Saturday, 8 September 2018

ಅತ್ಯಾಚಾರ ಆರೋಪಿಗೆ ಜಾಮೀನು ತಿರಸ್ಕಾರ (06-09-2018)

ಅತ್ಯಾಚಾರ ಆರೋಪಿಗೆ ಜಾಮೀನು ತಿರಸ್ಕಾರಚಾಮರಾಜನಗರ, ಸೆ. 06 :- ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ. 
ಮಾರ್ಡಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅದೇ ಊರಿನ ಗೋಪಿ ಅಲಿಯಾಸ್ ಗೋಪಾಲಕೃಷ್ಣ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆಂದು ಬಾಲಕಿಯ ತಂದೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೋ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಜಾಮೀನು ಅರ್ಜಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಸೆಪ್ಟೆಂಬರ್ 1ರಂದು ತಿರಸ್ಕರಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೇಶ್ ಹಾಜರಾಗಿ ವಾದ ಮಂಡಿಸಿದ್ದರೆಂದು ಪ್ರಕಟಣೆ ತಿಳಿಸಿದೆ.
ಕೆಶಿಪ್ ಯೋಜನೆ: ಭೂಮಿ ನೇರ ಖರೀದಿಗೆ ಪತ್ರ ಜಾರಿ  
ಚಾಮರಾಜನಗರ, ಸೆ. - ಕೆಶಿಪ್-3ರ ಯೋಜನೆಯಡಿ ಕೊಳ್ಳೇಗಾಲ-ಹನೂರು ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲಿದ್ದು, ಈ ಯೋಜನೆಗೆ ಜಮೀನನ್ನು ಕ್ರಯಕ್ಕೆ ನೀಡಲು ತಿಳಿವಳಿಕೆ ಪತ್ರಗಳನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗರ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಭೂ ಮಾಲಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕೆಶಿಪ್ ಯೋಜನೆಗೆ ಅಗತ್ಯವಿರುವ ಜಮೀನನ್ನು ನೇರ ಖರೀದಿಸಲು ಅನುಮೋದನೆ ಸಿಕ್ಕಿದ್ದು, ಈಗಾಗಲೇ ಜಮೀನು ಜಂಟಿ ಅಳತೆ ಕಾರ್ಯ ಮುಗಿದಿದೆ. ನೇರ ಖರೀದಿ ಜಮೀನಿನ ಬೆಲೆ ನಿಗದಿ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಮುಖ್ಯ ಯೋಜನಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ರಸ್ತೆ ಅಗಲೀಕರಣ ವ್ಯಾಪ್ತಿಗೆ ಅಗ್ರಹಾರ, ಸಿದ್ದಯ್ಯನಪುರ, ಮಧುವನಹಳ್ಳಿ, ಹಾರುವವನಪುರ, ಚಿಕ್ಕಿಂದುವಾಡಿ, ದೊಡ್ಡಿಂದುವಾಡಿ, ಸಿಂಗನಲ್ಲೂರು, ಕೊಂಗರಹಳ್ಳಿ, ಮಂಗಲ, ಆನಾಪುರ, ಹುಲ್ಲೇಪುರ, ಹನೂರು ಗ್ರಾಮಗಳು ಒಳಪಡಲಿವೆ. ಕೊಂಗರಹಳ್ಳಿ(ಕಾಮಗೆರೆ), ಮಂಗಲ ಮತ್ತು ಹನೂರು ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಒಳಪಡುವ ಕಟ್ಟಡಗಳ ಮೌಲ್ಯಮಾಪನಾ ಕಾರ್ಯ ಪ್ರಗತಿ ಹಂತದಲ್ಲಿದೆ. 
ನೇರ ಖರೀದಿ ಜಮೀನಿಗೆ ಬೆಲೆ ನಿಗದಿಪಡಿಸಿ ದಾಖಲು ಹಾಜರುಪಡಿಸಿ ಪರಿಹಾರ ಪಡೆದುಕೊಂಡು ಕೆಶಿಪ್-3 ಯೋಜನೆಗೆ ಜಮೀನನ್ನು ಕ್ರಯಕ್ಕೆ ನೀಡಲು ತಿಳಿಸಿ ಸಂಬಂಧಿಸಿದ ಗ್ರಾಮಲೆಕ್ಕಿಗರ ಮೂಲಕ ತಿಳಿವಳಿಕೆ ಪತ್ರಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಕೊಳ್ಳೇಗಾಲದ ಉಪವಿಭಾಗಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಸಂಬಂಧಿಸಿದ ಗ್ರಾಮಲೆಕ್ಕಿಗರಿಂದ ಮಾಹಿತಿ ಪಡೆಯಬಹುದೆಂದು ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಮಾಹಿತಿಗಾಗಿ ತಹಶೀಲ್ದಾರ್(ನಿವೃತ್ತ) ಕೆಶಿಪ್-3 ಶಾಖೆ ಮೊ. 9886247077, ಪ್ರಥಮ ದರ್ಜೆ ಸಹಾಯಕರು(ನಿವೃತ್ತ ಪಿ.ಡಿ.ಒ) ಮೊ. 8105092261, ಗ್ರಾಮಲೆಕ್ಕಿಗರು, ಹರಳೆ ವೃತ್ತ, ಅಗ್ರಹಾರಕ್ಕೆ ಸಂಬಂಧಿಸಿದಂತೆ ಮೊ. 7892540749, ಗ್ರಾಮಲೆಕ್ಕಿಗರು, ಸಿದ್ದಯ್ಯನಪುರ ಮೊ. 9741489698, ಗ್ರಾಮಲೆಕ್ಕಿಗರು, ಮಧುವನಹಳ್ಳಿ ಮೊ. 9916415627, ಗ್ರಾಮಲೆಕ್ಕಿಗರು ದೊಡ್ಡಿಂದುವಾಡಿ ಮೊ. 9108252088, ಗ್ರಾಮಲೆಕ್ಕಿಗರು, ಚಿಕ್ಕಿಂದುವಾಡಿ ಮೊ. 8861298650, ಗ್ರಾಮಲೆಕ್ಕಿಗರು, ಸಿಂಗನಲ್ಲೂರು ಮೊ. 9611378047, ಗ್ರಾಮಲೆಕ್ಕಿಗರು, ಕೊಂಗರಹಳ್ಳಿ ಮೊ. 8139948720, ಗ್ರಾಮಲೆಕ್ಕಿಗರು, ಮಂಗಲ ಮೊ. 9449746768, ಗ್ರಾಮಲೆಕ್ಕಿಗರು, ಕಣ್ಣೂರು(ಆನಾಪುರಕ್ಕೆ ಸಂಬಂಧಿಸಿದಂತೆ) ಮೊ. 9886974213, ಗ್ರಾಮಲೆಕ್ಕಿಗರು, ಹನೂರು ವೃತ್ತ(ಹನೂರು ಮತ್ತು ಹುಲ್ಲೇಪುರಕ್ಕೆ ಸಂಬಂಧಿಸಿದಂತೆ) ಮೊ. 9945796717 ಸಂಪರ್ಕಿಸುವಂತೆ ಉಪವಿಭಾಗಧಿಕಾರಿ ಫೌಜಿಯಾ ತರನ್ನುಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 


   
     
ಮನುಷ್ಯರ ನಡುವೆ ಬಾಂಧವ್ಯ ವೃದ್ಧಿಗೆ ಸಂಗೀತ ಸಹಕಾರಿ : ಪ್ರೊ. ಜಿ.ಎಸ್. ಜಯದೇವ್ 
ಚಾಮರಾಜನಗರ, ಸೆ. 06:- ಸಂಗೀತ ಮನುಷ್ಯನ ನಡುವೆ ಮಧುರವಾದ ಸ್ನೇಹ, ಬಾಂಧವ್ಯ, ಒಗ್ಗಟ್ಟು ಉಂಟುಮಾಡುವ ಅದ್ಭುತ ಸಾಮಥ್ರ್ಯ ಹೊಂದಿದೆ ಎಂದು ಸಾಹಿತಿ ಹಾಗೂ ಸಂಸ್ಕøತಿ ಚಿಂತಕರಾದ ಪ್ರೊ. ಜಿ.ಎಸ್. ಜಯದೇವ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ, ಸಾಹಿತ್ಯ ಪ್ರಕಾರಗಳು ಮನುಷ್ಯನಿಗೆ ಅಗತ್ಯ. ಮನುಷ್ಯನ ಹುಟ್ಟುಗುಣಗಳಾದ ಕ್ರೌರ್ಯ, ಹಿಂಸೆ, ಅಸೂಯೆಯನ್ನು ಸಂಗೀತ ಕಲೆ ಪರಿವರ್ತಿಸಿ ಸುಸಂಸ್ಕøತರನ್ನಾಗಿಸುತ್ತದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ ಎಂದರು.
ಸಾಹಿತ್ಯ ಸಂಸ್ಕøತಿಯನ್ನು ಜಾಗೃತಗೊಳಿಸುವ ಕಾರ್ಯಾಗಾರಗಳು ಹೆಚ್ಚು ನಡೆಯಬೇಕು. ಇದರಿಂದ ಭಾಷೆಯ ಬಗೆಗಿನ ಅಭಿಮಾನ ಸಹ ಹೆಚ್ಚಾಗಲಿದೆ. ಹೊರಗಿನ ಸಂಗೀತ ಪ್ರಕಾರಗಳಿಗಿಂತ ಇಲ್ಲಿನ ಸಂಗೀತ, ಕಲೆ ಅನನ್ಯವಾದದ್ದು. ಇದನ್ನು ಹೆಚ್ಚು ಬೆಳೆಸಬೇಕು. ಈ ನಿಟ್ಟಿನಲ್ಲಿ ಎಲ್ಲರು ಪ್ರಯೋಗಶೀಲರಾಗಬೇಕಿದೆ ಎಂದು ಜಯದೇವ ಅವರು ಸಲಹೆ ಮಾಡಿದರು.
ಸಾಂಸ್ಕøತಿಕವಾಗಿ ಚಾಮರಾಜನಗರ ಜಿಲ್ಲೆ ಕಡೆಗಣಿಸಲ್ಪಟ್ಟಿದೆ. ನೃತ್ಯ, ನಟನೆ, ಸಂಗೀತ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಅದ್ಭುತ ಪ್ರತಿಭಾವಂತರಿದ್ದಾರೆ. ಮಹದೇಶ್ವರ ಬೆಟ್ಟದ ಜಾನಪದ ಸಾಹಿತ್ಯವು ಪ್ರಪಂಚದಲ್ಲೇ ಎರಡನೇ ಅತಿದೊಡ್ಡ ಜಾನಪದ ಸಾಹಿತ್ಯವೆಂಬ ಹೆಗ್ಗಳಿಕೆ ಹೊಂದಿದೆ ಎಂದು ಜಯದೇವ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಅನಾದಿ ಕಾಲದಿಂದಲೂ ಕಲೆ, ಸಂಸ್ಕøತಿ ಜೀವನದ ಒಂದು ಭಾಗವಾಗಿದೆ. ಯಾವುದೇ ಇತಿಹಾಸವನ್ನು ಅಧ್ಯಾಯ ಮಾಡಿದಾಗ ಆಯಾ ಕಾಲದ ಕಲೆ, ಸಾಹಿತ್ಯ, ಸಂಸ್ಕøತಿ ಕೊಡುಗೆಗಳನ್ನು ಒದಗಿಸುವ ವಿವರಗಳು ಇಲ್ಲದ ಇತಿಹಾಸ ಪೂರ್ಣಗೊಳ್ಳ್ಳುವುದಿಲ್ಲ ಎಂದರು.
ವೃತ್ತಿಗಿಂತ ಪ್ರವೃತ್ತಿ, ಹೆಸರು, ಕೀರ್ತಿ ತಂದುಕೊಟ್ಟಿರುವ ಹಲವು ನಿದರ್ಶನ ಇವೆ. ಕಲೆ, ಸಾಹಿತ್ಯ, ಸಂಗೀತದಂತಹ ಪ್ರವೃತ್ತಿಯನ್ನು ಅತೀ ಸಂತೋಷದಿಂದ ನಿರ್ವಹಿಸಲಾಗುತ್ತಿದ್ದು, ಪ್ರವೃತ್ತಿಯಲ್ಲಿ ಯಾವುದೇ ಒತ್ತಡ, ಬಲವಂತ ಇರುವುದಿಲ್ಲ. ಕಲಾಪ್ರಕಾರಗಳಲ್ಲಿ ಒಂದಾದ ಸುಗಮ ಸಂಗೀತ ತರಬೇತಿಗೆ ಅಪೂರ್ವವಾದ ಅವಕಾಶವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ಗಾಯತ್ರಿ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ರಿಜಿಸ್ಟ್ರ್ಟಾರ್ ಅಶೋಕ್ ಎನ್. ಚಲವಾದಿ ಅವರು ಅಕಾಡೆಮಿ ಹಮ್ಮಿಕೊಳ್ಳುವ ಯೋಜನೆ, ಕಾರ್ಯಕ್ರಮಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗದೇ ರಾಜ್ಯದ ಎಲ್ಲಾ ಭಾಗಗಳಿಗೆ ತಲುಪುವಂತಾಗಬೇಕು ಎನ್ನುವ ಉದ್ದೇಶದಿಂದ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸೂಕ್ತ ತರಬೇತಿ ದೊರೆತರೆ ಪ್ರತಿಭೆಗಳು ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಹಿರಿಯ ಕಲಾವಿದರಾದ ಟಿ. ರಾಜಾರಾಮ್, ಸಿ.ಎಂ. ನರಸಿಂಹಮೂರ್ತಿ, ಸದಸ್ಯ ಸಂಚಾಲಕರಾದ ಆನಂದ ಮಾದಲಗೆರೆ, ಶಿಬಿರದ ನಿರ್ದೇಶಕರಾದ ಬಿ. ಬಸವರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ: ಆನ್‍ಲೈನ್‍ನಲ್ಲಿ ಪರಿಶೀಲಿಸಲು ಮನವಿ
ಚಾಮರಾಜನಗರ, ಸೆ. 06 :- ಭಾರತ ಸರ್ಕಾರದ ಕಾರ್ಮಿಕ ಇಲಾಖೆಯ ಬೀಡಿ ಕಾರ್ಮಿಕರ ಕಲ್ಯಾಣನಿಧಿ ವತಿಯಿಂದ 2018-19ನೇ ಸಾಲಿಗೆ ಜಿಲ್ಲೆಯ ಬೀಡಿ ಕಾರ್ಮಿಕರ ಅವಲಂಬಿತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಸಲುವಾಗಿ ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.
ಈ ಸಂಬಂಧ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯದ ಮುಖ್ಯಸ್ಥರು ಮತ್ತು ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ವಿದ್ಯಾರ್ಥಿವೇತನ ಕೋರಿ ಆನ್‍ಲೈನ್ ದಾಖಲಾಗಿರುವ ಅರ್ಜಿಗಳನ್ನು ಬೀಡಿ ಕಾರ್ಮಿಕರ ಮಕ್ಕಳಿಗೆ ಒದಗಿಸುವ ಧನಸಹಾಯ ಕಾಲಂ(ವೆಬ್‍ಸೈಟ್ hಣಣಠಿ:/ತಿತಿತಿ.sಛಿhoಟಚಿಡಿshiಠಿs.gov.iಟಿ)  ನಲ್ಲಿ ತುರ್ತಾಗಿ ಪರಿಶೀಲನೆ ಮಾಡಬೇಕು. 
ಪರಿಶೀಲನಾ ಪ್ರಕ್ರಿಯೆಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಧನಸಹಾಯ ಅರ್ಜಿಗಳನ್ನು ಪರಿಶೀಲಿಸಲು ಸೆಪ್ಟೆಂಬರ್ 15 ಕಡೆಯ ದಿನ. ಮೆಟ್ರಿಕ್ ನಂತರದ ಅರ್ಜಿಗಳನ್ನು ಪರಿಶೀಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. ಅಂತಿಮ ದಿನಾಂಕದ ನಂತರ ವಿದ್ಯಾರ್ಥಿವೇತನವು ಮಂಜೂರಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಿಛಿಟತಿobಟಡಿ-ಞಚಿ@ಟಿiಛಿ.iಟಿ ಅಥವಾ ದೂರವಾಣಿ ಸಂ: 080-23471706 ನ್ನು ಸಂಪರ್ಕಿಸುವಂತೆ ಬೀಡಿ ಕಾರ್ಮಿಕರ ಕಲ್ಯಾಣನಿಧಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿಭಾಗ್ಯ ಯೋಜನೆಯಡಿ ಹಸಿರು ಮನೆ, ನೆರಳು ಪರದೆಮನೆ ನಿರ್ಮಾಣಕ್ಕಾಗಿ ಸಹಾಯಧನ
ಚಾಮರಾಜನಗರ, ಸೆ. 06- ತೋಟಗಾರಿಕಾ ಇಲಾಖೆವತಿಯಿಂದ 2018-19ನೇ ಸಾಲಿಗೆ ಕೃಷಿಭಾಗ್ಯ ಯೋಜನೆಯನ್ನು ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಅನುಷ್ಟಾನಗೊಳಿಸಲಗುತ್ತಿದೆ.
ಈ ಯೋಜನೆಯಡಿ ಪ್ರತಿ ಫಲಾನುಭವಿ ಕುಟುಂಬಕ್ಕೆ ಗರಿಷ್ಠ 1 ಎಕರೆ ಪ್ರದೇಶದಲ್ಲಿ ಹಸಿರು ಮನೆ ಹಾಗೂ ನೆರಳು ಪರದೆಮನೆ ಘಟಕ ನಿರ್ಮಾಣಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಸಾಮಾನ್ಯ ವರ್ಗದಲ್ಲಿ ಮಾತ್ರ ಅನುದಾನ (ಶೇ. 50 ರಂತೆ ಸಹಾಯಧನ)ಲಭ್ಯವಿದ್ದು, ಅಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 8ರೊಳಗೆ ಸಲ್ಲಿಸುವಂತೆ ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅವಧಿ ವಿಸ್ತರಣೆÀ
ಚಾಮರಾಜನಗರ, ಸೆ. 06 - ಸಮಾಜ ಕಲ್ಯಾಣ ಇಲಾಖೆವತಿಯಿಂದ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ ಮಂಜೂರು ಮಾಡುವ ಸಲುವಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಆಗಸ್ಟ್ 30ನ್ನು ಕಡೆಯ ದಿನಾಂಕವಾಗಿ ನಿಗದಿಗೊಳಿಸಲಾಗಿತ್ತು.
ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ನಿಗಧಿತ ಅವಧಿಯೊಳಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಡೆಯ ದಿನಾಂಕವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆÀ
ಚಾಮರಾಜನಗರ, ಸೆ. 06 - ಜನರ ಕುಂದುಕೊರತೆ,ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕು ಕಚೇರಿಯಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಅಂದು ನಡೆಯಲಿರುವ ಸಭೆಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಹವಾಲು ನೀಡುವ ಮೂಲಕ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು