Friday, 1 June 2018

(01-06-2018) ಜೂ. 8ರಂದು ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ: ಬೆ. 7ರಿಂದ ಸಂ. 5ರವರೆಗೆ ಮತದಾನ


ಜೂ. 8ರಂದು ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ:
ಬೆ. 7ರಿಂದ ಸಂ. 5ರವರೆಗೆ ಮತದಾನ

ಚಾಮರಾಜನಗರ, ಜೂ. 01 - ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ದಿನಾಂಕ 08.06.2018 ರಂದು ಮತದಾನ ನಡೆಯಲಿದ್ದು, ಮತದಾನದ ಅವಧಿಯನ್ನು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತ ಶಿಕ್ಷಕ ಮತದಾರರು ಮಾತ್ರ ಮತ ಚಲಾಯಿಸಬಹುದಾಗಿರುತ್ತದೆ. ಕೊಳ್ಳೇಗಾಲ ತಾಲ್ಲೂಕಿನ ಕಸಬಾ ಮತ್ತು ಪಾಳ್ಯ ಹೋಬಳಿ ವ್ಯಾಪ್ತಿಯ ಮತದಾರರು ಕೊಳ್ಳೇಗಾಲದ ತಾಲ್ಲೂಕು ಕಚೇರಿ, ಹನೂರು ತಾಲ್ಲೂಕಿನ ಹನೂರು, ರಾಮಾಪುರ ಮತ್ತು ಲೊಕ್ಕನಹಳ್ಳಿ ವ್ಯಾಪ್ತಿಯ ಮತದಾರರು ಹನೂರಿನ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಮತ ಚಲಾಯಿಸಬಹುದಾಗಿರುತ್ತದೆ. ಹಾಗೂ ಉಳಿದಂತೆ ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ಮತದಾರರು ಆಯಾ ತಾಲ್ಲೂಕು ಕಚೇರಿಗಳಲ್ಲಿ ಸ್ಥಾಪಿತವಾಗಿರುವ ಮತಗಟ್ಟೆಗಳಲ್ಲಿ ಮತದಾನ ಮಾಡಬಹುದಾಗಿರುತ್ತದೆ.
ಭಾರತ ಚುನಾವಣಾ ಆಯೋಗವು ಮಾನ್ಯ ಪ್ರಾದೇಶಿಕ ಆಯುಕ್ತರು, ಮೈಸೂರು ಅವರನ್ನು ದಕ್ಷಿಣ ಶಿಕ್ಷಕರ ಕ್ಷೇತ್ರ (ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ) ಚುನಾವಣಾಧಿಕಾರಿಗಳಾಗಿ ಹಾಗೂ ಜಿಲ್ಲಾಧಿಕಾರಿಗಳು, ಚಾಮರಾಜನಗರ ಜಿಲ್ಲೆ ಅವರನ್ನು ಚಾಮರಾಜನಗರ ಜಿಲ್ಲೆಗೆ ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿರುತ್ತದೆ.
ದಿನಾಂಕ 12.05.2018ರಂದು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿದ್ದು, ದಿನಾಂಕ 15.05.2018 ರಿಂದ 15.06.2018ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 05 ಮತಗಟ್ಟೆಗಳಿದ್ದು  ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲದ ತಾಲ್ಲೂಕು ಕಚೇರಿ ಹಾಗೂ ಹನೂರಿನ ವಿಶೇಷ ತಹಶೀಲ್ದಾರ್ ಕಚೇರಿಯಲ್ಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಈ ಎಲ್ಲಾ 05 ಮತಗಟ್ಟೆಗಳಲ್ಲಿ ಒಟ್ಟು 1899 ಅರ್ಹ ಶಿಕ್ಷಕ ಮತದಾರರಿರುತ್ತಾರೆ ಎಂದು ಅವರು ತಿಳಿಸಿದ್ದಾರೆ. 

ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ:
ಮತದಾನ ಕೇಂದ್ರಗಳ ವಿವರ

ಚಾಮರಾಜನಗರ, ಜೂ. 01- ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ಜೂನ್ 8ರಂದು ಮತದಾನ ನಡೆಯಲಿದ್ದು, ಮತದಾನಕ್ಕಾಗಿ ಜಿಲ್ಲೆಯ 5 ತಾಲೂಕು ಕೇಂದ್ರಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
   ಗುಂಡ್ಲುಪೇಟೆ ತಾಲೂಕು ಕಚೇರಿಯ ಮಿನಿ ವಿಧಾನಸೌಧದ ನೆಲಮಹಡಿಯಲ್ಲಿರುವ ಮೀಟಿಂಗ್ ಹಾಲ್ ಭಾಗದ ಸಂಖ್ಯೆ 1, ಚಾಮರಾಜನಗರ ತಾಲೂಕು  ಕಚೇರಿಯ ಮಿನಿ ವಿಧಾನಸೌಧದ ನೆಲಮಹಡಿಯಲ್ಲಿರುವ ಮೀಟಿಂಗ್ ಹಾಲ್ ಭಾಗದ ಸಂಖ್ಯೆ 2, ಯಳಂದೂರು ತಾಲೂಕು ಕಚೇರಿಯ ನೆಲಮಹಡಿಯಲ್ಲಿರುವ ಮಿನಿ ವಿಧಾನಸೌಧದ ಮೀಟಿಂಗ್ ಹಾಲ್ ಭಾಗದ ಸಂಖ್ಯೆ 3, ಕೊಳ್ಳೇಗಾಲ ತಾಲೂಕು ಕಚೇರಿಯ ನೆಲಮಹಡಿಯಲ್ಲಿರುವ ಮಿನಿ ವಿಧಾನಸೌಧದ ಮೀಟಿಂಗ್ ಹಾಲ್ ಭಾಗದ ಸಂಖ್ಯೆ 4 (ಕೊಳ್ಳೇಗಾಲ ತಾಲೂಕು ಕಸಬಾ ಹೋಬಳಿ ಮತ್ತು ಪಾಳ್ಯ ಹೋಬಳಿ) ಹಾಗೂ ಕೊಳ್ಳೇಗಾಲ (ಹನೂರು)ದ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಭಾಗ ಸಂಖ್ಯೆ 5ರ ಹನೂರು ತಾಲೂಕಿನ ರಾಮಾಪುರ ಮತ್ತು ಲೊಕ್ಕನಹಳ್ಳಿ ಹೋಬಳಿಯ ಶಿಕ್ಷಕ ಮತದಾರರು ಮತ ಚಲಾಯಿಸಬಹುದು.
ಮತದಾನ ಪ್ರಕ್ತಿಯೆಯಲ್ಲಿ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತ ಶಿಕ್ಷಕರು ಮಾತ್ರ ಮತದಾನದಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತಾಲೂಕು ಮಟ್ಟದ ತನಿಖಾ ತಂಡದಿಂದ ವಿಶ್ವ ತಂಬಾಕುರಹಿತ ದಿನ ಆಚರಣೆ 
ಚಾಮರಾಜನಗರ, ಜೂ. 01  ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ಕೋಟ್ಪಾ – 2003ರ ತಾಲೂಕು ಮಟ್ಟದ ತನಿಖಾ ತಂಡದಿಂದ ವಿಶ್ವ ತಂಬಾಕು ದಿನ ಕುರಿತು ನಗರದ ತಾಲೂಕು ಕಚೇರಿಯಲ್ಲಿ ನಿನ್ನೆ (ಮೇ 31) ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜನಗರ ತಾಲೂಕು ತಹಸೀಲ್ದಾರ್ ಟಿ. ರಮೇಶ್ ಬಾಬು ಅವರು ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ ತಂಬಾಕು ಸೇವನೆ ಹೃದಯಕ್ಕೆ ಹಾನಿ ಎಂಬ ಘೋಷವಾಕ್ಯದೊಂದಿಗೆ ವಿಶ್ವ ತಂಬಾಕು ರಹಿತ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ತಂಬಾಕು ತ್ಯಜಿಸಲು ನಾಗರಿಕರಿಗೆ ಹಾಗೂ ಯುವಜನರಿಗೆ ಅರಿವು ಮೂಡಿಸಬೇಕಾಗಿದೆ. ಅಲ್ಲದೆ ಜನಸಂದಣಿ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ತಾಲೂಕು ಮಟ್ಟದ ತನಿಖಾ ತಂಡದ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರು ಕೋಟ್ಪಾ ಕಾಯ್ದೆ ಕುರಿತು ವಿವರವಾಗಿ ಮಾತನಾಡಿ ಈ ಕಾಯಿದೆಯಡಿ ಸೆಕ್ಷನ್ 4ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಸೆಕ್ಷನ್ 21ರ ಅಡಿಯಲ್ಲಿ 200 ರೂ.ಗಳ ದಂಡ ವಿಧಿಸಲಾಗುತ್ತದೆ ಎಂದರು.
ಸೆಕ್ಷನ್ 5ರನ್ವಯ ತಂಬಾಕು ಸಂಬಂಧ ಜಾಹಿರಾತು ಪ್ರಚಾರಕ್ಕೆ ನಿಷೇಧ ಮಾಡಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಸೆಕ್ಷನ್ 22ರ ಅಡಿಯಲ್ಲಿ 1000 ರೂ.ವರೆಗೆ ದಂಡ ಹಾಗೂ ಸೆರೆವಾಸ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ಸೆಕ್ಷನ್ 6ಎ ಅನ್ವಯ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಖರೀದಿಗಳ ಮೇಲೆ ನಿಷೇಧ ಹೇರಲಾಗಿದೆ. ಸೆಕ್ಷನ್ 6ಬಿ ಅನ್ವಯ ಶಾಲಾ ಕಾಲೇಜುಗಳ 100 ಗಜಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ತಪ್ಪಿದಲ್ಲಿ ಸೆಕ್ಷನ್ 24ರಡಿಯಲ್ಲಿ ರೂ.200ಗಳ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಸೆಕ್ಷನ್ 7ರ ಅನ್ವಯ ತಂಬಾಕು ಉತ್ಪನ್ನ ಪ್ಯಾಕೆಟ್‍ಗಳ ಎರಡು ಬದಿಯಲ್ಲಿ ಶೇ.85ರಷ್ಟು ಆರೋಗ್ಯ ಮುನ್ನೆಚ್ಚರಿಕೆ ಚಿತ್ರಣ ಅಳವಡಿಸುವುದನ್ನು ಉಲ್ಲಂಘಿಸಿದಲ್ಲಿ ಸೆಕ್ಷನ್ 20ರ ಅಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಮಾಲೀಕ ಅಥವಾ ವಾರಸುದಾರರಿಗೆ ಮೊದಲ ಬಾರಿ 100 ರೂ. ದಂಡ, ಒಂದು ವರ್ಷ ಸೆರೆವಾಸ. ತದನಂತರ ರೂ.3000 ದಂಡ, 2 ವರ್ಷ ಸೆರೆವಾಸ ಅಥವಾ ಈ ಎರಡನ್ನೂ ವಿಧಿಸಬಹುದು ಎಂದು ಡಾ. ಶ್ರೀನಿವಾಸ್ ಅವರು ತಿಳಿಸಿದರು.
ಸಭೆಯಲ್ಲಿ ಕಾರ್ಮಿಕ ಕಲ್ಯಾಣಾಧಿಕಾರಿಗಳಾದ ವನಜಾಕ್ಷಿ, ಪಟ್ಟಣ ಪೊಲೀಸ್ ಇಲಾಖೆಯ ಗ್ರಾಮಾಂತರ ಪಿಎಸ್‍ಐ ಕಿರಣ್ ಕುಮಾರ್, ಶಿಕ್ಷಣ ಇಲಾಖೆಯ ಬಿಆರ್‍ಪಿ ಎಂಎಸ್. ಮಲ್ಲಿಕಾರ್ಜುನಪ್ಪ, ಆರೋಗ್ಯ ನಿರೀಕ್ಷಕರಾದ ಮಂಜು, ಕ್ಷೇತ್ರ ಶಿಕ್ಷಣ ಆರೋಗ್ಯಾಧಿಕಾರಿಗಳಾದ ಲೀಲಾವತಿ, ಆರೋಗ್ಯ ಸಹಾಯಕರಾದ ನಾಗರಾಜು, ನವೀನ್ ಕುಮಾರ್ ಹಾಗೂ ಇತರರು ಹಾಜರಿದ್ದರು.
ಸಭೆಯ ನಂತರ ತಾಲೂಕು ಮಟ್ಟದ ತನಿಖಾ ದಳದಿಂದ ನಗರದ ಕೆ ಎಸ್ ಆರ್ ಟಿಸಿ ಮುಖ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ಸಂತೆಮರಹಳ್ಳಿ ವೃತ್ತಗಳಲ್ಲಿನ ಹೋಟೆಲ್, ಬೇಕರಿ, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ವಿಶ್ವ ತಂಬಾಕು ರಹಿತ ದಿನದ ಕುರಿತು ಅರಿವು ಮೂಡಿಸಲಾಯಿತು.

 ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ:
ಅರ್ಜಿ ಆಹ್ವಾನ

ಚಾಮರಾಜನಗರ, ಜೂ. 01 :- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ 2018-19ನೇ ಸಾಲಿಗೆ ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ ಮತ್ತು 3ಬಿ ಜನಾಂಗಕ್ಕೆ ಸೇರಿದವರಾಗಿರಬೇಕು. ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗೆ 31 ವರ್ಷ ವಯೋಮಿತಿ ಇರಬೇಕು. ಪ್ರವರ್ಗ 2ಎ, 3ಎ ಮತ್ತು 3ಬಿಗೆ ಸೇರಿದವರಿಗೆ 30 ವರ್ಷ ವಯೋಮಿತಿ ನಿಗದಿಪಡಿಸಿದೆ.
ಅಭ್ಯರ್ಥಿಗಳು ಕಾನೂನು ಪದವೀಧರರಾಗಿದ್ದು, ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೋಂದಾಯಿಸಿರಬೇಕು. ಒಂದು ವೇಳೆ ತರಬೇತಿಗೆ ಆಯ್ಕೆಯಾದಲ್ಲಿ ಕೂಡಲೇ ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೊಂದಾಯಿಸಬೇಕು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಾನೂನು ತರಬೇತಿಗೆ ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿಂತ ಮೊದಲೆ 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪಡೆದಿರಬೇಕು. ಪ್ರವರ್ಗ 1ರ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷಗಳು ಹಾಗೂ ಉಳಿದವರಿಗೆ ರೂ.2.50 ಲಕ್ಷಗಳ ವಾರ್ಷಿಕ ಆದಾಯ ಮಿತಿ ಇರುತ್ತದೆ.
ತರಬೇತಿಯ ಅವಧಿ 4 ವರ್ಷಗಳಾಗಿದ್ದು ಮಾಹೆಯಾನ ರೂ. 4000ಗಳ ತರಬೇತಿ ಭತ್ಯೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಯು ಮಧ್ಯಂತರದಲ್ಲಿ ತರಬೇತಿ ಬಿಟ್ಟಲ್ಲಿ ಸರ್ಕಾರದಿಂದ ಮಂಜೂರಾದ ಹಣವನ್ನು ವಾಪಸ್ಸು ಪಾವತಿಸಬೇಕಾಗುತ್ತದೆ.
ಅರ್ಜಿ ಸÀಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿಯೊಂದಿಗೆ ತಹಶೀಲ್ದಾರರಿಂದ ಪಡೆದ ಜಾತಿ ಹಾಗೂ ಆದಾಯ ದೃಢೀಕರಣ ಪತ್ರ, ಕಾನೂನು ಪದವಿ ಅಂಕಪಟ್ಟಿಗಳು, ಪದವಿ ಪತ್ರಗಳು, ಬಾರ್ ಕೌನ್ಸಿಲ್ ನೊಂದಣಿ ಪತ್ರದ ದೃಢೀಕೃತ ಪ್ರತಿಗಳು ಹಾಗೂ ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರಗಳನ್ನು ಸಲ್ಲಿಸಬೇಕು. ತರಬೇತಿಯನ್ನು ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರು ಅಥವಾ 20 ವರ್ಷದಿಂದ ವಕೀಲ ವೃತ್ತಿ ನಡೆಸುತ್ತಿರುವವರಿಂದ ಪಡೆಯಬೇಕಾಗಿರುತ್ತದೆ.
ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಲು ಜೂನ್ 30 ಕಡೆಯ ದಿನ ಎಂದು ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬೀಡಿ ಕಾರ್ಮಿಕರಿಗೆ ಕಟ್ಟಡ ನಿರ್ಮಾಣಕ್ಕೆ ಧನಸಹಾಯ

ಚಾಮರಾಜನಗರ, ಜೂ. 01 –  ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ವತಿಯಿಂದ ಜಿಲ್ಲೆಯ ನೋಂದಾಯಿತ ಬೀಡಿ ಕಾರ್ಮಿಕರಿಗೆ ಅವರ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ರೂ. 1,50,000ಗಳ ಧನಸಹಾಯ ನೀಡಲಾಗÀುತ್ತದೆ.
2018-19ರ ಆರ್‍ಐಎಚ್‍ಎಸ್ ಯೋಜನೆಯಲ್ಲಿ ಕಾರ್ಮಿಕರ ಹೆಸರಿನಲ್ಲಿ ನೋಂದಾಯಿಸಿದ ಸ್ವಂತ ಜಾಗ ಇರಬೇಕು. ಬೀಡಿ ಕಾರ್ಮಿಕರಿಗೆ ಅಥವಾ ಅವರ ಅವಲಂಬಿತರಿಗೆ ಸ್ವಂತ ಮನೆ ಇರಬಾರದು.
ಹೆಚ್ಚಿನ ಮಾಹಿತಿಗೆ ಬೀಡಿ ಕಾರ್ಮಿಕರು ನಗರದ ಗಾಳೀಪುರದಲ್ಲಿರುವ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಚಿಕಿತ್ಸಾಲಯದ ವೈದಾಧಿಕಾರಿಗಳಾದ ಡಾ. ಹೇಮಂತ್ ಕುಮಾರ್ (ಮೊ. 9035043510) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಗುಂಡ್ಲುಪೇಟೆ : ಡಿಪೆÇ್ಲಮಾ ಇನ್‍ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜೂ. 01 :– ಗುಂಡ್ಲುಪೇಟೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ  (ಜಿಟಿಟಿಸಿ) ಕೇಂದ್ರದಲ್ಲಿ  ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋಸ್ರ್Àನ ಪ್ರಥಮ ಸೆಮಿಸ್ಟರ್ ತರಬೇತಿಗೆ  ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಕೇಂದ್ರದಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 8ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ. ದುಂದಾಸನಪುರ, ಹೊಸೂರು ರಸ್ತೆ, ಗುಂಡ್ಲುಪೇಟೆ (ದೂರವಾಣಿ ಸಂಖ್ಯೆ 08229–222344, ಮೊಬೈಲ್ 9880800692, 9945697513) ಇಲ್ಲಿ ಸಂಪರ್ಕಿಸಿ ಪಡೆಯುವಂತÉ  ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು