಊರಿನ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಬಿಸಿಯೂಟದ ನೌಕರ ವರ್ಗದವರು, ಸ್ವಚ್ಛ ಭಾರತ ಅಭಿಯಾನದ ತಂಡದವರು ಇವರನ್ನೆಲ್ಲ ಒಟ್ಟುಗೊಡಿಸಿಕೊಂಡು ಮನೆ-ಮನೆಗೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ಮೂಡಿಸುವುದು, ಬೀದಿ-ಬೀದಿಗಳಲ್ಲಿ ಸಂಚಾರ ಮಾಡಿ ಜಾಗೃತಿ ಜಾಥಾ ಹೊರಡುವುದು, ಶಾಲೆಯಲ್ಲಿ, ಆಸ್ಪತ್ರೆಗಳಲ್ಲಿ, ಅಂಗನವಾಡಿಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಎಲ್ಲಿ ಜನರು ಆಗಮಿಸುತ್ತಾರೆ ಅಂತಹ ಕಡೆ “ಉಷಾ” ಅರಿವು ನಡೆಯಿತು. ಜನರಿಗೂ ಮನದಟ್ಟು ಮಾಡುವಲ್ಲಿ ಯಶಸ್ಸಿಯೂ ಆಯಿತು. ಈಗ “ಪ್ರಗತಿ” ಎನ್ನುವುದು ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ. ಇದೇ ಅಲ್ಲದೆ ಪ್ರತಿಯೊಂದು ಪಂಚಾಯಿತಿಗೂ ಒಬ್ಬರು ಮಾರ್ಗದರ್ಶಿ ಶಿಕ್ಷಕರನ್ನು ನಿಯೋಜನೆ ಮಾಡಲಾಯಿತು. ಇವರು ತಮ್ಮ ವ್ಯಾಪ್ತಿಯ ಶಾಲೆಯ ಮಕ್ಕಳಿಗೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅರಿವು, ವೈಯಕ್ತಿಕ ಸ್ವಚ್ಛತೆ, ವಯೋಸಹಜವಾಗಿ ಆಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಗಳ ಬಗ್ಗೆ ಪ್ರಮುಖವಾಗಿ ತಿಳಿವಳಿಕೆ ಮೂಡಿಸುವ ಕಾರ್ಯವನ್ನು ಮಾಡಿದರು. ಇದರಿಂದಾಗಿ ಹೆಣ್ಣು ಮಕ್ಕಳು ತಮ್ಮ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ಪೋಷಕರಿಗೆ ಒತ್ತಾಯ ಮಾಡಿದರು. ಪೋಷಕರೂ ಕೂಡ ಸ್ವಚ್ಛತೆ ಕುರಿತು ಅರಿವನ್ನು ಪಡೆದುಕೊಂಡ ಕಾರಣದಿಂದ ಶೌಚಾಲಯ ನಿರ್ಮಾಣ ಮಾಡಲು ಪ್ರಾರಂಭಿಸಿಯೇ ಬಿಟ್ಟರು. ಎರಡು ತಿಂಗಳ ಕಾರ್ಯತಂತ್ರ ಉಷಾ ಆಂದೋಲನವನ್ನು ನವೆಂಬರ್-25ರಿಂದ ಜನವರಿ-24ರವರೆಗೆ ನಡೆಸಬೇಕು ಎನ್ನುವ ಉದ್ದೇಶದ ಹಿಂದೆ ಮಹಿಳೆಯರ ಅಭ್ಯುಧ್ಯಯ ಅಡಗಿದೆ. ನವೆಂಬರ್-25 ರಂದು ವಿಶ್ವಸಂಸ್ಥೆಯು “ಅಂತರರಾಷ್ಟ್ರೀಯ ಮಹಿಳೆಯರ ವಿರುದ್ಧ ಹಿಂಸಾಚಾರ ನಿರ್ಮೂಲನಾ ದಿನ”ವನ್ನಾಗಿ ಆಚರಿಸುತ್ತದೆ. ಜನವರಿ-24 ರಂದು ಭಾರತದಲ್ಲಿ “ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ”ವನ್ನಾಗಿ ಆಚರಿಸಲಾಗುತ್ತದೆ. ಈ ಎರಡು ಮಹತ್ವದ ದಿನಗಳ ಮಧ್ಯದಲ್ಲಿ ಮಹಿಳೆಯರಿಗೆ ಅರಿವನ್ನು ಉಂಟು ಮಾಡಿದರೆ ಪರಿಣಾಮಕಾರಿಯಾಗಿ ಕಾರ್ಯ ಅನುಷ್ಠಾನಗೊಳ್ಳುತ್ತದೆ ಎಂದು ಆಲೋಚಿಸಿ ಚಾಮರಾಜನಗರ ಜಿಲ್ಲಾ ಪಂಚಾಯಿತಿಯು ಉಷಾ ಆಂದೋಲವನ್ನು ಶುರು ಮಾಡಿತು. ಜಿಲ್ಲೆಯಲ್ಲಿ ಪ್ರಚಲಿತ ದಿನಮಾನದಲ್ಲಿ ಕಾಣಬರುತ್ತಿರುವ ಸಾಮಾಜಿಕ ಸಮಸ್ಯೆಗಳು, ಪಿಡುಗುಗಳ ಬಗ್ಗೆ ಜನರನ್ನು ಜಾಗೃತಗೊಳಿಸುವುದು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಕಳಕಳಿಯ ಕೌಶಲ್ಯಗಳನ್ನು ರೂಢಿಸುವುದು ಮುಂತಾದ ಕ್ರಿಯಾ ಯೋಜನೆಯನ್ನು ತಯಾರಿಸಿಕೊಂಡು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಬೇರು ಮಟ್ಟದಿಂದ ಅರಿವನ್ನು ಮೂಡಿಸಲು ಯೋಜನೆ ಸಿದ್ಧವಾಯಿತು. ಮೊದಲಿಗೆ ಮಾರ್ಗದರ್ಶಿ ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಯಿತು. ನಂತರ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘಗಳು, ಜನಪ್ರತಿನಿಧಿಗಳಿಗೆ ಕಾರ್ಯಾಗಾರವನ್ನು ನಡೆಸಿ ಆಂದೋಲನಕ್ಕೆ ಪೂರಕವಾದ ತರಬೇತಿಯನ್ನು ನೀಡಲಾಯಿತು. ತರಬೇತಿಯನ್ನು ಪಡೆದುಕೊಂಡವರು ತಮ್ಮ-ತಮ್ಮ ಗ್ರಾಮಗಳಲ್ಲಿ ಪರಿಣಾಮಕಾರಿಯಾಗಿ ಅರಿವನ್ನು ಮೂಡಿಸಲು ಪ್ರಾರಂಭಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಉಷಾ ಆಂದೋಲನ ಕುರಿತ ಸ್ಪರ್ಧೆಯನ್ನು ನಡೆಸಲಾಯಿತು. ರಂಗೋಲಿಯ ಬಣ್ಣ-ಬಣ್ಣದ ಚಿತ್ತಾರದಲ್ಲಿ, ಕಲೆಯ ಕುಂಚದಲ್ಲಿ ಮಹಿಳೆಯರ ಸಮಸ್ಯೆಗಳು, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗುಗಳನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು. ಸ್ವಚ್ಛ ಭಾರತ ಸ್ವಚ್ಛ ಗ್ರಾಮ ಎನ್ನುವ ಪರಿಕಲ್ಪನೆಯನ್ನು “ಮಾದರಿ”ಗಳನ್ನು ತಯಾರಿಸಿ ಪ್ರಾತ್ಯಕ್ಷಿಕೆ ಕೊಡುವ ಮೂಲಕ ಸಾಕಾರಗೊಳಿಸಿದರು. ಭಾಷಣ-ಚರ್ಚೆಯಲ್ಲಿ ಮಾತಿನ ಮಂಥನ ನಡೆಸಿದರು. ಆಂದೋಲನ ವಿಸ್ತರಣೆ ಉಷಾ ಆಂದೋಲನವನ್ನು ನವೆಂಬರ್-25ರಿಂದ ಜನವರಿ-24ರವರೆಗೆ ನಡೆಸಿ ಸಮಾರೋಪ ಗೊಳಿಸಬೇಕು ಎನ್ನುವ ಉದ್ದೇಶ ಹೊಂದಲಾಗಿತ್ತು. ಆದರೆ ಪ್ರಗತಿ ಹಾದಿಯನ್ನು ಗಮನಿಸಿ ಮತ್ತು ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಂದ, ಜನರಿಂದ, ಚುನಾಯಿತ ಪ್ರತಿನಿಧಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ “ಅಂತರರಾಷ್ಟ್ರೀಯ ಮಹಿಳಾ ದಿನ” ವಾದ ಮಾರ್ಚ್-8ರ ವರೆಗೂ ಆಂದೋಲನವನ್ನು ವಿಸ್ತರಣೆ ಮಾಡಲಾಗಿದೆ.

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು