Saturday, 22 December 2018

ರಸ್ತೆ ಅಪಘಾತ: ಶಿಕ್ಷಕಿ ಸಾವು &ಪ್ರಸಾದ ಸೇವನೆ ಪ್ರಕರಣ : ಮತ್ತೋರ್ವ ಅಸ್ವಸ್ಥ ಸಾವು - ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಪ್ರಸಾದ ಸೇವನೆ ಪ್ರಕರಣ : ಮತ್ತೋರ್ವ ಅಸ್ವಸ್ಥ ಸಾವು - ಸಾವಿನ ಸಂಖ್ಯೆ 17ಕ್ಕೆ ಏರಿಕೆ 

ಚಾಮರಾಜನಗರ, ಡಿ. 22:- ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಇಂದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ದೊರೆಸ್ವಾಮಿ ಮೇಡು ಗ್ರಾಮದ ರಂಗನ್ (45 ವರ್ಷ) ಮೃತಪಟ್ಟವರು. ಪ್ರಸಾದ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಂಗನ್À ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಂಗನ್ ಅವರು ಇಂದು ಮಧ್ಯಾಹ್ನ ನಿಧನ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ರಸ್ತೆ ಅಪಘಾತ: ಶಿಕ್ಷಕಿ ಸಾವು       

ಚಾಮರಾಜನಗರ:ರಸ್ತೆ ಅಪಘಾತದಲ್ಲಿ  ಶಿಕ್ಷಕಿಯೋರ್ವರು ಸಾವನ್ನಪ್ಪಿದ ಘಟನೆ ಚಾಮರಾಜನಗರ ಪಟ್ಟಣದಲ್ಲಿ   ಮುಂಜಾನೆ ನಡೆದಿದೆ. *ಚಾಮರಾಜನಗರ ಪಟ್ಟಣ ನಿವಾಸಿಯಾಗಿರುವ ಸಾಗಡೆ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿಯಾಗಿರುವ ಅನಿತಾ ಎಂಬುವವರೆ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.

*ಶನಿವಾರ ಇಂದು ಎಂದಿನಂತೆ ತಮ್ಮ ಶಾಲೆಗೆ ತೆರಳಲು ಪತಿ ರಂಗನ್ ಅವರು ಬೈಕ್ ಅಲ್ಲಿ ತೆರಳುತ್ತಿದ್ದಾಗ  ಪ್ರವಾಸಿ ಮಂದಿರ ಬಳಿ ಈ ದುರ್ಘಟನೆ ನಡೆದಿದೆ.

*ಬಹುಶಃ ಲಬ್ಯವಾದ ಮಾಹಿತಿ ಪ್ರಕಾರ ಅವರ ಮನೆಯಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಯೂ  ಟರ್ನ್ ಮಾಡುವಾಗ ಈ ಘಟನೆ ನಡೆದಿದೆ  ಎನ್ನಲಾಗಿದೆ.
 *ಹಿಂಬದಿಯಲ್ಲಿ ಕುಳಿತಿದ್ದ ಶ್ರೀಮತಿ ಅನಿತಾ ಅವರ ತಲೆ  ರಸ್ತೆ ಮದ್ಯೆದ ವಿಭಜಕ್ಕೆ ಹೊಡೆದ ಹಿನ್ನಲೆಯಲ್ಲಿ ಅಲ್ಲಿಯೆ ಸಾವನ್ನಪ್ಪಿದ್ದಾರೋ ಅಥವಾ ಲಾರಿ ಬಂದು ಡಿಕ್ಕಿ ಹೊಡೆದಿದೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ. . ವಾಹನ ಸವಾರರಿಗೂ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
*ಪಟ್ಟಣ ಠಾಣಾ ಹಾಗೂ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.


ಸುಳ್ವಾಡಿ ಸಂತ್ರಸ್ಥರನ್ನು ಸಂತೈಸಿ ಸೇವಾ ವೈಶಾಲ್ಯತೆ ಮೆರೆದ ಹೋಲಿಕ್ರಾಸ್ ಆಸ್ಪತ್ರೆ 

ಚಾಮರಾಜನಗರ, ಡಿ. 22 - ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾದವರಿಗೆ ಸಕಾಲದಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಹಲವರ ಜೀವ ಉಳಿಸಿ ಹೃದಯ ವೈಶಾಲ್ಯತೆ ಮೆರೆದಿದೆ.
ಪ್ರಸಾದ ಸೇವಿಸಿ ಗಂಭೀರವಾಗಿ ಅಸ್ವಸ್ಥರಾದವರನ್ನು ತಂಡೋಪತಂಡವಾಗಿ ಕರೆತರುತ್ತಿದ್ದಂತೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯ ಇಡೀ ವೈದ್ಯ ಹಾಗೂ ಸಿಬ್ಬಂದಿ ತಂಡ ಕಾಳಜಿಯಿಂದ ಚಿಕಿತ್ಸೆ ನೀಡದೇ ಇದ್ದಿದ್ದರೆ ಸಾವುನೋವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುತ್ತಿತ್ತು. ಸುಳ್ವಾಡಿ ಗ್ರಾಮಕ್ಕೆ ಹತ್ತಿರವಿದ್ದ ಎಲ್ಲ ವೈದ್ಯಕೀಯ ಸೌಲಭ್ಯವುಳ್ಳ ಆಸ್ಪತ್ರೆ ಇದ್ದದ್ದು, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಮಾತ್ರ. ಹೀಗಾಗಿ ಈ ಆಸ್ಪತ್ರೆಯನ್ನೇ ತಕ್ಷಣಕ್ಕೆ ಅವಲಂಬಿಸುವ ಅನಿವಾರ್ಯತೆ ಉಂಟಾಯಿತು.
ಆತಂಕಕ್ಕೆ ಒಳಗಾದ ಸಂತ್ರಸ್ಥರನ್ನು ಸಂತೈಸಿ ಚಿಕಿತ್ಸೆ ಆರಂಭಿಸಿದ ಹೋಲಿಕ್ರಾಸ್ ಆಸ್ಪತ್ರೆ ತಂಡ ಜನರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದು ಪ್ರಶಂಸನೀಯವಾಗಿದೆ. ಡಿಸೆಂಬರ್ 14ರಂದು ಮಧ್ಯಾಹ್ನ 1.10 ವೇಳೆಗೆ ತೀವ್ರ ಗಂಭೀರತೆ ಲಕ್ಷಣ ಕಂಡುಬಂದ ಅಸ್ವಸ್ಥರನ್ನು ಕರೆತರಲಾಯಿತು. ತದನಂತರ ಮತ್ತಷ್ಟು ಅಸ್ವಸ್ಥರು ಬರಲಾರಂಭಿಸಿದರು. ಸ್ವಲ್ಪವೂ ಸಮಯ ವ್ಯರ್ಥಮಾಡದ ಹೋಲಿಕ್ರಾಸ್ ಆಸ್ಪತ್ರೆ ವೈದ್ಯರು ಆಸ್ಪತ್ರೆಯಲ್ಲಿದ್ದ ಎಲ್ಲ 7 ವೆಂಟಿಲೇಟರ್‍ಗಳನ್ನು ಬಳಸಿ ಚಿಕಿತ್ಸೆ ನೀಡಲು ತೊಡಗಿದರು.
ಮೊದಲಿಗೆ ಆಸ್ಪತ್ರೆಗೆ ದಾಖಲಾದವರಿಂದ ಯಾವ ಆಹಾರ ಸೇವನೆ ಮಾಡಿದ್ದಾರೆ, ವಾಂತಿ ಇನ್ನಿತರ ಸಮಸ್ಯೆಗಳಿಗೆ ಕಾರಣವೇನೆಂಬ ಮಾಹಿತಿ ಕೊಡಲೂ ಸಹ ಸಂತ್ರಸ್ಥರಿಗೆ ಆಗದ ಪರಿಸ್ಥಿತಿ ಇತ್ತು. ತದನಂತರ ಸಂತ್ರಸ್ಥರ ದೇಹ ಚಲನವಲನಗಳನ್ನು ಗಮನಿಸಿ ವಿಷ ಸೇವನೆ ಇರಬಹುದೆಂದು ತಿಳಿದುಕೊಂಡು ಚಿಕಿತ್ಸೆ ನೀಡಲಾರಂಭಿಸಿದೆವು. ಹೆಚ್ಚು ಪ್ರಮಾಣದ ಆಹಾರ ಸೇವಿಸಿದ್ದವರ ಆರೋಗ್ಯಸ್ಥಿತಿ ಗಂಭೀರವಾಗಿತ್ತು. ಸ್ವಲ್ಪ ಪ್ರಮಾಣದ ಆಹಾರ ಸೇವಿಸಿದವರೂ ಸಹ ಗಂಭೀರ ಸ್ಥಿತಿಯವರ ಆರೋಗ್ಯ ಏರುಪೇರುಗಳನ್ನು ಕಂಡು ತಮಗೂ ಇದೇ ರೀತಿಯಾಗಬಹುದು ಎಂಬ ಆತಂಕಕ್ಕೆ ಒಳಗಾಗಿದ್ದರು. ಈ ಹಂತದಲ್ಲಿ ಎಲ್ಲರನ್ನೂ ಸಮಾಧಾನಚಿತ್ತದಿಂದ ಸಂತೈಸಿ ಚಿಕಿತ್ಸೆ ನೀಡುವ ಸವಾಲೂ ಸಹ ನಮ್ಮ ಮುಂದಿತ್ತು. ಅದನ್ನು ಸರಿಯಾಗಿಯೇ ನಿಭಾಯಿಸಿದ್ದೇವೆ ಎಂಬ ಆತ್ಮವಿಶ್ವಾಸ ಹಾಗೂ ಸಾರ್ಥಕದ ನುಡಿಗಳನ್ನು ಹೋಲಿಕ್ರಾಸ್ ಆಸ್ಪತ್ರೆಯ ಸಹಾಯಕ ಆಡಳಿತಧಿಕಾರಿ ಸಿಸ್ಟರ್ ರಿಜಿಜಾನ್ ಹಾಗೂ ಇತರೆ ವೈದ್ಯರು ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಖುದ್ದು ನಿಂತು ಚಿಕಿತ್ಸೆಗೆ ಕಾಳಜಿ ತೋರುತ್ತಿತ್ತು. ಪ್ರಸಾದ ಸೇವನೆಯಿಂದ ಅಸ್ವಸ್ಥರಾಗಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಸ್ಪತ್ರೆಯ ಎಲ್ಲಾ ಪಾಳಿಯ ವೈದ್ಯರು, ನರ್ಸ್, ಸಿಬ್ಬಂದಿಯನ್ನು ಕರೆಸಲಾಯಿತು. ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು, ಸ್ಥಳೀಯ ಜನತೆ ಸಹ ಚಿಕಿತ್ಸೆ ನೆರವಿಗೆ ಧಾವಿಸಿದರು. ಜಿಲ್ಲಾಡಳಿತ ಕೂಡ ಸುತ್ತಮುತ್ತಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನೂ ಸಹ ತುರ್ತಾಗಿ ಹೋಲಿಕ್ರಾಸ್ ಆಸ್ಪತ್ರೆಗೆ ಕರೆತಂದ ಪರಿಣಾಮ ಅಸ್ವಸ್ಥರ ಸಾವಿನ ಪ್ರಮಾಣ ತಗ್ಗಿತು.
ಒಟ್ಟು 64 ಮಂದಿ ಸಂತ್ರಸ್ಥರನ್ನು ದಾಖಲು ಮಾಡಿಕೊಂಡು ಪ್ರಥಮ ಚಿಕಿತ್ಸೆಗಳನ್ನು ಆರಂಭಿಸಲಾಯಿತು. ಬಹುತೇಕ ಅಸ್ವಸ್ಥರು ಚಿಕಿತ್ಸೆಗೆ ಸ್ಪಂದಿಸಿದರು. ಚಿಂತಾಜನಕ ಸ್ಥಿತಿಯಲ್ಲಿ ಇದ್ದವರನ್ನು ಮೈಸೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲು ವೆಂಟಿಲೇಟರ್ ಮೂಲಕ ಆಂಬುಲೆನ್ಸ್‍ಗಳಲ್ಲಿ ಕಳುಹಿಸಿ ಕೊಡಲಾಯಿತು.
100 ಹಾಸಿಗೆಗಳುಳ್ಳ ಎಲ್ಲ ಬಗÉಯ ಚಿಕಿತ್ಸೆಯನ್ನು ನೀಡುವ ಸಾಮಥ್ರ್ಯವುಳ್ಳ ಸುಸಜ್ಜಿತ ಹೋಲಿಕ್ರಾಸ್ ಆಸ್ಪತ್ರೆಯು  ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ದುರಂತವೆಂದೇ ಹೇಳಬಹುದಾದ ಸುಳ್ವಾಡಿ ಪ್ರಕರಣ ಸಂತ್ರಸ್ಥರಿಗೆ ಅಭೂತಪೂರ್ವವಾಗಿ ಸ್ಪಂದಿಸಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ತೋರಿದೆ. ಜಿಲ್ಲೆಯ ಕುಗ್ರಾಮಗಳು ಹಾಗೂ ಎಲ್ಲ ತಳವರ್ಗದ ಜನರಿಗೂ ಆರೋಗ್ಯ ಸೇವೆಯನ್ನು ನೀಡಬೇಕೆಂಬ ಆಶಯದೊಂದಿಗೆ 1970ರಲ್ಲಿ ಸಣ್ಣ ಚಿಕಿತ್ಸಾಲಯದೊಂದಿಗೆ ಆರಂಭವಾದ ಹೋಲಿಕ್ರಾಸ್ ಆಸ್ಪತ್ರೆ ಇಂದು ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸೇವೆ ನೀಡುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಈ ಭಾಗದ ಪ್ರಮುಖ ಆಸ್ಪತ್ರೆಯೆಂದೇ ಹೆಗ್ಗಳಿಕೆ ಪಡೆದಿರುವ ಹೋಲಿಕ್ರಾಸ್ ಆಸ್ಪತ್ರೆ ಸುಳ್ವಾಡಿ ಪ್ರಕರಣದಲ್ಲಿ ಗ್ರಾಮೀಣರ ನೋವು ಆಲಿಸಿ ಇಡೀ ವೈದ್ಯ ತಂಡವೇ ನಿಂತು ಜನರ ಪ್ರಾಣ ಕಾಪಾಡುವ ಮಹತ್ಕಾರ್ಯ ಮಾಡಿದೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣದಲ್ಲಿ ಹೋಲಿಕ್ರಾಸ್ ಆಸ್ಪತ್ರೆ ಇಡೀ ವೈದ್ಯ ಹಾಗೂ ಇತರೆ ಸಿಬ್ಬಂದಿ ಸಕಾಲದಲ್ಲಿ ಚಿಕಿತ್ಸೆ ನೀಡದೇ ಹೋಗಿದ್ದರೆ ಸಾವುನೋವಿನ ಪ್ರಮಾಣ ಏರಿಕೆಯಾಗುತ್ತಿತ್ತು. ಜಿಲ್ಲಾಡಳಿತದೊಂದಿಗೆ ಸ್ಪಂದನೆ ನೀಡಿ ಸಕಾರಾತ್ಮಕವಾಗಿ ಪ್ರಕರಣವನ್ನು ನಿಭಾಯಿಸಿದ ಹೋಲಿಕ್ರಾಸ್ ಆಸ್ಪತ್ರೆಯ ಇಡೀ ತಂಡ ಮಾನವೀಯತೆ ಮೆರೆದಿದೆ. ಸೇವೆಯ ಸಾರ್ಥಕತೆಯನ್ನು ಸಾಬೀತುಪಡಿಸಿದೆ. ಸಂಕಷ್ಟದಲ್ಲಿ ನೆರವಿಗೆ ನಿಂತ ಆಸ್ಪತ್ರೆಯ ಸೇವಾ ಮನೋಭಾವನೆಗೆ ಜಿಲ್ಲಾಡಳಿತದ ಪರವಾಗಿ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ನುಡಿದಿದ್ದಾರೆ.




ಸಾಧಕರ ಸಂವಾದ ಕಾರ್ಯಕ್ರಮಗಳು ಇಂದಿನ ಪೀಳಿಗೆಗೆ ದಾರಿದೀವಿಗೆಯಾಗಬೇಕು: ಮಲೆಯೂರು ಗುರುಸ್ವಾಮಿ .

                         VSS-9480030980

ಚಾಮರಾಜನಗರ, ಡಿ. 22:- ಸಾಹಿತ್ಯಕ್ಕೂ ಸಂವಾದಕ್ಕೂ ಅಪಾರವಾದ ಸಾಮ್ಯತೆಯಿದ್ದು, ಸಂವಾದ ಕಾರ್ಯಕ್ರಮಗಳು ಇಂದಿನ ಪೀಳಿಗೆಗೆ ದಾರಿದೀವಿಗೆಯಾಗಬೇಕು. ಇದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸಾಹಿತ್ಯದ ಅರಿವು ಹೆಚ್ಚಾಗಲಿದೆ ಎಂದು ಹಿರಿಯ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಅವರು ಅಭಿಪ್ರಾಯ ಪಟ್ಟರು.
ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜೆ.ಎಸ್.ಎಸ್. ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲೆಯ ಖ್ಯಾತ ಸಾಹಿತಿ ಹಾಗೂ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಾಧನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಾಹಿತ್ಯ ಕೃತಿಗಳಿಗೆ ಮುನ್ನುಡಿಯಾಗಿ ವಿಮರ್ಶೆ ಅಗತ್ಯ. ಅದೇ ರೀತಿಯಲ್ಲಿ ವಾದ, ಸಂವಾದಗಳು ನಡೆಯುತ್ತವೆ. ವಾದದಿಂದ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಆದರೆ ಸಂವಾದದಿಂದ ಮಾತ್ರ ಸೃಜನಶೀಲ ಸಾಹಿತ್ಯ ಹುಟ್ಟುತ್ತದೆ. ಇಂತಹ ಸೃಜನಶೀಲ ಸಾಹಿತ್ಯ, ಸಂವಾದ ಇತರರಿಗೆ ದಾರಿದೀಪವಾಗಬೇಕು ಎಂದರು.
ಸಾಹಿತ್ಯ ಬರಹದ ಜವಾಬ್ದಾರಿ ಹೆಚ್ಚಿನದು. ಕೊರಳ ಸಾಹಿತ್ಯಕ್ಕಿಂತ ಕರುಳು ಸಾಹಿತ್ಯ ಶ್ರೇಷ್ಠವಾದದ್ದು. ಕರುಳು ಸಾಹಿತ್ಯದಲ್ಲಿ ನಮ್ಮ ಜಗತ್ತಿನ, ದೇಶದ ಹಾಗೂ ನಾಡಿನ ಪರಂಪರೆಯ ಪ್ರಜ್ಞೆ ಇರುತ್ತದೆ. ಅಂತಹ ಪರಂಪರೆಯ ಪ್ರಜ್ಞೆ, ಆತ್ಮವಿಶ್ವಾಸ ಮತ್ತು ಸಮಚಿತ್ತದ ಸಾಹಿತಿಗಳಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಅವರು ದಲಿತ ಶ್ರೇಷ್ಠ ಚಿಂತಕರು ಕೂಡ ಹೌದು  ಎಂದು ಮಲೆಯೂರು ಗುರುಸ್ವಾಮಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಜ ನಿರ್ದೇಶಕರಾದ ಎಚ್. ಚನ್ನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ, ಸಂಸ್ಕøತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಪ್ರತಿವರ್ಷ ಇಲಾಖೆ ವತಿಯಿಂದ ಗುರುತಿಸಿ, ಆಹ್ವಾನಿಸಿ ಗೌರವಿಸಲಾಗುತ್ತಿದೆ. ಸಾಹಿತ್ಯ, ಸಂಸ್ಕøತಿಯ ಕುರಿತು ಇಂದಿನ ಪೀಳಿಗೆಗೆ ಸಾಧಕರ ಜೀವನ, ಸಾಧನೆಗಳನ್ನು ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಈ ಜಿಲ್ಲೆಯವರೇ ಆಗಿರುವುದು ನಮ್ಮ ಹೆಮ್ಮೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಇಲಾಖೆವತಿಯಿಂದ ನಗದು, ಸ್ಮರಣಿಕೆ, ಫಲತಾಂಬೂಲ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಾಹಿತಿಗಳಾದ ಕೆ. ವೆಂಕಟರಾಜು, ಮಂಜು ಕೋಡಿಉಗನೆ, ಸೋಮಶೇಖರ ಬಿಸಲ್ವಾಡಿ, ಎ.ಎಂ. ನಾಮಲ್ಲಪ್ಪ, ಸಿ.ಎಂ. ನರಸಿಂಹಮೂರ್ತಿ, ಸಿ. ಲಿಂಗಯ್ಯ, ಚಂದ್ರಶೇಖರ್ ತುಬಾರ್, ಅವರು ಸಾಧಕರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರ ವಿರಚಿತ ಕವಿತೆಗಳನ್ನು ಸಿ.ಎಂ. ನರಸಿಂಹಮೂರ್ತಿ ಸುಶ್ರಾವ್ಯವಾಗಿ ಹಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ವಿನಯ್, ಹಿರಿಯ ಸಾಹಿತಿ ಶಂಕನಪುರ ಮಹದೇವ, ಜೆ.ಎಸ್.ಎಸ್. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮಹಾಲಿಂಗಪ್ಪ, ಸಾಹಿತಿ ಮಂಜುನಾಥ ಲತಾ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಧ್ಯಾಹ್ನ ಯುವ ಕವಿಗೋಷ್ಠಿ ಆಯೋಜಿಸಲಾಗಿತ್ತು. ಆಹ್ವಾನಿತ ಕವಿಗಳು ತಮ್ಮ ತಮ್ಮ ಕವನಗಳನ್ನು ವಾಚಿಸಿದರು.


ವಿವಿಧ ಆಸ್ಪತ್ರೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಭೇಟಿ: ಸುಳ್ವಾಡಿ ಸಂತ್ರಸ್ತರ ಆರೋಗ್ಯ ವಿಚಾರಣೆ
ಚಾಮರಾಜನಗರ, ಡಿ. 22 - ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಇಂದು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ, ಯೋಗಕ್ಷೇಮವನ್ನು ವಿಚಾರಿಸಿದರು.
ಕಿಚ್ಚುಗುತ್ತಿ ಮಾರಮ್ಮನ ದೇವಾಲಯ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆ, ಅಪೋಲೋ, ಕಾವೇರಿ, ಕೊಲಂಬಿಯಾ ಏಷಿಯಾ, ಸುಯೋಗ್, ಜೆ.ಎಸ್.ಎಸ್. ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿದರು.
ವ್ಯಾಪಕವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಚಿವರು, ಸಂಸದರು ಜಿಲ್ಲೆಯ ಸಂತ್ರಸ್ತರನ್ನು ಕಂಡು ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧೋಪಚಾರ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಅಸ್ವಸ್ಥರ ಸಂಬಂಧಿಕರೊಂದಿಗೂ ಸಮಾಲೋಚಿಸಿ ಧೈರ್ಯ ತುಂಬಿದರು.
ಚಿಕಿತ್ಸೆಗೆ ದಾಖಲಾಗಿರುವ ಪ್ರತಿಯೊಬ್ಬರ ಬಗ್ಗೆಯೂ ಮಾಹಿತಿ ಪಡೆದ ಸಚಿವರು, ಸಂಸದರು ನೀಡಲಾಗುತ್ತಿರುವ ಚಿಕಿತ್ಸಾ ವಿಧಾನಗಳು, ಗುಣಮುಖರಾಗುತ್ತಿರುವವರ ವಿವರ, ಕಲ್ಪಿಸಲಾಗುತ್ತಿರುವ ವೈದ್ಯಕೀಯ ಸೌಲಭ್ಯಗಳು, ಸೇವೆ ಕುರಿತು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಅವರೊಂದಿಗೆ ಅಸ್ವಸ್ಥರ ಆರೋಗ್ಯ ಸ್ಥಿತಿ ಕುರಿತು ವಿವರ ಪಡೆದ ಸಚಿವರು, ಸಂಸದರು ಆಸ್ಪತ್ರೆಗೆ ದಾಖಲಾಗಿರುವ ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ವಿಶೇಷ ಗಮನ ನೀಡಬೇಕೆಂದು ತಿಳಿಸಿದರು.
ಪ್ರತಿ ಆಸ್ಪತ್ರೆಗೂ ನೇಮಕವಾಗಿರುವ ಜಿಲ್ಲಾ ನೋಡೆಲ್ ಅಧಿಕಾರಿಗಳೊಂದಿಗೂ ಚರ್ಚಿಸಿ ಸಂತ್ರಸ್ತರು ಗುಣಮುಖರಾಗುವ ನಿಟ್ಟಿನಲ್ಲಿ ಅವರೊಂದಿಗೆ ನೆರವಾಗಬೇಕೆಂದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಸಂಸದರಾದ ಆರ್. ಧ್ರುವನಾರಾಯಣ ಅವರು ಅಸ್ಪತ್ರೆಗಳಲ್ಲಿ ಸಂತ್ರಸ್ತರು ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಜನರ ಜೀವ ಉಳಿಸುವ ಕೆಲಸ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ವೈದ್ಯಕೀಯ ವ್ಯವಸ್ಥೆಗೆ ಕ್ರಮ ತೆಗೆದುಕೊಂಡಿದೆ ಎಂದರು.     

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು