Monday, 23 October 2017

7 ಕೋಟಿ ರೂ. ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗೆ ಸಂಸದ ಶಾಸಕರಿಂದ ಚಾಲನೆ,ಗ್ರೂಪ್ “ಡಿ” ನೌಕರರ ನೇಮಕಾತಿಗೊಳಿಸಿ ಆದೇಶಿಸಲು ಕೋರಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಮೌನ ಪ್ರತಿಭಟನೆ (22-10-2017)

 7 ಕೋಟಿ ರೂ. ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗೆ ಸಂಸದ ಶಾಸಕರಿಂದ ಚಾಲನೆ  
 ಚಾಮರಾಜನಗರ, ಅ. 23- ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಅಭಿವೃದ್ಧಿಗಾಗಿ 7 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಇಂದು ಚಾಲನೆ ನೀಡಿದರು.


ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಉಳಿಕೆ ಅಭಿವೃದ್ಧಿ ಕೆಲಸಗಳಿಗೆ ಗುದ್ದಲಿ ಪೂಜೆಯನ್ನು ಗಣ್ಯರು ನೆರವೇರಿಸಿದರು.
ಇದೇ ವೇಳೆ ಕೈಗೊಳ್ಳಲಿರುವ ಕಾಮಗಾರಿ ಕುರಿತು ವಿವರ ನೀಡಿದ ಆರ್. ಧ್ರುವನಾರಾಯಣ ಅವರು ಚೈನ್ ಲಿಂಕ್ ಫೆನ್ಸಿಂಗ್ ಸಹಿತ 300 ಮೀ. ಉದ್ದದ ಸೀಟಿಂಗ್ ಗ್ಯಾಲರಿ, 600 ಮೀ. ಉದ್ದದ ಡಾಂಬರು ರಸ್ತೆ, 1620 ಮೀ. ಉದ್ದದ ಚರಂಡಿ ನಿರ್ಮಾಣ, 9 ಆರ್‍ಸಿಸಿ ಡೆಕ್ ಸ್ಲಾಬ್ ನಿರ್ಮಾಣ ಮಾಡಲಾಗುತ್ತದೆ. 250 ಮೀ. ಉದ್ದದ ರಿಟೈನಿಂಗ್ ವಾಲ್ ನಿರ್ಮಾಣವಾಗಲಿದೆ ಎಂದರು.
ಕ್ರೀಡಾಂಗಣಕ್ಕೆ ಆಕರ್ಷಕ ಆರ್ಚ್ ನಿರ್ಮಾಣ ಮಾಡಲಾಗುತ್ತದೆ. ಪೆವಿಲಿಯನ್ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು. ಕ್ರೀಡಾಂಗಣದ ಭದ್ರತಾ ಕೊಠಡಿ ಸಹ ಇದೇ ಅನುದಾನದಲ್ಲಿ ನಿರ್ಮಿಸಿ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಧ್ರುವನಾರಾಯಣ ತಿಳಿಸಿದರು.
ಕಾಮಗಾರಿ ಅವಧಿ 11 ತಿಂಗಳು ಇದ್ದು ಗುಣಮಟ್ಟದ ಕೆಲಸ ನಡೆಯಬೇಕು. ಜಿಲ್ಲಾ ಕೇಂದ್ರದ ಕ್ರೀಡಾಂಗಣವು ಅತ್ಯಂತ ಎಲ್ಲ ವ್ಯವಸ್ಥೆಗಳೊಂದಿಗೆ ಮೂಡಿಬರಬೇಕು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಧ್ರುವನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ ಕ್ರೀಡಾಂಗಣಕ್ಕೆ ಬಹುಮುಖ್ಯವಾದ ಈಜುಕೊಳ ನಿರ್ಮಾಣ ಮಾಡಲೇಬೇಕು. ಈ ಸಂಬಂಧ ಅಗತ್ಯ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕು. ಕ್ರೀಡಾಂಗಣದ ಸುತ್ತಲೂ ನೀರು ನಿಲ್ಲದೆ ಸರಾಗವಾಗಿ ಚರಂಡಿ ಮೂಲಕ ಹರಿದುಹೋಗಬೇಕು. ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಕಾಮಗಾರಿ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.
ನಗರ ಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಸದಸ್ಯರಾದ ರೇಣುಕ ಮಲ್ಲಿಕಾರ್ಜುನ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


                 ಅ. 27ರಂದು ಉದ್ಯೋಗ ಮೇಳ 

ಚಾಮರಾಜನಗರ, ಅ. 23 - ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮಾನವ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಹಿಂದೂ ಗ್ಲೋಬಲ್ ಸಲ್ಯೂಷನ್, ಯುರೇಕಾ ಫೋರ್ಬ್, ಫೆಡಲಿನ್ ಕಾರ್ಪೋರೇಟ್, ಎಂ.ಎನ್. ಈಗಲ್ ಟೆಕ್, ಎಲ್‍ಐಸಿ ಹಾಗೂ ಇತರೆ ಕಂಪನಿಗಳಿಂದ ಅಕ್ಟೋಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಹತೆಯುಳ್ಳ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ನೇರ ಸಂದರ್ಶನಕ್ಕೆ ತಮ್ಮ ಸ್ವ ವಿವರಗಳೊಡನೆ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿಗಳನ್ನು (ದೂ.ಸಂ. 08226-224430) ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಷನ್ 2025 : ಅ. 24ರಂದು ಸಲಹೆ ಅಭಿಪ್ರಾಯ ಮಂಡನೆಗೆ ಮಾಧ್ಯಮ ಪ್ರತಿನಿಧಿಗಳ ಸಭೆ 

ಚಾಮರಾಜನಗರ, ಅ. 23 :– ಮುಂದಿನ 2025ರ ವೇಳೆಗೆ ಕರ್ನಾಟಕದ ಸ್ವರೂಪ ಹೇಗಿರಬೇಕು ಯಾವ ಕ್ಷೇತ್ರದಲ್ಲಿ ಪ್ರಗತಿಯಾಗಲು ಏನು ಅಗತ್ಯವಿದೆ ಎಂಬ ಕರಡು ರೂಪಿಸುವ ದಿಸೆಯಲ್ಲಿ ಜಿಲ್ಲೆಯಿಂದಲೂ ಆಗಬೇಕಿರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಷನ್ 2025 ಡಾಕ್ಯುಮೆಂಟ್ ತಯಾರಿ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಸಭೆಯನ್ನು   ಅಕ್ಟೋಬರ್ 24ರಂದು ಮಧ್ಯಾಹ್ನ 12 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಸಭೆಗೆ ಜಿಲ್ಲೆಯ ಎಲ್ಲ ಮಾಧ್ಯಮ ಪ್ರತಿನಿಧಿಗಳು ಆಗಮಿಸಿ ವಿಷನ್ 2025 ಡಾಕ್ಯುಮೆಂಟ್ ತಯಾರಿ ಕುರಿತು ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಅ. 31ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ, ನ.1ರಂದು ಕನ್ನಡ ರಾಜೋತ್ಸವ, ನ. 6ರಂದು ಭಕ್ತ ಕನಕದಾಸರ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

ಚಾಮರಾಜನಗರ, ಅ. 23  ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆ, ಸಮುದಾಯಗಳ ಸಹಕಾರದೊಂದಿಗೆ ಅಕ್ಟೋಬರ್ 31ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ, ನವೆಂಬರ್ 1ರಂದು ಕನ್ನಡ ರಾಜೋತ್ಸವ ಹಾಗೂ ನವೆಂಬರ್ 6ರಂದು ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮೂರೂ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಹಾಜರಿದ್ದ ಮುಖಂಡರ ಸಲಹೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಈ ಹಿಂದೆಯೂ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಸಿಕ್ಕಿದೆ. ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದೆ. ಈ ಬಾರಿಯ ಕಾರ್ಯಕ್ರಮಗಳಿಗೂ ನೀಡುವ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಎಲ್ಲರೂ ಸೇರಿ ಕಾರ್ಯಕ್ರಮವನ್ನು ಫಲಪ್ರದಗೊಳಿಸೋಣವೆಂಬ ಆಶಯ ವ್ಯಕ್ತಪಡಿಸಿದರು.
ಅಕ್ಟೋಬರ್ 31ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗುವುದು. ನವೆಂಬರ್ 1ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನವೆಂಬರ್ 6ರಂದು ನಗರದ ಮಾರಿಗುಡಿ ಬಳಿ ಕನಕದಾಸರ ಜಯಂತಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿ ಸಂಸ್ಕøತಿ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗುವುದು. ಸಂಜೆಯ ವೇಳೆ ಚಾಮರಾಜೇಶ್ವರ ದೇವಾಲಯ ಬಳಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಸಹ ವಿಭಿನ್ನ ಹಾಡು ನೃತ್ಯ ಕಾರ್ಯಕ್ರಮಗಳು ಕನ್ನಡ ಹಿರಿಮೆಯನ್ನು ಸಾರುವಂತಿರಬೇಕು. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದರು.
ಕನಕದಾಸರ ಜಯಂತಿಯಂದು ಪ್ರವಾಸಿ ಮಂದಿರದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದೆ. ಜಾನಪÀದ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡುವಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು. ರಸ್ತೆ, ಕ್ರೀಡಾಂಗಣ ಸ್ವÀಚ್ಚತೆ ಹಾಗೂ ಅಲಂಕಾರಕ್ಕೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಿತ್ತೂರುರಾಣಿ ಚನ್ನಮ್ಮ ಜಯಂತಿ ಹಾಗೂ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ವಿಚಾರಧಾರೆಗಳನ್ನು ಪ್ರಸ್ತುತಪಡಿಸಲು ಭಾಷಣಕಾರರನ್ನು ಆಹ್ವಾನಿಸಬೇಕಿದೆ. ಈ ದಿಸೆಯಲ್ಲಿ ಮುಖಂಡರು ನೀಡುವ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಸಕಾಲಕ್ಕೆ ಪೂರ್ಣಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಕನ್ನಡಪರ ಸಂಘಟನೆಗಳ ಮುಖಂಡರು ಕನ್ನಡ ಅನುಷ್ಠಾನ ಸಂಬಂಧ ಅನುಸರಿಸಲಾಗುತ್ತಿರುವ ನಿರ್ಲಕ್ಷ್ಯ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಮು ಅವರು ಕನ್ನಡ ಅನುಷ್ಠಾನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ನಿಗದಿ ಮಾಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಸಂಘಟನೆಗಳ ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ, ನಂಜುಂಡೇಗೌಡ, ಚಾ.ಗು. ನಾಗರಾಜು, ಕೆ.ಎಂ. ನಾಗರಾಜು, ಆಲೂರು ನಾಗೇಂದ್ರ, ಬ್ಯಾಡಮೂಡ್ಲು ಬಸವಣ್ಣ, ಗು. ಪುರುಷೋತ್ತಮ್, ರಾಜಶೇಖರ್, ಇತರ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಗ್ರೂಪ್ “ಡಿ” ನೌಕರರ ನೇಮಕಾತಿಗೊಳಿಸಿ ಆದೇಶಿಸಲು ಕೋರಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು   

ಚಾಮರಾಜನಗರ ಅ.23-  ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ  ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ 50ಜನ  ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.
ಚಾಮರಾಜನಗರ, ಬಳ್ಳಾರಿ, ಮಂಡ್ಯ, ಮೈಸೂರು, ಭಾಗಲಕೋಟೆ, ಮೈಸೂರು, ಇನ್ನು ಮುಂತಾದ ಜಿಲ್ಲೆಯಿಂದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಸರ್ಕಾರ ಅಧಿಸೂಚನೆ ಸಂಖ್ಯೆ ಬಿ.ಸಿ.ಎಂ.2/ಇ.ಎಸ್.ಟಿ./ಸಿ.ಆರ್-102/2015-16 ದಿನಾಂಕ 20.10.2016ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂ.ಸಕಇ/ಇ.ಡಿ.2 ಸಿಬ್ಬಂದಿ(1) ಸಿ.ಆರ್/59/2016 ದಿನಾಂಕ 20-10-16 ಸದರಿ ಅಧಿಸೂಚನಾ ರೀತ್ಯಾ ಜಿಲ್ಲಾಧಿಕಾರಿಗಳು ಅಧ್ಯಕ್ಷರು ಜಿಲ್ಲಾ ಮಟ್ಟದ ಗ್ರೂಪ್-ಡಿ ನೌಕರರ ನೇಮಕಾತಿ ಪ್ರಾದಿಕಾರ ಚಾಮರಾಜನಗರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 19 ಅಡಿಗೆಯವರು ಸ 81 ಅಡಿಗೆ ಸಹಾಯಕರು ಮತ್ತು ಸಮಾಜ ಕಲ್ಯಾಣ ಇಲಾಖೆಯ 31 ಅಡಿಗೆ ಸಹಾಯಕರು 26 ಜನ ರಾತ್ರಿ ಕಾವಲುಗಾರ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿಗಳನ್ವಯ ಅರ್ಹ ಅಭ್ಯರ್ಥಿಗಳಿಂದ ಮೂಲಕಅರ್ಜಿ ಅಹ್ವಾನಿಸಿರುತ್ತಾರೆ
ಅರ್ಹತಡ, ಜೇಷ್ಠತೆ, ಪ್ರವರ್ಗವಾರು ಮೀಸಲಿನ್ವಯ 1:5, 1-3 ರ ಅನಿಪಾತದಲ್ಲಿ ಪರಿಷ್ಕರಿಸಿ, ಅಡುಗೆ ಪ್ರಯೋಗಿಕ ಪರೀಕ್ಷೆ, ದೈಹಿಕ ಕ್ರೀಡಾ ಸಾಮಥ್ರ್ಯ ಪರಿಕ್ಷೆ, ದೈಹಿಕ ಕ್ರೀಡಾ ಸಾಮಥ್ರ್ಯ ಪ್ರಯೋಗಿಕ ಪರೀಕ್ಷೆಗಳನ್ನು ತೀವ್ರ ದಕ್ಷತೆ ಹಾಗೂ ಬಹಳ ಪಾರದರ್ಶಕವಾಗಿ ಸ ನಡೆಸಿ 1:1 ತಾತ್ಕಾಲಿಕ ಅಯ್ಕೆ ಪಟ್ಟಿಸ ಪ್ರಕಟಿಸಿ ದಾಖಲೆ ಮತ್ತು ಮೂಲ ದಾಖಲೆಗಳನ್ನು ಪರಿಶೀಲಿಸಿ ಸಿಂಧುತ್ವ ಖಾತರಿ ಪಡಿಸಿ ಕರ್ತವ್ಯಕ್ಕೆ ಹಾಜರಾಗಲು ನೇಮಕಾತಿ ಆದೇಶ ನೀಡುವ ಹಂತದಲ್ಲಿ ಚಾಮರಾಜನಗರ ಜಿಲ್ಲೆಯ ಹಿಂದುಳಿದ ವರ್ಗಗಳಸ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಆಧಾರಿತ ನೌಕರರು ಬೆಂಗಳೂರಿನ  ಮಾನ್ಯ ಘನ ಉಚ್ಚ ನ್ಯಾಯಲಯದಲ್ಲಿ ರಿಟ್ ಪಿಟಿಷನ್ 31601/2017ರ ದಿನಾಂಕ 13.07.2017ರಂದು ತಡೆಯಾಜ್ಞೆ ಮಾಡಿಸಿದ್ದರಿಂದ ನೇಮಕಾತಿ ಪ್ರಕಿಯೆ ವಿಳಂಬಗೊಂಡಿರುತ್ತದೆ ಚಾಮರಾಜನಗರದ ಜಿಲ್ಲಾಡಳಿತ ಮತ್ತು ಸರ್ಕಾರ ತಡೆಯಾಜ್ಞೆಯನ್ನು ಜರೂರಾಗಿ ತೆರವು ಗೊಳಿಸಿ ನೇಮಕಾತಿ ಆದೇಶ ಕರೆಪತ್ರ ನೀಡಿ ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ರಾಮು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೆಲ್ಲಂಬಳ್ಳಿ ಬಸವನಪುರ ಮಾಜಿ ಗ್ರಾಪಂ ಸದಸ್ಯ ಮಲ್ಲೇಶ, ಎನ್.ವಿಶ್ವನಾಥ್, ವೈ.ಆರ್. ರಂಗಸ್ವಾಮಿ, ಎಂ.ಪ್ರಮೋದ್,ಸುನೀಲ್, ಗೀರಿಶ್,ಎಸ್, ರಾಜೇಶ್ವರಿ, ಜೆ.ತಾರ, ಬೇಬಿ.ಸಿ, ಕಾವೇರಿ, ಕೆ.ಲತಾ, ಚಿತ್ರಾ, ಸ್ವಾತಿಕುಮಾರಿ, ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
     

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಅ. 23 - ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಅಕ್ಟೋಬರ್ 24ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮಾನ್ಯ ಮುಖ್ಯಮಂತ್ರಿಯವರು ಕೊಳ್ಳೇಗಾಲಕ್ಕೆ ಭೇಟಿ ನೀಡುತ್ತಿರುವ ಕಾರ್ಯಕ್ರಮ ಆಯೋಜನೆ ಮಾಡುವ ಸಲುವಾಗಿ ಅ. 24ರಂದು ಬೆಳಿಗ್ಗೆ 10.30 ಗಂಟೆಗೆ ಕೊಳ್ಳೇಗಾಲ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸುವರು. ಮಧ್ಯಾಹ್ನ 1.30 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ವಿಜೃಂಭಣೆಯಿಂದ ತೆಪ್ಪೋತ್ಸವ ಪರಿಶಿಷ್ಟ ಜಾತಿ ಹಾಗೂ ಪರಿಷ್ಟ ಪಂಗಡಗಳ ರೈತರಿಗೆ ಸಹಾಯ ಧನಕ್ಕಾಗಿ ಆಹ್ವಾನ (21-10-2017)


ವಿಜೃಂಭಣೆಯಿಂದ ತೆಪ್ಪೋತ್ಸವ 

 20-10-2017ರಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಯ ತೆಪ್ಪೋತ್ಸವ ಬಹಳ ವಿಜೃಂಭಣೆಯಿಂದ ರಾತ್ರಿ 9.00ಗಂಟೆಗೆ ಜರುಗಿತು.


20-10-2017ರಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಯ ತೆಪ್ಪೋತ್ಸವ ಬಹಳ ವಿಜೃಂಭಣೆಯಿಂದ ರಾತ್ರಿ 9.00ಗಂಟೆಗೆ ಜರುಗಿತು. ಇದೇ ವೇಳೆಯಲ್ಲಿ ಶ್ರೀ ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮಿಗಳು, ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಜೆ.ರೂಪ ಕ.ಆ.ಸೇ, ಶ್ರೀ ಬಸವರಾಜು ಉಪಕಾರ್ಯದರ್ಶಿಗಳು, ಮಾಧುರಾಜು ಅಧೀಕ್ಷಕರು, ಬೇಡಗಂಪಣ ಅರ್ಚಕವೃಂದದವರು ಹಾಗು ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.

ಪರಿಶಿಷ್ಟ ಜಾತಿ ಹಾಗೂ ಪರಿಷ್ಟ ಪಂಗಡಗಳ ರೈತರಿಗೆ ಸಹಾಯ ಧನಕ್ಕಾಗಿ ಆಹ್ವಾನ

ಚಾಮರಾಜನಗರ, ಅ. 22 - ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ನೀರಾವರಿ ಸೌಲಭ್ಯವುಳ್ಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರೈತರಿಗೆ ಹೊಸದಾಗಿ ಅಂಗಾಶ ಕೃಷಿ ಬಾಳೆ ಸಸಿ ನಾಟಿ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ರೈತರಿಗೆ ಶೇ.90ರ ಸಹಾಯ ಧನ (ರೂ. 77,222-00 ಪ್ರತಿ ಎಕರೆಗೆ) ಲಭಿಸಲಿದೆ.
ಆಸಕ್ತರು ಕೂಡಲೆ ಅಗತ್ಯ ದಾಖಲೆಗಳಾದ ಪಹಣಿ, ಭಾವಚಿತ್ರ, ಚೆಕ್‍ಬಂದಿ, ಜಾತಿ ಪ್ರಮಾಣ ಪತ್ರ, ಎಲೆಕ್ಷನ್ ಐಡಿ ಅಥವಾ ಆಧಾರ್ ಕಾರ್ಡ್ಸ್, ಬ್ಯಾಂಕ್ ಪಾಸ್ ಪುಸ್ತಕ, ಕೂಳವೆ ಬಾವಿ ದೃಢಿಕರಣ ಮುಂತಾದ ದಾಖಲೆಗಳ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಯೊಂದಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ತೋಟಗಾರಿಕೆ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

       ಚಾಮರಾಜನಗರ, ಅ. 22 - ವಿವಿಧ ಕ್ಷೇತ್ರಗಳಾದ ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಕ್ರೀಡೆ, ಸಮಾಜ ಸೇವೆಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿದ ವಿಕಲಚೇತನರುಗಳಿಗೆ ವೈಯಕ್ತಿಕ ಪ್ರಶಸ್ತಿ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಿದ್ದು, ಈ ಸಂಬಂಧ ಜಿಲ್ಲೆಯ ಆಸಕ್ತ ವಿಕಲಚೇತನ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಂದ ಅರ್ಜಗಳನ್ನು ಆಹ್ವಾನಿಸಲಾಗಿದೆ.
 ನಿಗಧಿತ ಅರ್ಜಿ ನಮೂನೆಗಳನ್ನು ನಗರದ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು (ಕೊಠಡಿ ಸಂಖ್ಯೆ. 25 ) ಜಿಲ್ಲಾಡಳಿತ ಭವನ, ಚಾಮರಾಜನಗರ ಇÀವರಿಂದ ಪಡೆದು ಭರ್ತಿಮಾಡಿ ಪೂರಕ ದಾಖಲೆಗಳೊದಿಗೆ ಅ. 28 ರೊಳಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 08226 – 223688 ಅಥವಾ 224688 ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಅನುದಾನ ಲಭ್ಯ : ಪ್ರಯೋಜನಕ್ಕೆ ಮನವಿ 

    ಚಾಮರಾಜನಗರ ಅ21  ತೋಟಗಾರಿಕೆ ಇಲಾಖೆಯು ವಿವಿಧÀ ಯೋಜನೆಗಳಡಿ ಸಹಾಯಧನ ನೀಡಲಿದ್ದು ರೈತರು ಬೆಳೆಗಾರರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದೆ .
    ಹನಿ ನೀರಾವರಿ ಯೋಜನೆಯಡಿ 2017-18 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೂ ಶೇ. 90% ರಷ್ಟು ಸಹಾಯಧನವನ್ನು ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಲು ಸಹಾಯಧನ  ನೀಡಲಾಗುವುದು.
    ಪ್ರತಿ ಫಲಾನುಭವಿ ಕುಟುಂಬಕ್ಕೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ಲಭ್ಯವಿದ್ದು, ಎಲ್ಲಾ ವರ್ಗದ ಅರ್ಹ ರೈತ ಕುಟುಂಬಗಳಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90 ರಂತೆ ಮತ್ತು ಉಳಿದ 3 ಹೆಕ್ಟೇರ್ ಪ್ರದೇಶಕ್ಕೆ ಶೇ.45 ರ ಮಿತಿಯೊಳಗೆ ಸಹಾಯಧನ ನೀಡಲಾಗುವುದು. ತರಕಾರಿ ಹಾಗೂ ವಾಣಿಜ್ಯ ಹಾಗೂ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್‍ವರೆಗೆ ಸಹಾಯಧನ ನೀಡಲಾಗುವುದು.
    ನೀರಿನ ಟ್ಯಾಂಕರ್‍ಗೆ ಸಹಾಯಧನದಡಿ ನೀರಿನ ಟ್ಯಾಂಕರ್‍ಗಳ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಎಲ್ಲಾ ವರ್ಗದ ರೈತರು ಸಹಾಯಧನ ಪಡೆಯಲು ಅರ್ಹರಾಗಿದ್ದು, ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ..90 ರಷ್ಟು ಸಹಾಯಧನ ನೀಡಲಾಗುವುದು. ಸಾಮಾನ್ಯ ವರ್ಗದ ರೈತರು ಕನಿಷ್ಠ 1 ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವುದು ಕಡ್ಡಾಯ ಹಾಗೂ ಸದರಿ ರೈತರ ಹೆಸರಿನಲ್ಲಿ ಕನಿಷ್ಠ 30 ಹೆಚ್. ಪಿ. ಸಾಮಥ್ರ್ಯದ ಟ್ಯ್ರಾಕ್ಟರ್‍ನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.
    ಉತ್ಪಾದನೆ ಸುಧಾರಣಾ ಕಾರ್ಯ ನಿಯೋಜನೆಗಾಗಿ ತಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ತೆಂಗಿನ ತೋಟಗಳಲ್ಲಿ ಹಳೆಯ ಮತ್ತು ಅನುತ್ಪಾದಕ ಮರಗಳು, ತೆಂಗಿನ ತೋಟಗಳ ನಿರ್ವಹಣೆ ನಿರ್ಲಕ್ಷ್ಯತೆಯಿಂದ, ಕೀಟ ರೋಗಗಳ ಭಾದೆ, ತೇವಾಂಶ ಮತ್ತು ಪೋಷಕಾಂಶಗಳ ಕೊರತೆ ಹಾಗೂ ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಇಳುವರಿ ಕುಂಠಿತವಾಗಿರುತ್ತದೆ. ಸದರಿ ತೆಂಗಿನ ತೋಟಗಳಲ್ಲಿ ಪುನಃ ಹೊಸದಾಗಿ ಸಸಿಗಳನ್ನು ನೆಡುವುದು, ಕಡಿಮೆ ಇಳುವರಿ, ಅನುತ್ಪಾದಕ ಮರಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಕೈಗೊಳ್ಳುವುದಕ್ಕೆ ನಿರ್ವಣೆಗೆ ಸಹಾಯಧನ ನೀಡಲಾಗುವುದು.
     ಗೇರು ಅಭಿವೃದ್ದಿ ಕಾರ್ಯಕ್ರಮ ಯೋಜನೆಯಡಿ  ಗೇರು ಪ್ರದೇಶ ವಿಸ್ತರಣೆ ಕೈಗೊಳ್ಳಲು ಅವಕಾಶವಿದೆ ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು, ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗÀಡದ ರೈತರಿಗೆ ಶೇ.90 ರಷ್ಟು  ಸಹಾಯಧನ ನೀಡಲಾಗುವುದು. 



Friday, 20 October 2017

ಕಂಡವ್ರ ಹೆಂಡತಿಗೆ ಸಂದೇಶ ಕಳಿಸಿದಾಗ. ! ಸತ್ಯ ಕಥೆಗಳ ಅನಾವರಣ ಭಾಗ -1 ಮುಂಧುವರೆಯಲಿದೆ

ಕಂಡವ್ರ ಹೆಂಡತಿಗೆ ಸಂದೇಶ ಕಳಿಸಿದಾಗ.!.. 

ಗಾಬರಿಯಾಗಬೇಡಿ.. ಸಾಮಾಜಿಕ ಜಾಲತಾಣಗಳಲ್ಲಿನ ಅವ್ಯವಸ್ಥೆಯಿಂದ ಗತಿಸಿದ, ಗತಿಸುತ್ತಿರುವ  ಸತ್ಯ ಘಟನೆಗಳ ವರದಿ.. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಚಿತ್ರಣ. ಇದು ಪ್ರಾಫ್ತರಿಗೆ ಹೊರತು ಅಪ್ರಾಪ್ತರಿಗಲ್ಲ, ಫೇಸ್ ಬುಕ್ ಖಾತೆದಾರರು ವಯಸ್ಕರಾಗಿರುತ್ತಾರೆ. ಇದರಲ್ಲಿ ಕೆಲವರ ಹೆಸರು ಗೌಪ್ಯತೆ ಅಗತ್ಯವಾಗಿರುತ್ತದೆ..

(ಮಾಡದ ತಪ್ಪಿಗೆ, ತಪ್ಪು ಮಾಡಲೇ ಬೇಕು ಎನ್ನುವಂತ ಮನಸ್ಸು ಸೃಷ್ಟಿಯಾಗುವ ಚಿತ್ರತೆ)
(ಇದು ವಾಟ್ಸಾಫ್, ಫೇಸ್ಬುಕ್ ನ  ಸತ್ಯ ಕಥೆಗಳ ಅನಾವರಣ... ತಪ್ಪು ಎಲ್ಲರಲ್ಲಿಯೂ ಇರುತ್ತದೆ ತಿದ್ದುಕೊಂಡು ಹೋಗುವುದೇ ಮಾರ್ಗ..)
ಜಾಗತಿಕ ಮಟ್ಟದಲ್ಲಿ ಏನೇಲ್ಲಾ ಬೆಳೆಯುತ್ತಿದ್ದರು ಯುವಕರು ಯುವತಿಯರು ಮಾಯಾ ಜಾಲದಲ್ಲಿ ಸಿಲುಕುತ್ತಿದ್ದಾರೆ. ಮಾಯಾಜಾಲವೋ ಮೋಹ ಜಾಲವೋ ಗೊತ್ತಿಲ್ಲ,  ನಕಲಿ ಖಾತೆ ಮಾಡಿಕೊಂಡು ಫೇಸ್ ಬುಕ್, ವಾಟ್ಸಾಪ್ ನತ್ತ ಮುಖ ಮಾಡಿದ ಎಷ್ಟೋ ಜನರು ಯಾರ್ಯಾರಿಗೋ ಮೋಸ ಮಾಡುತ್ತಿದ್ದಾರೆ. ಮಾಡುತ್ತಲೂ ಇದ್ದಾರೆ.. ಇದೆಲ್ಲ ಗೊತ್ತಿರುವುದೇ ಎನ್ನಬೇಡಿ, ಗೊತ್ತಿಲ್ಲದವರಿಗೆ ಅವರ ಪಾಡೇನು ಎಂಬುದಷ್ಟೇ ಮನಸ್ಸು ಪರಿಕ್ಷೀಸಬೇಕಿದೆ..ಇದು ನಮ್ಮ ಅನುಭವ ಹಾಗೂ ನಾಕಂಡ ಸುತ್ತಮುತ್ತ ನಗ್ನ ಸತ್ಯಗಳು..
ಯಾಕೋ ಏನೋ ಸಣ್ಣ ಚಿತ್ರಣ ಮನಸ್ಸು , ಕಣ್ಣ ಮುಂದೆ ಬಂದಿತು. ಆ ಚಿತ್ರಣಕ್ಕೆ ಸಾಮಾಜಿಕ ಜಾಲತಾಣ ಕಾರಣವಾಗಿತ್ತು. ಅದಕ್ಕೆ ಫೇಸ್ ಬುಕ್ ಕಾರಣವಾಗಿತ್ತು. ಅದಕ್ಕೆ ಒಬ್ಬರು ಕಾರಣ ಆಗೋದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಎರಡು ಕೈ ಸೇರಿದರೆ ಚಪ್ಪಾಳೆ ಎಂಬುದು ಸಂಬಂದ ಪಟ್ಟವರು ಅರಿಯಲಾರರು.ಅದೊಂದು ದಿನ ಮಳೆ ಬರುತ್ತಿತ್ತು. ಇದ್ದಕ್ಕಿಂದಂತೆಯೇ ಎಲ್ಲಿಂದಲೋ ಬಂದ ಇಬ್ಬರು ಯುವಕರು ಬಂದು ಒಬ್ಬನಿಗೆ ಮನಸ್ವೇಚ್ಚೆಯಂತೆ ಬೈಯ್ದುಕೊಂಡು, ಹೊಡೆಯುತ್ತಿದ್ದ ಅಲ್ಲಿ ನೆರೆದಿದ್ದವರು ಮೌನವಾಗಿದ್ದರು. ಕಾರಣ ಅಲ್ಲಿ ಒಬ್ಬ ಮಹಿಳೆಯ ವಿಚಾರವನ್ನು ಎಳೆ ತಂದು ಪ್ರಾರಂಬಿಸಿದ್ದೆ ಈ ಮೌನಕ್ಕೆ ಕಾರಣವಾಗಿತ್ತು.ಗಲಾಟೆಯೂ ಆಯಿತು, ಮಳೆಯೂ ನಿಂತೂ ಆಯ್ತು ಮುಂದೆ ಗೊತ್ತೆ ಇದೆಯಲ್ಲ...ಪೋಲೀಸ್ ಠಾಣೆ, ವಿಚಾರಣೆ ದೂರು ದಾಖಲು, ನ್ಯಾಯಾಲಯ ಎಲ್ಲವೂ ಪ್ರಜ್ಞಾವಂತ ನಾಗರೀಕರಿಗೆ ಗೊತ್ತಿರುತ್ತದೆ. ಅವಿದ್ಯಾವಂತರಿಗೆ ಏನು ಇದರ ಬಗ್ಗೆ ತಿಳಿದಿರುವುದಿಲ್ಲ ಎಂದರೆ ತಪ್ಪಾಗಲಾರದು.ನೀವು ಭಾವಿಸಿದಂತೆ ಠಾಣೆಗೆ ದೂರು ಹೋದ ಹಿನ್ನಲೆಯಲ್ಲಿ ಹೇಗೋ ವಿಚಾರಣೆ ಮಾಡಬೇಕಲ್ಲ. ಪ್ರಾರಂಭವಾಯಿತು ವಿಚಾರಣೆ. ದೂರುದಾರ ದೂರು ಕೊಡೋದು ಬಿಟ್ಟು ನನ್ನ ಹೆಂಡತಿಗೆ ನೋವಾಗುವಂತೆ ಸಂದೇಶ ಕಳಿಸಿದ್ದಾನೆ ಅದಕ್ಕೆ ಹೊಡೆದೆ ಎಂದನೋ ಹೊರತು ದೂರು ಕೊಡಲು ಮುಂದಾಗದೇ ಮೂರ್ನಾಲ್ಕು ಗಂಟೆ ಕಾಲ ತಡೆದು ದೂರು ಕೊಟ್ಟ. ಅಲ್ಲಿಗೆ ಅವನ ಕಥೆ ಮುಗಿಯಿತು....(.ಮುಂದುವರೆಯಲಿದೆ).


x

ಮಾಹಿತಿ ಸಂಪರ್ಕಾಧಿಕಾರಿಗಳಿಗೆ ಮಾಹಿತಿಯೇ ಗೊತ್ತಿಲ್ಲ, ಕೆಲವೆಡೆ ಮಾಹಿತಿಯೇ ಇಲ್ಲ.!

ಮಾಹಿತಿ ಸಂಪರ್ಕಾಧಿಕಾರಿಗಳಿಗೆ ಮಾಹಿತಿಯೇ ಗೊತ್ತಿಲ್ಲ, ಕೆಲವೆಡೆ ಮಾಹಿತಿಯೇ ಇಲ್ಲ.!

   ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ:  ಕೆಲವು ಠಾಣೆಗಳಲ್ಲಿ ಮಾಹಿತಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಮಾಹಿತಿ ಹಕ್ಕಿನ ಬಗ್ಗೆ ಗೊತ್ತಿಲ್ಲದಿರುವ ಬಗ್ಗೆ ಮಾಹಿತಿ ಲಬ್ಯವಾಗಿದೆ.
ಮಾಹಿತಿ ಹಕ್ಕಿನಡಿ ಮಾಹಿತಿ ಪಡೆಯಲು ಪೋಲೀಸ್ ವರೀಷ್ಟಾದಿಕಾರಿಗಳಿಗೆ ವ್ಯಕ್ತಿಯೋರ್ವ  ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿದರೆ ಆ ಕಛೇರಿಯಲ್ಲೆ ಮಾಹಿತಿ ಇಲ್ಲ ಎಂಬ ಉತ್ತರ ಸಿಕ್ಕಿದೆ. ಅಷ್ಟೇ ಅಲ್ಲ ವಾಸ್ತವವಾಗಿ ತಪ್ಪು ಮಾಹಿತ ನೀಡಬಾರದೆಂದು
ಬಹುತೇಕ ಠಾಣೆಗಳಿಗೆ ಉಚಿತವಾಗಿ ಮಾಹಿತಿ ನೀಡುವಂತೆ  ಅಧಿಕ್ಷರ ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿ ಆದೇಶ ಹೊರಡಿಸಿದರೂ ಕೆಲವೊಂದು ಠಾಣೆಯವರು ಕೊಟ್ಟರೆ ಇನ್ನುಳಿದವರಿಗೆ ಅವರ ಬಗ್ಗೆ ಗೊತ್ತಿಲ್ಲದೇ ಪರದಾಡುತ್ತಿದ್ದಾರೆ.
ಏನಿದು ಮಾಹಿತಿ: ಮಾಹಿತ ಹಕ್ಕು ಕಾರ್ಯಕರ್ತ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಅವರು   ಅಧೀಕ್ಷರ ಕಛೇರಿಗೆ ಮಾಹಿತಿ ಅರ್ಜಿ ಸಲ್ಲಿಸುತ್ತಾರೆ ಅದರಲ್ಲಿ ಸಿಬ್ಬಂದಿಗಳ ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಇನ್ನಿತರ ವಿವರ ಕೇಳುತ್ತಾರೆ.  ಆದರೆ ಆ  ಕಛೇರಿ ಮಾಹಿತಿ ಅದಿಕಾರಿ ಅಸ್ಪಷ್ಟ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಾರೆ.
ಅಸ್ಪಷ್ಟ ಮಾಹಿತಿ ನೀಡಿದ ಅದಿಕಾರಿಯ ಮೇಲೆ ಮೇಲ್ಮನವಿಯನ್ನು ಸಲ್ಲಿಸಿದಾಗ ಕೆಲವೊಂದು ಠಾಣೆಯವರು ಮಾಹಿತಿ ನೀಡಿರುವ ಬಗ್ಗೆ ಉಳಿದವರು ನೀಡದೇ ಮಾಹಿತಿ ಹಕ್ಕು ನಿಯಮಕ್ಕೆ ಚ್ಯುತಿ ತಂದಿದ್ದಲ್ಲದೇ ಕೆಲವರು ಕೇಳಿದ್ದೆ ಒಂದು ಕೊಟ್ಟಿದ್ದೆ ಒಂದು ಮಾಹಿತಿ ನೀಡಿರುವ ಬಗ್ಗೆ ತಿಳಿದುಬರುತ್ತದೆ.
ಐ.ಜಿ.ಗೆ ದೂರು: ಕೇಳಿದ ಮಾಹಿತಿ ಅಪರಿಪೂರ್ಣವಾಗಿದ್ದರೂ ಅದು ರಾಜ್ಯ ಆಯೋಗದತ್ತ ತಲುಪುತ್ತದೆ. ಆದರೆ ಆಯೋಗ ಮಾಹಿತಿ ನೀಡುವಂತೆ, ದಂಢವಿದಿಸುವಂತೆ ಆದೇಶಿಸುತ್ತದೆಯೋ ಹೊರತು ಮತ್ತೇನು ಅಲ್ಲ. ಅದಕ್ಕಾಗಿ ಆಯೋಗ ತಲುಪಬೇಕಾದ ದೂರು ದಕ್ಷಿಣ ವಲಯ ಪೋಲೀಸ್ ಮಹಾನಿರ್ದೇಶಕರಾದ ವಿಪುಲ್ ಕುಮಾರ್ ಅವರ ಕಛೇರಿ ತಲುಪುತ್ತದೆ.
ತಮ್ಮ ಇಲಾಖೆ ಸಾರ್ವಜನಿಕ ಮಾಹಿತಿ ಅದಿಕಾರಿಗಳು  07-09-2017 ರಂದು ಉಚಿತವಾಗಿ ಮಾಹಿತಿ ನೀಡುವಂತೆ ಅದೀಕ್ಷರ ಕಚೇರಿಯಲ್ಲಿನ ಅದಿಕಾರಿ ಸೂಚಿಸಿದರೂ ಕೆಲವು ಠಾಣೆಗಳ ಸಂಪರ್ಕಾದಿಕಾರಿಗಳನ್ನ ಹೊರತು ಪಡಿಸಿದರೆ ಇನ್ನುಳಿದ ಯಾವುದೇ ಯಾವುದೇ ಠಾಣೆಗಳ ಮಾಹಿತಿ ಸಂಪರ್ಕದಿಕಾರಿಗಳು ಮಾಹಿತಿ ನೀಡದೇ ಇರುವುದರಿಂದ ತಾವು ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ಪ್ರಾದಿಕಾರ ನಿಯಮದಡಿ ಇವರ ಮೇಲೆ ಯಾಕೆ ಕ್ರಮಕೈಗೊಳ್ಳಬಾರದು? ಸದರಿ ಕೆಲವು ಠಾಣೆಯ ಮಾಹಿತಿ ಸಂಪರ್ಕದಿಕಾರಿಗಳಿಗೆ ಕೆಲವು ಮಾಹಿತಿಗಳೆ ಗೊತ್ತಿಲ್ಲದೇ ಅಸ್ಷಷ್ಟ ಮಾಹಿತಿಯನ್ನ ಮಾ.ಹಕ್ಕಿನಡಿ ನೀಡಿ  ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ತಾವು ದಯಮಾಡಿ ಎಲ್ಲಾ ಠಾಣೆಗಳ ಮಾ.ಸಂಪರ್ಕಾದಿಕಾರಿಗಳನ್ನ ಪರಿಶೀಲಿಸಿ ಕರ್ತವ್ಯಲೋಪ. ಬೇಜವಬ್ದಾರಿತನ  ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.
 ಕೆಲವು ಠಾಣೆಗಳಲ್ಲಿ ಗುಂಪುಗಾರಿಕೆಗಳು, ದೂರುದಾರರನ್ನು ಅಸೌಜನ್ಯಯುತವಾಗಿ ನೋಡಿಕೊಳ್ಳುತ್ತಿರುವ ಮಾಹಿತಿ ಲಬ್ಯವಾಗಿದ್ದು ಸಾದ್ಯವಾದರೆ ಎಲ್ಲಾ ಠಾಣೆಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲು, ಠಾಣೇಗಳಲ್ಲಿ ತಪ್ಪಾದರೆ ಅವರ ಚಲನವಲಗಳನ್ನು ಗಮನಿಸಿ ಅವರ ಮೇಲೆ ಕ್ರಮಕೈಗೊಳ್ಳಬೇಕಿದೆ.ಕೆಲವೆಡೆ ಬೀಟ್ ಅವ್ಯವಸ್ಥೆಯಿಂದ ಇರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು ಇಲಾಖೆ ನೀಡಿರುವ ತಪ್ಪು ಮಾಹಿತಿಯನ್ನೆ ನೇರವಾಗಿ ಪ್ರಕಟಿಸಲಾಗುವುದು. ಆ ಖಾಲಿ ಹುದ್ದೆಗಳಿಗೆ ಕಾರಣ ಏನು? ನಿಜಕ್ಕೂ ಆಡಳಿತ ಯಂತ್ರ ಕುಸಿಯುತ್ತಿದಿಯೇ ಎಂಬುದನ್ನು ಪ್ರಕಟಿಸಲಾಗುವುದು… ನಿರೀಕ್ಷಿಸಿ…

Thursday, 19 October 2017

ಸಂಚಾರಿ ಕರ್ತವ್ಯ ನಿರತ ಪೋಲೀಸರ ಬಿಳಿ ಸಮವಸ್ತ್ರದ ಕಥೆ.... 2025: ಗ್ರಾಮೀಣಾಭಿವೃದ್ಧಿ ಕುರಿತು ಜನಪ್ರತಿನಿಧಿಗಳಿಂದ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ಮಂಡನೆ , ಅಕ್ರಮ ಗಾಂಜಾ ಗಿಡಗಳನ್ನು ಬೆಳೆದ ಆರೋಪಿಗೆ 2 ವರ್ಷ ಸಜೆ ವಿಧಿಸಿ ನ್ಯಾಯಾಲಯದ ತೀರ್ಪು (19-10-2017)

ಚಾಮರಾಜನಗರದ ಕೆಲವೆಡೆ ಬಿಳಿ ಬಣ್ಣದ ಸಮವಸ್ತ್ರ  ನೀವೇ ನಿಷೇದಿಸಿಕೊಂಡರೆ ಒಳಿತು.! 

ಸಂಚಾರಿ ಪೋಲೀಸರ
ಬಿಳಿ ಸಮವಸ್ತ್ರ ದೂಳಿನ ಗೋಳಿನಿಂದ ಖಾಕಿ ಸಮವಸ್ತ್ರವಾಗುತ್ತಿದೆ

ಚಾಮರಾಜನಗರ: ಅರೇ ಇದೇನಿದು ಬಿಳಿಬಣ್ಣದ ಸಮವಸ್ತ್ರ ನಿಷೇಧಿಸಿ ಅಂತಿದೀರಾ ಖಂಡಿತಾ ಕೆಲವರಿಗೆ ಮಾತ್ರಷ್ಟೆ ಅನ್ವಯವಾಗಬೇಕಿದೆ. ಹೌದು ಚಾಮರಾಜನಗರ ಬಹುತೇಕವಾಗಿ ರಸ್ತೆ ಅಗೆದು ರಸ್ತೆ ಅಗಲೀಕರಣ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ.ಈ ದೂಳು ಗಾಳಿಗೆ ಹಾರಿ ಜನರು ಹಾಕೋ ಅದರಲ್ಲೂ ಬಿಳಿ ಬಣ್ಣದ ಷರಾಯಿ ಮೇಲಂತೂ ಕೇಳೋ ಹಾಗಿಲ್ಲ. ಇನ್ನ ಸಂಚಾರ ಠಾಣಾ ಸಿಬ್ಬಂದಿ ಬಿಳಿ ಬಣ್ಣದ ಸಮವಸ್ತ್ರ ಮುಂಜಾನೆ ಧರಿಸಿ ನಿಂತರೆ ಸಂಜೆವರೆಗೆ ಖಾಕಿ ಬಣ್ಣವೆ ತಲುಪುತ್ತಿದೆ.ಇವರಿಗೆ ತಾತ್ಕಾಲಿಕವಾಗಿ ನಿಷೇದಿಸಿದರೆ ಸೂಕ್ತ.
ಜನ ನಾವೇನು ನಮಗೇನು ಬರೋಲ್ವೆ ಅನ್ನ ಬೇಡಿ, ಕೇವಲ 10 ನಿಮಿಷಕ್ಕೂ ಹೆದರಿ ಹೋಗೋ ನಾವು , 6 ರಿಂದ 8 ತಾಸುಗಳ ಕಾಲ ನಿಂತುಕೊಂಡು ಕಾಲ ಅದು ಧೂಳಲ್ಲೆ ಕಾಲಕಳೆಯಬೇಕು
ಸಂಚಾರಿ ಠಾಣಾ ಕರ್ತವ್ಯ ನಿರತ ಪೇದೆ ನೋಡಿದರೆ‌ ಜನರು ಇದೇನು ಸರ್ ಷರ್ಟ್ ಹೀಗಾಗಿದೆ ಎನ್ನುವಂತಾಗಿದೆ. ಕೆಲವರು ಈಗಾಗಲೇ ಯಾರಿಗೆ ಬೇಕು ಈ ಕೆಲಸ ಎನ್ನುವಷ್ಟರ ಮಟ್ಟಿಗೆ ಪಟ್ಟಣದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ಗೋಳು ಹೇಳ ತೀರದಂತಾಗಿದೆ. ವಿಶೇಷ ಎಂದರೆ ಪೊಲೀಸ್ ಕ್ಯಾಂಟಿನ್ ಅಲ್ಲಿ ಮೂಗಿಗೆ ಕಟ್ಟುವ ಮಾಸ್ಕ್ ಇಲ್ಲ ಎಂಬುದು ಮಹತ್ವದ ವಿಚಾರ ಹಾಗೂ ವಿಪರ್ಯಾಸ.
ಸಾಮಾಜಿಕ ನಮ್ಮ‌ ಕಳಕಳಿ-ಪ್ರಮುಖ ವೃತ್ತಗಳಲ್ಲಿ ಎರಡು ಶಿಪ್ಟ್ ನಡೆಯುವ ಜಾಗದಲ್ಲಿ 3 ಗಂಟೆಗೊಮ್ಮೆಯಂತೆ ನಾಲ್ಕು ಶಿಪ್ಟ್ ಇರಲಿ. ಸಂಚಾರ ಠಾಣಾ ಸಿಬ್ಬಂದಿಗಳಿಗೆ ಆಗಾಗ ಹೆಚ್ಚಿನ ಆರೋಗ್ಯ ತಪಾಷಣೆ ಇಲಾಖೆಯಿಂದ ನಡೆಯಲಿ. ದೂಳಿನ ಕಣ ಹೆಚ್ಚು ಮೂಗು ಸೇರುವುದರಿಂದ ಅವರಿಗೆ ಸುರಕ್ಷಿತ ಮಾಸ್ಕ್ ನೀಡುವಂತಾಗಬೇಕು. 

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ (9480030980)



ವಿಷನ್2025: ಗ್ರಾಮೀಣಾಭಿವೃದ್ಧಿ ಕುರಿತು ಜನಪ್ರತಿನಿಧಿಗಳಿಂದ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ಮಂಡನೆ   

ಚಾಮರಾಜನಗರ, ಅ. 19 - ಮುಂದಿನ 7 ವರ್ಷಗಳಲ್ಲಿ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಸಮಗ್ರ ಪ್ರಗತಿ ಸಂಬಂಧ ವಿಷನ್ 2025ರ ಡಾಕ್ಯುಮೆಂಟ್ ತಯಾರಿ ಕುರಿತು ನಗರದಲ್ಲಿ ಇಂದು ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ, ತಾಲ್ಲೂಕು, ಇತರೆ ಪಂಚಾಯತ್ ಪ್ರತಿನಿಧಿಗಳು ಪಾಲ್ಗೊಂಡು ಮುಂದಿನ ಅವಧಿಯಲ್ಲಿ ಗ್ರಾಮೀಣ ಅಭಿವೃದಿ  ಹೇಗಿರಬೇಕು ಎಂಬ ಬಗ್ಗೆ ಅಭಿಪ್ರಾಯಗಳು ಹಾಗೂ ಸಲಹೆ ಗಳನ್ನು ಮುಂದಿಟ್ಟರು.
ಗ್ರಾಮ ಸಭೆಗಳು ಸರಿಯಾದ ವೇಳೆಗೆ ನಡೆಯಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೇ ಪಾರದರ್ಶವಾಗಿ ನಡೆಯುವಂತೆ ಕ್ರಮ ಅನುಸರಿಸಬೇಕು. ಯಾವುದೇ ಹಸ್ತಕ್ಷೇಪ ಇರಬಾರದು. ಎಲ್ಲ ಕಾಲೋನಿಗಳಿಗು ಮೂಲಸೌಕರ್ಯ ಸಮಾನವಾಗಿ ತಲುಪಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತ್ತವಾಯಿತು
ಸಮಗ್ರ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಹಾಗೂ ನಗರಕ್ಕೆ ಸಂಪರ್ಕಿಸುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ,  ಆರೋಗ್ಯ ಮತ್ತು ಶಿಕ್ಷಣ, ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ಸಲಹೆಗಳು ಪೂರ್ವಭಾವಿ ಸಭೆಯಲ್ಲಿ ಕೇಳಿಬಂದವು.
ಸಭೆ ಉದ್ಗಾಟಿಸಿ ಮಾತನಾಡಿದ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಡಾ|| ಕೆ.ಹರೀಶ್ ಕುಮಾರ್ ಮಾತಾನಾಡಿ ಗ್ರಾಮೀಣ ಭಾಗದ ಜನರ ನಿರೀಕ್ಷೆಗಳು ಹಾಗೂ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಏಳು ವರ್ಷಗಳ ಅವದಿಯಲ್ಲಿ ಪ್ರಗತಿಯಾಗುವ ದಿಸೆಯಲ್ಲಿ ಕರಡು ರೂಪಿತವಾಗಬೇಕಿದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು,ಜಿಲ್ಲಾ ಪಂಚಾಯತ್ ಸ್ಥಾಯಿಸಮಿತಿ ಅದ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ,ಕೆರೆಹಳ್ಳಿನವೀನ್,ಬಿ,ಕೆ,ಬೊಮ್ಮಯ್ಯ,ಸದಸ್ಯರಾದ ಸಿ.ಎನ್.ಬಾಲರಾಜು,ಚನ್ನಪ್ಪ,ಮರಗದಮಣಿ,ಶಿವಮ್ಮ,ನಿವೃತ್ತ ಪ್ರೋ.ಅಚ್ಯುತರಾವ್ ಇತರರು ಉಪಸ್ಥಿತರಿದ್ದರು.

  ಅಕ್ರಮ ಗಾಂಜಾ ಗಿಡಗಳನ್ನು ಬೆಳೆದ ಆರೋಪಿಗೆ 2 ವರ್ಷ ಸಜೆ ವಿಧಿಸಿ ನ್ಯಾಯಾಲಯದ ತೀರ್ಪು

ಚಾಮರಾಜನಗರ, ಅ. 19 - ಕೊಳ್ಳೇಗಾಲ ತಾಲೂಕು ಪುಟ್ಟೀರಮ್ಮನದೊಡ್ಡಿ ಗ್ರಾಮದ ಸಿದ್ದಶೆಟ್ಟಿಯವರ ಮಗ ಮಾದೇಶ ಎಂಬ ಆರೋಪಿಯು ತನ್ನ ತಾಯಿಯ ಹೆಸರಿನಲ್ಲಿರುವ ಸರ್ವೇ ನಂ. 526ರ ಜಮೀನಿನಲ್ಲಿ ಜೋಳ ಮತ್ತು ಅವರೆ ಫಸಲಿನ ನಡುವೆ 30 ಕೆ.ಜಿ. ತೂಕದ 59 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಅಮರ್‍ನಾರಾಯಣ ಅವರು ದಿನಾಂಕ: 13-11-2013ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ತಮಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣವನ್ನು ಪರಿಶೀಲಿಸಿದ ಪ್ರಧಾನ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್,ಮಳವಳ್ಳಿ ಅವರು ಆರೋಪಿಯು ಹೆಚ್ಚಿನ ಹಣ ಸಂಪಾದನೆಗಾಗಿ ಅಕ್ರಮವಾಗಿ ಗಾಂಜಾಸೊಪ್ಪನ್ನು ಬೆಳೆದಿರುವುದು ನ್ಯಾಯಾಲಯದಲ್ಲಿ ರುಜುವಾತಾಗಿರುವುದರಿಂದ 2 ವರ್ಷ ಸಜೆ ಹಾಗೂ 1,000 ಸಾವಿರ ರೂ.ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.
ಅಕ್ಟೋಬರ್ 23ರಂದು ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ
ಚಾಮರಾಜನಗರ, ಅ. 19- ಜಿಲ್ಲಾಡಳಿತವತಿಯಿಂದ ಜಿಲ್ಲಾಕೇಂದ್ರದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 23ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು ಅಂದು ನಡೆಯುವ ಸಭೆಗೆ ಹಾಜರಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ತಮ್ಮ ಸಲಹೆಗಳನ್ನು ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಅ. 23ರಂದು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಭಕ್ತ ಕನಕದಾಸರ ಜಯಂತಿ ಆಚರಣೆಯ ಪೂರ್ವಭಾವಿ ಸಭೆ

ಚಾಮರಾಜನಗರ, ಅ. 19 - ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 23ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಮುದಾಯದ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಅಂದು ನಡೆಯುವ ಸಭೆಗೆ ಹಾಜರಾಗಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಭಕ್ತ ಕನಕದಾಸರ ಜಯಂತಿ ಆಚರಣೆ ಕುರಿತು ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

        ಅ. 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ

ಚಾಮರಾಜನಗರ, ಅ. 19 :- ಪೊಲೀಸ್ ಇಲಾಖೆವತಿಯಿಂದ ಅಕ್ಟೋಬರ್ 21ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿಜಯ್‍ಲಾಲ್ ಮೀನಾ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪೆರೆಡ್ ಕಮಾಮಡರ್ ರಿಂದ ವಂದನೆ ಸಲ್ಲಿಸುವಿಕೆ, ಮುಖ್ಯ ಅತಿಥಿಗಳಿಂದ ಹಾಗೂ ಆಹ್ವಾನಿತರಿಂದ ಹುತಾತ್ಮರಿಗೆ ಪುಷ್ಪಗುಚ್ಚ ಸಮಪ್ಣೆ, ಕಮಾಂಡರ್‍ರಿಂದ ವಾಲೀ ಫೈರಿಂಗ್, ಹುತಾತ್ಮರ ನಾಮ ವಾಚನ, 2 ನಿಮಿಷಗಳ ಮೌನ ಆಚರಣೆ, ಮುಖ್ಯ ಅತಿಥಿಗಳ ಭಾಷಣ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 23ರಿಂದ 26ರವರೆಗೆ ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ

ಚಾಮರಾಜನಗರ, ಅ. 19 :- ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಅಧಿಕೃತ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರಿಂದ ದೂರುಗಳನ್ನು ಪಡೆಯಲು ಅಕ್ಟೋಬರ್ 23ರಿಂದ 26ರವರೆಗೆ ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ದೂರುಗಳನ್ನು ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸಲಿದ್ದಾರೆ.
ಅ. 23ರಂದು ಯಳಂದೂರು, 24ರಂದು ಕೊಳ್ಳೇಗಾಲ, 25ರಂದು ಚಾಮರಾಜನಗರ ಮತ್ತು 26ರಂದು ಗುಂಡ್ಲುಪೇಟೆಯ ಸರ್ಕಾರಿ ಅತಿತಿಗೃಹದಲ್ಲಿ ದೂರುಗಳನ್ನು ನಾಗರಿಕರಿಂದ ಪಡೆಯುವರು. ಸಾರ್ವಜನಿಕರು ಲೋಕಾಯುಕ್ತ ಕಾಯ್ದೆಯಡಿ ಭರ್ತಿಮಾಡಿದ ಮತ್ತು ನೋಟರಿಯಿಂದ ಅಪಿಡೆವಿಟ್ ಮಾಡಿಸಿದ ಅರ್ಜಿಗಳನ್ನು ನಿಗದಿತ ನಮೂನೆ-1 ಮತ್ತು 2ರಲ್ಲಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.












Tuesday, 17 October 2017

ಶಾಸಕ ಪುಟ್ಟರಂಗಶೆಟ್ಟಿ ಅವರೆ, ನೆನಪಿರಲಿ

ಶಾಸಕ ಪುಟ್ಟರಂಗಶೆಟ್ಟಿ ಅವರೆ, ನೆನಪಿರಲಿ ..............


ಶಾಸಕ ಪುಟ್ಟರಂಗಶೆಟ್ಟಿ ಅವರೆ, ನೆನಪಿರಲಿ ..
........ಒಮ್ಮೆ ನಿಮ್ಮ ಸೋಲಿಸಬೇಕೆಂದು ಹವಣಿಸುತ್ತಿದ್ದ ಕೆಲವು ಜನರ ತಂಡ ಸೈಟ್  ಮನೆ ಬೇಕೆಂದು ನಿಮ್ಮ ಮುಂದೆ ಬಹುಶಃ ಎಲ್ಲವನ್ನ ಬಿಟ್ಟು ಬಂದು ನಿಂತಿದ್ದಾರೆ. ನಿಮ್ಮ ಸೇವೆ ನಿರಾಶ್ರಿತರಿಗೆ. ನಿರ್ಗತಿಕರಿಗೆ ಹೊರತು, ನಿಯತ್ತು ಇಲ್ಲದವರಿಗಲ್ಲ ನೆನಪಿರಲಿ.ಎಲ್ಲರೂ ಒಂದಾಗಿದ್ದೇವೆ ಎನ್ನುವ ಅವರಿಗೆ ಕೇಳಿ ನಿಮ್ಮಲ್ಲಿ ಎಷ್ಟು ಸಂಘಗಳಿಗೆ.? ಎಷ್ಟು ಸದಸ್ಯರಿದ್ದಾರೆ ? ಎಲ್ಲಿ ಎಲ್ಲಿ ಪ್ರಕರಣವಿದೆ.? (ಇನ್ನ ಪ್ರಶ್ನೆಗಳು ಬೇಕಾದಷ್ಟಿದೆ ಹೋರಾಟದತ್ತ ಹೆಜ್ಜೆ ಇಟ್ಟಾಗ) ಇಲ್ಲಿ ಬಹು ಖಡಕ್ ಎಚ್ಚರಿಕೆ ಎಂದರೂ ಸರಿಯೇ ,ಮನವಿ ಎಂದರೂ ಸರಿಯೇ ? ಯಾವುದೆ ಸರ್ಕಾರದ ಸುತ್ತೋಲೆ, ಆದೇಶ. ಬಿಟ್ಟು ಕದಲಿದರೂ ಹೋರಾಟ ಒಂದೇ ಅದು ಕಾನೂನು ಹೋರಾಟ. ನಿಮಗೆ ಮಾನವೀಯತೆ ಇದ್ದರೆ ಎಲ್ಲ ಪ್ರಾಮಾಣಿಕರಿಗೂ   ಸಿಗಲಿ, ಇಲ್ಲದಿದ್ದರೆ ಯಾರಿಗೂ ಬೇಡ ಎನ್ನುವುದಷ್ಟೆ ನನ್ನ ಕಿವಿ ಮಾತು.
 ನನ್ನ ಹೋರಾಟ ಅಂದು ನಾಲ್ಕು ಗೋಡೆ ಮದ್ಯೆ ಹಿಂದೆ  ಇತ್ತು.  ಆದರೆ ಇಂದು ಸಾವಿರಾರು ಜನರ ಮದ್ಯೆ.ಬರುತ್ತಿದೆ. ನೆನಪಿರಲಿ. ಹಿರಿಯರಾದ ತಾವು ೪೦-೫೦ ವರ್ಷಗಳ ಅನುಭವ ಜೀವನ ನಡೆಸಿದವರು, ಯಾರೊಂದಿಗೆ ಹೇಗಿರಬೇಕೆಂದು ಕಲಿತವರು. ಬುದ್ದಿ ಹೇಳುವಷ್ಟು ದೊಡ್ಡವನ್ನಲ್ಲ. ಕಾನೂನು ಮುಂದೆ ಎಲ್ಲರೂ ಒಂದೆ ಎಂಬುದಷ್ಟೇ ....

ಜಿಲ್ಲಾದಿಕಾರಿಗಳೆ...... ನಿಮಗೂ ಗೊತ್ತಿದೆ ಹಿಂದೆ ಬೈಯ್ದವರು ಇಂದು ನಿಮ್ಮ ಮುಂದೆ ಬಂದಿದ್ದಾರೆ... ಯಾವ ಪ್ರಕರಣ ,ವಿಚಾರಣೆ ನಿಮ್ಮ ಕಛೆರಿಯ ಎಮ್ ಐ.ಜಿ ವಿಭಾಗದಲ್ಲಿ ಬಿದ್ದಿರುವುದು.. 

. ಇಂತಿ ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ

ನವಜಾತ ಗಂಡು ಶಿಶುವಿನ ವಾರಸುದಾರರ ಪತ್ತೆಗೆ ಮನವಿ , ನಿರುದ್ಯೋಗಿಗಳಿಂದ ವಿವಿಧ ತರಬೇತಿಗೆ ಅರ್ಜಿ ಆಹ್ವಾನ (18-10-2017)

     

   ನವಜಾತ ಗಂಡು ಶಿಶುವಿನ ವಾರಸುದಾರರ ಪತ್ತೆಗೆ ಮನವಿ

                                                   VSS -------------9480030980



ಚಾಮರಾಜನಗರ, ಅ. 17 - ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ವಾಹನದ ನಿಲುಗಡೆಯ ಸ್ಥಳದಲ್ಲಿ ಸೆಪ್ಟೆಂಬರ್ 14ರಂದು ರಾತ್ರಿ 11.45ರ ಸಮಯದಲ್ಲಿ ನವಜಾತ ಗಂಡು ಶಿಶುವನ್ನು ಬಿಸಾಡಿ ಹೋಗಿರುತ್ತಾರೆ. ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಲಾಲನೆ, ಪೋಷಣೆ ಹಾಗೂ ರಕ್ಷಣೆಗಾಗಿ ದತ್ತು ಕೇಂದ್ರಕ್ಕೆ ದಾಖಲಿಸಲಾಗಿದೆ.
 ಒಂದು ತಿಂಗಳ ಮಗುವಾಗಿದ್ದು, ಕೆಂಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು 2.9 ಕೆಜಿ ತೂಕವಿದೆ. ಸಂಸ್ಥೆಯವರು ಮಗುವಿಗೆ ಅಭಿನವ್ ಎಂದು ಹೆಸರಿಸಿದ್ದಾರೆ. ಮಗುವಿನ ವಾರಸುದಾರರು ಇದ್ದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು (ದೂ.ಸಂ. 08226-222354), ಮಕ್ಕಳ ಕಲ್ಯಾಣ ಸಮಿತಿ, ಬಾಲಕಿಯರ ಸರ್ಕಾರಿ ಬಾಲಮಂದಿರ, ಹೌಸಿಂಗ್ ಬೋರ್ಡ್ ಕಾಲೋನಿ, ಚಾಮರಾಜನಗರ (ದೂರವಾಣಿ ಸಂಖ್ಯೆ 08226-225711) ಅಥವಾ ಪಟ್ಟಣ ಪೊಲೀಸ್ ಠಾಣೆ (ದೂ.ಸಂಖ್ಯೆ 08226-222047) ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವರು  

ಚಾಮರಾಜನಗರ, ಅ. 17 :- ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾಮಹದೇವಪ್ರಸಾದ್) ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ಜಿಲ್ಲಾಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಪ್ರಮುಖ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಆಹಾರ, ಸಮಾಜ ಕಲ್ಯಾಣ, ಕೈಗಾರಿಕೆ, ಅರಣ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಪ್ರತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿ ಕೆಲಸ-ಕಾರ್ಯವೈಖರಿ ಬಹಳ ಪ್ರಾಮುಖ್ಯತೆ ಪಡೆದಿದೆ. ಆಯಾ ಇಲಾಖೆಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ವಿಳಂಬ ಮಾಡದೇ ಸಮರ್ಪಕವಾಗಿ ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.
ಜಿಲ್ಲೆಯ ಪ್ರಗತಿಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಅದರ ಸುಲಲಿತ ನಿರ್ವಹಣೆಗೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಎಲ್ಲಾ ಅಧಿಕಾರಿಗಳು ಕ್ರೀಯಾಶೀಲರಾಗಿ ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ಕಾಲಕಾಲಕ್ಕೆ ಜನರಿಗೆ ತಲುಪಿಸಿ ಜಿಲ್ಲೆ ಪ್ರಗತಿಪಥದತ್ತ ಸಾಗುವಂತೆ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಯೆ ನಮ್ಮ ಗುರಿಯಾಗಿರಬೇಕು. ಯಾವುದೇ ಕಾರ್ಯಕ್ರಮಗಳ ನಿಗಧಿತ ಗುರಿ ತಲುಪಲು  ಸಂಬಂಧಪಟ್ಟ ಇಲಾಖೆಗಳು ಅಗತ್ಯವಾಗಿರುವ ಅನುದಾನದ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಮುಖ್ಯಮಂತ್ರಿಯವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಲೋಕಸಭಾ ಸದಸ್ಯರಾದ ಆರ್. ಧ್ರುವಾರಾಯಣ ಅವರು ಮಾತನಾಡಿ ಸರ್ಕಾರವು ಪ್ರತಿವರ್ಷ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ತಯಾರಿಸುವ ಕ್ರೀಯಾಯೋಜನೆಯ ಅನುಸಾರ ಇಲಾಖೆಗಳಿಗೆ ಅಗತ್ಯಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ವಿವಿಧ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ ಕೃಷಿ ಸೇರಿದಂತೆ ವಿವಿಧ ವಲಯಗಳಿಗೆ ಸಾಕಷ್ಟು ಅನುದಾನ ನೀಡಿದೆ. ಅದರ ಸದ್ವಿನಿಯೋಗವಾಗಬೇಕು ಎಂದರು.
ಕೊಳ್ಳೇಗಾಲ ಶಾಸಕರಾದ ಎಸ್. ಜಯಣ್ಣ, ಹನೂರು ಶಾಸಕರಾದ ಆರ್. ನರೇಂದÀ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.



ಅ. 22ರಂದು ವಾಹನಗಳ ಬಹಿರಂಗ ಹರಾಜು

ಚಾಮರಾಜನಗರ, ಅ. 17 - ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬೇರೆ ಬೇರೆ ದಿನಗಳಲ್ಲಿ ಹಾಗೂ ಸ್ಥಳಗಳಲ್ಲಿ ವಾರಸುದಾರರಿಲ್ಲದೆ ನಿಂತಿದ್ದ ದ್ವಿಚಕ್ರ ವಾಹನಗಳನ್ನು ಹಗಲು ಮತ್ತು ರಾತ್ರಿ ಗಸ್ತಿನ ಸಿಬ್ಬಂದಿಗಳು ತಂದು ನಿಲ್ಲಿಸಿರುತ್ತಾರೆ.
ವಾಹನಗಳ ಆರ್ ಸಿ ಮಾಲೀಕರು ಈವರೆಗೂ ವಾಹನಗಳನ್ನು ಗುರುತಿಸಿ ತೆಗೆದುಕೊಂಡು ಹೋಗಿರುವುದಿಲ್ಲ ಮತ್ತು ಆರ್.ಸಿ. ಮಾಲೀಕರು ಪತ್ತೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ನಿಯಮದಂತೆ ದ್ವಿಚಕ್ರ ವಾಹನಗಳನ್ನು ಬಹಿರಂಗ ಹರಾಜು ಮಾಡಿ ಹಣವನ್ನು ನ್ಯಾಯಾಲಯಕ್ಕೆ ಪಾವತಿಸಬೇಕಾಗಿದೆ.
 ಅದರನ್ವಯ ದ್ವಿಚಕ್ರ ವಾಹನಗಳನ್ನು ಅಕ್ಟೋಬರ್ 22ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸಂಚಾರಿ ಪೊಲೀಸ್ ಠಾಣೆ ಆವರಣದಲ್ಲಿ ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಹರಾಜಿನಲ್ಲಿ ಭಾಗವಹಿಸುವಂತೆ ಪಟ್ಟಣ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮಹದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅ. 30ರಂದು ವೀರನಪುರದಲ್ಲಿ ಅಂಚೆ ಸಂತೆ

ಚಾಮರಾಜನಗರ, ಅ. 17 – ಅಂಚೆ ಇಲಾಖೆಯು ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ಅಕ್ಟೋಬರ್ 30ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ವೀರನಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.



ನಿರುದ್ಯೋಗಿಗಳಿಂದ ವಿವಿಧ ತರಬೇತಿಗೆ ಅರ್ಜಿ ಆಹ್ವಾನ


ಚಾಮರಾಜನಗರ, ಅ. 17 - ನಗರ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ 2017-18ನೇ ಸಾಲಿಗೆ ಪರಿಶಿಷ್ಟ ವರ್ಗ ಜನಾಂಗದ ನಿರುದ್ಯೋಗಿ ಯುವಕ ಯುವತಿಯರಿಗೆ ಭಾರಿ ವಾಹನ, ಲಘುವಾಹನ, ಕಂಪ್ಯೂಟರ್, ಟೈಲರಿಂಗ್ (ಯುವತಿಯರಿಗೆ), ಗೃಹ ಉಪಯೋಗ ವಿದ್ಯುತ್ ಉಪಕರಣ ಹಾಗೂ ಮೊಬೈಲ್ ದುರಸ್ತಿ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು.  ವಾಹನ ತರಬೇತಿಗೆ 21 ರಿಂದ 35 ವರ್ಷ, ಇತರೆ ತರಬೇತಿಗೆ 18 ರಿಂದ 35ರ ವಯೋಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ವರಮಾನ 2 ಲಕ್ಷ ರೂ. ಮೀರಿರಬಾರದು. ಯಾವುದೇ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ, ತರಬೇತಿ ಪಡೆಯುತ್ತಿರಬಾರದು. ಲಘು ವಾಹನ ಪರವಾನಗಿ (ಎಲ್‍ಎಂವಿ) ಪಡೆದು ಒಂದು ವರ್ಷವಾಗಿರಬೇಕು. ವಾಹನ ತರಬೇತಿಗೆ ಕನಿಷ್ಟ 160 ಸೆಂ.ಮೀ. ಎತ್ತರ, 50 ಕೆಜಿ ತೂಕ ಇರಬೇಕು. 
ಒಬ್ಬ ಅಭ್ಯರ್ಥಿಯು ಒಂದು ತರಬೇತಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಅರ್ಜಿಯನ್ನು ನಗರದ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಅಕ್ಟೋಬರ್ 31ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ನಿಬಂಧನೆಗಳಿಗಾಗಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ (08226-223823) ಅವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಜಾತ್ರಾ ಪ್ರಯುಕ್ತ ವಿಶೇಷ ಬಸ್ ವ್ಯವಸ್ಥೆ


ಚಾಮರಾಜನಗರ, ಅ. 17 - ನಗರ ವಿಭಾಗದ ಕೆಎಸ್‍ಆರ್‍ಟಿಸಿ ನಿಗಮದ ವತಿಯಿಂದ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಲೆಮಹದೇಶ್ವರ ಬೆಟ್ಟಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ತೆರಕಣಾಂಬಿ, ನಂಜನಗೂಡು, ಹುಲ್ಲಹಳ್ಳಿ, ಸರಗೂರು, ಹೆಚ್ ಡಿ ಕೋಟೆ, ಮೈಸೂರು, ಕೊಳ್ಳೇಗಾಲ, ಮಳವಳ್ಳಿ, ಕನಕಪುರ ಹಾಗೂ ಬೆಂಗಳೂರಿನಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದ್ದಾರೆ.












ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು