ನಗರಸಭೆ ಚುನಾವಣೆ: ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಅಂಚೆ ಮತಪತ್ರದ ಮೂಲಕ ಮತ ಚಲಾವಣೆ
ಚಾಮರಾಜನಗರ, ಆ. 24- ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕೆಲಸ ಕಾರ್ಯಗಳಿಗೆ ನಿಯೋಜಿತರಾದ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಮತದಾರರ ಪಟ್ಟಿಯಲ್ಲಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ನೌಕರರುಗಳು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದಾಗಿದೆ.ಚುನಾವಣಾ ಕರ್ತವ್ಯದಲ್ಲಿರುವ ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಮತದಾರರ ಘೋಷಣೆ ಮತ್ತು ಪ್ರಮಾಣ ಪತ್ರ ನೀಡಿ ಪ್ರಪತ್ರ-14ಬಿ ಯ ಅಂಚೆ ಮತಪತ್ರವನ್ನು ಪಡೆದು ಭರ್ತಿಮಾಡಿ ಸೆಪ್ಟೆಂಬರ್ 2ರೊಳಗೆ ಆಯಾ ತಾಲೂಕು ತಹಶೀಲ್ದಾರರ ಕಚೇರಿಗೆ ತಲುಪಿಸಬೇಕು.
ಆಗಸ್ಟ್ 2ರ ನಂತರ ಸ್ವೀಕೃತಿಯಾದ ಅಂಚೆ ಮತಪತ್ರಗಳನ್ನು ಚಾಮರಾಜನಗರ ನಗರಸಭೆಗೆ ಸಂಬಂಧಿಸಿದ ಅಂಚೆ ಮತಪತ್ರದ ಮತದಾರರು ಮಸ್ಟರಿಂಗ್ ಕೇಂದ್ರವಾದ ಸರ್ಕಾರಿ ಪಾಲಿಟೆಕ್ನಿಕ್, ಚಾಮರಾಜನಗರ ಇಲ್ಲಿಗೆ ಆಗಸ್ಟ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಮತ್ತು ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದ ಮತದಾರರು ಮಸ್ಟರಿಂಗ್ ಕೇಂದ್ರವಾದ ಎಂ.ಜಿ.ಎಸ್.ವಿ. ಜೂನಿಯರ್ ಕಾಲೇಜು, ಕೊಳ್ಳೇಗಾಲ ಇಲ್ಲಿಗೆ ಆಗಸ್ಟ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಮರಾಜನಗರ, ಆ. 24 - ಕೃಷಿ ಸಚಿವರಾದ ಎನ್. ಎಚ್. ಶಿವಶಂಕರ ರೆಡ್ಡಿ ಆಗಸ್ಟ್ 27ರಂದು ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ತಾಲೂಕಿನ ಹೊಂಡರಬಾಳುವಿಗೆ ಆಗಮಿಸುವ ಸಚಿವರು ಅಮೃತಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಕೃಷಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಣೆ ಮಾಡುವರು. ನಂತರ ರೈತರೊಂದಿಗೆ ಚರ್ಚೆ ನಡೆಸುವರು.
11 ಗಂಟೆಗೆ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ಕೃಷಿ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸುವರು.
ನಂತರ 4.45 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಮತ್ತು ಹರಳೆ ಗ್ರಾಮದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಚರ್ಚಿಸುವರು. ಸಂಜೆ 5.30 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 25ರಂದು ಶ್ರೀಕೃಷ್ಣ ಜಯಂತಿ ಪೂರ್ವಭಾವಿ ಸಭೆÀ
ಚಾಮರಾಜನಗರ, ಆ. 24 - ಜಿಲ್ಲಾಡಳಿತದ ವತಿಯಿಂದ ಜಿಲ್ಲಾಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಆಚರಿಸುವ ಸಲುವಾಗಿ ಆಗಸ್ಟ್ 25ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಸಮುದಾಯದ ಮುಖಂಡರುಗಳ ಸಭೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.
ಆಗಸ್ಟ್ 27ರಂದು ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ
ಚಾಮರಾಜನಗರ, ಆ. 24 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿಯವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ಅವರ ಕುರಿತು ಈಚನೂರು ಕುಮಾರ್ ಅವರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘಸಂಸ್ಥೆಯ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಭಾಗವಹಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ.
ಚಾಮರಾಜನಗರ, ಆ. 24 - ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕೆಲಸ ಕಾರ್ಯಗಳಿಗೆ ನಿಯೋಜಿತರಾದ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಮತದಾರರ ಪಟ್ಟಿಯಲ್ಲಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ನೌಕರರುಗಳು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದಾಗಿದೆ.
ಚುನಾವಣಾ ಕರ್ತವ್ಯದಲ್ಲಿರುವ ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಮತದಾರರ ಘೋಷಣೆ ಮತ್ತು ಪ್ರಮಾಣ ಪತ್ರ ನೀಡಿ ಪ್ರಪತ್ರ-14ಬಿ ಯ ಅಂಚೆ ಮತಪತ್ರವನ್ನು ಪಡೆದು ಭರ್ತಿಮಾಡಿ ಸೆಪ್ಟೆಂಬರ್ 2ರೊಳಗೆ ಆಯಾ ತಾಲೂಕು ತಹಶೀಲ್ದಾರರ ಕಚೇರಿಗೆ ತಲುಪಿಸಬೇಕು.
ಸೆಪ್ಟೆಂಬರ್ 2ರ ನಂತರ ಸ್ವೀಕೃತಿಯಾದ ಅಂಚೆ ಮತಪತ್ರಗಳನ್ನು ಚಾಮರಾಜನಗರ ನಗರಸಭೆಗೆ ಸಂಬಂಧಿಸಿದ ಅಂಚೆ ಮತಪತ್ರದ ಮತದಾರರು ಮಸ್ಟರಿಂಗ್ ಕೇಂದ್ರವಾದ ಸರ್ಕಾರಿ ಪಾಲಿಟೆಕ್ನಿಕ್, ಚಾಮರಾಜನಗರ ಇಲ್ಲಿಗೆÉ ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಮತ್ತು ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದ ಮತದಾರರು ಮಸ್ಟರಿಂಗ್ ಕೇಂದ್ರವಾದ ಎಂ.ಜಿ.ಎಸ್.ವಿ. ಜೂನಿಯರ್ ಕಾಲೇಜು, ಕೊಳ್ಳೇಗಾಲ ಇಲ್ಲಿಗೆ ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ಚುನಾವಣೆ: ವೀಕ್ಷಕರ ನೇಮಕ
ಚಾಮರಾಜನಗರ, ಆ. 25 :- ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರು ನೇಮಕವಾಗಿದ್ದು, ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಅನಿತಾಲಕ್ಷ್ಮೀ, ಮುಖ್ಯ ಆಡಳಿತಧಿಕಾರಿಗಳು, ವಿ.ಜೆ.ಎನ್.ಎಲ್. ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9449116870 ಆಗಿದೆ. ಇವರ ಸಂಪರ್ಕ ಅಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನದ ಡಿ.ವೈ.ಪಿ.ಸಿ ಸಿ.ಎನ್. ರಾಜು ಕಾರ್ಯ ನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481545929 ಆಗಿದೆ.
ಚುನಾವಣಾ ವೆಚ್ಚ ವೀಕ್ಷಕರಾಗಿ ಅರ್ಥಿಕ ಇಲಾಖೆ(ವಿತ್ತೀಯ ಸುಧಾರಣೆ)ಯ ಉಪನಿಯಂತ್ರಕರು (ಅರ್ಥಿಕ ನಿರ್ವಹಣೆ) ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9035236236 ಆಗಿರುತ್ತದೆ. ಇವರ ಸಂಪರ್ಕ ಅಧಿಕಾರಿಯಾಗಿ ಚಾಮರಾಜನಗರ ತಾಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿ ದೇವನಾಯಕ ಅವರು ಕಾರ್ಯನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481817232ಆಗಿದೆ.
ಚುನಾವಣಾ ವೀಕ್ಷಕರನ್ನು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ಚುನಾವಣೆ: ವೀಕ್ಷಕರ ನೇಮಕ
ಚಾಮರಾಜನಗರ, ಆ. 25 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರು ನೇಮಕವಾಗಿದ್ದು, ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಅನಿತಾಲಕ್ಷ್ಮೀ, ಮುಖ್ಯ ಆಡಳಿತಧಿಕಾರಿಗಳು, ವಿ.ಜೆ.ಎನ್.ಎಲ್. ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9449116870 ಆಗಿದೆ. ಇವರ ಸಂಪರ್ಕ ಅಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನದ ಡಿ.ವೈ.ಪಿ.ಸಿ ಸಿ.ಎನ್. ರಾಜು ಕಾರ್ಯ ನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481545929 ಆಗಿದೆ.
ಚುನಾವಣಾ ವೆಚ್ಚ ವೀಕ್ಷಕರಾಗಿ ಹೈದರ್ ಅಲಿ ಖಾನ್. ಕೆ, ಅರ್ಥಿಕ ಇಲಾಖೆ(ವಿತ್ತೀಯ ಸುಧಾರಣೆ)ಯ ಉಪನಿಯಂತ್ರಕರು (ಅರ್ಥಿಕ ನಿರ್ವಹಣೆ) ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9035236236 ಆಗಿರುತ್ತದೆ. ಇವರ ಸಂಪರ್ಕ ಅಧಿಕಾರಿಯಾಗಿ ಚಾಮರಾಜನಗರ ತಾಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿ ದೇವನಾಯಕ ಅವರು ಕಾರ್ಯನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481817232ಆಗಿದೆ.
ಚುನಾವಣಾ ವೀಕ್ಷಕರನ್ನು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶ ಸುಧಾರಣೆ ಪ್ರಸ್ತುತ ಸಂದರ್ಭಕ್ಕೂ ಅವಶ್ಯ:ಡಿ.ಸಿ.ಬಿ.ಬಿ ಕಾವೇರಿ
ಚಾಮರಾಜನಗರ, ಆ. 27 - ಬ್ರಹ್ಮಶ್ರೀ ನಾರಾಯಣ ಗುರು ಅವರು 19 ನೇ ಶತಮಾನದಲ್ಲಿ ಆರಂಭಿಸಿದ ಸಾಮಾಜಿಕ ಸುದಾರಣೆಗಳು ಪ್ರಸ್ತುತ ಸಂಧರ್ಭಕ್ಕೂ ಅವಶ್ಯಕವಾಗಿವೆ ಎಂದು ಜಿಲ್ಲಾಧಿಕಾರಿ ಬಿ ಬಿ ಕಾವೇರಿ ಅವರು ಅಭಿಪ್ರಾಯ ಪಟ್ಟರು.
ನಗರದ ಜೆ. ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತಯು ಸಂಸೃತಿ ಇಲಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರು ಅವರು ಸಾಮಾಜಿಕ ಸಮಾನತೆಗೆ ಅನೇಕ ಸುದಾರಣೆಗಳನ್ನು ತಂದರು ಎಲ್ಲಾ ಜಾತಿಗಳು ಸಮಾನ ಎಂದು ಪ್ರತಿಪಾದಿಸಿದರು. ಅವರ ಸಮಾಜ ಮುಖಿ ಸುಧಾರಣೆಗಳು ಇಂದಿಗೂ ಅಗತ್ಯವಾಗಿವೆ ಎಂದು ಕಾವೇರಿ ಅವರು ತಿಳಿಸಿದರು.
ನಾರಾಯಣಗುರು ಅವರ ಕೊಡುಗೆ ಸಾಧನೆ, ಕೆಲಸಗಳು ಉತ್ತೇಜನಕಾರಿಯಾಗಿದೆ. ಅವರ ಪ್ರಭಾವದಿಂದ ಅನೇಕ ಬದಲಾವಣೆಗಳು ಆಗಿವೆ. ವಿಶೇಷವಾಗಿ ಕೇರಳ ರಾಜ್ಯದಲ್ಲಿ ಅವರು ಹಾಕಿಕೊಟ್ಟ ಅಡಿಗಲ್ಲಿನ ಮೇಲೆ ಬಹಳಷ್ಟು ಪ್ರಮುಖ ಸಾಧನೆಗಳು ಆಗಿವೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ||ಕೆ.ಹರೀಶ್‍ಕುಮಾರ್ ಅವರು ಮಾತನಾಡಿ ನಾರಾಯಣಗುರು ಅವರ ಕಾಲದಲ್ಲಿ ಮೂಢನಂಬಿಕೆ ಮೇಲು-ಕೀಳು ಇನ್ನಿತರ ಪರಿಸ್ಥಿತಿ ಇತ್ತು, ಅಂತಹ ಸಮಯದಲ್ಲಿ ಸುಧಾರಣೆಗೆ ಅಪಾರವಾಗಿ ಶ್ರಮಿಸಿ ಅರಿವು ಮೂಡಿಸಲು ನಾರಾಯಣಗುರು ಅವರು ಮುಂದಾದರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅರಿವು ಮೂಡಿಸುವ ಕೆಲಸ ಇಂದೂ ಸಹ ಮುಂದುವರಿಯಬೇಕಿದೆ ಎಂದರು.
ನಾರಾಯಣಗುರು ಅವರ ಚಿಂತನೆ ಹಾದಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೂ ಚಿಂತನೆ ನಡೆಸಬೇಕಿದೆ ಹೊಸ ಸಮಾಜ ನಿರ್ಮಾಣ ಮಾಡುವಲ್ಲಿ ನಾರಾಯಣಗುರು ಅವರ ಆದರ್ಶಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ಹರೀಶ್‍ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಉಪನ್ಯಾಸ ನೀಡಿದ ಖ್ಯಾತ ಬರಹಗಾರರಾದ ಈಚನೂರು ಕುಮಾರ್ ಮಾತನಾಡಿ ನಾರಾಯಣಗುರು ಅವರು ತೋರಿಸಿದ ಸನ್ಮಾರ್ಗ ಸಮಾಜಮುಖಿ ಕಾರ್ಯಗಳು ಇನ್ನೂ ಜೀವಂತವಾಗಿವೆ. ಆದರೆ ಅವರು ನೀಡಿದ ಮಾರ್ಗದರ್ಶನವನ್ನು ಪಾಲನೆ ಮಾಡಲಾಗುತ್ತಿಲ್ಲ ಎಂದು ವಿಷಾದಿಸಿದರು.
ಕೆಳಸಮುದಾಯದ ಜನರ ಮನೆಗೆ ಹೋಗಿ ಅವರೊಂದಿಗೆ ಸಹ ಬೋಜನ ಮಾಡಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ಮಾಡಿದರು. ಮೌಢ್ಯತೆ, ಜಾತಿ ನಿರ್ಮೂಲನೆಗೆ ವಿಶೇಷವಾಗಿ ಶ್ರಮಿಸಿದರು. ಅವರು ಹಾಕಿಕೊಟ್ಟ ನೀತಿಯನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಈಚನೂರು ಕುಮಾರ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚೆನ್ನಪ್ಪ, ಸಮಾಜದ ಮುಖಂಡರಾದ ವೆಂಕಟೇಶ್, ಸಂಪತ್, ರಾಜಣ್ಣ, ಪುಟ್ಟಪ್ಪ, ಮೇರು ನಟ ಡಾ||ರಾಜ್ ಕುಮಾರ್ ರವರ ಸಹೋದರಿ ನಾಗಮ್ಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನೇರ ಫೊನ್-ಇನ್ ಕಾರ್ಯಕ್ರಮ: 35 ದೂರು ದಾಖಲು
ಚಾಮರಾಜನಗರ, ಆ. 25 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಒಟ್ಟು 35 ದೂರುಗಳು ದಾಖಲಾಗಿವೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತವಾಗಿ ಒಂದು ಗಂಟೆಗಳ ಕಾಲ ಜಿಲ್ಲೆಯ ನಾನಾ ಭಾಗದಿಂದ ದೂರುಗಳು, ಸಮಸ್ಯೆಗಳನ್ನು ಕರೆ ಮಾಡಿ ತಿಳಿಸಲಾಯಿತು.
ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ, ನಗರದ ಸಂಚಾರ ವ್ಯವಸ್ಥೆ, ಇ-ಸ್ವತ್ತು, ಸ್ವಚ್ಚತೆ ಸೇರಿದಂತೆ ಇತರೆ ವಿಷಯಗಳನ್ನು ಜಿಲ್ಲೆಯ ವಿವಿಧ ಭಾಗಗಳ ಜನರು ಫೋನ್-ಇನ್ ಕಾರ್ಯಕ್ರದಲ್ಲಿ ಪ್ರಸ್ತಾಪಿಸಿದರು.
ಯಳಂದೂರಿನಿಂದ ಕರೆ ಮಾಡಿದ ಸ್ಥಳೀಯರೊಬ್ಬರು ಸುವರ್ಣಾವತಿ ನದಿ ಅಂಚಿನ ತೋಟದಲ್ಲಿ ಮರಳು ತೆಗೆಯಲಾಗುತ್ತಿದೆ ಎಂದರು. ಹರದನಹಳ್ಳಿಯಿಂದ ಮತ್ತೊಬ್ಬರು ಕರೆ ಮಾಡಿ ತಮ್ಮ ಭಾಗದಲ್ಲೂ ಮರಳು ತೆಗೆಯುತ್ತಿರುವ ಬಗ್ಗೆ ದೂರು ನೀಡಿದ್ದೇನೆ. ಆದರೂ ಕ್ರಮ ತೆಗೆದುಕೊಂಡಿಲ್ಲ ಎಂದರು. ಸತ್ತೇಗಾಲ ಪಂಚಾಯಿತಿ ವ್ಯಾಪ್ತಿಗೊಳಪಡುವ ಶಿವನಸಮುದ್ರ ಬಳಿ ಸಹ ಅಕ್ರಮವಾಗಿ ಮರಳು ಸಂಗ್ರಹಣಾ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ದೂರು ನೀಡಿದವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಮತ್ತೊಬ್ಬರು ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.
ಚಾಮರಾಜನಗರದ 26ನೇ ವಾರ್ಡ್, 10ನೇ ವಾರ್ಡ್ ಇತರೆ ಕೆಲವೆಡೆ ಸ್ವಚ್ಚತೆಗೆ ಕ್ರಮ ತೆಗೆದುಕೊಂಡಿಲ್ಲ. ಗಿಡಗಂಟಿಗಳು ಬೆಳೆದು ಸೊಳ್ಳೆ ಹಾವಳಿ ವಿಪರೀತವಾಗಿದೆ ಎಂದು ಸ್ಥಳೀಯರೊಬ್ಬರು ಕರೆ ಮಾಡಿದರು. ಕರಿನಂಜನಪುರ ಹೊಸ ಬಡಾವಣೆಯಲ್ಲಿ ನೀರು, ರಸ್ತೆ ಸೌಲಭ್ಯ ಕಲ್ಪಿಸುವಂತೆ ಇದುವರೆಗೆ 2 ಬಾರಿ ಕೋರಲಾಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮತ್ತೊಬ್ಬರು ಅಸಮಧಾನ ವ್ಯಕ್ತಪಡಿಸಿದರು. ಈ ಸಂಬಂಧ ಉತ್ತರ ನೀಡಿದ ಜಿಲ್ಲಾಧಿಕಾರಿಯವರು ಟೆಂಡರ್ ಪ್ರಕ್ರಿಯೆ ಆಗಿದೆ. ಕಾಮಗಾರಿ ಆರಂಭ ಪ್ರಕ್ರಿಯೆಯು ನಡೆಯಲಿದೆ ಎಂದರು.
ನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ಆಟೋಗಳು ಸಂಚಾರ ನಿಯಮ ಪಾಲನೆ ಮಾಡದೇ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರಿಗೆ, ಇತರೆ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರು ನೀಡಿದರು. ಮತ್ತೊಬ್ಬರು ಕರೆ ಮಾಡಿ ದೊಡ್ಡಂಗಡಿ ಬೀದಿಯಲ್ಲಿ ವಾಹನಗಳ ನಿಲುಗಡೆ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಳವಡಿಸಬೇಕೆಂದು ಕೋರಿದರು.
ಈ ಸಂಬಂಧ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಸಂಚಾರ ನಿಯಮವನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘÀ್ರ ಕ್ರಮ ವಹಿಸಲಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ-ಸ್ವತ್ತು ಅರ್ಜಿ ವಿಲೇವಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಸಹ ಕಾರ್ಯಕ್ರಮದಲ್ಲಿ ಕೇಳಿಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರು ಸಂಬಮಧಪಟ್ಟ ಅಧಿಕಾರಿಗಳು ಈ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ ಎಂದರು.
ಕುಡಿಯುವ ನೀರು, ರಸ್ತೆ ದುರಸ್ಥಿ, ಶೌಚಾಲಯ ಸ್ವಚ್ಚತೆ ಇತರೆ ವಿಷಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳು ಸಹ ಫೊನ್-ಇನ್ ಕಾರ್ಯಕ್ರಮದಲ್ಲಿ ಪ್ರಸ್ತಾಪವಾದವು.
ಜಿಲ್ಲಾ ಪಂಚಾಯತ್ ಮುಖ್ಯ ಕಾಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.
ಅರ್ಥಪೂರ್ಣ ಶ್ರೀಕೃಷ್ಣ ಜಯಂತಿ ಆಚರಣೆಗೆ ನಿರ್ಧಾರ
ಚಾಮರಾಜನಗರ, ಆ. 25 ಜಿಲ್ಲಾಡಳಿತದ ವತಿಯಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಸಂಬಂಧ ವಿವರವಾಗಿ ಚರ್ಚಿಸಲಾಯಿತು.
ಶ್ರೀಕೃಷ್ಣ ಜಯಂತಿ ಆಚರಣೆಯನ್ನು ಸೂಕ್ತ ದಿನದಲ್ಲಿ ಆಯೋಜಿಸಲು ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲು ಸಹ ಸಭೆ ನಿರ್ಣಯಿಸಿತು.
ಶ್ರೀಕೃಷ್ಣ ಜಯಂತಿ ಆಚರಣೆ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ವೇಷಧಾರಿ ಸ್ಪರ್ಧೆ ಆಯೋಜನೆಗೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಸೂಚನೆ ನೀಡಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೆ ಏರ್ಪಾಡು ಮಾಡಬೇಕು. ವೇದಿಕೆ ಅಲಂಕಾರ, ಇತರೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆಗಮಿಸುವವರಿಗೆ ಕುಡಿಯುವ ನೀರು ಸೇರಿದಂತೆ ಅವಸ್ಯಕ ಏರ್ಪಾಡುಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚನ್ನಪ್ಪ, ಸಂಘಟನೆಗಳ ಮುಖಂಡರಾದ ಮಹೇಶ್, ಸುರೇಶ್ ಋಗ್ವೇದಿ, ಜಿ. ಬಂಗಾರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಆ. 27 ರಂದು ನೂತನ ಕೃಷಿ ಮಹಾವಿದ್ಯಾಲಯ ಆರಂಭ
ಚಾಮರಾಜನಗರ, ಆ. 25 - ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರ ವತಿಯಿಂದ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ನೂತನ ಕೃಷಿ ಮಹಾವಿದ್ಯಾಲಯದ ಪ್ರಾರಂಭೋತ್ಸವ ಸಮಾರಂಭ ನಡೆಯಲಿದೆ.ಕೃಷಿ ಸಚಿವರಾದ ಎನ್.ಹೆಚ್. ಶಿವಶಂಕರ ರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸÀಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಎನ್. ಮಹೇಶ್, ಸಂಸದರಾದ ಅರ್. ಧ್ರುವನಾರಾಯಣ, ಶಾಸಕರಾದ ಅರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಶಾಸಕರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಜಿ.ಪಂ. ಉಪಾಧ್ಯಕ್ಷರಾದ ಜೆ. ಯೋಗೇಶ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ಸದಸ್ಯರಾದ ಎಂ. ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಸದಸ್ಯರಾದ ಹೆಚ್.ಎಂ. ಮಹದೇವಶೆಟ್ಟಿ, ಹರದನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ಬಶೆಟ್ಟಿ ಅವರು ಆಹ್ವಾನಿತ ಗಣ್ಯರಾಗಿ ಪಾಲ್ಗೊಳ್ಳಲಿದ್ದಾರೆ.
ಕೃಷಿ ಇಲಾಖೆಯ ಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಜೆ. ಚಂದ್ರೇಗೌಡ ಅವರುಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಬೆಂಗಳೂರು ಕೃಷಿ ವಿ.ವಿ. ಕುಲಪತಿ ಡಾ. ಎಂ.ಎನ್. ನಟರಾಜು, ವಿಧಾನ ಪರಿಷತ್ ಸದಸ್ಯರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಪ್ರತಾಪ್‍ಚಂದ್ರ ಶೆಟ್ಟಿ, ಎನ್. ಶ್ರೀನಿವಾಸಯ್ಯ, ವಿ. ಸುಬ್ರಮಣಿ, ಹೆಚ್.ಎ. ಶಿವಕುಮಾರ್, ಕೆ.ಎನ್. ಶ್ರೀಕಾಂತ್, ಪ್ರೊ. ಶಕುಂತಲ ಶ್ರೀಧರ್, ನವದೆಹಲಿಯ ಎ.ಡಿ.ಜಿ. ಡಾ. ಪಿ.ಎಸ್. ಪಾಂಡೆ, ಡೀನ್ ಡಾ. ಎಸ್. ರಾಜೇಂದ್ರ ಪ್ರಸಾದ್, ಕುಲ ಸಚಿವರಾದ ಡಾ. ಎ.ಬಿ. ಪಾಟೀಲ, ಕೃಷಿ ಸಂಶೋಧನಾ ನಿರ್ದೇಶಕರಾದ ಡಾ. ವೈ.ಜಿ ಷಡಕ್ಷರಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಎಂ. ಭೈರೇಗೌಡ, ಕೃಷಿ ವಿಭಾಗದ ಡೀನ್ ಡಾ. ಟಿ. ಶಿವಶಂಕರ್, ಡಾ. ಎನ್. ದೇವಕುಮಾರ್, ಡಾ. ಪಿ. ವೆಂಕಟರಮಣ, ಗ್ರಂಥಪಾಲರಾದ ಡಾ. ದೇವರಾಜು, ಹಣಕಾಸು ನಿಯಂತ್ರಣಾಧಿಕಾರಿ ಡಿ. ವಿಜಯ್ ಕುಮಾರ್, ಆಸ್ತಿ ಅಧಿಕಾರಿ ಎಂ. ಎನ್. ದೇವರಾಜ, ಆಡಳಿತಾಧಿಕಾರಿ ಡಾ. ಆರ್. ಎನ್. ಭಾಸ್ಕರ್ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿರಿರುವರು ಎಂದು ಪ್ರಕಟಣೆ ತಿಳಿಸಿದೆ.
ನಗರಸಭೆ ಚುನಾವಣೆ: ಮತದಾನ ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರ ಅಂತ್ಯ
ಚಾಮರಾಜನಗರ, ಆ. 25 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಲ್ಲ ಅಭ್ಯರ್ಥಿಗಳು ಪಕ್ಷದ ಮುಖಂಡರಿಗೆ ಸೂಚನೆಗಳನ್ನು ನೀಡಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.ನಗರಸಭೆ ಚುನಾವಣೆ: ಮದ್ಯ ಮಾರಾಟ ನಿಷೇಧ
ಚಾಮರಾಜನಗರ, ಆ. 25 ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಸಂಬಂಧ ಆಗಸ್ಟ್ 31ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಈ ಎರಡು ನಗರಸಭೆ ವ್ಯಾಪ್ತಿಯ ಗಡಿಯಿಂದ 3 ಕಿ.ಮೀ. ಪರಿಧಿಯಲ್ಲಿ ಆಗಸ್ಟ್ 30ರ ಬೆಳಿಗ್ಗೆ 7 ಗಂಟೆಯಿಂದ ಆಗಸ್ಟ್ 31ರ ಮಧ್ಯರಾತ್ರಿಯ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಹಂಚಿಕೆ ಅಕ್ಷಮ್ಯ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಕೃಷಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಆ. 25 :- ಕೃಷಿ ಸಚಿವರಾದ ಎನ್. ಎಚ್. ಶಿವಶಂಕರ ರೆಡ್ಡಿ ಆಗಸ್ಟ್ 27ರಂದು ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ತಾಲೂಕಿನ ಹೊಂಡರಬಾಳುವಿಗೆ ಆಗಮಿಸುವ ಸಚಿವರು ಅಮೃತಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಕೃಷಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಣೆ ಮಾಡುವರು. ನಂತರ ರೈತರೊಂದಿಗೆ ಚರ್ಚೆ ನಡೆಸುವರು.
11 ಗಂಟೆಗೆ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ಕೃಷಿ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸುವರು.
ನಂತರ 4.45 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಮತ್ತು ಹರಳೆ ಗ್ರಾಮದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಚರ್ಚಿಸುವರು. ಸಂಜೆ 5.30 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 27ರಂದು ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ
ಚಾಮರಾಜನಗರ, ಆ. 25 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಬ್ರಹ್ಮಶ್ರೀ ನಾರಾಯಣಗುರು ಅವರ ಕುರಿತು ಮೈಸೂರಿನ ಖ್ಯಾತ ಬರಹಗಾರರಾದ ಈಚನೂರು ಕುಮಾರ್ ಅವರು ಉಪನ್ಯಾಸ ನೀಡಲಿದ್ದಾರೆ.
ಚಾಮರಾಜನಗರದ ಜೆ.ಬಿ. ಮಹೇಶ್ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರೆಂದು ಪ್ರಕಟಣೆ ತಿಳಿಸಿದೆ.
No comments:
Post a Comment