Friday, 1 June 2018

(21-05-2018) ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ವಿಡಿಯೋ ಸರ್ವೈಲೆನ್ಸ್ ತಂಡ ರಚನೆ, ಮೇ. 23 ರಿಂದ ಇಂದ್ರ ಧನುಷ್ ಅಭಿಯಾನ : ಸಹಕಾರ ನೀಡಲು ತಹಸೀಲ್ದಾರ್ ಮನವಿ


ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ವಿಡಿಯೋ ಸರ್ವೈಲೆನ್ಸ್ ತಂಡ ರಚನೆ

ಚಾಮರಾಜನಗರ, ಮೇ. 21 – ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಚುನಾವಣಾ ಅಪರಾಧಗಳನ್ನು ತಡೆಯಲು ಹಾಗೂ ಈ ಸಂಬಂಧ ದೂರುಗಳ ಬಗ್ಗೆ ಕ್ರಮ ವಹಿಸಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ವಿಡಿಯೋ ಸರ್ವೈಲೆನ್ಸ್ ತಂಡಕ್ಕೆ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ. 

ತಂಡದ ಮೇಲ್ವಿಚಾರಕರಾಗಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿಗೆ ಕೃಷಿ ಇಲಾಖೆಯ ಕಚೇರಿ ಅಧೀಕ್ಷಕರಾದ ಸುಧೀಂದ್ರ ಭಾರದ್ವಾಜ್(ಮೊ. 8892221166) ಹಾಗೂ ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿಗೆ ಕೊಳ್ಳೇಗಾಲ ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ಕಚೇರಿ ಅಧೀಕ್ಷಕರಾದ ಗಿರೀಶ್ (ಮೊ. 9008253599) ಅವರನ್ನು ನೇಮಕ ಮಾಡಲಾಗಿದೆ. ಪ್ರತಿ ತಂಡದಲ್ಲಿ ವಿಡಿಯೋಗ್ರಾಫರ್ ಇರಲಿದ್ದಾರೆ. 

ನೇಮಕ ಮಾಡಿರುವ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ತ್ವರಿತವಾಗಿ ನಿಯಮಾನುಸಾರ ಪ್ರಕರಣ ದಾಖಲಿಸಿ ಕ್ರಮ ವಹಿಸಬೇಕು. ಯಾವುದೇ ಚುನಾವಣಾ ಅಪರಾಧ, ಅಕ್ರಮಗಳು ನಡೆಯದಂತೆ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ. 

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಫ್ಲೈಯಿಂಗ್ ಸ್ಕ್ಯಾಡ್ ತಂಡ ರಚನೆ

ಚಾಮರಾಜನಗರ, ಮೇ. 21 – ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಚುನಾವಣಾ ಅಪರಾಧಗಳನ್ನು ತಡೆಯಲು ಹಾಗೂ ಈ ಸಂಬಂಧ ದೂರುಗಳ ಬಗ್ಗೆ ಕ್ರಮ ವಹಿಸಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಫ್ಲೈಯಿಂಗ್ ಸ್ಕ್ಯಾಡ್ ತಂಡಕ್ಕೆ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕು: ಶಿವರಾಮ್ ಎ.ಸಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ ಗುಂಡ್ಲುಪೇಟೆ(ಮೊ. 9448414564), ಚಿನ್ನಸ್ವಾಮಿ ಹೆಡ್ ಕಾನ್ಸ್‍ಟೇಬಲ್(ಮೊ.8496828188), ವಾದಿರಾಜ್ ಎಕ್ಸೈಜ್ ಇನ್ಸ್‍ಪೆಕ್ಟರ್(ಮೊ.9663012000). 

ಚಾಮರಾಜನಗರ ತಾಲೂಕು: ಶಶಿಧರ್ ಎಚ್ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕೊಳ್ಳೇಗಾಲ(ಮೊ. 9844364293), ಮಹದೇವಯ್ಯ ಹೆಡ್ ಕಾನ್ಸ್‍ಟೇಬಲ್(ಮೊ. 9481026799), ಉಮಾಶಂಕರ್ ಎಕ್ಸೈಜ್ ಇನ್ಸ್‍ಪೆಕ್ಟರ್(ಮೊ. 9164453416). 

ಯಳಂದೂರು ತಾಲೂಕು: ಸೋಮಶೇಖರ್ ಎಂ.ಬಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಳಂದೂರು(ಮೊ. 8660744319), ಕೃಷ್ಣಮೂರ್ತಿ ಹೆಡ್ ಕಾನ್ಸ್‍ಟೇಬಲ್ (ಮೊ. 9986222702), ಶೇಖರ್ ಎಕ್ಸೈಜ್ ಇನ್ಸ್‍ಪೆಕ್ಟರ್(ಮೊ. 9448309499).

ಕೊಳ್ಳೇಗಾಲ ತಾಲೂಕು: ರಮೇಶ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೆಆರ್‍ಐಡಿಎಲ್ ಉಪವಿಭಾಗ ಕೊಳ್ಳೇಗಾಲ (ಮೊ. 9449863046), ವೆಂಕಟಾಚಲ ಹೆಡ್ ಕಾನ್ಸ್‍ಟೇಬಲ್ (ಮೊ. 9741930599), ಅಬೂಬಕರ್ ಎಕ್ಸೈಜ್ ಇನ್ಸ್‍ಪೆಕ್ಟರ್(ಮೊ. 9845802345).

ಹನೂರು ತಾಲೂಕು: ಉಮೇಶ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೆಸಿಸಿಐ ಉಪವಿಭಾಗ ಕೊಳ್ಳೇಗಾಲ (ಮೊ. 9611506415). ಮರಿಸ್ವಾಮಿ ಹೆಡ್ ಕಾನ್ಸ್ ಟೇಬಲ್ (ಮೊ. 7899884829), ಲೋಹಿತ್ ಎಕ್ಸೈಜ್ ಇನ್ಸ್‍ಪೆಕ್ಟರ್(ಮೊ. 9901757109).

ನೇಮಕ ಮಾಡಿರುವ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ತ್ವರಿತವಾಗಿ ನಿಯಮಾನುಸಾರ ಪ್ರಕರಣ ದಾಖಲಿಸಿ ಕ್ರಮ ವಹಿಸಬೇಕು. ಅಲ್ಲದೆ ಯಾವುದೇ ಚುನಾವಣಾ ಅಪರಾಧ, ಅಕ್ರಮಗಳು ನಡೆಯದಂತೆ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳಬೇಕೆಂದು ಸೂಚಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ. 

ಮೇ. 23 ರಿಂದ ಇಂದ್ರ ಧನುಷ್ ಅಭಿಯಾನ : ಸಹಕಾರ ನೀಡಲು ತಹಸೀಲ್ದಾರ್ ಮನವಿ 

ಚಾಮರಾಜನಗರ, ಮೇ. 21- ಮಕ್ಕಳು ಹಾಗೂ ಗರ್ಭಿಣೀಯರಲ್ಲಿ ರೋಗನಿರೋಧಕ ಲಸಿಕೆ ನೀಡುವ ಮೊದಲ ಸುತ್ತಿನ ಇಂದ್ರ ಧನುಷ್ ಅಭಿಯಾನ (ಗ್ರಾಮ ಸ್ವರಾಜ್ ಅಭಿಯಾನ)ವನ್ನು ಮೇ 23 ರಿಂದ 26ರವರೆಗೆ ಚಾಮರಾಜನಗರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲ ಇಲಾಖೆಗಳು ಸಹಕರಿಸುವಂತೆ ತಹಸೀಲ್ದಾರ್ ಬಿ. ರಮೇಶ್ ಬಾಬು ಮನವಿ ಮಾಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಇಂದು ನಡೆದ ತೀವ್ರ ಇಂದ್ರ ಧÀನುಷ್ ಅಭಿಯಾನ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗರ್ಭಿಣಿಯರಲ್ಲಿ ಧನುರ್ವಾಯು ಹಾಗೂ ಮಕ್ಕಳಲ್ಲಿ ಮಾರಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ರೋಗ ನಿರೋಧಕ ಲಸಿಕೆಯನ್ನು ತಾಲೂಕಿನ ಆಯ್ದ ಗ್ರಾಮಗಳಲ್ಲಿ ನೀಡುವ ಸಲುವಾಗಿ ಮೊದಲ ಸುತ್ತಿನ ತೀವ್ರ ಇಂದ್ರ ಧನುಷ್ ಅಭಿಯಾನವನ್ನು ಆರೋಗ್ಯ ಇಲಾಖೆ ವತಿಯಿಂದ ನಡೆಸಲಾಗುತ್ತದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಮಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾನವ ಸಂಪನ್ಮೂಲ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಕೇಂದ್ರಗಳಲ್ಲಿ ತೆರೆಯಲು ಸ್ಥಳಾವಕಾಶ ನೀಡಬೇಕು. ಸೆಸ್ಕ್ ಅಧಿಕಾರಿಗಳು ಮೇ 23 ರಿಂದ 26ರವರೆಗೆ ನಿರಂತರ ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನ ಹಾಗೂ ದುರ್ಗಮ ಪ್ರದೇಶದಲ್ಲಿ ಆರೋಗ್ಯ ಇಲಾಖೆ ವಾಹನಗಳ ಓಡಾಟಕ್ಕೆ ಅನುಮತಿಸಬೇಕು. ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಭಿಯಾನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ತಹಸೀಲ್ದಾರ್ ರಮೇಶ್ ಬಾಬು ಕೋರಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ ತಾಲೂಕಿನ ಚಿಕ್ಕಮೋಳೆ, ದೊಳ್ಳಿಪುರ, ಗೌತಮ ಕಾಲೋನಿ, ಕೋಟೆ ತಿಟ್ಟು, ಕರಡಿಹಳ್ಳ (ಹೆಚ್.ಡಿ. ಫಾರೆಸ್ಟ್), ಕಾನಿಕೆರೆ, ಕುಂಬೇಶ್ವರ ಕಾಲೋನಿ, ಕಾಳೀಕಾಂಬ ಕಾಲೋನಿ, ಕೋಡಿ ಉಗನೆ, ಕಾವುದವಾಡಿ, ಹೊಂಗನೂರು, ಸುತ್ತೂರು, ಉತ್ತುವಳ್ಳಿ, ಮಲ್ಲಯ್ಯನಪುರ, ಮುಕ್ಕಡಹಳ್ಳಿ, ಹೆಚ್. ಮೂಕಳ್ಳಿ ಗ್ರಾಮಗಳಲ್ಲಿ ಇಂದ್ರ ಧನುಷ್ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಆಯ್ದ ಗ್ರಾಮಗಳಲ್ಲಿ 127 ಗರ್ಭಿಣೀಯರು, 2 ವರ್ಷದವರೆಗಿನ 413 ಹಾಗೂ 5 ರಿಂದ 6 ವರ್ಷದವರೆಗಿನ 235 ಮಕ್ಕಳಿಗೆ ರೋಗ ನಿರೋಧಕ ಲಸಿಕೆ ನೀಡುವ ಅಂದಾಜು ಗುರಿ ಹೊಂದಲಾಗಿದೆ. ಇದಕ್ಕಾಗಿ 16 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿ ಮನೆಮನೆಗೆ ಭೇಟಿ ನೀಡಿ ಲಸಿಕೆ ಪಡೆಯದ ಗರ್ಭಿಣಿಯರು, ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿಸುವಲ್ಲಿ ಕೈಜೋಡಿಸಲಿದ್ದಾರೆ. ಮಹತ್ವದ ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಡಾ. ಶ್ರೀನಿವಾಸ್ ಮನವಿ ಮಾಡಿದರು.ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮೇ. 25ರಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಜಾಥಾ

ಚಾಮರಾಜನಗರ, ಮೇ. 21 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಮೇ 25ರಂದು ಆಚರಿಸಲಿರುವ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಬಳಿ ಜಾಥಾ ಹೊರಡಲಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ಸಹಾಯಧನ ಯೋಜನೆ ಪ್ರಯೋಜನಕ್ಕೆ ಹೆಸರು ನೊಂದಾಯಿಸಿ
ಚಾಮರಾಜನಗರ, ಮೇ. 21 - ತೋಟಗಾರಿಕೆ ಇಲಾಖೆ ವತಿಯಿಂದ 2018-19ನೇ ಸಾಲಿಗೆ ಫಲಾನುಭವಿ ಆಧಾರಿತ ಸಹಾಯಧನ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಆಸಕ್ತ ಬೆಳೆಗಾರರು, ರೈತರು ಯೋಜನೆ ಪ್ರಯೋಜನ ಪಡೆಯಲು ಹೆಸರು ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ.
ತೋಟಗಾರಿಕೆ ಬೆಳೆಗೆ ಸೂಕ್ಷ್ಮ ಹನಿ ನೀರಾವರಿ ಪದ್ಧತಿ ಅಳವಡಿಕೆ (ಡ್ರಿಪ್ ಇರಿಗೇಷನ್), ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಬಾಳೆ ಪ್ರದೇಶ ವಿಸ್ತರಣೆ, ಜೈವಿಕ ಕೀಟ, ಶಿಲಿಂದ್ರ ನಾಶಕ ಖರೀದಿಗೆ ಸಹಾಯಧನ, ಉತ್ತೇಜನ, ಜೇನು ಕೃಷಿ ಸಾಕಾಣಿಕೆ, ತರಕಾರಿ, ಹಣ್ಣಿನ ಬೆಳೆಗೆ ಪ್ಲಾಸ್ಟಿಕ್ ಹೊದಿಕೆ, ಕೃಷಿ ಹೊಂಡ, ಈರುಳ್ಳಿ ಶೇಖರಣಾ ಘಟಕ, ಪ್ಯಾಕ್ ಹೌಸ್, ಗ್ರೀನ್ ಹೌಸ್, ಶೇಡ್ ನೆಟ್, ಹಣ್ಣು ಮಾಗಿಸುವ ಘಟಕ, ಮಿನಿ ಟ್ರಾಕ್ಟರ್ ಪವರ್ ಟಿಲ್ಲರ್, ಗೇರು ಪ್ರದೇಶ ವಿಸ್ತರಣೆ, ಅಧಿಕ ಸಾಂದ್ರತೆ ಬಾಳೆ, ಟೊಮೇಟೋ, ಕಲ್ಲಂಗಡಿ ಬೆಳೆ ಪ್ರದೇಶ ವಿಸ್ತರಣೆ, ವಾಟರ್ ಟ್ಯಾಂಕರ್‍ಗೆ ಸಹಾಯಧನ ನೀಡಲಾಗುತ್ತದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊಸ ಹಣ್ಣಿನ ತೋಟದ ಬೆಳೆ ಪ್ರದೇಶ ವಿಸ್ತರಣೆ ಯೋಜನೆಯಡಿ ತೆಂಗು, ಮಾವು, ಸೀಬೆ, ಸಪೋಟ, ಬಾಳೆ, ನುಗ್ಗೆ, ನೆಲ್ಲಿಕಾಯಿ, ನೇರಳೆ ಇನ್ನಿತರ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯಧನ ಪಡೆಯಬಹುದು.
ಆಸಕ್ತ ರೈತರು ಪಹಣಿ, ಭಾವಚಿತ್ರ, ಚೆಕ್ ಬಂದಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿ, ಮೊಬೈಲ್ ಸಂಖ್ಯೆ, ಇನ್ನಿತರ ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯಲ್ಲಿ ಯೋಜನೆ ಪ್ರಯೋಜನ ಪಡೆಯಲು ಹೆಸರು ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕು ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗುಂಡ್ಲುಪೇಟೆ : ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕÀರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 21:– ಗುಂಡ್ಲುಪೇಟೆ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಂiÀiುತ್ತಿರುವ ಗುಂಡ್ಲುಪೇಟೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿಗೆ 5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳಿಗೆ ಸೇರಿದ ವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯ ಮೇಲ್ವಿಚಾರಕರು ಹಾಗೂ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಜೂನ್ 11ರೊಳಗೆ ಸಲ್ಲಿಸುವಂತೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾ.ನಗರ : ಹಿಂದುಳಿದ ವರ್ಗಗಳ ಮೆಟ್ರಿಕ್‍ಪೂರ್ವ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 21  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಚಾಮರಾಜನಗರ ತಾಲೂಕಿನಲ್ಲಿ ಬರುವ ಹಿಂದುಳಿದ ವರ್ಗಗಳ ಮೆಟ್ರಿಕ್‍ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ  ಆಹ್ವಾನಿಸಿದೆ.
ಮೆಟ್ರಿಕ್‍ಪೂರ್ವ ವಿದ್ಯಾರ್ಥಿಗಳಿಗೆ (5 ರಿಂದ 10ನೇ ತರಗತಿವರೆಗೆ) ಪ್ರವೇಶ ಲಭ್ಯ. ಉಚಿತ ವಸತಿ, ವೈದ್ಯಕೀಯ ಸೌಲಭ್ಯ, ಪಠ್ಯಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿ, ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು.
ಚಾಮರಾಜನಗರ ಪಟ್ಟಣದ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯ, ಕಾಗಲವಾಡಿ, ಅರಕಲವಾಡಿ, ವೆಂಕಟಯ್ಯನ ಛತ್ರದಲ್ಲಿ ಇರುವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಆಯಾ ನಿಲಯ ಮೇಲ್ವಿಚಾರಕರಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ (ದೂ.ಸಂ.08226-222180) ಮತ್ತು ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರದ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ (ದೂ.ಸಂ. 08226-222069) ಸಂಪರ್ಕಿಸುವಂತೆ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಮೇ. 21  ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮೇ 23 ರಿಂದ 28ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ಮೇ 23ರಂದು ಚಾಮರಾಜನಗರ, 24ರಂದು ಗುಂಡ್ಲುಪೇಟೆ, 25ರಂದು ಕೊಳ್ಳೇಗಾಲ, 26ರಂದು ಯಳಂದೂರು ಹಾಗೂ 28ರಂದು ಹನೂರು ತಾಲೂಕಿನಲ್ಲಿ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಯಳಂದೂರು : ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 21 :– ಯಳಂದೂರು ತಾಲೂಕು ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ಯಳಂದೂರು ಹಾಗೂ ಕೆಸ್ತೂರು ಮೆಟ್ರಿಕ್ ಪೂರ್ವ  ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿಗೆ 5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳಿಗೆ ಸೇರಿದ ವರ್ಗ-1, 2, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯ ಮೇಲ್ವಿಚಾರಕರಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 10ರೊಳಗೆ ಸಲ್ಲಿಸುವಂತೆ ಯಳಂದೂರು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು