Friday, 1 June 2018

25-05-018 ( ಮಕ್ಕಳ ಕಳ್ಳತನ ಆಧಾರರಹಿತ : ಗಾಳಿಸುದ್ದಿ, ವದಂತಿಗಳಿಗೆ ಕಿವಿಗೊಡದಂತೆ ಮನವಿ)

ಮಕ್ಕಳ ಕಳ್ಳತನ ಆಧಾರರಹಿತ : ಗಾಳಿಸುದ್ದಿ, ವದಂತಿಗಳಿಗೆ ಕಿವಿಗೊಡದಂತೆ ಮನವಿ

ಚಾಮರಾಜನಗರ, ಮೇ. 25 - ಜಿಲ್ಲೆಯಲ್ಲಿ ಯಾವುದೇ ರೀತಿಯ ಮಕ್ಕಳ ಕಳ್ಳತನ ಪ್ರಕರಣಗಳು ವರದಿಯಾಗಿಲ್ಲ. ನಾಗರಿಕರು ಅಧಾರವಿಲ್ಲದ ಗಾಳಿಸುದ್ದಿ, ವದಂತಿಗಳಿಗೆ ಕಿವಿಗೊಡಬಾರದು. ಯಾರೆ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ತಿಳಿಸಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಇತ್ತೀಚೆಗೆ ರಾಜ್ಯದ ಕೆಲವು ಕಡೆ ಮಕ್ಕಳ ಕಳ್ಳರ ಗ್ಯಾಂಗ್ ರಾಜ್ಯಕ್ಕೆ ಬಂದಿದೆ. ಮಕ್ಕಳನ್ನು ಅಪಹರಿಸಲಾಗುತ್ತಿದೆ ಎಂಬ ತಪ್ಪು ಮಾಹಿತಿ, ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಭಯದ ವಾತವರಣ ಸೃಷ್ಠಿಸಲಾಗಿದೆ. ಅಲ್ಲದೆ ಕೆಲವಡೆ ಅಪರಿಚಿತ, ಅನುಮಾನಸ್ಪದವಾಗಿ ಕಂಡುಬಂದ ಅಮಾಯಕರನ್ನು ಮಕ್ಕಳ ಕಳ್ಳರೆಂದು ಭಾವಿಸಿ ನಾಗರಿಕರು ಹಲ್ಲೆ ಮಾಡಿರುವ ಕುರಿತು ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಇದೇ ರೀತಿಯಲ್ಲಿ ಅನುಮಾನಿಸಿ ರಾಜಸ್ಥಾನ ಮೂಲದ ಅಮಾಯಕನ ಮೇಲೆ ಜನರ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿರುವುದು ಸಹ ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನ ಪ್ರಕರಣಗಳು ವರದಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವಿಷಯಗಳು ಕುಚೇಷ್ಟೆಯ ಗಾಳಿಸುದ್ದಿಗಳಾಗಿದ್ದು, ಇವುಗಳಲ್ಲಿ ಯಾವುದೇ ಸತ್ಯಾಂಶವಿರುವುದಿಲ್ಲ. ಯಾವುದೇ ವ್ಯಕ್ತಿಯ ಪೂರ್ವಪರ ವಿಚಾರಸದೇ ಅನುಮಾನದ ಕಾರಣಕ್ಕಾಗಿ ಹಲ್ಲೆ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ಅನುಮಾನ ದೃಷ್ಠಿಯಿಂದ ಯಾರ ಮೇಲಾದರೂ ಹಲ್ಲೆ ಮಾಡಿದ್ದಲ್ಲಿ ಗಾಳಿಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತವಾಗಿ ರವಾನಿಸುವವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು.
ನಾಗರಿಕರು ವದಂತಿ, ಗಾಳಿಸುದ್ದಿಗಳಿಗೆ ಕಿವಿಗೊಡಬಾರದು. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ನಿಯಂತ್ರಣ ಕೊಠಡಿ, ಆಯಾ ಸರಹದ್ದಿನ ಬೀಟ್ ಸಿಬ್ಬಂದಿಗೆ ಕರೆ ಮಾಡಿ ತಿಳಿಸಬೇಕು. ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿ ಕ್ರಮ ವಹಿಸಲಿದ್ದಾರೆ. ನಾಗರಿಕರು ಯಾವುದೇ ಮಾಹಿತಿ ನೀಡಲು ಪೊಲೀಸ್ ಅಧೀಕ್ಷಕರು, ದೂರವಾಣಿ ಸಂ: 08226-222243 ಮೊ: 9480804601, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 08226-225979 ಮೊ: 9480804602, ಡಿ.ಎಸ್.ಪಿ ಚಾಮರಾಜನಗರ 08226-222090 ಮೊ: 9480804620, ಡಿ.ಎಸ್.ಪಿ ಕೊಳ್ಳೇಗಾಲ 08224-252840 ಮೊ: 9480804621, ಜಿಲ್ಲಾ ನಿಯಂತ್ರಣ ಕೊಠಡಿ 08226-222383 ಮೊ: 9480804600 ಸಂಪರ್ಕಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

ಮೇ. 26ರಂದು ನೇರ ಫೋನ್ ಇನ್ ಕಾರ್ಯಕ್ರಮ

ಚಾಮರಾಜನಗರ, ಮೇ. 25 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಮೇ 26ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಪಿ ಪತ್ತೆಗೆ ಮಾಹಿತಿ ನೀಡಲು ಮನವಿ 

ಚಾಮರಾಜನಗರ, ಮೇ. 25 :- ನಗರದ ನ್ಯಾಯಾಲಯಕ್ಕೆ ಕರೆತಂದು ಬಳಿಕ ಮೈಸೂರಿಗೆ ಕರೆದೊಯ್ಯುವ ವೇಳೆ ಪೊಲೀಸರ ಬೆಂಗಾವಲಿನಿಂದ ತಪ್ಪಿಸಿಕೊಂಡಿರುವ ಆರೋಪಿ ರಫೀಕ್ ಅಲಿಯಾಸ್ ಚುಮ್ಟಿ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ರಫೀಕ್ ಮುವ್ವತ್ತಾರು ವರ್ಷ ವಯಸ್ಸಿನವನಾಗಿದ್ದು, ಹೋಟೇಲ್ ವ್ಯಾಪಾರ ನಡೆಸುವ ವ್ಯಕ್ತಿಯಾಗಿರುತ್ತಾನೆ. ಈತನ ಮನೆ ನಂಬರ್ 84, ನಾಲ್ಕನೇ ವಾರ್ಡ್, ಚಾಮರಾಜನಗರ ಟೌನ್ ಆಗಿರುತ್ತದೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಚಾಮರಾಜನಗರ ದೂರವಾಣಿ ಸಂ: 08226-222243, ಪಟ್ಟಣ ಪೊಲೀಸ್ ಠಾಣೆ ಚಾಮರಾಜನಗರ 08226-222047 ಮೊ: 9480804645, ಪೊಲೀಸ್ ಕಂಟ್ರೋಲ್ ರೂಂ ಚಾಮರಾಜನಗರ 08226-226383 ಗೆ ಕರೆ ಮಾಡುವಂತೆ ಪಟ್ಟಣ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
 






No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು