Wednesday, 19 April 2017

ಸಿ.ಆರ್.ಬಿ.ಪಿ.ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ “ಹಸಿರೇ ನಮ್ಮ ಉಸಿರು”

ಸಿ.ಆರ್.ಬಿ.ಪಿ.ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ “ಹಸಿರೇ ನಮ್ಮ ಉಸಿರು”



ಚಾಮರಾಜನಗರದ ಸಿ.ಆರ್.ಬಿ.ಪಿ.ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ದಿನಾಂಕ 30-04-2017 ರಂದು   “ಹಸಿರೇ ನಮ್ಮ ಉಸಿರು”ಎಂಬ ಹೆಸರಿನಡಿ ಗಿಡ ನೆಡುವ  ಕಾರ್ಯಕ್ರಮ ಮಾಡಲು ಇಚ್ಚಿಸಿದ್ದು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಬಂದು ಈ ಪುಟ್ಟ ಕಾರ್ಯಕ್ರಮಕ್ಕೆ ತಾವು ಸಹಕಾರ ನೀಡಿ ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ.
 _______________________________________________________________________________

*ಹಳೆಯ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮಲ್ಲೇಶ್. ಪಿ, ಅವರ ಬಳಿ ನೊಂದಾಯಿಸಿಕೊಳ್ಳಿ*
                                                                                          ಸುದ್ದಿ ಪ್ರಕಟ. ಎಸ್.ವೀರಭದ್ರಸ್ವಾಮಿ
_________________________________________________________________________________

ಇಂದ,
ಮಲ್ಲೇಶ್. ಪಿ, 
(ನೇತೃತ್ವ) ಹಳೆ ವಿದ್ಯಾರ್ಥಿಗಳ ಸಂಘ
ಸಿ.ಆರ್.ಬಿ.ಪಿ.ಶಾಲೆ. ಚಾಮರಾಜನಗರ
9008881956

19-04-2017 ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸಕಲ ಕ್ರಮ: ಜಿಲ್ಲಾಧಿಕಾರಿ ಬಿ.ರಾಮು, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜಿಲ್ಲಾ ಪ್ರವಾಸ,ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಸಭೆ,

ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸಕಲ ಕ್ರಮ: ಜಿಲ್ಲಾಧಿಕಾರಿ ಬಿ.ರಾಮು


ಚಾಮರಾಜನಗರ, ಏ. 19 :- ಜಿಲ್ಲೆಯಲ್ಲಿ ಬರಪರಿಸ್ಥಿತಿಯು ಗಂಭೀರ ಸ್ವರೂಪವನ್ನು ಪಡೆದಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಅಭಾವ ಉಂಟಾಗದಂತೆ ಜಿಲ್ಲಾಡಳಿತದ ವತಿಯಿಂದ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ತಿಳಿಸಿದ್ದಾರೆ.
  ಜಿಲ್ಲೆಯಲ್ಲಿ ಈಗಾಗಲೇ 18 ಗೋಶಾಲೆ ಹಾಗೂ 20 ಮೇವು ನಿಧಿಗಳನ್ನು ತೆರೆಯಲಾಗಿದೆ. ಎಲ್ಲಾ ಹೋಬಳಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಆದೇಶಿಸಲಾಗಿದೆ. ವಾರಕ್ಕೊಮ್ಮೆ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಜಾನುವಾರುಗಳಿಗೆ ಮೇವು ಒದಗಿಸಲು ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ರಾಮಾಪುರ, ಬಂಡಳ್ಳಿ, ಕೌದಳ್ಳಿ, ದಂಟಳ್ಳಿ, ಶೆಟ್ಟಹಳ್ಳಿ, ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ, ಲೊಕ್ಕನಹಳ್ಳಿ, ಪೊನ್ನಾಚಿ ಇನ್ನಿತರ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆದು ಪ್ರತಿ ದಿನ ಮೇವನ್ನು ಸರಬರಾಜು ಮಾಡಲಾಗುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ರಾಮಾಪುರ, ಕುರಟ್ಟಿ ಹೊಸೂರು, ದಂಟಳ್ಳಿ, ಅರಬಗೆರೆ-75, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ, ಪೊನ್ನಾಚಿ, ಕೌದಳ್ಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಇರುತ್ತವೆ. ಈ ಭಾಗದ ಗ್ರಾಮಗಳಲ್ಲಿ ನಾಟಿ ತಳಿಯ ಬೀಡಾಡಿ ದನಗಳಿದ್ದು ಇವುಗಳಿಗೆ ಹಗ್ಗ ಮೂಗುದಾರವಿಲ್ಲದೆ ದೊಡ್ಡಿಯಲ್ಲಿ ಕೂಡಿ ಹಾಕಿರುತ್ತಾರೆ. ಇಲ್ಲಿಯ  ಗ್ರಾಮಸ್ಥರು  ಮೇವಿಗಾಗಿ  ಬೀಡಾಡಿ  ದನಗಳನ್ನು  ಪಕ್ಕದ  ಕಾಡಿಗೆ  ಬಿಡುವ  ಪದ್ಧತಿ ರೂಢಿಸಿಕೊಂಡಿರುತ್ತಾರೆ. ಆದರೆ ಈ ವರ್ಷ ಅರಣ್ಯ ಇಲಾಖೆಯವರು ಅರಣ್ಯ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ದನಗಳಿಗೆ ಕಾಡಿಗೆ ಪ್ರವೇಶವಿಲ್ಲದೆ, ಮೇವು ಸಮಸ್ಯೆ ಉಂಟಾಗಿರುತ್ತದೆ.
ಗ್ರಾಮಗಳಿಗೆ ತಾವು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಗೋಶಾಲೆಗಳಲ್ಲಿ ಪ್ರತಿ ರಾಸುವಿಗೆ ಅಂದಾಜು 5 ಕೆ.ಜಿ. ಒಣ ಮೇವಿನಂತೆ ಅವಶ್ಯವಿರುವ ಮೇವನ್ನು ದಿನನಿತ್ಯ ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿಗೆ ಸ್ಥಳೀಯವಾಗಿ ಗ್ರಾಮದಲ್ಲಿರುವ ಕಟ್ಟೆಗೆ ಸರ್ಕಾರದ ಹಾಗೂ ಖಾಸಗಿ ಬೋರ್‍ವೆಲ್‍ಗಳಿಂದ ನೀರನ್ನು ತುಂಬಿಸಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ.
 ಪ್ರತಿ ಗೋಶಾಲೆಯಲ್ಲಿ ಜಾನುವಾರುಗಳ ಚಿಕಿತ್ಸೆಗಾಗಿ ಅಗತ್ಯ ಔಷಧಿಗಳು, ಲಸಿಕೆ ನೀಡಲಾಗುತ್ತ್ತಿದೆ. ಆಕಸ್ಮಿಕವಾಗಿ ಜಾನುವಾರುಗಳು ಮರಣ ಹೊಂದಿದಲ್ಲಿ ಕೂಡಲೇ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ  ತರಲು  ಗ್ರಾಮದ  ಗ್ರಾಮಸ್ಥರಿಗೆ  ತಿಳಿಸಲಾಗಿದೆ.  ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಪರಿಶೀಲನೆಯೊಂದಿಗೆ ಜಾನುವಾರುಗಳ ಪಾಲನೆಗೆ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಇದುವರೆವಿಗೆ ಚಾಮರಾಜನಗರ ತಾಲ್ಲೂಕಿನಲ್ಲಿ 2 ಗೋಶಾಲೆ 05 ಮೇವು ಬ್ಯಾಂಕ್, ಕೊಳ್ಳೇಗಾಲ ತಾಲ್ಲೂಕಿನಲ್ಲಿ 14 ಗೋಶಾಲೆ ಮತ್ತು 04  ಮೇವು ಬ್ಯಾಂಕ್, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 02 ಗೋಶಾಲೆ ಹಾಗೂ 10 ಮೇವು ಬ್ಯಾಂಕ್‍ಗಳನ್ನು ಹಾಗೂ ಯಳಂದೂರು ತಾಲ್ಲೂಕಿನಲ್ಲಿ 1 ಮೇವು ನಿಧಿಯನ್ನು ಪ್ರಾರಂಭಿಸಲಾಗಿರುತ್ತದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿಯೇ ತೆರೆಯಲಾಗಿರುವ 14 ಗೋಶಾಲೆಗಳಲ್ಲಿ 21766 ಜಾನುವಾರುಗಳಿಗೆ ಮೇವನ್ನು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಗೋಶಾಲೆ ಮತ್ತು ಮೇವು ನಿಧಿ ನಿರ್ವಹಣೆಗೆ ಇದುವರೆಗೆ 5.70 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಇದುವರೆವಿಗೆ 7554 ಟನ್ ಮೇವನ್ನು ಖರೀದಿಸಿದ್ದು, 7128 ಟನ್ ಮೇವು ವೆಚ್ಚವಾಗಿರುತ್ತದೆ. ಜೂನ್ ಮಾಹೆಯವರೆವಿಗೂ ಅವಶ್ಯವಿರುವ 14025 ಮೆಟ್ರಿಕ್ ಟನ್ ಮೇವನ್ನು ಖರೀದಿಸಲು ಕ್ರಿಯಾಯೋಜನೆ ತಯಾರಿಸಿ ಕ್ರಮವಹಿಸಲಾಗುತ್ತಿದೆ. ಹೊರ ಜಿಲ್ಲೆಗಳಾದ ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಜಿಲ್ಲೆಯಿಂದ ಮೇವನ್ನು ಖರೀದಿಸುತ್ತಿದ್ದು, ಸ್ಥಳೀಯವಾಗಿಯೂ ರೈತರ ಮನವೊಲಿಸಿ ಮೇವನ್ನು ಖರೀದಿಸಿ ಗೋಶಾಲೆ ಹಾಗೂ ಮೇವುನಿಧಿಗಳನ್ನು ನಿರ್ವಹಿಸಲಾಗುತ್ತಿದೆ. ಜೊತೆಗೆ ಕತ್ತರಿಸಿದ ಮೇವನ್ನು (ಚಾಪಡ್ ಫಾಡರ್) ಮೇವು ನಿಧಿಯಲ್ಲಿ ವಿತರಿಸಲಾಗುತ್ತಿದೆ.
 ಜಿಲ್ಲೆಗೆ 9386 ಮೇವಿನ ಬೀಜದ ಮಿನಿಕಿಟ್‍ಗಳು ಪಶುಪಾಲನಾ ಇಲಾಖೆಯಿಂದ ಸರಬರಾಜಾಗಿದ್ದು, ಅದನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆ ಮಾಡಲಾಗಿದೆ. ಇದರಿಂದ 1254 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಿಂದ ಉತ್ಪಾದನೆಯಾಗಲಿರುವ ಅಂದಾಜು 50,000 ಟನ್ ಹಸಿರು ಮೇವು ರೈತರಿಗೆ ದೊರೆಯಲಿದೆ.
ಧ್ಯಾನ್ ಫೌಂಡೇಷನ್ ಗೋಶಾಲೆ ನಿರ್ವಹಿಸಲು ಮುಂದಾಗಿದ್ದು, ಅವರ ಕೋರಿಕೆಯನುಸಾರ ಕೊಳ್ಳೇಗಾಲ ತಾಲ್ಲೂಕಿನ, ಕೊಂಬುಡಿಕ್ಕಿ, ಹಳೆಯೂರು, ವಡಕೆಹಳ್ಳ, ಎಂ.ಎಸ್.ದೊಡ್ಡಿ, ಕಳ್ಳಿದೊಡ್ಡಿ ಗ್ರಾಮಗಳಲ್ಲಿ ಏಪ್ರಿಲ್ 12ರಿಂದಲೇ ಗೋಶಾಲೆ ಪ್ರಾರಂಭಿಸಲು ಅವಕಾಶವನ್ನು ನೀಡಿ, ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಗೋಶಾಲೆ ನಿರ್ವಹಣೆ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆ ಉಂಟಾಗದಂತೆ ಜಿಲ್ಲಾಡಳಿತವು ಕ್ರಮವಹಿಸಿದೆ.
      ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರಸ್ತುತ 55 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ (ಎಂ.ವಿ.ಎಸ್.) ಮೂಲಕ ಶೀಘ್ರವಾಗಿ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದು ಹಾಗೂ ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳಿಗೆ ಸಂಬಂಧಿಸಿದ ಯೋಜನೆಯೂ ಸಹ ಶೀಘ್ರವಾಗಿ ಪೂರ್ಣಗೊಳ್ಳಲಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ.  ಪ್ರಸ್ತುತ ಯೋಜನೆಯು ಮುಕ್ತಾಯ ಹಂತದಲ್ಲಿದ್ದು, ನೀರನ್ನು ಶುದ್ದೀಕರಿಸಿ ನೀಡಲು ಕಾಲಾವಕಾಶ ನಿಗಧಿಪಡಿಸಲಾಗಿರುತ್ತದೆ. ಪ್ರಸ್ತುತ ಹಲವಾರು ಗ್ರಾಮಗಳಿಗೆ ರಾ ವಾಟರ್ ಸರಬರಾಜು ಮಾಡಲು ಕ್ರಮವಹಿಸಲಾಗಿದೆ.
ಜಿಲ್ಲೆಯಲ್ಲಿ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಕಂಡುಬಂದ ತಕ್ಷಣ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ತಹಸೀಲ್ದಾರರ  ಅಧ್ಯಕ್ಷತೆಯಲ್ಲಿ ತಾಲ್ಲೂಕು  ಟಾಸ್ಕ್‍ಫೋರ್ಸ್  ಸಮಿತಿಯು  ಪ್ರತಿ  ವಾರ  ಸಭೆ ನಡೆಸಿ, ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಇನ್ನಿತರ ಅಗತ್ಯ ವಿಷಯಗಳ ಕುರಿತು ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ಪ್ರತಿ ವಾರ ಜಿಲ್ಲಾ ಮಟ್ಟದಲ್ಲಿ ಸಭೆಯನ್ನು ಕರೆದು ಬರಪರಿಸ್ಥಿತಿ ನಿರ್ವಹಣೆ ಬಗ್ಗೆ ಸುಧೀರ್ಘವಾಗಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿ ತುರ್ತು ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡುವ ಸಂಬಂಧ ಹೆಚ್ಚು ಒತ್ತು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ತಾಲ್ಲೂಕು ಪಂಚಾಯಿತಿಗಳಲ್ಲಿ ಸಹಾಯವಾಣಿ (ಚಾಮರಾಜನಗರ-08226-225392, ಗುಂಡ್ಲುಪೇಟೆ - 08229-222233, ಕೊಳ್ಳೇಗಾಲ-08224-252011, ಯಳಂದೂರು- 08226-240232) ಗಳನ್ನು ತೆರೆಯಲಾಗಿದ್ದು, ದೂರುಗಳು ಸ್ವೀಕೃತಿಯಾದ 24 ಗಂಟೆಯೊಳಗಾಗಿ ಸಮಸ್ಯೆ ಪರಿಹರಿಸಲು ಅಗತ್ಯವಿರುವ ಎಲ್ಲ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ತಿಳಿಸಿದ್ದಾರೆ.

___________________________________________________

ಏ. 22, 23ರಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜಿಲ್ಲಾ ಪ್ರವಾಸ

ಚಾಮರಾಜನಗರ, ಏ. 19 - ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬೂರಾವ್ ಚಿಂಚನಸೂರು ಅವರು ಏಪ್ರಿಲ್ 22 ಹಾಗೂ 23ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಏಪ್ರಿಲ್ 22ರಂದು ಸಂಜೆ 4 ಗಂಟೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವರು. ಬಳಿಕ ಗಡಿ ಗ್ರಾಮಗಳಿಗೆ ಭೇಟಿ ನೀಡುವರು. ತದನಂತರ ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡುವರು.
ಏಪ್ರಿಲ್ 23ರಂದು ಬೆಳಿಗ್ಗೆ 7 ಗಂಟೆಗೆ ಮಹದೇಶ್ವರ ಬೆಟ್ಟದಿಂದ ಹೊರಟು ಕೊಳ್ಳೇಗಾಲ ತಾಲೂಕಿನ ಕೊಂಬುಡಿಕ್ಕಿ ಗ್ರಾಮಕ್ಕೆ ತೆರಳಿ ಅಲ್ಲಿ ಆಯೋಜಿಸಲಾಗುವ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಗೋಪಿನಾಥಂ, ಇತರೆ ಗಡಿ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಏ. 25ರಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಸಭೆ

ಚಾಮರಾಜನಗರ, ಏ. 19 - ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 25ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರÉ.

ಏ. 20ರಂದು ಬಸವೇಶ್ವರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆ

ಚಾಮರಾಜನಗರ, ಏ. 19 - ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಆಚರಿಸುವ ಸಂಬಂಧ ಚರ್ಚಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 20ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಮುದಾಯ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಭಾಗವಹಿಸಿ ಸಲಹೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಕೋರಿದ್ದಾರೆ.























Tuesday, 18 April 2017

18-04-2017ಚಾಮರಾಜನಗರಅಕ್ರಮ ಗಾಂಜಾ ಗಿಡ ಬೆಳೆದ ವ್ಯಕ್ತಿಗೆ ಸಜೆ,ಭೂಮಾಪಕರ ಹುದ್ದೆಗೆ ನಿವೃತ್ತ ಭೂಮಾಪಕರ ನೇಮಕಾತಿಏ. 28ರಂದು ಬಿಆರ್‍ಪಿ ಸಿಆರ್‍ಪಿ ಹುದ್ದೆ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್,,

ಅಕ್ರಮ ಗಾಂಜಾ ಗಿಡ ಬೆಳೆದ ವ್ಯಕ್ತಿಗೆ ಸಜೆ

ಚಾಮರಾಜನಗರ, ಏ. 18:- ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಯೋರ್ವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿದೆ.
ಕೊಳ್ಳೇಗಾಲ ತಾಲೂಕಿನ ಕುರಟ್ಟಿಹೊಸೂರು ಗ್ರಾಮದ ಮುನಿಶೆಟ್ಟಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಜೋಳದ ಫಸಲಿನ ಜತೆ ಅಕ್ರಮವಾಗಿ ಸುಮಾರು 60 ಕೆಜಿ ತೂಕವುಳ್ಳ 55 ಗಾಂಜಾ ಗಿಡಗಳನ್ನು ಬೆಳೆದಿದ್ದ. ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುನಿಶೆಟ್ಟಿಗೆ 2 ವರ್ಷಗಳ ಸಜೆ ಹಾಗೂ 1000 ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.

ಭೂಮಾಪಕರ ಹುದ್ದೆಗೆ ನಿವೃತ್ತ ಭೂಮಾಪಕರ ನೇಮಕಾತಿ

ಚಾಮರಾಜನಗರ, ಏ. 18 :- ಭೂಮಾಪನ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ವಯೋನಿವೃತ್ತಿ ಹೊಂದಿದ ಹಾಗೂ ದೈಹಿಕ ಸಾಮಥ್ರ್ಯವುಳ್ಳ ಸ್ವ ಇಚ್ಚೆಯಿಂದ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡುವ ನಿವೃತ್ತ ಭೂಮಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆಸಕ್ತರು ತಕ್ಷಣವೇ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯ ಭೂಮಾಪನ ಶಾಖೆಯ ಅಧಿಕಾರಿಗಳನ್ನು ಸಂಫರ್ಕಿಸಬಹುದು. ದೂರವಾಣಿ ಸಂಖ್ಯೆ 08226-224893 ಸಂಪರ್ಕಿಸಿಯೂ ಮಾಹಿತಿ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.

ಏ. 20ರಂದು ಬಸವೇಶ್ವರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆ

ಚಾಮರಾಜನಗರ, ಏ. 18 :- ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಆಚರಿಸುವ ಸಂಬಂಧ ಚರ್ಚಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 20ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಮುದಾಯ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಭಾಗವಹಿಸಿ ಸಲಹೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಏ. 28ರಂದು ಬಿಆರ್‍ಪಿ ಸಿಆರ್‍ಪಿ ಹುದ್ದೆ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್

ಚಾಮರಾಜನಗರ, ಏ. 18:- ಜಿಲ್ಲೆಯಲ್ಲಿ ಖಾಲಿ ಇರುವ ಬಿಆರ್‍ಪಿ ಮತ್ತು ಸಿಆರ್‍ಪಿ ಹುದ್ದೆಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 28ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೌನ್ಸೆಲಿಂಗ್ ನಡೆಯಲಿದೆ.
ಹುದ್ದೆಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಿ ಸೇವಾ ಅನುಭವ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ನೀಡಲಾದ ಅಂಕಗಳೊಂದಿಗೆ ಫಲಿತಾಂಶದ ಮೆರಿಟ್ ಪಟ್ಟಿಯನ್ನು ಡಯಟ್ ವತಿಯಿಂದ ಸಲ್ಲಿಸಲಾಗಿದೆ. ಈ ಪಟ್ಟಿ ಆಧರಿಸಿ ಕೌನ್ಸೆಲಿಂಗ್ ನಡೆಯಲಿದೆ. ಜೇಷ್ಠತಾ ಪಟ್ಟಿಯಲ್ಲಿರುವ ಅರ್ಹ ಶಿಕ್ಷಕರು ಕೌನ್ಸೆಲಿಂಗ್‍ಗೆ ಭಾಗವಹಿಸಬೇಕಿದೆ.
ಸೇವಾ ಅನುಭವ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ನಮೂದಾಗಿರುವ ಅಂಶಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್ 21ರ ಸಂಜೆ 5 ಗಂಟೆಯೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಏ. 19ರಂದು ಹರದನಹಳ್ಳಿಯಲ್ಲಿ ಸೆಸ್ಕ್ ಜನಸಂಪರ್ಕ ಸಭೆ

ಚಾಮರಾಜನಗರ, ಏ. 18 -ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಹರದನಹಳ್ಳಿ ಉಪವಿಭಾಗದ ಸೆಸ್ಕ್ ಕಚೇರಿಯಲ್ಲಿ ಏಪ್ರಿಲ್ 19ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಜನಸಂಪರ್ಕ ಸಭೆಯನ್ನು ನಡೆಸಲಿದೆ.
ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ತಿಳಿಸಬಹುದೆಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಷ್ಠಿತ ಶಾಲೆಗಳಲ್ಲಿ 6, 8ನೇ ತರಗತಿಗೆ ಪ.ಜಾತಿ, ಪ. ವರ್ಗಗಳ ವಿದ್ಯಾರ್ಥಿಗಳ ಸೇರ್ಪಡೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಏ. 18 -2017-18ನೇ ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳ 6 ಮತ್ತು 8ನೇ ತರಗತಿಗೆ ಸೇರ್ಪಡೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಯು 5 ಮತ್ತು 7ನೇ ತರಗತಿಯಲ್ಲಿ ಶೇ. 80ರಷ್ಟು ಅಂಕ ಪಡೆದಿರಬೇಕು. ಪೋಷಕರ ವಾರ್ಷಿಕ ವರಮಾನ 2 ಲಕ್ಷ ರೂ. ಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಗೆ (ರೂ.ನಂ. 121) ಏಪ್ರಿಲ್ 30ರೊಳಗೆ ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಗೆ (ರೂ.ನಂ. 217) ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲಾತಿಗಳೊಂದಿಗೆ ಮೇ 12ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಧೂವರರ ಮಾಹಿತಿ ಸಲ್ಲಿಸುವಂತೆ ಆಯೋಜಕರಿಗೆ ಸೂಚನೆ

ಚಾಮರಾಜನಗರ, ಏ. 18 -ಜಿಲ್ಲೆಯಲ್ಲಿ ವಿವಾಹ ನಡೆಸುವ ಮೊದಲು ತಾಲೂಕಿನ ತಹಸೀಲ್ದಾರ್ ಅವರಿಂದ ಅನುಮತಿ ಪಡೆಯಬೇಕು ಹಾಗೂ ಮಾಹಿತಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡುವಂತೆ ತಿಳಿಸಲಾಗಿದೆ.
ಏಪ್ರಿಲ್, ಮೇ ಮತ್ತು ಜೂನ್ ಮಾಹೆಗಳಲ್ಲಿ ಕಲ್ಯಾಣ ಮಂಟಪ, ಸಂಘ ಸಂಸ್ಥೆಗಳು, ದೇವಸ್ಥಾನಗಳಲ್ಲಿ ಹೆಚ್ಚಾಗಿ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲ್ಯ ವಿವಾಹಗಳು ನಡೆಯುವುದು ಹಲವು ಸಂದರ್ಭಗಳಲ್ಲಿ ಬೆಳಕಿಗೆ ಬಂದಿರುವುದರಿಂದ ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ತುಂಬಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಅಪರಾಧಕ್ಕೆ 2 ವರ್ಷಗಳ ಕಠಿಣ ಸಜೆ, ಜೈಲು ವಾಸ ಅಥವಾ ರೂ. 1 ಲಕ್ಷದವರೆಗೆ ದಂಡ ಅಥವಾ ಎರಡೂ ಇದ್ದು ಜಾಮೀನು ರಹಿತ ವಿಚಾರಣಾರ್ಹ ಅಪರಾಧವಾಗಿರುತ್ತದೆ.
ವಯಸ್ಸಿನ ದೃಢೀಕರಣಕ್ಕೆ ಶಾಲಾ ದಾಖಲಾತಿ ಅವಶ್ಯಕ ದಾಖಲೆಯಾಗಿರುತ್ತದೆ. ಆದ್ದರಿಂದ ವಧೂ ವರರ ವಿವಾಹದ ಸಂಬಂಧ ಅರ್ಜಿಯೊಂದಿಗೆ ವಯಸ್ಸಿನ ದೃಢೀಕರಣವನ್ನು ಪಡೆದು ಆಯಾ ತಾಲೂಕಿನ ತಹಸೀಲ್ದಾರ್ ಅವರಿಂದ ಅನುಮತಿ ಪಡೆಯಬೇಕು ಹಾಗೂ ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯಲ್ಲಿರುವ (ಕೊ.ಸಂಖ್ಯೆ 127) ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ದೂ.ಸಂ. 08226-222354)ಗೆ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 17 April 2017

17-04-2017ಏ. 28ರಂದು ಅದ್ದೂರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ : ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

ಏ. 28ರಂದು ಅದ್ದೂರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ : ಪೂರ್ವಭಾವಿ ಸಭೆಯಲ್ಲಿ ನಿರ್ಧಾರ




ಚಾಮರಾಜನಗರ, ಏ. 17 :- ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 28ರಂದು ನಗರದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲು ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತ ವಿಚಾರ ಸಂಕಿರಣವನ್ನು ಏಪ್ರಿಲ್ 27ರಂದು ಅರ್ಥಪೂರ್ಣವಾಗಿ ಏರ್ಪಡಿಸಲು ಇಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಆರಂಭದಲ್ಲೇ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಉಪಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು ಎಲ್ಲರ ಅಭಿಪ್ರಾಯದಂತೆ ಮತ್ತೊಮ್ಮೆ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅಗತ್ಯವಿರುವ ಸಲಹೆಯನ್ನು ನೀಡುವಂತೆ ಸಂಘಸಂಸ್ಥೆ ಮುಖಂಡರಿಗೆ ಮನವಿ ಮಾಡಿದರು.
ಮುಖಂಡರು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಚುನಾವಣೆ ಸಹಜವಾಗಿ ಎದುರಾಗಲಿದೆ. ಆದರೆ ಅಂಬೇಡ್ಕರ್ ಅವರ ವಿಚಾರಧಾರೆ ಆದರ್ಶ ಹೋರಾಟದ ಮೌಲ್ಯಗಳನ್ನು ಜನರಿಗೆ ತಲುಪಿಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅಂಬೇಡ್ಕರ್ ಜಯಂತಿಯನ್ನು ಎಂದಿನಂತೆ ಆಚರಿಸಬೇಕು ಎಂಬುದು ನಮ್ಮ ನಿಲುವು ಆಗಿದೆ. ಈ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಎಂದರು. 
ಕಾರ್ಯಕ್ರಮ ಹಮ್ಮಿಕೊಳ್ಳುವ ವಿಚಾರದಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗುವ ಪ್ರಸಂಗ ತರಬಾರದು. ಎಲ್ಲರ ವಿಶ್ವಾಸ ಪಡೆದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಮುಂದೆ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಎಂದಿನಂತೆ ಅಂಬೇಡ್ಕರ್ ಅವರ ವಿಚಾರಗಳನ್ನು ಪ್ರಸ್ತುತಪಡಿಸುವ ವಿಚಾರಸಂಕಿರಣವನ್ನು ಸಹ ಜಯಂತಿ ಕಾರ್ಯಕ್ರಮದ ಹಿಂದಿನ ದಿವಸವೇ ಏರ್ಪಡಿಸಬೇಕು. ವಿಚಾರವಾದಿಗಳನ್ನು ಆಹ್ವಾನಿಸಿ ಆಯೋಜಿಸುವ ವಿಚಾರಸಂಕಿರಣಕ್ಕೂ ಹೆಚ್ಚಿನ ಜನರು ಈ ಹಿಂದಿನಿಂದಲೂ ಬರುತ್ತಿದ್ದಾರೆ. ಈ ಬಾರಿಯೂ ವಿಚಾರಸಂಕಿರಣವನ್ನು ಏರ್ಪಡಿಸಲೇ ಬೇಕೆಂದರು.ಎಲ್ಲ ಸಮುದಾಯಗಳ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಾದರಿ ಕಾರ್ಯಕ್ರಮವಾಗಿ ರೂಪುಗೊಳಿಸಬೇಕಿದೆ ಎಂದು ಸಲಹೆ ಮಾಡಿದರು.
ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಧ್ರುವನಾರಾಯಣ ಅವರು ಇದೇ ಏಪ್ರಿಲ್ 28ರಂದು ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಎಲ್ಲ ತಾಲೂಕುಗಳ ಜನತೆಯೂ ಪಾಲ್ಗೊಳ್ಳಲು ಅವಕಾಶವಾಗುವಂತೆ ಜಿಲ್ಲಾ ಮಟ್ಟದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗುವುದು. ಸಮಾರಂಭಕ್ಕೆ ಮೊದಲು ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಸಹ ಏರ್ಪಾಡು ಮಾಡಲಾಗುವುದು. ಎಪ್ರಿಲ್ 27ರಂದು ವಿಚಾರಸಂಕಿರಣ ಕಾರ್ಯಕ್ರಮ ಸಹ ಆಯೋಜಿಸಲಾಗುವುದು ಎಂದರು.
ಶಿಷ್ಠಾಚಾರ ಅನುಸಾರ ಸಮಾರಂಭ ಆಯೋಜಿತವಾಗಲಿದೆ. ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಅಧಿಕಾರಿಗಳು, ಸಂಘಸಂಸ್ಥೆಯ ಮುಖಂಡರನ್ನು ಒಳಗೊಂಡ ಸಮಿತಿಯನ್ನು ಈ ಬಾರಿಯೂ ಮುಂದುವರೆಸಬೇಕು. ಅಗತ್ಯಕ್ಕೆ ತಕ್ಕಂತೆ ಮತ್ತಷ್ಟು ಮುಖಂಡರು ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಧ್ರುವನಾರಾಯಣ ತಿಳಿಸಿದರು.
ಮೆರವಣಿಗೆಗೆ ಹೆಚ್ಚಿನ ಕಲಾತಂಡಗಳನ್ನು ನಿಯೋಜಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದ ಲೋಕಸಭಾ ಸದಸ್ಯರು ಬೇರೆ ಬಗೆಯ ಕಲಾತಂಡಗಳ ಮಾಹಿತಿ ಇದ್ದಲ್ಲಿ ಸಂಘಸಂಸ್ಥೆಗಳ ಪ್ರತಿನಿಧಿಗಳು ಗಮನಕ್ಕೆ ತರಬಹುದೆಂದು ತಿಳಿಸಿದರು. 
ಮೆರವಣಿಗೆ ಸಾಗುವ ಪ್ರಮುಖ ಬೀದಿ ರಸ್ತೆಗಳನ್ನು ದುರಸ್ತಿಪಡಿಸಬೇಕು. ಮೆರವಣಿಗೆಯು ಸುಗಮವಾಗಿ ಸಾಗಲು ಯಾವುದೇ ಅಡಚಣೆಯಾಗದಂತೆ ಸಿದ್ಧಪಡಿಸುವ ಹೊಣೆಗಾರಿಕೆ ನಗರಸಭೆ ಅಧಿಕಾರಿಗಳ ಮೇಲಿದೆ. ವಿಚಾರ ಸಂಕಿರಣ ಆಯೋಜನೆಯನ್ನು ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆ ಸಮಿತಿ ನಿರ್ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಹೆಚ್ಚು ಪ್ರಮಾಣದಲ್ಲಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ವಿತರಿಸಬೇಕು. ತಾಲೂಕು ಸಂಘಸಂಸ್ಥೆಗಳ ಪ್ರತಿನಿಧಿಗಳು ಇನ್ನಿತರರನ್ನು ತೊಡಗಿಸಿಕೊಂಡು ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆಸಲು ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖರಾಗಬೇಕು. ಜಯಂತಿ ಆಚರಣೆಗೆ ಸಂಘಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಧ್ರುವನಾರಾಯಣ ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ  ಕೆ.ಎಚ್. ಸತೀಶ್, ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರೂ ಆದ ನಂಜುಂಡಸ್ವಾಮಿ,  ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ, ಸೋಮಶೇಖರ ಬಿಸಲ್ವಾಡಿ, ಆಲೂರು ನಾಗೇಂದ್ರ, ಮಾಜಿ ನಗರಸಭಾ ಸದಸ್ಯರಾದ ನಾಗರಾಜು, ಇನ್ನಿತರರು ಸಭೆಯಲ್ಲಿ  ಹಾಜರಿದ್ದರು.

****************************************************************************

ಏಪ್ರಿಲ್ 18 ರಂದು ಪಶು ಸಂಗೋಪನೆ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಏ. 17 :- ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಎ.ಮಂಜು ಅವರು ಏಪ್ರಿಲ್ 18 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 8.30 ಕ್ಕೆ ಕೊಳ್ಳೇಗಾಲಕ್ಕೆ ಆಗಮಿಸುವವರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಮಾಪುರ, ಭದ್ರಯ್ಯನಹಳ್ಳಿ, ಶೆಟ್ಟಿಹಳ್ಳಿ, ಕೌದಳ್ಳಿ, ದತ್ತಹಳ್ಳಿ, ಕುರಟ್ಟಿ ಹೊಸೂರು, ಎಂ.ಎಸ್.ದೊಡ್ಡಿಯಲ್ಲಿರುವ ಗೋಶಾಲೆಗಳಿಗೆ ಭೇಟಿ ನೀಡುವರು. ಬಳಿಕ ಮಂಗಲ ಮತ್ತು ಉಮ್ಮತ್ತೂರು ಗೋಶಾಲೆಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಂಜೆ 6 ಗಂಟೆಗೆ ಬೆಂಗಳೂರಿಗೆ ತೆರಳವರೆಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬಿ: ಆರ್.ಧ್ರುವನಾರಾಯಣ

ಚಾಮರಾಜನಗರ, ಏ. 17 ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಅವರು ಜೀವನದಲ್ಲಿ ಮೇಲೆ ಬರಲು ಉತ್ತೇಜಿಸಬೇಕಿದೆ ಎಂದು ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ವಿಕಲ ಚೇತನರಿಗೆ ಸಾಧನಾ ಸಲಕರಣೆ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಚೇತನರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ವಿಕಲ ಚೇತನರು ಸಹ ಎಲ್ಲಾರಂತೆ ಬದುಕಲು ಪ್ರೋತ್ಸಾಹ, ಅವಕಾಶ ನೀಡಬೇಕು. ವಿಶೇಷ ಚೇತನರಿಗೆ ವಿಶೇಷ ಆದ್ಯತೆ ಕೊಡಬೇಕು. ಶೇ.3 ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಿದೆ. ವಿಕಲ ಚೇತನರು ಕೆಲಸ ಮಾಡಬಹುದಾದ ಕ್ಷೇತ್ರಗಳನ್ನು ಗುರುತಿಸಿ ಉದ್ಯೋಗ ಅವಕಾಶ ಒದಗಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಯವರಿಗೂ ಈ ಬಗ್ಗೆ ತಿಳಿಸಲಾಗಿದೆ ಎಂದರು.
ವಿಕಲ ಚೇತನರಿಗೆ ಅವಶ್ಯವಿರುವ ಸÀಲಕರಣೆಗಳನ್ನು ನೀಡುವುದು ಸಹ ತುಂಬಾ ಪ್ರಮುಖ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಾವು ಸಹ ಸಂಸದ ಅನುದಾನದಿಂದ ತ್ರಿಚಕ್ರ ವಾಹನಗಳನ್ನು ಖರೀದಿಸಿ ನೀಡುತ್ತಿದ್ದೇನೆ. ವಿಶೇಷ ಚೇತನರಿಗೆ ಸವಲತ್ತುಗಳನ್ನು ಒದಗಿಸುವುದು ನಮ್ಮೆಲ್ಲಾರ ಹೊಣೆಗಾರಿಕೆ ಆಗಿದೆ ಎಂದು ಧ್ರುವನಾರಾಯಣ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಮಾತನಾಡಿ ವಿಶೇಷ ಚೇತನರಿಗೆ ಮೀಸಲಿಟ್ಟಿರುವ ಶೇ.3 ರಷ್ಟು ಅನುದಾನವನ್ನು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಮೂಲಕ ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕಿದೆ. ಈ ಮುಖಾಂತರ ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮವಹಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ವಿಶೇಷ ಚೇತನರಲ್ಲಿ ಪ್ರತಿಭೆ ಇದೆ. ಇದರ ಅನಾವರಣಕ್ಕೆ ಪ್ರೋತ್ಸಾಹಿಸಬೇಕಿದೆ. ವಿಶೇಷ ಚೇತನರಿಗಾಗಿಯೇ 29 ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜನಪ್ರತಿನಿಧಿಗಳು ಅವರ ಅನುದಾನದಲ್ಲಿ ವಿಶೇಷ ಚೇತನರಿಗೆ ಅಗತ್ಯಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ತಲುಪಿಸಲು ಆದ್ಯ ಗಮನ ನೀಡಬೇಕಿದೆ ಎಂದರು.
ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಮಾತನಾಡಿ ವಿಕಲ ಚೇತನರಿಗೆ ಸ್ಮಾರ್ಟ್ ಕೇನ್, ಟಾಕಿಂಗ್ ವಾಚ್ ಇನ್ನಿತರ ಸಲಕರಣೆಗಳನ್ನು ನೀಡಲಾಗುತ್ತಿದೆ. ಅಲ್ಲದೇ ಪ್ಯಾರಾ ಓಲಂಪಿಕ್‍ಗೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ತಾಲ್ಲೂಕಿನ ಮೇಲಾಜಿಪುರದ ಪ್ರಭುಸ್ವಾಮಿ ಅವರಿಗೆ ಹಣಕಾಸು ನೆರವು ನೀಡಿ ಕ್ರ್ರೀಡಾಕೂಟಕ್ಕೆ ಕಳುಹಿಸಲಾಗುತ್ತಿದೆ. ಎಲ್ಲಾ ಸದಸ್ಯರ ಸಹಕಾರವು ಸೇರಿದೆ ಎಂದರು.
ಇದೇ ವೇಳೆ ಪ್ಯಾರಾ ಓಲಂಪಿಕ್‍ಗೆ ತೆರಳುತ್ತಿರುವ ಪ್ರಭುಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ವಿಕಲ ಚೇತನರಿಗೆ ಸಾಧನಾ-ಸಲಕರಣೆಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯತ್ ಉಪ ಅಧ್ಯಕ್ಷರಾದ ಪಿ.ಎನ್.ದಯಾನಿಧಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗಸುಂದ್ರಮ್ಮ, ಸದಸ್ಯರಾದ ಸುಧಾ, ಯಶೋಧ, ಶೈಲಾಜಾ, ಆಶಾ, ಪುಷ್ಪಾಲತಾ, ಪುಟ್ಟಸ್ವಾಮಿ, ಮಹದೇವಸ್ವಾಮಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‍ಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


15-04-2017 ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ


ಚಾಮರಾಜನಗರ, ಏ. 15:- ಜಿಲ್ಲೆಯಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಸುಧಾರಿಸುವವರೆಗೂ ಕುಡಿಯುವ ನೀರು ಮೇವಿಗೆ ಯಾವುದೇ ಅಭಾವವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಬರ ಪರಿಸ್ಥಿತಿ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೆರೆಯಲಾಗಿರುವ ಗೋಶಾಲೆಗಳು ಮೇವು ಬ್ಯಾಂಕ್ ವಿವರ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಶಾಲೆಗಳು ಎಲ್ಲಿ ಅಗತ್ಯವಿದೆ? ಮೇವು ಬ್ಯಾಂಕ್ ಎಲ್ಲಿ ಬೇಕಿದೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸುವಂತೆ ನಿರ್ದೇಶನ ನೀಡಿದರು.
ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಮೇವು ಕೊರತೆ ಕಾಡÀಬಾರದು. ಮೇವು ದಾಸ್ತಾನು ಮಾಡಿಕೊಂಡು ಎಲ್ಲ ಭಾಗಗಳಲ್ಲೂ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು. ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಮೇವು ಲಭ್ಯವಾಗುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳಿಗೆ ಮುಂದಾಗಬೇಕಿದೆ ಎಂದರು.
ಬರಗಾಲ ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಯಾವುದೇ ಒಂದು ಇಲಾಖೆಗೆ ಮಾತ್ರ ಜವಾಬ್ದಾರಿ ಇದೆ ಎಂಬ ಮನೋಭಾವ ಬಿಡಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ವ್ಯಾಪಕವಾಗಿ ಗ್ರಾಮೀಣ ಭಾಗಗಳಿಗೆ ಭೇಟಿ ಕೊಟ್ಟು ಬರಪರಿಹಾರ ಪೂರಕ ಕಾರ್ಯಗಳಿಗೆ ತೊಡಗಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಜನರಿಗೆ ತೊಂದರೆಯಾಗದಂತೆ ನೀರು ಪೂರೈಸುವ ಕೆಲಸ ಆಗಬೇಕು. ಯಾವುದೇ ಮೂಲದಿಂದಾಗಲೀ ತ್ವರಿತವಾಗಿ ನೀರು ಸರಬರಾಜು ಮಾಡಬೇಕು. ದೂರುಗಳಿಗೆ ಅವಕಾಶವಾಗದಂತೆ ನೀರು ಒದಗಿಸುವ ಕಾರ್ಯವು ಬರಗಾಲ ಸಂದರ್ಭದಲ್ಲಿ ನಿರ್ವಹಿಸಬೇಕು ಎಂದರು.
ಬೆಳೆ ವಿಮೆ, ಬೆಳೆಹಾನಿ ಪರಿಹಾರ ನೀಡುತ್ತಿರುವ ಬಗ್ಗೆ ವಿವರ ಒದಗಿಸಿದ ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ರೈತರ ಖಾತೆಗೆ ಜಮೆ ಆಗುತ್ತಿರುವ ಬೆಳೆ ವಿಮೆ, ಬೆಳೆಹಾನಿ ಪರಿಹಾರ ಹಣವನ್ನು ಸಾಲದ ಮೊತ್ತಕ್ಕೆ ಕಟಾಯಿಸದಂತೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಅಲ್ಲದೆ ವಸತಿ ಯೋಜನೆ ಪ್ರಗತಿ ಬಗ್ಗೆಯೂ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ನಳಿನ್ ಅತುಲ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಏ. 17ರಂದು ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕುರಿತು ಪೂರ್ವಭಾವಿ ಸಭೆ

ಚಾಮರಾಜನಗರ, ಏ. 15 - ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳುವ ಸಂಬಂಧ ಚರ್ಚಿಸಲು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 17ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಂಘಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ನಾಗರಿಕರು ಭಾಗವಹಿಸಿ ಸೂಕ್ತ ಸಲಹೆ ಅಭಿಪ್ರಾಯ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಅಗ್ನಿಶಾಮಕ ಇಲಾಖೆಯಿಂದ ಜಾಗೃತಿ ಸಪ್ತಾಹ

ಚಾಮರಾಜನಗರ, ಏ. 15 :- ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಇದೇ ಏಪ್ರಿಲ್ 14 ರಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಆರಂಭವಾಗಿದ್ದು ಏಪ್ರಿಲ್ 20ರವರೆಗೂ ಮುಂದುವರೆಯಲಿದೆ.
ಅಗ್ನಿ ದುರಂತಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮ ಹಾಗೂ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಒಂದು ವಾರಗಳ ಕಾಲ ನಡೆಯಲಿರುವ ಜಾಗೃತಿ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಬಳಿ ಚಾಲನೆ ನೀಡಿದರು.
ಜಿಲ್ಲಾ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ, ಶಾಲಾಕಾಲೇಜುಗಳು, ಬಸ್ ನಿಲ್ದಾಣ ಇನ್ನಿತರ ಕಡೆ ಅಗ್ನಿ ದುರಂತಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿಯ ಸಪ್ತಾಹದಲ್ಲಿ ಅಗ್ನಿಶಾಮಕ – ಜೀವ ಮತ್ತು ಆಸ್ತಿಪಾಸ್ತಿಯನ್ನು ರಕ್ಷಿಸುವ ನಿಮ್ಮ ಜತೆಗಾರ ಎಂಬ ಧ್ಯೇಯ ವಾಕ್ಯದೊಡನೆ ಸುರಕ್ಷತಾ ಕ್ರಮಗಳ ಬಗ್ಗೆ ನಾಗರಿಕರಿಗೆ ತಿಳಿಸಲಾಗುತ್ತಿದೆ.
ಸುರಕ್ಷತಾ ದೃಷ್ಠಿಯಿಂದ ಐಎಸ್‍ಐ ಗುರುತಿನ ವಿದ್ಯುತ್ ಉಪಕರಣ ಬಳಕೆ, ಗ್ಯಾಸ್ ಒಲೆ, ರಬ್ಬರ್ ಟ್ಯೂಬ್ ಬಳಸಲು ಮನವಿ ಮಾಡಲಾಗಿದೆ. ಮಕ್ಕಳು ಪಟಾಕಿ ಹಚ್ಚುವಾಗ ಹಿರಿಯರು ಜತೆಗಿರಬೇಕು, ಬೆಂಕಿ ಉಂಟುಮಾಡುವ ವಸ್ತುಗಳು ಮಕ್ಕಳ ಕೈಗೆ ಎಟುಕದಂತೆ ಎಚ್ಚರವಹಿಸಬೇಕು. ವಿದ್ಯುತ್ ಉಪಕರಣಗಳಲ್ಲಿ ಬೆಂಕಿ ಕಂಡುಬಂದಾಗ ನೀರು ಹಾಕಬಾರದು, ಮೊದಲು ಮೈನ್ ಸ್ವಿಚ್ ಆಫ್ ಮಾಡಬೇಕು. ಅಗ್ನಿ ದುರಂತ ಸಂಭವಿಸಿದ ಕೂಡಲೇ ದೂರವಾಣಿ ಸಂಖ್ಯೆ 101, 108 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಬೇಕೆಂಬ ಮನವಿಯನ್ನು ಅಗ್ನಿಶಾಮಕ ಇಲಾಖೆ ಮಾಡಿಕೊಂಡಿದೆ.

ಏ. 17ರಂದು ನಗರದಲ್ಲಿ ವಿಕಲಚೇತನರಿಗೆ ಸಾಧನಸಲಕರಣೆ ವಿತರಣಾ ಕಾರ್ಯಕ್ರಮ

ಚಾಮರಾಜನಗರ, ಏ. 15- ಚಾಮರಾಜನಗರ ತಾಲೂಕು ಪಂಚಾಯತ್ ವತಿಯಿಂದ ವಿಕಲಚೇತನರಿಗೆ ಸಾಧನಸಲಕರಣೆ ವಿತರಣೆ ಕಾರ್ಯಕ್ರಮವನ್ನು ಏಪ್ರಿಲ್ 17ರಂದು ಮಧ್ಯಾಹ್ನ 3 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Saturday, 15 April 2017

15-04-2017 ಚಾಮರಾಜನಗರ: ಅಂತರ್ ಜಿಲ್ಲಾ ಸರಗಳ್ಳಿಯರನ್ನ ಬಂದಿಸಿದ ಜಿಲ್ಲಾ ಪೊಲೀಸ್

ಚಾಮರಾಜನಗರ: ಅಂತರ್ ಜಿಲ್ಲಾ ಸರಗಳ್ಳಿಯರನ್ನ ಬಂದಿಸಿದ ಜಿಲ್ಲಾ ಪೊಲೀಸ್

             ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ


ಚಾಮರಾಜನಗರ ಜಿಲ್ಲೆ,: ಅಂತರ್ ಜಿಲ್ಲಾ ಸರಗಳ್ಳಿಯರನ್ನ ಬಂದಿಸುವಲ್ಲಿ ಚಾಮರಾಜನಗರ ಜಿಲ್ಲಾ ಪೋಲೀಸ್ ಸಫಲವಾಗಿದೆ. ಎಂಧು ಜಿಲ್ಲಾ ಪೋಲೀಸ್ ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಪತ್ರಿಕಾಘೋಷ್ಟಿಚಿiÀುಲ್ಲಿ ತಿಳಿಸಿದರು
************************************                  ಸರಗಳ್ಳರ ಬಗ್ಗೆ ನಿಗಾ ವಹಿಸಿ
**************************************
 ಗ್ರಾಮಾಂತರ ಪೊಲೀಸ್ ಠಾಣೆಗೆ  ದಿನಾಂಕ: 18-02-2017 ರಂದು ಲಿಂಗಣಾಪುರ ಗ್ರಾಮದ ಶ್ರೀಮತಿ. ಗೀತಾ ಕೋಂ ಪ್ರಭುಸ್ವಾಮಿ ಎಂಬುವರು ಹಾಜರಾಗಿ ದೂರು ನೀಡಿದ್ದು ದೂರಿನಲ್ಲಿ ದಿನಾಂಕ:18-02-2017 ರಂದು ಚಿಲಕವಾಡಿ ಬೆಟ್ಟಕ್ಕೆ ಆನಂದಗುರುಜೀ ಭೇಟಿ ನೀಡಿದ್ದ ಸಂಬಂಧ ಸಾವಿರಾರು ಜನ ಭಕ್ತರು ಸೇರಿದ್ದು ನಾನೂ ಕೂಡ ಸದರಿ ಕಾರ್ಯಕ್ರಮಕ್ಕೆ ಹೋಗಿದ್ದು, ಜನಜಂಗುಳಿಯಲ್ಲಿ ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಳುವಾಗಿರುತ್ತದೆಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ: 29/2017 ಕಲಂ: 392 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
***************************************
ಸರಗಳ್ಳರ ಬಗ್ಗೆ ನಿಗಾ ವಹಿಸಿ
**************************************


ಇತ್ತೀಚೆಗೆ ಕೊಳ್ಳೇಗಾಲ ಉಪ ವಿಭಾಗ, ಕೊಳ್ಳೇಗಾಲ ,
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾತ್ರೆಗಳ ಸಮಯದಲ್ಲಿ ಮಹಿಳೆಯರ ಚಿನ್ನದ ಮಾಂಗಲ್ಯ ಸರಗಳನ್ನು ಕಳುವು ಮಾಡುತ್ತಿದ್ದ ಆರೋಪಿ-1 ವಸಂತ @ ಗೀತಾ @ ಸುಮಿತ್ರ ಕೋಂ ಮಲ್ಲು 50 ವರ್ಷ, ಬೋವಿ ಜನಾಂಗ, ವಿಜಯನಗರ ಮೈಸೂರು. ಆರೋಪಿ-2 ನಾಗರತ್ನ @ ಸವಿತಾ ಕೋಂ ವೆಂಕಟೇಶ್, 35 ವರ್ಷ, ಬೋವಿ ಜನಾಂಗ, ಚೆನ್ನರಾಯಪಟ್ಟಣ, ಹಾಸನ ಜಿಲ್ಲೆ, ಆರೋಪಿ-3 ಜ್ಯೋತಿ @ ರಮ್ಯ ಕೋಂ ಶ್ರೀನಿವಾಸ, 37 ವರ್ಷ, ಬೋವಿ ಜನಾಂಗ, ಮದ್ದಯ್ಯನಹುಂಡಿ ಗ್ರಾಮ, ಗುಂಡ್ಲಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ. ರವರುಗಳನ್ನು ದಸ್ತಗಿರಿ ಮಾಡಿದ್ದು ವಿಚಾರಣಾ ಕಾಲದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಘಟಿಸಿರುವ ಸರ ಕಳ್ಳತನಗಳಲ್ಲಿಯೂ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು
ಈ ಸಂಬಂಧ ದಿನಾಂಕ: 10-04-2017 ರಂದು ಮೇಲ್ಕಂಡ ಆರೋಪಿಗಳನ್ನು ಕೊಳ್ಳೇಗಾಲ ಘನ ಪಿಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಮೇಲೆ ಹಾಜರುಪಡಿಸಿ ವಿಚಾರಣೆಗಾಗಿ ಕೊಳ್ಳೇಗಾಲ ವೃತ್ತ ನಿರೀಕ್ಷಕರು ಪೊಲೀಸ್ ಬಂಧನಕ್ಕೆ ಪಡೆದುಕೊಂಡು ಚಾಮರಾಜನಗರ ಜಿಲ್ಲೆಯ ಮಾನ್ಯ ಎಸ್ ಪಿ ಸಾಹೇಬರವರು ಮತ್ತು ಮಾನ್ಯ ಅಪರ ಎಸ್‍ಪಿ ಸಾಹೇಬರು ಮತ್ತು ಮಾನ್ಯ ಡಿವೈಎಸ್‍ಪಿ ಕೊಳ್ಳೇಗಾಲ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ವೃತ್ತ ನಿರೀಕ್ಷಕರಾದ ಅಮರನಾರಾಯಣ್ ರವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಮೊ.ನಂ: 29/2017, ಕಲಂ: 392 ಐಪಿಸಿ, ಮೊ.ನಂ 154/2015 ಕಲಂ: 379 ಐಪಿಸಿ, ಮೊ.ನಂ: 23/2017 ಕಲಂ: 379 ಐಪಿಸಿ, ಮೊ.ನಂ: 26/2017, ಕಲಂ:379 ಐಪಿಸಿ ಹಾಗೂ ಯಳಂದೂರು ಪೊಲೀಸ್‍ಠಾಣೆ ಮೊ.ನಂ: 09/2016 ಮತ್ತು ಮಲೈ ಮಹದೇಶ್ವರ ಪೊಲೀಸ್ ಠಾಣೆಯ 04 ಕಳುವು ಪ್ರಕರಣಗಳಲ್ಲಿ ಭಾಗಿಯಾಗಿ ಕೃತ್ಯವೆಸಗಿರುವುದಾಗಿ ಹಾಗು ಕಳವು ಮಾಲುಗಳನ್ನು ಪಿರಿಯಾಪಟ್ಟಣ, ಮೈಸೂರು, ಚೆನ್ನರಾಯಪಟ್ಟಣ ಹಾಗೂ ಗುಂಡ್ಲಪೇಟೆಯ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ವಿಚಾರಣಾ ಕಾಲದಲ್ಲಿ ತಿಳಿಸಿರುತ್ತಾರೆ. ಸದರಿಯವರುಗಳಿಂದ ಒಟ್ಟು 09 ಚಿನ್ನದ ಮಾಂಗಲ್ಯ ಸರಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಇವುಗಳ ಒಟ್ಟು ತೂಕ 227 ಗ್ರಾಂ ಆಗಿದ್ದು, ಅಂದಾಜು ಬೆಲೆ ಸುಮಾರು 6,00,000/ ರೂಪಾಯಿ ಆಗಿರುತ್ತದೆ.
ಹಾಗೆಯೇ ಶಿವಮೊಗ್ಗ ಜಿಲ್ಲಾ ಪೊಲೀಸರು ಇದೇ ಆರೋಪಿಗಳಿಂದ ಚಾಮರಾಜನಗರ ಜಿಲ್ಲೆ ಮ.ಮ.ಬೆಟ್ಟ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಟ್ಟು 09 ಸರಗಳ್ಳತನ ಪ್ರಕರಣಗಳಲ್ಲಿ ಒಟ್ಟು 297.44 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳನ್ನು ಹಾಗೂ ಗುಂಡ್ಲುಪೇಟೆ ಪೊಲೀಸ್ ಠಾಣೆಯ 01 ಸರಗಳ್ಳತನ ಪ್ರಕರಣದಲ್ಲಿ 34 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಒಟ್ಟು 10 ಪ್ರಕರಣಗಳಲ್ಲಿ 331.44 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳನ್ನು (ಒಟ್ಟು ಮೌಲ್ಯ 8,15,500-00 ರೂ) ಅಮಾನತ್ತುಪಡಿಸಿಕೊಂಡಿದ್ದು. ಸದರಿ ಮಾಲುಗಳನ್ನು ಚಾಮರಾಜನಗರ ಜಿಲ್ಲೆಗೆ ವರ್ಗಾವಣೆ ನೀಡಲಿದ್ದು ಮುಂದಿನ ಕ್ರಮ ಜರುಗಿಸಲಾಗುವುದು. ಸದರಿ ಆರೋಪಿಗಳಿಂದ ಒಟ್ಟು 555.44 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳನ್ನು (ಒಟ್ಟು ಮೌಲ್ಯ 14,15,500-00 ರೂಗಳು) ಅಮಾನತ್ತುಪಡಿಸಿಕೊಂಡಿರುತ್ತೆ.
ಕೊಳ್ಳೇಗಾಲ ವೃತ್ತ ನಿರೀಕ್ಷಕರಾದ ಶ್ರೀ. ಅಮರ್‍ನಾರಾಯಣ್, ಪಿಎಸ್‍ಐ ವನರಾಜು, ಎಎಸ್‍ಐ ರಾಮಚಂದ್ರ, ಸಿಬ್ಬಂಧಿಯವರಾದ ಪಿಸಿ 06 ನಾಗೇಶ್, ಪಿಸಿ 99 ಮಂಜಪ್ಪ, ಪಿಸಿ 197 ದ್ವಾರಕೇಶ್, ಮಪಿಸಿ 523 ರತ್ನಮ್ಮರವರ ತಂಡ ಸದರಿ ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ. ಸದರಿ ತಂಡದವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು

                                                            *************************************


Friday, 14 April 2017

14-04-2017 ಭಾರತೀಯರಿಗೆ ಸಂವಿಧಾನ ಶ್ರೇಷ್ಠ ಗ್ರಂಥ: ಯು.ಟಿ.ಖಾದರ್



ಭಾರತೀಯರಿಗೆ ಸಂವಿಧಾನ ಶ್ರೇಷ್ಠ ಗ್ರಂಥ: ಯು.ಟಿ.ಖಾದರ್

 ಚಾಮರಾಜನಗರ, ಏ. 14:- ವಿವಿಧೆಯಲ್ಲಿ ಏಕತೆ ಇರುವ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟ ಮಹಾಮೇಧಾವಿ ಡಾ|| ಬಿ.ಆರ್ ಅಂಬೇಡ್ಕರ್ ಎಂದು ಆಹಾರ ನಾಗರೀಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

  ವೈವಿದ್ಯಮಯ ಸಂಸ್ಕøತಿ, ಪರಂಪರೆ, ಜನಸಮುದಾಯ ಹೊಂದಿರುವ ಭಾರತ ದೇಶಕ್ಕೆ ಅತ್ಯುತ್ತಮ ಸಂವಿಧಾನ ರಚಿಸಿದ ಕೀರ್ತಿಗೆ ಅಂಬೇಡ್ಕರ್ ರವರು ಪಾತ್ರವಾಗಿದ್ದಾರೆ. ಇಡೀ ಭಾರತೀಯರಿಗೆ ಸಂವಿಧಾನದ ಶ್ರೇಷ್ಠ ಗ್ರಂಥವಾಗಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ಪ್ರತಿಯೋಬ್ಬರ ಮೇಲೂ ಇದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಅಂಬೇಡ್ಕರ್ ರವರು ಬಾಲ್ಯದಿಂದಲೇ ಅತ್ಯಂತ ಕಷ್ಟಕರ ಜೀವನ ನಡೆಸಿದರು. ಬಡತನವಿದ್ದರು ಉನ್ನತ ಶಿಕ್ಷಣ ಪಡೆದು ಮೇರು ವ್ಯಕ್ತಿತ್ವ ಉಳ್ಳವರಾದರು. ಸಹನೆ, ತಾಳ್ಮೆಯಿಂದ ಯಶಸ್ಸು ಪಡೆದುಕೊಂಡರು. ಅಂಬೇಡ್ಕರ್ ರವರ ಈ ಎಲ್ಲ ಬದುಕಿನ ಮೌಲ್ಯಗಳನ್ನು ಇಂದಿನ ಯುವ ಜನಾಂಗ ಅರಿಯಬೇಕಿದೆ. ಅವರ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದು ಸಚಿವರು ಸಲಹೆ ಮಾಡಿದರು.
ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಮೊದಲು ಅಂಬೇಡ್ಕರ್ ರವರ ಜಯಂತಿಯನ್ನು ಸರಳವಾಗಿ ಆಚರಿಸಲು  ಜಿಲ್ಲಾಡಳಿತ ತೀರ್ಮಾನಿಸಿತ್ತು, ಅದರಂತೆ ಸಿದ್ದತೆ ಮಾಡಿಕೊಂಡಿತ್ತು. ಆದರೆ ಇತ್ತೀಚೆಗಷ್ಟೆ ಚುನಾವಣಾ ಆಯೋಗವು ಎಂದಿನಂತೆ ಕಾರ್ಯಕ್ರಮ ಆಯೋಜಿಸಬಹುದೆಂಬ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ತರಾತುರಿಯಾಗಿ ಕಾರ್ಯಕ್ರಮ ನಡೆಸಲಾಗಿದೆ. ಹೀಗಾಗಿ ಮತ್ತೊಮ್ಮೆ ಅದ್ದೂರಿಯಾಗಿ ಡಾ|| ಬಿ.ಆರ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮವನ್ನು ಎಲ್ಲರ ಸಹಕಾರ ಅಭಿಪ್ರಾಯ ಪಡೆದು ಹಮ್ಮಿಕೊಳ್ಳಲಾಗುತ್ತದೆ ಎಂದು ಸಚಿವರಾದ ಖಾದರ್ ತಿಳಿಸಿದರು.
ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್.ದ್ರುವ ನಾರಾಯಣ ಅವರು ನಾನಾ ಭಾಷೆ, ಜಾತಿ, ಧರ್ಮವುಳ್ಲ ಭಾರತದಲ್ಲಿ ನಾವೆಲ್ಲ ಒಂದೇ ಎಂಬ ಉದಾತ್ತ ಭಾವನೆಯು ಡಾ|| ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಸಾಧ್ಯವಾಗಿದೆ. ಅಂಬೇಡ್ಕರ್ ದೇಶದ ಅತ್ಯಮೂಲ್ಯ ಆಸ್ತಿ ಎಂದರು. 
ಅಂಬೇಡ್ಕರ್‍ರವರು ದಲಿತರು ಸೇರಿದಂತೆ ಇಡೀ ದೇಶದ ಎಲ್ಲಾ ವರ್ಗದ ಏಳಿಗೆಗಾಗಿ ಶ್ರಮಿಸಿದರು. ವಿಶೇಷವಾಗಿ ಮಹಿಳೆಯರಯರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಉದ್ದೇಶದಿಂದ ಹಿಂದು ಕೋಡ್ ಬಿಲ್ ಮಂಡಿಸಿದರು ಎಂದು ಆರ್. ದ್ರುವ ನಾರಾಯಣ ತಿಳಿಸಿದರು.
ಡಾ|| ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮವನ್ನು ಮತ್ತೊಂದು ದಿನ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗುತ್ತದೆ. ಎಂದು ದ್ರುವ ನಾರಾಯಣ ಇದೇ ವೇಳೆ ತಿಳಿಸಿದರು

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಸಹ ಮಾತನಾಡಿ ಅಂಬೇಡ್ಕರ್ ರವರ ಜಯಂತಿಯನ್ನು ವಿಜೃಂಭಣೆಯಿಂದ ಏಪ್ರಿಲ್ 23 ರಂದು ಆಯೋಜಿಸಲು ಏಪ್ರಿಲ್ 17 ರಂದು ಪೂರ್ವಬಾವಿ ಸಭೆ ಕರೆದು ಅಭಿಪ್ರಾಯ ಸಲಹೆ ಪಡೆಯಲಾಗುವುದು ಎಂದರು.
ಮೈಸೂರು ವಿವಿ ಪ್ರಸಾರಾಂಗದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಪ್ರೊ. ಲಕ್ಷ್ಮೀನಾರಾಯಣ ಅರೋರಾ ಅವರು ಮುಖ್ಯ ಭಾಷಣ ಮಾಡಿದರು
ಕೊಳ್ಳೇಗಾಲ ಚೇತನವನದ ಬೌದ್ಧ ಭಿಕ್ಕುಗಳಾದ ಪರಮಪೂಜ್ಯ ಮನೋರಖ್ಖಿತ ಬಂತೇಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಇದಕ್ಕು ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ತದ ನಂತರ ಪ್ರವಾಸಿ ಮಂದಿರದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಶಾಸಕರಾದ ಎಂ.ಸಿ.ಮೋಹನ ಕುಮಾರಿ ಉರುಫ್ ಗೀತಾ,  ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಶಶಿಕಲಾ ಸೋಮಲಿಂಗಪ್ಪ  ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪÀ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ಅಧಿಕಾರಿ ಕುಲದೀಪ್ ಕುಮಾರ್ .ಆರ್. ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಸಮಾಜ ಕಲ್ಯಾಣ ಇಲಾಕೆ ಉಪನಿರ್ದೇಶಕರಾದ ಕೆ.ಹೆಚ್. ಸತೀಶ್ ಇತರರು ಉಪಸ್ಥಿತ ರಿದ್ದರು


ನಗದು ರಹಿತ ವ್ಯಾಪಾರ ಯೋಜನೆ ಕಾರ್ಯಗಾರ  


ಚಾಮರಾಜನಗರ, ಏ. 14:- ಜಿಲ್ಲಾಢಳಿತ ಜಿಲ್ಲಾ ಪಂಚಾಯತ್ ಮಾಹಿತಿ ತಂತ್ರಜ್ಞಾನ ಇಲಾಖೆ ನೀತಿ ಆಯೋಗದ ವತಿಯಿಂದ  ನಗದು ರಹಿತ ವ್ಯಾಪಾರ ಯೋಜನೆ ಜಾಗೃತಿ ಕಾರ್ಯಕ್ರಮವು ಇಂದು ಯಶಸ್ವಿಯಾಗಿ ನಗರದಲ್ಲಿ ಜರುಗಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗದು ರಹಿತ ವ್ಯಾಪಾರ ವಹಿವಾಟುವಿನಿಂದ ಆಗುವ ಪ್ರಯೋಜನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.
ಲೀಡ್‍ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ದರಾಜು ಅವರ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಬ್ಯಾಂಕುಗಳಲ್ಲಿ ಕಾಗದ ರಹಿತವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ತಂತ್ರಜ್ಞಾನ ಬಳಕೆಯನ್ನು ಎಲ್ಲಾ ಬ್ಯಾಂಕುಗಳು ಮಾಡುತ್ತಿವೆ. ಪ್ರಸ್ತುತ ದಿನಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಎಂದರು
ಜಿಲ್ಲೆಯಲ್ಲಿ ಎರಡು ಲಕ್ಷದ ಮೂವತ್ತು ಮೂರು ಸಾವಿರ ಜನ್ ಧನ್ ಖಾತೆ ತೆರೆಯಲಾಗಿದೆ ಈ ಪೈಕಿ 60 ಸಾವಿರ ಖಾತೆದಾರರು ವಹಿವಾಟು ನಡೆಸುತ್ತಿಲ್ಲ ಪ್ರಧಾನ ಮಂತ್ರಿ ವಿಮೆ ಸುರಕ್ಷೆ ಯೋಜನೆ ಪ್ರಯೋಜನೆ ಪಡೆಯಲು ಖಾತೆದಾರರಿಗೂ ಅವಕಾಶವಿದೆ ಎಂದರು.
ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ ನಗದು ರಹಿತ ವ್ಯವಸ್ಥೆಯಿಂದ ಸಮಯ ಉಳಿತಾಯವಾಗಲಿದೆ. ಭ್ರಷ್ಟಾಚಾರಕ್ಕು ಕಡಿವಾಣ ಬೀಳಲಿದೆ, ರೈತರ ಖಾತೆಗಳಿಗೆ ನೇರವಾಗಿ ಬೆಳೆ ವಿಮೆ, ಬೆಳೆ ಪರಿಹಾರ ದಂತಹ ಹಣ ಸಂದಾಯ ವಾಗಲಿದೆ. ಇದರಿಂದ ರೈತರು ಬ್ಯಾಂಕುಗಳಿಗೆ ಅಲೆದಾಡುವುದು ತಪ್ಪಿದೆ ಎಂದರು.
ಇದೇ ವೇಳೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಡಾ|| ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇತರರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ವೇಳೆ ಪ್ರಧಾನ ಮಂತ್ರಿಯವರು ನಾಗಪುರದಲ್ಲಿ ಅನಕ್ಷರಸ್ಥರು ಬಳಸಬಹುದಾದ  ಭೀಮ್ ಆಧಾರ್ ಆ್ಯಪ್ ಸೇವೆ ಬಿಡುಗಡೆ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮವನ್ನು ದೂರದರ್ಶನದ ಮೂಲಕ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.
ಆಧಾರ್ ಜಿಲ್ಲಾ ಸಮಾಲೋಚಕರಾದ ರಾಮ್‍ಪ್ರಸಾದ್, ತಹಸಿಲ್ದಾರ್ ಕೆ.ಪುರಂದರ, ಎನ್.ಐ.ಸಿ ಅಧಿಕಾರಿ ಯತಿರಾಜು, ಚಲುವರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು