ಸಮಾನತೆಗೊಳಿಸು : ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಯನ್ನು ಪರಿಹರಿಸೋಣ ಮತ್ತು ಏಡ್ಸ್ ಅನ್ನು ಕೊನೆಗಾಣಿಸೋಣ.
ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ನವೆಂಬರ್ 30 - ದೇಶದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಹೆಚ್.ಐ.ವಿ./ಏಡ್ಸ್ ಒಬ್ಬ ವ್ಯಕ್ತಿಯ ಸಮಸ್ಯೆಯಾಗಿರುವುದಲ್ಲದೇ ಇದು ಸಮಾಜದ ಅಭಿವೃಧ್ದಿಗೆ ಸವಾಲಾಗಿದೆ. ಜನ ಸಾಮಾನ್ಯರಲ್ಲಿ ಹೆಚ್.ಐ.ವಿ. ಸೋಂಕು ಮತ್ತು ಸೋಂಕಿನೊಂದಿಗೆ ಬದುಕುತ್ತಿರುವವರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯದ ಭಾವನೆಗಳು ಸೋಂಕಿತರ ಬದುಕಿಗೆ ಗ್ರಹಣ ಹಿಡಿದಂತಾಗಿದೆ. ಈ ಹೆಚ್.ಐ.ವಿ./ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್-01 ರಂದು “ವಿಶ್ವ ಏಡ್ಸ್ ದಿನ”ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ವಿಶ್ವ ಏಡ್ಸ್ ದಿನಾಚರಣೆ ಇತಿಹಾಸ:-
1981ರಲ್ಲಿ ಮೊದಲ ಹೆಚ್.ಐ.ವಿ. ಸೋಂಕು ಯು.ಎಸ್.ಎ.ನಲ್ಲಿ ಕಂಡು ಬಂತು ಮತ್ತು 1982ರಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು. ಏಡ್ಸ್ ಒಂದು ಮಾರಣಾಂತಿಕ ರೋಗ, ಇಂತಹ ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ದಿನಾಂಕ 26-10-1988ರಲ್ಲಿ ಡಿಸೆಂಬರ್-01ರಂದು “ವಿಶ್ವ ಏಡ್ಸ್ ದಿನ”ವೆಂದು ಅಧಿಕೃತವಾಗಿ ಘೋಷಿಸಿತು. ಅದರಂತೆ ಪ್ರತಿ ವರ್ಷ ಡಿಸೆಂಬರ್-01 ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ರೆಡ್ ರಿಬ್ಬನ್ ಸಂಕೇತ:-
ರೆಡ್ ರಿಬ್ಬನ್ ಅಥವಾ ಕೆಂಪು ಪಟ್ಟಿ ಎಂಬುದು ಹೆಚ್.ಐ.ವಿ./ಏಡ್ಸ್ ತಡೆಗಟ್ಟುವ ಒಂದು ಜಾಗತಿಕ ಸಂಕೇತ. ಇದರ ಅರ್ಥ ಹೆಚ್.ಐ.ವಿ./ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಹೆಚ್.ಐ.ವಿ ಸೋಂಕಿತರಿಗೆ ಕಳಂಕ ತಾರತಮ್ಯ ಮಾಡದಿರುವುದು.
ಹೆಚ್.ಐ.ವಿ/ಏಡ್ಸ್‍ನ ಇತಿಹಾಸ:-
1983ರಲ್ಲಿ ಹೆಚ್.ಐ.ವಿ. ಒಂದು ವೈರಸ್ ಎಂದು ಲ್ಯುಕ್‍ಮೊಂಟಗ್ನೈಯರ್ ಮತ್ತು ರಾಬರ್ಟ್‍ಗ್ಯಾಲ್ಲೊರವರು
ಕಂಡುಹಿಡಿದರು.
1986ರಲ್ಲಿ ಭಾರತದಲ್ಲಿ ಮೊದಲ ಹೆಚ್.ಐ.ವಿ. ಸೋಂಕು ಚೆನ್ನೈನ ವೆಲ್ಲೂರಿನಲ್ಲಿ ಕಂಡುಬಂದಿತು.
1986ರಲ್ಲಿ ಮುಂಬೈನಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು.
1987ರಲ್ಲಿ ಕರ್ನಾಟಕದಲ್ಲಿ ಮೊದಲ ಹೆಚ್.ಐ.ವಿ. ಸೋಂಕು ಮತ್ತು ಏಡ್ಸ್ ಪ್ರಕರಣ ಬೆಳಗಾವಿಯಲ್ಲಿ ಕಂಡುಬಂತು.
ಹೆಚ್.ಐ.ವಿ. ಸೋಂಕು 4 ವಿಧಾನಗಳಲ್ಲಿ ಮಾತ್ರ ಹರಡುತ್ತದೆ.
ಹೆಚ್.ಐ.ವಿ. ಸೋಂಕಿತ ವ್ಯಕ್ತಿಯ ಜೊತೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದಾಗ ಹೆಚ್.ಐ.ವಿ. ಹರಡುತ್ತದೆ.
ಪರೀಕ್ಷೆ ಮಾಡದ ರಕ್ತ ಪಡೆಯುವುದರಿಂದ ಹರಡುವ ಸಾಧ್ಯತೆ ಇರುತ್ತದೆ.
ಹೆಚ್.ಐ.ವಿ. ಸೋಂಕಿತ ತಾಯಿಯಿಂದ ಹುಟ್ಟುವ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ
ಹಾಲಿನ ಮುಖಾಂತರ ಹರಡುವ ಸಾಧ್ಯತೆ ಇರುತ್ತದೆ.
ಹೆಚ್.ಐ.ವಿ. ಸೋಂಕಿತ ಸೂಜಿ ಸಿರಂಜ್‍ಗಳನ್ನು ಸಂಸ್ಕರಿಸದೆ ಬಳಸುವುದರಿಂದ ಹರಡುವ ಸಾಧ್ಯತೆ ಇರುತ್ತದೆ.
ಹೆಚ್.ಐ.ವಿ. ಸೋಂಕು ಹರಡುವುದನ್ನು ತಡೆಯುವುದು.
ಹೆಚ್.ಐ.ವಿ. ಸೋಂಕಿನ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು.
ಅಪಾಯಕಾರಿ ನಡವಳಿಕೆಯಿಂದ ದೂರ ಇರುವುದು.
ಮದುವೆಗೆ ಮುಂಚೆ ಬ್ರಹ್ಮಚರ್ಯೆ ಪಾಲನೆ ಹಾಗೂ ನಂತರದಲ್ಲಿ ಏಕ ಸಂಗಾತಿಯೊಂದಿಗೆ ನಿಷ್ಠೆಯ ಜೀವನ
ನಡೆಸುವುದು.
ಒಮ್ಮೆ ಹೆಚ್.ಐ.ವಿ. ಸೋಂಕಿತರೆಂದು ತಿಳಿದ ಕೂಡಲೇ ಕಡ್ಡಾಯವಾಗಿ ಎ.ಆರ್.ಟಿ. ಕೇಂದ್ರದಲ್ಲಿ ಉಚಿತ ಚಿಕಿತ್ಸೆ
ಪಡೆದುಕೊಳ್ಳುವುದು.
ಹೆಚ್.ಐ.ವಿ./ಏಡ್ಸ್‍ನ ಸ್ಥಿತಿಗತಿ:-
ಕರ್ನಾಟಕದಲ್ಲಿ ಅತಿ ಹೆಚ್ಚು ಹೆಚ್.ಐ.ವಿ. ಪ್ರಿವೆಲೆನ್ಸ್ ಹೊಂದಿರುವ ಜಿಲ್ಲೆಗಳು (2018ರ ಹೆಚ್.ಎಸ್.ಎಸ್. ಪ್ರಕಾರ)
ಬಾಗಲಕೋಟೆ – 1.17, ಚಿತ್ರದುರ್ಗ – 1.13, ರಾಯಚೂರು 0.88, ಗುಲ್ಬರ್ಗಾ 0.75, ಕೊಪ್ಪಳ & ಮೈಸೂರು– 0.63.
ಹೆಚ್.ಐ.ವಿ./ಏಡ್ಸ್ ನಿರ್ವಹಣೆಗಾಗಿ ಇರುವ ಮುಖ್ಯ ಚಿಕಿತ್ಸೆ ಎ.ಆರ್.ಟಿ:-
ಹೆಚ್.ಐ.ವಿ/ಏಡ್ಸ್ ಅನ್ನು ವಾಸಿ ಮಾಡಲು ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇರುವುದಿಲ್ಲ. ಆದರೆ ಹೆಚ್.ಐ.ವಿ. ಸೋಂಕಿತರು ಜೀವನ ಶೈಲಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೆಚ್ಚಿನ ವರ್ಷ ಬದುಕಲು ಎ.ಆರ್.ಟಿ. ಚಿಕಿತ್ಸೆ ಇದೆ. ಎ.ಆರ್.ಟಿ ಚಿಕಿತ್ಸೆ ಹೆಚ್.ಐ.ವಿ. ವೈರಸ್‍ನ ಬೆಳವಣಿಗೆಯನ್ನು ಕುಂಠಿತಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿ ವ್ಯಕ್ತಿಯ ಜೀವನದ ಗುಣ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಸೋಂಕಿತರು ಹೆಚ್ಚು ಕಾಲ ಬದುಕುವಂತೆ ಮಾಡುತ್ತದೆ. ಹೆಚ್.ಐ.ವಿ/ಏಡ್ಸ್ ಸೋಂಕಿದೆ ಎಂದ ಕೂಡಲೇ ಧೃತಿಗೆಡದೆ ಸವಾಲಾಗಿ ಸ್ವೀಕರಿಸಿ. ತಪ್ಪದೇ ಎ.ಆರ್.ಟಿ. ಚಿಕಿತ್ಸೆಯನ್ನು ಪಡೆದು ಅತ್ಯತ್ತಮ ಜೀವನವನ್ನು ಅಳವಡಿಸಿಕೊಂಡರೆ ಆರೋಗ್ಯಕರ ಜೀವನವನ್ನು ನಡೆಸಬಹುದು.
ಜಿಲ್ಲೆಯಲ್ಲಿ ಹೆಚ್.ಐ.ವಿ. ತಡೆಗಟ್ಟುವಲ್ಲಿ ಇರುವ ಸೌಲಭ್ಯಗಳು:-
ಇಂಟಿಗ್ರೇಟೇಡ್ ಕೌನ್ಸಿಲಿಂಗ್ & ಟೆಸ್ಟಿಂಗ್ ಸೆಂಟರ್ (ಐ.ಸಿ.ಟಿ.ಸಿ ಕೇಂದ್ರಗಳು) – ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆ/ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚನೆ ಮತ್ತು ಉಚಿತವಾಗಿ ಹೆಚ್.ಐ.ವಿ. ಪರೀಕ್ಷೆ ಮಾಡಲಾಗುವುದು.
ಎಫ್-ಐ.ಸಿ.ಟಿ.ಸಿ. ಮತ್ತು ಪಿ.ಪಿ.ಪಿ. ಎಫ್-ಐ.ಸಿ.ಟಿ.ಸಿ. ಕೇಂದ್ರಗಳು:- ಜಿಲ್ಲೆಯಲ್ಲಿ ಒಟ್ಟು 64 ಸರ್ಕಾರಿ ಪ್ರಾ.ಆ. ಕೇಂದ್ರ, ಮತ್ತು 6 ಪಿ.ಪಿ.ಪಿ. ಎಫ್-ಐ.ಸಿ.ಟಿ.ಸಿ. (ಖಾಸಗೀ ಆಸ್ಪತ್ರೆಗಳಲ್ಲಿ) ಕೇಂದ್ರಗಳಲ್ಲಿ ಉಚಿತವಾಗಿ ಹೆಚ್.ಐ.ವಿ. ಪರೀಕ್ಷೆ ಮಾಡಲಾಗುವುದು.
ಎ.ಆರ್.ಟಿ. ಕೇಂದ್ರ (ಆಂಟಿ ರೆಟ್ರೋವೈರಲ್ ಥೆರಫಿ) – ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಚಾಮರಾಜನಗರ ಹಾಗೂ ಉಪವಿಭಾಗೀಯ ಆಸ್ಪತ್ರೆ, ಕೊಳ್ಳೇಗಾಲ ಇಲ್ಲಿ ಎಲ್ಲಾ ಹೆಚ್.ಐ.ವಿ. ಸೋಂಕಿತರಿಗೆ ಜೀವನ ಪರ್ಯಂತ ಉಚಿತವಾಗಿ ಎ.ಆರ್.ಟಿ. ಚಿಕಿತ್ಸೆ ನೀಡಲಾಗುವುದು.
ಲಿಂಕ್ ಎ.ಆರ್.ಟಿ. ಕೇಂದ್ರಗಳು – ಜಿಲ್ಲೆಯ ಸಾ.ಆ. ಗುಂಡ್ಲುಪೇಟೆ ಮತ್ತು ಯಳಂದೂರು ಗಳಲ್ಲಿ ಲಿಂಕ್ ಎ.ಆರ್.ಟಿ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಎ.ಆರ್.ಟಿ. ಕೇಂದ್ರದಲ್ಲಿ ವರದಿಯಾಗಿ 6 ತಿಂಗಳು ಮಾತ್ರೆಗಳನ್ನು ಪಡೆದ ನಂತರ ಅಭ್ಯರ್ಥಿಗಳಿಗೆ (ಅವರ ವಾಸಸ್ಥಳಕ್ಕೆ ಹತ್ತಿರ) ಹತ್ತಿರದ ಲಿಂಕ್ ಎ.ಆರ್.ಟಿ. ಕೇಂದ್ರಗಳಲ್ಲಿ ಜೀವನ ಪರ್ಯಂತ ಉಚಿತವಾಗಿ ಎ.ಆರ್.ಟಿ. ಮಾತ್ರೆಗಳನ್ನು ನೀಡಲಾಗುವುದು.
ಡೆಸಿಗ್ನೇಟೆಡ್ ಎಸ್.ಟಿ.ಐ. & ಆರ್.ಟಿ.ಐ. ಕೇಂದ್ರ:- (ಡಿ.ಎಸ್.ಆರ್.ಸಿ.) – ಜಿಲ್ಲಾ ಆಸ್ಪತ್ರೆ, ಚಾಮರಾಜನಗರ ಮತ್ತು ಸಾ.ಆ ಕೊಳ್ಳೇಗಾಲ ಇಲ್ಲಿ ಡಿ.ಎಸ್.ಆರ್.ಸಿ. ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಎಸ್.ಟಿ.ಐ / ಆರ್.ಟಿ.ಐ. ಖಾಯಿಲೆ ಇರುವವರಿಗೆ (ಲೈಂಗಿಕ ಸಂಪರ್ಕದ ಸೋಂಕು) ಉಚಿತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನೀಡಲಾಗುವುದು.
ಸಮುದಾಯ ಆಧಾರಿತÀ ಆರೈಕೆ ಮತ್ತು ಬೆಂಬಲ ಕೇಂದ್ರಗಳು - ಜಿಲ್ಲೆಯಲ್ಲಿ ಒಟ್ಟು ನಾಲ್ಕು ಎನ್‍ಜಿಓ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಸಂಸ್ಥೆಗಳಾದ ಸ್ನೇಹಜ್ಯೋತಿ ಮಹಿಳಾ ಸಂಘ, ಸಮತಾ ಸೊಸೈಟಿ, ಕೂರ್ ಸಂಸ್ಥೆ ಮತ್ತು ಚೈತನ್ಯ ನೆಟ್‍ವರ್ಕ್ ಸಂಸ್ಥೆಗಳು ಕ್ರಮವಾಗಿ ಲೈಂಗಿಕ ಕಾರ್ಯಕರ್ತೆಯರು/ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಆಯ್ದ 100 ಹಳ್ಳಿಗಳಲ್ಲಿನ ಹೈ-ರಿಸ್ಕ್ ಜನರಿಗೆ ಮತ್ತು ಐಇಸಿ ಕಾರ್ಯಚಟುವಟಿಕೆ, ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಹೆಚ್‍ಐವಿ/ಏಡ್ಸ್ ಸೋಂಕಿತ ಮತ್ತು ಬಾಧಿತರಿಗೆ ಅಗತ್ಯ ಸಾಮಾಜಿಕ ಸವಲತ್ತುಗಳನ್ನು ನೀಡುವಲ್ಲಿ ಹಾಗೂ ಕಾಂಡೋಮ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಹಾಗೂ ಹೆಚ್.ಐ.ವಿ. ಸೋಂಕಿತರಿಗೆ ಮಾನಸಿಕ ಬೆಂಬಲ ಮತ್ತು ಸಾಮಾಜಿಕ ಸೌಲಭ್ಯ ಕೊಡಿಸುವುದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ ಚೈತನ್ಯ ನೆಟ್‍ವರ್ಕ್ ಸಂಸ್ಥೆಯವರಿಂದ ಎಆರ್‍ಟಿ ಅಭ್ಯರ್ಥಿಗಳ ನೊಂದಣಿ ಮತ್ತು ಐಈU, ಒIS ಕೇಸ್‍ಗಳ ಅನುಸರಣೆಯನ್ನು ನಿರ್ವಹಿಸಿ, ಮರಳಿ ಎಆರ್‍ಟಿ ಚಿಕಿತ್ಸೆ ಪಡೆಯಲು ಅರ್ಥಿಗಳಿಗೆ ನೆರವು ನೀಡುತ್ತಿದ್ದಾರೆ.
ಹದಿಹರೆಯದ ಶಿಕ್ಷಣ ಕಾರ್ಯಕ್ರಮ – ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ವರ್ಷ ಜಿಲ್ಲೆಯ ಒಟ್ಟು 163 (9 ಮತ್ತು 10ನೇ ತರಗತಿ) ಸರ್ಕಾರಿ ಹಾಗೂ ಅನುದಾನಿತ ಫ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣದ ಜೊತೆಗೆ ಹೆಚ್.ಐ.ವಿ. ಏಡ್ಸ್ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಗುವುದು. (ಂಜoಟesಛಿeಟಿಣ ಇಜuಛಿಚಿಣioಟಿ Pಡಿogಡಿಚಿm)
ರೆಡ್ ರಿಬ್ಬನ್ ಕಾರ್ಯಕ್ರಮ – ಜಿಲ್ಲೆಯ ಒಟ್ಟು-26 ಪದವಿ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಹೆಚ್.ಐ.ವಿ / ಏಡ್ಸ್ ತಡೆಗಟ್ಟುವ ಮತ್ತು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವಂತೆ ಅರಿವು ಮತ್ತು ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಫೋಕ್ ಕ್ಯಾಂಪಿಯನ್: ಪ್ರತಿ ವರ್ಷ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ (ವರ್ಷಕ್ಕೆ 25 ಶೋ) ಜಾನಪದ ಕಲಾ ತಂಡಗಳಿಂದ ಆಯ್ದ ಪ್ರಮುಖ ಜನನಿಬಿಡ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಹೆಚ್.ಐ.ವಿ / ಏಡ್ಸ್ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ.
ಐ.ಇ.ಸಿ. – ಕರಪತ್ರ, ಪೋಸ್ಟರ್, ಬ್ಯಾನರ್, ಜಾಥಾ, ಗೋಡೆ ಬರಹ, ಕಾಲೇಜುಗಳಲ್ಲಿ ಸನ್‍ಬೋರ್ಡ್, ಪ್ಲೆಕ್ಸ್ ಇತ್ಯಾದಿ. ಕಾರ್ಯಕ್ರಮಗಳನ್ನು ಮಾಡಲಾಗುವುದು.
ಸಮುದಾಯ ಆಧಾರಿತ ತಪಾಸಣಾ ಶಿಬಿರ :- ಜಿಲ್ಲೆಯಲ್ಲಿನ ಐದು ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಟು ಐಸಿಟಿಸಿ ಕೇಂದ್ರಗಳ ಮೂಲಕ ಆಯ್ದ ಜನನಿಬಿಡ ಪ್ರದೇಶಗಳಾದ ಸಂತೆ, ಜಾತ್ರೆ ಮತ್ತು ಬಸ್ ನಿಲ್ದಾಣಗಳಲ್ಲಿನ ಜನಸಾಮಾನ್ಯರಿಗೆ ಹೆಚ್‍ಐವಿ ಪರೀಕ್ಷೆ, ಐಇಸಿ ಬಗ್ಗೆ ಅರಿವು ಮತ್ತು ಇತರೆ ಕಾರ್ಯಕ್ರಮಗಳಾದ ಎನ್‍ಸಿಡಿ ಯೋಜನೆ, ಂಃಊಂ ಅಚಿಡಿಜ ನೊಂದಣಿ ಮತ್ತು ವಿತರಣೆಯ ಕಾರ್ಯಕ್ರಮವನ್ನು ನಿರ್ವಹಿಸಲಾಗಿತ್ತು. ಸದರಿ ಎಂಟು ಶಿಬಿರಗಳಿಂದ ಒಟ್ಟು 1102 ಜನರಿಗೆ ಹೆಚ್‍ಐವಿ/ಏಡ್ಸ್ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಪರೀಕ್ಷೆಯನ್ನು ನಡೆಸಿ, ಇವರಲ್ಲಿ 4 ಮಂದಿಗೆ ಹೆಚ್‍ಐವಿ ಸ್ಕ್ರೀನಿಂಗ್ ಪಾಸಿಟೀವ್ ಬಂದಿದ್ದು, ಐಸಿಟಿಸಿ ರೆಫರ್ ಮಾಡಿ 4 ರಲ್ಲಿ ಒಂದು ಅoಟಿಜಿiಡಿmಚಿಣoಡಿಥಿ ಪಾಸಿಟೀವ್ ಕಂಡುಬಂದಿರುತ್ತದೆ. ಅಂತೆಯೇ ಎನ್‍ಸಿಡಿ ಕಾರ್ಯಕ್ರಮದ ವತಿಯಿಂದ ಎಲ್ಲರಿಗೂ ಬಿಪಿ, ಶುಗರ್ ಪರೀಕ್ಷೆಗಳ ಜೊತೆ, ಮಾತ್ರೆಗಳನ್ನು ಸಹ ವಿತರಿಸಲಾಯಿತು.
ಹೆಚ್.ಐ.ವಿ. ಸೋಂಕಿನ ಸಾಧ್ಯತೆ:-
ಹೆಚ್.ಐ.ವಿ. ಬಗ್ಗೆ ಸರಿಯಾದ ಮಾಹಿತಿಯ ಕೊರತೆ.
ಲೈಂಗಿಕ ವಿಚಾರಗಳ ಬಗ್ಗೆ ಅತ್ಯಂತ ಗೋಪ್ಯತಾ ಮನೋಭಾವ ಹೊಂದಿರುವುದು.
ಸಹವರ್ತಿಗಳ ಒತ್ತಡ / ಅಪಾಯಕಾರಿ ನಡವಳಿಕೆ.
ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣ.
ಬದಲಾಗುತ್ತಿರುವ ಮೌಲ್ಯಗಳು ಮತ್ತು ನೀತಿಗಳು.
ಇತರರಿಂದ ಲೈಂಗಿಕ ಶೋಷಣೆ.
ಜಿಲ್ಲೆಯಲ್ಲಿ 2008-09 ರಿಂದ ಇಲ್ಲಿಯವರೆಗೆ ಒಟ್ಟು 642630 ಜನರಿಗೆ ಹೆಚ್.ಐ.ವಿ. ಪರೀಕ್ಷೆ ಮಾಡಿದ್ದು, 4306 ಜನರಿಗೆ ಹೆಚ್.ಐ.ವಿ. ಸೋಂಕಿರುವುದು ದೃಢಪಟ್ಟಿದ್ದು, ಕಳೆದ 5 ವರ್ಷಗಳಿಂದ ಹೆಚ್.ಐ.ವಿ. ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಈ ವರ್ಷದಲ್ಲಿ ಅಕ್ಟೋಬರ್-2022 ರವರೆಗೆ ಒಟ್ಟು 112 ಜನರಿಗೆ ಹೆಚ್.ಐ.ವಿ. ಸೋಂಕಿರುವುದು ದೃಡಪಟ್ಟಿರುತ್ತದೆ.
ಹೆಚ್.ಐ.ವಿ. ಸೋಂಕಿತರಿಗೆ ಉಚಿತ ಕಾನೂನು ಸೇವೆಗಳು:-
ಪ್ರತಿ ಎ.ಆರ್.ಟಿ. ಕೇಂದ್ರದಲ್ಲಿ ಒಬ್ಬ ವಕೀಲರು ವಾರದಲ್ಲಿ ಒಂದು ದಿನ (ಶನಿವಾರ) ಎ.ಆರ್.ಟಿ. ಕೇಂದ್ರಕ್ಕೆ ಭೇಟಿ ನೀಡುವುದು. ಹೆಚ್.ಐ.ವಿ. ಸೋಂಕಿತ / ಭಾಧಿತರ ಹಕ್ಕುಗಳಿಗೆ ಚ್ಯುತಿ ಬಂದರೆ ವಕೀಲರು ಮಧ್ಯ ಪ್ರವೇಶಿಸಿ ಮೌಖಿಕವಾಗಿ ರಾಜಿ / ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತಾರೆ. ರಾಜಿ ಸಂಧಾನ ಇತ್ಯರ್ಥ ಆಗದಿದ್ದ ಪಕ್ಷದಲ್ಲಿ ನ್ಯಾಯಾಲಯದ ಮೂಲಕ ಅವರಿಗೆ ಉಚಿತವಾಗಿ ನ್ಯಾಯವನ್ನು ಒದಗಿಸಿ, ಗೌಪ್ಯತೆಯನ್ನು ಕಾಪಾಡುತ್ತಾರೆ.
ಹೆಚ್.ಐ.ವಿ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದು.
ಹೆಚ್.ಐ.ವಿ. ಸೋಂಕಿನ ವ್ಯಕಿಗಳು ಎಲ್ಲರಂತೆ ಜೀವನ ನಡೆಸಬಹುದು. ಹೆಚ್.ಐ.ವಿ./ಏಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳು ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇನ್ನು ಕೆಲವು ದಿನಗಳಲ್ಲಿ ಸಾವು ಎಂಬ ಭಯದಲ್ಲಿ ಊಟ, ನಿದ್ರೆ ಬಿಟ್ಟು ಚಿಂತೆಗೆ ಶರಣಾಗಿ ಈ ಚಿಂತೆಯಿಂದಲೇ 20-30 ವರ್ಷ ಬದುಕಬಹುದಾದ ವ್ಯಕ್ತಿಯು 1-2 ವರ್ಷದಲ್ಲಿಯೇ ಕೊರಗಿ ಚಿಂತೆಗೀಡಾಗುತ್ತಾರೆ. ಈ ರೀತಿ ಮಾನಸಿಕ ಚಿಂತೆ, ಒತ್ತಡ, ಅವಮಾನ, ಆತಂಕ ಮತ್ತು ಸಮಾಜದ ಪ್ರಶ್ನೆಗೆ ಹೆದರಿ ತನ್ನದಲ್ಲದ ತಪ್ಪಿಗೆ ಜೀವ ತೆರಬೇಕಾಗುತ್ತದೆ. ಇಂತಹ ಹೆಚ್.ಐ.ವಿ. ಸೋಂಕಿತರನ್ನು ಸಮಾಧಾನ ಮಾಡಿ ಸಾಂತ್ವನ/ಸಮಾಲೋಚನೆ ಮಾಡಿ ಎ.ಆರ್.ಟಿ. ಚಿಕಿತ್ಸೆ ನೀಡಬೇಕಾಗುತ್ತದೆ. ಈ ರೀತಿಯಲ್ಲಿ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲರದು.
No comments:
Post a Comment