ಚಾಮರಾಜನಗರದಲ್ಲಿ ಯಶಸ್ವಿಯಾಗಿ ನಡೆದ ಜೆಎಸ್‍ಎಸ್ ರಂಗೋತ್ಸವ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮಕ್ಕಳ ರಂಗಭೂಮಿಗೆ ಹೆಚ್ಚು ಪೆÇ್ರೀತ್ಸಾಹ ಕೊಡಬೇಕೆಂಬ ನಿಟ್ಟಿನಲ್ಲಿ ಆರಂಭವಾದ ಜೆಎಸ್‍ಎಸ್ ರಂಗೋತ್ಸವವು ಈಗ 6ನೆಯ ವರ್ಷಕ್ಕೆ ಕಾಲಿಟ್ಟಿದ್ದು ಇಂತಹ ಸುಸಂದರ್ಭದಲ್ಲಿ ವಿವಿದ ನಾಟಕಗಳನ್ನು ನೀಢಿರುವ ಕಲಾವಿದರು ಇತ್ತೀಚೆಗೆ ( ಡಿಸೆಂಬರ್ 7,8 ಮತ್ತು 9 ರಂದು) ವಿವಿದ ನಾಟಕಗಳನ್ನ ಚಾಮರಾಜನಗರ ಜನತೆಗೆ ಉಚಿತವಾಗಿ ಪ್ರದರ್ಶನಗಳನ್ನು ನೀಡುವ ಮೂಲಕ ಮನರಂಜನೆ ನೀಡಿದರು.
2011-18 ರವರೆಗೆ ಪುಷ್ಪರಾಣಿ, ನಾಯಿಮರಿ, ಅಳಿಲು ರಾಮಾಯಣ, ಆಮನಿ, ನಾಣಿ ಭಟ್ಟನ ಸ್ವರ್ಗದ ಕನಸು, ರೆಕ್ಕೆ ಕಟ್ಟುವಿರಾ, ಝುಂ ಝಾಂ ಆನೆ ಮತ್ತು ಪುಟ್ಟ, ಸರೀಸೃಪಗಳ ಸಭೆ, ಪಂಜರ ಶಾಲೆ, ಮಾನವಪುರದ ರಾಜಕುಮಾರಿ, ಗುಮ್ಮ, ಮೃಚ್ಛಕಟಿಕ, ಸಾಹೇಬರು ಬರುತ್ತಾರೆ, ನ್ಯಾಯಕ್ಕೆ ಜಯ, ಬೆಪ್ಪತಕ್ಕಡಿ ಬೋಳೆ ಶಂಕರ, ಜನಪದ ಜೋಗಿ, ಗೊಂಬೆ ರಾವಣ, ಸತ್ರು ಅಂದ್ರೆ ಸಾಯ್ತಾರಾ, ಮೈನಾ ಹಕ್ಕಿ, ದ್ರೋಣ ಪ್ರತಿಜ್ಞೆ, ಕಂಸಾಯಣ, ರಾಮಧಾನ್ಯ ಪ್ರಕರಣ ನಾಟಕಗಳನ್ನು ಪ್ರದರ್ಶಿಸಲಾದ ಕಲಾವಿದರುಗಳು ಪ್ರಸಕ್ತ ವರ್ಷ ಇಲಿ ಮಡಕೆ, ತಲೆಬಾಗದ ಜನ, ನಾಯಿತಿಪ್ಪ ಈ ನಾಟಕಗಳು ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರದಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮೂರು ರಂಗೋತ್ಸವಗಳಲ್ಲಿಯೂ ಪ್ರದರ್ಶನಗೊಂಢಿದ್ದು ಸುತ್ತೂರು ಜಾತ್ರೆಯಲ್ಲಿಯೂ ಪ್ರದರ್ಶನಗೊಳ್ಳಲಿವೆ.
2009-10 ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆದ ಜಶ್ನ್ ಎ ಬಚಪನ್ ನಾಟಕೋತ್ಸವದಲಿ ್ಲಶ್ರೀ ಹೆಚ್. ಜನಾರ್ಧನ್ (ಜನ್ನಿ) ನಿರ್ದೇಶನದದಲ್ಲಿ ಕುವೆಂಪು ವಿರಚಿತ ‘ಕಿಂದರಿ ಜೋಗಿ' ನಾಟಕ ಪ್ರದರ್ಶನಗೊಂಡಿದೆ. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಶ್ರೀಮತಿ ಸುಮತಿ ಕೆ.ಆರ್.ರವರ ನಿರ್ದೇಶನದಲ್ಲಿ ಡಾ. ಎಚ್.ಎಸ್. ವೆಂಕಟೇಶ್‍ಮೂರ್ತಿ ರಚಿಸಿದ ‘ಚಿತ್ರಪಟ' ನಾಟಕವನ್ನು ಪ್ರದರ್ಶಿಸಲಾಯಿತು. ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತಮಾನೋತ್ಸವದ ಅಂಗವಾಗಿ ರೂಪುಗೊಂಡ ‘ದಿವೃಚೇತನ' ನಾಟಕವು ಶಾಲಾಕಾಲೇಜುಗಳ ಪ್ರದರ್ಶನಗಳು ಸೇರಿದಂತೆ 70 ಪ್ರದರ್ಶನಗಳನ್ನು ಕಂಡಿದ್ದಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ ಒಟ್ಟು 100ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನಮೆಚ್ಚುಗೆಗೆ ಪಾತ್ರವಾಗಿದೆ.
ಚಾಮರಾಜಗರ ಜೆ,ಎಸ್.ಎಸ್ ಕಾಲೇಜಿನಲ್ಲಿ ನಡೆದ ನಾಟಕ ಪ್ರದರ್ಶನ ಪೈಕಿ ಚಾಮರಾಜನಗರ ಸಮೀಪವಿರುವ ರಾಮಸಮುದ್ರದ ಕಲಾವಿದ ಹಾಗೂ ನಿರ್ದೆಶಕರಾ ಮಂಜುನಾಥ್ ಆಲಿಯಾಸ್ ಮಂಜುನಾಥ್ ಕಾಚಕ್ಕಿ ಅವರ ನಾಟಕ ಸೇರಿದಂತೆ ಇನ್ನಿತರ ನಾಟಕಗಳು ಜನಮನ್ನಣೆ ಗಳಿಸಿದವು.
ತಲೆಬಾಗದ ಜನ ನಾಟಕವನ್ನು ಕೆ. ವೆಂಕಟರಾಜು ರಚನೆ ಮಾಡಲಾಗಿದ್ದು,ಸಂಗೀತವನ್ನು ಚಂದ್ರಶೇಖರಾಚಾರ್ ಹೆಗ್ಗೊಠಾರ ನೀಡಿದ್ದಾರೆ. ನಾಟಕದಲ್ಲಿ ವಿನ್ಯಾಸ ಮತ್ತು ನಿರ್ದೇಶನ : ಮಂಜುನಾಥ್ (ಕಾಚಕ್ಕಿ) ಅವರು ಮಾಡಿದ್ದು, ಪ್ರಶಾಂತ ಬಿ (ಮಾದರಸನಕೊಪ್ಪ) ಬೆಳಕು ನೀಡಿದ್ದಾರೆ. ನಾಟಕದ ಸಹನಿರ್ದೇಶನವನ್ನು ಸಮತಾ ಪಿ.ಜಿ. ಅವರು ಮಾಡಿದ್ದು ನಂಜನಗೂಡು (ತಾ.) ಮಹದೇವನಗರ, ಜೆಎಸ್‍ಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಅಬಿನಯಿಸಿದ್ದಾರೆ.
ತಲೆಬಾಗದ ಜನ ಎಂಬ ನಾಟಕದಲ್ಲಿನ ಸಾರಾಂಶ: 1947 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಈಸೂರಿನಲ್ಲಿ ನಡೆದ ಘಟನೆ. ಬ್ರಿಟಿಷರ ದಬ್ಬಾಳಿಕೆಯನ್ನು ಪ್ರತಿಭಟಿಸಿ ತನಗೆ ತಾನೇ ಸ್ವತಂತ್ರ ಹಳ್ಳಿ ಎಂದು ಸಾರಿಕೊಂಡ ಈ ಗ್ರಾಮದ ಎಲ್ಲರೂ ಗಾಂಧಿ ಟೋಪಿಯನ್ನು ಧರಿಸಲೇಬೇಕು. ಹತ್ತು ವರ್ಷದ ಪುಟ್ಟ ಬಾಲಕನನ್ನು ಅಮಲ್ದಾರನನ್ನಾಗಿ ನೇಮಿಸಿಕೊಂಡು ಬ್ರಿಟಿಷ್ ಸರ್ಕಾರಕ್ಕೆ ಎದುರಾಗುತ್ತಾರೆ. ಸನ್ನಿವೇಷಗಳು ಕೈಮೀರಿ ಬ್ರಿಟಿಷ್ ಸರ್ಕಾರದಿಂದ ನೇಮಿತರಾಗಿದ್ದ ಅಮಲ್ದಾರ್ ಮತ್ತು ಪೆÇಲೀಸ್ ಇನ್ಸ್‍ಪೆಕ್ಟರ್ ಕೊಲೆಯಾಗುತ್ತದೆ. ಇದರಿಂದ ಕೋಪಗೊಂಡ ಪೆÇಲೀಸ್ ಪಡೆ ಈಸೂರು ಗ್ರಾಮಕ್ಕೆ ನುಗ್ಗಿ ಮನೆಗಳಿಗೆ ಬೆಂಕಿ ಹಚ್ಚಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಧೂಳೀಪಟ ಮಾಡುತ್ತಾರೆ. ಸಿಕ್ಕಸಿಕ್ಕವರ ಮೇಲೆ ಮೊಕದ್ದಮೆ ಹೂಡಿದ್ದರ ಫಲವಾಗಿ ಗುರಪ್ಪ, ಮಲ್ಲಪ್ಪ, ಸೂರ್ಯನಾರಾಯಣಾಚಾರಿ, ಹಾಲಪ್ಪ, ಶಂಕರಪ್ಪನವರಿಗೆ ಗಲ್ಲುಶಿಕ್ಷೆಯಾಗುತ್ತದೆ. ಇದು ನಾಟಕದ ಸಾರಾಂಶವಾಗಿದೆ.
ವಿನಯ್‍ಕುಮಾರ್ ಎಂ. ವಿನಯ್‍ಕುಮಾರ್ ಹೆಚ್. ಪುನೀತ್ ರಾಜ್ ಡಿ. ಮನು ವಿ. ಸಾಗರ್ ವಿ. ಕೃಷ್ಣ ಎಸ್. ಕಾರ್ತಿಕ್ ಜಿ.ಎಸ್. ವಿಕಾಸ್ ಎಸ್. ದರ್ಶನ್ ಎ. ಮೋಹನ್‍ಕುಮಾರ್ ಚಿನ್ನಸ್ವಾಮಿ ಕೆ. ವಿನಯ್‍ಕುಮಾರ್ ಜಯಂತ್ ಎಲ್.ಮಹದೇವಸ್ವಾಮಿ,ಶರತ್‍ಕುಮಾರ್.ಎಸ್.ಸ್ಪಂದನಾ.ಕೆ.ತಂಜೀ:ಯಾ,ಮೇಘನ,ಸುಚಿತ್ರ,ರೀತು,ರಕ್ಷಿತ ಮಾನಸ ಅವರುಗಳು ರಂಗದಮೇಲಿದ್ದರೆ, ರಂಗದ ಹಿಂದೆ ರಂಗಪರಿಕರ ಹಾಗೂ ರಂಗಸಜ್ಜಿಕೆ ಮಧೂಸೂದನ್,ವಸ್ತ್ರವಿನ್ಯಾಸಕರಾಗಿ ಶಕುಂತಲಾ ಹೆಗಡೆ, ಮಹೇಶ್ ಹೆಬ್ಬಾಳ್, ಪ್ರಸಾಧನ ಮಂಜುನಾಥ್ (ಕಾಚಕ್ಕಿ)ಸಂಗೀತ ಸಾಂಗತ್ಯವನ್ನು ಮೈಸೂರಿನ ಕೃಷ್ಣ ಚೈತನ್ಯ ಅವರು ನೀಡಿದ್ದಾರೆ.
ಪ್ರಮುಖವಾಗಿ ಜಿಲ್ಲೆಯವರೇ ಹಾಗೂ ಪಟ್ಟಣದವರೇ ಆದ ವೆಂಕಟರಾಜು ಮಂಜುನಾಥ ಕಾಚಕ್ಕಿ ಅವರ ಸ್ವಲ್ಪ ವಿವರಗಳಿ ಹೀಗಿದೆ. ನಾಟಕಕಾರÀರಾದ ಶ್ರೀ ಕೆ. ವೆಂಕಟರಾಜುರವರು ಚಾಮರಾಜನಗರ ಜಿಲ್ಲೆಯವರು. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಕಳೆದ 45 ವರ್ಷಗಳಿಂದ ಚಾಮರಾಜನಗರದಲ್ಲಿ ಶಾಂತಲ ಕಲಾವಿದರು ಎಂಬ ಸಂಸ್ಥೆ ಕಟ್ಟಿ ರಂಗ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ರಜಿನಿ ಭಕ್ಷಿ ಅವರ ಬಾಪುಕುಟಿ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದಕ್ಕೆ ರಾಜ್ಯ ಅನುವಾದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದಲ್ಲದೇ ನಾಟಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಿದ್ಧನಳ್ಳಿ ಕೃಷ್ಣಶರ್ಮ ಪ್ರಶಸ್ತಿಗಳು ಬಂದಿವೆ.
ನಿರ್ದೇಶಕರರಾದ ಶ್ರೀ ಮಂಜುನಾಥ ಕಾಚಕ್ಕಿ ಇವರು ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಗ್ರಾಮದವರು. ಇವರು ನೀನಾಸಂ ರಂಗತರಬೇತಿ ಪಡೆದುಕೊಂಡು ಗೊಂಬೆರಾವಣ, ನಾಯಿಮರಿ, ನಾಣಿಭಟ್ಟನ ಸ್ವರ್ಗದ ಕನಸು, ತಲೆಬಾಗದ ಜನ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಇವರು ಜೆಎಸ್‍ಎಸ್ ಪ್ರೌಢಶಾಲೆ, ಸಂತೆಮರಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ನಾಟಕ ಶಿಕ್ಷಕರಾಗಿ ಕಲಾಮಂಟಪದಲ್ಲಿ ನಟರಾಗಿ ಬೇಸಿಗೆ ಶಿಬಿರಗಳು ಮತ್ತು ರಂಗೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಹನಿರ್ದೇಶಕರಾದ ಶ್ರೀಮತಿ ಪಿ ಜಿ ಸಮತ ಇವರು ನೀನಾಸಂನಲ್ಲಿ ರಂಗತರಬೇತಿ ಪಡೆದಿದ್ದಾರೆ. ಗುಮ್ಮ, ನ್ಯಾಯಕ್ಕೆ ಜಯ, ನಾಟಕಗಳನ್ನು ಜೆಎಸ್‍ಎಸ್ ರಂಗೋತ್ಸವಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಪ್ರೌಢಶಾಲೆ ಗಿರಿಯಬೋವಿಪಾಳ್ಯದಲ್ಲಿ ರಂಗಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
_______________________________________-
ನಾಯಿತಿಪ್ಪ ಎಂಬ ನಾಟಕದ ರಚನೆಯನ್ನು ಕೋಟಗಾನಹಳ್ಳಿ ರಾಮಯ್ಯ ಅವರು ಮಾಡಿದ್ದು ಚಂದ್ರಶೇಖರಾಚಾರ್ ಹೆಗ್ಗೊಠಾರ ಅವರು ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ಮಾಢಿದ್ದಾರೆ. ಜೀವನ್‍ಕುಮಾರ್ ಬಿ ಹೆಗ್ಗೋಡು ಅವರು ಬೆಳಕು ನೀಡಿದ್ದು,ಸಹ ನಿರ್ದೇಶನವನ್ನು ಪ್ರಶಾಂತ ಬಿ (ಮಾದರಸನಕೊಪ್ಪ) ಮಾಡಿದ್ದಾರೆ
ಮೈಸೂರು ಜೆ.ಪಿ.ನಗರ ನಾಚನಹಳ್ಳಿಪಾಳ್ಯದ ಜೆಎಸ್‍ಎಸ್ ಪ್ರೌಢಶಾಲೆ ಮಕ್ಕಳು ಅಭಿನಯಿಸಿದ್ದಾರೆ
ನಾಯಿತಿಪ್ಪ ನಾಟಕದ ಸಾರಾಂಶ: ಅಜ್ಜಿ ಹೇಳುವ ಹಾಗೆ ಕಾಳು ಕೋಡೋ ಭೂಮಿತಾಯಿ ಕಾಸು ಕೊಟ್ಟು ಕೊಟ್ಟು ಬಂಜೆಯಾಗೋದ್ಲು, ಬಡವಳಾದ ಅಜ್ಜಿ, ಮೊಮ್ಮಗ ತಿಪ್ಪನನ್ನು ಕೂಲಿ ಕೆಲಸಕ್ಕಾಗಿ ಬೆಂಗಳೂರು ಪ್ಯಾಟಿಗೆ ಕಳುಹಿಸುತ್ತಾಳೆ. ಬೆಂಗಳೂರಿಗೆ ಬಂದ ತಿಪ್ಪ ಅಲ್ಲಿನ ಆಕಾಶದೆತ್ತರದ ಬಿಲ್ಡಿಂಗ್‍ಗಳು, ವಾಹನ ದಟ್ಟಣೆ, ಕಾರ್ಖಾನೆಗಳು, ಕಂಪನಿಗಳು, ವಿಚಿತ್ರ ಜನರನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಾನೆ. ಅಲ್ಲಿ ಜನರ ಆಟಾಟೋಪಕ್ಕೆ ಸಿಕ್ಕು ನರಳಿ ಊರಿಗೆ ಮರಳುತ್ತಾನೆ. ಊರವರ ಸಲಹೆಯ ಮೇರೆಗೆ ಅಜ್ಜಿ ದೋಸೆ ಮಾರಲು ತಿಪ್ಪನನ್ನು ಕಳುಹಿಸುತ್ತಾಳೆ. ವ್ಯಾಪಾರದ ಗುಟ್ಟು ಅರಿಯದ ತಿಪ್ಪ ಮಾರಲಾಗದೆ ನಾಯಿಗಳೇ ಗಿರಾಕಿಗಳೆಂದು ತಿಳಿದುಕೊಂಡು ಅವುಗಳಿಗೆ ಕೊಟ್ಟು ಬರಿಗೈಯಲ್ಲಿ ಹಿಂದಿರುಗುತ್ತಾನೆ. ಕೊನೆಗೆ ನಾಯಿಗಳ ಸಹಾಯದಿಂದ ಕಳ್ಳರು ಬಿಟ್ಟುಹೋದ ಹಣ ಸಿಗುತ್ತದೆ. ಅದನ್ನು ಉಳಿಸಿಕೊಳ್ಳಲು ಅಜ್ಜಿ ತಂತ್ರಗಳನ್ನು ಹೂಡುತ್ತಾಳೆ. ಸರ್ಕಾರಕ್ಕೂ ತಿಳಿದು ಕೋರ್ಟ್‍ನಲ್ಲೂ ಬಚಾವಾಗುತ್ತಾಳೆ. ಇಂದು ರೈತರು ಜಮೀನು ಕಳೆದುಕೊಂಡು ಪಟ್ಟಣಗಳಿಗೆ ಗುಳೇ ಹೋಗುತ್ತಿರುವ ಈ ಸಂದರ್ಭದಲ್ಲಿ ಜಾಗತೀಕರಣ ಹಾಗೂ ವ್ಯಾಪಾರೀಕರಣದ ಭರಾಟೆಯಲ್ಲಿಯೂ ಮುಗ್ಧತೆಯೆ ಗೆಲ್ಲಬೇಕೆಂಬುದು ಈ ನಾಟಕದ ಕೇಂದ್ರಭಾವವಾಗಿದೆ.
ನಾಟಕಕಾರರಾದ ಶ್ರೀ ರಾಮಯ್ಯನವರು ಕೋಟಗಾನಹಳ್ಳಿಯವರು, ಸೃಜನಶೀಲ ಬರಹಗಾರರು ಎಡಪಂಥೀಯ ಚಿಂತಕರು, ಕಿರುತೆರೆ ಹಾಗೂ ಹಿರಿತೆರೆಯ ಸಂಭಾಷಣೆಕಾರರು, ಗಂಗಭಾರತ, ಡರ್‍ಬುರ್ ಬುಡ್ಡಣ್ಣ, ಹಕ್ಕಿಯ ಹಾಡು, ಒಗಟಿನರಾಣಿ, ರತ್ನಪಕ್ಷಿ, ಕಣ್ಣಾಸ್ಪತ್ರೆ, ನಾಯಿತಿಪ್ಪ ಇನ್ನೂ ಹಲವು ನಾಟಕಗಳನ್ನು ರಚಿಸಿದ್ದಾರೆ. ಆದಿಮ ಸಂಸ್ಥೆಯನ್ನು ಕಟ್ಟಿ ರಂಗಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
ನಿರ್ದೇಶಕರಾದ ಶ್ರೀ ಚಂದ್ರಶೇಖರಾಚಾರ್ ಹುಟ್ಟೂರು ಚಾಮರಾಜನಗರ ಜಿಲ್ಲೆ ಹೆಗ್ಗೊಠಾರ. 1990 ರಲ್ಲಿ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೋಮಾ ಪದವಿ ಪಡೆದು 1991-92 ತಿರುಗಾಟದಲ್ಲಿ ನಟರಾಗಿ ಸಂಗೀತಗಾರರಾಗಿ ದುಡಿದಿದ್ದಾರೆ. ಸಂಗ್ಯಾಬಾಳ್ಯಾ, ಹೂ ಹುಡುಗಿ, ತಲೆದಂಡ, ಅಥೆನ್ಸಿನ ಅರ್ಥವಂತ ಮುಖ್ಯ ನಾಟಕಗಳು. ಬಿ.ವಿ. ಕಾರಂತರು ನಿರ್ದೇಶಿಸಿದ ಗೋಕುಲ ನಿರ್ಗಮನ ನಾಟಕದಲ್ಲಿ ಮುಖ್ಯ ಗಾಯಕರಾಗಿ ದೇಶದಾದ್ಯಂತ ಸಂಚಾರ ಮಾಡಿದ್ದಾರೆ. ಬೆಟ್ಟಕ್ಕೆ ಚಳಿಯಾದರೆ, ನೀಲಿ ಕುದುರೆ, ಪುಷ್ಪರಾಣಿ, ಸೇವಂತಿ ಪ್ರಸಂಗ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕಾಕನಕೋಟೆ, ಮಂಟೇಸ್ವಾಮಿ ಕಥಾಪ್ರಸಂಗ, ಏಕಲವ್ಯ, ಮೈಸೂರು ಮಲ್ಲಿಗೆ, ಚೋರ ಚರಣದಾಸ, ಹಕ್ಕಿಯ ಹಾಡು, ಅಳಿಲು ರಾಮಾಯಣ. ಹೀಗೆ ನೂರಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನೀಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಕಲಾ ಮಂಟಪದಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ರಂಗ ಕಾರ್ಯಗಾರ, ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ.
ಸಹನಿರ್ದೇಶಕರಾದ ಶ್ರೀ ಪ್ರಶಾಂತ ಬಿ (ಮಾದರಸನಕೊಪ್ಪ) ಇವರು ನೀನಾಸಂನಲ್ಲಿ ರಂಗತರಬೇತಿ
ಪಡೆದಿದ್ದಾರೆ. ಜೆ ಎಸ್ ಎಸ್ ರಂಗೋತ್ಸವಕ್ಕೆ ಮೈನಾಹಕ್ಕಿ, ಸರೀಸೃಪಗಳ ಸಭೆ, ಪಂಜರ ಶಾಲೆ, ಕಂಸಾಯಣ,
ಬೆಪ್ಪತಕ್ಕಡಿ ಬೋಳೆಶಂಕರ ಈ ನಾಟಕಗಳಿಗೆ ಸಂಗೀತ ನೀಡಿದ್ದಾರೆ ಮತ್ತು ನಿರ್ದೇಶನ ಮಾಡಿದ್ದಾರೆ. ಮೈನಾಹಕ್ಕಿ, ಸರೀಸೃಪಗಳ ಸಭೆ ಎಂಬ ನಾಟಕಗಳನ್ನು ರಚಿಸಿದ್ದಾರೆ. ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಸಂಪಾದಿಸಿರುವ ವೃಷಭೇಂದ್ರ ವಿಳಾಸ ಕೃತಿಯನ್ನು ಅಧರಿಸಿದ ಯಕ್ಷಗಾನ ನಾಟಕವನ್ನು ಮಹಿಳಾ ತಂಡಕ್ಕೆ ಕಲಿಸಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್
ಪ್ರೌಢಶಾಲೆ ನಾರ್ವೆಯಲ್ಲಿ ರಂಗಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಂಗದ ಮೇಲೆ : ಎಂ. ಪವನ್‍ಕುಮಾರ್, ಎಂ. ದರ್ಶನ್ ಎಲ್. ಶರತ್ ಎಂ. ತರುಣ್‍ಸ್ವಾಮಿ, ನಂದನ್ ರಾಕೇಶ್, ಸಿ. ಸಾಗರ್, ಕೆ. ಎಸ್. ಚೇತನ್, ಅರುಣ್, ಉಮೇಶ್, ಸೋಮಶೇಖರ್, ಆರ್. ಸ್ನೇಹ, ಮಹದೇವಸ್ವಾಮಿ, ರಂಜಿತ, ಜಿ. ಮೇಘನಾ, ಹೆಚ್.ಎಲ್.ಸಂಜನಾ, ಮರಿಯಾ ಝಾನ್ಸಿ, ಕೆ. ರಮ್ಯಾ, ಎಂ. ಚೈತನ್ಯ, ಫಿರ್‍ದೋಸ್ ಕೌಸರ್, ಸಹನಾ ಅವರುಗಳಿದ್ದರೆ ರಂಗದ ಹಿಂದೆ
ರಂಗಪರಿಕರ ಹಾಗೂ ರಂಗಸಜ್ಜಿಕೆ ಮಧೂಸೂದನ್, ಸಂಗೀತ ಸಾಂಗತ್ಯ : ಕೃಷ್ಣ ಚೈತನ್ಯ, ಮೈಸೂರು ವಸ್ತ್ರವಿನ್ಯಾಸ : ಶಕುಂತಲಾ ಹೆಗಡೆ, ಮಹೇಶ್ ಹೆಬ್ಬಾಳ್, ಪ್ರಸಾಧನವನ್ನು ಮಂಜುನಾಥ್ (ಕಾಚಕ್ಕಿ) ಮಾಡಿದ್ದಾರೆ.
ಇಲಿ ಮಡಕೆ ನಾಟಕ : ಕಾಡುವಾಸಿಗಳ ಪುನರ್ವಸತಿ ಯೋಜನೆಯಿಂದಾಗಿ ಬುಡಬುಡಕೆಯವರು, ಹಕ್ಕಿಪಿಕ್ಕರು, ಗೊರವರು, ಗಿಣಿಶಾಸ್ತ್ರದವರು, ಕಾಡುಗೊಲ್ಲರು ಮುಂತಾದ ಬುಡಕಟ್ಟು ಜನಗಳ ಸಂಕಟಗಳನ್ನು ಹೇಳುವ ಕಥೆಯಾಗಿದೆ. ಪುನರ್ವಸತಿ ಕೊಡಲಿ ಕಾವಿಗೆ ಬಲಿಯಾಗಿ ಅತ್ತ ನಾಡಿಗೂ ಹೊಂದಿಕೊಳ್ಳಲಾಗದೆ, ಇತ್ತ ಕಾಡಿಗೂ ಮರಳಲಾಗದೆ ಪಡುವ ಪಾಡಿನ ಕುರಿತಾದ ಕಥೆ ಇದು. ಇಂಥದ್ದೆ ಪುನರ್ವಸತಿ ಪಂಜರದೊಳಗೆ ಬಂಧಿಯಾದ ಗಿಣಿ ಪಳಗಿಸುವ ಮಂಕಾಳಿ ಎಂಬ ರುದ್ರನ ಸೇಡಿನ ಕಥೆಯೂ ಹೌದು. ಕಳೆದುಹೋದ ತಮ್ಮ ಮೂಲ ಬದುಕನ್ನು ಮರು ತೆಗೆದುಕೊಳ್ಳುವ ಪ್ರಸಂಗಗಳು ಈ ಕಥೆಯ ಒಟ್ಟು ಹೂರಣ. ಆಧುನಿಕತೆ, ನಾಗರಿಕತೆ ಎಂದರೆ ಬರಿಯ ತಂತ್ರಜ್ಞಾನ, ಕಾನೂನು ಶಾಸನಗಳಲ್ಲಿ ಅದನ್ನು ಮೀರಿದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ-ಪರಂಪರೆಗಳನ್ನು ಗೌರವಿಸುವುದು ಎಂಬುದನ್ನು ಈ ಇಲಿ ಮಡಕೆ ನಾಟಕವು ನಿರೂಪಿಸುತ್ತದೆ.
ಇಲಿ ಮಡಕೆ ನಾಟಕವನ್ನು ಟಿ.ಕೆ. ದಯಾನಂದ್ ರಚನೆ ಮಾಡಿದ್ದು ರಂಗರೂಪವನ್ನು ಯತೀಶ್ ಕೊಳ್ಳೇಗಾಲ,ಸಂಗೀತವನ್ನು ಚಂದ್ರಶೇಖರಾಚಾರ್ ಹೆಗ್ಗೊಠಾರ ಅವರು ಮಾಡಿದ್ದಾರೆ. ಜೀವನ್‍ಕುಮಾರ್ ಬಿ ಹೆಗ್ಗೋಡು ಅವರು ವಿನ್ಯಾಸ, ಬೆಳಕು ಮತ್ತು ನಿರ್ದೇಶನ ಮಾಡಿದ್ದು ನಾಟಕದ ಸಹನಿರ್ದೇಶನವನ್ನು ಶಕುಂತಲಾ ಹೆಗಡೆ ಅವರು ಮಾಡಿದ್ದು
ಊಟಿ ರಸ್ತೆ, ಮೈಸೂರು ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.
ನಾಟಕಕಾರರಾದ ಶ್ರೀ ಟಿ ಕೆ ದಯಾನಂದ್‍ರವರ ಜನ್ಮಸ್ಥಳ ಇವರು ತುಮಕೂರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯೂನಿಕೇಷನ್‍ನಲ್ಲಿ ಸ್ನಾತಕೋತ್ತರ ಪದವಿ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಸಂಶೋಧಕರಾಗಿ ನಗರದ ಬಡಜನರ ಕುರಿತಂತೆ ಅಧ್ಯಯನ ಮಾಡಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡ ರಸ್ತೆ ನಕ್ಷತ್ರ ಇವರ ಪ್ರಥಮ ಕೃತಿ. ರೆಕ್ಕೆ ಹಾವು ಇವರ ಮೊದಲ ಕಥಾಸಂಕಲನ. ಚಲನಚಿತ್ರ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ದಯಾನಂದ ಅವರು ಪ್ರಸ್ತುತ ಸುದ್ದಿ ಟಿ.ವಿ. ವಾಹಿನಿಯಲ್ಲಿ ಪೆÇ್ರೀಗ್ರಾಂ ಚೀಫ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಯತೀಶ್ ಕೊಳ್ಳೇಗಾಲರವರು 2005-06ರಲ್ಲಿ ನೀನಾಸಂ ಡಿಪೆÇ್ಲಮಾ ಮುಗಿಸಿದ್ದಾರೆ. ನೀನಾಸಂ ತಿರುಗಾಟ, ರಂಗಭಾರತಿ ಹೂವಿನ ಹಡಗಲಿ, ಆಟಮಾಟ ಧಾರವಾಡ ತಂಡಗಳಲ್ಲಿ ನಟ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮಕ್ಕಳ ಶಿಬಿರ, ಅಭಿನಯ ಕಮ್ಮಟಗಳನ್ನು ನಿರ್ವಹಿಸಿದ ಅನುಭವ. 15ಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಹಾಗೂ ಅಭಿನಯಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಹಲವು ಸ್ವರಚಿತ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ ಇಲಿ ಮಡಕೆ ಕಥೆಯನ್ನು ರಂಗರೂಪ ಮಾಡಿದ್ದಾರೆ.
ನಿರ್ದೇಶಕರಾದ ಶ್ರೀ ಜೀವನ್ ಕುಮಾರ್‍ರವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನವರು. 2002-03 ರಲ್ಲಿ ನೀನಾಸಂ ಡಿಪ್ಲೋಮಾ ಪಡೆದಿದ್ದಾರೆ. ನಂತರ ನೀನಾಸಂ ತಿರುಗಾಟ, ನೀನಾಸಂ ಕಿರು ತಿರುಗಾಟ, ರಂಗಾಯಣದ ರಂಗ ಕಿಶೋರ, ಮಕ್ಕಳ ರಂಗಭೂಮಿಯಲ್ಲಿ ನಟರಾಗಿ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರಿನ ಕಾರಾಗೃಹ ಖೈದಿಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ, ಶಾಲಾ ಮಕ್ಕಳಿಗೆ, ಹವ್ಯಾಸಿ ತಂಡಗಳಿಗೆ ಹಲವಾರು ನಾಟಕಗಳನ್ನು ನಿರ್ದೆಶಿಸಿದ್ದಾರೆ. ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು ಜೀಕೆ ಮಾಸ್ತರರ ಪ್ರಣಯ ಪ್ರಸಂಗ, ಭಗವದಜ್ಜುಕೀಯಂ, ಚಿತ್ರಪಟ, ರಾಮಧಾನ್ಶ ಪ್ರಕರಣ, ಕೃಷ್ಣೇಗೌಡನ ಆನೆ, ಆಮನಿ, ಜಯಂತನ ಸ್ವಗತ, ಅಲ್ಲದೇ ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆ ಕುರಿತು ಅನೇಕ ಕಾರ್ಯಗಾರಗಳವನ್ನು ನಡೆಸಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಸಂಸ್ಥೆಯಲ್ಲಿ ರಂಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಹನಿರ್ದೇಶಕರಾದ ಶ್ರೀಮತಿ ಶಕುಂತಲಾ ಹೆಗಡೆರವರು ನೀನಾಸಂನಲ್ಲಿ ರಂಗತರಬೇತಿ ಪಡೆದಿದ್ದಾರೆ. ರಂಗಾಯಣದ ರಂಗಕೀಶೋರದಲ್ಲಿ ಮಕ್ಕಳ ರಂಗಭೂಮಿ ಕುರಿತಾದ ಕೆಲಸ ನಿರ್ವಹಿಸಿದ್ದಾರೆ. ಜೆಎಸ್‍ಎಸ್ ರಂಗೋತ್ಸವಕ್ಕೆ ಸತ್ರು ಅಂದ್ರೆ ಸಾಯ್ತರಾ, ಅಳಿಲು ರಾಮಾಯಣ, ದ್ರೋಣಪ್ರತಿಜ್ಞೆ ಈ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಜೆಎಸ್‍ಎಸ್ ಶಿಶುನಾಳ ಶರೀಫ ಪ್ರೌಢಶಾಲೆ ಉದಯಗಿರಿ ಯಲ್ಲಿ ರಂಗಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾಟಕದಲ್ಲಿ ಮನೋಜ್‍ಕುಮಾರ್, ಬಿ.ಎಸ್. ಗಿರಿ, ಎಸ್. ಚೇತನ್ ಮನು ಕೆ.ಎಸ್. ಚೇತನ್ ಕುಮಾರ್ ಎಂ.ಪಿ. ಹೇಮಂತ್ ಎಂ. ಮನೋಜ್ ಹೆಚ್.ಎಂ. ಮನೋಜ್ ಆರ್. ಆಕಾಶ್ ಭರತ್ ಹೆಚ್.ಎ. ರಾಜೇಶ್ ರಾಜ್ ಬಿ. ವೃಶ್ರೀ ರವಿ ಎಲ್.ಎಂ. ದೀಪಕ್ ಗುರುರಾಜ್ ಎಸ್. ತನುಷ್ ಬಿ.ಸಿ ಮಾದೇವಸ್ಥಾಮಿ ಎಂ. ಸುಹಾಸ್ ಬಿ.ರಾಧ ಬಿ.ಎಸ್. ವಿದ್ಯಾಶ್ರೀ ಎಸ್. ತೇಜು ಬಿ. ನಿವೇದಿತಾ ಎಂ. ರಾಜಶ್ರೀ ಕೆ.ಎಸ್. ಸುನನ್ ಸುನಿಫ್ ಸುನೀಲ್ ಪುನೀತ್ ಪಿ.ಎಂ. ಪೂಜಿ ಪಿ. ಪೂಜಾ ಎನ್. ಅನು ಸಿ. ರಂಗದ ಮೇಲಿದ್ದರೆ,,ರಂಗದ ಹಿಂದೆ ಮಧೂಸೂದನ್ (ರಂಗಪರಿಕರ ಹಾಗೂ ರಂಗಸಜ್ಜಿಕೆ) ಶಕುಂತಲಾ ಹೆಗಡೆ, ಮಹೇಶ್ ಹೆಬ್ಬಾಳ್(ವಸ್ತ್ರವಿನ್ಯಾಸ ) : ಪ್ರಸಾಧನ ಮಂಜುನಾಥ್ (ಕಾಚಕ್ಕಿ) ಸಂಗೀತ ಸಾಂಗತ್ಯ : ಕೃಷ್ಣ ಚೈತನ್ಯ, ಮೈಸೂರು ಇವರುಗಳು ಇದ್ದಾರೆ.
_________________________________________________________________________-
No comments:
Post a Comment