Friday, 12 May 2017

12-05-2017 ಪಿಯುಸಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸಾಧನೆ: ಜಿಲ್ಲಾ ಉಸ್ತುವಾರಿ ಸಚಿವರ ಅಭಿನಂದನೆ , ಕೊಳ್ಳೇಗಾಲ ಜೆ.ಎಸ್.ಎಸ್ ಬಾಲಕಿಯರ ಕಾಲೇಜಿಗೆ ಶೇ. 84 ರಷ್ಟು ಫಲಿತಾಂಶ.


ಪಿಯುಸಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸಾಧನೆ: ಜಿಲ್ಲಾ ಉಸ್ತುವಾರಿ ಸಚಿವರ ಅಭಿನಂದನೆ 

ಚಾಮರಾಜನಗರ, ಮೇ.12-ಜಿಲ್ಲೆಯು ಈ ಬಾರಿಯ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್‍ರವರು ಅಭಿನಂದಿಸಿದ್ದಾರೆ.
ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಕಳೆದ ಸಾಲಿನಲ್ಲಿ 27ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆಯು ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ಮೂಲಕ 12ನೇ ಸ್ಥಾನಕ್ಕೆ ಜಿಗಿದಿದೆ.  ಪಿಯುಸಿ ಫಲಿತಾಂಶದಲ್ಲಿ ಕಳೆದ ಬಾರಿ 13ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ ಗಣನೀಯ ಸಾಧನೆ ಮಾಡುವ ಮೂಲಕ 9ನೇ ಸ್ಥಾನಕ್ಕೆ ಬಂದಿದೆ. ಫಲಿತಾಂಶ ಸುಧಾರಣೆಗೆ ಪ್ರಮುಖ ಕಾರಣರಾದ ಜಿಲ್ಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಸಮೂಹ, ಶೈಕ್ಷಣಿಕ ಸಂಸ್ಥೆಗಳ ಆಡಳಿತ ವರ್ಗ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಫಲಿತಾಂಶ ಹೆಚ್ಚಳಕ್ಕೆ ಪಾತ್ರರಾದ ಎಲ್ಲರಿಗೂ ಉಸ್ತುವಾರಿ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
 ಮುಂಬರುವ ಶೈಕ್ಷಣಿಕ ಸಾಲಿನಲ್ಲೂ ಫಲಿತಾಂಶದಲ್ಲಿ ಸಾಕಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆಯು ಅಗ್ರ ಸ್ಥಾನದಲ್ಲಿ ನಿಲ್ಲಲಿದೆ ಎಂಬ ವಿಶ್ವಾಸವನ್ನು ಉಸ್ತುವಾರಿ ಸಚಿವರು ವ್ಯಕ್ತ ಪಡಿಸಿದ್ದಾರೆ.


ಕೊಳ್ಳೇಗಾಲ ಜೆ.ಎಸ್.ಎಸ್ ಬಾಲಕಿಯರ ಕಾಲೇಜಿಗೆ ಶೇ. 84 ರಷ್ಟು ಫಲಿತಾಂಶ.ಅಶ್ವಿನಿ. ಸಿ. ಜಿಲ್ಲೆಗೆ ಪ್ರಥಮ.

ಕೊಳ್ಳೇಗಾಲ :- ಮೇ 12 - ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಜೆ.ಎಸ್.ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ.84 ರಷ್ಟು ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಹಾಜರಾದ 188ಗಳ ಪೈಕಿ 155 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.  ಈ ಪೈಕಿ 15 ಮಂದಿ ಅತ್ಯುನ್ನತ ಶ್ರೇಣಿ, 97 ಪ್ರಥಮ ಶ್ರೇಣಿ, 28 ದ್ವಿತೀಯ ಹಾಗೂ 15 ವಿದ್ಯಾರ್ಥಿನಿಯರು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರಲ್ಲಿ ಅಶ್ವಿನಿ.ಸಿ. ವಿಜಾÐನ ವಿಭಾಗದಲ್ಲಿ 600ಕ್ಕೆ 585, ಕನ್ನಡ-97, ಇಂಗ್ಲೀಷ್-95, ಭೌತಶಾಸ್ತ್ರ-98, ರಸಾಯನ ಶಾಸ್ತ್ರ-99, ಗಣಿತ-96, ಜೀವಶಾಸ್ತ್ರ-100 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ,
ಕಲಾ ವಿಭಾಗದಲ್ಲಿ ಶೇ.82 ರಷ್ಟು ಫಲಿತಾಂಶ ಬಂದಿದ್ದು, ಅತ್ಯುತ್ತಮ ಶ್ರೇಣಿ-02, ಪ್ರಥಮ-23, ದ್ವಿತೀಯ ದರ್ಜೆ- 15, ತೃತೀಯ ದರ್ಜೆ-09 ವಿದ್ಯಾರ್ಥಿನಿಯರು ಉತ್ತೀರ್ಣರಾಗಿರುತ್ತಾರೆ.  ಇವರಲ್ಲಿ ಕೋಕಿಲ.(515), ಅರ್ಬಿನ ತಾಜ್ (513) ಅಂಕಗಳನ್ನು ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಶೇ.94 ರಷ್ಟು ಫಲಿತಾಂಶ, ಇದರಲ್ಲಿ ಪರೀಕ್ಷೆಗೆ ಹಾಜರಾದ 82 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ಈ ಪೈಕೆ 10 ಮಂದಿ ಅತ್ಯುತ್ತಮ ಶ್ರೇಣಿ, 52 ಪ್ರಥಮ ಶ್ರೇಣಿ, 08 ದ್ವೀತೀಯ ಶ್ರೇಣಿ ಹಾಗೂ 06 ವಿದ್ಯಾರ್ಥಿನಿಯರು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಇವರಲ್ಲಿ ಅಂಬಿಕ.ಪಿ (571), ಮಾದಲಾಂಬಿಕ (555), ಅರ್ಪಿತ(552), ಕಾವ್ಯ (548) ಐಶ್ವರ್ಯ(547) ಸುಷ್ಮ(533) ಸೌಂದರ್ಯ(528) ಪ್ರೀತಿ(519), ರತ್ನ (513) ಚೈತ್ರ.ಎಸ್.(512) ಅಂಕಗಳನ್ನು ಪಡೆದಿರುತ್ತಾರೆ.
ವಿಜಾÐನ ವಿಭಾಗದಲ್ಲಿ 03 ಅತ್ಯುತ್ತಮ ದರ್ಜೆ, 20 ಪ್ರಥಮ ದರ್ಜೆ, 05 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಅಶ್ವಿನಿ.ಸಿ.(585) ಸಾನಿಯಾ.ಐ.(526), ಶೆರ್ಲಿ(515) ಅಂಕಗಳನ್ನು ಪಡೆದಿರುತ್ತಾರೆ.  ಅಶ್ವಿನಿ.ಸಿ ಜೀವಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿಯರನ್ನು, ಪೋಷಕರನ್ನು ಹಾಗೂ ಅಧ್ಯಾಪಕರನ್ನು ಆಡಳಿತ ಮಂಡಳಿಯ ವತಿಯಿಂದ ಪ್ರಾಂಶುಪಾಲರು ಅಭಿನಂದಿಸುತ್ತಾರೆ.




 ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಚುನಾವಣೆ:  ಕರಡು ಮತದಾರರ ಪಟ್ಟಿ ಪ್ರಕಟ

ಚಾಮರಾಜನಗರ, ಮೇ. 12 - ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಚುನಾವಣೆ ಸಂಬಂಧ ಮತ ಚಲಾಯಿಸಲು ಹಕ್ಕುಳ್ಳ ಅರ್ಹರಾದ ಸದಸ್ಯ ಸಂಘಗಳು ಹಾಗೂ ಹಕ್ಕನ್ನು ಹೊಂದಿರದ ಸದಸ್ಯ ಸಂಘಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಒಕ್ಕೂಟ ಆಡಳಿತ ಮಂಡಳಿ ಚುನಾವಣೆಯು ಜೂನ್ 30ರಂದು ನಿಗಧಿಯಾಗಿದೆ. ಸದರಿ ಕರಡು ಮತದಾರರ ಪಟ್ಟಿಯನ್ನು ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿ, ನಗರದ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ಕುದೇರು ಗ್ರಾಮದಲ್ಲಿರುವ ಜಿಲ್ಲಾ  ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಕಚೇರಿ, ನಗರದ ರಾಮಸಮುದ್ರದಲ್ಲಿರುವ ಹಾಲು ಶೀತಲೀಕರಣ ಕೇಂದ್ರ, ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರಿನಲ್ಲಿರುವ ಹಾಲು ಶೀತಲೀಕರಣ ಕೇಂದ್ರ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿರುವ ಹಾಲು ಉತ್ಪಾದಕರ ಒಕ್ಕೂಟದ ಉಪ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದಲ್ಲಿ 30 ದಿನಗಳೊಳಗೆ ಲಿಖಿತವಾಗಿ ಕುದೇರು ಗ್ರಾಮದಲ್ಲಿರುವ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸುವಂತೆ ಜಿಲ್ಲಾ ಸಹಕಾರ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬಿ.ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 14 ರಂದು ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಮೇ. 12:- ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಮೇ 14 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಆಗಮಿಸಿ ಜೆ.ಎಸ್.ಎಸ್. ಆಸ್ಪತ್ರೆ ಹಾಗೂ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.30ಗಂಟೆಗೆ ಮೈಸೂರಿಗೆ ತೆರಳುವರೆಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಮೇ 14 ರಂದು ಉನ್ನತ ಶಿಕ್ಷಣ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಮೇ. 12:- ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರು ಮೇ 14 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಆಗಮಿಸಿ ಜೆ.ಎಸ್.ಎಸ್. ಆಸ್ಪತ್ರೆ ಹಾಗೂ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

Thursday, 11 May 2017

11-05-2017 ಮೇ 14 ರಂದು ಚಾಮರಾಜನಗರಕ್ಕೆ ಸಿದ್ದರಾಮಯ್ಯ , ಕೆರೆಯಾದ ಕ್ರೀಡಾಂಗಣ, ಜೀವಾ ವಿಮಾ ನಿಗಮದ ಕಚೇರಿ.!


ಮೇ 14 ರಂದು ಚಾಮರಾಜನಗರಕ್ಕೆ ಸಿದ್ದರಾಮಯ್ಯ 

                        ರಾಮಸಮುದ್ರ ಎಸ್.ವೀರಭದ್ರಸ್ವಾಮಿ. 


*ಚಾಮರಾಜನಗರ: ಖಾಸಗೀ ಕಾರ್ಯಕ್ರಮ ವೊಂದಕ್ಕೆ ರಾಜ್ಯದ ದೊರೆ ಸಿದ್ದರಾಮಯ್ಯ ಚಾಮರಾಜನಗರದತ್ತ ಇದೇ (ಮೇ) ೧೪ ರಂದು ಬರಲಿದ್ದಾರೆ.
 *ಜೆ.ಎಸ್.ಎಸ್ ಆಸ್ಪತ್ರೆ ಹಾಗೂ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವದ ಉದ್ಘಾಟನೆ ಅಂದು ನಡೆಯಲಿದ್ದು ಉದ್ಘಾಟನೆಯನ್ನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾದಿಕಾರಿ ಬೆಟ್ ಕೆರೂರ್ ತಿಳಿಸಿದ್ದಾರೆ.


*ಸುವರ್ಣ ಸಂಚಿಕೆ ಬಿಡುಗಡೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ,ಶಸ್ತ್ರ ಚಿಕಿತ್ಸಾ ಘಟಕ ಉದ್ಘಾಟನೆಗೆ ಆಹಾರ,ನಾಗರಿಕ ಸರಬರಾಜು ಸಚಿವ ಖಾದರ್ ಸೇರಿದಂತೆ ವಿವಿದ ಸಚಿವರು ಬಾಗವಹಿಸಲಿದ್ದಾರೆ ಎಂದು ತಿಳಿಸಿದರು
*ನೂತನವಾಗಿ ಉದ್ಘಾಟನೆಗಾಗುವ ಆಸ್ಪತ್ರೆಯಲ್ಲಿ ೨೪x೭ ತುರ್ತು ಚಿಕಿತ್ಸೆ,ಆರೋಗ್ಯವಿಮೆ, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಾರ್ವಜಿಕರಿಗೆ ದೊರೆಯಲಿದೆ ಎಂದು ತಿಳಿಸಿದರು. ಪತ್ರಿಕಾಘೊಷ್ಟಿಯಲ್ಲಿ ವೈಧ್ಯಕೀಯ ವಿಭಾಗದ ನಿರ್ದೇಶಕ ಮಹೇಶ್, ಕಾಲೇಜು ವಿಭಾಗದ ನಿರ್ದೇಶಕ ನಿರಂಜನ್ ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು
**************************************************************************

ರಾತ್ರಿಯಿಡಿ ಸುರಿದ ಮಳೆ, ದರೆಗುರುಳಿದ ಮರ, ಕೆರೆಯಾದ ಕ್ರೀಡಾಂಗಣ, ಜೀವಾ ವಿಮಾ ನಿಗಮದ ಕಚೇರಿ.!

 * ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ:ರಾತ್ರಿಯಿಡಿ ಬಿದ್ದ ಸತತ ಮಳೆಯಿಂದ ಮರಗಳು ದರೆಗುರುಳಿದ ಪರಿಣಾಮಯ ಕೆಲವೆಡೆ ಕಾರ್ಗತ್ತಲಿನಲ್ಲಿ ಮುಳುಗಿದ ಘಟನೆ ನಡೆದಿದೆ.


ಚಾಮರಾಜನಗರ ಜೆಎಸ್ಎಸ್ ಕಾಲೇಜು ಸಮೀಪ  ಮರ ವಿದ್ಯುತ್ ಕಂಬಕ್ಕೆ  ಬಿದ್ದ‌ ಪರಿಣಾಮವಾಗಿ ವಿದ್ಯುತ್ ವೈರ್ ತುಂಡಾಗಿ ವಿದ್ಯುತ್ ಕಡಿತವಾಗಿದೆ.
 ಕೆಲವೆಡೆ ಪಾಳು ಬಿದ್ದಿದ್ದ ಕೆರೆಗಳು ತುಂಬಿದೆ. ಇತ್ತ ಕ್ರೀಡಾಂಗಣ, ಶಾಲೆ, ಜೀವಾ ವಿಮಾ ನಿಗಮದ ಕಛೇರಿ ಕೆರೆಯಾಗಿ ಮಾರ್ಪಟ್ಟಿದೆ.ಡಬಲ್ ರೋಡ್ ಇತ್ತ ಡಬ್ಬಾ ರೋಡ್ ಆಗಿದೆ.






Wednesday, 10 May 2017

10-05-2017 ಉಚಿತ ಅನಿಲಭಾಗ್ಯ ಪುನರ್ ಬೆಳಕು ಯೋಜನೆ ಬಳಕೆಗೆ ಮನವಿ ,ಉದ್ಯೋಗ ಕೌಶಲ ತರಬೇತಿಗೆ ಯುವಜನರ ಮಾಹಿತಿ ಕ್ರೋಢೀಕರಣ : ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ


ಉಚಿತ ಅನಿಲಭಾಗ್ಯ ಪುನರ್ ಬೆಳಕು ಯೋಜನೆ ಬಳಕೆಗೆ ಮನವಿ 

ಚಾಮರಾಜನಗರ, ಮೇ. 10:- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಡಿ ಅನಿಲಭಾಗ್ಯ ಮತ್ತು ಪುನರ್ ಬೆಳಕು ಯೋಜನೆ ಪಡೆಯಲು ಮುಂದಾಗುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಡದೇ ಇರುವ ಕುಟುಂಬಗಳು ರಾಜ್ಯ ಸರ್ಕಾರದ ಅನಿಲಭಾಗ್ಯ ಯೋಜನೆಯಡಿ ಉಚಿತ ಅನಿಲ ಸಂಪರ್ಕ ಪಡೆಯಬಹುದು. ಗ್ರಾಮಾಂತರ ಪ್ರದೇಶದ ಕೆಲಕುಟುಂಬಗಳು ಅನಿಲಸಂಪರ್ಕ ಹೊಂದಿದ್ದರೂ ಬೆಳಕಿಗಾಗಿ ಸಹಾಯಧನಯುಕ್ತ 1 ಲೀ. ಸೀಮೆಎಣ್ಣೆಯನ್ನು ಪಡೆಯುತ್ತಿವೆ. ಇದರ ಬದಲಾಗಿ ರೀಚಾರ್ಜಬಲ್ ಎಲ್‍ಇಡಿ ಬಲ್ಬ್‍ಗಳನ್ನು ಪುನರ್ ಬೆಳಕು ಯೋಜನೆಯಡಿ ಪಡೆಯಬಹುದಾಗಿದೆ.
ಆಸಕ್ತರು ಆಹಾರ ಇಲಾಖೆಯು ಸಿದ್ದಪಡಿಸಿದ ತಂತ್ರಾಂಶದಲ್ಲಿ ಇಲಾಖಾಯ ಸೇವಾ ಕೇಂದ್ರಗಳಾದ ಗ್ರಾಮ ಪಂಚಾಯಿತಿ ಖಾಸಗಿ ಫ್ರಾಂಚೈಸಿ, ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಉಳಿದ ಅರ್ಹ ಕುಟುಂಬಗಳು ಆದ್ಯತಾ ಅಥವಾ ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದಲ್ಲಿ ಅನಿಲಭಾಗ್ಯ ಯೋಜನೆಯಡಿ ಅನಿಲಸಂಪರ್ಕ ಪಡೆದುಕೊಳ್ಳಲು ಸಹಾಯಧನ ಪಾವತಿಸಲಾಗುತ್ತದೆ.
ಫಲಾನುಭವಿ ಮೊದಲು ಹಣ ಪಾವತಿಸಿ ಅನಿಲಸಂಪರ್ಕ ಪಡೆದುಕೊಂಡ ನಂತರ ಸಹಾಯಧನವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಉಜ್ವಲ ಯೋಜನೆಯಡಿ ಅನಿಲಸಂಪರ್ಕಕ್ಕೆ ವಿಶೇಷ ದರವಾಗಿ 1600 ರೂ. ಇದ್ದು ಇದರ ಬದಲಾಗಿ ಸಾಮಾನ್ಯ ಅನಿಲ ಸಂಪರ್ಕಕ್ಕೆ 1920 ರೂ. ಪಾವತಿಸಲಾಗುವುದು.
ಗ್ರಾಮೀಣ ಪ್ರದೇಶದ ಅಧ್ಯತಾ ಅಥವಾ ಅಂತ್ಯೋದಯ ಅನಿಲಪಡಿತರ ಚೀಟಿದಾರರು ಸಹಾಯಧನಯುಕ್ತ 1 ಲೀ ಸೀಮೆಎಣ್ಣೆಯನ್ನು ಪಡೆಯಲು ತಮ್ಮ ಇಚ್ಚೆಯನ್ನು ಗ್ರಾಮ ಪಂಚಾಯಿತಿ ತಂತ್ರಾಂಶದಲ್ಲಿ ದಾಖಲಿಸಬೇಕು. ಇಂಥಹ ಕುಟುಂಬಗಳು ಸಹಾಯಧನಯುಕ್ತ ಸೀಮೆಎಣ್ಣೆಯನ್ನು ಆದ್ಯರ್ಪಿಸಿದಲ್ಲಿ 300 ರೂ. ಮೌಲ್ಯದ ರೀಚಾರ್ಜಬಲ್ ಎಲ್‍ಇಡಿ ಬಲ್ಪನ್ನು ಉಚಿತವಾಗಿ ನೀಡಲಾಗುತ್ತದೆ. ಇಚ್ಚೆಯುಳ್ಳ ಕುಟುಂಬಗಳು ಇಲಾಖೆಯ ಸೇವಾಕೇಂದ್ರ ಸಂಪರ್ಕಿಸಿ ದಾಖಲಿಸಬೇಕು.
ಅನಿಲಭಾಗ್ಯ ಹಾಗೂ ಪುನರ್ ಬೆಳಕು ಯೋಜನೆ ಪ್ರಯೋಜನ ಪಡೆದು ಜಿಲ್ಲೆಯನ್ನು ಸೀಮೆಎಣ್ಣೆ ಮುಕ್ತವನ್ನಾಗಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಉದ್ಯೋಗ ಕೌಶಲ ತರಬೇತಿಗೆ ಯುವಜನರ ಮಾಹಿತಿ ಕ್ರೋಢೀಕರಣ : ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ

ಚಾಮರಾಜನಗರ, ಮೇ. 10 :- ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ನೈಪುಣ್ಯತೆ ತರಬೇತಿ ಪಡೆಯಲು ಇಚ್ಚಿಸುವ ಯುವಜನರಿಗೆ ಹೆಸರು ನೊಂದಾಯಿಸಿ ಕೌಶಲ್ಯ ನೈಪುಣ್ಯತೆ ವೃದ್ಧಿಗೊಳಿಸಲು ವಿನ್ಯಾಸಗೊಳಿಸಲಾಗಿರುವ ವೆಬ್ ಪೋರ್ಟಲ್ ಚಾಲನೆ ಕಾರ್ಯಕ್ರಮವು ಮೇ 15ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವೆಬ್ ಪೋರ್ಟಲ್ ಪ್ರಾರಂಭ ಸಂಬಂಧ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2017-18ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಯವರ ಕೌಶಲ್ಯ ಅಭಿವೃದ್ಧಿ ಕರ್ನಾಟಕ ಕಾರ್ಯಕ್ರಮದಡಿ ಬೇಡಿಕೆ ಸಮೀಕ್ಷೆಯನ್ನು ಆಧರಿಸಿ ವಿವಿಧ ಯೋಜನೆಗಳ ಅಡಿಯಲ್ಲಿ 5 ಲಕ್ಷ ಯುವಜನರಿಗೆ ತರಬೇತಿ ನೀಡಲು ಘೋಷಿಸಲಾಗಿದೆ. ಇದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ. ಅಭ್ಯರ್ಥಿ, ತರಬೇತಿ ಸಂಸ್ಥೆ ಹಾಗೂ ಉದ್ಯೋಗದಾತ ಸಂಸ್ಥೆಗಳ ಮಾಹಿತಿ ಕ್ರೋಢೀಕರಿಸಿ ತರಬೇತಿ ಪಡೆಯಲು ಇಚ್ಚಿಸುವ ಯುವಜನರ ಹೆಸರು ನೊಂದಾಯಿಸಿ ಕೌಶಲ್ಯ ನೈಪುಣ್ಯತೆ ಒದಗಿಸುವ ಅವಕಾಶಗಳು ವೆಬ್ ಪೋರ್ಟಲ್‍ನಿಂದ ಲಭ್ಯವಾಗಲಿದೆ ಎಂದರು.
ಬಳಕೆದಾರ ಸ್ನೇಹಿ ಮೊಬೈಲ್ ಆಪ್ ಅನ್ನು ಸಹ ಅಭಿವೃದ್ಧಿಗೊಳಿಸಲಾಗಿದ್ದು ಬಿಡುಗಡೆ ಮಾಡಲಾಗುತ್ತದೆ. ವೆಬ್ ಪೋರ್ಟಲ್ ಮತ್ತು ಮೊಬೈಲ್ ಆಪ್ ಸಹಾಯದಿಂದ ನೈಪುಣ್ಯ ಕೌಶಲ್ಯ ತರಬೇತಿ ಮಾಹಿತಿಗಳನ್ನು ಪಡೆಯಬಹುದಾಗಿದೆ. ಮೇ 15ರಂದು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವೆಬ್ ಪೋರ್ಟಲ್ ಉದ್ಘಾಟನೆ ನೆರವೇರಿಸಿ ಅರ್ಜಿ ಸಂಗ್ರಹಣೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೇ 15ರಿಂದಲೇ ಉದ್ಯೋಗಕ್ಕೆ ಅವಶ್ಯವಾದ ನೈಪುಣ್ಯತೆಗಳಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಯುವಜನರ ಹೆಸರನ್ನು ನೊಂದಾಯಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಗತ್ಯವಿರುವ ಸ್ಥಳ ಗುರುತಿಸಿ ಸರ್ವಸಿದ್ಧತೆ  ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರತಿ ಇಲಾಖೆಯು ಯುವಜನರಿಗೆ ಮಾಹಿತಿ ನೀಡಿ ಹೆಸರು ನೊಂದಾಯಿಸಿ ಉದ್ಯೋಗ ಪಡೆಯಲು ಅವಕಾಶವಾಗುವಂತೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ರಾಮು ಸೂಚಿಸಿದರು.
ಜಿಲ್ಲಾ ಹಾಗೂ ತಾಲೂಕು ಕೇಂದ್ರದ ನಿರ್ಧಿಷ್ಟ ಸ್ಥಳದÀಲ್ಲಿ ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ವ್ಯವಸ್ಥೆ ಅಳವಡಿಸಬೇಕು. ಹೆಚ್ಚು ಯುವಜನರು ಕೌಶಲ್ಯ ತರಬೇತಿ ಪಡೆಯಲು ನೆರವಾಗುವಂತೆ ಉತ್ತೇಜಿಸಬೇಕು. ನೋಂದಣಿ ಕೇಂದ್ರಗಳಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಬೇಕಿರುವ ಪೂರ್ವಸಿದ್ಧತೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮÁರ್  ಮಾತನಾಡಿ ಅಧಿಕಾರಿಗಳು ಅವರ ಇಲಾಖೆ ವ್ಯಾಪ್ತಿಗೆ ಬರುವ ಕಾರ್ಯಕ್ರಮದ ಜತೆಯಲ್ಲಿಯೇ ಕೌಶಲ್ಯ ತರಬೇತಿ ಅಗತ್ಯವಿರುವ ಯುವ ಅಭ್ಯರ್ಥಿಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕು. ನಿಗದಿತ ಅವಧಿಯೊಳಗೆ ನೊಂದಣಿ, ಅಭ್ಯರ್ಥಿಗಳ ಬೇಡಿಕೆಗೆ ತಕ್ಕಂತೆ ನೀಡಬೇಕಿರುವ ತರಬೇತಿ ಇತರೆ ಮಾಹಿತಿಯನ್ನು ಕ್ರೋಢೀಕರಿಸಬೇಕಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ, ಆಹಾರ ಇಲಾಖೆಯ  ಉಪನಿರ್ದೇಶಕರಾದ ಆರ್. ರಾಚಪ್ಪ, ಉಪ ಕೃಷಿ ನಿರ್ದೇಶಕರಾದ ಯೋಗೇಶ್, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ, ಜಿಲ್ಲಾ ಸರ್ಜನ್ ಡಾ. ರಘುರಾಂ, ತಹಸೀಲ್ದಾರ್‍ರವರಾದ ಕೆ. ಪುರಂಧರ, ಚಂದ್ರಮೌಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ಯಾಕೇಜ್ ಕುಡಿಯುವ ನೀರು ತಯಾರಿಕೆ ಮಾರಾಟಕ್ಕೆ ಪರವಾನಗಿ ಕಡ್ಡಾಯ

ಚಾಮರಾಜನಗರ, ಮೇ. 10 :- ಜಿಲ್ಲೆಯಲ್ಲಿ ಕುಡಿಯುವ ನೀರು ತಯಾರಿಕಾ ಘಟಕಗಳು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚನೆ ನೀಡಿದೆ.
ಪ್ಯಾಕೇಜ್ ಕುಡಿಯುವ ನೀರು ಮತ್ತು ಆಹಾರ ತಯಾರಿಸಲು ಉಪಯೋಗಿಸುವ ನೀರನ್ನು ಆಹಾರ ಎಂದು ವ್ಯಾಖ್ಯಾನಿಸಲಾಗಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ನಿಬಂಧನೆಗೆ ಕುಡಿಯುವ ನೀರು ಸಹ ಒಳಪಡಲಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರನ್ವಯ ಪ್ಯಾಕೇಜ್ ಕುಡಿಯುವ ನೀರು ತಯಾರಿಕೆ ಮಾರಾಟಕ್ಕೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಪರವಾನಗಿ ಇಲ್ಲದೆ ತಯಾರಿಕೆ ಮಾರಾಟ ಮಾಡಿದಲ್ಲಿ 5 ಲಕ್ಷ ರೂವರೆಗೆ ದಂಡ ಹಾಗೂ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಕಾಯಿದೆಯಡಿ ಅವಕಾಶವಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ  ತಿಳಿಸಿದ್ದಾರೆ.

ಯುವತಿ ಕಾಣೆ

ಚಾಮರಾಜನಗರ, ಮೇ. 10 :- ನಗರದ ಗಾಳಿಪುರ ಬಡಾವಣೆಯಿಂದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ರಂಗಸ್ವಾಮಿ ಎಂಬುವರ ಮಗಳು ಅಮೃತ ನಗರದ ಗಾಳಿಪುರ ಬಡಾವಣೆಯಲ್ಲಿರುವ ಚಿಕ್ಕಮ್ಮನ ಮನೆಗೆ ಬಂದಿದ್ದ ವೇಳೆ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿದೆ.
19 ವರ್ಷ ವಯಸ್ಸಿನ ಅಮೃತ ದುಂಡುಮುಖ, ಗೋದಿ ಮೈಬಣ್ಣ ಹೊಂದಿದ್ದು 5 ಅಡಿ ಎತ್ತರವಿದ್ದಾರೆ. ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದು ಕನ್ನಡ ಮತ್ತು ಮಲೆಯಾಳ ಭಾಷೆ ಮಾತನಾಡಬಲ್ಲರು. ಸದರಿ ಯುವತಿಯ ಪತ್ತೆಗೆ ಮಾಹಿತಿಯನ್ನು ನೀಡುವಂತೆ ನಗರದ ಪಟ್ಟಣ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರÉ.

ಸಹಕಾರ ಸಂಘ ರದ್ದು : ಪುನಶ್ಚೇತನಕ್ಕೆ ಅವಕಾಶ

ಚಾಮರಾಜನಗರ, ಮೇ. 10:- ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಹಾಗೂ ಹಂಚಿತಾಳಪುರದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ನೋಂದಣಿ ರದ್ದುಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಘಗಳನ್ನು ಪುನಶ್ಚೇತನಗೊಳಿಸಿ ಮುಂದುವರೆಸಿಕೊಂಡು ಹೋಗುವ ಉದ್ದೇಶವಿದ್ದಲ್ಲಿ ಸದಸ್ಯರು ಅಥವಾ ನಾಗರಿಕರು 15 ದಿನಗಳೊಳಗೆ ನಗರದ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿರುವ  ಸಮಾಪನ ಅಧಿಕಾರಿಂiÀiವರನ್ನು ಸಂಪರ್ಕಿಸಬಹುದÁಗಿದೆ.
ನಿಗದಿತ ಅವಧಿಯೊಳಗೆ ಸಂಪರ್ಕಿಸದಿದ್ದಲ್ಲಿ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಸಂಘದ ನೋಂದಣಿ ರದ್ದುಮಾಡಲಾಗುವುದೆಂದು ಸಮಾಪನ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಳಂದೂರು : ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 10 :- ಯಳಂದೂರು ತಾಲೂಕಿನ ವಿವಿಧೆಡೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಯಳಂದೂರು ಪಟ್ಟಣದ ಮೆಟ್ರಿಕ್  ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆಯಾ ವಿದ್ಯಾರ್ಥಿನಿಲಯದ ಮೇಲ್ವಿಚಾರಕರು ಅಥವಾ ಯಳಂದೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ. 08226-240221 ಸಂಪರ್ಕಿಸುವಂತೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ  ತಿಳಿಸಿದ್ದಾರೆ.

ಸರ್ವಜನಾಂಗದ ಸಮಾನತೆಗಾಗಿ ಶ್ರಮಿದವರು ಬಿ.ಆರ್.ಅಂಬೇಡ್ಕರ್-ಸೋಮಶೇಖರ ಬಿಸಲ್ವಾಡಿ

ಚಾಮರಾಜನಗರ ಮೇ.10-ಡಾ.ಬಿ.ಆರ್.ಅಂಬೇಡ್ಕರ್ ರವರು ಕೇವಲ ಒಂದು ವರ್ಗದ ನಾಯಕರಲ್ಲ ಅವರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಸಮಾನತೆಗಾಗಿ ಅವಿರಥವಾಗಿ ಶ್ರಮಿಸಿದ ಪುಣ್ಯಪುರುಷರಾಗಿದ್ದಾರೆ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ತಿಳಿಸಿದರು.
ನಗರದ ಜಿಲ್ಲಾ ಗೃಹರಕ್ಷಕದಳ ಕಛೇರಿ ಆವರಣದಲ್ಲಿ ತಾಲ್ಲೂಕು ಗೃಹರಕ್ಷಕ ದಳ ಅಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಕಾರರಾಗಿ ಮಾತನಾಡುತ್ತ ಅಂಬೇಡ್ಕರ್ ರವರು ಜ್ಞಾನ,ಶೀಲ,ಸ್ವಾಭಿಮಾನ ಎಂಬ ಮೂರು ದ್ಯೇಯಗಳನ್ನಿರಿಸಿ ಕೊಂಡು ಬದಿಕಿನುದ್ದಕ್ಕೂ ಚಾತುರ್ವರ್ಣವನ್ನು ವಿರೋಧಿಸುತ್ತಾ ಮೌಡ್ಯಗಳನ್ನು ಧಿಕ್ಕರಿಸಿದರು. ದಿನಂಪ್ರತಿ 18 ಘಂಟೆಗಳಕಾಲ ಅಧ್ಯಯನ ಶೀಲರಾಗಿ ಮಾಧರಿ ಸಂವಿಧಾನವನ್ನು ಬರೆದುಕೊಟ್ಟರು.ಪ್ರಯತ್ನ ಮತ್ತು ಶ್ರಮದ ಮೇಲೆ ನಂಬಿಕೆಯಿಡಿ, ಭವಿಷ್ಯದಮೇಲೆ ನಂಬಿಕೆ ಇಡಬೇಡಿ ಹಕ್ಕುಗಳನ್ನು ಪ್ರತಿಪದಿಸಲು ಸಿಕ್ಷಣದ ಜ್ಞಾನ ಅತ್ಯಾವಶ್ಯಕ ಎಂದು ಅಂಬೇಡ್ಕರ್ ಹೇಳಿದ್ದಾರೆ ಮೀಸಲಾತಿ ಕೇವಲ ದಲಿತರಿಗೆ ಮಾತ್ರವಲ್ಲ ಎಲ್ಲ ವರ್ಗಕ್ಕು ಸಲ್ಲುವಂತೆ ಅವಕಾಶ ಕಲ್ಪಿಸಿದ್ದಾರೆ ಅವರ ಮಾಧರಿ ಬದುಕು ನಮ್ಮೆಲ್ಲರಿಗೂ ಅದರ್ಶವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜ್ಯೋತಿಬೆಳಗಿಸಿ ಮಾತನಾಡಿದ ಆರಕ್ಷಕ ಉಪಧೀಕ್ಷರಾದ ಕೆ.ಇ. ಗಂಗಾಧರಸ್ವಾಮಿ ಜಗತ್ತಿನಲ್ಲಿ ಸರ್ವಶ್ರೇಷ್ಠ ಎನಿಸಿದ ಸಂವಿಧಾನವನ್ನು ಬರೆದುಕೊಟ್ಟು ಅಂಬೇಡ್ಕರ್ ವಿಶ್ವಜ್ಞಾನಿಯಾಗಿದ್ದಾರೆ ಸಂವಿಧಾನ ಬದ್ದ 2000ಕ್ಕೂ ಹೆಚ್ಚು ಕಾನೂನುಗಳಿವೆ ಆ ಕಾನೂನಡಿಯಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದಿ ಹೇಳಿದರು.
ಡಾ. ಬಿ.ಆರ್.ಆಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಚಾಚನೆಮಾಡಿದ ಜಿಲ್ಲಾ ಕಾರಗೃಹದ ಅಧಿಕಾರಿ ಎಂ.ಸುಂದರ್ ಮಾತನಾಡಿ  ಅನ್ಯದೇಶದಲ್ಲಿ ಅಂಬೇಡ್ಕರ್ ಅವರನ್ನು ಅನನ್ಯವಾಗಿ ಗೌರಸುತ್ತಾರೆ ಅವರು ಬರೆದಿರುವ ಸಂವಿಧಾನದ ಕಾನೂನುಗಳನ್ನು ಒಪ್ಪಿಕೊಂಡಿದ್ದಾರೆ ಇಂತಹ ಮಹಾ ಪುರುಷರ ಜಯಂತಿಗಳನ್ನು ಆಚರಿಸುವುದರಿಂದ ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬಹುದು  ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಾಂಡೆಂಟ್ ಬಿ.ಎಸ್.ಬಸವರಾಜು ವಹಿಸಿದ್ದರು. ಬೋಧಕರಾದ ಎಂ.ರಾಮಣ್ಣ, ಪ್ರ.ದ.ಸ.ಸಂತೋಶ್‍ಕುಮಾರ್ ಉಪಸ್ಥಿತರಿದ್ದರು.




Tuesday, 9 May 2017

ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭ; ಎಂ. ರಾಮಚಂದ್ರ ಅಭಿಪ್ರಾಯ

ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭ; ಎಂ. ರಾಮಚಂದ್ರ ಅಭಿಪ್ರಾಯ

ಚಾಮರಾಜನಗರ: ಸಿನಿಮಾ, ಟಿ.ವಿ. ಧಾರಾವಾಹಿಗಳ ಅಬ್ಬರದಲ್ಲಿ ನಾಟಕ ಕಲೆ ಕ್ಷೀಣಿಸಬಾರದು. ನಿರಂತರವಾಗಿ ರಂಗಚಟುವಟಿಕೆಗಳು ನಡೆಯಬೇಕು. ರಂಗಭೂಮಿ ಜೀವಂತವಾಗಿದ್ದಾಗ ಮಾತ್ರ ಇತರ ಪ್ರದರ್ಶಕ ಕಲೆಗಳಿಗೂ ಬೆಲೆ ಬರುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ. ರಾಮಚಂದ್ರ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶಾಂತಲಾ ಕಲಾವಿದರು ತಂಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿನಿಮಾ, ಟಿವಿ ಧಾರಾವಾಹಿಗಳಿಂದಾಗಿ ನಾಟಕಗಳನ್ನು ನೋಡುವುದು ಕಡಿಮೆಯಾಗುತ್ತಿದೆ. ಮನೆಗಳಲ್ಲಿ ಗೃಹಿಣಿಯರು ಟಿವಿಯ ಮುಂದೆ ಧಾರಾವಾಹಿಗಳನ್ನು ನೋಡುತ್ತಾ ಕುಳಿತಿರುತ್ತಾರೆ. ಸಿನಿಮಾ, ಧಾರಾವಾಹಿಗಳ ಮೂಲವಾದ ನಾಟಕ ಕಲೆಗೂ ಪ್ರೋತ್ಸಾಹ ನೀಡಬೇಕು ಎಂದ ರಾಮಚಂದ್ರ, ಶಾಂತಲಾ ಕಲಾವಿದರು ತಂಡಕ್ಕೆ ಸರ್ಕಾರದಿಂದ ದೊರಕಬಹುದಾದ ನೆರವು ನೀಡುವುದಾಗಿ ಭರವಸೆ ನೀಡಿದರು.
ಬಿ. ವಿ. ಭಾರತಿ ರಚಿಸಿದ, ಚಿತ್ರಾ ವಿ ನಿರ್ದೇಶನದ ಪಲ್ಲಟ ನಾಟಕದ ಉಚಿತ ಪ್ರದರ್ಶನ ನಡೆದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಪ್ರಸನ್ನ ಸಾಗರ್ ವಿನ್ಯಾಸ, ಸಂಗೀತ ನಿರ್ವಹಣೆ ಪ್ರಜ್ವಲ್, ವಿ. ಶ್ರೀನಿವಾಸ್ ಬೆಳಕು ಸಂಯೋಜಿಸಿದ್ದರು. ಬಿ.ಎಸ್. ವಿನಯ್, ಚಿತ್ರಾ, ಚೇತನ್, ದಾಕ್ಷಾಯಿಣಿ, ಅಕ್ಷತಾಜೈನ್, ಪ್ರಣವ್, ನಾಗೇಶು, ಸುರೇಶ್ ಪಾತ್ರ ವಹಿಸಿದ್ದರು.

==========================

09-05-2017 ಮಾಂಬಳ್ಳಿಯಲ್ಲಿ ಹೊಂಬಾಳೆ ಸಂಸ್ಥೆಯಿಂದ ‘ಭೀಮೋತ್ಸವ’


   ಮಾಂಬಳ್ಳಿಯಲ್ಲಿ ಹೊಂಬಾಳೆ ಸಂಸ್ಥೆಯಿಂದ ‘ಭೀಮೋತ್ಸವ’ 

ಯಳಂದೂರು ಮೇ 09 :- ರಾಜ್ಯ ಮಟ್ಟದಲ್ಲಿ ಪ್ರತಿಷ್ಠಿತ ಹೆಸರು ಹೊಂದಿರುವ  ರಾಜ್ಯ ಪ್ರಶಸ್ತಿ ಪುರಸ್ಕøತ ಗಾಯಕ ಸಂಗೀತ ನಿರ್ದೇಶಕ, ಸಂಘಟಕ ಎಚ್.ಫಲ್ಗುಣ ಅವರ ಸಾರಥ್ಯದ ಹೊಂಬಾಳೆ ಪ್ರತಿಭಾರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಾಗೂ ಮಾಂಬಳ್ಳಿ ಕಲ್ಪತರು ಪ್ರಗತಿಪರ ಚಿಂತಕರ ವೇದಿಕೆಯ ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಅಂಗವಾಗಿ ‘ಭೀಮೋತ್ಸವ’ - ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇದೇ ಮೇ 13 ರಂದು ಮಾಂಬಳ್ಳಿ ಗ್ರಾಮದಲ್ಲಿರುವ ಶ್ರೀಮತಿ ಕಮಲಮ್ಮ ಶ್ರೀ ಕರಿಗೇಗೌಡ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದೆ.
          ಬೆ. 9.30 ಕ್ಕೆ ಅಗರದ ಗ್ರಾಮದ ಹಿಂಡಿ ಮಾರಮ್ಮನವರ ದೇವಸ್ಥಾನದ ಆವರಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಯನ್ನು ಎತ್ತಿನ ಗಾಡಿಗಳು, ಮಂಗಳ ವಾದ್ಯ ಮತ್ತು ವಿವಿಧ ಜಾನಪದ ತಂಡಗಳೊಂದಿಗೆ ಏರ್ಪಡಿಸಲಾಗಿದೆ. ಹನುಮಂತನಾಯಕ ಮತ್ತು ತಂಡ, ಕನಕಪುರ (ಪೂಜಾ ಕುಣಿತ), ಚಂದ್ರಕುಮಾರ್ ಎ.ಎಸ್. ಮತ್ತು ತಂಡ, ರಾಮನಗರ (ಡೊಳ್ಳು ಕುಣಿತ), ಜಿ.ಎನ್.ಸುರೇಶ್ ಮತ್ತು ತಂಡ, ತುಮಕೂರು (ಗಾರುಡಿ ಗೊಂಬೆ), ಪಲ್ಲವಿ ಮತ್ತು ತಂಡ, ಚಿತ್ರದುರ್ಗ (ಮಹಿಳಾ ತಮಟೆ), ಜಿ.ಮಂಜುನಾಥ ಮತ್ತು ತಂಡ, ತುಮಕೂರು (ಸೋಮನ ಕುಣಿತ), ಸಿ.ಎಸ್.ಲೋಕೇಶ್ ಮತ್ತು ತಂಡ, ತುಮಕೂರು (ವೀರಭದ್ರ ಕುಣಿತ), ನಿರ್ಮಲಾ ಬಾಯಿ ಮತ್ತು ತಂಡ, ಚಿತ್ರದುರ್ಗ (ಲಂಬಾಣಿ ನೃತ್ಯ) ಮಂತಾದ ಜಾನಪದ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ.   ಮದ್ಯಾಹ್ನ 12ಕ್ಕೆ ವೇದಿಕೆ ಕಾರ್ಯಕ್ರಮವಿದೆ.
        ಸಂಜೆ 4 ಕ್ಕೆ ಜೆ.ಮೂರ್ತಿ (ಮುಡಿಗುಂಡ), ಸ್ವಾಮಿ ಗಾಮನಹಳ್ಳಿ (ಮಂಡ್ಯ), ರಾಜೇಶ್ (ಆನೇಕಲ್), ಲಕ್ಷ್ಮೀರಾಮ್ (ಮೈಸೂರು), ಸ್ವಾಮಿ ಬೂದನೂರು (ಮಂಡ್ಯ) ಅವರುಗಳು ಅಂಬೇಡ್ಕರ್ ಕುರಿತ ಗೀತೆಗಳ ಗಾಯನ ನಡೆಸಿಕೊಡಲಿದ್ದಾರೆ. ಶರತ್ (ಕೀಬೋರ್ಡ್), ಕಿರಣ್ (ತಬಲಾ), ಮೋಹನ್ (ರಿದಂಪ್ಯಾಡ್) ಅವರು ಗಾಯನಕ್ಕೆ ವಾದ್ಯ ಸಹಕಾರ ನೀಡುತ್ತಾರೆ.
          ಸಂಜೆ 6ಕ್ಕೆ ಧಾರವಾಡದ ಗಣಕರಂಗ ಪ್ರಸ್ತುತ ಪಡಿಸುವ ರಾಜ್ಯಾದ್ಯಂತ ಹೆಸರು ಗಳಿಸಿರುವ ಡಾ.ಎಚ್.ಟಿ.ಪೋತೆಯವರ ರಮಾಬಾಯಿ ಕಾದಂಬರಿ ಆಧಾರಿತ ‘ರಮಾಬಾಯಿ ಅಂಬೇಡ್ಕರ’ ನಾಟಕದ ಪ್ರದರ್ಶನವಿದೆ.

ಡೋಲು, ನಾದಸ್ವರ, ಸಂಗೀತ ಕಲೆ ತರಬೇತಿಗೆ ಸವಿತಾ ಸಮಾಜದ ಅಭ್ಯರ್ಥಿಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 09 :- ಹಿಂದುಳಿದ ವರ್ಗಗಳ ಕಲÁ್ಯಣ ಇಲಾಖೆಯು ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪಾರಿಕ ಕಲೆಯಾದ ಡೋಲು, ನಾದಸ್ವರ, ಸಂಗೀತ ಕಲೆಗಳಲ್ಲಿ ಉಚಿತವಾಗಿ ತರಬೇತಿ ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 4 ವರ್ಷಗಳ ತರಬೇತಿಯನ್ನು ಊಟ, ವಸತಿ, ಶಿಕ್ಷಣದೊಂದಿಗೆ ಉಚಿತವಾಗಿ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಚಿಸುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಮೇ 16ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಯಶಸ್ವಿನಿ ಸಹಕಾರ ಆರೋಗ್ಯ ರಕ್ಷಣಾ ಯೋಜನೆ ನೋಂದಣಿ, ನವೀಕರಣಕ್ಕೆ ಆಹ್ವಾನ

ಚಾಮರಾಜನಗರ, ಮೇ. 09 - 2017-18ನೇ ಸಾಲಿಗೆ ಗ್ರಾಮೀಣ ಹಾಗೂ ನಗರ ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆಗೆ ಹೊಸದಾಗಿ ನೋಂದಾಯಿಸಲು ಹಾಗೂ ಈಗಾಗಲೇ ನೊಂದಾಯಿಸಿರುವವರು ಪ್ರಸಕ್ತ ಸಾಲಿಗೆ ನವೀಕರಿಸಿಕೊಳ್ಳಲು ಸಹಕಾರ ಸಂಘಗಳ ಉಪನಿಬಂಧಕರು ಕೋರಿದ್ದಾರೆ.
ಮೇ 1ರಿಂದ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಪ್ರಾರಂಭವಾಗಿದ್ದು ಜೂನ್ 30ಕ್ಕೆ ಅಂತಿಮಗೊಳ್ಳಲಿದೆ. ಗ್ರಾಮೀಣ ಯಶಸ್ವಿನಿ ಯೋಜನೆ ನೋಂದಣಿಗೆ ಸಾಮಾನ್ಯವರ್ಗದ ಸದಸ್ಯರು 300 ರೂ.ರಂತೆ ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ ವರ್ಗದವರಾಗಿದ್ದಲ್ಲಿ 50 ರೂ. ಪಾವತಿಸಬೇಕು. ಉಳಿದ 250 ರೂ.ಗಳನ್ನು ಸರ್ಕಾರ ಸಹಾಯಧನವಾಗಿ ಪಾವತಿಸಲಿದೆ. ನಗರ ಯಶಸ್ವಿನಿ ಯೋಜನೆಗೆ ಸಾಮಾನ್ಯ ಸದಸ್ಯರು 710 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರು 110 ರೂ. ಪಾವತಿಸಬೇಕು. ಉಳಿದ 600 ರೂ.ಗಳನ್ನು ಸರ್ಕಾರ ಸಹಾಯಧನವಾಗಿ ಪಾವತಿಸಲಿದೆ.
ಯಾವುದೇ ಒಂದು ಕುಟುಂಬದಲ್ಲಿ ಐವರು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರ ನೋಂದಣಿ, ನವೀಕರಣ ಮಾಡಬೇಕಿದ್ದಲ್ಲಿ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಆಯಾ ಸಹಕಾರ ಸಂಘಗಳ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿ, ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಹಕಾರ ಸಂಘಗಳ ನಿಬಂಧಕರ ಕಚೇರಿ ಮತ್ತು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸೇನೆ ನೇಮಕಾತಿ ರ್ಯಾಲಿ

ಚಾಮರಾಜನಗರ, ಮೇ. 09- ಸೇನಾ ನೇಮಕಾತಿಗಾಗಿ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಸ್ಪೋಟ್ಸ್ ಸ್ಟೇಡಿಯಂನಲ್ಲಿ ಮೇ 29 ರಿಂದ ಜೂನ್ 2ರವರೆಗೆ ರ್ಯಾಲಿ ನಡೆಯಲಿದೆ.
ಆಸಕ್ತ ಯುವಕರು ಆನ್ ಲೈನ್ ಮೂಲಕ ಮೇ 14ರೊಳಗೆ ಅರ್ಜಿಯನ್ನು ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಯಳಂದೂರು : ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 09 (ಕರ್ನಾಟಕ ವಾರ್ತೆ):- ಯಳಂದೂರು ತಾಲೂಕಿನ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಬಹುದು. ಅರ್ಜಿಯನ್ನು ಆಯಾ ನಿಲಯದ ಮೇಲ್ವಿಚಾರಕರು ಅಥವಾ ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ. 08226-240309 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 15ರಂದು ಅಂಚೆ ವಿಮೆ ಏಜೆಂಟ್ ನೇಮಕಕ್ಕೆ ನೇರ ಸಂದರ್ಶನ

ಚಾಮರಾಜನಗರ, ಮೇ. 09 - ಅಂಚೆ ಇಲಾಖೆಯ ವಿವಿಧ ವಿಮೆಗಳಿಗೆ ಸಂಬಂಧಿಸಿದಂತೆ ಏಜೆಂಟರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಮೇ 15ರಂದು ಬೆಳಿಗ್ಗೆ 11 ಗಂಟೆಗೆ ನಂಜನಗೂಡು ಪಟ್ಟಣದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಯು 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆವುಳ್ಳ ಪ್ರದೇಶದ ನಿವಾಸಿಯಾಗಿದ್ದಲ್ಲಿ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆವುಳ್ಳ ಪ್ರದೇಶದ ನಿವಾಸಿಯಾಗಿದ್ದಲ್ಲಿ ಪಿಯುಸಿ ತೇರ್ಗಡೆಯಾಗಿರಬೇಕು. 18 ರಿಂದ 60ರ ವಯೋಮಿತಿಯೊಳಗಿರಬೇಕು. ವಿಮೆ ಕ್ಷೇತ್ರ, ಕಂಪ್ಯೂಟರ್ ಜ್ಞಾನ ಹೊಂದಿದ್ದು ಸ್ಥಳೀಯ ಪ್ರದೇಶದ ಪರಿಚಯ ಇರುವ ಅಭ್ಯರ್ಥಿಗಳಾಗಿದ್ದಲ್ಲಿ ಆದ್ಯತೆ ನೀಡಲಾಗುತ್ತದೆ.
ಆಸಕ್ತರು ಸ್ವವಿವರ, ವಯಸ್ಸು, ವಿದ್ಯಾರ್ಹತೆ, ಅನುಭವ ಇನ್ನಿತರ ಅಗತ್ಯ ದಾಖಲಾತಿಗಳೊಡನೆ ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಂಜನಗೂಡು ಅಂಚೆ ಅಧೀಕ್ಷಕರ ಕಚೇರಿ (ದೂ.ಸಂ. 08221-226291/226293) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




 

Monday, 8 May 2017

ಕುಮಾರನಪುರದಲ್ಲಿ ಮಳೆಗಾಗಿ ಕತ್ತೆಗಳ ಮದುವೆ !

ಕುಮಾರನಪುರದಲ್ಲಿ ಮಳೆಗಾಗಿ ಕತ್ತೆಗಳ ಮದುವೆ !


ಯಳಂದೂರು ಮೇ 07 : ಅಲ್ಲಿ ಓಲಗದ ಸದ್ದಿತ್ತು, ಇಡೀ ಗ್ರಾಮದ ಜನರೆಲ್ಲಾ ತಮ್ಮ ಮನೆಗಳ ಮುಂಭಾಗ ಮಧುಮಗ, ಮಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಮಕ್ಕಳು, ವೃದ್ಧರೆನ್ನದೆ ಎಲ್ಲರೂ ಗ್ರಾಮದ ಪ್ರತಿ ಬೀದಿಯಲ್ಲಿ ಮೆರವಣಿಗೆ ಮೂಲಕ ತೆರಳಿ ಪೂಜೆ ಪಡೆಯುತ್ತಿದ್ದರು...
ಅರೆ ಇದೇನು ಪೂಜೆ ನೀಡುವ ಇದ್ಯಾವ ಮದುವೆ ಅಂದು ಕೊಂಡಿರಾ.. ಇದು ತಾಲ್ಲೂಕಿನ ಕೊಮಾರನಪುರ ಗ್ರಾಮದಲ್ಲಿ ಮಳೆಗಾಗಿ ಕತ್ತೆಗಳ ಮದುವೆಯನ್ನು ಮಾಡಿಸಿದ ಗ್ರಾಮಸ್ಥರು ಸಂಭ್ರಮಿಸಿದ ಪರಿ. ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿರುವ ಈ ಗ್ರಾಮ ಈ ವರ್ಷ ಕಂಡು ಕೇಳರಿಯದ ಬರ ಎದುರಿಸುತ್ತಿದೆ. ಗ್ರಾಮದ ಕೊಳವೆ ಬಾವಿಗಳಲ್ಲಿ ಕ್ರಮೇಣ ನೀರು ಬತ್ತಿ ಹೋಗುತ್ತಿದೆ. ಸುತ್ತಮುತ್ತ ಮಳೆಯಾಗುತ್ತಿದ್ದರು ಗ್ರಾಮಕ್ಕೆ ಈ ವರ್ಷ ಒಂದೂ ಬಾರಿಯೂ ಮಳೆಯಾಗಿಲ್ಲ.
ಇದಕ್ಕಾಗಿ ಕೆಲ ದಿನಗಳಿಂದ ಗ್ರಾಮದ ಮಕ್ಕಳು ಕಪ್ಪೆ ಮದುವೆ ಮಾಡಿದ್ದಾರೆ. ಬಸವನ ಮೆರವಣಿಗೆ ನಡೆದಿದೆ. ಇದರೊಂದಿಗೆ ಮಹಾಭಾರತದ ವಿರಾಟ ಪರ್ವದ ಪಾರಾಯಣವನ್ನು ಮಾಡಲಾಗಿದೆ. ಆದರು ಮಳೆ ಸಿಂಚನವಾಗದಿರುವುದರಿಂದ ಕತ್ತೆಗಳ ಮದುವೆ ಮಾಡಿಸಲು ಗ್ರಾಮಸ್ಥರು ಒಂದೆಡೆ ಸಭೆ ಸೇರಿ ತೀರ್ಮಾನಿಸಿದ್ದಾರೆ. ಅದರಂತೆ ಓಲಗದೊಂದಿಗೆ ಕತ್ತೆಗಳಿಗೆ ವಸ್ತ್ರಗಳನ್ನು ಹಾಕಿ ಸಿಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿ ಮನೆಯವರೂ ವಿಶೇಷ ಪೂಜೆಯನ್ನು ಸಲ್ಲಿಸಿ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

08-05-2017 ವಿವಿಧ ಮಹಾತ್ಮರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

ವಿವಿಧ ಮಹಾತ್ಮರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ 


ಚಾಮರಾಜನಗರ, ಮೇ. 08 :- ಜಿಲ್ಲಾಡಳಿತದ ವತಿಯಿಂದ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ಸಂತಕವಿ ಸರ್ವಜ್ಞ, ದಲಿತ ವಚನಕಾರರು, ದೇವರ ದಾಸಿಮಯ್ಯ ಹಾಗೂ ಮಹಾವೀರ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಮಹಾತ್ಮರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಇದೇ ಮೇ 20ರಂದು ದೇವರ ದಾಸಿಮಯ್ಯ ಜಯಂತಿ ಹಾಗೂ ಮೇ 23ರಂದು ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ನಗರದ ಚಾಮರಾಜೇಶ್ವರ ದೇವಾಲಯ ಬಳಿ ನಿಗಧಿತ ದಿನಾಂಕದಂದು ದೇವರ ದಾಸಿಮಯ್ಯ ಹಾಗೂ ಸರ್ವಜ್ಞರ ಭಾವಚಿತ್ರ ಮೆರವಣಿಗೆ ಏರ್ಪಡಿಸಲು ಹಾಗೂ ಜೆ.ಎಚ್. ಪಟೇಲ್ ಸಭಾಂಗÀಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಮೆರವಣಿಗೆಗೆ ಅಗತ್ಯವಿರುವ ಕಲಾತಂಡಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಯೋಜಿಸಲಿದೆ. ಇನ್ನಿತರ ಅವಶ್ಯಕ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು. ಆಹ್ವಾನ ಪತ್ರಿಕೆ ಮುದ್ರಣ, ಮೆರವಣಿಗೆ ಮಾರ್ಗಗಳಲ್ಲಿ ಪೂರ್ಣಗೊಳಿಸಬೇಕಿರುವ ಕಾಮಗಾರಿ ಇತರೆ ಕೆಲಸಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗುವುದು ಎಂದರು.
ದಲಿತ ವಚನಕಾರರ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮಕ್ಕೂ ಜಿಲ್ಲಾಡಳಿತದ ವತಿಯಿಂದ ದಿನಾಂಕ ನಿಗಧಿ ಮಾಡಲಾಗುತ್ತದೆ. ಭಗವಾನ್ ಮಹಾವೀರರ ಜಯಂತಿ ಆಚರಣೆಯನ್ನೂ ಮಾಡಲಿದ್ದು ಸಮುದಾಯದ ಮುಖಂಡರು ದಿನಾಂಕವನ್ನು ಗೊತ್ತುಪಡಿಸುವ ಬಗ್ಗೆ ಅಭಿಪ್ರಾಯ ನೀಡಬೇಕು. ದಿನಾಂಕ ಅಂತಿಮವಾದ ಕೂಡಲೇ ಅಗತ್ಯ ಸಿದ್ಧತೆಗೆ ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಜಯಂತಿ ಕಾರ್ಯಕ್ರಮದಂದು ವಿಚಾರಧಾರೆಗಳನ್ನು ತಿಳಿಸಲು ಪ್ರಮುಖ ಭಾಷಣಕಾರರನ್ನು ಆಹ್ವಾನಿಸಲಾಗುವುದು. ಈ ಸಂಬಂಧ ನೀಡುವ ಸಲಹೆಗಳನ್ನೂ ಸಹ ಪರಿಗಣಿಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗಾಯತ್ರಿ ಅವರು ತಿಳಿಸಿದರು.
ಜಯಂತಿ ಆಚರಣೆ ಸಂಬಂಧ ಹಾಜರಿದ್ದ ಮುಖಂಡರು, ಪ್ರತಿನಿಧಿಗಳು ಸಲಹೆ ನೀಡಿದರು.
ಮುಖಂಡರಾದ ಶಾ. ಮುರಳಿ, ಮದ್ದೂರು ವಿರೂಪಾಕ್ಷ, ಸಿ ಕೆ ಮಂಜುನಾಥ್, ಗೋಪಾಲ್, ನಿಜಧ್ವನಿ ಗೋವಿಂದರಾಜು, ನಾಗರಾಜು, ಸುಂದರ್, ಗೋಪಾಲಕೃಷ್ಣ, ಕುಮಾರ್, ರಂಗಶೆಟ್ಟರ್, ಡಿ. ರಂಗಸ್ವಾಮಿ, ಸೋಮಶೇಖರ್,
ಸಿ. ವೆಂಕಟರಮಣ, ಶ್ರೀಧರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ನಾಗವೇಣಿ, ಜಂಟಿ ಕೃಷಿ ನಿರ್ದೇಶರಾದ ತಿರುಮಲೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಇತರ ಮುಖಂಡರು, ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ತಂಬಾಕು ಉತ್ಪನ್ನ ನಿಷೇಧ ಕುರಿತ ಫಲಕಗಳ ಅಳವಡಿಕೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ, ಮೇ. 08 - ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳಿಂದ ರಕ್ಷಿಸುವ ಸಲುವಾಗಿ ತರಲಾಗಿರುವ ಸಿಗರೇಟು, ಇತರೆ ತಂಬಾಕು ಉತ್ಪನ್ನಗಳ ಕಾಯಿದೆ (ಕೋಟ್ಪಾ 2003)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಂಗಡಿ, ಹೋಟೆಲ್, ಇನ್ನಿತರ ನಾಗರಿಕ ಪ್ರದೇಶಗಳಲ್ಲಿ ಅಗತ್ಯ ಕ್ರಮ ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಕೆ.ಎಂ. ಗಾಯತ್ರಿ ಸೂಚನೆ ನೀಡಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿರುವ ಹೋಟೆಲ್, ಕಾಫಿ, ಟೀ, ಬೀಡಾ ಸ್ಟಾಲ್, ಕಚೇರಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡದಂತೆ ಎಚ್ಚರಿಕೆ ನೀಡಬೇಕಿದೆ. ಧೂಮಪಾನ ನಿಷೇಧಿತ ಪ್ರದೇಶವೆಂದು 60*45 ಸೆಂ.ಮೀ. ಅಳತೆಯ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ದೂಮಪಾನಕ್ಕೆ ಬೇಕಿರುವ ಸಾಮಗ್ರಿಗಳನ್ನು ಗ್ರಾಹಕರಿಗೆ ನೀಡಬಾರದು. ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರದರ್ಶಿಸಬಾರದು.
18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಮನವರಿಕೆ ಮಾಡಿಕೊಡುವ ಫಲಕವನ್ನು ಸಹ 60*30 ಸೆಂ.ಮೀ. ಅಳತೆಯಲ್ಲಿ ಅಂಗಡಿಯ ಮುಂದೆ ಕಡ್ಡಾಯವಾಗಿ ಅಳವಡಿಸಬೇಕು. ಶಾಲಾ ಕಾಲೇಜು ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಯಾರ್ಡ್‍ಗಳ (ಗಜ) ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ಇಂಥಹ ಪ್ರಕರಣಗಳೂ ಕಂಡುಬಂದಲ್ಲಿ ಕಾಯಿದೆಯಡಿ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಮಾಹಿತಿ ಫಲಕವನ್ನು ಶೈಕ್ಷಣಿಕ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ತಂಬಾಕು ಉತ್ಪನ್ನ ಪ್ಯಾಕುಗಳ ಮೇಲೆ ನಿರ್ಧಿಷ್ಟ ಎಚ್ಚರಿಕೆ ಚಿಹ್ನೆ ಇಲ್ಲದೆ ಮಾರಾಟ ಮಾಡುವಂತಿಲ್ಲ. ವೆಬ್ ಸೈಟ್ ತಿತಿತಿ.mohಜಿತಿ.iಟಿ ಮೂಲಕ ಎಚ್ಚರಿಕೆ ಚಿಹ್ನೆಗಳ ಬಗ್ಗೆ ಉತ್ಪಾದಕರು ಮಾಹಿತಿ ಪಡೆಯಬಹುದು. ಇನ್ನು 10 ದಿನಗಳೊಳಗೆ ಸಾರ್ವಜನಿಕ ಸ್ಥಳ, ಹೋಟೆಲ್, ಅಂಗಡಿ, ಕಚೇರಿ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ವಿನ್ಯಾಸ ಮಾದರಿಯಲ್ಲಿ ಎಚ್ಚರಿಕೆ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ನಾಮಫಲಕ ಮಾದರಿಯು ವೆಬ್ ಸೈಟ್ ತಿತಿತಿ.sಣoಠಿಣobಚಿಛಿಛಿo.iಟಿ ನಲ್ಲಿ ಲಭ್ಯವಿದೆ.
ತಂಬಾಕು ಉತ್ಪನ್ನ ಸೇವನೆ ತಡೆಗಾಗಿ ನೀಡಲಾಗಿರುವ ಸೂಚನೆ, ಅನುಷ್ಠಾನಗೊಳಿಸಿರುವ ಕಾನೂನು ಉಲ್ಲಂಘಿಸಿದಲ್ಲಿ ಕ್ರಮ ಜರುಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಸಂಪರ್ಕಿಸುವಂತೆ  ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ  ತಿಳಿಸಿದ್ದಾರೆ.

ಮಿಲಿಟರಿ ಬಾಲಕರ ವಸತಿ ನಿಲಯಕ್ಕೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 08 :- ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಮೈಸೂರು ನಗರದಲ್ಲಿರುವ ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2017-18ನೇ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿಯಿಂದ 12ನೇ ತರಗತಿಯವರಿಗೆ ಮತ್ತು ಡಿಪ್ಲೊಮೋ ಓದುತ್ತಿರುವ ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಮತ್ತು ಅವಲಂಬಿತರ ಗಂಡು ಮಕ್ಕಳಿಗೆ ಉಚಿತ ಪ್ರವೇಶವನ್ನು ನೀಡಲಿದ್ದು ಅರ್ಜಿ ಆಹ್ವಾನಿಸಿದೆ.
ಮೈಸೂರು ನಗರದ ಸುತ್ತ ಮುತ್ತಲಿನ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆದವರಿಗೆÀ ನಿಲಯದಲ್ಲಿ ಪ್ರವೇಶ ನೀಡಲಾಗುವುದು.
ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಮೀಪ, ಜೆ.ಎಲ್.ಬಿ. ರಸ್ತೆ, ಮೈಸೂರು-570005 ಇವರಿಂದ ಕಾರ್ಯಾಲಯದ ಕೆಲಸದ ದಿನಗಳಲ್ಲಿ ಪಡೆದುಕೊಳ್ಳಬಹುದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಮೇ 30ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2425240 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

*****************************

 ಜಿಲ್ಲಾಧಿಕಾರಿಗಳವರ ಜೊತೆ ಸಮಗ್ರವಾಗಿ ಚರ್ಚಿಸಿದ ವಾಟಾಳ್ ನಾಗರಾಜ್


ಚಾಮರಾಜನಗರ, ಮೇ.8- ಚಾಮರಾಜನಗರದ ಐತಿಹಾಸಿಕ ಪ್ರಸಿದ್ದವಾದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಶ್ರೀ ಚಾಮರಾಜೇಶ್ವರ ಹೊಸ ರಥ ನಿರ್ಮಾಣವಾಗಬೇಕು, ನಗರದಲ್ಲಿ  ರಸ್ತೆ ಅಗಲೀಕರಣಕ್ಕೆ ಮನೆ ಮತ್ತು ನಿವೇಶನವನ್ನು ಕಳೆದುಕೊಂಡಿವರು ಮಾಲೀಕರಿಗೆ ತಕ್ಷಣವೇ ಸೂಕ್ತ ಪರಿಹಾರ ಕೊಡಬೇಕು, ಚಾಮರಾಜನಗರ ಜನತೆಗೆ ಕುಡಿಯುವ ಕಾವೇರಿ 2 ನೇ ಹಂತ ಯೋಜನೆ ತಕ್ಷಣವೇ ಪ್ರಾರಂಭಿಸಬೇಕು ಅಲ್ಲದೆ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರವರು ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳವರ ಜೊತೆ ಸಮಗ್ರವಾಗಿ ಚರ್ಚಿಸಿದರು.
ಚಾಮರಾಜನಗರದಲ್ಲಿ ಬರಗಾಲ ಬಂದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಾಗಿದೆ ಆಧ್ದರಿಂದ  ಸರ್ಕಾರ ಕೂಡಲೇ ಕೊತ್ತಲವಾಡಿಕೆರೆ, ಸುವರ್ಣನಗರಕೆರೆ, ಅರಕಲವಾಡಿಕೆರೆ, ಎಣ್ಣೆಹೊಳೆಕೆರೆ, ಬಂಡಿಗೆರೆ, ಮರದಗಕೆರೆ, ಚಿಕ್ಕಕೆರೆ, ದೊಡ್ಡಕೆರೆ, ಸಿಂಡನಕೆರೆ, ಕೋಡಿಮೋಳೆಕೆರೆ, ದೊಡ್ಡರಾಯಪೇಟೆಕೆರೆ, ಮಾಲಗೆರೆ ಕಾಗಲವಾಡಿ ಕೆರೆ, ಹಾಗೂ ಸುವರ್ಣಾವತಿ ಜಲಾಶಯ ಚಿಕ್ಕಹೊಳೆ ಜಲಾಶಯಕ್ಕೆ ತಕ್ಷಣವೇ ನದಿಪಾತ್ರಗಳಿಂದ ನೀರು ತುಂಬಿಸಬೇಕು, ಮಳೆ ಇಲ್ಲದೆ ನೀರಿಲ್ಲದೆ ಒಣಗಿ ನಿಂತಿರುವ ತೆಂಗಿನಮರಗಳಿಗೆ ಪರಿಹಾರ ಕೊಡಬೇಕು, ಅಮಚವಾಡಿ ಸೇರಿದಂತೆ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಗೋ ಶಾಲೆ ತೆರೆಯಬೇಕು, ಒಳಚರಂಡಿ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು,  ಕೆಲ್ಲಂಬಳ್ಳಿ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಬಡ ರೈತರು ವ್ಯವಸಾಯ ಮಾಡುತ್ತಿರುವ ಜಮೀನುಗಳನ್ನು ಸರ್ಕಾರ ಅಕ್ರಮವಾಗಿ ವಶಪಡಿಸಿಕೊಂಡಿರುವುದನ್ನು ವಾಪಾಸ್ ಕೊಡಬೇಕು, ಜಿಲ್ಲೆಯ  ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಕೊಡಬೇಕು, ಚಾಮರಾಜನಗರದ ಎಲ್ಲಾ ವರ್ಗದ ಜನತೆಗೆ ನಿವೇಶನ ಕೊಡಬೇಕು, ಚಾಮರಾಜನಗರದ ಜಿಲ್ಲಾಸ್ಪತ್ರೆ ಸುಧಾರಣೆಯಾಗÀಬೇಕು, ಅಲ್ಲದೆ ಇನ್ನಿತರ ವಿಷಯಗಳ ಬಗ್ಗೆ ವಾಟಾಳ್ ನಾಗರಾಜ್ ರವರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮನವಿ ಪತ್ರ ನೀಡಿ ಒತ್ತಾಯಿಸಿದರು,

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಚಾಮರಾಜನಗರ ಸಮಸ್ತ ಜನತೆಗೆ ಕಾವೇರಿ ಎರಡನೇ ಹಂತ ಕುಡಿಯುವ ನೀರು ಯೋಜನೆ ಜಾರಿಯಾಗಬೇಕು, ಈ ಯೋಜನೆಯಿಂದ ಸುತ್ತಮುತ್ತ 30-40 ಹಳ್ಳಿಗಳಿಗೆ ಕುಡಿಯುವ ನೀರು ದೊರಕುತ್ತದೆ, ಅಮಚವಾಡಿ ಗ್ರಾಮದಲ್ಲಿ ಒಂದು ಬಿಂದಿಗೆ ನೀರಿಗೆ 2 ರೂ ಕೊಟ್ಟು ಕುಡಿಯುತ್ತಿದ್ದಾರೆ, ಇದು ಒಳ್ಳೆಯ ಬೆಳೆವಣಿಗೆಯಲ್ಲ, ಆದ್ದರಿಂದ ಕೂಡಲೇ ಸರ್ಕಾರ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ವಾಟಾಳ್ ನಾಗರಾಜ್ ರವರು ಒತ್ತಾಯಿಸಿದರು

ಕಳಸ
ಮಹಾದಾಯಿ-ಕಳಸಾ ಬಂಡೂರಿ ಯೋಜನೆ ಹಾಗೂ ಮೇಕೆದಾಟು ಯೋಜನೆಗಾಗಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಮ್ಮ ರಾಜ್ಯದ ಲೋಕಸಭಾ ಸದಸ್ಯರು ಅದರಲ್ಲೂ ಬಿಜೆಪಿ ಸದಸ್ಯರುಗಳು ಪ್ರಧಾನಿಯವರ ಜೊತೆ ಒತ್ತಡ ಹೇರಿದರೆ ಮಹಾರಾಷ್ಟ್ರ-ಗೋವಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಪ್ರಧಾನಿಯವರು ಮಾತನಾಡಿದರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಬಹುದೆಂದು ವಾಟಾಳ್ ನಾಗರಾಜ್ ರವರು ಹೇಳಿದರು,

ಪಾತಾಳಗಂಗೆಯಿಂದ ನೀರು ತಂದು ಕೊಡುವ ಬದಲು ಸಮುದ್ರ ಮುಖಾಂತರ ನೀರು ಕೊಡಬೇಕು ಪಾತಳಗಂಗೆಯಿಂದ ನೀರು ತಂದರೆ ಭೂಗರ್ಭಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರ ಪಾತಾಳ ಗಂಗೆಯ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ವಾಟಾಳ್ ಒತ್ತಾಯಿಸಿದರು.
ಕಳೆದ 50 ವರ್ಷಗಳಿಂದ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಿರುವ ನಾನು ಎಂದೂ ಕೂಡ ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, ನಾನು ಮನಸ್ಸು ಮಾಡಿದ್ದರೆ ಎಂದೋ ಎರಡು ಸಲ  ರಾಜ್ಯದಲ್ಲಿ ಮುಖ್ಯಮತ್ರಿಯಾಗುತ್ತಿದ್ದೆ 30 ವರ್ಷಗಳ ಕಾಲ ಮಂತ್ರಿಯಾಗುತ್ತಿದ್ದೆ. ಎಂದು ವಾಟಳ್ ತಿಳಿಸಿದರು.
ರಾಜ್ಯದಲ್ಲಿ ರೈತ ಸಂಘ, ಕನ್ನಡ ಚಳುವಳಿ, ಪ್ರಗತಿಪರ ಸಂಘಟನೆಗಳು ಸೇರಿ ರಾಜ್ಯಲ್ಲಿ ಹೊಸ ಯುಗ ಪ್ರಾರಂಭಿಸಿ ಅಧಿಕಾರ ಹಿಡಿಯಬೇಕಾಗಿದೆ. ಆದ್ದರಿಂದ ಮುಂದಿನ ಚುಣಾವನೆಯಲ್ಲಿ ನಾನು ಚಾಮರಾಜನಗರದಿಂದಲೇ ಸ್ಪರ್ಧಿಸುತ್ತೇನೆ ಎಂದು ವಾಟಾಳ್ ತಿಳಿಸಿದರು.


 


ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು