Sunday, 23 September 2018

23-09-2018 (ಇಷ್ಟಕ್ಕೂ ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಪ್ರತಿಭಟನೆ ಮಾಡಿದ್ದೇಕೆ,? ಪೂರ್ತಿ ಓದದೇ ಲೈಕ್ ಕೊಡಬೇಡಿ,ಶೇರ್ ಮಾಡಬೇಡಿ.ನೆನಪಿರಲಿ.. ಮಾದ್ಯಮದವರು ಪ್ರಚಾರ ಕೊಡದಿದ್ದೇಕೆ,?)

ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ 

ಚಾಮರಾಜನಗರ: ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದಲ್ಲಿ ಏಕಾಂಗಿಯಾಗಿ ಪ್ರತಿಭಟಿಸಲಾಯಿತು.
ಬಹುತೇಕವಾಗಿ ಬರುವ ಪೊನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗಿಂತ ನಿದ್ದೆ ಮಾಡುವ ಅದಿಕಾರಿಗಳೆ ದೊಡ್ಡ ಸಮಸ್ಯೆಯಾಗಿ ಯಾವುದೇ ಸಮಸ್ಯೆಗಳಿಗೂ ಪರಿಹಾರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹವರು ಜಿಲ್ಲಾದಿಕಾರಿಗಳು ಕ್ರಮಜರುಗಿಸದೇ ಇರುವುದು ಜಿಲ್ಲಾದಿಕಾರಿಗಳ ಬೇಜವಬ್ದಾರಿತನ ತೋರಿಸುತ್ತಿದೆ ಎಂದು ಆರೋಪಿಸಲಾಯಿತು.

ಬಹುತೇಕ ಅದಿಕಾರಿಗಳು ತಮ್ಮ ಕೆಲಸಗಳನ್ನು ಕಾಟಾಚಾರವಾಗಿ ನಿರ್ವಹಿಸುವುದರ ಜೊತೆ ಸರಿಯಾಗಿ ಹಾಜರಾಗದೇ ಸಾರ್ವಜನಿಕ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿದೆ ಇದಕ್ಕೆ ಪೂರಕ್ಕ ಎಂಬಂತೆ ಇತ್ತೀಚೆಗೆ ಜಿ.ಪಂ..ಸಿ.ಇ.ಓ ಹರೀಶ್ ಕುಮಾರ್ ಅವರೇ ಖುದ್ದು ಕಚೇರಿಗೆ ಹೋಗುವ ಮೂಲಕ ತಪ್ಪನ್ನು ಕಂಡುಹಿಡಿದಿದ್ದಾರೆ. ಆದರೂ ಈ ಪ್ರಕ್ರತಿಯೆಗಳು ನಿಲ್ಲದ ಕಾರಣ ಕಚೇರಿಗಳಿಗೆ ಕಡ್ಡಾಯವಾಗಿ ತಂಬ್ ಇಂಪ್ರೆಷನ್ ಅಳವಡಿಸಿಬೇಕು.
ಪೋನ್ ಇನ್ ಪ್ರೊಗ್ರಾಂ ಅಲ್ಲಿ ಗಮನ ಸೆಳೆದ ವಿಚಾರವಾಗಿ ಕಟ್ಟುನಿಟ್ಟು ಕ್ರಮ ಜರುಗಿಸಬೇಕಾದ ಬಹುತೇಕ ಅದಿಕಾರಿಗಳು ಪರಿಶೀಲನೆ ಮಾಢದೇ ಕೂತಲ್ಲೆ ವರದಿ ಸಿದ್ದಪಡಿಸಿ ಕರ್ತವ್ಯಲೋಪವೆಸಗಿದ ಇವರನ್ನು ಅಮಾನತು ಮಾಢಬೇಕು ಹಾಗೂ ಜಿಲ್ಲಾದಿಕಾರಿ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು.
ಕೇಂದ್ರಸ್ಥಾನದಲ್ಲಿರಬೇಕಾಧ ಅದಿಕಾರಿಗಳು ಕೇಂದ್ರಸ್ಥಾನದಲ್ಲಿರದೇ ಸಮಯ ವ್ಯಯಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಿಬೇಕು. ಕೆಲವು ಶಿಕ್ಷಕರ/ಉಪನ್ಯಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದು ಹಾಗೂ ಇದಕ್ಕೆ ಕಾರಣಕರ್ತರಾದ ಪ್ರಾಂಶುಪಾಲರ ವೇತನವನ್ನು ತಡೆಹಿಡಿಯುವುದು.
 ಪೊಲೀಸ್ ಇಲಾಖೆ ಸ್ಪಷ್ಟವಾಗಿ ಪಟ್ಟಣದಲ್ಲಿ ಅದಿಕೃತವಾಗಿ ಅಕ್ರಮ ಚಟುವಟಿಕೆಗಳನ್ನು  ನಡೆಯುತ್ತಿದ್ದು ಎಂದು ವರದಿ ನೀಢಿದ್ದು ಸದರಿ ಮೈನ್ ಎಜುಕೇಷನ್ ಟ್ರಸ್ಟ್ ಎಂಬ ನಕಲಿ ಸಂಸ್ಥೆ 15 ವರ್ಷಗಳಿಂದಲೂ ತೆರಿಗೆ ಕಟ್ಟದೇ ಸರ್ಕಾರ ವಂಚಿಸುವುದರ ಜೊತೆಗೆ ಪೋಲೀಸರಿಗೂ ತಪ್ಪು ಮಾಹಿತಿ ನೀಡಿದ್ದು, ಸಂಸ್ಥೆಯವರ ವಿರುದ್ದ ಕ್ರಮ ಪೊಲೀಸ್ ಇಲಾಖೆ ಕ್ರಮ ಜರುಗಿಸುವುದು.
ಅಕ್ರಮ ಚಟುವಟಿಕೆ ನಡೆಸುತ್ತಿರುವ ಕಟ್ಟಡಗಳಿಗೆ, ಪಿ.ಜಿ.ಸೆಂಟರ್ ಗಳು ತೆರಿಗೆ ಪಾವತಿಸದೇ ವಂಚಿಸುತ್ತಿಸುತ್ತಿದ್ದ ನಗರಸಬಾ ಆಯುಕ್ತರು ನಿದ್ದೆಯಲಕ್ಲಿದ್ದು ಅವರು ತ್ವರಿತವಾಗಿ ತೆರಿಗೆ ಕಟ್ಟಿದ್ದಾರೆಯೇ ಇಲ್ಲವೂ? ಅಕ್ರಮವೋ ಸಕ್ರಮವೋ ಎಂದು ಪರಿಶೀಲಸಿ. ಅಕ್ರಮವಾಗಿದ್ದರೆ ಕಟ್ಟಡ ತೆರವು ಮಾಡಲು ನಗರಸಬೆ ಅದಿಕಾರಿಗಳಿಗೆ ಸೂಚಿಸುವುದು ಇದನ್ನು 48 ಗಂಟೆಯೊಳಗೆ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ನೀಢುವಂತೆ ಆಗ್ರಹಿಸಿದರು
ಬಹುತೇಕ ಹಾಸ್ಟಲ್ ಗಳಲ್ಲಿ ಬಾಗಿಲೆ ಇಲ್ಲದೇ ಭದ್ರತೆ ಕೊರತೆ ಎದುರಾಗಿದೆ ಎಲ್ಲಾ ಕಡೆ ಸಿ.ಸಿ.ಕ್ಯಾಮೆರಾ ಅಳವಡಿಸಿ ವಸತಿನಿಲಯಗಳ ಸುರಕ್ಷತೆಯನ್ನ ಕಾಪಾಡುವುದು
ಜಿಲ್ಲೆಯದಾದ್ಯಂತ ಮಾನಸಿಕ ಅಸ್ವಸ್ಥರು ಹೆಚ್ಚುತ್ತಿದ್ದು ಅವರಿಗೆ ಸೂಕ್ತ ನೆಲೆಯನ್ನು ಇದುವರೆಗೂ ಕಲ್ಪಿಸಲು ಮುಂದಾಗದ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವುದು ಹಾಗೂ ಕಣ್ಣೆದುರು ಸಿಕ್ಕರೆ ಅವರಿಗೆ ಬದುಕಲು ಸೂಕ್ತ ವ್ಯವಸ್ಥೆ ನೀಡಿಸುವುದು. ಎಲ್ಲಕ್ಕಿಂತ ಮಿಗಿಲಾಗಿ ಶಿಥಿಲ ಅವಸ್ಥೆ ಅಲ್ಲಿ ಸಾಯುತ್ತಿರುವ ಹಂತದಲ್ಲಿರುವ ಪಟ್ಟಣ ಠಾಣೆಯ ಕಟ್ಟಡವನ್ನ  ಬೇರೆಡೆ ವರ್ಗಾಯಿಸುವಂತೆ ಜಿಲ್ಲಾದಿಕಾರಿ ಹಾಗೂ ಹೆಚ್ಚುವರಿ ಪೋಲೀಸ್ ವರೀಷ್ಟಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಲವು ಗಂಬೀರ ಸಮಸ್ಯೆಗಳು ಬಗೆಹರಿಯದೇ ಇದ್ದಲ್ಲಿ 72 ಗಂಟೆಯ ನಂತರ ಮತ್ತೆ ಪ್ರತಿಭಟನೆ ಕÀುಳಿತು ಸಂಬಂದಿಸಿದ ಅದಿಕಾರಿಗಳನ್ನು ಅಲ್ಲಿಗೆ ಕರೆಯಿಸಿ ಉತ್ತರ ನೀಡಬೇಕಾಗುತ್ತದೆ ಎಲ್ಲವಾದರೆ ಮುಂದಾಗುವ ಕಾನೂನಾತ್ಮಕ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.
ಕೆಲವು ಮಾದ್ಯಮದವರು ಕೆಲವು ಅದಿಕಾರಿಗಳ  ಸಹಯೋಗದಿಂದಿಗೆ ಇರುವ ಕಾರಣ ಸುದ್ದಿಯನ್ನು ಮರೆಮಾಚಿದ್ದಾರೆ. ಆದರೆ ಸುದ್ದಿ‌ಹಾಕಿ ಎಂದು ಪತ್ರಿಕಾ ಪ್ರಕಟನೆಯನ್ನು ಕೊಟ್ಟಿಲ್ಲ.‌ಹಣ ಕೊಟ್ಟು ಹಾಕಿಸಿಕೊಳ್ಳುವ ದರಿದ್ರ ನನಗಿಲ್ಲ...
ಆದರೆ ಈಗ  ನಾವು ಪಡೆದ ಅಂಬೇಡ್ಕರ್ ಅವರ ಆಶೀರ್ವಾದೊಂದಿಗಿನ ಹೋರಾಟ ಮೊದಲ ಹಂತದ್ಲೆ ಯಶಸ್ವಿಯಾಗಿದೆ.
ಬಹುತೇಕರಿಗೆ ಗೊಂದಲ ಒಂದು ಉಂಟಾಗಿದೆ..ಅದಕ್ಕೆ ಒಂದೆ ಸಾಲಿನಲ್ಲಿ ನನ್ನ ಉತ್ತರ ಇಷ್ಟೆ.. ಹುಟ್ಟಿನಿಂದ ಸಾಯುವ ಪ್ರತಿ ಜೀವಿಗಳಿಗೂ ಅನುಕೂಲವಾಗಲೆಂದು ಸಂವಿಧಾನದ....ಭಂಡಾರ ಬರೆದಿದ್ದಾರೆ ........ಅಲ್ಲೆ ಶಿಕ್ಷಣ ಸಂಘಟನೆ ಹೋರಾಟದ ಮಹತ್ವವನ್ನೂ ಸಾರಿದ್ದಾರೆ ಇದು ಮುಂದೆ ನಿಮಗೆ ಅನಿವಾರ್ಯವಾಗಬಹುದು...........
*********************
ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
ಚಾಮರಾಜನಗರ: ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದಲ್ಲಿ ಏಕಾಂಗಿಯಾಗಿ ಪ್ರತಿಭಟಿಸಲಾಯಿತು.
ಬಹುತೇಕವಾಗಿ ಬರುವ ಪೊನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗಿಂತ ನಿದ್ದೆ ಮಾಡುವ ಅದಿಕಾರಿಗಳೆ ದೊಡ್ಡ ಸಮಸ್ಯೆಯಾಗಿ ಯಾವುದೇ ಸಮಸ್ಯೆಗಳಿಗೂ ಪರಿಹಾರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹವರು ಜಿಲ್ಲಾದಿಕಾರಿಗಳು ಕ್ರಮಜರುಗಿಸದೇ ಇರುವುದು ಜಿಲ್ಲಾದಿಕಾರಿಗಳ ಬೇಜವಬ್ದಾರಿತನ ತೋರಿಸುತ್ತಿದೆ ಎಂದು ಆರೋಪಿಸಲಾಯಿತು.

ಬಹುತೇಕ ಅದಿಕಾರಿಗಳು ತಮ್ಮ ಕೆಲಸಗಳನ್ನು ಕಾಟಾಚಾರವಾಗಿ ನಿರ್ವಹಿಸುವುದರ ಜೊತೆ ಸರಿಯಾಗಿ ಹಾಜರಾಗದೇ ಸಾರ್ವಜನಿಕ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿದೆ ಇದಕ್ಕೆ ಪೂರಕ್ಕ ಎಂಬಂತೆ ಇತ್ತೀಚೆಗೆ ಜಿ.ಪಂ..ಸಿ.ಇ.ಓ ಹರೀಶ್ ಕುಮಾರ್ ಅವರೇ ಖುದ್ದು ಕಚೇರಿಗೆ ಹೋಗುವ ಮೂಲಕ ತಪ್ಪನ್ನು ಕಂಡುಹಿಡಿದಿದ್ದಾರೆ. ಆದರೂ ಈ ಪ್ರಕ್ರತಿಯೆಗಳು ನಿಲ್ಲದ ಕಾರಣ ಕಚೇರಿಗಳಿಗೆ ಕಡ್ಡಾಯವಾಗಿ ತಂಬ್ ಇಂಪ್ರೆಷನ್ ಅಳವಡಿಸಿಬೇಕು.
ಪೋನ್ ಇನ್ ಪ್ರೊಗ್ರಾಂ ಅಲ್ಲಿ ಗಮನ ಸೆಳೆದ ವಿಚಾರವಾಗಿ ಕಟ್ಟುನಿಟ್ಟು ಕ್ರಮ ಜರುಗಿಸಬೇಕಾದ ಬಹುತೇಕ ಅದಿಕಾರಿಗಳು ಪರಿಶೀಲನೆ ಮಾಢದೇ ಕೂತಲ್ಲೆ ವರದಿ ಸಿದ್ದಪಡಿಸಿ ಕರ್ತವ್ಯಲೋಪವೆಸಗಿದ ಇವರನ್ನು ಅಮಾನತು ಮಾಢಬೇಕು ಹಾಗೂ ಜಿಲ್ಲಾದಿಕಾರಿ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು.
ಕೇಂದ್ರಸ್ಥಾನದಲ್ಲಿರಬೇಕಾಧ ಅದಿಕಾರಿಗಳು ಕೇಂದ್ರಸ್ಥಾನದಲ್ಲಿರದೇ ಸಮಯ ವ್ಯಯಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಿಬೇಕು. ಕೆಲವು ಶಿಕ್ಷಕರ/ಉಪನ್ಯಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದು ಹಾಗೂ ಇದಕ್ಕೆ ಕಾರಣಕರ್ತರಾದ ಪ್ರಾಂಶುಪಾಲರ ವೇತನವನ್ನು ತಡೆಹಿಡಿಯುವುದು.
 ಪೊಲೀಸ್ ಇಲಾಖೆ ಸ್ಪಷ್ಟವಾಗಿ ಪಟ್ಟಣದಲ್ಲಿ ಅದಿಕೃತವಾಗಿ ಅಕ್ರಮ ಚಟುವಟಿಕೆಗಳನ್ನು  ನಡೆಯುತ್ತಿದ್ದು ಎಂದು ವರದಿ ನೀಢಿದ್ದು ಸದರಿ ಮೈನ್ ಎಜುಕೇಷನ್ ಟ್ರಸ್ಟ್ ಎಂಬ ನಕಲಿ ಸಂಸ್ಥೆ 15 ವರ್ಷಗಳಿಂದಲೂ ತೆರಿಗೆ ಕಟ್ಟದೇ ಸರ್ಕಾರ ವಂಚಿಸುವುದರ ಜೊತೆಗೆ ಪೋಲೀಸರಿಗೂ ತಪ್ಪು ಮಾಹಿತಿ ನೀಡಿದ್ದು, ಸಂಸ್ಥೆಯವರ ವಿರುದ್ದ ಕ್ರಮ ಪೊಲೀಸ್ ಇಲಾಖೆ ಕ್ರಮ ಜರುಗಿಸುವುದು.
ಅಕ್ರಮ ಚಟುವಟಿಕೆ ನಡೆಸುತ್ತಿರುವ ಕಟ್ಟಡಗಳಿಗೆ, ಪಿ.ಜಿ.ಸೆಂಟರ್ ಗಳು ತೆರಿಗೆ ಪಾವತಿಸದೇ ವಂಚಿಸುತ್ತಿಸುತ್ತಿದ್ದ ನಗರಸಬಾ ಆಯುಕ್ತರು ನಿದ್ದೆಯಲಕ್ಲಿದ್ದು ಅವರು ತ್ವರಿತವಾಗಿ ತೆರಿಗೆ ಕಟ್ಟಿದ್ದಾರೆಯೇ ಇಲ್ಲವೂ? ಅಕ್ರಮವೋ ಸಕ್ರಮವೋ ಎಂದು ಪರಿಶೀಲಸಿ. ಅಕ್ರಮವಾಗಿದ್ದರೆ ಕಟ್ಟಡ ತೆರವು ಮಾಡಲು ನಗರಸಬೆ ಅದಿಕಾರಿಗಳಿಗೆ ಸೂಚಿಸುವುದು ಇದನ್ನು 48 ಗಂಟೆಯೊಳಗೆ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ನೀಢುವಂತೆ ಆಗ್ರಹಿಸಿದರು
ಬಹುತೇಕ ಹಾಸ್ಟಲ್ ಗಳಲ್ಲಿ ಬಾಗಿಲೆ ಇಲ್ಲದೇ ಭದ್ರತೆ ಕೊರತೆ ಎದುರಾಗಿದೆ ಎಲ್ಲಾ ಕಡೆ ಸಿ.ಸಿ.ಕ್ಯಾಮೆರಾ ಅಳವಡಿಸಿ ವಸತಿನಿಲಯಗಳ ಸುರಕ್ಷತೆಯನ್ನ ಕಾಪಾಡುವುದು
ಜಿಲ್ಲೆಯದಾದ್ಯಂತ ಮಾನಸಿಕ ಅಸ್ವಸ್ಥರು ಹೆಚ್ಚುತ್ತಿದ್ದು ಅವರಿಗೆ ಸೂಕ್ತ ನೆಲೆಯನ್ನು ಇದುವರೆಗೂ ಕಲ್ಪಿಸಲು ಮುಂದಾಗದ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವುದು ಹಾಗೂ ಕಣ್ಣೆದುರು ಸಿಕ್ಕರೆ ಅವರಿಗೆ ಬದುಕಲು ಸೂಕ್ತ ವ್ಯವಸ್ಥೆ ನೀಡಿಸುವುದು. ಎಲ್ಲಕ್ಕಿಂತ ಮಿಗಿಲಾಗಿ ಸಾಯುತ್ತಿರುವ ಹಂತದಲ್ಲಿರುವ ಪಟ್ಟಣ ಠಾಣೆಯನ್ನು ಬೇರೆಡೆ ವರ್ಗಾಯಿಸುವಂತೆ ಜಿಲ್ಲಾದಿಕಾರಿ ಹಾಗೂ ಹೆಚ್ಚುವರಿ ಪೋಲೀಸ್ ವರೀಷ್ಟಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಲವು ಗಂಬೀರ ಸಮಸ್ಯೆಗಳು ಬಗೆಹರಿಯದೇ ಇದ್ದಲ್ಲಿ 72 ಗಂಟೆಯ ನಂತರ ಮತ್ತೆ ಪ್ರತಿಭಟನೆ ಕÀುಳಿತು ಸಂಬಂದಿಸಿದ ಅದಿಕಾರಿಗಳನ್ನು ಅಲ್ಲಿಗೆ ಕರೆಯಿಸಿ ಉತ್ತರ ನೀಡಬೇಕಾಗುತ್ತದೆ ಎಲ್ಲವಾದರೆ ಮುಂದಾಗುವ ಕಾನೂನಾತ್ಮಕ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.

..

Thursday, 13 September 2018

ಪತ್ರಕರ್ತರ ಸಂಘ ಚಾಮರಾಜನಗರದಲ್ಲಿ ಎಷ್ಟಿದೆ ಗೊತ್ತಾ!?


ನಮ್ಮ ಚಾಮರಾಜನಗರ
#ಪತ್ರಕರ್ತರ #ಬಗ್ಗೆ ನೀವು #ತಿಳಿಯಬೇಕಾದ #ಪ್ರಮುಖ #ಅಂಶಗಳು.
 ಮಾನ್ಯತೆ   ಪಡೆದ ಹಾಗೂ ಪಡೆಯದ ಸಂಘಗಳ ರಾಜ್ಯಾದ್ಯಂತ ಚಾಲ್ತಿಯಲ್ಲಿರೋದು ಸಹಜ. ಆದರೆ ನಮ್ಮೂರಲ್ಲಿ ಕಾರ್ಯನಿರತ ಸಂಘ, ಜಿಲ್ಲಾ ಪತ್ರಕರ್ತರ ಸಂಘ,ವರದಿಗಾರ ಕೂಟ,ಮಾಸ ಹಾಗೂ ವಾರ ಪತ್ರಿಕೆಗಳ ಸಂಘ ರಾರಾಜಿಸುತ್ತದೆ. ಕೆಲವೊಬ್ಬರು ಯಾವುದೇ ಗುಂಪಿನಲ್ಲಿ ಇರೋದೆ ಇಲ್ಲ..ಅದಿಕೃ ಸರ್ಕಾರ ಇಲಾಖೆ ಪಟ್ಟಿಯಲ್ಲಿರುತ್ತಾರೆ. ನೊಂದಣಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪತ್ರಕರ್ತರ ರ್ಸಂಘ ಬಿಟ್ಟರೆ ಯಾವುದೂ ನೊಂದಣಿಯಾಗಿಲ್ಲ. ಜೊತೆಗೆ ವಿಪರ್ಯಾಸವೆಂದರೆ ವಾಟ್ಸಾಪ್ ಗುಂಪು ನೋಡುತ್ತಿದ್ದರೆ.ಜಿಲ್ಲೆಯಲ್ಲಿ .೪೦ರಿಂದ ೬೦ ಗುಂಪುಗಳು..ಒಂದು ಗುಂಪಲ್ಲಿದ್ದವರು ಮತ್ತೊಂದು ಗುಂಪಿನಲ್ಲಿ ಇರೋದೇ ಇಲ್ಲ. ಹಾಗಿದ್ದರೆ ಎಷ್ಟು ಗುಂಪುಗಳಿದ್ದಾರೆ ಎಂದು ನೋಡುತ್ತಾ ಇದ್ದರೆ ವಾಹನಗಳು ಅಷ್ಟೆ (Press) ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Saturday, 8 September 2018

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಚಾಲನೆ (01-09-2018)

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಚಾಲನೆ

ಚಾಮರಾಜನಗರ, ಸೆ.1 - ಭಾರತೀಯ ಅಂಚೆ ಇಲಾಖೆಯ ಮಹತ್ವದ ಕ್ರಾಂತಿಯಂದೆ ಭಾವಿಸಲಾಗಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಜಿಲ್ಲೆಯಲ್ಲೂ ಸಹ ಇಂದು ಅದ್ದೂರಿಯಾಗಿ ಆರಂಭಗೊಂಡಿತು.
ನಗರದ ವಾಲ್ಮೀಕಿ ಭವನದಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶಾಖೆಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಭಾರತೀಯ ಅಂಚೆ ಇಲಾಖೆಗೆ ತನ್ನದೆ ಆದ ಮಹತ್ವ ಇದೆ. ಬ್ಯಾಂಕಿಂಗ್ ವಲಯಕ್ಕೂ ಇಲಾಖೆ ಹೆಜ್ಜೆ ಇಡುವ ಮೂಲಕ ಪ್ರಸ್ತುತ  ಸಂದರ್ಭಕ್ಕೆ ಅವಶ್ಯಕತೆಗೆ ಅನುಗುಣವಾಗಿ ತೆರೆದು ಕೊಂಡಿರುವುದು ಉತ್ತಮವಾಗಿದೆ ಎಂದರು.
ಬ್ಯಾಂಕ್ ಸೌಲಭ್ಯಗಳು ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಎಲ್ಲ ಗ್ರಾಮೀಣ ಭಾಗಗಳಿಗೂ ತಲುಪುವಂತಾಗಬೇಕು ಈ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅರಂಭಿಸಿದೆ. ಈ ಕಾರ್ಯ ಯಶಸ್ವಿಯಾಗಲಿ ಎಂದು ಜಿಲ್ಲಾಧಿಕಾರಿ ಶುಭ ಹಾರೈಸಿದರು.
 ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಚೆ ಇಲಾಖೆಯು ಸಹ ಬ್ಯಾಂಕ್ ವಲಯಕ್ಕೆ ಕಾಲಿರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸರ್ಕಾರಿ ಇಲಾಖೆಯೂ ಬ್ಯಾಂಕ್ ಕ್ಷೇತ್ರಕ್ಕೂ ಮುಂದಾಗಿರುವುದು ವಿಶಿಷ್ಠವಾಗಿದೆ. ಪ್ರೀತಿ, ನಂಬಿಕೆ ಉಳಿಸಿಕೊಂಡು ಬ್ಯಾಂಕ್ ಕಾರ್ಯ ನಿರ್ವಹಿಸುವಂತಾಗಲಿ ಎಂದು ಆಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್‍ಕುಮಾರ್‍ಮೀನಾ ಮಾತನಾಡಿ ಅಂಚೆ ಇಲಾಖೆಗೆ 150 ವರ್ಷಗಳ ಇತಿಹಾಸವಿದೆ. ಅರ್ಥಿಕ ಸೇರ್ಪಡೆ, ಜಾಗೃತಿ, ಅರ್ಥಿಕ ಸಾಕ್ಷರತೆಯ ಗುರಿಯೊಂದಿಗೆ ಗ್ರಾಮೀಣರ ಮನೆ ಬಾಗಿಲಲ್ಲೆ ಬ್ಯಾಂಕ್ ಸೇವೆಗೆ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ ಎಂದರು
ಅಂಚೆ ಇಲಾಖೆ ಅಧೀಕ್ಷಕರಾದ ಹೆಚ್.ಸಿ. ಸದಾನಂದ, ಬ್ಯಾಂಕಿನ ವ್ಯವಸ್ಠಾಪಕರಾದ ಮಾನುಸ್‍ಜಾರ್ಜ್, ಸಹಾಯಕ ಅಂಚೆ ಅಧೀಕ್ಷಕರಾದ ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೆ. 2ರಂದು ನಗರದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ
ಚಾಮರಾಜನಗರ, ಸೆ. 01 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀಕೃಷ್ಣ  ಜಯಂತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 2ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಶ್ರೀಕೃಷ್ಣ ಜಯಂತಿ ಕುರಿತು ಚಾಮರಾಜನಗರದ ಪ್ರದೀಪ್‍ಕುಮಾರ್ ದೀಕ್ಷಿತ್ ಅವರು ಉಪನ್ಯಾಸ ನೀಡಲಿದ್ದಾರೆ.
ನಗರದ ಕಲಾಸರಸ್ವತಿ ನಾಟ್ಯ ಸಂಸ್ಥೆಯ ಕು. ಅಕ್ಷತಾ ಎಸ್. ಜೈನ್ ಮತ್ತು ತಂಡದವರು ನೃತ್ಯ ರೂಪಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆÉಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್. ಚೆನ್ನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ: ಡಾ.ಕೆ.ಹರೀಶ್‍ಕುಮಾರ್
ಚಾಮರಾಜನಗರ, ಸೆ.1 - ರಾಜ್ಯದಲ್ಲಿ ಏಕೀಕೃತ ವಿದ್ಯಾರ್ಥಿವೇತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ತಂತ್ರಾಂಶದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ತಂತ್ರಾಂಶದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಯೋಜನೆಗಳನ್ನು ನಿರ್ವಹಿಸಲಾಗುವುದು. ಸದರಿ ಯೋಜನೆಯಡಿ ವಿದ್ಯಾರ್ಥಿ ವೇತನ ಸೌಲಭ್ಯ ವೇತನವನ್ನು ಪಡೆಯಲು ವೆಬ್‍ಸೈಟ್ ವಿಳಾಸ:  hಣಣಠಿs:/ssಠಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ತಾಲ್ಲೂಕುವಾರು ಅರ್ಜಿ ಸ್ವೀಕಾರ ಕೇಂದ್ರಗಳನ್ನು ತೆರೆದಿದ್ದು, ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಎಸ್.ಎ.ಟಿ.ಎಸ್-ಐ.ಡಿ (ಸಂಬಂಧಪಟ್ಟ ಶಾಲೆಗಳಿಂದ)  ವಿದ್ಯಾರ್ಥಿಯ ಆಧಾರ್/ಐಡಿ ಹಾಗೂ ಆಧಾರ್ ಇಐಡಿ ಸಂಖ್ಯೆಯಲ್ಲಿ ನಮೂದಿಸಿರುವಂತೆ ಹೆಸರು. ಪೋಷಕರ ಆಧಾರ್/ಇಐಡಿ ನಮೂದಿಸಿರುವಂತೆ ಹೆಸರು. ವಿದ್ಯಾರ್ಥಿಯ ಆಧಾರ್ ಇಲ್ಲದಿದ್ದಲ್ಲಿ, ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ವಿವರಗಳು (ಬ್ಯಾಂಕ್ ಹೆಸರು, ಬ್ಯಾಂಕ್ ವಿಳಾಸ ಐಎಫ್‍ಎಸ್‍ಇ ಕೋಡ್, ಖಾತೆ ಸಂಖ್ಯೆ), ವಿದ್ಯಾರ್ಥಿ ಹೆಸರಿನಲ್ಲಿ ನೀಡಲಾದ ಗಣಕೇಕೃತ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಆರ್.ಡಿ ಸಂಖ್ಯೆಗಳು, ವಸತಿನಿಲಯ ವಿದ್ಯಾರ್ಥಿಯಾಗಿದ್ದಲ್ಲಿ ವಸತಿ ನಿರ್ವಹಣೆ ತಂತ್ರಾಂಶದ ನೋಂದಣಿ ಸಂಖ್ಯೆ, (ಹೆಚ್.ಎಂ.ಐ.ಎಸ್/ಇ-ಪಾಸ್ ಐಡಿ), ಅಲ್ಪಸಂಖ್ಯಾತ ವಿದ್ಯಾರ್ಥಿಯಾಗಿದ್ದಲ್ಲಿ ಹಾಲಿ ಶೈಕ್ಷಣಿಕ ವರ್ಷದ ಎನ್.ಎಸ್.ಪಿ ನೋಂದಣಿ ಸಂಖ್ಯೆ. ಪೋಷಕರು ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿದ್ದಲ್ಲಿ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಲ್ಲಿಸಬೇಕು.
ಸದರಿ ದಾಖಲೆಗಳನ್ನು ಶಾಲೆಗಳಿಗೆ ಮತ್ತು ಮಾಹಿತಿ ಕೇಂದ್ರಗಳಲ್ಲಿ ನೀಡಿ, ಅಪ್‍ಲೋಡ್ ಮಾಡಿಸಲು ಎಲ್ಲಾ ಪೋಷಕರ ವರ್ಗದವರು ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಕ್ರಮವಹಿಸಿ ಅರ್ಹ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿ ವೇತನವನ್ನು ತಲುಪಿಸಲು ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.2 ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ.1:- ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ ಜಿಓಎಸ್ ಅಳವಡಿಕೆ ಕಾರ್ಯವು ಸೆ.2  ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜೋಡಿ ರಸ್ತೆ, ರಥದ ಬೀದಿ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಗುಂಡ್ಲುಪೇಟೆ ಸರ್ಕಲ್, ಶ್ರೀವೀರಭದ್ರೇಶ್ವರ ದೇವಸ್ಥಾನ, ಸಂತೇಮರಹಳ್ಳಿ ಸರ್ಕಲ್ ಮತ್ತು ಟೌನ್-1 ವ್ಯಾಪ್ತಿಗೆ ಸೇರಿದ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.11 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ
ಚಾಮರಾಜನಗರ, ಸೆ.1   ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.3 ರಂದು ಪದವೀಧÀರ ಪಾಥಮಿಕ ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ
ಚಾಮರಾಜನಗರ, ಸೆ.1  :- ಚಾಮರಾಜನಗರ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪಧವೀಧರ ಪ್ರಾಥಮಿಕ ಶಿಕ್ಷಕರ (6ರಿಂದ8) ವೃಂದದ ನೇಮಕಾತಿಗೆ ಸಂಬಂಧಿಸಿದಂತೆ 1:3 ಅನುಪಾತದಂತೆ ತಾತ್ಕಲಿಕವಾಗಿ ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ಕಾರ್ಯವು ಸೆಪ್ಟೆಂಬರ್ 3 ರÀಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ದಾಖಲಾತಿ ಪರಿಶೀಲನಾ ಸಂಬಂಭ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಈ ಪ್ರಕ್ರಿಯೆ ನಂತರ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಿದ್ದು ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮಗೆ ದೂರವಾಣಿಯಲ್ಲಿ ತಿಳಿಸಿದ ದಿನಾಂಕದಂದು ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಆಕ್ಷೇಪಣೆಗಳಿದ್ದರೆ ಕಚೇರಿಯ ಸ್ವೀಕೃತಿ ವಿಭಾಗಕ್ಕೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448978661, 6360444933, 8496975459,  08226-222406 ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರಿಯ ವಿದ್ಯಾಲಯದಲ್ಲಿ ಹೆಚ್ಚುವರಿ ತರಗತಿ ಮಂಜೂರು:ಸಂಸದರಿಂದ ಕೃತಜ್ಞತೆ
ಚಾಮರಾಜನಗರ, ಸೆ.1  - ನಗರದ ಮಾದಾಪುರ ಬಳಿಯ ಕೇಂದ್ರಿಯ ವಿದ್ಯಾಲಯದಲ್ಲಿ 2018-19 ನೇ ಸಾಲಿನಿಂದಲೇ ಜಾರಿಗೆ ಬರುವಂತೆ 1 ರಿಂದ 5 ನೇ ತರಗತಿವರೆಗೆ (ಪ್ರತಿ ತರಗತಿಯಲ್ಲಿ 40 ವಿದ್ಯಾರ್ಥಿಗಳು)  ಹೆಚ್ಚುವರಿ ತರಗತಿಗೆ ಮಂಜೂರಾತಿ ದೊರೆತಿದೆ.
      ಇತ್ತೀಚೆಗೆ ಕೇಂದ್ರಿಯ ವಿದ್ಯಾಲಯ ಕಟ್ಟಡದ ಉದ್ಘಾಟನೆ ವೇಳೆ ಕೇಂದ್ರ ಸಚಿವರಾದ ಅನಂತ್ ಅವರಿಗೆ ಹೆಚ್ಚುವರಿ ತರಗತಿಗೆ ಮಂಜೂರು ಮಾಡುವಂತೆ ಕೋರಲಾಗಿತ್ತು. ನವದೆಹಲಿಯಲ್ಲಿರುವ ಕೇಂದ್ರಿಯ ವಿದ್ಯಾಲಯದ ಆಯುಕ್ತರನ್ನು ಸಹ ಹೆಚ್ಚುವರಿ ತರಗತಿ ನಡೆಸಲು ಮನವಿ ಮಾಡಲಾಗಿತ್ತು. ಈ ಎಲ್ಲಾ ಮನವಿಗೆ ಸ್ಪಂಧಿಸಿ ಪ್ರಸಕ್ತ ಸಾಲಿನಿಂದಲೇ ಹೆಚ್ಚ್ಚುವರಿ ತರಗತಿಗೆ ಮಂಜೂರಾತಿ ಸಿಗಲು ಶ್ರಮಿಸಿದ ಕೇಂದ್ರ ಸಚಿವರು ಹಾಗೂ ಕೇಂದ್ರಿಯ ವಿದ್ಯಾಲಯದ ಮೇಲಾಧಿಕಾರಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 2ರಂದು ನಗರದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ
ಚಾಮರಾಜನಗರ, ಸೆ. 01- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 2ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಶ್ರೀಕೃಷ್ಣ ಜಯಂತಿ ಕುರಿತು ಚಾಮರಾಜನಗರದ ಪ್ರದೀಪ್‍ಕುಮಾರ್ ದೀಕ್ಷಿತ್ ಅವರು ಉಪನ್ಯಾಸ ನೀಡಲಿದ್ದಾರೆ.
ನಗರದ ಕಲಾಸರಸ್ವತಿ ನಾಟ್ಯ ಸಂಸ್ಥೆಯ ಕು. ಅಕ್ಷತಾ ಎಸ್. ಜೈನ್ ಮತ್ತು ತಂಡದವರು ನೃತ್ಯ ರೂಪಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆÉಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್. ಚೆನ್ನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















x

ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ (02-09-2018)

ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ

ಚಾಮರಾಜನಗರ, ಸೆ.2 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಶ್ರೀಕೃಷ್ಣ ಜಯಂತಿಯನ್ನು ಇಂದು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಸತ್ಯಮೇವ ಜಯತೇ ಎಂಬುದನ್ನು ಪ್ರತಿಪಾದಿಸಿದ. ಮಾನವೀಯ ಮೌಲ್ಯಗಳನ್ನು ಸಾರುವಲ್ಲಿ ಶ್ರೀಕೃಷ್ಣ ಅದರ್ಶವಾಗಿದ್ದಾನೆ ಎಂದರು.
ಶ್ರೀ ಕೃಷ್ಣನ ಕುರಿತು ಹೆಚ್ಚು ಓದಬೇಕು. ಮಕ್ಕಳಿಗೂ ಸಹ ಕೃಷ್ಣನ ಕುರಿತು ತಿಳಿಸಿಕೊಡಬೇಕು. ಶ್ರೀಕೃಷ್ಣನ ಬಾಲ್ಯ, ತುಂಟತನ, ಅರ್ಜುನನಿಗೆ ಸತ್ಯ ಕುರಿತು ಮಾಡಿದ ಉಪದೇಶ ಸೇರಿದಂತೆ ಹಲವಾರು ಮಹತ್ವದ ವಿಷಯಗಳನ್ನು ಹೇಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ, ಶ್ರೀಕೃಷ್ಣ ಜೀವನೋತ್ಸಾಹದ  ಸಂಕೇತ. ಶ್ರೀಕೃಷÀ್ಣನ ಪ್ರಬುದ್ದತೆ, ಮುತ್ಸದಿತನ  ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ. ಯುದ್ದ ಕಾಲದಲ್ಲಿ ನೀಡಿದ ಶ್ರೀಕೃಷ್ಣ ಭೋದನೆ ಸಹ ಗಮನ ಸೆಳೆಯುತ್ತದೆ. ಶ್ರೀ ಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ ಎಂದರು.
ಶ್ರೀಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರದೀಪ್‍ಕುಮಾರ್ ದೀಕ್ಷೀತ್ ಅವರು, ಧರ್ಮದ ಏಕಮೇವ ಉದ್ದಾರವೇ ಶ್ರೀಕೃಷ್ಣನ ಜನ್ಮಕ್ಕೆ  ಕಾರಣ. ಜಗತ್ತಿನ ಸಂರಕ್ಷಕ ಶ್ರೀಕೃಷ್ಣನ ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಸಹ ಶ್ರೀಕೃಷ್ಣನ ವ್ಯಕ್ತಿತ್ವ ಮಾದರಿಯಾಗಿದೆ ಎಂದರು.
ಶ್ರೀಕೃಷ್ಣ ಉತ್ತಮ ರಾಜನೀತಿಜ್ಞನಾಗಿದ್ದು, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತಾನೆ. ಕಲಿಯುಗದಲ್ಲಿ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ದ್ವಾಪರ ಯುಗದಲ್ಲಿಯೇ ಶ್ರೀಕೃಷ್ಣ  ತಿಳಿಸಿದ್ದ. ಧರ್ಮ, ಪರಂಪರೆ, ಸಾತ್ವಿಕ ರಕ್ಷಣೆಗೆ ಶ್ರೀಕೃಷ್ಣ ಕಾರಣರಾದರು ಎಂದರು ಪ್ರದೀಪ್‍ಕುಮಾರ್ ದಿಕ್ಷೀತ್ ತಿಳಿಸಿದರು.
ಇದೇ ವೇಳೆ ಚಿಕ್ಕ ಮಕ್ಕಳು ಶ್ರೀಕೃಷ್ಣನ ವೇಷದಾರಿ ಸ್ಪರ್ಧೆಯಲ್ಲಿ  ಪಾಲ್ಗೊಂಡು ಗಮನ ಸೆಳೆದರು. ಎಲ್ಲಾ ಕೃಷ್ಣ ವೇಷಧಾರಿ ಮಕ್ಕಳಿಗೆ ಜಿಲ್ಲಾಧಿಕಾರಿ, ಇತರೇ ಗಣ್ಯರು  ನೆನಪಿನ ಕಾಣಿಕೆ, ಪ್ರಶಂಸ ಪತ್ರವನ್ನು ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ  ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ, ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೆ. 3 ರಿಂದ ತಾಲ್ಲೂಕು ಕೇಂದ್ರಗಳಿಗೆ ಭ್ರಷ್ಟಚಾರ ನಿಗ್ರಹ ಅಧಿಕಾರಿಗಳ ಭೇಟಿ: ದೂರು ಸ್ವೀಕಾರ

ಚಾಮರಾಜನಗರ, ಸೆ. 2- ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ  ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ಸೆಪ್ಟಂಬರ್ 3 ರಿಂದ ಭೇಟಿ ನೀಡಿ, ನಾಗರಿಕರಿಂದ ದೂರುಗಳನ್ನು ಸ್ವೀಕರಿಸಲಿದ್ದಾರೆ.
ಸೆ. 3ರಂದು ಗುಂಡ್ಲುಪೇಟೆ ಸರ್ಕಾರಿ ಅತಿಥಿ ಗೃಹ, ಸೆ.11 ರಂದು ಚಾಮರಾಜನಗರ ಎಸಿಬಿ ಪೊಲೀಸ್ ಠಾಣೆ, ಸೆ. 19 ರಂದು ಯಳಂದೂರು ಸರ್ಕಾರಿ ಅತಿಥಿ ಗೃಹ, ಸೆ. 24 ರಂದು ಕೊಳ್ಳೇಗಾಲ ಸರ್ಕಾರಿ ಅತಿಥಿ ಗೃಹ, ಸೆ. 29ರಂದು ಹನೂರು ಸರ್ಕಾರಿ ಅತಿಥಿ ಗೃಹದಲ್ಲಿ ದೂರುಗಳನ್ನು ಸ್ವೀಕರಿಸುವವರು.
ಸರ್ಕಾರಿ ಕಚೇರಿಯಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಇತರೇ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ದೂರುಗಳಿದ್ದಲ್ಲಿ ನೀಡಬಹುದಾಗಿದೆ. ಈ ಭೇಟಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಭ್ರಷ್ಟಚಾರ ನಿಗ್ರಹ ದಳದ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


x

ಅಬಕಾರಿ ಇಲಾಖೆ ಕಾರ್ಯಚಾರಣೆ: 3ಲಕ್ಷ ರೂ ಮೌಲ್ಯದ ಗಾಂಜಾ ವಶ (04-09-2018)

ಅಬಕಾರಿ ಇಲಾಖೆ ಕಾರ್ಯಚಾರಣೆ: 3ಲಕ್ಷ ರೂ ಮೌಲ್ಯದ ಗಾಂಜಾ ವಶ

ಚಾಮರಾಜನಗರ, ಸೆ. 4  - ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಳ್ಳೇಗಾಲ ತಾಲ್ಲೂಕಿನ ಕರಳಕಟ್ಟೆ ಗ್ರಾಮದ ಜಮೀನಲ್ಲಿ ಹಾಗೂ ಅಲ್ಲಿದ್ದ ಮನೆಯ ಮೇಲೆ ದಾಳಿನಡೆಸಿ ಅಕ್ರಮವಾಗಿ ಬೆಳೆದಿದ್ದ ಹಾಗೂ ದಾಸ್ತಾನು ಮಾಡಲಾಗಿದ್ದ 3 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಭಾನುವಾರ ಕೊಳ್ಳೇಗಾಲ ತಾಲ್ಲೂಕಿನ ಕರಳಕಟ್ಟೆ ಗ್ರಾಮದ ಗುಂಡಾಲ ಜಲಾಶಯ ರಸ್ತೆಯ ಪಕ್ಕದ ಜಡೇಗೌಡ ಎಂಬಾತನಿಗೆ ಸೇರಿದ ಜಮೀನು ಹಾಗೂ ಅಲ್ಲಿಯೇ ಇದ್ದ ಮನೆಯ ಮೇಲೆ ದಾಳಿನಡೆಸಿ ಅಕ್ರಮವಾಗಿ ಬೆಳೆದಿದ್ದ 324 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು ಅಲ್ಲದೆ ಮಾರಾಟಕ್ಕೆ ಸಿದ್ದಪಡಿಸಿದ್ದ 1.6ಕೆ.ಜಿ ವಣಗಿದ ಗಾಂಜಾವನ್ನು ಜಪ್ತಿಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಡೇಗೌಡನ್ನು ಬಂದಿಸಿದ್ದು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.
ಅಬಕಾರಿ ಉಪ ಅಧೀಕ್ಷಕರಾದ ಗಂಗಾಂದರ ಹೆಚ್.ಮುದೆಣ್ಣವರ್, ನಿರೀಕ್ಷಕರಾದ ಎ.ಎ.ಮುಜಾವರ್, ಕೆ.ವಿ.ಲೋಹಿತ್, ಎಂ.ಬಿ.ಉಮಾಶಂಕರ್, ಅರಣ್ಯಾಧಿಕಾರಿಗಳಾದ ಮಹೇಶ್, ನವೀನ್, ಅಬಕಾರಿ ಸಿಬ್ಬಂಧಿ ರವಿಕುಮಾರ್, ಕೃಷ್ಣಮೂರ್ತಿ, ರಮೇಶ, ಪ್ರದೀಪ್, ಜಯಪ್ರಕಾಶ್, ಸುಂದ್ರಪ್ಪ, ಸಿದ್ದಯ್ಯ, ವೀರತಪ್ಪ ಮಂಜುನಾಥ, ಸಂತೋಷ್‍ಕುಮಾರ್, ಮಹೇಶ ಆನಂದ, ಹೇಮಂತ್, ಮೋಹನ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿವೇತನಕ್ಕೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿ ಪರಿಶಿಷ್ಟವರ್ಗಗಳ ಇಲಾಖೆ ಸೂಚನೆ 
ಚಾಮರಾಜನಗರ, ಸೆ. 4 - ಪ್ರಸಕ್ತ ಸಾಲಿನ ಪರಿಶಿಷ್ಟವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರು ಮಾಡಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮುಲಕ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸುವಂತೆ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ
ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಲು ವೆಬ್ ಸೈಟ್ ತಿತಿತಿ.ssಠಿ.ಞಚಿಡಿಟಿಚಿಣಚಿಞಚಿ.gov.iಟಿನಲ್ಲಿ ಅವಕಾಶ ಕಲ್ಪಿಸಿದೆ.
ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪೋರ್ಟಲ್‍ನಲ್ಲಿ ಅರ್ಜಿ ನೋಂದಾಯಿಸಲು ಆಯಾಶಾಲಾ ಶಿಕ್ಷಕರು ಪೋಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಯ SಂಖಿS Iಆ(ಎಸ್.ಎ.ಟಿ.ಎಸ್ ಐಡಿ) ಪೋಷಕರ ಮೊಬೈಲ್ ಸಂಖ್ಯೆ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಅಥವಾ ಇ.ಐ.ಡಿ ಸಂಖ್ಯೆ, ಹೆಸರು, ಆಧಾರ್ ಇಲ್ಲದಿದ್ದಲ್ಲಿ ವಿದ್ಯಾರ್ಥಿಯ ಹೆಸರಿನಲ್ಲಿವ ಬ್ಯಾಂಕ್ ಖಾತೆಯ ವಿವರ ಅಂದರೆ ಬ್ಯಾಂಕ್ ಹೆಸರು, ವಿಳಾಸ, ಐ.ಎಫ್.ಸಿ ಕೋಡ್ ಖಾತೆ ಸಂಖ್ಯೆ, ವಿದ್ಯಾರ್ಥಿಯ ಗಣಕೀಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿವೇತನ ಪಡೆದಿದ್ದಲ್ಲಿ ಅದರ ನೊಂದಣಿ ಸಂಖ್ಯೆ, ವಸತಿ ನಿಲಯದ ವಿದ್ಯಾರ್ಥಿಯಾಗಿದ್ದಲ್ಲಿ ನಿಲಯ ನಿರ್ವಹಣೆಯ ತಂತ್ರಾಂಶದ ನೋಂದಣಿ ಸಂಖ್ಯೆ (ಹೆಚ್.ಎಂ.ಐ.ಎಸ್)ನ್ನು ಅರ್ಜಿಯ ಜೊತೆ ನೋಂದಾಯಿಸಬೇಕು ಎಂದು ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕು ಪರಿಶಿಷ್ಟವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 4  - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಸೆಪ್ಟೆಂಬರ್ 5ರಂದು ಸಂತೇಮರಳ್ಳಿ ಉಪವಿಭಾಗದ ಕಾಗಲವಾಡಿ ಶಾಖೆಯ ಹಿರಿಕೆರೆ ಫೀಡರ್ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿರುವ ಪರಿವರ್ತಕಗಳಿಗೆ ಮೀಟರ್ ಅಳವಡಿಸುತ್ತಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಂಬಂಧ ಪಟ್ಟ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಸೆಸ್ಕ ಸಂತೇಮರಹಳ್ಳಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 6ರಂದು ಸುಗಮ ಸಂಗೀತ ತರಬೇತಿ ಶಿಭಿರ ಉದ್ಘಾಟನೆ
ಚಾಮರಾಜನಗರ, ಸೆ. 4  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರದ ಉದ್ಘಾಟನೆ ಸಮಾರಂಭವು ಸೆಪ್ಟೆಂಬರ್ 6ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಸಂಸ್ಕøತಿ ಚಿಂತಕರಾದ ಪ್ರೊ.ಜಿ.ಎಸ್.ಜಯದೇವ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಫಯಾಜ್‍ಖಾನ್ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮುಖ್ಯ ಅತಿಥಿಯಾಗಿ ಪಾಲ್ಗೊಳುವರು. ಸದಸ್ಯ ಸಂಚಾಲಕರಾದ ಆನಂದ ಮಾದಲಗೆರೆ ಪ್ರಾಸ್ತಾವಿಕ ನುಡಿಗಳನ್ನಾಡುವರು. ಶಿಬಿರದ ನಿರ್ದೇಶಕರಾದ ಬಿ.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಟಿ.ರಾಜಾರಾಮ್, ಪುರುಷೋತ್ತಮ, ಸಿ.ಎಂ.ನರಸಿಂಹಮೂರ್ತಿ ಪಾಲ್ಗೊಳುವರು.
ಸೆಪ್ಟೆಂಬರ್ 9ರಂದು ಮಧ್ಯಾಹ್ನ ಮೂರು ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ||ಕೆ.ಹರೀಶ್‍ಕುಮಾರ್, ಹೊಂಬಾಳೆ ಪ್ರತಿಭಾರಂಗದ ಅಧ್ಯಕ್ಷರಾದ ಎಚ್.ಪಲ್ಗುಣ ಪ್ರಮಾಣಪತ್ರ ವಿತರಿಸುವರು. ಮೈಸೂರಿನ ರಘುಲೀಲಾ ಸಂಗೀತ ಮಂದಿರದ ನಿರ್ದೇಶಕರಾದ ಸುನೀತ ಚಂದ್ರಕುಮಾರ ಮುಖ್ಯಅತಿಥಿಯಾಗಿ ಪಾಲ್ಗೊಳುವರು.
ಶಿಭಿರಾರ್ಥಿಗಳಿಂದ ಸುಮಗ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಸುಗಮ ಸಂಗೀತ ತರಬೇತಿ ಶಿಬಿರದಲ್ಲಿ ಭಾಗವಹಿಸುವವರು ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆ. 5ರಂದು ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ
ಚಾಮರಾಜನಗರ, ಸೆ. 04– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಎನ್. ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವರು.
ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, , ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧಮೇಂಧರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವವರ ವಿವರ
ಚಾಮರಾಜನಗರ, ಸೆ. 04 – ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ 2018-19ನೇ ಸಾಲಿನ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಗೆ 3 ವಿಭಾಗಗಳಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಎಂ. ಡಿ. ಮಹದೇವಯ್ಯ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಪುರ, ಗುಂಡ್ಲುಪೇಟೆ ತಾಲ್ಲೂಕು: ಜಯರಾಮು, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಟಿಪುರ, ಕೊಳ್ಳೇಗಾಲ ತಾಲ್ಲೂಕು: ಡಿ. ಮಹಾದೇವ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೆಲ್ಲಳ್ಳಿಮಾಳ, ಹನೂರು ತಾಲ್ಲೂಕು: ತನುಜ ಫಾತೀಮ ಬ್ರಿಟ್ಟೋ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಡಯ್ಯನಪಾಳ್ಯ, ಯಳಂದೂರು ತಾಲ್ಲೂಕು: ಕೆ. ಪುಟ್ಟಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮದ್ದೂರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಆರ್. ಚಿಕ್ಕಬಸವ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ. ಗುಂಡ್ಲುಪೇಟೆ ತಾಲ್ಲೂಕು: ಲತ್ತೀಶ್ಯ ಚಿನ್ನಪ್ಪ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಲಸೂರು, ಕೊಳ್ಳೇಗಾಲ ತಾಲ್ಲೂಕು: ಎಸ್. ನಾಗರಾಜು, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೀಮನಗರ. ಹನೂರು ತಾಲ್ಲೂಕು: ಎಸ್. ಕೃಷ್ಣ, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಿನ್ನಹಳ್ಳಿ, ಯಳಂದೂರು ತಾಲ್ಲೂಕು: ನಂಜುಂಡಸ್ವಾಮಿ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು-2.
ಪ್ರೌಢಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಕೆಂಪಣ್ಣ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡರಾಯಪೇಟೆ, ಗುಂಡ್ಲುಪೇಟೆ ತಾಲ್ಲೂಕು: ಮಹದೇವಸ್ವಾಮಿ, ಸಹ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಬೇಗೂರು. ಕೊಳ್ಳೇಗಾಲ ತಾಲ್ಲೂಕು: ಚಿಕ್ಕರಾಜು, ಹಿಂದಿ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡಿಂದವಾಡಿ, ಹನೂರು ತಾಲ್ಲೂಕು: ಪಿ.ಸಿ. ನಿರ್ಮಲ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ರಾಮಾಪುರ, ಯಳಂದೂರು ತಾಲ್ಲೂಕು: ಪಿ.ಬಿ. ಲಕ್ಷ್ಮಿ, ಸಹ ಶಿಕ್ಷಕರು, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಯಳಂದೂರು ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರು ಸೆಪ್ಟೆಂಬರ್ 5ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x

ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗೆ ಸರ್ಕಾರ ಬದ್ಧ: ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ (05-09-2018)

ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗೆ ಸರ್ಕಾರ ಬದ್ಧ: ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ, ಸೆ. 05 :- ಜಿಲ್ಲೆಗೆ ಶೈಕ್ಷಣಿಕ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗೆ ಸರ್ಕಾರ ಕಟಿಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮತ್ತು ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಣ ತಜ್ಞರು ಹಾಗೂ ಆದರ್ಶ ಶಿಕ್ಷಕರಾಗಿದ್ದರು. ಅವರ ಜನ್ಮದಿವನ್ನು ಶಿಕ್ಷಕರ ದಿನವಾಗಿ ಆಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಶಿಕ್ಷಕ ವೃತ್ತಿ ಇತರೆ ಎಲ್ಲಕ್ಕಿಂತ ಸರ್ವಶ್ರೇಷ್ಠವಾದುದಾಗಿದೆ. ಕಲ್ಲುಬಂಡೆಯಂತಹ ವಿದ್ಯಾರ್ಥಿಗಳನ್ನು ಕಡೆದು ಸುಂದರ ಶಿಲೆಯಾಗಿಸಿ ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಶಾಲಾಕಟ್ಟಡಗಳ ನವೀಕರಣ, ಅಗತ್ಯವಿರುವೆಡೆ ಶಿಕ್ಷಕರ ನೇಮಕಾತಿ, ವಿದ್ಯಾರ್ಥಿನಿಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇನ್ನಿತರೆ ಅವಶ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಸಾಕಷ್ಟು ಕಾಳಜಿ ವಹಿಸುತ್ತಿದೆ. ಉನ್ನತ ಶಿಕ್ಷಣಕ್ಕಾಗಿ ಹಲವು ಶಿಕ್ಷಣಸಂಸ್ಥೆಗಳು ಜಿಲ್ಲೆಯಲ್ಲಿ ಆರಂಭವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮಾತನಾಡಿ ದೇಶ, ರಾಜ್ಯ ಹಾಗೂ ಜಿಲ್ಲೆಯ ಪ್ರಗತಿಗೆ ಶಿಕ್ಷಣವೇ ಮಾನದಂಡವಾಗಿದೆ. ಸ್ವಾತಂತ್ರ್ಯ ನಂತರ ಶೇ. 12ರಷ್ಟಿದ್ದ ದೇಶದ ಸಾಕ್ಷರತೆ ಇಂದು ಶೇ.75ಕ್ಕೆ ತಲುಪಿದೆ ಇದು ಅಭಿವೃದ್ಧಿ ಸೂಚಕವಾಗಿದೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅದರಲ್ಲೂ ಪ್ರಾಥಮಿಕ ಹಂತದಲ್ಲಿಯೇ ಗುಣಾತ್ಮಕ ಶಿಕ್ಷಣ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆಯಬೇಕು ಎಂದರು.
ಜಿಲ್ಲೆಯ ಹಲವೆಡೆ ಶಾಲೆಗಳಿಗೆ ಮೂಲಸೌಕರ್ಯಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದೆ. ಈಗಾಗಲೇ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಕಾಲೇಜನ್ನು ಆರಂಭಿಸಲಾಗಿದೆ. ಪ್ರಸ್ತುತ ವರ್ಷದಿಂದಲೇ ಕಾನೂನು ಕಾಲೇಜು ಸಹ ಕಾರ್ಯರಂಭ ಮಾಡಲಿದೆ ಎಂದು ತಿಳಿಸಿದರು.
ತಾವು ಬೋಧಿಸುವ ಶಿಕ್ಷಣ ಮತ್ತು ಕಲಿಯುವ ಮಕ್ಕಳನ್ನು ಪ್ರೀತಿಸುವವರೆ ನಿಜವಾದ ಶಿಕ್ಷ್ಷಕರು. ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿ ಮಾಡುವಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿದ ಡಾ. ರಾಧಾಕೃಷ್ಣನ್, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಇಂದಿನ ಶಿಕ್ಷಕರು ಅಳವಡಿಸಿಕೊಳ್ಳಬೇಕಿದೆ ಎಂದು ಧ್ರುವನಾರಾಯಣ ಅವರು ಸಲಹೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಶಿಕ್ಷಣ ಕ್ಷೇತ್ರದ ಬದಲಾವಣೆ ಶಿಕ್ಷಕರಿಂದ ಮಾತ್ರ ಸಾಧ್ಯ. ದೇಶದಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೇಡಿಕೆಯುಳ್ಳ ಈ ಕ್ಷೇತ್ರ ಭಾರಿ ಸವಾಲಿನ ಹಾದಿಯಲ್ಲಿದೆ. ಶಿಕ್ಷಣ ಇಂದು ವ್ಯಾಪಾರೀಕರಣವಾಗುತ್ತಿದೆ ಇದನ್ನು ತಪ್ಪಿಸಲು ಶಿಕ್ಷಕರು ಪ್ರಜ್ಞಾವಂತರಾಗಬೇಕು. ಶಿಕ್ಷಕರಲ್ಲಿ ಕ್ರಿಯಾಶೀಲತೆ ವೃದ್ಧಿಯಾದರೆ ಮಾತ್ರ ಶಿಕ್ಷಣ ಅಭಿವೃದ್ಧಿಪಥದಲ್ಲಿ ಸಾಗುತ್ತದೆ ಎಂದರು.
ಯಾವುದೇ ಚೌಕಟ್ಟಿನೊಳಗೆ ನೀಡುವುದು ಶಿಕ್ಷಣವಲ್ಲ. ವಿದ್ಯಾರ್ಥಿಗಳಲ್ಲಿ ಚೈತನ್ಯ, ಕ್ರಿಯಾಶೀಲತೆಯನ್ನು ಮೂಡಿಸಿ ಅವರ ಪ್ರಬುದ್ಧತೆಯನ್ನು ವ್ಯಕ್ತಪಡಿಸುವಂತಹ ಶಿಕ್ಷಣವನ್ನು ನೀಡಬೇಕಾಗಿದೆ. ಮಕ್ಕಳಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆಯನ್ನು ಬೆಳೆಸಬೇಕು. ಅ ಮೂಲಕ ಶಿಕ್ಷಕರು ಎಲ್ಲರ ನಿರೀಕ್ಷೆಗಳನ್ನು ಮೀರಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಡಾ. ಹರೀಶ್‍ಕುಮಾರ್ ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮಕೃಷ್ಣ ಅವರು ಡಾ.ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರ ಕಲ್ಯಾಣ ನಿಧಿಯಿಂದ 5 ಸಾವಿರ ರೂ. ಗಳ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಲಾಯಿತು. ಅಲ್ಲದೆ ನಿವೃತ್ತ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಎರ್ಪಡಿಸಲಾಗಿದ್ದ ತಾಲೂಕುಮಟ್ಟದ ಸಾಂಸ್ಕøತಿಕ ಸ್ಪರ್ಧೆ ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರುಗದಮಣಿ, ಸದಸ್ಯರಾದ ಉಮಾವತಿ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ದೊಡ್ಡಮ್ಮ, ಎ.ಪಿ.ಎಂ.ಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳ, ಡಯಟ್ ಉಪನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಹೆಚ್.ಸಿ. ಚಂದ್ರಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ಯಾಮಲ, ಡಿ.ವೈ.ಎಸ್.ಪಿ ಜಯಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್. ರಾಚಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಲಕ್ಷ್ಮೀಪತಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.
ಸೆಪ್ಟೆಂಬರ್ 10ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
ಚಾಮರಾಜನಗರ, ಸೆ. 05 - ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷರಾದ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 10ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಕ್ತ ವಿ.ವಿ. ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಅಹ್ವಾನ
ಚಾಮರಾಜನಗರ, ಸೆ. 05  ನಗರದಲ್ಲಿರುವ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ ಪ್ರಥಮ ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಂ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ದಂಡಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕಡೆಯ ದಿನವಾಗಿದೆ. 200 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನವಾಗಿದೆ.
2,50,000 ರೂ. ಗಳಿಗಿಂತ ಕಡಿಮೆ ಅದಾಯ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು  ಸಮಾಜ ಕಲ್ಯಾಣ ಇಲಾಖೆ ಮೂಲಕ ಉಚಿತವಾಗಿ ಪ್ರವೇಶ ಪಡೆಯಲು ಅವಕಾಶವಿದೆ. ಬಿ.ಪಿ.ಎಲ್ ಕಾರ್ಡು ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ ಇದೆ.
ಅರ್ಜಿಯನ್ನು ವಿ.ವಿ. ನಿಲಯದ ಅಧಿಕೃತ ವೆಬ್‍ಸೈಟ್ ತಿತಿತಿ.ಞsoumಥಿsoಡಿe.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸದರಿ ವೆಬ್ ಸೈಟ್ ಅಥವಾ ನಗರದ ರಾಮಸಮುದ್ರದ ಕೆ.ಎಚ್.ಬಿ ಬಡಾವಣೆಯಲ್ಲಿರುವ ಇಮ್ಯಾನುವೆಲ್ ಪಬ್ಲಿಕ್ ಶಾಲೆಯ ಎದುರು ಇರುವ ಮುಕ್ತ ವಿ.ವಿ.ಯ ಪ್ರಾದೇಶಿಕ ಕೇಂದ್ರದ ಕಚೇರಿ ಅಥವಾ ದೂರವಾಣಿ ಸಂಖ್ಯೆ: 08226-222191, ಮೊ. 9632346618, 9448500718 ಸಂಪಕಿಸುವಂತೆ ಕೇಂದ್ರದ ನಿರ್ದೇಶಕರಾದ ಎನ್ ಮಹದೇವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 05 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಗುಂಡ್ಲುಪೇಟೆ ಉಪ ವಿಭಾಗ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 7ರಂದು ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗುಂಡ್ಲುಪೇಟೆ 66/11 ಕೆ.ವಿ, ಬೊಮ್ಮಲಾಪುರ 66/11 ಕೆ.ವಿ ಮತ್ತು ಹಂಗಳ 66/11 ಕೆ.ವಿ ವ್ಯಾಪ್ತಿ ಪ್ರದೇಶಗಳಲ್ಲಿ ಅಂದು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

x

ಅತ್ಯಾಚಾರ ಆರೋಪಿಗೆ ಜಾಮೀನು ತಿರಸ್ಕಾರ (06-09-2018)

ಅತ್ಯಾಚಾರ ಆರೋಪಿಗೆ ಜಾಮೀನು ತಿರಸ್ಕಾರಚಾಮರಾಜನಗರ, ಸೆ. 06 :- ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ. 
ಮಾರ್ಡಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅದೇ ಊರಿನ ಗೋಪಿ ಅಲಿಯಾಸ್ ಗೋಪಾಲಕೃಷ್ಣ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆಂದು ಬಾಲಕಿಯ ತಂದೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೋ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಜಾಮೀನು ಅರ್ಜಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಸೆಪ್ಟೆಂಬರ್ 1ರಂದು ತಿರಸ್ಕರಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೇಶ್ ಹಾಜರಾಗಿ ವಾದ ಮಂಡಿಸಿದ್ದರೆಂದು ಪ್ರಕಟಣೆ ತಿಳಿಸಿದೆ.
ಕೆಶಿಪ್ ಯೋಜನೆ: ಭೂಮಿ ನೇರ ಖರೀದಿಗೆ ಪತ್ರ ಜಾರಿ  
ಚಾಮರಾಜನಗರ, ಸೆ. - ಕೆಶಿಪ್-3ರ ಯೋಜನೆಯಡಿ ಕೊಳ್ಳೇಗಾಲ-ಹನೂರು ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲಿದ್ದು, ಈ ಯೋಜನೆಗೆ ಜಮೀನನ್ನು ಕ್ರಯಕ್ಕೆ ನೀಡಲು ತಿಳಿವಳಿಕೆ ಪತ್ರಗಳನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗರ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಭೂ ಮಾಲಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕೆಶಿಪ್ ಯೋಜನೆಗೆ ಅಗತ್ಯವಿರುವ ಜಮೀನನ್ನು ನೇರ ಖರೀದಿಸಲು ಅನುಮೋದನೆ ಸಿಕ್ಕಿದ್ದು, ಈಗಾಗಲೇ ಜಮೀನು ಜಂಟಿ ಅಳತೆ ಕಾರ್ಯ ಮುಗಿದಿದೆ. ನೇರ ಖರೀದಿ ಜಮೀನಿನ ಬೆಲೆ ನಿಗದಿ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಮುಖ್ಯ ಯೋಜನಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ರಸ್ತೆ ಅಗಲೀಕರಣ ವ್ಯಾಪ್ತಿಗೆ ಅಗ್ರಹಾರ, ಸಿದ್ದಯ್ಯನಪುರ, ಮಧುವನಹಳ್ಳಿ, ಹಾರುವವನಪುರ, ಚಿಕ್ಕಿಂದುವಾಡಿ, ದೊಡ್ಡಿಂದುವಾಡಿ, ಸಿಂಗನಲ್ಲೂರು, ಕೊಂಗರಹಳ್ಳಿ, ಮಂಗಲ, ಆನಾಪುರ, ಹುಲ್ಲೇಪುರ, ಹನೂರು ಗ್ರಾಮಗಳು ಒಳಪಡಲಿವೆ. ಕೊಂಗರಹಳ್ಳಿ(ಕಾಮಗೆರೆ), ಮಂಗಲ ಮತ್ತು ಹನೂರು ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಒಳಪಡುವ ಕಟ್ಟಡಗಳ ಮೌಲ್ಯಮಾಪನಾ ಕಾರ್ಯ ಪ್ರಗತಿ ಹಂತದಲ್ಲಿದೆ. 
ನೇರ ಖರೀದಿ ಜಮೀನಿಗೆ ಬೆಲೆ ನಿಗದಿಪಡಿಸಿ ದಾಖಲು ಹಾಜರುಪಡಿಸಿ ಪರಿಹಾರ ಪಡೆದುಕೊಂಡು ಕೆಶಿಪ್-3 ಯೋಜನೆಗೆ ಜಮೀನನ್ನು ಕ್ರಯಕ್ಕೆ ನೀಡಲು ತಿಳಿಸಿ ಸಂಬಂಧಿಸಿದ ಗ್ರಾಮಲೆಕ್ಕಿಗರ ಮೂಲಕ ತಿಳಿವಳಿಕೆ ಪತ್ರಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಕೊಳ್ಳೇಗಾಲದ ಉಪವಿಭಾಗಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಸಂಬಂಧಿಸಿದ ಗ್ರಾಮಲೆಕ್ಕಿಗರಿಂದ ಮಾಹಿತಿ ಪಡೆಯಬಹುದೆಂದು ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಮಾಹಿತಿಗಾಗಿ ತಹಶೀಲ್ದಾರ್(ನಿವೃತ್ತ) ಕೆಶಿಪ್-3 ಶಾಖೆ ಮೊ. 9886247077, ಪ್ರಥಮ ದರ್ಜೆ ಸಹಾಯಕರು(ನಿವೃತ್ತ ಪಿ.ಡಿ.ಒ) ಮೊ. 8105092261, ಗ್ರಾಮಲೆಕ್ಕಿಗರು, ಹರಳೆ ವೃತ್ತ, ಅಗ್ರಹಾರಕ್ಕೆ ಸಂಬಂಧಿಸಿದಂತೆ ಮೊ. 7892540749, ಗ್ರಾಮಲೆಕ್ಕಿಗರು, ಸಿದ್ದಯ್ಯನಪುರ ಮೊ. 9741489698, ಗ್ರಾಮಲೆಕ್ಕಿಗರು, ಮಧುವನಹಳ್ಳಿ ಮೊ. 9916415627, ಗ್ರಾಮಲೆಕ್ಕಿಗರು ದೊಡ್ಡಿಂದುವಾಡಿ ಮೊ. 9108252088, ಗ್ರಾಮಲೆಕ್ಕಿಗರು, ಚಿಕ್ಕಿಂದುವಾಡಿ ಮೊ. 8861298650, ಗ್ರಾಮಲೆಕ್ಕಿಗರು, ಸಿಂಗನಲ್ಲೂರು ಮೊ. 9611378047, ಗ್ರಾಮಲೆಕ್ಕಿಗರು, ಕೊಂಗರಹಳ್ಳಿ ಮೊ. 8139948720, ಗ್ರಾಮಲೆಕ್ಕಿಗರು, ಮಂಗಲ ಮೊ. 9449746768, ಗ್ರಾಮಲೆಕ್ಕಿಗರು, ಕಣ್ಣೂರು(ಆನಾಪುರಕ್ಕೆ ಸಂಬಂಧಿಸಿದಂತೆ) ಮೊ. 9886974213, ಗ್ರಾಮಲೆಕ್ಕಿಗರು, ಹನೂರು ವೃತ್ತ(ಹನೂರು ಮತ್ತು ಹುಲ್ಲೇಪುರಕ್ಕೆ ಸಂಬಂಧಿಸಿದಂತೆ) ಮೊ. 9945796717 ಸಂಪರ್ಕಿಸುವಂತೆ ಉಪವಿಭಾಗಧಿಕಾರಿ ಫೌಜಿಯಾ ತರನ್ನುಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 


   
     
ಮನುಷ್ಯರ ನಡುವೆ ಬಾಂಧವ್ಯ ವೃದ್ಧಿಗೆ ಸಂಗೀತ ಸಹಕಾರಿ : ಪ್ರೊ. ಜಿ.ಎಸ್. ಜಯದೇವ್ 
ಚಾಮರಾಜನಗರ, ಸೆ. 06:- ಸಂಗೀತ ಮನುಷ್ಯನ ನಡುವೆ ಮಧುರವಾದ ಸ್ನೇಹ, ಬಾಂಧವ್ಯ, ಒಗ್ಗಟ್ಟು ಉಂಟುಮಾಡುವ ಅದ್ಭುತ ಸಾಮಥ್ರ್ಯ ಹೊಂದಿದೆ ಎಂದು ಸಾಹಿತಿ ಹಾಗೂ ಸಂಸ್ಕøತಿ ಚಿಂತಕರಾದ ಪ್ರೊ. ಜಿ.ಎಸ್. ಜಯದೇವ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ, ಸಾಹಿತ್ಯ ಪ್ರಕಾರಗಳು ಮನುಷ್ಯನಿಗೆ ಅಗತ್ಯ. ಮನುಷ್ಯನ ಹುಟ್ಟುಗುಣಗಳಾದ ಕ್ರೌರ್ಯ, ಹಿಂಸೆ, ಅಸೂಯೆಯನ್ನು ಸಂಗೀತ ಕಲೆ ಪರಿವರ್ತಿಸಿ ಸುಸಂಸ್ಕøತರನ್ನಾಗಿಸುತ್ತದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ ಎಂದರು.
ಸಾಹಿತ್ಯ ಸಂಸ್ಕøತಿಯನ್ನು ಜಾಗೃತಗೊಳಿಸುವ ಕಾರ್ಯಾಗಾರಗಳು ಹೆಚ್ಚು ನಡೆಯಬೇಕು. ಇದರಿಂದ ಭಾಷೆಯ ಬಗೆಗಿನ ಅಭಿಮಾನ ಸಹ ಹೆಚ್ಚಾಗಲಿದೆ. ಹೊರಗಿನ ಸಂಗೀತ ಪ್ರಕಾರಗಳಿಗಿಂತ ಇಲ್ಲಿನ ಸಂಗೀತ, ಕಲೆ ಅನನ್ಯವಾದದ್ದು. ಇದನ್ನು ಹೆಚ್ಚು ಬೆಳೆಸಬೇಕು. ಈ ನಿಟ್ಟಿನಲ್ಲಿ ಎಲ್ಲರು ಪ್ರಯೋಗಶೀಲರಾಗಬೇಕಿದೆ ಎಂದು ಜಯದೇವ ಅವರು ಸಲಹೆ ಮಾಡಿದರು.
ಸಾಂಸ್ಕøತಿಕವಾಗಿ ಚಾಮರಾಜನಗರ ಜಿಲ್ಲೆ ಕಡೆಗಣಿಸಲ್ಪಟ್ಟಿದೆ. ನೃತ್ಯ, ನಟನೆ, ಸಂಗೀತ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಅದ್ಭುತ ಪ್ರತಿಭಾವಂತರಿದ್ದಾರೆ. ಮಹದೇಶ್ವರ ಬೆಟ್ಟದ ಜಾನಪದ ಸಾಹಿತ್ಯವು ಪ್ರಪಂಚದಲ್ಲೇ ಎರಡನೇ ಅತಿದೊಡ್ಡ ಜಾನಪದ ಸಾಹಿತ್ಯವೆಂಬ ಹೆಗ್ಗಳಿಕೆ ಹೊಂದಿದೆ ಎಂದು ಜಯದೇವ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಅನಾದಿ ಕಾಲದಿಂದಲೂ ಕಲೆ, ಸಂಸ್ಕøತಿ ಜೀವನದ ಒಂದು ಭಾಗವಾಗಿದೆ. ಯಾವುದೇ ಇತಿಹಾಸವನ್ನು ಅಧ್ಯಾಯ ಮಾಡಿದಾಗ ಆಯಾ ಕಾಲದ ಕಲೆ, ಸಾಹಿತ್ಯ, ಸಂಸ್ಕøತಿ ಕೊಡುಗೆಗಳನ್ನು ಒದಗಿಸುವ ವಿವರಗಳು ಇಲ್ಲದ ಇತಿಹಾಸ ಪೂರ್ಣಗೊಳ್ಳ್ಳುವುದಿಲ್ಲ ಎಂದರು.
ವೃತ್ತಿಗಿಂತ ಪ್ರವೃತ್ತಿ, ಹೆಸರು, ಕೀರ್ತಿ ತಂದುಕೊಟ್ಟಿರುವ ಹಲವು ನಿದರ್ಶನ ಇವೆ. ಕಲೆ, ಸಾಹಿತ್ಯ, ಸಂಗೀತದಂತಹ ಪ್ರವೃತ್ತಿಯನ್ನು ಅತೀ ಸಂತೋಷದಿಂದ ನಿರ್ವಹಿಸಲಾಗುತ್ತಿದ್ದು, ಪ್ರವೃತ್ತಿಯಲ್ಲಿ ಯಾವುದೇ ಒತ್ತಡ, ಬಲವಂತ ಇರುವುದಿಲ್ಲ. ಕಲಾಪ್ರಕಾರಗಳಲ್ಲಿ ಒಂದಾದ ಸುಗಮ ಸಂಗೀತ ತರಬೇತಿಗೆ ಅಪೂರ್ವವಾದ ಅವಕಾಶವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ಗಾಯತ್ರಿ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ರಿಜಿಸ್ಟ್ರ್ಟಾರ್ ಅಶೋಕ್ ಎನ್. ಚಲವಾದಿ ಅವರು ಅಕಾಡೆಮಿ ಹಮ್ಮಿಕೊಳ್ಳುವ ಯೋಜನೆ, ಕಾರ್ಯಕ್ರಮಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗದೇ ರಾಜ್ಯದ ಎಲ್ಲಾ ಭಾಗಗಳಿಗೆ ತಲುಪುವಂತಾಗಬೇಕು ಎನ್ನುವ ಉದ್ದೇಶದಿಂದ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸೂಕ್ತ ತರಬೇತಿ ದೊರೆತರೆ ಪ್ರತಿಭೆಗಳು ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಹಿರಿಯ ಕಲಾವಿದರಾದ ಟಿ. ರಾಜಾರಾಮ್, ಸಿ.ಎಂ. ನರಸಿಂಹಮೂರ್ತಿ, ಸದಸ್ಯ ಸಂಚಾಲಕರಾದ ಆನಂದ ಮಾದಲಗೆರೆ, ಶಿಬಿರದ ನಿರ್ದೇಶಕರಾದ ಬಿ. ಬಸವರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ: ಆನ್‍ಲೈನ್‍ನಲ್ಲಿ ಪರಿಶೀಲಿಸಲು ಮನವಿ
ಚಾಮರಾಜನಗರ, ಸೆ. 06 :- ಭಾರತ ಸರ್ಕಾರದ ಕಾರ್ಮಿಕ ಇಲಾಖೆಯ ಬೀಡಿ ಕಾರ್ಮಿಕರ ಕಲ್ಯಾಣನಿಧಿ ವತಿಯಿಂದ 2018-19ನೇ ಸಾಲಿಗೆ ಜಿಲ್ಲೆಯ ಬೀಡಿ ಕಾರ್ಮಿಕರ ಅವಲಂಬಿತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಸಲುವಾಗಿ ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.
ಈ ಸಂಬಂಧ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯದ ಮುಖ್ಯಸ್ಥರು ಮತ್ತು ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ವಿದ್ಯಾರ್ಥಿವೇತನ ಕೋರಿ ಆನ್‍ಲೈನ್ ದಾಖಲಾಗಿರುವ ಅರ್ಜಿಗಳನ್ನು ಬೀಡಿ ಕಾರ್ಮಿಕರ ಮಕ್ಕಳಿಗೆ ಒದಗಿಸುವ ಧನಸಹಾಯ ಕಾಲಂ(ವೆಬ್‍ಸೈಟ್ hಣಣಠಿ:/ತಿತಿತಿ.sಛಿhoಟಚಿಡಿshiಠಿs.gov.iಟಿ)  ನಲ್ಲಿ ತುರ್ತಾಗಿ ಪರಿಶೀಲನೆ ಮಾಡಬೇಕು. 
ಪರಿಶೀಲನಾ ಪ್ರಕ್ರಿಯೆಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಧನಸಹಾಯ ಅರ್ಜಿಗಳನ್ನು ಪರಿಶೀಲಿಸಲು ಸೆಪ್ಟೆಂಬರ್ 15 ಕಡೆಯ ದಿನ. ಮೆಟ್ರಿಕ್ ನಂತರದ ಅರ್ಜಿಗಳನ್ನು ಪರಿಶೀಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. ಅಂತಿಮ ದಿನಾಂಕದ ನಂತರ ವಿದ್ಯಾರ್ಥಿವೇತನವು ಮಂಜೂರಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಿಛಿಟತಿobಟಡಿ-ಞಚಿ@ಟಿiಛಿ.iಟಿ ಅಥವಾ ದೂರವಾಣಿ ಸಂ: 080-23471706 ನ್ನು ಸಂಪರ್ಕಿಸುವಂತೆ ಬೀಡಿ ಕಾರ್ಮಿಕರ ಕಲ್ಯಾಣನಿಧಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿಭಾಗ್ಯ ಯೋಜನೆಯಡಿ ಹಸಿರು ಮನೆ, ನೆರಳು ಪರದೆಮನೆ ನಿರ್ಮಾಣಕ್ಕಾಗಿ ಸಹಾಯಧನ
ಚಾಮರಾಜನಗರ, ಸೆ. 06- ತೋಟಗಾರಿಕಾ ಇಲಾಖೆವತಿಯಿಂದ 2018-19ನೇ ಸಾಲಿಗೆ ಕೃಷಿಭಾಗ್ಯ ಯೋಜನೆಯನ್ನು ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಅನುಷ್ಟಾನಗೊಳಿಸಲಗುತ್ತಿದೆ.
ಈ ಯೋಜನೆಯಡಿ ಪ್ರತಿ ಫಲಾನುಭವಿ ಕುಟುಂಬಕ್ಕೆ ಗರಿಷ್ಠ 1 ಎಕರೆ ಪ್ರದೇಶದಲ್ಲಿ ಹಸಿರು ಮನೆ ಹಾಗೂ ನೆರಳು ಪರದೆಮನೆ ಘಟಕ ನಿರ್ಮಾಣಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಸಾಮಾನ್ಯ ವರ್ಗದಲ್ಲಿ ಮಾತ್ರ ಅನುದಾನ (ಶೇ. 50 ರಂತೆ ಸಹಾಯಧನ)ಲಭ್ಯವಿದ್ದು, ಅಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 8ರೊಳಗೆ ಸಲ್ಲಿಸುವಂತೆ ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅವಧಿ ವಿಸ್ತರಣೆÀ
ಚಾಮರಾಜನಗರ, ಸೆ. 06 - ಸಮಾಜ ಕಲ್ಯಾಣ ಇಲಾಖೆವತಿಯಿಂದ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ ಮಂಜೂರು ಮಾಡುವ ಸಲುವಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಆಗಸ್ಟ್ 30ನ್ನು ಕಡೆಯ ದಿನಾಂಕವಾಗಿ ನಿಗದಿಗೊಳಿಸಲಾಗಿತ್ತು.
ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ನಿಗಧಿತ ಅವಧಿಯೊಳಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಡೆಯ ದಿನಾಂಕವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆÀ
ಚಾಮರಾಜನಗರ, ಸೆ. 06 - ಜನರ ಕುಂದುಕೊರತೆ,ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕು ಕಚೇರಿಯಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಅಂದು ನಡೆಯಲಿರುವ ಸಭೆಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಹವಾಲು ನೀಡುವ ಮೂಲಕ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x

ಸೆಪ್ಟೆಂಬರ್ 8ರಂದು ಜಿಲ್ಲಾದ್ಯಂತ ಲೋಕ್ ಅದಾಲತ್: ಸದುಪಯೋಗಕ್ಕೆ ಜಿಲ್ಲಾ ನ್ಯಾಯಾಧೀಶರ ಮನವಿ (08-09-2018)

ಸೆಪ್ಟೆಂಬರ್ 8ರಂದು ಜಿಲ್ಲಾದ್ಯಂತ ಲೋಕ್ ಅದಾಲತ್: ಸದುಪಯೋಗಕ್ಕೆ ಜಿಲ್ಲಾ ನ್ಯಾಯಾಧೀಶರ ಮನವಿ  

ಚಾಮರಾಜನಗರ, ಸೆ. 07 :- ರಾಷ್ಟ್ರೀಯ ಸೇವಾ ಪ್ರಾಧಿಕಾರದ ನಿರ್ದೇಶನದಂತೆ ರಾಷ್ಟ್ರಾದ್ಯಂತ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲೂ ಸಹ ಸೆಪ್ಟೆಂಬರ್ 8ರಂದು ಲೋಕ್ ಅದಾಲತ್ ನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಅವರಣದಲ್ಲಿರುವ ವ್ಯಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಲೋಕ್ ಅದಾಲತ್ ಕುರಿತು ವಿವರ ನೀಡಿದರು.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲಕ್ಕೆ ಸಂಬಂಧಿಸಿದಂತೆ ಒಟ್ಟು 10 ಬೈಟಕ್‍ಗಳಿಗೆ ಸಂಧಾನಕಾರರನ್ನು ನೇಮಿಸಿ ಅ ಮೂಲಕ ಆಯಾ ನ್ಯಾಯಾಲಯದ ಅವರಣದಲ್ಲಿ ಲೋಕ್ ಅದಾಲತ್ ನಡೆಸಲಾಗುತ್ತದೆ. ಯಳಂದೂರಿಗೆ ನ್ಯಾಯಾಧೀಶರು ನೇಮಕವಾಗದಿರುವ ಹಿನ್ನಲೆಯಲ್ಲಿ ಅಲ್ಲಿಗೆ ಸಂಬಂಧಿಸಿದ ಲೋಕ್ ಅದಾಲತ್ ಪ್ರಕರಣಗಳನ್ನು ಚಾಮರಾಜನಗರದಲ್ಲಿಯೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಎಲ್ಲಾ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆ, ಮೋಟಾರು ವಾಹನ ಅಪಘಾತ ಪ್ರಕರಣಗಳು, ಕೈಗಾರಿಕೆ ವಿವಾದ ಕಾಯ್ದೆ, ರಾಜೀ ಮಾಡಿಕೊಳ್ಳಬಹುದಾದ ಎಲ್ಲಾ ಅಪರಾಧ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣ, ಕಾರ್ಮಿಕ ಕಾಯ್ದೆಯಡಿ ಬರುವ ಪ್ರಕರಣಗಳು, ವಿದ್ಯುತ್ ಕಳವು, ಅಕ್ರಮ ಕಲ್ಲು, ಮರಳು ಸಾಗಾಣಿಕೆ ಸಂಬಂಧ ಪ್ರಕರಣಗಳು ಸೇರಿದಂತೆ ಯಾವುದೇ ಅಪರಾಧಿಕ ಸ್ವರೂಪದ ರಾಜಿ ಆಗಬಹುದಾದ ಅಪರಾಧ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಕೈಗೆತ್ತಿಕೊಳ್ಳಲಿದ್ದು, ರಾಜಿ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ನ್ಯಾಯಾಲಯಗಳು ಲೋಕ್ ಅದಾಲತ್ ನಲ್ಲಿ ಕ್ಯಗೆತ್ತಿಕೊಳ್ಳಲು 2878 ಪ್ರಕರಣಗಳನ್ನು ಕಳುಹಿಸುತ್ತಿವೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕ್ ಅದಾಲತ್ ನಲ್ಲಿ ತೀರ್ಮಾನಿಸಿ ಇತ್ಯರ್ಥಗೊಳಿಸಲು ಪ್ರಯತ್ನಿಸಲಿದ್ದೆವೆ. ವಕೀಲರು, ಕಕ್ಷಿದಾರರು ಸಹಕಾರ ನೀಡಬೇಕು. ಸಂಧಾನಕಾರರು ಹೇಳುವ ಸಲಹೆಗಳನ್ನು ಪಾಲಿಸಿ ಪ್ರಕರಣವನ್ನು ಲೋಕ್ ಅದಾಲತ್‍ನಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಮನವಿ ಮಾಡಿದರು.
ಲೋಕ್ ಅದಾಲತ್‍ನಲ್ಲಿ ಸಂಧಾನದ ಮೂಲಕ ತೀರ್ಮಾನವಾಗಿ ಬಂದಂತಹ ತೀರ್ಪಿನ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಅಮೂಲ್ಯವಾದ ಸಮಯವು ಉಳಿಯಲಿದೆ. ಉಭಯ ಪಕ್ಷಗಾರರ ನಡುವೆ ಸಾಮರಸ್ಯ ಉಂಟಾಗಲಿದೆ ಎಂದು ನ್ಯಾಯಾಧೀಶರಾದ ಬಸವರಾಜ ಅವರು ತಿಳಿಸಿದರು.
ಕಳೆದ ಜುಲೈನಲ್ಲಿ ನಡೆದ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ ಒಟ್ಟು 208 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸೆಪ್ಟೆಂಬರ್ 8ರಂದು ನಡೆಯಲಿರುವ ಲೋಕ್ ಅದಾಲತ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ತೀರ್ಮಾನಿಸುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶರು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯವರಾದ ವಿಶಾಲಾಕ್ಷಿ, ಜಿಲ್ಲಾ ವಕಿಲರ ಸಂಘದ ಅಧ್ಯಕ್ಷರಾದ ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಗ್ರಂಥಾಲಯ ಸೇವೆ ಸದ್ಭಳಕೆಗೆ ಧ್ರುವನಾರಾಯಣ ಸಲಹೆ 

ಚಾಮರಾಜನಗರ, ಸೆ. 07  ಜ್ಞಾನ ಸಂಪಾದನೆಗೆ ಅಗತ್ಯವಾಗಿರುವ ಗ್ರಂಥಾಲಯಗಳ ಸೇವೆಯನ್ನು ಪ್ರತಿಯೊಬ್ಬರು ಸದುಪಯೋಗ ಮಾಡಿಕೊಳ್ಳಬೇಕೆಂದು ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾ ನ್ಯಾಯಾಲಯ ಅವರಣದ ಸಂಕೀರ್ಣದಲ್ಲಿ ವಕೀಲರಿಗಾಗಿ ರಾಜ್ಯ ಸರ್ಕಾರದ ಅನುದಾನದಡಿ ವ್ಯವಸ್ಥೆ ಮಾಡಲಾಗಿರುವ ಇ-ಲೈಬ್ರರಿ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಾರ್ಜನೆಗೆ ಪೂರಕವಾಗಿರುವ ಗ್ರಂಥಾಲಯಗಳು ಪ್ರತಿ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲೆಡೆ ಇರಬೇಕು. ಆದರೆ ಗ್ರಂಥಾಲಯಗಳಿಗೆ ನಿರೀಕ್ಷಿತ ಅದ್ಯತೆಯನ್ನು ನೀಡಲಾಗುತ್ತಿಲ್ಲ. ಅಧ್ಯಯನಕ್ಕೆ ಗ್ರಂಥಾಲಯಗಳು ತುಂಬಾ ಅವಶ್ಯಕವಾಗಿದೆ. ಹೀಗಾಗಿ ಎಲ್ಲೆಡೆ ಗ್ರಂಥಾಲಯಗಳ ಸೇವೆಗೆ ಮುಂದಾಗಬೇಕಿದೆ ಎಂದರು.
ವಕೀಲರಿಗೆ ವೃತ್ತಿ ನಿರ್ವಹಿಸಲು ನಿರಂತರ ಅಧ್ಯಯನ ಅಗತ್ಯವಿದೆ. ಇದಕ್ಕಾಗಿ ಪ್ರತಿ ತಾಲೂಕು ನ್ಯಾಯಾಲಯಗಳಲ್ಲಿಯೂ ವಕೀಲರಿಗೆ ಇ-ಲೈಬ್ರರಿ ಸೇವೆ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಕಾನೂನು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಧ್ರುವನಾರಾಯಣ ತಿಳಿಸಿದರು.
ಜಿಲ್ಲೆಗೆ ಕಾನೂನು ಕಾಲೇಜು ಮಂಜೂರಾಗಿದೆ. ಕೇಂದ್ರೀಯ ವಿದ್ಯಾಲಯವು ತಾತ್ಕಾಲಿಕವಾಗಿ ನಡೆಯುತ್ತಿದ್ದ ಕಟ್ಟಡದಲ್ಲಿ ಕಾನೂನು ಕಾಲೇಜು ಆರಂಭಿಸಲು ಸಿದ್ದತೆ ನಡೆದಿದೆ. ಇನ್ನು 2-3 ದಿನಗಳಲ್ಲಿಯೇ ಎಲ್ಲ ಪ್ರಕ್ರಿಯೆ ಮುಗಿಯಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೆ ಕಾನೂನು ಕಾಲೇಜು ಆರಂಭವಾಗಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಮಾತನಾಡಿ ವಕೀಲರು ಹೆಚ್ಚಿನ ಜ್ಞಾನ, ತಿಳಿವಳಿಕೆ ಹೊಂದಲು ಇ-ಲೈಬ್ರರಿ ಅಗತ್ಯವಿತ್ತು. ಸೌಲಭ್ಯವು ಇನ್ನುಮುಂದೆ ಜಿಲ್ಲಾ ನ್ಯಾಯಾಲಯದಲ್ಲಿ ಲಭ್ಯವಿರುವುದರಿಂದ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಇತ್ತೀಚಿನ ಕಾಯಿದೆ, ತಿದ್ದುಪಡಿ, ಅದೇಶಗಳು ಸೇರಿದಂತೆ ವಕೀಲ ವೃತ್ತಿಗೆ ಬೇಕಿರುವ ಅನೇಕ ಮಾಹಿತಿಗಳು ಇ-ಲೈಬ್ರರಿ ಮೂಲಕ ಪಡೆಯಬಹುದಾಗಿದೆ. ಈ ಉಪಯುಕ್ತ ಸೇವೆ ದೊರಕಿರುವುದು ಶ್ಲಾಘನೀಯವೆಂದು ಜಿಲ್ಲಾ ನ್ಯಾಯಾಧೀಶರು ನುಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ರಮೇಶ್, ಸಿ.ಜೆ. ವಿಶಾಲಾಕ್ಷಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ, ಉಮೇಶ್, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಬಿ.ಆರ್. ಚಂದ್ರಮೌಳಿ, ವಿಶಾಲ್ ರಘು, ಸರ್ಕಾರಿ ವಕೀಲರಾದ ಎಚ್.ಎನ್. ಲೋಕೇಶ್, ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೀಶ್, ಯಳಂದೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಕೆ.ಬಿ. ಶಶಿಧರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
       
   
x

Monday, 3 September 2018

ಚಾಮರಾಜನಗರ ನಗರಸಭೆ ಚುನಾವಣೆ ಫಲಿತಾಂಶ ,ನಿಮ್ಮ ವಾರ್ಡಿನ ಸದಸ್ಯರು ಯಾರು ಗೊತ್ತಾ?..ಇಂತಿ ರಾಮಸಮುದ್ರ ಎಸ್.ವೀರಭದ್ರಸ್ವಾಮಿ

  ಚಾಮರಾಜನಗರ ನಗರಸಭೆ ಚುನಾವಣೆ ಫಲಿತಾಂಶ 

 ಚಾಮರಾಜನಗರ, ಆ. 23 :(9480030980) - ಜಿಲ್ಲೆಯ ಚಾಮರಾಜನಗರ ನಗರಸಭೆಗೆ ನಡೆದ ಚುನಾವಣೆ ಸಂಬಂಧ ಮತ ಎಣಿಕೆ ಕಾರ್ಯ ಇಂದು ನಡೆದು ಫಲಿತಾಂಶ ಹೊರಬಿದ್ದಿದೆ.

ಚಾಮರಾಜನಗರ ನಗರಸಭೆಯ 31 ವಾರ್ಡುಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ 15, ಕಾಂಗ್ರೆಸ್ 8, ಎಸ್‍ಡಿಪಿಐ 6, ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಒರ್ವ ಬಿಎಸ್‍ಪಿ ಹಾಗೂ ಒರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ವಾರ್ಡುವಾರು ಫಲಿತಾಂಶ ವಿವರ ಇಂತಿದೆ.
1.ಫಲಿತಾಂಶ ಕಾದು ನಿಂತ ಜನ.
2.ಮತ ಎಣಿಕೆ ಕೇಂದ್ರ.
3.ಚುನಾವಣಾ ಅಭ್ಯರ್ಥಿಗಳು.
4. ಬಂದೂಬಸ್ತ್. ತಪಾಸಣೆ.




ಚಾಮರಾಜನಗರ ನಗರಸಭೆ: 

ವಾರ್ಡ್ 1- ವಿಜೇತ ಅಭ್ಯರ್ಥಿ: ಎಸ್.ನೀಲಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-767,
ಇತರೆ ಅಭ್ಯರ್ಥಿಗಳು-ಪುಟ್ಟನಿಂಗಮ್ಮ (ಬಿಜೆಪಿ)-590
ಮಹೇಶ್ವರಿ.ಎಸ್.ಸಿದ್ದರಾಜು(ಬಿ.ಎಸ್.ಪಿ)-89
ನೋಟಾ-20

ವಾರ್ಡ್ 2-ವಿಜೇತ ಅಭ್ಯರ್ಥಿ: ಗೌರಿ (ಬಿಜೆಪಿ)-435
ಇತರೆ ಅಭ್ಯರ್ಥಿಗಳು-ನೂರ್ ಆಯಿಷಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-375
ಮಲ್ಲಮ್ಮ (ಬಿ.ಎಸ್.ಪಿ)-8
ನೋಟಾ-8 

ವಾರ್ಡ್ 3-ವಿಜೇತ ಅಭ್ಯರ್ಥಿ: ಮೊಹಮ್ಮದ್ ಅಮೀಕ್ (ಎಸ್.ಡಿ.ಪಿ.ಐ)-547 
ಇತರೆ ಅಭ್ಯರ್ಥಿಗಳು-ಬಿ.ಸತೀಶ್ (ಪಕ್ಷೇತರ)-507
ಅಹಮದ್ ಆಜಮ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-324
ಸೈಯದ್ ಮೋದಿನ್ (ಜನತಾದಳ) ಜಾತ್ಯತೀತ)-152
ಇರ್ಸಾದ್ (ಬಿ.ಎಸ್.ಪಿ)-114
ನಂಜುಂಡಯ್ಯ (ಪಕ್ಷೇತರ)-69
ಚೆನ್ನಂಜಯ್ಯ (ಬಿಜೆಪಿ)-53
ಇರ್ಸಾದ್ (ಪಕ್ಷೇತರ)-12
ದಾವೂದ್ ಷರೀಫ್ (ಪಕ್ಷೇತರ)-7
ನೋಟಾ-14

ವಾರ್ಡ್ 4-ವಿಜೇತ ಅಭ್ಯರ್ಥಿ: ಕಲೀಲ್ ಉಲ್ಲಾ.ಎನ್ (ಎಸ್.ಡಿ.ಪಿ.ಐ)-687
ಇತರೆ ಅಭ್ಯರ್ಥಿಗಳು-ಸನಾವುಲ್ಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-405
ಇಕ್ರಂ ಪಾಷ (ಪಕ್ಷೇತರ)-214
ಹಬೀಬ್ ಅಹಮದ್ (ಜನತಾದಳ) ಜಾತ್ಯತೀತ)-108
ಚಾಂದ್ ಪಾಷ (ಬಿ.ಎಸ್.ಪಿ)-21
ಮಹೇಂದ್ರಕುಮಾರ್.ಆರ್ (ಬಿಜೆಪಿ)-19
ನೋಟಾ-15


ವಾರ್ಡ್ 5-ವಿಜೇತ ಅಭ್ಯರ್ಥಿ: ತೌಸೀಯ ಬಾನು (ಎಸ್.ಡಿ.ಪಿ.ಐ)-763
ಇತರೆ ಅಭ್ಯರ್ಥಿಗಳು-ತಾರನುಮ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-646
ನಸೀಮ ಬಾನು (ಜನತಾದಳ) ಜಾತ್ಯತೀತ)-142
ನೋಟಾ-16

ವಾರ್ಡ್ 6-ವಿಜೇತ ಅಭ್ಯರ್ಥಿ: ಸಮೀ ಉಲ್ಲಾ ಖಾನ್ (ಎಸ್.ಡಿ.ಪಿ.ಐ)-634
ಇತರೆ ಅಭ್ಯರ್ಥಿಗಳು-ಅಯೂಬ್ ಉಲ್ಲಾ ಖಾನ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-486
ಜಾವೀದ್ ಜಬ್ಬಾರ್ (ಜನತಾದಳ) ಜಾತ್ಯತೀತ)-141
ಶಮುನ್ ಅಹ್ಮದ್ (ಬಿಜೆಪಿ)-15
ನೋಟಾ-16

ವಾರ್ಡ್ 7-ವಿಜೇತ ಅಭ್ಯರ್ಥಿ: ಸಿ.ಎಂ.ಆಶಾ (ಬಿಜೆಪಿ)-712
ಇತರೆ ಅಭ್ಯರ್ಥಿಗಳು-ಹೇಮ ಗಣೇಶ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-107
ನೋಟಾ-6

ವಾರ್ಡ್ 8-ವಿಜೇತ ಅಭ್ಯರ್ಥಿ: ರಾಘವೇಂದ್ರ.ಕೆ.(ಗ್ಯಾಸ್ ಗುಂಡಣ್ಣ) (ಬಿಜೆಪಿ)-706
ಇತರೆ ಅಭ್ಯರ್ಥಿಗಳು-ಶ್ರೀಕಾಂತ್ ಸಿ.ಜಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-311
ಹೆಚ್.ಬಿ.ವಿಶ್ವ ಕುಮಾರ್‍ಸ್ವಾಮಿ (ಜನತಾದಳ) ಜಾತ್ಯತೀತ)-112
ಎಂ.ಪಿ.ನಾಗೇಂದ್ರ (ಮಿಂಚು) (ಪಕ್ಷೇತರ)-49
ನೋಟಾ-9

ವಾರ್ಡ್ 9- ವಿಜೇತ ಅಭ್ಯರ್ಥಿ: ಮಹೇಶ.ಎಂ (ಎಸ್.ಡಿ.ಪಿ.ಐ)-372
ಇತರೆ ಅಭ್ಯರ್ಥಿಗಳು-ನಂಜುಂಡಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-263
ಆರ್.ಮಹದೇವಯ್ಯ (ಬಿಜೆಪಿ)-147
ಎಂ.ಎನ್.ಹರೀಶ್ ಕುಮಾರ್ (ಜನತಾದಳ) ಜಾತ್ಯತೀತ)-71
ಎನ್.ಕದಿರೇಶನ್ (ಪಕ್ಷೇತರ)-7
ನೋಟಾ-1

ವಾರ್ಡ್ 10-ವಿಜೇತ ಅಭ್ಯರ್ಥಿ: ಮನೋಜ್ ಪಟೇಲ್.ಎಂ (ಬಿಜೆಪಿ)-993
ಇತರೆ ಅಭ್ಯರ್ಥಿಗಳು-ಎಂ.ಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-290
ಚಿನ್ನಸ್ವಾಮಿ (ಬಿ.ಎಸ್.ಪಿ)-156
ನೋಟಾ-4
ತಿರಸ್ಕøತ-2

ವಾರ್ಡ್ 11-ವಿಜೇತ ಅಭ್ಯರ್ಥಿ: ಸಿ.ಎಂ.ಮಂಜುನಾಥ್ (ಬಿಜೆಪಿ)-508
ಇತರೆ ಅಭ್ಯರ್ಥಿಗಳು-ಪ್ರಶಾಂತ.ಬಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-265
ವಿಜಯಕುಮಾರ (ಬಿ.ಎಸ್.ಪಿ)-51
ನೋಟಾ-5

ವಾರ್ಡ್ 12-ವಿಜೇತ ಅಭ್ಯರ್ಥಿ: ಅಬ್ರಾರ್ ಅಹಮದ್ (ಎಸ್.ಡಿ.ಪಿ.ಐ)-386
ಇತರೆ ಅಭ್ಯರ್ಥಿಗಳು-ಜುಬೇರುಲ್ಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-336
ಎನ್.ಮೋಹನ್ (ಬಿಜೆಪಿ)-241
ಮಹಮ್ಮದ್ ಸಯೀದ್ (ಪಕ್ಷೇತರ)-130
ಸೈಯದ್ ಇದ್ರೀಸ್ (ಜನತಾದಳ) (ಜಾತ್ಯತೀತ)-66
ಸೈಯದ್ ಅಕ್ರಮ್ (ಪಕ್ಷೇತರ)-15
ಅಸ್ಲಂ ಪಾಷ (ಪಕ್ಷೇತರ)-10
ನೋಟಾ-1

ವಾರ್ಡ್ 13-ವಿಜೇತ ಅಭ್ಯರ್ಥಿ: ಎಂ.ಕಲಾವತಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-634
ಇತರೆ ಅಭ್ಯರ್ಥಿಗಳು-ರುಕಿಯಾ ಸುಲ್ತಾನ (ಜನತಾದಳ) ಜಾತ್ಯತೀತ)-281
ಚೈತ್ರ.ಎನ್ (ಬಿ.ಎಸ್.ಪಿ)-83
ಪಿ.ಶಿವಮ್ಮ (ಬಿಜೆಪಿ)-48
ಶ್ರುತಿ.ಸಿ.ಜಿ (ಪಕ್ಷೇತರ)-46
ಶಮ್ಮ (ಪಕ್ಷೇತರ)-37
ನೋಟಾ-11

ವಾರ್ಡ್ 14-ವಿಜೇತ ಅಭ್ಯರ್ಥಿ: ಚಿನ್ನಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-1075 
ಇತರೆ ಅಭ್ಯರ್ಥಿಗಳು-ಸುಮ (ಎಸ್‍ಡಿಪಿಐ)-376
ಗೌರಿ (ಬಿ.ಎಸ್.ಪಿ)-114
ಲಕ್ಷ್ಮಿ (ಬಿಜೆಪಿ)-40
ನೋಟಾ-17

ವಾರ್ಡ್ 15-ವಿಜೇತ ಅಭ್ಯರ್ಥಿ: ಆರ್.ಪಿ.ನಂಜುಂಡಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-334
ಇತರೆ ಅಭ್ಯರ್ಥಿಗಳು-ಹೇಮಂತ್‍ಕುಮಾರ್.ಎಂ. (ಬಿಜೆಪಿ)-330
ಪಿ.ಪಾಪಣ್ಣ (ಬಿ.ಎಸ್.ಪಿ)-160
ಕೆ.ಜಗದೀಶ (ಪಕ್ಷೇತರ)-123
ಚಾ.ಗು.ನಾಗರಾಜು (ಜನತಾದಳ) ಜಾತ್ಯತೀತ)-118
ಪಿ.ಚಿನ್ನಸ್ವಾಮಿ (ಪಕ್ಷೇತರ)-76
ಭವಾನಿ ಶಂಕರ್ (ಪಕ್ಷೇತರ)-24
ರಾಚಪ್ಪ (ಪಕ್ಷೇತರ)-5
ನೋಟಾ-4
ತಿರಸ್ಕøತ-1

ವಾರ್ಡ್ 16-ವಿಜೇತ ಅಭ್ಯರ್ಥಿ: ಚಂದ್ರಕಲಾ.ಬಿ.ಎಸ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-1042
ಇತರೆ ಅಭ್ಯರ್ಥಿಗಳು-ಪುಷ್ಪಮಾಲಾ (ಬಿಜೆಪಿ)-400
ಪುಷ್ಪಲತಾ (ಪಕ್ಷೇತರ)-9
ನೋಟಾ-9

ವಾರ್ಡ್ 17-ವಿಜೇತ ಅಭ್ಯರ್ಥಿ: ಸಿ.ಎ.ಬಸವಣ್ಣ (ಪಕ್ಷೇತರ)-509
ಇತರೆ ಅಭ್ಯರ್ಥಿಗಳು-ನಾರಾಯಣಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-345
ಪಿ.ರಂಗಸ್ವಾಮಿ (ಬಿಜೆಪಿ)-266
ಶೋಭಾ (ಜನತಾದಳ) ಜಾತ್ಯತೀತ)-86
ರವಿ.ಎನ್ (ಪಕ್ಷೇತರ)-61
ಡಿ.ಅಂಕೇಶ್ (ಪಕ್ಷೇತರ)-19
ಮಸಣಶೆಟ್ಟಿ (ಪಕ್ಷೇತರ)-18
ನೋಟಾ-11

      ವಾರ್ಡ್ 18-ವಿಜೇತ ಅಭ್ಯರ್ಥಿ: ಎನ್.ಶಾಂತಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-532
     ಇತರೆ ಅಭ್ಯರ್ಥಿಗಳು-ದಿವ್ಯಶ್ರೀ.ಎನ್.ಎಸ್ (ಬಿಜೆಪಿ)-520
     ಲಕ್ಷ್ಮಿ (ಜನತಾದಳ) ಜಾತ್ಯತೀತ)-89
     ನೋಟಾ-14

ವಾರ್ಡ್ 19-ವಿಜೇತ ಅಭ್ಯರ್ಥಿ: ಸಿ.ಎಂ.ಶಿವರಾಜು (ಬಿಜೆಪಿ)-687
ಇತರೆ ಅಭ್ಯರ್ಥಿಗಳು-ಸೈಯದ್ ನವೀದ್‍ಉಲ್ಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-465
ಮಹದೇವನಾಯಕ (ಪಕ್ಷೇತರ)-404
ಚಿಕ್ಕಅಂಕಶೆಟ್ಟಿ (ಜನತಾದಳ) ಜಾತ್ಯತೀತ)-9
ನೋಟಾ-11

ವಾರ್ಡ್ 20-ವಿಜೇತ ಅಭ್ಯರ್ಥಿ: ಸಿ.ಜಿ.ಚಂದ್ರಶೇಖರ್ (ಬಿಜೆಪಿ)-836
ಇತರೆ ಅಭ್ಯರ್ಥಿಗಳು-ಶ್ರೀನಿವಾಸಪ್ರಸಾದ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-304
ಮಂಜುನಾಥ (ಪಕ್ಷೇತರ)-28
ನೋಟಾ-6

ವಾರ್ಡ್ 21-ವಿಜೇತ ಅಭ್ಯರ್ಥಿ: ಸುದರ್ಶನಗೌಡ (ಬಿಜೆಪಿ)-596
ಇತರೆ ಅಭ್ಯರ್ಥಿಗಳು-ಎಸ್.ಕೋಮಲ್‍ಕುಮಾರ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-518
ನೋಟಾ-5

ವಾರ್ಡ್ 22-ವಿಜೇತ ಅಭ್ಯರ್ಥಿ: ಹೆಚ್.ಎಸ್.ಮಮತಾ (ಬಿಜೆಪಿ)-398
ಇತರೆ ಅಭ್ಯರ್ಥಿಗಳು-ಆಶಾ.ಎಂ.(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-325
ನೋಟಾ-1

ವಾರ್ಡ್ 23-ವಿಜೇತ ಅಭ್ಯರ್ಥಿ: ಗಾಯಿತ್ರಿ (ಬಿಜೆಪಿ)-541 
ಇತರೆ ಅಭ್ಯರ್ಥಿಗಳು-ಎನ್.ಮಂಜುಳಾ (ಪಕ್ಷೇತರ)-352
ಶಾಂತಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-107
ಕಲ್ಯಾಣಿ (ಪಕ್ಷೇತರ)-87
ಗಿರಿಜಮ್ಮ (ಜನತಾದಳ) ಜಾತ್ಯತೀತ)-9
ನೋಟಾ-15

ವಾರ್ಡ್ 24-ವಿಜೇತ ಅಭ್ಯರ್ಥಿ: ಭಾಗ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-684
ಇತರೆ ಅಭ್ಯರ್ಥಿಗಳು-ಲಕ್ಷ್ಮೀ (ಪಕ್ಷೇತರ)-508
ಶೋಭಾ (ಜನತಾದಳ) ಜಾತ್ಯತೀತ)-208
ರಾಧ.ಎಸ್ (ಬಿಜೆಪಿ)-105
ನೋಟಾ-32

ವಾರ್ಡ್ 25-ವಿಜೇತ ಅಭ್ಯರ್ಥಿ: ಎಂ.ಲೋಕೇಶ್ವರಿ (ಬಿಜೆಪಿ)-517 
ಇತರೆ ಅಭ್ಯರ್ಥಿಗಳು-ಭಾಗ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-421
ಎಂ.ಮಂಜುಳ (ಬಿ.ಎಸ್.ಪಿ.)-87
ನೋಟಾ-29

ವಾರ್ಡ್ 26-ವಿಜೇತ ಅಭ್ಯರ್ಥಿ: ಕುಮುದ.ಎಂ.ಎಸ್ (ಬಿಜೆಪಿ)-462
ಇತರೆ ಅಭ್ಯರ್ಥಿಗಳು-ನಾಗರತ್ನಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-270
ಎನ್.ಮೋಹನಾಂಭ (ಪಕ್ಷೇತರ)-174
ರೂಪ.ಎಂ.ಕೆ. (ಪಕ್ಷೇತರ)-116
ಬೃಂದ ಶಾಲಿನಿ.ಪಿ. (ಪಕ್ಷೇತರ)-57
ಮೇಘನಾ.ಆರ್.ಎಂ. (ಬಿ.ಎಸ್.ಪಿ.)-48
ನೋಟಾ-21

ವಾರ್ಡ್ 27-ವಿಜೇತ ಅಭ್ಯರ್ಥಿ: ವಿ.ಪ್ರಕಾಶ (ಬಿ.ಎಸ್.ಪಿ.)-873
ಇತರೆ ಅಭ್ಯರ್ಥಿಗಳು-ಚಂಗುಮಣಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-308
ನಾಗೇಶನಾಯಕ (ಬಿಜೆಪಿ)-16
ನೋಟಾ-16
ತಿರಸ್ಕøತ-2

ವಾರ್ಡ್ 28- ವಿಜೇತ ಅಭ್ಯರ್ಥಿ: ಸುರೇಶ್ (ಬಿಜೆಪಿ)-979
ಇತರೆ ಅಭ್ಯರ್ಥಿಗಳು-ರಂಗಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-368
ಎಂ.ಮೂರ್ತಿ (ಬಿ.ಎಸ್.ಪಿ.)-94
ನೋಟಾ-23

ವಾರ್ಡ್ 29-ವಿಜೇತ ಅಭ್ಯರ್ಥಿ: ಪಿ.ಸುಧಾ (ಬಿಜೆಪಿ)-726
ಇತರೆ ಅಭ್ಯರ್ಥಿಗಳು-ಶೋಭ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-238
ಬೇಬಿ (ಪಕ್ಷೇತರ)-154
ಜಯಶ್ರೀ.ಎನ್ (ಬಿ.ಎಸ್.ಪಿ.)-37
ನೋಟಾ-18

ವಾರ್ಡ್ 30-ವಿಜೇತ ಅಭ್ಯರ್ಥಿ: ಮಹದೇವಯ್ಯ (ಬಿಜೆಪಿ)-551
ಇತರೆ ಅಭ್ಯರ್ಥಿಗಳು-ಎಂ.ಶಿವಮೂರ್ತಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-513
ಮಹದೇವಪ್ರಸಾದ್ (ಬಿ.ಎಸ್.ಪಿ.)-310
ಬಸವರಾಜು (ಪಕ್ಷೇತರ)-252
ಶಿವಕುಮಾರ.ಎಂ (ಪಕ್ಷೇತರ)-53
ನೋಟಾ-12
ತಿರಸ್ಕøತ-1

ವಾರ್ಡ್ 31-ವಿಜೇತ ಅಭ್ಯರ್ಥಿ: ಆರ್.ಎಂ.ರಾಜಪ್ಪ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-523
ಇತರೆ ಅಭ್ಯರ್ಥಿಗಳು-ನಂಜುಂಡಸ್ವಾಮಿ (ಬಿಜೆಪಿ)-502
ಗುಜ್ಜಯ್ಯ (ಬಿ.ಎಸ್.ಪಿ.)-15
ಸುರೇಶ.ಬಿ.ಎನ್ (ಪಕ್ಷೇತರ)-8
ಎಸ್.ಶ್ರೀಕಂಠಮೂರ್ತಿ (ಪಕ್ಷೇತರ)-5
ನೋಟಾ-5
 -______________________________________________________________________________



 *ನಗರಸಭೆಯ ಪಕ್ಷವಾರು ವಿವರ.*
ಬಿಜೆಪಿ- 15.
ಕಾಂಗ್ರೆಸ್- 08.
ಪಕ್ಷೇತರ- 01.
ಎಸ್.ಡಿ.ಪಿ.ಐ-06.
ಬಿಎಸ್.ಪಿ- 01
ಒಟ್ಟು-31.

_____________________________________________________________

ಕೊಳ್ಳೇಗಾಲ ನಗರಸಭೆ ಚುನಾವಣೆ ಫಲಿತಾಂಶ 

ಚಾಮರಾಜನಗರ, sಸೆ.03 :- ಜಿಲ್ಲೆಯ ಕೊಳ್ಳೇಗಾಲ ನಗರಸಭೆಗೆ ನಡೆದ ಚುನಾವಣೆ ಸಂಬಂಧ ಮತ ಎಣಿಕೆ ಕಾರ್ಯ ಇಂದು ನಡೆದು ಫಲಿತಾಂಶ ಹೊರಬಿದ್ದಿದೆ. 
ಕೊಳ್ಳೇಗಾಲ ನಗರಸಭೆಯ 29 ವಾರ್ಡುಗಳಿಗೆ ಚುನಾವಣೆ ನಡೆದಿತ್ತು. 6ನೇ ವಾರ್ಡಿನಿಂದ ಬಹುಜನ ಸಮಾಜ ಪಾರ್ಟಿಯ ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. 9ನೇ ವಾರ್ಡಿನಲ್ಲಿ ಅಭ್ಯರ್ಥಿ ಒರ್ವರ ನಿಧನದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ. 
 ಕಾಂಗ್ರೆಸ್ 11, ಬಿಎಸ್‍ಪಿ 9, ಬಿಜೆಪಿಯ 6 ಹಾಗೂ 4 ಪಕ್ಷೇತರ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ವಾರ್ಡುವಾರು ಫಲಿತಾಂಶ ವಿವರ ಇಂತಿದೆ. 

ವಾರ್ಡ್ 1-ವಿಜೇತ ಅಭ್ಯರ್ಥಿ: ಕವಿತಾ ಪಿ.ಎನ್. (ಪಕ್ಷೇತರ)-618, ಇತರೆ ಅಭ್ಯರ್ಥಿಗಳು-ಸುರಿಯಾ ಬಾನು (ಬಿ.ಎಸ್.ಪಿ)-600, ನೋಟಾ-8.

ವಾರ್ಡ್ 2- ವಿಜೇತ ಅಭ್ಯರ್ಥಿ: ಎಲ್. ನಾಗಮಣಿ (ಬಿ.ಎಸ್.ಪಿ)-348, ಇತರೆ ಅಭ್ಯರ್ಥಿಗಳು-ಭಾಗ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-329, ಶೈಲಜ ಎಂ. (ಬಿಜೆಪಿ)-95, ನಂದಿನಿ (ಪಕ್ಷೇತರ)-217, ಹೆಚ್.ಕೆ. ಶಾಂತಲಕ್ಷ್ಮಿ (ಪಕ್ಷೇತರ)-55, ನೋಟಾ-5, ತಿರಸ್ಕøತ-1.
  
ವಾರ್ಡ್ 3- ವಿಜೇತ ಅಭ್ಯರ್ಥಿ: ಸಿ.ಎನ್. ರೇಖಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-770, ಇತರೆ ಅಭ್ಯರ್ಥಿಗಳು-ಎಲ್. ವಾಣಿ (ಬಿ.ಎಸ್.ಪಿ)-631, ನೋಟಾ-2. 

ವಾರ್ಡ್ 4- ವಿಜೇತ ಅಭ್ಯರ್ಥಿ: ಎಸ್. ಮಂಜುನಾಥ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-773, ಇತರೆ ಅಭ್ಯರ್ಥಿಗಳು-ಸುರೇಶ್ ಪಿ (ಬಿ.ಎಸ್.ಪಿ)-485., ನೋಟಾ-12. 
ವಾರ್ಡ್ 5- ವಿಜೇತ ಅಭ್ಯರ್ಥಿ: ವಿ. ಧರಣೇಶ (ಬಿ.ಜೆ.ಪಿ)-599, ಇತರೆ ಅಭ್ಯರ್ಥಿಗಳು-ಎಂ. ನಟರಾಜು (ಬಿ.ಎಸ್.ಪಿ)-573, ಎಸ್. ವರದರಾಜು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-206, ಎಂ. ಮಹದೇವಶೆಟ್ಟಿ (ಪಕ್ಷೇತರ)-160, ನೋಟಾ-8.

ವಾರ್ಡ್ 6- ವಿಜೇತ ಅಭ್ಯರ್ಥಿ: ಗಂಗಮ್ಮ (ಬಿ.ಎಸ್.ಪಿ). ಅವಿರೋಧ ಆಯ್ಕೆಯಾಗಿದ್ದಾರೆ.

ವಾರ್ಡ್ 7- ವಿಜೇತ ಅಭ್ಯರ್ಥಿ: ನಾಸೀರ್ ಷರೀಫ್ (ಬಿ.ಎಸ್.ಪಿ)-383, ಇತರೆ ಅಭ್ಯರ್ಥಿಗಳು- ಮಹಮ್ಮದ್ ಕೀಜರ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-296, ಡಿ. ಸುರೇಶ್ (ಬಿಜೆಪಿ)-255, ಮಹಮ್ಮದ್ ಇರ್ಫಾನ್ (ಪಕ್ಷೇತರ)-67, ಅಜರ್ ಪಾಷ (ಪಕ್ಷೇತರ)-34, ನೋಟಾ-3. 

ವಾರ್ಡ್ 8-ವಿಜೇತ ಅಭ್ಯರ್ಥಿ:  ಎಂ. ಕವಿತ (ಬಿಜೆಪಿ)-368, ಇತರೆ ಅಭ್ಯರ್ಥಿಗಳು-ಎಸ್. ಸುಶೀಲ (ಬಿ.ಎಸ್.ಪಿ)-365, ಪೂರ್ಣಿಮ. ವಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-263, ನೋಟಾ-14.

 ವಾರ್ಡ್ 10-ವಿಜೇತ ಅಭ್ಯರ್ಥಿ: ಜಿ.ಪಿ. ಶಿವಕುಮಾರ್ (ಬಿಜೆಪಿ)-920, ಇತರೆ ಅಭ್ಯರ್ಥಿಗಳು-ಎಸ್. ಮಹದೇವಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-305, ಆನಂದ ಪಿ. (ಬಿ.ಎಸ್.ಪಿ)-276, ನೋಟಾ-19.

 ವಾರ್ಡ್ 11-ವಿಜೇತ ಅಭ್ಯರ್ಥಿ:  ಮನೋಹರ ಎಸ್.ಆರ್. (ಪಕ್ಷೇತರ)-519, ಇತರೆ ಅಭ್ಯರ್ಥಿಗಳು ಎನ್. ರವಿಬಾಬು (ಬಿಜೆಪಿ)-419, ಎಸ್. ಸುಬ್ರಮಣ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-178, ಜಿ. ಲಕ್ಷ್ಮಿಕಾಂತ (ಬಿ.ಎಸ್.ಪಿ)-150, ನಾಗ (ಪಕ್ಷೇತರ)-124, ನೋಟಾ-7.

 ವಾರ್ಡ್ 12-ವಿಜೇತ ಅಭ್ಯರ್ಥಿ: ಸಿ.ಎಂ. ಪರಮೇಶ್ವರಯ್ಯ (ಬಿಜೆಪಿ)-484, ಇತರೆ ಅಭ್ಯರ್ಥಿಗಳು-ಪಿ.ಎಂ. ಕೃಷ್ಣಯ್ಯ (ಜನತಾದಳ) ಜಾತ್ಯತೀತ)-294, ಆರ್. ರಾಜೇಶ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-27, ನೋಟಾ-4.
 
 ವಾರ್ಡ್ 13-ವಿಜೇತ ಅಭ್ಯರ್ಥಿ: ಎನ್. ಪವಿತ್ರ (ಬಿ.ಎಸ್.ಪಿ)-290, ಇತರೆ ಅಭ್ಯರ್ಥಿಗಳು-ಎಸ್.ರೂಪ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-200, ಡಿ.ಕೆ. ಯಮುನ ಮಧುಚಂದ್ರ (ಪಕ್ಷೇತರ)-166, ಎನ್. ಪದ್ಮಾವತಿ (ಬಿಜೆಪಿ)-57, ರತ್ನಮ್ಮ (ಪಕ್ಷೇತರ)-6, ನೋಟಾ-3.
 
      ವಾರ್ಡ್ 14-ವಿಜೇತ ಅಭ್ಯರ್ಥಿ: ಎ.ಪಿ. ಶಂಕರ್ (ಪಕ್ಷೇತರ)-501, ಇತರೆ ಅಭ್ಯರ್ಥಿಗಳು ಲಕ್ಷ್ಮಿಪತಿ ಕೆ.ಎಸ್. ಬಿಜೆಪಿ)-392, ಎಸ್.ವಿ. ಪರಮೇಶ್ವರಯ್ಯ(ಪಮ್ಮಿ) (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-291, ಎನ್. ವೇಣುಗೋಪಾಲ್ (ಬಿ.ಎಸ್.ಪಿ)-64, ನೋಟಾ-4.
     
ವಾರ್ಡ್ 15-ವಿಜೇತ ಅಭ್ಯರ್ಥಿ: ಎಸ್. ರಾಘವೇಂದ್ರ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-627, ಇತರೆ ಅಭ್ಯರ್ಥಿಗಳು ಮಹಮ್ಮದ್ ಶಫೀರ್ (ಬಿ.ಎಸ್.ಪಿ)-375, ನೋಟಾ-4. 

ವಾರ್ಡ್ 16- ವಿಜೇತ ಅಭ್ಯರ್ಥಿ: ಸಿರೀಶ ಸತೀಶ (ಬಿಜೆಪಿ)-312, ಇತರೆ ಅಭ್ಯರ್ಥಿಗಳು ರಾಜೇಶ್ವರಿ ನಾರಾಯಣ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-261, ತಿರಸ್ಕøತ-1.

ವಾರ್ಡ್ 17- ವಿಜೇತ ಅಭ್ಯರ್ಥಿ: ಶಾಂತರಾಜು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-483, ಇತರೆ ಅಭ್ಯರ್ಥಿಗಳು ಮಹೇಶ ಆರ್. (ಬಿಜೆಪಿ)-188, ರಾಜಪ್ಪ (ಬಿ.ಎಸ್.ಪಿ)-53, ಅವಿನಾಶ್ ಎಂ. (ಪಕ್ಷೇತರ)-19, ನೋಟಾ-7, ತಿರಸ್ಕøತ-1.

ವಾರ್ಡ್ 18- ವಿಜೇತ ಅಭ್ಯರ್ಥಿ ಶಂಕರನಾರಾಯಣ ಗುಪ್ತ ಎಸ್. (ಪಕ್ಷೇತರ)-307, ಇತರೆ ಅಭ್ಯರ್ಥಿಗಳು ಮಂಜುನಾಥ ಎನ್. (ಬಿಜೆಪಿ)-63, ಮಹೇಶ್ ಎಸ್. ಶ್ರೀನಿಧಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-239, ಬಸವಲಿಂಗಪ್ಪ ಎಸ್.ಎಂ (ಬಿ.ಎಸ್.ಪಿ)-70, ಮಹೇಶ್ ಜೆ.ಪಿ. (ಪಕ್ಷೇತರ)-26, ಸುಮಾ ಆರ್. (ಪಕ್ಷೇತರ)-248, ನೋಟಾ-4.

ವಾರ್ಡ್ 19- ವಿಜೇತ ಅಭ್ಯರ್ಥಿ ಸುಧಾ ಬಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-415, ಇತರೆ ಅಭ್ಯರ್ಥಿಗಳು ನವ್ಯಜ್ಯೋತಿ ಬಿ.ಆರ್. (ಬಿಜೆಪಿ)-215, ಸರಸ್ವತಿ (ಬಿ.ಎಸ್.ಪಿ)-268, ಅಪ್ಸನಾ ಬಾನು (ಪಕ್ಷೇತರ)-23, ನೋಟಾ-3.

ವಾರ್ಡ್ 20- ವಿಜೇತ ಅಭ್ಯರ್ಥಿ ಸುಮೇರಾ ಬೇಗಂ ಅಕ್ಮಲ್ ಪಾಷ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-1007, ಇತರೆ ಅಭ್ಯರ್ಥಿಗಳು ರಿಜ್ವಾನ ಬಾನು (ಬಿ.ಎಸ್.ಪಿ)-334, ಆಶಾ (ಪಕ್ಷೇತರ)-68, ಸಫೀನಾ ಕೌಸರ್ (ಪಕ್ಷೇತರ)-123, ನೋಟಾ-7.

ವಾರ್ಡ್ 21- ವಿಜೇತ ಅಭ್ಯರ್ಥಿ ಪ್ರಕಾಶ್ ಶಂಕನಪುರ (ಬಿ.ಎಸ್.ಪಿ)-591, ಇತರೆ ಅಭ್ಯರ್ಥಿಗಳು ಜಯಪ್ರಕಾಶ್ ಡಿ. (ಬಿಜೆಪಿ)-27, ಮೂರ್ತಿ ಎಸ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-396, ಲೋಕೇಶ್ ಎಂ.ಆರ್. (ಪಕ್ಷೇತರ)-19, ನೋಟಾ-5.

ವಾರ್ಡ್ 22- ವಿಜೇತ ಅಭ್ಯರ್ಥಿ ಪ್ರಶಾಂತ್ ಎಸ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-622, ಇತರೆ ಅಭ್ಯರ್ಥಿಗಳು ರಾಮಕೃಷ್ಣ ಆರ್ (ಬಿ.ಎಸ್.ಪಿ)-278, ನೋಟಾ-5.

ವಾರ್ಡ್ 23- ವಿಜೇತ ಅಭ್ಯರ್ಥಿ ಜಯಮರಿ ಜಿ. (ಬಿ.ಎಸ್.ಪಿ)-713, ಇತರೆ ಅಭ್ಯರ್ಥಿಗಳು ,ಶೀಲಾ ಆರ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-365, ಶೋಭ ಎಂ. (ಪಕ್ಷೇತರ)-248, ನೋಟಾ-9. 

ವಾರ್ಡ್ 24- ವಿಜೇತ ಅಭ್ಯರ್ಥಿ ಜಯರಾಜು (ಬಿ.ಎಸ್.ಪಿ)-283, ಇತರೆ ಅಭ್ಯರ್ಥಿಗಳು ಪುಟ್ಟಸ್ವಾಮಿ ಸಿ. (ಬಿಜೆಪಿ)-84, ಪ್ರಕಾಶ ಎಸ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-175, ನೋಟಾ-5, ತಿರಸ್ಕøತ-3. 

ವಾರ್ಡ್ 25- ವಿಜೇತ ಅಭ್ಯರ್ಥಿ ರಾಮಕೃಷ್ಣ ಎನ್. (ಬಿ.ಎಸ್.ಪಿ.)-162, ಇತರೆ ಅಭ್ಯರ್ಥಿಗಳು, ಸೋಮಯ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-60, ಲೋಕೇಶ್ ಎನ್. (ಬಿಜೆಪಿ)-144, ನೋಟಾ-3. 

ವಾರ್ಡ್ 26- ವಿಜೇತ ಅಭ್ಯರ್ಥಿ ನಾಗಸುಂದ್ರಮ್ಮ (ಬಿ.ಎಸ್.ಪಿ.)-1019, ಇತರೆ ಅಭ್ಯರ್ಥಿಗಳು ಶ್ವೇತಾ ವಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-250,  ಕೆ. ದಿವ್ಯಜ್ಯೋತಿ (ಬಿಜೆಪಿ)-15, ಮಂಗಳಮ್ಮ (ಪಕ್ಷೇತರ)-19, ಶ್ವೇತ ಎಂ. (ಪಕ್ಷೇತರ)-36, ನೋಟಾ-7.

ವಾರ್ಡ್ 27- ವಿಜೇತ ಅಭ್ಯರ್ಥಿ ಪುಷ್ಪಲತಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-385, ಇತರೆ ಅಭ್ಯರ್ಥಿಗಳು ಮಹದೇವಮ್ಮ (ಬಿ.ಎಸ್.ಪಿ.)-194, ಚಂದ್ರಕಲಾ (ಬಿಜೆಪಿ)-22, ಆರ್. ಭಾಗ್ಯ (ಪಕ್ಷೇತರ)-167, ಎಂ.ಆರ್. ರಾಜೇಶ್ವರಿ (ಪಕ್ಷೇತರ)-185, ನೋಟಾ-4.

ವಾರ್ಡ್ 28- ವಿಜೇತ ಅಭ್ಯರ್ಥಿ ಚಿಕ್ಕತಾಯಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-557, ಇತರೆ ಅಭ್ಯರ್ಥಿಗಳು ನಾಗಶ್ರೀ (ಬಿ.ಎಸ್.ಪಿ.)-223, ಆರ್. ಆಶಾರಾಣಿ (ಬಿಜೆಪಿ)-321, ನೋಟಾ-10.

ವಾರ್ಡ್ 29- ವಿಜೇತ ಅಭ್ಯರ್ಥಿ ಜಿ. ರಮ್ಯ (ಬಿಜೆಪಿ)-693, ಇತರೆ ಅಭ್ಯರ್ಥಿಗಳು ರಾಜೇಶ್ವರಿ ಸಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-338, ಲತಾ (ಬಿ.ಎಸ್.ಪಿ.)-120, ನೋಟಾ-7. 

ವಾರ್ಡ್ 30- ವಿಜೇತ ಅಭ್ಯರ್ಥಿ ಜಿ.ಎಂ. ಸುರೇಶ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-505, ಇತರೆ ಅಭ್ಯರ್ಥಿಗಳು ಎಂ. ಮಾದೇಶ (ಬಿ.ಎಸ್.ಪಿ.)-401, ನೋಟಾ-5.

ವಾರ್ಡ್ 31- ವಿಜೇತ ಅಭ್ಯರ್ಥಿ ಆರ್. ಸುಶೀಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-631, ಇತರೆ ಅಭ್ಯರ್ಥಿಗಳು ಶಿವಲಿಂಗಮ್ಮ (ಬಿ.ಎಸ್.ಪಿ.)-350, ಜ್ಯೋತಿ ಎ. (ಬಿಜೆಪಿ)-222, ನೋಟಾ-17.


ಸೆ. 4 ರಂದು ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ
ಚಾಮರಾಜನಗರ, ಸೆ. 3   ಚಾಮರಾಜನಗರ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪಧವೀಧರ ಪ್ರಾಥಮಿಕ ಶಿಕ್ಷಕರ (6ರಿಂದ8) ವೃಂದದ ನೇಮಕಾತಿಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಇಂಗ್ಲೀಷ್ ಹಾಗೂ ಸಮಾಜಶಾಸ್ತ್ರ ಭಾಷಾ ಶಿಕ್ಷಕರ ಹುದ್ದೆಗಳಿಗೆ ಸೆಪ್ಟೆಂಬರ್ 4ರಂದು ಬೆಳಿಗ್ಗೆ 10 ಗಂಟೆಗೆ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ಕಾರ್ಯವು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ಜಿಲ್ಲಾಮಟ್ಟದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಿದ್ದು ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಆಕ್ಷೇಪಣೆಗಳಿದ್ದರೆ ಕಚೇರಿಯ ಸ್ವೀಕೃತಿ ವಿಭಾಗಕ್ಕೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08226-222406 ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 5ರಂದು ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ 
ಚಾಮರಾಜನಗರ, ಸೆ. 03  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಎನ್. ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು. 
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವರು. 
ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, , ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧಮೇಂಧರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವವರ ವಿವರ 
ಚಾಮರಾಜನಗರ, ಸೆ. 03  ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ 2018-19ನೇ ಸಾಲಿನ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಗೆ 3 ವಿಭಾಗಗಳಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಎಂ. ಡಿ. ಮಹದೇವಯ್ಯ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಪುರ, ಗುಂಡ್ಲುಪೇಟೆ ತಾಲ್ಲೂಕು: ಜಯರಾಮು, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಟಿಪುರ, ಕೊಳ್ಳೇಗಾಲ ತಾಲ್ಲೂಕು: ಡಿ. ಮಹಾದೇವ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೆಲ್ಲಳ್ಳಿಮಾಳ, ಹನೂರು ತಾಲ್ಲೂಕು: ತನುಜ ಫಾತೀಮ ಬ್ರಿಟ್ಟೋ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಡಯ್ಯನಪಾಳ್ಯ, ಯಳಂದೂರು ತಾಲ್ಲೂಕು: ಕೆ. ಪುಟ್ಟಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮದ್ದೂರು. 

ಹಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಆರ್. ಚಿಕ್ಕಬಸವ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ. ಗುಂಡ್ಲುಪೇಟೆ ತಾಲ್ಲೂಕು: ಲತ್ತೀಶ್ಯ ಚಿನ್ನಪ್ಪ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಲಸೂರು, ಕೊಳ್ಳೇಗಾಲ ತಾಲ್ಲೂಕು: ಎಸ್. ನಾಗರಾಜು, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೀಮನಗರ. ಹನೂರು ತಾಲ್ಲೂಕು: ಎಸ್. ಕೃಷ್ಣ, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಿನ್ನಹಳ್ಳಿ, ಯಳಂದೂರು ತಾಲ್ಲೂಕು: ನಂಜುಂಡಸ್ವಾಮಿ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು-2.
ಪ್ರೌಢಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಕೆಂಪಣ್ಣ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡರಾಯಪೇಟೆ, ಗುಂಡ್ಲುಪೇಟೆ ತಾಲ್ಲೂಕು: ಮಹದೇವಸ್ವಾಮಿ, ಸಹ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಬೇಗೂರು. ಕೊಳ್ಳೇಗಾಲ ತಾಲ್ಲೂಕು: ಚಿಕ್ಕರಾಜು, ಹಿಂದಿ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡಿಂದವಾಡಿ, ಹನೂರು ತಾಲ್ಲೂಕು: ಪಿ.ಸಿ. ನಿರ್ಮಲ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ರಾಮಾಪುರ, ಯಳಂದೂರು ತಾಲ್ಲೂಕು: ಪಿ.ಬಿ. ಲಕ್ಷ್ಮಿ, ಸಹ ಶಿಕ್ಷಕರು, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಯಳಂದೂರು ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರು ಸೆಪ್ಟೆಂಬರ್ 5ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 1 September 2018

ನೇರ ಫೊನ್-ಇನ್ ಕಾರ್ಯಕ್ರಮ: 35 ದೂರು ದಾಖಲು, ನಗರಸಭೆ ಚುನಾವಣೆ: ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಅಂಚೆ ಮತಪತ್ರದ ಮೂಲಕ ಮತ ಚಲಾವಣೆ (24-08-2018/27-08-2018)


ನಗರಸಭೆ ಚುನಾವಣೆ: ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಅಂಚೆ ಮತಪತ್ರದ ಮೂಲಕ ಮತ ಚಲಾವಣೆ   

ಚಾಮರಾಜನಗರ, ಆ. 24- ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕೆಲಸ ಕಾರ್ಯಗಳಿಗೆ ನಿಯೋಜಿತರಾದ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಮತದಾರರ ಪಟ್ಟಿಯಲ್ಲಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ನೌಕರರುಗಳು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದಾಗಿದೆ.
ಚುನಾವಣಾ ಕರ್ತವ್ಯದಲ್ಲಿರುವ ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಮತದಾರರ ಘೋಷಣೆ ಮತ್ತು ಪ್ರಮಾಣ ಪತ್ರ ನೀಡಿ ಪ್ರಪತ್ರ-14ಬಿ ಯ ಅಂಚೆ ಮತಪತ್ರವನ್ನು ಪಡೆದು ಭರ್ತಿಮಾಡಿ ಸೆಪ್ಟೆಂಬರ್ 2ರೊಳಗೆ ಆಯಾ ತಾಲೂಕು ತಹಶೀಲ್ದಾರರ ಕಚೇರಿಗೆ ತಲುಪಿಸಬೇಕು.
ಆಗಸ್ಟ್ 2ರ ನಂತರ ಸ್ವೀಕೃತಿಯಾದ ಅಂಚೆ ಮತಪತ್ರಗಳನ್ನು ಚಾಮರಾಜನಗರ ನಗರಸಭೆಗೆ ಸಂಬಂಧಿಸಿದ ಅಂಚೆ ಮತಪತ್ರದ ಮತದಾರರು ಮಸ್ಟರಿಂಗ್ ಕೇಂದ್ರವಾದ ಸರ್ಕಾರಿ ಪಾಲಿಟೆಕ್ನಿಕ್, ಚಾಮರಾಜನಗರ ಇಲ್ಲಿಗೆ ಆಗಸ್ಟ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಮತ್ತು ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದ ಮತದಾರರು ಮಸ್ಟರಿಂಗ್ ಕೇಂದ್ರವಾದ ಎಂ.ಜಿ.ಎಸ್.ವಿ. ಜೂನಿಯರ್ ಕಾಲೇಜು, ಕೊಳ್ಳೇಗಾಲ ಇಲ್ಲಿಗೆ ಆಗಸ್ಟ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಚಾಮರಾಜನಗರ, ಆ. 24 - ಕೃಷಿ ಸಚಿವರಾದ ಎನ್. ಎಚ್. ಶಿವಶಂಕರ ರೆಡ್ಡಿ ಆಗಸ್ಟ್ 27ರಂದು ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ತಾಲೂಕಿನ ಹೊಂಡರಬಾಳುವಿಗೆ ಆಗಮಿಸುವ ಸಚಿವರು ಅಮೃತಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಕೃಷಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಣೆ ಮಾಡುವರು. ನಂತರ ರೈತರೊಂದಿಗೆ ಚರ್ಚೆ ನಡೆಸುವರು.
11 ಗಂಟೆಗೆ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ಕೃಷಿ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸುವರು.
ನಂತರ 4.45 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಮತ್ತು ಹರಳೆ ಗ್ರಾಮದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಚರ್ಚಿಸುವರು. ಸಂಜೆ 5.30 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 25ರಂದು ಶ್ರೀಕೃಷ್ಣ ಜಯಂತಿ ಪೂರ್ವಭಾವಿ ಸಭೆÀ

ಚಾಮರಾಜನಗರ, ಆ. 24 - ಜಿಲ್ಲಾಡಳಿತದ ವತಿಯಿಂದ ಜಿಲ್ಲಾಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಆಚರಿಸುವ ಸಲುವಾಗಿ ಆಗಸ್ಟ್ 25ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.
ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಸಮುದಾಯದ ಮುಖಂಡರುಗಳ ಸಭೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.


ಆಗಸ್ಟ್ 27ರಂದು ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ
ಚಾಮರಾಜನಗರ, ಆ. 24 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿಯವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ಅವರ ಕುರಿತು ಈಚನೂರು ಕುಮಾರ್ ಅವರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘಸಂಸ್ಥೆಯ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಭಾಗವಹಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ.

ಚಾಮರಾಜನಗರ, ಆ. 24 - ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕೆಲಸ ಕಾರ್ಯಗಳಿಗೆ ನಿಯೋಜಿತರಾದ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಮತದಾರರ ಪಟ್ಟಿಯಲ್ಲಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ನೌಕರರುಗಳು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದಾಗಿದೆ.
ಚುನಾವಣಾ ಕರ್ತವ್ಯದಲ್ಲಿರುವ ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಮತದಾರರ ಘೋಷಣೆ ಮತ್ತು ಪ್ರಮಾಣ ಪತ್ರ ನೀಡಿ ಪ್ರಪತ್ರ-14ಬಿ ಯ ಅಂಚೆ ಮತಪತ್ರವನ್ನು ಪಡೆದು ಭರ್ತಿಮಾಡಿ ಸೆಪ್ಟೆಂಬರ್ 2ರೊಳಗೆ ಆಯಾ ತಾಲೂಕು ತಹಶೀಲ್ದಾರರ ಕಚೇರಿಗೆ ತಲುಪಿಸಬೇಕು.
ಸೆಪ್ಟೆಂಬರ್ 2ರ ನಂತರ ಸ್ವೀಕೃತಿಯಾದ ಅಂಚೆ ಮತಪತ್ರಗಳನ್ನು ಚಾಮರಾಜನಗರ ನಗರಸಭೆಗೆ ಸಂಬಂಧಿಸಿದ ಅಂಚೆ ಮತಪತ್ರದ ಮತದಾರರು ಮಸ್ಟರಿಂಗ್ ಕೇಂದ್ರವಾದ ಸರ್ಕಾರಿ ಪಾಲಿಟೆಕ್ನಿಕ್, ಚಾಮರಾಜನಗರ ಇಲ್ಲಿಗೆÉ ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಮತ್ತು ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದ ಮತದಾರರು ಮಸ್ಟರಿಂಗ್ ಕೇಂದ್ರವಾದ ಎಂ.ಜಿ.ಎಸ್.ವಿ. ಜೂನಿಯರ್ ಕಾಲೇಜು, ಕೊಳ್ಳೇಗಾಲ ಇಲ್ಲಿಗೆ ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ತಲುಪುವಂತೆ ಅಂಚೆ ಮೂಲಕ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


      ನಗರಸಭೆ ಚುನಾವಣೆ: ವೀಕ್ಷಕರ ನೇಮಕ

ಚಾಮರಾಜನಗರ, ಆ. 25 :- ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರು ನೇಮಕವಾಗಿದ್ದು, ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.
ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಅನಿತಾಲಕ್ಷ್ಮೀ, ಮುಖ್ಯ ಆಡಳಿತಧಿಕಾರಿಗಳು, ವಿ.ಜೆ.ಎನ್.ಎಲ್. ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9449116870 ಆಗಿದೆ. ಇವರ ಸಂಪರ್ಕ ಅಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನದ ಡಿ.ವೈ.ಪಿ.ಸಿ ಸಿ.ಎನ್. ರಾಜು ಕಾರ್ಯ ನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481545929 ಆಗಿದೆ.
ಚುನಾವಣಾ ವೆಚ್ಚ ವೀಕ್ಷಕರಾಗಿ ಅರ್ಥಿಕ ಇಲಾಖೆ(ವಿತ್ತೀಯ ಸುಧಾರಣೆ)ಯ ಉಪನಿಯಂತ್ರಕರು (ಅರ್ಥಿಕ ನಿರ್ವಹಣೆ) ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9035236236 ಆಗಿರುತ್ತದೆ. ಇವರ ಸಂಪರ್ಕ ಅಧಿಕಾರಿಯಾಗಿ ಚಾಮರಾಜನಗರ ತಾಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿ ದೇವನಾಯಕ ಅವರು ಕಾರ್ಯನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481817232ಆಗಿದೆ.
ಚುನಾವಣಾ ವೀಕ್ಷಕರನ್ನು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ನಗರಸಭೆ ಚುನಾವಣೆ: ವೀಕ್ಷಕರ ನೇಮಕ

ಚಾಮರಾಜನಗರ, ಆ. 25 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರು ನೇಮಕವಾಗಿದ್ದು, ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.
ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಅನಿತಾಲಕ್ಷ್ಮೀ, ಮುಖ್ಯ ಆಡಳಿತಧಿಕಾರಿಗಳು, ವಿ.ಜೆ.ಎನ್.ಎಲ್. ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9449116870 ಆಗಿದೆ. ಇವರ ಸಂಪರ್ಕ ಅಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನದ ಡಿ.ವೈ.ಪಿ.ಸಿ ಸಿ.ಎನ್. ರಾಜು ಕಾರ್ಯ ನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481545929 ಆಗಿದೆ.
ಚುನಾವಣಾ ವೆಚ್ಚ ವೀಕ್ಷಕರಾಗಿ ಹೈದರ್ ಅಲಿ ಖಾನ್. ಕೆ, ಅರ್ಥಿಕ ಇಲಾಖೆ(ವಿತ್ತೀಯ ಸುಧಾರಣೆ)ಯ ಉಪನಿಯಂತ್ರಕರು (ಅರ್ಥಿಕ ನಿರ್ವಹಣೆ) ಬೆಂಗಳೂರು ಇವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ: 9035236236 ಆಗಿರುತ್ತದೆ. ಇವರ ಸಂಪರ್ಕ ಅಧಿಕಾರಿಯಾಗಿ ಚಾಮರಾಜನಗರ ತಾಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿ ದೇವನಾಯಕ ಅವರು ಕಾರ್ಯನಿರ್ವಹಿಸುತ್ತಿದ್ದು, ಇವರ ಮೊಬೈಲ್ ಸಂಖ್ಯೆ: 9481817232ಆಗಿದೆ.
ಚುನಾವಣಾ ವೀಕ್ಷಕರನ್ನು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶ ಸುಧಾರಣೆ ಪ್ರಸ್ತುತ ಸಂದರ್ಭಕ್ಕೂ ಅವಶ್ಯ:ಡಿ.ಸಿ.ಬಿ.ಬಿ ಕಾವೇರಿ
ಚಾಮರಾಜನಗರ, ಆ. 27 - ಬ್ರಹ್ಮಶ್ರೀ ನಾರಾಯಣ ಗುರು ಅವರು 19 ನೇ ಶತಮಾನದಲ್ಲಿ ಆರಂಭಿಸಿದ ಸಾಮಾಜಿಕ ಸುದಾರಣೆಗಳು ಪ್ರಸ್ತುತ ಸಂಧರ್ಭಕ್ಕೂ ಅವಶ್ಯಕವಾಗಿವೆ ಎಂದು ಜಿಲ್ಲಾಧಿಕಾರಿ ಬಿ ಬಿ ಕಾವೇರಿ ಅವರು ಅಭಿಪ್ರಾಯ ಪಟ್ಟರು.
ನಗರದ ಜೆ. ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತಯು ಸಂಸೃತಿ ಇಲಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಬ್ರಹ್ಮಶ್ರೀ ನಾರಾಯಣಗುರು ಅವರು ಸಾಮಾಜಿಕ ಸಮಾನತೆಗೆ ಅನೇಕ ಸುದಾರಣೆಗಳನ್ನು ತಂದರು ಎಲ್ಲಾ ಜಾತಿಗಳು ಸಮಾನ ಎಂದು ಪ್ರತಿಪಾದಿಸಿದರು.  ಅವರ ಸಮಾಜ ಮುಖಿ ಸುಧಾರಣೆಗಳು ಇಂದಿಗೂ ಅಗತ್ಯವಾಗಿವೆ ಎಂದು ಕಾವೇರಿ ಅವರು ತಿಳಿಸಿದರು. 
ನಾರಾಯಣಗುರು ಅವರ ಕೊಡುಗೆ ಸಾಧನೆ, ಕೆಲಸಗಳು ಉತ್ತೇಜನಕಾರಿಯಾಗಿದೆ.  ಅವರ ಪ್ರಭಾವದಿಂದ ಅನೇಕ ಬದಲಾವಣೆಗಳು ಆಗಿವೆ.  ವಿಶೇಷವಾಗಿ ಕೇರಳ ರಾಜ್ಯದಲ್ಲಿ ಅವರು ಹಾಕಿಕೊಟ್ಟ ಅಡಿಗಲ್ಲಿನ ಮೇಲೆ ಬಹಳಷ್ಟು ಪ್ರಮುಖ ಸಾಧನೆಗಳು ಆಗಿವೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ||ಕೆ.ಹರೀಶ್‍ಕುಮಾರ್ ಅವರು ಮಾತನಾಡಿ ನಾರಾಯಣಗುರು ಅವರ ಕಾಲದಲ್ಲಿ ಮೂಢನಂಬಿಕೆ ಮೇಲು-ಕೀಳು ಇನ್ನಿತರ ಪರಿಸ್ಥಿತಿ ಇತ್ತು, ಅಂತಹ ಸಮಯದಲ್ಲಿ ಸುಧಾರಣೆಗೆ ಅಪಾರವಾಗಿ ಶ್ರಮಿಸಿ ಅರಿವು ಮೂಡಿಸಲು ನಾರಾಯಣಗುರು ಅವರು ಮುಂದಾದರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅರಿವು ಮೂಡಿಸುವ ಕೆಲಸ ಇಂದೂ ಸಹ ಮುಂದುವರಿಯಬೇಕಿದೆ ಎಂದರು. 
ನಾರಾಯಣಗುರು ಅವರ ಚಿಂತನೆ ಹಾದಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೂ ಚಿಂತನೆ ನಡೆಸಬೇಕಿದೆ ಹೊಸ ಸಮಾಜ ನಿರ್ಮಾಣ ಮಾಡುವಲ್ಲಿ ನಾರಾಯಣಗುರು ಅವರ ಆದರ್ಶಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ಹರೀಶ್‍ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಉಪನ್ಯಾಸ ನೀಡಿದ ಖ್ಯಾತ ಬರಹಗಾರರಾದ ಈಚನೂರು ಕುಮಾರ್ ಮಾತನಾಡಿ ನಾರಾಯಣಗುರು ಅವರು ತೋರಿಸಿದ ಸನ್ಮಾರ್ಗ ಸಮಾಜಮುಖಿ ಕಾರ್ಯಗಳು ಇನ್ನೂ ಜೀವಂತವಾಗಿವೆ. ಆದರೆ ಅವರು ನೀಡಿದ ಮಾರ್ಗದರ್ಶನವನ್ನು ಪಾಲನೆ ಮಾಡಲಾಗುತ್ತಿಲ್ಲ ಎಂದು ವಿಷಾದಿಸಿದರು. 
ಕೆಳಸಮುದಾಯದ ಜನರ ಮನೆಗೆ ಹೋಗಿ ಅವರೊಂದಿಗೆ ಸಹ ಬೋಜನ ಮಾಡಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ಮಾಡಿದರು.  ಮೌಢ್ಯತೆ, ಜಾತಿ ನಿರ್ಮೂಲನೆಗೆ ವಿಶೇಷವಾಗಿ ಶ್ರಮಿಸಿದರು.  ಅವರು ಹಾಕಿಕೊಟ್ಟ ನೀತಿಯನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಈಚನೂರು ಕುಮಾರ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚೆನ್ನಪ್ಪ, ಸಮಾಜದ ಮುಖಂಡರಾದ ವೆಂಕಟೇಶ್, ಸಂಪತ್, ರಾಜಣ್ಣ, ಪುಟ್ಟಪ್ಪ, ಮೇರು ನಟ ಡಾ||ರಾಜ್ ಕುಮಾರ್ ರವರ ಸಹೋದರಿ ನಾಗಮ್ಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನೇರ ಫೊನ್-ಇನ್ ಕಾರ್ಯಕ್ರಮ: 35 ದೂರು ದಾಖಲು

ಚಾಮರಾಜನಗರ, ಆ. 25 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಒಟ್ಟು 35 ದೂರುಗಳು ದಾಖಲಾಗಿವೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತವಾಗಿ ಒಂದು ಗಂಟೆಗಳ ಕಾಲ ಜಿಲ್ಲೆಯ ನಾನಾ ಭಾಗದಿಂದ ದೂರುಗಳು, ಸಮಸ್ಯೆಗಳನ್ನು ಕರೆ ಮಾಡಿ ತಿಳಿಸಲಾಯಿತು.
ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ, ನಗರದ ಸಂಚಾರ ವ್ಯವಸ್ಥೆ, ಇ-ಸ್ವತ್ತು, ಸ್ವಚ್ಚತೆ ಸೇರಿದಂತೆ ಇತರೆ ವಿಷಯಗಳನ್ನು ಜಿಲ್ಲೆಯ ವಿವಿಧ ಭಾಗಗಳ ಜನರು ಫೋನ್-ಇನ್ ಕಾರ್ಯಕ್ರದಲ್ಲಿ ಪ್ರಸ್ತಾಪಿಸಿದರು.
ಯಳಂದೂರಿನಿಂದ ಕರೆ ಮಾಡಿದ ಸ್ಥಳೀಯರೊಬ್ಬರು ಸುವರ್ಣಾವತಿ ನದಿ ಅಂಚಿನ ತೋಟದಲ್ಲಿ ಮರಳು ತೆಗೆಯಲಾಗುತ್ತಿದೆ ಎಂದರು. ಹರದನಹಳ್ಳಿಯಿಂದ ಮತ್ತೊಬ್ಬರು ಕರೆ ಮಾಡಿ ತಮ್ಮ ಭಾಗದಲ್ಲೂ ಮರಳು ತೆಗೆಯುತ್ತಿರುವ ಬಗ್ಗೆ ದೂರು ನೀಡಿದ್ದೇನೆ. ಆದರೂ ಕ್ರಮ ತೆಗೆದುಕೊಂಡಿಲ್ಲ ಎಂದರು. ಸತ್ತೇಗಾಲ ಪಂಚಾಯಿತಿ ವ್ಯಾಪ್ತಿಗೊಳಪಡುವ ಶಿವನಸಮುದ್ರ ಬಳಿ ಸಹ ಅಕ್ರಮವಾಗಿ ಮರಳು ಸಂಗ್ರಹಣಾ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ದೂರು ನೀಡಿದವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಮತ್ತೊಬ್ಬರು ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.
ಚಾಮರಾಜನಗರದ 26ನೇ ವಾರ್ಡ್, 10ನೇ ವಾರ್ಡ್ ಇತರೆ ಕೆಲವೆಡೆ ಸ್ವಚ್ಚತೆಗೆ ಕ್ರಮ ತೆಗೆದುಕೊಂಡಿಲ್ಲ. ಗಿಡಗಂಟಿಗಳು ಬೆಳೆದು ಸೊಳ್ಳೆ ಹಾವಳಿ ವಿಪರೀತವಾಗಿದೆ ಎಂದು ಸ್ಥಳೀಯರೊಬ್ಬರು ಕರೆ ಮಾಡಿದರು. ಕರಿನಂಜನಪುರ ಹೊಸ ಬಡಾವಣೆಯಲ್ಲಿ ನೀರು, ರಸ್ತೆ ಸೌಲಭ್ಯ ಕಲ್ಪಿಸುವಂತೆ ಇದುವರೆಗೆ 2 ಬಾರಿ ಕೋರಲಾಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮತ್ತೊಬ್ಬರು ಅಸಮಧಾನ ವ್ಯಕ್ತಪಡಿಸಿದರು. ಈ ಸಂಬಂಧ ಉತ್ತರ ನೀಡಿದ ಜಿಲ್ಲಾಧಿಕಾರಿಯವರು ಟೆಂಡರ್ ಪ್ರಕ್ರಿಯೆ ಆಗಿದೆ. ಕಾಮಗಾರಿ ಆರಂಭ ಪ್ರಕ್ರಿಯೆಯು ನಡೆಯಲಿದೆ ಎಂದರು.
ನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ಆಟೋಗಳು ಸಂಚಾರ ನಿಯಮ ಪಾಲನೆ ಮಾಡದೇ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರಿಗೆ, ಇತರೆ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರು ನೀಡಿದರು. ಮತ್ತೊಬ್ಬರು ಕರೆ ಮಾಡಿ ದೊಡ್ಡಂಗಡಿ ಬೀದಿಯಲ್ಲಿ ವಾಹನಗಳ ನಿಲುಗಡೆ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಳವಡಿಸಬೇಕೆಂದು ಕೋರಿದರು.
ಈ ಸಂಬಂಧ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಸಂಚಾರ ನಿಯಮವನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘÀ್ರ ಕ್ರಮ ವಹಿಸಲಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ-ಸ್ವತ್ತು ಅರ್ಜಿ ವಿಲೇವಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಸಹ ಕಾರ್ಯಕ್ರಮದಲ್ಲಿ ಕೇಳಿಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರು ಸಂಬಮಧಪಟ್ಟ ಅಧಿಕಾರಿಗಳು ಈ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ ಎಂದರು.
ಕುಡಿಯುವ ನೀರು, ರಸ್ತೆ ದುರಸ್ಥಿ, ಶೌಚಾಲಯ ಸ್ವಚ್ಚತೆ ಇತರೆ ವಿಷಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳು ಸಹ ಫೊನ್-ಇನ್ ಕಾರ್ಯಕ್ರಮದಲ್ಲಿ ಪ್ರಸ್ತಾಪವಾದವು.
ಜಿಲ್ಲಾ ಪಂಚಾಯತ್ ಮುಖ್ಯ ಕಾಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.



ಅರ್ಥಪೂರ್ಣ ಶ್ರೀಕೃಷ್ಣ ಜಯಂತಿ ಆಚರಣೆಗೆ ನಿರ್ಧಾರ 

ಚಾಮರಾಜನಗರ, ಆ. 25  ಜಿಲ್ಲಾಡಳಿತದ ವತಿಯಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಸಂಬಂಧ ವಿವರವಾಗಿ ಚರ್ಚಿಸಲಾಯಿತು.
ಶ್ರೀಕೃಷ್ಣ ಜಯಂತಿ ಆಚರಣೆಯನ್ನು ಸೂಕ್ತ ದಿನದಲ್ಲಿ ಆಯೋಜಿಸಲು ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲು ಸಹ ಸಭೆ ನಿರ್ಣಯಿಸಿತು.
ಶ್ರೀಕೃಷ್ಣ ಜಯಂತಿ ಆಚರಣೆ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ವೇಷಧಾರಿ ಸ್ಪರ್ಧೆ ಆಯೋಜನೆಗೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಸೂಚನೆ ನೀಡಿದರು.
 ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೆ ಏರ್ಪಾಡು ಮಾಡಬೇಕು. ವೇದಿಕೆ ಅಲಂಕಾರ, ಇತರೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆಗಮಿಸುವವರಿಗೆ ಕುಡಿಯುವ ನೀರು ಸೇರಿದಂತೆ ಅವಸ್ಯಕ ಏರ್ಪಾಡುಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚನ್ನಪ್ಪ, ಸಂಘಟನೆಗಳ ಮುಖಂಡರಾದ ಮಹೇಶ್, ಸುರೇಶ್ ಋಗ್ವೇದಿ, ಜಿ. ಬಂಗಾರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಆ. 27 ರಂದು ನೂತನ ಕೃಷಿ ಮಹಾವಿದ್ಯಾಲಯ ಆರಂಭ

ಚಾಮರಾಜನಗರ, ಆ. 25 - ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರ ವತಿಯಿಂದ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ನೂತನ ಕೃಷಿ ಮಹಾವಿದ್ಯಾಲಯದ ಪ್ರಾರಂಭೋತ್ಸವ ಸಮಾರಂಭ ನಡೆಯಲಿದೆ.
ಕೃಷಿ ಸಚಿವರಾದ ಎನ್.ಹೆಚ್. ಶಿವಶಂಕರ ರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸÀಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಎನ್. ಮಹೇಶ್, ಸಂಸದರಾದ ಅರ್. ಧ್ರುವನಾರಾಯಣ, ಶಾಸಕರಾದ ಅರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಶಾಸಕರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಜಿ.ಪಂ. ಉಪಾಧ್ಯಕ್ಷರಾದ ಜೆ. ಯೋಗೇಶ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ಸದಸ್ಯರಾದ ಎಂ. ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಸದಸ್ಯರಾದ ಹೆಚ್.ಎಂ. ಮಹದೇವಶೆಟ್ಟಿ, ಹರದನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ಬಶೆಟ್ಟಿ ಅವರು ಆಹ್ವಾನಿತ ಗಣ್ಯರಾಗಿ ಪಾಲ್ಗೊಳ್ಳಲಿದ್ದಾರೆ.
ಕೃಷಿ ಇಲಾಖೆಯ ಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಜೆ. ಚಂದ್ರೇಗೌಡ ಅವರುಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಬೆಂಗಳೂರು ಕೃಷಿ ವಿ.ವಿ. ಕುಲಪತಿ ಡಾ. ಎಂ.ಎನ್. ನಟರಾಜು, ವಿಧಾನ ಪರಿಷತ್ ಸದಸ್ಯರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಪ್ರತಾಪ್‍ಚಂದ್ರ ಶೆಟ್ಟಿ, ಎನ್. ಶ್ರೀನಿವಾಸಯ್ಯ, ವಿ. ಸುಬ್ರಮಣಿ, ಹೆಚ್.ಎ. ಶಿವಕುಮಾರ್, ಕೆ.ಎನ್. ಶ್ರೀಕಾಂತ್, ಪ್ರೊ. ಶಕುಂತಲ ಶ್ರೀಧರ್, ನವದೆಹಲಿಯ ಎ.ಡಿ.ಜಿ. ಡಾ. ಪಿ.ಎಸ್. ಪಾಂಡೆ, ಡೀನ್ ಡಾ. ಎಸ್. ರಾಜೇಂದ್ರ ಪ್ರಸಾದ್, ಕುಲ ಸಚಿವರಾದ ಡಾ. ಎ.ಬಿ. ಪಾಟೀಲ, ಕೃಷಿ ಸಂಶೋಧನಾ ನಿರ್ದೇಶಕರಾದ ಡಾ. ವೈ.ಜಿ ಷಡಕ್ಷರಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಎಂ. ಭೈರೇಗೌಡ, ಕೃಷಿ ವಿಭಾಗದ ಡೀನ್ ಡಾ. ಟಿ. ಶಿವಶಂಕರ್, ಡಾ. ಎನ್. ದೇವಕುಮಾರ್, ಡಾ. ಪಿ. ವೆಂಕಟರಮಣ, ಗ್ರಂಥಪಾಲರಾದ ಡಾ. ದೇವರಾಜು, ಹಣಕಾಸು ನಿಯಂತ್ರಣಾಧಿಕಾರಿ ಡಿ. ವಿಜಯ್ ಕುಮಾರ್, ಆಸ್ತಿ ಅಧಿಕಾರಿ ಎಂ. ಎನ್. ದೇವರಾಜ, ಆಡಳಿತಾಧಿಕಾರಿ ಡಾ. ಆರ್. ಎನ್. ಭಾಸ್ಕರ್ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿರಿರುವರು ಎಂದು ಪ್ರಕಟಣೆ ತಿಳಿಸಿದೆ.


ನಗರಸಭೆ ಚುನಾವಣೆ: ಮತದಾನ ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರ ಅಂತ್ಯ 

ಚಾಮರಾಜನಗರ, ಆ. 25 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಲ್ಲ ಅಭ್ಯರ್ಥಿಗಳು ಪಕ್ಷದ ಮುಖಂಡರಿಗೆ ಸೂಚನೆಗಳನ್ನು ನೀಡಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ನಗರಸಭೆ ಚುನಾವಣೆ: ಮದ್ಯ ಮಾರಾಟ ನಿಷೇಧ
ಚಾಮರಾಜನಗರ, ಆ. 25  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಸಂಬಂಧ ಆಗಸ್ಟ್ 31ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಈ ಎರಡು ನಗರಸಭೆ ವ್ಯಾಪ್ತಿಯ ಗಡಿಯಿಂದ 3 ಕಿ.ಮೀ. ಪರಿಧಿಯಲ್ಲಿ ಆಗಸ್ಟ್ 30ರ ಬೆಳಿಗ್ಗೆ 7 ಗಂಟೆಯಿಂದ ಆಗಸ್ಟ್ 31ರ ಮಧ್ಯರಾತ್ರಿಯ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಹಂಚಿಕೆ ಅಕ್ಷಮ್ಯ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಕೃಷಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಆ. 25 :- ಕೃಷಿ ಸಚಿವರಾದ ಎನ್. ಎಚ್. ಶಿವಶಂಕರ ರೆಡ್ಡಿ ಆಗಸ್ಟ್ 27ರಂದು ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ತಾಲೂಕಿನ ಹೊಂಡರಬಾಳುವಿಗೆ ಆಗಮಿಸುವ ಸಚಿವರು ಅಮೃತಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಕೃಷಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಣೆ ಮಾಡುವರು. ನಂತರ ರೈತರೊಂದಿಗೆ ಚರ್ಚೆ ನಡೆಸುವರು.
11 ಗಂಟೆಗೆ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ಕೃಷಿ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸುವರು.
ನಂತರ 4.45 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಮತ್ತು ಹರಳೆ ಗ್ರಾಮದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳ ತಾಕುಗಳ ವೀಕ್ಷಣೆ ಮಾಡಿ ಸ್ಥಳೀಯ ರೈತರೊಂದಿಗೆ ಚರ್ಚಿಸುವರು. ಸಂಜೆ 5.30 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 27ರಂದು ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ
ಚಾಮರಾಜನಗರ, ಆ. 25  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಬ್ರಹ್ಮಶ್ರೀ ನಾರಾಯಣಗುರು ಅವರ ಕುರಿತು ಮೈಸೂರಿನ ಖ್ಯಾತ ಬರಹಗಾರರಾದ ಈಚನೂರು ಕುಮಾರ್ ಅವರು ಉಪನ್ಯಾಸ ನೀಡಲಿದ್ದಾರೆ.
ಚಾಮರಾಜನಗರದ ಜೆ.ಬಿ. ಮಹೇಶ್ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರೆಂದು ಪ್ರಕಟಣೆ ತಿಳಿಸಿದೆ.
   

 




ನಗರಸಭೆ ಚುನಾವಣೆ: ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ (29-08-2018)


 ನಗರಸಭೆ ಚುನಾವಣೆ: ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ

ಚಾಮರಾಜನಗರ, ಆ.29 - ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ ಆಗಸ್ಟ್ 31  ರಂದು ನಡೆಯಲಿರುವ ಚುನಾವಣೆ ಸಂಬಂಧ  ಮತದಾನಕ್ಕೆ ಜಿಲ್ಲಾಡಳಿತವು ಸರ್ವ ಸಿದ್ಧತೆ ಮಾಡಿಕೊಂಡಿದೆ.
     
    ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 31 ವಾರ್ಡ್‍ಗಳಿದ್ದು, 26106 ಪುರುಷರು, 27650 ಮಹಿಳೆಯರು, ಇತರೆ 7 ಮತದಾರರು ಸೇರಿದಂತೆ ಒಟ್ಟು 53763 ಮತದಾರರು ಮತ್ತು 4 ಮಂದಿ ಸೇವಾ ಮತದಾರರಿದ್ದಾರೆ. ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 31 ವಾರ್ಡ್‍ಗಳಿದ್ದು 21963 ಪುರುಷರು, 22488 ಮಹಿಳೆಯರು,  ಇತರೆ 4 ಮತದಾರರು ಸೇರಿದಂತೆ  ಒಟ್ಟು 44455 ಮತದಾರರು ಇದ್ದಾರೆ.
     ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 11 ಅತೀ ಸೂಕ್ಷ್ಮ, 14 ಸೂಕ್ಷ್ಮ ಮತ್ತು 36 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 45 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 10 ಅತೀ ಸೂಕ್ಷ್ಮ, 19 ಸೂಕ್ಷ್ಮ ಮತ್ತು 16 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
    ಚಾಮರಾಜನಗರ ನಗರಸಭೆಯ 31 ವಾರ್ಡ್‍ಗಳಿಗೆ ಆಯ್ಕೆ ಬಯಸಿ ಒಟ್ಟು 132 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಕೊಳ್ಳೇಗಾಲ ನಗರಸಭೆಯ 31 ವಾರ್ಡ್‍ಗಳಿಗೆ ಅಂತಿಮವಾಗಿ ಒಟ್ಟು 112 ನಾಮಪತ್ರಗಳು ಕ್ರಮಬದ್ದವಾಗಿದ್ದು 6 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡ ನಂತರ ಒಟ್ಟು 101 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. (6ನೇ ವಾರ್ಡಿನಿಂದ ಗಂಗಮ್ಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9ನೇ ವಾರ್ಡಿನಿಂದ ಬಹುಜನ ಸಮಾಜ ಪಾರ್ಟಿ (ಬಿ.ಎಸ್.ಪಿ) ಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಎಸ್. ರಮೇಶ್ ಅವರು ನಿಧನರಾದ ಪ್ರಯುಕ್ತ 9ನೇ ವಾರ್ಡಿನ ಚುನಾವಣೆಯನ್ನು ರದ್ದುಪಡಿಸಲಾಗಿದ್ದು, ಈ ವಾರ್ಡಿನಲ್ಲಿ ಸ್ಪರ್ಧಿಸಿರುವ 4 ಅಭ್ಯರ್ಥಿಗಳು ಸೇರಿ ಒಟ್ಟು 5 ಅಭ್ಯರ್ಥಿಗಳನ್ನು ಹೊರತುಪಡಿಸಿ)
     ಚಾಮರಾಜನಗರ ನಗರಸಭೆ ಮತದಾನಕ್ಕಾಗಿ 75 ಬ್ಯಾಲೆಟ್ ಯೂನಿಟ್ ಮತ್ತು 75 ಕಂಟ್ರೋಲ್ ಯೂನಿಟ್‍ಗಳನ್ನು ಬಳಸಲಾಗುತ್ತಿದೆ. ಕೊಳ್ಳೇಗಾಲ ನಗರಸಭೆ ಮತದಾನಕ್ಕಾಗಿ 55 ಬ್ಯಾಲೆಟ್ ಯೂನಿಟ್ ಮತ್ತು 55 ಕಂಟ್ರೋಲ್ ಯೂನಿಟ್ ಗಳನ್ನು ಬಳಸಲಾಗುತ್ತಿದೆ. 


     ಚಾಮರಾಜನಗರ ನಗರಸಭೆ ಚುನಾವಣೆ ಕರ್ತವ್ಯಕ್ಕಾಗಿ 68 ಪ್ರಿಸೈಡಿಂಗ್ ಅಧಿಕಾರಿ, 68 ಮೊದಲನೇ ಮತಗಟ್ಟೆ ಅಧಿಕಾರಿ, 136 ಮತಗಟ್ಟೆ ಅಧಿಕಾರಿಗಳನ್ನೊಳಗೊಂಡಂತೆ ಒಟ್ಟು 272 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆ ಕರ್ತವ್ಯಕ್ಕಾಗಿ 50 ಪ್ರಿಸೈಡಿಂಗ್ ಅಧಿಕಾರಿ, 50 ಮೊದಲನೇ ಮತಗಟ್ಟೆ ಅಧಿಕಾರಿ, 100 ಮತಗಟ್ಟೆ ಅಧಿಕಾರಿಗಳನ್ನೊಳಗೊಂಡಂತೆ ಒಟ್ಟು 200 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 
     ಚಾಮರಾಜನಗರ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕೇಂದ್ರವಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತÉ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಎಂ.ಜಿ.ಎಸ್.ವಿ. ಜೂನಿಯರ್ ಕಾಲೇಜು ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕೇಂದ್ರವಾಗಿದೆ.

      ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ  ಒರ್ವ ಡಿ.ಎಸ್.ಪಿ, ಮೂವರು ಸಿ.ಪಿ.ಐ., ಆರು ಮಂದಿ ಪಿ.ಎಸ್.ಐ/ಎ.ಎಸ್.ಐ ಮತ್ತು ಮತಗಟ್ಟೆಗಳಿಗೆ 11 ಮಂದಿ ಎ.ಎಸ್.ಐ, 25 ಹೆಡ್ ಕಾನ್ಸ್‍ಟೇಬಲ್, 61 ಪೊಲೀಸ್ ಕಾನ್ಸ್‍ಟೇಬಲ್, 61 ಹೋಂಗಾರ್ಡ್‍ಗಳು ಕಾರ್ಯ ನಿರ್ವಹಿಸಲಿದ್ದಾರೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಒರ್ವ ಡಿ.ಎಸ್.ಪಿ, ಇಬ್ಬರು ಸಿ.ಪಿ.ಐ., ಆರು ಮಂದಿ ಪಿ.ಎಸ್.ಐ/ಎ.ಎಸ್.ಐ ಮತ್ತು ಮತಗಟ್ಟೆಗಳಿಗೆ 10 ಮಂದಿ ಎ.ಎಸ್.ಐ, 29 ಹೆಡ್‍ಕಾನ್ಸ್‍ಟೇಬಲ್, 45 ಪೊಲೀಸ್ ಕಾನ್ಸ್‍ಟೇಬಲ್, 45 ಹೋಂಗಾರ್ಡ್‍ಗಳು ಕಾರ್ಯ ನಿರ್ವಹಿಸಲಿದ್ದಾರೆ.
     ಚಾಮರಾಜನಗರ ನಗರಸಭೆ ಚುನಾವಣೆಗೆ ನೇಮಕ ವಾಗಿರುವ ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 7 ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು 10 ಜೀಪ್‍ಗಳ ವ್ಯವಸ್ಥೆ ಮಾಡಲಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆಗೆ ನೇಮಕ ಮಾಡಿರುವ ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 4 ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು 10 ಜೀಪ್‍ಗಳ ವ್ಯವಸ್ಥೆ ಮಾಡಲಾಗಿದೆ.
      ಮತ ಎಣಿಕೆ ಕಾರ್ಯವು ಸೆಪ್ಟೆಂಬರ್ 3 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ. ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತ ಎಣಿಕೆ ಕೇಂದ್ರವಾಗಿದೆ. ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಎಂ.ಜಿ.ಎಸ್.ವಿ ಜ್ಯೂನಿಯರ್ ಕಾಲೇಜು ಮತ ಎಣಿಕೆ ಕೇಂದ್ರವಾಗಿದೆ.
      ಮತ ಎಣಿಕೆ ಕಾರ್ಯವು  ತಲಾ 8 ಟೇಬಲ್‍ಗಳಲ್ಲಿ ನಡೆಯಲಿದೆ.  ಪ್ರತಿ ನಗರಸಭೆಗೆ 9 ಜನ ಮೇಲ್ವಿಚಾರಕರು, 9 ಜನ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನೇಮಕವಾvರುವ ಅಧಿಕಾರಿಗಳಿಗೆ ಮಾಸರ್ ಟ್ರೈನರ್ಸ್ ಮೂಲಕ ಈಗಾಗಲೇ ತರಬೇತಿ ನೀಡಲಾಗಿದೆ.
      ಮತ ಎಣಿಕೆ ಕಾರ್ಯವು ನಡೆಯಲಿರುವ ಹಿನ್ನೆಲೆಯಲ್ಲಿ  ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಸಿಆರ್‍ಪಿಸಿ 144 ರ ಕಾಲಂ ರನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ.
       ಮತದಾನದ ಹಿನ್ನೆಲೆಯಲ್ಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆ ಮತ್ತು ಜಾತ್ರೆಗಳನ್ನು ಆಗಸ್ಟ್ 31 ರಂದು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
     ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಸಾಮಾನ್ಯ  ಚುನಾವಣಾ ವೀಕ್ಷಕರು, ವಿಶೇಷ ಚುನಾವಣಾ ವೀಕ್ಷಕರು ಮತ್ತು ವೆಚ್ಚ ವೀಕ್ಷಕರನ್ನು ನೇಮಕ ಮಾಡಿದೆ  ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಸಭೆ ಚುನಾವಣೆ: ಆಗಸ್ಟ್ 31 ರಂದು ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ
ಚಾಮರಾಜನಗರ, ಆ.29  ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರಪಾಲಿಕೆ ಚುನಾವಣೆಗೆ ಆಗಸ್ಟ್ 31 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಆಯಾಯ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ ಆಗಸ್ಟ್ 31 ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ.
ಚುನಾವಣೆ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕಾರ್ಯಕ್ಕೆ ಹಾಜರಾಗಬೇಕು. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರ ಸಾರ್ವಜನಿಕರ ರಜೆ ಎಂದು ಘೋಷಿಸಲಾಗಿದೆ.

ನಗರಸಭೆ ಚುನಾವಣೆ : ಕ್ಷೇತ್ರದಲ್ಲದವರು ಕ್ಷೇತ್ರ ಬಿಡುವಂತೆ ಸೂಚನೆ

ಚಾಮರಾಜನಗರ, ಆ. 28  ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆ ಸಂಬಂಧ ಅಗಸ್ಟ್ 31ರಂದು ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲ್ಲಿದ್ದು ಮತದಾನ ಪ್ರಾರಂಭವಾಗುವ ಮುಂಚಿನ 48ಗಂಟೆಯ ಒಳಗೆ ಬಹಿರಂಗ ಪ್ರಚಾರ ಮುಕ್ತಾಯವಾಗುವ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಪರ ಮತ ಯಾಚಿಸುವ ಕ್ಷೇತ್ರದ ಮತದಾರರಲ್ಲದವರು, ಏಜೆಂಟರು   ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು,   ಅಗಸ್ಟ್ 29ರ ಬೆಳಿಗ್ಗೆ 7 ಗಂಟೆಯೊಳಗಾಗಿ ಕ್ಷೇತ್ರದ ವ್ಯಾಪ್ತಿಯನ್ನು ಬಿಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಯವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮತದಾನ ಪ್ರಾರಂಭವಾಗುವ ಮುಂಚಿನ 48ಗಂಟೆಯೊಳಗೆ ಪ್ರಚಾರ ಸಂಬಂಧ ಯಾವ ಯಾವ ಕಾರ್ಯಗಳನ್ನು  ಮಾಡಬಾರದೆಂಬ ಕುರಿತು ತಿಳಿಸಿದ್ದಾರೆ. 

    ಸಂಬಂಧ ಪಟ್ಟ ನಗರ ಸಭೆ ವ್ಯಾಪ್ತಿಯಲ್ಲಿ ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗಳ ಒಳಗೆ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ, ಉಮೇದುವಾರರು(ಅಭ್ಯರ್ಥಿಗಳಾಗಲೀ ಅಥವಾ ಅವರ ಪರವಾಗಿ ಅವರ ಬೆಂಬಲಿಗರಾಗಲೀ) ಚುನಾವಣೆ   ಸಂಬಂಧ   ಯಾವುದೇ ಸಭೆ  ಸಮಾರಂಭ ಮೆರವಣಿಗೆ  ನಡೆಸತಕ್ಕದ್ದಲ್ಲ. ಚುನಾವಣಾ ಸಭೆಯನ್ನು ಉದ್ದೇಶಿಸಿ   ಮಾತನಾಡುವಂತಿಲ್ಲ.
 ಸಾರ್ವಜನಿಕರಿಗೆ, ಮತದಾರರಿಗೆ  ಸುದ್ದಿಮಾಧ್ಯಮಗಳಾದ  ಎಫ್.ಎಂ. ರೇಡಿಯೂ, ದೂರದರ್ಶನ, ಸಿನಿಮಾ ಇತ್ಯಾದಿಗಳ ಮೂಲಕ ಚುನಾವಣಾ ಪ್ರಚಾರ ಮಾಡತಕ್ಕದ್ದಲ್ಲ. ಮೊಬೈಲ್ ಮೂಲಕ ಎಸ್.ಎಂ.ಎಸ್, ವಾಟ್ಸ್‍ಪ್, ಫೇಸ್‍ಬುಕ್, ಟ್ವೀಟರ್, ಇತರೆ ಸಾಮಾಜಿಕ  ಜಾಲತಾಣಗಳಲ್ಲಿ ಕಳುಹಿಸತಕ್ಕದ್ದಲ್ಲ.   ಮತದಾರರಿಗೆ ವೀಡಿಯೋ ಕ್ಲಿಪ್ಪಿಂಗ್ಸ್ ಪ್ರದರ್ಶಿಸತಕ್ಕದ್ದಲ್ಲ. ಯಾವುದೇ ಮತಗಟ್ಟೆಯ ಮುಂದೆ ಜನರನ್ನು ಆಕರ್ಷಿಸಲು ಸಂಗೀತ, ನಾಟಕ, ರಂಗ ಕಲಾಪಗಳನ್ನು ನಡೆÀಸುವಂತಿಲ್ಲ, ಮತದಾನ ನಡೆಯುವ ದಿನ ಮತ್ತು ಮತ ಎಣಿಕೆ ನಡೆಯುವ ದಿನದಂದು  ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ. ಮತಗಟ್ಟೆಗಳಿಗೆ ಮತದಾರರನ್ನು ವಾಹನಗಳಲ್ಲಿ ಕರೆದು ತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗುವಂತಿಲ್ಲ. ದಿನಪತ್ರಿಕೆಗಳಲ್ಲಿ ಜಾಹಿರಾತು ಹೊರಡಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ನಗರಸಭೆ ಚುನಾವಣೆ : ಸಂತೆ ಜಾತ್ರೆ ನಿಷೇಧ 

ಚಾಮರಾಜನಗರ, ಆ. 28 - ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಸಂಬಂಧ ಹಿನ್ನಲೆಯಲ್ಲಿ ಸಂಬಂಧಿಸಿದ ನಗರ ಸಭೆ ಹಾಗೂ ಪಟ್ಟಣ  ವ್ಯಾಪ್ತಿಯಲ್ಲಿ ಬರುವ ಎಲ್ಲಾ  ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಾಗೂ ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವ ಹಿತದೃಷ್ಠಿಯಿಂದ ಅಗಸ್ಟ್ 31ರಂದು ಬೆಳಿಗ್ಗೆ 5ರಿಂದ ಸಂಜೆ 7 ಗಂಟೆಯವರೆಗೆ  ಚಾಮರಾಜನಗರ ನಗg,À ಕೊಳ್ಳೇಗಾಲ ನಗರಸಭೆ ಸಭೆ ಮತ್ತು ಟೌನ್ ವ್ಯಾಪ್ತಿಯೊಳಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು  ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

ನಗರಸಭೆ ಚುನಾವಣೆ : ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲು ಡಿ.ಸಿ ಆದೇಶ

ಚಾಮರಾಜನಗರ, ಆ. :- ಜಿಲ್ಲೆಯ ಚಾಮರಾಜನಗರ ನಗರಸಭೆ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಅಗಸ್ಟ್ 31ರಂದು  ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ  ವ್ಯಾಪ್ತಿಯ ನಗರಸಭೆ  ಪ್ರದೇಶಗಳಲ್ಲಿ ಅರ್ಹ ಕಾರ್ಮಿಕ  ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿಯವರು ಆದೇಶ ಹೊರಡಿಸಿದ್ದಾರೆ.
ಸದರಿ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿಯವರು ತಿಳಿಸಿದ್ದಾರೆ.





01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು