Saturday, 29 December 2018

ಮದುಕರ್ ಶೆಟ್ಟಿ ಅವರ ಚಾಮರಾಜನಗರ ಆಳ್ವಿಕೆ ಹೇಗಿತ್ತು!? ಅವರ ವರ್ಗಾವಣೆಯಾದಾಗ ಜಿಲ್ಲೆಯ ಜನತ ಬಂದ್ ಹೇಗಿತ್ತು.? *ಮದುಕರ್ ಶೆಟ್ಟಿ ಸಾಮಾನ್ಯರಲ್ಲಿ ಜನಸಾಮಾನ್ಯರಾಗಿದ್ದೇಗೆ!?* ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ.

 *ಮದುಕರ್ ಶೆಟ್ಟಿ ಸಾಮಾನ್ಯರಲ್ಲಿ ಜನಸಾಮಾನ್ಯ*  ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ. ಚಾಮರಾಜನಗರ: ಜಿಲ್ಲೆಯಲ್ಲಿ ಹಿಂದೆ  ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಮದುಕರ್ ಶೆಟ್ಟಿ ಅವರು ಸಾಮಾನ್ಯರಲ್ಲಿ ಜನಸಾಮಾನ್ಯ ಆಗಿದ್ದವರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. 

ಲೇಖನದ ರೂವಾರಿ. ರಾಮಸಮುದ್ರ ಎಸ್.ವೀರಭದ್ರಸ್ವಾಮಿ


*ಚಾಮರಾಜನಗರ ದಲ್ಲಿ ಎಸ್ಪಿಯಾಗಿ 29-10-2003 ರಿಂದ 11-08-2004 ರವರೆಗೆ ಮದುಕರ್ ಶೆಟ್ಟಿ ಅವರು (ಚಾಮರಾಜನಗರ ಜಿಲ್ಲೆಯ ಪೊಲೀಸ್ ಅದೀಕ್ಷಕರಾಗಿ) ಸೇವೆ ಸಲ್ಲಿಸಿದ್ದರು ಕಾರ್ಯನಿರ್ವಹಿಸಿದ ಇವರು ಡಿಸಿ ಅಗಿದ್ದ ಶ್ರೀ ಹರ್ಷಗುಪ್ತ  ಅವರ ಜೊತೆ ಸೇರಿ ನಡೆಸಿದ ಆಡಳಿತ ನಿಜಕ್ಕೂ ವಿಜಯನಗರ ಸಾಮ್ರಾಜ್ಯದಂತೆ‌ ಇತ್ತು.


* ಚಾಮರಾಜನಗರ ಸುತ್ತಮುತ್ತ ಪಾರ್ಸೆಲ್ ನೀಡದೇ ಲೂಸ್ ನಲ್ಲಿ ಮಾರಾಟ ಮಾಡುತ್ತಿದ್ದ ಹಾಗೂ ಅನದಿಕೃತ ವೈನ್ ಷಾಪ್ ಸೀಜ್ ಮಾಡಿಸುತ್ತಿದ್ದರು. ಬಿಳಿ ಸೀಮೆಎಣ್ಣೆ, ನೀಲಿ ಸೀಮೆಎಣ್ಣೆ, ಅದಕ್ಕೆ ಸ್ವಲ್ಪ ಪೌಡರ್ ಹಾಕಿದರೆ ತಯಾರಾಗೋ ಕೆಂಪು ಪೆಟ್ರೋಲ್, ಅಕ್ರಮ ಪಡಿತರದ ಅಕ್ಕಿ ಸಾಗಾಣಿಕೆ, ಅಕ್ರಮ  ಕರಿಕಲ್ಲು ಸಾಗಾಣಿಕೆ ಇನ್ನು ಯಾವುದಿದೆ ಆ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಧೀರ ಎನ್ನಬಹುದು
* ಊರಿನಿಂದ ಅವರ ಪತ್ನಿ ಚಾಮರಾಜನಗರಕ್ಕೆ ಬಂದರೆ  ಆಟೋದಲ್ಲಿ ಮನೆಗೆ ಬಾ ಎಂದು ಹೇಳುತ್ತಿದ್ದ ಅದಿಕಾರಿ ಅಂದರೆ ಅದು ಎಸ್ಪಿ ಮದುಕರ್ ಶೆಟ್ಟಿ . ತಮ್ಮ ಪತ್ನಿಗಾಗಿ ಎಂದೂ ಸರ್ಕಾರಿ ವಾಹನವನ್ನ ದುರ್ಬಳಕೆ ಮಾಡಿಕೊಂಡವರಲ್ಲ. ಜನಸಾಮಾನ್ಯರಂತೆ ಅವರ ಪತ್ನಿಯೂ ಆಟೋದಲ್ಲಿ ಓಡಾಡುತ್ತಿದ್ದರು.  ಆಟೋ ಚಾಲಕನಿಗೆ ತಮ್ಮ ಜೇಬಿನಿಂದ ಹಣ ತೆಗೆದುಕೊಡುತ್ತಿದ್ದರು.‌ಕೆಲವೊಮ್ಮೆ ಚಾಲಕನ ಕುಶಲೋಪಚಾರ ವಿಚಾರಿಸಿ ಟೀ-ಕಾಫಿ ಕೊಟ್ಟಿದ್ದು ಕೂಡ ಉಂಟು ಈ ಅವಿನಾಭಾವ ಸಂಬಂದ ಬೆಳೆಸಿಕೊಂಡು ಬಂದವರು ಇವರು.ಕೆಲವೊಮ್ಮೆ ಸಂಜೆ,ಮುಂಜಾನೆ ವೇಳೆ ಬೈಸಿಕಲ್ ಸವಾರಿ ಮಾಡಿದ್ದು ಉಂಟು...


* ಮಾರುವೇಷದಲ್ಲೆ ಕಾರ್ಯಚರಣೆ: ಇವರು ಬಹುತೇಕ ಕಡೆ ಮಾರುವೇಷದಲ್ಲಿ ಠಾಣೆಗಳಿಗೆ ಭೇಟಿ ನೀಡುವುದು.‌ಭ್ರಷ್ಟತೆ ಕಂಡುಬಂದರೆ ನೇರವಾಗಿ ತಾವೇ ಹೋಗಿ ಪರಿಶೀಲನೆ .ಜೊತೆಗೆ ಕ್ರಮ ತಕ್ಷಣದಲ್ಲಿ ಜರುಗಿಸುತ್ತಿದ್ದರು. ಇದಕ್ಕೆ ಸಾಕ್ಷಿಯಂಬಂತೆ (.............) ಚೆಕ್ ಪೋಸ್ಟ್ ಅಲ್ಲಿ ಪೇದೆಯೋರ್ವ...(........) ಲಾರಿ ಚಾಲಕನಿಂದ ಹಣ ಪಡೆಯುವುದು ಗೊತ್ತಾಗಿ ತಾವೇ ರುಮಾಲು ಸುತ್ತಿಕೊಂಡು ಚಾಲಕರಾಗಿ ಹೋಗಿ ಸ್ಥಳದಲ್ಲೆ ಆ ಪೇದೆಗೆ ಕಪಾಳ ಮೋಕ್ಷ ಮಾಡಿ ಅಮಾನತು ಮಾಡಿ ಇಡೀ ಇಲಾಖೆಯೇ ಬೆಚ್ಚಿ ಬೀಳುವಂತೆ ಮಾಡಿದ್ದರು. ತಾವೇ ಒಬ್ಬೋಬ್ಬರೆ ಓಡಾಡುವುದು ಸಾಮಾನ್ಯವಾಗಿದ್ದರೂ ಇವರು ಎಸ್ಪಿ ಅವರು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಸಣ್ಣ ದೂರಿಗೂ ಸ್ಪಂದಿಸಿ ಕ್ಷಣಾರ್ದದಲ್ಲೆ ಪರಿಹಾರ ಮಾಡುತ್ತಿದ್ದರು.
ನಿಯಮ ಉಲ್ಲಂಘಿಸಿದ ಚಾಲಕನಿಗೆ ಪುಲ್ ಕ್ಲಾಸ್; ರಾಮಸಮುದ್ರ-ನಗರಕ್ಕೆ ಬರುವ ಮಾರ್ಗಮದ್ಯೆ ಪೊಲೀಸ್ ಜೀಪ್ ನಿಯಮಗಳನ್ನು ಉಲ್ಲಂಘಿಸುವ ಬಗ್ಗೆ ನಾವು( ಪತ್ರಿಕೆ ವರದಿ‌ಮಾಡಿದ ಎಸ್ ಸ್.ವೀರಭದ್ರಸ್ವಾಮಿ & ರೋಲ್ ಕ್ಯಾಮೆರಾದಲ್ಲಿ ಚಿತ್ರ ತೆಗೆದ ಪ್ರವೀಣ್ ಪಂಚಾಕ್ಷರಿ,) ಸುದ್ದಿ ಮಾಡಿದಾಗ ಜಿ.ಪೊ.ಇ.ಆವರಣದಲ್ಲೆ ಪುಲ್ ಕ್ಲಾಸ್ ಚಾಲಕನಿಗೆ ಪ್ರಾರಂಭಿಸಿದ್ದರು.
.
ಚಾಮರಾಜನಗರ ಜಿಲ್ಲಾಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

ಮಾನವೀಯತೆ ಮೆರೆದ ಜನನಾಯಕ:
ಪೊಲೀಸರೆಂದರೆ ಸಾಕು ಕಾನೂನು ಸುವ್ಯವಸ್ಥೆ ಒಂದೇ ಎನ್ನುವ ಅದೇಷ್ಟೋಅದಿಕಾರಿಗಳನ್ನ ನಾವು ನೋಡಿದ್ದೇವೆ ಆದರೆ ಇವರು ಎಲ್ಲವೂ ನಮಗೇ ಸೇರಿದ್ದು ಕಾನೂನು ಸುವ್ಯವಸ್ಥೆ ಅಲ್ಲ ಸುತ್ತಮುತ್ತಲಿನ ಸಮಾಜ ನಮ್ಮದೇ ಎಂದು ತಿಳಿದವರಾಗಿದ್ದರು.
* ಪಟ್ಟಣದಲ್ಲಿ ಹೆಚ್ಚಿದ  ಮಾನಸಿಕ ಅಸ್ವಸ್ಥರ ಬಗ್ಗೆ ತಲೆ ಕೆಡಿಸಿಕೊಂಡವರಲ್ಲಿ ಇವರೇ ಮೊದಲಿಗರು. ಸಮಾಜದಲ್ಲಿ ಅವರು ಅನಿವಾರ್ಯ ಕಾರಣದಿಂದ ಮಾನಸಿಕ ಅಸ್ವಸ್ಥತರಾಗಿರುವರೋ ಹೊರತು ಪರಿಪೂರ್ಣರಲ್ಲ ಅವರನ್ನ ಗುಣ ಮುಖ ಮಾಡಬೇಕೆಂದು ಆಶಯ ತೊಟ್ಟು ಅವರು ಪಟ್ಟಣದಲ್ಲಿರುವವನ್ನ ಹುಡುಕಿ ಅವರ ಗುಣಮುಖರಾಗಲು ಶ್ರಮಿಸಿ ಮಾನವೀಯತೆ ‌ಮೆರೆದರು.ಮಾನಸಿಕ ಅಸ್ವಸ್ಥರನ್ನ ಕೌದಳ್ಳಿ ವೃದ್ದಾಶ್ರಮಕ್ಕೆ ಸೇರಿಸಿ ಮಾಸಿಕ ವೇತನವನ್ನ ನೀಡುತ್ತಿದ್ದರು.
ಪ್ರಚಾರದ ಹಂಗು ಬಯಸದ ಅದಿಕಾರಿ: ಎಸ್ಪಿ ಮದುಕರ್ ಶೆಟ್ಟಿ ಅವರು ತಮ್ಮ ಕಾರ್ಯದ ಬಗ್ಗೆ ಎಂದೂ ಹೇಳಿಕೊಂಡವರಲ್ಲ. ಹಿಂದೊಮ್ಮೆ ಅವರ ಕೆಲಸದ ಬಗ್ಗೆ ಅಗ್ನಿ ಪತ್ರಿಕೆಯಲ್ಲಿ ಸುದ್ದಿ ಮಾಡಿದಾಗ ನಮ್ಮನ್ನ ಕರೆಯಿಸಿ ಹೇಳಿದ್ದಿಷ್ಟು...ಹೊಗಳಿ ಬರೆಯೊಕೆ ನಾನೆಷ್ಟು ಕೊಟ್ಟ ಅಂತ ಗಾಬರಿಯಾಗಿ ಇಲ್ಲ..ವಾಸ್ತವ ತಾನೆ..ಇಲ್ಲಾಂದ್ರೆ ಇಲ್ಲ ಬಿಡಿ ಸರ್ ಅಂತೇಳಿದೆ. ಅದು ನಮ್ಮ ಕೆಲಸ ಜಗಜ್ಜಾಹಿರಾಗೊದಲ್ಲ.ಲೋಪದೋಷ ಇದ್ರೆ ದಾಖಲೆ ಸಮೇತ ಹಾಕಿ ಸಮಾಜ ಎಚ್ಚರಿಸಿ..ಯು ಕೆನ್ ಗೋ ನೌ ಎಂದ ಮಾತುಗಳು ವಾಸ್ತವವಾಗಿ ನನಗೂ ಗೋಚರವಗುತ್ತಿದೆ

* ಎಸ್ಪಿ ಮದುಕರಶೆಟ್ಟಿ &ಜಿಲ್ಲಾದಿಕಾರಿ   ಹರ್ಷಗುಪ್ತ ರ ವರ್ಗಾವಣೆ ಸುದ್ದಿ ಬಂದಾಗ ಜನ ಅದರಲ್ಲೂ ಮುಸಲ್ಮಾನ ಭಾಂದವರು ಸ್ವಯಂ ಪ್ರೇರಿತವಾಗಿ ಅಂಗಡಿ ಬಾಗಿಲು ಮುಚ್ಚಿ ಬಂದ್ ಯಶಸ್ವಿಗೆ ಕಾರಣರಾದರು. ತದ ನಂತರ ಎಂದು ಕೂಡ ಬಂದ್ ಪದಕ್ಕೆ ಇದೂವರೆಗೂ ಸಚಿತ್ರ ಸಿಗಲೇ ಇಲ್ಲ... ಇದು ನಮ್ಮ ನಗರದ ಎಲ್ಲಾ ಜನರು ಕೊಟ್ಟ ಒಮ್ಮತ ದ ಕೊಡುಗೆ ಎಂದರೆ ತಪ್ಪಾಗಲಾರದು.

* ಆಡಳಿತದಲ್ಲಿ ಹಲವಾರು ಸುಧಾರಣೆ ಗಳನ್ನ ಮಾಡುವ ಮೂಲಕ ಅದಿಕಾರಿಗಳ ಜನ ಮನ್ನಣೆ ಗಳಿಸಿದ್ದರು.‌ಅವರ ಅವದಿಯಲ್ಲಿ ಚಾಮರಾಜನಗರ ಪೊಲೀಸ್ ಇಲಾಖೆಯಲ್ಲಿ ಸಂದರ್ಶಕರ ಪುಸ್ತಕ ತೆರೆಯುವ ಮೂಲಕ ಪ್ರತಿಯೊಂದು ಚಟುವಟಿಕೆ ಮೇಲೆ ಹದ್ದಿನ ಕಣ್ಣು ಇಡುತ್ತಿದ್ದರು.    ಇನ್ನ ಉಳಿದ ಯೋಜನೆಗಳು ಆ ಅವದಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಗೊತ್ತಿರುತ್ತದೆ. ಈ ವ್ಯವಸ್ಥೆ ಅಂದರೆ ಸಂದರ್ಶಕರ ಪುಸ್ತಕದ ಕಥೆ ಇವರು ವರ್ಗಾವಣೆ ಆದಮೇಲೆ ಗಂಟುಮೂಟೆ ಕಟ್ಟುವ ಕೆಲಸವೂ ಆಗುತ್ತದೆ.  ತದ ನಂತರದ ದಿನ ಗಮನಹರಿಸದೇ ತುಕ್ಕು ಹಿಡಿದ ಯೋಜನೆಗೆ ನಮ್ಮ ಒತ್ತಾಯ(ವೀರಭದ್ರಸ್ವಾಮಿ ) ಮೂರು ವರ್ಷದ ಮೇರೆಗೆ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಅವದಿಯಲ್ಲಿ ಚಾಲನೆಯಾಗುತ್ತದೆ. ಮದುಕರ್ ಶೆಟ್ಟಿ ಅವರು ಯಾವುದೇ ಠಾಣೆಗೆ ಹೋಗ ಟೀ ನಿಂದ ಹಿಡಿದು ವಾಟರ್ ಬಾಟಲ್,ಊಟಕ್ಕೂ ಅವರದೇ ಆದ ಹಣ ಪಾವತಿಸಿ ಬರುತ್ತಿದ್ದವರು. ಕೆಲವೊಮ್ಮೆ ಚಾಮರಾಜನಗರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲೂ ದಿನಗಳನ್ನ ಕಳೆದಿದ್ದುಂಟ...!
ಮದುಕರ್ ಶೆಟ್ಟಿ ಅವರು
ಚಾಮರಾಜನಗರ ಪೊಲೀಸ್ ಇಲಾಖೆ ವಾರ್ಷಿಕಾ ಕ್ರೀಡಾ ಕೂಟಕ್ಕೆ ಕಳೆದ ವರ್ಷ ಬಂದಿದ್ದವರು ಈ ವರ್ಷ ಈ ಜಗತ್ತನ್ನೆ ಬಿಟ್ಟು ಹೋಗಿರುವುದು ಮಾತ್ರ ವಿಪರ್ಯಾಸ...

ಇನ್ನ ಕೆಲವು ಬದಲಾವಣೆ ಹಾಗೂ ಲೇ ಔಟ್ ಬದಲಾಗಬಹುದು.. ಇಷ್ಟ ಆದ್ರೆಶೇರ್ ಮಾಡಿ...ಕೆಲವು ಪದಗಳ ಬಳಕೆ ಕಠಿಣವೂ ಹೌದು. ಇಂತಿ ರಾಮಸಮುದ್ರ ಎಸ್.
ವೀರಭದ್ರಸ್ವಾಮಿ..
(ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಮುಖಪುಸ್ತಕದಿಂದ ಎರಡು ಚಿತ್ರ ಬಳಸಿಕೊಳ್ಳಲಾಗಿದೆ.)

Saturday, 22 December 2018

ರಸ್ತೆ ಅಪಘಾತ: ಶಿಕ್ಷಕಿ ಸಾವು &ಪ್ರಸಾದ ಸೇವನೆ ಪ್ರಕರಣ : ಮತ್ತೋರ್ವ ಅಸ್ವಸ್ಥ ಸಾವು - ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಪ್ರಸಾದ ಸೇವನೆ ಪ್ರಕರಣ : ಮತ್ತೋರ್ವ ಅಸ್ವಸ್ಥ ಸಾವು - ಸಾವಿನ ಸಂಖ್ಯೆ 17ಕ್ಕೆ ಏರಿಕೆ 

ಚಾಮರಾಜನಗರ, ಡಿ. 22:- ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಇಂದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ದೊರೆಸ್ವಾಮಿ ಮೇಡು ಗ್ರಾಮದ ರಂಗನ್ (45 ವರ್ಷ) ಮೃತಪಟ್ಟವರು. ಪ್ರಸಾದ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಂಗನ್À ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಂಗನ್ ಅವರು ಇಂದು ಮಧ್ಯಾಹ್ನ ನಿಧನ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ರಸ್ತೆ ಅಪಘಾತ: ಶಿಕ್ಷಕಿ ಸಾವು       

ಚಾಮರಾಜನಗರ:ರಸ್ತೆ ಅಪಘಾತದಲ್ಲಿ  ಶಿಕ್ಷಕಿಯೋರ್ವರು ಸಾವನ್ನಪ್ಪಿದ ಘಟನೆ ಚಾಮರಾಜನಗರ ಪಟ್ಟಣದಲ್ಲಿ   ಮುಂಜಾನೆ ನಡೆದಿದೆ. *ಚಾಮರಾಜನಗರ ಪಟ್ಟಣ ನಿವಾಸಿಯಾಗಿರುವ ಸಾಗಡೆ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿಯಾಗಿರುವ ಅನಿತಾ ಎಂಬುವವರೆ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.

*ಶನಿವಾರ ಇಂದು ಎಂದಿನಂತೆ ತಮ್ಮ ಶಾಲೆಗೆ ತೆರಳಲು ಪತಿ ರಂಗನ್ ಅವರು ಬೈಕ್ ಅಲ್ಲಿ ತೆರಳುತ್ತಿದ್ದಾಗ  ಪ್ರವಾಸಿ ಮಂದಿರ ಬಳಿ ಈ ದುರ್ಘಟನೆ ನಡೆದಿದೆ.

*ಬಹುಶಃ ಲಬ್ಯವಾದ ಮಾಹಿತಿ ಪ್ರಕಾರ ಅವರ ಮನೆಯಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಯೂ  ಟರ್ನ್ ಮಾಡುವಾಗ ಈ ಘಟನೆ ನಡೆದಿದೆ  ಎನ್ನಲಾಗಿದೆ.
 *ಹಿಂಬದಿಯಲ್ಲಿ ಕುಳಿತಿದ್ದ ಶ್ರೀಮತಿ ಅನಿತಾ ಅವರ ತಲೆ  ರಸ್ತೆ ಮದ್ಯೆದ ವಿಭಜಕ್ಕೆ ಹೊಡೆದ ಹಿನ್ನಲೆಯಲ್ಲಿ ಅಲ್ಲಿಯೆ ಸಾವನ್ನಪ್ಪಿದ್ದಾರೋ ಅಥವಾ ಲಾರಿ ಬಂದು ಡಿಕ್ಕಿ ಹೊಡೆದಿದೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ. . ವಾಹನ ಸವಾರರಿಗೂ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
*ಪಟ್ಟಣ ಠಾಣಾ ಹಾಗೂ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.


ಸುಳ್ವಾಡಿ ಸಂತ್ರಸ್ಥರನ್ನು ಸಂತೈಸಿ ಸೇವಾ ವೈಶಾಲ್ಯತೆ ಮೆರೆದ ಹೋಲಿಕ್ರಾಸ್ ಆಸ್ಪತ್ರೆ 

ಚಾಮರಾಜನಗರ, ಡಿ. 22 - ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾದವರಿಗೆ ಸಕಾಲದಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಹಲವರ ಜೀವ ಉಳಿಸಿ ಹೃದಯ ವೈಶಾಲ್ಯತೆ ಮೆರೆದಿದೆ.
ಪ್ರಸಾದ ಸೇವಿಸಿ ಗಂಭೀರವಾಗಿ ಅಸ್ವಸ್ಥರಾದವರನ್ನು ತಂಡೋಪತಂಡವಾಗಿ ಕರೆತರುತ್ತಿದ್ದಂತೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯ ಇಡೀ ವೈದ್ಯ ಹಾಗೂ ಸಿಬ್ಬಂದಿ ತಂಡ ಕಾಳಜಿಯಿಂದ ಚಿಕಿತ್ಸೆ ನೀಡದೇ ಇದ್ದಿದ್ದರೆ ಸಾವುನೋವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುತ್ತಿತ್ತು. ಸುಳ್ವಾಡಿ ಗ್ರಾಮಕ್ಕೆ ಹತ್ತಿರವಿದ್ದ ಎಲ್ಲ ವೈದ್ಯಕೀಯ ಸೌಲಭ್ಯವುಳ್ಳ ಆಸ್ಪತ್ರೆ ಇದ್ದದ್ದು, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಮಾತ್ರ. ಹೀಗಾಗಿ ಈ ಆಸ್ಪತ್ರೆಯನ್ನೇ ತಕ್ಷಣಕ್ಕೆ ಅವಲಂಬಿಸುವ ಅನಿವಾರ್ಯತೆ ಉಂಟಾಯಿತು.
ಆತಂಕಕ್ಕೆ ಒಳಗಾದ ಸಂತ್ರಸ್ಥರನ್ನು ಸಂತೈಸಿ ಚಿಕಿತ್ಸೆ ಆರಂಭಿಸಿದ ಹೋಲಿಕ್ರಾಸ್ ಆಸ್ಪತ್ರೆ ತಂಡ ಜನರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದು ಪ್ರಶಂಸನೀಯವಾಗಿದೆ. ಡಿಸೆಂಬರ್ 14ರಂದು ಮಧ್ಯಾಹ್ನ 1.10 ವೇಳೆಗೆ ತೀವ್ರ ಗಂಭೀರತೆ ಲಕ್ಷಣ ಕಂಡುಬಂದ ಅಸ್ವಸ್ಥರನ್ನು ಕರೆತರಲಾಯಿತು. ತದನಂತರ ಮತ್ತಷ್ಟು ಅಸ್ವಸ್ಥರು ಬರಲಾರಂಭಿಸಿದರು. ಸ್ವಲ್ಪವೂ ಸಮಯ ವ್ಯರ್ಥಮಾಡದ ಹೋಲಿಕ್ರಾಸ್ ಆಸ್ಪತ್ರೆ ವೈದ್ಯರು ಆಸ್ಪತ್ರೆಯಲ್ಲಿದ್ದ ಎಲ್ಲ 7 ವೆಂಟಿಲೇಟರ್‍ಗಳನ್ನು ಬಳಸಿ ಚಿಕಿತ್ಸೆ ನೀಡಲು ತೊಡಗಿದರು.
ಮೊದಲಿಗೆ ಆಸ್ಪತ್ರೆಗೆ ದಾಖಲಾದವರಿಂದ ಯಾವ ಆಹಾರ ಸೇವನೆ ಮಾಡಿದ್ದಾರೆ, ವಾಂತಿ ಇನ್ನಿತರ ಸಮಸ್ಯೆಗಳಿಗೆ ಕಾರಣವೇನೆಂಬ ಮಾಹಿತಿ ಕೊಡಲೂ ಸಹ ಸಂತ್ರಸ್ಥರಿಗೆ ಆಗದ ಪರಿಸ್ಥಿತಿ ಇತ್ತು. ತದನಂತರ ಸಂತ್ರಸ್ಥರ ದೇಹ ಚಲನವಲನಗಳನ್ನು ಗಮನಿಸಿ ವಿಷ ಸೇವನೆ ಇರಬಹುದೆಂದು ತಿಳಿದುಕೊಂಡು ಚಿಕಿತ್ಸೆ ನೀಡಲಾರಂಭಿಸಿದೆವು. ಹೆಚ್ಚು ಪ್ರಮಾಣದ ಆಹಾರ ಸೇವಿಸಿದ್ದವರ ಆರೋಗ್ಯಸ್ಥಿತಿ ಗಂಭೀರವಾಗಿತ್ತು. ಸ್ವಲ್ಪ ಪ್ರಮಾಣದ ಆಹಾರ ಸೇವಿಸಿದವರೂ ಸಹ ಗಂಭೀರ ಸ್ಥಿತಿಯವರ ಆರೋಗ್ಯ ಏರುಪೇರುಗಳನ್ನು ಕಂಡು ತಮಗೂ ಇದೇ ರೀತಿಯಾಗಬಹುದು ಎಂಬ ಆತಂಕಕ್ಕೆ ಒಳಗಾಗಿದ್ದರು. ಈ ಹಂತದಲ್ಲಿ ಎಲ್ಲರನ್ನೂ ಸಮಾಧಾನಚಿತ್ತದಿಂದ ಸಂತೈಸಿ ಚಿಕಿತ್ಸೆ ನೀಡುವ ಸವಾಲೂ ಸಹ ನಮ್ಮ ಮುಂದಿತ್ತು. ಅದನ್ನು ಸರಿಯಾಗಿಯೇ ನಿಭಾಯಿಸಿದ್ದೇವೆ ಎಂಬ ಆತ್ಮವಿಶ್ವಾಸ ಹಾಗೂ ಸಾರ್ಥಕದ ನುಡಿಗಳನ್ನು ಹೋಲಿಕ್ರಾಸ್ ಆಸ್ಪತ್ರೆಯ ಸಹಾಯಕ ಆಡಳಿತಧಿಕಾರಿ ಸಿಸ್ಟರ್ ರಿಜಿಜಾನ್ ಹಾಗೂ ಇತರೆ ವೈದ್ಯರು ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಖುದ್ದು ನಿಂತು ಚಿಕಿತ್ಸೆಗೆ ಕಾಳಜಿ ತೋರುತ್ತಿತ್ತು. ಪ್ರಸಾದ ಸೇವನೆಯಿಂದ ಅಸ್ವಸ್ಥರಾಗಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಸ್ಪತ್ರೆಯ ಎಲ್ಲಾ ಪಾಳಿಯ ವೈದ್ಯರು, ನರ್ಸ್, ಸಿಬ್ಬಂದಿಯನ್ನು ಕರೆಸಲಾಯಿತು. ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು, ಸ್ಥಳೀಯ ಜನತೆ ಸಹ ಚಿಕಿತ್ಸೆ ನೆರವಿಗೆ ಧಾವಿಸಿದರು. ಜಿಲ್ಲಾಡಳಿತ ಕೂಡ ಸುತ್ತಮುತ್ತಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನೂ ಸಹ ತುರ್ತಾಗಿ ಹೋಲಿಕ್ರಾಸ್ ಆಸ್ಪತ್ರೆಗೆ ಕರೆತಂದ ಪರಿಣಾಮ ಅಸ್ವಸ್ಥರ ಸಾವಿನ ಪ್ರಮಾಣ ತಗ್ಗಿತು.
ಒಟ್ಟು 64 ಮಂದಿ ಸಂತ್ರಸ್ಥರನ್ನು ದಾಖಲು ಮಾಡಿಕೊಂಡು ಪ್ರಥಮ ಚಿಕಿತ್ಸೆಗಳನ್ನು ಆರಂಭಿಸಲಾಯಿತು. ಬಹುತೇಕ ಅಸ್ವಸ್ಥರು ಚಿಕಿತ್ಸೆಗೆ ಸ್ಪಂದಿಸಿದರು. ಚಿಂತಾಜನಕ ಸ್ಥಿತಿಯಲ್ಲಿ ಇದ್ದವರನ್ನು ಮೈಸೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲು ವೆಂಟಿಲೇಟರ್ ಮೂಲಕ ಆಂಬುಲೆನ್ಸ್‍ಗಳಲ್ಲಿ ಕಳುಹಿಸಿ ಕೊಡಲಾಯಿತು.
100 ಹಾಸಿಗೆಗಳುಳ್ಳ ಎಲ್ಲ ಬಗÉಯ ಚಿಕಿತ್ಸೆಯನ್ನು ನೀಡುವ ಸಾಮಥ್ರ್ಯವುಳ್ಳ ಸುಸಜ್ಜಿತ ಹೋಲಿಕ್ರಾಸ್ ಆಸ್ಪತ್ರೆಯು  ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ದುರಂತವೆಂದೇ ಹೇಳಬಹುದಾದ ಸುಳ್ವಾಡಿ ಪ್ರಕರಣ ಸಂತ್ರಸ್ಥರಿಗೆ ಅಭೂತಪೂರ್ವವಾಗಿ ಸ್ಪಂದಿಸಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ತೋರಿದೆ. ಜಿಲ್ಲೆಯ ಕುಗ್ರಾಮಗಳು ಹಾಗೂ ಎಲ್ಲ ತಳವರ್ಗದ ಜನರಿಗೂ ಆರೋಗ್ಯ ಸೇವೆಯನ್ನು ನೀಡಬೇಕೆಂಬ ಆಶಯದೊಂದಿಗೆ 1970ರಲ್ಲಿ ಸಣ್ಣ ಚಿಕಿತ್ಸಾಲಯದೊಂದಿಗೆ ಆರಂಭವಾದ ಹೋಲಿಕ್ರಾಸ್ ಆಸ್ಪತ್ರೆ ಇಂದು ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸೇವೆ ನೀಡುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಈ ಭಾಗದ ಪ್ರಮುಖ ಆಸ್ಪತ್ರೆಯೆಂದೇ ಹೆಗ್ಗಳಿಕೆ ಪಡೆದಿರುವ ಹೋಲಿಕ್ರಾಸ್ ಆಸ್ಪತ್ರೆ ಸುಳ್ವಾಡಿ ಪ್ರಕರಣದಲ್ಲಿ ಗ್ರಾಮೀಣರ ನೋವು ಆಲಿಸಿ ಇಡೀ ವೈದ್ಯ ತಂಡವೇ ನಿಂತು ಜನರ ಪ್ರಾಣ ಕಾಪಾಡುವ ಮಹತ್ಕಾರ್ಯ ಮಾಡಿದೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣದಲ್ಲಿ ಹೋಲಿಕ್ರಾಸ್ ಆಸ್ಪತ್ರೆ ಇಡೀ ವೈದ್ಯ ಹಾಗೂ ಇತರೆ ಸಿಬ್ಬಂದಿ ಸಕಾಲದಲ್ಲಿ ಚಿಕಿತ್ಸೆ ನೀಡದೇ ಹೋಗಿದ್ದರೆ ಸಾವುನೋವಿನ ಪ್ರಮಾಣ ಏರಿಕೆಯಾಗುತ್ತಿತ್ತು. ಜಿಲ್ಲಾಡಳಿತದೊಂದಿಗೆ ಸ್ಪಂದನೆ ನೀಡಿ ಸಕಾರಾತ್ಮಕವಾಗಿ ಪ್ರಕರಣವನ್ನು ನಿಭಾಯಿಸಿದ ಹೋಲಿಕ್ರಾಸ್ ಆಸ್ಪತ್ರೆಯ ಇಡೀ ತಂಡ ಮಾನವೀಯತೆ ಮೆರೆದಿದೆ. ಸೇವೆಯ ಸಾರ್ಥಕತೆಯನ್ನು ಸಾಬೀತುಪಡಿಸಿದೆ. ಸಂಕಷ್ಟದಲ್ಲಿ ನೆರವಿಗೆ ನಿಂತ ಆಸ್ಪತ್ರೆಯ ಸೇವಾ ಮನೋಭಾವನೆಗೆ ಜಿಲ್ಲಾಡಳಿತದ ಪರವಾಗಿ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ನುಡಿದಿದ್ದಾರೆ.




ಸಾಧಕರ ಸಂವಾದ ಕಾರ್ಯಕ್ರಮಗಳು ಇಂದಿನ ಪೀಳಿಗೆಗೆ ದಾರಿದೀವಿಗೆಯಾಗಬೇಕು: ಮಲೆಯೂರು ಗುರುಸ್ವಾಮಿ .

                         VSS-9480030980

ಚಾಮರಾಜನಗರ, ಡಿ. 22:- ಸಾಹಿತ್ಯಕ್ಕೂ ಸಂವಾದಕ್ಕೂ ಅಪಾರವಾದ ಸಾಮ್ಯತೆಯಿದ್ದು, ಸಂವಾದ ಕಾರ್ಯಕ್ರಮಗಳು ಇಂದಿನ ಪೀಳಿಗೆಗೆ ದಾರಿದೀವಿಗೆಯಾಗಬೇಕು. ಇದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸಾಹಿತ್ಯದ ಅರಿವು ಹೆಚ್ಚಾಗಲಿದೆ ಎಂದು ಹಿರಿಯ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಅವರು ಅಭಿಪ್ರಾಯ ಪಟ್ಟರು.
ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜೆ.ಎಸ್.ಎಸ್. ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲೆಯ ಖ್ಯಾತ ಸಾಹಿತಿ ಹಾಗೂ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಾಧನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಾಹಿತ್ಯ ಕೃತಿಗಳಿಗೆ ಮುನ್ನುಡಿಯಾಗಿ ವಿಮರ್ಶೆ ಅಗತ್ಯ. ಅದೇ ರೀತಿಯಲ್ಲಿ ವಾದ, ಸಂವಾದಗಳು ನಡೆಯುತ್ತವೆ. ವಾದದಿಂದ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಆದರೆ ಸಂವಾದದಿಂದ ಮಾತ್ರ ಸೃಜನಶೀಲ ಸಾಹಿತ್ಯ ಹುಟ್ಟುತ್ತದೆ. ಇಂತಹ ಸೃಜನಶೀಲ ಸಾಹಿತ್ಯ, ಸಂವಾದ ಇತರರಿಗೆ ದಾರಿದೀಪವಾಗಬೇಕು ಎಂದರು.
ಸಾಹಿತ್ಯ ಬರಹದ ಜವಾಬ್ದಾರಿ ಹೆಚ್ಚಿನದು. ಕೊರಳ ಸಾಹಿತ್ಯಕ್ಕಿಂತ ಕರುಳು ಸಾಹಿತ್ಯ ಶ್ರೇಷ್ಠವಾದದ್ದು. ಕರುಳು ಸಾಹಿತ್ಯದಲ್ಲಿ ನಮ್ಮ ಜಗತ್ತಿನ, ದೇಶದ ಹಾಗೂ ನಾಡಿನ ಪರಂಪರೆಯ ಪ್ರಜ್ಞೆ ಇರುತ್ತದೆ. ಅಂತಹ ಪರಂಪರೆಯ ಪ್ರಜ್ಞೆ, ಆತ್ಮವಿಶ್ವಾಸ ಮತ್ತು ಸಮಚಿತ್ತದ ಸಾಹಿತಿಗಳಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಅವರು ದಲಿತ ಶ್ರೇಷ್ಠ ಚಿಂತಕರು ಕೂಡ ಹೌದು  ಎಂದು ಮಲೆಯೂರು ಗುರುಸ್ವಾಮಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಜ ನಿರ್ದೇಶಕರಾದ ಎಚ್. ಚನ್ನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ, ಸಂಸ್ಕøತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಪ್ರತಿವರ್ಷ ಇಲಾಖೆ ವತಿಯಿಂದ ಗುರುತಿಸಿ, ಆಹ್ವಾನಿಸಿ ಗೌರವಿಸಲಾಗುತ್ತಿದೆ. ಸಾಹಿತ್ಯ, ಸಂಸ್ಕøತಿಯ ಕುರಿತು ಇಂದಿನ ಪೀಳಿಗೆಗೆ ಸಾಧಕರ ಜೀವನ, ಸಾಧನೆಗಳನ್ನು ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಈ ಜಿಲ್ಲೆಯವರೇ ಆಗಿರುವುದು ನಮ್ಮ ಹೆಮ್ಮೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಇಲಾಖೆವತಿಯಿಂದ ನಗದು, ಸ್ಮರಣಿಕೆ, ಫಲತಾಂಬೂಲ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಾಹಿತಿಗಳಾದ ಕೆ. ವೆಂಕಟರಾಜು, ಮಂಜು ಕೋಡಿಉಗನೆ, ಸೋಮಶೇಖರ ಬಿಸಲ್ವಾಡಿ, ಎ.ಎಂ. ನಾಮಲ್ಲಪ್ಪ, ಸಿ.ಎಂ. ನರಸಿಂಹಮೂರ್ತಿ, ಸಿ. ಲಿಂಗಯ್ಯ, ಚಂದ್ರಶೇಖರ್ ತುಬಾರ್, ಅವರು ಸಾಧಕರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರ ವಿರಚಿತ ಕವಿತೆಗಳನ್ನು ಸಿ.ಎಂ. ನರಸಿಂಹಮೂರ್ತಿ ಸುಶ್ರಾವ್ಯವಾಗಿ ಹಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ವಿನಯ್, ಹಿರಿಯ ಸಾಹಿತಿ ಶಂಕನಪುರ ಮಹದೇವ, ಜೆ.ಎಸ್.ಎಸ್. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮಹಾಲಿಂಗಪ್ಪ, ಸಾಹಿತಿ ಮಂಜುನಾಥ ಲತಾ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಧ್ಯಾಹ್ನ ಯುವ ಕವಿಗೋಷ್ಠಿ ಆಯೋಜಿಸಲಾಗಿತ್ತು. ಆಹ್ವಾನಿತ ಕವಿಗಳು ತಮ್ಮ ತಮ್ಮ ಕವನಗಳನ್ನು ವಾಚಿಸಿದರು.


ವಿವಿಧ ಆಸ್ಪತ್ರೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಭೇಟಿ: ಸುಳ್ವಾಡಿ ಸಂತ್ರಸ್ತರ ಆರೋಗ್ಯ ವಿಚಾರಣೆ
ಚಾಮರಾಜನಗರ, ಡಿ. 22 - ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಇಂದು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ, ಯೋಗಕ್ಷೇಮವನ್ನು ವಿಚಾರಿಸಿದರು.
ಕಿಚ್ಚುಗುತ್ತಿ ಮಾರಮ್ಮನ ದೇವಾಲಯ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆ, ಅಪೋಲೋ, ಕಾವೇರಿ, ಕೊಲಂಬಿಯಾ ಏಷಿಯಾ, ಸುಯೋಗ್, ಜೆ.ಎಸ್.ಎಸ್. ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿದರು.
ವ್ಯಾಪಕವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಚಿವರು, ಸಂಸದರು ಜಿಲ್ಲೆಯ ಸಂತ್ರಸ್ತರನ್ನು ಕಂಡು ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧೋಪಚಾರ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಅಸ್ವಸ್ಥರ ಸಂಬಂಧಿಕರೊಂದಿಗೂ ಸಮಾಲೋಚಿಸಿ ಧೈರ್ಯ ತುಂಬಿದರು.
ಚಿಕಿತ್ಸೆಗೆ ದಾಖಲಾಗಿರುವ ಪ್ರತಿಯೊಬ್ಬರ ಬಗ್ಗೆಯೂ ಮಾಹಿತಿ ಪಡೆದ ಸಚಿವರು, ಸಂಸದರು ನೀಡಲಾಗುತ್ತಿರುವ ಚಿಕಿತ್ಸಾ ವಿಧಾನಗಳು, ಗುಣಮುಖರಾಗುತ್ತಿರುವವರ ವಿವರ, ಕಲ್ಪಿಸಲಾಗುತ್ತಿರುವ ವೈದ್ಯಕೀಯ ಸೌಲಭ್ಯಗಳು, ಸೇವೆ ಕುರಿತು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಅವರೊಂದಿಗೆ ಅಸ್ವಸ್ಥರ ಆರೋಗ್ಯ ಸ್ಥಿತಿ ಕುರಿತು ವಿವರ ಪಡೆದ ಸಚಿವರು, ಸಂಸದರು ಆಸ್ಪತ್ರೆಗೆ ದಾಖಲಾಗಿರುವ ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ವಿಶೇಷ ಗಮನ ನೀಡಬೇಕೆಂದು ತಿಳಿಸಿದರು.
ಪ್ರತಿ ಆಸ್ಪತ್ರೆಗೂ ನೇಮಕವಾಗಿರುವ ಜಿಲ್ಲಾ ನೋಡೆಲ್ ಅಧಿಕಾರಿಗಳೊಂದಿಗೂ ಚರ್ಚಿಸಿ ಸಂತ್ರಸ್ತರು ಗುಣಮುಖರಾಗುವ ನಿಟ್ಟಿನಲ್ಲಿ ಅವರೊಂದಿಗೆ ನೆರವಾಗಬೇಕೆಂದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಸಂಸದರಾದ ಆರ್. ಧ್ರುವನಾರಾಯಣ ಅವರು ಅಸ್ಪತ್ರೆಗಳಲ್ಲಿ ಸಂತ್ರಸ್ತರು ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಜನರ ಜೀವ ಉಳಿಸುವ ಕೆಲಸ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ವೈದ್ಯಕೀಯ ವ್ಯವಸ್ಥೆಗೆ ಕ್ರಮ ತೆಗೆದುಕೊಂಡಿದೆ ಎಂದರು.     

Monday, 17 December 2018

ಪ್ರಸಾದ ಸೇವನೆ ಪ್ರಕರಣ : ಮತ್ತೋರ್ವ ಸಾವು - ಸಾವಿನ ಸಂಖ್ಯೆ 14ಕ್ಕೆ ಏರಿಕೆ, & ಬೆಳೆ ಸಾಲ ಮನ್ನಾ: ರೈತರು ನೊಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ (17-12-2018)


ಪ್ರಸಾದ ಸೇವನೆ ಪ್ರಕರಣ : ಮತ್ತೋರ್ವ ಸಾವು - ಸಾವಿನ ಸಂಖ್ಯೆ 14ಕ್ಕೆ ಏರಿಕೆ

         S.Veeerabhadra Swamy-chamarajanagar 9480030980



ಚಾಮರಾಜನಗರ, ಡಿ. 17:- ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಇಂದು ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಮಾರ್ಟಳ್ಳಿಯ ಕೋಟೆಪೊದೆಯ ಕೃಷ್ಣನಾಯಕ್ ಎಂಬುವರ ಪತ್ನಿ ಮೈಲಿಬಾಯಿ (35 ವರ್ಷ) ಮೃತಪಟ್ಟವರು. ಪ್ರಸಾದ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಮೈಲಿಬಾಯಿಯವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೈಲಿಬಾಯಿಯವರು ಇಂದು ನಿಧನ ಹೊಂದಿದ್ದಾರೆ.
ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥಗೊಂಡಿರುವ 109 ಮಂದಿ ಮೈಸೂರಿನ ಕೆ. ಆರ್. ಆಸ್ಪತ್ರೆ ಸೇರಿದಂತೆ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣ: ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿ,ಸಿಬ್ಬಂದಿ ನೇಮಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ 


ಚಾಮರಾಜನಗರ, ಡಿ. 17:-  ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ  ಚಿಕಿತ್ಸೆಗೆ ದಾಖಲಾಗಿರುವವರ ಆರೋಗ್ಯ ಸ್ಥಿತಿ ನಿರ್ವಹಣೆ, ನೆರವು ಸಂಬಂಧ ನೋಡಿಕೊಂಡು ವರದಿ ಸಲ್ಲಿಸಲು  ಪ್ರತಿ ಆಸ್ಪತೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೊಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಆದೇಶ ಹೊರಡಿಸಿದ್ದಾರೆ.
ಅಧಿಕಾರಿಗಳೊಂದಿಗೆ ಜಿಲ್ಲೆಯ ಇತರೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದು, ಅಧಿಕಾರಿಗಳು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ, ಅಧಿಕಾರಿಗಳು, ಸಿಬ್ಬಂದಿ ಹಾಗೂ ವೈದ್ಯರ ವಿವರಗಳು ಇಂತಿದೆ.
ಜೆ.ಎಸ್.ಎಸ್. ಆಸ್ಪತ್ರೆ, ಮೈಸೂರು, ತಿರುಮಲೇಶ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಚಾಮರಾಜನಗರ. ಮೊ. 8277930760 , ಡಾ|| ಮಹೇಶ್,ಮೊ : 9845114166, ರೇಚಣ್ಣಸ್ವಾಮಿ, ರಾಜಸ್ವ ನಿರೀಕ್ಷಕರು ಚಂದಕವಾಡಿ ಹೋಬಳಿ. ಚಾಮರಾಜನಗರ ತಾ||ಮೊ: 9980745781 ಅಬ್ದುಲ್ ಮುಜಾಹಿದ್, ದ್ವಿ.ದ.ಸ ತಾಲ್ಲೂಕು ಕಚೇರಿ ಚಾಮರಾಜನಗರಮೊ: 9901352329, ಸುಧೀರ್ ಗ್ರಾ.ಲೆ, ಕಾಗಲವಾಡಿ ವೃತ್ತ,ಗುಂಡ್ಲುಪೇಟೆ ತಾ||ಮೊ: 9686676932
ಸೆಂಟ್ ಜೋಸೆಫ್ ಆಸ್ಪತೆ ಮೈಸೂರು  ಸೋಮಶೇಖರ್, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಚಾಮರಾಜನಗರ.ಮೊ.9620583072 ಡಾ|| ರಾಮಕೃಷ್ಣ,ಮೊ: 9980006401 9448043242 ಡಾ|| ನಿರ್ಮಲ ಮೊ: 9845056714ನಾಗರಾಜು, ರಾಜಸ್ವ ನಿರೀಕ್ಷಕರು ಹರದನಹಳ್ಳಿ ರೇವಣ್ಣ.ಗಾಮ ಲೆಕ್ಕಿಗರು ಶಿವಪುರ ವೃತ್ತ,ಚಾಮರಾಜನಗರ ತಾ||,ಮೊ: 9620759484 ಹೋಬಳಿ,ಚಾಮರಾಜನಗರ ತಾ|| ಮೊ: 9141598212ಮಹದೇವಶೆಟ್ಟಿ,ಪ್ರ.ದ.ಸ. ತಾಲ್ಲೂಕು ಕಚೇರಿ ಚಾಮರಾಜನಗರಮೊ: 9844371655

ಕೊಲಂಬಿಯ ಏಷಿಯಾ ಆಸ್ಪತ್ರೆ, ಮೈಸೂರು  ರಾಚಪ್ಪ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಾಮರಾಜನಗರ ಮೊ:. 9448424665  9739875870 ಡಾ|| ಮಂಜುನಾಥ್ ಮೊ: 9738251350 ಪರಮೇಶ್ ರಾಜಸ್ವ ನಿರೀಕ್ಷಕರು ಸಂತೇಮರÀಹಳ್ಳಿ ಹೋಬಳಿ ಚಾಮರಾಜನಗರ ತಾ|| ಮೊ: 8971901894 ರವಿ ಎನ್ ಗಾಮ ಲೆಕ್ಕಿಗರು ಸುತ್ತೂರು ವೃತ್ತ ಚಾಮರಾಜನಗರ ತಾ|| ಮೊ: 9342891798 ಸುಮಂತ್‍ಕುಮಾರ್‍ಗ್ರಾ.ಲೆ, ಚಾಮರಾಜನಗರ ತಾಲ್ಲೂಕು ಮೊ: 9036578896

ಕೆ.ಆರ್. ಆಸ್ಪತ್ರೆ, ಮೈಸೂರು ಕೃಷ್ಣಪ್ಪ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಾಮರಾಜನಗರ. ಮೊ. 9739567241 ಡಾ|| ರಾಜು ಮೊ; 9448267187 ಲಿಂಗರಾಜಮೂರ್ತಿ ರಾಜಸ್ವ ನಿರೀಕ್ಷಕರು ಹರವೆ ಹೋಬಳಿ ಚಾಮರಾಜನಗರ ತಾ|| ಮೊ: 9886785333 ಶ್ರೀನಿವಾಸಮೂರ್ತಿ ಗ್ರಾ.ಲೆ, ಉಡಿಗಾಲ ವೃತ್ತ ಚಾಮರಾಜನಗರ ತಾ|| ಮೊ: 9986102162 ಬಾಲರಾಜು, ದ್ವಿ.ದ.ಸ ತಾಲ್ಲೂಕು ಕಚೇರಿ ಚಾಮರಾಜನಗರ ಮೊ: 8150815550


ಗೋಪಾಲಗೌಡ ಆಸ್ಪತ್ರೆ, ಮೈಸೂರು ರಾಜೇಂದ್ರ ಪ್ರಸಾದ್,  ಉಪ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ, ಚಾಮರಾಜನಗರ. ಮೊ. 7019517306 ಡಾ|| ವೈದ್ಯನಾಥನ್ ಮತ್ತು ಡಾ|| ಆದರ್ಶ್(ಕಾವೇರಿ ಆಸ್ಪತ್ರೆ) ಡಾ|| ರಘುನಾಥ್ ಮತ್ತು ಡಾ|| ಲಕ್ಷ್ಮೀಕಾಂತ್‍ನದೀಂ ಹುಸೇನ್ ರಾಜಸ್ವ ನಿರೀಕ್ಷಕರು ಹಂಗಳ ಹೋಬಳಿ ಗುಂಡ್ಲುಪೇಟೆ ತಾ|| ಮೊ: 9482378786, ವಿನಯ್‍ಕುಮಾರ್ ವೈ.ಸಿ.ಗಾಮ ಲೆಕ್ಕಿಗರು ಕಣ್ಣೇಗಾಲ ವೃತ್ತಗುಂಡ್ಲುಪೇಟೆ ತಾ||ಮೊ: 7760632756 ಅರುಣ್ ಎಂ.ವೈ ಗಾಮ ಲೆಕ್ಕಿಗರು ಕಲೀಗೌಡನಹಳ್ಳಿ ವೃತ್ತ ಗುಂಡ್ಲುಪೇಟೆ ತಾಲ್ಲೂಕು ಮೊ: 9734098395


ಸುಯೋಗ್ ಆಸ್ಪತ್ರೆ, ಮೈಸೂರು  ಸೋಮಶೇಖರ್, ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಾಮರಾಜನಗರ. ಮೊ. 9945229477 ಡಾ| ಯೋಗಣ್ಣ ಮೊ: 9663113722 ನಂಜೇಗೌಡ ರಾಜಸ್ವ ನಿರೀಕ್ಷಕರು ತೆರಕಣಾಂಬಿ ಹೋಬಳಿ ಗುಂಡ್ಲುಪೇಟೆ ತಾ|| ಮೊ: 9448536861 ಕೃಷ್ಣಮೂರ್ತಿ ಗಾಮ ಲೆಕ್ಕಿಗರು ಪುಟ್ಟನಪುರ ವೃತ್ತ ಗುಂಡ್ಲುಪೇಟೆ ತಾ|| ಮೊ: 9342825630 ರಮೇಶ್ ಗಾಮ ಲೆಕ್ಕಿಗರು ಹಂಗಳ ವೃತ್ತ ಗುಂಡ್ಲುಪೇಟೆ ತಾ|| ಮೊ: 9483306166

ಅಪೋಲೋ ಆಸ್ಪತ್ರೆ, ಮೈಸೂರು  ಸುರೇಶ್, ಯೋಜನಾ ನಿರ್ದೇಶಕರು,  ಜಿಲ್ಲಾ ನಗರಾಭಿವೃದ್ಧಿ ಕೋಶ, ಚಾಮರಾಜನಗರ .ಮೊ. 7406127698 ಡಾ|| ಹೆಚ್.ಜಿ. ಭರತೇಶ್ ರೆಡ್ಡಿ. ಮೊ: 9741667788 ಭೈರಯ್ಯ ರಾಜಸ್ವ ನಿರೀಕ್ಷಕರು ಬೇಗೂರು ಹೋಬಳಿ,ಗುಂಡ್ಲುಪೇಟೆ ತಾ|| ಮೊ: 8277858907 ಸುಹಾಸ್ ಗ್ರಾ.ಲೆ, ಉಗನೀಯ ವೃತ್ತ ಹನೂರು ತಾ|| ಮೊ: 9535118280  ರವಿ ಗ್ರಾ.ಲೆ, ಶೀಗವಾಡಿ ವೃತ್ತ, ಗುಂಡ್ಲುಪೇಟೆ ತಾ|| ಮೊ: 9980349517


ಡಿ.ಆರ್.ಎಂ. (ವಿಕ್ರಂ) ಆಸ್ಪತ್ರೆ, (ಡಾ|| ಮಂಜುನಾಥ ಆಸ್ಪತ್ರೆ, ) ಒಂಟಿಕೊಪ್ಪಲು ಮೈಸೂರು.  ಆನಂದ, ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ, ಚಾಮರಾಜನಗರ.  ಮೊ. 7899686738 ಡಾ|| ಮಂಜುನಾಥ ಮೊ: 9738251350 ಶಿವಣ್ಣ ರಾಜಸ್ವ ನಿರೀಕ್ಷಕರು ಕಸಬಾ ಹೋಬಳಿ  ಗುಂಡ್ಲುಪೇಟೆ ತಾ|| ಮೊ: 9663457597 ರಾಜು ಗ್ರಾ.ಲೆ, ಕೂತನೂರು ವೃತ್ತ ಗುಂಡ್ಲುಪೇಟೆ ತಾ|| ಮೊ: 9739302662 ಯದುಗಿರಿ ಗ್ರಾ.ಲೆ, ಭೀಮನಬೀಡು ವೃತ್ತ ಗುಂಡ್ಲುಪೇಟೆ ತಾ|| ಮೊ: 7019194050


ಭಾನವಿ ಆಸ್ಪತ್ರೆ, ಮೈಸೂರು ಬಸವರಾಜು, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಾಮರಾಜನಗರ. ಮೊ.9972505030 ಸಿದ್ದಲಿಂಗಸ್ವಾಮಿ ರಾಜಸ್ವ ನಿರೀಕ್ಷಕರು ಅಗರ ಹೋಬಳಿ ಯಳಂದೂರು ತಾ|| ಮೊ: 8277858836 ಮುಜಾಹಿದ್  ದ್ವಿ.ದ.ಸ. ತಾಲ್ಲೂಕು ಕಚೇರಿ ಚಾಮರಾಜನಗರ  ಮೊ: 9901358329 ದೇವೇಂದ್ರನಾಯ್ಕ ಗ್ರಾ.ಲೆ, ಹೊನ್ನೂರು ವೃತ್ತ ಯಳಂದೂರು ತಾ|| ಮೊ:  8618541013

ಬೃಂದಾವನ ಆಸ್ಪತ್ರೆ , ಮೈಸೂರು ಸುಂದರೇಶ್‍ಮೂರ್ತಿ. ಕಾರ್ಯಪಾಲಕ ಅಭಿಯಂತರರು  ಕೆ.ಆರ್.ಐ.ಡಿ.ಎಲ್.  ಚಾಮರಾಜನಗರ ಮೊ: 9449863071, ನಂಜಯ್ಯ, ರಾಜಸ್ವ ನಿರೀಕ್ಷಕರು ಪಾಳ್ಯ ಹೋಬಳಿ, ಕೊಳ್ಳೇಗಾಲ ತಾ||,  ಮೊ: 9632891116 ದಿನಕರ್ ,ಗ್ರಾ.ಲೆ, ದಿನ್ನಳ್ಳಿ ವೃತ್ತ, ಹನೂರು ತಾ|| ,ಮೊ: 8277858916 ತಾರೇಶ್,  ಗ್ರಾ.ಲೆ, ತಾಲ್ಲೂಕು ಕಚೇರಿ ಚಾಮರಾಜನಗರ ಮೊ: 9845568909


ಕಾವೇರಿ ಆಸ್ಪತ್ರೆ, ಮೈಸೂರು ಸೈಯದ್ ನಯೀಮ್ ಅಹಮ್ಮದ್, ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಚಾಮರಾಜನಗರ, ಮೊ.9945164259 ಸತೀಶ್ ಜಿ.ಪಿ ಗ್ರಾ.ಲೆ, ಗೌಡಹಳ್ಳಿ ವೃತ್ತ, ಯಳಂದೂರು ತಾ||, ಮೊ. 9900510515 ನಂದಕುಮಾರ್‍ಗ್ರಾ.ಲೆ, ಯಳಂದೂರ ತಾ|| ಮೊ. 8183024048 ಶರತ್ ಗ್ರಾ.ಲೆ, ಯಳಂದೂರು ತಾ|| ಮೊ.7829596655

ನಾರಾಯಣ ಹೃದಯಾಲಯ,ಮೈಸೂರು ನಾಗೇಶ್ ಅಬಕಾರಿ ಉಪ ಆಯುಕ್ತರು ಚಾಮರಾಜನಗರ ಜಿಲ್ಲೆ,ಮೊ. 9448838004 ಜಯಪ್ಪ ಗ್ರಾ.ಲೆ ಚಾಮರಾಜನಗರ ತಾ||, ಮೊ.9449490017 ಮಹೇಶ್ ಕುಮಾರ್ ಗ್ರಾ.ಲೆ ಕಾಳನಹುಂಡಿ ವೃತ್ತ ಚಾಮರಾಜನಗರ ತಾ|| ಮೊ.9901262081 ಮಂಜುನಾಥ ಹಂಚಿನಮನೆ, ಗ್ರಾ.¯,É ಚಾಮರಾಜನಗರ ತಾ||ಮೊ.8884614054 / 8660726968

ಬೆಳೆ ಸಾಲ ಮನ್ನಾ: ರೈತರು ನೊಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ


ಚಾಮರಾಜನಗರ, ಡಿ. 17 - ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮಾಡಿರುವ ರೈತರಿಗೆ ಸಾಲ ಮನ್ನಾ ಮಾಡುವ ಸಲುವಾಗಿ ತಂತ್ರಾಂಶವೊಂದÀನ್ನು ಜಾರಿಗೆ ತಂದಿದ್ದು ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್‍ಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮನವಿ ಮಾಡಿದ್ದಾರೆ.
  2009ರ ಏಪ್ರಿಲ್ 1 ರಿಂದ 2017ರ ಡಿಸೆಂಬರ್ 31ರವರೆಗೆ ಬಾಕಿ ಇರುವ ಬೆಳೆ ಸಾಲ(sಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್.ಪಿ.ಎ. (ನಾನ್ ಪರ್ಫಾಮಿಂಗ್ ಅಸೆಟ್ ಸಾಲಗಳು)  ಪಡೆದಿರುವ ರೈತರು ಸಾಲ ಮನ್ನಾ ಯೋಜನೆಗೆ ಅರ್ಹರಾಗಿದ್ದಾರೆ. ಯೋಜನೆಯಡಿ ಒಂದು ರೈತ ಕುಟುಂಬವು (ಗಂಡ+ಹೆಂಡತಿ+ಅವಲಂಬಿತ ಮಕ್ಕಳು)  ಗರಿಷ್ಠ  2 ಲಕ್ಷ ರೂ.ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಸೌಲಭ್ಯ ಪಡೆಯಲು ಅವಕಾಶವಿದೆ.
ಜಿಲ್ಲೆಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದ ರೈತರ ಸಂಖ್ಯೆ 22978 ಆಗಿದ್ದು ಈ ಪೈಕಿ 19325 ರೈತರ ಬೆಳೆ ಸಾಲ ಮನ್ನಾ ಕುರಿತು ಪರಿಶೀಲಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕಿನ ಶಾಖೆಗಳಲ್ಲಿ ಪ್ರತಿದಿನ ಕನಿಷ್ಟ 40 ರೈತರು ಹೆಸರÀು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ರೈತರಿಗೆ ಕ್ರಮಬದ್ದವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿದ ಟೋಕನ್‍ಗಳನ್ನು ನೀಡಲಾಗುವುದು. ನಿಗದಿಪಡಿಸಿದ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ಸ್ವಯಂ ದೃಢೀಕರಣ ಪತ್ರದೊಂದಿಗೆ ,ಆಧಾರ್ ಕಾರ್ಡ್, ಪಡಿತರ ಚೀಟಿ (ದಿನಾಂಕ 5.7.2018ಕ್ಕಿಂತ ಮುಂಚಿತವಾಗಿ ಪಡೆದ ಪಡಿತರ ಚೀಟಿ) ನಕಲು, ಪಹಣಿ ಪತ್ರದೊಂದಿಗೆ ಬೆಳೆ ಸಾಲ ಮನ್ನಾ ತಂತ್ರಾಂಶದಲ್ಲಿ ನೊಂದಾಯಿಸಿಕೊಳ್ಳಬೇಕು.
    ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರರೋ ಮತ್ತು ರಾಜ್ಯ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು  15 ಸಾವಿರ ರೂ.ಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್‍ನ ಬೆಳೆಸಾಲ ಮನ್ನಾ ಯೋಜನೆಗೆ ಅರ್ಹರಿರುವುದಿಲ್ಲ.
ಅರ್ಹ ರೈತರು ಬೆಳೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ಹೆಸರು ನೊಂದಾಯಿಸಿಕೊಳ್ಳಲು 2019ರ ಜನವರಿ 10ರವರೆಗೆ ಕಾಲಾವಕಾಶ ನೀಡಲಾಗಿದೆ. ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳಬೇಕು.

ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಾಹಿತಿ ಕೇಂದ್ರವನ್ನು ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 104ರಲ್ಲಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 08226-223160 ಸಂಪರ್ಕಿಸಿಯೂ ಸಹ ವಿವರ ಪಡೆಯಬಹುದಾಗಿದೆ. ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಸಂದೇಹಗಳಿದಲ್ಲಿ ಪರಿಹಾರಕ್ಕಾಗಿ ಹಾಗೂ ಸಲಹೆಗಳನ್ನು ಪಡೆಯಲು ಆಯಾ ತಾಲೂಕಿಗೆÀ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿಲೀಪ್, ಚಾಮರಾಜನಗರÀ – ಮೊಬೈಲ್ 9535803412, ರಾಜೇಂದ್ರ, ಕೊಳ್ಳೇಗಾಲ - ಮೊ. 9901885361, ಕಾರ್ತಿಕ್, ಹನೂರು – ಮೊ. 9743299941, ವಾಸುದೇವ, ಗುಂಡ್ಲುಪೇಟೆ – ಮೊ. 9742593734, ಶರತ್, ಯಳಂದೂರು – ಮೊ. 7829596655 ಇವರನ್ನು ಸಂಪರ್ಕಿಸಿ ಬೆಳೆ ಸಾಲ ಮನ್ನಾ ಮಾಹಿತಿ, ಸಲಹೆ ಹಾಗೂ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.




 ಗ್ರಾ.ಪಂ. ಉಪಚುನಾವಣೆ : ಜಿಲ್ಲಾಧಿಕಾರಿಯವರಿಂದ ಅಧಿಸೂಚನೆ

ಚಾಮರಾಜನಗರ, ಡಿ. 17 - ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಒಟ್ಟು 5 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಜಿಲ್ಲೆಯ ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿಯ ಬಸವಾಪುರ ಕ್ಷೇತ್ರ (ಅನುಸೂಚಿತ ಜಾತಿ), ಅರಕಲವಾಡಿ ಗ್ರಾಮ ಪಂಚಾಯಿತಿಯ ಮೂಡ್ಲ ಹೊಸಹಳ್ಳಿ ಕ್ಷೇತ್ರ (ಸಾಮಾನ್ಯ), ದೇಮಹಳ್ಳಿ ಗ್ರಾಮ ಪಂಚಾಯಿತಿಯ ದೇಮಹಳ್ಳಿ ಕ್ಷೇತ್ರ (ಸಾಮಾನ್ಯ), ಕೊಳ್ಳೇಗಾಲ ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿಯ ಪಿ.ಜಿ ಪಾಳ್ಯ ಕ್ಷೇತ್ರ (ಸಾಮಾನ್ಯ), ಯಳಂದೂರು ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯ ಹೊನ್ನೂರು ಕ್ಷೇತ್ರ (ಸಾಮಾನ್ಯ)ಕ್ಕೆ ಚುನಾವಣೆ ನಿಗದಿಯಾಗಿದೆ. ಒಟ್ಟು 5 ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.
ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 20 ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಕಾರ್ಯವು ಡಿಸೆಂಬರ್ 21ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿಸೆಂಬರ್ 24 ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ 2019ರ ಜನವರಿ 2ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮರು ಮತದಾನ ಅವಶ್ಯವಿದ್ದಲ್ಲಿ ಜನವರಿ 3ರಂದು ನಡೆಸಲಾಗುತ್ತದೆ. ಮತಗಳ ಎಣಿಕೆ ಕಾರ್ಯವು 2019ರ ಜನವರಿ 4ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಜನವರಿ 4ರಂದೇ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಜಿಲ್ಲಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





ದ್ವಿತೀಯ ಪಿಯು ಪರೀಕ್ಷೆ : ನೊಂದಾಯಿತ ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳು
ಭಾವಚಿತ್ರ ಸಲ್ಲಿಸಲು ಸೂಚನೆ

ಚಾಮರಾಜನಗರ, ಡಿ. 17 - ಪದವಿಪೂರ್ವ ಶಿಕ್ಷಣ ಇಲಾಖೆಯು ಮಾರ್ಚ್ 2019ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ನೊಂದಾಯಿಸಿಕೊಂಡಿರುವ ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ನೊಂದಾಯಿಸಿಕೊಂಡಿರುವ ಕಾಲೇಜಿಗೆ ತಮ್ಮ ಇತ್ತೀಚಿನ ಭಾವಚಿತ್ರವನ್ನು ಡಿಸೆಂಬರ್ 20ರೊಳಗೆ ತುರ್ತಾಗಿ ಸಲ್ಲಿಸುವಂತೆ ಹಾಗೂ ಖುದ್ದಾಗಿ ಪ್ರಾಂಶುಪಾಲರನ್ನು ಭೇಟಿಯಾಗುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಡಿ. 21ರಂದು ಚಾ.ನಗರ ತಾ.ಪಂ. ಸಾಮಾನ್ಯ ಸಭೆ

ಚಾಮರಾಜನಗರ, ಡಿ. 17  ಚಾಮರಾಜನಗರ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ದೊಡ್ಡಮ್ಮ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 21ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 29ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

ಚಾಮರಾಜನಗರ, ಡಿ. 17:- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯು ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡÉಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಸಾಪ ಪರೀಕ್ಷೆ : ಪ್ರವೇಶ ಪತ್ರ ರವಾನೆ

ಚಾಮರಾಜನಗರ, ಡಿ. 17  ಕನ್ನಡ ಸಾಹಿತ್ಯ ಪರಿಷತ್ತಿನ 2018-19ನೇ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು 2019ರ ಜನವರಿ 11, 12 ಮತ್ತು 13ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ.
ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಡಿಸೆಂಬರ್ 29ರ ನಂತರವೂ ಪ್ರವೇಶ ಪತ್ರ ತಲುಪದಿದ್ದಲ್ಲಿ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಇವರಲ್ಲಿ ವಿಚಾರಿಸಬಹುದು.
ಬೇರೆ ಜಿಲ್ಲೆಯವರಿಗೆ ಪ್ರವೇಶ ಪತ್ರ ತಲುಪದಿದ್ದಲ್ಲಿ ಪರೀಕ್ಷಾ ಕೇಂದ್ರಕ್ಕೆ ನೇರವಾಗಿ ಹಾಜರಾಗಬಹುದು. ಪರೀಕ್ಷಾ ಕೇದ್ರದ ವಿವರವನ್ನು ದೂರವಾಣಿ ಸಂಖ್ಯೆ 080-26623584ಗೆ ಕರೆ ಮಾಡಿ ಪಡೆಯಬಹುದು. ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ ತಿತಿತಿ.ಞಚಿsಚಿಠಿಚಿ.iಟಿ ಮೂಲಕವೂ ಪಡೆದುಕೊಳ್ಳಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನೆರಳು ಪರದೆ (ಶೇಡ್ ನೆಟ್) ನಿರ್ಮಾಣ ಸಹಾಯಧನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಡಿ. 17 ತೋಟಗಾರಿಕೆ ಇಲಾಖೆಯು 2018-19ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ನೆರಳು ಪರದೆ (ಶೇಡ್ ನೆಟ್) ನಿರ್ಮಾಣಕ್ಕೆ ಸಹಾಯಧನ ಒದಗಿಸಲಿದ್ದು ರೈತರಿಂದ ಅರ್ಜಿ ಆಹ್ವಾನಿಸಿದೆ.
ನೆರಳು ಪರದೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದಡಿ ಅನುದಾನ ಲಭ್ಯವಿದೆ. ನೆರಳು ಪರದೆ ಮನೆಯ ಜಿಐ ಪೈಪ್‍ಗಳಿಂದ ವೈಜ್ಞಾನಿಕವಾಗಿ ವಿನ್ಯಾಸ ಮಾಡಿ ನಿರ್ಮಿಸಲ್ಪಟ್ಟ ಆಕೃತಿಗಳನ್ನು ತೋಟಗಾರಿಕೆ ಬೆಳೆಗಳ ಅವಶ್ಯಕತೆಗೆ ತಕ್ಕಂತೆ ನಿಗಧಿತ ಪ್ರಮಾಣದಲ್ಲಿ ನೆರಳನ್ನು ಒದಗಿಸುವ ಪ್ಲಾಸ್ಟಿಕ್ ಪರದೆಗಳಿಂದ ಕೂಡಿದೆ. ಬೇಸಿಗೆ ಅಥವಾ ಹೆಚ್ಚು ಮಳೆಗಾಲದಲ್ಲಿಯೂ ಸಹ ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆಯಲು, ತರಕಾರಿ, ಹಣ್ಣಿನ ಸಸ್ಯಾಭಿವೃದ್ಧಿ (ನರ್ಸರಿ ಚಟುವಟಿಕೆ), ನೆರಳು ಪರದೆಯ ಬೆಳೆಗಳನ್ನು ನೇರಳಾತೀತ ಕಿರಣಗಳನ್ನು ಸ್ಥಳೀಕರಣಗೊಳಿಸಿ ತೀವ್ರವಾದ ಉಷ್ಣಾಂಶವನ್ನು ನಿಯಂತ್ರಿಸುವುದರಿಂದ ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ಗುಣಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಘಟಕದಲ್ಲಿ ಮುಖ್ಯವಾಗಿ ದೊಣ್ಣೆ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಪೋಲ್ ಬೀನ್ಸ್, ಸೌತೆಕಾಯಿ, ಟಮೋಟೋ ಬೆಳೆ ಬೆಳೆಯಲು ಸೂಕ್ತವಾಗಿದೆ.
ಆಸಕ್ತ ರೈತರು ಅರ್ಜಿಯೊಂದಿಗೆ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಚೆಕ್‍ಬಂದಿ, ನೀರಾವರಿ ಮೂಲದ ದೃಢೀಕರಣ, ಮತದಾರರ ಗುರುತಿನ ಚೀಟಿ, ಆಧಾರ್, ಪಡಿತರ ಚೀಟಿಗಳ ಜೆರಾಕ್ಸ್, ಯೋಜನೆ ಕುರಿತು ಪ್ರಸ್ತಾವನೆ (ಡಿಪಿಆರ್ – ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ ಆಯಾ ತಾಲೂಕಿನ (ಗುಂಡ್ಲುಪೇಟೆ ಹೊರತುಪಡಿಸಿ) ತೋಟಗಾರಿಕೆ ಇಲಾಖೆ ಕಚೇರಿಗೆ ಡಿಸೆಂಬರ್ 26ರೊಳಗೆ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sunday, 9 December 2018

ಚಾಮರಾಜನಗರದಲ್ಲಿ ಯಶಸ್ವಿಯಾಗಿ ನಡೆದ ಜೆಎಸ್‍ಎಸ್ ರಂಗೋತ್ಸವ, ( ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ )


ಚಾಮರಾಜನಗರದಲ್ಲಿ ಯಶಸ್ವಿಯಾಗಿ ನಡೆದ ಜೆಎಸ್‍ಎಸ್ ರಂಗೋತ್ಸವ 

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ 

 ಚಾಮರಾಜನಗರ:  ಮಕ್ಕಳ ರಂಗಭೂಮಿಗೆ ಹೆಚ್ಚು ಪೆÇ್ರೀತ್ಸಾಹ ಕೊಡಬೇಕೆಂಬ ನಿಟ್ಟಿನಲ್ಲಿ ಆರಂಭವಾದ ಜೆಎಸ್‍ಎಸ್ ರಂಗೋತ್ಸವವು ಈಗ 6ನೆಯ ವರ್ಷಕ್ಕೆ ಕಾಲಿಟ್ಟಿದ್ದು ಇಂತಹ ಸುಸಂದರ್ಭದಲ್ಲಿ ವಿವಿದ ನಾಟಕಗಳನ್ನು ನೀಢಿರುವ ಕಲಾವಿದರು ಇತ್ತೀಚೆಗೆ ( ಡಿಸೆಂಬರ್ 7,8 ಮತ್ತು 9 ರಂದು) ವಿವಿದ ನಾಟಕಗಳನ್ನ ಚಾಮರಾಜನಗರ ಜನತೆಗೆ ಉಚಿತವಾಗಿ ಪ್ರದರ್ಶನಗಳನ್ನು ನೀಡುವ ಮೂಲಕ ಮನರಂಜನೆ ನೀಡಿದರು. 


2011-18 ರವರೆಗೆ ಪುಷ್ಪರಾಣಿ, ನಾಯಿಮರಿ, ಅಳಿಲು ರಾಮಾಯಣ, ಆಮನಿ, ನಾಣಿ ಭಟ್ಟನ ಸ್ವರ್ಗದ ಕನಸು, ರೆಕ್ಕೆ ಕಟ್ಟುವಿರಾ, ಝುಂ ಝಾಂ ಆನೆ ಮತ್ತು ಪುಟ್ಟ, ಸರೀಸೃಪಗಳ ಸಭೆ, ಪಂಜರ ಶಾಲೆ, ಮಾನವಪುರದ ರಾಜಕುಮಾರಿ, ಗುಮ್ಮ, ಮೃಚ್ಛಕಟಿಕ, ಸಾಹೇಬರು ಬರುತ್ತಾರೆ, ನ್ಯಾಯಕ್ಕೆ ಜಯ, ಬೆಪ್ಪತಕ್ಕಡಿ ಬೋಳೆ ಶಂಕರ, ಜನಪದ ಜೋಗಿ, ಗೊಂಬೆ ರಾವಣ, ಸತ್ರು ಅಂದ್ರೆ ಸಾಯ್ತಾರಾ, ಮೈನಾ ಹಕ್ಕಿ, ದ್ರೋಣ ಪ್ರತಿಜ್ಞೆ, ಕಂಸಾಯಣ, ರಾಮಧಾನ್ಯ ಪ್ರಕರಣ ನಾಟಕಗಳನ್ನು ಪ್ರದರ್ಶಿಸಲಾದ ಕಲಾವಿದರುಗಳು ಪ್ರಸಕ್ತ ವರ್ಷ ಇಲಿ ಮಡಕೆ, ತಲೆಬಾಗದ ಜನ, ನಾಯಿತಿಪ್ಪ ಈ ನಾಟಕಗಳು ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರದಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮೂರು ರಂಗೋತ್ಸವಗಳಲ್ಲಿಯೂ ಪ್ರದರ್ಶನಗೊಂಢಿದ್ದು ಸುತ್ತೂರು ಜಾತ್ರೆಯಲ್ಲಿಯೂ  ಪ್ರದರ್ಶನಗೊಳ್ಳಲಿವೆ.

2009-10 ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆದ ಜಶ್ನ್ ಎ ಬಚಪನ್ ನಾಟಕೋತ್ಸವದಲಿ ್ಲಶ್ರೀ ಹೆಚ್. ಜನಾರ್ಧನ್ (ಜನ್ನಿ) ನಿರ್ದೇಶನದದಲ್ಲಿ ಕುವೆಂಪು ವಿರಚಿತ ‘ಕಿಂದರಿ ಜೋಗಿ' ನಾಟಕ ಪ್ರದರ್ಶನಗೊಂಡಿದೆ. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಶ್ರೀಮತಿ ಸುಮತಿ ಕೆ.ಆರ್.ರವರ ನಿರ್ದೇಶನದಲ್ಲಿ ಡಾ. ಎಚ್.ಎಸ್. ವೆಂಕಟೇಶ್‍ಮೂರ್ತಿ ರಚಿಸಿದ ‘ಚಿತ್ರಪಟ' ನಾಟಕವನ್ನು ಪ್ರದರ್ಶಿಸಲಾಯಿತು. ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತಮಾನೋತ್ಸವದ ಅಂಗವಾಗಿ ರೂಪುಗೊಂಡ ‘ದಿವೃಚೇತನ' ನಾಟಕವು ಶಾಲಾಕಾಲೇಜುಗಳ ಪ್ರದರ್ಶನಗಳು ಸೇರಿದಂತೆ 70 ಪ್ರದರ್ಶನಗಳನ್ನು ಕಂಡಿದ್ದಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ ಒಟ್ಟು 100ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನಮೆಚ್ಚುಗೆಗೆ ಪಾತ್ರವಾಗಿದೆ.
ಚಾಮರಾಜಗರ ಜೆ,ಎಸ್.ಎಸ್ ಕಾಲೇಜಿನಲ್ಲಿ ನಡೆದ ನಾಟಕ ಪ್ರದರ್ಶನ ಪೈಕಿ ಚಾಮರಾಜನಗರ ಸಮೀಪವಿರುವ ರಾಮಸಮುದ್ರದ ಕಲಾವಿದ ಹಾಗೂ ನಿರ್ದೆಶಕರಾ ಮಂಜುನಾಥ್ ಆಲಿಯಾಸ್ ಮಂಜುನಾಥ್ ಕಾಚಕ್ಕಿ ಅವರ ನಾಟಕ  ಸೇರಿದಂತೆ ಇನ್ನಿತರ ನಾಟಕಗಳು ಜನಮನ್ನಣೆ ಗಳಿಸಿದವು.


  ತಲೆಬಾಗದ ಜನ ನಾಟಕವನ್ನು ಕೆ. ವೆಂಕಟರಾಜು ರಚನೆ ಮಾಡಲಾಗಿದ್ದು,ಸಂಗೀತವನ್ನು ಚಂದ್ರಶೇಖರಾಚಾರ್ ಹೆಗ್ಗೊಠಾರ  ನೀಡಿದ್ದಾರೆ. ನಾಟಕದಲ್ಲಿ  ವಿನ್ಯಾಸ ಮತ್ತು ನಿರ್ದೇಶನ   : ಮಂಜುನಾಥ್ (ಕಾಚಕ್ಕಿ) ಅವರು ಮಾಡಿದ್ದು, ಪ್ರಶಾಂತ ಬಿ (ಮಾದರಸನಕೊಪ್ಪ) ಬೆಳಕು ನೀಡಿದ್ದಾರೆ. ನಾಟಕದ  ಸಹನಿರ್ದೇಶನವನ್ನು ಸಮತಾ ಪಿ.ಜಿ. ಅವರು ಮಾಡಿದ್ದು ನಂಜನಗೂಡು (ತಾ.) ಮಹದೇವನಗರ, ಜೆಎಸ್‍ಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಅಬಿನಯಿಸಿದ್ದಾರೆ.
  
  ತಲೆಬಾಗದ ಜನ  ಎಂಬ ನಾಟಕದಲ್ಲಿನ ಸಾರಾಂಶ: 1947 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಈಸೂರಿನಲ್ಲಿ ನಡೆದ ಘಟನೆ. ಬ್ರಿಟಿಷರ ದಬ್ಬಾಳಿಕೆಯನ್ನು ಪ್ರತಿಭಟಿಸಿ ತನಗೆ ತಾನೇ ಸ್ವತಂತ್ರ ಹಳ್ಳಿ ಎಂದು ಸಾರಿಕೊಂಡ ಈ ಗ್ರಾಮದ ಎಲ್ಲರೂ ಗಾಂಧಿ ಟೋಪಿಯನ್ನು ಧರಿಸಲೇಬೇಕು. ಹತ್ತು ವರ್ಷದ ಪುಟ್ಟ ಬಾಲಕನನ್ನು ಅಮಲ್ದಾರನನ್ನಾಗಿ ನೇಮಿಸಿಕೊಂಡು ಬ್ರಿಟಿಷ್ ಸರ್ಕಾರಕ್ಕೆ ಎದುರಾಗುತ್ತಾರೆ. ಸನ್ನಿವೇಷಗಳು ಕೈಮೀರಿ ಬ್ರಿಟಿಷ್ ಸರ್ಕಾರದಿಂದ ನೇಮಿತರಾಗಿದ್ದ ಅಮಲ್ದಾರ್ ಮತ್ತು ಪೆÇಲೀಸ್ ಇನ್ಸ್‍ಪೆಕ್ಟರ್ ಕೊಲೆಯಾಗುತ್ತದೆ. ಇದರಿಂದ ಕೋಪಗೊಂಡ ಪೆÇಲೀಸ್ ಪಡೆ ಈಸೂರು ಗ್ರಾಮಕ್ಕೆ ನುಗ್ಗಿ ಮನೆಗಳಿಗೆ ಬೆಂಕಿ ಹಚ್ಚಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಧೂಳೀಪಟ ಮಾಡುತ್ತಾರೆ. ಸಿಕ್ಕಸಿಕ್ಕವರ ಮೇಲೆ ಮೊಕದ್ದಮೆ ಹೂಡಿದ್ದರ ಫಲವಾಗಿ ಗುರಪ್ಪ, ಮಲ್ಲಪ್ಪ, ಸೂರ್ಯನಾರಾಯಣಾಚಾರಿ, ಹಾಲಪ್ಪ, ಶಂಕರಪ್ಪನವರಿಗೆ ಗಲ್ಲುಶಿಕ್ಷೆಯಾಗುತ್ತದೆ. ಇದು ನಾಟಕದ ಸಾರಾಂಶವಾಗಿದೆ.
ವಿನಯ್‍ಕುಮಾರ್ ಎಂ. ವಿನಯ್‍ಕುಮಾರ್ ಹೆಚ್. ಪುನೀತ್ ರಾಜ್ ಡಿ. ಮನು ವಿ. ಸಾಗರ್ ವಿ. ಕೃಷ್ಣ ಎಸ್. ಕಾರ್ತಿಕ್ ಜಿ.ಎಸ್. ವಿಕಾಸ್ ಎಸ್. ದರ್ಶನ್ ಎ. ಮೋಹನ್‍ಕುಮಾರ್ ಚಿನ್ನಸ್ವಾಮಿ ಕೆ. ವಿನಯ್‍ಕುಮಾರ್ ಜಯಂತ್ ಎಲ್.ಮಹದೇವಸ್ವಾಮಿ,ಶರತ್‍ಕುಮಾರ್.ಎಸ್.ಸ್ಪಂದನಾ.ಕೆ.ತಂಜೀ:ಯಾ,ಮೇಘನ,ಸುಚಿತ್ರ,ರೀತು,ರಕ್ಷಿತ ಮಾನಸ ಅವರುಗಳು ರಂಗದಮೇಲಿದ್ದರೆ, ರಂಗದ ಹಿಂದೆ  ರಂಗಪರಿಕರ ಹಾಗೂ ರಂಗಸಜ್ಜಿಕೆ ಮಧೂಸೂದನ್,ವಸ್ತ್ರವಿನ್ಯಾಸಕರಾಗಿ ಶಕುಂತಲಾ ಹೆಗಡೆ, ಮಹೇಶ್ ಹೆಬ್ಬಾಳ್, ಪ್ರಸಾಧನ ಮಂಜುನಾಥ್ (ಕಾಚಕ್ಕಿ)ಸಂಗೀತ ಸಾಂಗತ್ಯವನ್ನು  ಮೈಸೂರಿನ ಕೃಷ್ಣ ಚೈತನ್ಯ ಅವರು ನೀಡಿದ್ದಾರೆ. 
ಪ್ರಮುಖವಾಗಿ ಜಿಲ್ಲೆಯವರೇ ಹಾಗೂ ಪಟ್ಟಣದವರೇ ಆದ ವೆಂಕಟರಾಜು ಮಂಜುನಾಥ ಕಾಚಕ್ಕಿ ಅವರ ಸ್ವಲ್ಪ ವಿವರಗಳಿ ಹೀಗಿದೆ. ನಾಟಕಕಾರÀರಾದ ಶ್ರೀ ಕೆ. ವೆಂಕಟರಾಜುರವರು ಚಾಮರಾಜನಗರ ಜಿಲ್ಲೆಯವರು. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಕಳೆದ 45 ವರ್ಷಗಳಿಂದ ಚಾಮರಾಜನಗರದಲ್ಲಿ ಶಾಂತಲ ಕಲಾವಿದರು ಎಂಬ ಸಂಸ್ಥೆ ಕಟ್ಟಿ ರಂಗ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ರಜಿನಿ ಭಕ್ಷಿ ಅವರ ಬಾಪುಕುಟಿ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದಕ್ಕೆ ರಾಜ್ಯ ಅನುವಾದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದಲ್ಲದೇ ನಾಟಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಿದ್ಧನಳ್ಳಿ ಕೃಷ್ಣಶರ್ಮ ಪ್ರಶಸ್ತಿಗಳು ಬಂದಿವೆ.
ನಿರ್ದೇಶಕರರಾದ ಶ್ರೀ ಮಂಜುನಾಥ ಕಾಚಕ್ಕಿ ಇವರು ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಗ್ರಾಮದವರು. ಇವರು ನೀನಾಸಂ ರಂಗತರಬೇತಿ ಪಡೆದುಕೊಂಡು ಗೊಂಬೆರಾವಣ, ನಾಯಿಮರಿ, ನಾಣಿಭಟ್ಟನ ಸ್ವರ್ಗದ ಕನಸು, ತಲೆಬಾಗದ ಜನ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಇವರು ಜೆಎಸ್‍ಎಸ್ ಪ್ರೌಢಶಾಲೆ, ಸಂತೆಮರಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ನಾಟಕ ಶಿಕ್ಷಕರಾಗಿ ಕಲಾಮಂಟಪದಲ್ಲಿ ನಟರಾಗಿ ಬೇಸಿಗೆ ಶಿಬಿರಗಳು ಮತ್ತು ರಂಗೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 


 ಸಹನಿರ್ದೇಶಕರಾದ ಶ್ರೀಮತಿ ಪಿ ಜಿ ಸಮತ ಇವರು ನೀನಾಸಂನಲ್ಲಿ ರಂಗತರಬೇತಿ ಪಡೆದಿದ್ದಾರೆ. ಗುಮ್ಮ, ನ್ಯಾಯಕ್ಕೆ ಜಯ, ನಾಟಕಗಳನ್ನು ಜೆಎಸ್‍ಎಸ್ ರಂಗೋತ್ಸವಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಪ್ರೌಢಶಾಲೆ ಗಿರಿಯಬೋವಿಪಾಳ್ಯದಲ್ಲಿ ರಂಗಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

      _______________________________________-                      

ನಾಯಿತಿಪ್ಪ  ಎಂಬ ನಾಟಕದ ರಚನೆಯನ್ನು ಕೋಟಗಾನಹಳ್ಳಿ ರಾಮಯ್ಯ ಅವರು ಮಾಡಿದ್ದು ಚಂದ್ರಶೇಖರಾಚಾರ್ ಹೆಗ್ಗೊಠಾರ ಅವರು ಸಂಗೀತ, ವಿನ್ಯಾಸ ಮತ್ತು ನಿರ್ದೇಶನ  ಮಾಢಿದ್ದಾರೆ. ಜೀವನ್‍ಕುಮಾರ್ ಬಿ ಹೆಗ್ಗೋಡು ಅವರು          ಬೆಳಕು ನೀಡಿದ್ದು,ಸಹ ನಿರ್ದೇಶನವನ್ನು ಪ್ರಶಾಂತ ಬಿ (ಮಾದರಸನಕೊಪ್ಪ) ಮಾಡಿದ್ದಾರೆ
ಮೈಸೂರು ಜೆ.ಪಿ.ನಗರ ನಾಚನಹಳ್ಳಿಪಾಳ್ಯದ ಜೆಎಸ್‍ಎಸ್ ಪ್ರೌಢಶಾಲೆ ಮಕ್ಕಳು ಅಭಿನಯಿಸಿದ್ದಾರೆ

   ನಾಯಿತಿಪ್ಪ  ನಾಟಕದ ಸಾರಾಂಶ: ಅಜ್ಜಿ ಹೇಳುವ ಹಾಗೆ ಕಾಳು ಕೋಡೋ ಭೂಮಿತಾಯಿ ಕಾಸು ಕೊಟ್ಟು ಕೊಟ್ಟು ಬಂಜೆಯಾಗೋದ್ಲು, ಬಡವಳಾದ ಅಜ್ಜಿ, ಮೊಮ್ಮಗ ತಿಪ್ಪನನ್ನು ಕೂಲಿ ಕೆಲಸಕ್ಕಾಗಿ ಬೆಂಗಳೂರು ಪ್ಯಾಟಿಗೆ ಕಳುಹಿಸುತ್ತಾಳೆ. ಬೆಂಗಳೂರಿಗೆ ಬಂದ ತಿಪ್ಪ ಅಲ್ಲಿನ ಆಕಾಶದೆತ್ತರದ ಬಿಲ್ಡಿಂಗ್‍ಗಳು, ವಾಹನ ದಟ್ಟಣೆ, ಕಾರ್ಖಾನೆಗಳು, ಕಂಪನಿಗಳು, ವಿಚಿತ್ರ ಜನರನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಾನೆ. ಅಲ್ಲಿ ಜನರ ಆಟಾಟೋಪಕ್ಕೆ ಸಿಕ್ಕು ನರಳಿ ಊರಿಗೆ ಮರಳುತ್ತಾನೆ. ಊರವರ ಸಲಹೆಯ ಮೇರೆಗೆ ಅಜ್ಜಿ ದೋಸೆ ಮಾರಲು ತಿಪ್ಪನನ್ನು ಕಳುಹಿಸುತ್ತಾಳೆ. ವ್ಯಾಪಾರದ ಗುಟ್ಟು ಅರಿಯದ ತಿಪ್ಪ ಮಾರಲಾಗದೆ ನಾಯಿಗಳೇ ಗಿರಾಕಿಗಳೆಂದು ತಿಳಿದುಕೊಂಡು ಅವುಗಳಿಗೆ ಕೊಟ್ಟು ಬರಿಗೈಯಲ್ಲಿ ಹಿಂದಿರುಗುತ್ತಾನೆ. ಕೊನೆಗೆ ನಾಯಿಗಳ ಸಹಾಯದಿಂದ ಕಳ್ಳರು ಬಿಟ್ಟುಹೋದ ಹಣ ಸಿಗುತ್ತದೆ. ಅದನ್ನು ಉಳಿಸಿಕೊಳ್ಳಲು ಅಜ್ಜಿ ತಂತ್ರಗಳನ್ನು ಹೂಡುತ್ತಾಳೆ. ಸರ್ಕಾರಕ್ಕೂ ತಿಳಿದು ಕೋರ್ಟ್‍ನಲ್ಲೂ ಬಚಾವಾಗುತ್ತಾಳೆ. ಇಂದು ರೈತರು ಜಮೀನು ಕಳೆದುಕೊಂಡು ಪಟ್ಟಣಗಳಿಗೆ ಗುಳೇ ಹೋಗುತ್ತಿರುವ ಈ ಸಂದರ್ಭದಲ್ಲಿ ಜಾಗತೀಕರಣ ಹಾಗೂ ವ್ಯಾಪಾರೀಕರಣದ ಭರಾಟೆಯಲ್ಲಿಯೂ ಮುಗ್ಧತೆಯೆ ಗೆಲ್ಲಬೇಕೆಂಬುದು ಈ ನಾಟಕದ ಕೇಂದ್ರಭಾವವಾಗಿದೆ.  
        ನಾಟಕಕಾರರಾದ ಶ್ರೀ ರಾಮಯ್ಯನವರು ಕೋಟಗಾನಹಳ್ಳಿಯವರು, ಸೃಜನಶೀಲ ಬರಹಗಾರರು ಎಡಪಂಥೀಯ ಚಿಂತಕರು, ಕಿರುತೆರೆ ಹಾಗೂ ಹಿರಿತೆರೆಯ ಸಂಭಾಷಣೆಕಾರರು, ಗಂಗಭಾರತ, ಡರ್‍ಬುರ್ ಬುಡ್ಡಣ್ಣ, ಹಕ್ಕಿಯ ಹಾಡು, ಒಗಟಿನರಾಣಿ, ರತ್ನಪಕ್ಷಿ, ಕಣ್ಣಾಸ್ಪತ್ರೆ, ನಾಯಿತಿಪ್ಪ ಇನ್ನೂ ಹಲವು ನಾಟಕಗಳನ್ನು ರಚಿಸಿದ್ದಾರೆ. ಆದಿಮ ಸಂಸ್ಥೆಯನ್ನು ಕಟ್ಟಿ ರಂಗಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. 
      
      
      ನಿರ್ದೇಶಕರಾದ   ಶ್ರೀ ಚಂದ್ರಶೇಖರಾಚಾರ್ ಹುಟ್ಟೂರು ಚಾಮರಾಜನಗರ ಜಿಲ್ಲೆ  ಹೆಗ್ಗೊಠಾರ. 1990 ರಲ್ಲಿ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೋಮಾ ಪದವಿ ಪಡೆದು 1991-92 ತಿರುಗಾಟದಲ್ಲಿ ನಟರಾಗಿ ಸಂಗೀತಗಾರರಾಗಿ ದುಡಿದಿದ್ದಾರೆ. ಸಂಗ್ಯಾಬಾಳ್ಯಾ, ಹೂ ಹುಡುಗಿ,  ತಲೆದಂಡ, ಅಥೆನ್ಸಿನ ಅರ್ಥವಂತ ಮುಖ್ಯ ನಾಟಕಗಳು. ಬಿ.ವಿ. ಕಾರಂತರು ನಿರ್ದೇಶಿಸಿದ ಗೋಕುಲ ನಿರ್ಗಮನ ನಾಟಕದಲ್ಲಿ ಮುಖ್ಯ ಗಾಯಕರಾಗಿ ದೇಶದಾದ್ಯಂತ ಸಂಚಾರ ಮಾಡಿದ್ದಾರೆ. ಬೆಟ್ಟಕ್ಕೆ ಚಳಿಯಾದರೆ, ನೀಲಿ ಕುದುರೆ, ಪುಷ್ಪರಾಣಿ, ಸೇವಂತಿ ಪ್ರಸಂಗ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕಾಕನಕೋಟೆ, ಮಂಟೇಸ್ವಾಮಿ ಕಥಾಪ್ರಸಂಗ, ಏಕಲವ್ಯ, ಮೈಸೂರು ಮಲ್ಲಿಗೆ, ಚೋರ ಚರಣದಾಸ, ಹಕ್ಕಿಯ ಹಾಡು, ಅಳಿಲು ರಾಮಾಯಣ. ಹೀಗೆ ನೂರಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನೀಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಕಲಾ ಮಂಟಪದಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ರಂಗ ಕಾರ್ಯಗಾರ, ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ.
ಸಹನಿರ್ದೇಶಕರಾದ ಶ್ರೀ ಪ್ರಶಾಂತ ಬಿ (ಮಾದರಸನಕೊಪ್ಪ) ಇವರು ನೀನಾಸಂನಲ್ಲಿ ರಂಗತರಬೇತಿ
ಪಡೆದಿದ್ದಾರೆ. ಜೆ ಎಸ್ ಎಸ್ ರಂಗೋತ್ಸವಕ್ಕೆ ಮೈನಾಹಕ್ಕಿ, ಸರೀಸೃಪಗಳ ಸಭೆ, ಪಂಜರ ಶಾಲೆ, ಕಂಸಾಯಣ,
ಬೆಪ್ಪತಕ್ಕಡಿ ಬೋಳೆಶಂಕರ ಈ ನಾಟಕಗಳಿಗೆ  ಸಂಗೀತ ನೀಡಿದ್ದಾರೆ ಮತ್ತು ನಿರ್ದೇಶನ ಮಾಡಿದ್ದಾರೆ. ಮೈನಾಹಕ್ಕಿ, ಸರೀಸೃಪಗಳ ಸಭೆ ಎಂಬ ನಾಟಕಗಳನ್ನು ರಚಿಸಿದ್ದಾರೆ. ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಸಂಪಾದಿಸಿರುವ ವೃಷಭೇಂದ್ರ ವಿಳಾಸ ಕೃತಿಯನ್ನು ಅಧರಿಸಿದ ಯಕ್ಷಗಾನ ನಾಟಕವನ್ನು ಮಹಿಳಾ ತಂಡಕ್ಕೆ ಕಲಿಸಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್
ಪ್ರೌಢಶಾಲೆ ನಾರ್ವೆಯಲ್ಲಿ ರಂಗಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಂಗದ ಮೇಲೆ : ಎಂ. ಪವನ್‍ಕುಮಾರ್, ಎಂ. ದರ್ಶನ್ ಎಲ್. ಶರತ್ ಎಂ. ತರುಣ್‍ಸ್ವಾಮಿ, ನಂದನ್ ರಾಕೇಶ್, ಸಿ. ಸಾಗರ್, ಕೆ. ಎಸ್. ಚೇತನ್, ಅರುಣ್, ಉಮೇಶ್, ಸೋಮಶೇಖರ್, ಆರ್. ಸ್ನೇಹ, ಮಹದೇವಸ್ವಾಮಿ, ರಂಜಿತ, ಜಿ. ಮೇಘನಾ, ಹೆಚ್.ಎಲ್.ಸಂಜನಾ, ಮರಿಯಾ ಝಾನ್ಸಿ, ಕೆ. ರಮ್ಯಾ, ಎಂ. ಚೈತನ್ಯ, ಫಿರ್‍ದೋಸ್ ಕೌಸರ್, ಸಹನಾ ಅವರುಗಳಿದ್ದರೆ ರಂಗದ ಹಿಂದೆ
ರಂಗಪರಿಕರ ಹಾಗೂ ರಂಗಸಜ್ಜಿಕೆ  ಮಧೂಸೂದನ್, ಸಂಗೀತ ಸಾಂಗತ್ಯ :  ಕೃಷ್ಣ ಚೈತನ್ಯ, ಮೈಸೂರು ವಸ್ತ್ರವಿನ್ಯಾಸ : ಶಕುಂತಲಾ ಹೆಗಡೆ, ಮಹೇಶ್ ಹೆಬ್ಬಾಳ್, ಪ್ರಸಾಧನವನ್ನು ಮಂಜುನಾಥ್ (ಕಾಚಕ್ಕಿ) ಮಾಡಿದ್ದಾರೆ.
         

   

 ಇಲಿ ಮಡಕೆ ನಾಟಕ : ಕಾಡುವಾಸಿಗಳ ಪುನರ್ವಸತಿ ಯೋಜನೆಯಿಂದಾಗಿ ಬುಡಬುಡಕೆಯವರು, ಹಕ್ಕಿಪಿಕ್ಕರು, ಗೊರವರು, ಗಿಣಿಶಾಸ್ತ್ರದವರು, ಕಾಡುಗೊಲ್ಲರು ಮುಂತಾದ ಬುಡಕಟ್ಟು ಜನಗಳ ಸಂಕಟಗಳನ್ನು ಹೇಳುವ ಕಥೆಯಾಗಿದೆ. ಪುನರ್ವಸತಿ ಕೊಡಲಿ ಕಾವಿಗೆ ಬಲಿಯಾಗಿ ಅತ್ತ ನಾಡಿಗೂ ಹೊಂದಿಕೊಳ್ಳಲಾಗದೆ, ಇತ್ತ ಕಾಡಿಗೂ ಮರಳಲಾಗದೆ ಪಡುವ ಪಾಡಿನ ಕುರಿತಾದ ಕಥೆ ಇದು. ಇಂಥದ್ದೆ ಪುನರ್ವಸತಿ ಪಂಜರದೊಳಗೆ ಬಂಧಿಯಾದ ಗಿಣಿ ಪಳಗಿಸುವ ಮಂಕಾಳಿ ಎಂಬ ರುದ್ರನ ಸೇಡಿನ ಕಥೆಯೂ ಹೌದು. ಕಳೆದುಹೋದ ತಮ್ಮ ಮೂಲ ಬದುಕನ್ನು ಮರು ತೆಗೆದುಕೊಳ್ಳುವ ಪ್ರಸಂಗಗಳು ಈ ಕಥೆಯ ಒಟ್ಟು ಹೂರಣ. ಆಧುನಿಕತೆ, ನಾಗರಿಕತೆ ಎಂದರೆ ಬರಿಯ ತಂತ್ರಜ್ಞಾನ, ಕಾನೂನು ಶಾಸನಗಳಲ್ಲಿ ಅದನ್ನು ಮೀರಿದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ-ಪರಂಪರೆಗಳನ್ನು ಗೌರವಿಸುವುದು ಎಂಬುದನ್ನು ಈ ಇಲಿ ಮಡಕೆ ನಾಟಕವು ನಿರೂಪಿಸುತ್ತದೆ.
ಇಲಿ ಮಡಕೆ ನಾಟಕವನ್ನು ಟಿ.ಕೆ. ದಯಾನಂದ್ ರಚನೆ ಮಾಡಿದ್ದು ರಂಗರೂಪವನ್ನು ಯತೀಶ್ ಕೊಳ್ಳೇಗಾಲ,ಸಂಗೀತವನ್ನು ಚಂದ್ರಶೇಖರಾಚಾರ್ ಹೆಗ್ಗೊಠಾರ ಅವರು ಮಾಡಿದ್ದಾರೆ. ಜೀವನ್‍ಕುಮಾರ್ ಬಿ ಹೆಗ್ಗೋಡು ಅವರು ವಿನ್ಯಾಸ, ಬೆಳಕು ಮತ್ತು ನಿರ್ದೇಶನ ಮಾಡಿದ್ದು ನಾಟಕದ ಸಹನಿರ್ದೇಶನವನ್ನು ಶಕುಂತಲಾ ಹೆಗಡೆ ಅವರು ಮಾಡಿದ್ದು
ಊಟಿ ರಸ್ತೆ, ಮೈಸೂರು ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.

 ನಾಟಕಕಾರರಾದ  ಶ್ರೀ ಟಿ ಕೆ ದಯಾನಂದ್‍ರವರ  ಜನ್ಮಸ್ಥಳ ಇವರು ತುಮಕೂರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯೂನಿಕೇಷನ್‍ನಲ್ಲಿ ಸ್ನಾತಕೋತ್ತರ ಪದವಿ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಸಂಶೋಧಕರಾಗಿ ನಗರದ ಬಡಜನರ ಕುರಿತಂತೆ ಅಧ್ಯಯನ ಮಾಡಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡ ರಸ್ತೆ ನಕ್ಷತ್ರ ಇವರ ಪ್ರಥಮ ಕೃತಿ. ರೆಕ್ಕೆ ಹಾವು ಇವರ ಮೊದಲ ಕಥಾಸಂಕಲನ. ಚಲನಚಿತ್ರ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ದಯಾನಂದ ಅವರು ಪ್ರಸ್ತುತ ಸುದ್ದಿ ಟಿ.ವಿ. ವಾಹಿನಿಯಲ್ಲಿ ಪೆÇ್ರೀಗ್ರಾಂ ಚೀಫ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
       
ಯತೀಶ್ ಕೊಳ್ಳೇಗಾಲರವರು  2005-06ರಲ್ಲಿ ನೀನಾಸಂ ಡಿಪೆÇ್ಲಮಾ ಮುಗಿಸಿದ್ದಾರೆ.  ನೀನಾಸಂ ತಿರುಗಾಟ, ರಂಗಭಾರತಿ ಹೂವಿನ ಹಡಗಲಿ, ಆಟಮಾಟ ಧಾರವಾಡ ತಂಡಗಳಲ್ಲಿ ನಟ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.  ಮಕ್ಕಳ ಶಿಬಿರ, ಅಭಿನಯ ಕಮ್ಮಟಗಳನ್ನು ನಿರ್ವಹಿಸಿದ ಅನುಭವ. 15ಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಹಾಗೂ ಅಭಿನಯಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಹಲವು ಸ್ವರಚಿತ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ ಇಲಿ ಮಡಕೆ ಕಥೆಯನ್ನು ರಂಗರೂಪ ಮಾಡಿದ್ದಾರೆ.

ನಿರ್ದೇಶಕರಾದ ಶ್ರೀ ಜೀವನ್ ಕುಮಾರ್‍ರವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನವರು. 2002-03 ರಲ್ಲಿ ನೀನಾಸಂ ಡಿಪ್ಲೋಮಾ ಪಡೆದಿದ್ದಾರೆ. ನಂತರ ನೀನಾಸಂ ತಿರುಗಾಟ, ನೀನಾಸಂ ಕಿರು ತಿರುಗಾಟ, ರಂಗಾಯಣದ ರಂಗ ಕಿಶೋರ, ಮಕ್ಕಳ ರಂಗಭೂಮಿಯಲ್ಲಿ ನಟರಾಗಿ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರಿನ ಕಾರಾಗೃಹ ಖೈದಿಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ, ಶಾಲಾ ಮಕ್ಕಳಿಗೆ, ಹವ್ಯಾಸಿ ತಂಡಗಳಿಗೆ ಹಲವಾರು ನಾಟಕಗಳನ್ನು ನಿರ್ದೆಶಿಸಿದ್ದಾರೆ. ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು ಜೀಕೆ ಮಾಸ್ತರರ ಪ್ರಣಯ ಪ್ರಸಂಗ, ಭಗವದಜ್ಜುಕೀಯಂ, ಚಿತ್ರಪಟ, ರಾಮಧಾನ್ಶ ಪ್ರಕರಣ, ಕೃಷ್ಣೇಗೌಡನ ಆನೆ, ಆಮನಿ, ಜಯಂತನ ಸ್ವಗತ, ಅಲ್ಲದೇ ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆ ಕುರಿತು ಅನೇಕ ಕಾರ್ಯಗಾರಗಳವನ್ನು ನಡೆಸಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಸಂಸ್ಥೆಯಲ್ಲಿ ರಂಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
      
 ಸಹನಿರ್ದೇಶಕರಾದ ಶ್ರೀಮತಿ ಶಕುಂತಲಾ ಹೆಗಡೆರವರು ನೀನಾಸಂನಲ್ಲಿ ರಂಗತರಬೇತಿ ಪಡೆದಿದ್ದಾರೆ. ರಂಗಾಯಣದ ರಂಗಕೀಶೋರದಲ್ಲಿ ಮಕ್ಕಳ ರಂಗಭೂಮಿ ಕುರಿತಾದ ಕೆಲಸ ನಿರ್ವಹಿಸಿದ್ದಾರೆ. ಜೆಎಸ್‍ಎಸ್ ರಂಗೋತ್ಸವಕ್ಕೆ ಸತ್ರು ಅಂದ್ರೆ ಸಾಯ್ತರಾ, ಅಳಿಲು ರಾಮಾಯಣ, ದ್ರೋಣಪ್ರತಿಜ್ಞೆ ಈ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಶಿಶುನಾಳ ಶರೀಫ ಪ್ರೌಢಶಾಲೆ ಉದಯಗಿರಿ ಯಲ್ಲಿ ರಂಗಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 ನಾಟಕದಲ್ಲಿ ಮನೋಜ್‍ಕುಮಾರ್,  ಬಿ.ಎಸ್. ಗಿರಿ, ಎಸ್. ಚೇತನ್ ಮನು ಕೆ.ಎಸ್. ಚೇತನ್ ಕುಮಾರ್ ಎಂ.ಪಿ.  ಹೇಮಂತ್ ಎಂ. ಮನೋಜ್ ಹೆಚ್.ಎಂ. ಮನೋಜ್ ಆರ್. ಆಕಾಶ್  ಭರತ್ ಹೆಚ್.ಎ. ರಾಜೇಶ್ ರಾಜ್ ಬಿ. ವೃಶ್ರೀ ರವಿ ಎಲ್.ಎಂ. ದೀಪಕ್  ಗುರುರಾಜ್ ಎಸ್. ತನುಷ್ ಬಿ.ಸಿ  ಮಾದೇವಸ್ಥಾಮಿ ಎಂ. ಸುಹಾಸ್ ಬಿ.ರಾಧ ಬಿ.ಎಸ್. ವಿದ್ಯಾಶ್ರೀ ಎಸ್. ತೇಜು ಬಿ. ನಿವೇದಿತಾ ಎಂ. ರಾಜಶ್ರೀ ಕೆ.ಎಸ್. ಸುನನ್ ಸುನಿಫ್  ಸುನೀಲ್ ಪುನೀತ್ ಪಿ.ಎಂ. ಪೂಜಿ ಪಿ. ಪೂಜಾ ಎನ್. ಅನು ಸಿ.  ರಂಗದ ಮೇಲಿದ್ದರೆ,,ರಂಗದ ಹಿಂದೆ ಮಧೂಸೂದನ್ (ರಂಗಪರಿಕರ ಹಾಗೂ ರಂಗಸಜ್ಜಿಕೆ) ಶಕುಂತಲಾ ಹೆಗಡೆ, ಮಹೇಶ್ ಹೆಬ್ಬಾಳ್(ವಸ್ತ್ರವಿನ್ಯಾಸ ) : ಪ್ರಸಾಧನ   ಮಂಜುನಾಥ್ (ಕಾಚಕ್ಕಿ) ಸಂಗೀತ ಸಾಂಗತ್ಯ : ಕೃಷ್ಣ ಚೈತನ್ಯ, ಮೈಸೂರು ಇವರುಗಳು ಇದ್ದಾರೆ.
_________________________________________________________________________-



       

Friday, 7 December 2018

ಉಪಮುಖ್ಯಮಂತ್ರಿಗಳೆ, ಇತ್ತ ನೋಡಿ.. ಮುರುಕಲು ಬಿದ್ದ,ಗೆದ್ದಲು ತಿಂದ ಪೊಲೀಸ್ ಠಾಣೆಯಾ!? *ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*




ಉಪಮುಖ್ಯಮಂತ್ರಿಗಳೆ, ಇತ್ತ ನೋಡಿ.. ಮುರುಕಲು ಬಿದ್ದ,ಗೆದ್ದಲು ತಿಂದ ಪೊಲೀಸ್ ಠಾಣೆಯಾ!?  

*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಇಲ್ಲೊಂದು ಪುಟ್ಟ ಠಾಣೆಯಿದೆ. ಈ ಠಾಣೆಗೆ ಸ್ವಂತ ನೆಲೆಯೂ ಇಲ್ಲ, ಕಟ್ಟಡವೂ ಇಲ್ಲ..ಗೆದ್ದಲು ಬಂದಿದೆ. ಮುರುದು ಗೋಡೆಗಳು ಕಳಚುತ್ತಿದೆ. ಇದನ್ನ ನೋಡಲು ಕೆಲವರು ಕಣ್ಣಿದ್ದು ಕುರುಡರಾಗಿದ್ದಾರೆ. 

 *ಹೌದು ಇದು ಚಾಮರಾಜನಗರ ಪಟ್ಟಣ ಠಾಣೆಯ ದುಸ್ಥಿತಿ.ಜೀವ ಕಾಪಾಡೋ ಜೀವಗಳು ಜೀವ ಹಿಡಿದು ಕೆಲಸ ಮಾಡ್ತಾರೆ.ಈ ಕಟ್ಟಡ ಬೇರೆಡೆಗೆ ವರ್ಗಾವಣೆ ಮಾಡಿ ಅಂತ ನೂರಾರು ಪತ್ರ ವ್ಯವಹಾರಗಳೆ ನಡೆದು ಹೋಗಿದೆ. ಶಾಸಕರು, ಸಚಿವರು ಭೇಟಿ ಕೊಟ್ಟಿದ್ದಾರೆ ಆದರೆ ಯಾವುದೂ ಕೂಡ ಸಫಲವಾಗದೇ ವಿಫಲವಾಗಿದೆ. *ಪ್ರತಿನಿತ್ಯ ನೂರಾರು ಸಮಸ್ಯೆಗಳನ್ನ ಹೊತ್ತು ತರುವ ಜನರು ಇದರ ಕೆಳಗಡೆ ಕೂರಲು ಹಿಂಜರಿಯಬೇಕು. ಇದನ್ನ ಬೇರೆಡೆಗೆ ವರ್ಗಾಯಿಸಬೇಕೆಂದು ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್.ವೀರಭದ್ರಸ್ವಾಮಿ ಅವರು ಪ್ರತಿಭಟಿಸಿ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾಡಳಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ಪತ್ರ ವ್ಯವಹಾರ ‌ಮಾಡಿ ಅಂಚೆ ಇಲಾಖೆಯ ಕೆಲಸ ಮಾಡಿ ಕೈ ತೊಳೆದುಕೊಂಡಿತು. 

*ಅದಿಕೃತ ಹಾಗೂ ಅನದಿಕೃತ ಭೇಟಿ ಸೇರಿದಂತೆ ಶಾಸಕ ಹಾಗೂ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಎಂಟು ಭಾರಿ ಬೇಟಿ ನೀಡಿದರೂ ಫಲಪ್ರದವಾಗಲೇ ಇಲ್ಲ. ಬಹುಶಃ ಭಾರಿ ಮಳೆಗೋ,ಗೋಡೆಗಳು ಶಿಥಿಲವಾಗಿ ಕುಸಿದು ಸಾವನ್ನಪ್ಪಿದಾಗ ಆ ಸಾವಿನಿಂದಲೋ ಪಲಪ್ರದವಾಗುವುದೋ ಏನೋ ಗೊತ್ತಾಗುತ್ತಿಲ್ಲ. ಇದ್ದಾಗ ಯೋಗಕ್ಷೇಮ ವಿಚಾರಿಸಿದವರು ಸತ್ತಾಗ ಕುಟುಂಬದವರು ಕುಶೋಲೋಪಚಾರ ಕೇಳಿದರೆ ವ್ಯರ್ಥವಾಗಲಿದೆ.

  *ಎಸ್ಪಿ ದರ್ಮೆಂದರ್ ಕುಮಾರ್ ಮೀನಾ ಅವರು ಇದರ ಬಗ್ಗೆ ಅರಿವಿದೆ. ಕ್ರಮವಹಿಸಿದ್ದೇವೆ ಎನ್ನುತ್ತಿದ್ದಾರೆ. ಇವರ ಕೆಲಸದಂತೆ ಠಾಣೆ ವೀಕ್ಷಣೆಗೆ ಹೋದಾಗ ಕಟ್ಟಡ ,ದಾಖಲೆಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಇಲ್ಲದಿದ್ದರೆ ಅದೀನ ಸಿಬ್ಬಂದಿಗಳ ಮೇಲೆ ಕ್ರಮಜರುಗಿಸುವ ಇವರು ಉತ್ತಮ ಕಟ್ಟಡದಲ್ಲಿ ಠಾಣಾ ಸ್ಥಳಾಂತರಕ್ಕೆ ತ್ವರಿತವಾಗಿ ಯಾಕೆ ಕ್ರಮವಹಿಸುತ್ತಿಲ್ಲ ಎಂಬ ಪ್ರಶ್ನೆಗೆ ಮೌನ ಉತ್ತರವಾಗಿದೆ.

 *  ಇತ್ತೀಚೆಗಷ್ಟೆ ಪಟ್ಟಣ ಠಾಣೆಗೆ ವರ್ಗಾವಣೆಯಾಗಿ ಬಂದ ಇನ್ಸ್ ಪೆಕ್ಟರ್ ನಾಗೇಗೌಡ ಎಂಬುವವರು ಮತ್ತು ಸಿಬ್ಬಂದಿಗಳು ಅವರುಗಳೆ ಸ್ವಂತ ಹಣ ಖರ್ಚುಮಾಡಿ   ಹತ್ತು ಹದಿನೈದು ವರ್ಷಗಳ ದೂಳು ತೆಗೆದು ಹೊರಗಡೆ ಸುಂದರವಾಗಿಸಿಕೊಂಡಿದ್ದಾರೆ. ಆ ಸುಂದರ ಸಾಯುವ ಮುದುಕಿಗೆ ರೇಷ್ಮೆ ಸೀರೆ ತೊಡಿಸಿದಂತೆ ಕಂಡರೂ ಆಯಸ್ಸು ಮಾತ್ರ ಇಲ್ಲ ಎಂಬುದಷ್ಟೆ ಅರಿಯಬೇಕು. *ಚಾಮರಾಜನಗರ ಪಟ್ಟಕ್ಕೆ   ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು  ಪ್ರವಾಸ ಕೈಗೊಂಡಿದ್ದು ಈ ಠಾಣೆಯನ್ನ ಇವರು ನೋಡಬೇಕಿದೆ.

 * ಚಾಮರಾಜನಗರ ಜಿಲ್ಲೆಯಲ್ಲಿನ  ಯಡಪುರ ಗ್ರಾಮದ ಯಡಬೆಟ್ಟದಲ್ಲಿ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಹಾಗೂ ನಳಂದ ಬೌದ್ಧ ವಿಶ್ವವಿದ್ಯಾಲಯದ ಭೂಮಿ ಪೂಜೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅನತಿ ದೂರದಲ್ಲಿರುವ ಇದಕ್ಕೂ ನಿಮ್ಮ ದರ್ಶನ ಕಾಯಕಲ್ಪ ಅಗತ್ಯವಿದೆ. ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ಬೆಂಗಳೂರಲ್ಲೆ ಕುಳಿತು ಸತ್ತ ಪೊಲೀಸ್ ಸಿಬ್ಬಂದಿಗಳಿಗೆ ಸಂತಾಪ ಸೂಚಿಸಬೇಕಾಗುತ್ತದೆ.

Friday, 23 November 2018

ಸಿ.ಸಿ.ಕ್ಯಾಮೆರಾಗಳಿದ್ದರೂ ಪ್ರೇಮಿಗಳ ಅಡ್ಡೆಯಾದ ಚಾಮರಾಜೇಶ್ವರ ದೇವಾಲಯ.! ಪದೆ ಪದೇ ಇದೆ ನಡೆದರೆ ದೇವಾಲದ ಹಿಂದೆಯೇ ಬಿತ್ತಿ ಪತ್ರ ಅಂಟಿಸಲು ಮುಂದಾಗಲಿದ್ದಾರೆ ಯುವ ಪಡೆ ಜೋಪಾನ! ವರದಿ ಎಸ್.ವೀರಭದ್ರಸ್ವಾಮಿ.ರಾಮಸಮುದ್ರ



ಸಿ.ಸಿ.ಕ್ಯಾಮೆರಾಗಳಿದ್ದರೂ ಪ್ರೇಮಿಗಳ ಅಡ್ಡೆಯಾದ ಚಾಮರಾಜೇಶ್ವರ ದೇವಾಲಯ.!ಮುತ್ತು ಕೊಡ್ತಾರೆ, ಹುಟ್ಟು ಹಬ್ಬ ಮಾಡಿಕೊಳ್ತಾರೆ, ಬಿಟ್ರೆ ಮುಂದೆ ಏನೇನೋ ಮಾಡ್ತಾರೆ.!

ವರದಿ ಎಸ್.ವೀರಭದ್ರಸ್ವಾಮಿ.ರಾಮಸಮುದ್ರ
ಚಾಮರಾಜನಗರ: ಪ್ರೇಮಿಸಲು ಪ್ರೇಮಿಗಳಿಗೆ ಪಾರ್ಕ್, ಹೊಟೇಲ್‍ಗಳು ಕೇಂದ್ರವಾಗಿದದ್ದು ಒಂದೆಡೆಯಾದರೆ, ಈಗ ಸದಾ ಭಯ, ಶ್ರದ್ದಾ ಭಕ್ತಿ ಮೂಡಿಸುತ್ತಿದ್ದ ಕೇಂದ್ರಗಳಲ್ಲಿ ಒಂದಾದ ದೇವಾಲಯಗಳಿಗೆ ಪ್ರೇಮಿಗಳು ಈಗ ದೇವಾಲಯಗಳಿಗೆ ಲಗ್ಗೆ ಇಟ್ಟಿರುವುದರಿಂದ  ಭಕ್ತಾಧಿಗಳಲ್ಲಿ ಕಿರಿಕಿರಿಯ ಜೊತೆ ಮುಜುಗರವನ್ನು ಉಂಟುಮಾಡಲಾರಂಭಿಸಿದೆ.

ಚಾಮರಾಜನಗರದ ಹೆಸರಾಂತ ದೇವಾಲಯಗಳಲ್ಲಿ ಒಂದಾದ ಚಾಮರಾಜೇಶ್ವರ ದೇವಾಲಯದಲ್ಲಿ ಬಣ್ಣ ಬಣ್ಣದ ಕಲರವಗಳು ಅಂದರೆ ಪ್ರೇಮಿಗಳು ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಪ್ರತಿನಿತ್ಯ ಅರ್ಚಕರು ಬರುತ್ತಾರೋ ಬಿಡುತ್ತಾರೋ ಆದರೆ ಪ್ರೇಮಿಗಳು ಮಾತ್ರ ತಪ್ಪಿಸಿಕೊಳ್ಳೋದೇ ಇಲ್ಲ. ಪ್ರತಿನಿತ್ಯ ಮಾಢೊ ಕೆಲಸವನ್ನು ನಿಲ್ಲಿಸೋದು ಇಲ್ಲ.
ಸೋಮವಾರದಿಂದ ಶನಿವಾರದವರೆಗೆ ಕಾಲೇಜಿಗೆಂದು ಬಂದವರು ಮುಂಜಾನೆಯೇ 7 ರ ಸಮಯದಲ್ಲಿ ಪುಸ್ತಕ ಹಿದಿಡು ಬಂದವರು ಹೊಗೋದೇ 9 ಗಂಟೆಗೆ, ಅಷ್ಟೇ ಅಲ್ಲ ಭಾನುವಾರವೂ ಸಹ ರಜೆ ಇದ್ದರೂ ಬರುವುದು ಕೆಲವೊಮ್ಮೆ  ಸಹಜವಾಗಿದೆ. ಇತ್ತ ಇದೇ ಸೂಕ್ತ ಸ್ಥಳ ಎಂದು ಹುಡುಗಿಯರನ್ನೇ ಹಿಂಬಾಲಿಸಿಕೊಂಡು ಬಂದು ಹುಡುಗರು ಕುಳಿತುಕೊಳ್ಳುತ್ತಾರೆ. ಇದರಿಂದ ಮತ್ತೇ ಕೆಲವರು ಇದರ ದುರುಪಯೋಗವನ್ನು ಮಾಡಿಕೊಳ್ಳುವುದರಿಂದ ಅವರವರ ನಡುವೆ ಗಲಾಟೆ ಘರ್ಷಣೆಗಳು ನಡೆದಿದೆ ಎನ್ನುತ್ತಾರೆ ಅಲ್ಲಿಗೆ ಬಂದ ಭಕ್ತಾದಿಯೋರ್ವರು.
ಈ ಬಗ್ಗೆ ದೇವಾಲಯದಲ್ಲಿರುವ ವ್ಯಕ್ತಿಯೊರ್ವನನ್ನು ಕೇಳಲಾಗಿ ನಾವು ಓದಲಿಕ್ಕಾಗಿಯೇ ಪ್ರತಿನಿತ್ಯ ಇಲ್ಲಿಗೆ ಬರುತ್ತೇವೆ ಎನ್ನುವ ಇವರನ್ನು ಪ್ರಶ್ನಿಸಿಸಿದರೆ ನಮ್ಮ ಜೊತೆಯಲ್ಲಿರುವವರು ನಮ್ಮ ಸಂಬಂಧಿ ಎನ್ನುತ್ತಾರೆ. ನಾವು ಏನು ಮಾಡಬೇಕೆಂಬುದು ನಮಗೆ ತಿಳಿಯುತ್ತಿಲ್ಲ ಎನ್ನುತ್ತಾರೆ.  ಪ್ರೇಮಿಗಳ ಈ ವರ್ತನೆ ಪೂಜೆಗೆಂದು ಬರುವವರಿಗೆ ಮಾನಸಿಕ ನೆಮ್ಮದಿಯ ಜೊತೆ, ಕಿರಿಕಿರಿಯನ್ನು ತಂದಿದೆ.
ಇದರ ಬಗ್ಗೆ  ಕೇಳಿದರೆ ಇವೆಲ್ಲ ನಮಗೇಕೆ? ಎಂದು ಗೊತ್ತಿದ್ದು ಗೊತ್ತಿಲ್ಲದ್ದಂತೆಯೇ ಸುಮ್ಮನಿರುವ ನಮ್ಮ ದೇವಾಲಯದ  ಆಡಳಿತ ಮಂಡಳಿಯಾಗಲೀ, ಮುಜರಾಯಿ ಇಲಾಖೆಯ ಅಧಿಕಾರಿಗಳಾಗಲೀ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿ ಸಿ.ಸಿ ಕ್ಯಾಮೆರಾಗಳಿದ್ದರೂ ಬರುತ್ತಿರುವ ಪ್ರೇಮಿಗಳ ಚಿತ್ರಗಳನ್ನು ಚಿತ್ರೀಕರಣವಾಗಿದ್ದ ದೃಶ್ಯಗಳನ್ನು ದೇವಾಲಯದ ಒಳಗೆ ಮುದ್ರಿಸಿ ಹಾಕಿದರೆ ಬಹುಶಃ ಕಡಿವಾಣವಾಗಬಹುದೇನೋ ಎನ್ನುತ್ತಾರೆ ಕೆಲವರು.
ಇತ್ತೀಚೆಗೆ ನಂಜನಗೂಡಿನ ದೇವಾಲಯವೊಂದರಲ್ಲಿ ವಿಡಿಯೋ ವೈರಲ್ ಆದಂತೆ ಚಾಮರಾಜನಗರದಲ್ಲೂ ಯುವಕರು, ದೇವಾಲಯದಲ್ಲಿ ಇಂಹತ ಘಟನೆ ಘಟಿಸಿದರೆ ಮುಲಾಜಿಲ್ಲದೆ ಹರಿಯಬಿಡುತ್ತೇವೆ ಎಂದು ಹರಿಯಬಿಡಲು ಕಾಯ್ದಿದ್ದಾರೆ ಯಾಮಾದರೆ ಅದಕ್ಕೆ ನಾವು ಜವಬ್ದಾರರಾಗುವುದಿಲ್ಲ. ನಮಗೆ ದೇವಾಲಯದ ಪಾವಿತ್ರ್ಯತೆ ಬೇಕು. ಇಂತಹ ಮಾನಗೆಟ್ಟವರಿಂದ ನಮಗೇನು ಎನ್ನುತ್ತಿದ್ದಾರೆ. ಪಾಪ ಪೋಷಕರು ಮಕ್ಕಳು ಮುಗ್ದರು ಕಾಲೇಜಿಗೆ ಹೋಗಿವರುತ್ತಿದ್ದಾರೆ ಎಂದು ನಂಬಿರುವ ಮುಗ್ದ ಜೀವಿಗಳಿಗೆ ಶಾಕ್ ಕೊಡುವ ಜೊತೆಗೆ ಮಕ್ಕಳಿಗೂ ಶಾಕ್ ಕೊಟ್ಟರೂ ಅನುಮಾನವಿಲ್ಲ ಎಂಧರೆ ತಪ್ಪಾಗಲಾರದು.
ದೇವಾಲಯದಲ್ಲಿ ಇಂತಹ ತರಲೆ ತಾಪತ್ರಯಗಳ ತರಹದ ಘಟನೆಗಳು ಮುಂದುವರೆದದ್ದೇ ಆದರೆ ಮುಂದೆ ಸಂಭವಿಸುವ ಘಟನೆಗಳಿಗೆ ಮುಜರಾಯಿ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಹೊಣೆಯಾಗಬೇಕಾಗುತ್ತದೆ.
 ಚಿತ್ರ: ಇದೆ.
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

Thursday, 22 November 2018

22-11-2018 (ಡಿ. 8ರಂದು ಲೋಕ್ ಅದಾಲತ್ : ರಾಜಿ ಸಂಧಾನದ ಮೂಲಕ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅವಕಾಶ)


ಡಿ. 8ರಂದು ಲೋಕ್ ಅದಾಲತ್ : ರಾಜಿ ಸಂಧಾನದ ಮೂಲಕ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅವಕಾಶ





S.VEERABHADRA SWAMY. RAAMASAMUDRA





9480030980

---------------------------------------------

ಚಾಮರಾಜನಗರ, ನ. 22 - ನ್ಯಾಯಾಲಯದಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಇರುವ ರಾಷ್ಟ್ರೀಯ ಲೋಕ್ ಅದಾಲತ್ ಡಿಸೆಂಬರ್ 8ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯಲಿದ್ದು ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು  ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಲೋಕ್ ಅದಾಲತ್‍ನಲ್ಲಿ ತೀರ್ಮಾನವಾಗಬಹುದಾದ ಎಲ್ಲ ಸ್ವರೂಪದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಉಭಯ ಪಕ್ಷಗಾರರನ್ನು ವಿಶವಾಸಕ್ಕೆ ತೆಗೆದುಕೊಂಡು ರಾಜಿ ಸಂಧಾನದ ಮೂಲಕ ತೀರ್ಮಾನ ಮಾಡಲಾಗುತ್ತದೆ. ಈ ಜನತಾ ನ್ಯಾಯಾಲಯದ ಮೂಲಕ ಶೀಘ್ರವಾಗಿ ಪ್ರಕರಣ ಇತ್ಯರ್ಥಗೊಳ್ಳಲಿದೆ ಎಂದರು. 
ಲೋಕ್ ಅದಾಲತ್‍ನಲ್ಲಿ ಪಕ್ಷಗಾರರೇ ನೇರವಾಗಿ ಅಥವಾ ವಕೀಲರ ಮೂಲಕ ಪಾಲ್ಗೊಳ್ಳಬಹುದು. ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುತ್ತದೆ. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿಯಲಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ನ್ಯಾಯಾಲಯಗಳಲ್ಲಿ ದಾಖಲಾಗದೆ ಇರುವ ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಹ ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ನ್ಯಾಯಾಲುಯದ ಶುಲ್ಕ ನೀಡಬೇಕಾಗಿಲ್ಲ. ಅಲ್ಲದೆ ನ್ಯಾಯಾಲದಲ್ಲಿ ದಾಖಲಾಗಿರುವ ಪ್ರಕರಣಗಳು ಲೋಕ್ ಅದಾಲತ್‍ನಲ್ಲಿ ಇತ್ಯರ್ಥಗೊಂಡರೆ ಈಗಾಗಲೇ ಪಾವತಿಸಲಾಗಿರುವ ನ್ಯಾಯಾಲಯ ಶುಲ್ಕದ ಶೇ.75ರಷ್ಟನ್ನು ವಾಪಸ್ಸು ನೀಡಲಾಗುತ್ತದೆ ಎಂದರು.
ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಇದರಲ್ಲಿ ಯಾವುದೇ ಒತ್ತಡ ಹೇರಲಾಗುವುದಿಲ್ಲ. ಕಡಿಮೆ ವೆಚ್ಚದಲ್ಲಿ ಶೀಘ್ರ ತೀರ್ಮಾನಕ್ಕಾಗಿ ಲೋಕ್ ಅದಾಲತ್ ವಿಶೇಷ ಅವಕಾಶವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನಡೆಯಲಿದೆ. ಕಳೆದ ಬಾರಿ ನಡೆದ ಲೋಕ್ ಅದಾಲತ್‍ನಲ್ಲಿ 338 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ಇದೇ ವೇಳೆ ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಸಿ.ಜಿ. ವಿಶಾಲಾಕ್ಷಿ, ಸಿವಿಲ್ ನ್ಯಾಯಾಧೀಶರಾದ ಉಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಇಂದುಶೇಖರ್, ಕಾಂiÀರ್iದರ್ಶಿ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ನ. 24ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ನ. 22 - ಜಿಲ್ಲೆಯನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ 24ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾವಿದರ ದಾಖಲಾತಿ ಪರಿಶೀಲನೆ
ಚಾಮರಾಜನಗರ, ನ. 22 :- ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಚಾಮರಾಜನಗರ ಜಿಲ್ಲಾ ಕಚೇರಿಗೆ ಆನ್ ಲೈನ್ ಮೂಲಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಿರುವ ಕಲಾವಿದರ ಮೂಲ ದಾಖಲಾತಿ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಅರ್ಜಿದಾರರು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಿದೆ.
ಈಗಾಗಲೇ ದಾಖಲಾತಿ ಪರಿಶೀಲನೆ ಕಾರ್ಯ ಆರಂಭವಾಗಿದೆ. ನವೆಂಬರ್ 24ರ ಮಧ್ಯಾಹ್ನ 3 ಗಂಟೆಯವರೆಗೂ ಕಲಾವಿದರು ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 23, 24, 25ರಂದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಿಶೇಷ ನೋಂದಣಿ ಅಭಿಯಾನ
ಚಾಮರಾಜನಗರ, ನ. 22 - ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರ ಹೆಸರು ಸೇರ್ಪಡೆ, ಪಟ್ಟಿಯಲ್ಲಿ ಕಂಡುಬರುವ ಕಾಗುಣಿತ ಲೋಪದೋಷಗಳು, ಮತದಾರರೊಡನೆ ಸಂಬಂಧ ಇತರೆ ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ನವೆಂಬರ್ 23 ರಿಂದ 25ರವರೆಗೆ ಬೆಳಿಗ್ಗೆ 9.30ರಿಂದ ಸಂಜೆ 5.30 ಗಂಟೆಯವರೆಗೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ದಿನಾಂಕ 01.01.2019ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿ, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕೈಗೊಳ್ಳಲಾಗಿದೆ. ನವೆಂಬರ್ 23, 24 ಹಾಗೂ 25ರಂದು ನಡೆಯುವ ವಿಶೇಷ ನೋಂದಣಿ ಅಭಿಯಾನದಲ್ಲಿ ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಹರಿಂದ ನಮೂನೆ 6, 7, 8 ಮತ್ತು 8ಎ.ರಲ್ಲಿ ಅರ್ಜಿಗಳನ್ನು ಪಡೆಯಲಿದ್ದಾರೆ.
ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಹಾಗೂ ಮತದಾರರ ಪಟ್ಟಿಯಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಶೇ. 100ರಷ್ಟು ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸುವ ಸಲುವಾಗಿ ಚುನಾವಣಾ ಆಯೋಗದ ವಿಶೇಷ ನೋಂದಣಿ ಅಭಿಯಾನವನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಪೋಲಾಗದಂತೆ ಕ್ರಮ ವಹಿಸಿ : ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸೂಚನೆ 
ಚಾಮರಾಜನಗರ, ನ. 22 - ಗ್ರಾಮೀಣ ಭಾಗಗಳಲ್ಲಿ ವಿದ್ಯುತ್, ನೀರು ಇತರೆ ಪ್ರಮುಖ ಸೌಲಭ್ಯಗಳು ಪೋಲಾಗದಂತೆ ಅಧಿಕಾರಿಗಳು ಹೆಚ್ಚು ಗಮನ ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿಯೂ ಬೀದಿ ದೀಪಗಳು ಚಾಲನೆಯಲ್ಲಿರುವುದನ್ನು ಗಮನಿಸಿದ್ದೇನೆ. ಅತ್ಯಂತ ಅವಶ್ಯಕವಾಗಿರುವ ವಿದ್ಯುತ್‍ನ್ನು ನಿರ್ಲಕ್ಷ್ಯದಿಂದ ಪೋಲು ಮಾಡಬಾರದು. ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್ ಅವರು ಮಾತನಾಡಿ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪ ನಿಯಂತ್ರಣದ ಸ್ವಿಚ್‍ನ್ನು ಅಳವಡಿಸಲಾಗಿರುತ್ತದೆ. ಆಯಾ ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡುವ ವೇಳೆ ಗಮನಿಸಬೇಕಾಗುತ್ತದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿಳಂಬವಾಗಿ ವಿದ್ಯುತ್ ಸಂಪರ್ಕ ನೀಡುವುದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ನಿಗಮದ ಅಧಿಕಾರಿಗಳು ವಿದ್ಯುತ್ ಸರಬರಾಜು ನಿಗಮದ ಇಲಾಖೆಯವರೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಯೋಗೀಶ್ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾಹಿತಿ ನೀಡುವಲ್ಲಿ ತಾಳೆಯಾಗುತ್ತಿಲ್ಲ. ಅನುಷ್ಟಾನ ನಿಗಮಗಳು ಹಾಗೂ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಪಟ್ಟ ಪ್ರತಿಯೊಂದು ಅರ್ಜಿದಾರರ ವಿವರಗಳನ್ನು ಸಮರ್ಪಕವಾಗಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್ ಅವರು ಮಾತನಾಡಿ ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಾಗಿ ಬ್ಯಾಂಕುಗಳಲ್ಲಿ ಸಾಲ ನೀಡಲಾಗುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಬಡವರಿಗೆ ಸ್ಪಂದಿಸದೇ ಇದ್ದರೆ ಹೇಗೆ? ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಲೀಡ್‍ಬ್ಯಾಂಕ್ ವ್ಯವಸ್ಥಾಪಕರು ಸಾಲ ಸೌಲಭ್ಯ ಸೇರಿದಂತೆ ಅನುಕೂಲಗಳನ್ನು ಕಲ್ಪಿಸಲು ಸೂಚನೆ ನೀಡಬೇಕು. ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸವಲತ್ತುಗಳನ್ನು ತಲುಪಿಸುವ ದಿಸೆಯಲ್ಲಿ ಆದ್ಯತೆ ನೀಡುವಂತೆ ನಿರ್ದೇಶನ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾವತಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪದ್ಮಾಶೇಖರ್ ಪಾಂಡೆ ಸಭೆಯಲ್ಲಿ ಹಾಜರಿದ್ದರು.
ನ. 24ರಂದು ಹೆಗ್ಗವಾಡಿಯಲ್ಲಿ ಕೃಷಿಕರ ಜೊತೆ ಶುಭ ಮುಂಜಾನೆ, ನೇಗಿಲಯೋಗಿಗೆ ಜೀವನೋತ್ಸಾಹ ಕಾರ್ಯಕ್ರಮ 
ಚಾಮರಾಜನಗರ, ನ. 22 ರೈತರಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಮಾಹಿತಿ ನೀಡುವ ಕೃಷಿಕರ ಜೊತೆ ಶುಭ ಮುಂಜಾನೆ ನೇಗಿಲಯೋಗಿಗೆ ಜೀವನೋತ್ಸಾಹ ಕಾರ್ಯಕ್ರಮವು ನವೆಂಬರ್ 24ರಂದು ಬೆಳಿಗ್ಗೆ 7 ಗಂಟೆÉಗೆ ತಾಲೂಕಿನ ಹರವೆ ಹೋಬಳಿಯ ಹೆಗ್ಗವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೃಷಿ ಇಲಾಖೆಯ ನಾನಾ ಯೋಜನೆಗಳು, ಸೌಕರ್ಯಗಳು ಕುರಿತು ಮಾಹಿತಿ ನೀಡುವ ಹಾಗೂ ರೈತರು ಗ್ರಾಮೀಣ ಪ್ರದೇಶಗಳ ಮಹಿಳೆಯರು ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ. ತಿರುಮಲೇಶ್ ಅವರ ನೇತೃತ್ವದಲ್ಲಿ ಕೃಷಿಕರ ಜೊತೆ ಶುಭ ಮುಂಜಾನೆ ನೇಗಿಲಯೋಗಿಗೆ ಜೀವನೋತ್ಸಾಹ ಕಾರ್ಯಕ್ರಮವು ಈಗಾಗಲೇ 24 ವಾರಗಳನ್ನು ಪೂರೈಸಿದೆ.
25ನೇ ವಿಶೇಷ ಕಾರ್ಯಕ್ರಮವು ಹೆಗ್ಗವಾಡಿಯಲ್ಲಿ ನಡೆಯಲಿದ್ದು, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಉದ್ಘಾಟಿಸುವರು. ಇತರೆ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ರೈತ ಭಾಂದವರು, ಅಸಕ್ತರು ಭಾಗವಹಿಸಿ ಕೃಷಿ ಇಲಾಖೆ ಯೋಜನೆಗಳ ಮಾಹಿತಿ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ. ತಿರುಮಲೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 
   
 ದಾಖಲೆ ವಿವರಗಳನ್ನು ಸಲ್ಲಿಸಲು ಗ್ರೀನ್ ಬಡ್ಸ್ ಠೇವಣಿ ಹೂಡಿಕೆದಾರರಿಗೆ ಸೂಚನೆ   
ಚಾಮರಾಜನಗರ, ನ. 22 - ಗ್ರೀನ್ ಬಡ್ಸ್ ಸಂಸ್ಥೆಯಲ್ಲಿ ಠೇವಣಿ ಹೂಡಿಕೆ ಮಾಡಿರುವವರು ಸಂಬಂಧಪಟ್ಟ ಮೊತ್ತ ಹಾಗೂ ದಾಖಲೆಗಳ ವಿವರಗಳನ್ನು ಸಲ್ಲಿಸುವಂತೆ ಮೈಸೂರು ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ. 
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ ಕಾಯಿದೆ 2004 ರ ಕಲಂ7(1) ರಿಂದ (4) ರ ಮೇರೆಗೆ ಮೆ: ಗ್ರೀನ್ ಬಡ್ಸ್ ಆಗ್ರೋ ಫಾರಂ ಪ್ರೈ. ಲಿ., ಮೈಸೂರು ರವರು ರಾಜ್ಯಾಧ್ಯಂತ ಹೊಂದಿದ ಶಾಖೆಗಳಲ್ಲಿ ಸಾರ್ವಜನಿಕರು ನಿಶ್ಚಿತ ಠೇವಣಿ (ಎಫ್.ಡಿ.), ರೆಕರಿಂಗ್ ಡಿಪಾಸಿಟ್ (ಆರ್.ಡಿ.), ಮಾಸಿಕ ವಂತಿಗೆ (ಮಾಸಿಕ ಚೀಟಿ ಹಣ) ಹಾಗೂ ಇತರೆ ರೂಪದಲ್ಲಿ ಠೇವಣಿಯಾಗಿ ಇಡಲಾಗಿದ್ದ ಹಣವನ್ನು ಸಕಾಲದಲ್ಲಿ ಹೂಡಿಕೆದಾರರಿಗೆ ಹಿಂತಿರುಗಿಸದ ಕಾರಣ ಸದರಿ ಸಂಸ್ಥೆ ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಕ್ರಿಮಿನಲ್ (ಇತರೆ) ದಾವೆಯನ್ನು ಹೂಡಲಾಗಿದ್ದು ಅವುಗಳು ವಿಚಾರಣೆ ಹಂತದಲ್ಲಿರುತ್ತದೆ.
     ಸದರಿ ಸಂಸ್ಥೆಯಲ್ಲಿ ಹೂಡಲಾಗಿರುವ ಠೇವಣಿಗೆ ಸಂಬಂಧಿಸಿದ ಅತ್ಯಾವಶ್ಯಕವಾದ ಮೂಲ ದಾಖಲೆಗಳನ್ನು ಹಾಗೂ ಸದರಿ ಸಂಸ್ಥೆಯವರು ಹೂಡಿಕೆದಾರರಿಗೆ ಭದ್ರತಾ ದೃಷ್ಠಿಯಿಂದ ನೀಡಿರುವ ಮುಖಬೆಲೆ ದಾಖಲೆಗಳ ವಿವರಗಳನ್ನು ಗೌರವಾನ್ವಿತ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುವುದರಿಂದ ನವೆಂಬರ್ 27ರೊಳಗೆ (ಸಂಜೆ 5 ಗಂಟೆಯೊಳಗೆ)  ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಮೈಸೂರಿನ ಉಪವಿಭಾಗಾಧಿಕಾರಿಗಳ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು. 
     ಠೇವಣಿದಾರರು, ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಠೇವಣಿ ಹೂಡಿಕೆಯ ವಿವರ (ಆರ್.ಡಿ. ಎಫ್.ಡಿ, ಮಾಸಿಕ ಚೀಟಿ ವಂತಿಕೆ), ಹೂಡಿಕೆಗೆ ಸಂಬಂಧಿಸಿದಂತೆ ಗ್ರೀನ್ ಬಡ್ಸ್ ಸಂಸ್ಥೆಯವರು ನೀಡಿರುವ ಬಾಂಡ್, ಪಾಸ್ ಪುಸ್ತಕ ಇತ್ಯಾದಿ ಹಾಗೂ ಠೇವಣಿದಾರರು ಹೂಡಿರುವ ಒಟ್ಟು ಮೊತ್ತ, ಹಿಂಪಡೆದ ಮೊಬಲಗು (ಠೇವಣಿ ಹಣದಲ್ಲಿ, ಬಡ್ಡಿ ರೂಪದಲ್ಲಿ), ಬರಬೇಕಾದ ಮೊತ್ತ ಹಾಗೂ ಇತರೆ ದಾಖಲೆಗಳನ್ನು ಅರ್ಜಿಯೊಡನೆ ಸಂಬಂಧಿಸಿದ ಎಲ್ಲಾ ಮೂಲ (ಔಡಿigiಟಿಚಿಟ ಆoಛಿumeಟಿಣs) ದಾಖಲೆಗಳನ್ನು ಮತ್ತು ಮೂಲ ದಾಖಲಾತಿಗಳ ಜೆರಾಕ್ಸ್ ಪ್ರತಿಯನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಡೀಕರಿಸಿ ಸಲ್ಲಿಸುಬೇಕು. ನಿಗದಿತ ಅವಧಿಯ ನಂತರ ಬರುವ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2422100 ನ್ನು ಸಂಪರ್ಕಿಸುವಂತೆ ಮೈಸೂರು ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.            ನವೆಂಬರ್ 23ರಂದು ಕುರುಬನ ಕಟ್ಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ    
ಚಾಮರಾಜನಗರ, ನ. 22 - ಕುರುಬನ ಕಟ್ಟೆ ಕ್ಷೇತ್ರದಲ್ಲಿ ಇಂಟರ್‍ಲಾಕ್ ಅಳವಡಿಸುವ ಕಾಮಗಾರಿಗೆ ಶಾಸಕರಾದ ಎನ್. ಮಹೇಶ್ ಅವರು ನವೆಂಬರ್ 23ರಂದು ಬೆಳಿಗ್ಗೆ 11 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ದೇಶಿ ಸಂಸ್ಕøತಿ ಪರಂಪರೆಯ ಶಕ್ತಿ ಕೇಂದ್ರಗಳಾದ ಚಿಕ್ಕಲ್ಲೂರು ಹಾಗೂ ಕುರುಬನಕಟ್ಟೆ ಕ್ಷೇತ್ರಗಳಗೆ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
                
   
 

    
   
 







x

Sunday, 18 November 2018

ಒಂದೇ ನಂಬರ್ ಪ್ಲೇಟ್‍ವುಳ್ಳ ಎರಡು ಲಾರಿ,


       ದಿನಾಂಕ: 14-11-2018 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಚಾಮರಾಜನಗರ        ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಿಗೆ ಠಾಣಾ ಸರಹದ್ದು, ಬಿಸಲವಾಡಿ ಗ್ರಾಮದಲ್ಲಿ      ಕೆ.ಎ 19-1497 ರ ಒಂದೇ ನಂಬರ್ ಪ್ಲೇಟ್‍ವುಳ್ಳ ಎರಡು ಲಾರಿಗಳು ನಿಂತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ಶ್ರೀ ರವಿಕಿರಣ್. ಎಸ್.ಎಸ್. ಪಿ.ಎಸ್.ಐ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆರವರು ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರುಗಳ ಜೊತೆ ದಾಳಿ ಮಾಡಿ ಕೆ.ಎ.-19-1497 ರ ಒಂದೇ ನಂಬರ್ ಪ್ಲೇಟ್‍ವುಳ್ಳ 02 ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆ ಕಾರ್ಯ ಕೈಗೊಂಡು ಪ್ರಕರಣದ ಆರೋಪಿಗಳಾದ ರವಿಕುಮಾರ ಬಿನ್ ಲೇಟ್ ಗಂಗಾಧರಪ್ಪ, 36 ವರ್ಷ, ಲಾರಿ ಚಾಲಕ, ಲಿಂಗಾಯಿತ ಜನಾಂಗ, ಬಿಸಲವಾಡಿ ಗ್ರಾಮ, ಚಾಮರಾಜನಗರ ತಾಲ್ಲೋಕು, ಸಗೀರ್ ಅಹಮದ್ ಬಿನ್ ಲೇಟ್ ಅಬ್ದುಲ್ ರಜಾಕ್, 48 ವರ್ಷ, ಮುಸ್ಲಿಂ, ಲಾರಿಚಾಲಕ, ಮನೆ ನಂ. 2374, 22 ನೇ ಕ್ರಾಸ್, ಅಶೋಕ ರಸ್ತೆ, ಲಷ್ಕರ್ ಮೊಹಲ್ಲ, ಮೈಸೂರು. ಹಾಗೂ ಮಹಮದ್ ರಫೀಕ್ ಬಿನ್ ಲೇಟ್ ಅನ್ವರ್ ಪಾಷ, 31 ವರ್ಷ, ಮುಸ್ಲಿಂ, ವೆಲ್ಡಿಂಗ್ ಷಾಪ್‍ನಲ್ಲಿ ಕೆಲಸ, ಮನೆ ನಂ. 114, 14 ನೇ ಕ್ರಾಸ್, ಹೈದರಾಲಿ ಬ್ಲಾಕ್, ಗೌಸಿಯಾ ನಗರ, ಮೈಸೂರುರವರುಗಳನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳನ್ನು ಹಾಗೂ ಒಂದೇ ನಂಬರ್ ಪ್ಲೇಟ್‍ವುಳ್ಳ 02 ಲಾರಿಗಳನ್ನು ವಶಪಡಿಸಿಕೊಂಡಿರುತ್ತೆ. ಸರ್ಕಾರಕ್ಕೆ ತೆರಿಗೆ ವಂಚಿಸಲು ಕೃತ್ಯವೆಸಗಿರುವುದಾಗಿ ತನಿಖೆಯಿಂದ ದೃಢಪಟ್ಟಿರುತ್ತೆ.
ಚಾಮರಾಜನಗರ ತಾಲ್ಲೂಕು ಮಾದಲವಾಡಿ ಗ್ರಾಮದ ವಾಸಿ ಮಾದೇಗೌಡ ಬಿನ್ ಲೇಟ್ ಕರಿಯಗೌಡರವರ ಮನೆಯ ಬಾಗಿಲ ಬೀಗ ಒಡೆದು ಮನೆಯಲ್ಲಿ ಟ್ರಂಕ್‍ನಲ್ಲಿಟ್ಟಿದ್ದ 1,00,000/- ರೂ. ಹಾಗೂ ದಾಖಲಾತಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ದಾಖಲಾಗಿ ತನಿಖೆ ಕೈಗೊಂಡಿದ್ದು, ಈ ಪ್ರಕರಣವು ವರದಿಯಾದ 24 ಗಂಟೆಯೊಳಗೆ ಆರೋಪಿಗಳಾದ 1. ರವಿ ಬಿನ್ ಮಲ್ಲೇಗೌಡ, 30 ವರ್ಷ, ಕುರುಬ ಗೌಡ ಜನಾಂಗ, ವ್ಯವಸಾಯ, ಮಾದಲವಾಡಿ ಗ್ರಾಮ, ಚಾ|| ನಗರ ತಾಲ್ಲೂಕು. 2. ಗಿರಿಮಲ್ಲೇಗೌಡ ಬಿನ್ ಮಲ್ಲೇಗೌಡ 35 ವರ್ಷ, ಕುರುಬಗೌಡ ಜನಾಂಗ, ಮಾದಲವಾಡಿ ಗ್ರಾಮ ಚಾ|| ನಗರ ತಾಲ್ಲೂಕು ರವರುಗಳನ್ನು ದಸ್ತಗಿರಿ ಮಾಡಿ, ಅವರುಗಳಿಂದ ಕಳ್ಳತನ ಮಾಡಿದ್ದ 95,000/- ರೂ ನಗದು ಹಣ ಮತ್ತು ದಾಖಲಾತಿಗಳನ್ನು ವಶಪಡಿಸಿಕೊಂಡಿರುತ್ತೆ.

ಇತ್ತೀಚೆಗೆ ಪಣ್ಯದಹುಂಡಿ ಗ್ರಾಮದ ಶ್ರೀ ಗುರುರಾಜ ಕಲ್ಯಾಣಮಂಟಪದ ಮುಂದೆ ನಿಲ್ಲಿಸಿದ್ದ ಒಂದು ಮೋಟಾರ್ ಸೈಕಲ್ ಕೆಎ-09-ಎಎಕ್ಸ್-1355 ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾನ್ಯ ಡಿವೈ.ಎಸ್.ಪಿ. ಸಾಹೇಬರವರ ಉಪವಿಭಾಗ ಮಟ್ಟದ ಪತ್ತೆದಳ ಕಾರ್ಯೋನ್ಮುಖರಾಗಿ ಸುಹೇಲ್ ಅಹಮದ್ @ ಸುಹೇಲ್ ಬಿನ್ ರಿಯಾಜ್ ಅಹ್ಮದ್, 19 ವರ್ಷ, ಮುಸ್ಲಿಂ, ವೆಲ್ಡಿಂಗ್ ಕೆಲಸ, ಚಂದಕವಾಡಿ ಗ್ರಾಮ, ಚಾಮರಾಜನಗರ ತಾಲ್ಲೂಕು ಎಂಬುವವನನ್ನು ಚಾಮರಾಜನಗರದ ಶ್ರೀ ಸೂರ್ಯೋದಯ ಕಲ್ಯಾಣ ಮಂಟಪದ ಮುಂಭಾಗ ಅನುಮಾನಾಸ್ಪದವಾಗಿ ಮೋಟಾರ್ ಸೈಕಲ್‍ನಲ್ಲಿ ಬರುತ್ತಿದ್ದ ಆಸಾಮಿಯನ್ನು ಹಿಡಿದು ವಿಚಾರಿಸಲಾಗಿ ಆರೋಪಿಯು ತನ್ನ ಸಹಚರನಾದ ಸದ್ದಾಂ ಹುಸೇನ್ @ ಸದ್ದಾಂ ಎಂಬುವವನ ಜೊತೆ ಸೇರಿ ಮೋಟಾರ್ ಸೈಕಲ್‍ನ್ನು ಕಳ್ಳತನಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.  ಸದರಿ ಮೋಟಾರ್ ಸೈಕಲ್‍ನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 35,000/- ರೂ. ಆಗಿರುತ್ತದೆ.
ಮೂರೂ ಪ್ರಕರಣಗಳÀ ಪತ್ತೆ ಕಾರ್ಯದಲ್ಲಿ ಮಾನ್ಯ ಎಸ್.ಪಿ ಸಾಹೇಬರವರು ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು, ಚಾಮರಾಜನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಸೂಕ್ತ ಮಾರ್ಗದರ್ಶನದಲಿ, ಚಾಮರಾಜನಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಕೆ.  ರಾಜೇಂದ್ರ ರವರ  ನೇತೃತ್ವದಲ್ಲಿ   ಶ್ರೀ ರವಿಕಿರಣ್. ಎಸ್.ಎಸ್. ಪಿ.ಎಸ್.ಐ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ,     ಶ್ರೀ ಪುಟ್ಟಸ್ವಾಮಿ, ಪಿ.ಎಸ್.ಐ ಪೂರ್ವ ಪೊಲೀಸ್ ಠಾಣೆ ಹಾಗೂ ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಹಾಗೂ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ. ಜಯರಾಂ, ಬಿ.ಮಹದೇವ, ಶಾಂತರಾಜು, ಸೈಯದ್ ಹುಸೇನ್, ರಮೇಶ್ ಕುಮಾರ್, ಬಾಬು, ಜಿ.ಡಿ.ರವಿ, ಕುಮಾರಸ್ವಾಮಿ, ಕಿಶೋರ, ಚಂದ್ರ, ಗಿರೀಶ, ಚಿನ್ನಸ್ವಾಮಿ, ಮಂಜುನಾಥ, ಲಿಂಗರಾಜು, ಜಗದೀಶ, ಎನ್.ಮಹದೇವಸ್ವಾಮಿ, ಸೈಯದ್ ಮಹಮ್ಮದ್ ರಫೀ, ಜಿ.ಮಹದೇವಸ್ವಾಮಿ, ಪ್ರದೀಪ್.ಕೆ.ಎಸ್., ಕುಮಾರ, ಮತ್ತು ಜಗದೀಶ ರವರು ಭಾಗವಹಿಸಿದ್ದು, ಮಾನ್ಯ ಎಸ್.ಪಿ. ಸಾಹೇಬರವರು ಸದರಿ ಪತ್ತೆ ಕಾರ್ಯದ ಬಗ್ಗೆ ಶ್ಲಾಘಿಸಿರುತ್ತಾರೆ.

x

ನ. 26ರಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ (17-11-2018)


ನ. 26ರಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ 

ಚಾಮರಾಜನಗರ, ನ. 17 - ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ನವೆಂಬರ್ 26ರಂದು ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನಕದಾಸರ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ತೀರ್ಮಾನಿಸಲಾಯಿತು.
ಜಯಂತಿ ಕಾರ್ಯಕ್ರಮ ಆಯೋಜನೆ ಸಂಬಂಧ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಸಂಸ್ಥೆಗಳ ಸಲಹೆಗಳನ್ನು ಆಲಿಸಿದ ನಂತರ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಅವರು ವಿವಿಧ ಇಲಾಖೆಗಳನ್ನೊಳಗೊಂಡ ಮೆರವಣಿಗೆ, ಸ್ವಾಗತ, ಅತಿಥ್ಯ ಸೇರಿದಂತೆ ಹಿಂದಿನ ಸಮಿತಿಗಳನ್ನು ಈ ಬಾರಿಯೂ ಸಹ ಮುಂದುವರೆಸಲಾಗಿದೆ. ಸಮುದಾಯದ ಮುಖಂಡರು ಸೇರಿದಂತೆ ಎಲ್ಲರ ಸಲಹೆ ಹಾಗೂ ಸಹಕಾರ ಪಡೆದು ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳು, ಅವರ ವಿಚಾರಗಳ ಕುರಿತು ಉಪನ್ಯಾಸ ನೀಡಲು ಸೂಕ್ತ ಮುಖ್ಯ ಭಾಷಣಕಾರರನ್ನು ಆಯ್ಕೆ ಮಾಡುವ ಸಂಬಂಧ ನೀಡುವ ಸಲಹೆಗಳನ್ನು ಪರಿಗಣಿಸಲಾಗುವುದು. ಅಂತಿಮವಾಗಿ ಎಲ್ಲರ ಒಪ್ಪಿಗೆ ಅನುಸಾರ ಆಯ್ಕೆ ನಡೆಸಿ ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಬೇಕಿರುವ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಅಧಿಕಾರಿಗಳು ಸುಸೂತ್ರವಾಗಿ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಆಹ್ವಾನ ಪತ್ರಿಕೆ, ಮುದ್ರಣ, ವಿತರಣೆಯಂತಹ ಕೆಲಸಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ವೇದಿಕೆ ಸಿದ್ಧತೆಗೆ ಸಹ ಅಗತ್ಯ ಅನುಸಾರ ಕಾರ್ಯೋನ್ಮುಖರಾಗಬೇಕು. ಶಿಷ್ಠಾಚಾರ ಪ್ರಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಅಧಿಕಾರಿಗಳು ಎಲ್ಲ ಕ್ರಮಗಳಿಗೆ ಮುಂದಾಗಬೇಕೆಂದು ಗಾಯತ್ರಿ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಗೀತಾ ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಚೆನ್ನಪ್ಪ, ಕನಕ ಸಮಾಜದ ಅಧ್ಯಕ್ಷರಾದ ರಾಜಶೇಖರ್, ಮುಖಂಡರಾದ ಜನ್ನೂರು ಮಹದೇವ್, ಕೆ.ಬಿ. ಮಹದೇವೇಗೌಡ, ನಂಜುಂಡೇಗೌಡ, ಬಸಪ್ಪನಪಾಳ್ಯ ನಟರಾಜು, ಶಿವರಾಮು, ಹೇಮಂತ್ ಕುಮಾರ್, ಚಿನ್ನಸ್ವಾಮಿ, ಲಿಂಗಣ್ಣ, ಸೋಮಣ್ಣ, ಆಲೂರು ನಾಗೇಂದ್ರ, ಬ್ಯಾಡಮೂಡ್ಲು ಬಸವಣ್ಣ, ಕೆ.ಎಂ. ನಾಗರಾಜು, ಅಂಬರೀಷ ಕದಂಬ, ಪುರುಷೋತ್ತಮ್, ನಿಜದನಿ ಗೋವಿಂದರಾಜು, ಪರ್ವತರಾಜು, ಜಯಕುಮಾರ್, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 24111 ಫಲಾನುಭವಿಗಳಿಗೆ ಅನಿಲಭಾಗ್ಯ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ 

ಚಾಮರಾಜನಗರ, ನ. 17- ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಒದಗಿಸುವ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 24111 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ರತ್ನೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ತಾಲೂಕಿನ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್, ಸ್ಟೌವ್ ವಿತರಿಸಿ ಅವರು ಮಾತನಾಡಿದರು.
ಬಿಪಿಎಲ್ ಕುಟುಂಬದ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದವರಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್, ಒಲೆ, ರೆಗ್ಯುಲೇಟರ್ ನೀಡಲಾಗುತ್ತಿದೆ. ಅನಿಲಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 2704 ರೂ. ವೆಚ್ಚದಲ್ಲಿ ಸೌಲಭ್ಯವನ್ನು ತಲುಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 15 ಲಕ್ಷ ಕುಟುಂಬಗಳಿಗೆ ಯೋಜನೆ ಸೌಲಭ್ಯ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮೊದಲನೆ ಹಂತವಾಗಿ 2411 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಫಲಾನುಭವಿಗಳಿಗೆ ಯೋಜನೆ ಸೌಕರ್ಯ ಲಭ್ಯವಾಗಲಿದೆ. ಚಾಮರಾಜನಗರ ತಾಲೂಕಿನ 806 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಅನಿಲಭಾಗ್ಯ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್, ಸ್ಟೌವ್‍ಗಳನ್ನು ನೀಡಲಾಗುತ್ತಿದೆ ಎಂದರು.
ಚಾಮರಾಜನಗರ ತಾಲೂಕಿನ ಒಟ್ಟು 7 ಅಡುಗೆ ಅನಿಲ ಏಜೆನ್ಸಿಗಳ ಮೂಲಕ ತಾಲೂಕಿನ ಫಲಾನುಭವಿಗಳಿಗೆ ಅನಿಲ ಭಾಗ್ಯ ಯೋಜನೆಯನ್ನು ತಲುಪಿಸಲಾಗುತ್ತಿದೆ. ಹಂತಹಂತವಾಗಿ ಉಳಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಹೊಗೆರಹಿತ ಹಾಗೂ ಅರಣ್ಯ ಸಂರಕ್ಷಣೆ ಉದ್ದೇಶದಿಂದ ಅನಿಲಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಕಾಡಂಚಿನ ಹಾಗೂ ಅರಣ್ಯ ವಾಸಿಗಳ ಜನತೆಗೆ ಉಚಿತವಾಗಿ ಈ ಹಿಂದಿನಿಂದಲೂ ಅರಣ್ಯ ಇಲಾಖೆ ಮೂಲಕ ಅಡುಗೆ ಅನಿಲ ಸಿಲಿಂಡರ್ ನೀಡಲಾಗುತ್ತಿದೆ. ಎಲ್ಲ ಬಿಪಿಎಲ್ ಕುಟುಂಬಗಳಿಗೂ ಸೌಲಭ್ಯ ಲಭಿಸಬೇಕೆಂಬ ಸದುದ್ದೇಶದಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯನ್ನು ವ್ಯಾಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಮಾತನಾಡಿ ಪರಿಸರ ಕಾಳಜಿ ಹಾಗೂ ಎಲ್ಲ ಜನರ ನೆರವಿಗಾಗಿ ಜಾರಿಗೆ ತರಲಾಗಿರುವ ಅನಿಲಭಾಗ್ಯ ಯೋಜನೆಯನ್ನು ಜಿಲ್ಲೆಯ ಜನತೆ ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದರು.
ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಆರ್. ರಾಚಪ್ಪ ಯೋಜನೆ ಕುರಿತು ವಿವರ ನೀಡಿದರು. ಇದೇವೇಳೆ ಅಡುಗೆ ಅನಿಲ ವಿತರಕರಿಂದ ಅಡುಗೆ ಅನಿಲ ಸಿಲಿಂಡರ್ ಬಳಕೆ ಹಾಗೂ ಬೆಂಕಿ ಅನಾಹುತಗಳಾಗದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಸಹ ನಡೆಯಿತು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಸದಸ್ಯರಾದ ಮಹದೇವಶೆಟ್ಟಿ, ಅಡುಗೆ ಅನಿಲ ವಿತರಕ ಏಜೆನ್ಸಿ ಮಾಲೀಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಜಲ ಯೋಜನೆ ಸದುಪಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಲಹೆ
ಚಾಮರಾಜನಗರ, ನ. 17 - ಒಣಭೂಮಿ ಪ್ರದೇಶ ಹಾಗೂ ಮಳೆಯಾಶ್ರಿತ ಕೃಷಿಗೆ ಸಂಬಂದಿಸಿದಂತೆ ಆಧುನಿಕ ಮತ್ತು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸುವ ಸುಜಲ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಇಂದು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಕೆಡಬ್ಲ್ಯೂಡಿಡಿ (ಸುಜಲ) ಯೋಜನೆಯಡಿ ರೈತರಿಗೆ ಹಮ್ಮಿಕೊಳ್ಳಲಾಗಿದ್ದ ಭೂ ಸಂಪನ್ಮೂಲ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಈ ಹಿಂದೆ ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ ಸುಜಲ-1 ಯೋಜನೆಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿತ್ತು. ಸುಜಲ-3 ಯೋಜನೆಯಡಿ ಚಾಮರಾಜನಗರವೂ ಸೇರಿದಂತೆ ಒಟ್ಟು 11 ಜಿಲ್ಲೆಗಳಲ್ಲಿ 10 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ 1931 ಕಿರು ಜಲಾನಯನ ಪ್ರದೇಶಗಳಲ್ಲಿ ವೈಜ್ಞಾನಿಕ ತಂತ್ರಜ್ಞಾನದ ಆಧಾರದ ಮೇಲೆ ಜಲಾನಯನ ಅಭಿವೃದ್ಧಿಗೊಳಿಸಲು ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಒಣ ಭೂಮಿ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಹರವೆ ಭಾಗದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚು ಪರಿಣಾಮಕಾರಿಯಾಗಿ ಜಲಾನಯನ ನಿರ್ವಹಣೆ ಮಹತ್ವ ತೋರಿಸಲು ಹಾಗೂ ಮಳೆಯಾಶ್ರಿತ ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ಒಗ್ಗೂಡಿಸುವುದರ ಜತೆಗೆ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಹ ಗ್ರಾಮೀಣ ಭಾಗಗಳ ಚಟುವಟಿಕೆಗಳಿಗೆ ನೆರವಾಗಲಿದೆ. ಅಂತರ್ಜಲ ಅಭಿವೃದ್ಧಿಯಂತಹ ಕಾರ್ಯಕ್ರಮಗಳಿಗೆ ವಿಶೇಷ ಗಮನ ಕೊಡಲಾಗುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ ಇತರೆ ಕೆಲಸ ನಿರ್ವಹಣೆ ಮಾಡಬಹುದಾಗಿದೆ ಎಂದು ಉಸ್ತುವಾರಿ ಸಚಿವರು ವಿವರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯೋಗೇಶ್ ಅವರು ಮಾತನಾಡಿ ರೈತರು ಕೃಷಿ ಕಟುವಟಿಕೆಗಳ ಜತೆಯಲ್ಲಿಯೇ ಹೈನುಗಾರಿಕೆಯನ್ನು ಸಹ ಕೈಗೊಳ್ಳಬೇಕಿದೆ. ಇದರಿಂದ ಆದಾಯ ವೃದ್ಧಿಗೊಳ್ಳಲಿದೆ. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಿದ ಫಲವಾಗಿ ಅಂತರ್ಜಲ ವೃದ್ಧಿಯಾಗಿದೆ. ರೈತಪರ ಕಾರ್ಯಕ್ರಮಗಳು ಮುಂದುವರೆದಿವೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಯೋಜನೆ ಸಂಬಂಧ ಮಾಹಿತಿ ಕಾರ್ಡುಗಳನ್ನು ಬಿಡುಗಡೆ ಮಾಡಿದರು. ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ಸದಸ್ಯರಾದ ಬಿ.ಕೆ. ಬೊಮ್ಮಯ್ಯ, ಲೇಖಾ, ಕೆರೆಹಳ್ಳಿ ನವೀನ್, ತಾಲೂಕು ಪಂಚಾಯತ್ ಸದಸ್ಯರಾದ ಕುಮಾರನಾಯ್ಕ, ಮಹದೇವಶೆಟ್ಟಿ, ರೇವಣ್ಣ, ಶೋಭ, ನಂದೀಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನ. 19ರಂದು ವಿಶ್ವ ಶೌಚಾಲಯ ದಿನಾಚರಣೆ : ನಗರದಿಂದ ಹರದನಹಳ್ಳಿಯವರೆಗೆ ಸೈಕಲ್ ಜಾಥಾ
ಚಾಮರಾಜನಗರ, ನ. 17 :- ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ವತಿಯಿಂದ ವಿಶ್ವ ಶೌಚಾಲಯ ದಿನಾಚರಣೆಯನ್ನು ನವೆಂಬರ್ 19ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಿಂದ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಸೈಕಲ್ ಜಾಥಾ ಮೂಲಕ ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ತಲುಪಲಿದ್ದಾರೆ. ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶ್ವ ಶೌಚಾಲಯ ದಿನ ಆಚರಣೆಯ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಕೊಳ್ಳೇಗಾಲ : ಪಿಟ್ ಪದ್ದತಿಯಲ್ಲಿ ತ್ಯಾಜ್ಯ ನೀರು ವಿಲೇವಾರಿಗೆ ಮನವಿ
ಚಾಮರಾಜನಗರ, ನ. 17  ಕೊಳ್ಳೇಗಾಲ ಪಟ್ಟಣದಲ್ಲಿ ಈ ಹಿಂದೆ ಅನುಸರಿಸುತ್ತಿದ್ದ ಪಿಟ್ ಪದ್ಧತಿಯಲ್ಲಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವಂತೆ ನಗರಸಭೆ ತಿಳಿಸಿದೆ.
ಕೊಳ್ಳೇಗಾಲ ಪಟ್ಟಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2ನೇ ಹಂತದ ಒಳಚರಂಡಿ ಕಾಮಗಾರಿ ಯೋಜನೆ ಇನ್ನು ಅನುಷ್ಠಾನ ಹಂತದಲ್ಲಿದ್ದು ಅಪೂರ್ಣಗೊಂಡಿರುತ್ತದೆ. ಸಂಸ್ಕರಣಾ ಘಟಕ, ವೆಟ್ ವೆಲ್ ನಿರ್ಮಾಣ ಮತ್ತು ಕೆಲವು ಸ್ಥಳಗಳಲ್ಲಿ ಒಳಚರಂಡಿ ಮಾರ್ಗಗಳನ್ನು ಅಳವಡಿಸುವ ಕಾಮಗಾರಿ ಇನ್ನು ಪ್ರಾರಂಭಿಸಿಲ್ಲ. ಪಟ್ಟಣದಲ್ಲಿ ಭಾಗಶ: ಅಳವಡಿಸಿರುವ ಒಳಚರಂಡಿ ಮಾರ್ಗಕ್ಕೆ ಯಾವುದೇ ಪೂರ್ವ ಅನುಮತಿ ಇಲ್ಲದೆ ಮನೆ ಸಂಪರ್ಕಗಳನ್ನು ನೀಡಿರುವುದರಿಂದ ಕೊಳಚೆ ನೀರು ಅಲ್ಲಲ್ಲಿ ಉಕ್ಕಿ ಹರಿಯುತ್ತಿದ್ದು ಅನೈರ್ಮಲ್ಯ ವಾತಾವರಣ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಒಳಚರಂಡಿ ಮಾರ್ಗಗಳಿಗೆ ಇರುವ ಮನೆ ಸಂಪರ್ಕಗಳನ್ನು ಕೂಡಲೇ ಕಡಿತಗೊಳಿಸಿ ಈ ಹಿಂದೆ ಅನುಸರಿಸುತ್ತಿದ್ದ ಪಿಟ್ ಪದ್ಧತಿಯಲ್ಲಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಬೇಕು. 2ನೇ ಹಂತದ ಕಾಮಗಾರಿಯು ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು ನಂತರ ತೊಂದರೆ ಬಾರದಂತೆ ನಿಯಮಾನುಸಾರ ಒಳಚರಂಡಿ ಸಂಪರ್ಕ ಒದಗಿಸಿಕೊಡಲಾಗುತ್ತದೆ.
 ಸಾರ್ವಜನಿಕ ಹಿತದೃಷ್ಠಿಯಿಂದ ನಾಗರಿಕರು ನಗರಸಭೆ ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರÉ.
ನ. 20ರಂದು ನಗರದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟನೆ
ಚಾಮರಾಜನಗರ, ನ. 17 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಂಯುಕ್ತ ಯುವಜನ ಸಂಘದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 20ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರುಗದಮಣಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದÉ.
ಕೆ.ಪಿ.ಎಸ್.ಸಿ ನೇಮಕಾತಿ: ಸಿ.ಎಂ ಅವರೊಂದಿಗೆ ಚರ್ಚೆ-ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ, ನ. 17- ಕರ್ನಾಟಕ ಲೋಕಸೇವಾ ಆಯೋಗದ ನೇರ ನೇಮಕಾತಿ ಸಂಬಂಧ ತಳೆದಿರುವ ನಿಲುವಿನ ಕುರಿತು ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಹಾಗೂ ಕ್ಯಾಬಿನೇಟ್‍ನಲ್ಲಿ ವಿಷಯ ಪ್ರಸ್ತಾಪಿಸಿ ಸಂಬಂಧಪಟ್ಟ ವರ್ಗಗಳಿಗೆ ಅನ್ಯಾಯವಾಗದಂತೆ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟಗಂಗಶೆಟ್ಟಿ ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶಸಂಖ್ಯೆ: ಸಿಆಸುಇ:08:ಸೆಹಿಮ:95 ಬೆಂಗಳೂರು ದಿನಾಂಕ: 20.06.1995 ರಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸುವಾಗ ಯಾವ ರೀತಿ ಆಯ್ಕೆ ವಿಧಾನವನ್ನು ಅನುಸರಿಸಬೇಕೆಂಬುದನ್ನು ಸ್ಪಷ್ಟಪಡಿಸಲಾಗಿರುತ್ತದೆ. ಇದನ್ನು  ಪರಿಶಿಷ್ಟ ಜಾತಿ, ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಾ ಕಳೆದ 23 ವರ್ಷಗಳಿಂದಲೂ ಅನುಷ್ಠಾನಗೊಳಿಸಲಾಗುತ್ತಿದೆ.
ಆದರೆ ಸರ್ಕಾರದ ಪತ್ರಸಂಖ್ಯೆ: ಸಿಆಸುಇ:66:ಸೇಲೋಸೇ:2018. ದಿನಾಂಕ: 03.11.2018ರಲ್ಲಿ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿಸಂಖ್ಯೆ 27674/2012ರಲ್ಲಿ ಹೊರಡಿಸಿರುವ ತೀರ್ಪಿನಲ್ಲಿ ಮಾರ್ಗಸೂಚಿಯನ್ನು ನಿಗದಿಪಡಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ಸೂಚಿಸಲಾಗಿದೆ.
     ಈ ರಿಟ್ ಅರ್ಜಿಯಲ್ಲಿ ಅನುಸರಿಸಲು ಸೂಚಿಸಿರುವ ಮಾರ್ಗಸೂಚಿಯು ಕೇವಲ ಆ ರಿಟ್ ಅರ್ಜಿಯಲ್ಲಿ ಇರುವಂತಹ ಪ್ರಕರಣಕ್ಕೆ ಮಾತ್ರವೇ ಸಂಬಂಧಿಸಿದ್ದಾಗಿರುತ್ತದೆ. ಮೇಲಾಗಿ ಆ ತೀರ್ಪಿನ ವಿರುದ್ಧ ಸರ್ಕಾರವು ಮರುಪರಿಶೀಲನಾ ಅರ್ಜಿಯನ್ನು ದಾಖಲಿಸಿರುತ್ತದೆ. ಆದರೂ ಕೂಡ ಈ ರೀತಿ ನಿರ್ದೇಶನ ನೀಡಿರುವುದು ಪರಿಶಿಷ್ಟ ಜಾತಿ, ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದರಿಂದ ಅದನ್ನು ನಾನು ವಿರೋಧಿಸುತ್ತೇನೆ.
ಈ ತೀರ್ಪಿನಲ್ಲಿ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸುವುದರಿಂದ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ಕೋಟಾದ ಅಡಿಯಲ್ಲಿ ಹುದ್ದೆಗಳನ್ನು ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಇದು ಸಹಜ ಸಾಮಾಜಿಕ ನ್ಯಾಯಕ್ಕೆ ವಿರೋಧವಾದ ಮಾರ್ಗದರ್ಶನವಾಗುತ್ತದೆ.
       ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಹಾಗೂ ಕ್ಯಾಬಿನೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿ ಈ ವರ್ಗಗಳಿಗೆ ಅನ್ಯಾಯವಾಗದಂತೆ ಸರಿಪಡಿಸಲುಕ್ರಮ ಕೈಗೊಳ್ಳುತ್ತೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟಗಂಗಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 20, 21ರಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ನ. 17:- ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಅವರು ನವೆಂಬರ್ 20 ಮತ್ತು 21ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನ. 20ರಂದು ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸುವ ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೊಂದಿಗೆ ಸಭೆ ನಡೆಸುವರು. ನಂತರ 4.30 ಗಂಟೆಗೆ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಳ ಪರಿಶೀಲನೆ ಮಾಡುವರು. ಸಂಜೆ 5.30 ಗಂಟೆಗೆ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಗೆ ಭೇಟಿ ಬಳಿಕ ವಾಸ್ತವ್ಯ ಮಾಡುವರು.
ನ. 21ರಂದು ಬೆಳಿಗ್ಗೆ 9 ಗಂಟೆಗೆ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡುವರು. 11.30 ಗಂಟೆಗೆ ಸಂತೇಮರಹಳ್ಳಿಯಲ್ಲಿ ರೇಷ್ಮೆ ಇಲಾಖೆಯ ಸ್ಥಳ ಪರಿಶೀಲನೆ ನಡೆಸುವರು. ಮಧ್ಯಾಹ್ನ 12.30 ಗಂಟೆಗೆ ಕುದೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುವರು. ಸಂಜೆ 4 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



x

Friday, 16 November 2018

ಉದ್ಯೋಗ ಖಾತರಿ ಯೋಜನೆ ಸದುಪಯೋಗಕ್ಕೆ ಜಿ.ಪಂ ಸಿ.ಇ.ಓ ಸಲಹೆ & ಪ್ರವಾಸಿ ಟ್ಯಾಕ್ಸಿ ಸೌಲಭ್ಯಕ್ಕೆ ಪ.ಜಾ., ಪ.ಪಂ, ಹಿಂದುಳಿದ, ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ (16-11-2018)

ಉದ್ಯೋಗ ಖಾತರಿ ಯೋಜನೆ ಸದುಪಯೋಗಕ್ಕೆ ಜಿ.ಪಂ  ಸಿ.ಇ.ಓ ಸಲಹೆ 

ಚಾಮರಾಜನಗರ, ನ. 16 :- ಮಹಾತ್ಮಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯುವ ಅವಕಾಶವಿದ್ದು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಸಲಹೆ ಮಾಡಿದರು. 
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಅರಿವು ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಕುಟುಂಬಗಳು ಉದ್ಯೋಗಕ್ಕಾಗಿ ಬೇರೆಕಡೆ ವಲಸೆ ಹೋಗುವುದನ್ನು ತಪ್ಪಿಸಿ ಸ್ಥಳಿಯವಾಗಿ ಉದ್ಯೋಗ ಅವಕಾಶ ಒದಗಿಸಿ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಉದ್ಯೋಗ ಖಾತರಿ ಯೋಜನೆ ಜಾರಿಗೆ ತರಲಾಗಿದೆ.  ಕೆಲಸ ನಿರ್ವಹಿಸಿದ ಪುರುಷ ಮಹಿಳೆಯರಿಗೆ ಸರಿಸಮಾನವಾಗಿ ದಿನವೊಂದಕ್ಕೆ 249 ರೂ ಗಳನ್ನು ಪಾವತಿ ಮಾಡಲಾಗುತ್ತದೆ. ಈ ಯೋಜನೆ ಉಪಯುಕ್ತವಾಗಿದ್ದು ಗ್ರಾಮೀಣ ಕುಟುಂಬಗಳು ಪ್ರಯೋಜನ ಪಡೆಯಲು ಮುಂದಾಗಬೇಕೆಂದರು. 
ಯೋಜನೆಯಡಿ ವೈಯಕ್ತಿಕ ಕಾಮಗಾರಿ ನಿರ್ವಹಿಸಲು ಸಹ ಅನುಕೂಲ ಕಲ್ಪಿಸಲಾಗಿದೆ. ಬದು ನಿರ್ಮಾಣ. ಕೃಷಿ ಹೊಂಡ, ದನದ ಕೊಟ್ಟಿಗೆ, ಕುರಿ- ಮೇಕೆ. ಕೋಳಿಶೆಡ್,ಎರೆಹುಳು ಗೊಬ್ಬರ ತೊಟ್ಟಿ ಸೇರಿದಂತೆ ಹಲವಾರು ಕಾಮಗಾರಿ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು.
ತೋಟಗಾರಿಕೆ ಅಭಿವೃದ್ದಿಗೂ ಯೋಜನೆಯಡಿ ಸಾಕಷ್ಟು ಅವಕಾಶಗಳಿವೆ. ತೆಂಗು, ಬಾಳೆ. ಅಡಿಕೆ. ಪಪ್ಪಾಯ, ನುಗ್ಗೆ, ನಿಂಬೆ, ಸೀಬೆ, ದಾಳಿಂಬೆ, ಮಾವು, ಇತರೆ ಆದಾಯ ತರುವ ಬೆಳೆಯನ್ನು ತಮ್ಮ ತಮ್ಮ ಜಮೀನಿನಲ್ಲಿಯೇ ಬೆಳೆಯಲು ಅಗತ್ಯವಿರುವ ನೆರವು ನೀಡಲಾಗುತ್ತದೆ ಅಲ್ಲದೆ ರೇಷ್ಮೆ ಬೆಳೆಗೂ ಸಹ ಅವಶ್ಯವಿರುವ ಸೌಲಭ್ಯಗಳನ್ನು ಯೋಜನೆಯಡಿ ಒದಗಿಸಲಾಗುತ್ತದೆ ಎಂದರು.
ಅರಣ್ಯ ಇಲಾಖೆಯೂ ಕೂಡ ರೈತರ ಜಮೀನುಗಳಲ್ಲಿ ಹೆಬ್ಬೇವು. ಸಿಲ್ವರ್.ಹೊಂಗೆ. ಹುಣಸೆ ಯಂತಹ ಆದಾಯ ತರುವ ಮರಗಳನ್ನು ಬೆಳೆಸಲು ಅವಕಾಶ ಕಲ್ಪಿಸಿದೆ. ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ವೇಳೆ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ  90 ಮಾನವದಿನಗಳ ಉದ್ಯೋಗ ಪಡೆಯಲು ಉದ್ಯೋಗ ಖಾತರಿ ಯೋಜನೆಯಡಿ  ಅವಕಾಶ ಮಾಡಿಕೊಡಲಾಗಿದೆ. ಉದ್ಯೋಗ ಖಾತರಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಆಯಾ ಗ್ರಾಮಪಂಚಾಯತಿಗಳಲ್ಲಿ ನೀಡಲು ಸೂಚಿಸಲಾಗಿದೆ ಎಂದು ಹರೀಶ್‍ಕುಮಾರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ. ಪದ್ಮಶೇಖರ್‍ಪಾಂಡೆ. ಗುಂಡ್ಲುಪೇಟೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ನರೇಗಾ ಜಿಲ್ಲಾ ಸಂಯೋಜಕರಾದ ಮಲ್ಲಿಕಾರ್ಜುನ್, ಎಸ್. ನವೀನ್‍ಕುಮಾರ್. ಎನ್.ಆರ್.ಎಲ್.ಎಂ ವ್ಯವಸ್ಥಾಪಕರಾದ ದೀಪಕ್. ಗೋವಿಂದರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

  
  
ಜಿಲ್ಲೆಯ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ
ಚಾಮರಾಜನಗರ, ನ. 17 - ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 19 ರಿಂದ 24ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ನವೆಂಬರ್ 19ರಂದು ಚಾಮರಾಜನಗರ, 20ರಂದು ಯಳಂದೂರು, 22ರಂದು ಕೊಳ್ಳೇಗಾಲ, 23ರಂದು ಹನೂರು ಹಾಗೂ 24ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ನ. 27ರಿಂದ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾಪೂರ್ವ ತರಬೇತಿ
ಚಾಮರಾಜನಗರ, ನ. 16 :- ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪರೀಕ್ಷೆಗೆ ಸಂಬಂಧ ಸ್ಪರ್ಧಾತ್ಮಕ ಪರೀಕ್ಷಾಪೂರ್ವ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ತರಬೇತಿಯು ನವೆಂಬರ್ 27 ರಿಂದ ಡಿಸೆಂಬರ್ 13ರವರೆಗೆ ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ಕೊಠಡಿ ಸಂಖ್ಯೆ 210) ಯಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಸ್ವ ವಿವರಗಳೊಂದಿಗೆ ನವೆಂಬರ್ 27ರೊಳಗೆ ಹೆಸರು ನೊಂದಾಯಿಸಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿ ಅಥವಾ ದೂರವಾಣಿ ಸಂಖ್ಯೆ 08226-224430 ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ 
ಚಾಮರಾಜನಗರ, ನ. 16 - ಜಿಲ್ಲೆಯಲ್ಲಿರುವ ಲಂಬÁಣಿ, ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿ ಮತ್ತು ಇತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗÉೂಳ್ಳಲಾಗುತ್ತಿದೆ.
ಸರ್ಕಾರಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನವಸತಿಗಳಲ್ಲಿನ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ನೀಡುವ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಕ್ಕೆ ತಿದ್ದುಪಡಿ ತಂದು 94-ಡಿ ಸೇರ್ಪಡೆಗೊಳಿಸಿ ನಿಯಮಗಳನ್ನು ರೂಪಿಸಲಾಗಿದೆ. ಖಾಸಗಿ ಜಮೀನುಗಳಲ್ಲಿ ನೆಲೆಗೊಂಡಿರುವ ದಾಖಲೆರಹಿತ ಜನವಸತಿಗಳಲ್ಲಿನ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ನೀಡುವ ಸಲುವಾಗಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 38ಕ್ಕೆ ತಿದ್ದುಪಡಿ ತಂದು 38-ಎ ಸೇರ್ಪಡೆಗೊಳಿಸಿ ನಿಯಮಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.




ಪ್ರವಾಸಿ ಟ್ಯಾಕ್ಸಿ ಸೌಲಭ್ಯಕ್ಕೆ ಪ.ಜಾ., ಪ.ಪಂ, ಹಿಂದುಳಿದ, ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನ 
ಚಾಮರಾಜನಗರ, ನ. 16- ಪ್ರವಾಸೋದ್ಯಮ ಇಲಾಖೆಯು 3 ಲಕ್ಷ ರೂ. ಸಹಾಯಧನದೊಂದಿಗೆ ನೀಡುವ ಪ್ರವಾಸಿ ಟ್ಯಾಕ್ಸಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಥವಾ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಸೌಲಭ್ಯ ಒದಗಿಸಲಾಗುತ್ತದೆ. ಹಿಂದುಳಿದ ಅಥವಾ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೂ ಪ್ರವಾಸಿ ಟ್ಯಾಕ್ಸಿ ಸೌಲಭ್ಯ ನೀಡಲಾಗುತ್ತದೆ. 
ಅರ್ಜಿದಾರರು 20 ರಿಂದ 40ರ ವಯೋಮಿತಿಯೊಳಗಿರಬೇಕು. ಕನಿಷ್ಟ 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಲಘು ವಾಹನ ಚಾಲನಾ (ಎಲ್ ಎಂವಿ) ಪರವಾನಗಿ ಪಡೆದು ಒಂದು ವರ್ಷವಾಗಿರಬೇಕು. ಬ್ಯಾಡ್ಜ್ ಹೊಂದಿರಬೇಕು. ಅರ್ಜಿದಾರರು ಹಾಗೂ ಅವರ ಕುಟುಂಬದವರು ಯಾವುದೇ ಸರ್ಕಾರಿ ಇಲಾಖೆ ಅಥವಾ ನಿಗಮ ಮಂಡಳಿಯಲ್ಲಿ ನೌಕರಿಯಲ್ಲಿರಬಾರದು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. 
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನವೆಂಬರ್ 19 ರಿಂದ ಡಿಸೆಂಬರ್ 18ರವರೆಗೆ ವಿತರಿಸಲಾಗುತ್ತದೆ. 
ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ನವೆಂಬರ್ 18 ಕಡೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಭಾವಚಿತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಮೊಬೈಲ್, ದೂರವಾಣಿ ಸಂಖ್ಯೆ, ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಯಾವುದೇ ನಿಗಮದಿಂದ ಸೌಲಭ್ಯ ಪಡೆಯದೆ ಇರುವ ಕುರಿತು ದೃಢೀಕರಣ ಪತ್ರ, ಅಂಕಪಟ್ಟಿ, ಚಾಲನಾ ಪರವಾನಗಿ, ಬ್ಯಾಡ್ಜ್, ಡಿಎಲ್ ಎಕ್ಸ್ಟ್ರಾಕ್ಟ್ ಸೇರಿದಂತೆ ಇತರೆ ಸೂಚಿಸಿರುವ ದೃಢೀಕರಣ ಪತ್ರಗಳನ್ನು ಲಗತ್ತಿಸಬೇಕು. ಸಂಪೂರ್ಣ ವಿವರಗಳಿಗೆ ನಗರದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-226512 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ. 
ನ. 17ರಂದು ಭಕ್ತ ಕನಕದಾಸರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ 
ಚಾಮರಾಜನಗರ, ನ. 16 - ಜಿಲ್ಲಾಡಳಿತದ ವತಿಯಿಂದ ಭಕ್ತ ಕನಕದಾಸರ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನವೆಂಬರ್ 17ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳು, ಕನ್ನಡಪರ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರತಿನಿಧಿಗಳು, ಕನಕ ಸಮಾಜದ ಮುಖಂಡರು ಸೇರಿದಂತೆ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಸಂಬಂಧ ಸಲಹೆ ಸಹಕಾರ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಚನ್ನಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.
ನ. 17ರಂದು ರೈತರಿಗೆ ಭೂ ಸಂಪನ್ಮೂಲ ಮಾಹಿತಿ ಕಾರ್ಯಾಗಾರ
ಚಾಮರಾಜನಗರ, ನ. 16 - ಜಲಾನಯನ ಅಭಿವೃದ್ಧಿ ಇಲಾಖೆಯು ಕೆಡಬ್ಲ್ಯೂಡಿಡಿ (ಸುಜಲ) ಯೋಜನೆಯಡಿ ಜಿಲ್ಲೆಯ ಜಲಾನಯದ ಕಾಮಗಾರಿಗಳ ಮೂಲಕ ಮಣ್ಣು ಮತ್ತು ನೀರಿನ ಸಂರಕ್ಷಣೆ, ಭೂ ರಹಿತರ ಅಭಿವೃದ್ಧಿ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಲು ರೈತರಿಗೆ ಒಂದು ದಿನದ ಜಿಲ್ಲಾ ಮಟ್ಟದ ಭೂ ಸಂಪನ್ಮೂಲ ಮಾಹಿತಿ ಕಾರ್ಯಾಗಾರವನ್ನು ನವೆಂಬರ್ 17ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸÀತ್ಯಮಂಗಲ ರಸ್ತೆಯಲ್ಲಿರುವ ಶ್ರೀ ಶಿವಕುಮಾರಸ್ವಾಮಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.




ನ. 17ರಂದು ಸಿದ್ದಯ್ಯನಪುರ ಕಾಲೋನಿಯಲ್ಲಿ ದಲಿತ ಸಮುದಾಯದೊಂದಿಗೆ ಜಿ.ಪಂ. ಸಿಇಓ ನೇತೃತ್ವದಲ್ಲಿ ಸಮಾಲೋಚನ ಸಭೆ 
ಚಾಮರಾಜನಗರ, ನ. 16 – ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಸಿದ್ದಯ್ಯನಪುರ ಕಾಲೋನಿಯಲ್ಲಿ ದಲಿತ ಸಮುದಾಯದ ಜನತೆಯೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಮಾಲೋಚನ ಸಭೆಯು ನವೆಂಬರ್ 17ರಂದು ಸಂಜೆ 4 ರಿಂದ 7 ಗಂಟೆಯವರೆಗೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




  
























x

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು