Thursday, 8 February 2018

ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ವಿರುದ್ದ ದೂರು ಬಿದ್ರೆ ಏನ್ ಮಾಡ್ತಿದ್ರು ಗೊತ್ತ ಈ ಎಸ್ಪಿ.! #VSS

ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ವಿರುದ್ದ ದೂರು ಬಿದ್ರೆ ಏನ್ ಮಾಡ್ತಿದ್ರು ಗೊತ್ತಾ ಈ ಎಸ್ಪಿ.!

ಬಹುತೇಕವಾಗಿ ಇಲಾಖೆ ತೇಜೋವದೆ ಮಾಡಿದರೆ ಹಾಗೂ ಸಿಬ್ಬಂದಿಗಳು ಅಶಿಸ್ತಿನಿಂದ ನಡೆದುಕೊಂಡಿದ್ದೇ ಆದರೆ ಅದು ದಾಖಲೆ ಸಮೇತ ಸಾಮಾಜಿಕ ಜಾಲತಾಣ ವಾಟ್ಸಾಫ್, ಫೇಸ್ ಬುಕ್ ಅಂತಹದರಲ್ಲಿ ಕಾಣಿಸಿಕೊಂಡರೆ ಬಹುಶಃ ಕ್ರಮ ತೆಗೆದುಕೊಂಡವರಲ್ಲಿ ಎಸ್ಪಿಗಳಲ್ಲಿ ಮೊದಲಿದರು ಹಿಂದಿನ (2015-2018) ಎಸ್ಪಿ ಎಂದರೆ ಅದು ಕುಲದೀಪ್ ಕುಮಾರ್ ಆರ್ ಜೈನ್.

ಠಾಣೆಗೆ ಯಾಕೆ ಹೋಗಬೇಕು ನ್ಯಾಯ ಸಿಗದೆ ಇದ್ದರೂ ಪರವಾಗಿಲ್ಲ. ಸಾಮಾಜಕ ಜಾಲತಾಣದಲ್ಲಿ ಜನ ನೋಡ್ತಾರೆ ಬಿಡಿ. ಎಂದು ಹಾಕಿದರೆ ಮುಲಾಜೆ ಇಲ್ಲ.. ಅದಕ್ಕೂ ಆಕ್ಷನ್, ರಿಯಾಕ್ಷನ್  ಅದು 20 ಗಂಟೆಯೊಳಗೆ ಹಾಗಿದ್ದರೆ ಅದಕ್ಕೆ ಯಾವುದು ಉದಾಹರಣೆ.. ಅಲ್ಲಾಗಿದ್ದು ಏನು ಎಂಬುದ ನೋಢಿ.
ಸಾಮಾಜಿಕ ಜಾಲತಾಣದಲ್ಲಿ ಠಾಣೆಯೊಂದರಲ್ಲಿ ದೂರು ನೀಡಲು ವಯಸ್ಸಾದ ಹೆಂಗಸ್ಸು ಹೋದಾಗ ದೂರು ಸ್ವೀಕಾರ ಮಾಡಲು ಗಂಟೆಗಟ್ಟಲೆ ಕಾಯಿಸುವುದರ ಜೊತೆಗೆ ಮೇಲಾದಿಕಾರಿಗಳನ್ನೆ ಬೈಯ್ದಿದ್ದ ಪ್ರಸಂಗ ನಡೆದಿತ್ತು.
ಈ ದೂರು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ಕೂಡಲೇ ಎಲ್ಲಾ ಠಾಣೆಗಳಿಗೂ ಸೌಜನ್ಯದಿಂದ ವರ್ತಿಸುವಂತೆ( ಸಂ/ಚಾಉವಿ/12/2017) ಸೂಚನೆಯನ್ನು 02-03-2017 ರಂದು ನೀಡಿದರು.
ಕೂಡಲೇ ಸಂಬಂದಿಸಿದ ವಿಚಾರಣೆಯನ್ನು  ಪೊಲೀಸ್ ಉಪಾದೀಕ್ಷಕ ಗಂಗಾಧರ ಸ್ವಾಮಿರವರಿಗೆ ವಹಿಸಿ ವಿಚಾರಣೆ ನಡೆಸುವಂತೆ ಎಸ್ಪಿ ಜೈನ್ ಅವರು ಸೂಚಿಸಿದ್ದರು.  ಅದಕ್ಕೆ ಅವರು ಸಮಜಾಯಿಸಿ ನೀಡಿದ್ದಾದರೂ  ಸೂಕ್ತ ತಿಳುವಳಿಕೆ ನೀಡಿ ಅರ್ಜಿ ಮುಕ್ತಾಯಗೊಳಿಸಿದರು.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ದಾಖಲಾದ ಬಹುತೇಕ ದೂರುಗಳಿಗೆ ಕೇವಲ 24 ಗಂಟೆಯೊಳಗೆ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುದವರ ಜೊತೆಗೆ ದಕ್ಷತೆ ತೋರಿದ್ದರು ಬಹುತೇಕ ಗಂಬೀರ ಪ್ರಕರಣದಲ್ಲಿ ಕೆಲವು ಪೇದೆಗಳು ತಮ್ಮ ವೇತನ ಕಡಿತಗೊಳಿಕೊಂಡವರು ಇದಕ್ಕೆ  ಸಾಕ್ಷಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.. ಇಂತಹವರಿಗೊಂದು ಸಲಾಂ ಇರಲಿ.. ಇಷ್ಟ ಆದರೆ ಶೇರ್ ಮಾಡಿ…………………ರಾಮಸಮುದ್ರ…ಎಸ್.ವೀರಭದ್ರಸ್ವಾಮಿ……

ಅಗತ್ಯ ದಾಖಲೆ:  ಉಪಾದೀಕ್ಷರ ಸಹಿ, ಮೊಹರಿನ ಪ್ರತಿ… ಶೀಘ್ರದಲ್ಲೇ......wait n see


Wednesday, 7 February 2018

ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ನೇಮಕಾತಿಗಾಗಿ ನೇರ ಸಂದರ್ಶನ (07-02-2018)

     

ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ನೇಮಕಾತಿಗಾಗಿ ನೇರ ಸಂದರ್ಶನ

ಚಾಮರಾಜನಗರ, ಫೆ. 07 - ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಶಿಕ್ಷಕರ ನೇಮಕಾತಿಗಾಗಿ ಫೆಬ್ರವರಿ 14ರಂದು ನೇರ ಸಂದರ್ಶನ ಕರೆಯಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. 1 ರಿಂದ 5ನೇ ತರಗತಿಯವರೆಗೆ ಬೋಧಿಸಲು ಕಂಪ್ಯೂಟರ್ ಇನ್ಸಸ್ಟ್ರಕ್ಟರ್, ಸಂಗೀತ ವಿಷಯಗಳಲ್ಲಿ ಪ್ರಾಥಮಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದು ಮಾಸಿಕ ಸಂಬಳ 21250 ರೂ.ಗಳಾಗಿರುತ್ತದೆ.
6 ರಿಂದ 9ನೇ ತರಗತಿವರೆಗೆ ಇಂಗ್ಲೀಷ್, ಹಿಂದಿ, ಸಂಸ್ಕøತ, ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಪಿಇಟಿ, ವರ್ಕ್ ಎಕ್ಸ್‍ಪೀರಿಯನ್ಸ್, ಆರ್ಟ್ ಎಜುಕೇಷನ್ ವಿಷಯ ಬೋಧಿಸಲು ಟ್ರೈನ್ಡ್ ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಶಿಕ್ಷಕರಿಗೆ ಮಾಸಿಕ ಸಂಬಳ 26250 ರÀೂ. ನೀಡಲಾಗುತ್ತದೆ.
ಡಿಇಓ, ಯೋಗ ಇನ್‍ಸ್ಟ್ರಕ್ಟರ್ ಹಾಗೂ ಕನ್ನಡ ಶಿಕ್ಷಕರನ್ನು (ಪಾರ್ಟ್ ಟೈಂ) ಮಾಸಿಕ ಕನ್‍ಸಾಲಿಡೇಟೆಡ್ ವೇತನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಅಂದು ಬೆಳಿಗ್ಗೆ 8 ರಿಂದ 8.30ರವರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ವಿದ್ಯಾರ್ಹತೆ, ಇನ್ನಿತರ ಎಲ್ಲ ವಿವರಗಳಿಗೆÀ ವೆಬ್ ಸೈಟ್ ತಿತಿತಿ.ಞಜಛಿhಚಿmಚಿಡಿಚಿರಿಚಿಟಿಚಿgಚಿಡಿ.ಚಿಛಿ.iಟಿ ನೋಡುವಂತೆ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಶವ : ಹೆಸರು ವಿಳಾಸ ಪತ್ತೆಗೆ ಮಾಹಿತಿ ನೀಡಲು ಕೋರಿಕೆಚಾಮರಾಜನಗರ, ಫೆ. 07 - ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಬೇಗೂರು ರಸ್ತೆ ಕೋಳಿಪಾರಂ ಬಳಿ ಅಪರಿಚಿತ ಪುರುಷನ ಶವವೊಂದು ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದರ ಗುರುತು ಹಿಡಿಯಲು ಮಾಹಿತಿ ನೀಡುವಂತೆ ತೆರಕಣಾಂಬಿ ಪೊಲೀಸ್ ಠಾಣೆ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.
20 ರಿಂದ 25 ವರ್ಷ ವಯಸ್ಸಿನ ವ್ಯಕ್ತಿಯನ್ನು ಯಾರೋ ವ್ಯಕ್ತಿಗಳು ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಯಾರಿಗೂ ಗೊತ್ತಾಗದ ಹಾಗೆ ಸಾಕ್ಷ್ಯಾಧಾರಗಳನ್ನು ನಾಶಮಾಡಲು ಬೆಂಕಿ ಹಾಕಿ ಸುಟ್ಟು ಹಾಕಿರುವ ಬಗ್ಗೆ ಠಾಣೆಯಲ್ಲಿ ಕೇಸು ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ. ಈ ಅಪರಿಚಿತ ಮೃತನ ಹೆಸರು, ವಿಳಾಸ ಪತ್ತೆಗೆ ಮಾಹಿತಿ ಇದ್ದಲ್ಲಿ ತೆರಕಣಾಂಬಿ ಪೊಲೀಸ್ ಠಾಣೆಗೆ (08229-232235) ತಿಳಿಸುವಂತೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.


x











































ಹಿಂದುಳಿದ ವರ್ಗಗಳ ಮಹಿಳಾ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಚಾಮರಾಜನಗರ, ಫೆ. 07 - ಕೊಳ್ಳೇಗಾಲ ನಗರಸಭೆಯು 2017-18ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ನೀಡಲಾಗುವ ಸಹಾಯಧನಕ್ಕೆ ಹಿಂದುಳಿದ ವರ್ಗಗಳ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಂತ ಖಾಲಿ ನಿವೇಶನ ಹೊಂದಿರಬೇಕು. ಅರ್ಜಿಯನ್ನು ಪಡೆದು ಭರ್ತಿ ಮಾಡಿ ಫೆಬ್ರವರಿ 28ರೊಳಗೆ ಜಾತಿ, ವರಮಾನ ಪತ್ರ, ಪಡಿತರ ಚೀಟಿ, ನಿವೇಶನ ದಾಖಲೆ, ಆದಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ನೋಟರಿ ಪ್ರಮಾಣ ಪತ್ರ (ಅಫಿಡವಿಟ್), ನಿವೇಶನದ ನಮೂನೆ 3 ದಾಖಲಾತಿಗಳನ್ನು ಗೆಜೆಟೆಟ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ವಿವರಗಳಿಗೆ ನಗರಸಭೆ ಕಚೇರಿ ಸಂಪರ್ಕಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಫೆ. 16ರಂದು ಕೊಳ್ಳೇಗಾಲ ತಾಲೂಕು ಪ.ಜಾ, ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ: ಕುಂದುಕೊರತೆ ಬಗ್ಗೆ ಲಿಖಿತ ಸಲ್ಲಿಕೆಗೆ ಮನವಿ
ಚಾಮರಾಜನಗರ, ಫೆ. 07:- ಕೊಳ್ಳೇಗಾಲ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಪರಿಶಿಷ್ಟ ಜಾತಿ ವರ್ಗದವರ ಹಿತರಕ್ಷಣೆ ಸಂಬಂಧ ಹಾಗೂ ಕುಂದುಕೊರತೆಗಳ ಬಗ್ಗೆ ಸಭೆಯಲ್ಲಿ ಸಂಘಸಂಸ್ಥೆಯವರು, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಚರ್ಚಿಸಲು ಇಚ್ಚಿಸಿದ್ದಲ್ಲಿ ಫೆಬ್ರವರಿ 12ರೊಳಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಲಿಖಿತವಾಗಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.
  ಪ್ರಕಾಶಕರ ನೋಂದಣಿಗೆ ಅರ್ಜಿ ಆಹ್ವಾನಚಾಮರಾಜನಗರ, ಫೆ. 07 - ಕನ್ನಡ ಪುಸ್ತಕ ಪ್ರಾಧಿಕಾರವು ಪುಸ್ತಕ ಪ್ರಕಾಶಕರ ವಿವರಗಳನ್ನು ಸಾಹಿತ್ಯಾಸಕ್ತರಿಗೆ ಒಂದೆಡೆ ಲಭಿಸುವಂತೆ ಮಾಡುವ ಉದ್ದೇಶದಿಂದ ಪ್ರಕಾಶಕರ ನೋಂದಣಿ ಯೋಜನೆಯನ್ನು ಆರಂಭಿಸಿದ್ದು ಎಲ್ಲ ಪ್ರಕಾಶಕರು ಹೆಸರು ನೊಂದಾಯಿಸುವಂತೆ ಕೋರಿದೆ.
ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ಸಂಪರ್ಕಿಸಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು – 560002 ಇಲ್ಲಿಗೆ ಕಳುಹಿಸಬೇಕು. ವಿವರಗಳಿಗೆ 080-22107704/22484516 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Tuesday, 6 February 2018

ಶೌಚಾಲಯ ನಿರ್ಮಾಣ ಬಳಕೆ ಜಾಗೃತಿಗೆ ಆಶಾ ಕಾರ್ಯಕರ್ತೆಯರಿಂದ ಬೃಹತ್ ಜಾಥಾ ಮಾನವ ಸರಪಳಿ (06-02-2018)



ಶೌಚಾಲಯ ನಿರ್ಮಾಣ ಬಳಕೆ ಜಾಗೃತಿಗೆ ಆಶಾ ಕಾರ್ಯಕರ್ತೆಯರಿಂದ ಬೃಹತ್ ಜಾಥಾ ಮಾನವ ಸರಪಳಿ

ಚಾಮರಾಜನಗರ, ಫೆ. 06 - ಶೌಚಾಲಯ ನಿರ್ಮಾಣ ಹಾಗೂ ಬಳಕೆಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪಂಚಾಯತ್ ವತಿಯಿಂದ ಆಶಾ ಕಾರ್ಯಕರ್ತೆಯರು ನಗರದಲ್ಲಿ ಇಂದು ಬೃಹತ್ ಜಾಥಾ ನಡೆಸಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಗಮನ ಸೆಳೆದರು.
ನಗರದ ವಾಲ್ಮೀಕಿ ಭವನದಲ್ಲಿ ಆಶಾ ಕಾರ್ಯಕತೆರ್Àಯರ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.






ಇದೇವೇಳೆ ಮಾತನಾಡಿದ ರಾಮಚಂದ್ರ ಅವರು ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಚ್ಚತೆ ಎನ್ನುವುದು ನಮ್ಮ ಮನೆ ಸುತ್ತಮುತ್ತಲ ಪರಿಸರ ಕಾಪಾಡಿಕೊಳ್ಳುವುದರಿಂದಲೇ ಆರಂಭವಾಗಬೇಕು. ಗ್ರಾಮದ ನೈರ್ಮಲ್ಯ ಚೆನ್ನಾಗಿದ್ದರೆ ಆರೋಗ್ಯವೂ ಸಹ ಉತ್ತಮವಾಗಿರಲಿದೆ. ಹೀಗಾಗಿ ಪ್ರತಿಯೊಬ್ಬರೂ ಶೌಚಾಲಯಕ್ಕೆ ಬಯಲು ಅವಲಂಬಿಸದೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಈಗಾಗಲೇ ನಿರ್ಮಾಣ ಮಾಡಿಕೊಂಡಿರುವವರು ಬಳಕೆ ಮಾಡಬೇಕು ಎಂದರು.
ಬಳಿಕ ವಾಲ್ಮೀಕಿ ಭವನದಿಂದ ಹೊರಟ ಆಶಾ ಕಾರ್ಯಕರ್ತೆಯರ ಜಾಥಾ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಬಂದು ಸೇರಿತು. ಅಲ್ಲಿ ಬೃಹತ್ ಮಾನವ ಸರಪಳಿಯನ್ನು ರಚಿಸುವ ಮೂಲಕ ಆಶಾ ಕಾರ್ಯಕರ್ತೆಯರು ಶೌಚಾಲಯ ನಿರ್ಮಾಣ ಹಾಗೂ ಬಳಕೆ ಮಹತ್ವ ಕುರಿತು ಘೋಷಣೆಗಳನ್ನು ಮೊಳಗಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಇದೇವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಆರೋಗ್ಯದ ಪ್ರಥಮ ಹೆಜ್ಜೆ ನೈರ್ಮಲ್ಯವಾಗಿದೆ. ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಹ ಆಶಾ ಕಾರ್ಯಕರ್ತೆಯರು ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕೆಂದರು.
ತದನಂತರ ವಾಲ್ಮೀಕಿ ಭವನಕ್ಕೆ ಮತ್ತೆ ಮರಳಿದ ಆಶಾ ಕಾರ್ಯಕರ್ತೆಯರು ಭವನದ ಸಭಾಂಗಣದಲ್ಲಿ ಸಮಾವೇಶಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಆರೋಗ್ಯ ಹಾಗೂ ಸ್ವಚ್ಚತೆಗೆ ಅವಿನಾಭಾವ ಸಂಬಂಧವಿದೆ. ಗ್ರಾಮೀಣ ಭಾಗಗಳಲ್ಲಿ ಸಕ್ರಿಯರಾಗಿರುವ ಆಶಾ ಕಾರ್ಯಕರ್ತೆಯರು ಶೌಚಾಲಯ ಬಳಕೆ, ನಿರ್ಮಾಣದ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಲು ಸಾಧ್ಯವಾಗಲಿದೆ. ಈ ಕೆಲಸವನ್ನು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕೆಂದು ಸಲಹೆ ಮಾಡಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ರಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕಡೆ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಇದರ ಬಳಕೆಗೆ ನಿರಂತರವಾಗಿ ಉತ್ತೇಜಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ಜಿ.ಪಂ. ಉಪಕಾರ್ಯದರ್ಶಿ ಎನ್. ಮುನಿರಾಜಪ್ಪ, ಯೋಜನಾ ಮುಖ್ಯಾಧಿಕಾರಿ ಮಾದೇಶು, ಯೋಜನಾ ನಿರ್ದೇಶಕರಾದ ಶ್ರೀಧರ್, ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಆರ್ ಸಿ ಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಚಿತ ಸಾಮೂಹಿಕ ಸರಳ ವಿವಾಹ : ನೋಂದಣಿಗೆ ಮನವಿ

      ಚಾಮರಾಜನಗರ, ಫೆ. 06- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊಳ್ಳೇಗಾಲ ತಾಲೂಕಿನ ಹನೂರು ಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಫೆಬ್ರವರಿ 18ರಂದು ಬೆಳಿಗ್ಗೆ 11 ಗಂಟೆಗೆ ಪ್ರಬುದ್ಧ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಚೇತವನ ಬೌದ್ಧ ವಿಹಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಉಚಿತ ಸರಳ ಸಾಮಾಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರು ಫೆಬ್ರವರಿ 13ರೊಳಗೆ ಪ್ರಬುದ್ಧ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಚೇತವನ ಬೌದ್ಧವಿಹಾರ, 14/96 ಚೆನ್ನಾಲಿಂಗನಹಳ್ಳಿ ಪೋಸ್ಟ್, ಕೊಳ್ಳೇಗಾಲ ತಾಲೂಕು ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಳ್ಳೇಗಾಲ ತಾಲೂಕು ಇಲ್ಲಿ ನೊಂದಾಯಿಸಿಕೊಳ್ಳಬಹುದು.
ವಧುವಿಗೆ ಕಡ್ಡಾಯವಾಗಿ 18 ವರ್ಷ, ವರನಿಗೆ 21 ವರ್ಷ ಪೂರ್ಣವಾಗಿರಬೇಕು. ಈ ಬಗ್ಗೆ ದಾಖಲಾತಿ ಸಲ್ಲಿಸಬೇಕು. ಸರಳ ಸಾಮಾಹಿಕ ವಿವಾಹದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಸಾವಿರ ರೂ. ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕೆಪಿಎಸ್‍ಸಿ ಪರೀಕ್ಷೆ

ಚಾಮರಾಜನಗರ, ಫೆ. 06 - ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಫೆಬ್ರವರಿ 4ರಂದು ನಡೆಸಲು ಉದ್ದೇಶಿಸಿದ್ದ ಪ್ರಥಮದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡಿದ್ದು ಈ ಪರೀಕ್ಷೆಯನ್ನು ಫೆಬ್ರವರಿ 25ರಂದು ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಹಿಂದೆ ನಿಗದಿಪಡಿಸಲಾಗಿದ್ದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ. ಉಳಿದಂತೆ ಫೆಬ್ರವರಿ 10ರಂದು ಪ್ರಥಮದರ್ಜೆ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಫೆಬ್ರವರಿ 11ರಂದು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.



ಫೆ. 17ರಂದು ಚಾಮರಾಜನಗರ ಜಿಲ್ಲಾಮಟ್ಟದ ಕ್ರೀಡಾಕೂಟ: ಹೆಸರು ನೊಂದಾಯಿಸಲು ಮನವಿ

ಚಾಮರಾಜನಗರ, ಫೆ. 06 - ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಾಪುರದ ಗೌತಮಬುದ್ಧ ಸಾಂಸ್ಕøತಿಕ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರವರಿ 17ರಂದು ಬೆಳಿಗ್ಗೆ 9.30 ಗÀಂಟೆಗೆ ಆಯೋಜಿಸಲಾಗಿದೆ.
ಸ್ಪರ್ಧಿಗಳಿಗೆ 100 ಮೀ, 200 ಮೀ. ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಖೋಖೋ ಹಾಗೂ ಕಬಡ್ಡಿ ಸ್ಪರ್ಧೆಗಳಿವೆ.
ಸ್ಪರ್ಧಾಳುಗಳು ಕ್ರೀಡಾಕೂಟದಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟದ ಸ್ಥಳದಲ್ಲಿ ಸಂಘಟಿಕರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಬಸವಣ್ಣ (ಮೊ. 9482708278), ಮಹೇಶ್ (ಮೊ. 9900430748), ಪ್ರಭಾವತಿ (ಮೊ. 8095040475), ಗೋವಿಂದರಾಜ್ (ಮೊ. 7353633360), ಮಂಜಪ್ಪ ಬಿ.ಎಂ. (ಮೊ. 9590632002), ರಾಜೇಶ್ ಎಂ (ಮೊ. 8660640330), ಬಿ.ವಿ. ಮಂಜುನಾಥ (ಮೊ. 9742567733) ಇವರುಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಮಗುವಿನ ಪೋಷಕರ ಪತ್ತೆಗೆ ಮನವಿ

ಚಾಮರಾಜನಗರ, ಫೆ. 06- ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದ ಸರಿತಾ ಹಾಗೂ ಸತ್ತಿವೇಲ್ ದಂಪತಿಗಳು 2017ರ ಮೇ 1ರಂದು ಕೊಯಮತ್ತೂರಿನ ವೈದ್ಯಕೀಯ ಆಸ್ಪತ್ರೆಯಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ನಂತರ ಪುಣಜನೂರು ಗ್ರಾಮಕ್ಕೆ ಬಂದು ಮುಸ್ಲಿಂ ದಂಪತಿಗಳಿಗೆ ಸಾಕಲು ನೀಡಿದ್ದರು. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಮುಸ್ಲಿಂ ದಂಪತಿಗಳಿಂದ ಮಗುವನ್ನು ಇಲಾಖೆಯ ವಶಕ್ಕೆ ಪಡೆದು ರಕ್ಷಿಸಲಾಗಿದೆ.
ಇಲಾಖೆಯ ವಶಕ್ಕೆ ಪಡೆದ ನಂತರ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗುವಂತೆ ಜೈವಿಕ ಪೋಷಕರಾದ ಸತ್ತಿವೆಲ್ ಹಾಗೂ ಸರಿತಾರಿಗೆ ತಿಳಿಸಿದರೂ ಸಹ ಇದುವರೆಗೆ ಮಗುವಿನ ಬಗ್ಗೆ ವಿಚಾರಿಸಲು, ವಾಪಸ್ಸು ಪಡೆಯಲು ಹಾಜರಾಗಿರುವುದಿಲ್ಲ. ಪುಣಜನೂರು ಗ್ರಾಮದಲ್ಲೂ ವಾಸವಿರುವುದಿಲ್ಲ.
ಮಗುವಿನ ತಂದೆಯಾದ ಸತ್ತಿವೇಲ್ ತಮಿಳುನಾಡಿನÀ ಸತ್ಯಮಂಗಲಂನ ಹಳ್ಳಿಯ ನಿವಾಸಿಯಾಗಿದ್ದು ಅಲ್ಲಿಗೆ ಹೋಗಿರುವುದಾಗಿ ಪುಣಜನೂರು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿರುತ್ತಾರೆ. ಮಗುವನ್ನು ಪ್ರಸ್ತುತ ಮಂಡ್ಯ ಜಿಲ್ಲೆಯ ದತ್ತು ಕೇಂದ್ರ ವಿಕಸನ ಸಂಸ್ಥೆಯಲ್ಲಿ ಪುನರ್ ವಸತಿಗೊಳಿಸಿ ಮಗುವಿಗೆ ವೈದೇಹಿ ಎಂದು ನಾಮಕರಣ ಮಾಡಲಾಗಿರುತ್ತದೆ.
ಮಗುವಿನ ಮೂಲ ಪೋಷಕರ ಪತ್ತೆಗಾಗಿ ಕೋರಲಾಗಿದ್ದು ಸಂಬಂಧಪಟ್ಟವರು ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಮಕ್ಕಳ ಕಲ್ಯಾಣ ಸಮಿತಿಯ ಬಾಲಕಿಯರ ಸರ್ಕಾರಿ ಬಾಲಮಂದಿರ (ದೂ.ಸಂ. 08226-225701, ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು (ದೂ.ಸಂ. 08226-222354) ಅಥವಾ ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ (ವಿಶೇಷ ದತ್ತು ಸಂಸ್ಥೆ) (ದೂ.ಸಂ. 08232-221717)ಯನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಬಯಲು ಶೌಚಮುಕ್ತ ನಗರ : ಆಕ್ಷೇಪಣೆ, ಪ್ರತಿಕ್ರಿಯೆ ಆಹ್ವಾನ 

ಚಾಮರಾಜನಗರ, ಫೆ. 06- ಕೊಳ್ಳೇಗಾಲ ನಗರಸಭೆಯು ನಗರಾಭಿವೃದ್ಧಿ ಮಂತ್ರಾಲಯದ ಸ್ವಚ್ಚ ಭಾರತ್ ಅಭಿಯಾನದಡಿ ಬಯಲು ಶೌಚ ಮುಕ್ತ ನಗರವನ್ನಾಗಿ ಮಾಡಲು ಉದ್ದೇಶಿಸಿ ಕೆಲವು ವಾರ್ಡುಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲು ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ನಗರಸಭೆಯ ವಾರ್ಡ್ ಸಂಖ್ಯೆ 8, 10, 14, 15, 16, 17, 18, 19, 20, 21, 22 ಮತ್ತು 23ರ ಒಟ್ಟು 12 ವಾರ್ಡುಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಲು ತೀರ್ಮಾನಿಸಿದೆ.
ಈ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರು ಫೆಬ್ರವರಿ 9ರ ಒಳಗೆ  ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳು ಇದ್ದಲ್ಲಿ ಕೊಳ್ಳೇಗಾಲ ನಗರಸಭೆಗೆ ಲಿಖಿತವಾಗಿ ಸಲ್ಲಿಸಲು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.


Monday, 5 February 2018

ಮತಗಟ್ಟೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಡಿ.ಸಿ. ಸೂಚನೆ (05-02-2018)

  

   ಮತಗಟ್ಟೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಡಿ.ಸಿ. ಸೂಚನೆ

      ಚಾಮರಾಜನಗರ, ಫೆ. 05  ಮುಂಬರುವ ವಿಧಾನ ಸಭಾ ಚುನಾವಣೆ ಉದ್ದೇಶದಿಂದ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಮತಗಟ್ಟೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದರು.
     ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ನಡೆದ  ವಿಧಾನಸಭಾ ಚುನಾವಣೆ ಸಂಬಂಧ ಕೈಗೊಳ್ಳಬೇಕಿರುವ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆಗಳುಯ ಇರುವ ಬಗ್ಗೆ ತಹಸೀಲ್ದಾರ್ ಅವರು ಖಾತರಿ ಮಾಡಿಕೊಳ್ಳಬೇಕು. ಗುರುತಿಸಲಾಗಿರುವ ಮತಗಟ್ಟೆ ಕೊಠಡಿಗಳು ದುರಸ್ತಿಯಾಗಬೇಕಿದ್ದರೆ ತಕ್ಷಣವೇ ಅದಕ್ಕೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಮತಗಟ್ಟೆಗಳಲ್ಲಿ ಪೀಠೋಪಕರಣಗಳು ಸಹ ಇರಬೇಕು. ಇತರೆ ಅಗತ್ಯ ಸೌಲಭ್ಯಗಳು ಇದೆಯೇ ಎಂದು ಪರಿಶೀಲಿಸಬೇಕು. ಇಲ್ಲವಾದಲ್ಲಿ ಯಾವ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಮುಂದಾಗಬೇಕು. ಈಗಾಗಲೇ ಪ್ರಥಮವಾಗಿ ಕೆಲ ಮಾಹಿತಿ ಪಡೆಯಲಾಗಿದೆ. ಅದರ ಅನುಸಾರ ಆಗಬೇಕಿರುವ ಕೆಲಸಗಳಿಗೆ ಸೂಚಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸೆಕ್ಟರ್ ಅಧಿಕಾರಿಗಳ ನೇಮಕ, ರೂಟ್ ಮ್ಯಾಪ್, ಇನ್ನಿತರ ಪ್ರಕ್ರಿಯೆಗೂ ಪೂರ್ವಸಿದ್ಧತೆ ಮಾಡಬೇಕು. ಸರ್ಕಾರಿ ವಾಹನಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಲಾಗುತ್ತದೆ. ಹೀಗಾಗಿ ಎಲ್ಲವೂ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಭದ್ರತೆಗಾಗಿ ನಿಯೋಜಿಸಲ್ಪಡುವ ಅಧಿಕಾರಿ ಸಿಬ್ಬಂದಿಗೆ ವಾಸ್ತವ್ಯಕ್ಕಾಗಿ ಲಭ್ಯವಿರುವ ಕೊಠಡಿಗಳನ್ನು ಗುರುತಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು ಮಾತನಾಡಿ ಜಿಲ್ಲೆಗೆ ಹೊಂದಿಕೊಂಡಿರುವ ಅಂತರ್ ರಾಜ್ಯ ಚೆಕ್ ಪೋಸ್ಟ್‍ಗಳನ್ನು ಸಹ ತೆರೆಯಲಾಗುತ್ತದೆ. ಇಲ್ಲಿಗೆ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಚೆಕ್ ಪೋಸ್ಟ್‍ಗಳಿಗೆ ವಿದ್ಯುತ್, ಇನ್ನಿತರ ಅಗತ್ಯ ಸಿದ್ಧತೆಗಳನ್ನು ಸಹ ಮಾಡಬೇಕಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಧಿಕಾರಿ ಫೌಜಿಯಾ ತರನಮ್, ತಹಸೀಲ್ದಾರ್ ಕೆ. ಪುರಂಧರ್, ಚಂದ್ರಮೌಳಿ, ಕಾಮಾಕ್ಷಮ್ಮ, ಸಿದ್ದು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್, ಜಂಟಿ ಕೈಗಾರಿಕಾ ನಿರ್ದೇಶಕರಾದ ಮರುಳೇಶ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಅರಣ್ಯ, ಅಗ್ನಿಶಾಮಕ ದಳ, ಕೆಎಸ್‍ಆರ್‍ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಫೆ. 7ರಂದು ಚಾಮರಾಜನಗರದಲ್ಲಿ ವಿದ್ಯುತ್ ಸಂಬಂಧ ಜನಸಂಪರ್ಕ ಸಭೆ

ಚಾಮರಾಜನಗರ, ಫೆ. 05 ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಚಾಮರಾಜನಗರ ಉಪವಿಭಾಗದ ಕಚೇರಿ ಆವರಣದಲ್ಲಿ ಫೆಬ್ರವರಿ 7ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನಸಂಪರ್ಕ ಸಭೆಯನ್ನು ನಡೆಸಲಿದೆ.
ವಿದ್ಯುತ್ ಸಂಬಂಧಿತ ಕುಂದುಕೊರತೆ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ತಿಳಿಸಿ ಪರಿಹರಿಸಿಕೊಳ್ಳÀಬಹುದೆಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.6 ರಿಂದ ರಾಗಿ ಖರೀದಿ ಕೆಂದ್ರಗಳು ಆರಂಭ

ಚಾಮರಾಜನಗರ, ಫೆ. 05 - ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡುವ ಸಲುವಾಗಿ ಚಾಮರಾಜನಗರ ತಾಲ್ಲೋಕಿನ ಕಾಳನಹುಂಡಿ ರಸ್ತೆಯಲ್ಲಿರುವ ರಾಜ್ಯ ಉಗ್ರಾಣ ನಿಗಮ ಹಾಗೂ ಕೊಳ್ಳೇಗಾಲ ಪಟ್ಟಣದ ಕುರುಬನಕಟ್ಟೆ ರಸ್ತೆಯಲ್ಲಿರುವ ರಾಜ್ಯ ಉಗ್ರಾಣ ನಿಗಮದಲ್ಲಿ ಫೆಬ್ರವರಿ 6 ರಿಂದ ಖರೀದಿ ಕೇಂದ್ರ ತೆರೆಯಲಾಗಿದೆ.
ಖರೀದಿ ಕೇಂದ್ರಗಳು ಮಾರ್ಚ್ ಅಂತ್ಯದವರೆಗೂ ಕಾರ್ಯ ನಿರ್ವಹಿಸಲಿವೆ. ಪ್ರತಿ ಕ್ವಿಂಟಾಲ್ ರಾಗಿಗೆ 2300 ರೂ ನಿಗಧಿಪಡಿಸಿದ್ದು, ಈ ದರ ಅನುಸಾರ ರಾಗಿಯನ್ನು ಖರೀದಿ ಮಾಡಲಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ಗ್ರೇಡರ್‍ಗಳನ್ನು ನೇಮಕ ಮಾಡಲಾಗಿದೆ. ಗುಣಮಟ್ಟದ ರಾಗಿಯನ್ನು ಖರೀದಿ ಮಾಡಲಾಗುತ್ತದೆ. ರಾಗಿ ತರುವ ರೈತರು ಬೆಳೆಗಾರರಿಂದ ಆರ್.ಟಿ,ಸಿ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತದೆ. ರಾಗಿ ಖರೀದಿಸಿದ ನಂತರ ರೈತರು ಬೆಳೆಗಾರರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ.
ಖರೀದಿ ಕೇಂದ್ರದಲ್ಲಿ ಯಾವುದೇ ದಲ್ಲಾಳಿಗಳಿಗೆ ಅವಕಾಶವಿರುವುದಿಲ್ಲ. ರಾಗಿ ಬೆಳೆಗಾರರು ರೈತರು ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಖರೀದಿಸುವ ಸಲುವಾಗಿ ತೆರೆಯಲಾಗಿರುವ ಖರೀದಿ ಕೇಂದ್ರಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫೆ. 6ರಂದು ಮೂಡ್ನಾಕೂಡುವಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಕುರಿತ ವಿಚಾರ ಸಂಕಿರಣ, ಕಾರ್ಯಾಗಾರ

ಚಾಮರಾಜನಗರ, ಫೆ. 05 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರದ ಜನಹಿತಾಶಕ್ತಿ ಹೋರಾಟ ವೇದಿಕೆ ಇವರ ಸಹಕಾರದೊಂದಿಗೆ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಗರ್Àಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1959 ಹಾಗೂ 1905ರ ಕುರಿತಂತೆ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ತಾಲೂಕಿನ ಮೂಡ್ನಾಕೂಡಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಫೆಬ್ರವರಿ 6ರಂದು ಬೆಳಿಗ್ಗೆ 11 ಗÀಂಟೆಗೆ ಆಯೋಜಿಸಲಾಗಿದೆ.
ನಗರದ ಇಂಟರ್ ನ್ಯಾಷನಲ್ ಚಾರಿಟಬಲ್ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಪೂಜ್ಯ ಬಂತೇ ಬೋಧಿತತ್ವ ಅವರು ದಿವ್ಯ ಸಾನಿಧ್ಯ ವಹಿಸುವರು.
ಹರವೆ ಮಠಾಧೀಶರಾದ ಪೂಜ್ಯ ಶ್ರೀ ಸರ್ಪಭೂಷಣ ಸ್ವಾಮೀಜಿಯವರು ಉದ್ಘಾಟನೆ ನೆರವೇರಿಸುವರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಕರಾದ ಬಿ. ಮಹದೇವ ಅಧ್ಯಕ್ಷತೆ ವಹಿಸುವರು.
ಸಾಹಿತಿ ಹಾಗೂ ವಿಚಾರವಾದಿಗಳಾದ ಸೋಮಶೇಖರ ಬಿಸಲ್ವಾಡಿ ಹಾಗೂ ನಗರದ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪಿ. ದೇವರಾಜು ಅವರು ವಿಚಾರ ಮಂಡಿಸುವರು.
ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಸಿ.ಎಂ. ಕೃಷ್ಣಮೂರ್ತಿ, ದ.ಸಂ.ಸ.ದ ರಾಜ್ಯ ಸಂಯೋಜಕರಾದ ಕೆ.ಎಂ. ನಾಗರಾಜು, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾದ ಮೂಡ್ನಾಕೂಡು ಪ್ರಕಾಶ್, ಕದಂಬ ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಕದಂಬ ನಾ. ಅಂಬರೀಷ್, ನಿಜಧ್ವನಿ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ನಿಜಧ್ವನಿ ಗೋವಿಂದರಾಜು, ಯುವ ಮುಖಂಡರಾದ ಕೆರೆಹಳ್ಳಿ ಬಸವರಾಜು, ಇದಾಯತ್ ಷರೀಫ್, ದಲಿತ ಮುಖಂಡರಾದ ಹೆಗ್ಗವಾಡಿ ಕೆಂಪರಾಜು, ಹೊಸಹಳ್ಳಿ ಮಧುಸೂದನ್, ಕೆರೆಹಳ್ಳಿ ರಾಜುಕುಮಾರ್, ಹರವೆ ಹೊಸಹಳ್ಳಿ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ನಾಗೇಂದ್ರ ಹೊಸಹಳ್ಳಿ, ಕುಲಗಾಣದ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಕುಲಗಾಣ ಷಡಕ್ಷರಿ, ಮೂಡ್ನಾಕೂಡು ಮಹಿಳಾ ಸಂಘದ ಅಧ್ಯಕ್ಷರಾದ ಭಾಗ್ಯಮ್ಮ, ಪದ್ಮಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜನಹಿತಾಸಕ್ತಿ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷರಾದ ರಾಮಸಮುದ್ರ ಸುರೇಶ್, ಜಿಲ್ಲಾ ಉಪಾಧ್ಯಕ್ಷರಾದ ಸಿದ್ದಯ್ಯನಪುರ ಧನಂಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಡಹಳ್ಳಿ ನಾಗರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಫೆ. 7ರಂದು ಹರದನಹಳ್ಳಿಯಲ್ಲಿ ಸೆಸ್ಕ್ ಜನಸಂಪರ್ಕ ಸಭೆ

ಚಾಮರಾಜನಗರ, ಫೆ. 05 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಹರದನಹಳ್ಳಿ ಉಪವಿಭಾಗದ ಸೆಸ್ಕ್ ಕಚೇರಿಯಲ್ಲಿ ಫೆಬ್ರವರಿ 7ರಂದು ಮಧ್ಯಾಹ್ನ 3.30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜನಸಂಪರ್ಕ ಸಭೆಯನ್ನು ನಡೆಸಲಿದೆ.
ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ತಿಳಿಸಬಹುದೆಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆÀ ಕೌಶಲ್ಯಾಭಿವೃದ್ಧಿ ತರಬೇತಿ : ಹೆಸರು ನೊಂದಾಯಿಸಿ

ಚಾಮರಾಜನಗರ, ಫೆ. 05 - ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬÉೀತಿ ನೀಡಿ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ವೆಬ್ ಸೈಟ್ ತಿತಿತಿ.sಣsಞiಟಟಞಚಿಡಿ.iಟಿ ನಲ್ಲಿ ವಿವರಗಳನ್ನು ನೊಂದಾಯಿಸಲು ತಿಳಿಸಿದೆ.
ಹೆಸರು ನೊಂದಾಯಿಸಲು ಫೆಬ್ರವರಿ 21 ಕಡೆಯ ದಿನ.
ಹೆಚ್ಚಿನ ಮಾಹಿತಿಗೆ ತಾಲೂಕಿನ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ (ದೂ.ಸಂಖ್ಯೆ 08226-226070), ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ನಿರ್ದೇಶಕರ ಕಚೇರಿ, 1ನೇ ಮಹಡಿ, ಲೋಟಸï ಟವರ್ಸ್, ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಅಥವಾ ಸಹಾಯವಾಣಿ ಸಂಖ್ಯೆ 9972494764ನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾ ವಸತಿಶಾಲೆಗೆ ಆಯ್ಕೆ ಪ್ರಕ್ರಿಯೆ

ಚಾಮರಾಜನಗರ, ಫೆ. 05 :- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿಗೆ ಕ್ರೀಡಾ ವಸತಿಶಾಲೆಗೆ ಆಯ್ಕೆ ಪ್ರಕ್ರಿಯೆಯನ್ನು ತಾಲೂಕುವಾರು ಕೈಗೊಂಡಿದೆ.
ಫೆಬ್ರವರಿ 6ರಂದು ಬೆಳಿಗ್ಗೆ 9.30 ಗಂಟೆಗೆ ಗುಂಡ್ಲುಪೇಟೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣ, ಫೆಬ್ರವರಿ 7ರಂದು ಕೊಳ್ಳೇಗಾಲ ತಾಲೂಕಿನ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಕಾಲೇಜು ಮೈದಾನ, ಫೆಬ್ರವರಿ 8ರಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಡಾ.ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ, ಫೆಬ್ರವರಿ 9ರಂದು ಹನೂರು ತಾಲೂಕಿಗೆ ಸಂಬಂಧಿಸಿದಂತೆ ಹನೂರು ಪಟ್ಟಣದ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಬೆಳಿಗ್ಗೆ 9.30 ಗಂಟೆಗೆ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಪ್ರಸಕ್ತ ಸಾಲಿನಲ್ಲಿ 7 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು 2018-19ನೇ ಸಾಲಿಗೆ ಕ್ರಮವಾಗಿ 8ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ವಿವರಗಳಿಗೆ ಬಿ.ಕೆ. ಗೋಪಾಲ್, ಫುಟ್ ಬಾಲ್ ತರಬೇತುದಾರರು (ಮೊ. 9945615695), ಮಹದೇವಯ್ಯ, ವಾಲಿಬಾಲ್ ತರಬೇತುದಾರರು (ಮೊ. 7760841489), ಕೆ.ಸಿ. ಶಿವಣ್ಣ (ಮೊ. 9482990914), ಬಿ.ಎಸ್. ಕಾರ್ತಿಕ್ (ಮೊ.9901062721) ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂರವಾಣಿ ಸಂಖ್ಯೆ 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Sunday, 4 February 2018

ಶಿವರಾತ್ರಿ ಜಾತ್ರಾ ಮಹೋತ್ಸವ : ಅಗತ್ಯ ಸಿದ್ದತೆಗೆ ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ ಸೂಚನೆ (04-02-2018)

   

ಶಿವರಾತ್ರಿ ಜಾತ್ರಾ ಮಹೋತ್ಸವ : ಅಗತ್ಯ ಸಿದ್ದತೆಗೆ ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ ಸೂಚನೆ

  (#VSS #RAMASAMUDRA #VEERABHADRA #SWAMY)

ಚಾಮರಾಜನಗರ, ಫೆ. 04 - ಕೊಳ್ಳೆಗಾಲ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.12 ರಿಂದ 16 ರವರಗೆ ಶಿವರಾತ್ರಿ ಜಾತ್ರಾಮಹೋತ್ಸವ ನಡೆಯಲಿರುವ ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಸಿದ್ದತೆ ಮಾಡುವಂತೆ ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ||ಗೀತಾ ಮಹದೇವಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ನಗರದ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ಇಂದು ಶಿವರಾತ್ರಿ ಜಾತ್ರಾಮಹೋತ್ಸವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲೆಮಹದೇಶ್ವರಬೆಟ್ಟಕ್ಕೆ ಈಚಿನ ದಿನಗಳಲ್ಲಿ ವಿಶೇಷ ಸಂದರ್ಭದಲ್ಲಿ ಸೇರಿದಂತೆ ಪ್ರತಿದಿನವೂ ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ, ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಡೆಯುವ ಜಾತ್ರೆಯಲ್ಲಿ ರಾಜ್ಯಸೇರಿದಂತೆ ನೆರೆರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಕುಡಿಯುವ ನೀರು, ವಾಸ್ತವ್ಯ, ದಾಸೋಹ ವಿತರಣೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಭಕ್ತಾದಿಗಳ ಸುರಕ್ಷತೆ ಸಹ ಮುಖ್ಯವಾಗಿದೆ, ಶೌಚಾಲಯ, ಸ್ವಚ್ಚತೆ ಸೇರಿದಂತೆ ಅಗತ್ಯ ಸೌಲಭ್ಯಗಳು ಸರಿಯಾಗಿ ವ್ಯವಸ್ಥೆಯಾಗಬೇಕು. ಎಲ್ಲಾ ಭಕ್ತದಿಗಳಿಗೂ ದೇವರ ದರ್ಶನ, ಇನ್ನಿತರ ವ್ಯವಸ್ಥೆಗಳಿಗೆ ಪೂರ್ಣ ಪ್ರಮಾಣದಲ್ಲಿ ತೊಂದರೆಯಾಗದಂತೆ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಹನೂರು ಶಾಸಕರಾದ ಆರ್.ನರೇಂದ್ರ ಮಾತನಾಡಿ, ಶಿವರಾತ್ರಿ ಜಾತ್ರಾಮಹೋತ್ಸವ ಸಂದರ್ಭದಲ್ಲಿ, ವಾಹನನಿಲುಗಡೆಗೆ ಯಾವುದೇ ತೊಂದರೆಯಾಗದಂತೆ ಪಾರ್ಕಿಂಗ್ ನಿರ್ಮಾಣ ಮಾಡಬೇಕು, ಅಪರಾಧಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಟ್ಟದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಅಳವಡಿಸಬೇಕು, ಬೆಟ್ಟಕ್ಕೆ ಬಸ್‍ನಲ್ಲಿ ಬರುವವರಲ್ಲದೇ, ನಾನಾ ಭಾಗದಿಂದಲೂ ಪಾದಯಾತ್ರೆಯಲ್ಲಿ ಬರುತ್ತಾರೆ, ಅವರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಟ್ಯಾಂಕರ್ ಬಳಸುವಂತೆ ಸೂಚಿಸಿದರು.
ಜಾತ್ರಾಮಹೋತ್ಸವದಲ್ಲಿ ಹೆಚ್ಚಿನಭಕ್ತಾದಿಗಳು ಭಾಗವಹಿಸುವುದರಿಂದ ವಾಸ್ತವ್ಯಕ್ಕೆ ಸಮಸ್ಯೆಯಾಗಬಾರದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನೆರಳಿಗಾಗಿ ಅಗತ್ಯ ವ್ಯವಸ್ಥೆ ಅಳವಡಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಭಕ್ತಾದಿಗಳಿಗೆ ದಾಸೋಹದಲ್ಲಿ ಯಾವುದೇ ವ್ಯತ್ಯಯವಾಗಬಾರದು, ಅಂತರ್ಜಲಸ್ನಾನಘಟ್ಟದಲ್ಲಿ ಶವರ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು, ಬಯಲುಬಹಿರ್ದೆಸೆ ತಡೆಗಟ್ಟುವ ನಿಟ್ಟಿನಲ್ಲಿ ತಾತ್ಕಾಲಿಕಶೌಚಾಲಯ ನಿರ್ಮಾಣ ಮಾಡಲು ಆಧ್ಯತೆ ನೀಡಬೇಕು ಎಂದು ನರೇಂದ್ರರವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿ, ಕೊಳ್ಳೇಗಾಲದಲ್ಲಿ ರಸ್ತೆ ಅಗಲೀಕರಣ ಹಾಗೂ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಬಸ್‍ಗಳ ನಿಲುಗಡೆಗೆ ಸಮಸ್ಯೆಯಾಗಬಹುದು, ಇದಕ್ಕಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು ಆಯಾಸ್ಥಳಗಳಿಂದಲೇ ನೇರವಾಗಿ ಹೆಚ್ಚು ಬಸ್ ಸಂಚಾರಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಜಾತ್ರೆಯಲ್ಲಿ ಭಾಗವಹಿಸುವ ಜನರಿಗೆ ತೊಂದರೆಯಾಗದಂತೆ ಕರ್ನಾಟಕ ಸಾರಿಗೆ ನಿಗಮವು ಬಸ್ ಸೌಕರ್ಯ ಕಲ್ಪಿಸಬೇಕಿದೆ, ಈ ಹಿಂದಿನಿಂದಲೂ ಪರವಾನಗಿ ಪಡೆದಿರುವ ಖಾಸಗಿ ಬಸ್‍ಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಬೇಕು, ತಪಾಸಣೆ ಮಾಡಿ, ಬಿಡಲು ತಾಳಬೆಟ್ಟದಲ್ಲೇ ಚೆಕ್‍ಪೋಸ್ಟ್ ತೆರೆಯಬೇಕು ಎಂದರು.
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್' ಜಾತ್ರಾಮಹೋತ್ಸವ ಸಂಬಂಧ ಹೆಚ್ಚಿನ ಬಸ್‍ಗಳನ್ನು ಆಯಾಘಟಕಗಳಿಂದಲೇ ಓಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಮಿಳುನಾಡು ಸಾರಿಗೆಸಂಸ್ಥೆಯ ಅಧಿಕಾರಿಗಳು ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಬಸ್ ಓಡಿಸುವುದಾಗಿ ತಿಳಿಸಿದರು.
ಸಾಲೂರುಬೃಹನ್ಮಠದ ಪಟ್ಟದ ಗುರುಸ್ವಾಮೀಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ||ಕೆ.ಹರೀಶ್ ಕುಮಾರ್ ಮಲೆಮಹದೇಶ್ವರಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ.ರೂಪಾ, ಅಧಿಕಾರಿ  ಬಸವರಾಜು ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಪ್ರಾಧಿಕಾರದ ಸದಸ್ಯರಾದ ಕೊಪ್ಪಾಳಿಮಹದೇವನಾಯಕ, ಕೀಳನಪುರ ಮಹದೇವಪ್ಪ, ಜವರೇಗೌಡ, ದೇವರಾಜು, ಕಾವೇರಿ ಶಿವಕುಮಾರ್, ಎ.ಎಸ್.ಪಿ ಗೀತಾ ಪ್ರಸನ್ನ, ಇನ್ನೀತರರು ಹಾಜರಿದ್ದರು.
*****

ಚಾಮರಾಜನಗರತಾಲ್ಲೂಕಿನ ಪುಣಜೂರು ಗ್ರಾಮದಲ್ಲಿಆರೋಗ್ಯ ಶಿಬಿರದಲ್ಲಿಡಾ.ಶ್ರೀನಿವಾಸ ಕೊತಬಾಳ ಮಾತನಾಡಿದರು.

ಸೂಕ್ತ ಆಹಾರದಿಂದಆರೋಗ್ಯವೃದ್ಧಿ: ಶ್ರೀನಿವಾಸ ಕೊತಬಾಳ

ಚಾಮರಾಜನಗರ:ಗುಣಮಟ್ಟಆಹಾರವನ್ನು ಸರಿಯಾದ ಸಮಯದಲ್ಲಿಸೇವನೆ ಮಾಡುವುದರಿಂದಆರೋಗ್ಯವನ್ನು ಕಾಪಾಡಿಕೊಳ್ಳಬಹುದುಎಂದುಡಾ. ಶ್ರೀನಿವಾಸ ಕೊತಬಾಳ ಅವರು ಸಲಹೆ ನೀಡಿದರು.

ತಾಲ್ಲೂಕಿನ ಪುಣಜೂರುಗ್ರಾಮದಲ್ಲಿ ಆಯುಷ್‍ಇಲಾಖೆಯಿಂದ ಏರ್ಪಡಿಸಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಆರೋಗ್ಯ ಹದಗೆಡಲು ಮುಖ್ಯಕಾರಣಆತ ಸೇವಿಸುವ ಆಹಾರ.ಮಾನವನ ಬೆಳವಣಿಗೆಗೆ ಆಹಾರಅತಿ ಮುಖ್ಯ.ಆದರೆಅದನ್ನು ನಿಯಮಿತ ಮತ್ತು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಹೊತ್ತಿಲ್ಲದ ಹೊತ್ತಿನಲ್ಲಿ ಸಿಕ್ಕಾಪಟ್ಟೆ ತಿನ್ನುವುದರಿಂದ ಶರೀರದಲ್ಲಿರೋಗ ನಿರೋಧಕ ಶಕ್ತಿ ಕುಂದುಹೋಗುತ್ತದೆ. ಬೊಜ್ಜು ಬೆಳೆಯುತ್ತದೆ.ಆದ್ದರಿಂದ ಸೂಕ್ತ ಆಹಾರ ಸೇವಿಸಿ, ತಕ್ಕಮಟ್ಟಿಗೆವ್ಯಾಯಮ, ಕೆಲಸ ಮಾಡಬೇಕುಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶದಜನರುತರಕಾರಿ, ಬೆಳೆ ಕಾಳುಗಳಿಗೆ ಪಟ್ಟಣದ ಮಾರುಕಟ್ಟೆಯನ್ನೇ ಅವಲಂಬಿಸಬಾರದು.ಮನೆಯ ಹಿತ್ತಲಿನಲ್ಲಿತರಕಾರಿ, ಸೊಪ್ಪು, ಪಪ್ಪಾಯಿ, ನುಗ್ಗೆಯನ್ನು ಬೆಳೆದುಕೊಳ್ಳಬೇಕು.ಜಮೀನಿನಲ್ಲಿ ಸಿರಿಧಾನ್ಯಗಳನ್ನು ಬೆಳೆದು ಅದನ್ನೇಆಹಾರಕ್ಕೆ ಬಳಕೆ ಮಾಡಿಕೊಳ್ಳಬೇಕು. ಇದರಿಂದಖರ್ಚು ಉಳಿಯುತ್ತದೆ.ಆರೋಗ್ಯಚನ್ನಾಗಿರುತ್ತದೆಎಂದರು.
ಕಾರ್ಯಕ್ರಮದಲ್ಲಿಡಾ.ಶೋಭಾ, ಡಾ.ವೀರಣ್ಣ, ಡಾ. ಅವಿನಾಶ್ ಶಾಲಾ ಮುಖ್ಯ ಶಿಕ್ಷಕಿ ಗೀತಾ  ಸಂಯೋಜಕಿ ಲೀನಾ ಕುಮಾರಿ ಮತ್ತಿತರರು ಹಾಜರಿದ್ದರು. ಪುಣಜೂರುಗ್ರಾಮಸ್ಥರಿಗೆಆರೋಗ್ಯತಪಾಸಣೆ ನಡೆಸಲಾಯಿತು.


Saturday, 3 February 2018

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ : ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ (03-02-2018)

   

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ : ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ 

ಚಾಮರಾಜನಗರ, ಫೆ. 03 - ರಾಜ್ಯ ಸರ್ಕಾರ ಆರೋಗ್ಯ ರಕ್ಷಣೆಗಾಗಿ ಹೆಚ್ಚಿನ ಅನುದಾನವನ್ನು ವೆಚ್ಚ ಮಾಡುವ ಮೂಲಕ ಎಲ್ಲರಿಗೂ ಸಮರ್ಪಕವಾಗಿ ಆರೋಗ್ಯ ಸೇವೆಗಳನ್ನು ಒದಗಿಸಲು ಮುಂದಾಗಿದೆ ಎಂದು ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲೂಕಿನ ಸಂತೆಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ನಿರ್ಮಾಣ ಮಾಡಿರುವ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆರೋಗ್ಯ ಸೇವೆ ನೀಡುವ ಸಲುವಾಗಿಯೇ ಸರ್ಕಾರ ವಿಶೇಷ ಒತ್ತು ನೀಡಿದೆ. ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಲಭಿಸಬೇಕು ಎನ್ನುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದೆ. ಚಾಮರಾಜನಗರ ಜಿಲ್ಲೆಯ ತಾಲೂಕು ಕೇಂದ್ರ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳು ಇನ್ನು ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು.
ಕಡಿಮೆ ವೆಚ್ಚದಲ್ಲಿ ಔಷಧಿ ಸಿಗಬೇಕೆಂಬ ಉದ್ದೇಶದಿಂದ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಿ.ಟಿ. ಸ್ಕ್ಯಾನ್, ಎಂ ಆರ್ ಐ ಸ್ಕ್ಯಾನ್ ಮಾಡಿಸಲು ದೊಡ್ಡ ಜಿಲ್ಲಾ ಕೇಂದ್ರಗಳಿಗೆ ತೆರಳಬೇಕಿತ್ತು. ಈ ಸೌಲಭ್ಯವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲೇ ನೀಡುವ ಉದ್ದೇಶದಿಂದ ಸಂಬಂಧಪಟ್ಟ ಕೆಲಸ ಪ್ರಕ್ರಿಯೆಯಲ್ಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಬೇಕೆಂಬ ಹಿನ್ನೆಲೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಗುಂಡ್ಲುಪೇಟೆಯಲ್ಲಿ ಕೆಲ ತಿಂಗಳ ಹಿಂದೆ ತಾಯಿ ಮಕ್ಕಳ ಆಸ್ಪತ್ರೆ ಜನರ ಬಳಕೆಗೆ ಉದ್ಘಾಟಿಸಲಾಗಿದೆ. ಸಂತೆಮರಹಳ್ಳಿಯಲ್ಲಿಯೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಂತೋಷದಿಂದ ಉದ್ಘಾಟಿಸಿದ್ದು ಜನರ ನೆರವಿಗೆ ಅನುಕೂಲವಾಗಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮ ಯಶಸ್ವಿಯಿಂದಾಗಿ ಜಿಲ್ಲೆಯಲ್ಲಿ ತಾಯಿ ಶಿಶುವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ತಲುಪುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಧ್ರುವನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ದೇಶದ 599 ಜಿಲ್ಲೆಗಳ ಪೈಕಿ 231ನೇ ಸ್ಥಾನದಲ್ಲಿದೆ ಎಂಬ ವರದಿ ಬಂದಿದೆ. ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಶೇ. 44ರಷ್ಟು ಇದೆ. ಶೇ. 32ರಷ್ಟು ಹೆಣ್ಣುಮಕ್ಕಳು 18 ವಯಸ್ಸಿನ ಒಳಗೆ ವಿವಾಹವಾಗುತ್ತಿದ್ದಾರೆ. ಶೌಚಾಲಯ ಬಳಕೆ ಪ್ರಮಾಣವು ಕಡಿಮೆ ಇದೆ ಎಂದು ವರದಿ ಇದೆ. ಈ ಎಲ್ಲಾ ಅಂಶಗಳ ಬಗ್ಗೆಯೂ ಗಮನ ಹರಿಸಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ 18 ವರ್ಷ ತುಂಬಿದ ನಂತರವೇ ಮದುವೆ ಮಾಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ ಎಂದು ಧ್ರುವನಾರಾಯಣ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಎಸ್. ಜಯಣ್ಣ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂತೆಮರಹಳ್ಳಿ ತಾಲೂಕು ಕೇಂದ್ರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಸೌಲಭ್ಯ ಕಲ್ಪಿಸಲಾಗಿದೆ. ಈ ಆಸ್ಪತ್ರೆ ಮತ್ತು ಸೇವೆ ನಿಮಗಾಗಿಯೇ ಎಂಬ ಭಾವನೆ ಎಲ್ಲ ಮಹಿಳೆಯರಲ್ಲೂ ಮೂಡಿಬರಬೇಕೆಂದು ಆಶಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಜನರ ಆರೋಗ್ಯ ಕಾಳಜಿಗಾಗಿ ಸರ್ಕಾರ ಜಿಲ್ಲೆಯಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ. ಗ್ರಾಮೀಣ ಭಾಗಗಳಲ್ಲಿಯೂ ಜನರಿಗೆ ಆರೋಗ್ಯ ಸೇವೆ ಯಾವುದೇ ತೊಂದರೆ ಇಲ್ಲದೆ ತಲುಪಿಸಬೇಕೆಂಬ ಉದ್ದೇಶದಿಂದ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದುರ.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಮಾಜಿ ಶಾಸಕರಾದ ಬಾಲರಾಜು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಸದಸ್ಯರಾದ ರವೀಶ್, ಮಹದೇವಯ್ಯ, ಮಹದೇವಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭ, ಉಪಾಧ್ಯಕ್ಷರಾದ ಟಿ.ಎಸ್. ಕುಮಾರ್,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆದರ್ಶ ವಿದ್ಯಾಲಯ : 6ನೇ ತರಗತಿ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಚಾಮರಾಜನಗರ, ಫೆ. 03 - ಜಿಲ್ಲೆಯ ಚಾಮರಾನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಯಾ ತಾಲೂಕಿನ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿ ಸಲ್ಲಿಸಬಹುದು. ಆಯಾ ತಾಲೂಕಿನ ಮೂಲ ನಿವಾಸಿಗಳ ಮಕ್ಕಳು ಬೇರೆ ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಫೆಬ್ರವರಿ 17ರ ಒಳಗೆ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಅಥವಾ ತಿತಿತಿ.viಜಥಿಚಿvಚಿhiಟಿi.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಆದರ್ಶ ಶಾಲೆಗಳ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಸೇವಾ ಕೇಂದ್ರಗಳ ಸೌಲಭ್ಯ ಪಡೆದುಕೊಂಡು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನ ಸಭಾ ಚುನಾವಣೆ ಪೂರ್ವ ಸಿದ್ಧತೆಗೆ ಮುಂಜಾಗರೂಕತೆ ವಹಿಸಲು ಜಿಲ್ಲಾಧಿಕಾರಿ ಬಿ. ರಾಮು ಸೂಚನೆ  

      ಚಾಮರಾಜನಗರ, ಫೆ. 03 - ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ಧತೆ ಕ್ರಮಗಳಿಗೆ ಈಗಿನಿಂದಲೇ ಮುಂಜಾಗರೂಕತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದರು.
   ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ನಡೆದ  ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಜಿಲ್ಲೆಯ ಗಡಿ ಭಾಗದಲ್ಲಿ ಚಕ್ ಪೋಸ್ಟ್‍ಗಳನ್ನು ತೆರೆದು ಅವುಗಳಿಗೆ ಸಿಸಿ ಕ್ಯಾಮರಾ ಅಳವಡಿಸುವ ವ್ಯವಸ್ಥೆಯಾಗಬೇಕು. ಅಕ್ರಮವಾಗಿ ಹಣ ಮದ್ಯ ಸಾಗಣೆ ಹಾಗೂ ಸಂಗ್ರಹಣೆಗೆ ಅವಕಾಶವಾಗದಂತೆ ಪೊಲೀಸ್, ಅಬಕಾರಿ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
   ಚಾಮರಾಜನಗರ ಗಡಿ ಜಿಲ್ಲೆಯಾಗಿರುವುದರಿಂದ  ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್‍ಗಳಲ್ಲಿ ಬಿಗಿ ಭದ್ರತೆ  ಇರಬೇಕು. ಅಬಕಾರಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಮನ್ಮಯದೊಂದಿಗೆ ಕಾರ್ಯ ಪ್ರವೃತ್ತರಾಗಬೇಕು ಎಂದರು. 
ಮತಗಟ್ಟೆಗಳ ಸಿದ್ದತೆ ಬಗ್ಗೆ ಮಾತನಾಡಿದ ಅವರು ಪ್ರತಿ ಮತಗಟ್ಟೆಯಲ್ಲಿ ಎಲ್ಲಾ ಸೌಲಭ್ಯಗಳು ಇದೆಯೇ ಎಂದು ಪರಿಶೀಲಿಸಬೇಕು. ಮತಗಟ್ಟೆಗೆ ಗುರುತಿಸಲಾಗಿರುವ ಕೊಠಡಿಗಳು ಸುಸ್ಥತಿಯಲ್ಲಿ ಇದೆಯೇ ಎಂಬ ಬಗ್ಗೆ ನೋಡಿಕೊಳ್ಳಬೇಕು.  ಕುಡಿಯುವ ನೀರಿನ ಸೌಲಭ್ಯ, ರ್ಯಾಂಪ್, ವಿದ್ಯುತ್, ಶೌಚಾಲಯ ಇರಬೇಕು.  ವಿಕಲಚೇತನರಿಗೆ ಗಾಲಿ ಕುರ್ಚಿಯ ವ್ಯವಸ್ಥೆ ಸಹಾ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್ ಮೀನಾ ಮಾತನಾಡಿ ಚುನಾವಣ ಆಯೋಗದ ಮಾರ್ಗಸೂಚಿ ಅನುಸಾರ ಎಲ್ಲಾ ಸಿದ್ದತೆಗಳನ್ನು ನಿರ್ವಹಿಸಬೇಕು. ಅರಣ್ಯವ್ಯಾಪ್ತಿಯ ಭಾಗಗಳಲ್ಲಿ ರಕ್ಷಣೆಗಾಗಿ ಹೊಂದಲಾಗಿರುವ ಆಯಧ ಬಂದೂಕುಗಳಿಗೆ ಪರವಾನಗಿ ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಆಯೋಗದ ನಿರ್ದೇಶನ ಪ್ರಕಾರ ನೀಡಲಾಗಿರುವ ಕ್ರಮಗಳನ್ನು ವಹಿಸಬೇಕು ಎಂದರು.
 ಚುನಾವಣ ಸಂಬಂಧ ಇತರೆ ವಿಷಯಗಳನ್ನು ಚರ್ಚಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಅಗತ್ಯ ಸೂಚನೆಗಳನ್ನು ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಧಿಕಾರಿ ಫೌಜಿಯಾ ತರನಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ತಹಸೀಲ್ದಾರರು, ಅಬಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


ಶೈಕ್ಷಣಿಕ ಪ್ರಗತಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕರೆ


      ಚಾಮರಾಜನಗರ, ಫೆ. 03 :- ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಶೈಕ್ಷಣಿಕವಾಗಿಯೂ ಹೆಚ್ಚು ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ  ತಾಲೂಕು ಆಡಳಿತ ಎಸ್‍ಎಸ್‍ಎಲ್‍ಸಿ ಮಕ್ಕಳಿಗಾಗಿ  ಪ್ರಕಟಿಸಿರುವ  ಜ್ಞಾನ ಅಮೃತ  ಹೊತ್ತಿಗೆ  ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆಗಳ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಗೀತಾ ಮಹದೇವಪ್ರಸಾದ್ ತಿಳಿಸಿದರು.
     ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ  ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ  ಸಹಯೋಗದದಲ್ಲಿ  ಇಂದು  ನಡೆÀದ  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ  ರಾಜೀವ್‍ಗಾಂಧಿ ಸೇವಾ ಕೇಂದ್ರ ನೂತನ ಕಟ್ಟಡ ಉದ್ಘಾಟನೆ  ಹಾಗೂ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಅನುದಾನದಡಿಯಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ 2017-18 ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿರುವ  ಜ್ಞಾನ ಅಮೃತ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
      ಕಳೆದ ನಾಲ್ಕೂವರೆ ವರ್ಷಗಳಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಯಾಗುತ್ತಿದೆ. ಮೂಲ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಸಲವತ್ತುಗಳನ್ನು ಕಲ್ಪಿಸಲಾಗಿದೆ. ಇದರ ಜೊತೆಗೆ ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.  ಜಿಲ್ಲೆಯು ಶೈಕ್ಷಣಿಕವಾಗಿ  ಪ್ರಗತಿ ಹೊಂದುವತ್ತ ಸಾಗಿದೆ. ಸರ್ಕಾರದ ಯೋಜನೆಗಳು  ಸದ್ಬಳಕೆಯಾಗುತ್ತಿದೆ. ತಾಲೂಕು ಪಂಚಾಯಿತಿ ಪ್ರಾಥಮಿಕ ಹಂತದಲ್ಲಿಯೇ ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಣೆ  ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
     ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 37 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ  ರಾಜೀವ್‍ಗಾಂಧಿ ಸೇವಾ ಕೇಂದ್ರ ತಾಲೂಕಿನ ಅಭಿವೃದ್ದಿಗೆ ಬಳಕೆಯಾಗಬೇಕು. ಈ ಕಟ್ಟಡದಲ್ಲಿ ಲೆಕ್ಕ ಪರಿಶೋಧನೆ, ಗ್ರಾ.ಪಂ.ಆಡಳಿತಕ್ಕೆ ಸಂಬಂಧಪಟ್ಟ  ಎಲ್ಲಾ ವ್ಯವಹಾರಗಳು ನಡೆಯುವ ಜೊತೆಗೆ ಜ್ಞಾನ ಸಂಪನ್ಮೂಲ ಕೇಂದ್ರವಾಗಿ ಹೊರ ಹೊಮ್ಮಬೇಕು ಎಂದರು.
     ಹಿಂದುಳಿದ ತಾಲೂಕುಗಳ ಅಭಿವೃದ್ದಿಗಾಗಿ ನಂಜುಂಡಪ್ಪ ವರದಿ ಅನ್ವಯ 2012-13ನೇ ಸಾಲಿನಲ್ಲಿ  7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 4 ವಾಣಿಜ್ಯ ಮಳಿಗೆಗಳು ತಾಲೂಕು ಪಂಚಾಯಿತಿ ಆದಾಯದ ಮೂಲವಾಗಿದೆ ಎಂದರು.
    ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ,  ಮಹತ್ವಪೂರ್ಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ  ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು  ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳ  ಅಭಿವೃದ್ದಿ ಹಾಗೂ ಗ್ರಾಮಗಳ  ಪ್ರಗತಿಹೊಂದುವಲ್ಲಿ   ಉದ್ಯೋಗ ಖಾತರಿ ಯೋಜನೆ ಅನುಷ್ಠಾನವೂ ಸಹಾ ಕಾರಣವಾಗಿದೆ.    ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 63 ಕೋಟಿ ರೂ. ವೆಚ್ಚವಾಗಿದ್ದರೆ,  ತಾಲೂಕಿನಲ್ಲಿ 23 ಕೋಟಿ ರೂ.ಗಳ ಕಾಮಗಾರಿಗಳು ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ತಾ.ಪಂ. ಅಧ್ಯಕ್ಷರಾದ ಹೆಚ್.ವಿ. ಚಂದ್ರು ಮತ್ತು ಸದಸ್ಯರು ಕಳೆದ ವರ್ಷವು ಸಹ ಎಸ್.ಎಸ್.ಎಲ್.ಸಿ  ಯಶಸ್ಸು ಪುಸ್ತಕವನ್ನು ಹೊರತಂದು  ತಾಲೂಕಿನಲ್ಲಿ  ಫಲಿತಾಂಶ ಉತ್ತಮಗೊಳ್ಳವಂತೆÉ ಮಾಡಿದ್ದರು. ಈ ಬಾರಿಯು ಸಹ  ಜ್ಞಾನ ಅಮೃತ ಎಂಬ ಕೈಪಿಡಿಯನ್ನು ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳು ಸಜ್ಜುಗೊಳ್ಳಲು ಹೊರತಂದಿದ್ದಾರೆ. ಇದರ ಪ್ರಯೋಜನ ಪಡೆದು ಜಿಲ್ಲೆಯೂ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲಿ ಎಂದು ದ್ರುವನಾರಾಯಣ ಹಾರೈಸಿದರು.
    ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ,  ನರೇಗಾ ಯೋಜನೆ  ಗ್ರಾಮಗಳ ಅಭಿವೃದ್ದಿಗೆ ಪೂರಕವಾಗಿದ್ದು, ಗ್ರಾಮ ಪಂಚಾಯಿತಿಗಳಲ್ಲಿ  ಜನಪ್ರತಿನಿಧಿಗಳು  ಹಾಗೂ ಪಿಡಿಓಗಳು ಸಮನ್ವಯ ಮೂಲಕ ಹೆಚ್ಚು ಪ್ರಗತಿಗೆ ಮುಂದಾಬೇಕೆಂದರು.
     ತಾ.ಪಂ. ಅಧ್ಯಕ್ಷರಾದ ಹೆಚ್,ವಿ. ಚಂದ್ರು  ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷದಿಂದ ತಾಲೂಕಿನ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ಹಾಗು ಎಸ್‍ಎಸ್‍ಎಲ್‍ಸಿಯಲ್ಲಿ  ಹೆಚ್ಚು ಮಕ್ಕಳು ಅನುತ್ತೀರ್ಣ ಆಗುವುದನ್ನು ತಪ್ಪಿಸಲು  ಕೈಪಿಡಿಯನ್ನು  ಬಿಡುಗಡೆ ಮಾಡಲಾಗುತ್ತಿದೆ. ಈ ವರ್ಷ   ಜ್ಞಾನ ಅಮೃತ ಹೊತ್ತಿಗೆಯನ್ನು ಹೊರತಂದಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಅನುದಾನವನ್ನು ನೀಡಿ  ಪುಸ್ತಕ ಪ್ರಕಟಿಸಲು ಸಹಕಾರ ನೀಡಿದ್ದಾರೆ. ಅದೇ ರೀತಿ ತಾ.ಪಂ. ಸದಸ್ಯರು ಒಂದು ತಿಂಗಳ ಗೌರವ ಧನವನ್ನು  ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
    ಸಮಾರಂಭದಲ್ಲಿ ಶಾಸಕ ಎಸ್. ಜಯಣ್ಣ, ಜಿ.ಪಂ. ಉಪಾಧ್ಯಕ್ಷ ಜೆ. ಯೋಗೇಶ್, ಶಿಕ್ಷಣ ಮತ್ತು  ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷ  ಕೆ.ಪಿ. ಸದಾಶಿವಮೂರ್ತಿ,  ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್,  ತಾಪಂ. ಉಪಾಧ್ಯಕ್ಷ ಪಿ.ಎನ್. ದಯಾನಿಧಿ, ಚುಡಾ ಅಧ್ಯಕ್ಷ  ಸುಹೇಲ್ ಆಲಿ ಖಾನ್,  ನಗರಸಭಾ ಅಧ್ಯಕ್ಷೆ ಶೋಭಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಎಂ. ನಾಗಸುಂದ್ರಮ್ಮ, ಎಪಿಎಂಸಿ ಅಧ್ಯಕ್ಷ  ಬಿ.ಕೆ. ರವಿಕುಮಾರ್, ಜಿಪಂ. ಸದಸ್ಯೆ ಶಶಿಕಲಾ ಸೋಮಲಿಂಗಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಡಾ. ಹರೀಶ್‍ಕುಮಾರ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ, ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.


Thursday, 1 February 2018

ಮಡಿವಾಳ ಮಾಚಯ್ಯನವರ ವಚನಗಳು ಸಾರ್ವಕಾಲಿಕ: ಡಾ. ಗೀತಾ ಮಹದೇವಪ್ರಸಾದ್ ,ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ: ಧರ್ಮೇಂದರ್ ಕುಮಾರ್ ಮೀನಾ ,ಫೆ. 10ರಂದು ರಾಷ್ಟ್ರೀಯ ಲೋಕ್ ಅದಾಲತ್ : ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶ – ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್(01-02-2018)

 

ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ: ಧರ್ಮೇಂದರ್ ಕುಮಾರ್ ಮೀನಾ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ.: ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ 29-01-2018, 30-01-2018 ಮತ್ತು 31-01-2018 ರಂದು ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಎ.ಎನ್.ಎಫ್ (ನಕ್ಸಲ್ ನಿಗ್ರಹ ದಳ) ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಎರಡು ಸಶಸ್ತ್ರ ತಂಡಗಳಾಗಿ ಕರ್ನಾಟಕ-ಕೇರಳ-ತಮಿಳುನಾಡು ಟ್ರೈ ಜಂಕ್ಷನ್ ಪ್ರದೇಶದಲ್ಲಿ ಪ್ರತ್ಯೇಕವಾಗಿ, ಮೊದಲ ದಿನ ಸುಮಾರು 11 ಮತ್ತು 14 ಕಿ.ಮೀ, ಎರಡನೇ ದಿನ 13 ಮತ್ತು 12 ಕಿ.ಮೀ ಮತ್ತು ಮೂರನೇ ದಿನ 14 ಮತ್ತು 12 ಕಿ.ಮೀಗಳಷ್ಠು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.
ಸಮಾಜಘಾತುಕ ಶಕ್ತಿಗಳ ಪರಿಶೀಲನೆ ನಡೆಸಿದ್ದಲ್ಲದೆ, ಸದರಿ ಪ್ರದೇಶಗಳಲ್ಲಿ  ಕಾಡಂಚಿನ ಗ್ರಾಮಗಳ ಸಾರ್ವಜನಿಕರನ್ನು ಸಂಪರ್ಕಿಸಿ ಅವುರುಗಳಿಗೆ ಧೈರ್ಯ ತುಂಬಿರುವ  ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀ ಧರ್ಮೇಂದರ್ ಕುಮಾರ್ ಮೀನಾ, ಪೊಲೀಸ್ ಅಧೀಕ್ಷಕರು, ಶ್ರೀಮತಿ ಗೀತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಜಯ್‍ಕುಮಾರ್ ಅವರು ಕೂಂಬಿಂಗ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.
ಮೊದಲ ತಂಡದ ಶ್ರೀ ಪ್ರಸನ್ನ, ಡಿ.ಎಸ್.ಪಿ ಮತ್ತು ಸಿಬ್ಬಂದಿ ಮತ್ತು ಎರಡನೇ ತಂಡದ  ಶ್ರೀ ರವಿಕುಮಾರ್ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯತತ್ಪರತೆಯನ್ನು ಪ್ರಶಂಸಿಸಿದ್ದಾರೆ
   

ಫೆ. 10ರಂದು ರಾಷ್ಟ್ರೀಯ ಲೋಕ್ ಅದಾಲತ್ : ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶ – ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್

ಚಾಮರಾಜನಗರ, ಫೆ. 01 - ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರವಾಗಿ ಒಮ್ಮತದಿಂದ ಇತ್ಯರ್ಥಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಈ ವರ್ಷದಲ್ಲಿ ಪ್ರತೀ 2 ತಿಂಗಳಿಗೊಮ್ಮೆ ಒಂದು ದಿನ ಆಯೋಜಿಸಲಾಗುತ್ತಿದ್ದು ಫೆಬ್ರವರಿ 10ರಂದು ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಆರ್.ಪಿ. ನಂದೀಶ್ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದ ವ್ಯಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಫೆಬ್ರವರಿ 10ರಂದು ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ನಡೆಸಲಾಗುತ್ತದೆ. ಬಳಿಕ ಏಪ್ರಿಲ್ 14, ಜುಲೈ 14, ಸೆಪ್ಟೆಂಬರ್ 8 ಹಾಗೂ ಡಿಸೆಂಬರ್ 8ರಂದು ಲೋಕ್ ಅದಾಲತ್ ನಿಗದಿಯಾಗಿದೆ. ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಕಕ್ಷಿದಾರರು ಪ್ರತಿವಾದಿಗಳು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದಾಗಿದೆ ಎಂದರು.
ಲೋಕ್ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುತ್ತದೆ. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯವೂ ಸಹ ಉಳಿಯುತ್ತದೆ ಎಂದು ನಂದೀಶ್ ಅವರು ತಿಳಿಸಿದರು.
ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ಪ್ರಕರಣ ತೀರ್ಮಾನವಾಗುವುದು ಲೋಕ್ ಅದಾಲತ್‍ನ ವಿಶೇಷವಾಗಿದೆ. ಲೋಕ್ ಅದಾಲತ್‍ನಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಇತರೆ ಗಂಭೀರ ಪ್ರಕರಣಗಳ ಇತ್ಯರ್ಥಕ್ಕೂ ಆದ್ಯ ಗಮನ ಹರಿಸಲು ಸಾಧ್ಯವಾಗಲಿದೆ ಎಂದರು.
ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು (ವ್ಯಾಜ್ಯಪೂರ್ವ) ಸಹ ರಾಜೀ ಸಂಧಾನದ ಮೂಲಕ ಲೋಕ್ ಅದಾಲತ್‍ನಲ್ಲಿ ಬಗÉಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ನ್ಯಾಯಾಲಯ ಶುಲ್ಕ ಕೊಡಬೇಕಾಗಿಲ್ಲ. ಲೋಕ್ ಅದಾಲತ್‍ನಲ್ಲಿ ಇಬ್ಬರೂ ಪಕ್ಷಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ. ಆದರೆ ಬಲವಂತವಾಗಿ ಪಕ್ಷಕಾರರನ್ನು ಒಪ್ಪಿಸಲಾಗುವುದಿಲ್ಲ ಎಂದರು.
ಜಿಲ್ಲೆಯಲ್ಲಿ 8694 ಸಿವಿಲ್, 8196 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟು 16890 ಪ್ರಕರಣಗಳು ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಈ ಪೈಕಿ 1055 ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಕೈಗೆತ್ತಿಕೊಳ್ಳಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಬಹುದಾದ ಎಲ್ಲ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ತೀರ್ಮಾನಿಸಲಾಗುತ್ತದೆ. ನ್ಯಾಯಾಲಯದಲ್ಲಿ ನೀಡಲಾಗುವ ಡಿಕ್ರಿಯಷ್ಟೇ ಲೋಕ್ ಅದಾಲತ್‍ನಲ್ಲಿ ತೀರ್ಮಾನವಾಗುವ ಡಿಕ್ರಿಗೂ ಮಾನ್ಯತೆ ಇರುತ್ತದೆ. ಅಲ್ಲದೆ ಲೋಕ್ ಅದಾಲತ್‍ನಲ್ಲಿ ಇತ್ಯರ್ಥವಾದ ಪ್ರಕರಣದ ತೀರ್ಪು ಪ್ರಶ್ನಿಸಿ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಒಮ್ಮತದಿಂದ ಪ್ರಕರಣ ಇತ್ಯರ್ಥವಾಗುವುದಲ್ಲದೆ ಸಮಯ, ಹಣ ಉಳಿತಾಯವಾಗಲಿದೆ. ಹೀಗಾಗಿ ಜಿಲ್ಲೆಯ ಕಕ್ಷಿದಾರರು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಪೂರ್ಣಪ್ರಮಾಣದಲ್ಲಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಕಾರ್ಯದರ್ಶಿ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಸಹಕಾರ ಅಗತ್ಯ : ಡಾ. ಗೀತಾ ಮಹದೇವಪ್ರಸಾದ್  

ಚಾಮರಾಜನಗರ, ಫೆ. 01 -  ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಒಮ್ಮತದ ಸಹಕಾರದಿಂದ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಶ್ರಮಿಸಿ ಕೀರ್ತಿ ತರಬೇಕೆಂದು ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಗೀತಾ ಮಹದೇವಪ್ರಸಾದ್ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮಪಡಿಸುವ ಸಂಬಂಧ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಫಲಿತಾಂಶ ಸುಧಾರಣೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೇವಲ ಶಿಕ್ಷಕರದ್ದೇ ಹೊಣೆ ಎಂದು ಭಾವಿಸಬಾರದು. ಜತೆಗೆ ವಿದ್ಯಾರ್ಥಿಗಳು, ಪೋಷಕರ ಪಾತ್ರವೂ ಸಹ ಮುಖ್ಯವಾಗಿದೆ ಎಂಬುದನ್ನು ಮನಗಾಣಬೇಕು. ಎಲ್ಲರ ಸಹಕಾರ ಪರಿಶ್ರಮದಿಂದ ಜಿಲ್ಲೆಯು ಫಲಿತಾಂಶದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಹಾಗೂ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಬೇಕು. ನಾನಾ ಸಂಕಷ್ಟಗಳನ್ನು ಅನುಭವಿಸಿದ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಶಾಲೆಯಲ್ಲಿರುತ್ತಾರೆ. ವಿದ್ಯಾರ್ಥಿಗಳಿಗೆ ಆರೋಗ್ಯಕರ ಸ್ಪರ್ಧಾ ವಾತಾವರಣವನ್ನು ಉಂಟುಮಾಡಿ ಒತ್ತಡ ಮುಕ್ತರಾಗಿ ಕಲಿಕೆಯಲ್ಲಿ ತೊಡಗಲು ಉತ್ತೇಜಿಸುವ ಜವಾಬ್ದಾರಿ ಶಿಕ್ಷಕ ಸಮೂಹ ನಿರ್ವಹಿಸಬೇಕೆಂದು ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉನ್ನತ ಅಂಕ ಗಳಿಸುವ ಜಿಲ್ಲೆಯ ಮೊದಲ ಐವರು ವಿದ್ಯಾರ್ಥಿಗಳಿಗೆ ತಮ್ಮ ಸಂಗಮ ಟ್ರಸ್ಟ್‍ನಿಂದ ಮುಂದಿನ ಕಾಲೇಜು ಪ್ರವೇಶ, ಇನ್ನಿತರ ವ್ಯಾಸಂಗ ಸಂಬಂಧ ನೆರವು ನೀಡುವುದಾಗಿ ಉಸ್ತುವಾರಿ ಸಚಿವರು ಇದೇವೇಳೆ ಪ್ರಕಟಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ಈ ಹಿಂದಿನ ಎಸ್ ಎಸ್ ಎಲ್ ಸಿ ಫಲಿತಾಂಶ ಅವಲೋಕಿಸಿದಾಗ ಗಣಿತ, ಇಂಗ್ಲೀಷ್ ಹಾಗೂ ಹಿಂದಿ ವಿಷಯಗಳಲ್ಲಿ ವಿದ್ಯಾರ್ಥಿಗಳು ಹಿನ್ನೆಡೆ ಇರುವುದು ಕಂಡುಬಂದಿದೆ. ಹೀಗಾಗಿ ಕಲಿಕೆಯಲ್ಲಿ ಹಿಂದೆ ಇರುವ ವಿಷಯಗಳಿಗೆ ಶಿಕ್ಷಕರು ವಿಶೇಷ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಮಾತನಾಡಿ ಶಿಕ್ಷಕರಿಗೆ ಶಾಲೆಯಲ್ಲಿ ಬೋಧನೆಗೆ ಹೆಚ್ಚು ಸಮಯ ಸಿಗಬೇಕು. ಶಾಲೆಯ ಇನ್ನಿತರ ಚಟುವಟಿಕೆಗಳಲ್ಲಿ ನೀಡುವ ಜವಾಬ್ದಾರಿ ಕಡಿಮೆಯಾಗಬೇಕು. ಖಾಸಗಿ ಅನುದಾನ ರಹಿತ ಶಾಲೆಗಳ ಪೈಕಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳು ಸಾಕಷ್ಟಿವೆ. ಫಲಿತಾಂಶ ಸುಧಾರಣೆಗೆ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ವಹಿಸಲಾಗುವ ಕೆಲವು ಕ್ರಮಗಳನ್ನು ಎಲ್ಲ ಶಾಲೆಗಳು ಪಾಲನೆ ಮಾಡಬೇಕಿದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಮಾತನಾಡಿ ಶಾಲೆಗಳಲ್ಲಿ ಒತ್ತಡ ರಹಿತವಾಗಿ ಶಿಕ್ಷಕರಿಗೂ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಿದೆ. ಪೋಷಕರು ಸಹ ಮಕ್ಕಳ ಕಲಿಕೆ ಗಮನಿಸಿ ಸೂಕ್ತ ಸಲಹೆ ಸಹಕಾರ ನೀಡಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಮಾತನಾಡಿ ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯುವ ಎಲ್ಲಾ ಶಾಲೆಗಳಿಗೆ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಹೆಸರಿನಲ್ಲಿ ತಾವು ವೈಯಕ್ತಿಕವಾಗಿ 5 ಸಾವಿರ ರೂ. ಉತ್ತೇಜನ ಬಹುಮಾನ ನೀಡುವುದಾಗಿ ಘೋಷಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಮಾತನಾಡಿ ಶಾಲೆಗಳಲ್ಲಿ ಪೋಷಕರ ಸಭೆ ಕರೆಯಬೇಕು. ಯಾವ ವಿಷಯದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದಿದ್ದಾರೆ ಎಂಬುದನ್ನು ಶಿಕ್ಷಕರು ಗಮನಿಸಬೇಕು. ಅಂತಹ ವಿಷಯಗಳಿಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಡಿಡಿಪಿಐ ಮಹದೇವಪ್ಪ ಇತರರು ವೇದಿಕೆಯಲ್ಲಿ ಇದ್ದರು.


ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ


   

ಮಡಿವಾಳ ಮಾಚಯ್ಯನವರ ವಚನಗಳು ಸಾರ್ವಕಾಲಿಕ: ಡಾ. ಗೀತಾ ಮಹದೇವಪ್ರಸಾದ್ 

ಚಾಮರಾಜನಗರ, ಫೆ.01- ಮಡಿವಾಳ ಮಾಚಯ್ಯರವರು ರಚಿಸಿದ ವಚನಗಳು ಸರ್ವ ಕಾಲಕ್ಕೂ ನೀತಿ ಬೋಧನೆಗಳಿಗೆ ಅರ್ಹವಾಗಿದ್ದು ಶ್ರೇಷ್ಠವೆನಿಸಿದೆ ಎಂದು ಸಕ್ಕರೆ ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಗೀತಾ ಮಹದೇವಪ್ರಸಾದ್‍ರವರು ತಿಳಿಸಿದರು.
ನಗರದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.



12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ತಾರತಮ್ಯತೆ ಅಪಾರವಾಗಿದ್ದ ಸಂದರ್ಭದಲ್ಲಿ ಬಸವಾದಿ ಶರಣರು ಸಮಸಮಾಜ ನಿರ್ಮಾಣ ಮಾಡಲು ದೀಕ್ಷೆ ತೊಟ್ಟರು. ಬಸವಣ್ಣ ಅಲ್ಲಮಪ್ರಭು, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಹಲವು ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದ ಕಣ್ಣು ತೆರೆಸಿದರು ಎಂದರು.
ತ್ಯಾಗ ಮತ್ತು ನಿರಾಡಂಬರ ಜೀವನ ನಡೆಸಿದ ಶರಣ ಮಡಿವಾಳ ಮಾಚಯ್ಯ ಅವರದ್ದು ಉತ್ತಮ ವ್ಯಕ್ತಿತ್ವವಾಗಿತ್ತು ಕಾಯಕ ನಿಷ್ಠೆಯಿಂದ ಎಲ್ಲರ ಗಮನ ಸೆಳೆದ ಮಾಚಯ್ಯರವರು ಪ್ರಬಲ ಶಿವಭಕ್ತರು ಆಗಿದ್ದರು ಎಂದು ಸಚಿವರು ತಿಳಿಸಿದರು.



ಮಡಿವಾಳ ಸಮಾಜದವರು ಕಾರ್ಯಕ್ರಮದಲ್ಲಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು ಬೇಡಿಕೆಗಳನ್ನು ಪರಿಶೀಲಿಸಿ ಕಾರ್ಯಗತಗೊಳಿಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ ಪುಟ್ಟರಂಗಶೆಟ್ಟಿರವರು ಮಡಿವಾಳ ಮಾಚಯ್ಯನವರು ಶರಣರಲ್ಲೇ ಪ್ರಮುಖ ಶರಣರು. ಅಪಾರ ದೈವಭಕ್ತಿ ಉಳ್ಳವರಾಗಿದ್ದರು ಎಂದರು.
ಮಡಿವಾಳ ಸಮುದಾಯವು ಹಿಂದುಳಿದಿದೆ. ಈ ವರ್ಗದವರಿಗೆ ರಾಜಕೀಯ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ನಾಮಕರಣಗೊಳಿಸುವ ಸಂದರ್ಭದಲ್ಲಿ ಪರಿಗಣಿಸಲು ಶಿಫಾರಸ್ಸು ಮಾಡಲಾಗುವುದು. ಸಮುದಾಯದ ಸಮಸ್ಯೆ ಬೇಡಿಕೆ ಈಡೇರಿಕೆಗೆ ಮುಂದಾಗುವುದಾಗಿ ಶಾಸಕರಾದ ಪುಟ್ಟರಂಗಶೆಟ್ಟಿ ತಿಳಿಸಿದರು.




ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ರಾಮಚಂದ್ರ ಮಾತನಾಡಿ ರಾಜ್ಯಸರ್ಕಾರ ಸಮಾಜದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಡಿವಾಳ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆರ್ಥಿಕವಾಗಿ ಮುಂದೆ ಬರಬೇಕು ಸಮುದಾಯದ ಅಭಿವೃದ್ಧಿಗೆ ನಾವು ಸಹ ಜತೆಯಲ್ಲಿರುತ್ತೇವೆ ಎಂದರು.
ಮುಖ್ಯ ಉಪನ್ಯಾಸ ನೀಡಿದ ಸಾಹಿತಿ ಸೋಮಶೇಖರ ಬಿಸಲವಾಡಿ ಅವರು ಮಡಿವಾಳ ಮಾಚಯ್ಯನವರು 12ನೇ ಶತಮಾನದಲ್ಲೇ ಸಂಸ್ಕøತ ಬಲ್ಲವರಾಗಿದ್ದರು. ವೇದ, ಉಪನಿಷತ್‍ಗಳನ್ನು ಕಲಿತು ಪ್ರಖರ ಪಂಡಿತರಾಗಿದ್ದರು. ಹೀಗಿದ್ದರೂ ಸಹ ತಮ್ಮ ಕಾಯಕವನ್ನು ಬಿಟ್ಟಿರಲಿಲ್ಲ. ಅತ್ಯಂತ ಪ್ರಾಮಾಣಿಕ ಹಾಗೂ ಸತ್ಯನಿಷ್ಠರಾಗಿದ್ದರು ಎಂದರು.
ನಗರಸಭೆ ಅಧ್ಯಕ್ಷರಾಧ ಶೋಭಾಪುಟ್ಟಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ ಯೋಗೇಶ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್ ವಿ ಚಂದ್ರು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ ಪಿ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ಎಪಿಎಂಸಿ ಅಧ್ಯಕ್ಷರಾದ ಬಿ ಕೆ ರವಿಕುಮಾರ್, ಜಿ.ಪಂ.ಸದಸ್ಯರಾದ ಸಿ ಎನ್ ಬಾಲರಾಜು, ಶಶಿಕಲಾ ಸೋಮಲಿಂಗಪ್ಪ, ಜಯಂತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ ಎಂ ಗಾಯತ್ರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು