ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ
ಚಾಮರಾಜನಗರ, ಸೆ.2 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಶ್ರೀಕೃಷ್ಣ ಜಯಂತಿಯನ್ನು ಇಂದು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಸತ್ಯಮೇವ ಜಯತೇ ಎಂಬುದನ್ನು ಪ್ರತಿಪಾದಿಸಿದ. ಮಾನವೀಯ ಮೌಲ್ಯಗಳನ್ನು ಸಾರುವಲ್ಲಿ ಶ್ರೀಕೃಷ್ಣ ಅದರ್ಶವಾಗಿದ್ದಾನೆ ಎಂದರು.
ಶ್ರೀ ಕೃಷ್ಣನ ಕುರಿತು ಹೆಚ್ಚು ಓದಬೇಕು. ಮಕ್ಕಳಿಗೂ ಸಹ ಕೃಷ್ಣನ ಕುರಿತು ತಿಳಿಸಿಕೊಡಬೇಕು. ಶ್ರೀಕೃಷ್ಣನ ಬಾಲ್ಯ, ತುಂಟತನ, ಅರ್ಜುನನಿಗೆ ಸತ್ಯ ಕುರಿತು ಮಾಡಿದ ಉಪದೇಶ ಸೇರಿದಂತೆ ಹಲವಾರು ಮಹತ್ವದ ವಿಷಯಗಳನ್ನು ಹೇಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ, ಶ್ರೀಕೃಷ್ಣ ಜೀವನೋತ್ಸಾಹದ ಸಂಕೇತ. ಶ್ರೀಕೃಷÀ್ಣನ ಪ್ರಬುದ್ದತೆ, ಮುತ್ಸದಿತನ ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ. ಯುದ್ದ ಕಾಲದಲ್ಲಿ ನೀಡಿದ ಶ್ರೀಕೃಷ್ಣ ಭೋದನೆ ಸಹ ಗಮನ ಸೆಳೆಯುತ್ತದೆ. ಶ್ರೀ ಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ ಎಂದರು.
ಶ್ರೀಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರದೀಪ್‍ಕುಮಾರ್ ದೀಕ್ಷೀತ್ ಅವರು, ಧರ್ಮದ ಏಕಮೇವ ಉದ್ದಾರವೇ ಶ್ರೀಕೃಷ್ಣನ ಜನ್ಮಕ್ಕೆ ಕಾರಣ. ಜಗತ್ತಿನ ಸಂರಕ್ಷಕ ಶ್ರೀಕೃಷ್ಣನ ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಸಹ ಶ್ರೀಕೃಷ್ಣನ ವ್ಯಕ್ತಿತ್ವ ಮಾದರಿಯಾಗಿದೆ ಎಂದರು.
ಶ್ರೀಕೃಷ್ಣ ಉತ್ತಮ ರಾಜನೀತಿಜ್ಞನಾಗಿದ್ದು, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತಾನೆ. ಕಲಿಯುಗದಲ್ಲಿ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ದ್ವಾಪರ ಯುಗದಲ್ಲಿಯೇ ಶ್ರೀಕೃಷ್ಣ ತಿಳಿಸಿದ್ದ. ಧರ್ಮ, ಪರಂಪರೆ, ಸಾತ್ವಿಕ ರಕ್ಷಣೆಗೆ ಶ್ರೀಕೃಷ್ಣ ಕಾರಣರಾದರು ಎಂದರು ಪ್ರದೀಪ್‍ಕುಮಾರ್ ದಿಕ್ಷೀತ್ ತಿಳಿಸಿದರು.
ಇದೇ ವೇಳೆ ಚಿಕ್ಕ ಮಕ್ಕಳು ಶ್ರೀಕೃಷ್ಣನ ವೇಷದಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಎಲ್ಲಾ ಕೃಷ್ಣ ವೇಷಧಾರಿ ಮಕ್ಕಳಿಗೆ ಜಿಲ್ಲಾಧಿಕಾರಿ, ಇತರೇ ಗಣ್ಯರು ನೆನಪಿನ ಕಾಣಿಕೆ, ಪ್ರಶಂಸ ಪತ್ರವನ್ನು ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ, ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೆ. 3 ರಿಂದ ತಾಲ್ಲೂಕು ಕೇಂದ್ರಗಳಿಗೆ ಭ್ರಷ್ಟಚಾರ ನಿಗ್ರಹ ಅಧಿಕಾರಿಗಳ ಭೇಟಿ: ದೂರು ಸ್ವೀಕಾರ
ಚಾಮರಾಜನಗರ, ಸೆ. 2- ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ಸೆಪ್ಟಂಬರ್ 3 ರಿಂದ ಭೇಟಿ ನೀಡಿ, ನಾಗರಿಕರಿಂದ ದೂರುಗಳನ್ನು ಸ್ವೀಕರಿಸಲಿದ್ದಾರೆ.ಸೆ. 3ರಂದು ಗುಂಡ್ಲುಪೇಟೆ ಸರ್ಕಾರಿ ಅತಿಥಿ ಗೃಹ, ಸೆ.11 ರಂದು ಚಾಮರಾಜನಗರ ಎಸಿಬಿ ಪೊಲೀಸ್ ಠಾಣೆ, ಸೆ. 19 ರಂದು ಯಳಂದೂರು ಸರ್ಕಾರಿ ಅತಿಥಿ ಗೃಹ, ಸೆ. 24 ರಂದು ಕೊಳ್ಳೇಗಾಲ ಸರ್ಕಾರಿ ಅತಿಥಿ ಗೃಹ, ಸೆ. 29ರಂದು ಹನೂರು ಸರ್ಕಾರಿ ಅತಿಥಿ ಗೃಹದಲ್ಲಿ ದೂರುಗಳನ್ನು ಸ್ವೀಕರಿಸುವವರು.
ಸರ್ಕಾರಿ ಕಚೇರಿಯಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಇತರೇ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ದೂರುಗಳಿದ್ದಲ್ಲಿ ನೀಡಬಹುದಾಗಿದೆ. ಈ ಭೇಟಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಭ್ರಷ್ಟಚಾರ ನಿಗ್ರಹ ದಳದ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x
No comments:
Post a Comment